ಪ್ರವೇಶಿಕೆ: ಬಾಲ್ಯದ ನೆನಪುಗಳು ಪ್ರತಿಯೊಬ್ಬರಿಗೂ ಬಾಲ್ಯದ ನೆನಪುಗಳು
ಇರುತ್ತವೆ. ಆ ನೆನಪುಗಳನ್ನು ನೆನಪಿಸಿಕೊಳ್ಳುವುದರಿಂದ ಶಾಂತಿ ಮತ್ತು ಆನಂದದ ಭಾವನೆ ಬರುತ್ತದೆ. ಅವು ಒಬ್ಬ ವ್ಯಕ್ತಿಗೆ ಅತ್ಯಂತ ಅಮೂಲ್ಯವಾದವುಗಳಲ್ಲಿ ಒಂದಾಗಿದೆ. ಮಗುವಿಗೆ ಆಧುನಿಕ ಪ್ರಪಂಚದ ಬಗ್ಗೆ ಯಾವುದೇ ಚಿಂತೆ ಇರುವುದಿಲ್ಲ ಮತ್ತು ವಯಸ್ಕರು ತಮ್ಮ ಜೀವನದ ಆ ಅಸಡ್ಡೆ ಹಂತದ ನೆನಪುಗಳನ್ನು ನೆನಪಿಸಿಕೊಳ್ಳುವಾಗ, ಅವರು ಪ್ರಸ್ತುತ ಜೀವನದಲ್ಲಿ ಎದುರಿಸುತ್ತಿರುವ ಒತ್ತಡವನ್ನು ಒಂದು ಕ್ಷಣವಾದರೂ ಮರೆಯುವ ಅವಕಾಶವನ್ನು ಪಡೆಯುತ್ತಾರೆ. ನಾವು ಎಷ್ಟೇ ಬಯಸಿದರೂ ಹಿಂತಿರುಗಿಸಲು ಸಾಧ್ಯವಾಗದ ಜೀವನದ ಭಾಗ, ಆ ನಮ್ಮ ಬಾಲ್ಯದ ನಿಜವಾದ ಮೌಲ್ಯವನ್ನು ವಯಸ್ಕರು ಮಾತ್ರ ಅರ್ಥಮಾಡಿಕೊಳ್ಳಬಹುದು. ನಾವು ದೊಡ್ಡವರಾದಾಗ ನಮ್ಮ ಬಾಲ್ಯದ ಪ್ರತಿಯೊಂದು ದಿನವನ್ನು ನೆನಪಿಸಿಕೊಳ್ಳುತ್ತೇವೆ.
ಸೈಕಲ್ಲು ಎಂದರೆ ಸಾಕು ಬಾಲ್ಯ ಜೀವನದ ನೆನಪುಗಳು ಕಾಡುತ್ತವೆ. ಮೊನ್ನೆ ಹರಿಯಾಣಾದ ಹಿಸ್ಸಾರ್ ಎಂಬಲ್ಲಿ ವಿದ್ಯಾರ್ಥಿಗಳು 2008 ನೆಯ ಇಸವಿಯನ್ನು 'ಸೈಕಲ್ಲಿನ ವರ್ಷ' ಎಂದು ಆಚರಿಸಿ ಜಾಥಾ ಹೊಂಟ ಸುದ್ದಿಯನ್ನು ಓದಿದಾಗ ಮನಸ್ಸಿಗೆ ಏನೋ ಒಂದು ರೀತಿಯ ಖುಷಿಯಾಯಿತು. ಇದು ಕೇವಲ ಸೈಕಲ್ಲಿನ ಜಾತಾ ಆಗಿರದೆ ಪರಿಸರ ಮಾಲಿನ್ಯ, ಕುಡಿತದ ಕೆಟ್ಟ ಪರಿಣಾಮಗಳು ಮೊದಲಾದವುಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದೂ ಅವರ ಉದ್ದೇಶವಾಗಿತ್ತು. ಈ ಸಂದರ್ಭದಲ್ಲಿ ಅಲಿನ ಮುಖ್ಯ ಮಂತ್ರಿಗಳು ಅಲ್ಲಿನ ಕಾಲೇಜಿಗೆ ಒಂದು ಲಕ್ಷ ರೂ. ಗಳನ್ನು ದಾನ ಮಾಡಿ ಅದರಲ್ಲಿ ಸೈಕಲ್ಲುಗಳನ್ನು ಕೊಂಡು ಹಳ್ಳಿಗಳಿಗೆ ಹೋಗಿ ಇಂತಹ ಜನಸೇವೆಯನ್ನು ಮಾಡಿ ಎಂದು ಹಾರೈಸಿದರಂತೆ. ಇದನ್ನು ಓದಿದಾಗ ನಮ್ಮ ಕರ್ನಾಟಕದಲ್ಲೂ ಶಾಲಾ ಬಾಲಕಿಯರಿಗೆ ಉಚಿತ ಸೈಕಲ್ಲುಗಳನ್ನು ವಿತರಿಸಿದ್ದು ನೆನಪಿಗೆ ಬಂತು. ಇಲ್ಲಿನ ಇತರೆ ವಾಹನಗಳ ಭರಾಟೆಯನ್ನು ನೋಡಿದರೆ ಅವು ಈ ಬಡಪಾಯಿ ಸೈಕಲ್ಲುಗಳನ್ನು ಎಲ್ಲಿ ತುಳಿದು ತೊಪ್ಪೆ ಮಾಡಿಬಿಡುವವೋ ಎಂದು ಭಯವಾಗಿತ್ತು. ಆದರೂ ಇಂತಹ ಸಿಹಿ ಸುದ್ದಿಗಳು ನಿಜಕ್ಕೂ ಸಂತೋಷತರುವಂತಹ ವಿಷಯವೇ.
ಕಾರಿಲ್ಲದ ಜೀವನ
ಇದೇ ಸಮಯದಲ್ಲಿ ಅಮೆರಿಕಾದ ಇನ್ನೊಂದು ಸುದ್ದಿ ಓದಿದೆ. ನಮಗೆ ಅದು ಒಂದು ರೀತಿಯ ವಿಚಿತ್ರ ಸುದ್ದಿಯೇ. ಅಮೆರಿಕಾದ ಬಾಸ್ಟನ್ನಿನಲ್ಲಿರುವ ಒಬ್ಬಾತ ಹೀಗೆ ಸೈಕಲ್ಲಿನ ಅಭ್ಯಾಸ ಮಾಡಿಕೊಂಡು ದಿನವೂ 10 ಮೈಲಿ ದೂರದಲ್ಲಿರುವ ಕಛೇರಿಗೆ ಹೋಗುತ್ತಾನಂತೆ. ಅಂದರೆ ದಿನಕ್ಕೆ 20 ಮೈಲಿ. ಅಂದರೆ ವಾರಕ್ಕೆ (5 ದಿನದಂತೆ) 100
ಮೈಲಿ. ಅವನಿಗೆ ಸೈಕಲ್ಲಿನ ಸರಳತೆ ಹಾಗೂ ಅದರ ಮೇಲಿನ ಪ್ರಯಾಣ ಎಷ್ಟು ಮುದ ನೀಡಿದೆಯೆಂದರೆ ತನ್ನ ಮನೆ ಮಂದಿಗೂ ಈ ಸೈಕಲ್ಲಿನ ಗುಂಗು ಹಿಡಿಸಿ ಈಗ ತನ್ನ ಕಾರನ್ನು ಮಾರಿಬಿಟ್ಟಿದ್ದಾನಂತೆ!
ಅಲ್ಲಿಯ ಇನ್ನೊಬ್ಬಾತನಿಗೆ ಕಾರಿನಲ್ಲಿ ಓಡಾಡಿ, ಅಲ್ಲಿಯ ವಾಹನಗಳ ನಡುವೆ ಸಿಕ್ಕಿಹಾಕಿಕೊಂಡು ಕೆಲಸಕ್ಕೆ ಗಂಟೆಗಟ್ಟಲೆ ತಡವಾಗಿ ತಲುಪುವುದು ಸಾಮಾನ್ಯವಾಗಿತ್ತು. ಆದ್ದರಿಂದ ಒಂದು ದಿನ ಸೈಕಲ್ಲಿನಲ್ಲಿ ಎಕೆ ಓಡಾಡಬಾರದು? ಎಂದು ಅದನ್ನು ಉಪಯೋಗಿಸಿದನಂತೆ. ಈ ಸೈಕಲ್ ಯಾನ ಅವನಿಗೆ ಒಂದು ನವೀನ ಅನುಭವ ಸಂತಸ ನೀಡಿತಂತೆ, ವಿಚಿತ್ರವೆಂದರೆ ಈ ಭೂಪನೂ ಸೈಕಲ್ ನೀಡುವ ಸಂತೋಷಕ್ಕಾಗಿ ತನ್ನ ಕಾರನ್ನೆ ಮಾರಿಬಿಟ್ಟನಂತೆ. ಈಗ ಬೇಕೇ ಬೇಕೆಂದಾಗ ಬಾಡಿಗೆ ಕಾರನ್ನು ಉಪಯೋಗಿಸುತ್ತಾನಂತೆ. ಇದಕ್ಕಿಂತ ಮುಖ್ಯವಾಗಿ ಅವನ ಈ ನಿರ್ಧಾರಕ್ಕೆ ಅವನ ಹೆಂಡತಿಯ ಸಹಮತವೂ ಸಿಕ್ಕಿದ್ದು. ಎಂತಹ ಅದೃಷ್ಟವಂತ ನೋಡಿ! ನಮ್ಮಲ್ಲಾದರೆ ಮೊದಲು ಆ ಸ್ಕೂಟರ್ ಬಿಸಾಕಿ ಒಂದು ಒಳ್ಳೆಯ ಕಾರನ್ನು ಅದರಲ್ಲೂ, ತನ್ನ ಸೋದರಿಯ ಅಥವಾ ವಾರಗಿತ್ತಿಯ ಮನೆಯಲ್ಲಿರುವ ಕಾರಿಗಿಂತ ಹೆಚ್ಚಿನ ಬೆಲೆಯದನ್ನು ತರಲೇಬೇಕೆಂಬ ಆಜ್ಞೆ ಮಾಡುವ ಹೆಂಡತಿಯರೇ ಹೆಚ್ಚು. ಅಲ್ಲಿ ಆತ ತನ್ನ ಹೆಂಡತಿಯನ್ನು ಕೂಡಿಸಿಕೊಳ್ಳಲೂ ಒಂದು ಕ್ಯಾಬ್ ಸಹ ಮಾಡಿಸಿದಾನಂತೆ. ಅವಳ ಅಂತಹ ದೊಡ್ಡ ಸಹಕಾರಕ್ಕೆ ಅಷ್ಟೂ ಬೇಡವೇ? ಆ ಕ್ಯಾಬಿನಲ್ಲಿ ಮನೆಗೆ ಬೇಕಾಗುವ ವಸ್ತುಗಳನ್ನೂ ತರಬಹುದಂತೆ. ಸಂಸಾರ ಸಮೇತ ಇಂತಹ ಸೈಕಲ್ಲಿನಲ್ಲಿ ಅವರು ಮಜವಾಗಿ ಓಡಾಡಿಕೊಂಡಿದ್ದಾರಂತೆ. ಇಂತಹ ಸಂಗತಿಯನ್ನು ಭಾರತದಲ್ಲಿ ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಅಲ್ಲವೇ? ಇದನ್ನು ಓದಿದಾಗ ನಮಗೆ ತಕ್ಷಣಕ್ಕೆ ಜ್ಞಾಪಕಕ್ಕೆ ಬರುವುದು ಹೆಂಡತಿಯನ್ನು ಕೂಡಿಸಿಕೊಂಡು ಡಬ್ಬಲ್ ರೈಡ್ ಮಾಡುವ ಹಳ್ಳಿಯ ಜನ ಅಥವಾ ಕೂಲಿಗೆ ಹೋಗುವ ಜನ. ಇದನ್ನು ನೋಡಿ ನಮ್ಮಲ್ಲಿ ನಗುವವರೇ ಹೆಚ್ಚು. ಆದರೆ ಅವರವರ ಕಷ್ಟ ಅವರಿಗೆ ಯಾರಿಗೆ ಗೊತ್ತು, ಅವಶ್ಯಕತೆಯೊಂದಿಗೆ ಅದರಲ್ಲಿ ಅವರಿಗೂ ಒಂದು ರೀತಿಯ ಸುಖ, ತೃಪ್ತಿಯೂ ಇತ್ತೇನೋ. ಇತ್ತೀಚೆಗೆ ಇಂತಹ ಪ್ರಸಂಗಗಳು ಕಡಿಮೆಯಾಗಿ, ಈ ಡಬ್ಬಲ್ ರೈಡ್ ಮಾಡುವವರೂ ಪಾಸನ್ನು ಮಾಡಿಸಿಕೊಂಡು ಬಸ್ಸಿನಲ್ಲಿ ಓಡಾಡಲು ಆರಂಭಿಸಿದ್ದಾರೆ. ಈಗ ವಾಹನಗಳ ದಟ್ಟಣೆಯಿಂದ ಆಮೆಯ ವೇಗದಲ್ಲಿ ಚಲಿಸುವ ವಾಹನಗಳಿಗೆ ಹೋಲಿಸಿದರೆ ನಗರಗಳಲ್ಲಿ 5 ರಿಂದ 10 ಮೈಲಿ ದೂರ ಇರುವ ಜಾಗಗಳಿಗೆ ಹೋಗಬೇಕೆಂದರೆ ಸೈಕಲ್ಲೇ ಅತ್ಯುತ್ತಮ ವಾಹನ. ಅಲ್ಲಿ ಇಲ್ಲಿ ತೂರಿಸಿಕೊಂಡು, ಬೇಕೆಂದರೆ ತಳ್ಳಿಕೊಂಡು ಅತ್ಯಂತ ವೇಗವಾಗಿ ತಲುಪಿಬಿಡಬಹುದು. ಪರಿಸರ ಮಾಲಿನ್ಯವೂ ಆಗುವುದಿಲ್ಲ ಎಂಬುದು ಇದರ ಹೆಗ್ಗಳಿಕೆ. ನಿಲ್ಲಿಸಲು ಸಣ್ಣ ಜಾಗವಿದ್ದರೆ ಸಾಕು, ಶಬ್ದವೆಂಬುದು ಇಲ್ಲವೇ ಇಲ್ಲ. ಪೆಟ್ರೋಲ್ ಖರ್ಚಿಲ್ಲ, ಜಿಮ್ಗೆ ಹೋಗಬೇಕಾಗಿಲ್ಲ. ಹೋಗುವಾಗ ಪ್ರಕೃತಿಯ ಸೊಬಗನ್ನು ಸವಿಯುತ್ತಾ ಬೇಕೆಂದಲ್ಲಿ ನಿಲ್ಲಿಸಿ ಅದನ್ನು ಆಸ್ವಾದಿಸಬಹುದು.
ಇಂತಹ ಸೌಕಯ್ಯ ನಿಮಗೆ ಕಾರಿನಲ್ಲಿ ಸಿಗುವುದೇ ಎಂಬುದು ಅಮೆರಿಕ ವಾಸಿಯೊಬ್ಬನ ಆಂಬೋಣ. ಇದು ಸೈಕಲಿನೊಂದಿಗೆ ಒಂದು ರೀತಿಯ ಆತ್ಮೀಯತೆಯನ್ನು ಬೆಳೆಸುತ್ತದೆ. ಎಲ್ಲದರಲ್ಲೂ ನಾನು ನಿನ್ನೊಂದಿಗೆ ಒಡನಾಡಿ ಎಂಬ ಒಂದು ಅನ್ನೋ ಸಂಬಂಧ ಬೆಳೆದುಬಿಡುತ್ತದೆ. ಇದರಿಂದಲೇ ಅದು ಅಷ್ಟೊಂದು ಜನಪ್ರಿಯವಾಗುತ್ತಿರುವುದು.
ಅನುಕೂಲಗಳು:
ದಾರಿಯಲ್ಲಿ ಯಾರಾದರೂ ಗೆಳೆಯರು ಸಿಕ್ಕಿದರೆನ್ನಿ, ಅವರ ಹೆಗಲ ಮೇಲೆ ಕೈ ಹಾಕಿಕೊಂಡು ಅವರೊಂದಿಗೆ ನೀವೂ ಸೈಕಲ್ಲು ತುಳಿಯುತ್ತಾ ಹೋಗಬಹುದಲ್ಲವೇ? ಇಲ್ಲವಾದರೆ ಸೈಕಲ್ಲನ್ನು ತಳ್ಳಿಕೊಂಡು ಅವರೊಂದಿಗೆ ನಡದೇ ಹೆಜ್ಜೆ ಹಾಕಬಹುದು. ಗೆಳೆಯನ ಕೈಯಲ್ಲಿ ಭಾರವಾದ ಸಾಮಾನಿದ್ದರೆ ಅದನ್ನು ಸೈಕಲ್ಲಿನ ಬೆನ್ನ ಮೇಲೋ ಅಥವಾ ಅದರ ಹ್ಯಾಂಡಲಿಗೋ ತಗಲುಹಾಕಿ ಆರಾಮವಾಗಿ ಮಾತಾಡುತ್ತಾ ಸಾಗಬಹುದು. ತಾಕತ್ತಿದ್ದರೆ ಅವರನ್ನು ಕೂಡಿಸಿಕೊಂಡು ಡಬ್ಬಲ್ ರೈಡನ್ನೂ ಮಾಡಬಹುದು. ಇಂದಿನವರಿಗೆ ಈ ತಾಕತ್ತು ಇರುವುದು ಸಂದೇಹ. ನಮ್ಮ ಹಿರಿಯರಾರಾದರೂ ಇದ್ದಿದ್ದರೆ ಅವರಿಗೆ ಈ ಕೆಲಸ ನೀರು ಕುಡಿದಂತೆ. ನಿಮಗೆ ಮಗುವೊಂದಿದ್ದರೆ ಅದನ್ನು ಸೈಕಲ್ಲಿನ ಮುಂದೆ ಒಂದು ಚಿಕ್ಕ ಸೀಟನ್ನು ಹಾಕಿಸಿ ಅದರ ಮೇಲೆ ಕೂಡಿಸಿಕೊಂಡು ಓಡಾಡಿದರೆ ಅದರಿಂದ ಸಿಗುವ ಆನಂದ ನಿಮಗೆ ಕಾರಿನಲ್ಲಿ ಕೂಡಿಸಿಕೊಂಡು ಹೋದರೆ ಖಂಡಿತ ಸಿಗುವುದಿಲ್ಲ. ಮಕ್ಕಳನ್ನು. ಹೆಂಡತಿಯನ್ನು, ಗೆಳತಿಯನ್ನು ಹೀಗೆ ಮುಂದೆ ಸೀಟಿನ ಮೇಲೋ ಇಲ್ಲವೇ ಬಾರ್ ಕಂಬಿಯ ಮೇಲೋ ಕೂಡಿಸಿಕೊಂಡು ಸಾಗುವ ದೃಶ್ಯವನ್ನು ನಮ್ಮ ಹಳೆಯ ಸಿನಿಮಾಗಳಲ್ಲಿ ಮಾತ್ರ ನಾವು ನೋಡಿ ಆನಂದಿಸಬಹುದು.
ನೀವು ಸೈಕಲ್ಲಿನ ಮೇಲೆ కుళకు ಓಡಾಡುವುದನ್ನು ಅಭ್ಯಾಸ ಮಾಡಿಕೊಂಡುಬಿಟ್ಟರೆ ನಿಮಗೆ ತಿಂದದ್ದೆಲ್ಲವು ಜೀರ್ಣವಾಗಿ ಹಸಿವೋ ಹಸಿವಾಗಿ ಹಪಹಪಿಸುವಂತಾಗುತ್ತದೆ. ಇದರಿಂದ ಯಾವ ಜಿಮ್ಮುಗಳಿಗೂ ಅಲೆಯಬೇಕಾಗಿಲ್ಲ. ಜೊತೆಗೆ ಖರ್ಚಿಲ್ಲದೇ ವ್ಯಾಯಾಮವಾಗಿ ಆರೋಗ್ಯವೂ ಸುಧಾರಿಸುತ್ತದೆ. ಅಲ್ಲದೆ ನಿಮ್ಮ ಸೈಕಲ್ಲಿನ ಪ್ರಯಾಣದ ದಾರಿಯೇನಾದರೂ ಆಹ್ಲಾದಕರವಾಗಿದ್ದರೆ ನಿಮಗೆ ಮಾಡುವ ಕೆಲಸದಲ್ಲೂ ಹುರುಪು ಬರುವುದಂತೂ ಗ್ಯಾರಂಟಿ.
ನಗರದಲ್ಲಿ ಯಾವ ವಾಹನ ಮೊದಲು?
ಒಮ್ಮೆ ನಾನು ಕಾರಿನಲ್ಲಿ ಜಯನಗರದಿಂದ ಕೆಂಪೇಗೌಡ ನಿಲ್ದಾಣಕ್ಕೆ ನೆಂಟರನ್ನು ಬೀಳ್ಕೊಡಲು ಹೊರಟಿದ್ದೆ. ಅದೇ ಸಮಯಕ್ಕೆ ನನ್ನ ಮೈದುನನೂ ಫೋನ್ ಮಾಡಿ ತಾನು ಸ್ಕೂಟರಿನಲ್ಲಿ ಅಲ್ಲಿಗೆ ಬರುವೆ ಎಂದು ಹೇಳಿದ. ಅವನೂ ಜಯನಗರದ ಒಂಭತ್ತನೆಯ ಬ್ಲಾಕಿನಿಂದ ಹೊರಟಿದ್ದ. ಬಂದವರ ಸಾಮಾನುಗಳನ್ನು ಇಳಿಸಿಕೊಳ್ಳಲು ಸಹಾಯಕ್ಕೆಂದು ನಮ್ಮ ತಿಮ್ಮನೂ ಹೊರಟ್ಟಿದ್ದ. ಆದರೆ ಕಾರಿನಲ್ಲಿ ಜಾಗ ಸಾಕಾಗಲಿಲ್ಲ.
ಅವನು ಸೈಕಲ್ಲಿನ ಮೇಲೆ ಬರುತ್ತೇನೆ ಎಂದ. ಸರಿ ಎಂದು ಎಲ್ಲರೂ ಹೊರಟೆವು. ಆಶ್ಚರ್ಯವೆಂದರೆ ನಮ್ಮಲ್ಲಿ ಮೊದಲು ನಿಲ್ದಾಣವನ್ನು ತಲುಪಿದ್ದು ತಿಮ್ಮ ನಂತರ ಬಂದದ್ದು ನನ್ನ ಗೆಳೆಯ ಸ್ಕೂಟರಿನ ಮೇಲೆ, ಕಡೆಯಲ್ಲಿ ತಲುಪಿದ್ದು ನಾನು, ಕಾರಿನಲ್ಲಿ. ಈಗ ತಿಳಿಯಿತಲ್ಲವೇ ನಗರದೊಳಗಿನ ಸೈಕಲ್ಲಿನ ಮಹಿಮೆ
ಉಪಯೋಗ ಹೇಗೆ?
ನಮ್ಮ ನಗರದ ನಡುವೆ ವಾಹನದಟ್ಟಣೆಯ ಸೈಕಲಿನಲ್ಲಿ ಹೋಗುವುದಾದರೂ ಹೇಗೆ ಎಂದು ಯೋಚನೆಯೇ? ಚಿಂತಿಸಬೇಡಿ. ನಿಮ್ಮ ಮಾರ್ಗಕ್ಕೆ ಯಾವುದಾದರೂ ಸಣ್ಣ ಸಣ್ಣ ಗಲ್ಲಿಗಳನ್ನು ಆಯ್ದುಕೊಳ್ಳಿ ಇದರಿಂದ ನಿಮಗೆ ಆ ಗಲ್ಲಿಗಳ ಪರಿಚಯವೂ ಆಗುವುದು, ಇತರೆ ವಾಹನಗಳ ತೊಂದರೆಯೂ ಇರುವುದಿಲ್ಲ. ನಿಮಗೆ ಸೈಕಲ್ಲಿನ ಪ್ರಯಾಣ ಅತಿ ದೂರ ಎನ್ನಿಸಿದರೆ ವಾರದಲ್ಲಿ ಒಂದೆರಡು ದಿನವಾದರೂ ಸೈಕಲ್ಲನ್ನು ಉಪಯೋಗಿಸಿ ಅಥವಾ ಅರ್ಧ ದೂರ ಸೈಕಲ್ಲಿನಲ್ಲಿ ಹೋಗಿ ನಂತರ ಅದನ್ನು ಅಲ್ಲಿಯೇ ಎಲ್ಲಾದರೂ ನಿಲ್ಲಿಸಿ ಮುಂದೆ ಬೇರೆ ವಾಹನದಲ್ಲಿ ಓಡಾಡಬಹುದು.
ನೀವು ಕೆಲಸ ಮಾಡುವ ಜಾಗವು ಒಂದು ಕ್ಯಾಂಪಸ್ಸಿನಂತಿದ್ದರೆ, ಅಲ್ಲಿ ನಿಮಗೆ ಓಡಾಟಗಳು ಹೆಚ್ಚಿದ್ದರೆ ಆಗ ನೀವು ನಿಮ್ಮ ಕಛೇರಿಯಲ್ಲೇ ಒಂದು ಸೈಕಲ್ಲನ್ನು ಇಟ್ಟುಬಿಟ್ಟಿದ್ದರೆ ನಿಮಗೆ ಓಡಾಟವೂ ಸರಾಗ. ನಮ್ಮ ಬೆಂಗಳೂರಿನ ಕ್ಯಾಂಪಸ್ ಒಂದರಲ್ಲಿ ಕಂಪನಿಯವರೇ ಹೀಗೆ ಸೈಕಲ್ಲುಗಳನ್ನು ಇಟ್ಟು ಬಿಟ್ಟಿದ್ದಾರಂತೆ. ಬೇಕಾದವರು ಅದನ್ನು ತೆಗೆದುಕೊಂಡು ಎಲ್ಲಿಯಾದರೂ ಓಡಾಡಬಹುದು. ನಂತರ ನಿಮ್ಮ ಕೆಲಸ ಮುಗಿಸಿ ಹೊರಬಂದಾಗ ನಿಮ್ಮ ಸೈಕಲ್ಲು ಅಲ್ಲಿಲ್ಲದಿದ್ದರೆ ಗಾಬರಿಯಾಗಬೇಡಿ, ಅಲ್ಲೇ ಇರುವ ಇನ್ಯಾವುದಾದರೂ ಸೈಕಲ್ಲನ್ನು ತೆಗೆದುಕೊಂಡು ಬೇಕಾದಲ್ಲಿಗೆ ಹೋಗಿ, ಹಾಗೆಂದು ಅದನ್ನು ತೆಗೆದುಕೊಂಡು ಕ್ಯಾಂಪಸ್ಸಿನಿಂದ ಹೊರಗೆ ಹೋಗಲು ನೋಡಬೇಡಿ. ಈ ಅನುಕೂಲ ಕ್ಯಾಂಪಸ್ಸಿನೊಳಗೆ ಮಾತ್ರ. ಎಷ್ಟು ಸುಂದರವಾದ ಪರಿಕಲ್ಪನೆಯಲ್ಲವೇ?
ಹಳೆಯ ನೆನಪು
ಸೈಕಲ್ಲು ಎಂದರೆ ನನಗೆ ನೆನಪು ಬರುವುದು ನಾನು ಹೈಸ್ಕೂಲಿನಲ್ಲಿ ಶಾಲೆಗೆ ಹೋಗುತ್ತಿದ್ದುದು. ಜಯನಗರದಿಂದ ದಿನವೂ ಗಾಂಧಿಬಜಾರ್ಗೆ ನನ್ನ ಪ್ರಯಾಣ. ಎಂಟನೆಯ ತರಗತಿಯಲ್ಲಿ ಬಸ್ಸಿನಲ್ಲಿ ಆಗುತ್ತಿದ್ದ ಕಿರಿಕಿರಿಯಿಂದ ನನಗೆ ಈ ಸೈಕಲ್ ಮುಕ್ತಿ ನೀಡಿತ್ತು. ಆಗ ನನಗೆ ಬೇಕಾದಂತೆ ಸ್ವತಂತ್ರವಾಗಿ ಓಡಾಡಿಕೊಂಡಿದ್ದೆ. ದಿನವೂ ಒಂದೊಂದು ದಾರಿಯಲ್ಲಿ ಓಡಾಡಿ ನನಗೆ ಅಲ್ಲಿ ಎಲ್ಲ ದಾರಿಗಳು ಪರಿಚಿತವಾಗಿದ್ದವು. ಹೊತ್ತಾದರಂತೂ ನಮ್ಮ ಸೈಕಲ್ಲು ಯಾವ ಶತಾಬ್ಬಿಗೂ ಕಡಿಮೆ ಇರಲಿಲ್ಲ. ಬೆಟ್ಟದಂತಿರುವ ರಸ್ತೆಯಲ್ಲಿ ನಾವು ಸೀಟಿನೆಂದೆದ್ದು ಬಾರ್ ತುಳಿಯುತ್ತಿದ್ದ ಪರಿಯನ್ನು ನೆನಪಿಸಿಕೊಂಡರೆ, ಈಗ ಹಾಗೆ ಬಿಡಲು ಸಾಧ್ಯವೇ ಎಂದು ಅನುಮಾನ ಬರುತ್ತದೆ. ಆದರೆ ವಾಪಸ್ಸು ಬರುವಾಗ ಗೆಳೆಯರೊಂದಿಗೆ ನಿಧಾನವಾಗಿ ಮಾತಾಡಿಕೊಂಡು
ಬರುತ್ತಿದ್ದ ಮಜವೇ ಬೇರೆ. ನ್ಯಾಷನಲ್ ಕಾಲೇಜಿನಲ್ಲಿದ್ದಾಗ ಅಲ್ಲಿ ಕೆ. ಆರ್. ಎಂಬುವವರು ಸೈಕಲ್ಲಿನ ಮೇಲೆ ಕುಳಿತೇ ಪೇಪರ್ ಓದಿಕೊಂಡು ಹೋಗುವ ಪ್ರದರ್ಶನ ಮಾಡಿದ್ದರು. ಅದನ್ನು ನೋಡಿ ಅದೆಷ್ಟು ಮರುಳಾದವೆಂದರೆ, ನಾವು ಮಾಡಬೇಕೆಂದು ಅನೇಕ ಬಾರಿ ಪ್ರಯತ್ನಿಸಿ ಬಿದ್ದು ಮನೆಯಲ್ಲಿ ಬೈಸಿಕೊಂಡಿದ್ದು ಅದೆಷ್ಟು ಬಾರಿಯೋ. ಇದೇ ರೀತಿ ಕಾಲೇಜಿನ ಕ್ರೀಡೆಗಳಲ್ಲಿ ನಡೆಯುತ್ತಿದ್ದ ಸ್ಟೋ ಸೈಕಲ್ ರೇಸ್ ಸಹ ಒಂದು. ಇದನ್ನಂತೂ ಇರುವ ಸಣ್ಣ ಸಣ್ಣ ಜಾಗದಲ್ಲೇ ಅದೆಷ್ಟು ಬಾರಿ ಬಿದ್ದು ಎದ್ದು ಮಾಡುತ್ತಿದ್ದೆವೋ! ಸೈಕಲ್ ಚಕ್ರ ಹಾಳಾಗುತ್ತದೆ ಎಂದು ಮನೆಯಲ್ಲಿ ಬೈಗುಳಗಳೂ ಆಗುತ್ತಿದ್ದವು.
ಇದಾದ ನಂತರ ಕೆ. ৬৫. ಯೂವಿಸಿಯಿಗೂ ಸರ್ಕಲ್ಲಿನಲ್ಲಿದ್ದ (ಇಂಜಿನಿಯರಿಂಗ್ ಕಾಲೇಜ್) ನನ್ನ ಪ್ರಯಾಣ ಸೈಕಲ್ಲಿನಲ್ಲೇ ಕಲ್ಲಿನಲ್ಲೇ ಮುಂದುವರಿದಿತ್ತು. ಈ ಪ್ರಯಾಣವು ದೂರವಾಗಿದ್ದರೂ ಬಸ್ಸಿಗಿಂತ ಇದೇ ಅನುಕೂಲವೆನ್ನಿಸಿತ್ತು. ಸೈಕಲ್ಲಿಗೆ ಒಂದು ಟಿ ಸೇರನ್ನು ಸಿಕ್ಕಿಸಿಕೊಂಡು, ಹ್ಯಾಂಡಲಿಗೆ ಡ್ರಾಯಿಂಗ್ ಶೀಟನ್ನು ಕಟ್ಟಿಕೊಂಡರೆ ನನ್ನ ಪ್ರಯಾಣದ ಎಲ್ಲಾ ಸಿದ್ಧತೆಯೂ ಮುಗಿದಂತೆ. ಈ ಪ್ರಯಣದಲ್ಲಿ ದಾರಿಯಲ್ಲಿ ಕೂಡಿಕೊಳ್ಳುವ ಗೆಳೆಯರು, ಇತರ ಗೆಳೆಯರೇನಾದರೂ ಮುಂದೆ ಹೋಗುತ್ತಿದ್ದುದು ಕಂಡರೆ ವೇಗದಿಂದ ಹೋಗಿ ಅವರನ್ನು ಕೂಡಿಕೊಳ್ಳುತ್ತಿದ್ದೆವು. ಬೆಳಗಿನ ಛಳಿಯಲ್ಲಿ ನಾವು ಏಳೂವರೆಗೆ ತರಗತಿಗಳಿಗೆ ಹೋಗಬೇಕಿತ್ತು. ಆಗ ಹೋದ ಕೂಡಲೆ ಮರಗಟ್ಟಿದ ಕೈಗಳನ್ನು ಉಜ್ಜಿಕೊಂಡು ಪಾಠಗಳನ್ನು ಬರೆದುಕೊಳ್ಳಲಾಗದೆ ಒದ್ದಾಡುತ್ತಿದ್ದುದು ಇಂದಿಗೂ ನೆನಪಿದೆ. ಇಂದು ದ್ವಿಚಕ್ರ ವಾಹನಗಳಲ್ಲಿ ಝಮ್ ಎಂದು ಬರುವ ಹುಡುಗರಿಗೆ ಇಂತಹ ಅನುಭವ ಖಂಡಿತ ಇಲ್ಲ. ಅವರಿಗೆ ಬೆಳಿಗ್ಗೆ ಒಂಭತ್ತು ಗಂಟೆಗೆ ತರಗತಿಯಿದ್ದರೂ ತಡವಾಗಿ ಬಂದು, ಟ್ರಾಫಿಕ್ ಡ್ಯಾಮ್ ಎಂದೋ, ಬಸ್ ಸಿಗಲಿಲ್ಲವೆಂದೋ, ವಾಹನ ಪಂಕ್ಚರ್ ಆಯಿತೆಂದೋ ನೆಪ ಹೇಳುವವರೇ ಹೆಚ್ಚು. ಕಾಲೇಜಿನಲ್ಲಿ ಸೈಕಲ್ ಸ್ಟಾಂಡಿನ ನಾಗಪ್ಪ ನಮಗೆಲ್ಲಾ ಚಿರಪರಿಚಿತನಾಗಿದ್ದ, ಮುಂದೆ ನಾನು ಕಾಲೇಜು ಮುಗಿಸಿ ಹಲವು ವರ್ಷಗಳ ನಂತರ ಅದೇ ಯೂವಿಸಿಇಯಿಗೆ ಅತಿಥಿ ಪ್ರಾಧ್ಯಾಪಕನಾಗಿ ಪಾಠ ಮಾಡಲು ಹೋದಾಗ, ಆ ನಾಗಪ್ಪ ಇನ್ನೂ ಅಲ್ಲೇ ಇದ್ದ. ನಾನು ಅವನನ್ನು, ಅವನು ನನ್ನನ್ನು ಗುರುತು ಹಿಡಿದು ಮಾತನಾಡಿಕೊಂಡಾಗ ಹಳೆಯ ನೆನಪುಗಳೆಲ್ಲವೂ ಮರುಕಳಿಸಿದ್ದವು. ಈ ಕಾಲೇಜಿಗೆ ಹೋಗುತ್ತಿದ್ದಾಗ ನಮ್ಮ ಪ್ರಾಧ್ಯಾಪಕರಾದ ಕೆ. ಎನ್. ಅಯ್ಯಂಗಾರ್ ಎಂಬುವವರೂ ಒಮ್ಮೊಮ್ಮೆ ಸೈಕಲ್ಲಿನಲ್ಲಿ ನಮಗೆ ಜೊತೆಯಾಗುತ್ತಿದ್ದರು. "ನೀವು ಬೇಗ ಹೋಗಿ" ಎಂದು ಅವರು ನಮ್ಮನ್ನು ಓಡಿಸಿ ತಾವು ಹಿಂದೆ ನಿಧಾನವಾಗಿ ಬರುತ್ತಿದ್ದರು. ಅವರೊಬ್ಬ ಸರಳ ಜೀವಿ, ನಿಗರ್ವಿ, ಸೈಕಲ್ಲಿನಲ್ಲಿ ಓಡಾಡುವುದಕ್ಕೆ ಅವರೆಂದೂ ಮುಜುಗರ ಪಟ್ಟುಕೊಳ್ಳುತ್ತಿರಲಿಲ್ಲ. ವಾರದಲ್ಲಿ ಒಂದೆರಡು ದಿನ ಅವರು ಕಾರನ್ನೂ ತರುತ್ತಿದ್ದರು. ಅದರಲ್ಲಿಯೂ ಒಮ್ಮೊಮ್ಮೆ ಹುಡುಗರಿಗೆ ಡ್ರಾಪ್ ಸಿಗುತ್ತಿತ್ತು.
ಈ ಸೈಕಲ್ಲಿನಿಂದ ನನಗೆ ಹಳೆಯ ಬೆಂಗಳೂರಿನ ವಿವಿಧ ಪೇಟೆಗಳು, ಕಬ್ಬನ್ ಪಾರ್ಕು, ಲಾಲ್ಬಾಗಿನ ಮೂಲೆಮೂಲೆಗಳು ಪರಿಚಯವಾದುವು. ಆಗ ಲಾಲ್ ಬಾಗಿನೊಳಗೆ ವಾಹನಗಳನ್ನು ಬಿಡುತ್ತಿದ್ದರು. ಇಂದು ನನಗೆ ಬೆಂಗಳೂರಿನ ಮೂಲೆಮೂಲೆಗಳು ಪರಿಚಯವಿದೆಯೆಂದರೆ ಅದಕ್ಕೆ ಮುಖ್ಯ ಕಾರಣ ನನ್ನ ಸೈಕಲ್ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಇದಕ್ಕೆ ಸರಿಯಾಗಿ ಮನೆಯಲ್ಲೂ ನಮ್ಮ ತಂದೆ ತಮ್ಮ ಅನೇಕ ಕೆಲಸಗಳನ್ನು ಹೇಳಿದಾಗ ದಾರಿ ತೋರಿಸಿದ್ದು ಈ ಸೈಕಲ್ಲೇ ಮನೆಯಲ್ಲಿ ಬೇರೆ ಯಾರಾದರೂ "ಅವನಿನ್ನೂ ಚಿಕ್ಕವನು, ಜಾಗ ತಿಳಿಯುವುದಿಲ್ಲ" ಎಂದರೆ "ಅವನಿಗೇನು ಬಾಯಿ ಇಲ್ಲವೇ, ಓಡಾಡಲು ಸೈಕಲಿಲ್ಲವೇ" ಎಂದು ಹೇಳಿ, "ಜಾಗ ಗುರತನ್ನು ಹೇಳಿ ಗೊತ್ತಾಗದಿದ್ದರೆ ಯಾರನ್ನಾದರೂ ಕೇಳು, ಹೋದ ದಾರಿಯನ್ನು ಗುರುತಿಟ್ಟುಕೊಂಡು ಮನೆಗೆ ಸರಿಯಾಗಿ ಬಾ" ಎಂದು ಧೈರ್ಯ ತುಂಬುತ್ತಿದ್ದರು. ಹೀಗಾಗಿ ಸೈಕಲ್ಲಿನಲ್ಲಿ ಕುಳಿತುಬಿಟ್ಟೆನೆಂದರೆ ಈ ರಸ್ತೆ ಎಲ್ಲಿಗೆ ಹೋಗುತ್ತದೆ. ಆ ರಸ್ತೆ ಎಲ್ಲಿಗೆ ಹೋಗುತ್ತದೆ. ಯಾವುದು ಅತಿ ಹತ್ತಿರದ ದಾರಿ, ಎಂದು ಹುಡುಕಾಟ ನಡೆಸುವುದೇ ಒಂದು ಕಾಯಕವಾಗಿತ್ತು. ನಮ್ಮ ತಂದೆ ಉಪಯೋಗಿಸುತ್ತಿದ್ದ ಸೈಕಲ್ಲಿನ ಹೆಸರು 'ಹಿಲ್ಕನ್'. ಅದು ನಮ್ಮ ತಾತನ ಕಾಲದ್ದು. ಎತ್ತರವಾಗಿತ್ತು. ನಾವು ಅದರಲ್ಲಿ ತುಳಿಯುತ್ತಿದ್ದುದು ಕೇವಲ 'ಕತ್ತರಿ' ಮೂಲಕ (ಅಂದರೆ ಬಾರ್ನ ಕೆಳಗೆ ಕಾಲು ತೂರಿಸಿ ತುಳಿಯುವುದು). ನಮ್ಮ ತಂದೆ ಪ್ಯಾಂಟಿಗೆ ತೊಡರದಂತೆ ಒಂದು ತಂತಿಯನ್ನು ಬಿಗಿದು ತಲೆಗೆ ಹ್ಯಾಟೊಂದನ್ನು ಇಟ್ಟುಕೊಂಡು ಸೈಕಲ್ಲಿನ ಮೇಲೆ ಓಡಾಡುತ್ತಿದ್ದುದು ನನಗೆ ಇಂದಿಗೂ ನೆನಪಿದೆ. ಬಹುಶಃ ಆ ಕಾಲಕ್ಕೆ ಅದು ಇಂದಿನ ಒಂದು ದ್ವಿಚಕ್ರ ವಾಹನಕ್ಕೆ ಸಮವಾಗಿತ್ತೇನೋ. ನಮ್ಮನ್ನು ಅದರ ಮೇಲೆ ಕೂಡಿಸಿ ನಿಧಾನವಾಗಿ, ಓಡಾಡಿಸುತ್ತಾ ಒಂದೊಂದು ಜಾಗವನ್ನೂ ವಿವರಿಸುತ್ತಿದ್ದರು. ಅದರಿಂದ ನನಗೆ ಇಂದಿಗೂ ಅನೇಕ ಜಾಗಗಳನ್ನು ನೋಡಿದಾಗ ನಮ್ಮ ತಂದೆಯೊಂದಿಗೆ ಅವರ ಸೈಕಲ್ಲಿನ ಮೇಲೆ ಕುಳಿತ ನೆನಪೂ ಕಾಡುತ್ತದೆ. 'ಬೆಂಗಳೂರಿನ ಇತಿಹಾಸ' ಎಂಬ ಬೃಹತ್ ಗ್ರಂಥವನ್ನು ಬರೆದ ಅವರು (ಬ. ನ. ಸುಂದರರಾವ್) ಅದರಲ್ಲಿ ಬರುವ ಅನೇಕ ವಿಷಯಗಳನ್ನು ನಮಗೆ ಪ್ರತ್ಯೇಕ್ಷವಾಗಿಯೂ ತೋರಿಸಿದ್ದರು.
ಸೈಕಲ್ ಯಾತ್ರೆ
ನಾವೆಲ್ಲಾ ಇಂಜಿನಿಯರಿಂಗ್ ಕಾಲೇಜಿಗೆ ಸೇರಿದ ಮೊದಲನೇ ವರ್ಷದ ರಜೆಯಲ್ಲಿ ಬನ್ನೇರುಘಟ್ಟಕ್ಕೆ ಸೈಕಲ್ನಲ್ಲಿ ಹೋಗಿ ವಿಹಾರ ಮಾಡಿ ಬಂದದ್ದು ಇಂದಿಗೂ ನನ್ನ ಮನದಲ್ಲಿ ಅಚ್ಚಳಿಯದೇ ಉಳಿದಿದೆ. ಹಾಗೆಯೇ ಸೈಟ್ ಕ್ಯಾಂಪಿಗೆಂದು ಹೆಸರುಘಟ್ಟದ ಕೆರೆಯ ಬಳಿಗೆ ಸೈಕಲ್ಲಿನಲ್ಲೇ ಹೋಗಿ ಟೆಂಟುಗಳನ್ನು ಹಾಕಿ ನಾವೇ ಅಡುಗೆ ಮಾಡಿ ತಿಂದು ತೇಗಿ ಬಂದದ್ದೂ ಇನ್ನೂ ನೆನಪಿದೆ. ಆಗ ನಮಗೆ ಇವೆಲ್ಲಾ ಎಷ್ಟು ದೂರದ ಜಾಗಗಳು ಎನ್ನಿಸುತ್ತಿತ್ತು. ಆದರೆ ಇಂದಿನ ಬೆಂಗಳೂರಿನ ಬೆಳವಣಿಗೆಯನ್ನು ಕಂಡಾಗ ಅವೆಲಾ ನಗರಕ್ಕೆ ಸೇರಿಬಿಟ್ಟಿವೆಯೇನೋ ಅನ್ನಿಸುತ್ತದೆ.
ಸೈಕಲ್ಲನ್ನು ತಳ್ಳಿಕೊಂಡು ಹೋದದ್ದು
ಸೈಕಲ್ಲು ಮತ್ತು ನಮ್ಮ ತಂದೆಯ ವಿಷಯಕ್ಕೆ ಬಂದಾಗ ಒಂದು ಸಣ್ಣ ಸಂಗತಿ ನೆನಪಿಗೆ ಬರುತ್ತದೆ. ಒಮ್ಮೆ ಯಾವುದೋ ತುರ್ತು ಕೆಲಸವಿತ್ತು. ನಾವುಗಳೆಲ್ಲಾ ಇನ್ನೂ ಚಿಕ್ಕವರು. ಆಗ ಅಲ್ಲೇ ಇದ್ದ ನಮ್ಮ ದೂರದ ನೆಂಟರ ಹುಡುಗನನ್ನು ನಮ್ಮ ತಂದೆ. "ನೀನು ಬೇಗ ಹೋಗಿ ಆ ಕೆಲಸ ಮುಗಿಸಿಕೊಂಡು ಬಾ", ಎಂದರೆ, ಆ ಹುಡುಗನಿಗೋ ಸಂಕೋಚ, ಅಲ್ಲದೇ ನಮ್ಮ ತಂದೆಯವರನ್ನು ಕಂಡರೆ ಭಯ. ಸಾಲದ್ದಕ್ಕೆ ನಮ್ಮ ತಂದೆ ತಮ್ಮ ಸೈಕಲ್ಲನ್ನು ಕೊಟ್ಟು ಬೇಗ ಇದರಲ್ಲಿ ಹೋಗಿ ಕೆಲಸ ಮುಗಿಸಿಕೊಂಡು ಬಾ ಎಂದು ಆದೇಶ ನೀಡಿಯೇ ಬಿಟ್ಟರು. ಆ ಹುಡುಗ ಬೇರೇನೂ ತೋಚದೆ ಆ ಸೈಕಲ್ಲನ್ನು ತಳ್ಳಿಕೊಂಡು ಹೊರಟ. ಹತ್ತಿಕೊಂಡು ಬೇಗ ಹೋಗಬಾರದೇನೋ ಎಂದು ನಮ್ಮ ತಂದೆ ಗದರಿದರು. ಆಗ ಆ ಹುಡುಗ ಹೆದರುತ್ತಾ ತನಗೆ ಸೈಕಲ್ಲು ತುಳಿಯಲು ಬರುವುದಿಲ್ಲ ಎಂದು ಬೆದರಿ ಹೇಳಿದಾಗ ಅವರಿಗೆ ಸಿಟ್ಟು, ನಗು ಒಟ್ಟಿಗೆ ಬಂದಿದ್ದವು. ನಂತರ ಆ ಕೆಲಸ ಹೇಗೋ ಆಯಿತು. ಆದರೆ ನಮ್ಮ ತಂದೆ ಆ ಹುಡುಗನಿಗೆ ಮೊದಲು ಸೈಕಲ್ ತುಳಿಯುವುದನ್ನು ಕಲಿ, ಗಂಡು ಹುಡುಗರಿಗೆ ಇದು ತುಂಬ ಮುಖ್ಯ ಎಂದು ಉಪದೇಶ ನೀಡಿ ಅವನು ಕಲಿಯುವಂತೆ ಮಾಡಿದರು. ಅದೇ ಸಮಯದಲ್ಲಿ ನಾವು ಅವನೊಂದಿಗೆ ಸೈಕಲ್ಲನ್ನು ಕಲಿತುಬಿಟ್ಟೆವು. ಒಂದು ಕಾಲಿನ ಮೇಲೆ ತಗ್ಗಾದ ರಸ್ತೆಯಲ್ಲಿ ಬ್ಯಾಲೆನ್ಸ್ ಮಾಡಿ ಸಾಗುವುದು, ನಂತರ ಕತ್ತರಿ, ಬಾರ್, ನಂತರ ಸೀಟು ಇವು ಕಲಿಯುವಾಗಿನ ವಿವಿಧ ಹಂತಗಳು. ಅಂದು ಚಿಕ್ಕ ಸೈಕಲ್ಗಳು ಇರಲಿಲ್ಲವಾದ್ದರಿಂದ ಎಲ್ಲರೂ ದೊಡ್ಡ ಸೈಕಲ್ಲಿನ ಮೇಲೆ ಈ ಹಂತಗಳನ್ನು ದಾಟಿಯೇ ಮುಂದುವರಿಯಬೇಕಿತ್ತು. ನನಗೆ ಸೈಕಲ್ ತುಳಿಯಲು ಬಂದರೂ ಸೀಟಿನಲ್ಲಿ ಕುಳಿತಾಗ ಕಾಲು ಎಟುಕುತ್ತಿರಲಿಲ್ಲವಾದ್ದರಿಂದ ಸುಮಾರು ದಿನ ನಮ್ಮ ತಂದೆಯ ದೊಡ್ಡ ಸೈಕಲ್ಲಿನಲ್ಲಿ 'ಕತ್ತರಿ' ತುಳಿದುಕೊಂಡೇ ಓಡಾಡುತ್ತಿದ್ದೆ.
ಅಂದು ಇಂದು
ಮುಂದೆ ಕೆಲಸಕ್ಕೆ ಸೇರಿದಾಗ ಕಛೇರಿಯದೇ ಬಸ್ಸುಗಳ ಅನುಕೂಲವಿದ್ದುದರಿಂದ ಈ ಸೈಕಲ್ಲಿನ ನಂಟು ತಪ್ಪಿತು. ನನಗೆ ಕೊಡಿಸಿದ್ದ ಹಸಿರು ಬಣ್ಣದ ಬಿ.ಎಸ್.ಎ. ಸೈಕಲ್ಲನ್ನು ಅನೇಕ ದಿನ ನೆನಪಿಗೆಂದು ಹಾಗೆಯೇ ಇಟ್ಟುಕೊಂಡಿದ್ದೆ. ಆದರೆ ಅದನ್ನು ಉಪಯೋಗಿಸದೆ ಸುಮ್ಮನೆ ಇಟ್ಟು ಇಟ್ಟು ಇಟ್ಟಾಳನಾಗುತ್ತೇನೆ ಎಂದು ಒಲ್ಲದ/ಒಳ್ಳೆಯ ಮನಸ್ಸಿನಿಂದ ಸೈಕಲ್ಲಿನ ಉಪಯೋಗಿವಿರುವ ಬಡವರೊಬ್ಬರಿಗೆ ಅದನ್ನು ದಾನ ಮಾಡಿದೆ. ಈಗಲೂ ನನ್ನ ಆ ಸೈಕಲ್ಲು ಎಲ್ಲೋ ಉಪಯೋಗವಾಗುತ್ತಿದೆ ಹಾಗೂ ನನ್ನ ಮನಸ್ಸಿನಲ್ಲಿ ಅದರ ನೆನಪು ಅಚ್ಚಳಿಯದೇ ಉಳಿದಿದೆ ಎಂಬುದೇ ಒಂದು ಸಮಾಧಾನ.
ನಾನು ನನ್ನ ಮಗನಿಗೆ ಸೈಕಲ್ ಕಲಿಸಿದ ನೆನಪು ಇನ್ನೂ ಮಾಸಿಲ್ಲ. ಅವನೊಂದಿಗೆ ನಾನು ಓಡುತ್ತಿದ್ದುದು, ಎದುರಿಗೆ ಕಲ್ಲಿದೆ. ಹೋಗಬೇಡ ಎಂದರೆ ಅವನು ಸೀದಾ ಅದಕ್ಕೆ ಡಿಕ್ಕಿ ಹೊಡೆಯುತ್ತಿದ್ದುದು, ಇವೆಲ್ಲಾ ಮರೆಯಲಾರದ ಸೈಕಲ್ ನೆನಪುಗಳು. ಇಂದು ಅವನು ಒಂದು ಗೇರ್ ಸೈಕಲ್ ಅನ್ನು ಉಪಯೋಗಿಸುತ್ತಾನೆ. ಆದರೂ ಹಿಂದಿನ ಸಾಮಾನ್ಯ ಸೈಕಲ್ಲಿನಲ್ಲಿ ಸಿಗುತ್ತಿದ್ದ ಮಜ ಇದರಲ್ಲಿ ಬರುವುದಿಲ್ಲ. ಆದರೆ ಇಂದಿನವರೆಗೆ ಸೈಕಲ್ ಎಂದರೆ ಅದೇನೋ ತಾತ್ಸಾರ, ಬೈಕುಗಳಿಗೆ ಎಲ್ಲಿಲ್ಲದ ಪ್ರಾಶಸ್ತ್ರ, ಜೊತೆಗೆ ಇಂದಿನ ಜೀವನದ ವೇಗವೂ ಮೊದಲಿಗಿಂತ ಹೆಚ್ಚು, ಎಲ್ಲವೂ ಸೂಪರ್ ಫಾಸ್ಟ್ ಈಗಿನವರು ಹಿಂದಿನಂತೆ ನಿಧಾನಸ್ಥರಲ್ಲ, ಹೀಗಾಗಿ ಸೈಕಲ್, ಗಾಡಿಗಳು ಎಲ್ಲವೂ ಹಿಂದೆ ಸರಿದಿವೆ.
ಅನೇಕ ದೇಶಗಳಲ್ಲಿ ಸೈಕಲ್ಲನ್ನು ಮರೆತು ಉಳಿದ ವಾಹನಗಳ ರುಚಿ ಕಂಡು ಈಗ ಸೈಕಲ್ಲೇ ವಾಸಿ ಎಂದು ಮತ್ತೆ ಅದಕ್ಕೆ ಮುಗಿಬಿದ್ದಿದ್ದಾರೆ. ಇದರಿಂದಾಗಿ ಅನೇಕ ಸೈಕಲ್ ಕ್ಲಬ್ಗಳು ಹುಟ್ಟಿಕೊಂಡಿವೆ. ಯೂರೋಪ್ ಮೊದಲಾದ ಕಡೆ ಸೈಕಲ್ ಸವಾರರಿಗಾಗಿಯೇ ರಸ್ತೆಯ ಒಂದು ಬದಿಯನ್ನು ಮೀಸಲಾಗಿಡಲಾಗಿದೆ. ಈ ಸೈಕಲ್ ಸವಾರಿಯಲ್ಲೂ ಚೀನಾ ನಮಗಿಂತ ಮುಂದಿದೆ. ಮನಸ್ಸು ಮಾಡಿದರೆ ನಾವು ಅವರನ್ನು ಮೀರಿಸಬಹುದು. ಕಾರು, ದ್ವಿಚಕ್ರ ವಾಹನಗಳಿಂದ ನಗರಗಳನ್ನು ಹಾಳು ಮಾಡಿ ನಂತರ ಮತ್ತೆ ಸೈಕಲ್ಲಿಗೆ ಬರುವುದಕ್ಕಿಂತ ಈಗಲೇ ಸೈಕಲ್ಲಿಗೆ ಪ್ರಾಶಸ್ತ್ರ ಕೊಟ್ಟರೆ ಒಳ್ಳೆಯದಲ್ಲವೇ? ಮುಂದುವರಿದ ದೇಶಗಳ ಹಿನ್ನೆಲೆಯಲ್ಲಿ ಇದನ್ನು ಈಗಲೇ ಅಳವಡಿಸಿಕೊಳ್ಳುವುದು ಸೂಕ್ತ.
ಬೆಂಗಳೂರಿನಲ್ಲಿ ಏರು ತಗ್ಗುಗಳು ಹೆಚ್ಚಿರುವುದರಿಂದ ಸೈಕಲ್ ಉಪಯೋಗಿಸುವವರ ಸಂಖ್ಯೆ ಕಡಿಮೆ ಎಂದು ಒಮ್ಮೆ ನನ್ನ ಗೆಳೆಯ ಹೇಳಿದ. ಅಭ್ಯಾಸವಿದ್ದವರಿಗೆ ಇವೆಲ್ಲ ಲೆಕ್ಕಕ್ಕೇ ಇರುವುದಿಲ್ಲ. ಉಪಯೋಗಿಸಲು ಮನಸಿಲ್ಲ, ತಮ್ಮ ಪ್ರತಿಷ್ಠೆಗೆ ಎಲ್ಲಿ ಕುಂದು ಬರುತ್ತದೋ ಎಂಬ ಭಯ ಮೊದಲಾದವುಗಳೇ ಇದಕ್ಕೆ ಕಾರಣ ಎಂದು ನನ್ನ ಅನಿಸಿಕೆ. ಚಕ್ರ ಸುತ್ತುತ್ತಲೇ ಇರುತ್ತದೆ ಅನ್ನುತ್ತಾರಲ್ಲಾ ಹಾಗೆ (ಈಗ ರೇಡಿಯೋ ಮತ್ತೆ ಬಂದಿರುವ ಹಾಗೆ) ಸೈಕಲ್ ಸಹ ಫೀನಿಕ್ಸ್ ಪಕ್ಷಿಯಂತೆ ಮತ್ತೆ ಬರುತ್ತದೆ. ಅಮೆರಿಕ ಮೊದಲಾದ ಕಡೆಯ ಈಗಿನ ಟ್ರೆಂಡ್ ನೋಡಿದರೆ ಇದು ಸುಳ್ಳಲ್ಲ. ಹಾಗಾದರೂ ಸೈಕಲ್ಲುಗಳು ಬರಲಿ, ಜನ ಮೊದಲಿನಂತೆ ಸ್ವಲ್ಪ ನಿಧಾನಸ್ಥರಾಗಲಿ, ವಾತಾವರಣದ ಮಾಲಿನ್ಯ ಕಡಿಮೆಯಾಗಲಿ. ಸೈಕಲ್ ಎಂದು ತಾತ್ಸಾರ ಮಾಡದೆ, ಸರಿಯಾಗಿ ಉಪಯೋಗಿಸಿದರೆ ಜನಗಳ ಆರೋಗ್ಯವೊಂದೇ ಅಲ್ಲ ನಗರದ ಆರೋಗ್ಯವೂ, ಪೆಟ್ರೋಲಿನ ಅಭಾವವೂ ಸುಧಾರಿಸಬಹುದು. ಎಲ್ಲರೂ ಹೆಚ್ಚಾಗಿ ಸೈಕಲ್, ಸಾರ್ವಜನಿಕ ವಾಹನಗಳನ್ನು ಬಳಸಿದರೆ ಆಗ ವಾತಾವರಣವೂ ಹಿತವಾಗಿ ಓಡಾಡಲು ತೊಂದರೆಯಾಗುವುದಿಲ್ಲ. ಹಂಗಿಸದೆ ಎಲ್ಲರೂ ಅದನ್ನು
2008 ಮಾತ್ರ ಏಕೆ, ಎಲ್ಲ ವರ್ಷಗಳನ್ನೂ ಸೈಕಲ್ಲಿನ ವರ್ಷಗಳನ್ನಾಗಿ ಮಾಡಿಬಿಟ್ಟರೆ ಒಳ್ಳೆಯದಲ್ಲವೇ?
ಆಕರ ಗ್ರಂಥ; ಹೊಸತು. ಮಾಸಪತ್ರಿಕೆ. ಬೆಂಗಳೂರು, (2011)
ಲೇಖಕರ ಪರಿಚಯ:
ಬಿ. ಎಸ್ ಜಗದೀಶ್ ಚಂದ್ರ: ಬಿ. ಎಸ್ ಜಗದೀಶ್ ಚಂದ್ರ ಅವರು 2011 ಹೊಸ ಪತ್ರಿಕೆಗೆ
ಸೈಕಲ್ ಗಳಲ್ಲಿ ತಿರುಗಿದಾಗ ಎನ್ನುವ ಪ್ರಬಂಧವನ್ನು ಬರೆದಿರುತ್ತಾರೆ. ಆ ಪ್ರಬಂದಲ್ಲಿ ತಮ್ಮ ಬಾಲ್ಯದ ವು ಒಬ್ಬ ವ್ಯಕ್ತಿಗೆ ಅತ್ಯಂತ ಅಮೂಲ್ಯವಾದವುಗಳಲ್ಲಿ ಒಂದಾಗಿದೆ. ಮಗುವಿಗೆ ಆಧುನಿಕ ಪ್ರಪಂಚದ ಬಗ್ಗೆ ಯಾವುದೇ ಚಿಂತೆ ಇರುವುದಿಲ್ಲ ಮತ್ತು ವಯಸ್ಕರು ತಮ್ಮ ಜೀವನದ ಆ ಅಸಡ್ಡೆ ಹಂತದ ನೆನಪುಗಳನ್ನು ನೆನಪಿಸಿಕೊಳ್ಳುವಾಗ, ಅವರು ಪ್ರಸ್ತುತ ಜೀವನದಲ್ಲಿ ಎದುರಿಸುತ್ತಿರುವ ಒತ್ತಡವನ್ನು ಒಂದು ಕ್ಷಣವಾದರೂ ಮರೆಯುವ ಅವಕಾಶವನ್ನು ಪಡೆಯುತ್ತಾರೆ. ಬಾಲ್ಯದ ದಿನಗಳಲ್ಲಿ ಸೈಕಲ್ ಗಳಲ್ಲಿ ಓಡಾಡಿಡ ಆ ಸಂದರ್ಭ ಹಾಗೂ ಅದರಿಂದ ಖುಷಿ ಪಟ್ಟಂತ ಆ ಆನಂದದ ದಿನಗಳನ್ನು ಮೆಲುಕು ಹಾಕುವ ಪ್ರಸಂಗವನ್ನು ಈ ನೆನಪಿನ ಸೈಕಲ್ಗಳಲ್ಲಿ ತಿರುಗಿದಾಗ ಲೇಖನದಲ್ಲಿ ನೋಡುತ್ತೇವೆ
1. ಹರಿಯಾಣದಲ್ಲಿ ಸೈಕಲ್ ವರ್ಷ ಎಂಬ ಜಾಥಾವನ್ನು ಯಾವ ವರ್ಷ ಆಚರಿಸಲಾಯಿತು? ಏಕೆ?
ಉತ್ತರ: ಹರಿಯಾಣದ ಹಿಸ್ಸಾರ್ನಲ್ಲಿ **2008ನೇ ಇಸವಿಯನ್ನು ‘ಸೈಕಲ್ ವರ್ಷ’** ಎಂದು ಆಚರಿಸಿ ಸೈಕಲ್ ಜಾಥಾವನ್ನು ನಡೆಸಲಾಯಿತು.
ಈ ಜಾಥಾದ ಉದ್ದೇಶ ಕೇವಲ ಸೈಕಲ್ ಬಳಕೆಯನ್ನು ಪ್ರೋತ್ಸಾಹಿಸುವುದಾಗಿರಲಿಲ್ಲ. **ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುವುದು, ಸೈಕಲ್ ಬಳಕೆಯ ಮಹತ್ವವನ್ನು ತಿಳಿಸುವುದು ಹಾಗೂ ಕುಡಿತದಂತಹ ಕೆಟ್ಟ ಚಟಗಳ ವಿರುದ್ಧ ಜನರಲ್ಲಿ ಅರಿವು ಮೂಡಿಸುವುದು** ಇದರ ಮುಖ್ಯ ಉದ್ದೇಶವಾಗಿತ್ತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಕಾಲೇಜಿಗೆ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿ, ಸೈಕಲ್ಗಳನ್ನು ಖರೀದಿಸಿ ಹಳ್ಳಿಗಳಿಗೆ ತೆರಳಿ ಜನಸೇವೆ ಮಾಡಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
೨. ಕೆ.ಆರ್. ಸರ್ಕಲ್ಲಿನಲ್ಲಿದ್ದ ವಿ.ವಿ. (ಇಂಜಿನಿಯರಿಂಗ್ ಕಾಲೇಜಿಗೆ) ಸೈಕಲ್ ಪ್ರಯಾಣದ ಬಗ್ಗೆ ಲೇಖಕರ ಹೇಳಿಕೆ ಏನು?
ಉತ್ತರ ಲೇಖಕರು ವಿ.ವಿ. (ಇಂಜಿನಿಯರಿಂಗ್ ಕಾಲೇಜಿಗೆ) **ಸೈಕಲ್ನಲ್ಲಿಯೇ ಪ್ರಯಾಣ ಮಾಡುತ್ತಿದ್ದರು**. ಈ ಪ್ರಯಾಣ ಸ್ವಲ್ಪ ದೂರವಾಗಿದ್ದರೂ ಬಸ್ಸಿಗಿಂತ ಸೈಕಲ್ ಅನುಕೂಲಕರವೆಂದು ಅವರಿಗೆ ಅನಿಸುತ್ತಿತ್ತು. ಸೈಕಲ್ಗೆ **ಟಿ-ಸ್ಟ್ಯಾಂಡ್ ಅಳವಡಿಸಿಕೊಂಡು, ಹ್ಯಾಂಡಲ್ಗೆ ಡ್ರಾಯಿಂಗ್ ಶೀಟ್ಗಳನ್ನು ಕಟ್ಟಿಕೊಂಡು** ಕಾಲೇಜಿಗೆ ಹೋಗುತ್ತಿದ್ದರು. ದಾರಿಯಲ್ಲಿ ಸಿಗುತ್ತಿದ್ದ ಗೆಳೆಯರನ್ನು ಸೇರಿಸಿಕೊಂಡು, ಮುಂದೆ ಹೋಗುತ್ತಿದ್ದ ಗೆಳೆಯರನ್ನು ವೇಗವಾಗಿ ಸೈಕಲ್ ತುಳಿದು ಸೇರಿಕೊಳ್ಳುತ್ತಿದ್ದರು. ಬೆಳಗಿನ ಚಳಿಯಲ್ಲಿ ಸೈಕಲ್ನಲ್ಲಿ ಕಾಲೇಜಿಗೆ ಹೋಗುತ್ತಿದ್ದ ಅನುಭವವನ್ನು ಲೇಖಕರು ಸಂತೋಷದಿಂದ ನೆನಪಿಸಿಕೊಂಡಿದ್ದಾರೆ.
೩. ‘ನಗರದಲ್ಲಿ ಯಾವ ವಾಹನ ಮೊದಲು?’ ಎಂದು ಲೇಖಕರು ಹೇಳಲು ಕಾರಣವೇನು?
ಉತ್ತರ ನಗರಗಳಲ್ಲಿ ವಾಹನ ದಟ್ಟಣೆ ಹೆಚ್ಚಿರುವುದರಿಂದ ಕಾರು, ಸ್ಕೂಟರ್ ಮುಂತಾದ ವಾಹನಗಳಿಗಿಂತ **ಸೈಕಲ್ ವೇಗವಾಗಿ ಗಮ್ಯಸ್ಥಾನ ತಲುಪಬಹುದು** ಎಂಬುದನ್ನು ತಿಳಿಸಲು ಲೇಖಕರು ಈ ಪ್ರಸಂಗವನ್ನು ಹೇಳಿದ್ದಾರೆ.
ಒಮ್ಮೆ ಲೇಖಕರು ಜಯನಗರದಿಂದ ಕೆಂಪೇಗೌಡ ನಿಲ್ದಾಣಕ್ಕೆ ಕಾರಿನಲ್ಲಿ ಹೊರಟಿದ್ದರು. ಅವರ ಮೈದುನ ಸ್ಕೂಟರ್ನಲ್ಲಿ ಹಾಗೂ ತಿಮ್ಮ ಸೈಕಲ್ನಲ್ಲಿ ಹೊರಟರು. ಆಶ್ಚರ್ಯವೆಂದರೆ **ಮೊದಲು ನಿಲ್ದಾಣ ತಲುಪಿದ್ದು ತಿಮ್ಮ ಸೈಕಲ್ನಲ್ಲಿ, ನಂತರ ಸ್ಕೂಟರ್ನಲ್ಲಿದ್ದ ಗೆಳೆಯ ಮತ್ತು ಕೊನೆಯಲ್ಲಿ ಕಾರಿನಲ್ಲಿದ್ದ ಲೇಖಕರು**. ಈ ಘಟನೆಯ ಮೂಲಕ ನಗರದಲ್ಲಿ ವಾಹನ ದಟ್ಟಣೆಯ ಸಂದರ್ಭದಲ್ಲಿ **ಸೈಕಲ್ ಕಾರಿಗಿಂತ ವೇಗವಾಗಿ ಮತ್ತು ಅನುಕೂಲಕರವಾಗಿ ಸಂಚರಿಸಬಹುದು** ಎಂಬುದನ್ನು ಲೇಖಕರು ಹೇಳಿದ್ದಾರೆ.
೪. ಸೈಕಲ್ ಅಂದರೆ ನನಗೆ ನೆನಪು ಬರುವಂತಹ ಸಂದರ್ಭಗಳು ಯಾವುವು?
ಉತ್ತರ ಲೇಖಕರಿಗೆ ಸೈಕಲ್ ಎಂದರೆ ತಮ್ಮ **ಹೈಸ್ಕೂಲ್ ದಿನಗಳ ನೆನಪುಗಳು** ಮೊದಲು ಬರುತ್ತವೆ. ಜಯನಗರದಿಂದ ಗಾಂಧಿಬಜಾರ್ಗೆ ಪ್ರತಿದಿನ ಸೈಕಲ್ನಲ್ಲಿ ಶಾಲೆಗೆ ಹೋಗುತ್ತಿದ್ದ ಅನುಭವವನ್ನು ಅವರು ನೆನಪಿಸಿಕೊಳ್ಳುತ್ತಾರೆ. ನ್ಯಾಷನಲ್ ಕಾಲೇಜಿನಲ್ಲಿ **ಸೈಕಲ್ ಮೇಲೆ ಕುಳಿತು ಪೇಪರ್ ಓದುವ ಪ್ರದರ್ಶನ** ಹಾಗೂ ಕಾಲೇಜಿನ **ನಿಧಾನ ಸೈಕಲ್ ರೇಸ್ನಲ್ಲಿ** ಭಾಗವಹಿಸಿದ್ದ ಸಂದರ್ಭಗಳೂ ನೆನಪಾಗುತ್ತವೆ.
ಮುಂದೆ ಇಂಜಿನಿಯರಿಂಗ್ ಕಾಲೇಜಿಗೆ ಸೈಕಲ್ನಲ್ಲಿ ಹೋಗುತ್ತಿದ್ದ ದಿನಗಳು, ಗೆಳೆಯರೊಂದಿಗೆ ಸೈಕಲ್ ಪ್ರಯಾಣ ಮಾಡುತ್ತಿದ್ದ ಸಂತೋಷ, ಸೈಕಲ್ ಸ್ಟಾಂಡಿನ ನಾಗಪ್ಪನ ಪರಿಚಯ ಹಾಗೂ ಪ್ರಾಧ್ಯಾಪಕರಾದ ಕೆ.ಎನ್. ಅಯ್ಯಂಗಾರ್ ಅವರೊಂದಿಗೆ ಸೈಕಲ್ನಲ್ಲಿ ಹೋಗುತ್ತಿದ್ದ ಸಂದರ್ಭಗಳೂ ಲೇಖಕರಿಗೆ ನೆನಪಾಗುತ್ತವೆ. **ಬನ್ನೇರುಘಟ್ಟ ಮತ್ತು ಹೆಸರಘಟ್ಟಕ್ಕೆ ಸೈಕಲ್ನಲ್ಲಿ ಪ್ರವಾಸ ಹೋದ ನೆನಪುಗಳು** ಕೂಡ ಅವರಿಗೆ ಮರೆಯಲಾಗದವು. ಹೀಗೆ ಸೈಕಲ್ ಲೇಖಕರ ಬಾಲ್ಯ, ಸ್ನೇಹ, ವಿದ್ಯಾಭ್ಯಾಸ ಮತ್ತು ಪ್ರವಾಸದ ಅನೇಕ ಸಿಹಿ ನೆನಪುಗಳಿಗೆ ಕಾರಣವಾಗಿದೆ.
೫. ಸೈಕಲ್ನಲ್ಲಿ ಹೈಸ್ಕೂಲ್ಗೆ ಹೋಗುತ್ತಿದ್ದ ಸಂದರ್ಭವನ್ನು ತಿಳಿಸಿ.
ಉತ್ತರ ಲೇಖಕರು **ಹೈಸ್ಕೂಲ್ನಲ್ಲಿ ಓದುತ್ತಿದ್ದಾಗ ಜಯನಗರದಿಂದ ಗಾಂಧಿಬಜಾರ್ಗೆ ಪ್ರತಿದಿನ ಸೈಕಲ್ನಲ್ಲಿ ಶಾಲೆಗೆ ಹೋಗುತ್ತಿದ್ದರು**. ಎಂಟನೇ ತರಗತಿಯಲ್ಲಿ ಬಸ್ಸಿನಲ್ಲಿ ಪ್ರಯಾಣಿಸುವಾಗ ಉಂಟಾಗುತ್ತಿದ್ದ ಕಿರಿಕಿರಿಯಿಂದ ಬೇಸತ್ತು ಸೈಕಲ್ ಬಳಸಲು ಆರಂಭಿಸಿದರು. ಸೈಕಲ್ನಿಂದ ಅವರಿಗೆ **ಸ್ವತಂತ್ರವಾಗಿ ಓಡಾಡುವ ಅವಕಾಶ** ದೊರೆಯಿತು. ಪ್ರತಿದಿನ ಬೇರೆ ಬೇರೆ ದಾರಿಗಳಲ್ಲಿ ಸೈಕಲ್ನಲ್ಲಿ ಹೋಗುತ್ತಿದ್ದುದರಿಂದ ಆ ಪ್ರದೇಶದ ಅನೇಕ ದಾರಿಗಳು ಅವರಿಗೆ ಪರಿಚಯವಾದವು. ಬೆಟ್ಟದಂತಿರುವ ರಸ್ತೆಯಲ್ಲಿ ಸೀಟಿನಿಂದ ಎದ್ದು ಬಾರ್ ತುಳಿದು ಸೈಕಲ್ ಓಡಿಸುತ್ತಿದ್ದ ಅನುಭವವೂ ಅವರಿಗೆ ನೆನಪಾಗಿದೆ. ಶಾಲೆಯಿಂದ ಹಿಂದಿರುಗುವಾಗ ಗೆಳೆಯರೊಂದಿಗೆ ನಿಧಾನವಾಗಿ ಮಾತನಾಡಿಕೊಂಡು ಬರುತ್ತಿದ್ದ ಸಂತೋಷವನ್ನು ಲೇಖಕರು ವಿಶೇಷವಾಗಿ ಸ್ಮರಿಸಿಕೊಂಡಿದ್ದಾರೆ.
೬. ಸೈಕಲ್ ತಳ್ಳಿಕೊಂಡು ಹೋದ ಪ್ರಸಂಗ ಕುರಿತು ಚರ್ಚಿಸಿ.
ಉತ್ತರ ಒಮ್ಮೆ ಲೇಖಕರ ತಂದೆಗೆ ತುರ್ತು ಕೆಲಸವೊಂದು ಬಂದಿತ್ತು. ಅವರು ತಮ್ಮ ದೂರದ ನೆಂಟರ ಹುಡುಗನಿಗೆ ಆ ಕೆಲಸವನ್ನು ಬೇಗ ಮುಗಿಸಿಕೊಂಡು ಬರಲು ಹೇಳಿದರು. ಜೊತೆಗೆ ತಮ್ಮ **ಸೈಕಲ್ಲನ್ನು ಕೊಟ್ಟು ಅದರಲ್ಲಿ ಬೇಗ ಹೋಗಿ ಬಾ** ಎಂದು ಆದೇಶಿಸಿದರು. ಆದರೆ ಆ ಹುಡುಗನಿಗೆ ಸೈಕಲ್ ತುಳಿಯಲು ಬರುತ್ತಿರಲಿಲ್ಲ. ತಂದೆಯವರ ಭಯದಿಂದ ಇದನ್ನು ಹೇಳಲು ಸಂಕೋಚಪಟ್ಟ ಅವನು **ಸೈಕಲ್ಲನ್ನು ತಳ್ಳಿಕೊಂಡೇ ಹೊರಟನು**.
ಇದನ್ನು ಗಮನಿಸಿದ ಲೇಖಕರ ತಂದೆಗೆ ಸಿಟ್ಟು ಮತ್ತು ನಗು ಎರಡೂ ಬಂದವು. ನಂತರ ಅವರು ಆ ಹುಡುಗನಿಗೆ **ಮೊದಲು ಸೈಕಲ್ ತುಳಿಯುವುದನ್ನು ಕಲಿಯಬೇಕು; ಗಂಡು ಹುಡುಗರಿಗೆ ಸೈಕಲ್ ಕಲಿಯುವುದು ಮುಖ್ಯ** ಎಂದು ತಿಳಿಸಿ, ಸೈಕಲ್ ಕಲಿಯುವಂತೆ ಮಾಡಿದರು. ಇದೇ ಸಂದರ್ಭದಲ್ಲಿ ಲೇಖಕರೂ ಅವನೊಂದಿಗೆ ಸೈಕಲ್ ಕಲಿತರು. ಮೊದಲು ಒಂದು ಕಾಲಿನಿಂದ ಸಮತೋಲನ ಸಾಧಿಸುವುದು, ನಂತರ ‘ಕತ್ತರಿ’, ‘ಬಾರ್’ ಮತ್ತು ಕೊನೆಗೆ ಸೀಟಿನಲ್ಲಿ ಕುಳಿತು ಸೈಕಲ್ ತುಳಿಯುವುದನ್ನು ಕಲಿತರು.
ಈ ಪ್ರಸಂಗವು ಲೇಖಕರ **ಬಾಲ್ಯದ ಸೈಕಲ್ ಕಲಿಕೆಯ ಸಿಹಿ ನೆನಪು** ಮಾತ್ರವಲ್ಲದೆ, ಅವರ ತಂದೆಯ ಶಿಸ್ತು ಮತ್ತು ಮಕ್ಕಳಿಗೆ ಆತ್ಮವಿಶ್ವಾಸ ತುಂಬುತ್ತಿದ್ದ ರೀತಿಯನ್ನೂ ತೋರಿಸುತ್ತದೆ.
೭. ಸೈಕಲ್ ಬಳಸುವಿಕೆಯ ಅನುಕೂಲಗಳೇನು?
ಉತ್ತರ ಸೈಕಲ್ ಬಳಸುವುದರಿಂದ ಅನೇಕ ಅನುಕೂಲಗಳಿವೆ. ಸೈಕಲ್ **ಪರಿಸರ ಮಾಲಿನ್ಯ ಉಂಟುಮಾಡುವುದಿಲ್ಲ** ಮತ್ತು ಪೆಟ್ರೋಲ್ ಖರ್ಚು ಇರುವುದಿಲ್ಲ. ವಾಹನ ದಟ್ಟಣೆಯ ನಡುವೆಯೂ ಸಣ್ಣ ಗಲ್ಲಿಗಳ ಮೂಲಕ ಸುಲಭವಾಗಿ ಮತ್ತು ವೇಗವಾಗಿ ಗಮ್ಯಸ್ಥಾನ ತಲುಪಬಹುದು. ಸೈಕಲ್ ಓಡಿಸುವುದರಿಂದ **ದೇಹಕ್ಕೆ ಉತ್ತಮ ವ್ಯಾಯಾಮ ದೊರೆತು ಆರೋಗ್ಯ ಸುಧಾರಿಸುತ್ತದೆ**; ಜಿಮ್ಗೆ ಹೋಗುವ ಅಗತ್ಯವೂ ಇರುವುದಿಲ್ಲ. ಸೈಕಲ್ ನಿಲ್ಲಿಸಲು ಹೆಚ್ಚು ಜಾಗ ಬೇಕಾಗುವುದಿಲ್ಲ ಮತ್ತು ಶಬ್ದವೂ ಉಂಟಾಗುವುದಿಲ್ಲ. ಪ್ರಯಾಣದ ವೇಳೆ ಪ್ರಕೃತಿಯ ಸೌಂದರ್ಯವನ್ನು ಸವಿಯಬಹುದು. ಗೆಳೆಯರೊಂದಿಗೆ ಮಾತನಾಡುತ್ತಾ ಹೋಗಬಹುದು ಹಾಗೂ ಅಗತ್ಯವಿದ್ದರೆ ಸಾಮಾನುಗಳನ್ನು ಸಹ ಸಾಗಿಸಬಹುದು. ಹೀಗಾಗಿ **ಸೈಕಲ್ ವ್ಯಕ್ತಿಯ ಆರೋಗ್ಯಕ್ಕೂ, ನಗರದ ಆರೋಗ್ಯಕ್ಕೂ ಮತ್ತು ಪರಿಸರಕ್ಕೂ ಹಿತಕರವಾದ ವಾಹನವಾಗಿದೆ.**
೮. ಸೈಕಲ್ಲಿನ ಉಪಯೋಗವನ್ನು ಕುರಿತು ಬರೆಯಿರಿ.
ಸೈಕಲ್ ಅತ್ಯಂತ ಸರಳ, ಅಗ್ಗದ, ಪರಿಸರ ಸ್ನೇಹಿ ಹಾಗೂ ಆರೋಗ್ಯಕರವಾದ ವಾಹನವಾಗಿದೆ. ಇಂದಿನ ಆಧುನಿಕ ಜೀವನದಲ್ಲಿ ಕಾರು, ಬೈಕ್, ಸ್ಕೂಟರ್ ಮುಂತಾದ ವಾಹನಗಳಿಗೆ ಹೆಚ್ಚಿನ ಪ್ರಾಶಸ್ತ್ಯ ದೊರೆಯುತ್ತಿದ್ದರೂ ಸೈಕಲ್ನ ಮಹತ್ವವನ್ನು ಮರೆಯಬಾರದು ಎಂದು ಲೇಖಕರು ಅಭಿಪ್ರಾಯಪಡುತ್ತಾರೆ.
ನಗರಗಳಲ್ಲಿ ವಾಹನ ದಟ್ಟಣೆ ಹೆಚ್ಚಿರುವ ಸಂದರ್ಭದಲ್ಲಿ ಸೈಕಲ್ ಬಹಳ ಅನುಕೂಲಕರವಾಗಿದೆ. ಸಣ್ಣ ಸಣ್ಣ ಗಲ್ಲಿಗಳ ಮೂಲಕ ಸೈಕಲ್ನಲ್ಲಿ ಸುಲಭವಾಗಿ ಸಾಗಬಹುದು. ವಾಹನಗಳ ಸಾಲಿನಲ್ಲಿ ಸಿಲುಕಿಕೊಳ್ಳದೆ ಕಡಿಮೆ ದೂರವನ್ನು ವೇಗವಾಗಿ ತಲುಪಬಹುದು. ಲೇಖಕರು ಜಯನಗರದಿಂದ ಕೆಂಪೇಗೌಡ ನಿಲ್ದಾಣಕ್ಕೆ ಹೋದ ಸಂದರ್ಭದಲ್ಲಿ ಕಾರಿಗಿಂತ ಸೈಕಲ್ನಲ್ಲಿ ಹೋದ ತಿಮ್ಮನೇ ಮೊದಲು ತಲುಪಿದ ಪ್ರಸಂಗವನ್ನು ಇದಕ್ಕೆ ಉದಾಹರಣೆಯಾಗಿ ನೀಡಿದ್ದಾರೆ.
ಸೈಕಲ್ ಬಳಸುವುದರಿಂದ **ಪೆಟ್ರೋಲ್ ಅಥವಾ ಡೀಸೆಲ್ ಖರ್ಚಾಗುವುದಿಲ್ಲ**. ಆದ್ದರಿಂದ ಹಣದ ಉಳಿತಾಯವಾಗುತ್ತದೆ. ಸೈಕಲ್ ನಿಲ್ಲಿಸಲು ಹೆಚ್ಚಿನ ಸ್ಥಳವೂ ಬೇಕಾಗಿಲ್ಲ. ಇದರಿಂದ ಯಾವುದೇ ಹೊಗೆ ಅಥವಾ ಶಬ್ದಮಾಲಿನ್ಯ ಉಂಟಾಗುವುದಿಲ್ಲ. ಹೀಗಾಗಿ ಪರಿಸರ ಸಂರಕ್ಷಣೆಯಲ್ಲಿಯೂ ಸೈಕಲ್ ಪ್ರಮುಖ ಪಾತ್ರ ವಹಿಸುತ್ತದೆ. ನಗರಗಳಲ್ಲಿ ವಾಯುಮಾಲಿನ್ಯವನ್ನು ಕಡಿಮೆ ಮಾಡಲು ಹೆಚ್ಚಿನ ಜನರು ಸೈಕಲ್ ಬಳಸುವುದು ಅಗತ್ಯವಾಗಿದೆ.
ಸೈಕಲ್ ಸವಾರಿ ಒಂದು ಉತ್ತಮ **ವ್ಯಾಯಾಮವೂ ಹೌದು**. ಸೈಕಲ್ ತುಳಿಯುವುದರಿಂದ ದೇಹಕ್ಕೆ ಶ್ರಮ ದೊರೆಯುತ್ತದೆ, ಆಹಾರ ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ಆರೋಗ್ಯ ಸುಧಾರಿಸುತ್ತದೆ. ಜಿಮ್ಗೆ ಹೋಗದೆ ದೈನಂದಿನ ಪ್ರಯಾಣದ ಜೊತೆಯಲ್ಲಿಯೇ ವ್ಯಾಯಾಮ ಮಾಡಿಕೊಳ್ಳಬಹುದು. ಅಲ್ಲದೆ ಸೈಕಲ್ನಲ್ಲಿ ಪ್ರಕೃತಿಯ ಸೌಂದರ್ಯವನ್ನು ನೋಡುತ್ತಾ, ಬೇಕಾದಲ್ಲಿ ನಿಂತು ಅದನ್ನು ಆಸ್ವಾದಿಸುತ್ತಾ ಪ್ರಯಾಣಿಸಬಹುದು.
ಸೈಕಲ್ ಸ್ನೇಹ ಮತ್ತು ಆತ್ಮೀಯತೆಯನ್ನು ಬೆಳೆಸುವ ಸಾಧನವೂ ಆಗಿದೆ. ದಾರಿಯಲ್ಲಿ ಗೆಳೆಯರು ಸಿಕ್ಕರೆ ಅವರೊಂದಿಗೆ ಮಾತನಾಡುತ್ತಾ ಸೈಕಲ್ನಲ್ಲಿ ಸಾಗಬಹುದು. ಅಗತ್ಯವಿದ್ದರೆ ಸಾಮಾನುಗಳನ್ನು ಸೈಕಲ್ನಲ್ಲಿ ಸಾಗಿಸಬಹುದು. ಮಕ್ಕಳನ್ನು ಸೈಕಲ್ನ ಮುಂಭಾಗದ ಸೀಟಿನಲ್ಲಿ ಕೂಡಿಸಿಕೊಂಡು ಹೋಗುವುದರಿಂದ ವಿಶೇಷ ಸಂತೋಷ ಸಿಗುತ್ತದೆ.
ಹೀಗಾಗಿ ಸೈಕಲ್ ಕೇವಲ ಒಂದು ಸಾರಿಗೆ ಸಾಧನವಲ್ಲ. ಅದು **ಆರೋಗ್ಯ, ಆರ್ಥಿಕ ಉಳಿತಾಯ, ಪರಿಸರ ಸಂರಕ್ಷಣೆ, ಸ್ವಾತಂತ್ರ್ಯ ಮತ್ತು ಸಂತೋಷವನ್ನು ನೀಡುವ ವಾಹನವಾಗಿದೆ**. ಆದ್ದರಿಂದ ಸೈಕಲ್ ಅನ್ನು ತಾತ್ಸಾರ ಮಾಡದೆ, ದೈನಂದಿನ ಜೀವನದಲ್ಲಿ ಸಾಧ್ಯವಾದಷ್ಟು ಬಳಸಬೇಕು ಎಂಬುದು ಲೇಖಕರ ಆಶಯವಾಗಿದೆ.
೯. ಸೈಕಲ್ ಉಪಯೋಗ ಅಂದು–ಇಂದು ಹೇಗೆ? ಚರ್ಚಿಸಿ.
ಉತ್ತರ ಹಿಂದಿನ ಕಾಲದಲ್ಲಿ ಸೈಕಲ್ ಜನರ **ದೈನಂದಿನ ಜೀವನದ ಪ್ರಮುಖ ಸಾರಿಗೆ ಸಾಧನವಾಗಿತ್ತು**. ಶಾಲೆ, ಕಾಲೇಜು, ಕಚೇರಿ ಹಾಗೂ ದೂರದ ಸ್ಥಳಗಳಿಗೆ ಹೋಗಲು ಅನೇಕರು ಸೈಕಲ್ನ್ನೇ ಬಳಸುತ್ತಿದ್ದರು. ಲೇಖಕರೂ ತಮ್ಮ ಹೈಸ್ಕೂಲ್ ದಿನಗಳಲ್ಲಿ ಜಯನಗರದಿಂದ ಗಾಂಧಿಬಜಾರ್ಗೆ, ನಂತರ ಇಂಜಿನಿಯರಿಂಗ್ ಕಾಲೇಜಿಗೂ ಸೈಕಲ್ನಲ್ಲಿಯೇ ಪ್ರಯಾಣಿಸುತ್ತಿದ್ದರು. ಸೈಕಲ್ನಿಂದ ಅವರಿಗೆ ಸ್ವತಂತ್ರವಾಗಿ ಓಡಾಡುವ ಅವಕಾಶ ದೊರೆಯುವುದರ ಜೊತೆಗೆ ಬೆಂಗಳೂರಿನ ಅನೇಕ ದಾರಿಗಳು ಮತ್ತು ಸ್ಥಳಗಳ ಪರಿಚಯವೂ ಆಯಿತು. ಸ್ನೇಹಿತರೊಂದಿಗೆ ಸೈಕಲ್ನಲ್ಲಿ ಪ್ರಯಾಣಿಸುವುದು, ಪ್ರವಾಸ ಹೋಗುವುದು ಮುಂತಾದವುಗಳು ಅವರ ಜೀವನದ ಸಿಹಿ ನೆನಪುಗಳಾಗಿವೆ.
ಆದರೆ **ಇಂದು ಪರಿಸ್ಥಿತಿ ಬಹಳಷ್ಟು ಬದಲಾಗಿದೆ**. ಆಧುನಿಕ ಜೀವನದ ವೇಗ ಹೆಚ್ಚಾಗಿರುವುದರಿಂದ ಜನರು ಸಮಯ ಉಳಿಸಲು ಬೈಕ್, ಸ್ಕೂಟರ್ ಮತ್ತು ಕಾರುಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಇದರಿಂದ ಸೈಕಲ್ ಬಳಕೆ ಕಡಿಮೆಯಾಗಿದೆ. ಲೇಖಕರ ಪ್ರಕಾರ, ಇಂದಿನವರು ಸೈಕಲ್ಗಿಂತ ವೇಗದ ವಾಹನಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದಾರೆ. ಸೈಕಲ್ ಬಳಸುವುದನ್ನು ಕೆಲವರು ಪ್ರತಿಷ್ಠೆಯ ಪ್ರಶ್ನೆಯೆಂದೂ ಭಾವಿಸುತ್ತಾರೆ.
ಆದರೂ ಇಂದಿನ ಕಾಲದಲ್ಲಿ ಸೈಕಲ್ನ ಮಹತ್ವ ಮತ್ತೆ ಹೆಚ್ಚುತ್ತಿದೆ. ಸೈಕಲ್ **ವಾಯುಮಾಲಿನ್ಯ ಉಂಟುಮಾಡುವುದಿಲ್ಲ, ಇಂಧನದ ಖರ್ಚಿಲ್ಲ ಮತ್ತು ಉತ್ತಮ ವ್ಯಾಯಾಮವನ್ನು ನೀಡುತ್ತದೆ**. ಇತ್ತೀಚಿನ ಸೈಕಲ್ ಅಭಿಯಾನಗಳಲ್ಲಿಯೂ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯ ಮಹತ್ವವನ್ನು ಒತ್ತಿಹೇಳಲಾಗುತ್ತಿದೆ.
ಹೀಗಾಗಿ ಅಂದು ಸೈಕಲ್ **ಅಗತ್ಯದ ವಾಹನವಾಗಿದ್ದರೆ, ಇಂದು ಅದು ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಅಗತ್ಯವಾದ ವಾಹನವಾಗಿದೆ**. ಕಾರು, ಬೈಕ್ಗಳಿಂದ ನಗರಗಳನ್ನು ಮಾಲಿನ್ಯಗೊಳಿಸಿದ ನಂತರ ಸೈಕಲ್ಗೆ ಮರಳುವುದಕ್ಕಿಂತ ಈಗಿನಿಂದಲೇ ಸೈಕಲ್ ಬಳಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂಬುದು ಲೇಖಕರ ಆಶಯವಾಗಿದೆ.
೧೦. ಕಾರಿಲ್ಲದ ಜೀವನ ಕುರಿತು ಅಮೇರಿಕಾದ ಪ್ರಸಂಗದ ಹಿನ್ನೆಲೆಯಲ್ಲಿ ವಿವರಿಸಿ.
ಲೇಖಕರು ಅಮೇರಿಕಾದ **ಬಾಸ್ಟನ್ ನಗರದ ಕಾರಿಲ್ಲದ ಜೀವನದ ಎರಡು ಪ್ರಸಂಗಗಳನ್ನು** ಈ ಪ್ರಬಂಧದಲ್ಲಿ ವಿವರಿಸಿದ್ದಾರೆ. ಬಾಸ್ಟನ್ನ ಒಬ್ಬ ವ್ಯಕ್ತಿ ಪ್ರತಿದಿನ ತನ್ನ ಕಚೇರಿಗೆ ಸುಮಾರು **೧೦ ಮೈಲಿ ದೂರವನ್ನು ಸೈಕಲ್ನಲ್ಲಿ** ಹೋಗಿ ಬರುತ್ತಿದ್ದನು. ಹೀಗೆ ದಿನಕ್ಕೆ ೨೦ ಮೈಲಿ ಮತ್ತು ವಾರಕ್ಕೆ ಸುಮಾರು ೧೦೦ ಮೈಲಿ ಸೈಕಲ್ನಲ್ಲಿ ಪ್ರಯಾಣಿಸುತ್ತಿದ್ದನು. ಸೈಕಲ್ನ ಸರಳತೆ ಮತ್ತು ಅದರ ಪ್ರಯಾಣದಿಂದ ದೊರೆಯುವ ಸಂತೋಷವನ್ನು ಅನುಭವಿಸಿದ ಅವನು ತನ್ನ ಕುಟುಂಬದವರಿಗೂ ಸೈಕಲ್ ಬಳಕೆಯ ಅಭ್ಯಾಸ ಮಾಡಿಸಿ, ಕೊನೆಗೆ ತನ್ನ ಕಾರನ್ನೇ ಮಾರಿಬಿಟ್ಟನು.
ಇನ್ನೊಬ್ಬ ವ್ಯಕ್ತಿ ಕಾರಿನಲ್ಲಿ ಕಚೇರಿಗೆ ಹೋಗುವಾಗ ವಾಹನ ದಟ್ಟಣೆಯಲ್ಲಿ ಸಿಲುಕಿ **ಗಂಟೆಗಟ್ಟಲೆ ತಡವಾಗಿ ಕೆಲಸಕ್ಕೆ ತಲುಪುತ್ತಿದ್ದನು**. ಇದರಿಂದ ಬೇಸತ್ತು ಒಂದು ದಿನ ಸೈಕಲ್ನಲ್ಲಿ ಕಚೇರಿಗೆ ಹೋಗಲು ಪ್ರಯತ್ನಿಸಿದನು. ಸೈಕಲ್ ಪ್ರಯಾಣ ಅವನಿಗೆ ಹೊಸ ಅನುಭವ ಮತ್ತು ಸಂತೋಷವನ್ನು ನೀಡಿತು. ಪರಿಣಾಮವಾಗಿ ಅವನೂ ತನ್ನ ಕಾರನ್ನು ಮಾರಿಬಿಟ್ಟು, ಅಗತ್ಯವಿದ್ದಾಗ ಮಾತ್ರ ಬಾಡಿಗೆ ಕಾರನ್ನು ಬಳಸಲು ಆರಂಭಿಸಿದನು. ಅವನ ಹೆಂಡತಿಯೂ ಈ ನಿರ್ಧಾರಕ್ಕೆ ಸಹಕರಿಸಿದಳು. ಹೆಂಡತಿಯನ್ನು ಕೂಡಿಸಿಕೊಂಡು ಹೋಗಲು ಸೈಕಲ್ಗೆ ವಿಶೇಷ ಕ್ಯಾಬ್ನ್ನೂ ಅಳವಡಿಸಿಕೊಂಡನು.
ಈ ಪ್ರಸಂಗಗಳ ಮೂಲಕ ಲೇಖಕರು **ಕಾರಿಲ್ಲದ ಜೀವನವೂ ಸುಖಕರವಾಗಿರಬಹುದು** ಎಂಬುದನ್ನು ತೋರಿಸಿದ್ದಾರೆ. ಸೈಕಲ್ ಬಳಸುವುದರಿಂದ ಪೆಟ್ರೋಲ್ ಖರ್ಚು ಇರುವುದಿಲ್ಲ, ವಾಹನ ದಟ್ಟಣೆಯ ಸಮಸ್ಯೆ ಕಡಿಮೆಯಾಗುತ್ತದೆ, ಆರೋಗ್ಯಕ್ಕೆ ವ್ಯಾಯಾಮ ದೊರೆಯುತ್ತದೆ ಮತ್ತು ಪರಿಸರ ಮಾಲಿನ್ಯವೂ ಉಂಟಾಗುವುದಿಲ್ಲ. ಹೀಗಾಗಿ ಆಧುನಿಕ ಜೀವನದಲ್ಲಿ ಕಾರಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಸಾಧ್ಯವಾದಷ್ಟು ಸೈಕಲ್ ಮತ್ತು ಸಾರ್ವಜನಿಕ ಸಾರಿಗೆಯನ್ನು ಬಳಸಬೇಕು ಎಂಬ ಸಂದೇಶವನ್ನು ಲೇಖಕರು ನೀಡಿದ್ದಾರೆ.
೧೧. ಕೆ.ಆರ್. ಸರ್ಕಲ್ಲಿನಲ್ಲಿದ್ದ ವಿ.ವಿ. (ಇಂಜಿನಿಯರಿಂಗ್ ಕಾಲೇಜು) ವಿದ್ಯಾರ್ಥಿ ಜೀವನ ಹಾಗೂ ಸೈಕಲ್ ಪ್ರಯಾಣದ ಕುರಿತು ವಿಶ್ಲೇಷಿಸಿ.
ಲೇಖಕರ ವಿದ್ಯಾರ್ಥಿ ಜೀವನದಲ್ಲಿ ಸೈಕಲ್ಗೆ ವಿಶೇಷ ಸ್ಥಾನವಿತ್ತು. **ಕೆ.ಆರ್. ಸರ್ಕಲ್ಲಿನಲ್ಲಿದ್ದ ವಿ.ವಿ. (ಇಂಜಿನಿಯರಿಂಗ್ ಕಾಲೇಜಿಗೆ) ಅವರು ಪ್ರತಿದಿನ ಸೈಕಲ್ನಲ್ಲಿಯೇ ಪ್ರಯಾಣಿಸುತ್ತಿದ್ದರು.** ಕಾಲೇಜಿಗೆ ಹೋಗುವ ದೂರ ಹೆಚ್ಚು ಇದ್ದರೂ ಬಸ್ಸಿನಲ್ಲಿ ಹೋಗುವುದಕ್ಕಿಂತ ಸೈಕಲ್ನಲ್ಲಿ ಹೋಗುವುದೇ ಅವರಿಗೆ ಅನುಕೂಲಕರವೆನಿಸುತ್ತಿತ್ತು.
ಸೈಕಲ್ ಪ್ರಯಾಣಕ್ಕೆ ಅಗತ್ಯವಾದ ಸಿದ್ಧತೆಯನ್ನೂ ಅವರು ಮಾಡಿಕೊಂಡಿದ್ದರು. ಸೈಕಲ್ಗೆ **ಟಿ-ಸ್ಟ್ಯಾಂಡ್ ಅಳವಡಿಸಿಕೊಂಡು, ಹ್ಯಾಂಡಲ್ಗೆ ಡ್ರಾಯಿಂಗ್ ಶೀಟ್ಗಳನ್ನು ಕಟ್ಟಿಕೊಂಡು** ಕಾಲೇಜಿಗೆ ಹೋಗುತ್ತಿದ್ದರು. ದಾರಿಯಲ್ಲಿ ಸಿಗುತ್ತಿದ್ದ ಗೆಳೆಯರೊಂದಿಗೆ ಸೇರಿಕೊಂಡು ಪ್ರಯಾಣಿಸುವುದು ಅವರಿಗೆ ಸಂತೋಷ ನೀಡುತ್ತಿತ್ತು. ಮುಂದೆ ಗೆಳೆಯರು ಹೋಗುತ್ತಿರುವುದು ಕಂಡರೆ ವೇಗವಾಗಿ ಸೈಕಲ್ ತುಳಿದು ಅವರನ್ನು ಸೇರಿಕೊಳ್ಳುತ್ತಿದ್ದರು. ಹೀಗೆ ಸೈಕಲ್ ಪ್ರಯಾಣವು ಅವರ ವಿದ್ಯಾರ್ಥಿ ಜೀವನದಲ್ಲಿ **ಸ್ನೇಹ, ಸಂತೋಷ ಮತ್ತು ಆತ್ಮೀಯತೆಯನ್ನು ಬೆಳೆಸುವ ಅನುಭವ**ವಾಗಿತ್ತು.
ಬೆಳಗಿನ ಚಳಿಯಲ್ಲಿ ಏಳೂವರೆ ಗಂಟೆಗೆ ತರಗತಿಗಳಿಗೆ ಹೋಗಬೇಕಾಗಿದ್ದರಿಂದ ಸೈಕಲ್ ಪ್ರಯಾಣ ಸುಲಭವಾಗಿರಲಿಲ್ಲ. ಕಾಲೇಜಿಗೆ ತಲುಪಿದ ಕೂಡಲೇ ಚಳಿಯಿಂದ ಮರಗಟ್ಟಿದ ಕೈಗಳನ್ನು ಉಜ್ಜಿಕೊಂಡು ಪಾಠ ಬರೆಯಲು ಕಷ್ಟಪಡುತ್ತಿದ್ದ ಅನುಭವವನ್ನು ಲೇಖಕರು ನೆನಪಿಸಿಕೊಂಡಿದ್ದಾರೆ. ಆದರೂ ಆ ಕಷ್ಟಗಳಲ್ಲಿಯೇ ವಿದ್ಯಾರ್ಥಿ ಜೀವನದ ವಿಶೇಷ ಸಂತೋಷವಿತ್ತು.
ಕಾಲೇಜಿನ ಸೈಕಲ್ ಸ್ಟಾಂಡಿನ **ನಾಗಪ್ಪ** ವಿದ್ಯಾರ್ಥಿಗಳಿಗೆ ಚಿರಪರಿಚಿತನಾಗಿದ್ದ. ಹಲವು ವರ್ಷಗಳ ನಂತರ ಲೇಖಕರು ಅದೇ ಕಾಲೇಜಿಗೆ ಅತಿಥಿ ಪ್ರಾಧ್ಯಾಪಕರಾಗಿ ಹೋದಾಗ ನಾಗಪ್ಪನನ್ನು ಮತ್ತೆ ಭೇಟಿಯಾದರು. ಇದರಿಂದ ಅವರ ಹಳೆಯ ವಿದ್ಯಾರ್ಥಿ ಜೀವನದ ನೆನಪುಗಳು ಮತ್ತೆ ಮರುಕಳಿಸಿದವು. ಪ್ರಾಧ್ಯಾಪಕರಾದ **ಕೆ.ಎನ್. ಅಯ್ಯಂಗಾರ್** ಅವರೂ ಕೆಲವೊಮ್ಮೆ ಸೈಕಲ್ನಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರಯಾಣಿಸುತ್ತಿದ್ದರು. ಅವರು ಸರಳತೆ ಮತ್ತು ನಿಗರ್ವಿಯ ಪ್ರತೀಕವಾಗಿದ್ದರು.
ಸೈಕಲ್ನಿಂದ ಲೇಖಕರಿಗೆ ಹಳೆಯ ಬೆಂಗಳೂರಿನ ಅನೇಕ ಪೇಟೆಗಳು, ಕಬ್ಬನ್ ಪಾರ್ಕ್ ಮತ್ತು ಲಾಲ್ಬಾಗ್ನ ಮೂಲೆಮೂಲೆಗಳ ಪರಿಚಯವಾಯಿತು. ದಾರಿಗಳನ್ನು ಹುಡುಕುವುದು, ಹೊಸ ಸ್ಥಳಗಳನ್ನು ತಿಳಿದುಕೊಳ್ಳುವುದು ಮತ್ತು ಗೆಳೆಯರೊಂದಿಗೆ ಓಡಾಡುವುದು ಅವರ ವಿದ್ಯಾರ್ಥಿ ಜೀವನದ ಅವಿಭಾಜ್ಯ ಭಾಗವಾಗಿತ್ತು.
ಹೀಗಾಗಿ ಲೇಖಕರಿಗೆ **ಸೈಕಲ್ ಕೇವಲ ಕಾಲೇಜಿಗೆ ಹೋಗುವ ವಾಹನವಾಗಿರಲಿಲ್ಲ; ಅದು ಅವರ ವಿದ್ಯಾರ್ಥಿ ಜೀವನದ ಸ್ವಾತಂತ್ರ್ಯ, ಸ್ನೇಹ, ಸಾಹಸ, ಆರೋಗ್ಯ ಮತ್ತು ಸಿಹಿ ನೆನಪುಗಳ ಸಂಗಾತಿಯಾಗಿತ್ತು.** ಇಂದಿನ ವೇಗದ ವಾಹನಗಳ ಜೀವನಕ್ಕೆ ಹೋಲಿಸಿದರೆ ಅಂದಿನ ಸೈಕಲ್ ಪ್ರಯಾಣದ ಸರಳತೆ ಮತ್ತು ಸಂತೋಷವನ್ನು ಲೇಖಕರು ಪ್ರೀತಿಯಿಂದ ಸ್ಮರಿಸಿದ್ದಾರೆ.
