-ಪ್ರೊ. ಕೆ. ಎಸ್. ನಿಸಾರ್ ಅಹಮ್ಮದ್
ಸಂಜೆಯ ಹೊತ್ತು ಬಿಡುವಿದ್ದಾಗ ಸೂರ್ಯಾಸ್ತವನ್ನು ವೀಕ್ಷಿಸುವ ನಿಮಿತ್ತದಿಂದ ಮನೆಯ ಮಾಳಿಗೆಯ ಮೇಲೆ ನಿಂತು ಸುತ್ತಲೂ ಕಣ್ಣು ಹಾಯಿಸುತ್ತೇನೆ. ನನಗೆ ಥಟ್ಟನೆ ಮನಸ್ಸಿಗೆ ಬರುವುದು ಕೆಲ ವರ್ಷಗಳಲ್ಲಿ ಆಗಿರುವ ಅಗಾಧ ಬದಲಾವಣೆ. ಆಸುಪಾಸಿನಿಂದ ಹಿಡಿದು ಕಣ್ದಿಟ್ಟಿ ಸೋಲುವವರೆಗೆ ಎಡೆಬಿಡದೆ ದಣಿವರಿಯದೆ ಸಾಗಿರುವ ಭೂ ದೃಶ್ಯದ ಮಾರ್ಪಾಟು ವಿಸ್ಮಯ ಬರಿಸುತ್ತದೆ.
దిమ్మ
ಒಂದೂವರೆ-ಎರಡು ದಶಕಗಳ ಹಿಂದೆ ಸುತ್ತ ಹರವಿದ್ದ ಕೆರೆ, ಅದರ ಕೋಡಿಯ ಜಾಗ, ಗುಡ್ಡ, ಹಳ್ಳಕೊಳ್ಳ, ಸಪಾಟು ಬಯಲು, ಹೊಲ ತೋಟ ಮುಂತಾದ ಜನಮಯ ತೆರವು ಪ್ರದೇಶವೆಲ್ಲ ಸದ್ದಿಲ್ಲದೆ ಸಾವಕಾಶವಾಗಿ ಸಾವಿರಾರು ನಿವೇಶನಗಳಾಗಿ, ಅನಂತರ ನಮೂನೆಯ ಮನೆಗಳಾಗಿ ಮಾರ್ಪಟ್ಟಿರುವ ಸಂಗತಿ ವಿಷಾದಕ್ಕೆ ಎಡೆ ಮಾಡಿಕೊಡುತ್ತದೆ.
ಇದರೊಂದಿಗೆ ಪ್ರಗತಿ, ನಾಗರಿಕತೆಗಳ ಸಂಕೇತಗಳಾದ ಬಗೆ ಬಗೆಯ ವಾಹನಗಳು, ರಸ್ತೆಗಳು, ವೃತ್ತಗಳು, ಪೆಟ್ರೋಲ್ ಬಂಕ್, ದುರಸ್ತಿಯ ಗ್ಯಾರೇಜ್ಗಳು, ಲೆಕ್ಕವಿರದಷ್ಟು ಅಂಗಡಿಗಳು; ಸಂಚಾರ ದಟ್ಟಣೆ, ಹೊಗೆ ಧೂಳು, ಕಿವಿ ಬೆಚ್ಚಿಸುವ ಸದ್ದು-ಇತ್ಯಾದಿ ಇತ್ಯಾದಿಗಳೆಲ್ಲ ವಕ್ಕರಿಸಿ. ಸುತ್ತಮುತ್ತಲಿನ ಪರಿಸರವೆಲ್ಲ ಎಕ್ಕುಟ್ಟಿಹೋಗಿದೆ. ಎಲ್ಲ ದಿಕ್ಕುಗಳನ್ನೂ ಧಿಕ್ಕರಿಸಿ ದುರಾಕ್ರಮಿಸುತ್ತಿರುವ ಬೃಹತ್ ಬೆಂಗಳೂರಿನ ಅಸಂಖ್ಯ ಬಡಾವಣೆಗಳ ಕಥೆಯೇ ದೇಶದ ಸಮಸ್ತ ಸಣ್ಣ ಹಾಗೂ ದೊಡ್ಡ ಷಹರುಗಳಲ್ಲೂ ಪುನರಾವರ್ತಿತವಾಗುತ್ತಿದೆ; ತದ್ವತ್ತಾಗಿ ಪುನರಭಿ ನೀತವಾಗುತ್ತಿದೆ.
ಸಂಗತಿ ನಾನು ನಿರೀಕ್ಷಿಸುತ್ತಿರುವ ಅಗಣಿತ ಮನೆಗಳ ಮಧ್ಯೆ, ಏಕತಾನತೆಯನ್ನು ಮುರಿಯುವಂತೆ ಅಲ್ಲಲ್ಲಿ ಹಸುರು ಕಂಗೊಳಿಸಿರುವುದನ್ನು ಗಮನಿಸುತ್ತೇನೆ. ನನ್ನ ಸಿಂಹಾವಲೋಕನ ಹೀಗೆ ಸಾಗಿರುವಾಗ ಫಕ್ಕನೆ ಒಂದು ಮನೋಗೋಚರವಾಗುತ್ತದೆ: ಬೆಂಗಳೂರಿನಲ್ಲಿ ಎಷ್ಟೊಂದು ತೆಂಗಿನ ಮರಗಳಿಹೆ! ಅಷ್ಟೊಂದು ಬೀದಿಗಳಲ್ಲಿ ಅಲೆಯುವಾಗ ಈ ಅಂಶ ಕೆಳಗಡೆ, ಹಾದಿ ಮನವರಿಕೆಯಾಗದು. ಹೀಗೆ, ಎತ್ತರದಿಂದ ವಿಹಂಗಾವಲೋಕನ ಮಾಡಿದಾಗ ಮಾತ್ರ ಸುವೇದ್ಯವಾಗುವ ಸಂಗತಿ ಇದು.
ಬೇರೆ ಬಗೆಯ ಸಸ್ಯ ರಾಶಿಯನ್ನು ಮರೆಗೊಳಿಸಿ ತಂತಾನೆ ವಿಜೃಂಭಿಸುತ್ತಿವೆ ಸದೊಂಬತ್ತು ಎಡೆಗಳಲ್ಲೂ ತೆಂಗಿನ ಗರಿಗಳು. ದೂರದಿಂದ ನೋಡಿದಾಗ, ಮಿಕ್ಕೆಲ್ಲ ಜಾತಿಯ ವೃಕ್ಷಗಳೂ ನೇಪಥ್ಯ ಸೇರಿ ತೆಂಗಿನ ಮರವೊಂದೇ ರಂಗದ ಮೇಲೆ
ರಾರಾಜಿಸಿದಂತೆ ಭಾಸವಾಗುತ್ತದೆ. ಹಸುರು ಒಟ್ಟಾಗಿ ಅಲ್ಲಲ್ಲಿ ರಕ್ಷಿಸಿಯೂ ಈ ನಿರ್ವಿವಿಧತೆಯ, ಏಕಪಕ್ಷೀಯ ಪ್ರಾಶಸ್ತ್ರದ ಭಾವ ಪರಿಸರಕ್ಕೆ ಮೂಡಿದ್ದಾದರೂ ಹೇಗೆ? ಮನಸ್ಸಿನ ಕಿರಿಕಿರಿಯ ಜೊತೆಗೇ ಚಿಂತನೆಯೂ ಚಾಲುಗೊಳ್ಳುತ್ತದೆ.
ನಾನೀಗ ಪ್ರಸ್ತಾಪಿಸುತ್ತಿರುವುದು ಮನೆಗಳಲ್ಲಿ ಬೆಳಸುವ ಮರಗಳ ಬಗೆಗೆ. ನಗರ ಪಾಲಿಕೆ ಹಾದಿಬೀದಿಗಳಲ್ಲಿ ಆರೈಕೆ ಮಾಡಿ ದೊಡ್ಡದಾಗಿ ನಿಲ್ಲಿಸಿರುವ ಸಾಲುಮರಗಳನ್ನು ಕುರಿತಲ್ಲ. ಅವುಗಳಲ್ಲಿ ಶ್ಲಾಘನೀಯ ವೈವಿಧ್ಯವಿದೆ. ಕೆಲವಂತೂ ಗುಲ್ಮೊಹರ್, ಪಿಚಕಾರಿ, ಬಕುಲ, ಹೊಂಗೆ ಮುಂತಾದವು - ತಮ್ಮ ಕೃಶಕೋಮಲ ಹೂವುಗಳ ಬಣ್ಣಗಳಿಂದ, ಸುಕುಮಾರ ಆಕಾರಗಳಿಂದ ಕಣ್ಮನಗಳನ್ನು ಕ್ಷಣಾರ್ಧದಲ್ಲೇ ಪರವಶಗೊಳಿಸಿಬಿಡುವ ಅಂದವನ್ನು ಹೊಂದಿವೆ; ನೆನಪಾಗಿ ಹಳವಂಡಿಸುವ ಗುಣವನ್ನು ಪಡೆದಿವೆ.
'ಗೃಹವಾಸಿಗಳು ತಮ್ಮ ಕಾಂಪೌಂಡಿನೊಳಗೆ ಹೆಚ್ಚಾಗಿ ತೆಂಗಿನ ಮರಗಳನ್ನೇ ಬೆಳಸಲು ಏಕೆ ಇಷ್ಟಪಡುತ್ತಾರೆ? ಮನೆಯ ಎದುರಿನಲ್ಲೋ, ಪಕ್ಕಗಳಲ್ಲೋ, ಹಿತ್ತಿಲ್ಲಲ್ಲೋ ಜಾಗವಿದ್ದು ಮರಗಿಡಗಳನ್ನು ಬೆಳಸುವುದಾದರೆ ತೆಂಗಿಗೇ ಏಕೆ ಸಿಂಹಪಾಲು ನೀಡಲು ಬಯಸುತ್ತಾರೆ? ತೆಂಗು ಕಲ್ಪವೃಕ್ಷ; ಅದನ್ನು ಬೆಳೆಯುವುದು ಮಂಗಳಕರ, ಶ್ರೇಯಸ್ಕರ ಎನ್ನುವ ಪರಂಪರಾಗತವಾದ ನಂಬಿಕೆ మొఖ్య ಕಾರಣವಿದ್ದೀತು. ಆದರೆ ಇದಿಷ್ಟೇ ಅದರ ಅತಿಶಯ ಹೆಚ್ಚಳಕ್ಕೆ ನಿಮಿತ್ತವಾಗಿರಲಾರದು. ಮನುಷ್ಯನ ಸ್ವಪ್ರಯೋಜನದ ದೃಷ್ಟಿಯೂ ತೆಂಗಿನ ಬಗೆಗಿನ ವ್ಯಾಮೋಹಕ್ಕೆ ಕಾರಣವಾಗಿರಬಹುದು. ಜೀವನದ ಮಿಕ್ಕೆಲ್ಲ ಬಾಬಿನಲ್ಲಿರುವಂತೆಯೇ, ತೆಂಗಿನ ಬಗ್ಗೆಯೂ ಮನುಷ್ಯನ ಲಾಭ ಧೋರಣೆ ಕಾರ್ಯಪ್ರವೃತ್ತವಾಗಿದೆ.
ತೆಂಗು ಇತರ ಫಲಗಳಂತಲ್ಲ; ಅದು ನಿತ್ಯೋಪಯೋಗಿ, ದಿನನಿತ್ಯದ ಅಡುಗೆಗೆ ಕೊಬ್ಬರಿಯ ರೂಪದಲ್ಲಿ ಅದು ಅನಿವಾರ್ಯ. ಎಲ್ಲ ಪದಾರ್ಥಗಳ ಬೆಲೆಯೂ ಗಗನಕ್ಕೆ ಏರಿರುವಂತೆ ತೆಂಗಿನ ಕಾಯಿಯ ಬೆಲೆಯೂ ಮೇಲೇರಿದೆ. ಗಿಡದಲ್ಲಿ ಕನಿಷ್ಠ ಇನ್ನೂರು ಇನ್ನೂರೈವತ್ತು ಕಾಯಿ ಸಿಕ್ಕುವಂತಿದ್ದರೆ ಅಂಥ ಕೆಲವು ಗಿಡಗಳನ್ನು ನೆಟ್ಟು ಬೆಳೆಸಿಕೊಳ್ಳುವುದರಲ್ಲಿ ತಪ್ಪೇನು? ಬದುಕನ್ನು ತೂಗಿಸಿಕೊಂಡು ಮುಂದುವರಿಯುವುದೇ ದುರ್ಭರವೆನ್ನಿಸಿರುವ ಈಗಿನ ಕಾಲದಲ್ಲಿ, ಈ ಫಲದಿಂದ ಸಂಸಾರದ ವೆಚ್ಚ ಕೊಂಚ ಕಡಿಮೆಯಾಗುವುದಾದರೆ, ಮನೆಯಲ್ಲಿ ಬೆಳೆದು ಅದನ್ನೇಕೆ ಪಡೆಯಬಾರದು? ಬಳಸಿ ಮಿಕ್ಕಿದ್ದನ್ನು ಮಾರೋಣ. ಯಾವುದಾದರೊಂದು ಸಾದಿಲ್ವಾರು ಕೈ ಖರ್ಚಿಗೆ ಒದಗುತ್ತದೆ. ಪರಂಪರಾಗತವಾದ ನಂಬಿಕೆಗೂ ಇಂಬುಕೊಟ್ಟಂತಾಯಿತು, ಸ್ವಹಿತವನ್ನೂ ಸಾಧಿಸಿದಂತಾಯಿತು- ಇದು ಇವೊತ್ತಿನ ನಗರವಾಸಿಗಳ ಮನದಿಂಗಿತ.
ಈ ಅಲ್ಲದೆ. ಕಾಲದ ಚಿಕ್ಕ ನಿವೇಶನಗಳಲ್ಲಿ ವಾಸಕ್ಕೋಸ್ಕರ ಕೊಠಡಿಗಳನ್ನೆಬ್ಬಿಸುವುದಕ್ಕೇ ಜಾಗ ಹಾಗೂ ಹಣದ ಕೊರತೆಯಿರುವಾಗ, ಅಷ್ಟೇನೂ ನಿತ್ಯೋಪಯೋಗಕ್ಕೆ ಸಲ್ಲದ ಹಾಗೂ ದೊಡ್ಡ ಗಾತ್ರದ ಅಧಿಕ ಹರಡಿಕೆಯ ವೃಕ್ಷಗಳನ್ನು ಯಾರು ತಾನೇ ಪೋಷಿಸಿ ಬೆಳೆಸಲು ತಯಾರಿದ್ದಾರು? ಮನುಷ್ಯ ಮೊದಲು ಪರಿಗಣಿಸುವುದು ಸ್ವಾನುಕೂಲ, ಸ್ವ ಸೌಲಭ್ಯಗಳನ್ನು, ಅದಾದ ಮೇಲೆ ಬೇರೆ ಲೆಕ್ಕಾಚಾರ: ಈ ಸರ್ವೆಸಾಮಾನ್ಯ ಅಭಿಪ್ರಾಯ ಒಂದು ದೃಷ್ಟಿಯಿಂದ ಸರಿ ಎನ್ನಿಸುತ್ತದೆ. ಆದರೆ ಇದೇ ಪರಮ ಸತ್ಯವೆನ್ನಿಸದು.
ಮನುಷ್ಯ ಕೇವಲ ಹೊಟ್ಟೆ ಹೊರೆಯುವ, ತನುವನ್ನು ತಣಿಸಿಕೊಳ್ಳುವ ಪ್ರಾಣಿಯಲ್ಲವಷ್ಟೆ? ಸೌಂದರ್ಯಕ್ಕೆ ಮಿಡಿಯುವ, ಭಾವವಶನಾಗುವ ಅತಿಶಯ ಗುಣವೂ ಅವನಿಗೆ ಜನ್ಮದತ್ತವಾಗಿ ಪ್ರಾಪ್ತವಾಗಿರುತ್ತದೆ. ಚಹ ಕಾಫಿ ಕುಡಿಯುವ ಬಟ್ಟಲು-ಬಸಿಗಳ ಮೇಲೆ ಚೆಲುವಾದ ಚಿತ್ತಾರವಿರುವುದನ್ನು ಅವನು ಮೆಚ್ಚುತ್ತಾನೆ; ಅದರಿಂದ ಹರ್ಷಗೊಳ್ಳುತ್ತಾನೆ. ಹೊದಿಕೆ, ತಲೆದಿಂಬು, ಮೇಜಿನ ಮೇಲೆ ಹಾಸುವ ಬಟ್ಟೆ ಇತ್ಯಾದಿಗಳ ಮೇಲೂ ಸಾಮಾನ್ಯ ದೃಷ್ಟಿಯಿಂದ ಪ್ರಯೋಜನವಿಲ್ಲವೆನ್ನುವಂತಹ కుమరి ಕೆಲಸವನ್ನು ಮಾಡಿಸಿರುತ್ತಾನೆ. ಮನೆಯ ಕಟ್ಟಡದ ರಕ್ಷಣೆಯ ಮುಖ್ಯೋದ್ದೇಶವುಳ್ಳ ಬೆಳ್ಳಗಿನ ಬೋಳು ಗೋಡೆಗಳ ಮೇಲೆ ಬಣ್ಣ ಬಣ್ಣದ ಪಠಗಳನ್ನು, ಭಾವಚಿತ್ರಗಳನ್ನು, ದಿನಸೂಚಿಯನ್ನು ತೂಗುಹಾಕಿರುತ್ತಾನೆ.
ಇವೆಲ್ಲವೂ ಹಸಿವೆಯನ್ನು ಮರೆಸಿ ತುತ್ತಿನ ಚೀಲವನ್ನು ಭರ್ತಿ ಮಾಡುತ್ತವೆಯೆ? ಬಟ್ಟೆಯಂತೆ ಮೈ ಮುಚ್ಚುತ್ತವೆಯೆ? ಹಾಗಿದ್ದರೆ ಇಂಥವೆಲ್ಲ ಏಕೆ ಬೇಕು? ದೈಹಿಕ ಅಗತ್ಯಗಳ ಈಡೇರಿಕೆಯ ಜೊತೆಯಲ್ಲೇ ಹೃನ್ಮನಗಳನ್ನು ಸಂತೈಸ ಬೇಕಾದ, ಸಂತೋಷಗೊಳಿಸಬೇಕಾದ ಒಂದು ಕರ್ತವ್ಯವೂ ಮನುಷ್ಯನಿಗಿರುತ್ತದೆ. ಸೌಂದರ್ಯದ ಅನುಸಂಧಾನ, ಕಲಾನುಭವಗಳ ಮೂಲಕ ಇದು ಸಾಧ್ಯವಾಗುತ್ತದೆ. ಹೀಗಾಗಿ, ಪ್ರಯೋಜನದ ದೃಷ್ಟಿಯ ಅಕ್ಷದ ಮೇಲೆ ಮನುಷ್ಯ ಜೀವಿತ ಅಂತರ್ಯದ ತಣಿವಿನ ಕಡೆಗೂ ಅದು ತಿರುಗುತ್ತಿದ್ದರೂ ಆಗಿಂದಾಗ್ಗೆ ತುಡಿಯುತ್ತಿರುತ್ತದೆ, ಹೋಲುತ್ತಿರುತ್ತದೆ.
ಆಯಾ ಸಮಯದ ಉಪಯೋಗ, ಲಾಭ, ಖುಷಿ, ಮೋಜುಗಳಿಗಿಂತ ದೀರ್ಘಕಾಲಿಕವಾದ ಒಳಿತು, ಹಿತ, ಶ್ರೇಯಸ್ಸು ಹೆಚ್ಚು ಅಪೇಕ್ಷಣೀಯವೆನ್ನಿಸುತ್ತದೆ. ದುರ್ದೈವವೆಂದರೆ, ಇಂದಿನ ಪ್ರಗತಿಮುಖಿಯಾದ ಯಾಂತ್ರಿಕ ಜೀವನದಲ್ಲಿ ಇಂಥ ಸನ್ಮಲ್ಯ ಹೆಚ್ಚು ಮಾನ್ಯತೆಯನ್ನು ಪಡೆಯದಿರುವುದು. ಇಂದಿನವರಿಗೆ ಸಕಲವೂ ಅತಿ ಸುಲಭವಾಗಿ, ಬಲು ಬೇಗನೆ ಕೈ ಹತ್ತಿ ಬಿಡಬೇಕು. ಕಾಯಲು ವ್ಯವಧಾನ, ತಾಳ್ಮೆಯಿಲ್ಲ. ತಲುಪಿಸಲು ಸೌಕರ್ಯಗಳನ್ನು ಮನೆ ಹೊಸ್ತಿಲಿಗೆ ಒಂದಾದಮೇಲೊಂದರಂತೆ ಅನೇಕಾನೇಕ ಹೊಸ ವೈಜ್ಞಾನಿಕ ತಾಂತ್ರಿಕ ಆವಿಷ್ಕಾರಗಳು
ಹೊಯ್ಯಯ್ಯಾಗಿ ಹುರುಡು ನಡೆಸಿ ಹೆಣಗುತ್ತಿವೆ. ಆಗಾಗಿನ ಬಳಕೆಗೆ ಬಾರದ ವಸ್ತುಗಳು ನಿರರ್ಥಕ, ವರ್ಜವೆನ್ನುವ ಭಾವನೆಯನ್ನು ಸಮುದಾಯದಲ್ಲಿ ಬೇರಿಳಿಸುತ್ತಿವೆ.
ಕಂಗೆಟ್ಟಿರುವಾಗ ದೀರ್ಘಾವಧಿಯ ಪ್ರಯತ್ನ, ಪರಿಸ್ಥಿತಿ ಪರಿಶ್ರಮಗಳಿಂದ ಪ್ರಾಪ್ತಿಸುವ ಸಾರ್ಥಕ್ಯದ ನೆಲೆಯನ್ನು ಮನುಷ್ಯ ಹೇಗೆ ತಾನೆ ತಲಪಿಯಾನು? ಐದಾರು ದಶಕಗಳ ಮುಂಚಿನ ರಾಷ್ಟ್ರ ಜೀವನದಲ್ಲಿ ಸಾರ್ವತ್ರಿಕವಾಗಿ ಕಳಕಳಿಸಿದ್ದ ಧೈಯೋತ್ಸಾಹ, ಆದರ್ಶ ಸಂಕಲ್ಪ; ತತ್ಕ್ಷಣದ ಪ್ರಯೋಜನೈಕ ಧೋರಣೆಯನ್ನು ಬದಿಗಿರಿಸಿ ಮೆರೆದಿದ್ದ ಅಭ್ಯುದಯಾಕಾಂಕ್ಷೆ ಇವೊತ್ತು ರಾಜಕೀಯ మత్తు ಸಾಮಾಜಿಕ ಕಾಡುಪಾಲಾಗಿರುವುದು ದೈನಂದಿನ ವಿದ್ಯಮಾನಗಳನ್ನು ಗಮನಿಸಿದಾಗ ಚೆನ್ನಾಗಿ ಮನದಟ್ಟಾಗುತ್ತದೆ. ಮಿಕ್ಕೆಲ್ಲ ಮರಗಿಡ ಬಳ್ಳಿಗಳಿಗಿಂತ ಕೊಂಚ ಅತಿಯೆನ್ನಿಸಿರುವ ತೆಂಗಿನ ಮರಗಳ ಬಗೆಗೆ ಪಟ್ಟಣಿಗರ ಮನಸ್ಸು ಯಾಕೆ ಸೋತಿದೆ ಎನ್ನುವುದಕ್ಕೆ ವಿವರಣೆ ಇಂದಿನ ಜೀವಿತದ ರೀತಿನೀತಿಗಳಲ್ಲಿ ಅಡಗಿದೆ.
ನನ್ನ ಚಿಕ್ಕಂದಿನಲ್ಲಿ, ಅಂದರೆ ನಾನು ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಓದುತ್ತಿದ್ದ ನಲವತ್ತರ ದಶಕದಲ್ಲಿ, ಬೆಂಗಳೂರಿನ ಆಗಿನ ಪರಿಮಿತ ಬಡಾವಣೆಗಳಲ್ಲಿ ಇವೊತ್ತಿನಂತೆ ತೆಂಗಿನ ಮರಗಳನ್ನು ಈ ಪಾಟಿ ಬೆಳಸುತ್ತಿರಲಿಲ್ಲ. ಹೀಗೆಂದರೆ, ತೆಂಗಿಗೆ ಪ್ರಾಶಸ್ತವೇ ಇರಲಿಲ್ಲ ಎಂದಲ್ಲ; ನಗಣ್ಯವಲ್ಲದಿದ್ದರೂ ಅನೇಕ ವಿಧದ ತರುಲತೆಗಳ ಜೊತೆಗೆ ಇದೂ ಒಂದಾಗಿತ್ತು. ಈ ಕಾರಣಕ್ಕೆ ನಗರ ಪರಿಸರಕ್ಕೆ ಒಂದು ಬಗೆಯ ಸಮರಸತೆಯ, ಅನುರೂಪ್ಯದ ಹೆಚ್ಚುಗಾರಿಕೆ ಲಭಿಸಿತ್ತು; 'ಉದ್ಯಾನ ನಗರಿ'ಯೆಂಬ ಹೊಗಳಿಕೆ ಕೃತಾರ್ಥವೆನ್ನಿಸಿತ್ತು.
ನಗರದ ನಡುವೆ ಹಾಗೂ ಉಪಾಂತ ಪ್ರದೇಶ (Suburbs) ಗಳಲ್ಲಿ ತೆಂಗಿನ ಬೆಳೆಗಾಗಿಯೇ ಪ್ರತ್ಯೇಕ ತೋಟಗಳು ಇದ್ದವು. ಬಸವನಗುಡಿ, ವಿಶ್ವೇಶ್ವರಪುರ, ಶಂಕರಪುರ, ಚಾಮರಾಜಪೇಟೆ, ಮಲ್ಲೇಶ್ವರಗಳಂಥ ಮುದಿ ಮುತ್ತೈದೆ ಬಡಾವಣೆಗಳ ದೊಡ್ಡ ಬಂಗಲೆಗಳ ಮುಂಭಾಗ ಹಿಂಭಾಗಗಳಲ್ಲಿ ಆಗ ಕಾಡು ಬಾದಾಮಿ, ಸಂಪಿಗೆ, ಮಾವು, ಪೇರಲೆ, ನೇರಳೆ ಮೊದಲಾದ ಮರಗಳೂ; ನಿತ್ಯೋಪಯೋಗಿಯೆನ್ನಿಸದ ವಿಲಾಯತಿ ವೃಕ್ಷಗಳೂ; ಹೂವುಗಳ ಗಿಡ ಬಳ್ಳಿಗಳೂ ಕಣ್ಮನಗಳನ್ನು ಸೆಳೆಯುತ್ತಿದ್ದವು. ಇದಲ್ಲದೆ, ಸಾಮಾನ್ಯ ಸಂಸಾರಸ್ಥರ ವಿಸ್ತರಣೆಗಳೆನ್ನಿಸಿಕೊಂಡಿದ್ದ ಮಾವಳ್ಳಿ, ಗವೀಪುರ ಗುಟ್ಟಹಳ್ಳಿ, ಕಲಾಸಿಪಾಳ್ಯ, ಕೊರಚರ ಪಾಳ್ಯ (ಈಗಿನ ಪಾರ್ವತಿಪುರ), ಜಾಲಿ ಮೊಹಲ್ಲಗಳ ಮನೆಯ ಹಿತ್ತಲುಗಳಲ್ಲಿ ನುಗ್ಗೆ, ದಾಳಿಂಬೆ, ಪನ್ನೇರಳೆ, ಪರಂಗಿ ಗಿಡಗಳು ನಿತ್ಯದ ನೋಟವಾಗಿದ್ದವು.
ಇನ್ನು, ದಂಡು ಪ್ರದೇಶದ ಆ ಕಾಲದ ವೃಕ್ಷ ಸಮೃದ್ಧಿ, ವೈವಿಧ್ಯಗಳ ಬಗೆಗೆ ಯಾರಾದರೂ ಸಂಶೋಧನೆ ಕೈಕೊಂಡರೆ, ಒಂದು ಸ್ವಾರಸ್ಯಕರವೂ ಉಪಯುಕ್ತವೂ ಆದ ಹೊತ್ತಗೆ ಹೊರಬಂದೀತು. ಆಂಗ್ಲರ ಮರಗಿಡಗಳನ್ನು ಬೆಳೆಸುವುದರ ಬಗೆಗಿನ ಶ್ರದ್ಧಾಸಕ್ತಿ, ಸೌಂದರ್ಯಪ್ರಜ್ಞೆ, ಸ್ವಚ್ಛತಾ ಪ್ರೀತಿ ಅನುಪಮವಾದದ್ದು. ಲ್ಯಾಂಗ್ಫರ್ಡ್ ಟೌನ್, ಆಸ್ಟಿನ್ ಟೌನ್, ಪ್ರೇಜರ್ ಟೌನ್, ಇನ್ಫೆಂಟ್ರಿ ರಸ್ತೆ, ಕನ್ನಿಂಗ್ ಹ್ಯಾಂ ರಸ್ತೆ, ಸೈಂಟ್ ಮಾರ್ಕ್ಸ್ ರಸ್ತೆ, ರೆಸಿಡೆನ್ಸಿ ರಸ್ತೆ ಮುಂತಾದವುಗಳಲ್ಲಿ ಹಾಗೂ ಆಸುಪಾಸಿನಲ್ಲಿ ಇದ್ದ ಬಿಳಿಯರ ಸುವಿಶಾಲ ವಿಲ್ಲಾಗಳಲ್ಲಿ ಸುಮಾರು ಹತ್ತಿಪ್ಪತ್ತು ವರ್ಷಗಳ ಹಿಂದಿನವರೆಗೆ ಮೆರೆದಿದ್ದ ಅಪರೂಪದ ದಡೂತಿ ವೃಕ್ಷಗಳಾಗಲಿ, ಅಲಂಕಾರದ ಹೂವುಗಳ ಗಿಡ ಬಳ್ಳಿಗಳಾಗಲಿ ಈಗ ಹೇಳಹೆಸರಿಲ್ಲದೆ ಹುಟ್ಟಡಗಿ ಹೋಗಿವೆ.
ಎಡೆಗಳಲ್ಲಿ ಕಾಂಕ್ರೀಟ್ ರೂಪಿ ಕಬಂಧ, ವಿರಾಧ ವಿಕೃತ ರಾಕ್ಷಸಾಕೃತಿಗಳು ಕಣ್ಣೀನೆ ತರಿಸುವಂತೆ ಎತ್ತರಕ್ಕೆ ಸೆಟೆದು ನಿಂತಿವೆ. ಅಂದಿನ ಬಂಗಲೆಗಳಲ್ಲಿ, ಕೊಂಚ ಅನುಕೂಲಸ್ಥರೆನ್ನಿಸಿಕೊಂಡವರ ನಿವಾಸಗಳಲ್ಲಿ ಹಸುರು ಉಕ್ಕಿಸಿದ್ದ ತರುಗಳಿಂದ ಬಗೆಬಗೆಯ ಪಕ್ಷಿಗಳ ಕಲರವವನ್ನು ಹಾದಿಗ ಪದೇ ಪದೇ ಕೇಳಬಹುದಿತ್ತು; ಆ ಜೇನ್ಸವಿಯ ಎರೆತದಿಂದ ಹಿಗ್ಗಬಹುದಿತ್ತು. ಈಗ, ನಮ್ಮ ಕಾಲಧರ್ಮದ ಹಾಗೆ, ಎಲ್ಲವೂ ಭಣ ಭಣ, ರಿಕ್ತ,
ಈಗಿನ ಕಾಲದಲ್ಲಿ ಬೆಂಗಳೂರಿನಲ್ಲಿ ಮನೆ ಕಟ್ಟಿ ವಾಸಿಸುವುದು ಪ್ರಾಮಾಣಿಕ ಬದುಕನ್ನು ಸಾಗಿಸುವ ಯಾರಿಗೇ ಆಗಲಿ ಒಂದು ಮಹತ್ಸಾಹಸವೇ ಸರಿ. ತಮ್ಮಪಾಲಿಗೆ ಅದೃಷ್ಟವಶಾತ್ ಕೈ ವಶವಾದ ಕಿಷ್ಕಂಧೆಯಲ್ಲಿ ಮರ ಬೆಳೆಸುವುದಕ್ಕಿಂತ ಅಂಗಡಿಗಳನ್ನು ಕಟ್ಟಿಸುವುದು ಸಾಧ್ಯವೇ? ಎಂದು ಹಲವರ ಎಣಿಕೆ. ಈಗ ಅನೇಕ ಕಡೆ ರಸ್ತೆ, ಹಾದಿ, ಗಲ್ಲಿಗಳೆನ್ನದೆ ಇಬ್ಬದಿಯ ಉದ್ದಕ್ಕೂ ಅಂಗಡಿ ಸಾಲುಗಳ ಭರಾಟೆಯೇ. ಮನೆಯ ಮುಂಭಾಗ ಅದಕ್ಕೆ ಮೀಸಲು. ಅದರ ಹಿಂದಕ್ಕೆ ವಾಸಿಸುವ ಗೂಡು. ಹಿಂದಿನ ಹಿತ್ತಿಲು, ಹೊರ ಮನೆ ಅಥವಾ ಔಟ್ ಹೌಸ್ನ ಸ್ವತ್ತು, ಒಂದೆರಡು ಗಿಡಮರ ಬೆಳಸುವುದಕ್ಕಿಂತ ಆ ಎಡೆಯಲ್ಲಿ ಬಾಡಿಗೆ ಗಳಿಸುವುದು ಮೇಲಲ್ಲವೆ? ಇದೊಂದು ಪೈಪೋಟಿಯಂತೆ ಅನೇಕರನ್ನು ಹುರಿದುಂಬಿಸಿದೆ. ಹೀಗಿರುವಾಗ ಸಸ್ಯ ಪ್ರೀತಿ ಕೊನರುವುದು ಹೇಗೆ?
ನಾನು ಕಾಲೇಜಿನಲ್ಲಿ ಓದುತ್ತಿದ್ದ ಕಾಲದಲ್ಲಿ, ಅಂದರೆ, ಐವತ್ತರ ದಶಕದಲ್ಲಿ ಬಸವನಗುಡಿಯ ನ್ಯಾಷನಲ್ ಕಾಲೇಜಿನಿಂದ ಹಿಡಿದು ಕೋಟೆ ಪ್ರೌಢಶಾಲೆಯವರೆಗೆ ಏಕೂ ಬೃಹದ್ಗಾತ್ರದ ಉತ್ತುಂಗ ವೃಕ್ಷಗಳು ರಸ್ತೆಯಿಕ್ಕೆಲದಲ್ಲಿ ಬ್ರಾಬ್ಲಿಂಗ್ನ್ಯಾಗ್ ಕೋಟೆಯ ಕಾವಲು ಭಟರಂತೆ ಎದೆ ಸೆಟೆದು ಮೆರೆದಿದ್ದವು. ಈಗ ಅವು ಅಲ್ಲಿದ್ದವೆಂಬುದಕ್ಕೆ ತಿಲಮಾತ್ರ ಸುಳಿವೂ ಕಾಣಿಸದು. ಹಾಗೆಯೇ, ಲಾಲ್ಬಾಗಿನ ಪಶ್ಚಿಮ ದ್ವಾರದ ಎದುರಿನ ರಸ್ತೆ ಗುಲ್ಮೊಹರ್ ಮರಗಳಿಂದ ಥಿಯೋಸಾಫಿಕಲ್
ಕಂಗೊಳಿಸುತ್ತಿದ್ದುದನ್ನು ಲಾಡ್ಜ್ ಇರುವ ಡಯಾನಗಲ್ ರಸ್ತೆ ಸೈಂಧವ ವೃಕ್ಷಗಳಿಂದ ಈಗ ನೆನೆದರೆ ಮನಸ್ಸು ಮುದಗೊಳ್ಳುತ್ತದೆ. ವಿ.ಸೀ. ಅವರ 'ಕೆಂಪುವೂ ಸಾಲ್ಕರನ ದಾರಿಯಲಿ' ಎನ್ನುವ ಖ್ಯಾತ ಪದ್ಯಕ್ಕೆ ಸ್ಫೂರ್ತಿ ಈ ಗುಲ್ಮೊಹರ್ ತರುಗಳೇ.
ವನಸ್ಪತಿಯ ದಟ್ಟತೆಯ ಕಾರಣ ಆಗಿನ ಬೆಂಗಳೂರಿನ ಹವೆ, ನಡು ಬೇಸಗೆಯಲ್ಲೂ ಆಪ್ಯಾಯಮಾನವೆನ್ನಿಸುವಂತಿತ್ತು. ಈಗ, ಈ ಷಹರಿನ ಹವಾಮಾನ ತಿಕ್ಕಲು ತಿಕ್ಕಲಾಗಿ ವರ್ತಿಸುತ್ತಿದೆ. ಸಕಾಲದಲ್ಲಿ ಸರಿಯಾದ ಮಳೆಯಿಲ್ಲ. ಎಲ್ಲ ತಿಂಗಳುಗಳೂ ಬೇಸಿಗೆಯ ಸಂಬಂಧಿಗಳಂತೆ, ಬಡಾವಣೆಗಳಂತೆ ಧಗೆಯನ್ನು ಕಕ್ಕುವಂಥವೇ.
ಮರಗಿಡಗಳು ಇರುವುದು ಕೇವಲ ಮನುಷ್ಯನ ಅನುಕೂಲ, ಲಾಭಗಳಿಗೆ ಎನ್ನುವ ನಮ್ಮ ಜನಗಳ ಧೋರಣೆ ಹಾಗೂ ಸಾರ್ವತ್ರಿಕ ನಿಲವು ಬದಲಾಗಬೇಕಿದೆ. ಅವು ಬೆಟ್ಟ ಗುಡ್ಡ ನದಿ ಸರೋವರ ಸಾಗರಗಳಂತೆ ಪ್ರಕೃತಿಯ ಅವಿಭಾಜ್ಯ ಅಂಗೋಪಾಂಗಗಳು, ಮೂಲಭೂತ ಅನಿವಾರ್ಯಗಳು, ಅವುಗಳು ಊನಗೊಂಡರೆ, ಪ್ರಕೃತಿಯ ಕೂಸಾದ ಮಾನವನ ಬಾಳಿಗೆ ಧಕ್ಕೆಯೊದಗುತ್ತದೆ ಎನ್ನುವ ತಥ್ಯ ಸಾಮಾಜಿಕರಲ್ಲಿ ಬೇರೂರಬೇಕು. ಉರವಲು, ಮರಮುಟ್ಟು, ಹೂ ಕಾಯಿ ಹಣ್ಣುಗಳನ್ನು ಮನುಷ್ಯರಿಗೆ ಸದಾ ಕಾಲಕ್ಕೂ ಸರಬರಾಜಿಸಲೆಂದು ಸಸ್ಯ ಸಂತತಿ ಅಸ್ತಿತ್ವದಲ್ಲಿಲ್ಲ. ಅದೊಂದು ಉಪೋತ್ಪನ್ನವಷ್ಟೇ.
ಮರ ಗಿಡಲತೆಗಳಿಗೆ ವ್ಯಕ್ತಿಗತ ಬೆಲೆಯನ್ನು ತೊಡಿಸುವವರು ನಾವು ಮನುಷ್ಯರೇ ವಿನಾ ಪ್ರಕೃತಿಯಲ್ಲ. ಜಗತ್ತಿನ ಹಲವು ರಹಸ್ಯಗಳಂತೆ ಸಸ್ಯಗಳ ಅಸ್ತಿತ್ವ, ವೈವಿಧ್ಯ, ಋತುವಿಧೇಯ ಪ್ರವೃತ್ತಿ ಸಹ ಇಂದಿಗೂ ಕಗ್ಗಂಟು. ನಾವು ಕಟ್ಟುವ ಲೌಕಿಕವಾದ ರೂಪಾಯಿ, ಪೈಸೆಗಳ ಬೆಲೆ ಮುಟ್ಟಲಾರದಷ್ಟು ಎತ್ತರದಲ್ಲಿದೆ ಅವುಗಳ ನಿಜವಾದ ಮೌಲ್ಯ. ಅವು ಭೂದೃಶ್ಯಕ್ಕೆ ತುಂಬು ಕಳೆ, ಲವಲವಿಕೆ, ಮೂರ್ತ ಆಕಾರ ನೀಡುವ ಭುವನ ಕವಿಯ ಕಲಾಕೃತಿಗಳು, ಹಲವು ಬಗೆಯ ಜೀವ ರಾಶಿಗೆ ಉಣಿಸು, ನೆಲೆ ನೀಡಿ ಅವು ಪೊರೆಯುವುದಲ್ಲದೆ, ಪರಿಸರದ ಹದಗೆಡದಂತೆ ಕಾಪಿಡುವ ಮಹೋಪಕಾರಿಗಳು. ಮಳೆ ಬೆಳೆ ಸುಭಿಕ್ಷೆಗಳು, ರೋಗ ಸಮತೋಲನವನ್ನು ರುಜಿನಾದಿಗಳ ಮದ್ದುಗಳು, ಹವೆಯನ್ನು ಶುದ್ಧಗೊಳಿಸಿ ನಮ್ಮಪ್ರಾಣಗಳಿಗೆ ಊಡುವ ನೈಸರ್ಗಿಕ ಸೋಸಣಿಗೆಗಳು ಈ ಸಸ್ಯ ಲೋಕದ ಸೋಜಿಗಗಳು.
ಒಂದು ಕಡೆ ಅವುಗಳನ್ನು ಪುಷ್ಕಳವಾಗಿ ಬೆಳಸುವ, ಮತ್ತೊಂದೆಡೆ ಅವುಗಳ ನಾಶವನ್ನು ತಡೆಗಟ್ಟುವ ವ್ಯಾಪಕ ಚಳುವಳಿ ಇಂದು ಅಗತ್ಯವಿದೆ. ಆ ಕೆಲಸವನ್ನು ಕೆಲವು ಪ್ರಜ್ಞಾಶಾಲಿ ಪರಿಸರ ಪ್ರಿಯರು ಈಗಾಗಲೇ ಪ್ರಾರಂಭಿಸಿದ್ದಾರೆ. ಅವರ ಕೈಯನ್ನು ಬಲಪಡಿಸುವಂತೆ ಮಹಾ ಜನತೆ ಸಹಕರಿಸುವುದೊಂದೇ ಈಗ ಉಳಿದಿರುವ ಉಪಾಯ. ಮನುಷ್ಯನ ಮರಗಡುಗ ಬುದ್ದಿಗೆ, ರಾಜಕೀಯಪ್ರೇರಿತ
ಕೈಗಾರಿಕೋದ್ಯಮಗಳ ಸ್ಥಾಪನೆಗೆ ಈಗಾಗಲೇ ಅಮೂಲ್ಯ ಸಸ್ಯ ಜಗತ್ತು ಸಾರಾಸಗಟಾಗಿ ಸಫಾಯಿಗೊಂಡಿದೆ. ಇದನ್ನು ಮುಂದಾದರೂ ಮನುಷ್ಯನಿಗೆ ಒದಗಬಹುದಾದ ದುಷ್ಪರಿಣಾಮಗಳ ನಿಮಿತ್ತವಾದರೂ ಇಂಥ ಕೇಡಿಗ ಬುದ್ದಿಗೆ ಕಡಿವಾಣ ಬೀಳಬೇಕು.
ಆದರೆ ನಮ್ಮ ಪ್ರತಿಷ್ಠಿತರೆನ್ನಿಸಿಕೊಂಡವರೇ, ಶಿಕ್ಷಿತರೇ ಅವಿವೇಕದಿಂದ ವರ್ತಿಸುವಾಗ ಇನ್ನು ಜನ ಸಾಮಾನ್ಯರ, ಅಜ್ಞಾನಿಗಳ ಪಾಡೇನು? ಒಂದೆರಡು ನಿದರ್ಶನಗಳು ನಮ್ಮ ಕಣ್ಣು ತೆರೆಸುವಂತಾಗಬೇಕು: ಈಚೆಗೆ ಚಿಕ್ಕಮಗಳೂರಿನ ಔತ್ತರೇಯ ಜಿಲ್ಲಾಧಿಕಾರಿಯೊಬ್ಬರು ತಮ್ಮ ಭವ್ಯ ಸರ್ಕಾರಿ ಬಂಗಲೆಯಲ್ಲಿ ಬೆಳೆದ ಬೃಹತ್ ವೃಕ್ಷಗಳ ಅಂಗೋಪಾಂಗಗಳನ್ನು ಹುಚ್ಚಾ ಪಟ್ಟೆ ಛಿದ್ರಗೊಳಿಸಿ, ಭರಿಸಲಾಗದ ನಷ್ಟವನ್ನು ಉಂಟುಮಾಡಿದರಂತೆ. ಕಾರಣ ಇಷ್ಟೇ: ಅವುಗಳ ಕೆಳಗೆ ನಡೆದಾಡುವಾಗ ಹಕ್ಕಿಗಳ ಹಿಕ್ಕೆ ಬಿದ್ದು ಆ ವ್ಯಕ್ತಿಯ ಪವಿತ್ರ ಶರೀರವನ್ನು ಹೊಲಸುಗೊಳಿಸುವುದು ಮತ್ತು ಪಕ್ಷಿಗಳ ಇಂಚರದ 'ಗದ್ದಲ' ಅವರ ನೆಮ್ಮದಿ, ಏಕಾಗ್ರತೆ ಮತ್ತು ನಿದ್ದೆಗೆ ಭಂಗ ಬರಿಸುವುದು. ಇಂಥವರು ಜಿಲ್ಲೆಯೊಂದರ ಸಂರಕ್ಷಕರು!
ಕಳೆದ ವರ್ಷ (1996) ಪ್ರಧಾನಿಯಾಗಿದ್ದ ಮಹಾನುಭಾವರೊಬ್ಬರು ಗುರ್ಗಾಂವ್ಗೆ ಭೇಟಿ ನೀಡುವ ಕೃಪೆದೋರಿದರು. ಅವರನ್ನು ಹೊತ್ತು ತಂದ ಹೆಲಿಕಾಪ್ಟರ್ ಕ್ಷೇಮವಾಗಿ ಇಳಿಯಲು ಹೆಲಿಪ್ಯಾಡ್ ರಚಿಸಲಾಯಿತು. ಇದರ ಸಲುವಾಗಿ ಕೊಡಲಿಗೆ ಬಲಿಯಾದ ವೃಕ್ಷಗಳ ಸಂಖ್ಯೆ ಒಂದೆರಡಲ್ಲ. ಮುನ್ನೂರು! ಪೊಗದಸ್ತಾಗಿ ಬೆಳೆದು ನಿಂತಿದ್ದ ಆ ತರುಗಳಲ್ಲಿ ಒಂದರ ವಯಸ್ಸು 120 ವರ್ಷಗಳು: ಎರಡು ಬೇವಿನ ಮರಗಳಿಗೆ 60 ವರ್ಷ, ಎಂಬತ್ತು ಶೇಷಾಂ ಮರಗಳು 10 ವರ್ಷದವು. ಇದರ ಜೊತೆಗೆ ಹಲವಾರು ನೀಲಗಿರಿಯ ಮರಗಳೂ ಸೇರಿದ್ದವಂತೆ. ಆಡಳಿತ ವರ್ಗದ ವಿವೇಕರಹಿತ ನಡತೆಗೆ ಇದಕ್ಕಿಂತ ಸಮರ್ಥ ಉದಾಹರಣೆ ಸಿಕ್ಕೇತೆ?
ಇದಕ್ಕೆ ವ್ಯತಿರಿಕ್ತವಾಗಿ ಅವ್ಯಾಜ ವೃಕ್ಷ ಪ್ರೇಮವನ್ನು ತಳೆದು ಸಾರ್ವಜನಿಕರಿಗೆ ಉಪಕಾರ ಮಾಡಿದ ಅನೇಕ ಮಹನೀಯರು ನಮ್ಮ ನಾಡಿನ ಇತಿಹಾಸಕ್ಕೆ ಸಂದುಹೋಗಿದ್ದಾರೆ. ಹಳ್ಳಿ ಪಟ್ಟಣಗಳೆನ್ನದೆ ಹಿರಿಯ ತಲೆಮೊರೆಯ ಹಲವರು ಕೃತಾರ್ಥಕಾರ್ಯವೆಸಗಿ ಪುಣ್ಯ ಕಟ್ಟಿಕೊಂಡಿದ್ದಾರೆ. ತಮ್ಮ ಸ್ವಂತ ಗದ್ದೆ ತೋಟಗಳ ಗೆಯ್ಕೆಯ ಜೊತೆಗೇ ಹಲವು ಬಗೆಯ ತೋಪು, ಕೆರೆಕಟ್ಟೆಗಳನ್ನು ಕಟ್ಟಿಸಿ ಸಮಾಜಕ್ಕೆ ಒಳಿತನ್ನು ಎಸಗಿದ್ದಾರೆ.
ಈ ಶತಕದ ಪೂರ್ವಾರ್ಧದಲ್ಲಿ ಚಿಕ್ಕಬಳ್ಳಾಪುರದ ಗಣ್ಯವ್ಯಕ್ತಿಗಳಾಗಿದ್ದ ದಿವಂಗತ ಕೊಂಗಾಡಿಯಪ್ಪನವರು ಸಮೀಪದ ಊರುಗಳಿಗೆ ನಡೆದುಹೋಗುವಾಗ ಕಿಸೆಯ ಪೂರ್ತಿ ಹೊಂಗೆ ಮತ್ತಿತರ ಸಾರ್ವಜನಿಕ ಉಪಯೋಗದ ಮರಗಿಡಗಳ ಬೀಜಗಳನ್ನು ತುಂಬಿಕೊಂಡು ಹಾದಿಬಿದಿಯಲ್ಲಿ ಹಾಗೂ ಆಯಕಟ್ಟಿನ ಜಾಗಗಳಲ್ಲಿ
ಅವುಗಳನ್ನು ಬಿತ್ತುತ್ತ ಸಾಗುತ್ತಿದ್ದರಂತೆ; ಆಮೇಲೆ ಅದರ ಆರೈಕೆಯನ್ನು ಮಾಡುತ್ತಿದ್ದರಂತೆ. ಅವರ ಕಾಯಕದ ಫಲಿತವಾಗಿ ನೂರಾರು ವೃಕ್ಷಗಳು ಅಸ್ತಿತ್ವಕ್ಕೆ ಬಂದಿದ್ದು, ಈಗಲೂ ಕೆಲವು ಉಳಿದಿವೆಯಂತೆ ಜೀವಂತ ಸಾಕ್ಷಿಗಳಾಗಿ. ಆ ಸಕ್ರಿಯ ನಿಸ್ಪೃಹ ಕಾಯಕಕ್ಕೆ
ಇಂಥ ಈ ಕರ್ಮಯೋಗಿಗಳು ನೆಲದಲ್ಲಿ ಇನ್ನೆಷ್ಟು ಅಜ್ಞಾತ ಆಗಿಹೋಗಿದ್ದಾರೋ ಅಂಥವರ ಸಾಧನೆಗಳನ್ನು ಈಗಿನ ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸುವುದು ಸಾಮಾಜಿಕ ಸಂಶೋಧಕರ ಕರ್ತವ್ಯವಾಗಬೇಕು. ಈಗಲೂ ನಮ್ಮ ಕಣ್ಣೆದುರಿಗೇ ಶೋಭಿಸುತ್ತಿರುವ ಎಪ್ಪತ್ತು ವರ್ಷದ ವೃದ್ಧೆ, ಸಾಲುಮರದ ತಿಮ್ಮಕ್ಕನ ಬಗೆಗೆ ಕೆಲ ಸಮಯದ ಹಿಂದೆ ಪತ್ರಿಕೆಗಳು ಮುಕ್ತವಾಗಿ ಪ್ರಶಂಸಿಸಿ ಬರೆದದ್ದು ನೆನಪಿನಿಂದ ಅಚ್ಚಳಿಯದಿದೆ. ಮಾಗಡಿ ತಾಲ್ಲೂಕಿನ ಹುಲಿಕಲ್ಲು-ಕುದೂರು ರಸ್ತೆಯಲ್ಲಿ ಮೂರು ಕಿಲೋಮೀಟರ್ವರೆಗು ಇಕ್ಕೆಲದಲ್ಲಿ 284 ಆಲದ ಸಸಿಗಳನ್ನು ನೆಟ್ಟು, ನಿತ್ಯ ನೀರು ಹೊತ್ತು ಬೆಳಸಿದ್ದಾಳೆ. ಈಕೆಗೆ ನೆರವು ನೀಡಿದ ಪತಿ ಚಿಕ್ಕಯ್ಯ ಈಗ ದಿವಂಗತ. ಇವರಿಬ್ಬರೂ ಕೂಡಿ ಊರಿನ ಕೆರೆ ಬತ್ತಿದಾಗ, ಕಟ್ಟೆ ಕಟ್ಟಿ ನೀರು ನಿಲ್ಲಿಸಿ ಜನ ಜಾನುವಾರುಗಳಿಗೆ ಉಪಕಾರ ಮಾಡಿದ್ದೂ ಇದೆ. ಜಲ್ಲಿ ಒಡೆಯುವ ಕೆಲಸದ ಈ ಸನ್ನಹಿಳೆಯ ನಾಲ್ಕು ದಶಕಗಳ ಹಿಂದಿನ ಕಾಯಕದಿಂದ ಇವೊತ್ತು ಹಾದಿಗರಿಗೆ ನೆರಳು, ಪಶು ಪಕ್ಷಿಗಳಿಗೆ ಆಹಾರ ದೊರೆತಂತಾಗಿದೆ.
ಮೂರು ತಿಂಗಳಿನ ಹಿಂದೆ ತಿಮ್ಮಕ್ಕ ಮೈಸೂರಿನಲ್ಲಿ ಚಿಣ್ಣರ ಮೇಳವೊಂದರಲ್ಲಿ ಭಾಗವಹಿಸಿದ್ದಳು. ನಾನೂರ ಐವತ್ತಕ್ಕೂ ಮೀರಿದ ಹಸುಳೆಗಳ ಜೊತೆ ನಕ್ಕು ನಲಿಯುತ್ತ ಅವರೊಡನೆ ಗಿಡ ನೆಡುವ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡಳು. ಮಕ್ಕಳು ಅವಳ ಬದುಕಿನ ಬಗೆಗೆ ಕೇಳಿದ ಕೆಲವು ಪ್ರಶ್ನೆಗಳಿಗೆ ಉತ್ತರಿಸುತ್ತ, ಗಡಿಬಿಡಿಯಲ್ಲಿರುವವಳಂತೆ, ಕರ್ತವ್ಯವನ್ನು ಜ್ಞಾಪಿಸಿ ಕೊಂಡವಳಂತೆ, "ನಡೀರ ಓಗಾನ, ಗಿಡಾ ನೆಡಾನ" ಎಂದು ಸರಕ್ಕನೆ ಎದ್ದು ಗುಣಿಗಳ ಕಡೆ ನಡೆದಳಂತೆ. ಆ ಅಜ್ಜಿಯ ಈ ತುಂಬ ಸರಳವಾದರೂ ರಚನಾತ್ಮಕ ಸ್ವರೂಪದ ಮಾತು ಸನ್ಮಂತ್ರದಂತೆ ನಮ್ಮನ್ನೆಲ್ಲ ಎಚ್ಚರಿಸಬೇಕು. ಅದರಲ್ಲೂ 'ಮಾತು ಮಾತು ಮಾತು ಮಾತು / ಮಾತಿನ ಗೈರತ್ತಿನಲ್ಲಿ ಕರಾಮತ್ತು ನಡೆಸುವ' ಆಡಳಿತಗಾರ ಪ್ರಕೃತಿಗಳಿಗೆ 'ಆನೆ ಮಾತಿನ ಮೇಲೆ ಸೊಳ್ಳೆ ಕೃತಿ ಸವಾರಿ'ಯ ಮೆರವಣಿಗೆಯನ್ನು ದೇಶದಾದ್ಯಂತ ಮೆರೆಸುತ್ತಿರುವ ಮಾತಿಗರಿಗೆ ಈ ನುಡಿತ ಕಣ್ಣೆಸುವಂತಾಗಬೇಕು.
ವೇದಿಕೆಯ ಮೇಲಿನಿಂದ ವ್ಯಾಗನ್ನುಗಟ್ಟಲೆ ವಾಗ ವಾಗ್ದಲವನ್ನು ವಿಸರ್ಜಿಸುತ್ತಿದ್ದ ರಾಜಕಾರಣಿಯ ಎದುರು ಮಂತ್ರ ಮುಗ್ಧವಾಗಿ ಮೈ ಮರೆತ ಮಂದಿ ಮೆರೆದಿರುವಾಗ; ಅಷ್ಟೊಂದು ಜನರ ಕಣ್ಣಿಗೆ ಬೀಳದ ಬಾಳೆಯ ಸಿಪ್ಪೆಯನ್ನು, ಗಾಜಿನ ಚೂರನ್ನು ಗಾಂಧಿ ಬಜಾರಿನ ಹಾದಿಯಿಂದ ಆ ಇಳಿ ವಯಸ್ಸಿನಲ್ಲಿ ಬಾಗಿ ಎತ್ತಿ ದೂರ ಎಸೆದು
ಮೌನವಾಗಿ ಸಾಗಿಹೋದ ನಮ್ಮ ಹಿರಿಯ ಲೇಖಕ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅಂಥವರನ್ನು ನೆನೆದಾಗ ಎಂಥ ಧನ್ಯತಾಭಾವನೆ ಮೊಳೆದೇಳುತ್ತದೆ! ಕೃತಿಯಾಗಿ ಪರಿಣಮಿಸಿದ ಮಾತು ಗರ್ಭ ಧರಿಸಿಯೂ ಹೆರಲಾರದ ಪಾತಕ್ಕೆ ಸಮ. ನಿಷ್ಪಲ. ಇಂದು ಇಂಥ 'ಪಾತಕಿ'ಗಳೇ ಕಾಸಿಗೊಬ್ಬರು ಕೊಸರಿಗೊಬ್ಬರು ಎನ್ನುವಂತೆ ಮೆರೆದಿದ್ದಾರೆ.
ಬೆಂಗಳೂರಿನ ಮನೆಗಳಲ್ಲಿ ಇನ್ನಿಲ್ಲದ ವಾಂಥೆಯಿಂದ ಬೆಳಸುತ್ತಿರುವ ತೆಂಗಿನ ಮರಗಳ ಬಗ್ಗೆ ಆಲೋಚಿಸುತ್ತ ವೃಕ್ಷ ರಕ್ಷಣೆ, ಸಂಗೋಪನೆಗಳ ತನಕ ಚಿಂತನೆ ಹಾಯಿಸುವಂತಾಯಿತು. ಇವೊತ್ತು ಈ ವಿಷಯ ಅತಿ ಪ್ರಸ್ತುತವೂ ಹೌದು. ಸುದೈವದಿಂದ ಬೆಂಗಳೂರಿನಲ್ಲಿ ಸುಮಾರು ಇನ್ನೂರ ಇಪ್ಪತ್ತೈದು ಚಿಕ್ಕ ಮತ್ತು ದೊಡ್ಡ ಉದ್ಯಾನಗಳಿವೆಯೆಂದು ಪತ್ರಿಕೆಯಲ್ಲಿ ಓದಿದೆ. ಇದಲ್ಲದೆ, ಸಂಚಾರಿ ವೃತ್ತಗಳಲ್ಲಿ ಸುಮಾರು ಎಂಬತ್ತಕ್ಕೂ ಮೀರಿ ಕಿರಿಯ ಪುಷ್ಪಷ್ಟೋದ್ಯಾನಗಳನ್ನು ನಗರ ಸಭೆ ಅಭಿವೃದ್ಧಿಪಡಿಸಿರುವುದು ಶ್ಲಾಘ್ರವೆನ್ನಿಸುತ್ತದೆ. ಇದರಂತೆಯೇ ನಾಗರಿಕರ ವೃಕ್ಷ ಪ್ರೀತಿ ಕೇವಲ ಬಳಕೆಯ ಧೋರಣೆಯಿಂದ ಪ್ರೇರಿತವಾಗದೆ ಶುದ್ಧ ಸೌಂದರ್ಯ, ಅಲಂಕಾರದ ದೃಷ್ಟಿ, ಕಲಾವಂತಿಕೆಗಳನ್ನು ಮೈಗೂಡಿಸಿಕೊಳ್ಳಲೆಂದು ಆಶಿಸೋಣ. ಮರಗಿಡಗಳ ಮುಖೇನ ಉತ್ಪನ್ನಗೊಳಿಸುವ ವಸ್ತುಗಳನ್ನು ಪರ್ಯಾಯ ಮಾಧ್ಯಮಗಳಿಂದ ಪಡೆಯುವ ವಿಧಾನಗಳನ್ನು ಅರಸೋಣ.
ಈ ನಿಟ್ಟಿನಲ್ಲಿ, ತ್ಯಾಜ್ಯ ಕಾಗದಗಳನ್ನು ಮರು ಬಳಕೆ ಮಾಡುವುದರ ಮೂಲಕ ಕಾಡುಗಳ ನಾಶವನ್ನು ತಹಬಂದಿಗೆ ತರುವ ಉಪಾಯವನ್ನು ಪರಿಸರವಾದಿಗಳು ಸೂಚಿಸಿದ್ದಾರೆ. ಅವರ ಪ್ರಕಾರ ರಾಜಧಾನಿ ದೆಹಲಿಯಲ್ಲೇ ರದ್ದಿ ಕಾಗದವನ್ನು ಪುನಃ ಬಳಸಿ ಪ್ರತಿ ತಿಂಗಳೂ ಒಂಬೈನೂರು ಟನ್ ಹೊಸ ಕಾಗದವನ್ನು ಉತ್ಪತ್ತಿ ಮಾಡಬಹುದು. ಇದರಿಂದ ಹದಿನೈದು ಸಹಸ್ರ ಮರಗಳ ಕಡಿಯುವಿಕೆಯನ್ನು ಸಂರಕ್ಷಿಸಬಹುದು. ಒಂದು ಟನ್ ಕಾಗದದ ಉತ್ಪಾದನೆಗೆ ಹದಿನೇಳು ವೃಕ್ಷಗಳನ್ನು ಬಲಿಗೊಡಬೇಕಾಗುತ್ತದೆ. ದೇಶದ ಕಾಗದದ ಬೇಡಿಕೆಯನ್ನು ಈಡೇರಿಸಲು ಈಗ ಕಡಿಯುತ್ತಿರುವ ಎಂಬತ್ತೈದು ಲಕ್ಷ ಮರಗಳನ್ನು ಈ ಮರು ಬಳಕೆಯ ವಿಧಾನದ ಮೂಲಕ ರಕ್ಷಿಸಬಹುದು.
ಪ್ರಾಪ್ತಿಯ ಬಂಗಾರದೊಸಗೆಯನ್ನು ಸಡಗರದಿಂದ ಆಚರಿಸುತ್ತಿರುವ ರಾಷ್ಟ್ರಕರು ಈತನಕದ ಆಗು-ಹೋಗು, ಗಳಿಕೆ-ನಷ್ಟ, ಸಾಧನೆ-ವೈಫಲ್ಯಗಳನ್ನು ಕುರಿತು ಪರ್ಯಾಲೋಚಿಸುವಾಗ ಪ್ರಕೃತಿಯ ಪ್ರಾಥಮಿಕ ಘಟಕಗಳೂ ಪರಿಸರ ನಿಯಂತ್ರಕಗಳೂ ಆದ ಸಸ್ಯ ಸಂತತಿಯ ಭವಿಷ್ಯದ ಉಳಿವಿನ ಬಗೆಗೆ ಆದ್ಯ ಗಮನ ಹರಿಸುವಂತಾಗಲಿ.
ಸಂಭಾವ್ಯ ಪ್ರಶ್ನೆಗಳು ಮತ್ತು ಉತ್ತರ:
೧. ಪ್ರಗತಿ, ನಾಗರಿಕತೆಗಳು ಪರಿಸರಕ್ಕೆ ಹೇಗೆ ಹಾನಿ ಉಂಟುಮಾಡಿವೆ? ವಿವರಿಸಿ.
ಪ್ರಗತಿ ಮತ್ತು ನಾಗರಿಕತೆಯ ಹೆಸರಿನಲ್ಲಿ ನಗರಗಳ ವಿಸ್ತರಣೆ ಹೆಚ್ಚಾಗಿ ಪರಿಸರಕ್ಕೆ ಅಪಾರ ಹಾನಿಯಾಗಿದೆ. ಹಿಂದೆ ಇದ್ದ **ಕೆರೆ, ಗುಡ್ಡ, ಹಳ್ಳ-ಕೊಳ್ಳ, ಬಯಲು, ಹೊಲ-ತೋಟ ಮುಂತಾದ ಹಸಿರು ಪ್ರದೇಶಗಳು ನಿವೇಶನಗಳಾಗಿ ಮತ್ತು ಕಟ್ಟಡಗಳಾಗಿ ಪರಿವರ್ತನೆಯಾಗಿವೆ.** ರಸ್ತೆಗಳು, ವಾಹನಗಳು, ಪೆಟ್ರೋಲ್ ಬಂಕ್ಗಳು, ಗ್ಯಾರೇಜ್ಗಳು ಮತ್ತು ಅಂಗಡಿಗಳು ಹೆಚ್ಚಾಗುವುದರಿಂದ **ಸಂಚಾರ ದಟ್ಟಣೆ, ಹೊಗೆ, ಧೂಳು ಹಾಗೂ ಶಬ್ದ ಮಾಲಿನ್ಯ** ಉಂಟಾಗಿದೆ.
ಅಲ್ಲದೆ, ಕಟ್ಟಡಗಳು ಮತ್ತು ಕೈಗಾರಿಕೆಗಳ ನಿರ್ಮಾಣಕ್ಕಾಗಿ ಅನೇಕ ಮರಗಳನ್ನು ಕಡಿದುಹಾಕಲಾಗಿದೆ. ಇದರಿಂದ **ಹಸಿರು ಪ್ರದೇಶಗಳು ಕಡಿಮೆಯಾಗಿ, ಪಕ್ಷಿ-ಪ್ರಾಣಿಗಳಿಗೆ ವಾಸಸ್ಥಾನ ನಾಶವಾಗಿದೆ.** ಮರಗಳ ಸಂಖ್ಯೆ ಕಡಿಮೆಯಾದ ಪರಿಣಾಮ ಹವಾಮಾನದಲ್ಲಿ ಬದಲಾವಣೆ ಉಂಟಾಗಿ, ಮಳೆಯ ಪ್ರಮಾಣ ಮತ್ತು ಸಮಯದಲ್ಲೂ ವ್ಯತ್ಯಾಸ ಕಂಡುಬರುತ್ತಿದೆ. ಹಿಂದೆ ಉದ್ಯಾನನಗರಿಯಾಗಿದ್ದ ಬೆಂಗಳೂರಿನ ನೈಸರ್ಗಿಕ ಸೌಂದರ್ಯ ಮತ್ತು ಆಹ್ಲಾದಕರ ವಾತಾವರಣವೂ ಕುಂದುತ್ತಿದೆ.
ಹೀಗಾಗಿ, **ಪ್ರಗತಿ ಮತ್ತು ನಾಗರಿಕತೆ ಮಾನವನ ಬದುಕಿಗೆ ಸೌಲಭ್ಯಗಳನ್ನು ತಂದರೂ, ಪ್ರಕೃತಿಯ ಸಮತೋಲನವನ್ನು ಕಡೆಗಣಿಸಿದಾಗ ಪರಿಸರ ನಾಶಕ್ಕೆ ಕಾರಣವಾಗುತ್ತದೆ** ಎಂಬುದನ್ನು ಲೇಖಕರು ತಿಳಿಸುತ್ತಾರೆ.
೨. ನಗರಗಳಲ್ಲಿ ವಿಜೃಂಭಿಸುವ ತೆಂಗಿನ ಮರಗಳ ಪೋಷಣೆ ಏಕಪಕ್ಷೀಯ ಪ್ರಾಶಸ್ತ್ಯ ಆಗಿದೆಯೇ? ಚರ್ಚಿಸಿ.
ಹೌದು, ನಗರಗಳಲ್ಲಿ ತೆಂಗಿನ ಮರಗಳ ಪೋಷಣೆಗೆ **ಏಕಪಕ್ಷೀಯ ಪ್ರಾಶಸ್ತ್ಯ** ನೀಡಲಾಗುತ್ತಿದೆ ಎಂದು ಲೇಖಕರು ಅಭಿಪ್ರಾಯಪಡುತ್ತಾರೆ. ಬೆಂಗಳೂರಿನ ಮನೆಗಳ ಕಾಂಪೌಂಡ್ಗಳಲ್ಲಿ ಇತರ ಜಾತಿಯ ಮರಗಿಡಗಳಿಗಿಂತ ತೆಂಗಿನ ಮರಗಳೇ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುತ್ತಿರುವುದು ಇದಕ್ಕೆ ಉದಾಹರಣೆಯಾಗಿದೆ.
ತೆಂಗಿನ ಮರವನ್ನು **ಕಲ್ಪವೃಕ್ಷ**ವೆಂದು ಪರಿಗಣಿಸುವ ಪರಂಪರಾಗತ ನಂಬಿಕೆ ಹಾಗೂ ಅದರ ಕಾಯಿಯಿಂದ ಕೊಬ್ಬರಿ, ಎಣ್ಣೆ ಮುಂತಾದ ನಿತ್ಯೋಪಯೋಗಿ ವಸ್ತುಗಳು ದೊರೆಯುವುದರಿಂದ ಜನರು ಅದನ್ನು ಹೆಚ್ಚು ಬೆಳೆಸಲು ಇಷ್ಟಪಡುತ್ತಾರೆ. ತೆಂಗಿನಕಾಯಿ ಮಾರಾಟದಿಂದ ಸ್ವಲ್ಪ ಆದಾಯವೂ ದೊರೆಯುತ್ತದೆ. ಆದ್ದರಿಂದ ಜನರು ತಮ್ಮ ಸ್ವಪ್ರಯೋಜನದ ದೃಷ್ಟಿಯಿಂದ ತೆಂಗಿನ ಮರಗಳಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ.
ಆದರೆ ಲೇಖಕರ ಪ್ರಕಾರ **ನಗರದ ಪರಿಸರದ ಸೌಂದರ್ಯ ಮತ್ತು ಸಮತೋಲನಕ್ಕೆ ವಿವಿಧ ಜಾತಿಯ ಮರಗಿಡಗಳ ಅಗತ್ಯವಿದೆ.** ಹಿಂದೆ ಬೆಂಗಳೂರಿನಲ್ಲಿ ಮಾವು, ಸಂಪಿಗೆ, ನೇರಳೆ, ಬಾದಾಮಿ, ಪೇರಳೆ, ಹೊಂಗೆ, ಗುಲ್ಮೊಹರ್ ಮುಂತಾದ ವೈವಿಧ್ಯಮಯ ಮರಗಳಿದ್ದವು. ಅವುಗಳಿಂದ ನಗರವು ಹಸಿರಿನಿಂದ ಕೂಡಿದ್ದು, ಪಕ್ಷಿ-ಪ್ರಾಣಿಗಳಿಗೆ ಆಶ್ರಯವೂ ದೊರೆಯುತ್ತಿತ್ತು.
ಹೀಗಾಗಿ **ತೆಂಗಿನ ಮರವನ್ನು ಮಾತ್ರ ಬೆಳೆಸುವುದಕ್ಕಿಂತ ವಿವಿಧ ಜಾತಿಯ ಮರಗಿಡಗಳನ್ನು ಬೆಳೆಸಿ ವೃಕ್ಷ ವೈವಿಧ್ಯವನ್ನು ಕಾಪಾಡಬೇಕು.** ಮರಗಳನ್ನು ಕೇವಲ ಲಾಭದ ದೃಷ್ಟಿಯಿಂದ ನೋಡದೆ, ಅವು ಪ್ರಕೃತಿಯ ಅವಿಭಾಜ್ಯ ಅಂಗಗಳು ಮತ್ತು ಪರಿಸರ ಸಂರಕ್ಷಣೆಯ ಮೂಲಾಧಾರಗಳು ಎಂಬ ಮನೋಭಾವವನ್ನು ಬೆಳೆಸಿಕೊಳ್ಳಬೇಕು.
೩. ತೆಂಗಿನ ಮರಗಳನ್ನು ಬೆಳೆಸುವಲ್ಲಿ ನಗರವಾಸಿಗಳ ಅಭಿಪ್ರಾಯವೇನು?
ನಗರವಾಸಿಗಳು ತೆಂಗಿನ ಮರವನ್ನು **ಕಲ್ಪವೃಕ್ಷ**ವೆಂದು ಭಾವಿಸುತ್ತಾರೆ. ತೆಂಗಿನ ಮರವನ್ನು ಬೆಳೆಸುವುದು ಮಂಗಳಕರ ಮತ್ತು ಶ್ರೇಯಸ್ಕರ ಎಂಬ ಪರಂಪರಾಗತ ನಂಬಿಕೆ ಅವರಲ್ಲಿದೆ. ಇದರ ಜೊತೆಗೆ **ತೆಂಗಿನಕಾಯಿ ದಿನನಿತ್ಯದ ಅಡುಗೆಗೆ ಅಗತ್ಯವಾದ ವಸ್ತುವಾಗಿದ್ದು**, ಅದರ ಬೆಲೆ ಹೆಚ್ಚಾಗಿರುವುದರಿಂದ ಮನೆಯಲ್ಲಿ ಕೆಲವು ತೆಂಗಿನ ಮರಗಳನ್ನು ಬೆಳೆಸಿಕೊಂಡರೆ ಮನೆಯ ಖರ್ಚು ಕಡಿಮೆಯಾಗುತ್ತದೆ ಎಂಬುದು ಅವರ ಅಭಿಪ್ರಾಯ.
ಮರದಿಂದ ದೊರೆಯುವ ತೆಂಗಿನಕಾಯಿಯನ್ನು ಮನೆಯ ಬಳಕೆಗೆ ಉಪಯೋಗಿಸಿ, **ಉಳಿದ ಕಾಯಿಗಳನ್ನು ಮಾರಿ ಸ್ವಲ್ಪ ಆದಾಯವನ್ನೂ ಗಳಿಸಬಹುದು** ಎಂದು ನಗರವಾಸಿಗಳು ಭಾವಿಸುತ್ತಾರೆ. ಹೀಗಾಗಿ ಪರಂಪರೆಯ ನಂಬಿಕೆಯ ಜೊತೆಗೆ ಸ್ವಪ್ರಯೋಜನ ಮತ್ತು ಆರ್ಥಿಕ ಲಾಭದ ದೃಷ್ಟಿಯಿಂದಲೂ ಅವರು ತೆಂಗಿನ ಮರಗಳನ್ನು ಬೆಳೆಸಲು ಹೆಚ್ಚಿನ ಆಸಕ್ತಿ ತೋರುತ್ತಾರೆ.
ಆದರೆ ನಗರಗಳಲ್ಲಿ ಜಾಗದ ಕೊರತೆಯಿಂದ ಇತರ ದೊಡ್ಡ ಮರಗಳನ್ನು ಬೆಳೆಸುವುದಕ್ಕಿಂತ **ಕಡಿಮೆ ಜಾಗದಲ್ಲಿ ಉಪಯೋಗವೂ ಲಾಭವೂ ನೀಡುವ ತೆಂಗಿನ ಮರಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ.
೪. ಲೇಖಕರು ತಿಳಿಸುವ ಸಮರಸತೆಯ ಅನುರೂಪ್ಯ ಪರಿಸರ ಯಾವುದು? ಇಂದು ನಮಗೆ ಇದರ ಅಗತ್ಯವಿದೆಯೇ? ಚರ್ಚಿಸಿ.
ಲೇಖಕರು ತಮ್ಮ ಬಾಲ್ಯದ ಬೆಂಗಳೂರಿನ ಪರಿಸರವನ್ನು **“ಸಮರಸತೆಯ, ಅನುರೂಪ್ಯದ ಪರಿಸರ”** ಎಂದು ವಿವರಿಸುತ್ತಾರೆ. ಆ ಕಾಲದಲ್ಲಿ ನಗರದಲ್ಲಿ ಒಂದೇ ಜಾತಿಯ ಮರಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಇರಲಿಲ್ಲ. **ಮಾವು, ಸಂಪಿಗೆ, ನೇರಳೆ, ಬಾದಾಮಿ, ಪೇರಳೆ, ಹೊಂಗೆ, ನುಗ್ಗೆ, ದಾಳಿಂಬೆ, ಪರಂಗಿ, ಗುಲ್ಮೊಹರ್** ಮುಂತಾದ ವಿವಿಧ ಬಗೆಯ ಮರಗಿಡಗಳು ಮನೆಗಳ ಹಿತ್ತಲು, ಬಡಾವಣೆಗಳು ಮತ್ತು ರಸ್ತೆಬದಿಗಳಲ್ಲಿ ಹೇರಳವಾಗಿದ್ದವು. ಇದರಿಂದ ಬೆಂಗಳೂರಿನ ಪರಿಸರ ಹಸಿರಿನಿಂದ ಕೂಡಿದ್ದು, ಪಕ್ಷಿಗಳ ಕಲರವ ಕೇಳಿಸುತ್ತಿತ್ತು ಮತ್ತು ಹವಾಮಾನವೂ ಆಹ್ಲಾದಕರವಾಗಿತ್ತು. ಇದೇ ವೈವಿಧ್ಯಮಯ ಸಸ್ಯಸಂಪತ್ತಿನಿಂದ ಕೂಡಿದ ಪರಿಸರವನ್ನು ಲೇಖಕರು **ಸಮರಸತೆಯ ಅನುರೂಪ್ಯ ಪರಿಸರ** ಎನ್ನುತ್ತಾರೆ.
**ಇಂತಹ ಪರಿಸರದ ಅಗತ್ಯ ಇಂದು ಇನ್ನಷ್ಟು ಹೆಚ್ಚಾಗಿದೆ.** ನಗರೀಕರಣದಿಂದ ಮರಗಿಡಗಳು ಕಡಿಮೆಯಾಗಿವೆ; ಕಟ್ಟಡಗಳು, ವಾಹನಗಳು, ಹೊಗೆ, ಧೂಳು ಮತ್ತು ಶಬ್ದಮಾಲಿನ್ಯ ಹೆಚ್ಚಾಗಿದೆ. ಪರಿಣಾಮವಾಗಿ ಉಷ್ಣತೆ ಹೆಚ್ಚುತ್ತಿದೆ, ಮಳೆಯ ಕ್ರಮದಲ್ಲಿ ವ್ಯತ್ಯಾಸವಾಗುತ್ತಿದೆ ಹಾಗೂ ಪಕ್ಷಿ-ಪ್ರಾಣಿಗಳ ಆಶ್ರಯ ನಾಶವಾಗುತ್ತಿದೆ.
ಆದ್ದರಿಂದ ನಗರಗಳಲ್ಲಿ ಒಂದೇ ಬಗೆಯ ಮರಗಳನ್ನು ಬೆಳೆಸುವುದಕ್ಕಿಂತ **ವಿವಿಧ ಜಾತಿಯ ಮರಗಿಡಗಳನ್ನು ಬೆಳೆಸಿ ಜೈವಿಕ ವೈವಿಧ್ಯವನ್ನು ಕಾಪಾಡಬೇಕು.** ಮನೆಗಳು, ರಸ್ತೆಬದಿಗಳು, ಉದ್ಯಾನಗಳು ಮತ್ತು ಖಾಲಿ ಜಾಗಗಳಲ್ಲಿ ಮರಗಳನ್ನು ನೆಟ್ಟು ಬೆಳೆಸುವುದರಿಂದ ಪರಿಸರ ಸಮತೋಲನ, ಸೌಂದರ್ಯ ಮತ್ತು ಮಾನವನ ಆರೋಗ್ಯವನ್ನು ಕಾಪಾಡಬಹುದು. ಹೀಗಾಗಿ ಲೇಖಕರು ತಿಳಿಸುವ **ಸಮರಸತೆಯ ಅನುರೂಪ್ಯ ಪರಿಸರ ಇಂದಿನ ಸಮಾಜಕ್ಕೆ ಅತ್ಯಂತ ಅಗತ್ಯವಾಗಿದೆ.
೫. “ಮನೆಗಳ ಔಟ್ಹೌಸ್, ಪಡಸಾಲೆಗಳನ್ನು ಅಂಗಡಿಗಳು ಆಕ್ರಮಿಸುತ್ತವೆ” – ಈ ಮಾತನ್ನು ವಿಶ್ಲೇಷಿಸಿ.
ನಗರಗಳಲ್ಲಿ ಜಾಗದ ಕೊರತೆ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚದಿಂದಾಗಿ ಜನರು ತಮ್ಮ ಮನೆಯ ಪ್ರತಿಯೊಂದು ಜಾಗವನ್ನೂ ಆರ್ಥಿಕ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಹಿಂದೆ ಮನೆಗಳ **ಹಿತ್ತಲು, ಔಟ್ಹೌಸ್, ಪಡಸಾಲೆ ಮತ್ತು ಮುಂಭಾಗಗಳಲ್ಲಿ ಮರಗಿಡಗಳನ್ನು ಬೆಳೆಸಲಾಗುತ್ತಿತ್ತು.** ಆದರೆ ಈಗ ಆ ಜಾಗಗಳನ್ನು ಅಂಗಡಿಗಳು, ಗ್ಯಾರೇಜುಗಳು ಹಾಗೂ ಇತರ ವ್ಯಾಪಾರಿಕ ಉದ್ದೇಶಗಳಿಗೆ ಬಳಸಲಾಗುತ್ತಿದೆ.
ಮನೆಯ ಮುಂಭಾಗವನ್ನು ಅಂಗಡಿಗೆ ಬಾಡಿಗೆಗೆ ನೀಡುವುದರಿಂದ ಆದಾಯ ಬರುತ್ತದೆ. ಹಿತ್ತಲಿನ ಅಥವಾ ಔಟ್ಹೌಸ್ನ ಜಾಗದಲ್ಲಿ ಒಂದೆರಡು ಮರಗಳನ್ನು ಬೆಳೆಸುವುದಕ್ಕಿಂತ ಅದನ್ನು ಬಾಡಿಗೆಗೆ ಕೊಟ್ಟು ಹಣ ಗಳಿಸುವುದೇ ಉತ್ತಮ ಎಂಬುದು ಅನೇಕ ನಗರವಾಸಿಗಳ ಮನೋಭಾವವಾಗಿದೆ. ಹೀಗಾಗಿ **ವೃಕ್ಷಪ್ರೇಮಕ್ಕಿಂತ ಹಣ ಮತ್ತು ಸ್ವಾರ್ಥಕ್ಕೆ ಹೆಚ್ಚಿನ ಪ್ರಾಶಸ್ತ್ಯ** ದೊರೆಯುತ್ತಿದೆ.
ಇದರ ಪರಿಣಾಮವಾಗಿ ಮನೆಗಳ ಸುತ್ತಲಿನ ಹಸಿರು ಪ್ರದೇಶಗಳು ಕಡಿಮೆಯಾಗುತ್ತಿವೆ. ಮರಗಿಡಗಳ ಸಂಖ್ಯೆ ಇಳಿದು **ಪರಿಸರದ ಸೌಂದರ್ಯ, ತಂಪು, ಶುದ್ಧ ಗಾಳಿ ಮತ್ತು ಪಕ್ಷಿಗಳ ಆಶ್ರಯ** ನಾಶವಾಗುತ್ತಿದೆ. ಆದ್ದರಿಂದ ಮನೆಗಳ ಜಾಗವನ್ನು ಕೇವಲ ಆರ್ಥಿಕ ಲಾಭಕ್ಕಾಗಿ ಬಳಸದೆ, ಸಾಧ್ಯವಾದಷ್ಟು **ಮರಗಿಡಗಳನ್ನು ಬೆಳೆಸಿ ಪರಿಸರವನ್ನು ಸಂರಕ್ಷಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು** ಎಂಬುದು ಲೇಖಕರ ಆಶಯವಾಗಿದೆ.
೬. ಪ್ರಕೃತಿಯಲ್ಲಿನ ಸಂಪನ್ಮೂಲಗಳು ಮನುಷ್ಯನ ಉಪಯೋಗಕ್ಕೆ ಮಾತ್ರವೇ? ಚರ್ಚಿಸಿ.
ಪ್ರಕೃತಿಯಲ್ಲಿರುವ ಸಂಪನ್ಮೂಲಗಳು **ಮನುಷ್ಯನ ಉಪಯೋಗಕ್ಕಾಗಿ ಮಾತ್ರ ಇರುವುದಲ್ಲ.** ಮರ, ಗಿಡ, ಬಳ್ಳಿ, ನದಿ, ಬೆಟ್ಟ, ಗುಡ್ಡ, ಕೆರೆ, ಸರೋವರ, ಸಾಗರ ಮುಂತಾದವು ಪ್ರಕೃತಿಯ ಅವಿಭಾಜ್ಯ ಅಂಗಗಳಾಗಿವೆ. ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಅವುಗಳನ್ನು ಬಳಸಿಕೊಳ್ಳುವುದರ ಜೊತೆಗೆ ಅವುಗಳ ಅಸ್ತಿತ್ವ ಮತ್ತು ಪರಿಸರ ಸಮತೋಲನವನ್ನು ಕಾಪಾಡುವ ಜವಾಬ್ದಾರಿಯನ್ನೂ ಹೊಂದಿದ್ದಾನೆ.
ಮರಗಿಡಗಳು ಮನುಷ್ಯನಿಗೆ **ಹಣ್ಣು, ಹೂವು, ಮರಮುಟ್ಟು, ಔಷಧಿ ಮತ್ತು ಶುದ್ಧ ಗಾಳಿ** ನೀಡುತ್ತವೆ. ಆದರೆ ಅವುಗಳ ಮಹತ್ವ ಇಷ್ಟಕ್ಕೆ ಮಾತ್ರ ಸೀಮಿತವಲ್ಲ. ಅವು ಪಕ್ಷಿ-ಪ್ರಾಣಿಗಳಿಗೆ ಆಹಾರ ಮತ್ತು ಆಶ್ರಯ ನೀಡುತ್ತವೆ. ಮಳೆ, ಬೆಳೆ, ಹವಾಮಾನ ಸಮತೋಲನ ಹಾಗೂ ಪರಿಸರದ ಸ್ವಚ್ಛತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ ಸಸ್ಯಗಳನ್ನು ಕೇವಲ **ಮನುಷ್ಯನ ಲಾಭಕ್ಕಾಗಿ ಇರುವ ವಸ್ತುಗಳು** ಎಂದು ಪರಿಗಣಿಸುವುದು ತಪ್ಪು.
ಲೇಖಕರು ಹೇಳುವಂತೆ, ಪ್ರಕೃತಿಯ ಸಂಪನ್ಮೂಲಗಳಿಗೆ ನಾವು ರೂಪಾಯಿ-ಪೈಸೆಯ ಬೆಲೆ ಕಟ್ಟಬಹುದು; ಆದರೆ ಅವುಗಳ **ನಿಜವಾದ ಮೌಲ್ಯ ಅಪಾರವಾದದ್ದು.** ಮನುಷ್ಯನ ಸ್ವಾರ್ಥ ಮತ್ತು ಕೈಗಾರಿಕಾ ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯ ಹಾಗೂ ಮರಗಿಡಗಳನ್ನು ನಾಶಪಡಿಸಿದರೆ ಅದರ ದುಷ್ಪರಿಣಾಮ ಅಂತಿಮವಾಗಿ ಮನುಷ್ಯನ ಬದುಕಿನ ಮೇಲೆಯೇ ಬೀಳುತ್ತದೆ.
ಹೀಗಾಗಿ ಪ್ರಕೃತಿಯ ಸಂಪನ್ಮೂಲಗಳನ್ನು **ಮಿತವಾಗಿ ಬಳಸಿಕೊಂಡು, ಅವುಗಳನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೂ ಉಳಿಸುವುದು ನಮ್ಮ ಕರ್ತವ್ಯ.** ಪ್ರಕೃತಿ ಕೇವಲ ಮನುಷ್ಯನ ಸ್ವತ್ತಲ್ಲ; ಅದು ಸಮಸ್ತ ಜೀವಜಗತ್ತಿನ ಆಧಾರವಾಗಿದೆ.
೭. ಪರಿಸರ ಸಮತೋಲನಕ್ಕೂ ಮನುಷ್ಯನ ಆರೋಗ್ಯಕ್ಕೂ ಸಂಬಂಧವಿದೆಯೇ? ಚರ್ಚಿಸಿ.
ಹೌದು, **ಪರಿಸರ ಸಮತೋಲನಕ್ಕೂ ಮನುಷ್ಯನ ಆರೋಗ್ಯಕ್ಕೂ ನಿಕಟವಾದ ಸಂಬಂಧವಿದೆ.** ಮನುಷ್ಯನು ಪ್ರಕೃತಿಯ ಅವಿಭಾಜ್ಯ ಅಂಗವಾಗಿರುವುದರಿಂದ ಪರಿಸರದ ಮೇಲೆ ಉಂಟಾಗುವ ಪರಿಣಾಮಗಳು ನೇರವಾಗಿ ಮನುಷ್ಯನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತವೆ.
ಮರಗಿಡಗಳು **ಹವೆಯನ್ನು ಶುದ್ಧಗೊಳಿಸಿ, ಆಮ್ಲಜನಕವನ್ನು ಒದಗಿಸುತ್ತವೆ.** ಅವು ವಾತಾವರಣದ ಉಷ್ಣತೆಯನ್ನು ನಿಯಂತ್ರಿಸಿ, ಮಳೆ ಬೀಳಲು ಸಹಕಾರಿಯಾಗುತ್ತವೆ. ಅಲ್ಲದೆ, ಮರಗಿಡಗಳು ಪಕ್ಷಿ-ಪ್ರಾಣಿಗಳಿಗೆ ಆಹಾರ ಮತ್ತು ಆಶ್ರಯವನ್ನು ನೀಡುವುದರ ಮೂಲಕ ಜೀವವೈವಿಧ್ಯವನ್ನು ಕಾಪಾಡುತ್ತವೆ. ಇದರಿಂದ ಪ್ರಕೃತಿಯ ಸಮತೋಲನ ಉಳಿಯುತ್ತದೆ.
ಆದರೆ ನಗರೀಕರಣ, ಕೈಗಾರಿಕೀಕರಣ ಮತ್ತು ಮರಗಳ ನಾಶದಿಂದ **ಹೊಗೆ, ಧೂಳು, ಶಬ್ದಮಾಲಿನ್ಯ, ಉಷ್ಣತೆ ಹಾಗೂ ಹವಾಮಾನ ಬದಲಾವಣೆ** ಹೆಚ್ಚುತ್ತಿವೆ. ಇದರಿಂದ ಮನುಷ್ಯನಿಗೆ ವಿವಿಧ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚುತ್ತದೆ. ಪರಿಸರ ಹದಗೆಟ್ಟರೆ ಮಳೆ, ಬೆಳೆ ಮತ್ತು ಆಹಾರದ ಮೇಲೂ ಪರಿಣಾಮ ಬೀರುತ್ತದೆ.
ಆದ್ದರಿಂದ **ಪರಿಸರವನ್ನು ಸಂರಕ್ಷಿಸುವುದು ಎಂದರೆ ಮನುಷ್ಯನ ಆರೋಗ್ಯ ಮತ್ತು ಭವಿಷ್ಯವನ್ನು ಸಂರಕ್ಷಿಸುವುದೇ ಆಗಿದೆ.** ಮರಗಿಡಗಳನ್ನು ಬೆಳೆಸುವುದು, ಅರಣ್ಯನಾಶ ತಡೆಯುವುದು, ಮಾಲಿನ್ಯ ನಿಯಂತ್ರಿಸುವುದು ಹಾಗೂ ಪ್ರಕೃತಿಯ ಸಮತೋಲನವನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.
೮. ಮನುಷ್ಯನ ಸ್ವಾರ್ಥಕ್ಕೆ ಸಸ್ಯ ಜಗತ್ತು ಹೇಗೆ ನಾಶವಾಗಿದೆ? ವಿವರಿಸಿ.
ಮನುಷ್ಯನು ತನ್ನ **ಸ್ವಾರ್ಥ, ಸೌಲಭ್ಯ ಮತ್ತು ಆರ್ಥಿಕ ಲಾಭಕ್ಕಾಗಿ** ಸಸ್ಯ ಜಗತ್ತನ್ನು ನಿರಂತರವಾಗಿ ನಾಶಪಡಿಸುತ್ತಿದ್ದಾನೆ. ನಗರಗಳ ವಿಸ್ತರಣೆ, ಮನೆ-ಕಟ್ಟಡಗಳ ನಿರ್ಮಾಣ, ರಸ್ತೆಗಳು, ಅಂಗಡಿಗಳು ಮತ್ತು ಕೈಗಾರಿಕೆಗಳ ಸ್ಥಾಪನೆಗಾಗಿ **ಕೆರೆ, ಗುಡ್ಡ, ಹೊಲ, ತೋಟ ಹಾಗೂ ಹಸಿರು ಪ್ರದೇಶಗಳನ್ನು ನಾಶಮಾಡಿ** ನಿವೇಶನಗಳಾಗಿ ಪರಿವರ್ತಿಸಲಾಗಿದೆ.
ಮನೆಯ ಜಾಗದಲ್ಲಿಯೂ ಮರಗಿಡಗಳನ್ನು ಬೆಳೆಸುವುದಕ್ಕಿಂತ **ಅಂಗಡಿಗಳನ್ನು ನಿರ್ಮಿಸಿ ಬಾಡಿಗೆ ಪಡೆಯುವುದು ಅಥವಾ ವಾಸದ ಕೊಠಡಿಗಳನ್ನು ನಿರ್ಮಿಸುವುದು** ಹೆಚ್ಚು ಲಾಭದಾಯಕವೆಂದು ಜನರು ಭಾವಿಸುತ್ತಾರೆ. ಇದರಿಂದ ಹಿತ್ತಲು, ಔಟ್ಹೌಸ್ ಮತ್ತು ಪಡಸಾಲೆಗಳಂತಹ ಸ್ಥಳಗಳಲ್ಲಿದ್ದ ಹಸಿರು ಪ್ರದೇಶಗಳು ಕಡಿಮೆಯಾಗಿವೆ.
ಇದಲ್ಲದೆ, **ಕೈಗಾರಿಕೆಗಳ ಸ್ಥಾಪನೆ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಅಸಂಖ್ಯಾತ ಮರಗಳನ್ನು ಕಡಿದುಹಾಕಲಾಗಿದೆ.** ದೊಡ್ಡ ಯೋಜನೆಗಳು, ರಸ್ತೆ ನಿರ್ಮಾಣ ಮುಂತಾದವುಗಳಿಗಾಗಿ ಬೆಳೆದು ನಿಂತ ಮರಗಳನ್ನೂ ನಿರ್ದಯವಾಗಿ ನಾಶಪಡಿಸಲಾಗಿದೆ. ಲೇಖಕರು ಉದಾಹರಿಸುವಂತೆ, ಹೆಲಿಪ್ಯಾಡ್ ನಿರ್ಮಾಣಕ್ಕಾಗಿ ನೂರಾರು ಬೆಳೆದು ನಿಂತ ಮರಗಳನ್ನು ಕಡಿದುಹಾಕಿರುವುದು ಮನುಷ್ಯನ ವಿವೇಕರಹಿತ ಸ್ವಾರ್ಥಕ್ಕೆ ಸಾಕ್ಷಿಯಾಗಿದೆ.
ಮನುಷ್ಯನು ಸಸ್ಯಗಳನ್ನು ಕೇವಲ **ಮರಮುಟ್ಟು, ಹಣ್ಣು, ಹೂವು, ಉರವಲು ಮುಂತಾದ ತನ್ನ ಉಪಯೋಗಕ್ಕೆ ದೊರೆಯುವ ವಸ್ತುಗಳೆಂದು** ಪರಿಗಣಿಸುತ್ತಿದ್ದಾನೆ. ಆದರೆ ಸಸ್ಯಗಳು ಪರಿಸರ ಸಮತೋಲನವನ್ನು ಕಾಪಾಡುವ ಪ್ರಕೃತಿಯ ಪ್ರಮುಖ ಅಂಗಗಳಾಗಿವೆ ಎಂಬುದನ್ನು ಮರೆತಿದ್ದಾನೆ.
ಹೀಗಾಗಿ **ಮನುಷ್ಯನ ಸ್ವಾರ್ಥ ಮತ್ತು ಅತಿಯಾದ ಅಭಿವೃದ್ಧಿಯ ಧೋರಣೆಯಿಂದ ಸಸ್ಯ ಜಗತ್ತು ನಾಶವಾಗುತ್ತಿದೆ.** ಈ ಪ್ರವೃತ್ತಿಗೆ ಕಡಿವಾಣ ಹಾಕಿ, ಮರಗಳನ್ನು ಬೆಳೆಸುವುದರ ಜೊತೆಗೆ ಅವುಗಳ ಸಂರಕ್ಷಣೆಯನ್ನೂ ಮಾಡುವುದು ಇಂದಿನ ಅತ್ಯಂತ ಅಗತ್ಯವಾಗಿದೆ.
೯. ಸಾಲುಮರದ ತಿಮ್ಮಕ್ಕ, ಕೊಂಗಾಡಿಯಪ್ಪ ಅವರ ಪರಿಸರ ಪ್ರೇಮವನ್ನು ಕುರಿತು ಬರೆಯಿರಿ.
**ಸಾಲುಮರದ ತಿಮ್ಮಕ್ಕ ಮತ್ತು ಕೊಂಗಾಡಿಯಪ್ಪ** ಅವರು ಯಾವುದೇ ಸ್ವಾರ್ಥವಿಲ್ಲದೆ ಮರಗಳನ್ನು ಬೆಳೆಸಿ, ಪರಿಸರ ಸಂರಕ್ಷಣೆಗೆ ಮಾದರಿಯಾಗಿದ್ದಾರೆ.
**ಸಾಲುಮರದ ತಿಮ್ಮಕ್ಕ** ಅವರು ಮಾಗಡಿ ತಾಲ್ಲೂಕಿನ ಹುಲಿಕಲ್ಲು–ಕುದೂರು ರಸ್ತೆಯ ಸುಮಾರು ಮೂರು ಕಿಲೋಮೀಟರ್ ಉದ್ದಕ್ಕೂ ಎರಡೂ ಬದಿಗಳಲ್ಲಿ **೨೮೪ ಆಲದ ಸಸಿಗಳನ್ನು ನೆಟ್ಟು**, ಅವುಗಳಿಗೆ ಪ್ರತಿದಿನ ನೀರು ಹಾಕಿ, ಆರೈಕೆ ಮಾಡಿ ಬೆಳೆಸಿದರು. ಅವರ ಪತಿ ಚಿಕ್ಕಯ್ಯನವರೂ ಈ ಕಾರ್ಯದಲ್ಲಿ ನೆರವಾಗಿದ್ದರು. ಅಲ್ಲದೆ, ಊರಿನ ಕೆರೆ ಬತ್ತಿದಾಗ ಕಟ್ಟೆ ಕಟ್ಟಿ ನೀರು ನಿಲ್ಲಿಸಿ, ಜನರು ಮತ್ತು ಜಾನುವಾರುಗಳಿಗೆ ಉಪಕಾರ ಮಾಡಿದ್ದರು. ಅವರು ಬೆಳೆಸಿದ ಮರಗಳು ಮುಂದೆ ಹಾದಿಗರಿಗೆ **ನೆರಳು ಮತ್ತು ಪಶು-ಪಕ್ಷಿಗಳಿಗೆ ಆಹಾರ** ಒದಗಿಸಿದವು.
**ಕೊಂಗಾಡಿಯಪ್ಪ** ಅವರು ಚಿಕ್ಕಬಳ್ಳಾಪುರದ ಗಣ್ಯ ವ್ಯಕ್ತಿಯಾಗಿದ್ದರು. ಅವರು ಊರುಗಳಿಗೆ ನಡೆದುಹೋಗುವಾಗ ತಮ್ಮ ಜೇಬಿನಲ್ಲಿ **ಹೊಂಗೆ ಮತ್ತು ಇತರ ಸಾರ್ವಜನಿಕ ಉಪಯೋಗದ ಮರಗಳ ಬೀಜಗಳನ್ನು** ತೆಗೆದುಕೊಂಡು ಹೋಗುತ್ತಿದ್ದರು. ದಾರಿಯ ಬದಿಗಳಲ್ಲಿ ಹಾಗೂ ಸೂಕ್ತ ಸ್ಥಳಗಳಲ್ಲಿ ಆ ಬೀಜಗಳನ್ನು ಬಿತ್ತುವುದಲ್ಲದೆ, ಅವುಗಳ ಆರೈಕೆಯನ್ನೂ ಮಾಡುತ್ತಿದ್ದರು. ಅವರ ಪರಿಶ್ರಮದ ಫಲವಾಗಿ ನೂರಾರು ಮರಗಳು ಬೆಳೆದು ಪರಿಸರಕ್ಕೆ ಕೊಡುಗೆ ನೀಡಿದವು.
ಹೀಗೆ **ತಿಮ್ಮಕ್ಕ ಮತ್ತು ಕೊಂಗಾಡಿಯಪ್ಪ ಅವರು ಯಾವುದೇ ಪ್ರತಿಫಲವನ್ನು ನಿರೀಕ್ಷಿಸದೆ ಮರಗಳನ್ನು ನೆಟ್ಟು ಬೆಳೆಸಿದ ನಿಸ್ವಾರ್ಥ ಪರಿಸರ ಪ್ರೇಮಿಗಳು.** ಅವರ ಪರಿಸರ ಸೇವೆ ಇಂದಿನ ಮತ್ತು ಮುಂದಿನ ಪೀಳಿಗೆಗೆ ಆದರ್ಶವಾಗಿದೆ.
