ಪ್ರವೇಶಿಕೆ:
ಬೇಟೆಗಳು ಸ್ಥಳೀಯ ಆರ್ಥಿಕ ಬದುಕು ಮತ್ತು ಆಹಾರದ
ಸಂಸ್ಕೃತಿಯೊಂದಿಗೆ ಸಂಬಂಧಿಸಿರುತ್ತದೆ. ಬಾಲ್ಯದಲ್ಲಿ ನಾವಲ್ಲದಿದ್ದರೂ ನಮ್ಮೂರಿನ ಕೆಲವರು ಮೊಲ, ಕಾಡ ಬೆಕ್ಕು, ಖೀರ, ಇಲಿ, ತೋಡ, ಅಳಿಲು, ಮೀನು, ಸೋಸಲು ಮೀನು, ಏಡಿ, ಹುಂಡುಕೋಳಿ ಹೀಗೆ ಕಾಡುಹಂದಿ ಬಿಟ್ಟರೆ ಬಹುಪಾಲು ಸಣ್ಣ ಹಾಗೂ ಅತಿ ಸಣ್ಣ ಪ್ರಾಣಿಗಳನ್ನು ಸಹ ಬೇಟೆಯಾಡುತ್ತಿದ್ದರು. ಎಲ್ಲಾ ಊರುಗಳಲ್ಲಿ ಹೀಗೆ ಬೇಟೆ ಮಾಡುತ್ತಿರಲಿಕ್ಕಿಲ್ಲ. ಅದು ಅವರವರ ಆಹಾರ ಸಂಸ್ಕೃತಿ ಮತ್ತು ಅಭ್ಯಾಸದ ಮೇಲೆ ಇರುತಿತ್ತು. ನಮ್ಮೂರಿನವರು ಇಂತಹ ಬೇಟೆಗಳಲ್ಲಿ ನಿಪುಣರಾಗಿದ್ದರು. ಇತ್ತೀಚೆಗೆ ಗಮನಾರ್ಹ ಮಟ್ಟದಲ್ಲಿ ಅದು ನಿಂತುಹೋಗಿದೆ. ಅದಕ್ಕೆ ಜನರ ಜೀವನಮಟ್ಟ ಸುಧಾರಣೆ ಅಥವಾ ಸರ್ಕಾರದ ಯೋಜನೆಗಳು ಕಾರಣವಾಗಿರಬಹುದು. ಅಥವಾ ಪ್ರಾಣಿ ಹತ್ಯೆಯ ಕಠಿಣ ಶಿಕ್ಷೆಯ ಜಾರಿಯಿಂದಾಗಿರಬಹುದು. ಮೇಲಾಗಿ ಹಳ್ಳಿಗಳೊಂದಿಗಿದ್ದ ಕಾಡುಗಳು ಇಂದು ಉಳಿದಿಲ್ಲವಾದ್ದರಿಂದ ಬೇಟೆಯಾಡುವ ಮನುಷ್ಯನ ಪ್ರವೃತ್ತಿಗೆ ಬ್ರೇಕ್ ಬಿದ್ದಿದೆ. ಅವನಿಗೆ ಆಹಾರದ ಕೊರತೆಯೂ ಈಗ ಅಷ್ಟು ಕಾಡದೇ ಇರುವುದರಿಂದಲೂ ಬೇಟೆ ನಿಂತಿರಲೂಬಹುದು. ಬಾಲ್ಯದಲ್ಲಿ ಅಂತಹ ಬೇಟೆಗಳನ್ನು ನೋಡುವುದೆಂದರೆ ನನಗೆ ಎಲ್ಲಿಲ್ಲದ ಖುಷಿಯಾಗುತ್ತಿತ್ತು. ಅಂತಹ ಕೆಲವು ಪ್ರಸಂಗಗಳನ್ನು ಈ ಲೇಖನದಲ್ಲಿ ವಿವರಿಸಿದ್ದಾರೆ.
ಬೇಟೆ ಯಾವ ಮಕ್ಕಳಿಗೆ ಇಷ್ಟ ಆಗಲ್ಲ ಹೇಳಿ. ಮಕ್ಕಳಾಗಿದ್ದಾಗ ಬೇಟೆಯ ವಿಷಯ ಅಂದರೆ ಕಿವಿ ನೆಟ್ಟಗಾಗುತ್ತಿದ್ದವು. ಹಳ್ಳಿಯೆಂದ ಮೇಲೆ ಬೇಟೆ ಅನುಭವ ಇರಲೇಬೇಕಲ್ಲವೇ. ಒಂದು ವೇಳೆ ಬೇಟೆಯಾಡದಿದ್ದರೂ ಮಕ್ಕಳಾಗಿ ನಾವು ಅದನ್ನು ನೋಡುತಿದ್ದೆವು. ಬೇಟೆಯಾಡುವುದು ಕಾಲದಿಂದ ಕಾಲಕ್ಕೆ ಬದಲಾಗುತ್ತಲೇ ಬಂದಿದೆ. ಕುವೆಂಪು ಮತ್ತು ತೇಜಸ್ವಿಯವರ ಮಲೆನಾಡಿನ ಬೇಟೆಯ ಕತೆಗಳನ್ನು ಅಥವಾ ಬೇಟೆಯ ಸನ್ನಿವೇಶಗಳನ್ನು ನಾನು ಎಷ್ಟು ಸಲ ಓದಿದರು ಇನ್ನೂ ಅವುಗಳ ಬಗ್ಗೆ ನನ್ನ ಕುತೂಹಲ ಕಡಿಮೆಯಾಗಿಲ್ಲ. ನಾನು ನನ್ನ ಮಗನಿಗೆ ಕತೆ ಹೇಳುತ್ತೇನೆ ಎಂದರೆ ಅದು ಯಾವುದಾದರು ಪ್ರಾಣಿಗಳ ಅಥವಾ ಬೇಟೆಯ ವಿಚಾರಗಳೇ ಆಗಿರಬೇಕು ಎಂಬುದು ಅವನ ಫರ್ಮಾನು. ಇದೇನು ನನ್ನೊಬ್ಬನ ಅನುಭವವಲ್ಲ. ಎಲ್ಲರ ಅನುಭವವೂ ಹೀಗೆಯೇ ಆಗಿರುತ್ತದೆ. ಬೇಟೆ ಎಂದರೆ ಅದೇನು ಜಿಮ್ ಕಾರ್ಬೆಟ್ ರವರ ಕತೆಯಲ್ಲಿ ಬರುವಂತೆ ಹುಲಿಯ ಬೇಟೆಯಾಗಲಿ, ವೀರಪ್ಪನ್ ಮಾಡುತ್ತಿದ್ದಂತಹ ಆನೆ ಬೇಟೆಯಾಗಲಿ ಅಥವಾ ಸಲ್ಮಾನ್ ಖಾನ್ ಮಾಡಿದಂತೆ ಜಿಂಕೆ ಬೇಟೆಯೇನೂ ಅಲ್ಲ. ಅಂತಹ ದೊಡ್ಡ ದೊಡ್ಡ ಬೇಟೆಗಳು ಮಾತ್ರ ಬೇಟೆ ಅನ್ನೋಬೇಡಿ.
ಆಹಾರದ ಆ ರೀತಿಯ ದೊಡ್ಡ ದೊಡ್ಡ ಬೇಟೆಗಳ ಅನುಭವ ನಮಗೇನಿಲ್ಲ, ಅಂತಹ ದೊಡ್ಡ ದೊಡ್ಡ ಬೇಟೆಗಳ ಕುರಿತು ಅಲ್ಲಲ್ಲಿ ಎಲ್ಲರೂ ಓದಿರಬಹುದು ಅಷ್ಟೆ, ಆದರೆ ಸಣ್ಣ ಸಣ್ಣ ಬೇಟೆ ಕೇಳಿರುವವರು ಕಡಿಮೆಯೇ. ಅದಕ್ಕೆ ಕಾರಣವೂ ಉಂಟು. ಸಣ್ಣ ಸಣ್ಣ ಬೇಟೆಗಳು ಸಂಸ್ಕೃತಿಯೊಂದಿಗೆ ಸ್ಥಳೀಯ ಆರ್ಥಿಕ ಬದುಕು ಮತ್ತು ಸಂಬಂಧಿಸಿರುತ್ತದೆ. ಬಾಲ್ಯದಲ್ಲಿ ನಾವಲ್ಲದಿದ್ದರೂ ನಮ್ಮೂರಿನ ಕೆಲವರು ಮೊಲ, ಕಾಡ ಬೆಕ್ಕು, ವೀರ, ಇಲಿ, ತೋಡ, ಅಳಿಲು, ಮೀನು, ಸೋಸಲು ಮೀನು, ಏಡಿ, ಹುಂಡು ಕೋಳಿ ಹೀಗೆ ಕಾಡುಹಂದಿ ಬಿಟ್ಟರೆ ಬಹುಪಾಲು ಸಣ್ಣ ಹಾಗೂ ಅತಿ ಸಣ್ಣ ಪ್ರಾಣಿಗಳನ್ನು ಸಹ ಬೇಟೆಯಾಡುತ್ತಿದ್ದರು. ಎಲ್ಲಾ ಊರುಗಳಲ್ಲಿ ಹೀಗೆ ಬೇಟೆ ಮಾಡುತ್ತಿರಲಿಕ್ಕಿಲ್ಲ. ಅದು ಅವರವರ ಆಹಾರ ಸಂಸ್ಕೃತಿ ಮತ್ತು ಅಭ್ಯಾಸದ ಮೇಲೆ ಇರುತಿತ್ತು. ನಮ್ಮೂರಿನವರು ಇಂತಹ ಬೇಟೆಗಳಲ್ಲಿ ನಿಪುಣರಾಗಿದ್ದರು. ಇತ್ತೀಚೆಗೆ ಗಮನಾರ್ಹ ಮಟ್ಟದಲ್ಲಿ ಅದು ನಿಂತುಹೋಗಿದೆ. ಅದಕ್ಕೆ ಜನರ ಜೀವನಮಟ್ಟ ಸುಧಾರಣೆ ಅಥವಾ ಸರ್ಕಾರದ ಯೋಜನೆಗಳು ಕಾರಣವಾಗಿರಬಹುದು. ಅಥವಾ ಪ್ರಾಣಿ ಹತ್ಯೆಯ ಕಠಿಣ ಶಿಕ್ಷೆಯ ಜಾರಿಯಿಂದಾಗಿರಬಹುದು. ಮೇಲಾಗಿ ಹಳ್ಳಿಗಳೊಂದಿಗಿದ್ದ ಕಾಡುಗಳು ಇಂದು ಉಳಿದಿಲ್ಲವಾದ್ದರಿಂದ ಬೇಟೆಯಾಡುವ ಮನುಷ್ಯನ ಪ್ರವೃತ್ತಿಗೆ ಬ್ರೇಕ್ ಬಿದ್ದಿದೆ. ಅವನಿಗೆ ಆಹಾರದ ಕೊರತೆಯೂ ಈಗ ಅಷ್ಟು ಕಾಡದೇ ಇರುವುದರಿಂದಲೂ ಬೇಟೆ ನಿಂತಿರಲೂಬಹುದು. ಬಾಲ್ಯದಲ್ಲಿ ಅಂತಹ ಬೇಟೆಗಳನ್ನು ನೋಡುವುದೆಂದರೆ ನನಗೆ ಎಲ್ಲಿಲ್ಲದ ಖುಷಿಯಾಗುತ್ತಿತ್ತು. ಅಂತಹ ಕೆಲವು ಪ್ರಸಂಗಗಳನ್ನು ಈ ಲೇಖನದಲ್ಲಿ ವಿವರಿಸುವ ಪ್ರಯತ್ನ ಮಾಡಿರುವೆ.
ನಮ್ಮ ಊರಿನಿಂದ ಐದಾರು ಕಿ.ಮೀ ದೂರದಲ್ಲಿ ಹೊಸಕೋಟೆ ಎಂಬ ಊರಿದೆ. ನಮ್ಮ ಹಲವು ನೆಂಟರಿರುವುದು ಅದೇ ಊರಿನಲ್ಲಾದ್ದರಿಂದ ಆ ಊರಿನೊಂದಿಗೆ ಸಂಪರ್ಕ ಚೆನ್ನಾಗಿಯೇ ಇದೆ. ಆ ಊರಿನಲ್ಲಿ ಒಂದು ವಿಶೇಷ ಊರ ಹಬ್ಬ ನಡೆಯುತ್ತದೆ. ಅದರಲ್ಲಿ ಕಾಡುಹಂದಿಯನ್ನು ಬೇಟೆ ಮಾಡಿಯೇ ಆ ಹಬ್ಬ ಮಾಡುವುದು. ಬೇಟೆ ಆಗಲಿಲ್ಲವೆಂದರೆ ಹಬ್ಬವೇ ಆಗುವುದಿಲ್ಲ. ಊರಿನವರಲ್ಲಿ ಬೇಟೆಯ ಕೌಶಲ್ಯ ಹೊಂದಿದ ಪುರುಷರು ಬೇಟೆ ನಾಯಿಗಳು, ಮಚ್ಚು ಕುಡುಗೋಲು, ಬಲೆಯನ್ನು ತೆಗೆದುಕೊಂಡು ಬೇಟೆಗೆ ಹೊರಡುತ್ತಾರೆ. ಹೋದವರು ಕಾಡು ಹಂದಿ ಬೇಟೆಮಾಡಿಕೊಂಡೇ ಬರುತ್ತಾರೆ. ಬೇಟೆ ಮಾಡಿಕೊಂಡು ಬಂದ ಕಾಡುಹಂದಿಯ ನಾಲ್ಕು ಕಾಲುಗಳನ್ನು ಹಗ್ಗದಿಂದ ಕಟ್ಟಿ, ಕಾಲುಗಳ ಮಧ್ಯೆ ಮರದ ಬೊಂಬೊಂದನ್ನು ತೂರಿಸಿ ಅದನ್ನು ಹೊತ್ತುಕೊಂಡು ಊರೆಲ್ಲ ಮೆರವಣಿಗೆ ಮಾಡಿ ದೇವರ ಗುಡಿಯ ಬಳಿ ತಂದು ಪೂಜೆ ಮಾಡಿ ಅದರ ಅಡುಗೆ ಮಾಡಿ ದೇವರಿಗೆ ನೈವೇದ್ಯ ಅರ್ಪಿಸುತ್ತಾರೆ. ಆ ನಂತರ ಮನೆಗಳಲ್ಲಿ ಮಾರುಕಟ್ಟೆಯಿಂದ ತಂದಿದ್ದ ಮಾಂಸವನ್ನು ಅಡುಗೆ ಮಾಡಿ ನೆಂಟರಿಗೆ ಬಾಡೂಟ ಬಡಿಸುತ್ತಾರೆ. ಮೊನ್ನೆ ಮೊನ್ನೆ ಸಿಕ್ಕಿದ್ದ ನಮ್ಮ ನೆಂಟರಿಷ್ಟರಲ್ಲೊಬ್ಬರಾದ ಸಣ್ಣಣ್ಣ ಹೀಗೆ ಕುಶೋಲೋಪರಿ ಮಾತನಾಡುತ್ತಾ “ಅಯ್ಯೋ
ಇತ್ತೀಚೆಗೆ ಆ ಹಬ್ಬ ಮಾಡೋದೆ ಕಷ್ಟವಾಗಿ ಹೋಗಿದೆ. ಬೇಟೆ ಮಾಡೋಕೆ ಯಾರು ಬರೋಕೆ ಒಬ್ರು. ಬೇಟೆಗೆ ಹೋದ್ರು ಕೂಡ ನಾಕೈದು ದಿವಸ ಆದ್ರು ಬೇಟೆ ಆಗಲ್ಲ. ಜೊತೆಗೆ ಫಾರೆಸ್ಟ್ನವರ ಕಾಟ. ಹಾಗಾಗಿ ಹಬ್ಬ ಮಾಡೋದೆ ಕಷ್ಟವಾಗಿದೆ" ಎನ್ನುವಾಗ ಅವರ ಕಣ್ಣಲ್ಲಿ ಅದೇನೋ ಕಳೆದುಕೊಂಡ ಭಾವ ಕಾಣುತ್ತಿತ್ತು. ಆ ಊರೇನು ಬುಡಕಟ್ಟು ಊರಲ್ಲದಿದ್ದರು. ಬೇಟೆ ಕೇವಲ ಆಟವಾಗದೆ ಅಥವಾ ಕೇವಲ ಷೋಕಿಯಾಗದೆ ಅದೊಂದು ದೈವಿಕ ಆಚರಣೆಯೇ ಆಗಿದೆ.
ಹಂದಿ ಬೇಟೆ ಅಷ್ಟು ಸುಲಭದ ಮಾತಲ್ಲ. ಅದಕ್ಕಾಗಿಯೇ ತರಬೇತುಗೊಂಡ ನಾಯಿಗಳು ಹಂದಿಯನ್ನು ಬೆನ್ನಟ್ಟಿ ಹಂದಿಯ ಹಿಂಗಾಲುಗಳನ್ನು ಕಚ್ಚಿ ಹಿಡಿದರೆ ಮಚ್ಚು, ಕುಡುಗೋಲಿನಿಂದ ನುರಿತ ಬೇಟೆಗಾರರು ಕಾಡುಹಂದಿಯನ್ನು ಹೊಡೆದುರುಳಿಸುವ ಕೆಲಸ ಮಾಡುತ್ತಿದ್ದರು. ಧೈರ್ಯಗಾರರೇ ಈ ಕಾಡುಹಂದಿಯ ಬೇಟೆ ಮಾಡುವುದು. ಬೇಟೆಗಾರ ಅಥವಾ ನಾಯಿ ಏನಾದರು ಹಂದಿಗೆ ನೇರವಾಗಿ ಎದುರುಗೊಂಡರೆ ಬೇಟೆಗಾರನ ಕಾಲು ಕಳೆದುಕೊಂಡಂತೆಯೇ ಅಥವಾ ಬೇಟೆ ನಾಯಿ ಕತೆ ಮುಗಿತು ಅಂತಲೇ ಅರ್ಥ. ಕೆಲವರು ಜಮೀನಿನ ಬೆಳೆ ರಕ್ಷಣೆಗೆಂದು ಕೋವಿಯನ್ನು ಹೊಂದಿ ದವರನ್ನು ಬಳಸಿಯೂ ಬೇಟೆ ಮಾಡುತ್ತಿದ್ದರು. ಕಾಡು ಹಂದಿ ಬೇಟೆ ಮಾಡುತಿದ್ದವರು ಊರಲ್ಲಿ ಕೆಲವೇ ಬೇಟೆಗಾರರು ಮಾತ್ರ. ಎಲ್ಲರೂ ಕಾಡುಹಂದಿ ಬೇಟೆ ಮಾಡಲು ಸಾಧ್ಯವಿರಲಿಲ್ಲ. ಉಳುಮೆ ಮಾಡಲು, ಎತ್ತುಗಳನ್ನು ಕೊಳ್ಳಲು ದುಡ್ಡಿಲ್ಲ ಎನ್ನುತ್ತಿದ್ದ ಬೇಟೆಗಾರರು ಸಹ ಹಂದಿ ಬೇಟೆಗಾಗಿಯೇ ಮುಧೋಳ ಜಾತಿಯ ಪರಿಣಿತ ನಾಯಿಯನ್ನು ಹತ್ತು ಸಾವಿರದಷ್ಟು ಹಣ ಕೊಟ್ಟು ಕೊಂಡುಕೊಂಡು ಬರುತ್ತಿದ್ದರು. ಇದು ಬೇಟೆಗಾರರ ಹುಚ್ಚುತನಕ್ಕೆ ಸಾಕ್ಷಿ.
ಒಮ್ಮೆ ನಾನು ಮತ್ತು ನನ್ನ ಚಿಕ್ಕಪ್ಪನ ಮಗ ಅರವಿಂದ ಹಳೆ ಗದ್ದೆಗೆ ಹೋಗಿ ನಡೆದುಕೊಂಡು ಮನೆಗೆ ಬರುತ್ತಿದ್ದೆವು. ದಾರಿಯ ಎಡ ಭಾಗದ ಮಾರು ದೂರದಲ್ಲಿದ್ದ ಕಬ್ಬಿನ ಗದ್ದೆಯಲ್ಲಿ ಭಾರಿ ಕೂಗಾಟ ನಡೆಯುತಿತ್ತು. ದಾರಿಯಲ್ಲಿ ಜನರು ನಿಂತು ಕೆಲವರು ನೋಡುತ್ತಿದ್ದರು. ಕುತೂಹಲಕ್ಕೆ ಏನಾಗುತ್ತಿದೆ ಎಂದು ವಿಚಾರಿಸಿದೆವು. ಕಾಡು ಹಂದಿ ಬೇಟೆ ಮಾಡುತ್ತಿರುವುದಾಗಿ ತಿಳಿಯಿತು. ಕುತೂಹಲದಿಂದ ಸ್ಥಳದ ಹತ್ತಿರ ಹೋದೆವು. ಸುಮಾರು ಮೂರು ಎಕರೆಯಷ್ಟು ಕಬ್ಬಿನ ಗದ್ದೆ ಇತ್ತು. ಅದರ ಸುತ್ತ ಕಟಾವಾಗಿ ಖಾಲಿ ಇದ್ದ ಭತ್ತದ ಗದ್ದೆ. ಸುತ್ತ ಅಲ್ಲಲ್ಲಿ ಸುಮಾರು ಏಳೆಂಟು ಜನರು ಕೈಯಲ್ಲಿ ಮಚ್ಚು ಹಿಡಿದು ಕಾವಲು ಕಾಯುತ್ತಿದ್ದರು. ಜೊತೆಗೆ ಅಲ್ಲಲ್ಲಿ ಬೇಟೆ ನಾಯಿಗಳು ಸಹ ಕಾವಲು ಕಾಯುತ್ತಿದ್ದವು. ಬಂದೂಕುಧಾರಿಯ ಕೆಳಭಾಗದಲ್ಲಿನ ಗದ್ದೆಗೆ ಅಂಟಿಕೊಂಡಂತೆ ಸ್ವಲ್ಪ ದೂರಕ್ಕೆ ಬಂದೂಕು ಹಿಡಿದು ಗಡಿ ಕಾಯುವ ಯೋಧನಂತೆ ಗುರಿ ಇರಿಸಿಕೊಂಡು ಕಾಯುತಿದ್ದನು. ಆತನ ನಂತರ ಮತ್ತೊಂದು ಗದ್ದೆಯ ಕಡೆ ತುದಿಯಲ್ಲಿ ಹೆಚ್ಚು ಪರಿಣಿತ ಬೇಟೆಗಾರರು ಒಬ್ಬರ ಹಿಂದೆ ಒಬ್ಬರಂತೆ ಇಪ್ಪತ್ತು ಮೀಟರ್ ಅಂತರದಲ್ಲಿ ನಾಯಿಗಳೊಂದಿಗೆ ಮಚ್ಚು ಹಿಡಿದು ಕೆಲವರು ನಿಂತಿದ್ದರು. ಇದು ಮಹಾಭಾರತದ
ಚಿಕ್ರವ್ಯೂಹವನ್ನು ನೆನಸುವಂತಿತ್ತು. ಅಂದಾಜು ಹತ್ತು ಜನರು ಕಬ್ಬಿನ ಗದ್ದೆಯೊಳಗೆ ನುಗ್ಗಿ ಹಂದಿಯನ್ನು ಬಂದೂಕುಧಾರಿಯ ಕಡೆಗೆ ಓಡಿಸುವ ಪ್ರಯತ್ನ ಮಾಡುತಿದ್ದರು.
ಮೊದಲೆ ಕಬ್ಬಿನ ಗದ್ದೆಯಾದ್ದರಿಂದ ಹಂದಿ ಎಲ್ಲಿ ಅಡಗಿ ಕುಳಿತಿದೆ ಎಂಬುದು ಜನರಿಗೆ ಕಾಣುತ್ತಿರಲಿಲ್ಲ. ಕಬ್ಬಿನ ಗದ್ದೆಗೆ ನುಗ್ಗುವುದು ಸುಲಭವು ಅಲ್ಲ. ಕಬ್ಬಿನ ತರಗು ಗರಗಸದಂತೆ ಕೈಕಾಲುಗಳನ್ನು ಗಾಯಗೊಳಿಸುವುದರಿಂದ ಮತ್ತು ಗದ್ದೆಯೊಳಗೆ ನುಗ್ಗಿದಾಗ ಎಲ್ಲಿ ಆಡಗಿದ್ದ ಹಂದಿ ಆಕ್ರಮಣ ಮಾಡುತ್ತದೋ ಎಂಬ ಭಯದಲ್ಲಿ ಕೂಗು ಹಾಕುತ್ತ ಒಂದು ಸುತ್ತು ಗದ್ದೆಯೊಳಗೆ ನುಗ್ಗಿ ಹೊರ ಬಂದು ಬಂದು ನಿಲ್ಲುತ್ತಿದ್ದರು.
ಮುಂದಾಳು ಬೇಟೆಗಾರ "ಏ ನುಗೋ ಈ ಅವಕಾಶ ಬಿಟ್ರೆ ಆಗಲ್ಲ. ಸರಿಯಾಗದೆ, గండు ಹಂದಿನೆ. ನುಗೋ, ಕೂಗಾಕ್ರೋ, ಹೊರಕ್ಕೆ ಕಡಸ್ರೋ" ৬০ত ಹುರಿದುಂಬಿಸತೊಡಗಿದ್ದ. ನಾವು ಬಂದೂಕುಧಾರಿ ಹತ್ತಿರವೇ ಹೋಗಿ ಕಾಯುತ್ತಾ ಕುಳಿತಿದ್ದೆವು. ಕಬ್ಬಿನ ಜೊಲ್ಲೆ ನಡುಗಿದಂತಾಗಿ ತರಗಿನ ಶಬ್ದ ಕೇಳಿಸಿತು. ಹಂದಿ ಬಂತೆಂದು ತಿಳಿದು ಬಂತು ಬಂತು ಅಂತ ಕೂಗಿದೆವು. ಬಂದುಕೂಧಾರಿ ಡಮ್ ಎಂದು ಗುಂಡು ಹಾರಿಸಿದ. ಹೊರ ಬಂದ ಪ್ರಾಣಿ ಹಂದಿಯಾಗಿರಲಿಲ್ಲ ಅದು ನರಿಯಾಗಿತ್ತು. ಹಾರಿದ ಗುಂಡು ಅದಕ್ಕೆ ತಾಗಿರಲಿಲ್ಲ. ಹೊರ ಓಡಿ ಬಂದ ನರಿ, ನಾಯಿ ಮತ್ತು ಜನರನ್ನು ನೋಡಿ ಮತ್ತೆ ಹೆದರಿ ಹಿಂದಕ್ಕೆ ಓಡಿ ಕಬ್ಬಿನಗದ್ದೆ ಸೇರಿತು. ಒಂದಷ್ಟು ಹೊತ್ತು ಹೀಗೆ ಕೂಗಾಟ ನಡೆಯುತಿತ್ತು. ಕಬ್ಬು ಎತ್ತರ ಬೆಳೆದಿದ್ದರಿಂದ ಕಬ್ಬಿನ ಗದ್ದೆಯೊಳಗಿನ ಬೇಟೆಗಾರರು ಕಾಣದೆ ಇದ್ದರೂ ಜೋರಾಗಿ ಕೂಗಿ ಓಡಿಸತೊಡಗಿದ್ದು ಮತ್ತು ಕಬ್ಬಿನ ಮತಗಾರರು ಶಬ್ದ ಕೇಳಿಸುತ್ತಿತ್ತು. ಹಂದಿ ಬರ್ರನೆ ನುಗ್ಗಿ ಹೊರ ಬಂತು. ಬಂತು ಬಂತು ಎಂದು ನಾವು ಜೋರಾಗಿ ಕೂಗತೊಡಗಿದೆವು. ಬಂದೂಕುಧಾರಿ ಡಮ್ ಎಂದು ಎರಡು ಬಾರಿ ಗುಂಡು ಹಾರಿಸಿದನು. ಅದರ ವೇಗದಿಂದಾಗಿ ಅದು ತಾಗಲಿಲ್ಲ. ಅದು ಇನ್ನಷ್ಟು ಮುಂದೆ ಓಡಿತು. ಅಲ್ಲಿ ನಾಯಿಗಳು ಮತ್ತು ಬೇಟೆಗಾರರು ಇದ್ದುದರಿಂದ ಗುಂಡು ಹಾರಿಸುವುದು ಅಪಾಯಕಾರಿಯಾಗಿತ್ತು. ಹಾಗಾಗಿ ಬಂದೂಕುಧಾರಿ ಗುಂಡು ಹಾರಿಸಲಿಲ್ಲ. ಹಂದಿಯ ವೇಗಕ್ಕೆ ಹೆದರಿ ಅಡ್ಡ ಇದ್ದ ಬೇಟೆಗಾರರು ಪಕ್ಕಕ್ಕೆ ಸರಿದರು. ಹಂದಿ ಓಡತೊಡಗಿತು. ಹಿಂದೆ ನಾಯಿಗಳು ಓಡತೊಡಗಿದವು. ಬದುಗಳನ್ನು ಜಿಗಿದು ಓಡುತ್ತಿದ್ದ ಹಂದಿಯ ಹಿಂದೆ ನಾಯಿ, ನಾಯಿಯ ಹಿಂದೆ ಬೇಟೆಗಾರರು ಓಡುತ್ತಿದ್ದರು. ಒಂದೆರಡು ಕಿ. ಮೀ. ನಷ್ಟು ಓಡಿದ ಹಂದಿ ಮತ್ತೊಂದು ಕಬ್ಬಿನ ತೋಟದೊಳಗೆ ನುಗ್ಗಿ ತಪ್ಪಿಸಿಕೊಂಡಿತ್ತು. ಇಂಗು ತಿಂದ ಮಂಗನಂತೆ ನಾಯಿಗಳು ಮತ್ತು ಬೇಟೆಗಾರರು ನಿಂತರು. ನಾವು ಬಂತು ಬಂತು ಎಂದು ಕೂಗಿದ್ದರಿಂದಲೇ ಗಾಬರಿಯಿಂದ ಈಡು ತಪ್ಪಿತೆಂದು ಬಂದೂಕುಧಾರಿ ನಮ್ಮನ್ನು ಬಯ್ಯುತ್ತಾ ಹೊರಟನು. ನಾವು ಊರ ಕಡೆ ಕಾಲುಕಿತ್ತೆವು.
ಚಿಕ್ಕವರಿದ್ದಾಗಿನಿಂದ ನಾವು ಇದೆ ರೀತಿ ಬಹಳಷ್ಟು ವರ್ಷಗಳು ಮೊಲ ಮತ್ತು ಕಾಡು ಬೆಕ್ಕುಗಳ ಬೇಟೆಯಾಡುವುದನ್ನು ನೋಡಿದ್ದೇವೆ. ಹೊಲಗಳಿಗೆ ಹೋಗುವಾಗ
ನಮ್ಮ ಕಣ್ಣ ಮುಂದೆಯೇ ಮೊಲಗಳು ಓಡುತ್ತಿರುವುದನ್ನು ನೋಡಿದ್ದೆವು. ಅಷ್ಟು ಪ್ರಮಾಣದಲ್ಲಿ ಮೊಲಗಳಿದ್ದವು. ಬೇಟೆಗಾರರು ಬೇಟೆಗೆ ಎಂದು ಎರಡು ಅಥವಾ ಮೂರು ದಿನಗಳು ಬೇಟೆ ನಾಯಿಗಳೊಂದಿಗೆ ಹೋಗುತ್ತಿದ್ದರು. ಗಿಡಗಂಟೆಗಳು ಮತ್ತು ಗುತ್ತಿಗಳಲ್ಲಿರಬಹುದಾದ ಮೊಲಗಳನ್ನು ಅಥವಾ ಕಾಡುಬೆಕ್ಕುಗಳನ್ನು おゆん ನಾಯಿಗಳಿಂದ ಬೆನ್ನಟ್ಟಿ ಹಿಡಿಯುವುದು. ಹೀಗೆ ಬೆನ್ನಟ್ಟಿ ಹೋದವರು ಹದಿನೈದು ಇಪ್ಪತ್ತು ಕಿ. ಮೀ ದೂರದವರೆಗೂ ಹೋಗುತ್ತಿದ್ದರು. ಐದಾರು ಮೊಲಗಳನ್ನು ಹಿಡಿದು ಅದನ್ನು ಅಲ್ಲಿಯೇ ಚೆನ್ನಾಗಿ ಸುಟ್ಟು, ಉದ್ದದ ಮರದ ಗಳಕ್ಕೆ ತಕ್ಕಡಿಯಂತೆ ಆ ಕಡೆ ಮೂರು ಈ ಕಡೆ ಮೂರು ನೇತು ಹಾಕಿಕೊಂಡು ಹೆಗಲಮೇಲೆ ಹೊತ್ಕಂಡು ಬರುತ್ತಿದ್ದರು. ಅವರ ಹಿಂದೆ ನಾಯಿಗಳು ಬರುವ ಚಿತ್ರಣ ಮಕ್ಕಳಾಗಿದ್ದ ನಮಗೆ ವಿಶೇಷವಾಗಿರುತ್ತಿತ್ತು. ಬಂದ ನಂತರ ಬೇಟೆಗಾರರೆಲ್ಲ ಒಂದೆಡೆ ಸೇರಿ ಬೇಟೆ ಮಾಡಿದ ಮೊಲಗಳನ್ನು ಕತ್ತರಿಸಿ ಎಷ್ಟು ಬೇಟೆಗಾರರಿದ್ದಾರೊ ಅಷ್ಟು ಹಾಗೂ ಬೇಟೆ ಮಾಡಿದ ನಾಯಿಯ ಪಾಲನ್ನು ಗುಡ್ಡೆ ಮಾಡಿ ಹಂಚಿಕೊಳ್ಳುತ್ತಿದ್ದರು. ಅವರಲ್ಲಿ ಕೆಲವರು ತಮ್ಮ ಪಾಲನ್ನು ಮಾರಾಟ ಮಾಡಿಕೊಳ್ಳುತ್ತಿದ್ದರು. ಇವುಗಳನ್ನೆಲ್ಲ ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದಾಗ ನನಗೂ ಬೇಟೆ ಮಾಡುವ ಆಸೆ ಹುಟ್ಟುತ್ತಿತ್ತು. ನಾನು ಹೊಲಕ್ಕೆ ಹೋಗುವಾಗ ಆಗಾಗ ಮೊಲಗಳು ಓಡುವುದನ್ನು ನೋಡುತ್ತಿದ್ದೆ. ನಾವೆ ಕೆಲವೊಮ್ಮೆ ಗುತ್ತಿಯಲ್ಲಿ ಅಡಗಿದ್ದ ಮೊಲಗಳನ್ನು ಕಲ್ಲು ತೂರಿ ಹೊಡೆಯಲು ಪ್ರಯತ್ನಿಸುತ್ತಿದ್ದೆವು.
ನಮ್ಮ ಮನೆಯಲ್ಲು ಒಂದು ನಾಯಿಯನ್ನು ಸಾಕಿದ್ದೆವು. ಅದು ಬೇಟೆ ನಾಯಿ ಅಲ್ಲದಿದ್ದರು ಮನೆ ಕಾಯುವ. ಸಾಕುತ್ತಿದ್ದ ನಾಯಿಗಳು ಅವರು ಸಿಳ್ಳೆ ಹೊಡೆದ ಅಥವಾ ಕೂಗಿದ ತಕ್ಷಣ ಎಲ್ಲೆ ಇದ್ದರು ಓಡಿ ಅವರನ್ನು ಹಿಂಬಾಲಿಸುತ್ತಿದ್ದವು. ಹಾಗೆಯೇ ನಮ್ಮ ನಾಯಿಯನ್ನು ನನ್ನೊಂದಿಗೆ ಹೊಲಕ್ಕೆ ಕರೆದೊಯ್ಯಬೇಕೆಂದರೆ ಹರಸಾಹಸ ಮಾಡಬೇಕಿತ್ತು. ಅವನಿಗೆ ಹೇಳಿ ಒಂದು ರೊಟ್ಟಿ ಅಥವಾ ತಂಗಳು ಮುದ್ದೆ ಕೈಯಲ್ಲಿ ಹಿಡಿದು ದಾರಿಯುದ್ದಕ್ಕೂ ಅಲ್ಲಲ್ಲಿ ತುತ್ತು ಹಾಕುತ್ತ ಕರೆದುಕೊಂಡು ಹೋಗುತ್ತಿದ್ದೆ. ತುತ್ತು ಮುಗಿಯುತ್ತಿದ್ದಂತೆ ಮುಂದಡಿಯಿಡುತ್ತಿರಲಿಲ್ಲ. ಎಷ್ಟೇ ಹೊಡೆದು ಕರೆದರು ಜಗ್ಗದೆ ನಿಲ್ಲುತ್ತಿದ್ದುದರಿಂದ ಸಿಟ್ಟಿನಲ್ಲಿ ನಾನು ಅದಕ್ಕೆ ಕಲ್ಲಿನಲ್ಲಿ ಹೊಡೆದರೆ ಸಾಕು ಅವಕಾಶಕ್ಕೆ ಕಾದು ಕುಳಿತಂತೆ ಹಿಂದೆ ಓಡೆ ಬಿಡುತ್ತಿತ್ತು. ಒಮ್ಮೊಮ್ಮೆ ಅದು ಹೊಲಕ್ಕೆ ಬಂದರೆ ನಾವು ಕೂಡ ಅಲ್ಲಲ್ಲಿರುವ ಗುತ್ತಿಗಳಿಗೆ ಕಲ್ಲು ಹೊಡೆದು ನಾಯಿಯನ್ನು ಚೂ ಬಿಡುತ್ತಿದ್ದೆವು. ಗುತ್ತಿಯಲ್ಲಿ ಇರಬಹುದಾದ ಪಕ್ಷಿಯೋ ಅಥವಾ ಸಣ್ಣಪುಟ್ಟ ಜೀವಿಗಳೋ ಸರಕ್ಕಂತ ಶಬ್ದ ಮಾಡಿದರೆ ಕಿವಿ ನೆಟ್ಟಗೆ ಮಾಡಿ ದಿಟ್ಟಿಸಿ ನೋಡಿ ಯಾವುದೇ ಅಪಾಯವಿಲ್ಲವೆಂದು ದೃಢಪಟ್ಟ ಮೇಲೆ ಓಡಿದಂತೆ ಮಾಡಿ ಗುತ್ತಿಯನ್ನು ಮೂಸಿ ಕಾಲನ್ನೆತ್ತಿ ಸೂಸು ಮಾಡಿ ಬರುತಿತ್ತೇ ಹೊರತು ಒಮ್ಮೆಯೂ ಬೇಟೆಯನ್ನು ಬೆನ್ನಟ್ಟಲೇ ಇಲ್ಲ.
ಒಮ್ಮೆ ನನ್ನ ತಾಯಿಯ ತವರೂರು ಬೋರೆ ಹೊಸಳ್ಳಿಗೆ ಹೋಗಿದ್ದೆ. ಆ ಊರು ನಮ್ಮೂರಿಂದ ಇಪ್ಪತ್ತೈದು ಕಿಮೀ ದೂರದಲ್ಲಿದೆ. ನಮ್ಮ ಮಾವ "ಏನ್ ಜನರು
ನಿಮ್ಮೂರವರು. ಮೊನ್ನೆ ಮುಸ್ಸಂಜೆಲಿ ಬೇಟೆಗೆ ಅಂತ ನಮ್ಮ ಹಿತ್ತು ತನಕ ಬಂದಿದ್ದರು. ಒಂದು ದಂಡು ನಾಯಿ ಇದ್ದು, ಯಾವ ಊರು ಅಂದ್ರೆ ನಿಮ್ಮೂರು ಅಂದ್ರು, ಕಾಡಬೆಕ್ಕು ಈಕಡೆನೆ ಬಂತು ನಾಯಿ ಬೆನ್ನಟ್ಟಿ ಬಂದು ಎಲ್ಲೋ ತಪ್ಪುಸ್ಕೋಬಿಡ್ತು ವಾಪಸ್ ಹೊಗ್ತಿವಿ ಕನಣ್ಣ ಅಂದ್ರು, ಏನ್ ಬಾಡ್ನಾಸೆನೊ ನಿಮ್ಮೂರವರಿಗೆ. ನಿನ್ನೆ ಸಣ್ಣಮಯ್ಯನ ಮನೆಲಿ ಸಾಕಿದ್ದ ಬೆಕ್ಕು ಮೊನ್ನೆಯಿಂದ ಮನೆಗೆ ಬಂದಿಲ್ಲ ಅಂತಿದ್ರು, ನಿಮ್ಮೂರ ಕಾಡಬೆಕ್ಕು ಅಂತ ಊರ್ ಬೆಕ್ಕು ಹೊಡ್ಕೊಂಡೋದ್ರೋ ಏನೋ" ಅಂತ ಹೇಳಿದ್ದು ಇನ್ನು ನನಗೆ ನೆನಪಿದೆ. ಬೇಟಿ ಹುಚ್ಚಿ ಅಂತಹದ್ದಿರಬೇಕು. ಹೋದ ಮೇಲೆ ಬರಗೈಲ್ಲಿ ಹಿಂದಿರುಗಿ ಬರಲು ಮನಸ್ಸೇ ಒಪ್ಪಲ್ಲ ಅನ್ಸುತ್ತೆ ಮೂಡಿಗೆರೆ ತಾಲ್ಲೂಕಿನ ಜನ್ನಾಪುರದ ಸ್ನೇಹಿತ ಮೋಹನ್ ಕೂಡ ಇದೇ ರೀತಿ ಅನುಭವದ ಮಾತೊಂದನ್ನು ಹೇಳಿದ್ದರು. "ಸರ್ ಬೇಲೂರು ಕಡೆ ಜೋಳದ ಹೊಲ ಇದಾವಲ್ಲ, ಆ ಕಡೆಗೆ ಕಾಡಹಂದಿ ಜಾಸ್ತಿ. ನಮ್ಮ ಮಲೆನಾಡಲ್ಲಿ ಬೇಟೆ ಮಾಡೋದು ಕಷ್ಟ ನಾನು ಐದಾರು ವರ್ಷದ ಹಿಂದೆ ಒಂದಲ ಒಂದು ಓಪನ್ ಜೀಪ್ ನಲ್ಲಿ ಐದಾರು ಜನ ಹಣೆ ಬ್ಯಾಟರಿ ಮತ್ತು ಗನ್ ತಗೊಂಡು ಬೇಟೆಗೆ ಹೋಗಿದ್ವಿ, ರಾತ್ರಿಯೆಲ್ಲಾ ಎಷ್ಟು ಸುತ್ತುದ್ದು ಒಂದ್ ಬೇಟೆ ಆಗ್ಲಿಲ್ಲ. ಕೊನೆಗೆ ಬೇಜಾರಾಗಿ ವಾಪಸ್ ಬರ್ತಾ ಬೆಳಿಗ್ಗೆ ಏಳು ಗಂಟೆಗೆ ಟೀ ಕುಡಿಯೋಣ ಅಂತ ಬೇಲೂರು ಬೈಪಾಸ್ ಹತ್ರ ಸಣ್ಣ ಹೋಟೆಲಿನಲ್ಲಿ ಟೀ ಕುಡಿತಿದ್ವಿ. ಅಲ್ಲಿ ಪಕ್ಕದಲ್ಲಿ ಸ್ವಲ್ಪ ದೊಡ್ಡ ಹೊಟೆಲಿತ್ತು. ಅದರ ಹಿಂಭಾಗದಲ್ಲಿ ಬೂದಿ ರಾಸಿ ಇತ್ತು ಮೂರ್ನಾಲ್ಕು ಊರಿನಹಂದಿಗಳು ಮಲಕೊಂಡು ಹೊರಳಾಡ್ತಿದ್ದು, ಸುಮ್ಮೆ ಬರಿಗೈಲ್ಲಿ ಏನ್ ಹೋಗೊದು ಅಂತ ಡಿಸೈಡ್ ಮಾಡಿ. ಮಲ್ಲಗೆ ಹತ್ತಿರ ನಿಂತಂಗೆ ಮಾಡಿ ಜೀಪನ್ನು ಹತ್ರ ನಿಲ್ಲುಸ್ಕೊಂಡೆವು. ನನ್ನ ಚೀರ್ನಳ್ಳಿ ಕಜಿನ್ ಒಂದು ಗಡವ ಹಂದಿಗೆ ಡಮ್ ಅಂತ ಗುಂಡು ಹಾರಿಸಿದ. ಒಂದೇ ಎಟು ಒದ್ದಾಡಕ್ಕೆ ಶುರುವಾಯ್ತು. ಅದು ಸಾಯೋಕು ಮುಂಚೆ ನಾವಿಬ್ರು ಓಡೋಗಿ ಕಾಲ್ ಹಿಡ್ಕೊಂಡು ಜೀಪಿಗೆ ಬಿಸಾಕೊಂಡು ಜನ ಏನು ಅಂತ ಕೇಳುವ ಹೊತ್ತಿಗೆ ಅಲ್ಲಿಂದ ಪರಾರಿ ಆಗಿದ್ವಿ" ಅಂತ ಹೇಳಿದ ಮಾತುಗಳು ಇನ್ನು ನೆನಪಿದೆ. ನನಗೆ ಬೇಟೆಗಾರರು ಯಾವ ಊರಿನವರಾಗಲಿ ಅಥವಾ ಯಾವುದೇ ಬೇಟೆಗಾರರಾಗಲಿ ಮನಸ್ಥಿತಿ ಮಾತ್ರ ಒಂದೇಯಾಗಿರುತ್ತದೆ ಅನಿಸಿತ್ತು.
ಹಣೆ ಬ್ಯಾಟರಿಗಳನ್ನು ಬಳಸಿ ಬೇಟೆ ಆಡಲು ಪ್ರಾರಂಭವಾದದ್ದೆ ತಡ ಬೇಟೆಯ ದಿಕ್ಕೆ ಬದಲಾಯಿತು. ಬೇಟೆ ನಾಯಿಗಳ ಮಹತ್ವ ಕಡಿಮೆಯಾಗತೊಡಗಿತ್ತು. ಮೂರ್ನಾಲ್ಕು ದಿನದಲ್ಲಿ ಏಳೆಂಟು ಜನ ಮೂರ್ನಾಲ್ಕು ಮೊಲಗಳನ್ನೂ ಕಾಡು ಬೆಕ್ಕನ್ನೂ ಬೇಟೆ ಮಾಡುತ್ತಿದ್ದವರು, ಹಣೆ ಬ್ಯಾಟರಿಯಿಂದ ಇಬ್ಬರು ಮೂವರು ಒಂದೇ ರಾತ್ರಿಯಲ್ಲಿ ಏಳೆಂಟು ಜೀವಂತ ಮೊಲ ಅಥವಾ ಬೆಕ್ಕುಗಳನ್ನು ಬೇಟೆ ಮಾಡಿಕೊಂಡು ಬರುತ್ತಿದ್ದರು. ವರ್ಷ ಉರುಳಿದಂತೆ ಮೊಲಗಳ ಸಂತತಿಯೇ ನಾಶವಾದಷ್ಟು ವಿರಳವು ಆಯಿತು. ನಮ್ಮ ಮನೆಯ ಮುಂದೆ ನಮ್ಮ ದಾಯಾದಿಗಳಾದ ಕುಳ್ಳಮರಿಯಯ್ಯನ ಮಕ್ಕಳಾದ ಕೃಷ್ಣಣ್ಣ ಮತ್ತು ರಾಮಣ್ಣ ಇಬ್ಬರು ಅಣ್ಣ ತಮ್ಮಂದಿರು. ಹಣೆ ಬ್ಯಾಟರಿಯಲ್ಲಿ ಬೇಟೆ
ಮಾಡುವುದರಲ್ಲಿ ನಿಪುಣರು, ಬ್ಯಾಟರಿಯ ಬೆಳಕು ಮತ್ತು ಗುಯ್ಯ ಎಂದು ಬರುವ ಶಬ್ದವನ್ನು ದಿಟ್ಟಿಸಿ ನಿಂತ ಪ್ರಾಣಿಯನ್ನು ಮತ್ತೊಬ್ಬರು ರಿಂಗಿನ ರೂಪದ ಬಲೆಯಲ್ಲಿ ಬಂಧಿಸುತ್ತಿದ್ದರು. ರಾತ್ರಿ ಹೋದವರು ಕೃಷ್ಣಣ್ಣ ಬೆಳ್ಳಂಬಬೆಳಗ್ಗೆ ಜೀವಂತ ಮೊಲಗಳನ್ನು ಹಿಡಿದು ಕಾಲುಗಳನ್ನು ಕಟ್ಟಿ ತರುತ್ತಿದ್ದರು. ಕೆಲವೊಮ್ಮೆ ಜೀವಂತ ಮೊಲವೊಂದರ ಕಾಲು ಮುರಿದು ಓಡಲು ಬಿಟ್ಟು ಹೊಸ ನಾಯಿಗಳಿಗೆ ಬೇಟೆ ಅಭ್ಯಾಸ ಮಾಡಿಸುತ್ತಿದ್ದರು. ಜೀವಂತ ಮೊಲಗಳನ್ನು ಸಾಯಿಸುವಾಗ ಅಥವಾ ಬೇಟೆ ತರಬೇತಿ ಸಂದರ್ಭದಲ್ಲಿ ಅವುಗಳ ಕಿರುಚಾಟ ನೋಡಿ ಹಿಂಸೆ ಎನಿಸತೊಡಗಿತ್ತು. ನಂತರದ ದಿನಗಳಲ್ಲಿ ಅವರಿಗೂ ಬೇಟೆ ವಾಕರಿಕೆ ಬರಿಸಿತೋ ಅಥವ ಉತ್ಸಾಹ ಕಡಿಮೆಯಾಯಿತೋ ಏನೋ ಗೊತ್ತಿಲ್ಲ. ಮುಂದೆ ಭೇಟೆಯನ್ನೆ ನಿಲ್ಲಿಸಿದ್ದರು. ಕೃಷ್ಣಣ್ಣನಿಗೆ ಹುಟ್ಟಿದ ಮಗ ದೈಹಿಕವಾಗಿ ಮತ್ತು ಮಾನಸಿಕವಾಗಿ ಅಂಗವಿಕಲನಾಗಿ ಹುಟ್ಟಿದ್ದ. ಯಾವ ಪ್ರಾಪಂಚಿಕ ಪ್ರಜ್ಞೆಯೂ ಇಲ್ಲದೆ ಹದಿನೈದು ವರ್ಷದಿಂದ ಆ ಹುಡುಗ ಹೋ. ಹೋ. ಹೋ ಅಂತ ಕೂಗುತ್ತಲೆ ಮನೆಯ ಸುತ್ತ ಸುತ್ತುತ್ತಾ ಇಂದಿಗೂ ಬದುಕುತ್ತಿದ್ದಾನೆ. ಇಂದಿಗೂ ಊರಿಗೆ ಹೋದಾಗ ಆ ಹುಡುಗನನ್ನು ನೋಡುವಾಗಲೆಲ್ಲ ಮತ್ತು ಆ ಹುಡುಗನ ಕೂಗನ್ನು ಕೇಳಿದಾಗಲೆಲ್ಲ ಕೃಷ್ಣಣ್ಣನ ಬೇಟೆಯ ದಿನಗಳೇ ನೆನಪಿಗೆ ಬರುತ್ತವೆ.
ಇನ್ನು ಕಾಡಿಲಿಗಳ ಬೇಟೆ ಕೆಲವರು ಮಾತ್ರ ಮಾಡುತಿದ್ದರು. ಕಾಡಿಲಿಗಳು ಮನೆ ಇಲಿಗಳಿಗಿಂತ ದೊಡ್ಡ ಇಲಿಗಳಾಗಿದ್ದವು. ಕಾಡಿಲಿ ಎಂದರೆ ಮನೆ ಇಲಿಯಂತಲ್ಲ, ಕಾಡಿಲಿಗಳು ಸ್ವಲ್ಪ ಬೂದು ಬಣ್ಣ ಅಥವಾ ಬಿಳಿ ಮಿಶ್ರಿತ ಕಪ್ಪು ಬಣ್ಣವಿರುತ್ತಿದ್ದವು. ಒಂದು ಕಾಡಿಲಿ ಕಾಲು ಕೆಜಿ ತೂಕ ಇರಬಹುದಾದಷ್ಟು ದೊಡ್ಡವು. ಕೆಲವು ಕುಟುಂಬಗಳು ಅವುಗಳನ್ನು ತಿನ್ನುತಿದ್ದರು. ಹಿಡಿಯುವುದಕ್ಕೆ ಒಬ್ಬರು ಅಥವಾ ಹೆಚ್ಚೆಂದರೆ ಇಬ್ಬರು ನಿಪುಣ ಬೇಟೆಗಾರರು ಮಾತ್ರ ಇರುತ್ತಿದ್ದರು. ಜೊತೆಗೆ ಒಂದು ಹಾರೆ, ಗುದ್ದಲಿ ಮತ್ತು ಅಥವಾ ಎರಡೋ ನಾಯಿಗಳನ್ನು ಕರೆದುಕೊಂಡು ಹೋಗುತ್ತಿದ್ದರು. ಕಾಲುವೇ ಏರಿ ಅಥವಾ ಹೊಲಗಳಲ್ಲಿ ಬೇಟೆಯನ್ನು ಹುಡುಕುತ್ತಾ ಹೋಗುತ್ತಿದ್ದರು. ವಾಸಿಸುವ ಸ್ಥಳವನ್ನು ಗುರುತಿಸುತ್ತಿದ್ದರು. ಆ ಗೂಡಿನಿಂದ ಹೊರ ಹೋಗಲು ಹಲವೂ ಬಿಲಗಳಿರುತ್ತಿದ್ದವು. ಅಂತಹವುಗಳನ್ನು ಗುರುತಿಸಿ ಎರಡು ಬಿಲಗಳನ್ನು ಬಿಟ್ಟು ಉಳಿದವುಗಳನ್ನು ಮುಚ್ಚಿ ಒಂದು ಬಿಲದಲ್ಲಿ ನಾಯಿಗಳನ್ನು ಕಾವಲು ಹಾಕುತ್ತಿದ್ದರು. ನಾಯಿಗಳು ಬಿಲದಲ್ಲಿ ಬಾಯಿ ಇಟ್ಟುಕೊಂಡೆ ಕಾಯುತ್ತಿರುತ್ತಿದ್ದವು. ಮತ್ತೊಂದು ಬಿಲದ ಕಡೆಯಿಂದ ಅಗೆಯುತ್ತಾ ಬರುತ್ತಿದ್ದರು. ಕೆಲವೊಮ್ಮೆ ನಾಯಿ ಇರುವ ಕಡೆ ಹೊರ ಬಂದರೆ ನಾಯಿಗಳು ಅವುಗಳನ್ನು ಹಿಡಿದು ಸಾಯಿಸುತ್ತಿದ್ದವು. ಇಲ್ಲ ಮತ್ತೊಂದು ಬಿಲದಿಂದ ಆಗೆದಂತೆ ಒಂದು ಕಡೆ ನಾಯಿ ಅವುಗಳು ಹೊರ ಹೋಗದಂತೆ ಕಾಯ್ದರೆ ಮತ್ತೊಂದು ಕಡೆ ಬೇಟೆಗಾರರು ಬಿಲವನ್ನು ಆಗೆದು ನಾಶ ಮಾಡುತ್ತಾ ಬರುವುದರಿಂದ ಗೂಡು ಚಿಕ್ಕದಾಗುತ್ತಾ ಕಾಡಿಲಿಗಳು ಒಂದೆ ಕಡೆ ಗುಂಪಾಗುತ್ತಿದ್ದವು. ಒಂದೊಂದೆ ಕಾಡಿಲಿ ಬಾಲವನ್ನು ಹಿಡಿದು ಎಳೆದುಕೊಂಡು ಬಾಲ ಒಂದು ಕೈಯಲ್ಲಿ ಮತ್ತೊಂದು
ಕೈಯಲ್ಲಿ ತಲೆಯನ್ನು ಹಿಡಿದು ವಿರುದ್ಧ ದಿಕ್ಕಿನಲ್ಲಿ ಎಳೆದು ಸಾಯಿಸುವುದು ಒಂದು ಕಲೆ. ಹೀಗೆ ಹಿಡಿದು ಹತ್ತು ಹದಿನೈದು ಕಾಡಿಲಿಗಳ ಬೇಟೆ ಮಾಡುತ್ತಿದ್ದರು. ಕೊಂಡುಕೊಳ್ಳುವವರಿಗೆ ಹತ್ತು ಕಾಡಿಲಿಗಳಿಗೆ ಮೂವತ್ತು ಅಥವಾ ನಲವತ್ತು ರೂಪಾಯಿಗಳಿಗೆ ಮಾರುತ್ತಿದ್ದರು.
ಇನ್ನು ತೋಡಗಳ ಬೇಟೆ ಅತಿವಿರಳ, ಆದರೂ ಊರಿನ ಕೆಲವರು ಮಾತ್ರ ಮಾಡುತ್ತಿದ್ದರು. ಇದೂ ವರ್ಷದ ಸುಗ್ಗಿಯ ದಿನಗಳಲ್ಲಿ ಮಾತ್ರ ಬೇಟೆ ಸಮಯವಾಗಿರುತಿತ್ತು, ಭತ್ತದ ಗದ್ದೆಗಳಲ್ಲಿ ಬದು ಅಥವಾ ಗದ್ದೆಗಳಲ್ಲಿ ಭತ್ತ ತೆನೆಯಾದ ಸಂದರ್ಭದಲ್ಲಿ ಮಾತ್ರ ಇರುತ್ತಿದ್ದ ತೋಡಗಳ ಬೇಟೆಯೂ ನಡೆಯುತಿತ್ತು. ಇವು ಕಾಡಿಲಿಗಳಿಗಿಂತ ಸ್ವಲ್ಪ ದೊಡ್ಡ ಗಾತ್ರದವು. ಭತ್ತದ ಕುಲ್ಲು ಸಂದರ್ಭ ಅಥವಾ ನಂತರ ಗದ್ದೆ ನಾಟಿಗೆ ಬದು ಕೊಚ್ಚುವಾಗ ಇಂತಹ ತೋಡಗಳನ್ನು ಬೇಟೆ ಮಾಡುತ್ತಿದ್ದರು. ಆದರೆ ಈ ಬೇಟೆ ಬಹಳ ವಿರಳವಾದದ್ದು. ಇದೆ ರೀತಿ ಅಳಿಲು, ಖೀರ, ಹುಂಡುಗೋಳಿ ಬೇಟೆಗಳು ಸರ್ವೆಸಾಮಾನ್ಯವಾಗಿದ್ದವು. ನಾನು ಬೇಟೆಗಾರನಾಗಿರದಿದ್ದರೂ ನನಗೆ ಅವುಗಳನ್ನು ಗಂಟೆಗಟ್ಟಲೆ ನೋಡುವುದರಲ್ಲಿಯೇ ಏನೋ ರೋಮಾಂಚನವಾಗುತ್ತಿತ್ತು.
ಇನ್ನು ಮೀನಿನ ಬೇಟೆ ಸಹಜವಾಗಿ ఎల్లా ಕಡೆಯೂ ನಡೆಯುತ್ತದೆ ಎಂದುಕೊಂಡಿದ್ದೇನೆ. ಮಳೆಗಾಲದಲ್ಲಿ ಕೆರೆಯಲ್ಲಿ ನೀರು ತುಂಬಿರುತ್ತಿದ್ದರಿಂದ ಯಾರು ಮೀನಿನ ಬೇಟೆ ಮಾಡಲು ಸಾಧ್ಯವಿರುತ್ತಿರಲಿಲ್ಲ. ಮೀನಿನ ಮರಿಗಳು ದೊಡ್ಡದಾಗಿ ಸಂತಾನ ಬೆಳೆದ ನಂತರ ಬೇಸಿಗೆ ಕಾಲದಲ್ಲಿ ಕೆರೆಯ ನೀರು ಕಡಿಮೆಯಾಗಿ ಮಂಡಿ ಉದ್ದಕ್ಕಿಳಿದಾಗ ಊರವರೆಲ್ಲ ಒಮ್ಮೆಯೇ ಕೆರೆಯಲ್ಲಿ ಮೀನಿನ ಬೇಟೆಗೆ ಇಳಿಯುತ್ತಿದ್ದರು. ಕೂಳಿಯನ್ನು ಇಡುತ್ತ ಮೀನನ್ನು ಬಂಧಿಸಲು ಪ್ರಯತ್ನ ನಡೆಯುತಿತ್ತು. ಇದೊಂದು ಊರಿನ ಹಬ್ಬವೆ ಆಗಿತ್ತು. ನಂತರ ಗ್ರಾಮ ಪಂಚಾಯಿತಿಗಳು ಈ ಕೆರೆಗಳನ್ನು ಹರಾಜಿನಲ್ಲಿ ಕೆಲವರಿಗೆ ವಹಿಸುವ ಮೂಲಕ ಊರಿನವರ ಮಾಯವಾಗಿ ಹರಾಜು ಪಡೆದವನು ಮಳೆಗಾಲದಲ್ಲಿ ಕೆರೆಗಳಿಗೆ ಮೀನಿನ ಮರಿಗಳನ್ನು ಹಬ್ಬವೆನ್ನುವುದು ಬಿಟ್ಟು ಬೇಸಿಗೆಯಲ್ಲಿ ಹಿಡಿದು ಮಾರುವುದು ವ್ಯಾಪಾರೀಕರಣದ ರೂಪ ಪಡೆದು ಮೀನಿನ ಬೇಟೆ ಆಗುತ್ತಿದೆಯೇ ಹೊರತು ಅದು ಮೊದಲಿನಂತೆ ಹಳ್ಳಿಯ ಹಬ್ಬವಾಗುತ್ತಿಲ್ಲ.
ಇನ್ನೂ ನಮ್ಮೂರಿನಲ್ಲಿ ಕೆರೆಯ ಬೇಟೆ ಅಷ್ಟೇನು ಮುಖ್ಯವಾಗಿರಲಿಲ್ಲ. ಕಾರಣ ಕಾಲುವೆಗಳಿರುವುದರಿಂದ ಕಾಲುವೆ ಮೀನಿನ ಬೇಟೆಯೇ ಹೆಚ್ಚು ಇರುತ್ತಿತ್ತು. ಜೂನ್ ತಿಂಗಳಿನಲ್ಲಿ ಕಾಲುವೆಗೆ ಹೊಳೆಯಿಂದ ನೀರು ಬಿಡುತ್ತಿದ್ದರು. ನವೆಂಬರ್ ತಿಂಗಳಿನಲ್ಲಿ ಕಾಲುವೆಗೆ ನೀರು ಬಿಡುವುದನ್ನು ನಿಲ್ಲಿಸುತ್ತಿದ್ದರು. ಈ ಮಾರ್ನಾಲ್ಕು ತಿಂಗಳು ಕಾಲುವೆ ತುಂಬಿ ಹರಿಯುತ್ತಿದ್ದರಿಂದ ಯಾರು ಮೀನಿನ ಬೇಟೆ ಮಾಡುತ್ತಿರಲಿಲ್ಲ. ಆದ್ದರಿಂದ ಮೊದಲು ನೀರು ನಿಲ್ಲಿಸಿದ ಸಂದರ್ಭದಲ್ಲಿ ಕೂಳೆ ಅಥವಾ ಬಲೆ ಬಳಸಿ ಯಥೇಚ್ಛವಾಗಿ ಮೀನು ಮತ್ತು ಏಡಿಗಳನ್ನು ಹಿಡಿಯುತ್ತಿದ್ದರು. ಕೆಲವೊಮ್ಮೆ ಇಪ್ಪತ್ತು ಮೀಟರ್ ನಷ್ಟು
ಕಾಲುವೆಯನ್ನು ಹಿಂದೆ ಮತ್ತು ಮುಂದೆ ಕಟ್ಟಿಹಾಕಿ ಆದರೊಳಗಿನ ನೀರನ್ನು ಪೂರ್ಣ ಬಾಂಡಲಿಯಿಂದ ತುಳುಕಿ ನೀರನ್ನು ಖಾಲಿ ಮಾಡಿದರೆ ಸಣ್ಣ ಸಣ್ಣ ಸೋಸಲು ಮೀನು ಮತ್ತು ಮಧ್ಯಮ ಗಾತ್ರದ ಮೀನುಗಳನ್ನು ಹಿಡಿಯುವುದೇ ನಮಗೆ ಒಂದು ರೀತಿಯ ಖುಷಿ. ಕಾಲುವೆ ತಿರುವಿನಲ್ಲಿ ಮಾತ್ರ ಕಲ್ವರ್ಟ ಇರುತ್ತಿತ್ತು. ಉಳಿದಂತೆ ಅದು ಮಣ್ಣಿನಿಂದ ಕೂಡಿದ್ದೆ ಆಗಿರುತ್ತಿತ್ತು. ಹಾಗಾಗಿ ಅಲ್ಲಿ ಏಡಿ ಗೂಡು ಮಾಡಿಕೊಂಡಿರುತ್ತಿದ್ದವು. ಕಲ್ವರ್ಟ ಇರುವ ಕಡೆ ಕಲ್ಲು ಸಂದಿಯಲ್ಲಿ ಏಡಿಗಳನ್ನು ಹಿಡಿಯುವುದಂತು ನಮಗೆ ಯಾವಾಗಲು ಹಬ್ಬವೆ. ನಮ್ಮೂರಿನಲ್ಲಿ ಸ್ವಲ್ಪ ಆರ್ಥಿಕ ಸ್ಥಿತಿ ಸುಧಾರಿಸಿದ್ದವರು ಕಾಲುವೆಯಿಂದ ಎತ್ತರದ ಹೊಲ ಅಥವಾ ಗದ್ದೆಗಳಿಗೆ ಬೇಸಿಗೆ ಕಾಲದಲ್ಲಿ ನೀರು ಎತ್ತಲೂ ಡೀಸಲ್ ಮೋಟಾರುಗಳನ್ನು ತಂದರು. ಇವುಗಳನ್ನು ಮೀನಿನ ಬೇಟೆಗೂ ಬಳಸತೊಡಗಿದರು. ಸುಮಾರು ನೂರು ಮೀಟರ್ ಉದ್ದಕ್ಕೂ ಹೆಚ್ಚು ಆಳವಾದ ನೀರು ಗುಂಡಿ ಇರುವೆಡೆ ಮೇಲ್ಬಾಗದಲ್ಲಿ ಮತ್ತು ಕೆಳಭಾಗದಲ್ಲಿ ಕಾಲುವೆಗೆ ಕಟ್ಟಿಹಾಕಿ ಆ ನೂರು ಮೀಟರ್ ಕಾಲುವೆಯ ನೀರನ್ನು ಪಂಪ್ ಮಾಡುವ ಮೂಲಕ ಖಾಲಿ ಮಾಡುತ್ತಿದ್ದರು. ಅದರೊಳಗಿರುವ ಮೂಟೆಗಟ್ಟಲೆ ಮೀನುಗಳನ್ನು ಹಿಡಿಯತೊಡಗಿದರು. ಇವೆಲ್ಲವುಗಳಲ್ಲಿ ಪ್ರೇಕ್ಷಕರಾಗಿಯೋ ಅಥವಾ ಸಹಾಯಕರಾಗಿಯೋ ಕೆಲವೊಮ್ಮೆ ನಾವಿರುತ್ತಿದ್ದೆವು.
ನಾವು ಮಾಂಸಹಾರಿಗಳು ಆದ್ದರಿಂದ ಅಪರೂಪಕ್ಕಾದರು ಕೋಳಿ ಮಾಂಸ ಅಥವಾ ಮೀನು ಬಯಸುವುದು ಸಹಜ. ಮನೆಯಲ್ಲಿ ಕೋಳಿ ಸಾಕಿದರು ಕೂಡ ಅವುಗಳ ಸಂಖ್ಯೆ ತುಂಬಾ ಕಡಿಮೆ ಇರುತಿತ್ತು. ಆಗಾಗ ಕಷ್ಟಕಾಲಕ್ಕೆ ಅವುಗಳನ್ನು ಮಾರುತ್ತಿದ್ದರಿಂದ ಯಾರಾದರು ನೆಂಟರು ಬಂದಾಗ ಮಾತ್ರ ಕೋಳಿ ಕುಯ್ಯುತ್ತಿದ್ದರು. ಬೇಸಿಗೆ ಕಾಲ ಬಂತೆಂದರೆ ಎಮ್ಮೆ ಕಾಯಲು ಅಥವಾ ಇತರ ಕೆಲಸಗಳ ನಿಮಿತ್ತ ಕೊಣದಾಳದಲ್ಲಿ ಅಥವಾ ಹೆಚ್ಚಾಗಿ ಗದ್ದೆಗಳಿಗೆ ನಿರಂತರವಾಗಿ ಹೋಗುತ್ತಿದ್ದೆವು. ಪಕ್ಕದಲ್ಲಿಯೇ ಕಾಲುವೆ ಇದ್ದರಿಂದ ಬಿಲಗಳಿಗೆ ಕೈ ತೂರಿಸಿ ಐಡಿ ಹಿಡಿದು ಸುಟ್ಟು ತಿನ್ನುವುದೆ ನಮಗೆ ಒಂದು ವಿಶೇಷ ಖುಷಿ, ಜೊತೆಗೆ ಸೋಸಲು ಮೀನುಗಳನ್ನು ಹಿಡಿಯುವ ಒಂದು ತಂತ್ರವನ್ನು ನಾನು ಕಂಡುಕೊಂಡಿದ್ದೆ. ಸೋಸುಲು ಅಂದರೆ ಸಣ್ಣ ಸಣ್ಣ ಮೀನುಗಳು ಎಂದರ್ಥ. ಆ ತರಿತ್ರವೆಂದರೆ ಮೊನಚು ಅಂಚಿನ ಊಟದ ತಟ್ಟೆಗೆ ಬಟ್ಟೆಯೊಂದನ್ನು ಸುತ್ತಿ ಅದಕ್ಕೆ ಗಟ್ಟಿಯಾಗಿ ಕಟ್ಟುತ್ತಿದ್ದೆ. ತಟ್ಟೆಯ ಮಧ್ಯಭಾಗದಲ್ಲಿ ಬಟ್ಟೆಯನ್ನು ಅಂದಾಜು ಅರ್ಧ ಅಂಗುಲದಷ್ಟು ಒಂದು ಸಣ್ಣ ತೂತನ್ನು ಮಾಡಿ ಅದರಲ್ಲಿ ಹಿಟ್ಟಿನ ತುತ್ತನ್ನು ಅಥವಾ ಅನ್ನವನ್ನು ಹಾಕಿ ಕಾಲುವೆಯ ಅಂಚಿನ ನೀರಿನಲ್ಲಿ ತೇಲಿಹೋಗದಂತೆ ಮುಳುಗಿಸಿಡುತ್ತಿದ್ದೆ. ಸಣ್ಣ ಸಣ್ಣ ಮೀನುಗಳು ಆ ಹಿಟ್ಟು ಅಥವಾ ಅನ್ನ ತಿನ್ನುತ್ತಾ ನಿಧಾನವಾಗಿ ಒಂದೊಂದೆ ಆ ತೂತಿನಲ್ಲಿ ಒಳಗೆ ಹೋಗುತಿದ್ದವು. ಹದಿನೈದು ಇಪ್ಪತ್ತು ನಿಮಿಷ ಬಿಟ್ಟು ನೋಡಿದರೆ ಆ ತಟ್ಟೆಯಲ್ಲಿ ಅಂದಾಜು ಏಳೆಂಟು ಸಣ್ಣ ಸಣ್ಣ ಮೀನುಗಳು ಬಿದ್ದಿರುತ್ತಿದ್ದವು. ಅವುಗಳನ್ನು ತೆಗೆದು ಒಂದು ಟಿಫನ್ ಬಾಕ್ಸ್ಗೆ ಅಥವಾ ಪಾತ್ರೆಯಲ್ಲಿ ಅರ್ಧ ನೀರು ತುಂಬಿಸಿ ಅದರಲ್ಲಿ ಹೀಗೆ ಹಿಡಿದ ಮೀನುಗಳನ್ನು
ಹಾಕಿ ಸಂಗ್ರಹಿಸುತ್ತಿದ್ದೆ. ಹೀಗೆ ಗದ್ದೆ ಕೆಲಸ ಮಾಡುತ್ತಲೋ ಅಥವಾ ಎಮ್ಮೆ ಕಾಯುತ್ತಲೋ ಅಥವಾ ಥವಾ ಅವ್ವ ಬಟ್ಟೆ ತೊಳೆದು ಒಣಗಿಸುವವರೆಗೆ ನಾನು ಈ ಮೀನು ಹಿಡಿಯುವ ಕೆಲಸ ಮಾಡುತ್ತಿದ್ದೆ. ನನಗೆ ಈ ಕೆಲಸ ಬಹಳ ಖುಷಿಕೊಡುತಿತ್ತು.
ಅಂತಿಮವಾಗಿ ಅಂದಾಜು ಅರ್ಧ ಅಥವಾ ಮುಕ್ಕಾಲು ಕೆಜಿಯಷ್ಟು ಅಥವಾ ಸ್ವಲ್ಪ ಹೆಚ್ಚು ಕಡಿಮೆ ಸಂಗ್ರಹವಾದುದನ್ನು ಉಜ್ಜಿ ತೊಳೆದು ಮನೆಗೆ ತರುತ್ತಿದ್ದೆ, ಅವ್ವ ಅದನ್ನು ಸ್ವಲ್ಪ ಹುಳಿ ಮುಂದೆ ಮಾಡಿ ಸಾರು ಮಾಡಿದರೆ ಮೃಷ್ಟಾನ್ನವೇ ಉಂಡ ಅನುಭವ. ನಾನ್ವೆಜ್ ತಿನ್ನಬೇಕು ಎಂದು ಹಪಹಪಿಸುವ ಮನಸ್ಸಿಗೆ ಆಗಾಗ ತಣಿಸುತ್ತಿದ್ದ ಪರಿ ಇದು. ಆ ಸೋಸಲು ಮೀನಿನ ವೇಟೆ ಇಂದಿಗೂ ನನ್ನ ಮನಸ್ಸಿನಿಂದ ಮಾಸಿಲ್ಲ. ಹಸಿವು ನೀಗಿಸಲೋ ಅಥವಾ ಹವ್ಯಾಸಕ್ಕೋ ಆಸಕ್ತಿಗೋ ಮಾಡುತಿದ್ದ ಹಲವು ಕೆಲಸಗಳು ಹಳ್ಳಿಗರ ಆರೋಗ್ಯವನ್ನು ಕಾಪಾಡುತ್ತಿದ್ದವು. ನಮಗೆ ಆದೆ ಒಂದು ಆಹಾರ ಸಂಸ್ಕೃತಿಯೂ ಆಗಿತ್ತು. ಕಾಲ ಉರುಳಿದಂತೆ ನಾನು ನಗರ ಸೇರಿದ್ದೆ, ಕಾಲುವೆಯ ಹಾಗು ಇಕ್ಕೆಲಗಳು ಕಾಂಕ್ರೀಟಿಕರಣಗೊಂಡವು ಹಾಗೂ ಗದ್ದೆಗಳಿಗೆ ಬಳಸುವ ಸೀಮೆ ಗೊಬ್ಬರ ಔಷಧಿಯಿಂದಾಗಿ ಇಂದು ಅದೆ ಕಾಲುವೆಗಳಿಗೆ ಹೋಗಿ ನೋಡಿದರು ಸಹ ಮೀನುಗಳು ಏಡಿಗಳು ಕಾಣುವುದು ಕೂಡ ಅಪರೂಪ. ಆಧುನೀಕರಣದಿಂದಾಗಿ ಕಾಲುವೆಯ ತಳ
ಆಕರ ಗ್ರಂಥ: 'ಹಾದಿಗಲ್ಲು' ಸಮನ್ವಿತ ಪ್ರಕಾಶನ -2020 ಬೆಂಗಳೂರು
ಲೇಖಕರ ಪರಿಚಯ:
ಕೆ. ಎ. ದಯಾನಂದ (ಐಎಎಸ್): ಕೆ. ಎ. ದಯಾನಂದ 1976ರ ಮಾರ್ಚ್ 26ರಂದು
ಕೆಸ್ತೂರು ಕೊಪ್ಪಲಿನ ಬಡ ಕುಟುಂಬದಲ್ಲಿ ಜನಿಸಿದ ದಯಾನಂದ ಅವರು ಬದುಕಿನ ಬವಣೆ ಅನಿಶ್ಚಿತತೆಗಳನ್ನೇ ಧನಾತ್ಮಕ ಒತ್ತಡವಾಗಿ ಬಳಸಿಕೊಂಡು ಅಕ್ಷರ ಜ್ಞಾನವನ್ನು ಬೆಳೆಸಿಕೊಂಡವರು. ದುಡಿಯುತ್ತಲೆ ವಿದ್ಯಾಭ್ಯಾಸ ಮಾಡಿದವರು. ಮಾಲೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುಮಾಸ್ತರಾಗಿ ವೃತ್ತಿ ಜೀವನ ಆರಂಭಿಸಿ ಚಿಕ್ಕಮಗಳೂರಿನ ಮೂಡಿಗೆರೆಯ ಚಿನ್ನಿಗಾದಲ್ಲಿ ಪ್ರಕೃತಿ ಹಸಿರ ಸೆರಗಿನಲ್ಲಿ ಇರುವ ಶಾಲೆಯೊಂದರ ಶಿಕ್ಷಕರಾಗಿ ಸೇವೆ ಸಲ್ಲಿಸಿದರು.
ನಂತರ ರಾಜ್ಯ ಆಡಳಿತ ಸೇವೆಯ ಅಧಿಕಾರಿ ಆಗಿ ನೇಮಕಗೊಂಡು ಸೇವೆ ಮಾಡುತ್ತಲೇ ಇಂದು (ಐಎಎಸ್) ಅಧಿಕಾರಿಯಾಗಿ ಪದೋನ್ನತಿ ಪಡೆದು, ಸೇವೆ ಸಲ್ಲಿಸಿದ ಸ್ಥಳಗಳಲ್ಲೆಲ್ಲಾ ಅಲ್ಲಿಯವರೇ ಆಗಿ ಅಚ್ಚಳಿಯದ ಸಕಾರಾತ್ಮಕ ಛಾಪನ್ನುಳಿಸಿ ಬಂದಿದ್ದಾರೆ. “ಸಾಧನೆಗೆ ಅಪಾರ ಜ್ಞಾನವಿರಬೇಕೆಂದಿಲ್ಲ. ಹಿಡಿದಿದ್ದನ್ನು ಸಾಧಿಸಲು ಛಲವೊಂದಿದ್ದರೆ ಸಾಕು" ಎಂಬ ಚಿಂತನೆಯನ್ನು ನಂಬಿರುವ ಅವರ ವೈಯಕ್ತಿಕ ಮತ್ತು ವೃತ್ತಿಜೀವನದ ಮೊದಲ
ಹಂತದ ಬವಣೆ, ಯಶಸ್ಸಿನ ಅನುಭವಗಳನ್ನು ಈ ಅನುಭವ ಕಥನದ ಮೂಲಕ ದಾಖಲಿಸಿದ್ದಾರೆ.
ಅಭ್ಯಾಸ ಪ್ರಶ್ನೆಗಳಿಗೆ ಉತ್ತರ:
೧.ಬಾಲ್ಯದಲ್ಲಿ ನೋಡಿದ ಕೆಲವು ಬೇಟೆಗಳು ಯಾವುವು?ವಿವರಿಸಿ
ಉತ್ತರ: ಬಾಲ್ಯದಲ್ಲಿ ಲೇಖಕರು **ಮೊಲ, ಕಾಡುಬೆಕ್ಕು, ಕಾಡಿಲಿ, ತೋಡ, ಅಳಿಲು, ಖೀರ, ಹುಂಡುಗೋಳಿ, ಮೀನು, ಸೋಸಲು ಮೀನು ಮತ್ತು ಏಡಿ** ಮುಂತಾದ ಹಲವು ಬೇಟೆಗಳನ್ನು ನೋಡಿದ್ದಾರೆ. ಇವುಗಳಲ್ಲಿ **ಮೊಲ ಮತ್ತು ಕಾಡುಬೆಕ್ಕಿನ ಬೇಟೆಗಳನ್ನು** ಅವರು ಹೆಚ್ಚು ನೋಡುತ್ತಿದ್ದರು. ಅಲ್ಲದೆ **ಕಾಡುಹಂದಿಯ ಬೇಟೆ**ಯನ್ನೂ ಕುತೂಹಲದಿಂದ ವೀಕ್ಷಿಸಿದ್ದರು.
೨.ಸಹೋದರರಾಧ ಕೃಷ್ಣಪ್ಪ ಮತ್ತು ರಾಮಣ್ಣನವರು ಬೇಟೆಯಲ್ಲಿ ಹೇಗೆ ನಿಪುಣರಾಗಿದ್ದರು?
ಉತ್ತರ:ಕೃಷ್ಣಣ್ಣ ಮತ್ತು ರಾಮಣ್ಣ ಇಬ್ಬರೂ **ಹಣೆಬ್ಯಾಟರಿಯ ಬೆಳಕಿನಲ್ಲಿ ಬೇಟೆ ಮಾಡುವುದರಲ್ಲಿ ನಿಪುಣರಾಗಿದ್ದರು**. ರಾತ್ರಿ ವೇಳೆ ಬೇಟೆಗೆ ಹೋಗಿ, ಬ್ಯಾಟರಿಯ ಬೆಳಕು ಮತ್ತು ಪ್ರಾಣಿಗಳ ಚಲನೆಯ ಶಬ್ದವನ್ನು ಗಮನಿಸಿ **ಮೊಲ ಮತ್ತು ಕಾಡುಬೆಕ್ಕುಗಳನ್ನು ಗುರುತಿಸುತ್ತಿದ್ದರು**. ಪ್ರಾಣಿಗಳು ಬೆಳಕಿಗೆ ದಿಟ್ಟಿಸಿ ನಿಂತಾಗ, ಮತ್ತೊಬ್ಬರು **ರಿಂಗಿನಾಕಾರದ ಬಲೆಯನ್ನು ಬಳಸಿ ಅವುಗಳನ್ನು ಹಿಡಿಯುತ್ತಿದ್ದರು**. ಕೆಲವೊಮ್ಮೆ ಜೀವಂತ ಮೊಲಗಳನ್ನು ಹಿಡಿದು ತಂದು ನಾಯಿಗಳಿಗೆ ಬೇಟೆಯ ತರಬೇತಿ ನೀಡುತ್ತಿದ್ದರು.
೩.ಹಣೆ ಬ್ಯಾಟರಿ ಬೇಟೆ ಆಡುವುದರಲ್ಲಿ ಯಾರು ನಿಪುಣರಾಗಿದ್ದರು?
ಉತ್ತರ: ಕೃಷ್ಣಣ್ಣ ಮತ್ತು ರಾಮಣ್ಣ** ಅವರು ಹಣೆಬ್ಯಾಟರಿ ಬಳಸಿ ಬೇಟೆಯಾಡುವುದರಲ್ಲಿ ನಿಪುಣರಾಗಿದ್ದರು. ಅವರು ವಿಶೇಷವಾಗಿ **ಮೊಲ ಮತ್ತು ಕಾಡುಬೆಕ್ಕುಗಳನ್ನು** ಬೇಟೆಯಾಡುತ್ತಿದ್ದರು.
೪.ಒಮ್ಮೆ ಲೇಖಕರು ನಮ್ಮ ತಾಯಿಯ ತವರೂರಿಗೆ ಹೋದಾಗ ಮಾವ ಏನೆಂದು ಹೇಳಿದರು?
ಉತ್ತರ: ಒಮ್ಮೆ ಲೇಖಕರು ತಮ್ಮ ತಾಯಿಯ ತವರೂರಾದ **ಬೋರೆ ಹೊಸಳ್ಳಿಗೆ** ಹೋದಾಗ, ಅವರ ಮಾವ ಹೀಗೆ ಹೇಳಿದ್ದರು:
*“ನಿಮ್ಮೂರಿನವರು ಬೇಟೆಯ ಹುಚ್ಚರು. ಮೊನ್ನೆ ಮುಸ್ಸಂಜೆಯಲ್ಲಿ ಒಂದು ದಂಡು ನಾಯಿಗಳೊಂದಿಗೆ ಬೇಟೆಗೆ ಬಂದಿದ್ದರು. ಕಾಡುಬೆಕ್ಕನ್ನು ನಾಯಿ ಬೆನ್ನಟ್ಟಿ ಈ ಕಡೆಗೆ ಬಂದಿತ್ತು. ಆದರೆ ಅದು ತಪ್ಪಿಸಿಕೊಂಡುಹೋಯಿತು.ವಾಪಸ್ ಹೋಗ್ತೀವಿ ಕನಣ್ಣೊ ಅಂದ್ರು ಏನ್ ಬಾಡ್ನಸೆಯೂ ನಿಮ್ಮೂರ್ ಅವರಿಗೆ ನೆನ್ನೆ ಸಣ್ತಮ್ಮನ ಮನೆಯಲ್ಲಿ ಸಾಕಿದ ಬೆಕ್ಕು ಮನೆಯಿಂದ ಮನೆಗೆ ಬಂದಿಲ್ಲ ಅಂತಿದ್ರು ನಿಮ್ಮೂರಿನವರೇ ಕಾಡಬೇಕು ಅಂತ ಊರ್ ಬೆಕ್ಕು ಹೊಡ್ಕೊಂಡ್ ಹೋದ್ರೋ ಏನೋ ' ನಿಮ್ಮೂರಿನವರು ಬೇಟೆ ಮಾಡದೆ ಬರಿಗೈಯಲ್ಲಿ ಹಿಂದಿರುಗುವುದಿಲ್ಲವೇನೋ!” ಎಂದು ಹೇಳಿದ್ದರು.
೬.. ಲೇಖಕರ ಮನೆ ನಾಯಿಯ ಪ್ರಸಂಗವನ್ನು ಕುರಿತು ವಿವರಿಸಿ
ಉತ್ತರ: ಲೇಖಕರ ಮನೆಯಲ್ಲಿ ಒಂದು ನಾಯಿ ಇತ್ತು. ಅದು **ಬೇಟೆ ನಾಯಿ ಆಗಿರದೆ ಮನೆ ಕಾಯುವ ನಾಯಿ** ಆಗಿತ್ತು. ಲೇಖಕರಿಗೆ ಬಾಲ್ಯದಿಂದಲೂ ಬೇಟೆಯ ಬಗ್ಗೆ ಅಪಾರ ಕುತೂಹಲವಿದ್ದುದರಿಂದ, ಆ ನಾಯಿಯನ್ನು ತಮ್ಮೊಂದಿಗೆ ಹೊಲಕ್ಕೆ ಕರೆದುಕೊಂಡು ಹೋಗಲು ಅವರು ಪ್ರಯತ್ನಿಸುತ್ತಿದ್ದರು. ಆದರೆ ಆ ನಾಯಿಗೆ ಬೇಟೆಯಲ್ಲಿ ಯಾವುದೇ ಆಸಕ್ತಿ ಇರಲಿಲ್ಲ.
ನಾಯಿಯನ್ನು ಹೊಲಕ್ಕೆ ಕರೆದುಕೊಂಡು ಹೋಗುವುದು ಲೇಖಕರಿಗೆ ಬಹಳ ಕಷ್ಟದ ಕೆಲಸವಾಗಿತ್ತು. ಕೈಯಲ್ಲಿ **ರೊಟ್ಟಿ ಅಥವಾ ತಂಗಳಿನ ಮುದ್ದೆ** ಹಿಡಿದು, ದಾರಿಯುದ್ದಕ್ಕೂ ಸ್ವಲ್ಪಸ್ವಲ್ಪ ತುತ್ತು ಹಾಕುತ್ತಾ ನಾಯಿಯನ್ನು ತಮ್ಮ ಹಿಂದೆ ಕರೆದುಕೊಂಡು ಹೋಗುತ್ತಿದ್ದರು. ತುತ್ತು ಮುಗಿದ ತಕ್ಷಣ ನಾಯಿ ಮುಂದೆ ಹೆಜ್ಜೆ ಇಡದೆ ಅಲ್ಲಿಯೇ ನಿಂತುಬಿಡುತ್ತಿತ್ತು. ಎಷ್ಟೇ ಕರೆದರೂ ಅಥವಾ ಹೊಡೆದು ಕರೆದರೂ ಅದು ಮುಂದೆ ಬರುತ್ತಿರಲಿಲ್ಲ. ಸಿಟ್ಟಿನಿಂದ ಲೇಖಕರು ಕಲ್ಲಿನಿಂದ ಹೊಡೆದರೆ, ಅವಕಾಶಕ್ಕಾಗಿ ಕಾಯುತ್ತಿದ್ದಂತೆ ನಾಯಿ ಹಿಂದಕ್ಕೆ ಮನೆ ಕಡೆಗೆ ಓಡಿಹೋಗುತ್ತಿತ್ತು.
ಒಮ್ಮೊಮ್ಮೆ ನಾಯಿ ಹೊಲಕ್ಕೆ ಬಂದಾಗ, ಲೇಖಕರು ಮತ್ತು ಅವರ ಸ್ನೇಹಿತರು ಗುತ್ತಿಗಳಿಗೆ ಕಲ್ಲು ಹೊಡೆದು ನಾಯಿಯನ್ನು ಬೇಟೆಗೆ ಪ್ರೇರೇಪಿಸುತ್ತಿದ್ದರು. ಗುತ್ತಿಯೊಳಗೆ ಪಕ್ಷಿ ಅಥವಾ ಸಣ್ಣ ಜೀವಿ ಇದ್ದರೆ ಶಬ್ದವಾಗುತ್ತಿತ್ತು. ಆಗ ನಾಯಿ ತಕ್ಷಣ ಕಿವಿ ನೆಟ್ಟಗೆ ಮಾಡಿ ಗುತ್ತಿಯ ಕಡೆಗೆ ದಿಟ್ಟಿಸಿ ನೋಡುತ್ತಿತ್ತು. ಅಪಾಯವಿಲ್ಲವೆಂದು ಖಚಿತಪಡಿಸಿಕೊಂಡ ನಂತರ ಗುತ್ತಿಯ ಬಳಿ ಹೋಗಿ ಮೂಸಿ ನೋಡುತ್ತಿತ್ತು. ಕಾಲೆತ್ತಿ ಮೂತ್ರ ವಿಸರ್ಜನೆ ಮಾಡಿ ಅಲ್ಲಿಂದ ಹಿಂದಿರುಗುತ್ತಿತ್ತು. ಆದರೆ **ಒಮ್ಮೆಯೂ ಯಾವುದೇ ಪ್ರಾಣಿಯನ್ನು ಬೆನ್ನಟ್ಟಿ ಬೇಟೆಯಾಡುತ್ತಿರಲಿಲ್ಲ**.
ಈ ಪ್ರಸಂಗದ ಮೂಲಕ ಲೇಖಕರು ಬೇಟೆ ನಾಯಿಗಳಿಗೂ ಸಾಮಾನ್ಯ ಮನೆ ನಾಯಿಗಳಿಗೂ ಇರುವ ವ್ಯತ್ಯಾಸವನ್ನು ಹಾಸ್ಯಮಯವಾಗಿ ವಿವರಿಸಿದ್ದಾರೆ. ಬಾಲ್ಯದ ಈ ಸಣ್ಣ ಘಟನೆಯು ಲೇಖಕರ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ.
೭.. ಲೇಖಕರು ಚಿಕ್ಕವರಾಗಿದ್ದಾಗ ಕಾಡುಬೆಕ್ಕು ಹಾಗೂ ಮೊಲದ ಬೇಟೆಯನ್ನು ಕುರಿತು ತಿಳಿಸಿ
ಉತ್ತರ :ಲೇಖಕರು ಚಿಕ್ಕವರಾಗಿದ್ದಾಗ ತಮ್ಮ ಊರಿನಲ್ಲಿ **ಮೊಲ ಮತ್ತು ಕಾಡುಬೆಕ್ಕುಗಳ ಬೇಟೆ** ಸಾಮಾನ್ಯವಾಗಿತ್ತು. ಹೊಲಗಳಿಗೆ ಹೋಗುವಾಗ ಅವರ ಕಣ್ಣಮುಂದೆಯೇ ಅನೇಕ ಮೊಲಗಳು ಓಡಾಡುತ್ತಿದ್ದವು. ಆ ಕಾಲದಲ್ಲಿ ಮೊಲಗಳು ಸಾಕಷ್ಟು ಸಂಖ್ಯೆಯಲ್ಲಿದ್ದವು. ಆದ್ದರಿಂದ ಬೇಟೆಗಾರರಿಗೆ ಮೊಲದ ಬೇಟೆ ಒಂದು ಆಸಕ್ತಿದಾಯಕ ಚಟುವಟಿಕೆಯಾಗಿತ್ತು. ಲೇಖಕರು ಸ್ವತಃ ಬೇಟೆಗಾರರಾಗಿರದಿದ್ದರೂ, ಬೇಟೆಗಾರರು ಮಾಡುವ ಬೇಟೆಯನ್ನು ಕುತೂಹಲದಿಂದ ನೋಡುತ್ತಿದ್ದರು.
ಬೇಟೆಗಾರರು ಸಾಮಾನ್ಯವಾಗಿ **ಎರಡು ಅಥವಾ ಮೂರು ದಿನಗಳ ಕಾಲ ಬೇಟೆ ನಾಯಿಗಳೊಂದಿಗೆ** ಬೇಟೆಗೆ ಹೋಗುತ್ತಿದ್ದರು. ಗಿಡಗಂಟೆಗಳು, ಪೊದೆಗಳು ಮತ್ತು ಗುತ್ತಿಗಳಲ್ಲಿ ಅಡಗಿಕೊಂಡಿರಬಹುದಾದ ಮೊಲಗಳು ಹಾಗೂ ಕಾಡುಬೆಕ್ಕುಗಳನ್ನು ನಾಯಿಗಳ ಸಹಾಯದಿಂದ ಹುಡುಕುತ್ತಿದ್ದರು. ನಾಯಿಗಳು ಪ್ರಾಣಿಗಳ ವಾಸನೆಯನ್ನು ಹಿಡಿದು ಅವುಗಳನ್ನು ಬೆನ್ನಟ್ಟುತ್ತಿದ್ದವು. ಬೇಟೆಗಾರರು ನಾಯಿಗಳ ಹಿಂದೆ ಓಡುತ್ತಾ ಪ್ರಾಣಿಗಳನ್ನು ಹಿಡಿಯುತ್ತಿದ್ದರು. ಕೆಲವೊಮ್ಮೆ ಬೇಟೆಗಾರರು **ಹದಿನೈದು–ಇಪ್ಪತ್ತು ಕಿಲೋಮೀಟರ್ ದೂರದವರೆಗೂ** ಹೋಗುತ್ತಿದ್ದರು.
ಹೀಗೆ ಬೇಟೆಗೆ ಹೋದವರು ಐದಾರು ಮೊಲಗಳನ್ನು ಹಿಡಿದುಕೊಂಡು ಹಿಂದಿರುಗುತ್ತಿದ್ದರು. ಹಿಡಿದ ಮೊಲಗಳನ್ನು ಅಲ್ಲಿಯೇ ಚೆನ್ನಾಗಿ ಸುಟ್ಟು, ಉದ್ದವಾದ ಮರದ ಗಳಕ್ಕೆ ತಕ್ಕಡಿಯಂತೆ ಈ ಕಡೆ ಮೂರು, ಆ ಕಡೆ ಮೂರು ಮೊಲಗಳನ್ನು ನೇತುಹಾಕಿಕೊಂಡು ಹೆಗಲ ಮೇಲೆ ಹೊತ್ತುಕೊಂಡು ಬರುತ್ತಿದ್ದರು. ಅವರ ಹಿಂದೆ ಬೇಟೆ ನಾಯಿಗಳು ಬರುತ್ತಿದ್ದ ದೃಶ್ಯವು ಮಕ್ಕಳಿಗೆ ವಿಶೇಷ ಆಕರ್ಷಣೆಯಾಗಿತ್ತು.
ಬೇಟೆಯಿಂದ ಹಿಂದಿರುಗಿದ ನಂತರ ಬೇಟೆಗಾರರೆಲ್ಲ ಒಂದೆಡೆ ಸೇರಿ ಹಿಡಿದ ಮೊಲಗಳನ್ನು ಕತ್ತರಿಸಿ, **ಬೇಟೆಗಾರರ ಸಂಖ್ಯೆಗೆ ಅನುಗುಣವಾಗಿ ಹಾಗೂ ಬೇಟೆಯಲ್ಲಿ ಪಾಲ್ಗೊಂಡ ನಾಯಿಗೂ ಒಂದು ಪಾಲು** ಮಾಡಿ ಹಂಚಿಕೊಳ್ಳುತ್ತಿದ್ದರು. ಕೆಲವರು ತಮ್ಮ ಪಾಲಿಗೆ ಬಂದ ಮಾಂಸವನ್ನು ಮಾರಾಟ ಮಾಡುತ್ತಿದ್ದರು.
೮.ಸೋಸಲು ಮೀನಿನ ಪ್ರಸಂಗವನ್ನು ಕುರಿತು ಬರೆಯಿರಿ
ಉತ್ತರ: ಬೇಸಿಗೆ ಕಾಲದಲ್ಲಿ ಲೇಖಕರು ಗದ್ದೆಗಳಿಗೆ ಅಥವಾ ಎಮ್ಮೆ ಕಾಯಲು ಹೋದಾಗ ಕಾಲುವೆಯಲ್ಲಿ **ಸೋಸಲು ಮೀನುಗಳನ್ನು** ಹಿಡಿಯುತ್ತಿದ್ದರು. ಮೊನಚಾದ ಅಂಚಿನ ಊಟದ ತಟ್ಟೆಗೆ ಬಟ್ಟೆ ಸುತ್ತಿ, ಮಧ್ಯದಲ್ಲಿ ಸಣ್ಣ ತೂತು ಮಾಡಿ ಅದರಲ್ಲಿ ಹಿಟ್ಟು ಅಥವಾ ಅನ್ನ ಹಾಕಿ ಕಾಲುವೆಯ ನೀರಿನಲ್ಲಿ ಮುಳುಗಿಸುತ್ತಿದ್ದರು. ಹಿಟ್ಟು ತಿನ್ನಲು ಬಂದ ಸಣ್ಣ ಮೀನುಗಳು ತಟ್ಟೆಯ ತೂತಿನೊಳಗೆ ಹೋಗಿ ಸಿಕ್ಕಿಬೀಳುತ್ತಿದ್ದವು. ಹದಿನೈದು–ಇಪ್ಪತ್ತು ನಿಮಿಷಗಳ ನಂತರ ಅವುಗಳನ್ನು ತೆಗೆದು ನೀರು ತುಂಬಿದ ಪಾತ್ರೆಯಲ್ಲಿ ಸಂಗ್ರಹಿಸುತ್ತಿದ್ದರು. ಅರ್ಧ ಅಥವಾ ಮುಕ್ಕಾಲು ಕೆ.ಜಿ. ಮೀನು ಸಿಕ್ಕಾಗ ಮನೆಗೆ ತಂದು, ತಾಯಿ ಸಾರು ಮಾಡಿಕೊಡುತ್ತಿದ್ದರು. ಈ ಸೋಸಲು ಮೀನಿನ ಬೇಟೆ ಲೇಖಕರಿಗೆ ಬಹಳ ಸಂತೋಷ ನೀಡುತ್ತಿತ್ತು.
೯.ನಮ್ಮ ಮಾವ ನಮ್ಮ ಊರಿನ ಕುರಿತು ಏನೆಂದು ಹೇಳಿದರು? ತಿಳಿಸಿ
(ಪ್ರಶ್ನೆ ನಾಲ್ಕರ ಉತ್ತರ ಬರೆಯಿರಿ)
೧೦.ಕಬ್ಬಿನ ಗದ್ದೆಯಲ್ಲಿ ಗುಂಡು ಹಾರಿಸಿದ ಪ್ರಸಂಗಗಳನ್ನು ಕುರಿತು ಬರೆಯಿರಿ.
ಕಬ್ಬಿನ ಗದ್ದೆಯಲ್ಲಿ ನಡೆದ ಕಾಡುಹಂದಿಯ ಬೇಟೆಯ ಪ್ರಸಂಗವು ಲೇಖಕರ ಬಾಲ್ಯದ ಕುತೂಹಲಕಾರಿ ಅನುಭವಗಳಲ್ಲಿ ಒಂದಾಗಿದೆ. ಒಮ್ಮೆ ಲೇಖಕರು ತಮ್ಮ ಚಿಕ್ಕಪ್ಪನ ಮಗ ಅರವಿಂದನೊಂದಿಗೆ ಹಳೆ ಗದ್ದೆಯಿಂದ ಮನೆಗೆ ಬರುತ್ತಿದ್ದಾಗ, ಕಬ್ಬಿನ ಗದ್ದೆಯೊಂದರಲ್ಲಿ ಭಾರಿ ಕೂಗಾಟ ಕೇಳಿಸಿತು. ವಿಚಾರಿಸಿದಾಗ ಅಲ್ಲಿ ಕಾಡುಹಂದಿಯ ಬೇಟೆ ನಡೆಯುತ್ತಿದೆ ಎಂದು ತಿಳಿಯಿತು.
ಸುಮಾರು ಮೂರು ಎಕರೆ ವಿಸ್ತೀರ್ಣದ ಕಬ್ಬಿನ ಗದ್ದೆಯ ಸುತ್ತಲೂ ಏಳೆಂಟು ಜನರು ಮಚ್ಚು ಹಿಡಿದು ಕಾವಲು ಕಾಯುತ್ತಿದ್ದರು. ಬೇಟೆ ನಾಯಿಗಳೂ ಇದ್ದವು. ಒಬ್ಬ ಬಂದೂಕುಧಾರಿ ಗದ್ದೆಯ ಗಡಿಯಲ್ಲಿ ನಿಂತು ಹಂದಿ ಹೊರಬರುವ ದಿಕ್ಕನ್ನು ಗುರಿಯಾಗಿಸಿಕೊಂಡಿದ್ದನು. ಸುಮಾರು ಹತ್ತು ಜನರು ಕಬ್ಬಿನ ಗದ್ದೆಯೊಳಗೆ ನುಗ್ಗಿ ಕೂಗುತ್ತಾ, ಹಂದಿಯನ್ನು ಹೊರಗೆ ಓಡಿಸಲು ಪ್ರಯತ್ನಿಸುತ್ತಿದ್ದರು. ಲೇಖಕರು ಬಂದೂಕುಧಾರಿಯ ಹತ್ತಿರ ಕುಳಿತು ಬೇಟೆಯನ್ನು ಕುತೂಹಲದಿಂದ ನೋಡುತ್ತಿದ್ದರು.
ಮೊದಲು ಕಬ್ಬಿನ ಗದ್ದೆಯಿಂದ ಶಬ್ದ ಕೇಳಿಸಿದಾಗ ಹಂದಿ ಬಂದಿದೆ ಎಂದು ಲೇಖಕರು ಕೂಗಿದರು. ಆದರೆ ಹೊರಬಂದದ್ದು ನರಿಯಾಗಿತ್ತು. ನಂತರ ಮತ್ತೆ ಕೂಗಾಟ ಮುಂದುವರಿಯಿತು. ಸ್ವಲ್ಪ ಸಮಯದ ಬಳಿಕ ನಿಜವಾಗಿಯೂ ಕಾಡುಹಂದಿ ಹೊರಗೆ ಓಡಿಬಂತು. ಲೇಖಕರು “ಬಂತು, ಬಂತು” ಎಂದು ಕೂಗಿದಾಗ ಬಂದೂಕುಧಾರಿ ಎರಡು ಬಾರಿ ಗುಂಡು ಹಾರಿಸಿದನು. ಆದರೆ ಹಂದಿಯ ವೇಗದಿಂದಾಗಿ ಗುಂಡು ತಾಗಲಿಲ್ಲ. ಮುಂದಿದ್ದ ಬೇಟೆಗಾರರು ಪಕ್ಕಕ್ಕೆ ಸರಿದಿದ್ದರಿಂದ ಹಂದಿ ತಪ್ಪಿಸಿಕೊಂಡು ಓಡಿತು. ಅದರ ಹಿಂದೆ ನಾಯಿಗಳು ಮತ್ತು ಬೇಟೆಗಾರರು ಓಡಿದರು. ಕೊನೆಗೆ ಹಂದಿ ಮತ್ತೊಂದು ಕಬ್ಬಿನ ತೋಟಕ್ಕೆ ನುಗ್ಗಿ ತಪ್ಪಿಸಿಕೊಂಡಿತು. ಲೇಖಕರು ಕೂಗಿದ್ದರಿಂದ ಗುರಿ ತಪ್ಪಿತು ಎಂದು ಬಂದೂಕುಧಾರಿ ಅವರನ್ನು ಬಯ್ಯುತ್ತಾ ಹೊರಟನು.
೧೧. ಹಂದಿ ಬೇಟೆಯ ತಯಾರಿ ಹೇಗೆ ನಡೆಯುತ್ತಿತ್ತು? – ವಿಶ್ಲೇಷಣೆ
ಕಥೆಯಲ್ಲಿ ಕಾಡುಹಂದಿಯ ಬೇಟೆಯನ್ನು ಅತ್ಯಂತ ಸಾಹಸಮಯ ಮತ್ತು ಅಪಾಯಕಾರಿ ಕೆಲಸವಾಗಿ ಚಿತ್ರಿಸಲಾಗಿದೆ. ಹಂದಿ ಬೇಟೆಗೆ ಹೊರಡುವವರು ಮೊದಲು **ತರಬೇತಿ ಪಡೆದ ಬೇಟೆ ನಾಯಿಗಳು, ಮಚ್ಚು, ಕುಡುಗೋಲು, ಬಲೆ ಹಾಗೂ ಕೆಲವೊಮ್ಮೆ ಬಂದೂಕುಗಳನ್ನು** ಸಿದ್ಧಪಡಿಸಿಕೊಳ್ಳುತ್ತಿದ್ದರು. ಹಂದಿಯನ್ನು ಬೆನ್ನಟ್ಟಿ ಹಿಡಿಯಲು ಪರಿಣಿತ ನಾಯಿಗಳನ್ನು ಬಳಸಲಾಗುತ್ತಿತ್ತು.
ಬೇಟೆಯ ಸಂದರ್ಭದಲ್ಲಿ ಕಾಡುಹಂದಿ ಇರುವ ಸ್ಥಳವನ್ನು ಗುರುತಿಸಿ, ಬೇಟೆಗಾರರು ಸುತ್ತಲೂ **ಕಾವಲು ವ್ಯವಸ್ಥೆ** ಮಾಡುತ್ತಿದ್ದರು. ಕೆಲವರು ಮಚ್ಚು ಹಿಡಿದು ವಿವಿಧ ದಿಕ್ಕುಗಳಲ್ಲಿ ನಿಂತರೆ, ಬಂದೂಕುಧಾರಿ ಹಂದಿ ಹೊರಬರುವ ದಿಕ್ಕಿನಲ್ಲಿ ಗುರಿಯಿಟ್ಟು ಕಾಯುತ್ತಿದ್ದನು. ಇನ್ನೂ ಕೆಲವರು ನಾಯಿಗಳೊಂದಿಗೆ ಗದ್ದೆಯೊಳಗೆ ನುಗ್ಗಿ **ಕೂಗುತ್ತಾ, ಶಬ್ದ ಮಾಡುತ್ತಾ ಹಂದಿಯನ್ನು ಹೊರಗೆ ಓಡಿಸುತ್ತಿದ್ದರು**. ಹಂದಿ ಹೊರಬಂದ ತಕ್ಷಣ ನಾಯಿಗಳು ಅದನ್ನು ಬೆನ್ನಟ್ಟುತ್ತಿದ್ದವು; ಪರಿಣಿತ ಬೇಟೆಗಾರರು ಮಚ್ಚು ಅಥವಾ ಕುಡುಗೋಲಿನಿಂದ ಅದನ್ನು ಹೊಡೆದುರುಳಿಸಲು ಸಿದ್ಧರಾಗಿರುತ್ತಿದ್ದರು.
ಹಂದಿ ಬೇಟೆ ತುಂಬಾ ಅಪಾಯಕಾರಿ. ಹಂದಿ ನೇರವಾಗಿ ಬೇಟೆಗಾರನ ಮೇಲೆ ದಾಳಿ ಮಾಡಿದರೆ ಗಂಭೀರ ಗಾಯವಾಗುವ ಸಾಧ್ಯತೆಯಿತ್ತು. ಆದ್ದರಿಂದ ಧೈರ್ಯ, ಅನುಭವ, ತರಬೇತಿ ಪಡೆದ ನಾಯಿಗಳು ಮತ್ತು ಸೂಕ್ತವಾದ ಬೇಟೆಯ ತಯಾರಿ ಅತ್ಯಗತ್ಯವಾಗಿತ್ತು. ಈ ಬೇಟೆಯು ಗ್ರಾಮೀಣ ಜನರ **ಆಹಾರ ಸಂಸ್ಕೃತಿ, ಸಾಹಸ ಮನೋಭಾವ ಮತ್ತು ಸ್ಥಳೀಯ ಆಚರಣೆಗಳೊಂದಿಗೆ** ನಿಕಟವಾಗಿ ಸಂಬಂಧ ಹೊಂದಿತ್ತು.
೧೨. ಊರಿನ ಹಂದಿಯ ಬೇಟೆಯಾಡಿದ ಪ್ರಸಂಗವನ್ನು ಕುರಿತು ವಿವರವಾಗಿ ಬರೆಯಿರಿ.
ಲೇಖಕರ ಸ್ನೇಹಿತ ಮೋಹನ್ ಹೇಳಿದ ಊರಿನ ಹಂದಿಯ ಬೇಟೆಯ ಪ್ರಸಂಗ ಬಹಳ ವಿಚಿತ್ರ ಮತ್ತು ಸಾಹಸಮಯವಾಗಿದೆ. ಒಮ್ಮೆ ಅವರು ಬೇಲೂರು ಭಾಗದ ಜೋಳದ ಹೊಲಗಳ ಕಡೆಗೆ ಕಾಡುಹಂದಿ ಬೇಟೆಗೆ ಹೋಗಲು ನಿರ್ಧರಿಸಿದರು. ಐದಾರು ಜನರು ಒಂದು ತೆರೆದ ಜೀಪಿನಲ್ಲಿ **ಹಣೆಬ್ಯಾಟರಿ ಮತ್ತು ಗನ್ಗಳನ್ನು** ತೆಗೆದುಕೊಂಡು ರಾತ್ರಿಯಿಡೀ ಬೇಟೆಗಾಗಿ ಸುತ್ತಾಡಿದರು. ಆದರೆ ಇಡೀ ರಾತ್ರಿ ಹುಡುಕಿದರೂ ಒಂದು ಬೇಟೆಯೂ ಸಿಗಲಿಲ್ಲ.
ಬೆಳಗಿನ ಜಾವ ಬೇಟೆ ಸಿಗದೆ ನಿರಾಶರಾಗಿ ಹಿಂದಿರುಗುತ್ತಿದ್ದಾಗ, ಬೆಳಿಗ್ಗೆ ಏಳು ಗಂಟೆಯ ಸುಮಾರಿಗೆ ಬೇಲೂರು ಬೈಪಾಸ್ ಬಳಿಯ ಸಣ್ಣ ಹೋಟೆಲಿನಲ್ಲಿ ಟೀ ಕುಡಿಯಲು ನಿಂತರು. ಹೋಟೆಲಿನ ಹಿಂಭಾಗದಲ್ಲಿ ದೊಡ್ಡ ಪ್ರಮಾಣದ **ಬೂದಿ ರಾಶಿ** ಇತ್ತು. ಅದರ ಮೇಲೆ ಮೂರ್ನಾಲ್ಕು ಊರಿನ ಹಂದಿಗಳು ಮಲಗಿ ಹೊರಳಾಡುತ್ತಿರುವುದು ಅವರಿಗೆ ಕಾಣಿಸಿತು.
ರಾತ್ರಿಯಿಡೀ ಬೇಟೆ ಸಿಗದೆ ಬರಿಗೈಯಲ್ಲಿ ಹಿಂದಿರುಗುವುದು ಅವರಿಗೆ ಇಷ್ಟವಾಗಲಿಲ್ಲ. ಆದ್ದರಿಂದ ಹಂದಿಗಳನ್ನು ಬೇಟೆಯಾಡಲು ನಿರ್ಧರಿಸಿದರು. ನಿಧಾನವಾಗಿ ಹತ್ತಿರ ಹೋಗಿ ಜೀಪನ್ನು ನಿಲ್ಲಿಸಿದರು. ಮೋಹನ್ ಅವರ ಚೀರ್ನಳ್ಳಿ ಕಜಿನ್ ಒಂದು ದೊಡ್ಡ ಹಂದಿಗೆ ಗುಂಡು ಹಾರಿಸಿದನು. ಗುಂಡು ತಗುಲಿದ ಹಂದಿ ಒದ್ದಾಡಲು ಪ್ರಾರಂಭಿಸಿತು. ತಕ್ಷಣ ಮೋಹನ್ ಮತ್ತು ಅವರ ಜೊತೆಗಿದ್ದ ಮತ್ತೊಬ್ಬರು ಓಡಿ ಹೋಗಿ ಅದರ ಕಾಲುಗಳನ್ನು ಹಿಡಿದು ಜೀಪಿಗೆ ಎತ್ತಿ ಹಾಕಿದರು.
ಜನರು ಏನಾಗುತ್ತಿದೆ ಎಂದು ಕೇಳುವಷ್ಟರಲ್ಲಿ ಅವರು ಹಂದಿಯನ್ನು ಜೀಪಿನಲ್ಲಿ ಹಾಕಿಕೊಂಡು ಅಲ್ಲಿಂದ ಪರಾರಿಯಾದರು. ಈ ಪ್ರಸಂಗವು **ಬೇಟೆಗಾರರ ಬೇಟೆಯ ಮೇಲಿನ ಹುಚ್ಚು ಮತ್ತು ಸಾಹಸ ಮನೋಭಾವವನ್ನು** ತೋರಿಸುತ್ತದೆ.
೧೩. ಲೇಖಕರು ಹಾಗೂ ಅವರ ಚಿಕ್ಕಪ್ಪನ ಮಗ ಗದ್ದೆ ಪಕ್ಕದಲ್ಲಿ ನಡೆದುಕೊಂಡು ಹೋದಾಗ ಆದ ಘಟನೆ ವಿವರಿಸಿ
ಉತ್ತರ : ಒಮ್ಮೆ ಲೇಖಕರು ತಮ್ಮ **ಚಿಕ್ಕಪ್ಪನ ಮಗ ಅರವಿಂದನೊಂದಿಗೆ** ಹಳೆ ಗದ್ದೆಯಿಂದ ನಡೆದುಕೊಂಡು ಮನೆಗೆ ಬರುತ್ತಿದ್ದರು. ಆಗ ದಾರಿಯ ಎಡಭಾಗದಲ್ಲಿ ಸ್ವಲ್ಪ ದೂರದಲ್ಲಿದ್ದ ಕಬ್ಬಿನ ಗದ್ದೆಯಲ್ಲಿ ಭಾರಿ ಕೂಗಾಟ ಕೇಳಿಸಿತು. ಕುತೂಹಲದಿಂದ ವಿಚಾರಿಸಿದಾಗ ಅಲ್ಲಿ **ಕಾಡುಹಂದಿಯ ಬೇಟೆ ನಡೆಯುತ್ತಿದೆ** ಎಂದು ತಿಳಿಯಿತು.
ಸುಮಾರು ಮೂರು ಎಕರೆ ಕಬ್ಬಿನ ಗದ್ದೆಯ ಸುತ್ತಲೂ ಬೇಟೆಗಾರರು ಮಚ್ಚು ಹಿಡಿದು ಕಾವಲು ಕಾಯುತ್ತಿದ್ದರು. ಬೇಟೆ ನಾಯಿಗಳೂ ಇದ್ದವು. ಒಬ್ಬ ಬಂದೂಕುಧಾರಿ ಗದ್ದೆಯ ಗಡಿಯಲ್ಲಿ ನಿಂತು ಹಂದಿ ಹೊರಬರುವ ದಿಕ್ಕಿನತ್ತ ಗುರಿಯಿಟ್ಟು ಕಾಯುತ್ತಿದ್ದನು. ಸುಮಾರು ಹತ್ತು ಜನರು ಕಬ್ಬಿನ ಗದ್ದೆಯೊಳಗೆ ನುಗ್ಗಿ ಕೂಗುತ್ತಾ ಹಂದಿಯನ್ನು ಹೊರಗೆ ಓಡಿಸಲು ಪ್ರಯತ್ನಿಸುತ್ತಿದ್ದರು.
ಲೇಖಕರು ಮತ್ತು ಅರವಿಂದ ಬಂದೂಕುಧಾರಿಯ ಹತ್ತಿರ ಕುಳಿತು ಬೇಟೆಯನ್ನು ನೋಡುತ್ತಿದ್ದರು. ಮೊದಲು ಕಬ್ಬಿನ ಗದ್ದೆಯಿಂದ ಶಬ್ದ ಕೇಳಿದಾಗ ಹಂದಿ ಬಂದಿದೆ ಎಂದು ಅವರು ಕೂಗಿದರು. ಆದರೆ ಹೊರಬಂದದ್ದು **ನರಿಯಾಗಿತ್ತು**. ನಂತರ ಮತ್ತೆ ಬೇಟೆಗಾರರು ಕೂಗುತ್ತಾ ಹಂದಿಯನ್ನು ಹೊರಗೆ ಓಡಿಸಿದರು. ಸ್ವಲ್ಪ ಸಮಯದ ಬಳಿಕ ನಿಜವಾದ ಕಾಡುಹಂದಿ ಹೊರಗೆ ಓಡಿಬಂತು. ಲೇಖಕರು “ಬಂತು, ಬಂತು” ಎಂದು ಜೋರಾಗಿ ಕೂಗಿದರು. ಬಂದೂಕುಧಾರಿ ಎರಡು ಬಾರಿ ಗುಂಡು ಹಾರಿಸಿದರೂ ಹಂದಿಗೆ ಗುಂಡು ತಾಗಲಿಲ್ಲ. ಹಂದಿ ವೇಗವಾಗಿ ಓಡಿ ಮತ್ತೊಂದು ಕಬ್ಬಿನ ತೋಟಕ್ಕೆ ನುಗ್ಗಿ ತಪ್ಪಿಸಿಕೊಂಡಿತು.
ಲೇಖಕರು ಜೋರಾಗಿ ಕೂಗಿದ್ದರಿಂದ ಗುರಿ ತಪ್ಪಿತು ಎಂದು ಬಂದೂಕುಧಾರಿ ಅವರನ್ನು ಬಯ್ಯುತ್ತಾ ಹೊರಟನು. ಈ ಘಟನೆ ಲೇಖಕರಿಗೆ ಬಾಲ್ಯದ **ರೋಮಾಂಚನಕಾರಿ ಬೇಟೆಯ ಅನುಭವವಾಗಿ** ಉಳಿಯಿತು.
