ಎಲ್ಲ ಗೋಚರವಸ್ತುಗಳೂ, ಬುದ್ಧಿಶೀಲ ಶಕ್ತಿಯೊಂದರಿಂದ ಮಾನವನಿಗೆ ಅನ್ವಯಿಸಿ ಸೃಜಿಸಲ್ಪಟ್ಟುವೆಂದು, ಅಜ್ಞಾನಿ ಮಾನವ ಭಾವಿಸಿದ. ಈ ಶಕ್ತಿಯೊಂದಿಗೆ ಮಾನವನಿಗೆ ಸೌಹಾರ್ದಿಕ ಸಂಬಂಧವನ್ನು ಉಂಟುಮಾಡುವುದೇ ಮತಗಳ ಉದ್ದೇಶ. ಭಯದಿಂದ, ನೆರವಿನ ಬಯಕೆಯಿಂದ, ಇಲ್ಲವೆ ಕೃತಜ್ಞತೆಯಿಂದ ಮಾನವ ದೇವರೆದುರು ತಲೆಬಾಗುತ್ತಿದ್ದ. ಮೇಘಗಳ ಡಿಕ್ಕಿಯಿಂದ ಉಂಟಾದ ಸಿಡಿಲು ನೆಲಕ್ಕೆ ಬಿದ್ದರೆ. ಯಾರದೋ ಪಾಪಕ್ಕೆ ಶಿಕ್ಷೆ ಅದು, ಎಂದು ಮನುಷ್ಯ ಭಾವಿಸುವ. ಭೂಮಿಯ ಅಂತರ್ಗತ ಲಾವಾಪ್ರವಾಹ ಜ್ವಾಲಾಮುಖಿಯಲ್ಲಿ ಉಕ್ಕಿಹರಿದರೆ, ದೇವರು ತನಗೆ ನೀಡಿದ ಶಿಕ್ಷೆಯೆಂದ ಮನುಷ್ಯ ತತ್ತರಿಸಿ, ಅದು ಶಾಂತವಾಗಲೆಂದು ಅಡ್ಡಬಿದ್ದು ಕೇಳಿಕೊಳ್ಳುತ್ತಿದ್ದ. ಧೂಮಕೇತು, ತನ್ನ ನಿಯಮಾನುಸಾರವಾಗಿ ಬ್ರಹ್ಮಾಂಡದಲ್ಲಿ ತಿರುಗುತ್ತಿದ್ದುದು, ಒಂದು ಸಮಯದಲ್ಲಿ ಮನುಷ್ಯನಿಗೆ ಕಂಡರೆ ಯಾವುದೋ ಮಹಾ ವ್ಯಕ್ತಿಗೋ, ಸಾಮ್ರಾಜ್ಯಕ್ಕೋ ಅಳಿಗಾಲ ಬಂದಿತೆಂಬ ಸೂಚನೆಯೆಂದು ನಂಬುವ. ಹೀಗೆ ಯಾವ ನೈಸರ್ಗಿಕ ಲೀಲೆ ಕಂಡರೂ ಅದು ತನ್ನನ್ನು ಅನ್ವಯಿಸಿಯೇ ನಡೆಯಿತೆಂದು ಮೂಢಮಾನವ ತಿಳಿಯುವ ದೇವರಿಗೆ ಕೋಪಬಂದು ಹೀಗೆಲ್ಲ ನಡೆಸಿದನೆಂದು ತೀರ್ಮಾನಿಸುವ. ಬೇರೆ ಜನರನ್ನು ಒಲಿಸಲು ಹೇಗೆ ಬಹುಮಾನ ಕಾಣಿಕೆಗಳನ್ನು ಸಲ್ಲಿಸುವನೋ, ಅಂತೆಯೇ, ದೇವರಿಗೂ ಕಾಣಿಕೆಯಿತ್ತು, ಒಲಿಸಿಕೊಳ್ಳಬಹುದೆಂದು ಭಾವಿಸುವ, ಹಾಲು ಹಣ್ಣುಗಳೇನು, ತುಪ್ಪ ಮೊಸರುಗಳೇನು, ಭಕ್ಷ್ಯ ಭೋಜ್ಯಗಳೇನು, ಬೆಂಕಿಯಲ್ಲಿ ವಸ್ತ್ರ ಭೂಷಣಗಳನ್ನು ಒಪ್ಪಿಸುವ ವೈಖರಿಯೇನು?
ದೇವರು ಬಲಿಯನ್ನು ಅಪೇಕ್ಷಿಸುವನೆಂಬ ನಂಬಿಕೆ ಬಹು ಹಿಂದಿನಿಂದಲೂ ಇತ್ತು. ಒಂದು ಇರುವೆಯನ್ನು ಒಯ್ದು ಬಲಿ ಕೊಟ್ಟರೆ, ದೇವರಿಗೆ ತೃಪ್ತಿಯಾದೀತೆ? ನನಗೆ ಅತ್ಯಂತ ಪ್ರಿಯವಾದುದನ್ನು ಬಲಿಕೊಡಬೇಕು. ಪ್ರತಿಯೊಬ್ಬನಿಗೂ ತನ ತನಗಿಂತ ಪ್ರಿಯತರವಾದುದು ಇನ್ನಿಲ್ಲ. ತನ್ನನ್ನೇ ಬಲಿಕೊಡುವುದು ಯಾವ ಸ್ವಾರ್ಥಕ್ಕಾಗಿ! ತನ್ನ ನಂತರ ಪ್ರಿಯತರವೆಂದರೆ ತನ್ನ ಸಂತಾನ. ತನ್ನ ಮಕ್ಕಳನ್ನು ಬಲಿ ಕೊಡುವ ರೂಢಿ ಬಹುಕಾಲವಿತ್ತು. ನಂತರ ಬೇರೆಯವರ ಮಕ್ಕಳಾದರೂ ಚಿಂತೆಯಿಲ್ಲ ಎನ್ನುವ ಅಭಿಪ್ರಾಯ ಬಂತು. ಮಾನವ ಕೊಂಚ ಸುಸಂಸ್ಕೃತನಾದ ಮೇಲೆ, ಮಾನವಜನ್ಮ ಶ್ರೇಷ್ಠವೆಂಬ ಹೆಮ್ಮೆ ಬಂದಮೇಲೆ, ನರಬಲಿಯ ಬದಲು ತಾನು ಸಾಕುವ ಕುರಿ, ಕೋಳಿ, ದನಗಳನ್ನು ಬಲಿಕೊಡತೊಡಗಿದನು. ಈಗ ಅದು ಹೋಗಿ, ಒಂದೊಂದು ಪ್ರಾಣಿಯ ಬದಲು ಒಂದೊಂದು ಧಾನ್ಯವನ್ನು ಕೊಟ್ಟರೆ ಅದೇ
ಪ್ರಾಣಿಬಲಿಗೆ ಸಮಾನ ಎಂಬ ಭಾವನೆ ಮೂಡುತ್ತಿದೆ. ಜನ ಇನ್ನೂ ಸುಸಂಸ್ಕೃತರೂ, ವಿಚಾರಶೀಲರೂ ಆಗಿದ್ದರೆ ಈ ಭ್ರಮೆಯೂ ಇರುವುದಿಲ್ಲ.
ಇಹಲೋಕದ ನೆರಳು, ಬೆಳಕು, ಸ್ವರ್ಗದ ಚಿದಾನಂದದ ತೇಜಸ್ಸು, ನರಕದ ಭೀಷಣ ಕಾರ್ಗತ್ತಲು ಒಂದಕ್ಕೊಂದು ಮಾನವನ ಮನಸ್ಸಿನಲ್ಲಿ ಬೆರೆತು, ಕದಡಿ ಕಲ್ಲೋಲವಾಗಿ, ತಾನು ಯಾವ ಲೋಕದಲ್ಲಿದ್ದೇನೆ. ಎಂಬುದೇ ಮಾನವನಿಗೆ ಬಗೆಹರಿಸಲಾರದ ಭ್ರಮೆಯಾಯಿತು. ಮಾನವ ಅವಾಸ್ತವ ಜಗತ್ತಿನಲ್ಲಿ ವಾಸಿಸತೊಡಗಿದನು. ತನ್ನ ಕಲ್ಪನೆ ಕನಸುಗಳನ್ನೇ ವಸ್ತುಸ್ಥಿತಿಯಾಗಿ ಪರಿಗಣಿಸಿದನು. ಅವನ ಹೆದರಿಕೆಗಳೇ ಭೀಕರ ರಾಕ್ಷಸರಾದವು. ದೈತ್ಯ ದೇವತೆಗಳ, ಕಿನ್ನರ ಕಿಂಪುರುಷರ, ನಾರಾಯಣ ನಾಗಕನ್ನಿಕೆಗಳ, ಭೂತ ಭೇತಾಳಗಳ, ಕಾಳಿ ಕಾಕಾಸುರರ ನಡುವೆ ಮನುಷ್ಯ ಜೀವಿಸತೊಡಗುತ್ತಾನೆ. ಇಂಥ ಭಯಗಳಿಂದ ಮನುಷ್ಯ ಮನಸ್ಸು ಎಂಥ ನರಳುವಿಕೆಯಲ್ಲಿ ಪರಿತಪಿ ಸಿರಬೇಡ! ಈ ಭಯದಿಂದ ಪೀಡಿತನಾದವನು ಮೊಕ ಅಡಿಯಾಗಿ ಬಿದ್ದು ಪ್ರಣಮಿಸಿ, ಸಾಧ್ಯವಾದಲ್ಲಿ ಕಾಣಿಕೆಗಳನ್ನೂ, ತನ್ನ ರಕ್ತವನ್ನೂ ಕೂಡ ನೀಡಿ, ತನ್ನನ್ನು ಕಾಪಾಡೆಂದು ದೇವರನ್ನು ಬೇಡಿಕೊಳ್ಳುವುದರಲ್ಲಿ ಆಶ್ಚರ್ಯವೇನೂ ಇಲ್ಲ.
ಮಾನವನ ಅನಾಗರಿಕತೆಯ ಕಾಲದಲ್ಲೆಂತೋ ನಾಗರಿಕತೆಯ ತುತ್ತ ತುದಿಯನ್ನು ಹತ್ತಿರುವ ಇಂದೂ ಅಷ್ಟೆ, ಜನಜಂಗುಳಿ ಭಯವನ್ನು, ಒಂದು ಗುಂಪು ತನ್ನ ಸ್ವಾರ್ಥಕ್ಕಾಗಿ ಉಪಯೋಗಿಸಿತು. ದೇವರನ್ನು ಸಮಾಧಾನಗೊಳಿಸುವ ವೃತ್ತಿಯನ್ನು ಕೈಗೊಂಡು, ಇವರು ದೇವರ ಬಗೆಗೆ ಜನತೆಯ ಕರ್ತವ್ಯವನ್ನು ಕುರಿತು ಬೋಧಿಸತೊಡಗಿದರು. ಇದೇ ಪೂಜಾರರ, ಪಾದ್ರಿಗಳ, ಮುಲ್ಲಾಗಳ ಪಂಗಡಕ್ಕೆ ಆರಂಭ. ಜನರ ಅಸಹಾ ಯಕತೆಗೂ, ದೇವರ ಕೋಪಕ್ಕೂ ನಡುವೆ ಪೂಜಾರಿ ನಿಂತನು. ಸ್ವರ್ಗದ ನ್ಯಾಯಸ್ಥಾನದಲ್ಲಿ ಮಾನವನ ಪರ ವಕೀಲ ಇವನೆ. ಅದೃಶ್ಯ ಲೋಕಕ್ಕೆ ಇವನು ಮಾನವನ ವಕಾಲತ್ತನ್ನು ಒಯ್ದ. ಅದೃಶ್ಯ ಲೋಕದಿಂದ ಹಿಂದಿರುಗುವಾಗ ಇವನಿಗೆ ಅಧಿಕಾರ, ಶಕ್ತಿ ಇದ್ದವು. ಪೂಜಾರರ ಈ ದೈವದತ್ತ ಅಧಿಕಾರ ಶಕ್ತಿಗಳಿಗೆ ಬೆದರಿ, ಜನಜಂಗುಳಿ ಪೂಜಾರರೆದುರು ತಲೆಬಾಗಿಸಿತು. ಜನರ ಅಜ್ಞತೆ, ಚೆನ್ನಾಗಿ ಉಪಯೋಗಿಸಿಕೊಂಡು, ತನ್ನ ಹೊಟ್ಟೆಪಾಡನ್ನು ನೀಗಿದರು. ಅಂಜುಬುರುಕುತನಗಳನ್ನು ಮತಾಧಿಕಾರಿಗಳು
ದೇವರುಗಳಿಗೆಲ್ಲ ಹೊಗಳಿಕೆ, ಪ್ರಾರ್ಥನೆಗಳ ಆಸೆ ತುಂಬ. ಹಲವು ದೇವರುಗಳು ಬಲಿ, ರಕ್ತಗಳಿಗಾಗಿ ಹಾತೊರೆಯುತ್ತಾರೆ. ನರರಕ್ತವನ್ನು ಆಶಿಸುವ ದೇವರುಗಳೂ ಅನೇಕವುಂಟು. ಈ ದೇವರುಗಳು, ತಮಗಾಗಿ ದೊಡ್ಡ ಸಂಖ್ಯೆಯ ಪಂಡ ಪೂಜಾರರು ಇರಲೇಬೇಕೆಂದು ಅಪೇಕ್ಷಿಸಿದ್ದಾರೆ. ಈ ಪೂಜಾರರು ತಮ್ಮ ದೇವರೇ ಸರ್ವಶ್ರೇಷ್ಠ ದೇವರೆಂದೂ, ಈ ಭಕ್ತಿ ಕಾಣಿಕೆ ಕಾಣಿಕೆ ಸಲ್ಲಿಸಿದರೆ ಮಾತ್ರ. ಜನರಿಗೆ
ಸ್ವರ್ಗ ಸಿಗುವುದೆಂದೂ ಸಾರುತ್ತಾರೆ. ಪ್ರತಿ ಕ್ಷೇತ್ರದ ಪಂಡರೂ, ತಮ್ಮ ಕ್ಷೇತ್ರವೇ ಎಲ್ಲಕ್ಕಿಂತಲೂ ಪುಣ್ಯಕರವಾದುದೆಂದೂ, ಈ ಕ್ಷೇತ್ರದ ನದಿ ಅಥವಾ ಕೊಳದಲ್ಲಿ ಮುಳುಗುಹಾಕಿದರೆ, ಮೂರೇ ನಿಮಿಷದಲ್ಲಿ ಪಾಪಗಳೆಲ್ಲ ಪರಿಹಾರವಾಗುವವೆಂದೂ ಘೋಷಿಸುತ್ತಾರೆ. ಸಣ್ಣ ಪುಟ್ಟ 'ಪುಣ್ಯ' ಸ್ಥಳಗಳೂ ಕೂಡ, ತಮ್ಮ ಕ್ಷೇತ್ರ ಕಾಶಿ ರಾಮೇಶ್ವರಗಳಿಗೆ ಮಾತ್ರ ಕಡಿಮೆಯವೆಂದು ಹೇಳಿಕೊಳ್ಳುತ್ತಾರೆ. ಪಂಡ ಪೂಜಾರರು ತಮ್ಮ ತಮ್ಮ ದೇವರು, ಕ್ಷೇತ್ರಗಳನ್ನು ಇಷ್ಟೊಂದು ಹೊಗಳಲು ಕಾರಣವೆಂದರೆ ತಮ್ಮ ಹೊಟ್ಟೆಪಾಡಿನ ಚಿಂತೆ.
ದೇವರು ಹರಡಿತ್ತು. ಈ ಪಿಡುಗುಗಳು ಬಂದಕೂಡಲೇ ಪೂಜಾರಿ, ಪಾದ್ರಿ, ಮುಲ್ಲಾಗಳ ಆರ್ಭಟ ಅಳತೆ ಮೀರುತ್ತಿತ್ತು. ಜನ ತಮಗೆ ದಾನ, ದಕ್ಷಿಣೆ ಸರಿಯಾಗಿ ಕೊಡುತ್ತಿಲ್ಲ; ಪ್ರತೀಕಾರ ದೇವ ವಾಕ್ಯಗಳನ್ನು ನಂಬುವುದಿಲ್ಲ; ಆದ್ದರಿಂದ ತೆಗೆದುಕೊಳ್ಳುತ್ತಿದ್ದಾನೆ ಎಂದು ಆರ್ಭಟಿಸುತ್ತಿದ್ದರು. ಅಜ್ಞಜನ, ಯಾವ ದಾರಿಯೂ ಕಾಣದ ಈ ಸಂದಿಗ್ಧ ಸಮಯದಲ್ಲಿ, ಪೂಜಾರರ ಮಾತುಗಳಿಗೆ ಶರಣಾಗುತ್ತಿದ್ದರು. ನೆಲದ ಮೇಲೆ ಬಿದ್ದು ನಮಸ್ಕರಿಸುತ್ತಿದ್ದರು; ಹಣ, ಕಾಣಿಕೆಗಳನ್ನು ಸುರಿಯುತ್ತಿದ್ದರು. ತಮ್ಮ ಮನಸ್ಸಿನಲ್ಲಿ ಇರಬಹುದಾದ ಸಂಶಯಗಳನ್ನೆಲ್ಲ ತೊಡೆದುಹಾಕುತ್ತಿದ್ದರು. ದೈನ್ಯತೆಯ ಬೂದಿಯಲ್ಲಿ ಹೊರಳಾಡುತ್ತಿದ್ದರು.
ತಡೆಯುವ ಪ್ರಯತ್ನಕ್ಕೆ ಮತಾಧಿಕಾರಿಗಳು ರೋಗಗಳನ್ನು ವಿರೋಧಿಗಳಾಗಿದ್ದುದೂ ಸಾಕಷ್ಟು ಸಾರಿ ಕಂಡುಬರುತ್ತದೆ. ಯೇಲ್ ಕಾಲೇಜಿನ ಅಧ್ಯಕ್ಷ, ಟಿಮೋತಿ ಡೈಟ್ ವ್ಯಾಕ್ಸಿನೇಷನ್ ಮಾಡಿಸಕೂಡದೆಂದು ಉಪದೇಶಿಸುತ್ತಿದ್ದನು. ಯಾರೊಬ್ಬ ವ್ಯಕ್ತಿ ಸಿಡುಬಿನಿಂದ ಸಾಯಬೇಕೆಂದು ದೇವರು ವಿಧಾಯಕ ಮಾಡಿದ್ದರೆ, ವ್ಯಾಕ್ಸಿನೇಷನ್ ಮೂಲಕ ವಿಧಿಲಿಖಿತವನ್ನು ಪ್ರತಿಭಟಿಸಲೆತ್ನಿಸುವುದು ಮಹಾಪಾತಕ; ಮಾನವರ ಭಕ್ತಿ, ಪ್ರಾರ್ಥನೆಗಳನ್ನು ಆಕರ್ಷಿಸಲು ದೇವರ ಕೈಲಿರುವ ಸಾಧನಗಳೆಂದರೆ ಪ್ಲೇಗ್, ಸಿಡುಬು ಮುಂತಾದುವು. ಆದ್ದರಿಂದ ರೋಗಕ್ಕೆ ಔಷಧಿ ಕಂಡುಹಿಡಿಯುವುದು ಚರ್ಚ್ ಗೆ ವಿರುದ್ಧವಾಗಿ ಆಯುಧಗಳನ್ನು ಸನ್ನಾಹಗೊಳಿಸಿದಂತೆ, ಎಂಬುದು ಅವನ ಉಪದೇಶ.
ದೇವರಿಗೆ ಪ್ರಾರ್ಥನೆ, ಬಲಿ ಸಲ್ಲಿಸಿ, ಮಲೇರಿಯವನ್ನು ಗುಣಪಡಿಸುವ ಗೋಜಿಗೆ ಯಾರೂ ಹೋಗುವುದಿಲ್ಲ; ಕ್ವಿನೈನ್ ತೆಗೆದುಕೊಳ್ಳುತ್ತಾರೆ. ಯಾವುದಾದರೂ ರೋಗಕ್ಕೆ ಖಾತ್ರಿಯಾದ ಗುಣ ಉಂಟುಮಾಡುವ ಔಷಧಿ ಕಂಡು ಹಿಡಿಯಲ್ಪಟ್ಟ ಕೂಡಲೇ, ಆ ರೋಗ ಆ ಪ್ರಾರ್ಥನೆಯ ಪಟ್ಟಿಯಿಂದ ಬಿಡಲ್ಪಡುತ್ತದೆ; ದೇವರು, ಮಾನವನಿಗೆ ಉಪದ್ರವ ಕೊಡಲು ಉಂಟುಮಾಡುವ ರೋಗಗಳು, ಕಾಲಕ್ರಮದಲ್ಲಿ ಕಡಿಮೆ ಯಾಗುತ್ತಿವೆ. ಇನ್ನು ಕೆಲವೇ ಕಾಲದಲ್ಲಿ ಎಲ್ಲ ರೋಗಗಳೂ ಮಾನವನ ಹತೋಟಿಗೆ ಬಂದಾಗ, ಮಾನವನ ಭಕ್ತಿ, ಆರಾಧನೆಗಳನ್ನು ಆಕರ್ಷಿಸಲು ದೇವರಲ್ಲಿ ಯಾವ ಸಾಧನವೂ ಇಲ್ಲದಾಗುತ್ತದೆ. ಆಗ ಪೂಜಾರರ ಬೆದರಿಕೆ, ಜನರಿಗೆ ನಗು ಬರಿಸುತ್ತದೆ.
ಜಗತ್ತಿನಲ್ಲಿ ತಮಗೆ ದಾನ, ದಕ್ಷಿಣೆಯಾಗಿ ನೀವು ಕೊಟ್ಟ ಹಣಕ್ಕೆ, ಹಲವು ವೃಡಿಯಷ್ಟು ಹಣವನ್ನು ಸ್ವರ್ಗದಲ್ಲಿ ನಿಮಗಾಗಿ ಕಾದಿರಿಸಲು ಮತಾಧಿಪರು ಸದಾ ಸಿದ್ಧರಾಗಿದ್ದಾರೆ. ನೀವು ಈ ಜೋಯಿಸರಿಗೆ ಬಟ್ಟೆಕೊಡಿ, ಧನ ಕೊಡಿ, ಧಾನ್ಯ ಕೊಡಿ. ಜಮೀನು ಕೊಡಿ; ನಿಮಗೆ ಮಣಗಟ್ಟಲೆ ಪುಣ್ಯ ಬರುತ್ತದೆ. ಈ ವಸ್ತುಗಳೆಲ್ಲ ನೀವು ಕೊಟ್ಟಿದ್ದಕ್ಕೆ ಹಲವು ಮಡಿಯಾಗಿ ನಿಮಗಾಗಿ ಈ ಜೋಯಿಸರುಗಳಿಂದ ಸ್ವರ್ಗದಲ್ಲಿ
ಮತಾಧಿಕಾರಿಗಳಿಗೆ ಜಗತ್ತನ್ನೆಲ್ಲ ಭಯದಿಂದ ತುಂಬಲು ಸಂತೋಷ, ಜನಜಂಗುಳಿಯನ್ನು ಭಯದ ಇಕ್ಕಟ್ಟಾದ ಓಣಿಯಲ್ಲಿ ಇರುಕಿದ್ದಾರೆ. ಮತಾಧಿಕಾರಿಗಳು ಮುಂದೆ. ಅತ್ತಿತ್ತ ಕೋಲನ್ನು ಬಡಿದು ಹೂಂಕಾರಮಾಡಿ ಹಲವು ದುಶ್ಯಕ್ತಿಗಳನ್ನು, ಪೀಡೆಗಳನ್ನು ಬಿಡಿಸಿದೆವೆಂದು ಅಟ್ಟಹಾಸಮಾಡುತ್ತಾರೆ. ಯಾವ ಪೀಡೆಯೂ ದುಶ್ಯಕ್ತಿಯೂ ಕಾಣಲಿಲ್ಲವಲ್ಲ ಎಂದು ಜನಜಂಗುಳಿ ಸಂಶಯಿತರಾದರೆ, "ಛೇ, ಛೇ. ಈ ಪೀಡೆಗಳು ಅದೃಶ್ಯಗಳು. ದೇವರಿಗೆ ಕೋಪ ಬಂದು ಈ ದುಶ್ಯಕ್ತಿಗಳನ್ನು ಕಳಿಸಿದ್ದಾನೆ. ನಿಮ್ಮ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಪೀಡೆಗಳು ಬಂದಿವೆ. ನಮ್ಮ ಮಾತಿನಂತೆ ದೇವರಿಗೆ (ಅವನ ಮೂಲಕ ಮತಾಧಿಕಾರಿಗಳಿಗೆ) ಕಾಣಿಕೆ, ಪೂಜೆ, ಹೋಮ, ದಾನಗಳನ್ನು ಸಲ್ಲಿಸದಿದ್ದರೆ. ನೀವು ಕುಲಸಹಿತ ಭಸ್ಮವಾಗುತ್ತೀರಿ" ಎಂದು ಮತಾಧಿಕಾರಿಗಳು ಹೆದರಿಸುತ್ತಾರೆ. ಮತಾಧಿಕಾರಿಗಳ ಸಾಹಸವನ್ನೂ ನಿಸ್ವಾರ್ಥ ಕಾರ್ಯವನ್ನೂ ಜನ ಮೆಚ್ಚಿ, ಬೇಕಾದ ದಾನ, ದಕ್ಷಿಣೆ ನೀಡುತ್ತಾರೆ. ತಮ್ಮ ಗಳಿಮೆಯನ್ನು ಮತಾಧಿಕಾರಿಗಳಿಗೆ ನೀಡಿ, ತಾವು ಸುರಕ್ಷಿತತೆಯನ್ನು ಪಡೆಯುತ್ತಾರೆ. ತಾವು ಹಸಿದಿದ್ದರೂ, ನಡುಗುತ್ತಿದ್ದರೂ ತಮ್ಮ ಸಂರಕ್ಷಕರಾದ ಮತಾಧಿಕಾರಿಗಳಿಗೆ ಅನ್ನವಸ್ತ್ರಗಳ ಸುಖವುಂಟಾಗುವಂತೆ ಮಾಡುತ್ತಾರೆ. ತಾವು ಎಷ್ಟೋ ಹೊತ್ತು ದುಡಿದು, ದುಡಿಯದ ಮತಾಧಿಕಾರಿಗಳ ಬೊಜ್ಜು ಬೆಳೆಸುತ್ತಾರೆ. ತಾವು ಗುಡಿಸಲಿನಲ್ಲಿ ನರಳುತ್ತಿದ್ದು ಗುಡಿ, ಮಠಗಳಿಗಾಗಿ ಭವ್ಯ ಮಂದಿರಗಳನ್ನು ನಿರ್ಮಿಸುತ್ತಾರೆ. ತಾವು ಹರುಕು ಬಟ್ಟೆಗಳಲ್ಲಿ ನಡುಗಿ, ಮತಾಧಿಕಾರಿಗಳು ಆಷಾಢಭೂತಿತನದ ಜರಿವಸ್ತ್ರಗಳಿಂದ ಮೈಮುಚ್ಚಿಕೊಳ್ಳಲು ಅನುವಾಗುತ್ತಾರೆ.
ರೋಗರುಜಿನಗಳೆಲ್ಲ ದೆವ್ವಭೂತಗಳ ಚೇಷ್ಟೆಯೆಂದು ಜನ ನಂಬಿದ್ದ ಕಾಲವೊಂದಿತ್ತು. (ಇಂಥ ನಂಬಿಕೆಯುಳ್ಳವರು ಈಗಲೂ ಇದ್ದಾರೆ.) ಆಗ ಈ ದುಶ್ಯಕ್ತಿಗಳಿಗೆ ಕಾಣಿಕೆ, ಬಲಿ ಸಲ್ಲಿಸುವುದು ಮಾತ್ರ ರೋಗನಿವಾರಣೆಯ ಕ್ರಮವಾಗಿತ್ತು. ವೈದ್ಯಶಾಸ್ತ್ರ, ತಿಳಿವು ಬೆಳವಣಿಗೆ ಹೊಂದಿದಂತೆಲ್ಲ, ರೋಗಗಳಿಗೆ ಯಾವ ದೆವ್ವ ಭೂತಗಳ ಕಾಟವೂ ಕಾರಣವಲ್ಲವೆಂಬುದು ಮನದಟ್ಟಾಗತೊಡಗಿತು. ಆದರೂ ಜನರ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ದೇವರು ಪಿಡುಗುಗಳನ್ನು ಕಳಿಸುತ್ತಾನೆಂಬ ನಂಬಿಕೆಯಿತ್ತು. ಅಂಟುರೋಗಗಳನ್ನು ತಡೆಯಲು ಯತ್ನಿಸುವುದು ದೈವದ್ರೋಹವೆಂಬ ಭಾವನೆ
ರಿಜರ್ವ್ ಮಾಡಿರಲ್ಪಡುತ್ತದೆ. (ಆದರೆ ನೀವು ಸ್ವರ್ಗದ ಬದಲು ನರಕಕ್ಕೆ ಹೋದುದಾದರೆ? ಅದು ಮುಂದಿನ ಮಾತಾಯಿತು.)
ಶ್ರಾದ್ಧದ ದಿನ. ನೀವು ಜೋಯಿಸರಿಗೆ ಏನು ದಾನ ಕೊಟ್ಟರೂ, ಅದು ಸ್ವರ್ಗದಲ್ಲಿರುವ (?) ನಿಮ್ಮ ತಂದೆ ತಾಯಿಗಳಿಗೆ ವೈರ್ಲೆಸ್ ಮೂಲಕ ಕೂಡಲೇ ತಲ್ಪಿಬಿಡುತ್ತದೆ.
ನೀವೇ ನಿಮ್ಮ ಹಿರಿಯವರೋ, ನೆಂಟರೋ ಸತ್ತು ಪಿತೃಲೋಕಕ್ಕೆ ಸಾಗು ವಾಗ, 'ವೃಷ' ಎಂಬ ನದಿ ಅಡ್ಡಲಾಗುತ್ತದೆ. ಪಾಪ, ಸತ್ತಾತ ಆ ನದಿಯನ್ನು ಹೇಗೆ ದಾಟಿಯಾನು? ಗೂಳಿಯನ್ನು ಸವಾರಿಮಾಡಿದರೆ ಅದು ಸತ್ತವನನ್ನು ನದಿ ದಾಟಿಸುವುದು. (ಸತ್ತವನ ದೇಹವನ್ನು ಸ್ಮಶಾನದಲ್ಲಿ ಸುಟ್ಟು ಬೂದಿಮಾಡಿದಾಗ, ಇನ್ನಾವ ದೇಹ ಗೂಳಿಸವಾರಿ ಮಾಡುವುದು?) ನೀವು ಜೋಯಿಸರಿಗೆ ಗೂಳಿಯನ್ನು ದಾನಕೊಟ್ಟರೆ, ನಿಮ್ಮೆದುರಿಗೇ ಜೋಯಿಸರ ಮನೆಯಲ್ಲೇ ಇದ್ದರೂ, ಆ ಗೂಳಿ ನಿಮ್ಮ ಮೃತ ಪಿತೃವನ್ನು ಸವಾರಿ ಒಯ್ದು ನದಿ ದಾಟಿಸುವುದು. ಸತ್ತವರಿಗೆ ವೃಷ ನದಿಯನ್ನು ದಾಟಿಸುವುದರಿಂದಲೇ ಗೂಳಿಗೆ 'ವೃಷಭ' ಎಂದು ಹೆಸರು ಬಂದುದು. ಶ್ರಾದ್ಧಮಾಡುವಾಗ, ಜೋಯಿಸರು ಬೊಗಳುವ ಮಾತುಗಳೆಲ್ಲ ಸಂಸ್ಕೃತದಲ್ಲಿ ಇರುವುದರಿಂದ, ಈ ಅಸಂಬದ್ಧಗಳು ನಿಮಗೂ ಗೊತ್ತಾಗುವುದಿಲ್ಲ. ಜೋಯಿಸರು ಆ ಸಂಸ್ಕೃತ ಮಾತುಗಳನ್ನೆಲ್ಲ ಕನ್ನಡಕ್ಕೆ ಭಾಷಾಂತರಿಸಿ ಹೇಳಲಿ; ನಿಮ್ಮಲ್ಲಿ ಹೆಚ್ಚು ಜನವಾದರೂ ಕೂಡಲೆ ಶ್ರಾದ್ಧವನ್ನು ನಿಲ್ಲಿಸಿಬಿಡಬಹುದು.
ದೇವರ ನಾಡಿನಲ್ಲಿ ಶ್ರೀಮಂತ ಪ್ರವೇಶಿಸುವುದಕ್ಕಿಂತ, ಸೂಜಿಯ ಬಾಯಲ್ಲಿ ಒಂಟೆ ಹೋಗುವುದು ಸುಲಭ ಎಂದು ಬೈಬಲ್ನಲ್ಲಿ ಹೇಳಿದಾಗ, ಚರ್ಚ್ಗಳಿಗೆ ಹಣದ ಅವಶ್ಯಕತೆ ತುಂಬ ಇದ್ದಿತು. ಇಂಥ ಮಾತುಗಳಿಗೆ ಮರುಳಾಗಿ, ಮೋಸಹೋಗಿ ಮತಾಧಿಕಾರಿಗಳಿಗೆ ಹಣ ತೆತ್ತವರಿದ್ದರೆ, ಅವರು ದಡ್ಡರಲ್ಲದೇ, ಹುಚ್ಚರೂ ಹೌದು.
ನಿಸರ್ಗದ ಶಕ್ತಿಗಳನ್ನೆಲ್ಲ ದೇವರೆಂದು ಪೂಜಿಸುವುದು ಋದ್ವೇದದಿಂದ ತಿಳಿಯುತ್ತದೆ. ಇಂದ್ರನಿಗೆ ಪೂಜೆ ಸಲ್ಲಿಸಿ ಕಾಣಿಕೆ ನೀಡಿದರೆ, ಅವನು ಪ್ರತಿಯಾಗಿ ಕಾಲಕಾಲಕ್ಕೆ ಮಳೆ ಕೊಡುತ್ತಾನೆಂದೂ, ಸೂರ್ಯನನ್ನು ಆರಾಧಿಸಿದರೆ, ಅವನು ಬೆಳಕು ಕೊಟ್ಟು, ಕತ್ತಲೆ ಹೋಗಲಾಡಿಸುತ್ತಾನೆಂದೂ ನಂಬಿಕೆ ಋಗೈದದ ಮಂತ್ರಗಳಿಂದ ಕಂಡಬರುತ್ತದೆ.
ಋಗೈದದ ಹೆಚ್ಚು ಶ್ಲೋಕಗಳೆಲ್ಲ ದೇವರುಗಳ ಸ್ತುತಿ ಮತ್ತು ಪ್ರಾರ್ಥನೆಗಳು; ತಾವು ನೀಡಿದ ಬಹುಮಾನಗಳನ್ನು ದೇವರುಗಳು ಸ್ವೀಕರಿಸಲೆಂದೇ ಆಹ್ವಾನ. ಋಷಿಗಳು ದೇವರಿಗೆ ಬಲಿಕೊಡುವ ಉದ್ದೇಶ, ತಮಗೆ ಪ್ರತಿಯಾಗಿ ದೇವರು
ಗೋಗಳು, ದೀರ್ಘಾಯಸ್ಸು, ಸಮರ್ಥ ಪುತ್ರರು, ಐಶ್ವರ್ಯ ಇವನ್ನು ಕೊಡಲೆಂದು. "ನಾನು ನಿನಗೆ ಪ್ರಾರ್ಥನೆಯನ್ನೂ ಬಲಿ ಗಳನ್ನೂ ಸಲ್ಲಿಸಲಿಲ್ಲವೆ! ನನಗೆ ನೀನು ಪ್ರತಿಯಾಗಿ ದೀರ್ಘಾಯಸ್ಸನ್ನೂ, ಸಂತಾನವನ್ನೂ ಏಕೆ ಕೊಡಲಿಲ್ಲ?" ಎಂದು ಋಷಿ, ದೇವರನ್ನು ಕೇಳುವ ಸಂಗತಿ, ಋಗ್ವದದಲ್ಲಿ ನಿರೂಪಿತವಾಗಿದೆ. ಕರ್ತನಾದ ದೇವರು, ತನ್ನ ಪುತ್ರರಾದ ಮಾನವರ ಯೋಗಕ್ಷೇಮವನ್ನು ನೋಡಿಕೊಳ್ಳಲು ಮರೆತಾಗ, ಮಕ್ಕಳು ಹೀಗೆ ಲಂಚ ಕೊಟ್ಟು, ದೇವರನ್ನು ತಮ್ಮ ಕಡೆ ತಿರುಗಿಸಿಕೊಳ್ಳಲು ಯತ್ನಿಸುತ್ತಾರೆ.
ಪುರಾತನದ ಋಷಿಗಳು ಮಾತ್ರ ಸ್ವಲಾಭದ ಆಸೆಯಿಂದ, ದೇವಸ್ತುತಿ ಮಾಡುತ್ತಿದ್ದರು ಎಂದು ಮಾತ್ರವಲ್ಲ. ವೇದದಲ್ಲಿ ಐತಿಹಾಸಿಕ ಮಂತ್ರಗಳೂ ಇವೆ; ಇವುಗಳಲ್ಲಿ ಹಲವು ರಾಜರ, ರಾಜವಂಶಗಳ ವಿಜಯಗಳ ಸಂಗತಿ ನಿರೂಪಿತವಾಗಿದೆ. ಈ ರಾಜರು, ಇಂದ್ರನ ಮನವೊಲಿಸಿ, ಯುದ್ಧಕಾಲದಲ್ಲಿ ತಮ್ಮ ಪರವಾಗಿ ಅವನ ಸಹಾಯವನ್ನು ಬಯಸುತ್ತಿದ್ದರು. ಇದಕ್ಕಾಗಿ ಇಂದ್ರನನ್ನು ಆರಾಧಿಸಬೇಕಾಗಿ ವಿಶ್ವಾಮಿತ್ರ, ವಸಿಷ್ಠ ಮುಂತಾದ ಪುರೋಹಿತರನ್ನು ನೇಮಿಸುತ್ತಿದ್ದರು. ಹೀಗೆ ಹಲವು ದೇವರುಗಳು ನ್ಯಾಯದೃಷ್ಟಿಯಿಂದ ತಮ್ಮ ನೆರವನ್ನು ನೀಡದೆ, ಬ್ಲಾಕ್ ಮಾರ್ಕೆಟ್ ನಡೆಸುತ್ತಿದ್ದುದಕ್ಕೆ ವೇದಗಳ ಕಾಲದಿಂದಲೂ ಉದಾಹರಣೆ ಸಿಕ್ಕುತ್ತದೆ.
ಯುದ್ಧಕಾಲದಲ್ಲಿ ಎರಡು ಬಣದವರೂ ಅದೇ ದೇವರುಗಳನ್ನು ಸಹಾಯಕ್ಕಾಗಿ ಆವಾಹಿಸುತ್ತಿದ್ದುದು ವಿಚಿತ್ರದ ಸಂಗತಿ. ದೇವರುಗಳು ಯಾರ ಬಗೆಗೆ ತಮಗೆ ಒಲವಿದೆಯೋ, ಅವರ ಕಡೆ ಸೇರುತ್ತಿದ್ದರು. ಈ ಕಡೆಯವರಿಗೇ ಜಯವಾಗುತ್ತಿತ್ತು.
ಯಜ್ಞಕಾಲದಲ್ಲಿ ಹವ್ಯಕರೂ ಇದೇ ಪರಿಸ್ಥಿತಿಯನ್ನು ಅನುಭವಿ ಸುತ್ತಿದ್ದರು. “ಓ ಇಂದ್ರನೇ, ನಮ್ಮ ಆವಾಹನೆಗೆ ಬಾ. ನಿನ್ನ ಕುದುರೆಗಳನ್ನು ಈ ಕಡೆಗೆ ನಡೆಸು. ಎಲ್ಲ ಬಗೆಯ ಜನರೂ ನಿನ್ನನ್ನು ಆವಾಹಿಸುತ್ತಾರೆ; ಆದರೂ ನಮ್ಮ ಬೇಡಿಕೆಗೆ ಮಾತ್ರ ಕಿವಿ ಕೊಡು" ಎಂದು ಪುರೋಹಿತರು ಬೇಡಿಕೊಳ್ಳುವ ಸಂಗತಿ, ಋದ್ವೇದದಲ್ಲಿ ನಿರೂಪಿತವಾಗಿದೆ. (ಈ ದೇವರಿಗೆ ಒಂದೇ ಕಾಲದಲ್ಲಿ ಈ ಎಲ್ಲಾ ಕಡೆಯೂ ಇರುವ ಶಕ್ತಿ ಇಲ್ಲವಾಗಿತ್ತು.)
ಪ್ರಾರ್ಥನೆಯೂ, ಬೆಲೆಯುಳ್ಳ ಕಾಣಿಕೆಗಳೂ ದೇವರ ಮನವೊಲಿಸಿ, ದೇವರ ಸಹಾಯವನ್ನು ತರುವ ನಂಬಿಕೆಯಿತ್ತು. ಹೀಗೆ ಶ್ರೀಮಂತರಾಗಲೀ, ರಾಜರಾಗಲೀ, ದೇವರು ಪುರೋಹಿತ ಇಬ್ಬರಿಂದ ಸುಲಿಯಲ್ಪಡುತ್ತಿದ್ದರು. ದೇವರಿಗೆ ಬೆಲೆಬಾಳುವ ಕಾಣಿಕೆಗಳನ್ನು ನೀಡಬೇಕಾಗಿತ್ತು. ಪುರೋಹಿತರಿಗೆ ದಾನ, ದಕ್ಷಿಣೆ ಕೊಡಬೇಕಾಗಿತ್ತು. ಶ್ರೀಮಂತರಿಂದ ಪುರೋಹಿತರಿಗೆ ಕೊಡಲ್ಪಡುತ್ತಿದ್ದ ದಾನ, ದಕ್ಷಿಣೆಗಳ ಧಾರಾಳವು ದಾನಸ್ತುತಿಗಳಿಂದ ತಿಳಿದು ಬರುತ್ತದೆ.
ಲೇಖಕರ ಪರಿಚಯ:
ವಸುದೇವ ಭೂಪಾಲಂ: ವಸುದೇವ ಭೂಪಾಲಂ ಅವರು ಹುಟ್ಟಿದ್ದು ಜನವರಿ 01-1927ರಂದು ಉಳಿದಂತೆ ಇವರ ಹೆತ್ತವರು, ಕುಟುಂಬ, ಹುಟ್ಟೂರು ಬಗ್ಗೆ ಯಾವುದೇ ಮಾಹಿತಿಗಳು ದೊರೆತಿಲ್ಲ. ಇವರು ಶಿವಮೊಗ್ಗದ ಮಹಾರಾಜ ಕಾಲೇಜಿನಲ್ಲಿ 1945ರಲ್ಲಿ ಬಿ.ಎ ಹಾಗೂ 1948ರಲ್ಲಿ ಎಂ.ಎ ಪದವಿಯನ್ನು ಗಳಿಸಿದ್ದರು. ಪುಸ್ತಕ ಪ್ರಕಟಣೆ ಮತ್ತು ವ್ಯಾಪಾರ ಇವರ ಜೀವನೋಪಾಯದ ಮಾರ್ಗವಾಗಿತ್ತು. ಸಿಡಿಲು. ಒಲವಿನ ಉಪವನ, ಕರ್ನಾಟಕ ದೇವಿ, ಹೆಣ್ಣು (ಕತೆ ಕಾದಂಬರಿ) ತ್ರಿಶೂಲ, ಕಮ್ಮಟ ವಲ್ಲಭ, ಹಾಗೂ ಕಾಲೇಜು ಹುಡುಗಿ (ನಾಟಕಗಳು) ಗೊಂಚಲ್ ಮಿಂಚು, ಸ್ವಾತಂತ್ಯ ವೀರರು (ಜೀವನ ಚರಿತ್ರೆ) ಹೊಸಹಾಡು, ಪ್ರಳಯ, ದುಂದುಬಿ, ರಂಜನ(ಕವಿತೆಗಳು) ಹೂ, ಹಹಹಾ ಗುಮ್ಮ ಬಂತು (ಶಿಶು ಗೀತೆಗಳು) ಮೊದಲಾದವುಗಳನ್ನು ಇವರು ರಚಿಸಿದ್ದಾರೆ.
ಸಂಭಾವ್ಯ ಪ್ರಶ್ನೆಗಳು ಮತ್ತು ಉತ್ತರ
೧. ದೇವರ ಹೆಸರಿನಲ್ಲಿ ಜನರನ್ನು ಹೇಗೆ ವಂಚಿಸುತ್ತಿದ್ದಾರೆ?
ದೇವರ ಹೆಸರಿನಲ್ಲಿ ಜನರಲ್ಲಿರುವ **ಭಯ, ಅಜ್ಞಾನ ಮತ್ತು ಮೂಢನಂಬಿಕೆಗಳನ್ನು ಬಳಸಿಕೊಂಡು** ಕೆಲವರು ಅವರನ್ನು ವಂಚಿಸುತ್ತಿದ್ದಾರೆ. ದೇವರಿಗೆ ಪೂಜೆ, ಹೋಮ, ಬಲಿ, ಕಾಣಿಕೆ, ದಾನ ಮತ್ತು ದಕ್ಷಿಣೆ ನೀಡಿದರೆ ಪಾಪಗಳು ಪರಿಹಾರವಾಗುತ್ತವೆ, ಸ್ವರ್ಗ ಸಿಗುತ್ತದೆ, ರೋಗಗಳು ಗುಣವಾಗುತ್ತವೆ ಎಂದು ಜನರನ್ನು ನಂಬಿಸುತ್ತಾರೆ. ದೇವರಿಗೆ ಕೋಪ ಬಂದಿದೆ, ಅದರಿಂದಲೇ ರೋಗ, ಬರ, ಕಷ್ಟಗಳು ಬಂದಿವೆ ಎಂದು ಹೆದರಿಸಿ ಹಣ ಮತ್ತು ವಸ್ತುಗಳನ್ನು ಪಡೆಯುತ್ತಾರೆ. ಶ್ರಾದ್ಧದ ಸಂದರ್ಭದಲ್ಲಿ ಜೋಯಿಸರಿಗೆ ದಾನ ನೀಡಿದರೆ ಅದು ಸತ್ತವರ ಪಿತೃಲೋಕಕ್ಕೆ ತಲುಪುತ್ತದೆ ಎಂಬ ನಂಬಿಕೆಯನ್ನೂ ಬೆಳೆಸಿದ್ದಾರೆ. ಹೀಗೆ **ದೇವರು ಮತ್ತು ಜನರ ನಡುವೆ ಮಧ್ಯವರ್ತಿಗಳಾಗಿ ನಿಂತು, ಜನರ ದುಡಿಮೆಯ ಹಣವನ್ನು ಪಡೆದು ತಮ್ಮ ಸ್ವಾರ್ಥವನ್ನು ಈಡೇರಿಸಿಕೊಳ್ಳುತ್ತಿದ್ದಾರೆ.**
೨. ಮತಗಳ ಉದ್ದೇಶವೇನು?
ಮನುಷ್ಯನಿಗೆ ಕಾಣುವ ಎಲ್ಲ ವಸ್ತುಗಳೂ ಒಂದು ಬುದ್ಧಿಶೀಲ ಶಕ್ತಿಯಿಂದ ಸೃಷ್ಟಿಯಾಗಿವೆ ಎಂಬ ನಂಬಿಕೆ ಇತ್ತು. ಆ ಶಕ್ತಿಯೊಂದಿಗೆ ಮನುಷ್ಯನಿಗೆ **ಸೌಹಾರ್ದಯುತ ಸಂಬಂಧವನ್ನು ಉಂಟುಮಾಡುವುದೇ ಮತಗಳ ಉದ್ದೇಶ** ಎಂದು ಲೇಖಕರು ಹೇಳಿದ್ದಾರೆ. ಭಯ, ನೆರವಿನ ಬಯಕೆ ಮತ್ತು ಕೃತಜ್ಞತೆಯಿಂದ ಮನುಷ್ಯ ದೇವರನ್ನು ಪ್ರಾರ್ಥಿಸಿ, ಆರಾಧಿಸುತ್ತಿದ್ದನು.
೩. ಪಾಪ–ಪುಣ್ಯಗಳನ್ನು ಜನ ಹೇಗೆ ನಂಬುತ್ತಿದ್ದಾರೆ?
ಜನರು **ತಾವು ಮಾಡುವ ಒಳ್ಳೆಯ ಕೆಲಸಗಳಿಗೆ ಪುಣ್ಯ, ಕೆಟ್ಟ ಕೆಲಸಗಳಿಗೆ ಪಾಪ** ಬರುತ್ತದೆ ಎಂದು ನಂಬುತ್ತಾರೆ. ಪಾಪ ಮಾಡಿದರೆ ದೇವರು ಶಿಕ್ಷಿಸುತ್ತಾನೆ, ಪುಣ್ಯ ಮಾಡಿದರೆ ಸ್ವರ್ಗ ಸಿಗುತ್ತದೆ ಎಂಬ ನಂಬಿಕೆ ಇದೆ. ಪೂಜೆ, ಹೋಮ, ದಾನ, ದಕ್ಷಿಣೆ, ಕಾಣಿಕೆಗಳನ್ನು ನೀಡುವುದರಿಂದ ಪಾಪಗಳು ಪರಿಹಾರವಾಗುತ್ತವೆ ಎಂದು ಕೆಲವರು ನಂಬುತ್ತಾರೆ. ಈ ನಂಬಿಕೆಯನ್ನು ಬಳಸಿಕೊಂಡು ಧಾರ್ಮಿಕ ಅಧಿಕಾರಿಗಳು ಜನರಿಂದ ಹಣ ಮತ್ತು ಕಾಣಿಕೆಗಳನ್ನು ಪಡೆಯುತ್ತಿದ್ದಾರೆ.
೪. ವೈಚಾರಿಕತೆಯ ಪ್ರಜ್ಞೆಯ ಬಗ್ಗೆ ಲೇಖಕರ ನಿಲುವೇನು?
ಲೇಖಕರು **ವೈಚಾರಿಕತೆ ಮತ್ತು ವಿಚಾರಶೀಲತೆಯನ್ನು ಬೆಂಬಲಿಸುತ್ತಾರೆ**. ಮನುಷ್ಯನು ಅಜ್ಞಾನ, ಭಯ ಮತ್ತು ಮೂಢನಂಬಿಕೆಗಳಿಗೆ ಒಳಗಾಗದೆ, ಪ್ರತಿಯೊಂದು ವಿಷಯವನ್ನೂ **ವಿವೇಕ ಮತ್ತು ವೈಜ್ಞಾನಿಕ ದೃಷ್ಟಿಯಿಂದ ಪರಿಶೀಲಿಸಬೇಕು** ಎಂಬುದು ಅವರ ನಿಲುವು. ದೇವರ ಹೆಸರಿನಲ್ಲಿ ನಡೆಯುವ ವಂಚನೆ, ಬಲಿ, ದಾನ–ದಕ್ಷಿಣೆ ಮತ್ತು ಮೂಢನಂಬಿಕೆಗಳನ್ನು ಪ್ರಶ್ನಿಸಬೇಕು. ವಿಜ್ಞಾನ ಮತ್ತು ಜ್ಞಾನ ಬೆಳೆದಂತೆ ಇಂತಹ ನಂಬಿಕೆಗಳು ದೂರವಾಗಬೇಕು ಎಂದು ಲೇಖಕರು ಅಭಿಪ್ರಾಯಪಡುತ್ತಾರೆ.
೪. ವೈಚಾರಿಕತೆಯ ಪ್ರಜ್ಞೆಯ ಬಗ್ಗೆ ಲೇಖಕರ ನಿಲುವೇನು?
ವಸುದೇವ ಭೂಪಾಲಂ ಅವರು **ವೈಚಾರಿಕತೆ, ವಿಚಾರಶೀಲತೆ ಮತ್ತು ವೈಜ್ಞಾನಿಕ ಮನೋಭಾವವನ್ನು ಬಲವಾಗಿ ಸಮರ್ಥಿಸುವ ಲೇಖಕರು**. ಮನುಷ್ಯನು ಯಾವುದೇ ವಿಷಯವನ್ನು ಕೇವಲ ನಂಬಿಕೆಯ ಆಧಾರದ ಮೇಲೆ ಸ್ವೀಕರಿಸದೆ, ಅದರ ಹಿಂದಿರುವ ಕಾರಣವನ್ನು ತಿಳಿದುಕೊಂಡು, ವಿವೇಚನೆಯಿಂದ ಅರ್ಥಮಾಡಿಕೊಳ್ಳಬೇಕು ಎಂಬುದು ಅವರ ನಿಲುವಾಗಿದೆ.
ಹಿಂದಿನ ಕಾಲದಲ್ಲಿ ಮನುಷ್ಯನಿಗೆ ಪ್ರಕೃತಿಯ ಘಟನೆಗಳ ಬಗ್ಗೆ ಸರಿಯಾದ ಜ್ಞಾನವಿರಲಿಲ್ಲ. ಆದ್ದರಿಂದ ಗುಡುಗು, ಸಿಡಿಲು, ಜ್ವಾಲಾಮುಖಿ, ಧೂಮಕೇತು, ರೋಗರುಜಿನ ಮುಂತಾದವು ದೇವರ ಕೋಪ ಅಥವಾ ಶಿಕ್ಷೆಯಿಂದ ಉಂಟಾಗುತ್ತವೆ ಎಂದು ನಂಬುತ್ತಿದ್ದ. ದೇವರನ್ನು ಸಂತೋಷಪಡಿಸಲು ಬಲಿ, ಪೂಜೆ, ಕಾಣಿಕೆ, ದಾನ ಮತ್ತು ದಕ್ಷಿಣೆಗಳನ್ನು ನೀಡುತ್ತಿದ್ದ. ಇಂತಹ ಅಜ್ಞಾನ ಮತ್ತು ಭಯವನ್ನು ಕೆಲವು ಮತಾಧಿಕಾರಿಗಳು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ಜನರನ್ನು ವಂಚಿಸುತ್ತಿದ್ದರು.
ಆದರೆ **ವಿಜ್ಞಾನ ಮತ್ತು ಜ್ಞಾನ ಬೆಳೆಯುತ್ತಿದ್ದಂತೆ ಪ್ರಕೃತಿಯ ಅನೇಕ ರಹಸ್ಯಗಳು ಮನುಷ್ಯನಿಗೆ ಅರ್ಥವಾಗಿವೆ**. ರೋಗಗಳು ದೆವ್ವ-ಭೂತಗಳ ಕಾರಣದಿಂದ ಬರುವುದಿಲ್ಲ; ಅವುಗಳಿಗೆ ವೈಜ್ಞಾನಿಕ ಕಾರಣಗಳಿವೆ ಎಂಬುದು ವೈದ್ಯಶಾಸ್ತ್ರದಿಂದ ತಿಳಿದುಬಂದಿದೆ. ಔಷಧಿ ಮತ್ತು ಚಿಕಿತ್ಸೆಯಿಂದ ರೋಗಗಳನ್ನು ಗುಣಪಡಿಸಬಹುದು. ಆದ್ದರಿಂದ ಪ್ರತಿಯೊಂದು ಸಮಸ್ಯೆಯನ್ನೂ ದೇವರ ಕೋಪ ಅಥವಾ ಪಾಪದ ಫಲವೆಂದು ಭಾವಿಸುವುದು ಸರಿಯಲ್ಲ ಎಂದು ಲೇಖಕರು ಸೂಚಿಸುತ್ತಾರೆ.
ಲೇಖಕರು ದೇವರನ್ನು ನಂಬುವುದನ್ನು ಮಾತ್ರ ಪ್ರಶ್ನಿಸುವುದಿಲ್ಲ; **ದೇವರ ಹೆಸರಿನಲ್ಲಿ ಜನರನ್ನು ಭಯಪಡಿಸಿ, ಅವರ ಅಜ್ಞಾನವನ್ನು ದುರುಪಯೋಗಪಡಿಸಿಕೊಂಡು ಹಣ, ದಾನ ಮತ್ತು ದಕ್ಷಿಣೆ ಪಡೆಯುವ ವ್ಯವಸ್ಥೆಯನ್ನು** ತೀವ್ರವಾಗಿ ಟೀಕಿಸುತ್ತಾರೆ. ಶ್ರಾದ್ಧ, ಬಲಿ, ಪೂಜೆ, ಸ್ವರ್ಗ–ನರಕ ಮುಂತಾದ ನಂಬಿಕೆಗಳನ್ನು ಜನರು ವಿವೇಚನೆಯಿಂದ ಪರಿಶೀಲಿಸಬೇಕು ಎಂದು ಹೇಳುತ್ತಾರೆ.
ಹೀಗಾಗಿ, ಲೇಖಕರ ಪ್ರಕಾರ ಮನುಷ್ಯನು **ಮೂಢನಂಬಿಕೆಯಿಂದ ವೈಚಾರಿಕತೆಯ ಕಡೆಗೆ, ಅಜ್ಞಾನದಿಂದ ಜ್ಞಾನದ ಕಡೆಗೆ ಮತ್ತು ಭಯದಿಂದ ವೈಜ್ಞಾನಿಕ ಚಿಂತನೆಯ ಕಡೆಗೆ ಸಾಗಬೇಕು**. ಪ್ರಶ್ನಿಸುವ ಮನೋಭಾವ, ಕಾರಣ–ಕಾರ್ಯ ಸಂಬಂಧವನ್ನು ಅರಿಯುವ ಗುಣ ಮತ್ತು ವೈಜ್ಞಾನಿಕ ದೃಷ್ಟಿಕೋನ ಬೆಳೆಸಿಕೊಂಡಾಗ ಮಾತ್ರ ಸಮಾಜದಲ್ಲಿರುವ ಶೋಷಣೆ ಮತ್ತು ಮೂಢನಂಬಿಕೆಗಳನ್ನು ನಿವಾರಿಸಲು ಸಾಧ್ಯ. ಇದೇ **“ದೇವರ ಬ್ಲಾಕ್ ಮಾರ್ಕೆಟ್”** ಪಾಠದಲ್ಲಿ ವ್ಯಕ್ತವಾಗಿರುವ ಲೇಖಕರ ವೈಚಾರಿಕ ನಿಲುವಾಗಿದೆ.
೫. ಎಲ್ಲಾ ಧರ್ಮದಲ್ಲಿಯೂ ಮೂಢ್ಯವಿರುವುದನ್ನು ಲೇಖಕರು ಚರ್ಚಿಸುವುದನ್ನು ಬರೆಯಿರಿ
ವಸುದೇವ ಭೂಪಾಲಂ ಅವರು **ಯಾವುದೇ ಒಂದು ಧರ್ಮವನ್ನು ಮಾತ್ರ ಟೀಕಿಸದೆ, ಎಲ್ಲ ಧರ್ಮಗಳಲ್ಲಿಯೂ ಕಂಡುಬರುವ ಮೂಢನಂಬಿಕೆಗಳನ್ನು ವಿಮರ್ಶಿಸಿದ್ದಾರೆ**. ಮನುಷ್ಯನ ಅಜ್ಞಾನ, ಭಯ ಮತ್ತು ಅಸಹಾಯಕತೆಯನ್ನು ಬಳಸಿಕೊಂಡು ಧಾರ್ಮಿಕ ಅಧಿಕಾರಿಗಳು ತಮ್ಮ ಸ್ವಾರ್ಥವನ್ನು ಸಾಧಿಸಿಕೊಳ್ಳುತ್ತಾರೆ ಎಂಬುದು ಲೇಖಕರ ಮುಖ್ಯ ಅಭಿಪ್ರಾಯ.
ಹಿಂದಿನ ಕಾಲದಲ್ಲಿ ಪ್ರಕೃತಿಯ ಘಟನೆಗಳಾದ **ಗುಡುಗು, ಸಿಡಿಲು, ಜ್ವಾಲಾಮುಖಿ, ಧೂಮಕೇತು** ಮುಂತಾದವುಗಳನ್ನು ದೇವರ ಕೋಪ ಅಥವಾ ಶಿಕ್ಷೆ ಎಂದು ಜನರು ನಂಬುತ್ತಿದ್ದರು. ದೇವರನ್ನು ಒಲಿಸಿಕೊಳ್ಳಲು ಹಾಲು, ಹಣ್ಣು, ತುಪ್ಪ, ಧಾನ್ಯ, ಪ್ರಾಣಿಗಳು ಮುಂತಾದವುಗಳನ್ನು ಬಲಿಯಾಗಿ ಅರ್ಪಿಸುತ್ತಿದ್ದರು. ಕೆಲವು ಕಡೆ ನರಬಲಿಯೂ ನಡೆಯುತ್ತಿತ್ತು. ನಂತರ ನರಬಲಿಯ ಬದಲು ಪ್ರಾಣಿಬಲಿ, ಪ್ರಾಣಿಬಲಿಯ ಬದಲು ಧಾನ್ಯಗಳನ್ನು ಅರ್ಪಿಸುವ ಪದ್ಧತಿ ಬಂದಿತು.
ಹಿಂದೂ ಧರ್ಮದ ಸಂದರ್ಭದಲ್ಲಿ **ಶ್ರಾದ್ಧ, ದಾನ–ದಕ್ಷಿಣೆ, ಬಲಿ, ಸ್ವರ್ಗ–ನರಕದ ನಂಬಿಕೆಗಳು** ಹೇಗೆ ಜನರ ಅಜ್ಞಾನವನ್ನು ಬಳಸಿಕೊಳ್ಳಲು ಕಾರಣವಾಗುತ್ತವೆ ಎಂಬುದನ್ನು ಲೇಖಕರು ವ್ಯಂಗ್ಯವಾಗಿ ವಿವರಿಸುತ್ತಾರೆ. ಜೋಯಿಸರಿಗೆ ಗೋವು ಅಥವಾ ಇತರ ವಸ್ತುಗಳನ್ನು ದಾನ ಮಾಡಿದರೆ ಮೃತ ವ್ಯಕ್ತಿಗೆ ಸ್ವರ್ಗದಲ್ಲಿ ಉಪಯೋಗವಾಗುತ್ತದೆ ಎಂಬ ನಂಬಿಕೆಯನ್ನು ಅವರು ಪ್ರಶ್ನಿಸುತ್ತಾರೆ. ಪವಿತ್ರ ಕ್ಷೇತ್ರದಲ್ಲಿ ಸ್ನಾನ ಮಾಡಿದರೆ ಪಾಪಗಳು ಪರಿಹಾರವಾಗುತ್ತವೆ ಎಂಬ ನಂಬಿಕೆಯನ್ನೂ ಅವರು ಟೀಕಿಸುತ್ತಾರೆ.
ಅದೇ ರೀತಿ, **ಕ್ರೈಸ್ತ ಧರ್ಮದಲ್ಲಿಯೂ** ಚರ್ಚ್ಗಳು ಹಣದ ಅವಶ್ಯಕತೆಯಿದ್ದಾಗ ಜನರಿಂದ ಹಣ ಪಡೆಯಲು ಧಾರ್ಮಿಕ ನಂಬಿಕೆಗಳನ್ನು ಬಳಸಿಕೊಂಡವು ಎಂದು ಲೇಖಕರು ಹೇಳುತ್ತಾರೆ. ಶ್ರೀಮಂತರು ಸ್ವರ್ಗಕ್ಕೆ ಹೋಗುವುದಕ್ಕಿಂತ ಸೂಜಿಯ ಬಾಯಿಯಲ್ಲಿ ಒಂಟೆ ಹೋಗುವುದು ಸುಲಭ ಎಂಬ ಬೈಬಲ್ನ ಮಾತನ್ನು ಉಲ್ಲೇಖಿಸಿ, ಹಣ ಮತ್ತು ಧರ್ಮದ ನಡುವಿನ ಸಂಬಂಧವನ್ನು ವ್ಯಂಗ್ಯವಾಗಿ ತೋರಿಸುತ್ತಾರೆ.
ಹೀಗೆ ಲೇಖಕರು **ಹಿಂದೂ, ಕ್ರೈಸ್ತ ಸೇರಿದಂತೆ ವಿವಿಧ ಧಾರ್ಮಿಕ ವ್ಯವಸ್ಥೆಗಳಲ್ಲಿ ಕಂಡುಬರುವ ಮೂಢನಂಬಿಕೆ, ಭಯ, ಬಲಿ, ಕಾಣಿಕೆ ಮತ್ತು ಧಾರ್ಮಿಕ ಶೋಷಣೆಯನ್ನು** ಚರ್ಚಿಸಿದ್ದಾರೆ. ಅವರ ಉದ್ದೇಶ ಯಾವುದೇ ಧರ್ಮವನ್ನು ಅವಮಾನಿಸುವುದಲ್ಲ; ಬದಲಾಗಿ ಧರ್ಮದ ಹೆಸರಿನಲ್ಲಿ ನಡೆಯುವ **ಅಂಧನಂಬಿಕೆ ಮತ್ತು ಜನರ ಶೋಷಣೆಯನ್ನು ಪ್ರಶ್ನಿಸುವುದಾಗಿದೆ**. ಆದ್ದರಿಂದ ಜನರು ಧರ್ಮವನ್ನು ವಿವೇಕದಿಂದ ಅರ್ಥಮಾಡಿಕೊಂಡು, ಮೂಢನಂಬಿಕೆಗಳನ್ನು ತೊರೆದು **ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು** ಎಂಬುದು ಲೇಖಕರ ನಿಲುವಾಗಿದೆ.
೬. ಮತ ಮೂಢ್ಯಗಳನ್ನು ಜನರ ಮೇಲೆ ಹೇರಲು ಮತಾಧಿಕಾರಿಗಳು ಕಂಡುಕೊಂಡ ಬಗೆಗಳೇನು?
ಮತಾಧಿಕಾರಿಗಳು ಜನರಲ್ಲಿರುವ **ಅಜ್ಞಾನ, ಭಯ, ಅಸಹಾಯಕತೆ ಮತ್ತು ಮೂಢನಂಬಿಕೆಗಳನ್ನು** ಬಳಸಿಕೊಂಡು ಧಾರ್ಮಿಕ ಮೂಢ್ಯಗಳನ್ನು ಜನರ ಮೇಲೆ ಹೇರಿದರು. ದೇವರು ಕೋಪಗೊಂಡಿದ್ದಾನೆ, ಪಾಪಕ್ಕೆ ಶಿಕ್ಷೆ ನೀಡುತ್ತಿದ್ದಾನೆ ಎಂದು ಜನರನ್ನು ಹೆದರಿಸಿ, ತಾವು ಹೇಳಿದ ಪೂಜೆ, ಹೋಮ, ಬಲಿ, ದಾನ ಮತ್ತು ಕಾಣಿಕೆಗಳನ್ನು ಸಲ್ಲಿಸುವಂತೆ ಮಾಡಿದರು.
ದೇವರು ಮತ್ತು ಜನರ ನಡುವೆ ತಾವೇ ಮಧ್ಯವರ್ತಿಗಳೆಂದು ಹೇಳಿಕೊಂಡು, **ತಮ್ಮ ಮಾತನ್ನು ದೇವರ ಮಾತೆಂದು ಬಿಂಬಿಸಿದರು**. ತಾವು ಹೇಳಿದ ಕ್ಷೇತ್ರವೇ ಅತ್ಯಂತ ಪವಿತ್ರವಾದದ್ದು, ಅಲ್ಲಿ ಸ್ನಾನ ಮಾಡಿದರೆ ಪಾಪಗಳು ಪರಿಹಾರವಾಗುತ್ತವೆ ಎಂದು ಪ್ರಚಾರ ಮಾಡಿದರು. ದೇವರಿಗೆ ಕಾಣಿಕೆ ನೀಡಿದರೆ ಸ್ವರ್ಗ ಸಿಗುತ್ತದೆ, ದಾನ–ದಕ್ಷಿಣೆ ನೀಡಿದರೆ ಪುಣ್ಯ ದೊರೆಯುತ್ತದೆ ಎಂದು ಜನರನ್ನು ನಂಬಿಸಿದರು.
ರೋಗಗಳು ಬಂದಾಗ ಅವು ದೇವರ ಕೋಪದಿಂದ ಅಥವಾ ದೆವ್ವ–ಭೂತಗಳ ಚೇಷ್ಟೆಯಿಂದ ಬಂದಿವೆ ಎಂದು ಹೇಳಿ ಜನರನ್ನು ಭಯಪಡಿಸಿದರು. ಪಿಡುಗುಗಳ ಸಂದರ್ಭದಲ್ಲಿ ಜನರಿಗೆ **“ದೇವರಿಗೆ ಪೂಜೆ, ಹೋಮ, ದಾನ–ದಕ್ಷಿಣೆ ಸಲ್ಲಿಸದಿದ್ದರೆ ಇನ್ನಷ್ಟು ಕಷ್ಟಗಳು ಬರುತ್ತವೆ”** ಎಂದು ಬೆದರಿಸಿದರು. ಇದರಿಂದ ಭಯಗೊಂಡ ಜನರು ತಮ್ಮಲ್ಲಿದ್ದ ಹಣ, ಧಾನ್ಯ ಮತ್ತು ವಸ್ತುಗಳನ್ನು ಮತಾಧಿಕಾರಿಗಳಿಗೆ ನೀಡುತ್ತಿದ್ದರು.
ಶ್ರಾದ್ಧದ ಸಂದರ್ಭದಲ್ಲಿಯೂ ಮೃತರ ಆತ್ಮಕ್ಕೆ ಸ್ವರ್ಗಪ್ರಾಪ್ತಿ ಆಗಬೇಕಾದರೆ ಜೋಯಿಸರಿಗೆ ದಾನ ಮಾಡಬೇಕು ಎಂಬ ನಂಬಿಕೆಯನ್ನು ಬೆಳೆಸಿದರು. ಹೀಗೆ **ಭಯ, ದೇವರ ಹೆಸರಿನ ಅಧಿಕಾರ, ಸ್ವರ್ಗ–ನರಕದ ಕಲ್ಪನೆ, ಪಾಪ–ಪುಣ್ಯದ ನಂಬಿಕೆ, ಬಲಿ, ಪೂಜೆ, ದಾನ–ದಕ್ಷಿಣೆ ಮತ್ತು ಸುಳ್ಳು ಧಾರ್ಮಿಕ ಪ್ರಚಾರಗಳ ಮೂಲಕ** ಮತಾಧಿಕಾರಿಗಳು ಮೂಢನಂಬಿಕೆಗಳನ್ನು ಜನರ ಮೇಲೆ ಹೇರಿದರು.
ಒಟ್ಟಿನಲ್ಲಿ, **ಜನರ ವಿಚಾರಶೂನ್ಯತೆ ಮತ್ತು ಭಯವೇ ಮತಾಧಿಕಾರಿಗಳಿಗೆ ಪ್ರಮುಖ ಸಾಧನಗಳಾಗಿದ್ದವು**. ಜನರು ವೈಚಾರಿಕವಾಗಿ ಯೋಚಿಸಿ ಪ್ರಶ್ನಿಸದಂತೆ ಮಾಡಿ, ಅವರ ನಂಬಿಕೆಗಳನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡರು.
