ನಾನು ಕೆಲವು ಚಿತ್ರಗಳಲ್ಲಿ ಶಂಕರ, ಅಣ್ಣ-ತಮ್ಮಂದಿರಾಗಿ ಅಭಿನಯಿಸಿದ್ದುಂಟು. ಮನೆ ಚಿತ್ರಗಳೆಲ್ಲವೂ ಗಲ್ಲಾಪೆಟ್ಟಿಗೆಯ ಗಳಿಕೆ ದೃಷ್ಟಿಯಲ್ಲಿ ವಿಫಲವೇ! ಆದರೆ ಪ್ರಶಸ್ತಿಗಳ ವಿಚಾರದಲ್ಲಿ ಅಗ್ರಸ್ಥಾನ. ಶಂಕರ ನಿರ್ದೇಶಿಸಿದ 'ಮಿಂಚಿನ ಓಟ' 'ಆಕ್ಸಿಂಡೆಟ್' ಚಿತ್ರಗಳಿಗೆ ಒಟ್ಟಿಗೆ ಹದಿನೈದು ರಾಜ್ಯಪ್ರಶಸ್ತಿಗಳು ಬಂದಿದ್ದವು. ನಮ್ಮ ಹಿರಿಯ ಸಂಗಾತಿಯೊಬ್ಬರು ಪದೇಪದೇ ಹೇಳ್ತಿದ್ದಂತೆ 'ಆಪರೇಷನ್ ಸಕ್ಸಸ್ಫುಲ್. ಪೇಷಂಟ್ ಡೈಡ್.' ಹಾಗಂತ 'ವ್ಯಾಪಾರಿ ಚಿತ್ರಗಳ'. ಇತರರು ನಿರ್ಮಿಸಿದ-ನಿರ್ದೇಶಿಸಿದ ಚಿತ್ರಗಳು ಬಲು ಯಶಸ್ವಿ, 'ಜೀವಕ್ಕೆ ಜೀವ' ಅಂಥದೊಂದು ಚಿತ್ರ ಅನೇಕ ವರ್ಷಗಳಿಂದ ಕ್ಯಾಮೆರಾಮನ್ ಆಗಿ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ ಶ್ರೀಕಾಂತ್ರವರು ಸ್ಟಾರ್ಟ್ ಕಟ್ ನಿರ್ಮಾಪಕರು. ಪಕ್ಕಾ ಮಸಾಲಾ ಚಿತ್ರಗಳ ನಿರ್ದೇಶಕರೆಂದು ಹೆಸರು ಮಾಡಿದ ಕೆ.ಎಸ್.ಆರ್. ದಾಸರು ಸ್ಟಾರ್ಟ್-ಕಟ್ ಹೇಳೋರು! ಚಿತ್ರೀಕರಣ ಮದ್ರಾಸಿನಲ್ಲೇ! ತಂತ್ರಜ್ಞರೊಬ್ಬರ ಸ್ವಂತ ಚಿತ್ರವೆಂದು ಶಂಕರನೊತ್ತಾಯಕ್ಕೆ ಗೊಣಗುತ್ತಾ ಒಪ್ಪಿಕೊಂಡಿದ್ದೆ. ಚಿತ್ರೀಕರಣದುದ್ದಕ್ಕೂ ನಮ್ಮ ಭಾಷೆಯಲ್ಲಿ ನಾನವರೆಲ್ಲರ ಗೇಲಿ ಮಾಡಿದ್ದೇ ಮಾಡಿದ್ದು. 'ಕಲಾತ್ಮಕ ಚಿತ್ರದಿಂದ ಬಂದ ನಾವಿಬ್ಬರೂ ಇಂಥದನ್ನು ಮಾಡೋದನ್ನು.' 'ಕನ್ನಡದವರು ನೋಡಿದ್ರೆ ಉಗಿಯೋದುಂಟು. ನೋಡ್ತೀರು' ಅಂತಿದ್ದೆ ಶಂಕರನಿಗೆ. ಅನೇಕ ಸಲ ಕೇಳಿ ತಾಳ್ಮೆಯಿಂದಲೇ ಇದ್ದ ಶಂಕರ ಕೊನೆಗೊಮ್ಮೆ ಸಿಟ್ಟಿಗೆದ್ದ- 'ಕಲಾತ್ಮಕ ಚಿತ್ರ? ಮಣ್ಣು! ಮಾಡಿ ನೋಡಿದೆವಲ್ಲ. ಸಬ್ಸಿಡಿಯೂ ಬ್ಯಾಂಕ್ ಸಾಲ ತೀರಿಸೋಕ್ಕೆ ಹೋಯ್ತು. ವ್ಯಾಪಾರಿ ಚಿತ್ರ ಮಾಡೋಕ್ಕೆ ಹೋಗಿ ಅಲ್ಲೂ ಅದೇ ಕತೆ. ವ್ಯಾಪಾರೀ ಚಿತ್ರ ಮಾಡೋದು ಅಷ್ಟು ಸುಲಭವಲ್ಲ. ಬಾಯ್ಯುಚ್ಚಿಕೊಂಡು ಕೆಲಸ ಮಾಡೋಣ. ನೀನೂ ಮಾಡು' ಎಂದು ಎದ್ದು ಹೋಗಿದ್ದ.
ಈ ಚಿತ್ರೀಕರಣದಲ್ಲಿ ನಡೆದೊಂದು ಘಟನೆ. ಮುಂಜಾನೆಯೇ ಹೊರಾಂಗಣ ಹೋಗಿದ್ದೆವು. ಚಿತ್ರದ ಕೈಮ್ಯಾಕ್ಸ್! ಅತಿ ಎತ್ತರದ ಕ್ರೇನ್ಗಳು ಇತ್ಯಾದಿ ಇದ್ದ ಒಂದು ಫ್ಯಾಕ್ಟರಿಯ ಲೊಕೇಷನ್ನು! ವಿಲನ್ಗಳು ಮಗುವೊಂದನ್ನು ಎಂದಿನಂತೆ ಅಪಹರಿಸಿ. ಎಂದಿನಂತೆ ಬಹಳ ಎತ್ತರದ ಕ್ರೇನೊಂದಕ್ಕೆ ನೇತು ಹಾಕಿದ್ದಾರೆ (ಮಗುವಿನ ಡಮ್ಮಿಯೊಂದನ್ನು ತೂಗಿಸಲಾಗಿತ್ತು). ಶಂಕರ ಅದನ್ನು ಹತ್ತಿ, 'ಮಗೂನ' ಬಿಡಿಸಿಕೊಂಡು ಬರಬೇಕು ಸರ್ಕಸ್ನಲ್ಲಾದರೋ ಅಂಥ ಹೈಟ್ನಲ್ಲಿ ಮಾಡುವ ಸಾಹಸಗಳಿಗೆ, ಕೆಳಗೆ net ಹಿಡೀತಾರೆ. ಇಲ್ಲೇನಿಲ್ಲ! ನಾನು ಪ್ರೊಟೆಸ್ಟ್ ಮಾಡಿದೆ- ಏನು ಹುಡುಗಾಟ ಆಡ್ತಿದಿರೋ? ನಾವೇನು ನಟರೋ, ಸರ್ಕಸ್ಸಿನವರೋ. ಸ್ಟಂಟ್ನವರೋ? ಹಣ ಉಳಿಸಬೇಕೂಂತಾ ಸ್ಪಂಟ್ನವರನ್ನು ಕರೆಸಿಲ್ವಾ?'
'ಇರಲಿ ಅಣ್ಣ. ಏನಾಗಲ್ಲ. ನೀನು ಹತ್ತಬೇಕಾಗಿಲ್ಲ... ನಾನು' ಅಂದ. 'ನಿನಗೂ ಬುದ್ಧಿಯಿಲ್ಲ. ಅದರ undue advantage ಇವರೆಲ್ಲ ತೊಗೋತಾರೆ. ಮೇಲಿಂದ ಬಿದ್ರೆ ಯಾರು ಹೊಣೆ? ಸಾಯಲೇಬೇಕಾದ್ರೆ ಯಾವುದಾದರೂ ಒಳ್ಳೇ ಕಾರಣಕ್ಕೆ ಸಾಯಬೇಕು. Eax ಕಾರಣಕ್ಕೋಸ್ಕರವಲ್ಲ!"
ಕೆಲ ನಿಮಿಷ ಎಲ್ಲ ಸ್ತಬ್ಧವಾಯಿತು. ಶಂಕರ್ ಕ್ರೇನ್ ಹತ್ತೇಬಿಟ್ಟ. ಐವತ್ತು ಆಡಿ vertical ಆಗಿ ಹತ್ತಿ, ಒಂದು ನೂರಡಿ ಹಾರಿಜಾಂಟಲ್ ಆಗಿ ಪ್ರಾಣಿಯಂತೆ ನಡೆದು. 'ಮಗೂನ' rescue ಮಾಡಿ, ಅದೇ ಮಾರ್ಗದಲ್ಲಿ ಮರಳಿ ಬರಬೇಕು. ಅರ್ಧದಾರಿ ಶಂಕರ ಕ್ರಮಿಸಿರಬೇಕು. ಎತ್ತರದ ಅರಿವಾಗಿ ತಲೆತಿರುಗಿದಂತಾಗಿ, ಕೈ ಬೆವೆತು ಮುಂದೂ ಹೋಗಲಾರ. ಹಿಂದೂ ಬರಲಾರದಾಗಿ ಕಣ್ಮುಚ್ಚಿಕೊಂಡ.
Hang on Shankar 'ಕಣ್ಮುಚ್ಚಿಕೊಂಡು ಇರು. ಎರಡು ನಿಮಿಷ ಹಾಗೇ ಇರು, ಕಣ್ಣೆರೆ. ಕೆಳಗಡೆ ನೋಡೋಕ್ಕೇ ಹೋಗೇಡ' ಎಂತೆಲ್ಲಾ ವ್ಯಾಖ್ಯಾನ ಮಾಡ್ತಿದ್ದೆ. ಹೇಗೋ 'ಮಗೂನ' ಕೆಳಕ್ಕೆ ಬಿಸಾಡಿದ. ಚಿತ್ರೀಕರಣ ನಿಂತಿತು. ಅವರಿಗೆ ಬೇಕಾದ್ದು ಸಿಕ್ಕಿತ್ತು. ಎಲ್ಲರಿಗೂ ಗೊತ್ತಿರುವಂತೆ, ಅನೇಕ ಬಾರಿ, ಎಲ್ಲಾ ಅರ್ಥಗಳಲ್ಲೂ, ಹತ್ತುವುದು ಒಮ್ಮೊಮ್ಮೆ ಸುಲಭ -ಇಳಿಯೋದಷ್ಟು ಸರಳವಲ್ಲ. ಶಂಕರನಿಗೆ ಮತ್ತದೇ 'attack' ಆಯಿತು. ಒಂದೆರಡು ಬಾರಿ ಕೈ-ಕಾಲು ಜಾರಿತು ಕೂಡ-ತಿರುಗಿ ಬರುವಂತಿಲ್ಲ, ಹಿಂಗಾಲಿನಿಂದಲೇ, ಕಾಣದೆಯೇ, ಒಂದು ಕಾಲು ಜಾರಿತು ಕೂಡ-ತಿರುಗಿ ಬರುವಂತಿಲ್ಲ. ಹಿಂಗಾಲಿನಿಂದಲೇ, ಕಾಣದೆಯೇ, ಒಂದು ಕಾಲು ಒಂದು ಕೈ, ಇನ್ನೊಂದು ಕಾಲು, ಇನ್ನೊಂದು ಕೈ ಹೀಗೇ ವಾಪಸಾಗಬೇಕು. ಪಕ್ಕದಲ್ಲೇ ಬಿದ್ದ iron rod ಒಂದನ್ನು ನಾನು ಕೈಗೆತ್ತಿ ನಿರ್ದೇಶಕ ಮತ್ತು ನಿರ್ಮಾಪಕರ ಹಿಂದೆ ಹೋಗಿ ನಿಂತೆ. ಕೋಪದಿಂದ ಕುದಿಯುತ್ತಿದ್ದೆ. ಅವನಿಗೇನಾದ್ರೂ ಆಯಿತು ಅಂದ್ರೆ, ನಿಮ್ಮಿಬ್ಬರ ತಲೆಯೊಡೆಯದೇ ಇರೋಲ್ಲ, ನೋಡ್ತೀರಿ', ಅಂತ ಅಂದ್ರೇನೋ!! it was all very tense! ಕೊನೆಗೂ ಶಂಕರ ನೆಲಕ್ಕಿಳಿದ. ನಾನು ರಾಡನ್ನು ನೆಲಕ್ಕೆ ಬಿಸುಡಿದೆ. ನಿರ್ಮಾಪಕ ನಿರ್ದೇಶಕರು ಅವನತ್ತ ಓಡಿದರು. ಮಾತಾಡುತ್ತಲೇ ಬಂದು, ನನ್ನ ಕ್ಷಮೆ ಕೇಳಿದರು. ಶಂಕರ ನಗುತ್ತಲೇ ಇದ್ದ. ನಾನಿಂದೂ ಅವರನ್ನು ಕ್ಷಮಿಸಿಲ್ಲ!!
ಚಿತ್ರ ಯಶಸ್ವಿಯಾಯಿತು. ಗಲ್ಲಾಪೆಟ್ಟಿಗೆಯಲ್ಲಿ ಚೆನ್ನಾಗಿ ಗಳಿಸಿತು! ಆದರೆ ಮಾರುಕಟ್ಟೆಯವರಿಗೆ ಕೇಳಿ? average ನಿರ್ಮಾಪಕನನ್ನು ಕೇಳಿ? ಲಾಸು! ಏನಂತೀರಿ? ಹೌದು, ನಂಬೋಕ್ಕೆ ಆಗಲ್ಲ ಅಲ್ಲ? ಡಿಸ್ಟ್ರಿಬ್ಯೂಟರ್ ಮೋಸ ಮಾಡಿದ! ಡಿಸ್ಟ್ರಿಬ್ಯೂಟರ್ ಕೇಳಿ, ಥಿಯೇಟರ್ನನವ ನಾಮ ಹಾಕ್ದ.
ಚಿತ್ರ ಯಶಸ್ವಿಯಾದ ಮೇಲೆ. ಕಲಾವಿದ-ತಂತ್ರಜ್ಞ, ಕಾರ್ಮಿಕರನ್ನು ಆಹ್ವಾನಿಸಿ, ಲಾಭದಲ್ಲಿ ಅವರೆಲ್ಲರಿಗೂ ಒಂದು ಸಣ್ಣ ಪಾಲು ಕೊಟ್ಟ ಅನೇಕ ನಿರ್ಮಾಪಕರು ಇದ್ದಾರಂತೆ! ನಾನು ಮಾತ್ರ ಭೇಟಿಯಾಗಿಲ್ಲವಷ್ಟೇ!!...
ಇನ್ನು ಕೆಲ ಚಿತ್ರಗಳಲ್ಲಿ ಅಣ್ಣ ತಮ್ಮಂದಿರಾಗಿ ನಟಿಸುವಾಗ ಅತಿ ಅತಿ ಭಾವುಕತೆಯ, super melodramatic ದೃಶ್ಯಗಳಲ್ಲಿ ಪಾಲ್ಗೊಳ್ಳಬೇಕಾಗುತ್ತಿತ್ತು. ಬಹಳ ಕೃತ್ರಿಮವೆಂದು ನಮಗನಿಸುವ ಸೀನುಗಳವು! ಅತ್ತು ಅತ್ತು ಬಿಕ್ಕಳಿಸಿ ತಜ್ಞ ಅಪ್ಪಿಕೊಳ್ಳುವ ದೃಶ್ಯಗಳಲ್ಲಿ ನಕ್ಕುನಕ್ಕು ಹಣ್ಣಾಗಿ ಅದೆಷ್ಟು ಸಾವಿರ footage ವ್ಯರ್ಥ ಮಾಡಿದ್ದೀವೋ! ನಿರ್ಮಾಪಕ ನಿರ್ದೇಶಕರು (ವಿಧಿಯಿಲ್ಲದೆಯೇ) ನಮ್ಮ ಜತೆ ನಕ್ಕು ನಲಿದು, 'ಮೋಜಿ'ನಲ್ಲಿ ಪಾಲ್ಗೊಂಡು ನಾಟಕವಾಡುತ್ತಿದ್ದರು. Sorry Sorry ಎಂದು ಹೇಳೋಕ್ಕೆ ಮರೀತಿಲಿಲ್ಲ!! ಅವರೆಲ್ಲರನ್ನು ಸ್ಮರಿಸುತ್ತಲೇ, ಈಗ ಮತ್ತೊಮ್ಮೆ Sorry ಇಂಥವುಗಳನ್ನು ಇನ್ನು ಮೇಲೆ ಬೇಡವೆಂದೇ ಸಹೋದರರಾಗಿ ಯಾವ ಚಿತ್ರದಲ್ಲೂ ನಟಿಸೋದು ಬೇಡ ಅನ್ನೋ ತೀರ್ಮಾನಕ್ಕೆ ಬಂದೆವು!! ವಿಪರ್ಯಾಸವೆಂದರೆ ನಮಗೆ ಹೀಗನಿಸುವ ಚಿತ್ರಗಳೇ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿ, ನಮಗೆ ಸೈ ಅನಿಸಿರುವ ಪಾತ್ರ-ಚಿತ್ರಗಳು ಗೋತಾ!
ನಮ್ಮಿಬ್ಬರ ಇಂಥ ಅನೇಕ (ಚಿತ್ರರಂಗಕ್ಕೆ ಹೊರತಾದರೆ) ಸಾಹಸಗಳಲ್ಲಿ ಸಹಚರರಾಗಿ ಬಂದ ಮಿತ್ರರೂ ದೂರ ಉಳಿಯುವಂತಾಯ್ತು! ಹಿರಿಯವನು eccentric, ಚಿಕ್ಕವ ಸರಿಯಾಗಿದ್ದ! ಅವನ ಜತೆ ಸೇರಿ... ಇವರಿಬ್ಬರೂ ಇದ್ದಲ್ಲಿ ಆಪತ್ತು ತಪ್ಪಿದ್ದಲ್ಲ ಅನ್ನೋ ತೀರ್ಮಾನಕ್ಕೆ ಬಂದ ಮಿತ್ರರು ಒಂದಾಗಿ, ನಮಗೆ ಹೆಸರಿಟ್ಟಿದ್ದು -ಅಪದ್ಭಾಂಧವರು ಎಂತಲೇ!!
ಸುನಿಲ್ಕುಮಾರ್ ದೇಸಾಯಿಯವರ 'ತರ್ಕ', ದಿ.ಪಿ. ನಂಜುಂಡಪ್ಪ ಅವರ 'ಸಿಬಿಐ ಶಂಕರ್', 'ಸಾಂಗ್ಲಿಯಾನ' (ಭಾಗ 1-2) ಚಿತ್ರಗಳ ಅಪೂರ್ವ ಯಶಸ್ಸಿನಿಂದ ಶಂಕರನ ಕೆರಿಯರ್ ಗ್ರಾಫ್ ಮೇಲಕ್ಕೇರಿದ್ದರೂ, ಚಿತ್ರರಂಗವನ್ನು ಸದಾಕಾಲ ಕಾಡುವ ಅನಿಶ್ಚಿತತೆ, ಅಭದ್ರತೆ, ಅಪ್ರವಾದಕತೆ. ಸೋಲು ಗೆಲುವುಗಳ ನಡುವೆ ಎಂದಿನಂತೆ ತೂಗುತ್ತಿತ್ತು. ಪಾದರಸದಂತೆ! ಚಿತ್ರವೊಂದು ಯಶಸ್ಸಾದರೆ ನಿರ್ಮಾಪಕ ಕೆಲಕಾಲ ವಿರಮಿಸಬಲ್ಲ, ವಿರಮಿಸಿ ಇನ್ನೊಂದು ಸಾಹಸಕ್ಕೆ ಕೈಹಾಕಬಲ್ಲ. ಚಿತ್ರದ ಗುಣಾತ್ಮಕತೆ ಉತ್ತಮವಿದ್ದೂ, ಸುಮಾರಾಗಿದ್ದೂ ಇಲ್ಲವೇ ಕೀಳಾಗಿದ್ದೂ ಗಲ್ಲಾಪೆಟ್ಟಿಗೆಯಲ್ಲಿ 'ಸೋಲುಂಟಾಯಿತೋ, ನಿರ್ಮಾಪಕ ಸಾಲಗಾರರನ್ನು ಮನೆಬಾಗಿಲಿನಿಂದ ದೂರವಿಡಲು, ಮತ್ತೊಂದು ಚಿತ್ರದ ದುಃಸಾಹಸಕ್ಕೆ ಕೈ ಹಾಕಲೇಬೇಕು- ಇದೊಂದು ಚಿತ್ರರಂಗದ ಅಲಿಖಿತ ಶಾಸನ! ಇದು ನೀರುಳ್ಳಿ-ಬೆಳ್ಳುಳ್ಳಿ ಮಾರಾಟ ಮಾಡುವ ನಿರ್ಮಾಪಕರಿಗೂ ಅಷ್ಟೇ ಸತ್ಯ. ಬುದ್ದಿಜೀವಿ ಸದಭಿರುಚಿಯ ಸದುದ್ದೇಶಿ ಕುಬೇರನಿಗೂ ಅಷ್ಟೇ ಪ್ರಸ್ತುತ. ಬಹುತೇಕವಾಗಿ ತನ್ನನ್ನು ಹಾಕಿ ಮಾಡಿದ ಚಿತ್ರ
ಗಲ್ಲಾಪೆಟ್ಟಿಗೆಯಲ್ಲಿ ಸೋತರೆ, ಚಿತ್ರದ ನಾಯಕನೇ ಅದರ ಸೋಲಿನ ಹೊಣೆ ಹೊರಬೇಕಾಗುತ್ತದೆ (ನಿರ್ಮಾಪಕ-ನಿರ್ದೇಶಕರ ಜತೆ), ಆ ಸಂದರ್ಭದಲ್ಲಿ ಅದೇ ಹೀರೋನನ್ನು ಹಾಕಿಕೊಂಡು ನಿರ್ಮಾಪಕ ಇನ್ನೊಂದು ಚಿತ್ರ ಮಾಡಲು ನಿರ್ಧರಿಸಿದರೆ, ಕಡಿಮೆ ಸಂಭಾವನೆಗೆ ಒಪ್ಪಿಕೊಂಡು ನಟನಾದವನು ವಿರಳವೇ. ವರ್ಷವೊಂದರಲ್ಲಿ ಸರಾಸರಿ ಐದಾರು ಚಿತ್ರಗಳಲ್ಲಿ ನಟಿಸುತ್ತಿದ್ದ ಶಂಕರ, ಚಿತ್ರಕತೆಗಳ ಕಡೆ 'ಅನಿವಾರ್ಯ' ಅಲಕ್ಷ್ಯ, ಅಸಡ್ಡೆ, ಉದಾಸೀನ ಮಾಡಿದ. ವ್ಯಾಪಾರದ ಟರ್ನ್ ಓವರ್ಗೆ ಚಿತ್ರವೊಂದನ್ನು ಕಡಿಮೆ ವೆಚ್ಚದಲ್ಲಿ ಮಾಡಿ ಮುಗಿಸೋದು- 'ಸುತ್ತೋದು' ಎಂಬ ಪದ ರಂಗದಲ್ಲಿ ಬಳಕೆಯಲ್ಲಿದೆ (ಚಿತ್ರಕತೆಯೆಡೆ ಎಲ್ಲ ಬಗೆಯ ಕಾಳಜಿ, ಜಾಗರೂಕತೆ ಇತ್ಯಾದಿಗಳನ್ನಿಟ್ಟೂ ಚಿತ್ರ ಯಶಸ್ವಿಯಾಗುತ್ತೆ ಅನ್ನೋದೇನೂ ಗ್ಯಾರಂಟಿ ಅಲ್ಲ!)
ಹಿನ್ನೋಟದಿಂದ ಇಂದು ಅನಿಸುತ್ತಿದೆ. 87 88 ರಿಂದಲೇ ಶಂಕರ ಬಹಳೇ restless ಆಗಿದ್ದ, ಅದೇನೋ ಅವಸರ, ರಭಸ, ತೀವ್ರತೆ, ಮಾಡೋಕ್ಕೆ ಎಷ್ಟೋ ಇದೆ. ಸಮಯವಿಲ್ಲ. ಚಿತ್ರೀಕರಣ ಮತ್ತು ನಾಟಕದ ಪ್ರದರ್ಶನಗಳ ನಡುವೆ ಸಮಯ ತೆಗೆದು ಎರಡು project ಗಳ ಹಿಂದೆ ಕೈ ತೊಳೆದು ಬಿದ್ದ.
ಮೊದಲನೆಯದು ನಂದಿಬೆಟ್ಟದಡಿಯಲ್ಲಿ ಮಕ್ಕಳ ಉದ್ಯಾನವನದ ನಿರ್ಮಾಣ. ವಿದೇಶಗಳಲ್ಲಿ ಮಕ್ಕಳಿಗೋಸ್ಕರವೇ ಎಂದು ಮಾಡಿದ ಅನೇಕಗಳನ್ನೂ ಅವುಗಳಲ್ಲಿ ಲಭ್ಯವಿರುವ ತರತರದ ಆಟ-ಮನರಂಜನೆ-ಮುದಗಳ ವಿಧಾನಗಳನ್ನು ನೋಡಿ ಬಂದ ಶಂಕರ ಅಂತಹುದೊಂದನ್ನು ನಿರ್ಮಿಸಬೇಕು ಅಂತ ಛಲ ಹೊಂದಿದ್ದ. ಮಕ್ಕಳಲ್ಲಿ ಸಾಹಸ, ನಿರ್ಭಯತೆ ಹುಟ್ಟಿಸುವ ಪ್ರಕಾರಗಳೂ ಈ ಕಲ್ಪನೆಯಲ್ಲಿ ಒಳಗೊಂಡಿದ್ದವು. ವಿದೇಶಿಯರಂತೆ ನಮ್ಮ ಜನ ಅಷ್ಟೊಂದು out-going ಅಲ್ಲ. ಸಿರಿವಂತರು ಇದಕ್ಕೆ ಅಪವಾದವಾಗಿದ್ದರೂ ಇತರ ವರ್ಗದವರಿಗೆ ಮನರಂಜನೆ ನೀಡಲು ಯಾವೊಂದು ವ್ಯವಸ್ಥೆಯೂ out-let ಇಲ್ಲ. ಕನಿಷ್ಟಪಕ್ಷ ಬೆಂಗಳೂರಿನ ಸುತ್ತಮುತ್ತಲಲ್ಲಿ ಇಂಥದೊಂದನ್ನು ಒದಗಿಸಬೇಕೆಂಬುದೇ ಶಂಕರನ ಆಶಯ.
ಬೆಂಗಳೂರಿಂದ ದೂರ ಆಗಲ್ಲವೇ? ಜನರಿಗೆ ಅಷ್ಟು ದೂರ ಹೋಗಿ ಬರಲು.....? ಎಂಬ ಪ್ರಶ್ನೆಗೆ ಉತ್ತರ ಸ್ಪಷ್ಟವೇ ಇತ್ತು. ಒಂದು ನಂದಿಬೆಟ್ಟವನ್ನು ಬೆಂಗಳೂರಿನ ಹತ್ತಿರ ತರಲಾಗೋದಿಲ್ಲ! ಇನ್ನೊಂದು ಬೆಂಗಳೂರಿನ ಸುತ್ತಮುತ್ತಲಿನ ನೆಲವನ್ನು ಯಾರಿಂದಾದರೂ ಕೊಳ್ಳಲಾಗುತ್ತದೆಯೇ? ಚಿನ್ನಕ್ಕಿಂತ ದುಬಾರಿ. ಒಂದೊಂದು ಚದರಡಿಗೆ ಕೊಡುವುದಕ್ಕಿಂತ ಒಂದೊಂದು ಎಕರೆಗೇ ಕೊಟ್ಟು ಕೊಂಡುಕೊಳ್ಳಬಹುದಲ್ಲ! ಬೆಂಗಳೂರಿನಿಂದ ತುಸು ದೂರ ಹೋಗಬೇಕಾಗಬಹುದು. ಅಷ್ಟೇತಾನೇ? ನಿಸರ್ಗ ನೀಡುವ ನೆಲಕ್ಕೆ ಅಷ್ಟಷ್ಟು ತೆತ್ತುವುದು, ಅನೈತಿಕ. ದುರಹಂಕಾರದ ಪರಮಾವಧಿ. (ಈ ಯೋಚನೆಯಲ್ಲೇ ಶಂಕರ 15 ಕಿ.ಮೀ. ದೂರದ
ಬೇಗೂರಿನಲ್ಲಿ ಮನೆ ಮಾಡಿದ್ದು) ನಗರಪಾಲಿಕೆ ನೀರಿಲ್ಲವೇ? ಬೋರು ತೋಡೋಣ. ಚರಂಡಿನೇ ಬೇಕಿಲ್ಲ, ಸೆಪ್ಟಿಕ್ ಟ್ಯಾಂಕ್ ತೋಡಿದರಾಯ್ತು. ಸುರಕ್ಷತೆ-ಅದ್ಯಾರಿಗಿದೆ? ಹಳ್ಳಿ-ಕುಗ್ರಾಮಗಳಲ್ಲಿ ಜನ ಬದುಕಿಲ್ಲವೇ? ನಾವೇ ಬದುಕಿಲ್ಲವೇ? ವರ್ಷಕ್ಕೊಮ್ಮೆ ಬಸ್ಸುಗಳಲ್ಲಿ ಪ್ರವಾಸ ಮಾಡ್ತಿರಲಿಲ್ಲವೇ, ಇದ್ದಲ್ಲೇ ವರ್ಷವಿಡೀ ಬಿದ್ದುಕೊಂಡು? ಹುಟ್ಟಾ ಕಾರು-ಬಂಗ್ಲೆ ಇರಲಿಲ್ಲವಲ್ಲ! ಗಾಂಧೀಜಿಯವರೇ ಅಂದಿಲ್ವಾ- back to the village... ನಂದಿಬೆಟ್ಟದಡಿಯಲ್ಲೇ ಜಮೀನು ಕೊಂಡಿದ್ದಾಯಿತು. ಅಲ್ಲಿ ಮಕ್ಕಳ ಭವ್ಯ ಆಟದ ಉದ್ಯಾನ, ಉಪಾಹಾರ ಗೃಹಗಳು. ಮಕ್ಕಳಿಗೆ ಮೋಜು ನೀಡಲು ಜೀವಂತೆ ಎರಡೆರಡು ಆನೆ. ಒಂಟೆ, ಕುದುರೆಗಳ ಸವಾರಿ. ಮುಹೂರ್ತ ನೋಡಿ, ಪೂಜೆ ಮಾಡಿಸಿದ್ದಾಯಿತು. ಸರ್ವೆ ಮಾಡಿಸಿ, ಯಾವ್ಯಾವ point ಗಳ ಮೂಲಕ ರೋಪ್ವೇ ಹಾಯ್ದುಹೋಗಬೇಕು, ಭದ್ರತೆಗೆ ವಿದ್ಯುಚ್ಛಕ್ತಿಯ ಬಳಕೆ ಎಷ್ಟಾಗಬಹುದು, power failure ಆದರೆ, ಪರ್ಯಾಯ ವ್ಯವಸ್ಥೆಗೆ ಏನೆಷ್ಟು ಮಾಡಬೇಕು, ನಂದಿಬೆಟ್ಟದ ಮೇಲೆ ರೋಪ್ ವೇ ತೊಟ್ಟಿಲುಗಳು ಯಾವ ಸ್ಥಳದಲ್ಲಿ ಬಂದು ಜನರನ್ನು ಇಳಿಸಿ ನಂದಿ ದರ್ಶನದ ನಂತರ ಮತ್ತೆ ಹತ್ತಿಸಬೇಕು. ಇವೆಲ್ಲವುಗಳ ಯೋಜನೆಯೂ ಮುಗಿಯಿತು. ಶಂಕರ ಎಲ್ಲೆಂದರಲ್ಲಿ ಓಡಾಡಿ project report ನ್ನು ಮಾಡಿ ಮುಗಿಸಿ ಹಣಕಾಸಿನ ನೆರವು ವ್ಯವಸ್ಥೆಗೋಸ್ಕರ ದೇಶದಲ್ಲೂ ವಿದೇಶಗಳಲ್ಲೂ ಹಣಕಾಸು ಸಂಸ್ಥೆಗಳಿಗೆ applications ಕಳಿಸಿದ. ಕಳಿಸಿ ಕೂರೋದೇ ಆಯಿತು. ದೊಡ್ಡ ಮೀನಿಗೊಂದು ಗಾಳ ಹಾಕಿ ಕಾದಂತೆ! ಏನೇನು ಮಾಡೋಕು, ದಿನವೊಂದಕ್ಕೆ
ಶಂಕರನಿಗೆ ಬಹಳ ಪ್ರಿಯವಾದ ಇನ್ನೊಂದು ಯೋಜನೆಯೆಂದರೆ Housing project ಒಂದು ವಿದೇಶಿ technology ಮೇಲೆ ಆಧಾರಿತ ಈ ಯೋಜನೆ ನಿಜಕ್ಕೂ ನಮ್ಮ ದೇಶಕ್ಕೆ ಹೇಳಿ ಮಾಡಿಸಿದಂತಿರುವಂಥದ್ದು! ಪ್ರಿಫ್ಯಾಬ್ರಿಕೇಟೆಡ್ ಶೀಟ್ಗಳ (prefabricated sheets) ಮೂಲಕ ಮನೆಗಳನ್ನು ಅತಿ ಶೀಘ್ರದಲ್ಲಿ ಕಟ್ಟಬಹುದಾದ ಈ ವಿಧಾನ ತೀರ ಹೊಸತಿನದ್ದು (1988), ಗಾಳಿ- ಮಳೆ, ಬೆಂಕಿ ಭೂಕಂಪ ನಿರೋಧಿ ಅಗ್ಗದ ಈ ಮನೆಗಳು ನಮ್ಮ ನಾಡು ದೇಶದ ಬಡವರಿಗೆ ದೊರಕುವಂತಾಗಬೇಕೆಂದು ಶಂಕರ ಖುದ್ದಾಗಿ ವಿದೇಶಕ್ಕೆ ಹೋಗಿ, ಒಂದು ಮಾದರಿ ಮನೆ ಕಟ್ಟಿ ತೋರಿಸಲು ಬೇಕಾದ ಸಾಮಾಗ್ರಿಯನ್ನು ಕೊಂಡುಕೊಂಡು, ವೆಚ್ಚ ಕಡಿಮೆ ಮಾಡಲೆಂದು ಹಡಗಿನ ಮೂಲಕ ಅವನ್ನು ರವಾನಿಸಿ, ಮರಳಿದ್ದ. ಹೌಸಿಂಗ್ ಬೋರ್ಡಿನವರು ಯಲಹಂಕದ ಅವರ ವ್ಯಾಪ್ತಿಯಲ್ಲಿ ಬರುವ ಸ್ಥಳದಲ್ಲಿ ಅಗ್ಗದ ಮನೆಗಳ ಮಾದರಿ ಮನೆಗಳನ್ನು ಕಟ್ಟಿ ತೋರಿಸಲು 63 ಜನರನ್ನು ಆಹ್ವಾನಿಸಿದ್ದರು. ಕೇವಲ ಹನ್ನೆರಡು ದಿನಗಳಲ್ಲಿ ಮನೆ ತಯಾರಾಯಿತು. ಆರೆಂಟು ಸೇರಿನ ಮನೆ. ಒಳಗೆ ಕಾಲಿಟ್ಟರೆ ಒಂದು ಹಾಲು, ನೇರಕ್ಕೆ ಒಂದು ಬೆಡ್ ರೂಮು: ಬಲಕ್ಕೆ ಪ್ಯಾಸೇಜ್. ಅದರ ಎಡಕ್ಕೆ ಅಡಿಗೆ ಮನೆ, ನೇರಕ್ಕೆ ಸ್ನಾನ ಗೃಹ, ಬಲಕ್ಕೆ ಕಕ್ಕಸ್ಸು, ಆಗ ಅದರ ವೆಚ್ಚ ರೂ. 42,000!!
ಜನತಾದಳದ ನಾಯಕರುಗಳಿಂದ ಮನೆಯನ್ನು ಉದ್ಘಾಟನೆ ಮಾಡಿಸಲಾಯಿತು. ನವೆಂಬರ್ 1, ರಾಜ್ಯೋತ್ಸವ ದಿನದಂದು, 1988. (1985ರ ಆಗಸ್ಟ್ 15 ಸ್ವಾತಂತ್ರ ದಿನೋತ್ಸವದಂದು ಶಂಕರನ ಸಂಕೇತವಾದ ಸ್ಟುಡಿಯೋ ಉದ್ಘಾಟಿಸಲ್ಪಟ್ಟಿತ್ತು) ಶೀಘ್ರದಲ್ಲೇ ಜನತಾ ಸರ್ಕಾರ ಅಧಿಕಾರ ಕಳಕೊಂಡು ಹಿನ್ನೆಲೆಯಲ್ಲಿ project ನ್ನು 'ಮುಂದೆ ದೂಡುವವರಾರು? (push forward) 'ಅಧಿಕಾರಕ್ಕೆ' ಹಿಂಬಾಗಿಲಿನಿಂದ ಬಂದಾತ ಕೋಟ್ಯಾಧೀಶನಾದನೆಂದು ಸುದ್ದಿಯಾದರೆ, ತನ್ನ ಜೇಬಿನಿಂದ ಮತ್ತು ಸಾಲಮಾಡಿ ಹಣ ಹಾಕಿದಾತ ಕನಿಷ್ಟಪಕ್ಷ ನಾಡು ದೇಶದ ಬಡವರ ಕುರಿತು ಯೋಚಿಸಿದಾತ- ಕಣ್ಣೀರಿಟ್ಟ-' ಈ ದೇಶದಲ್ಲಿ ಇಂಥದೇನನ್ನೂ ಮಾಡಹೋಗಬಾರದು. ನಮ್ಮ-ನಮ್ಮದು ನೋಡಿಕೊಂಡು ತೆಪ್ಪಗೆ ಬಿದ್ದಿರಬೇಕು..... ಯಾಕೆ ಪಟ್ಟೆನೋ ಇಷ್ಟೆಲ್ಲ ಕಷ್ಟವನ್ನ...
ಮಧ್ಯಮ ವರ್ಗದವರಾರೂ ಇಂಥ ಮನೆಯನ್ನು ಒಪ್ಪಿಕೊಳ್ಳುವ ಭ್ರಮೆ ಶಂಕರನಿಗೂ ಇರಲಿಲ್ಲ. ಆದರೆ ಪಟ್ಟಣ-ಹಳ್ಳಿಗಳೆನ್ನದೆ ತಲೆಯ ಮೇಲೊಂದು ಸೂರು ಬಯಸುವ ಬಡವರು, ಕೊಳಚೆ ಪ್ರದೇಶದಲ್ಲಿ ವಾಸಿಸುವ ನತದೃಷ್ಟರಿಗೆ ಇಂಥ ಮನೆಗಳೇ ಚೇತೋಹಾರಿ-ಕ್ರಾಂತಿಕಾರಿ ಪರಿಹಾರ ಎಂಬುದರಲ್ಲಿ ಶಂಕರನಿಗೆ ದೃಢ ನಂಬಿಕೆಯಿತ್ತು. ತಜ್ಞರು, ಬಲ್ಲವರು, ಪರಿಣಿತರು. ಇಂದಿಗೂ ಆ ಯೋಜನೆಯ ಯಶಸ್ವೀ ಅನುಷ್ಠಾನದ ಬಗ್ಗೆ ಆಶಾವಾದಿಗಳಾಗಿದ್ದಾರೆ. ಸಮರ್ಥನೆ ಮಾಡುತ್ತಾರೆ! ಪಟ್ಟಭದ್ರ ಹಿತಾಸಕ್ತಿಗಳೇ, ನಿಮಗೆ ವಂದನೆ.
ಆಶ್ಚರ್ಯವೆಂದರೆ, ವಿಪರ್ಯಾಸವೆಂದರೆ- ಏಳು ವರ್ಷಗಳ ನಂತರವೂ, ಆ ಮಾದರಿ ಮನೆ, ಶಂಕರನ ಸಾಹಸೀ ಪ್ರಯತ್ನಗಳ ಸಾಕಾರವಾಗಿ, ಅವನ ನಂಬಿಕೆಯ ಪ್ರತೀಕವಾಗಿ, ಇಂದಿಗೂ ತಲೆಯೆತ್ತಿ ನಿಂತಿದೆ..... ಅಕ್ಕಪಕ್ಕದ 62 ಮನೆಗಳ ಸ್ಥಿತಿಯನ್ನು ಕಂಡವರಿದ್ದರೆ, ಹೇಳುವರೇ? (ಬರೆಯುತ್ತಿದ್ದಂತೆ ಒಂದೇ ವರ್ಷದಲ್ಲಿ ದಾಂಡೇಲಿಯ 'ಆಶ್ರಯ' ಮನೆಗಳ ಕುಸಿತದ ಕುರಿತು ಸುದ್ದಿ, ದಿನಪತ್ರಿಕೆಯೊಂದರ ಸಂಪಾದಕೀಯ ಓದಲು ಸಿಕ್ಕಿದೆ!).
ಇನ್ನೊಂದು ದುರ್ದೈವವೆಂದರೆ, ದೇಶದಲ್ಲಿ ಆಗ ಖಾಸಗೀಕರಣ. ಉದಾರೀಕರಣ, ಜಾಗತೀಕರಣಗಳ ಅಲೆಯಿರಲಿಲ್ಲ! ಇದ್ದರೆ ಶಂಕರ ಸುಮ್ಮನೆ ಕೂರುತ್ತಿರಲಿಲ್ಲವೆನ್ನೋದು ಸಂಶಯಾತೀತ. ಗಾಳಕ್ಕೆ ಮೀನು ಕಚ್ಚುವುದಕ್ಕೆ ಕಾಯದೇ, ನೀರಿಗೆ ಹಾರೇ ಮೀನನ್ನೆತ್ತುತ್ತಿದ್ದನೇನೋ! ಯಾಕೆಂದರೆ ಒಂದು ಮಾತ್ರ ಸತ್ಯ. ಜನಕ್ಕೆ ಸರ್ಕಾರ ಕಟ್ಟಿಸಿದ ಮನೆಗಳಲ್ಲಿ ಎಷ್ಟು ನಂಬಿಕೆ ಇದೆಯೋ ಅಷ್ಟೇ ವಿಶ್ವಾಸ ಸರ್ಕಾರದ ಆದೇಶದ ಮೇರೆಗೆ ಕಟ್ಟಲ್ಪಟ್ಟ ಮನೆಗಳ ಮೇಲಿದೆ......
ಹೆಜ್ಜೆ ಹೆಜ್ಜೆಗೂ ಅಡಚಣೆ - ಅಡ್ಡಿ, ಎಲ್ಲಕ್ಕೂ ಅಭಾವ. ರೋಸಿ, ಬೇಸರಿಸಿ ಸುಮ್ಮನಾದ ಶಂಕರ, ಇಂಥ ಕನಸುಗಳು ನನಸಾದರೆ ಹೊಗಳುಭಟ್ಟರಿಗೆ ಹೇಗೆ
ಕೊರತೆ ಇರುವುದಿಲ್ಲವೋ, ಕೇಳರಿಯದನ್ನು ಛಲಗಾರ ಸಾಹಸಿಗನೊಬ್ಬ ಸಾಧಿಸಲಾಗದೇ ವಿಳಂಬವಾದಾಗ. ಹಿಂದಿನಿಂದಲೇ ಮುಸಿಮುಸಿ ನಕ್ಕು, ಸಿನಿಕತನದಲ್ಲೇ ಸಮಾಧಾನಪಟ್ಟು ಕೊಳ್ಳುವ ತೆಗಳುಗಳ್ಳರೂ ದುರ್ಲಭರಲ್ಲ! ವಿಷಣ್ಣನಾಗಿ ಬಾರೊಂದರ ಮೂಲೆಯ ನನ್ನ ಹಕ್ಕಿನ ಸ್ಥಳದಲ್ಲಿ ಕೂತ ಶಂಕರನನ್ನು ಒಂದು ದಿನ ಸಂಧಿಸಿದೆ.
ಸಂಭಾವ್ಯ ಪ್ರಶ್ನೆಗಳು ಮತ್ತು ಉತ್ತರ
೧. ಶಂಕರರು ನಿರ್ದೇಶಿಸಿದ ಪ್ರಮುಖ ಸಿನಿಮಾಗಳು
ಉತ್ತರ : ‘ಮಿಂಚಿನ ಓಟ’** ಮತ್ತು **‘ಆಕ್ಸಿಡೆಂಟ್’**. ಈ ಎರಡೂ ಚಿತ್ರಗಳಿಗೆ ಒಟ್ಟಾಗಿ **ಹದಿನೈದು ರಾಜ್ಯ ಪ್ರಶಸ್ತಿಗಳು ಬಂದಿದ್ದವು.
೨. ಶಂಕರ ಕಲಾತ್ಮಕ ಚಿತ್ರಗಳ ಬಗೆಗೆ ಸಿಡಿದೇಳಲು ಕಾರಣವೇನು?
ಉತ್ತರ: ಕಲಾತ್ಮಕ ಚಿತ್ರಗಳಿಂದ ಸಬ್ಸಿಡಿ ಮತ್ತು ಬ್ಯಾಂಕ್ ಸಾಲ ತೀರಿಸುವುದಷ್ಟೇ ಆಗಿ, ವ್ಯಾಪಾರಿಕವಾಗಿ ಯಶಸ್ಸು ಸಿಗದ ಕಾರಣ ಶಂಕರರು ಕಲಾತ್ಮಕ ಚಿತ್ರಗಳ ಬಗ್ಗೆ ಸಿಡಿದೇಳಿದರು.
೩. ‘ಜೀವಕ್ಕೆ ಜೀವ’ ಚಿತ್ರ ಯಶಸ್ಸು ಕಾಣಲು ಕಾರಣವೇನು? ವಿವರಿಸಿ
‘ಜೀವಕ್ಕೆ ಜೀವ’ ಚಿತ್ರವು **ವ್ಯಾಪಾರಿಕವಾಗಿ ಯಶಸ್ವಿಯಾದ ಚಿತ್ರ**ವಾಗಿತ್ತು. ಈ ಚಿತ್ರವನ್ನು ಕ್ಯಾಮೆರಾಮನ್ ಆಗಿ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದ **ಶ್ರೀಕಾಂತ್** ಅವರು ನಿರ್ಮಿಸಿದ್ದರು. ಪಕ್ಕಾ ಮಸಾಲಾ ಚಿತ್ರಗಳ ನಿರ್ದೇಶಕರಾಗಿ ಹೆಸರು ಮಾಡಿದ್ದ **ಕೆ.ಎಸ್.ಆರ್. ದಾಸ್** ಅವರು ಚಿತ್ರವನ್ನು ನಿರ್ದೇಶಿಸಿದ್ದರು.
ಚಿತ್ರದಲ್ಲಿ ಜನರಿಗೆ ಇಷ್ಟವಾಗುವ **ಮನರಂಜನಾತ್ಮಕ ಮತ್ತು ಸಾಹಸಮಯ ಅಂಶಗಳು** ಇದ್ದವು. ಅಣ್ಣ-ತಮ್ಮಂದಿರಾದ ಅನಂತನಾಗ್ ಮತ್ತು ಶಂಕರರು ಚಿತ್ರದಲ್ಲಿ ಅಭಿನಯಿಸಿದ್ದರು. ವಿಶೇಷವಾಗಿ ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಶಂಕರರು ಎತ್ತರದ ಕ್ರೇನ್ ಹತ್ತಿ ಮಗುವನ್ನು ರಕ್ಷಿಸುವ ಸಾಹಸ ದೃಶ್ಯದಲ್ಲಿ ಅಭಿನಯಿಸಿದರು. ಈ ದೃಶ್ಯವು ಚಿತ್ರಕ್ಕೆ ವಿಶೇಷ ಆಕರ್ಷಣೆಯನ್ನು ನೀಡಿತು.
ಚಿತ್ರವು ಉತ್ತಮವಾಗಿ ನಿರ್ಮಾಣಗೊಂಡು, ಪ್ರೇಕ್ಷಕರಿಗೆ ಬೇಕಾದ **ಮಸಾಲಾ, ಸಾಹಸ ಮತ್ತು ಮನರಂಜನೆಯ ಅಂಶಗಳನ್ನು** ಹೊಂದಿದ್ದರಿಂದ ಗಲ್ಲಾಪೆಟ್ಟಿಗೆಯಲ್ಲಿ ಚೆನ್ನಾಗಿ ಗಳಿಸಿತು. ಆದರೆ ಚಿತ್ರದ ಯಶಸ್ಸಿನ ಲಾಭವು ನಿರ್ಮಾಪಕರಿಗೆ ಸಂಪೂರ್ಣವಾಗಿ ದೊರೆಯಲಿಲ್ಲ. ವಿತರಕರ ಮೋಸ ಮತ್ತು ಚಿತ್ರಮಂದಿರದ ಲೆಕ್ಕಾಚಾರಗಳಿಂದ ನಿರ್ಮಾಪಕರಿಗೆ ನಿರೀಕ್ಷಿತ ಲಾಭ ಸಿಗಲಿಲ್ಲ.
ಹೀಗಾಗಿ **‘ಜೀವಕ್ಕೆ ಜೀವ’ ಚಿತ್ರವು ಪ್ರೇಕ್ಷಕರ ಮೆಚ್ಚುಗೆ ಮತ್ತು ಗಲ್ಲಾಪೆಟ್ಟಿಗೆಯ ಗಳಿಕೆಯ ದೃಷ್ಟಿಯಿಂದ ಯಶಸ್ವಿಯಾದರೂ, ನಿರ್ಮಾಪಕರಿಗೆ ಮಾತ್ರ ಪೂರ್ಣ ಲಾಭ ದೊರೆಯದ ಚಿತ್ರವಾಗಿತ್ತು.**
೪. ‘ಜೀವಕ್ಕೆ ಜೀವ’ ಚಿತ್ರದ ಕ್ಲೈಮ್ಯಾಕ್ಸ್ ಅನ್ನು ಚಿತ್ರೀಕರಿಸುವಲ್ಲಿ ನಡೆದ ಘಟನೆಯನ್ನು ವಿವರಿಸಿ
‘ಜೀವಕ್ಕೆ ಜೀವ’ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ಒಂದು ಅಪಾಯಕಾರಿ ಘಟನೆ ನಡೆಯಿತು. ವಿಲನ್ಗಳು ಮಗುವನ್ನು ಅಪಹರಿಸಿ, ಎತ್ತರದ ಕ್ರೇನ್ಗೆ ನೇತುಹಾಕುವ ದೃಶ್ಯವನ್ನು ಚಿತ್ರೀಕರಿಸಬೇಕಾಗಿತ್ತು. ಶಂಕರರು ಕ್ರೇನ್ ಹತ್ತಿ ಮಗುವನ್ನು ರಕ್ಷಿಸುವ ಸಾಹಸ ಮಾಡಬೇಕಾಗಿತ್ತು.
ಅನಂತನಾಗ್ ಈ ಅಪಾಯಕಾರಿ ಸಾಹಸಕ್ಕೆ ವಿರೋಧ ವ್ಯಕ್ತಪಡಿಸಿದರು. ಆದರೆ ಶಂಕರರು ತಾನೇ ಮಾಡುವುದಾಗಿ ಹೇಳಿ ಸುಮಾರು **ಐವತ್ತು ಅಡಿ ಎತ್ತರಕ್ಕೆ ಕ್ರೇನ್ ಹತ್ತಿ, ನೂರು ಅಡಿ ಅಡ್ಡವಾಗಿ ನಡೆದು** ಮಗುವನ್ನು ರಕ್ಷಿಸಿದರು. ಹಿಂದಿರುಗುವಾಗ ಎತ್ತರದ ಭಯದಿಂದ ಅವರಿಗೆ ತಲೆತಿರುಗಿ, ಕೈ-ಕಾಲು ಬೆವರಿ ಮುಂದೆ ಹೋಗಲಾಗದೆ ಕಣ್ಣು ಮುಚ್ಚಿಕೊಂಡರು.
ಅನಂತನಾಗ್ ಅವರಿಗೆ ಧೈರ್ಯ ಹೇಳುತ್ತಾ ಕೆಳಗೆ ನೋಡಬಾರದೆಂದು ತಿಳಿಸಿದರು. ಶಂಕರರು ಹೇಗೋ ಧೈರ್ಯದಿಂದ ಹಿಂದಿರುಗಿ ನೆಲಕ್ಕಿಳಿದರು. ಈ ಸಂದರ್ಭದಲ್ಲಿ ಅನಂತನಾಗ್ ತುಂಬಾ ಆತಂಕಗೊಂಡಿದ್ದರು. ಶಂಕರರಿಗೆ ಏನಾದರೂ ಅಪಾಯವಾದರೆ ನಿರ್ದೇಶಕ ಮತ್ತು ನಿರ್ಮಾಪಕರನ್ನು ಪ್ರಶ್ನಿಸಬೇಕೆಂಬಷ್ಟು ಕೋಪಗೊಂಡಿದ್ದರು. ಕೊನೆಗೆ ಶಂಕರರು ಸುರಕ್ಷಿತವಾಗಿ ನೆಲಕ್ಕಿಳಿದಾಗ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟರು.
೫. ಶಂಕರರು ತೆಗೆದುಕೊಂಡ ಎರಡು ಪ್ರಾಜೆಕ್ಟ್ಗಳು ಯಾವುವು? ವಿವರಿಸಿ
ಶಂಕರರು ಸಮಾಜದ ಒಳಿತಿಗಾಗಿ ಎರಡು ಮಹತ್ವದ ಯೋಜನೆಗಳನ್ನು ಕೈಗೊಂಡಿದ್ದರು. ಅವು:
೧. ಮಕ್ಕಳ ಉದ್ಯಾನವನ:
ನಂದಿಬೆಟ್ಟದ ಕೆಳಭಾಗದಲ್ಲಿ ಮಕ್ಕಳಿಗಾಗಿ ಭವ್ಯವಾದ ಉದ್ಯಾನವನ ನಿರ್ಮಿಸಲು ಶಂಕರರು ಯೋಜಿಸಿದ್ದರು. ಮಕ್ಕಳಲ್ಲಿ ಸಾಹಸ ಮತ್ತು ನಿರ್ಭಯತೆಯನ್ನು ಬೆಳೆಸುವುದು ಇದರ ಉದ್ದೇಶವಾಗಿತ್ತು. ಉದ್ಯಾನವನದಲ್ಲಿ ವಿವಿಧ ಆಟಗಳು, ಉಪಾಹಾರ ಗೃಹ, ಆನೆ, ಒಂಟೆ ಮತ್ತು ಕುದುರೆ ಸವಾರಿ ಹಾಗೂ ನಂದಿಬೆಟ್ಟಕ್ಕೆ ರೋಪ್ವೇ ನಿರ್ಮಿಸುವ ಯೋಜನೆ ಹೊಂದಿದ್ದರು. ಪ್ರಾಜೆಕ್ಟ್ ವರದಿಯನ್ನು ಸಿದ್ಧಪಡಿಸಿ ಹಣಕಾಸಿನ ನೆರವಿಗಾಗಿ ಅರ್ಜಿಗಳನ್ನು ಸಲ್ಲಿಸಿದ್ದರು.
೨. ಅಗ್ಗದ ವಸತಿ ಯೋಜನೆ:
ಬಡವರಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಹಾಗೂ ಸುರಕ್ಷಿತ ಮನೆಗಳನ್ನು ನಿರ್ಮಿಸಿಕೊಡುವುದು ಶಂಕರರ ಮತ್ತೊಂದು ಪ್ರಮುಖ ಯೋಜನೆಯಾಗಿತ್ತು. ವಿದೇಶಿ ತಂತ್ರಜ್ಞಾನ ಬಳಸಿ ಪ್ರಿಫ್ಯಾಬ್ರಿಕೇಟೆಡ್ ಶೀಟ್ಗಳಿಂದ ಮನೆಗಳನ್ನು ನಿರ್ಮಿಸಲು ಪ್ರಯತ್ನಿಸಿದರು. ಇಂತಹ ಮನೆಗಳು ಗಾಳಿ, ಮಳೆ, ಬೆಂಕಿ ಮತ್ತು ಭೂಕಂಪವನ್ನು ತಡೆದುಕೊಳ್ಳುವಂತಿದ್ದವು. ಯಲಹಂಕದಲ್ಲಿ ಕೇವಲ **ಹನ್ನೆರಡು ದಿನಗಳಲ್ಲಿ ಮಾದರಿ ಮನೆಯೊಂದನ್ನು** ನಿರ್ಮಿಸಲಾಯಿತು. ಇದರ ವೆಚ್ಚ ಸುಮಾರು **ರೂ.42,000** ಆಗಿತ್ತು.
ಹೀಗೆ, ಶಂಕರರ ಈ ಎರಡು ಯೋಜನೆಗಳು ಅವರ **ಸಾಹಸ, ಸಮಾಜಮುಖಿ ಚಿಂತನೆ ಮತ್ತು ಬಡವರ ಬಗೆಗಿನ ಕಾಳಜಿಯನ್ನು** ತೋರಿಸುತ್ತವೆ.
೬. ಹೆಜ್ಜೆ ಹೆಜ್ಜೆಗೂ ಅಡಚಣೆಗೊಂಡ ಶಂಕರ ಬೇಸರಿಸಲು ಕಾರಣವೇನು? ಪಾಠದ ಹಿನ್ನೆಲೆಯಲ್ಲಿ ವಿವರಿಸಿ
ಶಂಕರರು ಸಮಾಜದ ಒಳಿತಿಗಾಗಿ ಹಲವು ಮಹತ್ವದ ಕನಸುಗಳನ್ನು ಕಂಡಿದ್ದರು. ನಂದಿಬೆಟ್ಟದ ಕೆಳಭಾಗದಲ್ಲಿ **ಮಕ್ಕಳ ಉದ್ಯಾನವನ** ನಿರ್ಮಿಸುವುದು ಮತ್ತು ಬಡವರಿಗಾಗಿ **ಅಗ್ಗದ ವಸತಿ ಯೋಜನೆ** ಕೈಗೊಳ್ಳುವುದು ಅವರ ಪ್ರಮುಖ ಯೋಜನೆಗಳಾಗಿದ್ದವು. ಈ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಅವರು ಬಹಳ ಶ್ರಮಿಸಿದ್ದರು.
ಮಕ್ಕಳ ಉದ್ಯಾನವನಕ್ಕಾಗಿ ಜಮೀನು ಖರೀದಿಸಿ, ಯೋಜನೆ ರೂಪಿಸಿ, ರೋಪ್ವೇ, ಆಟದ ವ್ಯವಸ್ಥೆ, ಉಪಾಹಾರ ಗೃಹ ಮುಂತಾದವುಗಳ ಬಗ್ಗೆ ಸಂಪೂರ್ಣ ಯೋಜನೆ ಸಿದ್ಧಪಡಿಸಿದ್ದರು. ಹಣಕಾಸಿನ ನೆರವಿಗಾಗಿ ದೇಶ-ವಿದೇಶಗಳ ಹಣಕಾಸು ಸಂಸ್ಥೆಗಳಿಗೆ ಅರ್ಜಿಗಳನ್ನು ಕಳುಹಿಸಿದ್ದರು. ಆದರೆ ಅಗತ್ಯವಾದ ಹಣಕಾಸಿನ ನೆರವು ದೊರೆಯಲಿಲ್ಲ.
ಅದೇ ರೀತಿ, ಬಡವರಿಗಾಗಿ ಕಡಿಮೆ ವೆಚ್ಚದಲ್ಲಿ ಸುರಕ್ಷಿತ ಮನೆಗಳನ್ನು ನಿರ್ಮಿಸುವ ವಸತಿ ಯೋಜನೆಯನ್ನೂ ಶಂಕರರು ಕೈಗೊಂಡಿದ್ದರು. ವಿದೇಶದಿಂದ ತಂತ್ರಜ್ಞಾನ ಮತ್ತು ಸಾಮಗ್ರಿಗಳನ್ನು ತಂದು ಯಲಹಂಕದಲ್ಲಿ ಮಾದರಿ ಮನೆಯನ್ನು ಕೇವಲ ಹನ್ನೆರಡು ದಿನಗಳಲ್ಲಿ ನಿರ್ಮಿಸಿದರು. ಆದರೆ ಸರ್ಕಾರ ಬದಲಾದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಮುಂದುವರಿಸುವವರು ಯಾರೂ ಇರಲಿಲ್ಲ.
ಹೀಗೆ ಶಂಕರರು **ಹಣಕಾಸಿನ ಕೊರತೆ, ಸರ್ಕಾರದ ಬದಲಾವಣೆ, ಆಡಳಿತಾತ್ಮಕ ಅಡಚಣೆ ಮತ್ತು ಸಹಕಾರದ ಕೊರತೆ** ಮುಂತಾದ ಅನೇಕ ಸಮಸ್ಯೆಗಳನ್ನು ಎದುರಿಸಿದರು. ತಮ್ಮ ಸಮಯ, ಹಣ ಮತ್ತು ಶ್ರಮವನ್ನು ವ್ಯಯಿಸಿ ಪ್ರಾಮಾಣಿಕವಾಗಿ ಪ್ರಯತ್ನಿಸಿದರೂ ಯೋಜನೆಗಳು ಮುಂದುವರಿಯದೆ ಹೋದವು. ಆದ್ದರಿಂದ **ಹೆಜ್ಜೆ ಹೆಜ್ಜೆಗೂ ಅಡಚಣೆ ಎದುರಾದಾಗ ಶಂಕರರು ರೋಸಿ, ಬೇಸರಿಸಿ ಕೊನೆಗೆ ಸುಮ್ಮನಾದರು.**
೭. ಶಂಕರರ ಮೊದಲನೆಯ ಪ್ರಾಜೆಕ್ಟ್ ಅನ್ನು ಕುರಿತು ಬರೆಯಿರಿ
ಶಂಕರರ ಮೊದಲನೆಯ ಪ್ರಾಜೆಕ್ಟ್ **ನಂದಿಬೆಟ್ಟದಡಿಯಲ್ಲಿ ಮಕ್ಕಳ ಉದ್ಯಾನವನ ನಿರ್ಮಿಸುವುದು**. ವಿದೇಶಗಳಲ್ಲಿ ಮಕ್ಕಳಿಗಾಗಿ ನಿರ್ಮಿಸಿರುವ ವಿವಿಧ ಆಟ-ಮನರಂಜನಾ ಉದ್ಯಾನಗಳನ್ನು ನೋಡಿ ಪ್ರೇರಿತರಾದ ಶಂಕರರು, ನಮ್ಮ ದೇಶದ ಮಕ್ಕಳಿಗೂ ಇಂತಹ ಸಾಹಸಮಯ ಹಾಗೂ ಮನರಂಜನಾತ್ಮಕ ಉದ್ಯಾನವನವೊಂದನ್ನು ನಿರ್ಮಿಸಬೇಕೆಂದು ಸಂಕಲ್ಪಿಸಿದ್ದರು. ಮಕ್ಕಳಲ್ಲಿ **ಸಾಹಸ, ಧೈರ್ಯ ಮತ್ತು ನಿರ್ಭಯತೆಯನ್ನು ಬೆಳೆಸುವುದು** ಈ ಯೋಜನೆಯ ಮುಖ್ಯ ಉದ್ದೇಶವಾಗಿತ್ತು.
ಬೆಂಗಳೂರಿನ ಸುತ್ತಮುತ್ತ ಇಂತಹ ಉದ್ಯಾನವನಕ್ಕೆ ಸೂಕ್ತವಾದ ಸ್ಥಳವನ್ನು ಹುಡುಕಿ, **ನಂದಿಬೆಟ್ಟದ ಕೆಳಭಾಗದಲ್ಲಿ ಜಮೀನು ಖರೀದಿಸಿದರು**. ಅಲ್ಲಿ ಮಕ್ಕಳಿಗಾಗಿ ಭವ್ಯವಾದ ಆಟದ ಉದ್ಯಾನ, ಉಪಾಹಾರ ಗೃಹ ಹಾಗೂ ಆನೆ, ಒಂಟೆ, ಕುದುರೆ ಸವಾರಿಯಂತಹ ಮನರಂಜನಾ ವ್ಯವಸ್ಥೆಗಳನ್ನು ಕಲ್ಪಿಸಿದ್ದರು. ನಂದಿಬೆಟ್ಟಕ್ಕೆ **ರೋಪ್ವೇ** ನಿರ್ಮಿಸುವ ಯೋಜನೆಯನ್ನೂ ರೂಪಿಸಿದ್ದರು. ರೋಪ್ವೇಯ ಮಾರ್ಗ, ಸುರಕ್ಷತಾ ವ್ಯವಸ್ಥೆ, ವಿದ್ಯುತ್ ಬಳಕೆ ಹಾಗೂ ವಿದ್ಯುತ್ ವ್ಯತ್ಯಯವಾದಾಗ ಪರ್ಯಾಯ ವ್ಯವಸ್ಥೆ ಮುಂತಾದವುಗಳನ್ನೂ ಯೋಜಿಸಿದ್ದರು.
ಶಂಕರರು ಯೋಜನೆಯ **ಪ್ರಾಜೆಕ್ಟ್ ವರದಿಯನ್ನು ಸಿದ್ಧಪಡಿಸಿ**, ಹಣಕಾಸಿನ ನೆರವಿಗಾಗಿ ದೇಶ-ವಿದೇಶಗಳ ವಿವಿಧ ಹಣಕಾಸು ಸಂಸ್ಥೆಗಳಿಗೆ ಅರ್ಜಿಗಳನ್ನು ಕಳುಹಿಸಿದರು. ಆದರೆ ಅಗತ್ಯವಾದ ಹಣಕಾಸಿನ ನೆರವು ದೊರೆಯದೆ ಯೋಜನೆ ಮುಂದುವರಿಯಲಿಲ್ಲ. ಹೀಗೆ ಶಂಕರರ ಮಹತ್ವಾಕಾಂಕ್ಷೆಯ ಮಕ್ಕಳ ಉದ್ಯಾನವನದ ಕನಸು **ಅಡಚಣೆಗಳಿಂದಾಗಿ ನನಸಾಗದೆ ಉಳಿಯಿತು
೮. ಶಂಕರರಿಗೆ ಪ್ರಿಯವಾದ ಯೋಜನೆ ಯಾವುದು? ವಿವರಿಸಿ
ಶಂಕರರಿಗೆ ಪ್ರಿಯವಾದ ಯೋಜನೆ **ಬಡವರಿಗಾಗಿ ಅಗ್ಗದ ವಸತಿ ಯೋಜನೆ**. ವಿದೇಶಿ ತಂತ್ರಜ್ಞಾನವನ್ನು ಬಳಸಿ ಕಡಿಮೆ ವೆಚ್ಚದಲ್ಲಿ, ಗಾಳಿ, ಮಳೆ, ಬೆಂಕಿ ಮತ್ತು ಭೂಕಂಪವನ್ನು ತಡೆದುಕೊಳ್ಳುವ ಮನೆಗಳನ್ನು ನಿರ್ಮಿಸುವುದು ಈ ಯೋಜನೆಯ ಉದ್ದೇಶವಾಗಿತ್ತು.
ಶಂಕರರು ವಿದೇಶಕ್ಕೆ ತೆರಳಿ ಈ ತಂತ್ರಜ್ಞಾನದ ಮಾದರಿ ಮನೆ ನಿರ್ಮಿಸಲು ಬೇಕಾದ ಸಾಮಗ್ರಿಗಳನ್ನು ಖರೀದಿಸಿ ತಂದರು. ಯಲಹಂಕದಲ್ಲಿ **ಕೇವಲ ಹನ್ನೆರಡು ದಿನಗಳಲ್ಲಿ ಒಂದು ಮಾದರಿ ಮನೆ** ನಿರ್ಮಿಸಲಾಯಿತು. ಆ ಮನೆಯ ನಿರ್ಮಾಣ ವೆಚ್ಚ ಸುಮಾರು **ರೂ. 42,000** ಆಗಿತ್ತು.
ಬಡವರು ಮತ್ತು ಕೊಳಚೆ ಪ್ರದೇಶಗಳಲ್ಲಿ ವಾಸಿಸುವವರಿಗೆ ಕಡಿಮೆ ವೆಚ್ಚದಲ್ಲಿ ಸುರಕ್ಷಿತವಾದ ಮನೆಗಳನ್ನು ಒದಗಿಸಬೇಕು ಎಂಬುದು ಶಂಕರರ ಆಶಯವಾಗಿತ್ತು. ಆದರೆ ಸರ್ಕಾರ ಬದಲಾದ ಕಾರಣ ಯೋಜನೆಗೆ ಮುಂದುವರಿಕೆ ಸಿಗದೆ ಅವರ ಪ್ರಯತ್ನ ವಿಫಲವಾಯಿತು. ಆದರೂ ಶಂಕರರ ಈ ಯೋಜನೆ **ಬಡವರ ಬಗ್ಗೆ ಅವರ ಕಾಳಜಿ, ಸಮಾಜಮುಖಿ ಚಿಂತನೆ ಮತ್ತು ಸಾಹಸ ಮನೋಭಾವವನ್ನು** ತೋರಿಸುತ್ತದೆ.
೯. ಶಂಕರರಿಗೆ ಪ್ರಿಯವಾದ ಯೋಜನೆ ಯಾವುದು? ವಿವರಿಸಿ
ಶಂಕರರಿಗೆ ಬಹಳ ಪ್ರಿಯವಾದ ಯೋಜನೆ **ಬಡವರಿಗಾಗಿ ಅಗ್ಗದ ವಸತಿ ಯೋಜನೆ**. ಬಡವರು ಮತ್ತು ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ನತದೃಷ್ಟರಿಗೆ ಕಡಿಮೆ ವೆಚ್ಚದಲ್ಲಿ ಉತ್ತಮವಾದ ಮನೆಗಳನ್ನು ಒದಗಿಸಬೇಕು ಎಂಬುದು ಶಂಕರರ ಆಶಯವಾಗಿತ್ತು.
ಈ ಯೋಜನೆಗಾಗಿ ಶಂಕರರು ವಿದೇಶಕ್ಕೆ ಹೋಗಿ, ಅಲ್ಲಿನ **ಹೊಸ ತಂತ್ರಜ್ಞಾನವನ್ನು** ಅಧ್ಯಯನ ಮಾಡಿದರು. ಪ್ರಿಫ್ಯಾಬ್ರಿಕೇಟೆಡ್ ಶೀಟ್ಗಳ ಮೂಲಕ ಅತಿ ಶೀಘ್ರವಾಗಿ ಮನೆಗಳನ್ನು ನಿರ್ಮಿಸುವ ವಿಧಾನವನ್ನು ಅಳವಡಿಸಿಕೊಳ್ಳಲು ಮುಂದಾದರು. ಈ ಮನೆಗಳು **ಗಾಳಿ, ಮಳೆ, ಬೆಂಕಿ ಮತ್ತು ಭೂಕಂಪ ನಿರೋಧಕವಾಗಿದ್ದು, ಕಡಿಮೆ ವೆಚ್ಚದಲ್ಲಿ ನಿರ್ಮಿಸಬಹುದಾಗಿದ್ದವು.**
ಶಂಕರರು ವಿದೇಶದಿಂದ ಮಾದರಿ ಮನೆ ನಿರ್ಮಿಸಲು ಬೇಕಾದ ಸಾಮಗ್ರಿಗಳನ್ನು ಖರೀದಿಸಿ, ವೆಚ್ಚ ಕಡಿಮೆ ಮಾಡುವ ಉದ್ದೇಶದಿಂದ ಹಡಗಿನ ಮೂಲಕ ಭಾರತಕ್ಕೆ ತಂದರು. ಯಲಹಂಕದಲ್ಲಿ ಒಂದು ಮಾದರಿ ಮನೆಯನ್ನು ನಿರ್ಮಿಸಲು ಮುಂದಾದಾಗ **ಕೇವಲ ಹನ್ನೆರಡು ದಿನಗಳಲ್ಲಿ** ಮನೆ ಸಿದ್ಧವಾಯಿತು. ಆ ಮನೆಯಲ್ಲಿ ಹಾಲ್, ಮಲಗುವ ಕೋಣೆ, ಅಡುಗೆಮನೆ, ಸ್ನಾನಗೃಹ ಮತ್ತು ಶೌಚಗೃಹಗಳಿದ್ದವು. ಆಗ ಅದರ ನಿರ್ಮಾಣ ವೆಚ್ಚ ಕೇವಲ **ರೂ.42,000** ಆಗಿತ್ತು.
ಮಧ್ಯಮ ವರ್ಗದವರು ಇಂತಹ ಮನೆಯನ್ನು ಸ್ವೀಕರಿಸದೇ ಇರಬಹುದು ಎಂಬುದು ಶಂಕರರಿಗೆ ತಿಳಿದಿತ್ತು. ಆದರೆ **ಬಡವರು, ಕೊಳಚೆ ಪ್ರದೇಶದ ನಿವಾಸಿಗಳು ಮತ್ತು ತಲೆಯ ಮೇಲೊಂದು ಸೂರು ಬಯಸುವವರಿಗೆ ಇಂತಹ ಮನೆಗಳು ಅತ್ಯಂತ ಉಪಯುಕ್ತ** ಎಂಬ ದೃಢ ನಂಬಿಕೆ ಅವರಲ್ಲಿತ್ತು.
ಆದರೆ ಸರ್ಕಾರ ಬದಲಾದ ಕಾರಣ ಈ ಯೋಜನೆಯನ್ನು ಮುಂದುವರಿಸಲು ಅಗತ್ಯವಾದ ಸಹಕಾರ ದೊರೆಯಲಿಲ್ಲ. ತಮ್ಮ ಹಣವನ್ನು ಖರ್ಚು ಮಾಡಿ, ಸಾಲ ಮಾಡಿ, ಅಪಾರ ಶ್ರಮಪಟ್ಟರೂ ಯೋಜನೆ ಮುಂದುವರಿಯದ ಕಾರಣ ಶಂಕರರು ತುಂಬಾ ಬೇಸರಗೊಂಡರು.
ಹೀಗಾಗಿ ಈ ವಸತಿ ಯೋಜನೆಯು ಶಂಕರರ **ಬಡವರ ಮೇಲಿನ ಕಾಳಜಿ, ಸಮಾಜಮುಖಿ ಚಿಂತನೆ, ಸಾಹಸ, ದೂರದೃಷ್ಟಿ ಮತ್ತು ಸೇವಾ ಮನೋಭಾವವನ್ನು** ಪ್ರತಿಬಿಂಬಿಸುತ್ತದೆ.
