ಗಿರಿಜಾ ಕಂಡ ಸಿನಿಮಾ
ರಾಗವಾಗಿ ಗಿರಿಜಾ ರೀs' ಎಂದರೆ ಸಾಕುಏನೋ ಬಂತು ಪೀಕಲಾಟ ಎಂದು ಗೊತ್ತು ಸಿದ್ದ ರಾಮನಿಗೆ ಮನಸ್ಸಿಲ್ಲದಿದ್ದರೂ ಅವಳ ಕಡೆ ಕಣ್ಣು
ಹೊರಳಿಸುತ್ತಾನೆ.
"ರೀ'sss
“ಏನೇ ??
ರೀsss'
“ಏನು ಹೇಳೇ ??
“ಏನು ಅಂತ ನನ್ನೇ ಕೇಳೀರಲ್ಲ ! ಬಹಳ ಘಾಟಿ ಕ ನೀವು !' ಎಂದು ಅವಳೊಂದು ಕಣ್ಣ ಬಾಣ ಬಿಡುತ್ತಾಳ
ಆ ಬಾಣದಿಂದ ಏಟು ತಿಂದು ತಿಂದೂ ಅಭ್ಯಾಸವಾಗಿಹೋಗಿದೆ ಅವನಿಗೆ, ಅದರಿಂದ ಪರಿಣಾಮವಾಗುವಂಥ ಮನಃಸ್ಥಿತಿಯೂ
ಅವನಿಗಿರುವದಿಲ್ಲ. ಬೆಳಗಿನಿಂದ ಸಾಯಂಕಾಲದವರೆಗೂ ಡಿಪೋವಿನಲ್ಲಿ ಕತ್ತೆಯಂತೆ ದುಡಿದು ದುಡಿದು ದಣಿದಿರು ತದೆ ದೇಹ, ಜೀವರಹಿತ
ಯಾಂತ್ರಿಕ ಕೆಲಸದಿಂದ ಬೇಸರಗೊಂಡಿರುತ್ತದೆ ಮನಸ್ಸು. ಹಾಸುಗೆಯು ಸ್ಪರ್ಶವಾಗುವುದೇ ತಡ, ಕಣ್ಣು ತಾವಾಗಿಯೇ ಮುಚ್ಚಿಕೊಳ್ಳುತ್ತವೆ
ಕಠೋರ ಪ್ರಪಂಚದ ಹೋರಾಟದಲ್ಲಿ ದಣಿದ ಮನಸ್ಸು ರಹಸ್ಯಮಯ ನಿದ್ರಾ- ಪ್ರಪಂಚದಲ್ಲಿ ಶಾಂತವಾಗಲಾಶಿಸುತ್ತದೆ. ಇಂಥ ಸಮಯದಲ್ಲಿ ಪ್ರಣಯಾಲಾಪಲ್ಲಿಯ ಉತ್ಸಾಹ ಬಂದೀತು ? ಮದುವೆಯಾದ ಹೊಸದರಲ್ಲಿ ಮುದ್ದು ಮುದ್ದಾಗಿ ತಿದ್ದ ಗಿರಿಜೆಯ ಮಾತು ಈಗ ಮೊದ್ದು ಮೊದ್ದಾಗಿ ಕಾಣುತ್ತಿವೆ. ಈಕೆ ಮಾತನಾಡದೆ
ಸುಮ್ಮನಿದ್ದರೆ ಬದುಕಿಕೊಂಡೀತು ನನ್ನ ಬಡಜೀವ, ತೆಪ್ಪಗೆ ಬಿದ್ದು ಕೊಂಡಿರಬಾರದೇ ಇವಳು !' ಎಂದು ಅನ್ನಿಸುತ್ತದೆ ಅವನಿಗೆ ಆದರಾಕೆ ಬಿಡಬೇಕಲ್ಲ! ತನ್ನ ಕಡೆ ಬೆನ್ನು ಮಾಡಿ ಗೋಡೆಯ ಕಡೆ ಮುಖ ಹೊರಳಿಸಿ ನಿದ್ರೆ ಹೋಗಲೆತ್ನಿಸುವ ಪತಿಯ ತಲೆಗೂದಲನ್ನು ಹಿಡಿದು ಎಳೆಯುತ್ತಾಳೆ. ಅವನ ಮೂಗಿನ ಬಳಿ ತನ್ನ ಮೂಗ
ಸೊಯ್ದು ತುಂಟತನದಿಂದ ಉಜ್ಜುತ್ತ rss' ಎನ್ನುತ್ತಾಳೆ.ಕೊಂಚ ಗಟ್ಟಿಯಾಗಿಯೆ. ನಿದ್ರೆಯಿಂದ ಜಡವಾಗುತ್ತಿದ್ದ ಕಣ್ಣುಗಳನ್ನು ಅವಳ ಕಡೆ
ತಿರುಗಿಸಿ ಆತ ಕೇಳುತ್ತಾನೆ.
ಏನೇ??
ನಾನು ಕರಡಿಯಾದರೆ ನೀನೇನು ಕೋತಿ ಮರಿಯೇನು ಹೀಗೆ ಕಚಿ ಬಿಡೋಕೆ? “ಹೌದು ಕಣೋ! ನಾನು ಕೋತಿ! ನಿಮ್ಮ ಮುಖ ಮಾತ್ರ ಬಹಳ ಚಂದಾಗಿದೆ. ನರಿಯ ಹಾಗೆ!?
ಇಲ್ಲ ಕಣೇ!
ಅಷ್ಟು ಚೆನ್ನಾಗಿಲ್ಲ ನನ್ನ ಮುಖ ! ನಿನ್ನ ಮೂಗು
ಮಾತ್ರ ಬಹಳ ಚೆಂದಾಗಿದೆ ಬೆಕ್ಕಿನ ಹಾಗೆ' ಎಂದ ಬಿಟ್ಟು ಆತ ಅವಳ ನಸು ಚಪ್ಪಟೆ ಮೂಗನ್ನು ಕುರಿತು ಹಾಸ್ಯ ಮಾಡುತ್ತಾನೆ.
“ನನ್ನ ಮೂಗಿಗೇನೂ ನೀವು ನಗಬೇಕಾಗಿಲ್ಲ.
ನಿಮ್ಮದೇನು ಮಹಾ ಸಾತೇ ಕಾಯಿಯಂಥಾದ್ದು!' ಎಂದು ಹೇಳಿ ಆಕೆ ಮುಯ್ಯಕ್ಕೆ ಮುಖ್ಯ ತೀರಿಸಿಬಿಡುತ್ತಾಳೆ.
'ಇಂಥಾ ಮೂಗಿನವನ್ನ ನೀ ಯಾಕೆ ಮಾಡಿಕೊಂಡೆ ??
'ಇಂಥಾ ಮೂಗಿನವಳನ್ನ ನೀವು ಯಾಕ್ರೀ ಕಟ್ಟಿಕೊಂಡಿ ??
(ನನ್ನೇ ಆಗಬೇಕು ಅಂತ, ಅತ್ತುಕೊಂಡು ಕಣ್ಣೀರಿಟ್ಟೆಯಲ್ಲ ನೀನು, ಮನಸ್ಸು ಕರಗಿ ಆಗಿಬಿಟ್ಟೆ!'
ಹೌದು ಪಾಪ! ನಮ್ಮಪ್ಪ ನಿಮಗೆ ನನ್ನ ಕೊಡೋಲ್ಲಾಂತ ಅಂದಾಗ ಊಟ ನೀರು ಬಿಟ್ಟು ಮೂರು ನಾಲ್ಕು ದಿನ ಬೆಂಗಳೂರೆಲ್ಲ ಹುಚ್ಚರಂತೆ ಅಲೆದೋರು
ಯಾರೋ
“ಹೂಂ! ನಾನೊಬ್ಬ ಹುಚ್ಚ! ನಿನ್ನಂಥ ಹುಚ್ಚಿಯನ್ನ ಕಟ್ಟಿಕೊಂಡಿರೋನು!? (ನೀವು ಹುಚ್ಚರಾದ್ರೆ ಹುಚ್ಚರಾಸ್ಪತ್ರೆಗೆ ಹೋಗಿ ಬನ್ನಿ, ನನಗೇನೂ ಹುಚ್ಚು ಹಿಡಿದಿಲ್ಲ !'
ಹಿಡಿದಿದೆಯಲ್ಲ ಒಂದು ಭಾರಿ ಹುಚ್ಚು ಸಿನಿಮಾ ಹುಚ್ಚು!'
(ಬಲೆ! ಬಲೆ! ಬಹಾಳ ತೋರಿಸೋವ್ರು ನೀವು ನೋಡೀ ನೋಡೀ ನೋಡೀ ಹುಚ್ಚು ಹಿಡಿದಿದೆ ನನಗೆ ಅಲ್ವೆ?'
ತೋರಿಸೋಕೆ ಪುರಸತ್ತು ಎಲ್ಲಿರುತ್ತೆ ಗಿರಿಜಾ?'
(ಅವರಿವರ ಮನೆ ತಿರುಗೋಕೆ ಪುರಸತ್ತಿರುತ್ತೆ. ಸಿನಿಮಾಗೆ ಮಾತ್ರ ಇರೋಲ್ಲ! (ಆವರಿವರ ಮನೆ ಅಂದ್ರೇನೇ? ಪಾಪ, ಏನೂ ತಿಳಿಯದ ಬಡ ಕೂಲಿಕಾರರು ಅವರು. ಅವರ ಸುಖದುಃಖ ತಿಳಿದುಕೊಂಡು ಸಂಘಟನೆ ಮಾಡಬೇಡವೇ?'
ಏನು ಸುಖವೋ! ಏನು ದುಃಖವೋ! ಮೊದಲು ಯುದ್ಧ ಯುದ್ಧ ಅಂತಿದ್ದಿರಿ ಈಗ ಯುದ್ಧ ಮುಗಿದು ವರ್ಷವಾಗ್ತಾ ಬಂತು. ಇನ್ನೂ ಮೊದಲಿನ ಹಾಡೇ ಹಾಡ್ತೀರಲ್ಲ!'
“ಯುದ್ಧ ಮುಗೀತು ಅಂತ ಯಾರು ಹೇಳಿದರು ಗಿರಿಜಾ?'
(ನೀವೇ ಹೇಳಿದಿರಲ್ಲ ಒಮ್ಮೆ ಅವತ್ತು ಎರಡು ದಿನ ರಜಾ ಬಂದಿರಲಿಲ್ಲೇನು ವಿಜಯೋತ್ಸವಕ್ಕೆಂತ?”
ವಿಜಯೋತ್ಸವ ಅಲ್ಲ ಅದು ಗಿರಿಜಾ! ಮತ್ತೊಂದು ಯುದ್ಧದ ಪ್ರಾರಂಭೋ ತ್ಸವ. ಮುಗಿದ ಯುದ್ಧಕ್ಕಿಂತ ಭಾರಿ ಯುದ್ಧ ಇದು. ಬಡವರ ಯುದ್ಧ! ಕೂಲಿ ಕಾರರ ಯುದ್ಧ! ರೈತರ ಯುದ್ಧ! ಈ ಯುದ್ಧ ನಡೆದಿರೋದು ಹೊಟ್ಟೆಗಾಗಿ! ಅನ್ನ ಕ್ಕಾಗಿ! ಒಂದು ಮುಷ್ಟಿ ಮುದ್ದೆಗಾಗಿ! ಒಂದು ತಟ್ಟೆ ಎಸರಿಗಾಗಿ! ಸಾವಿರಾರು ಜನ ಬಡಪಾಯಿಗಳು ಇಲ್ಲಿ ಈ ಕಾಡುಗೋಡಿಯಲ್ಲಿ ಹೊಟ್ಟೆಯ ಹೋರಾಟ ನಡೆಸಿದಾರಲ್ಲ ಗಿರಿಜಾ! ಅವರ ಗೋಳಿನ ಕೂಗು ನನ್ನನ್ನು ಹುಚ್ಚನನ್ನಾಗಿ ಮಾಡಿದೆ! ಅಂತೇ ಭಾನುವಾರ ಬರುತ್ತಲೂ ಅವರ ಮನೆಗಳಿಗೆ ಹೋಗುತ್ತೇನೆ. ಅವರ ಹೋರಾಟದ ಕತೆ ಕೇಳುತ್ತೇನೆ. ನನ್ನ ಕೈಲಾದ ಸೇವೆ ಮಾಡುತ್ತೇನೆ.......'
“ಸಾಕು ಸಾಕು ನಿಮ್ಮ ಪುರಾಣ! ನಾನು ಸಿನಿಮಾ ಅನ್ನುತ್ತಲೂ ಸುರು ವಾಗುತ್ತೆ ನಿಮ್ಮ ಲೆಕ್ಷರು!'
(ಲೆಕ್ಚರಲ್ಲ ಗಿರಿಜಾ ಇದು! ಹೃದಯದಿಂದ ನೇರವಾಗಿ ಹೊರಡುವ ಉದ್ದಾರ ಇದು! ನನ್ನ ಹೃದಯ-ನನ್ನ ಮಾತು ನಿನಗೆ ಹೇಗೆ ಅರ್ಥವಾದೀತು ? ನೀನು ಇನ್ನೂ ಕೊಂಚ ಓದಿದ್ದರೆ? ಓದಿದ್ದರೆ........?”
“ ನೀವು ಓದಿ ಅಮಲ್ದಾರಿ ಮಾಡ್ತಾ ಇರೋದನ್ನ ನೋಡಲಿಲ್ಲವೇ ನಾನು ? ಎಸೆಸೆಲ್ಸಿ ಆದರೂ ಈ ಕೂಲಿ ಕೆಲಸಕ್ಕೆ ಬಂದು ಸೇರಿದ್ದೀರಲ್ಲ!”
(ಅಮಲ್ದಾರ ಆಗೋದಕ್ಕಿಂತ ಕೂಲಿ ಆಗೋದು ಸಾವಿರ ಪಾಲಿಗೆ ವಾಸಿ ಗಿರಿಜಾ! ನಿನಗದು ತಿಳಿಯೋದಿಲ್ಲ!'
ಹೌದು ಕಣೋ! ನನಗೆ ತಿಳಿಯೋಲ್ಲ! ನನಗೆ ತಲೇನೇ ಇಲ್ಲ! ಒಳಗಡೆ ಇರೋದು ಬರೀ ಆಲೂಗಡ್ಡೆ, ಹೀಗೇ ಅಲ್ವೇ ನೀವು ಹೇಳೋದು!'
ಏನಂದಿ? ಆಲೂಗಡೇನೇ? ಬಹಳ ಒಳ್ಳೇದಾಯ್ತು. ಇಷ್ಟು ದಿನ ಯಾಕೆ ಹೇಳಲಿಲ್ಲ ನನಗೆ? ಸರಿ. ತೆಗೆದುಬಿಟ್ಟು ಬೆಳಿಗೆ ಪಲ, ಮಾಡಿಬಿಡು. ಆಲೂಗಡ್ಡೆ ಪಲ್ಯ ತುಂಬ ರುಚಿ, ನಿನ್ನ ತಲೇಲಿ ಬೆಳದಿರೋದು ಅಂದಮೇಲೆ ಇನ್ನೂ ರುಚಿ ಕಟ್ಟಾಗಿದ್ದೀತು!
ಶುರು ಮಾಡಿದ್ರು ತಮಾಷೆಗೆ! ಬಹಾಳ ಜಾಣರು ಕಣಿ ಮಾತು ಕೊರಳಿ ಸೋದ್ರಲ್ಲಿ!' ಎನ್ನುತ್ತಾ ಆಕೆ ಅವನ ಕೆನ್ನೆ ಚಿವುಟುತ್ತಾಳೆ. ತನಗರಿಯದಂತೆಯೇ ಅವಳ ನಗೆ ಹೂ ಅರಳುತ್ತದೆ. ಕಂಗಳಲ್ಲಿ ಪ್ರಣಯಭಾವ ಚಿಮ್ಮುತ್ತದೆ. ಕೆನ್ನೆಗೆ ರಕ್ತವೇರುತ್ತದೆ. ಆಗ ಆಕೆಯೇ ಸೋತು ಹೋಗುತ್ತಾಳೆ. ಆ ಕ್ಷಣಕ್ಕಂತೂ ಅವರ ಯುದ್ಧ ಮುಗಿದು ಒಪ್ಪಂದವಾಗುತ್ತದೆ. ನಲ್ಲನಲ್ಲೆಯರ ದೃಢಾಲಿಂಗನದಲ್ಲಿ ಶಾಂತಿ ಮೊಗದೋರುತ್ತದೆ.
ಆ ಶನಿವಾರ ಸಾಯಂಕಾಲ ಸಿದ್ದರಾಮ ಮನೆಗೆ ಬಂದಾಗ ಗಿರಿಜಾ ಹೇಳಲು ಹಾಕಿ ಹೂ ಮುಡಿದುಕೊಂಡು ನಗುನಗುತ್ತ ನಿಂತಿದ್ದಳು ಅವನ ಬರವನ್ನೇ ಎದುರು ನೋಡುತ್ತ.
ಬಟ್ಟೆ ತೆಗೆದುಹಾಕಿ, ಮುಖ ತೊಳೆದುಕೊಂಡು ಆತ ಹಾಸುಗೆಗೊರಗಿ ಕುಳಿತುಕೊಂಡ. ಯಾವದೋ ಒಂದು ಪತ್ರಿಕೆಯನ್ನೆತ್ತಿಕೊಂಡು ಓದಲಾರಂಭಿಸಿದ. ಎಂದೂ ಇಲ್ಲದೆ ಗಿರಿಜಾ ಅಂದು ಕಾಫಿ ಮಾಡಿರಿಸಿದ್ದಳೇನೋ! ಒಂದು ಲೋಟ ದಲ್ಲಿ ಅದನ್ನು ತುಂಬಿಕೊಂಡು ಅವನ ಬಳಿ ಬಂದಳು.
"ರೀ'sss
ಪತ್ರಿಕೆಯ ಮೇಲಿನ ದೃಷ್ಟಿಯನ್ನು ಕದಲಿಸದೆ ಆತ ಏನೇ?” ಎಂದ ಒಡನೆಯೇ ಆ ಪತ್ರಿಕೆಯನ್ನು ಕಿತ್ತುಕೊಂಡು ಮೂಲೆಯಲ್ಲಿಟ್ಟು ಗಿರಿಜಾ ಬಲೆ ಓದೋದು ನೀವು ಬಿಡಿ! ಈ ಕಾಫೀನಾದ್ರೂ ಕುಡೀರಿ!' ಎಂದಳು.
ಈ ಕಾಫಿ? ಅದೇನೇ ಇಂದು ಇಷ್ಟು ಸಡಗರ??
ಸಡಗರಾನೂ ಇಲ್ಲ. ಗಿಡಗರಾನೂ ಇಲ್ಲ. ಆಚೆಮನೇ ದೇವಮ್ಮನ ಗಂಡ ಮೈಸೂರಿಗೆ ಹೋಗಿದ್ದರಂತೆ. ಒಳ್ಳೆ ಕಾಫಿಪುಡಿ ತಂದಿದ್ದರಂತೆ. ಸ್ವಲ್ಪ ಕೊಟ್ಟಳು, ವಾಸನೆ ಚೆನ್ನಾಗಿದೆ. ಇಂದೇ ಕುಡೀಲಿ ಅಂತ ಮಾಡಿದ್ದೆ.
ದೇವಮ್ಮಾ?'
ಆ ಸೂಪರ್ ವೈಜರ್ ಇಲ್ವೆ? ಅವರ ಹೆಂಡತಿ'
ಸೂಪರ್ ವೈಜರ್ ?'
“ನಿಮಗೆ ಕೂಲಿಕಾರರೆಲ್ಲಾ ಗೊತ್ತು. ಸೂಪರ್ ವೈಜರ್ ಮಾತ್ರ ಗೊತ್ತಿಲ್ಲ!'
ಹೇಗೆ ಗೊತ್ತಾಗಬೇಕು ಹೇಳು ಗಿರಿಜಾ! ಅವರು ಹೆಚ್ಚು ಸಂಬಳ ಪಡೆ ಯೋರು. ಡಿಪೋನಲ್ಲಿ ಅವರು ಹೇಳಿದ ಹಾಗೆ ಕೆಲಸ ಮಾಡಬೇಕಾಗುತ್ತೆ ನಾವು, ಅವರ ಜತೆ ಸ್ನೇಹ ಮಾಡೋಕಾಗುತ್ತೇನೇ ನಮಗೆ??
ಎಲ್ಲಾ ಆಗುತ್ತೆ. ನಿಮಗೆ ಮೊದಲು ಮನಸ್ಸಿರಬೇಕಲ್ಲ! ಅವರು ಗಂಡಹೆಂಡಿರು ಎಷ್ಟು ನೆಮ್ಮದಿಯಿಂದಿದ್ದಾರೆ! ವಾರಾವಾರಾ ಬೆಂಗಳೂರಿಗೆ ಹೋಗೋದು ತಪ್ಪೋದಿಲ್ಲ. ಅಂದ ಹಾಗೆ ಮನ್ನೆ ದೇವಮ್ಮ ಹೊಸ ಸೀರೆ ಒಂದನ್ನ ಕೊಂಡು ತಂದಿದ್ದಾಳೆ. ನೂರಿ ಪ್ಪತ್ತು ರೂಪಾಯಿಯಂತೆ. ಬಹಳ ಚಂದಾಗಿದೆ ಕಣೋ ! ನಯವಾದ ರೇಷ್ಮೆ ಕಲಾಬತ್ತಿಂದು.'
ಪತ್ನಿಯ ವಿಚಾರಧಾರೆ ಯಾವ ಕಡೆ ಹೊರಳುತ್ತಿದೆಯೆಂಬುದರ ಅರಿವಾಯಿ ತೇನೋ ಅವನಿಗೆ! ನೊಂದ ದನಿಯಲ್ಲಿ ನುಡಿದ,
(ಅವರ ಸೀರೆಯ ವಿಚಾರ ನನಗೆ ಹೇಳಬೇಡ ಗಿರಿಜಾ ! ನನ್ನ ತಲೆ ಕೆಟ್ಟು ಹೋಗುತ್ತೆ!
ಆ ನೊಂದ ನನಿ, ಅದರಲ್ಲಿ ಅವಿತಿದ್ದ ಆ ಆಳವಾದ ವೇದನೆ ಅವಳಿಗೆ ಅರ್ಥ ವಾಗಲಿಲ್ಲ ಹೇಳಿದಳು.
ಅಂಥಾದನ್ನು ನನಗೆ ತಂದುಕೊಡೋ ಯೋಗ್ಯತೆ ಅಂತೂ ನಿಮಗಿಲ್ಲ! ಇನ್ನು ಅವರು ಉಡುತ್ತಾರೆ ಅಂತ ಹೊಟ್ಟೆ ಉರಿಯೇಕೋ??
(ಹೊಟ್ಟೆ ಉರಿ ಅಲ್ಲ ಅದು ಗಿರಿಜಾ! ನಿನಗರ್ಥವಾಗುವದಿಲ್ಲ. ನಾವು ಬಡವರು ಅವರು ಶ್ರೀಮಂತರು. ನನಗೆ ಬರೋದು ನಲವತ್ತು ರೂಪಾಯಿ, ಅವರಿಗೆ ಬರೋದು ಎರಡು ನೂರು ರೂಪಾಯಿ. ಒಂದೇಕೆ ಹತ್ತು ಸೀರೆಗಳನ್ನೂ ಕೊಂಡಾರು ಅವರು. ನನಗೆ ಬರೋ ನಲವತ್ತು ರೂಪಾಯಿನಲ್ಲಿ ಹೊಟ್ಟೆ ತುಂಬಿಕೊಳ್ಳೋದೇ ಕಷ್ಟ. ನಿನಗೂ ಗೊತ್ತೇ ಇದೆಯಲ್ಲ! ಇನ್ನು ಅಂಥ ಸೀರೆಯ ವಿಚಾರ ಮಾತನಾಡೋದು ತಪ್ಪಲ್ವೆ? ಅಂಥ ರೇಷ್ಮೆ ಸೀರೆಯನ್ನು ಕಣ್ಣಿಂದ ನೋಡೋದಕ್ಕೂ ಅಧಿಕಾರವಿಲ್ಲ ನಮಗೆ. ಹತ್ತು ರೂಪಾಯಿನ ಸೀರೆಗಳಲ್ಲೇ ನಾವು ತೃಪ್ತಿಪಟ್ಟುಕೊಳ್ಳಬೇಕು....
“ಏನು ತೃಪ್ತಿಯೋ! ಏನು ಕತೆಯೋ! ಮದುವೆಯಲ್ಲಿ ತಂದದ್ದೆಷ್ಟೋ ಅಷ್ಟೆ. ಅಂದಿನಿಂದ ಹತ್ತು ರೂಪಾಯಿನ ಸೀರೇನಾದ್ರೂ ಒಂದಾದ್ರೂ ತಂದಿದೀರಾ?'
ಎಂದಳಾಕೆ.
“ಎಲ್ಲಿಂದ ತರಲಿ? ದುಡ್ಡು ಉಳಿದರೆ ತಾನೇ ತರೋದು? ಅಕ್ಕಿ, ಬೇಳೆ, ಕಾಳು, ಸೌದೆ ಎಲ್ಲಾ ಒಂದಕ್ಕೆರಡು ಬೆಲೆ. ಹೊಟ್ಟೆ ತುಂಬೋದೆ ಕಷ್ಟ. ನನಗಾದರೂ ಬಟ್ಟೆಗಳಿವೆಯೇನೆ? ಇರೋದು ಎರಡು ಶರಟು. ಅವೂ ಹರಿದು ಚಿಂದಿಯಾಗಿವೆ. ಇಲ್ಲಿ ನೋಡಿಲ್ಲ....' ಎಂದು ವಿಷಾದದಿಂದ ಹೇಳುತ್ತ ಸಿದ್ಧರಾಮ ಎದೆಯಮೇಲೆ ಹರಿದಿದ್ದ ಭಾಗವನ್ನು ತೋರಿಸಿದ.
(ನೀವೇನು ಮಾಡೀರಿ ? ನನ್ನ ಅದೃಷ್ಟ. ಒಂದು ಒಳ್ಳೆ ಸೀರೆ ಉಡೋ ಭಾಗ್ಯವೂ ನನಗಿಲ್ಲ. ಒಂದು ಸಿನಿಮಾ ನೋಡೋ ಭಾಗ್ಯವೂ ಇಲ್ಲ. ಪಕ್ಕದ ಮನೆ ಯವರೆಲ್ಲ ವಾರಕ್ಕೊಂದು ಬಾರಿ ನೋಡಿಕೊಂಡು ಬತ್ತಾರೆ. ನನಗೆ ವರ್ಷಕ್ಕೊಂದು ಬಾರಿಯಾದರೂ........' ಎಂದು ಹೇಳುತ್ತಿದ್ದ ಹಾಗೇ ಅವಳಿಗೆ ಅಳವುಕ್ಕಿ ಬಂತು. ಸೆರಗಿನಲ್ಲಿ ಮುಖ ಮುಚ್ಚಿಕೊಂಡು ಅಡಿಗೆ ಮನೆಗೆ ಹೊರಟುಬಿಟ್ಟಳು.
ವೇದನಾಪೂರ್ಣ ದೃಷ್ಟಿಯನ್ನು ಸಿದ್ಧರಾಮ ಕಾಫಿಯ ಕಡೆಗೆ ತಿರುಗಿಸಿದ. ಅದು ಆರಿಹೋಗಿತ್ತು. ಲೋಟ ಎತ್ತಿ ಕಿಟಕಿಯಲ್ಲಿ ಬಾಗಿಸಿದ.
ಚರಂಡಿಯ ಕೊಳಚೆಯೊಂದಿಗೆ ಹರಿದುಹೋಯಿತು ಕಾಫಿ,
ತಿಗಣೆಯೊಂದು ಬಲವಾಗಿ ಕಚ್ಚಿ ಸಿದ್ಧರಾಮನನ್ನು ಎಚ್ಚರಗೊಳಿಸಿತು. ಕಣ್ಣೆ ರೆದು ನೋಡಿದ. ಭಾನುವಾರದ ಬೆಳಗು ಅವನನ್ನು ಸ್ವಾಗತಿಸುತ್ತಿತ್ತು.
ಪಕ್ಕದಲ್ಲಿ ಗಿರಿಜಾ ಇನ್ನೂ ಗಾಢ ನಿದ್ರೆಯಲ್ಲಿ ತಲ್ಲೀನಳಾಗಿದ್ದಳು. ಎಂಥ ವಿಲಕ್ಷಣ ನಿದ್ರೆ ಅದು ಬೆಳಗಿನ ಜಾವದ್ದು! ಬಲಗಡೆ ಮಗ್ಗುಲಾಗಿ ಮಲಗಿದ್ದಳಾಕೆ ತುಟಿಗಳೆರಡೂ ತೆರೆದಿದ್ದವು. ಅವುಗಳೊಳಗಿನ ನಸು ಹಳದಿ ಬಣ್ಣದ ದಂತಪಂಕ್ತಿ ಅಸ್ಪುಟವಾಗಿ ಕಾಣುತ್ತಿತ್ತು. ತುಟಿಗಳ ಮೂಲೆಯಿಂದ ಮುಖರಸ ಸೋರುತ್ತಿತ್ತು. ಬಲಗೈ ಗೋಡೆಯ ಮೇಲೊರಗಿಕೊಂಡಿತ್ತು. ಉದ್ದವಾದ ಜಡೆ ತಲೆದಿಂಬಿನಿಂದಿಳಿದು ಈಚೆ ಬಂದು ಬಿದ್ದಿತ್ತು. ಅದರ ಕೊನೆಗೆ ಕಟ್ಟಿದ್ದ ಬಣ್ಣ ಬಣ್ಣದ ಆ ಟೇಪು! ಅವನಿಗೆ ನಗೆ ಬಾರದಿರಲಿಲ್ಲ. ಎಂಥ ಮಾಟಗಾತಿ ಈ ನಿದ್ರೆ ಎಂದುಕೊಂಡು ಮೆಲ್ಲನೆ ಬಾಗಿ ಅವಳ ಸೀರೆಯ ಸೆರಗಿನಿಂದ ಮುಖರಸವನ್ನೊರಸಿದ. ಹಣೆಯ ಮೇಲೆ ಬಂದಿದ್ದ ಮುಂಗುರುಳುಗಳನ್ನೆತ್ತಿ ಹಿಂದೆ ಹಾಕಿದ. ಕೆನ್ನೆಗಳನ್ನೊರಸಿ ಒಂದು ಬಾರಿ ಅವುಗಳ ಮೇಲೆ ತುಟಿ ಒತ್ತಿದ. ಎಷ್ಟು ಮುದ್ದಾಗಿ ಕಾಣಿಸುತ್ತಿದ್ದಳು ಗಿರಿಜಾ ಆಗ! ಪುಟ್ಟ ದೊಂದು ಮಗುವಿನ ಹಾಗೆ! ಹೌದು, ಮಗುವಿನ ಹಾಗೆ! ನಿನ್ನೆ ತಾನು ಆ ರೀತಿ ಮಾತನಾಡಿದುದರಿಂದ ಎಷ್ಟು ನೊಂದುಕೊಂಡಿದಾಳೊ ! ಎಂಥ ನಿಷ್ಠುರಿ ತಾನು ತನ್ನ ಕೈ ಹಿಡಿದು ಏನು ಸುಖಪಡಬೇಕು ಈ ಮುಗ್ಧ? ಜೀವನದ ಕಠೋರ ಹೋರಾಟ ಅವಳಿಗರ್ಥವಾಗದು. ಅದಕ್ಕೆ ಅವಶ್ಯವಾದ ಶಿಕ್ಷಣವೂ ದೊರೆತಿಲ್ಲ ಅವಳಿಗೆ ಪ್ರಪಂಚದ ಅನುಭವವೂ ಇಲ್ಲ, ತನ್ನ ವಿಚಾರಗಳೊಂದಿಗೆ ಅವಳು ಸಮರಸವಾಗ ದಿರುವಲ್ಲಿ ಅವಳ ತಪ್ಪೇನೂ ಇಲ್ಲ......
ಅವನ ಮನಸ್ಸು ಏನೋ ನಿರ್ಧಾರಕ್ಕೆ ಬಂದಂತಾಯಿತು. ಇಂದು ತನ್ನ ಹತ್ತಿರ ಮೂರು ರೂಪಾಯಿ ಇದೆ ಸಂಬಳ ಬರುವದಕ್ಕೆ ಇನ್ನೂ ಎಂಟು ದಿನ. ಪರವಾಯಿಲ್ಲ. ಇಂದು ಈ ಮೂರು ರೂಪಾಯಿಯೂ ಖರ್ಚಾಗಿ ಹೋಗಲಿ, ಒಲವಿನ ಈ ಜೀವಕ್ಕೆ ಇಷ್ಟು ಸಂತೋಷವಾದರೂ ಆಗಲಿ. ಇವತ್ತು ಅವಳ ಆಸೆಯನ್ನು ಪೂರೈಸಿಯ ಬಿಡೋಣ ಎಂದುಕೊಂಡು ಅವಳ ಗದ್ದವನ್ನು ಹಿಡಿದು ಮೆಲ್ಲನೆ ಅಲುಗಾಡಿಸಿದ.
(ಏಳು ಗಿರಿಜಾ, ಏಳು! ಏಳು ನನ್ನ ರಾಣಿ! ಏಳು, ಏಳು! ಬೆಳಗಾಯಿತು!'
ಎಂದೆ.
ಕಣ್ಣುಜ್ಜಿಕೊಳ್ಳುತ್ತ ಅವಳು ಎದ್ದು ಕುಳಿತಳು.
ಬೇಗ ಬೇಗ ಅನ್ನ ಸಾರು ಮಾಡಿಬಿಡು. ಊಟಮಾಡಿಬಿಟ್ಟು ಬೆಂಗಳೂರಿಗೆ ಹೋಗೋಣ. ಇಂದು ಖಂಡಿತವಾಗಿಯೂ ಸಿನಿಮಾ ನೋಡಿಸ್ತೇನೆ ನಿನಗೆ!” ಎಂದ ಸಿದ್ಧರಾಮ.
ಅವನ ಮೈಯ ಸುತ್ತ ತನ್ನ ತೋಳು ಹೆಣೆಯುತ್ತ ಆನಂದದಿಂದ ಕೇಳಿದಳಾಕೆ. “ಹೌದೇ? ನಿಜವಾಗಲೂ?'
ಇನ್ನೂ ಸಂಶಯವೇನೇ ನಿನಗೆ ನನ್ನ ಬೆಪ್ಪ ಹುಡುಗಿ??
ನಂಬೋದೇ ಕಷ್ಟ ಅಮ್ಮಾ ನಿಮ್ಮ ಮಾತನ್ನ ! ಇಂದೇನೋ ಸೂರ್ಯ ಉತ್ತರದಲ್ಲಿ ಹುಟ್ಟಿರಬೇಕು.' ಎಂದು ನಗುತ್ತ ಆಕೆ ಎದ್ದು ಬಿಟ್ಟಳು.
ಅಡಿಗೆ ಮಾಡುವಾಗ ಅವಳ ಸಡಗರವೋ ಸಡಗರ ! ಒಲೆಯ ಮೇಲೆ ಅನ್ನ ಕುದಿಯುತ್ತಿದ್ದ ಹಾಗೆ ಸಬಕಾರ ಹಚ್ಚಿ ಮುಖ ತೊಳೆದುಕೊಂಡಳು. ಜಡೆ ಹಾಕಿ ಟೇಪು ಕಟ್ಟಿಕೊಂಡಳು. ರಾತ್ರಿ ನೀರಿನಲ್ಲಿ ತೋಯಿಸಿ ಬಟ್ಟೆಯಲ್ಲಿ ಕಟ್ಟಿ ಇಟ್ಟಿದ್ದ ಕೆಂಪು ಹೂ ಮುಡಿದುಕೊಂಡಳು. ಕುಂಕುಮ ಇಟ್ಟುಕೊಂಡಳು. ಟ್ರಂಕಿನಲ್ಲಿದ್ದ ನಾಲ್ಕು ಸೀರೆಗಳನ್ನು ಹೊರದೆಗೆದು ಯಾವುದನ್ನುಡುವುದು ಎಂದು ಹದಿನೈದು ನಿಮಿಷ ಯೋಚಿಸಿದಳು. “Osss, ಯಾವುದನ್ನುಟ್ಟುಕೊಳ್ಳಲಿ ಹೇಳಿsss' ಎಂದು ಪತಿಯ ಸಲಹೆಯನ್ನೂ ಕೇಳಿದಳು. 'ಯಾವುದನ್ನಾದರೂ ಉಟ್ಟುಕೊಂಡುಬಿಡು ಎಂಥದು ಉಟ್ಟರೂ ನೀನು ಚೆಂದಾಗಿಯೇ ಕಾಣುತ್ತೀಯ!' ಎಂದು ಆತ ಉತ್ತರ ವಿತ್ತ. ಕೊನೆಗೆ ಬಿಳಿಯ ವಾಯಲ್ ಸೀರೆಯೇ ಸರಿಯೆಂದು ನಿಶ್ಚಯಿಸಿ ಉಟ್ಟು ಕೊಂಡು ಬಿಳಿಯ ರವಕೆ ತೊಟ್ಟು ದೂ ಆಯಿತು. ಮೂರುನಾಲ್ಕು ಸಲ ಕನ್ನಡಿಯಲ್ಲಿ. ಹೌದು ಅರ್ಧ ಒಡೆದ ಕನ್ನಡಿಯಲ್ಲಿ ಮುಖ ನೋಡಿಕೊಂಡು, ಕೆನ್ನೆ ಉಜ್ಜಿಕೊಂಡು ಕುರುಳು ತಿದ್ದಿಕೊಂಡು, ಹುಬ್ಬು ತೀಡಿಕೊಂಡು, ಮೂಗು ಒರೆಸಿಕೊಂಡು ತನ್ನಷ್ಟಕ್ಕೆ ತಾನೇ ನಕ್ಕು ಅನ್ನ ಹೊತ್ತಿಕೊಂಡ ವಾಸನೆ ಬರುತ್ತಲೂ ಅವಸರದಿಂದ ಓಡಿಹೋಗಿ ಅದನ್ನಿಳಿಸಿದ್ದಾಯಿತು. ಅವಳ ಚಲನವಲನಗಳನ್ನೆಲ್ಲ ಕೌತುಕದಿಂದ ನಿರೀಕ್ಷಿಸುತ್ತ ಕೊಟಡಿಯಲ್ಲಿ ಕುಳಿತಿದ್ದ ಸಿದ್ಧರಾಮ. ಅವನ ಸಿದ್ಧತೆಯೇನೂ ಇರಲಿಲ್ಲ. ಸೂಟು ಹಾಕಿ, ಬೂಟು ಧರಿಸಿ ಹೊರಡಬೇಕಾದರೆ ಸಿದ್ಧತೆ ಬೇಕು. ಅಂಗಿ ತೊಟ್ಟು, ಪಂಚೆ
ಉಟ್ಟು ಹೊರಡಲು ಎಂಥ ಸಿದ್ಧತೆ?
ಊಟ ತೀರಿಸಿಕೊಂಡು ಪ್ಲಾಟ್ ಫಾರ್ಮಿಗೆ ಬಂದುದೂ ಆಯಿತು. ಅವಸರ ದಿಂದ ಟಿಕೆಟ್ ಕೊಂಡುಕೊಂಡು ಪ್ಲಾಟ್ ಫಾರ್ಮಿಗೆ ಬಂದರು.
ಅದೋ! ದೇವಮ್ಮನೂ ಬಂದಿದ್ದಾಳೆ ನೋಡಿ, ಅವರೂ ಹೊರಟಂತೆ ಕಾಣುತ್ತೆ ಸಿನಿಮಾಕ್ಕೆ?”
ಸಿದ್ಧರಾಮ ಅತ್ತ ಹೊರಳಿದ, ದೇವಮ್ಮ ! ಅವಳನ್ನಾತ ನೋಡಿದ್ದು ಇದೇ ಮೊದಲನೆಯ ಸಲ, ಭಾರಿ ಬೆಲೆಯ ರೇಷ್ಮೆ ಸೀರೆ ಉಟ್ಟಿದ್ದಾಳೆ. ರೇಷ್ಮೆ ರವಕೆ ತೊಟ್ಟಿದ್ದಾಳೆ. ಕಿವಿಗಳಲ್ಲಿ ಕೆಂಪಿನ ಲೋಲಾಕು ಇಟ್ಟಿದ್ದಾಳೆ. ಕತ್ತಿನಲ್ಲಿ ಚಿನ್ನದ ಹಾರ ಹಾಕಿ ಕೈಗಳಲ್ಲಿ ಚಿನ್ನದ ಬಳೆ ತೊಟ್ಟಿದ್ದಾಳೆ, ಬೆರಳುಗಳಲ್ಲಿ ರತ್ನದುಂಗುರ
ಗಳಿವೆ. ಕಾಲಿಗೆ ಹೊಳಪಿನ ಪೂಸು! ಮುಖದ ಮೇಲೆಲ್ಲ ಪೌಡರಿನ ತೆರೆ! ತುಟಿಗಳಲ್ಲಿ ಬಿಂಕದ ನಗೆ! ತಿಂಗಳಿಗೆ ಇನ್ನೂರು ರೂಪಾಯಿ ಸಂಪಾದಿಸುವ ಸೂಪರ್ ವೈಜರ್ ಪತ್ನಿ ತಾನು ಎಂಬುದನ್ನು ಸೂಚಿಸಲೆತ್ನಿಸುವಂಥ ದೃಷ್ಟಿ!
ಪಕ್ಕದಲ್ಲೇ ನಿಂತಿದ್ದ. ಅವಳ ಕೈಹಿಡಿದ ಮಹಾನುಭಾವ ಆಗತಾನೆ ಯೂರೋಪಿ ನಿಂದ ಮರಳಿದವರಂಥ ವೇಷದಲ್ಲಿ. ಮಾಂಚೆಸ್ಟರ್ ಸರ್ಜಿನ ಸೂಟು, ಟೈ, ಕಾಲರ್, ಹ್ಯಾಟು; ಬೆಳಕು ಬೀರುವ ಬೂಟು. ಬಿಂಕದಿಂದ ಸೆಟೆದು ನಿಂತ ಕತ್ತು!
ಸಿದ್ಧರಾಮನ ದೃಷ್ಟಿ ಆ ದಂಪತಿಗಳಿಂದ ಹೊರಳಿ ತಮ್ಮಿಬ್ಬರನ್ನು ನೋಡಿ ಕೊಂಡಿತು. ಆ ಸೂಪರ್ ವೈಜರ್ ಮಹಾಶಯನ ಸೂಟು-ಬೂಟು; ತನ್ನ ಶರ್ಟು- ಪಂಚೆ, ಅವನ ಪತ್ನಿಯ ರೇಷ್ಮೆ ಸೀರೆ, ತನ್ನ ಪತ್ನಿಯ ಸಾದಾ ಸೀರೆ, ಅವಳ ಕತ್ತಿ ನಲ್ಲಿನ ಚಿನ್ನದ ಹಾರಗಳು, ಇವಳ ಕತ್ತಿನಲ್ಲಿದ್ದ ಕರಿಮಣಿಗಳು, ಅವಳ ಚಿನ್ನದ ಬಳೆ, ಇವಳ ಗಾಜಿನ ಬಳೆ, ಅವಳ ರತ್ನದುಂಗುರದ ಬೆರಳು, ಶೂ ಮೆಟ್ಟಿದ ಕಾಲು ಇವಳ ಬೆರಳೂ ಬರಿಯವು ಕಾಲೂ ಬರಿಯವು........
ಈ ಬಗೆಯ ತುಲನೆ ಸರಿಯಲ್ಲ. ಸರಿಯಲ್ಲ ಎಂದು ಎಷ್ಟು ಹೇಳಿದರೂ ಕೇಳಲಿಲ್ಲ ಮನಸ್ಸು. ಮತ್ತೆ ಮತ್ತೆ ಆ ವೈಷಮ್ಯದ ಭಾವನೆಯೇ ಎದೆಯನ್ನು ಕಲಕುತ್ತಿತ್ತು. ಅವರೂ ಸಿನಿಮಾಗೆ ಹೋಗುತ್ತಿದ್ದಾರೆ. ನಾವೂ ಸಿನಿಮಾಗೆ ಹೋಗುತ್ತಿದ್ದೇವೆ. ಆದರೆ ಅವರ ಸ್ಥಿತಿಗೂ ನಮ್ಮ ಸ್ಥಿತಿಗೂ ಎಷ್ಟು ವ್ಯತ್ಯಾಸ! ಆ ಸೂಪರ್ ವೈಜರ್ ಅಮ್ಮನೆದುರಿಗೆ ಎಷ್ಟು ದೀನೆಯಾಗಿ ಕಾಣುತ್ತಾಳೆ ನನ್ನ ಗಿರಿಜಾ! ಆಕೆಗಿಂತಲೂ
ಚೆಲುವೆ ಈಕೆ. ಆದರೆ........
ಧಾವಿಸುತ್ತ ಬಂತು ಉಗಿಬಂಡಿ, ಒಂದು ಡಬ್ಬಿಯಲ್ಲೂ ಸ್ಥಳವಿರಲಿಲ್ಲ. ಗಂಡ ಸರು, ಹೆಂಗಸರು, ಹುಡುಗಿಯರು, ಕೂಸುಗಳು ! ಕಾಲಿಟ್ಟುಕೊಂಡು ನಿಂತಿರಲೂ ಸಹ ಸಾಧ್ಯವಿರಲಿಲ್ಲ. ಬಾಗಿಲು ತೆರೆದು ಒಳಸೇರುವುದೇ ಅಸಾಧ್ಯವಾಗಿತ್ತು. ಅವುಗಳ ಮೇಲೂ ಸವಾರಿ ಮಾಡಿದ್ದರು ಜನ. ಬಾಗಿಲು ತೆಗೆಯುವುದು ಹಾಗಿರಲಿ, ಹತ್ತಿರ ಹೋದರೆ ಸಾಕು ಆ ದ್ವಾರರಕ್ಷಕರು ಉರಿದು ಬೀಳುತ್ತಿದ್ದರು. ಕನ್ನಡ, ತೆಲುಗು ತಮಿಳು, ಹಿಂದೀ ಎಲ್ಲ ಭಾಷೆಗಳಲ್ಲಿ ಗಲಾಟೆಗಾರಂಭವಾಗುತ್ತಿತ್ತು,
ಎಲ್ಲ ಡಬ್ಬಿಗಳನ್ನೂ ಹುಡುಕಿದ್ದಾಯಿತು. ಒಂದರಲ್ಲೂ ಪ್ರವೇಶ ದೊರೆಯು ವಂತಿರಲಿಲ್ಲ. ದೇವಮ್ಮನೂ ಅವಳ ಪತಿಯೂ ಇಂಟರ್ ವರ್ಗದಲ್ಲಿ ಕುಳಿತುಕೊಂಡು ಬಿಟ್ಟರು. ಅಲ್ಲಿ ಹಾಯ್ದು ಹೋಗುತ್ತಿದ್ದ ಹಾಗೆ ದೇವಮ್ಮ ಗಿರಿಜೆಯನ್ನು ನೋಡಿದಳು.
ನಾವೂ ಬರೋಣವೇನಮ್ಮಾ ಒಳಕ್ಕೆ?” ಎಂದಳು ಗಿರಿಜಾ,
ಟಿಕೆಟ್ ತಕ್ಕೊಂಡಿದ್ದೀರೇನು ಇಂಟರಿನದು?' ಎಂದು ಉಪಹಾಸದಿಂದ ಹೇಳಿ ದೇವಮ್ಮ ಮುಸಿ ಮುಸಿ ನಕ್ಕಳು.
ಮುಖಭಂಗವಾಯಿತು ಸಿದ್ದರಾಮನಿಗೆ. ಇಲ್ಲಿ ಬೇಡ ಬಾ ಗಿರಿಜಾ! ನಮ್ಮ ಸ್ಥಳವಲ್ಲ ಇದು! ಅಲ್ಲಿ ಹೆಂಗಸರ ಡಬ್ಬಿಯಲ್ಲಿ ನೀ ಕೂತಿರು, ನಾನು ಎಲ್ಲಾದರೂ ನಿಂತುಕೊಂಡಿದ್ದೇನೆ' ಎಂದು ಹೇಳಿ ಆ ಕಡೆ ನಡೆದ.
ಅಲ್ಲ ಅದೇ ಗತಿ, ಅಷ್ಟೇ ಗಲಾಟೆ, ದಪ್ಪಗಿನ ಶರೀರದ ಮದ್ರಾಸ್ ಸ್ತ್ರೀಯೊಬ್ಬಳು ಬಾಗಿಲಿಗೆ ಅಡ್ಡವಾಗಿ ಕೂತುಕೊಂಡುಬಿಟ್ಟಿದ್ದಳು. ಅವಳ ಆ ದೀರ್ಘ ಕಾಯವನ್ನು ಬದಿಗೆ ಸರಿಸಿ ಬಾಗಿಲು ತೆಗೆಯುವುದೂ ಅಸಾಧ್ಯವಾಗಿತ್ತು. ಹೇಗೋ ಪ್ರಯಾಸಪಟ್ಟು ಬಾಗಿಲ ಮೇಲಿಂದ ಗಿರಿಜಳನ್ನೇರಿಸಿ ಒಳಕ್ಕೆ ತೂರಿಸಿಬಿಟ್ಟು ಸಿದ್ಧರಾಮ ಪಕ್ಕದ ಡಬ್ಬಿಗೆ ಹೋದ. ಹತ್ತಾರು ಜನರ ಬೈಗಳ ಮಳೆಯಲ್ಲಿ ತೋಯಿಸಿ ಕೊಳ್ಳುತ್ತ ಹೇಗೋ ಒಳಕ್ಕೆ ನೆಗೆದ. 'ಉಸ್ಸಪ್ಪಾ' ಎಂದು ಒಂದು ಸಲ ದೀರ್ಘ ಉಸಿರು ಹಾಕಿ ನಿಂತುಕೊಂಡ.
ಗಾಡಿಯೂ ಉಸಿರೆಳೆಯುತ್ತ ಧಾವಿಸತೊಡಗಿತು.
ಅಷ್ಟರಲ್ಲಿ ತಿಂದ ಅನ್ನ, ಕಟ್ಟಿ ತಂದ ಉತ್ಸಾಹ ಅರ್ಧಕ್ಕರ್ಧ ಕರಗಿಹೋಗಿತ್ತು ಸಿದ್ಧರಾಮನಿಗೆ.
ಬೆಂಗಳೂರು ನಗರದ ನಿಲ್ದಾಣ ಬಂತು, ಬಾಗಿಲಿನಿಂದ ಪ್ಲಾಟ್ ಫಾರ್ಮಿಗೆ ಜಿಗಿದುಬಿಟ್ಟು ಈಚೆಗೆ ಬಂದು ಪತ್ನಿಯನ್ನು ಕರೆದುಕೊಂಡು ಹೊರಕ್ಕೆ ಬಂದ. ಓಡಾಡುತ್ತಿದ್ದವರಲ್ಲಿ ಅನೇಕರು ಬೇಕೆಂತಲೇ ಅವಳ ಮೈಗೆ ಮೈ ತಗಲಿಸಿಕೊಂಡು ಹೋಗುತ್ತಿದ್ದರು. ಅವಳೆಷ್ಟು ಎಚ್ಚರದಿಂದ ನಡೆದರೂ ಪ್ರಯೋಜನವಾಗಲಿಲ್ಲ.
“ಅದ್ಯಾಕೆ ಹೀಗೆಲ್ಲಾ ತಟ್ಟಿಕೊಂಡು ಹೋಗುತ್ತಾರೆ ಇವರು?' ಎಂದು ಬೇಸರ
ದಿಂದ ಕೇಳಿದಳಾಕೆ.
(ಇದು ಬೆಂಗಳೂರಿನ ಫ್ಯಾಶನ್ ಗಿರಿಜಾ! ಬಡವರನ್ನು ಕಂಡರೆ ಎಲ್ಲಾ ಹೀಗೇ, ನಾವು ನೋಡಹೊರಟಿರುವ ಸಿನಿಮಾದಲ್ಲಿ ಮೊದಲನೇ ದೃಶ್ಯ ಇದು!” ಎಂದ ಸಿದ್ಧರಾಮ. ಅವನ ಮಾತಿನಲ್ಲಿ ಎಷ್ಟು ಅರ್ಥವಾಯಿತೋ ಅವಳಿಗೆ!
ನಿಲ್ದಾಣದ ಹೊರಗಡೆ ಬಂದಾಗ ದೇವಮ್ಮನೂ ಅವಳ ಪತಿಯ ಕುದುರೆ ಗಾಡಿಯಲ್ಲಿ ಹತ್ತಿ ಹೊರಡಲಣಿಯಾಗಿದ್ದುದು ಕಾಣಿಸಿತು.
ಗಿರಿಜನ ಕಡೆ ದೃಷ್ಟಿ ಹೊರಳಿಸುತ್ತಲೂ ಮತ್ತೆ ದೇವಮ್ಮು ಮುಸಿ ಮುಸಿ ನಕ್ಕಳು, ಆ ನಗೆಯ ಅರ್ಥವೇ ನೆಂಬುದನ್ನರಿತುಕೊಳ್ಳುವಷ್ಟು ಸೂಕ್ಷ್ಮ ಬುದ್ಧಿಯಲ್ಲಿ ಬಂದೀತು ಗಿರಿಜಾಗೆ?
“ನೋಡಿದ್ರಾ ! ಗಾಡಿ ಮಾಡ್ಕೊಂಡು ಹೊರಟಿದ್ದಾರೆ. ಎಲ್ಲಿಗೆ ಹೋಗ್ತಾ ಇದಾರೋ!' ಎಂದಳು.
“ಎಲ್ಲಿಯಾದರೂ ಹೋಗಲೇಳು. ಗಾಡಿ ಅದ್ರೂ ಮಾಡಿಕೊಳ್ಳಲಿ, ವಿಮಾ ನಾದ್ರೂ ಏರಿಕೊಳ್ಳಲಿ, ನನಗೇನಂತೆ, ನಾವು ನಡೆದು ಹೋಗೋದೇ ಮೇಲು, ಬಾ
ಎಂದ ಸಿದ್ಧರಾ
ರಾಮ
“ಎಲ್ಲಿಗೆ ಹೋಗೋದು ಈಗ??
ಚಿಕ್ಕ ಲಾಲ್ ಬಾಗಿಗೆ.'
ಲಾಲ್ ಬಾಗ್ ? ದೇವಮ್ಮ ಅಲ್ಲಿಗೇ ಹೊರಟಿದ್ದಾಳೋ ಏನೋ! ಅಲ್ಲಿ ಪಾರಿವಾಳಗಳಿವೆಯಂತಲ್ಲ? ಹೌದೇನು?'
ಇವೆಯಂತೆ. ನಾನೇನೂ ನೋಡಿಲ್ಲ. ಅದು ದೊಡ್ಡ ಲಾಲ್ ಬಾಗ್, ನಾವೀಗ ಹೋಗೋದು ಅಲ್ಲಿಗಲ್ಲ. ಚಿಕ್ಕ ಲಾಲ್ ಬಾಗಿಗೆ!”
“ಅಲ್ಲಿಗ್ಯಾತಕ್ಕೆ? ದೊಡ್ಡ ಲಾಲ್ ಬಾಗಿಗೇ ಹೋಗೋಣ. ಪಾರಿವಾಳಗಳ ನ್ನಾದ್ರೂ ನೋಡಬಹುದು.'
ದೊಡ್ಡ ಲಾಲ್ ಬಾಗ್ ದೊಡ್ಡ ಮನುಷ್ಯರದು ಗಿರಿಜಾ ! ಪಾರಿವಾಳ, ಗಿಳಿ, ಗೊರವಂಕ, ಗ್ಲಾಸ್ ಹೌಸ್- ಎಲ್ಲಾ ಅವರದೇ! ನಾವು ಚಿಕ್ಕ ಜನ, ನಮಗೆಲ್ಲಾ ಚಿಕ್ಕ ಲಾಲ್ ಬಾಗೇ ಸರಿಯಾದ ಸ್ಥಳ, ಈ ವೇಷದಲ್ಲಿ ನಾವು ದೊಡ್ಡ ಲಾಲ್ ಬಾಗಿಗೆ ಹೋದರೆ ರೇಷ್ಮೆ ಸೀರೆಯುಟ್ಟುಕೊಂಡು ಶೂ ಹಾಕಿಕೊಂಡು ಅಲ್ಲಿ ತಿರುಗುವ ಥಳುಕಿನ ಹುಡುಗಿಯರು ಬಿದ್ದು ಬಿದ್ದು ನಕ್ಕಾರು, ಚಿಕ್ಕಲಾಲ್ ಬಾಗಿನಲ್ಲಾದರೂ ಹಾಗೆ ನಗುವರಾರೂ ಇರೋದಿಲ್ಲ. ಇಲ್ಲಿಗೆ ಬರೋದು ಅಂದರೆ ಅವರ ಮರ್ಯಾದೆಗೆ ಕಡಿಮೆ. ನಮ್ಮಂಥ ಬಡವರೇ ಬರೋದು ಇಲ್ಲಿಗೆ, ಬಾ ಹೋಗೋಣ, ಮೂರೂ ವರೆಗೆ ಸಿನಿಮಾ ಸುರುವಾಗುತ್ತೆ. ಅಲ್ಲಿಯವರೆಗೆ ಮಾಡೋದೇನು? ಕೂತಿರೋಣ ವಂತೆ ತೋಟದಲ್ಲಿ........'
ತೋಟಕ್ಕೆ ಬಂದು ತಲುಪಿದರು. ಆಗಲೆ ಸೂರ್ಯ ನೆತ್ತಿಯಮೇಲೆ ಏರಿ ಬಂದಿದ್ದ. ಗಿಡಮರಗಳ ನೆರಳಿನಲ್ಲಿ ಅಲ್ಲಿ ಇಲ್ಲಿ ಅಸ್ತವ್ಯಸ್ತವಾಗಿ ಬಿದ್ದು ಕೊಂಡಿತ್ತು ಬಡಜನ, ಶಿಲಾಸನವೊಂದರಮೇಲೆ ಇಬ್ಬರೂ ಕುಳಿತುಕೊಂಡರು.
ಸೆರಗಿನಿಂದ ಬೆವರನ್ನೊರೆಯಿಸಿಕೊಳ್ಳುತ್ತ ಕೇಳಿದಳು ಗಿರಿಜಾ, “ಇನ್ನೇನು ಮಾಡೋದು?”
“ಸಿನಿಮಾ ನೋಡೋದು' ಎಂದ ಸಿದ್ಧರಾಮ, ಅರ್ಥಗರ್ಭಿತ ಸ್ವರದಲ್ಲಿ. ಸಿನಿಮಾ? ಈಗೆಲ್ಲಿಯ ಸಿನಿಮಾ? ಮೂರೂವರೆಗಲ್ಲವೇನು ನೀವು ಹೇಳಿದ್ದು?' “ಮೂರೂವರೆಗೆ ನಡೆಯೋದು ನಿಜವಾದ ಸಿನಿಮಾ ಅಲ್ಲ. ಸುಳ್ಳು ಸಿನಿಮಾ! ನಿಜವಾದ ಸಿನಿಮಾ ಇಲ್ಲೇ ನಡೆದಿದೆ ನೋಡು. ನಮ್ಮ ಅಕ್ಕ ಪಕ್ಕದಲ್ಲೇ, ನಮ್ಮ * ಕಣ್ಣೆದುರಿನಲ್ಲೆ !”
ಸುರು ಮಾಡಿದ್ದೇನು ಹಾಸ್ಯಕ್ಕೆ ? ಇಲ್ಲೆಲ್ಲಿದೆ ಸಿನಿಮಾ? ಈ ತೋಟದಲ್ಲಿ?”
ಹೂಂ! ಈ ತೋಟದಲ್ಲಿ!?
ಎಲ್ಲಿ? ಕಾಣೋದಿಲ್ಲವಲ್ಲಾ?”
“ಕಣ್ಣಿದ್ದವರಿಗೆ ಮಾತ್ರ ಕಾಣಿಸುತ್ತೆ ಅದು!”
“ಕಣ್ಣಿದ್ದವರಿಗೆ ಅಂದ್ರೆ? ಅಂದ್ರೆ ನನ್ನೇನು ಕುರುಡಿ ಅಂತ ತಿಳಕೊಂಡಿರೊ? “ಹೂಂ! ಕುರುಡಿಯೇ ಸರಿ- ಇನ್ನೇನು?'
ಕಣ್ಣಿದ್ದೂ?'
ಹೌದು, ಕಣ್ಣಿದ್ದೂ ಕುರುಡಿ ನೀನು ಗಿರಿಜಾ! ಈ ಹೊರಗಿನ ಕಣ್ಣುಗಳಿಂದ ಕಾಣಲಾರದು ಈ ಸಿನಿಮಾ! ಅದಕ್ಕೆ ಒಳಗಿನ ಕಣ್ಣು ಬೇಕು! ಜ್ಞಾನದ ಕಣ್ಣು ಬೇಕು. ಬುದ್ಧಿಯ ಕಣ್ಣು ಬೇಕು. ಸಹಾನುಭೂತಿಯ ಕಣ್ಣು ಬೇಕು.”
ನಮ್ಮ ಸುತ್ತಮುತ್ತ ಏನು ನಡೆದಿದೆ. ನಮ್ಮ ದೇಶದ ಗತಿ ಏನಾಗಿದೆ, ಜನ ಯಾವ ಸ್ಥಿತಿಯಲ್ಲಿದ್ದಾರೆ. ಅವರ ಕಷ್ಟ ಸುಖ ಹೇಗಿದೆ ಅನ್ನೋದನ್ನ ತಿಳಿದು ಕೊಳ್ಳೋ ವಿಚಾರ ಬೇಕು ನಮಗೆ ಗಿರಿಜಾ! ಅದೋ ಆ ಗಿಡದ ಕೆಳಗೆ ಒಬ್ಬ ಹೆಂಗಸು ಬಿದ್ದು ಕೊಂಡಿದ್ದಾಳೆ ಕಾಣಿಸುತ್ತೆ ತಾನೇ ನಿನಗೆ??
“ಹೌದ! ಪಾಪ! ಯಾಕೆ ಹಾಗೆ ಬಿದ್ದು ಕೊಂಡಿದಾಳೋ? ಹತ್ತಿರ ಇರೋವು ಆ ನಾಲ್ಕು ಸಿಳ್ಳೆಗಳು ಮಕ್ಕಳು ಅಂತೆ ಕಾಣುತ್ತೆ!'
'ಮಕ್ಕಳೇ! ಇನ್ನಾರಿದ್ದಾರು! ನೋಡು, ಆಕೆಯೂ ನಮ್ಮ ಹಾಗೆ ಮನುಷ್ಯಳೇ ನಿನ್ನ ಹಾಗೆ ಹೆಂಗಸೇ, ಮಾನ ಮರ್ಯಾದೆ ಎಲ್ಲಾ ಮರತುಬಿಟ್ಟು ಒಬ್ಬಳೇ, ಈ ಮಕ್ಕಳನ್ನು ಕಟ್ಟಿಕೊಂಡು ಈ ತೋಟಕ್ಕೆ ಬಂದು ಈ ರೀತಿ ಬಿದ್ದು ಕೋಬೇಕಾದರೆ ಅವಳಿಗೆ ಯಾವ ಗತಿ ಬಂದಿದ್ದೀತು? ಅವಳಿಗೆ ಇಂಥಾ ಸ್ಥಿತಿ ಬರಲು ಕಾರಣ ಏನು? ಅನ್ನೋ ವಿಚಾರ ನಮಗೆ ಬರಬೇಡವೇ??
ಗಿರಿಜಾ ಮಾತನಾಡಲಿಲ್ಲ. ಅವಳ ಮನಸ್ಸಿಗೆ ಮುತ್ತಿಕೊಂಡಿದ್ದ ಮೌಡ್ಯದ ಪರದೆ ಮೆಲ್ಲಮೆಲ್ಲನೆ ಕಳಚಿಬೀಳತೊಡಗಿತ್ತು.
(ಆ ಹೆಂಗಸಿನ ಮಾತು ಹಾಗಿರಲಿ. ಈ ಕಡೆ ಎಡಗಡೆ ಆ ಬೇಲಿಯ ಹತ್ತಿರ ನೋಡು; ಹರಕು, ಹೊಲಸು ಬಟ್ಟೆ ಹಾಕಿಕೊಂಡು ಆ ನಾಲ್ಕು ಹುಡುಗರು ಹೇಗೆ ಬಿದ್ದಿವೆ ನೋಡು ಬಿಸಿಲಿನಲ್ಲೇ! ಪಾಪ! ಅವುಗಳ ವಯಸ್ಸಾದರೂ ಎಷ್ಟಿದ್ದೀತು! ಆರರಿಂದ ಏಳರ ವರೆಗೆ! ಹೆಚ್ಚಾಗಿರಲಿಕ್ಕಿಲ್ಲ. ಶಾಲೆ ಕಲಿಯೋ ವಯಸ್ಸಿದು. ಇವು ಇಲ್ಲಿ ಬಿದ್ದು ಕೊಂಡಿವೆ. ಎಲ್ಲಿಯಾದರೂ ಕೂಲಿನಾಲಿ ಮಾಡೋದು-ಆರು ಕಾಸಿನ ಕಡಲೆ ಪುರಿ ತಿನ್ನೋದು, ಮುಸುರೆ ಎಲೆ ಹುಡುಕಿ ಎಂಜಲು ತಿನ್ನೋದು-ಇಲ್ಲಿ
ಬಂದು ಬಿದ್ದು ಕೊಳ್ಳೋದು ಇದೂ ಜೀವನವೇ ಗಿರಿಜಾ! ಈ ಮಕ್ಕಳೂ ಮಕ್ಕಳೇ! ನೋಡಿದರೆ ನಾಯಿಯ ಕುನ್ನಿಗಳು ಬಿದ್ದು ಕೊಂಡ ಹಾಗೆ ಕಾಣಿಸೋಲ್ಲವೆ ಅವು?- ನಮ್ಮ ದೇಶದಲ್ಲಿ ನೂರಕ್ಕೆ ತೊಂಬತ್ತರಷ್ಟು ಮಕ್ಕಳ ಗತಿಯೂ ಹೀಗೇ ಆಗಿದೆ ಗಿರಿಜಾ! ನಾಯಿಯ ಕುನ್ನಿಗಳ ಹಾಗೆ ನಾವು ನೋಡುತ್ತಿರುವ ಸಿನಿಮಾದಲ್ಲಿ ಎರಡನೇ ದೃಶ್ಯ ಇದು!........' ಎಂದ.
ಕೆಲಕಾಲ ದಂಪತಿಗಳಿಬ್ಬರೂ ಮೌನವಾಗಿದ್ದರು. ಯಾರ ಬಾಯಿಂದಲೂ ಮಾತು ಹೊರಡುವ ಹಾಗಿರಲಿಲ್ಲ.
(ಕಳ್ಳೇಕಾಯಿ! ಕಳ್ಳಕಾಯಿ!”
ತಲೆಯೆತ್ತಿ ನೋಡಿದಳು ಗಿರಿಜಾ,
ಮುದುಕನೊಬ್ಬ ಬುಟ್ಟಿಯೊಂದನ್ನು ಹೊತ್ತುಕೊಂಡು ಕೂಗುತ್ತ ಬರುತ್ತಿದ್ದ. ವಯಸ್ಸಾದ ಮುದುಕ, ಅರವತ್ತು ಎಪ್ಪತ್ತು ಅದರೂ ಆಗಿದ್ದೀತು. ಕೈಯಲ್ಲೊಂದು ಕೋಲು ಹಿಡಿದುಕೊಂಡು ಅದರ ಆಧಾರದಿಂದ ತನ್ನ ಕೋಲಿನಂಧ ಶರೀರವನ್ನು ಮುಂದುವರೆಯಿಸುತ್ತ ಬಾಗುತ್ತ, ಬರುತ್ತಿದ್ದಾನೆ. ಹರಿದುಹೋದ ಪಂಚೆಯೊಂದನ್ನು ಮೊಳಕಾಲಿನವರೆಗೆ ಸುತ್ತಿಕೊಂಡು ಹೊಲಸು ಅಂಗಿಯೊಂದನ್ನು ತೊಟ್ಟಿದ್ದಾನೆ. ತಲೆ ಗೊಂದು ಚಿಂದಿಬಟ್ಟೆ, ಮುಖದ ಮೇಲೆ ಬೆಳೆದುನಿಂತ ಬಿಳಿಯ ಗಡ್ಡ ಮೀಸೆ. ಮೊದಲೇ ಕಳಾಹೀನವಾದ ಆ ಮುಖ ಬಿಸಿಲಿನಲ್ಲಿ ಸುತ್ತಿ ಸುತ್ತಿ ಇನ್ನೂ ಕಂದಿ ಹೋಗಿದೆ. 'ಕಳ್ಳೇಕಾಯಿ! ಕಳ್ಳೇಕಾಯಿ!' ಎಂದ ಕುಗ್ಗಿದ ದನಿ ಅದು.
'ಹಸಿವಾಗಿದೆಯೇನೇ?” ಎಂದ ಸಿದ್ಧರಾಮ.
ಹೌದು, ಹಸಿವಾಗಿತ್ತು ಅವಳಿಗೆ ಬೆಳಗಿನಲ್ಲಿ ತಿಂದ ಆ ಅನ್ನ ಯಾವಾಗಲೋ ಕರಗಿ ಹೋಗಿತ್ತು. ಆ ರೈಲು ಪ್ರಯಾಣ-ಆ ಗಲಾಟೆ-ಆ ಬಿಸಿಲು-ಆ ದಾಹ.......
'ಕೊಡಯ್ಯಾ ಒಂದಾಣೆಯದು!?
ನಡುಗುವ ಕೈಗಳಿಂದ ಬುಟ್ಟಿಯನ್ನಿಳಿಸಿ ಆ ಮುದುಕ ಕುಳಿತುಕೊಂಡ. ಒಂದು ಪಾವು ಕಡಲೇಕಾಯಿಗಳನ್ನಳೆದುಕೊಟ್ಟು ದುಡ್ಡು ತೆಗೆದುಕೊಂಡು ಹೊರಟುಹೋದ. ಭಾರತದ ದಾರಿದ್ರ, ದೈನ್ಯತೆ, ಅಸಹಾಯಕತೆಗಳೇ ಮೂರ್ತಿವೆತ್ತು ಬಂದಂತಿದ್ದ ಆ ಮುದುಕನನ್ನು ಶೂನ್ಯ ದೃಷ್ಟಿಯಿಂದ ನಿಟ್ಟಿಸುತ್ತ ಸಿದ್ಧರಾಮನೆಂದ.
“ನಾವು ನೋಡುತ್ತಿರುವ ಸಿನಿಮಾದಲ್ಲಿ ಮೂರನೇ ದೃಶ್ಯ ಇದು ಗಿರಿಜಾ ! ಇನ್ನೂ ಕೊಂಚ ಕಣ್ಣೆರೆದು ನೋಡು, ಮುಪ್ಪಿನ ಮುದುಕ ಈತ, ಅರವತ್ತಕ್ಕೂ ಹೆಚ್ಚಾಗಿದ್ದೀತು ವಯಸ್ಸು ಮೈಯಲ್ಲಿ ಶಕ್ತಿಯಾದರೂ ಇದೆಯೇ ಅವನಿಗೆ? ಅವನ ಕತ್ತಿನಲ್ಲಿ ನರಗಳಾದರೂ ಇವೆಯೇ? ಕೈಯಲ್ಲಿ ರಕ್ತವಾದರೂ ಇದೆಯೇ? ಆದರೂ
ಆತ ಆ ಬುಟ್ಟಿ ಹೊತ್ತುಕೊಂಡು ಈ ಭೀಕರ ಬಿಸಿಲಿನಲ್ಲಿ ತಿರುಗುತ್ತಾನೆ. ಊಟ ಮಾಡಿ ತಂಪಾದ ಸ್ಥಳದಲ್ಲಿ ಮಲಗಿಕೊಂಡು ವಿರಮಿಸುವ ಹೊತ್ತು ಇದು. ಇವನ ವಯಸ್ಸಿನ ಶ್ರೀಮಂತರೆಷ್ಟು ಜನ ಸೋಫಾಗಳ ಮೇಲೆ ಒರಗಿ ನಿದ್ರಿಸುತ್ತಿದಾರೋ ಇವನು ಮಾತ್ರ ಹೊಟ್ಟೆ ಪಾಡಿಗಾಗಿ ಈ ಕಳ್ಳಕಾಯಿಯ ಕುಲ್ಲಕವ್ಯಾಪಾರ ಮಾಡುತ್ತ ತಿರುಗಬೇಕಾಗಿದೆ. ದಿನವೆಲ್ಲಾ ಈ ರೀತಿ ತಿರುಗಿದರೆ ಅವನಿಗೆ ದೊರೆಯುವ ಲಾಭ ವಾದರೂ ಎಷ್ಟಿದ್ದೀತು ಅಂತೀಯಾ? ನಾಲ್ಕಾಣೆ ಐದಾಣೆ ಆದರೆ ಬಹಳ ಆಯಿತು. ಈ ಅಲ್ಪ ಲಾಭಕ್ಕಾಗಿ ಈ ಮುದುಕ ಪಡುತ್ತಿರುವ ಕಷ್ಟ ನೋಡಿದೆಯಾ? ಇಂಥ ಕಷ್ಟವೇ ಇವನಂಥ ಕೋಟ್ಯಾವಧಿ ಜನ ಮುದುಕರಿಗೂ ಇದೆ, ಇಂದಿನ ಹಿಂದುಸ್ಥಾನ ದಲ್ಲಿ! ಇದು ನಿಜವಾದ ಸಿನಿಮಾ ಗಿರಿಜಾ! ಅಲ್ಲಿ ಆ ಥೇಟರನಲ್ಲಿ ಈ ನಿಜ ದೃಶ್ಯ ಗಳನ್ನು ನೋಡಿಸೋಲ್ಲ. ಅದೆಲ್ಲಾ ಸುಳ್ಳು ಸೃಷ್ಟಿ, ಬರೀ ಶ್ರೀಮಂತರ ಅಟ್ಟಹಾಸ ಅವರ ಸೂಟು, ಅವರ ಬೂಟು, ಅವರ ಭಾರಿ ಭಾರಿ ಬಂಗಲೆಗಳು, ಮೋಟಾರು ಕಾರುಗಳು, ಅವರ ಪ್ರೇಯಸಿಯರು, ಅವರ ಚಿತ್ರ ವಿಚಿತ್ರ ಸೀರೆ- ರವಕೆಗಳು.... ಅವರ ವಿಲಕ್ಷಣ ಪ್ರೇಮ! ಈ ಜಗತ್ತಿನಲ್ಲಿ ನಿಜವಾಗಿ ನಡೆದಿರೋದು ಆ ಸಿನಿಮಾ ಗಳಲ್ಲಿ ಕಾಣಿಸೋದಿಲ್ಲ ಗಿರಿಜಾ! ಅದ್ಯಾವುದೋ ಬೇರೆ ಜಗತ್ತಿನ ಸಿನಿಮಾ! ಅದಕ್ಕಾಗಿ ಹಣ ಹಾಳು ಮಾಡ್ತವೆ ಹುಚ್ಚರು ನಾವು......”
ಬೇರಾವುದಾದರೂ ಸಮಯವಾಗಿದ್ದರೆ ಗಿರಿಜಾ ಸುಮ್ಮನಿರುತ್ತಿರಲಿಲ್ಲ. ದುಡ್ಡು ಖರ್ಚಾಗುತ್ತೆ ಅಂತ ಸುರುವಾಯ್ತನೋ ನಿಮ್ಮ ಲೆಕ್ಚರು!' ಎಂದು ಹೇಳಿ ಮೂಗು ಮುರಿಯದಿರುತ್ತಿರಲಿಲ್ಲ. ಆದರೆ ಈಗ ಹಾಗೇನೂ ಮಾಡಲಿಲ್ಲ ಆಕೆ. ಅದು ಸಾಧ್ಯವೂ ಇರಲಿಲ್ಲ. ಈ ವಾತಾವರಣವೇ ವಿಲಕ್ಷಣವಾಗಿತ್ತು. ಮನೆಯಲ್ಲಿ ಕೂತು ಕೂತು ಸಂಕುಚಿತವಾಗಿದ್ದ ಅವಳ ದೃಷ್ಟಿ ಹೊರ ಜಗತ್ತಿನ ಸಂಪರ್ಕದೊಂದಿಗೆ ವಿಶಾಲವಾಗು ತಿತ್ತು ಅವಳ ಕಣ್ಣು ಮೆಲ್ಲನೆ ಬಿಚ್ಚಿಕೊಳ್ಳುತ್ತಿತ್ತು.ಸಿದ್ಧರಾಮನೆಂದ ಆ ಒಳಗಣ್ಣು....
ಇಂಥ ಬಡತನ, ಇಂಥ ದೈನ್ಯತೆ, ಇಂಥ ಅಸಹಾಯ ಸ್ಥಿತಿ ನಮ್ಮದು! ಇದನ್ನೆಲ್ಲ ಹೋಗಲಾಡಿಸಲು ನಾವು ದುಡಿಯಬೇಕಲ್ಲವೇ ಗಿರಿಜಾ! ಈ ಬಡವರೂ ನಮ್ಮವರೆ! ನಮ್ಮ ದೇಶದವರೆ! ನಮ್ಮ ಅಣ್ಣ ತಮ್ಮ ಅಕ್ಕ ತಂಗಿಯರೇ! ಅವರ ದುಃಖ ಹೇಗೆ ಹೋದೀತು ಅದಕ್ಕಾಗಿ ಎಂಥ ಕೆಲಸ ಮಾಡಬೇಕು ಎನ್ನುವುದನ್ನು ನಾವು ಯೋಚಿಸಬೇಕಲ್ಲವೇ? ಭಾನುವಾರ ಬರುತ್ತಲೂ ಅದೇ ಕೆಲಸದಲ್ಲಿ ತೊಡ ಗಿರುತ್ತೇನೆ ನಾನು. ಕಾಡುಗೋಡಿಯಲ್ಲಿರುವ ಇಂಥ ಬಡ ಕೂಲಿಕಾರರ ಸಂಘಟನೆ ಮಾಡುತ್ತಿರುತ್ತೇನೆ. ಈ ಅಸಹ್ಯ ಬಡತನ ಹೋಗಬೇಕು. ಅವರೂ ಮನುಷ್ಯರಾಗಿ ಬದುಕುವಂತಾಗಬೇಕು. ಅವರ ಮಕ್ಕಳೂ ಶಾಲೆಗೆ ಹೋಗಿ ಕಲಿಯಬೇಕು. ನಾಯಿ ಕುನ್ನಿಗಳಂತೆ ಎಂಜಲು ತಿಂದು ಈ ರೀತಿ ಬಿಸಿಲಲ್ಲಿ ಬೀಳಬಾರದು. ಅವರ ಹೆಂಗಸರೂ ಮರ್ಯಾದೆಯಿಂದ ಸುಖದಿಂದ ಇರುವಂತಾಗಬೇಕು. ಈ ರೀತಿ ಅನಾಥೆಯರಾಗಿ
ತೋಟದಲ್ಲಿ ಬಿದ್ದು ಕೊಳ್ಳಬಾರದು. ಅವರ ಮುದುಕ ತಂದೆಗಳೂ ಸುಖವಾಗಿ ಊಟ ಮಾಡಿ ವಿರಮಿಸುವಂತಾಗಬೇಕು. ಇಂಥ ಉರಿ ಬಿಸಿಲಿನಲ್ಲಿ ಕಳ್ಳೇಕಾಯಿ ಮಾರುತ್ತ ತಿರುಗಿ ಕೊನೆಗೆ ಕೆಮ್ಮುತ್ತ ಕೆಮ್ಮುತ್ತ ಪ್ರಾಣ ಬಿಡಬಾರದು....
“ಅದೆಲ್ಲಾ ಸರಿ, ಆದರೆ ನೀವೊಬ್ಬರೇ ಏನು ಮಾಡೀರಿ ಇವರಿಗೆಲ್ಲ? ನಿಮ್ಮೊಬ್ಬ
ರಿಂದ ಏನಾದೀತು??
“ನಾನೊಬ್ಬನು ಮಾತ್ರವಲ್ಲ ಗಿರಿಜಾ! ಎಷ್ಟೋ ಜನ ಇಂಥ ಕಾರ್ಯ ಮಾಡು ತಿದ್ದೇವೆ. ಒಂದೊಂದು ಊರಿನಲ್ಲಿ ನಮ್ಮಂತಹವರು ಇಬ್ಬರಿದ್ದರೆ ಸಾಕು, ಎಷ್ಟೋ ಕೆಲಸವಾದೀತು. ಇಂದಿಲ್ಲ ನಾಳೆ ಈ ಬಡ ಜನರಿಗೆಲ್ಲ ಒಳ್ಳೆಯ ದಿನ ಬಂದೀತು. ಅವರೂ ಸುಖವಾಗಿ ಬಾಳಿಯಾರು! ಇದೊಂದು ದೊಡ್ಡ ಸಿನಿಮಾ! ಅದರಲ್ಲಿ ಪಾತ್ರ ವಹಿಸಿರುವವರು ಹತ್ತಿಪ್ಪತ್ತು ಮಂದಿ ಮಾತ್ರವಲ್ಲ ದೇಶದ ಬಡಜನರೆಲ್ಲಾ ಅದರಲ್ಲಿ ಅಭಿನಯಿಸುತ್ತಿದ್ದಾರೆ. ನಾವೇ ಅದರ ನಿರ್ಮಾತೃಗಳು-ನಿರ್ದೇಶಕರು, ಕಳ್ಳಕಾಯಿ ತಿನ್ನು ಗಿರಿಜಾ! ಹಸಿದಿದ್ದೀಯ!'
ತಿನ್ನಲಾಗಲಿಲ್ಲ ಅವಳಿಗೆ. ಭಾವನಾವೇಗದಿಂದ ಅವಳ ಬಾಯಿ ಕಟ್ಟಿ ಹೋಗಿತ್ತು. ಕತ್ತಿನ ಶಿರವುಬ್ಬಿಕೊಂಡಿತ್ತು.
ಸೂರ್ಯ ಪಶ್ಚಿಮದ ಕಡೆ ಮೆಲ್ಲಮೆಲ್ಲನೆ ಇಳಿಯಲಾರಂಭಿಸಿದ್ದ. ಗಿಡಗಳ ನೆರಳು ಪೂರ್ವಕ್ಕೆ ಹೊರಳುತ್ತಿದ್ದುವು. ಸಿದ್ಧರಾಮನ ಹತ್ತಿರ ಗಡಿಯಾರವೆಲ್ಲಿಂದ ಬಂದೀತು? ಸೂರ್ಯನನ್ನು ನೋಡಿಯೇ ಹೊತ್ತು ಗುರುತಿಸಬೇಕು ಆತ. 'ಮೂರು ಗಂಟೆ ಆಯ್ಕೆ ನೋ-ಏಳು ಹೋಗೋಣ' ಎಂದ.
ಮೂರು ಗಂಟೆಯಲ್ಲ. ಮೂರೂವರೆ ಗಂಟೆಯಾಗಿ ಹೋಗಿತ್ತು, ಅವರು ಸಿನಿಮಾ ಮಂದಿರಕ್ಕೆ ಬಂದು ತಲುಪಿದಾಗ, ಗಿರಿಜಳಿಗೆ ಮೂರೂಮುಕ್ಕಾಲಾಣೆಯ ದೊಂದು ಟಿಕೆಟ್ ತೆಗೆಯಿಸಿ ತನಗಾಗಿ ಎಂಟಾಣೆಯದೊಂದನ್ನು ಕೊಳ್ಳಲು ಹೋದರೆ 'ಟಿಕೆಟ್ ತೀರಿವೆ, ಹದಿಮೂರಾಣೆಯದೂ ಇಲ್ಲ, ರೂಪಾಯಿನಾಲ್ಕಾಣೆಯದಿದೆ' ಎಂದು ಉತ್ತರ ಬಂತು. ಒಂದುರೂಪಾಯಿ ನಾಲ್ಕಾಣೆ! ಅಷ್ಟು ದಂಡ ತೆತ್ತು ಸಿನಿಮಾ ನೋಡುವುದು! ಅದೂ ತನ್ನಂಥ ನಲವತ್ತು ರೂಪಾಯಿ ಸಂಬಳದವ! ಅಷ್ಟು ಹಣವೂ ಹತ್ತಿರ ಇಲ್ಲ ಸರಿ. ಮುಖ ಬಾಡಿಸಿಕೊಂಡು ಹೊರಳಿ ಬಂದ.
“ಏನು ಮಾಡೋಣ ಗಿರಿಜಾ! ಎಂಟಾಣೆಯ ಟಿಕೆಟ್ ತೀರಿಹೋಗಿವೆ!? ಇನ್ನು ಎಷ್ಟರದಿದೆ?'
ಒಂದೂಕಾಲು ರೂಪಾಯಿಂದು
(ತೆಗೆಸಿ ಬಿಡಿ, ಇನ್ನೇನು ಮಾಡೋದು? ನಾನಂತೂ ಕೊಂಡಾಯಿತಲ್ಲಾ?' ಒಂದೂಕಾಲು ರೂಪಾಯಿ ಟಿಕೆಟ್ಟಿಗೆ ಕೊಟ್ಟರೆ ರೈಲಿಗೆ ಹಣವನ್ನೆಲ್ಲಿಂದ ತರೋದು? ಇಬ್ಬರಿಗೂ ಹತ್ತಾಣೆ ಬೇಕು ರೈಲಿಗೆ'
ಈ ರೀತಿ ಲೆಕ್ಕಾಚಾರ ನಡೆದಿರುವಾಗಲೇ ದೇವಮ್ಮ ಬಂದಳು ಗಂಡನ ಜತೆ ಯಲ್ಲಿ. ಇವರನ್ನು ನೋಡಿಯೂ ನೋಡದವರಂತೆ ಅವರಿಬ್ಬರೂ ನೇರವಾಗಿ ಮಂದಿರ ವನ್ನು ಸೇರಿದರು.
ಅವರು ಹೋದರಲ್ಲ? ಯಾವ ಜಾಗಾಕ್ಕೆ?' ಎಂದಳು ಗಿರಿಜಾ, “ಎರಡು ರೂಪಾಯಿ ನಾಲ್ಕಾಣೆಯದಕ್ಕೆ!'
“ಅಂದ್ರೆ? ಇವರಿಬ್ಬರಿಗೆ ಸೇರಿ ನಾಲ್ಕೂವರೆ ಆಯ್ತಲ್ಲ ? ಬರೀ ಸಿನಿಮಾಕ್ಕೆ ಇಷ್ಟು ಖರ್ಚು ಮಾಡ್ತಾರೆ ಅವರು
“ದುಡ್ಡಿದೆ, ಮಾಡುತ್ತಾರೆ. ನಮ್ಮ ಹತ್ತಿರ ದುಡ್ಡಿಲ್ಲ. ನಾವು ಮಾಡಲಾಗೋ ದಿಲ್ಲ. ಇದೇ ಇಂದಿನ ಜಗತ್ತಿನ ರೀತಿ ಗಿರಿಜಾ ! ಹಾಳಾಯ್ತು ಈ ಸಿನಿಮಾ ! ಹೊರಟುಬಿಡೋಣ' ಎಂದ ಸಿದ್ಧರಾಮ.
“ಬೇಲ್ಯಾವುದಾದರೂ ಸಿನಿಮಾಕ್ಕೆ ಹೋಗಿದ್ದರೆ??
“ಸೆಲೆಕ್ಸ್ಗೆ ಹೋಗೋಣ ಬಾ. ಅಲ್ಲಿಯಾದರೂ ಟಿಕೆಟ್ ಸಿಕ್ಕಿದರೆ ಇಂದು ಭಾನುವಾರ, ತುಂಬ ಗಲಾಟೆ. ಸಮಯಾನು ಮೀರಿ ಹೋಗಿದೆ. ಆದರೂ ಪ್ರಯತ್ನಿಸೋದಕ್ಕೇನಂತೆ ಬಾ' ಎಂದ.
ಅವರ ಪ್ರಯತ್ನವೇನೂ ಸಫಲವಾಗಲಿಲ್ಲ. ಆಗಲೇ ಅಲ್ಲಿಯೂ ಟಿಕೆಟ್ಟು ಮುಗಿದುಹೋಗಿದ್ದುವು.
ಮೆಜಿಸ್ಟಿಕ್ ಆಯಿತು; ಸಾಗರ್, ಪ್ರಭಾತ್, ಸ್ಟೇಟ್ಸ್ ಎಲ್ಲ ಸುತ್ತಿ ಮುಗಿಯಿತು. ಎಲ್ಲ ಟಿಕೆಟ್ಟು ಸಿಕ್ಕುವಂತಿರಲಿಲ್ಲ. ಎಲ್ಲೆಲ್ಲೂ 'ಹೌಸ್ ಫುಲ್' ಪಟ, ಟಿಕೆಟ್ ಸಿಕ್ಕದೆ ನಿರಾಶರಾಗಿ ಹಿಂತಿರುಗುತ್ತಿದ್ದ ಜನಗಳ ತಂಡ ತಂಡ. ಅಲ್ಲಲ್ಲಿ ನಾಲ್ಕಾರು ಜನ ಧಡಿಯರು ನಿಂತುಕೊಂಡು ಕಾಳಸಂತೆಯ ವ್ಯಾಪಾರವನ್ನೇನೋ ನಡೆಸುತ್ತಿ ದ್ದರು. ಒಂದಕ್ಕೆರಡು ಬೆಲೆ ಕೊಟ್ಟು ಅವರ ಟಿಕೆಟ್ ಕೊಂಡು ಸಿನಿಮಾ ನೋಡುವ ಆಸೆಯೇನೂ ಸಿದ್ದರಾಮನಿಗಿರಲಿಲ್ಲ. ಆರೂವರೆ ಗಂಟೆಯ ಆಟಕ್ಕೆ ಹೋಗಬೇಕೆಂದರೆ ಅದೂ ಅಸಾಧ್ಯವೆ. ಎಂಟು ಗಂಟೆಯ ರೈಲಿಗೆ ಮನೆಗೆ ಮರಳಬೇಕು. ಅದನ್ನು ಬಿಟ್ಟರೆ ಬೇರೆ ರೈಲಿಲ್ಲ. ಬೆಂಗಳೂರಿನಲ್ಲಿ ಪರಿಚಿತರ ಮನೆಗಳೂ ಇಲ್ಲ. ರಾತ್ರಿಯನ್ನೆಲ್ಲಿ
ಕಳೆಯುವದು ಈಕೆಯನ್ನು ಕಟ್ಟಿಕೊಂಡು? ನಿಲ್ದಾಣದ ವೇಟಿಂಗ್ ರೂಮಿನಲ್ಲೇ?. ಛೇ! ಅದೆಲ್ಲ ತೊಂದರೆ ಯೇತಕ್ಕಂತೆ? ಈಗಲೇ ಹೊರಡುವುದೇ ವಾಸಿ ಎಂದುಕೊಂಡು
'ನನಗಂತೂ ಟಿಕೀಟು ಸಿಕ್ಕೋಹಾಗಿಲ್ಲ, ನೀನೊಬ್ಬಳೇ ಹೋಗಿ ನೋಡಿ ಬರೀಯಾ ಗಿರಿಜಾ? ನಾನು ಥೇಟರ್ ಹೊರಗಡೆ ಕಾದಿದ್ದೇನೆ' ಎಂದ.
ಅವಳು ಒಪ್ಪಲಿಲ್ಲ. ನಿಮ್ಮನ್ನು ಬಿಟ್ಟು ನಾನೊಬ್ಬಳೇ ನೋಡೋದೇ! ಏನೂ ಬೇಡ! ಕಾಡಗೋಡಿಗೆ ಹೋಗೋಣ ನಡೀರಿ' ಎಂದಳು.
ಅಷ್ಟರಲ್ಲಿ ಹತ್ತಿರದಲ್ಲಿ ಯಾರದೋ ಆರ್ತನಾದ ಕೇಳಿ ಬಂದಿತು. ಅತ್ತ ಹೊರಳಿದರು. ಬಡ ಕೂಲಿಕಾರನೊಬ್ಬನನ್ನು ನಾಲ್ಕು ಜನ ಸೇರಿ ಹೊಡೆಯುತ್ತಿ ದ್ದುದು ಕಾಣಿಸಿತು. ಇಲ್ಲೇ ನಿಂತಿರು ಗಿರಿಜಾ! ಪಾಪ! ಅವನನ್ಯಾಕೆ ಹೊಡೆಯು ದಾರೋ ನೋಡೇನೆ' ಎಂದು ಹೇಳಿ ಸಿದ್ದರಾಮ ಗಲಾಟೆ ನಡೆದಿದ್ದಲ್ಲಿಗೆ ಹೋದ.
ಆ ನಾಲ್ಕು ಜನ ಧಡಿಯರಿಂದ ಕೂಲಿಕಾರರನ್ನು ಬಿಡಿಸಿಕೊಂಡು 'ಏನು, ಏನಾಯಿತು? ಯಾಕೆ ಹೊಡೆದಾಟ?” ಎಂದ.
ಆ ಬಡಪಾಯಿ ಅಳುತ್ತಳುತ್ತ ಹೇಳಿದ.
(ಐದಾಣೆಯ ಒಂದು ಟಿಕೆಟ್ ಎಂಟಾಣೆಗೆ ಕೊಡ್ತೀನೆ ಅಂದರು. ನನ್ನ ಹತ್ತಿರ ಇದ್ದದ್ದೂ ಅಷ್ಟೆ. ಕೊಟ್ಟು ಬಿಟ್ಟೆ. ಈಗ ಟಿಕೆಟ್ಟ ಕೊಡಲೊಲ್ಲರು. ದುಡ್ಡಾದರೂ ವಾಪಸು ಮಾಡಿ ಅಂದ್ರೆ ಅದನ್ನೂ ಕೊಡಲೊಲ್ಲರು.
ಕಾಳಸಂತೆಯ ಆ ಕಳ್ಳರನ್ನು ಕ್ರುದ್ಧ ದೃಷ್ಟಿಯಿಂದ ನಿಟ್ಟಿಸುತ್ತ ಸಿದ್ಧರಾಮ
ಆ “ಹೌದೇನು? ಈತ ಹೇಳೋದು ನಿಜವೇನು?” ಎಂದ.
ಅರೆ! ನೀನೆಲ್ಲಿಯೋನೋ ಬಂದೆ ಮಹಾರಾಜ ! ನಿನ್ನ ಹಾದಿ ಹಿಡಿದು ಹೋಗು!' ಎಂದು ಉಪಹಾಸದ ದನಿಯಲ್ಲಿ ಉತ್ತರ ಬಂತು.
“ಒಳ್ಳೇ ಮಾತಿನಿಂದ ಇವನ ಹಣ ಇವನಿಗೆ ವಾಪಸು ಕೊಡ್ತೀರೋ ಇಲ್ಲ, ಪೋಲೀಸರಿಗೆ ತಿಳಿಸಬೇಕೊ?' ಎಂದ ಸಿದ್ಧರಾಮ ಇನ್ನೂ ಕ್ರುದ್ಧನಾಗಿ,
ಆ ನಾಲ್ಕು ಜನರೂ ಗಹಗಹಿಸಿ ನಕ್ಕು ಬಿಟ್ಟು 'ಪೋಲೀಸರಿಗೆ ತಿಳಿಸುತಾನಂತೆ ಪೋಲೀಸರಿಗೆ! ನಮ್ಮ ಮಾವನ ಮಕ್ಕಳು ಕಣೋ ಅವರು! ನಿನ್ನನ್ನೆ ಬೇಕಾದರೆ ಸ್ಟೇಶನ್ನಿಗೆ ಸಾಗಿಸುತ್ತಾರೆಒಂದು ಮಾತು ಹೇಳಿದ್ರೆ, ಸುಮ್ಮನೆ ಹೋಗೋ ನಿನ್ನ ಹಾದಿ ಹಿಡಿದು' ಎಂದರು.
ಸಿದ್ದರಾಮನಿಗೆ ವಿಪರೀತ ಕೋಪವೇರಿತು. ಮುಷ್ಟಿಯನ್ನು ಮುಂದೆ ಮಾಡಿ ಗರ್ಜಿಸಿದ. 'ಕೊಡ್ತಿರೋ ಇಲ್ಲವೋ ಇವನ ಎಂಟಾಣೆ?'
ಸರಿ, ಮತ್ತೆ ಹೊಡೆದಾಟಕ್ಕಾರಂಭವಾಯಿತು. ನಾಲ್ಕು ಜನ ಪೈಲ್ವಾನರ ಮುಂದೆ ಒಬ್ಬನ ಆಟ ಎಷ್ಟು ನಡೆದೀತು? ಮುಖಕ್ಕೆ, ಮೂಗಿಗೆ, ತಲೆಗೆ, ಎದೆಗೆ- ದೇಹದ ಎಲ್ಲ ಕಡೆಗಳಲ್ಲೂ ಬಲವಾದ ಏಟು ಬಿತ್ತು ಸಿದ್ಧರಾಮನಿಗೆ ಹಣೆಯೊಡೆದು ರಕ್ತ ಬಳಬಳನೆ ಸುರಿಯ ತೊಡಗಿತು. ನೊಡುತ್ತ ನಿಂತಿದ್ದ ಗಿರಿಜೆ ಗಾಬರಿಗೊಂಡು ಕೂಗತೊಡಗಿದಳು. ಪೋಲೀಸರು ಬಂದರು. ಹೊಡೆದಾಟವನ್ನು ನಿಲ್ಲಿಸಿ, ಸಿದ್ದರಾಮ ನನ್ನು ಬಿಡಿಸಿ, ಆ ಪೈಲ್ವಾನರನ್ನು ಬೈದ ಹಾಗೆ ಮಾಡಿ ಹೊರಟುಹೋದರು. ಆ ಕೂಲಿಯವನ ಹಣವೂ ಸಿಕ್ಕಲಿಲ್ಲ. ಸಿದ್ದರಾಮನ ಪ್ರತಿಭಟನೆಯಿಂದ ಯಾವ ಪ್ರಯೋಜನವೂ ಆಗಲಿಲ್ಲ.
ಕೈವಸ್ತ್ರದಿಂದ ಹಣೆ ಕಟ್ಟಿಕೊಂಡು ಪತ್ನಿಯ ಕೈಹಿಡಿದುಕೊಂಡು ನಿಲ್ದಾಣಕ್ಕೆ ಹೊರಟ ಸಿದ್ಧರಾಮ. ಮೆಜಸ್ಟಿಕ್ ಹಿಂದೆಹಾಕಿ ಧರ್ಮಾಂಬುಧಿ ಕೆರೆಯಲ್ಲಿ ಹಾದು ಬರುತ್ತಿದ್ದ ಹಾಗೆ ಆತ ಕಂಪಿಸುವ ಕಂಠದಿಂದ ಉದ್ಗಾರ ತೆಗೆದ.
'ಇಂದಿನ ನಮ್ಮ ಸಿನಿಮಾದಲ್ಲಿ ನಾಲ್ಕನೇ ದೃಶ್ಯ ಇದು ಗಿರಿಜಾ ! ಇದಕ್ಕೆ ಕೈಮಾಕ್ಸ್ ಅಂತಾರೆ.......'
ರೈಲಿನ ಸಮಯವಾಗುವವರೆಗೂ ಕೆರೆಯ ಅಂಗಳದಲ್ಲಿ ಕುಳಿತಿದ್ದು ನಿಲ್ದಾಣಕ್ಕೆ ಬಂದರು. ಟಿಕೆಟ್ ತೆಗೆಯಿಸುವುದಕ್ಕಾಗಿ ಜೇಬಿಗೆ ಕೈ ಹಾಕಿದ ಸಿದ್ಧರಾಮ, ಹಣದ ಸುಳಿವೇ ಇರಲಿಲ್ಲ! ಇಳಿದ ಮುಖದಿಂದ ಪತ್ನಿ ನಿಂತಲ್ಲಿಗೆ ಮರಳಿದ.
'ತೆಗೆಸಿದಿರಾ ಟಿಕೆಟ್ಟನ್ನ??
'ಇಲ್ಲ'
'ಅದರ್ಥ?'
'ದುಡ್ಡು ಎಲ್ಲೋ ಕಳೆದುಹೋಯಿತು. ಬಹಳ ಮಾಡಿ ಹೊಡೆದಾಟ ನಡೆ ದಿದ್ದಾಗ ಆ ಪೋಕರಿಗಳಲ್ಲಿ ಯಾರೋ
'ಇನ್ನೇನು ಮಾಡೋದು??
ಹಾರಿಸಿರಬೇಕು.
'ಮಾಡೋದೇನು ಬಂತು? ಉಪವಾಸ ಮಾಡೋದು, ಬೆಳಿಗ್ಗೆ ಬೇಗನೆ ಎದ್ದು ಹದಿನೈದು ಮೈಲು ನಡೆದುಕೊಂಡು ಹೋಗೋದು.'
"ರಾತ್ರಿ ಮಲಗುವದಾದರೂ ಎಲ್ಲಿ?
'ಇದೆಯಲ್ಲ ಅನಾಥರ ಧರ್ಮಛತ್ರ, ಆ ಚಿಕ್ಕ ಲಾಲ್ ಬಾಗ್.... 'ಅಲ್ಲಿ? ನಾವು?'
ದುಡ್ಡಿಲ್ಲದವರೆಲ್ಲ ಇನ್ನೆಲ್ಲಿಗೆ ಹೋಗೋದು? ಚಿಕ್ಕಲಾಲ್ ಬಾಗಿಗೇ, ಹೆದರಿಕೆಯೇನು
ನಿನಗೆ??
“ಹೆದರಿಕೆಯೇನು? ನೀವು ಜೊತೆಗಿದ್ದಾಗ?'
'ಸರಿ, ಹಾಗಾದರೆ ಬಾ
ಮತ್ತೆ ನಿಲ್ದಾಣವನ್ನು ಬಿಟ್ಟು ಹೊರಟರು. ಮೆಟ್ಟಿಲು ಇಳಿಯುತ್ತಿದ್ದ ಹಾಗೆ ಎದುರಿನಲ್ಲಿ ದೇವಮ್ಮನೂ ಅವಳ ಪತಿಯೂ ಕಾಣಿಸಿಕೊಂಡರು,
ಸಿನಿಮಾ ನೋಡಿದ್ದಾಯ್ತನು ಗಿರಿಜಮ್ಮ?' ದೇವಮ್ಮನೇ ಮಾತನಾಡಿಸಿದಳು. ಅವಳೊಂದಿಗೆ ಮಾತನಾಡುವ ಮನಃಸ್ಥಿತಿಯಲ್ಲಿಲ್ಲದಿದ್ದರೂ ಸಹ ಗಿರಿಜಾ ಉತ್ತರವಿತ್ತಳು.
“ಹೂಂ, ನೋಡಿದೆವು!?
“ಊರಿಗೆ ಬರೋದಿಲ್ಲವೇನು ಮತ್ತೆ? ಎಲ್ಲಿ ಹಿಂದಿರುಗುತ್ತಿದ್ದೀರಲ್ಲ?? “ಲಾಲ್ ಬಾಗಿಗೆ ಹೋಗಿ ಬತ್ತೇವೆ. ನೀವು ಹೊರಡಿ' ಎಂದು ಹೇಳಿ ಗಿರಿಜಾ ಅಲ್ಲಿ ನಿಲ್ಲದೆ ಮುಂದುವರೆದಳು.
“ಲಾಲ್ ಬಾಗಿಗೆ! ಅಂತೂ ಮಜಾ ಐತಪ್ಪ ನಿಮ್ಮಿಬ್ಬರದೂ! ಸಾಗಲಿ ಸಾಗಲಿ!” ಎಂದು ಹಾಸ್ಯ ಮಾಡಿ ದೇವಮ್ಮ ಗಂಡನ ಕಡೆ ತಿರುಗಿ ನಕ್ಕಳು.
“ನಾವು ಹೋಗೋದು ದೊಡ್ಡ ಲಾಲ್ ಬಾಗಿಗಲ್ಲ- ಚಿಕ್ಕ ಲಾಲ್ ಬಾಗಿಗೆ ಇಂದಿನ ನಮ್ಮ ಸಿನಿಮಾದ ಕೊನೆಯ ದೃಶ್ಯಕ್ಕೆ-ಅನ್ನೋದು ಅವಳಿಗೇನು ತಿಳಿದೀತು ಗಿರಿಜಾ! ಬಾ, ಬೇಗ ಬೇಗ ಹೆಜ್ಜೆಯಿಡು' ಎಂದ ಸಿದ್ಧರಾಮ.
ಗಿರಿಜಾ ಹೆಜ್ಜೆ ಹಾಕತೊಡಗಿದಳು. ಚಿಕ್ಕ ಲಾಲ್ ಬಾಗಿಗೆ; ಅಲ್ಲ. ನಿಜ
ಜೀವನದ ಕಡೆಗೆ!
