ಘಟಕ 1 ಬಾಲ್ಯ
ಅಧ್ಯಾಯ 1.1 ಒಂದು ಹುಡುಗನಿಗೆ ಬಿದ್ದ ಕನಸು
ಅಭ್ಯಾಸ ಪ್ರಶ್ನೆಗಳು:
ಎರಡು ಅಂಕದ ಪ್ರಶ್ನೆಗಳು
1. ಹುಡುಗ ಅಳಲು ಕಾರಣವೇನು?
ಉತ್ತರ: ಒಂದು ಹುಡುಗನಿಗೆ ಬಿದ್ದ ಕನಸು ಅಧ್ಯಾಯದಲ್ಲಿ ಅರಮನೆ ನೋಡಲು ಹೋದ ಸಂದರ್ಭದಲ್ಲಿ ಕರುಣಾಕರನ ಕಥೆಯನ್ನು ತಿಳಿದು ಹುಡುಗನಿಗೆ ಅಳು ಬರುತ್ತದೆ.
2. ದಿಟ್ಟ ಹುಡುಗ ಪ್ರಾಣ ಬಿಟ್ಟಿದ್ದು ಹೇಗೆ?
ಉತ್ತರ : ದಿಟ್ಟ ಹುಡುಗ ಕರುಣಾಕರ ಎಂಬುವವರು ಮಹಾತ್ಮ ಗಾಂಧೀಜಿಯವರ ಬ್ರಿಟಿಷರೇ ಭಾರತವನ್ನು ಬಿಟ್ಟು ತೊಲಗಿ ಎಂದು ಕರೆಕೊಟ್ಟಾಗ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಕಾಂಗ್ರೆಸ್ ಪಕ್ಷದ ಧ್ವಜವನ್ನು ಅರಮನೆಯ ಗೋಪುರದ ಮೇಲೆ ಹಾರಿಸಲೆಂದು ಹೊರಟಿದ್ದ ಜನರ ಗುಂಪನ್ನು ಬ್ರಿಟಿಷ್ ಹಾಗೂ ದೇಶಿಯರಾಜರ ಪೊಲೀಸ್ ಪಡೆಗಳು ತಡೆದು ಲಾಠಿ ಪ್ರಹಾರ ಮಾಡಿದರು ಬ್ರಿಟಿಷ್ ಸೈನಿಕರ ಗುಂಡುಗಳ ಸುರಿಮಳೆಗೆ ತುತ್ತಾಗಿ ಕರುಣಾಕರ ಅಲ್ಲಿಯೇ ಪ್ರಾಣ ಬೆಟ್ಟ.
3. ಹುಡುಗ ಅಪ್ಪನನ್ನು ಕೇಳಿದ ಪ್ರಶ್ನೆಗಳು ಯಾವುವು?
ಉತ್ತರ: ಬೆಸಗರಹಳ್ಳಿ ರಾಮಣ್ಣ ಅವರ ಒಂದು ಹುಡುಗನಿಗೆ ಬಿದ್ದ ಕನಸು ಕಥೆಯಲ್ಲಿ ಹುಡುಗ ತನ್ನ ತಂದೆಯ ಜೊತೆಗೆ ಪ್ರವಾಸಕ್ಕೆ ಹೋದಾಗ ಅರಮನೆಯನ್ನು ಕಂಡು ಇಷ್ಟು ದೊಡ್ಡ ಅರಮನೆಯಲ್ಲಿ ಮಹಾರಾಜ ಒಬ್ಬನೇ ಇರುತ್ತಾನೆಯೇ ಅರಮನೆಯನ್ನು ಕಂಡೊಡನೆ ಇದು ಏನಪ್ಪಾ ಎಂದು. ಈ ಅರಮನೆಯಲ್ಲಿ ಎಷ್ಟು ಜನ ಇರುತ್ತಾರೆ ಒಂದು ರಾಜ್ಯಕ್ಕೆ ಒಬ್ಬ ರಾಜ ಸರಿ ಆದರೆ ಅವನಿಗೆ ಲೆಕ್ಕವಿಲ್ಲದಷ್ಟು ಜನ ಹೆಂಡತಿಯರು ಇರಬೇಕು ಅಲ್ಲವಾ ರಾಜನಿಗೆ ಏಕೆ ನೂರಾರು ಜನ ಹೆಂಡತಿಯರು ತುಂಬಾ ಕೆಟ್ಟ ರಾಜ ಇರಬೇಕು. ಹಾಗೂ ಅರಮನೆಯನ್ನು ಕಟ್ಟಿಸಿದವರು ಯಾರು? ಜನರಿಂದ ತೆರೆಗೆ ಪಡೆದು ಕಟ್ಟಿಸಿದ ಅರಮನೆ ಅಂದರೆ ಇದು ರಾಜನ ಅರಮನೆ ಹೇಗೆ ಆದಿತು ಹೀಗೆ ಹುಡುಗ ತಂದೆಗೆ ಪ್ರಶ್ನೆಗಳಸುರಿಮಳೆಯನ್ನೇ ಸುರಿಸಿದ.
4. ಕರುಣಾಕರ ಯಾರು?
ಉತ್ತರ: ಅರಮನೆಯನ್ನು ನೋಡಲು ಪ್ರವಾಸಕ್ಕೆ ಬಂದಿದ್ದ ಹುಡುಗ ಮತ್ತು ಹುಡುಗನ ತಂದೆ ತಾಯಿ ತಂಗಿ ಎಲ್ಲರೂ ಸರಸರನೇ ಮಂಟಪದ ಕಡೆ ಹೆಜ್ಜೆ ಹಾಕಿದಾಗ ಅಲ್ಲಿ ಒಂದು ವಿಗ್ರಹ ಇತ್ತು ಅದುವೇ ಸ್ವಾತಂತ್ರ ಹೋರಾಟದಲ್ಲಿ ದೇಶಕ್ಕಾಗಿ ದೇಹವನ್ನು ಬಲಿದಾನ ಮಾಡಿದಂತಹ ಹುಡುಗನೇ ಕರುಣಾಕರನಾಗಿದ್ದನು.
ಐದು ಅಂಕದ ಪ್ರಶ್ನೆಗಳು.
1. ನಮ್ಮ ರಾಜ್ಯ ಅನ್ನುವ ಪದ ಕೇಳಿದ ತಕ್ಷಣ ಹುಡುಗನಲ್ಲಿ ಆದ ಬದಲಾವಣೆ ಏನು?
ಉತ್ತರ: ಬೆಸಗರಹಳ್ಳಿ ರಾಮಣ್ಣ ಅವರ ಒಂದು ಹುಡುಗನಿಗೆ ಬಿದ್ದ ಕನಸು ಅಧ್ಯಾಯದಲ್ಲಿ ಹುಡುಗ ತನ್ನ ತಂದೆ ತಾಯಿಯೊಂದಿಗೆ ಪ್ರವಾಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಅರಮನೆಯನ್ನು ವೀಕ್ಷಿಸುವಾಗ ತಂದೆಯ ಬಳಿ ಈ ಅರಮನೆಯನ್ನು ಕಟ್ಟಿಸಿದವರು ಯಾರು ಎಂದು ಕೇಳಿದಾಗ ಮಹಾರಾಜ ಎಂದು ಹೇಳುವರು. ಆದ ಹುಡುಗ ಅಪ್ಪ ರಾಜ ಬೆವರು ಸುರಿಸಿಲ್ಲ ಇಂಥ ದೊಡ್ಡ ಮನೆ ಅಂದ್ರೆ ನನಗೆ ನಂಬೋಕೆ ಆಗುವುದಿಲ್ಲ ನಮ್ಮ ಪುಸ್ತಕದಲ್ಲಿ ಬಸವಣ್ಣನವರು ಕಾಯಕವೇ ಕೈಲಾಸ ಎಂದು ಹೇಳಿದ್ದಾರೆ ಮಗನ ಈ ಪ್ರಶ್ನೆಗಳು ತುಂಬಾ ಜಟಿಲತೆಯ ಕಡೆಗೆಒಯ್ಯುತ್ತಿರುವುದನ್ನು ಗಮನಿಸಿದ ಅಪ್ಪ ಲೋ ಅರಮನೆ ವಿಷ್ಯ ಈಗ ನಮಗ್ಯಾಕೆ ರಾಜರ ಕಾಲ ಮುಗಿಯಿತು ಈಗ ನಮ್ಮ ದೇಶದಲ್ಲಿ ಇರುವುದು ನಮ್ಮ ರಾಜ್ಯ ಎನ್ನುವನು ನಮ್ಮ ರಾಜ್ಯ ಎಂಬ ಪದ ಹುಡುಗನ ಕಿವಿಯ ಮೇಲೆ ಬಿದ್ದದ್ದೇ ತಡ ಖುಷಿಯಿಂದ ಹಾಗಾದರೆ ಈ ಅರಮನೆ ನಮ್ಮದು ಎನ್ನುವನು.
2. ಹುಡುಗನ ಕುಟುಂಬ ಹಳೆಯ ನಗರಕ್ಕೆ ಏಕೆ ಹೋದರು?
ಉತ್ತರ: ಹಳೆಯ ನಗರದ ಸುತ್ತ ಅನೇಕ ತಾಲೂಕು ಕೇಂದ್ರಗಳು ಬೆರಳಲ್ಲಿ ಎಣಿಸ ಬಲ್ಲಾ ಜಿಲ್ಲಾ ಕೇಂದ್ರಗಳು ಅಸಂಖ್ಯಾತ ಹಳ್ಳಿಗಳು ಉಂಟು. ಈ ಅಸಂಖ್ಯಾತ ಹಳ್ಳಿಗಳಲ್ಲಿ ಒಂದು ಹಳ್ಳಿಯ ಸಂಸಾರದಲ್ಲಿ ಹೀಗಿತ್ತು ಈ ಸಂಸಾರದಲ್ಲಿ ತಂದೆ ತಾಯಿ ಅಣ್ಣ-ತಂಗಿ ಇಷ್ಟೇ ಕುಟುಂಬದ ಯೋಜನೆಯ ಮಿತಿಯನ್ನು ಮೀರದ ರಾಷ್ಟ್ರದ ಜನ ನಿಯಂತ್ರಣ ನೀತಿಗೆ ಬದ್ಧವಾದ ಕುಟುಂಬ ತಂದೆಗೆ ಸುಮಾರು 44 ವರ್ಷಗಳು ತಾಯಿಗೆ 28 ಎಂದು ಇರಬಹುದು ಹುಡುಗನಿಗೆ 12 ವರ್ಷಗಳು ಹುಡುಗಿಗೆ ಆರು ವರ್ಷಗಳು ಹಳೆಯ ನಗರದ ಇತಿಹಾಸ ಕೇಳಿ ತಾಯಿಗೆ ತುಂಬಾ ಕುತೂಹಲ ಉಂಟಾಗಿ ಮಗನನ್ನು ಪ್ರಚೋದಿಸಿ ತನ್ನ ಗಂಡ ಹಳೆಯ ನಗರಕ್ಕೆ ಸಂಸಾರ ಸಮೇತ ಭೇಟಿ ಕೊಡಲು ಒಪ್ಪಿಸಿದಳು. ಇಡೀ ಕುಟುಂಬ ಬಸ್ಸಿನಲ್ಲಿ ಬಂದು ಹಳೆಯ ನಗರದ ಬಸ್ ನಿಲ್ದಾಣದಲ್ಲಿ ನಿಂತು ಪ್ರವಾಸಕ್ಕೆ ಹೊರಟರು.
3. ಅಪ್ಪ ರಾಜನ ವಿಚಾರ ಹೇಳಿದ ತಕ್ಷಣ ಹುಡುಗನಲ್ಲಿ ಉಂಟಾದ ಭಾವನೆಗಳೇನು?
ಉತ್ತರ: ಹಳೆಯ ನಗರದ ಬಸ್ ನಿಲ್ದಾಣದಲ್ಲಿ ಇಳಿದ ತಕ್ಷಣ ಹುಡುಗ ಕುತೂಹಲ ತಡೆಯಲಾರದೆ ಅಪ್ಪ ಅಪ್ಪ ಇದೇನಪ್ಪಾ ಎಂದು ಕೇಳುವನು ಅರಮನೆ ಕಣೋ ನಮ್ಮನ್ನು ಆಳುತ್ತಿದ್ದ ಅರಸರು ಇದ್ದ ಮನೆ ಇಂತಾ ಮನೆಯಲ್ಲಿ ಎಷ್ಟು ಜನ ಇರಬಹುದು ಎಷ್ಟು ಜನ ಅರಸರು ಇದ್ದರೂ ಇಲ್ಲಿ ಎಂದು ಪ್ರಶ್ನೆಗಳನ್ನು ಕೇಳಿದಾಗ ತಂದೆ ಹೇಳುತ್ತಾರೆ ಒಂದು ರಾಜ್ಯಕ್ಕೆ ಒಂದು ಸಾವಿರ ರಾಜರು ಇರುತ್ತಾರೆ ಎಂದುಕೊಂಡಿದ್ದೀಯಾ ಒಂದು ರಾಜ್ಯಕ್ಕೆ ಒಬ್ಬ ರಾಜ ಸರಿ ಆದರೆ ಅವನಿಗೆ ಲೆಕ್ಕವಿಲ್ಲದಷ್ಟು ಜನ ಹೆಂಡತಿಯರು ಇರಬೇಕಲ್ವಾ ನೂರಾರು ಜನ ಅಂತಃಪುರವೇ ಉಂಟು ಹುಡುಗನಿಗೆ ಅಪ್ಪನ ಈ ಉತ್ತರಗಳು ಸ್ವಲ್ಪ ಗೊಂದಲವನ್ನ ಉಂಟು ಮಾಡಿತು ತಂದೆಗೆ ಅಮ್ಮ ಒಬ್ಬಳೇ ಹೆಂಡತಿ ರಾಜನಿಗೆ ಏಕೆ ನೂರಾರು ಜನ ಹೆಂಡತಿಯರು ಥ ತುಂಬಾ ಕೆಟ್ಟ ರಾಜನಿರಬೇಕು ಎಂಬ ಅಭಿಪ್ರಾಯಕ್ಕೆ ಬಂದನು.
10 ಅಂಕದ ಪ್ರಶ್ನೆಗಳು
1. ಹುಡುಗನಿಗೆ ಬಿದ್ದ ಕನಸಿನ ತಾತ್ಪರ್ಯವನ್ನು ಬರೆಯಿರಿ.
ಉತ್ತರ: ಬೆಸಗರಹಳ್ಳಿ ರಾಮಣ್ಣ ಅವರ ಒಂದು ಹುಡುಗನಿಗೆ ಬಿದ್ದ ಕನಸು ಅಧ್ಯಾಯದಲ್ಲಿ ಹುಡುಗನ ಕುಟುಂಬ ಪ್ರವಾಸವನ್ನು ಮುಗಿಸಿ ಆ ರಾತ್ರಿ ಊರಿಗೆ ಹಿಂದಿರುಗಿದರು ಆ ರಾತ್ರಿ ಹುಡುಗನಿಗೆ ಒಂದು ಕನಸು ಬಿತ್ತು ತನ್ನ ಸ್ಕೂಲಿನ ಹುಡುಗರ ಜೊತೆ ಶಾಲೆಯ ಶಿಕ್ಷಕರ ನೇತೃತ್ವದಲ್ಲಿ ಪಕ್ಷಿಧಾಮ ಹಾಗೂ ಅಭಯಾರಣ್ಯವನ್ನು ನೋಡಿಕೊಂಡು ಬರಲು ಶಾಲಾ ಪ್ರವಾಸ ಹೋದ ಕನಸು ಬಿತ್ತು. ಬಸ್ಸು ಅಭಯಾರಣ್ಯವನ್ನು ತಲುಪಿತ್ತು ಅಲ್ಲಿ ಎಲ್ಲಾ ಮಕ್ಕಳು ಪ್ರಾಣಿಗಳನ್ನು ನೋಡಿದರು. ಆಗ ಇದ್ದಕ್ಕಿದ್ದಂತೆ ಸುಮಾರು ದೂರ ನಡೆದರು ಅಲ್ಲಿ ಒಂದಷ್ಟು ಗರಿಕೆಯನ್ನು ತಿನ್ನುವ ಮೊಲಗಳು ಜಿಂಕೆಗಳನ್ನು ನೋಡುತ್ತಾ ದಾರಿತಪ್ಪಿ ಕಾಡಿನ ಒಳಗೆ ಹೋಗಿದ್ದರು ಹೀಗೆ ಹೋಗುವಾಗ ಕೋತಿಗಳ ಹಿಂದೊಂದು ಬಂದು ಅವರನ್ನು ಅಣಕಿಸಿದವು. ಇವರು ಅವರನ್ನು ಅಣಕಿಸಿದರು ಇದ್ದಕ್ಕಿದ್ದಂತೆ ಏನು ಭಾರಿ ಸದ್ದು ಕೇಳಿಸಿತು ಕೋತಿಗಳು ಚೆದುರಿದವು ಹುಡುಗರು ಬೆದರಿದರು ಒಂದಷ್ಟು ನಿಮಿಷಗಳ ನಂತರ ಹುಡುಗರಲ್ಲಿ ಉತ್ಸಾಹ ಮತ್ತೆ ಮೂಡಿತು ಕೋತಿಗಳು ಓಡಿದ ಜಾಡನ್ನೇ ಹಿಡಿದು ನಡೆದರು ಸುಮಾರು ದೂರ ನಡೆದ ಮೇಲೆ ಇಲ್ಲಿಂದ ಮುಂದಕ್ಕೆ ಯಾರಿಗೂ ಪ್ರವೇಶವಿಲ್ಲ ಎಂಬ ಬೋಡು ಕಣ್ಣಿಗೆ ಬಿತ್ತು ಹುಡುಗರು ತೀವ್ರ ಕುತೂಹಲದಿಂದ ಮೆಲ್ಲ ಮೆಲ್ಲಗೆ ಯಾರು ಕಣ್ಣಿಗೆ ಬೀಳದಂತೆ ಮರಗಳ ಮರೆಯಲ್ಲಿ
ಪೊದೆಗಳ ಗುಂಪಿನ ನಡುವೆ ಬಹಳ ದೂರ ಹೋದರು ಅಲ್ಲಿ ದೂರದಲ್ಲಿ ಒಂದು ಮರದ ಕೊಂಬೆಗೆ ತೊಲೆ ಹಕ್ಕಿಗಳು ಏನು ತೂಗಾಡುತ್ತಿದ್ದವು ಹುಡುಗರಿಗೆ ಈ ಪ್ರಾಣಿಗಳು ಯಾವ ಜಾತಿಯವೂ ನೋಡಿಯೇತಿರಬೇಕೆಂಬ ದೃಢ ನಿರ್ಧಾರ ಎದೆಯಲ್ಲಿ ಹುಟ್ಟಿ ಮುಂದುವರೆದರು ಕೋತಿಗಳು ಸರ್ಕಸ್ ಮಾಡುತ್ತಿರಬೇಕು ಎನಿಸಿತು ಆದರೆ ಒಬ್ಬ ಹುಡುಗ ಸದ್ದು ಮಾಡದೆ ಅಲ್ಲಿ ನೋಡಿ ಎಂದ ಮರಗಳ ಸುತ್ತ ಮೈಯಿಗೆ ಕಪ್ಪು ಉಡುಪು ಧರಿಸಿ ಮುಖವಾಡ ತೊಟ್ಟ ವ್ಯಕ್ತಿಗಳು ಓಡಾಡುತ್ತಿದ್ದರು ಹುಡುಗರಿಗೆ ಮೈ ಜುಮ್ ಎಂದಿತು ಹುಡುಗರು ನಡುಗುತೊಡಗಿದರು ಹುಡುಗರನ್ನು ಹಿಂಬಾಲಿಸಿ ಬಂದ ಶಿಕ್ಷಕರು ಒಬ್ಬರು ಮುಖವಾಡ ಧರಿಸಿದ್ದ ವ್ಯಕ್ತಿ ಒಬ್ಬನನ್ನು ಗಪಕ್ಕನೆ ಹಿಡಿದುಕೊಂಡುಬಿಟ್ಟ ಶಿಕ್ಷಕರು ಹೆದರಿ ನೀವು ಯಾರು, ನನ್ನ ಯಾಕೆ ಹಿಡಿದುಕೊಂಡಿದ್ದೀರಿ ನಾನು ಏನು ತಪ್ಪು ಮಾಡಿದ್ದೇನೆ ಅಭಯಾರಣ್ಯದಲ್ಲಿ ನಿಮ್ಮಂಥ ದರೋಡೆ ಕೋರರು ಸೇರಿಕೊಂಡು ನಮ್ಮಂತ ಪ್ರವಾಸಿಗಳ ತಲೆ ಹೊಡೆದು ದುಡ್ಡು ಕಿತ್ತಿಕೊಳ್ಳುವುದಕ್ಕೆ ನಿಂತಿದ್ದೀರಾ ಇದನ್ನು ನಾನು ಅರಣ್ಯ ಇಲಾಖೆಯವರಿಗೆ ಪತ್ರ ಬರೆದು ನಿಮಗೆಲ್ಲಾ ಶಿಕ್ಷೆ ಕೊಡಿಸುತ್ತೇನೆ ಎಂದ ಕೂಡಲೇ ಅವರ ಮುಖಕ್ಕೆ ಉತ್ತರವಾಗಿಎಂದ ಕೂಡಲೇ ಅವರ ಮುಖಕ್ಕೆ ಉತ್ತರವಾಗಿ ನಾಲಕ್ಕು ಏಟುಗಳು ಬಿದ್ದವು. ಅಷ್ಟರಲ್ಲಿ ಹುಡುಗರು ನಮ್ಮ ಮೇಷ್ಟ್ರನ್ನು ಸಾಯಿಸಬೇಡಿ ಅವರು ಒಳ್ಳೆಯವರು ತುಂಬಾ ಒಳ್ಳೆಯವರು ದೇಶ ಎಂದರೆ ಪ್ರಾಣ ಬಿಡುತ್ತಾರೆ ಎಂದು ಕಿರುಚುತ್ತಾ ಹಾಸಿಗೆಯ ಮೇಲೆ ಧಿಡೀರನೆ ಕುಳಿತುಕೊಂಡು ಬಿಚ್ಚಿಬಿಕಿ ಅಳಲಾರಂಭಿಸಿದನು. ಹೀಗೆ ಹುಡುಗನಿಗೆ ಕನಸು ಬಿತ್ತು.
2. ಅಪ್ಪ ಮಕ್ಕಳಿಗೆ ಜೂಗಾರ್ಡ್ ನ್ ತೋರಿಸಲು ಕಾರಣವೇನು? ಚರ್ಚಿಸಿ.
ಉತ್ತರ: ಬೆಸಗರಹಳ್ಳಿ ರಾಮಣ್ಣ ಅವರ ಒಂದು ಹುಡುಗನಿಗೆ ಬಿದ್ದ ಕನಸು ಅಧ್ಯಾಯದಲ್ಲಿ ಕುಟುಂಬದವರು. ಪ್ರವಾಸಕ್ಕೆ ಹೋಗಿರುವ ಅರಮನೆ ಹಾಗೂ ಅರಮನೆಯ ಪಕ್ಕದಲ್ಲಿ ಇದ್ದ ಜೈಲಿನ ದರ್ಶನ ಮಾಡಿದ ನಂತರ ಝು ಗಾರ್ಡನ್ನು ಹೊಕ್ಕಿದರು ಮಕ್ಕಳಿಗೆ ಒಂದು ಹೊಸ ಪ್ರಪಂಚವನ್ನೇ ಕಂಡಂತಾಯಿತು ಅಲ್ಲಿ ಹಾವು ಮೊಲ ವಿಚಿತ್ರ ಪಕ್ಷಿಗಳು ನರಿ ತೋಳ ಕರಡಿ ಜಿರಾಫೆ ನೀರು ಕುದುಳೆ, ಮೊಸಳೆ ಹಲ್ಲಿ ಹುಲಿ ಸಿಂಹ ಒಂಟೆ ಆನೆ ಅವುಗಳ ಮರಿ ಚಿರತೆ ಮತ್ತು ಅದರ ಕುಟುಂಬ ವಿಚಿತ್ರ ಕೋತಿಗಳು ಕಾಡು ಮನುಷ್ಯ ಒಂದೇ ಎರಡೇ ಹುಡುಗನಿಗೆ ಕರುಣಾಕರನ ಮಂಟಪದಲ್ಲಿ ಇದ್ದ ದುಃಖ ಜೈಲನ್ನು ಕಂಡಾಗ ಆದ ಭಯ ಎಲ್ಲ ಮಾಯವಾಗಿ ಮನಸ್ಸು ಉಲ್ಲಾಸಗೊಂಡಿತು ಉಲ್ಲಾಸದೊಡನೆ ಅವನ ಬುದ್ಧಿಯು ಸ್ವಲ್ಪ ಚುರುಕಾಗಿ ಕೆಲಸ ಮಾಡತೊಡಗಿತ್ತು.
