'ಸೆಟಲ್ ಆಗುವುದು' ಅಥವಾ ಒಂದೆಡೆ ನೆಲೆ ನಿಲ್ಲವುದು ಮನುಷ್ಯನ ಜೀವನದ ಉದ್ದೇಶಗಳಲ್ಲೊಂದು. ಮೂರು ವರ್ಷಕ್ಕೊಮ್ಮೆ ವರ್ಗಾವಣೆಯ ಬಿಸಿ ಅನುಭವಿಸುವವರಿಗೆ ಅದು ಕೊಡುವ ಜೀವನಾನುಭವ ಮುಖ್ಯ ಎನಿಸುವುದು ಒಂದೆಡೆ ನೆಲೆ ನಿಂತ ಮೇಲೆಯೇ. ಆಹಾರಕ್ಕಾಗಿ ವಲಸೆ ಆರಂಭಿಸಿದ ಮನುಷ್ಯ ನೆಲೆ ನಿಂತಲ್ಲೇ ಆಹಾರ ಬೆಳೆಯಲು ಕಲಿತದ್ದೂ ವಿಕಾಸದ ಒಂದು ಭಾಗವೇ ತಾನೇ! ಹೀಗೆ ನೆಲೆ ಒಂದು ಭಾವನೆ. ಆ ಭಾವಕ್ಕೆ ಸಣ್ಣ ಏಟಾದರೂ ಮನುಷ್ಯ ಕುಸಿಯುತ್ತಾನೆ. ನಲುಗುತ್ತಾನೆ. ಚಡಪಡಿಸುತ್ತಾನೆ. ಆದರೂ ಇದನ್ನೆಲ್ಲ ಮೀರಿ ನಮ್ಮ ಮನಸ್ಸು ನಮ್ಮನ್ನು ಇರುವಲ್ಲೇ ಸ್ವರ್ಗ ನಮ್ಮನ್ನು ಸಾಂತ್ವನಗೊಳಿಸಲು ಸಿದ್ದಗೊಳಿಸುತ್ತದೆಯಲ್ಲ... ಅದುವೇ ಜೀವಶಕ್ತಿ. ಅದು ನಮ್ಮ ಹೊರ ಕೆನೆ ಪದರದ ಭಾವನೆಗಳ ಒಳಗಿರುವ 'ಎಚ್ಚರ'ದ ರೂಪದಲ್ಲಿ ನಮ್ಮನ್ನು ಮುಳುಗದಂತೇ ಎಬ್ಬಿಸಿ ನಡೆಸುತ್ತದೆ. ಅನಿವಾರ್ಯವಾಗಿ ತಿಂಗಳಿಗೊಮ್ಮೆ ನಡೆಯುತ್ತಿರುವ ಊರ ಪಯಣ ಕಲಿಸಿದ ಪಾಠವಿದು. ತೋರಿ
ಊರಿನ ತೋಟದ ಮನೆಯ ಗೇಟು ಮುಟ್ಟುತ್ತಿದ್ದಂತೇ ನಾನು ಒಂದು ರೀತಿಯ ಚಡಪಡಿಕೆಗೆ ಒಳಗಾಗುತ್ತಿದ್ದೆ. ಅದೇನೆಂದು ಸ್ಪಷ್ಟವಾಗಿ ತಿಳಿಯದಾಗಿತ್ತು. ಗೇಟು ಇನ್ನೇನು ಬಂತು ಎನ್ನುವಷ್ಟರಲ್ಲಿ ಕಾರಿನ ಡ್ಯಾಶ್ ಬೋರ್ಡಿನ ಒಳಗಿನಿಂದ ಗೇಟಿನ ಮತ್ತು ಮನೆಯ ಬೀಗದ ಕೈಗಳನ್ನು ತೆಗೆದು ಒಂದು ಸಣ್ಣ ಯುದ್ಧಕ್ಕೆ. ಸನ್ನದ್ಧಳಾದಂತೆ ನಿಟ್ಟುಸಿರು ಬಿಡುತ್ತಿದ್ದೆ. ಗೇಟಿನ ಬಳಿ ಕಾರು ನಿಲ್ಲಿಸಿದ ನನ್ನವರು, 'ಕೊಡು ನಾನೇ ಗೇಟ್ ತೆಗೀತಿನಿ' ಎಂದರೂ ಬೀಗದ ಕೈ ಕೊಡದೇ ಇದು ನನ್ನ ಕೆಲಸವೆನ್ನುವಂತೇ ಮಾತಾಡದೇ ಇಳಿದು, 'ಆಮೇಲೆ ಅಷ್ಟೂ ಮಾಡಲ್ಲ ಎಂದುಕೊಳ್ಳೋದು ಬೇಡ ಈ ಮಹರಾಯ' ಎಂದು ಇಳಿದು ಹೋಗ್ತಿನಿ. ಅದಕ್ಕಿಂತಲೂ ಹೆಚ್ಚಾಗಿ ನಂಗೂ ಗೊತ್ತಿತ್ತು. ಈ ಕೆಲಸವೇ ಬೆಸ್ಟ್ ಎಂದು! ಅತ್ಯಂತ ಇಳಿಜಾರಿರುವ ಆ ಮಾರ್ಗದ ಮಣ್ಣು ಮಳೆನೀರಿನ ನಿರಂತರ ಹರಿಯುವಿಕೆಯಿಂದ ತುಂಬಾ ಮೃದುವಾಗಿ ಸ್ಕಿಡ್ ಆಗುವಂತೇ ಇರುತ್ತಿತ್ತು. ಕಾರಿಗೆ ಹ್ಯಾಂಡ್ ಬ್ರೇಕ್ ಹಾಕಿದ್ದರೂ ಅದು ಫಲಿಸದೇ ಕಾರು ಸ್ವಲ್ಪ ಸ್ವಲ್ಪವೇ ಜಾರಿಕೊಂಡು ಮುಂದೆ ಹೋಗೋದು, ಒಮ್ಮೆ ನಾನು ಕಾರಿನಲ್ಲಿ ಕೂತಿದ್ದಾಗಲೇ ಹಾಗಾಗಿದ್ದ ಕಾರಣ ನಂಗೆ ನಾನು ಇಳಿದು ಬೀಗ ತೆಗೆಯುವುದೇ ಸುರಕ್ಷಿತವೆಂದು ಅನಿಸಿದ್ದ ಕಾರಣ, ಮತ್ತದನ್ನು ಹೇಳಿದರೆ ಮತ್ತೆ ಇವರು ನಗಲು ಶುರು ಮಾಡುತ್ತಾರೆಂದು ಗೊತ್ತಿದ್ದರಿಂದ ಆತುರಾತುರದಿಂದ ಬೀಗ ತೆಗೆದು ಗೇಟನ್ನೂ ತೆರೆದು ಒಂದು ಸೆಕೆಂಡು ಹೆಚ್ಚು ಅಲ್ಲಿದ್ದರೂ ಗೇಟಿನ ಸುತ್ತಲೂ ಬಿದ್ದಿರುವ ತರಗೆಲೆಗಳ ನಡುವೆ ಸುಖವಾಗಿ ತೆವಳಿಕೊಂಡು ಇರುವ ಉಂಬಳಗಳು ನನ್ನ ಕಾಲಿಗೆ ಹತ್ತಿಬಿಟ್ಟರೆ ಎಂದು ಹೆದರಿ ಓಡಿ
ಬಂದು ಕಾರಿನಲ್ಲಿ ಕೂತೆ. ಪಕ್ಕದಲ್ಲಿ ಕೂತವರು ಕಣ್ಣಂಚಿನಲ್ಲಿ ನಗುವುದು ಕಂಡರೂ ಗಮನಿಸದೇ ಮುಗುಮ್ಮಾಗಿ ಕೂತಿದ್ದೆ.
ಕಾರು ಮನೆ ಮುಂದೆ ಬಂದು ನಿಂತೊಡನೇ ನಾವು ನಮ್ಮ ಲಗೇಜನ್ನೆಲ್ಲ ಒಳ ತರುವ ಮೊದಲೇ ಮಾಡುತ್ತಿದ್ದ ಮೊದಲ ಕೆಲಸವೆಂದರೆ ಮನೆಯ ಬೀಗ ತೆಗೆದು ಮನೆಯನ್ನು ಸ್ವಚ್ಛಗೊಳಿಸುವುದು. ಹತ್ತಿಪ್ಪತ್ತು ದಿನಗಳ ದೂಳು, ಅಲ್ಲಿಂದಿಲ್ಲಿಗೆ ಕಟ್ಟಿದ್ದ ಜೇಡರ ಬಲೆ, ಚಾವಡಿಯ ಇಳಿಸಿದ ಮಾಡಿಗೆ ಬಿಟ್ಟ ತೋರಣ ಬಳ್ಳಿಯ ಎಲೆಗಳು ಬಿದ್ದು ರಾಶಿ ಕಸ ತುಂಬಿರುತ್ತಿತ್ತು. ಅದನ್ನು ಸ್ವಚ್ಛಗೊಳಿಸಿದ ನಂತರವೇ ನಮ್ಮ ಲಗೇಜನ್ನು ಒಳ ತರುತ್ತಿದ್ದ ನನಗೆ ಈ ಸಾರಿ ಒಳ ಕಾಲಿಡುತ್ತಿದ್ದಂತೇ ಬಾಗಿಲಿನ ದಾರಂದದ ಎರಡೂ ಬದಿಯಲ್ಲಿ ಅಲ್ಲದೇ ಜಾವಡಿಯ ಗೋಡೆಯ ತುಂಬ ಕಪ್ಪು ಉಲ್ಲನಿನ ಪುಟ್ಟ ಪುಟ್ಟ ನೂರಾರು ತುಂಡುಗಳು ಅಂಟಿಕೊಂಡಂತೆ ಕಂಡಿತು. ಆರೇ! ಇದೆಲ್ಲಿಂದ ಬಂತಪ್ಪಾ, ಗಾಳಿಯಲ್ಲಿ ಏನಾದ್ರೂ ಹಾರಿಕೊಂಡು ಬಂತೇ ಎಂದುಕೊಳ್ಳುತ್ತಾ ಸುತ್ತ ನೋಡಿದರೆ ಕೆಲವೆಡೆಗಳಲ್ಲಿ ಮುದ್ದೆ ಮುದ್ದೆ ಕಪ್ಪು ಉಲ್ಲನ್ನಿನ ತುಂಡುಗಳು, ಹತ್ತಿರ ಹೋಗಿ ನೋಡಿದರೆ; ಓಹ್, ಕಂಬಳಿ ಹುಳಗಳು! ಒಂದೆರಡಲ್ಲ, ನೂರಾರು ಕಂಬಳಿ ಹುಳಗಳು, ಸುತ್ತಲೂ ನೋಡುತ್ತಾ ಕಣ್ಣು ಮುಂದಿನ ಚಾವಡಿಯ ಇಳಿಸಿದ ಸೂರಿನೆಡೆಗೆ ಹೋದರೆ ಅಲ್ಲೂ ಉಲ್ಲನ್ನಿನ ತುಂಡುಗಳು ಅಂಟಿಕೊಂಡಿವೆ. ಓಹ್, ಇವೇನಾದರೂ ಮೈಮೇಲೆ ಅಥವಾ ತಲೆ ಮೇಲೆ ಬಿದ್ದರೆ! ಮಗಳು, ಇಲ್ಲಿ ಬಂದಾಗೆಲ್ಲ ಹೇಳುವ ಇದು ಜಂಗಲ್ ಲೈಫ್' ಎನ್ನುವ ಮಾತು ನೆನಪಾಗಿ ಮೈಯೆಲ್ಲ ಮುಳ್ಳದ್ದಿತು. ತಮ್ಮ ಉಲ್ಲನ್ನಿನ ದೇಹಕ್ಕೆ ರಕ್ಷಣೆಯಾಗಿ ಅತ್ಯಂತ ತೆಳು ಬಲೆಯಂಥದ್ದನ್ನು ಸೃಷ್ಟಿಸಿಕೊಂಡು ದೊಡ್ಡ ಬಯಲಿನಲ್ಲಿ ಪಿಕ್ಕ್ಕಿಗೆ ಬಂದವರು ಟೆಂಟ್ ಹಾಕಿಕೊಂಡು ಬಿದ್ದುಕೊಂಡಂತೆ ನೂರಾರು ಕಂಬಳಿ ಹುಳಗಳು ತಣ್ಣಗೆ ಬಿದ್ದಿದ್ದವು. ಸರನೇ ಬಿಪಿ ಏರಿತು. ಉದ್ರಿಕ್ತಳಾದವಳು ಒಳ ಹೋಗಿ ಪೊರಕೆ ತಂದು ಸರಸರ ಝಾಡಿಸಿ ಗುಡಿಸತೊಡಗಿದೆನಷ್ಟೇ. ಅಷ್ಟರಲ್ಲಿ ಒಳ ಬಂದ ಪತಿ, 'ಆ ಕಂಬಳಿ ಹುಳಗಳನ್ನು ಬಿಡು ಮಾರಾಯ್ತಿ. ಅವುಗಳು ಸ್ವಲ್ಪ ದಿನಗಳಲ್ಲಿ ಚಿಟ್ಟೆಯಾಗಿ ಹಾರಿ ಹೋಗ್ತವೆ. ವಿಜ್ಞಾನದ ವಿದ್ಯಾರ್ಥಿ ನೀನು' ಎಂದರು. ಸಿಟ್ಟನ್ನು ತಡೆದುಕೊಳ್ಳುತ್ತಾ ಅವರ ಮಾತನ್ನು ಲೆಕ್ಕಿಸದೇ ಗುಡಿಸತೊಡಗಿದೆ. ಚಾವಡಿಯ ತುಂಬ ಜೇಡರ ಹುಳಗಳು, ಸೈನಿಕರ ಸಾಲಿನಂತೇ ಶಿಸ್ತಿನಲ್ಲಿ ಸಾಲಾಗಿ ಹೋಗುತ್ತಿದ್ದ ಇರುವೆಗಳ ದಂಡು, ಹೋ ದೇವಾ! ಈ ಇರುವೆಗಳು ಚಾವಡಿಯ ಮೆಟ್ಟಿಲೂ ಹತ್ತದಂತೆ ಪೌಡರನ್ನು ಗೋಡೆ ಬದಿಯಿಂದ ಮೆಟ್ಟಲಿನವರೆಗೂ ಹಾಕಿ ಹೋಗಿದ್ದೆನಲ್ಲವೇ ಎಂದುಕೊಳ್ಳುತ್ತಾ ಇರುವೆಗಳ ಸಾಲು ಶುರುವಾದದ್ದೆಲ್ಲಿ ಎಂದು ನೋಡಿದರೆ, ಮಳೆ ನೀರು ಸಿಡಿದು ಸ್ವಲ್ಪ ಜಾಗದಲ್ಲಿ ಪೌಡರ್ ಅಳಿದ ಜಾಗದಿಂದ ಓಬವ್ವನ ಕಿಂಡಿಯಿಂದ ಶತ್ರು ಸೈನಿಕರು ಬಂದಂತೆ ನುಸುಳಿ ಬರುತ್ತಿದ್ದವು.. ಜೊತೆಗೆ ಈ ಸಾರಿ ಈ ರಾಶಿ
ಕಂಬಳಿ ಹುಳಗಳು... 'ಹಾವೊಂದು ಬಾಕಿ ಇದೆ ಇಲ್ಲಿ ಬಂದು ನೆಲೆ ನಿಲ್ಲಲು' ಗೊಣಗಾಡುತ್ತ ಕಸ ಗುಡಿಸತೊಡಗಿದೆ.
ಊರು ನನ್ನಲ್ಲಿ ಬೆಂಗಳೂರಿನಲ್ಲಿ ಮೂರು ದಶಕಗಳಿಂದ ಇರುವ ನಾವು ನಮ್ಮ ಕನಸಿನಂತೇ ಬೆಂಗಳೂರಿನಲ್ಲೇ ಸ್ವಂತ ಸೂರು ಮಾಡಿಕೊಂಡು ನೆಲೆಯಾಗಿ, ಬೆಂಗಳೂರಿಗೆ ಬಂದ ಕೋಟ್ಯಂತರ ಜನರಂತೆ ನಗರದವರೇ ಆಗಿ ಹೋಗಿದ್ದೇವೆ. ನಾವು ಮಾತಾಡುವ ಕನ್ನಡದ ಬನಿ, ಉಚ್ಚಾರಣೆ ನೋಡಿದವರು 'ನೀವು ಕರಾವಳಿಯವರೇ' ಎಂದೇ ಕೇಳುತ್ತಿದ್ದುದು ಇತ್ತು. ಅದನ್ನು ಮಗಳ ಬಳಿ ಹೇಳಿಕೊಂಡಾಗ ಮಗಳಂತೂ 'ಓಹ್ ಗಾಡ್, ನೀವಿಬ್ರು ಕರಾವಳಿಯವು ಇರಬಹುದು ಅಮ್ಮ ಆದ್ರೆ ನಾನು ಹಾರ್ಡ್ ಕೋರ್ ಬ್ಯಾಂಗಳೂರಿಯನ್, ನಾನು ಇಲ್ಲೇ ಹುಟ್ಟಿ ಬೆಳೆದವಳು' ಎಂದು ಹೇಳಿ ತನಗೆ ಕರಾವಳಿಯ ನಂಟನ್ನು ತಗುಲಿಸಬೇಡ ಎನ್ನುವಂತೆ ಮುಲಾಜಿಲ್ಲದೇ ಹೇಳಿದ್ದಳು. ಬೆಂಗಳೂರಿನಲ್ಲಿ ದಿನ ಕಳೆಯುವಾಗಲ್ಲ. ಊರು, ಬಾಲ್ಯದ ನೆನಪು, ತೋಟದ ಪಕ್ಕದ ಹೊಳೆ. ಸೋಮನಾಥನ ತೇರು, ಊರಿನ ಪತ್ತೊಡ ಮತ್ತು ವರ್ಷಕ್ಕೊಮ್ಮೆಯೊ. ಮದ್ಯೆ ಮುಂಜಿಗಳಿಗೆ ಹೋಗಿ ಬರುವಷ್ಟಕ್ಕೆ ಮಾತ್ರವೇ ಊರು ಮನದಲ್ಲಿ ಹಸಿರಾಗಿದ್ದುದು. ಅದಕ್ಕಿಂತ ಹೆಚ್ಚೇನು ಉಳಿದಿರಲಿಲ್ಲವೇನೋ ಅಥವಾ ಅದರೆಡೆಗೆ ಗಮನ ನೀಡಿರಲಿಲ್ಲ. ಎಷ್ಟೋ ಸಾರಿ ಊರು ನಮಗೆಲ್ಲ. ಭೂತವಷ್ಟೇನಾ, ಅದು ನಮ್ಮನ್ನೆಲ್ಲ ಪೊರೆದ ಭಾವದ ಬೀಜವಲ್ಲವೆಂದು ಯೋಚಿಸಿದ್ದಿದೆ. ಆದರೆ ತನ್ನಷ್ಟಕ್ಕೇ, ಬೇಕಾದನ್ನು ಮಾಡಿಕೊಂಡು ಇರುವ ಮುಕ್ತತೆಯನ್ನು ದಯಪಾಲಿಸಿದ್ದ ನಗರದೆಡೆಗೆ ನಿಜಕ್ಕೂ ತೀರದ ಮೋಹವೇ ಬೆಳೆದಿತ್ತು. ನಗರ ನೀಡುವ ಅನಾಮಿಕತೆ ನಮ್ಮನ್ನೆಲ್ಲ ಎಷ್ಟು ಹಗುರ ಮಾಡಿತ್ತೆಂದರೆ ಊರಿನಲ್ಲಿ ಮುಸುಕಾಗಿದ್ದ ಅತ್ಮವಿಶ್ವಾಸ ಇಲ್ಲಿ ಕಾಣತೊಡಗಿತ್ತು. ನಗರದಲ್ಲಿ ಎಷ್ಟೇ ಪರಿಚಿತರಾದರೂ ಒಂದು ಹಂತದ ನಂತರ ಭಾವವಲಯದೊಳಗೆ ನುಸುಳುವ ಅಪಾಯವಿಲ್ಲ ಎಂದೇ ನನ್ನ ಅನುಭವ. ತಂತಮ್ಮ ಬೌಂಡರಿಯೊಳಗೆ ಬದುಕುವ ಶಿಸ್ತು ಕಲಿಸಿದ ನಗರ ಜೀವನ ನನಗೆ ಅಪ್ಯಾಯಮಾನವಾಗಿದೆ. ಬೆಂಗಳೂರಿನ ನನ್ನ ಸ್ನೇಹಿತರು 'ಓಹ್ ನಿಮ್ಮೂರು ಅದೆಷ್ಟು ಚೆಂದ. ಹಸಿರೊ ಹಸಿರಪ್ಪ, ಎಷ್ಟು ಸೈಲೆಂಟ್ ಆಗಿರತ್ತೆ ನಿಮ್ಮೂರು. ಈ ಗಲಾಟೆ ಗೌಜಿ ಯಾವುದೂ ಇಲ್ಲ. ನಾನಾಗಿದ್ರೆ ಅಲ್ಲೇ ಇರ್ತಿದ್ದೋ ಏನೊ' ಎಂದವರ ಮಾತಿಗೆ ಸುಮ್ಮನೆ ನಕ್ಕು ಬಿಡುತ್ತಿದ್ದೆ.
ಬೆಳ್ಳೆಗ್ಗೆ ಐದೂವರೆಗೆಲ್ಲ ತನ್ನ ಲಟಾರಿ ಸ್ಕೂಟರಿನಲ್ಲಿ ಸದ್ದು ಮಾಡಿಕೊಂಡು ಬಂದು ರಸ್ತೆಯ ಅಷ್ಟೂ ಜನರನ್ನು ಎಬ್ಬಿಸುವ ಹಾಲಿನ ಮಂಜಣ್ಣ, ರಪ್ ರಪ್ ಎಂದು ದಿನಪತ್ರಿಕೆಗಳನ್ನು ಸುರುಳಿಯಾಗಿಸಿ ಎಸೆದು ಹೋಗುತ್ತಿದ್ದ ಪೇಪರ್ ಹುಡುಗರು, ಏಳೂವರೆಯಿಂದಲೇ 'ಕಿಕ್ ಕೀಕ್' ಎಂದು ಹಾರ್ನಿನ ಸದ್ದು ಮಾಡುತ್ತಾ ಬರುವ ಸ್ಕೂಲಿನ ವ್ಯಾನುಗಳು. ಒಂದ್ರಾಶಿ ಮಕ್ಕಳು, ಅವರ ಅಪ್ಪ ಮಮ್ಮ, ಹೂ, ಸೊಪ್ಪು ಮಾರುವವರು ಮತ್ತೂ ಹೊರಗಿನ ಟ್ರಾಫಿಕ್ಕೂ ಮತ್ತು ಬದುಕಿಗಾಗಿ ನಡೆಸುವ
ಬಿಡುವಿಲ್ಲದ ಹೋರಾಟಗಳು, ನಿರಂತರ ಚಟುವಟಿಕೆಗಳು ಹೀಗೆ ವಿವಿಧ ಸದ್ದಿನ ಗದ್ದಲ ಮತ್ತು ಜನಜೀವನದ ನಿತ್ಯದ ಪಡಿಪಾಟಲು ಅಭ್ಯಾಸವಾಗಿ ಈ ಅವಸರವೇ ಸುಖವಾಗಿ, ಈ ಶಬ್ದಗಳೇ ನಿಜವಾದ ನಿಶ್ಯಬ್ದವೆನ್ನುವಂತೆ ಮಾಡಿಬಿಟ್ಟಿದೆ. ಮತ್ತೆ ಆ ಗದ್ದಲವನ್ನು ನೋಡಿಕೊಂಡೇ ಅದರ ನಡುವೆಯೇ ಏಕಾಂತವೂ ಸಿದ್ಧಿಸಿದೆ. ತರಕಾರಿ ಗಾಡಿಯ ರಾಜೇಂದ್ರನ ಗಡಸು ದನಿಯ ತರ್..ಕಾರಿ.. ಕೂಗು ನಿತ್ಯ ಪಾರಾಯಣದ ಭಾಗವೇ ಆಗಿದೆ. ಶಬ್ದ, ಒಂದು ಸುರಕ್ಷತೆಯ ಭಾವ ಹುಟ್ಟಿಸಿ ಬಿಟ್ಟಿದೆ. ಮೂರು ದಶಕಗಳ ನಗರದ ಬದುಕು ಊರಿನ ನೆನಪುಗಳನ್ನು ನಿಧಾನಕ್ಕೆ ಅಳಿಸುತ್ತಾ ನಗರದ ಗಿಜಿಗುಟ್ಟುವ ಬದುಕೇ ಸತ್ಯ ಎನ್ನುವ ಶಮವನ್ನು ಸೃಷ್ಟಿಸಿಬಿಟ್ಟಿದೆ. ಅಲ್ಲದೇ ಈ ಬೆಂಗಳೂರು ಒಮ್ಮೊಮ್ಮೆ ನಿದ್ದೆಯೇ ಮಾಡುತ್ತಿಲ್ಲವೋ ಏನೋ ಎನ್ನುವಂತೇ ರಾತ್ರಿ ಮೂರನೇ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದವರು ಎರಡೂವರೆಗೆಲ್ಲ ಕಾರಿನಲ್ಲಿ ಬಂದಿಳಿಯುವ ಹೊತ್ತಿಗೆ ಬೆಳಗಿನ ಮೊದಲ ಪಾಳಿಯವರು ತಯಾರಾಗಿ ಹೋಗುತ್ತಿದ್ದುದೂ ಇತ್ತಲ್ಲವೇ. ದಶಕಗಳ ಕಾಲ ಮಲಗದೇ ಆವರ್ತಗಳಲ್ಲಿ ತನ್ನ ಮಡಿಲಲ್ಲಿರುವವರನ್ನು ಪೊರೆಯುತ್ತಿರುವ ಬೆಂಗಳೂರು ನನ್ನದೇ ಆಗಿ ಬಿಟ್ಟಿದೆ.
ಹೀಗಿರುವಾಗ ನನ್ನವರು ಏಕಾಏಕಿ ತನ್ನ ಕಂಪೆನಿಯ ಸಿಇಒ ಜೊತೆಗಿನ ಭಿನ್ನಾಭಿಪ್ರಾಯದಿಂದ ಕೆಲಸಕ್ಕೆ ರಾಜೀನಾಮೆ ನೀಡಿದ ಮೇಲೆ ತಮ್ಮ ಪಿತ್ರಾರ್ಜಿತ ಆಸ್ತಿಯಲ್ಲಿ ಊರಿಗೆ ಹೋದಾಗ ಉಳಿದುಕೊಳ್ಳಲೆಂದು ಪುಟ್ಟ ಮನೆ ಕಟ್ಟಿದ್ದಷ್ಟೇ ಅಲ್ಲದೇ ತಿಂಗಳಿಗೊಮ್ಮೆ ಹೋಗಿ ಇರಲೂ ಆರಂಭಿಸಿದರು. ಎಂಜಿನಿಯರಿಂಗ್ ಓದುತ್ತಿದ್ದ ಮಗಳಿಗೆ ಊಟ, ಓದಿಗೆ ತೊಂದರೆಯಾಗುತ್ತದೆನ್ನುವ ಕಾರಣದಿಂದ ನಾವಿಬ್ಬರು ಬೆಂಗಳೂರಿನಲ್ಲೇ ಇರುತ್ತಾ ಪತಿ, ಒಬ್ಬರೇ ಹೋಗಿದ್ದುಕೊಂಡು ತೋಟದ ಕೆಲಸಗಳನ್ನು ಪೂರೈಸಿಕೊಂಡು ಬರುತ್ತಿದ್ದರು. ಊರಿಂದ ಬರುವಾಗ ಕಾರು ತುಂಬಾ ತರುತ್ತಿದ್ದ ಹಣ್ಣು ತರಕಾರಿಗಳಿಂದ ನನಗೆ ಖುಷಿಯಾಗುತ್ತಿತ್ತು. 'ಓಯ್ ಈ ಸಾರಿ ತೆಂಗಿನಕಾಯಿ ಮರೀಬೇಡಿ ಮಾರೇ, ಊರಿನ ತೆಂಗಿನಕಾಯಿಯಷ್ಟು ಒಳ್ಳೆದು ಇಲ್ಲೆಲ್ಲಿ ಸಿಗತ್ತೆ' ಎಂದು ಹೇಳುತ್ತಲೇ ಊರಿನ ಕಾಯಿಯೆಂದು ಖುಷಿಯಿಂದ ಸಾಂಬಾರು ಮಾಡುತ್ತಿದ್ದೆ. ಊರಿನಿಂದ ಸಿಗುವ ಹಿತಗಳನ್ನು ಅನುಭವಿಸಿಕೊಂಡು ನಗರದಲ್ಲೇ ಇದ್ದ ನನಗೆ ಮಗಳು ಎಂಜಿನಿಯರಿಂಗ್ ಮುಗಿಸಿ ವಿದೇಶಕ್ಕೆ ಉನ್ನತ ವಿದ್ಯಾಭ್ಯಾಸಕ್ಕೆ ತೆರಳಿದಾಗ ನನ್ನ ರುಟೀನ್ ಬದಲಾಗಬೇಕಾಯಿತು! ಆದುವರೆಗೂ ಒಬ್ಬನೇ ಊರಿಗೆ ಹೋಗಿ ಬರುತ್ತಿದ್ದ ಪತಿಗೆ ಅಲ್ಪಸ್ವಲ್ಪ ಅನಿವಾರ್ಯವಾಗಿ ಊರಿಗೆ ಹೊರಡಲು ಆರಂಭಿಸಿದೆ. ಕೆಮ್ಮು, ಅದು ಇದೂ ಎಂದೂ, ಪಾಪ ಒಬ್ಬನೇ ಅಡುಗೆ ತೋರುವ ನೆಂಟರ ಮುಂದೆ ಬಾರೀ ಜೋರಿನವಳೆಂದು ಮಾಡ್ಕೊಳ್ತಾ ಒದ್ದಾಡುತ್ತಾನೆಂದು ತೀರದ ಅನುಕಂಪ ಸಾಬೀತಾಗುವುದು ಬೇಡ ಎಂದು ಅವನೊಂದಿಗೆ
ಆಗಲೇ ಈ ಅವ್ಯಕ್ತವಾದ ಚಡಪಡಿಕೆಯನ್ನೂ ಅನುಭವಿಸಲು ಆರಂಭಿಸಿದ್ದು. ಒಂದೆರಡು ವರ್ಷಗಳಲ್ಲಿ ತಿಂಗಳು ತಿಂಗಳು ಊರಿಗೆ ಹೊರಡುವುದೆಂದರೆ ನಂಗೆ ಶಿಕ್ಷೆ
ಕೊಡುವುದಕ್ಕಾಗಿಯೇ ನನ್ನವರು ಹೊರಡಿಸುತ್ತಿದ್ದಾರೆ ಏನೋ ಎನ್ನುವಂತೆ ಸಿಡಿಮಿಡಿಗೊಳ್ಳುತ್ತಿದ್ದ, ದಿನಕ್ಕೆ ಇಪ್ಪತ್ತು ಬಾರಿಯಾದರೂ ಹೋಗುವ ಕರೆಂಟು, ಕರೆಂಟು ಬಾರದೇ ಟ್ಯಾಂಕಿಗೆ ನೀರು ಲಿಫ್ಟ್ ಮಾಡಲು ಆಗದೇ ಕಾಣುವ ನೀರಿನ ಸಂಕಷ್ಟ, ಮಳೆಗಾಲದಲ್ಲಿ ಬಿಡದೇ ಸುರಿಯುವ ಮಳೆ ಮತ್ತು ಪ್ರತಿ ಸಾರಿ ಬಂದಾಗಲೂ ಕಣ್ಣಿಗೆ ಕಾಣುವ ಹೊಸ ಹೊಸ, ರಾಶಿ ಕ್ರಿಮಿಕೀಟಗಳ ಜೀವಸಂಕುಲ, ಇದರಿಂದ ನನ್ನ ವ್ಯವಸ್ಥಿತ ಪುಟ್ಟ ಪ್ರಪಂಚ ಅಲುಗಾಡತೊಡಗಿತ್ತು. ದಶಕಗಳ ಕಾಲ ನಡೆದು ಬಂದ ದಿನನಿತ್ಯದ ಕ್ಷಣಗಳಲ್ಲಿ ಬದಲಾವಣೆ ಆಗತೊಡಗಿದಂತೇ ಚಡಪಡಿಸಲು ಶುರು ಮಾಡಿದ್ದೆ. ಇದೆಲ್ಲ ನಡೆಯುತ್ತಾ ಒಂದೆರಡು ವರ್ಷಗಳಾಗುತ್ತಾ ಬಂದರೂ ಈ ಹೊಸ ವ್ಯವಸ್ಥೆಗೆ ನನಗೆ ಹೊಂದಿಕೊಳ್ಳಲು ಕಷ್ಟವೇ ಆಯಿತೋ ಅಥವಾ ನಾನು ಹೊಂದಿಕೊಳ್ಳಲಿಲ್ಲವೊ. ಹೊಂದಿಕೊಂಡು ಬಿಟ್ಟರೆ ಈ ಮನುಷ್ಯ ಎಲ್ಲಿ ಊರಿನಲ್ಲೇ ಪರ್ಮನೆಂಟಾಗಿ ತಳವೂರುತ್ತಾರೋ ಎನ್ನುವ ಆತಂಕದಲ್ಲಿ ನಾನು ಅರೆಮನಸ್ಸಿನಿಂದ ದಿನ ತಳ್ಳುತ್ತಿದ್ದೆ.
ಬಂದು ಎರಡೂರು ದಿನಗಳು ಯಾವುದರಲ್ಲಿಯೂ ಆಸಕ್ತಿಯಿಲ್ಲದಂತೆ ಇರುವ ನನ್ನ ಅನ್ಯ ಮನಸ್ಕತೆಯನ್ನು ಗಮನಿಸುವ ಪತಿ, ಸಂಜೆಯಾಗುವ ಹೊತ್ತಿಗೆ 'ಹೊರಡು, ಪುತ್ತೂರಿಗೆ ಹೋಗಿ ಬರೋಣ ಬಾ. ಫಿಲೋಮಿನಾಸ್ ಕಾಲೇಜು ರಸ್ತೆಯಲ್ಲಿ ಒಬ್ಬ ಒಳ್ಳೆಯ ಸಾದಾ ದೋಸೆ ಕೊಡ್ತಾನೆ' ಎಂದು ಹೊರಡಿಸುತ್ತಾನೆ ಎನ್ನುವ ನಿಶ್ಚಿತ ಪ್ಲಾನಿನ ಅರಿವಿರುವ ನಾನು 'ಇದೆಲ್ಲ ಇವನಿಗರ್ಥವಾಗಲ್ಲ ಎಂದುಕೊಳ್ಳುತ್ತಾ ಸೊಸೈಟಿಯಲ್ಲಿ ಕೆಲಸವಿದೆ ಎಂದು ಪತಿ ಹೊರಟ ತಕ್ಷಣ. ಚಾವಡಿಯಲ್ಲಿ ಬಂದು ಕೂತು ಉದಾಸೀನದಿಂದಲೇ ಕಣ್ಣು ಹೊರಳಿಸುತ್ತಿದೆ. ಆಗ ಎದುರಿಗೇ ಅನಾಯಾಸವಾಗಿ ಕಂಡಿತು ಬಂಟಮಲೆ.
ಪಶ್ಚಿಮ ಘಟ್ಟದ ತಪ್ಪಲಿನ ಒಂದು ಪುಟ್ಟ ಭಾಗವಾದರೂ ಈ ಬಂಟಮಲೆ ಕಣ್ಣು ಚಾಚಿದಷ್ಟೂ ಅಗಲಕ್ಕೂ ಎತ್ತರಕ್ಕೂ ಅವರಿಸಿ ಮೈ ಚೆಲಿದಂತಿತ್ತು. ಸುಳ್ಯ ತಾಲೂಕಿನ ಹೆಮ್ಮೆ ಈ ಬಂಟಮಲೆ, ಪೂಮಲೆ ಎಲ್ಲವೂ ರಾವಣ ಸೀತೆಯನ್ನು ಹೊತ್ತುಕೊಂಡು ಹೋಗುತ್ತಿದ್ದಾಗ ತನ್ನ ದಾರಿಯ ಗುರುತು ಸಿಕ್ಕಿ ಕಾಪಾಡಲು ಬರು ಸಹಾಯವಾಗಲೆಂದು ತನ್ನ ಹೆರಳಿನ ಆಭರಣವನ್ನು ಸೀತೆ ಇಲ್ಲಿ ಎಸೆದ ಕಾರಣ ಇದು ಪೂಮಲೆಯೆಂದು ಹೆಸರಾಗಿದೆ ಎಂದೇ ನಂಬಿಕೆ. ತೋಟದ ಅಂಚಿನಿಂದ ಶುರುವಾಗುವ ಈ ಕಾಡು, ತಾನು ಹೀಗೆ ಮುಗಿಲೆತ್ತರಕ್ಕೆ ಬೆಳೆದು ನಿಂತಿರುವುದರ ಪರಿವೆಯೇ ಇಲ್ಲದಂತೆ ಒಂಥರಾ ಧ್ಯಾನಕ್ಕೆ ನಿಂತಂತೆ ಕಾಣುತ್ತಿತ್ತು. ಓಹ್! ಇದರ ಧೀಮಂತಿಕೆಯೇ! ಎಷ್ಟೇ ಚಡಪಡಿಕೆ, ಅತಂತ್ರದ ಭಾವ, ಅಸಹನೆ ಮನದಲ್ಲಿದ್ದರೂ ಈ ಬಂಟಮಲೆ ಕಣ್ಣಿಗೆ ಬಿದ್ದ ಕೂಡಲೇ ಕಾಡಿನ ಒಡೆಯ ಆನೆಯೆದುರು ಮಂಡಿಯೂರುವ ಹುಲಿಯಂತೇ ಮನದಲ್ಲಿಯೇ ಮುಂದಿರುವವರು
ಶರಣಾಗಿ ಬಿಡುತ್ತಾರೆ. ಮರುಕ್ಷಣದಲ್ಲಿ ಮನದಲ್ಲಿ ಪ್ರಶ್ನೆಗಳೂ ಮೂಡುತ್ತವೆ. ಒತ್ತೊತ್ತಾಗಿ ಹೀಗೆ ಮರ ನೆಟ್ಟವರಾರು!
ಅಲ್ಲೂ ಒಂದು ಲೋಕವಿರಬಹುದೇ, ಕಣ್ಣು ಹಾಯಿಸಿದಷ್ಟೂ ದೂರಕ್ಕೂ ಲಕ್ಷಾಂತರ ಹಸಿರು ರಥಗಳು ಎದ್ದು ನಿಂತಂತಿದೆ. ಈ ರಥಗಳು ಚಲಿಸುತ್ತವೆಯೋ, ಮೊನ್ನೆಯಷ್ಟೇ ಅಮೆರಿಕದ ಕಾಡಿನಲ್ಲಿ ನಡೆಯುವ ಮರಗಳು ಇದ್ದಾವೆಂದು ಓದಿದ್ದೂ ನೆನಪಾಯಿತು. ನೀರನ್ನರಸಿಕೊಂಡು ಈ ಮರಗಳು ನಡೆಯುತ್ತವಂತೆ! ಮನುಷ್ಯ ತಾನಷ್ಟೇ ಬುದ್ಧಿವಂತ ಅಂದುಕೊಂಡಿದ್ದಾನೆ. ಒಂದು ಹುಳವೇ ತಾನೇ! ಇವುಗಳೂ ಪಿಸುಗುಟ್ಟುತ್ತಾ ಪ್ರಕೃತಿಯ ಆಟ, ಲೆಕ್ಕಾಚಾರದ ಮುಂದೆ ಮನುಷ್ಯನೂ ಮಾತಾಡುತ್ತಿರಬಹುದೇ, ಓಹ್, ಈ ಹಸಿರಿನಲ್ಲಿಯೂ ಅದೆಷ್ಟು ವಿಧ. ದಟ್ಟ ಹಸಿರು, ತಿಳಿ ಹಸಿರು, ಗಿಳಿ ಹಸಿರು, ಕಮ್ಮಿಶ್ರಿತ ಹಸಿರು... ದೂರದಿಂದ ಕಪ್ಪಾಗಿ ಕಾಣುವ ಹಸಿರು... ಹೀಗೆ ಕಣ್ಣಿಗೆ ಕಂಡ ಹಸಿರಿನ ವಿಧಗಳನ್ನು ನೋಡುತ್ತಾ ಅವುಗಳಿಗೆ ಮನಸ್ಸಿಗೆ ಬಂದಂತಹ ಹೆಸರುಗಳನ್ನು ಕೊಡುತ್ತಾ ಇರುತ್ತಿದ್ದೆ.
ಹೀಗೆ ಕುಳಿತು ಬಂಟಮಲೆಯನ್ನು ನಿರುಕಿಸುತ್ತಿದ್ದ ಹೊತ್ತಿನಲ್ಲಿ ಗಮನಕ್ಕೆ ಬಂತು ಸುತ್ತಮುತ್ತಲಿನ ಸ್ತಬ್ಧತೆ! ಸುತ್ತಲೂ ಯಾವುದೇ ಚಲನೆಯೇ ಇಲ್ಲದಂತಿತ್ತು. ಅರೆ, ಇಷ್ಟೊಂದು ನಿಶ್ಯಬ್ದ! ಅಂಗಳದ ಅಂಚಿನಲ್ಲಿ ನೆಟ್ಟಿದ್ದ ಗಿಡಗಳ ಕಡೆಗೆ ಕಣ್ಣು ಹೋಯಿತು. ಮತ್ತೆ ಅಂಗಳದ ತುದಿಯಿಂದಲೇ ಆರಂಭವಾದ ತೋಟದಲ್ಲಿ ಉದ್ದಕೂ ಕಾಣುವ ಅಡಿಕೆ ಮರಗಳು... ಒಂದೇ ಒಂದು ಎಲೆಯೂ ಅಲುಗಾಡುತ್ತಿಲ್ಲವಲ್ಲ. ಹೋ! ನಿಶ್ಚಲತೆ ಅಂದರೆ ಇದೆಯೇ! ಒಮ್ಮೆಲೇ ಮನಸ್ಸು ಜಾಗೃತವಾಯಿತು.. ಏನಾದ್ರೂ ಸದ್ದು ಕಿವಿಗೆ ಬೀಳಬಹುದೇ! ಚಾವಡಿಯ ಬದಿಗೆ ನೆಟ್ಟ ಗಿಡದ ಕೆಂಪು ಹೂಗಳಿಗೆ ಮುತ್ತಿಕ್ಕಿ ಹೋಗುವಂತೆ ಲಘುವಾಗಿ ಹೂವಿನೊಳಕ್ಕೆ ಮುಳ್ಳಿನಷ್ಟೇ ಹರಿತವಿರುವ ತನ್ನ ಚೂಪಾದ ಕೊಕ್ಕನ್ನು ತೂರಿಸಿ ಜೇನು ಹೀರಿ, ಗಾಳಿಯಲ್ಲಿ ಬರೆಂದು ಹೋವರ್ ಮಾಡುವ ಸರಕ್ಕೆ ಎಲ್ಲಿ ಹೋಯಿತು! ಮರಕ್ಕೆ ಮೊಳೆ ಹೊಡೆದಂತೇ ಕಟಕಟ ಹೊಡೆಯುವ ಹಳದಿ ಕೆಂಪಿನ ಮರಕುಟಿಗನಲ್ಲಿದೆ? ನನ್ನ ಪಾಡು ನೋಡಿ ಗೇಲಿ ಮಾಡುವಂತೆ ಪಕಪಕನೆ ನಗುವ ಮಂಗಟ್ಟೆಯಲ್ಲಿದೆ! ಗಸೆಗಸೆ ಮರದ ತುಂಬ ಹಾರುತ್ತಾ ಹಣ್ಣಿನ ಚೂರನ್ನೂ ಉಳಿಸದೇ ಹೋಗುವ ಹಕ್ಕಿಗಳ ದಂಡು ಎಲ್ಲಿ ಹೋಯಿತು! ಕಳೆದ ಸಾರಿ ಬಂದಿದ್ದಾಗ ಹೀಗೆ ನಾನೊಬ್ಬಳೇ ಕೂತಿದ್ದಾಗ ಗಳಿಗೆಗೊಮ್ಮೆ ಸೂರಿನ ಹಂಚಿನ ಮೇಲೆ ಟಪ್ ಟಪ್ ಎಂದು ಯಾರೋ ಕಲ್ಲು ಬಿಸಾಡಿದ ಸದ್ದಾಗುತ್ತಿತ್ತು. ಏನಪ್ಪಾ| ಯಾರಾದರು ನಿಜಕ್ಕೂ ಕಲ್ಲು ಎಸೆಯುತ್ತಿದ್ದಾರೋ ಅಥವಾ ಆಳುಮಕ್ಕಳು ಹೇಳುವ ಭೂತ ಚೇಷ್ಟೇ ಅಂದ್ರೆ ಇದೇನಾ! ಎಂದೂ ಆನಿಸಿತ್ತು. ಸ್ವಲ್ಪ ಹೊತ್ತಿನಲ್ಲಿ ಬಂದ ಪತಿ 'ಓಹ್, ಅದು ರಬ್ಬರಿನ ಬೀಜ ಸಿಡಿದು ಬೀಳುವ ಶಬ್ದ' ಎಂದಾಗ ನಗು ಬಂದಿತ್ತು, ಈ ಪ್ರಕೃತಿಯ ಹೆಜ್ಜೆಗಳನ್ನು ನಾವು ಅರಿತೇ ಇಲ್ಲವಲ್ಲ ಎಂದು ಅಂದು ಕಬ್ಬ ಭಯ ಹುಟ್ಟಿಸಿದ್ದರೆ
ಇಂದು ಈ ನಿಶ್ಯಬ್ದವೂ ಗಾಬರಿಗೊಳಿಸುತ್ತಿದೆಲ್ಲವೇ! ಅಲ್ಲಾ, ಅಂಗಳದ ಅಂಚಿಗೆ ನೆಟ್ಟ ಬಾಳೆ ಕುಡಿಯೊಡೆಯುವ ಮುನ್ನವೇ ಸಿಗಿದು ಹಾಕಿ ಚೀಪಿ ಎಸೆದು ಹೋಗುವ ಕೋತಿಗಳ ಪಟಲಾಂ ಕೂಡ ಕಾಣಿಸುತ್ತಿಲ್ಲ ಎಂದರೆ ಆ ಕ್ಷಣದಲ್ಲಿ ಅನಿಸಿತು. ಪ್ರಪಂಚವೇನಾದರು ನಿಂತು ಬಿಟ್ಟಿತೇ ಹೇಗೆ? ಕರ್ಮ, ಕರೆಂಟಿಲ್ಲದೇ ನನ್ನ ಫೋನೂ ಚಾರ್ಜ್ ಮುಗಿದು ಮುರಿದ ಕನ್ನಡಿಯ ತುಂಡಿನಂತೇ ಹಾಸಿಗೆಯ ಮೇಲೆ ಬಿದ್ದುಕೊಂಡಿದೆ. ಈಗ ಈ ಶಬ್ದವೇ ಇಲ್ಲದ ನಿಶ್ಯಬ್ದ; ಸ್ವಲ್ಪ ಅಂಜಿಕೆ ಹುಟ್ಟಿಸಿತು. ಗಟ್ಟಿಯಾಗಿ ಕೂಗಿದರೆ ಕೇಳುವ ಕಿವಿ ಸಿಗಬೇಕಾದರೆ ಕನಿಷ್ ಫಲಾರ್ಂಗು ದೂರ ನಡೆಯಬೇಕು. ನಿರಂತರ ಸದ್ದು ಕೇಳಿದ್ದ ನನ್ನ ಕಿವಿ ಈಗ ಸದ್ದನ್ನು ಕೇಳಲು ಹಾತೊರೆಯತೊಡಗಿತು. ನಾನು ಅಕ್ಷರಶಃ ಕಿವಿಯಾದೆ. ಮತ್ತೆ ಕ್ಷಣಗಳು ಸರಿದಂತೇ ಕಿವಿಯ ಕಿವಿಯಾಗತೊಡಗಿದೆ. ಕಣ್ಣ ಮುಚ್ಚಿದೆ! レ
ಕಣ್ಣು ತಿರುಗಿಸಿದಾಗ ಸೂರಿನಲ್ಲಿ ನೂರಾರು ಉಲ್ಲವಿನ ಜೀವಗಳು, ಗೋಡೆಯ ಮೇಲೂ! ಓಹ್ ಜಾತ್ರೆ ನಡೆಯುತ್ತಿದೆ! ಆ ಕ್ಷಣದಲ್ಲಿ ಚೂರೂ ಸಿಟ್ಟು ಬಾರದೇ ಅವುಗಳನ್ನು ಹಾಗೇ ಅಕ್ಕರೆಯಿಂದ ನೋಡುತ್ತಿದ್ದೆ. ಎಂಥ ಧ್ಯಾನದಲ್ಲಿವೆ ಈ ಹುಳಗಳು. ಜೀವವೊಂದು ಒಂದು ಅವಸ್ಥೆಯಿಂದ ಇನ್ನೊಂದಕ್ಕೆ ಹೋಗಬೇಕಾದರೆ ಈ ಕೋಶಾವಸ್ಥೆಯ ಧ್ಯಾನ, ಮೌನ ಅಗತ್ಯವೇನೋ! ಒಂದು ರೀತಿಯ ಟ್ರಾನ್ಸ್ ಗೆ ಹೋದಂತೆ ಗಾಜಿನಲ್ಲಿಟ್ಟ ಬೊಂಬೆಗಳನ್ನು ನೋಡುವಂತೇ ಒಂದು ಕಡೆಯಿಂದ ನೋಡುತ್ತಾ ಸಾಗುತ್ತಿದ್ದೆ. ಎಲ್ಲಾ ಹುಳಗಳು ಧ್ಯಾನಸ್ಥವಾಗಿವೆ. ಹಾಗಾದರೆ ಇವುಗಳು ಹುಳಗಳಾಗೋದು ಹೇಗೆ? ಅಲ್ಲ, ಇವು ಅಪ್ಪಟ ಜೀವಗಳು, ತಂತಮ್ಮ ಒಂದು ಅವಸ್ಥೆಯಿಂದ ಬಿಡಿಸಿಕೊಂಡು ಇನ್ನೊಂದು ಹೊಸದೇ ಆದ ಅವಸ್ಥೆಗೆ ಹೊರಳಲು ಧಾನ್ಯ ಮಾಡುತ್ತಿರುವ ಜೀವಗಳು.. ಸುತ್ತಲೂ ನೂರಾರು ಜೀವಗಳಿವೆ. ವಿಧವಿಧದ. ಬಣ್ಣಬಣ್ಣದ, ಸಣ್ಣ ರೆಕ್ಕೆಯ ದೊಡ್ಡ ರೆಕ್ಕೆಯ ಸಣ್ಣ ಮೀಸೆಯ ಅಗಲ ಮೀಸೆಯ ಎಷ್ಟೊಂದು ಜೀವಗಳಿವೆ. ಗೋಡೆಯ ಬಳಿಗೆ ಹೋಗಿ ನೋಡಿದಾಗ ಪ್ರತೀ ಕಂಬಳಿ ಹುಳದ ಸುತ್ತ ಅತ್ಯಂತ ನಾಜೂಕಾದ ಬಲೆ ಹೆಣೆದಿದ್ದು ಕಂಡಿತು. ಅಂದರೆ ಇದರೊಳಗೆ ಜೀವದ ರೂಪಾಂತರ ಕ್ರಿಯೆ ಸದ್ದಿಲ್ಲದೇ ನಡೆಯುತ್ತಿದೆ. ಹಾಗಾದರೆ ಪ್ರಕೃತಿಯ ದೊಡ್ಡ ಜೀವವಾದ ಮನುಷ್ಯನಿಗ್ಯಾಕೆ ಈ ಹೊಸ ಅವಸ್ಥೆ ಒಪ್ಪಿಕೊಳ್ಳಲು ಆಗುತ್ತಿಲ್ಲ... ನಾನೇ ದೊಡ್ಡ ಹುಳವೆಂದು ಅನಿಸಿತು.
ಆಗುವ 'ಇವೆಲ್ಲವೂ ಕಳಚಿಕೊಳ್ಳುವ, ಕಳಚಿಕೊಂಡು ಹೊಸದೇ ಮಾರ್ಗದಲ್ಲಿದ್ದರೆ ನಾವು ಇನ್ನೂ ಅದೇ ಜಾಗದಲ್ಲಿ ಗೂಟವೂರಿದ್ದೇನೆಯೇ ಜೇಡವೊಂದು ಎಷ್ಟು ನಾಜೂಕಾಗಿ ಯಾವುದೇ ಶಬ್ದ ಮಾಡದೇ ಬಲೆ ಹೆಣೆದುಕೊಂಡು ಜೀವಕ್ರಿಯ ನಡೆಸುತ್ತಿದೆ. ಈ ಸದ್ದಿಲ್ಲದೇ ಇರುವ ಸ್ತಬ್ದತೆಯ ಒಳಗೆ ಭಯಂಕರವಾದ ಚಟುವಟಿಕೆಗಳು ನಡೆಯುತ್ತಿರುವುದು. ಖಾತ್ರಿಯಾಯ್ತು. ಇಲ್ಲಿ ಸಮಯದ ನಿಬರ್ಂಧವಿಲ್ಲದೇ ಅನೇಕ ಪಾಳಿಗಳಲ್ಲಿ ಕೆಲಸ ನಡೆಯುತ್ತಿದೆ. ಕಂಬಳಿ
ಹುಳಗಳ ಬಲೆ ಕಣ್ಣಿನ ಒಳಕ್ಕೆ.. ಒಳಗಣ್ಣಿನೊಳಕ್ಕೆ ಅದರ ಒಳಗೆ ಅದರ ಇನ್ನೂ ಒಳಗನ್ನು ತೋರುತ್ತಿದ್ದಂತೇ ಒಂದೊಂದೇ ಶಬ್ದ ಕಿವಿಗೆ ಬೀಳಲಾರಂಭಿಸಿತು. ಹೋ। ಇಲ್ಲೊಂದು ಪ್ಯಾರಲಲ್ ಪ್ರಪಂಚನೇ ಸುತ್ತುತ್ತಿದೆ! ಇಲ್ಲಿ ಮಾತಿದೆ. ಸಂಬಂಧವಿದೆ. ಅಂಟಿಕೊಳ್ಳದ ಸರಸವಿದೆ. ಆ ಕಾರಣಕ್ಕೆ ಹುಟ್ಟು ಇದೆ. ಬದುಕೂ ಇದೆ. ನಾನೆಂಥ ಪೆದ್ದಿ!
ಮತ್ತೆ ನಿರುಕಿಸಿದಾಗ ಬಲೆಯೊಂದು ತೆಳುವಾದ ಸಿಪ್ಪೆಯಾಗಿ ಬದಲಾಗಿದೆ. ಇನ್ನೊಂದರ ಸಿಪ್ಪೆ ಅರೆ ತೆರೆಯುತ್ತದೆ. ಓಹ್ ಈ ಸಿಪ್ಪೆಯಿಂದ ಬಣ್ಣದ ಚಿಟ್ಟೆಯೊಂದು ಕೊಂಚ ಕೊಂಚವೇ ರೆಕ್ಕೆ ಅಗಲಿಸುತ್ತಾ ಹೊರ ಬರುತ್ತಿದೆ. ಓಹೋ, ಇದು ಹಾರುತ್ತಿದೆ. ಪಕ್ಕದ ಪೊರೆಯೂ ಕಳಚುತ್ತಿದೆ. ಹಳದಿ, ಕಪ್ಪು, ನೀಲಿ, ಹಸಿರು. ಕೆಂಬಣ್ಣದ. ಬಿಳಿಯ ಚಿಟ್ಟೆಗಳು ರೆಕ್ಕೆ ಹೊಡೆದುಕೊಂಡು ಹಾರಾಡಲು ಶುರುವಿಟ್ಟುಕೊಂಡವು. ನೋಡುತ್ತಾ ನೋಡುತ್ತಾ ನಾನು ಹಗುರವಾಗುತ್ತಿದ್ದನೆ ಎನ್ನುವ ಅರಿವಾಗತೊಡಗಿತು...ಸ್ವಲ್ಪ ಹೊತ್ತಿನಲ್ಲಿ ನನ್ನ ಕಾಲುಗಳು ನೆಲದ ಮೇಲೆ ಇಲ್ಲವೆನೋ ಅನಿಸಿ ನೋಡಿದರೆ ಹೌದು! ನಾನು ನೆಲದ ನಂಟು ಕಳಚಿಕೊಂಡಿದ್ದೇನೆ ಅನಿಸಿತು.
ಹಾ ಏನಾಗುತ್ತಿದೆ. ನಾನು ಹೀಗೆ ಮೇಲೆರಲು ಹೇಗೆ ಸಾಧ್ಯವೆಂದುಕೊಂಡು ಸುತ್ತಲೂ ನೋಡಿದರೆ ನನಗೂ ರೆಕ್ಕೆ ಬಂದಿರುವುದರ ಅರಿವಾಯಿತು. ಓಹ್, ಮೆಲ್ಲನೆ ರೆಕ್ಕೆಗಳನ್ನು ಬಡಿದೆ.. ಓಹ್... ಓಹ್... ಮತ್ತೆ ಬಡಿದೆ. ಇನ್ನೂ ಸ್ವಲ್ಪ ನೆಲದಿಂದ ಮೇಲೆಕ್ಕೆ... ದೇವಾ! ನಾನೀಗ ಹಾರುತ್ತಿದ್ದೇನೆ. ಮತ್ತೆ ಬಡಿದೆ.. ಮೇಲೇರಿದೆ... ಮತ್ತೆ ಬಡಿಯುತ್ತಾ ಹೋದೆ... ಇನ್ನೂ ಮೇಲೇರುತ್ತಿದ್ದೇನೆ... ಮೇಲೇರುತ್ತಾ ಮೇಲೇರುತ್ತಾ ಚಿಟ್ಟೆಗಳೊಂದಿಗೆ ನಾನೂ ಚಿಟ್ಟೆಯಾಗಿ ಹಾರುತ್ತಾ ಮನೆಯ ಮೇಲೇರಿದೆ.
ಪಕಪಕನೆ ನಗುತ್ತಿದ್ದ ಮಂಗಟ್ಟೆ ಸದ್ದು ಮಾಡಿಕೊಂಡು ಹಣ್ಣು ತಿನ್ನುತ್ತಿದೆ. ಗಸಗಸೆಯ ಮರದ ಹಕ್ಕಿಗಳಲ್ಲಿ ಕೋಲಾಹಲ. ಮೈನಾಗಳು ಕೀ ಕೀ ಅನ್ನುತ್ತಾ ಕಲಹದಲ್ಲಿವೆ. ನಗು ಬಂತು. ಕಲಹ ಬಹುಶಃ ಜೀವಸಂಕುಲದ ಜೀನಿನಲ್ಲಿಯೇ ಇದೆ ಎಂದು ಕಾಣುತ್ತಿದೆ. ಹಳದಿ ಬುಲ್ ಬುಲ್ ಒಂದು ಕಂದು ಬಣ್ಣದ ಬುಲ್ ಬುಲ್ ಹಕ್ಕಿಯನ್ನು ಹಣ್ಣಿನಿಂದ ದೂರ ಓಡಿಸುತ್ತಿತ್ತು. ಕುಟ್ರ ಹಕ್ಕಿ ಕೊಂಬೆಯಿಂದ ಕೊಂಬೆಗೆ ಹಾರುತ್ತಾ ಇದ್ದರೆ, ಹಸಿರು ಹಕ್ಕಿ ಗಬಗಬನೆ ಹಣ್ಣು ತಿನ್ನುತ್ತಿದೆ. ನಿಧಾನಕ್ಕೆ ರೆಕ್ಕೆ ಬಡಿಯುತ್ತಾ ತೋಟದ ಮೇಲೆ ಹಾರುತ್ತಿದ್ದಂತೇ ಆಗೋ ಅಲ್ಲಿ, ನೀರಿನ ತೋಡಿನ ಬದಿಯಲ್ಲಿ ಹೆಬ್ಬಾವುಗಳು ಒಂದನ್ನೊಂದು ಬೆಸೆದುಕೊಂಡು ಬುಸುಗುಡುತ್ತಾ ಮೈಮರೆಯುತ್ತಿವೆ. ಓಹ್, ಈ ಆಲಿಂಗನ, ಸ್ವರ್ಶದಾಟ ಜೀವಕ್ಕೆಷ್ಟು ಅಗತ್ಯ!
'ನೋಡಲೂ ಮುಜುಗರವಾಯಿತು. ಅವುಗಳ ಬುಸ್ ಬುಸುಗಳಿಂದ ಅವು ಮಾತೂ ಆಡುತ್ತಿವೆ ಅನಿಸಿತು. ಹಾಗೇರಕ್ಕೆ ಬಡಿಯುತ್ತಾ ತೋಟದ ಅಂಚಿಗೆ ಬಂದಂತೇ ಬಂಟಮಲೆಯ ಶುರುವಾಗುವಲ್ಲಿಗೆ ಬಂದು ನಿಂತದ್ದೆ. ಒಮ್ಮೆ ರೆಕ್ಕೆ
ಬಡಿಯುವುದನ್ನು ನಿಲ್ಲಿಸಿ ನೋಡಿದೆ. ಹೈ. ಒಂದು ವಿಶೇಷವಾದ ಸುವಾಸನೆ ಮೂಗಿಗೆ ಬಡಿಯಿತು. ರೆಕ್ಕೆ ಬಡಿದು ದಿವ್ಯಗಂಧ ಮೂಗಿಗಡುರುತ್ತಿದ್ದ ಹಾಲೆ ಮರದ ಕಾಂಡಕ್ಕೆ ಅಂಟಿಕೊಂಡು ಕಿವಿಗೊಟ್ಟೆ, ಮರದ ಕಾಂಡದಲ್ಲಿ ಜೀವರಸ ಮೆಲುವಾಗಿ ಹರಿಯುತ್ತಿದೆಯಲ್ಲವೇ! ಕಿವಿ ಆಗಲಿಸಿ ನೂರು ಕಡೆ ಅಲಿಸಿದೆ. ಪರ್ಯಾಯ ಜೀವಜಾತ್ರೆಯೇ ನಡೆಯುತ್ತಿದೆ... 13....... .. ...ន. ລາຍ. ಮಯೂರಿಯನ್ನು ನರ್ತನಕ್ಕೆ ಕರೆಯುತ್ತಿದ್ದಾನೆ. ಟಪ್ ಟಪ್ ಬೀಜಗಳು ಸಿಡಿದು ತೇವದ ಗರ್ಭಕ್ಕೆ ಬೀಳುತ್ತಿದೆ...ನವರಸಗಳ ಲಾಸ್ಯವಿಲ್ಲಿ ನಡೆಯುತ್ತಿದೆ..
ದೇಹವೇ ಇಲ್ಲದ ಭಾವದಿಂದ ಹಗುರವಾಗುತ್ತಾ ಸಾಗಿದೆ. ಒಂದೊಂದು ಎತ್ತರ ವಿರುತ್ತಿದ್ದಂತೇ ನೆಲದ ನಂಟು ಜಾರತೊಡಗಿತು..
ಕಿಕ್...ಕಿಕ್...ಗಟ್ಟಿ ಹಾರ್ನ್ ಹೊಡೆದ ಸದ್ದಿಗೆ ಬೆಚ್ಚಿ ಕಣ್ಣು ತೆರೆದೆ. ಎದುರಿನಲ್ಲಿ ಬಂಟಮಲೆ ನಗುತ್ತಿತ್ತು. ಶಬ್ದದೊಳಗಿನ ನಿಶ್ಯಬ್ದವೂ ನಿಶ್ಯಬ್ದದೊಳಗಿನ ಶಬ್ದವೂ ಕಿವಿಯಲ್ಲಿ ಅನುರಣಿಸುತ್ತಿತ್ತು.
ಲೇಖಕಿಯ ಪರಿಚಯ:
ಡಾ. ದೀಪಾ ಫಡೈ: ಮೂಲತಃ ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನವರು.
ಅಕ್ಟೋಬರ್ 19, 1971 ರಲ್ಲಿ ಜನಿಸಿದ ದೀಪಾ ಪ್ರಸ್ತುತ ಬೆಂಗಳೂರು ವಾಸಿ. ಚಂದನ ದೂರದರ್ಶನ ಹಾಗೂ ಉದಯ ಟಿವಿಯಲ್ಲಿ ನಿರೂಪಕಿಯಾಗಿ ಹಲವು ವರ್ಷಗಳ ಕಾಲ ನಿರೂಪಣೆ ಮಾಡಿದ ಅನುಭವವಿರುವ ಇವರು ಕನ್ನಡ ಕಿರುತೆರೆಯಲ್ಲಿ ಮೊದಲ ಬಾರಿಗೆ 'ಸ್ತ್ರೀ ಆರೋಗ್ಯ' ಎನ್ನುವ ಕಾರ್ಯಕ್ರಮವನ್ನು ನೂರಕ್ಕೂ ಹೆಚ್ಚು ಸಂಚಿಕೆಯಲ್ಲಿ, 'ಹೆಜ್ಜೆ ಗುರುತು' ಕನ್ನಡ ಚಲನಚಿತ್ರರಂಗದ ಇತಿಹಾಸದ ಕುರಿತು ಕಾರ್ಯಕ್ರಮವನ್ನು ಎಂಭತ್ತಕ್ಕೂ ಹೆಚ್ಚು ಸಂಚಿಕೆಯಲ್ಲಿ ನಿರೂಪಿಸಿದ್ದಾರೆ.
ಲೇಖಕಿಯಾಗಿ ಗುರುತಿಸಿಕೊಂಡ ದೀಪಾ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಪುರಂದರ ಕನಕರ ಕೀರ್ತನೆಗಳಲ್ಲಿ ಮನೋವಿಶ್ಲೇಷಕ ಮತ್ತು ಭಾಷಿಕ ಅಧ್ಯಯನ ಎನ್ನುವ ವಿಷಯದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಇವರ 'ಮುಂದಣ ಹೆಜ್ಜೆ' ಕಥಾಸಂಕಲನ, 'ಓದಿನ ಮನೆ' ವಿಮರ್ಶಾ ಲೇಖನಗಳ ಸಂಗ್ರಹ, 'ಋತ'- ಸಂಸ್ಕೃತಿ ಬರಹಗಳ ಗುಚ್ಛ, ಹರಪನಹಳ್ಳಿ ಭೀಮವ್ವ ಜೀವನ ದರ್ಶನ, ಮುಕ್ತಛಂದದ ಕವಿ ಸುಬ್ರಾಯ ಚೊಕ್ಕಾಡಿ- ವ್ಯಕ್ತಿ ಚಿತ್ರಣ ಸೇರಿದಂತೆ ಸುಮಾರು ಹನ್ನೊಂದು ಕೃತಿಗಳು ಪ್ರಕಟಗೊಂಡಿವೆ. 'ಋತ' ಕೃತಿಗೆ 2018 ರಲ್ಲಿ ಮೂಡಬಿದಿರೆಯ ವರ್ಧಮಾನ ಪೀಠದ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ, 2022 ರಲ್ಲಿ 'ಓದಿನ ಮನೆ'- ಕೃತಿಗೆ ಶಿವಮೊಗ್ಗದ ಕರ್ಣಾಟಕ ಸಂಘ ನೀಡುವ ಹಾ. ಮಾ. ನಾಯಕ್ ಪ್ರಶಸ್ತಿ, 'ಮುಂದಣ ಹೆಜ್ಜೆ' ಕಥಾಸಂಕಲನಕ್ಕೆ 2022 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವೀಣಾ ಶಾಂತೇಶ್ವರ ದತ್ತಿ ನಿಧಿ ಪ್ರಶಸ್ತಿ ಹಾಗೂ 2014 ರಲ್ಲಿ ಕನ್ನಡ ಸಂಘರ್ಷ ಸಮಿತಿಯ ಅನುಪಮ
ನಿರಂಜನ ಕಥಾ ಸ್ಪರ್ಧೆಯಲ್ಲಿ ಮೂರನೇ ಬಹುಮಾನ ಲಭಿಸಿದೆ. ಪ್ರಸ್ತುತ ಬೆಂಗಳೂರಿನ ಆರ್. ಟಿ. ನಗರದ ಶಿವರಾಮ ಕಾರಂತ ವೇದಿಕೆ - ಸಾಹಿತ್ಯ ಸಂಘಟನೆಯ ಅಧ್ಯಕ್ಷರಾಗಿದ್ದಾರೆ.
ಪದಕೋಶ:
ತೋರಣ-ಹೆಬ್ಬಾಗಿಲು, ಹಬ್ಬ ಉತ್ಸವ ಮುಂತಾದ ವಿಶೇಷ ಸಂದರ್ಭಗಳಲ್ಲಿ ಅಲಂಕಾರಕ್ಕಾಗಿ ಬಾಗಿಲು, ಅನಾಮಿಕ-ಹೆಸರಿಲ್ಲದವ, ನಾಜೂಕು-ಸೂಕ್ಷ, ಸ್ತಬ್ಧ= ಅಲುಗಾಡದಿರುವಿಕೆ, ಹೆಣೆ-ಸೇರಿಸು, ಕೂಡಿಸು, ಪೋಣಿಸು ಪ್ಯಾರಲಾಲ್-ಸಮಾನಾಂತರ; ಮಯೂರಿ-ನವಿಲು, ದೇವತೆಗಳ ಒಂದು ಪಂಗಡ,
ಜೀವ ದುಂದುಭಿ – ಪಾಠದ ಸಾರಾಂಶ:
ದೀಪಾ ಫಡೈ ಅವರ **‘ಜೀವ ದುಂದುಭಿ’** ಲೇಖನವು ಮನುಷ್ಯನ ಜೀವನದಲ್ಲಿ ನಡೆಯುವ ಬದಲಾವಣೆ, ಹೊಂದಾಣಿಕೆ, ಪ್ರಕೃತಿಯ ಜೀವಚೈತನ್ಯ ಮತ್ತು ಹೊಸತನವನ್ನು ಸ್ವೀಕರಿಸುವ ಮನೋಭಾವವನ್ನು ಸುಂದರವಾಗಿ ಚಿತ್ರಿಸುತ್ತದೆ. ಲೇಖಕಿಯ ಕುಟುಂಬ ಮೂರು ದಶಕಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ನಗರದ ಗದ್ದಲ, ವೇಗದ ಜೀವನ ಮತ್ತು ವ್ಯವಸ್ಥಿತ ಬದುಕಿಗೆ ಸಂಪೂರ್ಣವಾಗಿ ಹೊಂದಿಕೊಂಡಿರುತ್ತದೆ. ಹೀಗಾಗಿ ಊರಿಗೆ ಹೋದಾಗ ಅಲ್ಲಿನ ನಿಶ್ಶಬ್ದತೆ, ಕೀಟಗಳು, ವಿದ್ಯುತ್ ಮತ್ತು ನೀರಿನ ಸಮಸ್ಯೆಗಳು ಲೇಖಕಿಗೆ ಕಿರಿಕಿರಿಯನ್ನು ಉಂಟುಮಾಡುತ್ತವೆ.
ಮಗಳು ವಿದೇಶಕ್ಕೆ ವಿದ್ಯಾಭ್ಯಾಸಕ್ಕಾಗಿ ಹೋದ ನಂತರ ಲೇಖಕಿ ಪತಿಯೊಂದಿಗೆ ತಿಂಗಳಿಗೊಮ್ಮೆ ಊರಿಗೆ ಹೋಗಬೇಕಾಗುತ್ತದೆ. ಊರಿನ ತೋಟದ ಮನೆಯನ್ನು ಸ್ವಚ್ಛಗೊಳಿಸುವಾಗ ನೂರಾರು **ಕಂಬಳಿ ಹುಳಗಳು**, ಇರುವೆಗಳು, ಜೇಡಗಳು ಮುಂತಾದ ಜೀವಿಗಳು ಕಾಣಿಸಿಕೊಂಡು ಅವರಿಗೆ ಅಸಹನೆ ಉಂಟುಮಾಡುತ್ತವೆ. ಆದರೆ ಪತಿ ಅವುಗಳನ್ನು ನಾಶಮಾಡಬಾರದು; ಅವು ಮುಂದೆ ಚಿಟ್ಟೆಗಳಾಗಿ ರೂಪಾಂತರಗೊಳ್ಳುತ್ತವೆ ಎಂದು ಹೇಳುತ್ತಾರೆ.
ಒಮ್ಮೆ ಊರಿನ ಮನೆಯಲ್ಲಿ ಒಂಟಿಯಾಗಿ ಕುಳಿತಿದ್ದಾಗ ಲೇಖಕಿಯ ದೃಷ್ಟಿ **ಬಂಟಮಲೆ**ಯ ಕಡೆಗೆ ಹರಿಯುತ್ತದೆ. ಬೆಟ್ಟದ ವಿಶಾಲ ಹಸಿರು, ಪ್ರಕೃತಿಯ ನಿಶ್ಚಲತೆ ಮತ್ತು ಸುತ್ತಲಿನ ಮೌನ ಅವಳ ಮನಸ್ಸನ್ನು ಆಕರ್ಷಿಸುತ್ತವೆ. ಆರಂಭದಲ್ಲಿ ಭಯ ಹುಟ್ಟಿಸಿದ ನಿಶ್ಯಬ್ದದಲ್ಲಿಯೇ ಅನೇಕ ಜೀವಿಗಳ ಚಟುವಟಿಕೆಗಳು ನಡೆಯುತ್ತಿರುವುದನ್ನು ಅವಳು ನಿಧಾನವಾಗಿ ಅರಿಯುತ್ತಾಳೆ.
ಕಂಬಳಿ ಹುಳಗಳು ತಮ್ಮ ಸುತ್ತಲೂ ನಾಜೂಕಾದ ಬಲೆ ಹೆಣೆದುಕೊಂಡು **ಕೋಶಾವಸ್ಥೆಯಲ್ಲಿ ರೂಪಾಂತರಗೊಳ್ಳುತ್ತಿರುವುದನ್ನು** ಕಂಡು ಲೇಖಕಿಗೆ ಹೊಸ ಅರಿವು ಮೂಡುತ್ತದೆ. ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಸಾಗಲು ಮೌನ ಮತ್ತು ಧ್ಯಾನದಂತಹ ಅವಸ್ಥೆ ಅಗತ್ಯವೆಂದು ಅವಳು ಗ್ರಹಿಸುತ್ತಾಳೆ. ಕಂಬಳಿ ಹುಳಗಳು ಚಿಟ್ಟೆಗಳಾಗಿ ಹೊರಬಂದು ಹಾರುವುದನ್ನು ಕಂಡಾಗ, ತನ್ನ ಜೀವನದಲ್ಲಿಯೂ ಬದಲಾವಣೆಯನ್ನು ಸ್ವೀಕರಿಸಬೇಕೆಂಬ ಅರಿವು ಅವಳಲ್ಲಿ ಮೂಡುತ್ತದೆ.
ಕಲ್ಪನೆಯಲ್ಲಿ ತಾನೂ ಚಿಟ್ಟೆಯಾಗಿ ರೆಕ್ಕೆ ಪಡೆದು ಹಾರುತ್ತಿರುವಂತೆ ಲೇಖಕಿಗೆ ಅನುಭವವಾಗುತ್ತದೆ. ಹಕ್ಕಿಗಳ ಕಲರವ, ಕೋತಿಗಳ ಚಟುವಟಿಕೆ, ಹಾವುಗಳ ಸಹಜೀವನ, ಮರಗಳಲ್ಲಿನ ಜೀವಸ್ಪಂದನ ಮುಂತಾದವುಗಳ ಮೂಲಕ ಪ್ರಕೃತಿಯಲ್ಲಿರುವ ನಿರಂತರ ಜೀವಚೈತನ್ಯವನ್ನು ಅವಳು ಅನುಭವಿಸುತ್ತಾಳೆ.
ಕೊನೆಯಲ್ಲಿ ಕಾರಿನ ಹಾರ್ನ್ ಕೇಳಿ ಲೇಖಕಿ ವಾಸ್ತವಕ್ಕೆ ಮರಳುತ್ತಾಳೆ. ಆದರೆ ಅವಳ ಮನಸ್ಸು ಬದಲಾಗಿರುತ್ತದೆ. **ನಗರದ ಗದ್ದಲದಲ್ಲಿಯೂ ನಿಶ್ಯಬ್ದವಿದೆ; ನಿಶ್ಯಬ್ದದೊಳಗೂ ಅಪಾರವಾದ ಜೀವಚಟುವಟಿಕೆ ಇದೆ** ಎಂಬ ಸತ್ಯವನ್ನು ಅವಳು ಅರಿತುಕೊಳ್ಳುತ್ತಾಳೆ. ಪ್ರಕೃತಿಯ ಬದಲಾವಣೆ ಮತ್ತು ರೂಪಾಂತರದಂತೆ ಮನುಷ್ಯನೂ ತನ್ನ ಜೀವನದಲ್ಲಿ ಬದಲಾವಣೆಗಳನ್ನು ಸ್ವೀಕರಿಸಬೇಕು ಎಂಬುದೇ **‘ಜೀವ ದುಂದುಭಿ’ ಪಾಠದ ಮುಖ್ಯ ಆಶಯ
ಅಭ್ಯಾಸ ಪ್ರಶ್ನೆಗಳು ಮತ್ತು ಉತ್ತರ
1. ಮನುಷ್ಯ ನೆಲೆ ಕಂಡುಕೊಳ್ಳುವುದು ಹೇಗೆ?
ಮನುಷ್ಯನ ಜೀವನದಲ್ಲಿ ಒಂದೆಡೆ ನೆಲೆ ನಿಲ್ಲುವುದು ಬಹಳ ಮುಖ್ಯವಾದ ಸಂಗತಿಯಾಗಿದೆ. ಆಹಾರಕ್ಕಾಗಿ ಅಲೆದಾಡುತ್ತಿದ್ದ ಮನುಷ್ಯ ಕ್ರಮೇಣ ಒಂದೆಡೆ ನೆಲೆಸಿ, ಅಲ್ಲಿಯೇ ಆಹಾರ ಬೆಳೆಯಲು ಕಲಿತನು. ಹೀಗೆ ವಾಸಿಸುವ ಸ್ಥಳದೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡು ಮನುಷ್ಯ ನೆಲೆಯನ್ನು ಕಂಡುಕೊಳ್ಳುತ್ತಾನೆ. ಮನೆ, ಕುಟುಂಬ, ಕೆಲಸ, ಪರಿಸರ ಮತ್ತು ಅಲ್ಲಿನ ಜನರೊಂದಿಗೆ ಹೊಂದಾಣಿಕೆ ಬೆಳೆಸಿಕೊಂಡಾಗ ಆ ಸ್ಥಳವೇ ತನ್ನದೇ ಎಂಬ ಭಾವನೆ ಮೂಡುತ್ತದೆ.
ಆದರೆ ಜೀವನದಲ್ಲಿ ಪರಿಸ್ಥಿತಿಗಳು ಬದಲಾದಾಗ ಹೊಸ ಸ್ಥಳ ಮತ್ತು ಹೊಸ ಜೀವನಶೈಲಿಗೆ ಹೊಂದಿಕೊಳ್ಳುವ ಮೂಲಕವೂ ಮನುಷ್ಯ ಹೊಸ ನೆಲೆಯನ್ನು ಕಂಡುಕೊಳ್ಳುತ್ತಾನೆ. ಅಂದರೆ **ನೆಲೆ ಎಂಬುದು ಕೇವಲ ಒಂದು ಸ್ಥಳವಲ್ಲ; ಅದು ಮನುಷ್ಯನ ಮನಸ್ಸು ಹೊಂದಿಕೊಳ್ಳುವ, ಭದ್ರತೆ ಮತ್ತು ಆತ್ಮೀಯತೆಯನ್ನು ಅನುಭವಿಸುವ ಭಾವನೆಯಾಗಿದೆ.**
2. ಲೇಖಕಿ ತಿಂಗಳಿಗೊಮ್ಮೆ ಊರ ಪ್ರಯಾಣ ಮಾಡುತ್ತಿರುವುದು ಏಕೆ?
ಲೇಖಕಿಯ ಪತಿ ಕಂಪನಿಯ ಸಿಇಒ ಜೊತೆಗಿನ ಭಿನ್ನಾಭಿಪ್ರಾಯದಿಂದ ಕೆಲಸಕ್ಕೆ ರಾಜೀನಾಮೆ ನೀಡಿದ ನಂತರ, ತಮ್ಮ ಪಿತ್ರಾರ್ಜಿತ ಆಸ್ತಿಯಲ್ಲಿದ್ದ ಊರಿನ ಜಾಗದಲ್ಲಿ ಕಟ್ಟಿಸಿದ ಪುಟ್ಟ ಮನೆಯಲ್ಲಿ ವಾಸಿಸಲು ಮತ್ತು ತೋಟದ ಕೆಲಸಗಳನ್ನು ನೋಡಿಕೊಳ್ಳಲು ತಿಂಗಳಿಗೊಮ್ಮೆ ಊರಿಗೆ ಹೋಗುತ್ತಿದ್ದರು. ಮಗಳು ಎಂಜಿನಿಯರಿಂಗ್ ಓದುತ್ತಿದ್ದ ಕಾರಣ ಲೇಖಕಿ ಬೆಂಗಳೂರಿನಲ್ಲೇ ಉಳಿಯಬೇಕಾಗಿತ್ತು.
ನಂತರ ಮಗಳು ಎಂಜಿನಿಯರಿಂಗ್ ಮುಗಿಸಿ ವಿದೇಶಕ್ಕೆ ಉನ್ನತ ವಿದ್ಯಾಭ್ಯಾಸಕ್ಕೆ ತೆರಳಿದಳು. ಆಗ ಪತಿಗೆ ಒಬ್ಬರೇ ಊರಿಗೆ ಹೋಗಿ ಬರುವುದು ಕಷ್ಟವಾಗಬಹುದು ಎಂಬ ಅನುಕಂಪದಿಂದ ಮತ್ತು ಅವರೊಂದಿಗೆ ಇರಬೇಕೆಂಬ ಅನಿವಾರ್ಯತೆಯಿಂದ **ಲೇಖಕಿಯೂ ತಿಂಗಳಿಗೊಮ್ಮೆ ಊರಿಗೆ ಪ್ರಯಾಣಿಸಲು ಆರಂಭಿಸಿದರು.**
**3. ಲೇಖಕಿಯ ಭಾವನೆಗಳು – ಚಿಟ್ಟೆಯಾಗಿ ಹಾರುವ ಹುಳಗಳು ಯಾವುವು?**
ಚಿಟ್ಟೆಯಾಗಿ ಹಾರುವ ಹುಳಗಳು **ಕಂಬಳಿ ಹುಳಗಳು**. ಲೇಖಕಿ ಊರಿನ ತೋಟದ ಮನೆಯಲ್ಲಿ ನೂರಾರು ಕಂಬಳಿ ಹುಳಗಳನ್ನು ನೋಡುತ್ತಾಳೆ. ಮೊದಲಿಗೆ ಅವುಗಳನ್ನು ಕಂಡು ಭಯ ಮತ್ತು ಅಸಹನೆ ವ್ಯಕ್ತಪಡಿಸುತ್ತಾಳೆ. ಆದರೆ ಅವುಗಳು ತಮ್ಮ ಸುತ್ತಲೂ ನಾಜೂಕಾದ ಬಲೆ ಹೆಣೆದುಕೊಂಡು ಕೋಶಾವಸ್ಥೆಯಲ್ಲಿ ಇರುವುದನ್ನು ಗಮನಿಸಿದ ನಂತರ, ಅವುಗಳ ರೂಪಾಂತರದ ಮಹತ್ವವನ್ನು ಅರಿತುಕೊಳ್ಳುತ್ತಾಳೆ.
ಕಂಬಳಿ ಹುಳಗಳು ತಮ್ಮ ಹಳೆಯ ರೂಪವನ್ನು ಕಳಚಿಕೊಂಡು ಸುಂದರವಾದ ಬಣ್ಣಬಣ್ಣದ ಚಿಟ್ಟೆಗಳಾಗಿ ಹೊರಬಂದು ಹಾರುವುದನ್ನು ಕಂಡು ಲೇಖಕಿಗೆ ಆಶ್ಚರ್ಯ ಮತ್ತು ಸಂತೋಷ ಉಂಟಾಗುತ್ತದೆ. ಇದರಿಂದ **ಮನುಷ್ಯನೂ ತನ್ನ ಹಳೆಯ ಭಾವನೆಗಳು, ಅಭ್ಯಾಸಗಳು ಮತ್ತು ಅಸಹನೆಗಳನ್ನು ಬಿಟ್ಟು ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳಬೇಕು** ಎಂಬ ಜೀವನಪಾಠವನ್ನು ಲೇಖಕಿ ಕಲಿಯುತ್ತಾಳೆ.
*4. ಒಬ್ಬವ್ವನ ಕಿಂಡಿಯ ಶತ್ರು ಸೈನಿಕರಂತೆ ಬರುತ್ತಿರುವವರು ಯಾರು?**
ಒಬ್ಬವ್ವನ ಕಿಂಡಿಯಿಂದ **ಸಾಲಾಗಿ ಬರುತ್ತಿದ್ದ ಇರುವೆಗಳ ದಂಡು** ಶತ್ರು ಸೈನಿಕರಂತೆ ಬರುತ್ತಿತ್ತು. ಮಳೆನೀರು ಸಿಡಿದು ಗೋಡೆಯ ಬಳಿ ಹಾಕಿದ್ದ ಪೌಡರ್ ಅಳಿದುಹೋದ ಜಾಗದಿಂದ ಇರುವೆಗಳು ಒಳನುಗ್ಗುತ್ತಿದ್ದವು. ಅವು ಶಿಸ್ತಿನಿಂದ ಸಾಲಾಗಿ ಬರುತ್ತಿದ್ದುದನ್ನು ಲೇಖಕಿ **“ಶತ್ರು ಸೈನಿಕರು ಬಂದಂತೆ”** ಎಂದು ವರ್ಣಿಸಿದ್ದಾರೆ.
5. ಉಂಬಳಗಳನ್ನು ಕಂಡ ಲೇಖಕಿಯ ಭಾವನೆಗಳನ್ನು ವ್ಯಕ್ತಪಡಿಸಿ.
ಊರಿನ ತೋಟದ ಮನೆಯ ಗೇಟಿನ ಸುತ್ತಲೂ ಬಿದ್ದಿದ್ದ ತರಗೆಲೆಗಳ ನಡುವೆ ಉಂಬಳಗಳು ತೆವಳುತ್ತಿರುವುದನ್ನು ಕಂಡು ಲೇಖಕಿಗೆ **ಭಯ ಮತ್ತು ಅಸಹನೆ** ಉಂಟಾಗುತ್ತಿತ್ತು. ಉಂಬಳಗಳು ತನ್ನ ಕಾಲಿಗೆ ಹತ್ತಿಬಿಡಬಹುದೆಂಬ ಆತಂಕದಿಂದ ಅವಳು ಗೇಟಿನ ಬಳಿ ಹೆಚ್ಚು ಸಮಯ ನಿಲ್ಲದೆ ಆತುರದಿಂದ ಬೀಗ ತೆಗೆದು ಗೇಟನ್ನು ತೆರೆದು ಓಡಿ ಕಾರಿನಲ್ಲಿ ಕುಳಿತುಕೊಳ್ಳುತ್ತಿದ್ದಳು. ಪಕ್ಕದಲ್ಲಿದ್ದ ಪತಿ ತನ್ನ ಭಯವನ್ನು ಕಂಡು ನಗುತ್ತಿದ್ದರೂ, ಲೇಖಕಿ ಅದನ್ನು ಗಮನಿಸದೆ ಮುಗುಮ್ಮಾಗಿ ಕುಳಿತುಕೊಳ್ಳುತ್ತಿದ್ದಳು.
6. ಲೇಖಕಿಯ ಮಗಳು ಬೆಂಗಳೂರಿನವಳೆಂದು ಹೇಳಿಕೊಳ್ಳಲು ಕಾರಣವೇನು?**
ಲೇಖಕಿಯ ಮಗಳು **ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದು**, ಅಲ್ಲಿಯೇ ತನ್ನ ಬಾಲ್ಯ ಮತ್ತು ವಿದ್ಯಾಭ್ಯಾಸವನ್ನು ಕಳೆದಿದ್ದಳು. ಆದ್ದರಿಂದ ತಾನು ಕರಾವಳಿಯ ಮೂಲದವಳಾದರೂ, ತನ್ನನ್ನು **“ಹಾರ್ಡ್ಕೋರ್ ಬೆಂಗಳೂರಿಯನ್”** ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಳು.
ತಾಯಿ-ತಂದೆಯರು ಕರಾವಳಿಯವರಾಗಿರಬಹುದು, ಆದರೆ ತಾನು ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿರುವುದರಿಂದ **ತನ್ನ ನಂಟು ಮತ್ತು ಗುರುತು ಬೆಂಗಳೂರಿನೊಂದಿಗೆ ಹೆಚ್ಚು ಗಟ್ಟಿಯಾಗಿದೆ** ಎಂದು ಹೇಳಿಕೊಳ್ಳಲು ಅವಳು ಬಯಸುತ್ತಿದ್ದಳು.
7. ಬೆಂಗಳೂರಿನಲ್ಲಿ ಲೇಖಕಿಯ ಬದಲಾದ ಭಾಷೆ ಕುರಿತು ಹಳ್ಳಿ ಜನಗಳ ಪ್ರತಿಕ್ರಿಯೆಯನ್ನು ವಿವರಿಸಿ.
ಲೇಖಕಿ ಮೂಲತಃ ದಕ್ಷಿಣ ಕನ್ನಡದ ಕರಾವಳಿ ಪ್ರದೇಶದವರು. ಆದರೆ ಸುಮಾರು **ಮೂರು ದಶಕಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿರುವುದರಿಂದ**, ಬೆಂಗಳೂರಿನ ನಗರ ಜೀವನಕ್ಕೆ ಸಂಪೂರ್ಣವಾಗಿ ಹೊಂದಿಕೊಂಡಿದ್ದಾರೆ. ದೀರ್ಘಕಾಲ ಬೆಂಗಳೂರಿನಲ್ಲಿ ವಾಸಿಸಿದ ಪರಿಣಾಮ ಅವರ **ಮಾತನಾಡುವ ಕನ್ನಡದ ಬನಿ ಮತ್ತು ಉಚ್ಚಾರಣೆಯಲ್ಲಿಯೂ ಬದಲಾವಣೆ** ಉಂಟಾಗಿದೆ.
ಲೇಖಕಿ ಊರಿಗೆ ಹೋದಾಗ ಅಲ್ಲಿನ ಜನರು ಅವರ ಮಾತಿನ ಶೈಲಿಯನ್ನು ಗಮನಿಸುತ್ತಿದ್ದರು. ಅವರು ಮಾತನಾಡುವ ಕನ್ನಡದ ಬನಿ, ಉಚ್ಚಾರಣೆ ಮೊದಲಿನ ಕರಾವಳಿ ಕನ್ನಡದಂತಿರದೆ ಬೆಂಗಳೂರಿನ ಪ್ರಭಾವವನ್ನು ಹೊಂದಿರುವುದನ್ನು ಗುರುತಿಸಿ, **“ನೀವು ಕರಾವಳಿಯವರೇ?”** ಎಂದು ಪ್ರಶ್ನಿಸುತ್ತಿದ್ದರು. ಈ ಪ್ರಶ್ನೆಯಿಂದಲೇ ಲೇಖಕಿಯ ಭಾಷೆಯ ಮೇಲೆ ಬೆಂಗಳೂರಿನ ಬದುಕು ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎಂಬುದು ತಿಳಿಯುತ್ತದೆ.
ಲೇಖಕಿ ತಮ್ಮ ಮಗಳ ಬಳಿ ಹಳ್ಳಿಯವರು ಕೇಳುತ್ತಿದ್ದ ಈ ಪ್ರಶ್ನೆಯನ್ನು ಹೇಳಿಕೊಂಡಾಗ, ಮಗಳು ಕೂಡ ತನ್ನದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾಳೆ. **“ನೀವಿಬ್ಬರೂ ಕರಾವಳಿಯವರು ಇರಬಹುದು ಅಮ್ಮ, ಆದರೆ ನಾನು ಹಾರ್ಡ್ಕೋರ್ ಬೆಂಗಳೂರಿಯನ್. ನಾನು ಇಲ್ಲೇ ಹುಟ್ಟಿ ಬೆಳೆದವಳು”** ಎಂದು ಹೇಳುತ್ತಾಳೆ. ಇದರಿಂದ ಮಗಳು ತನ್ನನ್ನು ಕರಾವಳಿಯ ಮೂಲಕ್ಕಿಂತ ಬೆಂಗಳೂರಿನ ಬದುಕಿನೊಂದಿಗೆ ಹೆಚ್ಚು ಗುರುತಿಸಿಕೊಳ್ಳುತ್ತಿದ್ದಳು ಎಂಬುದು ಸ್ಪಷ್ಟವಾಗುತ್ತದೆ.
ಹೀಗಾಗಿ, **ಸ್ಥಳ ಬದಲಾದಾಗ ಮನುಷ್ಯನ ಭಾಷೆ, ಉಚ್ಚಾರಣೆ, ಜೀವನಶೈಲಿ ಮತ್ತು ಆಲೋಚನೆಗಳಲ್ಲಿಯೂ ಬದಲಾವಣೆ ಉಂಟಾಗುತ್ತದೆ** ಎಂಬುದನ್ನು ಈ ಪ್ರಸಂಗ ತಿಳಿಸುತ್ತದೆ. ಬೆಂಗಳೂರಿನ ದೀರ್ಘಕಾಲದ ವಾಸವು ಲೇಖಕಿಯ ಭಾಷೆಯ ಮೇಲೂ ತನ್ನದೇ ಆದ ಛಾಪು ಮೂಡಿಸಿತ್ತು.
8. ತನ್ನ ತೋಟದ ತೆಂಗಿನಕಾಯಿ ಬಗ್ಗೆ ಲೇಖಕಿಗೆ ಇರುವ ಹೆಮ್ಮೆಯೇನು?**
ಲೇಖಕಿಗೆ ತಮ್ಮ ಊರಿನ ತೋಟದ **ತೆಂಗಿನಕಾಯಿಯ ಬಗ್ಗೆ ವಿಶೇಷವಾದ ಹೆಮ್ಮೆ ಮತ್ತು ಅಭಿಮಾನ** ಇತ್ತು. ಪತಿ ಊರಿನಿಂದ ಬೆಂಗಳೂರಿಗೆ ಹಿಂದಿರುಗುವಾಗ ತೋಟದ ಹಣ್ಣು-ತರಕಾರಿಗಳ ಜೊತೆಗೆ ತೆಂಗಿನಕಾಯಿಯನ್ನೂ ತರುತ್ತಿದ್ದರು. ಆಗ ಲೇಖಕಿ, **“ಈ ಸಾರಿ ತೆಂಗಿನಕಾಯಿ ಮರೀಬೇಡಿ ಮಾರೇ, ಊರಿನ ತೆಂಗಿನಕಾಯಿಯಷ್ಟು ಒಳ್ಳೆಯದು ಎಲ್ಲಿಯೂ ಸಿಗುವುದಿಲ್ಲ”** ಎಂದು ಹೇಳುತ್ತಿದ್ದರು.
ಊರಿನ ತೆಂಗಿನಕಾಯಿ **ತಾಜಾ, ರುಚಿಕರ ಹಾಗೂ ಉತ್ತಮ ಗುಣಮಟ್ಟದ್ದಾಗಿದೆ** ಎಂಬ ಭಾವನೆ ಲೇಖಕಿಗೆ ಇತ್ತು. ಆ ತೆಂಗಿನಕಾಯಿಯನ್ನು ಊರಿನದ್ದೆಂಬ ವಿಶೇಷ ಸಂತೋಷದಿಂದ ಬಳಸಿಕೊಂಡು ಸಾಂಬಾರು ಮುಂತಾದ ಅಡುಗೆಗಳನ್ನು ಮಾಡುತ್ತಿದ್ದರು. ಹೀಗೆ ಬೆಂಗಳೂರಿನಲ್ಲಿದ್ದರೂ ತಮ್ಮ ಊರಿನ ತೋಟದ ಉತ್ಪನ್ನಗಳೊಂದಿಗೆ ಲೇಖಕಿಗೆ ಆತ್ಮೀಯವಾದ ನಂಟು ಮತ್ತು ಹೆಮ್ಮೆ ಇತ್ತು.
9. ಕರಾವಳಿಯ ಹಸಿರು ಪರಿಸರವನ್ನು ವರ್ಣಿಸಿ.
‘ಜೀವ ದುಂದುಭಿ’ ಪಾಠದಲ್ಲಿ ಲೇಖಕಿ ಕರಾವಳಿಯ ಹಸಿರು ಪರಿಸರವನ್ನು ಅತ್ಯಂತ ಸುಂದರವಾಗಿ ಹಾಗೂ ಜೀವಂತವಾಗಿ ವರ್ಣಿಸಿದ್ದಾರೆ. ಕರಾವಳಿಯ ಪರಿಸರವು **ಪಶ್ಚಿಮ ಘಟ್ಟದ ತಪ್ಪಲು, ದಟ್ಟ ಕಾಡು, ತೋಟಗಳು, ಅಡಿಕೆ-ತೆಂಗಿನ ಮರಗಳು, ಹೊಳೆಗಳು ಮತ್ತು ಹಸಿರಿನಿಂದ** ಕೂಡಿದೆ. ಲೇಖಕಿಯ ಊರಿನ ತೋಟದ ಮನೆಯಿಂದ ಕಾಣುವ **ಬಂಟಮಲೆ** ಅದರ ಪ್ರಕೃತಿ ಸೌಂದರ್ಯದ ಪ್ರಮುಖ ಭಾಗವಾಗಿದೆ. ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಹರಡಿಕೊಂಡಿರುವ ಬಂಟಮಲೆ ಮುಗಿಲೆತ್ತರಕ್ಕೆ ಬೆಳೆದು ನಿಂತು, ಧ್ಯಾನದಲ್ಲಿ ತಲ್ಲೀನವಾಗಿರುವಂತೆ ಕಾಣುತ್ತದೆ.
ಬಂಟಮಲೆಯ ಸುತ್ತಲಿನ ಹಸಿರು ಒಂದೇ ರೀತಿಯದ್ದಲ್ಲ. **ದಟ್ಟ ಹಸಿರು, ತಿಳಿಹಸಿರು, ಗಿಳಿಹಸಿರು, ಕಮ್ಮಿಶ್ರಿತ ಹಸಿರು ಹಾಗೂ ದೂರದಿಂದ ಕಪ್ಪಾಗಿ ಕಾಣುವ ಹಸಿರು** ಹೀಗೆ ಹಲವು ಬಣ್ಣಗಳ ವೈವಿಧ್ಯವನ್ನು ಲೇಖಕಿ ಗಮನಿಸುತ್ತಾರೆ. ಲಕ್ಷಾಂತರ ಹಸಿರು ರಥಗಳು ಎದ್ದು ನಿಂತಂತೆ ಮರಗಳು ಕಾಣುತ್ತವೆ. ತೋಟದ ಅಂಚಿನಲ್ಲಿ ಉದ್ದವಾಗಿ ಬೆಳೆದಿರುವ ಅಡಿಕೆ ಮರಗಳು, ವಿವಿಧ ಗಿಡಗಳು ಮತ್ತು ಮರಗಳು ಪರಿಸರಕ್ಕೆ ಮತ್ತಷ್ಟು ಸೊಬಗನ್ನು ನೀಡುತ್ತವೆ.
ಈ ಹಸಿರು ಪರಿಸರದಲ್ಲಿ ವಿವಿಧ ಜೀವಿಗಳ ಚಟುವಟಿಕೆಯೂ ನಿರಂತರವಾಗಿ ನಡೆಯುತ್ತಿರುತ್ತದೆ. **ಮಂಗಟ್ಟೆಗಳು, ಮರಕುಟಿಗಗಳು, ಮೈನಾಗಳು, ಬುಲ್ಬುಲ್ಗಳು, ವಿವಿಧ ಹಕ್ಕಿಗಳು, ಕೋತಿಗಳು, ಹಾವುಗಳು, ಕಂಬಳಿ ಹುಳಗಳು ಮತ್ತು ಜೇಡಗಳು** ತಮ್ಮದೇ ಆದ ರೀತಿಯಲ್ಲಿ ಬದುಕುತ್ತಿರುತ್ತವೆ. ಹಕ್ಕಿಗಳ ಕಲರವ, ಮರಗಳ ನಡುವೆ ನಡೆಯುವ ಜೀವಚಟುವಟಿಕೆ, ಬೀಜಗಳು ಸಿಡಿದು ನೆಲಕ್ಕೆ ಬೀಳುವ ಶಬ್ದ ಮುಂತಾದವುಗಳು ಪ್ರಕೃತಿಯ ಜೀವಂತಿಕೆಯನ್ನು ತೋರಿಸುತ್ತವೆ.
ಕರಾವಳಿಯ ಪರಿಸರದಲ್ಲಿ ಹೊರಗೆ ನೋಡಲು ನಿಶ್ಯಬ್ದ ಮತ್ತು ನಿಶ್ಚಲತೆ ಕಂಡರೂ, ಅದರ ಒಳಗೆ **ಅಸಂಖ್ಯಾತ ಜೀವಿಗಳ ನಿರಂತರ ಚಟುವಟಿಕೆ** ನಡೆಯುತ್ತಿರುತ್ತದೆ. ಆದ್ದರಿಂದ ಲೇಖಕಿಗೆ ಕರಾವಳಿಯ ಹಸಿರು ಪರಿಸರವು ಕೇವಲ ಸೌಂದರ್ಯದ ತಾಣವಾಗಿರದೆ, **ಜೀವನ, ರೂಪಾಂತರ ಮತ್ತು ಪ್ರಕೃತಿಯ ಅಪಾರ ಜೀವಶಕ್ತಿಯನ್ನು ಸಾರುವ ಜೀವಂತ ಲೋಕವಾಗಿ** ಕಾಣುತ್ತದೆ.
10. ಕರಾವಳಿಯಲ್ಲಿರುವ ಲೇಖಕಿಯ ಮನೆಯಲ್ಲಿ ಕಂಡುಬರುವ ಹುಳಗಳ ಜೀವ ವೈವಿಧ್ಯವನ್ನು ಚಿತ್ರಿಸಿ.
ಲೇಖಕಿಯ ಕರಾವಳಿಯ ತೋಟದ ಮನೆ ಬಹಳ ದಿನಗಳು ಬೀಗ ಹಾಕಿರುವುದರಿಂದ ಅಲ್ಲಿ ವಿವಿಧ ರೀತಿಯ ಹುಳ-ಹುಪ್ಪಟೆಗಳು ಮತ್ತು ಸಣ್ಣ ಜೀವಿಗಳು ನೆಲೆಸಿರುತ್ತವೆ. ಮನೆಗೆ ಹೋದಾಗಲೆಲ್ಲ ಲೇಖಕಿಗೆ ಹೊಸ ಹೊಸ ಜೀವಿಗಳು ಕಾಣಿಸಿಕೊಳ್ಳುತ್ತವೆ. ಆರಂಭದಲ್ಲಿ ಇವುಗಳನ್ನು ಕಂಡು ಲೇಖಕಿಗೆ ಭಯ, ಅಸಹನೆ ಮತ್ತು ಗಾಬರಿ ಉಂಟಾಗುತ್ತದೆ. ಆದರೆ ನಂತರ ಅವುಗಳ ಜೀವನಕ್ರಮವನ್ನು ಗಮನಿಸಿದಾಗ ಪ್ರಕೃತಿಯ ಅದ್ಭುತ ಜೀವ ವೈವಿಧ್ಯತೆಯ ಅರಿವು ಅವಳಿಗೆ ಮೂಡುತ್ತದೆ.
ಮನೆಯ **ಗೋಡೆಗಳು, ದಾರಂದ, ಚಾವಡಿ ಮತ್ತು ಸೂರಿನ** ಮೇಲೆ ನೂರಾರು ಕಂಬಳಿ ಹುಳಗಳು ಕಂಡುಬರುತ್ತವೆ. ಅವು ತಮ್ಮ ದೇಹವನ್ನು ರಕ್ಷಿಸಿಕೊಳ್ಳಲು ಅತ್ಯಂತ ತೆಳುವಾದ, ನಾಜೂಕಾದ ಬಲೆಗಳನ್ನು ನಿರ್ಮಿಸಿಕೊಂಡು ಕೋಶಾವಸ್ಥೆಯಲ್ಲಿ ಇರುತ್ತವೆ. ಮುಂದೆ ಈ ಹುಳಗಳು ತಮ್ಮ ಹಳೆಯ ರೂಪವನ್ನು ಕಳಚಿಕೊಂಡು **ಬಣ್ಣಬಣ್ಣದ ಚಿಟ್ಟೆಗಳಾಗಿ** ಹೊರಬಂದು ಹಾರುತ್ತವೆ.
ಇದಲ್ಲದೆ ಮನೆಯ ಚಾವಡಿಯಲ್ಲಿ **ಜೇಡರ ಹುಳಗಳು** ಕಂಡುಬರುತ್ತವೆ. ಜೇಡಗಳು ಯಾವುದೇ ಸದ್ದಿಲ್ಲದೆ ನಾಜೂಕಾದ ಬಲೆಗಳನ್ನು ಹೆಣೆದುಕೊಂಡು ತಮ್ಮ ಜೀವಕ್ರಿಯೆಯನ್ನು ನಡೆಸುತ್ತವೆ. ಗೋಡೆಯ ಬದಿಯಲ್ಲಿ **ಇರುವೆಗಳು** ಸೈನಿಕರಂತೆ ಶಿಸ್ತಿನಿಂದ ಸಾಲಾಗಿ ಸಾಗುತ್ತಿರುತ್ತವೆ. ಮಳೆನೀರಿನಿಂದ ಪೌಡರ್ ಅಳಿದುಹೋದ ಜಾಗದಿಂದ ಅವು ಮನೆಯೊಳಗೆ ಪ್ರವೇಶಿಸುತ್ತವೆ.
ಮನೆಯ ಸುತ್ತಲಿನ ತೋಟದಲ್ಲಿಯೂ ಅನೇಕ ಜೀವಿಗಳ ವೈವಿಧ್ಯ ಕಂಡುಬರುತ್ತದೆ. **ಮಂಗಟ್ಟೆಗಳು, ಮರಕುಟಿಗಗಳು, ಮೈನಾಗಳು, ಬುಲ್ಬುಲ್ಗಳು, ವಿವಿಧ ಹಕ್ಕಿಗಳು ಮತ್ತು ಕೋತಿಗಳು** ತಮ್ಮದೇ ಆದ ಚಟುವಟಿಕೆಗಳಲ್ಲಿ ತೊಡಗಿರುತ್ತವೆ. ಬಾಳೆ ಗಿಡಗಳನ್ನು ಕೋತಿಗಳು ಹಾಳುಮಾಡುತ್ತವೆ. ಹಾವುಗಳು ಒಂದನ್ನೊಂದು ಬೆಸೆದುಕೊಂಡು ಬುಸುಗುಡುತ್ತಾ ತಮ್ಮ ಸಹಜ ಜೀವನ ನಡೆಸುತ್ತವೆ.
ಹೀಗೆ ಲೇಖಕಿಯ ಮನೆಯ ಪರಿಸರದಲ್ಲಿ **ಕಂಬಳಿ ಹುಳ, ಜೇಡ, ಇರುವೆ, ಹಾವು, ವಿವಿಧ ಹಕ್ಕಿಗಳು, ಕೋತಿಗಳು ಮುಂತಾದ ಅನೇಕ ಜೀವಿಗಳು** ಕಂಡುಬರುತ್ತವೆ. ಆರಂಭದಲ್ಲಿ ಲೇಖಕಿಗೆ ಕಿರಿಕಿರಿ ಉಂಟುಮಾಡಿದ ಈ ಜೀವಿಗಳು ನಂತರ ಪ್ರಕೃತಿಯ ಒಂದು ಅವಿಭಾಜ್ಯ ಅಂಗವೆಂಬ ಅರಿವು ಮೂಡಿಸುತ್ತವೆ. **ನಿಶ್ಯಬ್ದವಾಗಿ ಕಾಣುವ ಪ್ರಕೃತಿಯೊಳಗೆ ಅನೇಕ ಜೀವಿಗಳ ನಿರಂತರ ಚಟುವಟಿಕೆ ನಡೆಯುತ್ತಿದ್ದು, ಇದೇ ಪ್ರಕೃತಿಯ ಅಪಾರ ಜೀವ ವೈವಿಧ್ಯ ಮತ್ತು ಜೀವಶಕ್ತಿಯ ಸಂಕೇತವಾಗಿದೆ.**
11. ಬಂಟಮಲೆಯ ಪರಿಸರದ ಸೌಂದರ್ಯವನ್ನು ವಿವರಿಸಿ.
‘ಜೀವ ದುಂದುಭಿ’ ಪಾಠದಲ್ಲಿ **ಬಂಟಮಲೆ** ಪ್ರಕೃತಿಯ ಸೌಂದರ್ಯ ಮತ್ತು ಜೀವಚೈತನ್ಯದ ಪ್ರತೀಕವಾಗಿ ಮೂಡಿಬಂದಿದೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಬಂಟಮಲೆ ಸುಳ್ಯ ತಾಲೂಕಿನ ಹೆಮ್ಮೆಯಾಗಿದೆ. ಲೇಖಕಿಯ ತೋಟದ ಅಂಚಿನಿಂದಲೇ ಆರಂಭವಾಗುವ ಈ ಕಾಡು ಕಣ್ಣಿಗೆ ಕಾಣುವಷ್ಟು ದೂರಕ್ಕೂ ಹರಡಿಕೊಂಡು, ಮುಗಿಲೆತ್ತರಕ್ಕೆ ಬೆಳೆದು ನಿಂತಿದೆ. ಅದು ತನ್ನ ಅಪಾರ ಎತ್ತರ ಮತ್ತು ವಿಶಾಲತೆಯ ಅರಿವೇ ಇಲ್ಲದಂತೆ ಧ್ಯಾನದಲ್ಲಿ ನಿಂತಿರುವಂತೆ ಕಾಣುತ್ತದೆ.
ಬಂಟಮಲೆಯ ಹಸಿರು ಸೌಂದರ್ಯ ಅತ್ಯಂತ ವೈವಿಧ್ಯಮಯವಾಗಿದೆ. ಲೇಖಕಿಗೆ ಅಲ್ಲಿ **ದಟ್ಟ ಹಸಿರು, ತಿಳಿಹಸಿರು, ಗಿಳಿಹಸಿರು, ಕಮ್ಮಿಶ್ರಿತ ಹಸಿರು ಮತ್ತು ದೂರದಿಂದ ಕಪ್ಪಾಗಿ ಕಾಣುವ ಹಸಿರು** ಹೀಗೆ ಹಲವು ಬಗೆಯ ಹಸಿರುಗಳು ಕಾಣಿಸುತ್ತವೆ. ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಲಕ್ಷಾಂತರ ಹಸಿರು ರಥಗಳು ಎದ್ದು ನಿಂತಂತೆ ಮರಗಳು ಕಾಣುತ್ತವೆ. ಈ ದೃಶ್ಯ ಲೇಖಕಿಯ ಮನಸ್ಸನ್ನು ಆಕರ್ಷಿಸಿ, ಅವಳ ಚಡಪಡಿಕೆ ಮತ್ತು ಅಸಹನೆಯನ್ನು ಮರೆಸುತ್ತದೆ.
ಬಂಟಮಲೆಯ ಪರಿಸರದಲ್ಲಿ ಅಪಾರ ಜೀವಚಟುವಟಿಕೆಯೂ ಇದೆ. ವಿವಿಧ ಜಾತಿಯ **ಹಕ್ಕಿಗಳು, ಮಂಗಟ್ಟೆಗಳು, ಮರಕುಟಿಗಗಳು, ಮೈನಾಗಳು, ಬುಲ್ಬುಲ್ಗಳು, ಕೋತಿಗಳು** ಮುಂತಾದವುಗಳು ತೋಟ ಮತ್ತು ಕಾಡಿನಲ್ಲಿ ಸಂಚರಿಸುತ್ತಿರುತ್ತವೆ. ಹಕ್ಕಿಗಳ ಕಲರವ, ಕೋತಿಗಳ ಚಟುವಟಿಕೆ, ಬೀಜಗಳು ಸಿಡಿದು ಬೀಳುವ ಸದ್ದು ಮುಂತಾದವುಗಳು ಪ್ರಕೃತಿಯ ಸಂಗೀತದಂತೆ ಅನುಭವವಾಗುತ್ತವೆ.
ಅಲ್ಲದೆ ಮರಗಳಲ್ಲಿಯೂ ಜೀವಸ್ಪಂದನವಿದೆ. ಹಾಲೆಮರದ ಕಾಂಡದಲ್ಲಿ ಜೀವರಸ ಮೆಲ್ಲಗೆ ಹರಿಯುವುದನ್ನು ಲೇಖಕಿ ಕಲ್ಪನೆಯ ಮೂಲಕ ಅನುಭವಿಸುತ್ತಾರೆ. ಕಾಡಿನ ನಿಶ್ಯಬ್ದದೊಳಗೆ ಅನೇಕ ಜೀವಿಗಳ ಚಟುವಟಿಕೆಗಳು ನಡೆಯುತ್ತಿರುವುದನ್ನು ಅವರು ಅರಿಯುತ್ತಾರೆ. ಹೀಗಾಗಿ ಬಂಟಮಲೆ ಕೇವಲ ಹಸಿರು ಬೆಟ್ಟವಲ್ಲ; **ಅದು ಅನೇಕ ಜೀವಿಗಳಿಂದ ತುಂಬಿರುವ ಜೀವಂತ ಲೋಕವಾಗಿದೆ.**
ಆರಂಭದಲ್ಲಿ ಊರಿನ ನಿಶ್ಯಬ್ದತೆ ಲೇಖಕಿಗೆ ಭಯ ಮತ್ತು ಗಾಬರಿ ಉಂಟುಮಾಡಿದರೂ, ಬಂಟಮಲೆಯನ್ನು ಗಮನಿಸುತ್ತಾ ಹೋದಂತೆ ಆ ನಿಶ್ಯಬ್ದದ ಮಹತ್ವವನ್ನು ಅರಿಯುತ್ತಾಳೆ. **ಬಂಟಮಲೆಯ ಹಸಿರು, ನಿಶ್ಯಬ್ದ, ಜೀವ ವೈವಿಧ್ಯ ಮತ್ತು ಪ್ರಕೃತಿಯ ಚೈತನ್ಯ ಲೇಖಕಿಯ ಮನಸ್ಸಿನಲ್ಲಿ ಹೊಸ ಅರಿವು ಮತ್ತು ನೆಮ್ಮದಿಯನ್ನು ಮೂಡಿಸುತ್ತದೆ.**
12. ಕಾಡಿನಲ್ಲಿ ಕಂಡ ಕ್ರಿಮಿಕೀಟಗಳ ಜಾತ್ರೆಯ ಮಹೋತ್ಸವವನ್ನು ವಿವರಿಸಿ.
‘ಜೀವ ದುಂದುಭಿ’ ಪಾಠದಲ್ಲಿ ಲೇಖಕಿಗೆ ಊರಿನ ತೋಟದ ಮನೆಯಲ್ಲಿ ಕಂಡುಬರುವ **ಕ್ರಿಮಿಕೀಟಗಳ ಲೋಕವು ಒಂದು ಜಾತ್ರೆಯ ಮಹೋತ್ಸವದಂತೆ** ಕಾಣಿಸುತ್ತದೆ. ಆರಂಭದಲ್ಲಿ ಈ ಕ್ರಿಮಿಕೀಟಗಳನ್ನು ಕಂಡು ಲೇಖಕಿಗೆ ಭಯ, ಅಸಹನೆ ಮತ್ತು ಗಾಬರಿ ಉಂಟಾಗುತ್ತದೆ. ಆದರೆ ಅವುಗಳ ಜೀವನಕ್ರಮವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಪ್ರಕೃತಿಯೊಳಗೆ ನಡೆಯುತ್ತಿರುವ ಅದ್ಭುತ ಜೀವಚಟುವಟಿಕೆಗಳು ಅವಳಿಗೆ ಗೋಚರಿಸುತ್ತವೆ.
ಮನೆಯ ಗೋಡೆ, ದಾರಂದ ಮತ್ತು ಸೂರಿನ ಮೇಲೆ **ನೂರಾರು ಕಂಬಳಿ ಹುಳಗಳು** ಕಂಡುಬರುತ್ತವೆ. ಅವು ತಮ್ಮ ಸುತ್ತಲೂ ಅತ್ಯಂತ ನಾಜೂಕಾದ ಬಲೆಗಳನ್ನು ಹೆಣೆದುಕೊಂಡು ಕೋಶಾವಸ್ಥೆಯಲ್ಲಿ ಧ್ಯಾನಸ್ಥವಾಗಿರುವಂತೆ ಕಾಣುತ್ತವೆ. ಒಂದೊಂದಾಗಿ ಅವುಗಳ ಕೋಶಗಳು ತೆರೆದುಕೊಳ್ಳುತ್ತವೆ. ಅಲ್ಲಿಂದ **ಹಳದಿ, ಕಪ್ಪು, ನೀಲಿ, ಹಸಿರು, ಕೆಂಪು ಮತ್ತು ಬಿಳಿ ಬಣ್ಣಗಳ ಚಿಟ್ಟೆಗಳು** ಹೊರಬಂದು ರೆಕ್ಕೆಗಳನ್ನು ಅಗಲಿಸಿಕೊಂಡು ಹಾರಲು ಆರಂಭಿಸುತ್ತವೆ. ಈ ದೃಶ್ಯ ಲೇಖಕಿಗೆ ನಿಜಕ್ಕೂ ಒಂದು ಜಾತ್ರೆಯ ಮಹೋತ್ಸವದಂತೆ ಕಾಣುತ್ತದೆ.
ಇದರ ಜೊತೆಗೆ **ಜೇಡಗಳು ಬಲೆ ಹೆಣೆಯುವುದು, ಇರುವೆಗಳು ಶಿಸ್ತಿನಿಂದ ಸಾಲಾಗಿ ಸಾಗುವುದು, ಹಕ್ಕಿಗಳು ಹಾರಾಡುವುದು, ಕೋತಿಗಳು ಚಟುವಟಿಕೆಯಿಂದ ಓಡಾಡುವುದು, ಹಾವುಗಳು ಒಂದನ್ನೊಂದು ಬೆಸೆದುಕೊಂಡು ಜೀವಚಟುವಟಿಕೆಯಲ್ಲಿ ತೊಡಗುವುದು** ಮುಂತಾದ ಅನೇಕ ದೃಶ್ಯಗಳು ಪ್ರಕೃತಿಯ ಜೀವಜಾತ್ರೆಯನ್ನು ಮತ್ತಷ್ಟು ವೈಭವಗೊಳಿಸುತ್ತವೆ.
ಮೊದಲು ಲೇಖಕಿಗೆ ಅಸಹ್ಯವಾಗಿದ್ದ ಕಂಬಳಿ ಹುಳಗಳೇ ನಂತರ **ರೂಪಾಂತರದ ಅದ್ಭುತವನ್ನು ಸಾರುವ ಜೀವಿಗಳಾಗಿ** ಕಾಣಿಸುತ್ತವೆ. ನಿಶ್ಯಬ್ದವಾಗಿ ಕಾಣುವ ಕಾಡಿನೊಳಗೆ ಅನೇಕ ಜೀವಿಗಳು ತಮ್ಮದೇ ಆದ ರೀತಿಯಲ್ಲಿ ಬದುಕುತ್ತಿವೆ, ಹುಟ್ಟುತ್ತಿವೆ, ರೂಪಾಂತರಗೊಳ್ಳುತ್ತಿವೆ ಮತ್ತು ಹೊಸ ಜೀವನಕ್ಕೆ ಹೊರಳುತ್ತಿವೆ ಎಂಬ ಸತ್ಯವನ್ನು ಲೇಖಕಿ ಅರಿಯುತ್ತಾರೆ.
ಹೀಗಾಗಿ ಕಾಡಿನಲ್ಲಿ ಕಂಡ ಕ್ರಿಮಿಕೀಟಗಳ ಜಾತ್ರೆ ಕೇವಲ ಕೀಟಗಳ ಸಮೂಹವಲ್ಲ; ಅದು **ಪ್ರಕೃತಿಯ ನಿರಂತರ ಜೀವಚಕ್ರ, ರೂಪಾಂತರ, ಸೃಷ್ಟಿ ಮತ್ತು ಜೀವಶಕ್ತಿಯ ಮಹೋತ್ಸವ**ವಾಗಿದೆ. ಈ ಜೀವಜಾತ್ರೆಯನ್ನು ಕಂಡ ಲೇಖಕಿಯ ಮನಸ್ಸಿನಲ್ಲಿದ್ದ ಅಸಹನೆ ದೂರವಾಗಿ, ಪ್ರಕೃತಿಯ ಬಗ್ಗೆ ಅಚ್ಚರಿ, ಗೌರವ ಮತ್ತು ಆತ್ಮೀಯತೆ ಮೂಡುತ್ತದೆ.
13. ಲೇಖಕಿ ಚಿಟ್ಟೆಯಾಗಿ ಹಾರಿದಾಗ ಕಂಡ ಹಕ್ಕಿಗಳ ಪ್ರಸಂಗವನ್ನು ವರ್ಣಿಸಿ
‘ಜೀವ ದುಂದುಭಿ’ ಪಾಠದಲ್ಲಿ ಕಂಬಳಿ ಹುಳಗಳು ಕೋಶದಿಂದ ಹೊರಬಂದು ಬಣ್ಣಬಣ್ಣದ ಚಿಟ್ಟೆಗಳಾಗಿ ಹಾರುವುದನ್ನು ನೋಡಿದ ಲೇಖಕಿಗೆ ತಾನೂ ಚಿಟ್ಟೆಯಾಗಿ ರೆಕ್ಕೆ ಪಡೆದು ಹಾರುತ್ತಿರುವ ಅನುಭವವಾಗುತ್ತದೆ. ಹೀಗೆ ಹಾರುತ್ತಾ ತೋಟದ ಮೇಲಿನಿಂದ ಸಾಗುವಾಗ ಅವಳಿಗೆ ಪ್ರಕೃತಿಯ ಜೀವಜಗತ್ತು ಹೊಸ ರೂಪದಲ್ಲಿ ಕಾಣಿಸುತ್ತದೆ.
ಮೊದಲು **ಮಂಗಟ್ಟೆ** ಪಕಪಕನೆ ನಗುತ್ತಾ ಸದ್ದು ಮಾಡುತ್ತಾ ಹಣ್ಣು ತಿನ್ನುತ್ತಿರುವುದು ಕಾಣುತ್ತದೆ. **ಗಸಗಸೆ ಮರದ ಮೇಲೆ ಹಕ್ಕಿಗಳ ದಂಡು** ಸೇರಿಕೊಂಡು ಕೋಲಾಹಲ ಮಾಡುತ್ತಿರುತ್ತದೆ. **ಮೈನಾಗಳು ಕೀ ಕೀ ಎಂದು ಕೂಗುತ್ತಾ ಪರಸ್ಪರ ಕಲಹದಲ್ಲಿ** ತೊಡಗಿರುತ್ತವೆ. ಹಳದಿ ಬಣ್ಣದ **ಬುಲ್ಬುಲ್ ಹಕ್ಕಿಯೊಂದು ಕಂದು ಬಣ್ಣದ ಬುಲ್ಬುಲ್ ಹಕ್ಕಿಯನ್ನು ಹಣ್ಣಿನ ಬಳಿಯಿಂದ ಓಡಿಸುತ್ತಿರುತ್ತದೆ.** ಇದನ್ನು ಕಂಡ ಲೇಖಕಿಗೆ ಕಲಹವೂ ಜೀವಸಂಕುಲದ ಸಹಜ ಗುಣವೇ ಇರಬಹುದೆಂಬ ಭಾವನೆ ಮೂಡುತ್ತದೆ.
ಇದಲ್ಲದೆ **ಕುಟ್ರ ಹಕ್ಕಿ ಕೊಂಬೆಯಿಂದ ಕೊಂಬೆಗೆ ಹಾರಾಡುತ್ತಿರುತ್ತದೆ.** ಮತ್ತೊಂದು ಹಸಿರು ಹಕ್ಕಿ ಗಬಗಬನೆ ಹಣ್ಣು ತಿನ್ನುತ್ತಿರುತ್ತದೆ. ಹೀಗೆ ಪ್ರತಿಯೊಂದು ಹಕ್ಕಿಯೂ ತನ್ನದೇ ಆದ ರೀತಿಯಲ್ಲಿ ಆಹಾರ ಹುಡುಕುತ್ತಾ, ಹಾರುತ್ತಾ, ಕೂಗುತ್ತಾ ಮತ್ತು ಬದುಕಿನ ಚಟುವಟಿಕೆಯಲ್ಲಿ ತೊಡಗಿರುತ್ತದೆ.
ಚಿಟ್ಟೆಯಾಗಿ ಹಾರುತ್ತಿದ್ದ ಲೇಖಕಿಗೆ ಈ ದೃಶ್ಯಗಳು ಅತ್ಯಂತ ಹತ್ತಿರದಿಂದ ಕಾಣುತ್ತವೆ. ಹಕ್ಕಿಗಳ ಕೂಗು, ಹಾರಾಟ, ಆಹಾರಕ್ಕಾಗಿ ನಡೆಯುವ ಪೈಪೋಟಿ ಹಾಗೂ ಅವುಗಳ ಸಹಜ ಚಟುವಟಿಕೆಗಳು **ಪ್ರಕೃತಿಯ ಜೀವಂತಿಕೆ ಮತ್ತು ವೈವಿಧ್ಯತೆಯನ್ನು** ತೋರಿಸುತ್ತವೆ. ಹೀಗಾಗಿ ಲೇಖಕಿಗೆ ಕಾಡು ನಿಶ್ಚಲವಾಗಿಲ್ಲ; ಅದರೊಳಗೆ ನಿರಂತರವಾಗಿ ಜೀವಜಾತ್ರೆ ನಡೆಯುತ್ತಿದೆ ಎಂಬ ಅರಿವು ಮೂಡುತ್ತದೆ.
