-ಎಚ್. ಎಸ್. ಮುಕ್ತಾಯಕ್ಕ
ಮಣ್ಣಿನಲಿ ಮನಕಟ್ಟಿ, ಗೋಲಿ
ಗುಂಡಿಗಾಗಿ, ಚಾಕಲೇಟು, ಬೊಂಬೆ
ಗಾಗಿ ಕಚ್ಚಾಡಿ ಅತ್ತು ರಂಪ ಮಾಡಿ
ಮತ್ತೆ ಕೂಡಿ ಆಡಿದ್ದು ನಕ್ಕಿದ್ದು
ಮರೆತುಹೋದಯಾ?
ಒಂದೆ ಸೂರಿನಡಿಯಲ್ಲಿ, ಬೆಚ್ಚಗಿನ
ಒಂದೆ ಕೌದಿಯಡಿಯಲ್ಲಿ ಮಳೆ
ಬಿಸಿಲು ಚಳಿಗೆ ಅರಳಿದ್ದು, ತಮ್ಮ
ಮರೆತುಯೋದೆಯಾ?
ನಿನ್ನ ಪಾಟಿಚೀಲ ನಾ ಹೊತ್ತುಕೊಂಡು
ಕಣ್ಣೀರ ಒರಸುತ್ತ ಬುತ್ತಿ ತಿನಿಸಿದ್ದು,
ಅಪ್ಪನಿಗೆ ಸುಳ್ಳು ಹೇಳಿ ನಿನ್ನ ಏಟು
ಬಯ್ದಳು ನಾನು ತಿಂದದ್ದು ಮರೆತುಹೋದೆಯಾ?
ನಾವು ಕೂಡಿ ಆಡುವಾಗ ಮುನಿದು
ಮುಖ ತಿರುವುತ್ತ ನಿಮಿಷ ಮರೆಯಾ
ದರೂ ಮತ್ತೆ ನೆನೆಯುತ್ತ ಹೀಗೆಯೇ
ಬದುಕಿನುದ್ದಕ್ಕೂ ಸಾಗುವೆವು ಎಂದು
ಕೊಂಡಿದ್ದವು ಮರೆತುಹೋದೆಯಾ?
ಆ ಮುಗ್ಧನಗೆ, ಕಂಬನಿ, ನೋಟ ಹೋದ
ವೆತ್ತ? ಆ ಕೇಕೆಗಳೆಲ್ಲ ಮಾಸುತ್ತ
ಬಂದಂತ ಈ 'ಗುಮ್ಮ ಬಂದೆನತ್ತ?
ಎದೆಯ ಬೆಸುಗೆಯ ಬಿಚ್ಚಿ ಈ ಪ್ರವಾತ
ಸೃಷ್ಟಿಯಾದದ್ದು ಹೇಗೆ? ಒಂದೆ ನೆತ್ತರಿನ
ಬಂದು ಆಣುಲಗುವಾಗಿ ಸಿಡಿದು ಬಿದ್ದುದೇಕೆ?
ಒಂದು ಒಳ್ಳೆಯ ನಾಲ್ಕು ಗುಲಾಬಿಗಳು
ಮುಖದಿರುವಿ ಮೌನಧರಿಸಿದ್ದು ಏಕೆ?
ತಮ್ಮ ನಾ ಅರಿಯದ ಈ 'ಗುಮ್ಮ'ನನು
ಒಂದೆ ಕರೆಯಲಾರೆಯಾ? ಮತ್ತೆ ಗೂಡುಕಟ್ಟಿ
ನಗಲಾರೆಯಾ? ಕಣ್ಣುಮುಚ್ಚಾಲೆಯಾಡುತ್ತ
ನಾನು ಗುಂಡಗ ತಿರುಗಿ "ಇವರ ಬಿಟ್ಟು
ಇವರಾರು?" ಎಂದು ಕಣ್ಣ ತೆರೆದಾಗ
ನೀವಲ್ಲ ಮಾಯವಾದುದು ಹೇಗೆ?
ಈಗಲೂ ಕಣ್ಣು ಬಿಟ್ಟು ನೋಡುತ್ತಿದ್ದೇನೆ
ತಮ್ಮ. ಬಚ್ಚಿಟ್ಟುಕೊಂಡವನು ಗುಮ್ಮನ
ಹಿಂದೆ ಮರೆಯಾದವನು ನನ್ನೆದುರು
ಬರಲಾರೆಯಾ? ಸಂತಸದ ಕಣ್ಣಹನಿ ಒರೆಸಲಾರೆಯಾ?
ಲೇಖಕರ ಪರಿಚಯ:
ಎಚ್. ಎಸ್ ಮುಕ್ತಾಯಕ್ಕ: ಕನ್ನಡದ ಸಮಕಾಲೀನ ಸ್ತ್ರೀ ಕವಯಿತ್ರಿಯರಲ್ಲಿ
ಪ್ರಮುಖರು. ಕನ್ನಡದಲ್ಲಿ ಅವರ ಗಜಲುಗಳ ಕೊಡುಗೆ ಮಹತ್ವದ್ದಾಗಿದೆ. ಜನವರಿ 28 ರಂದು ರಾಯಚೂರು ಜಿಲ್ಲೆಯಲ್ಲಿ ಜನಿಸಿದರು. ಇವರು ಕನ್ನಡದ ಮಹಾನ್ ಸಾಹಿತಿಗಳಾಗಿದ್ದ ಶಾಂತರಸ ಅವರ ಪುತ್ರಿ. ಇವರು ರಾಯಚೂರಿನ ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕೃತಿಗಳು: ನಾನು ಮತ್ತು ಅವನು, ನೀವು ಕಾಣಿರೆ ನೀವು ಕಾಣಿರೆ, ಕಭೀ ಕಭೀ ತನ ಹಾಯಿ ಮುಂತಾದವು ಕಾವ್ಯ ಸಂಗ್ರಹಗಳು. ಇವರು 40 ಗಜಲುಗಳು, 35 ಗಜಲುಗಳು, ಮೈ ಅವ್ರ ಮೇರೆ ಲಮೆ, ಮೆಹಾನಿಯಾ ಎಂಬ ಸಮಗ್ರ ಗಜಲುಗಳ ಸಂಗ್ರಹ ಮಾಡಿದ್ದಾರೆ. ಶಿವ ಶರಣೆ ಮುಕ್ತಾಯಕ್ಕ (ಮಕ್ಕಳಿಗಾಗಿ). ಢಕ್ಕೆಯ ಬೊಮ್ಮಣ್ಣ (ಸಂಶೋಧನೆ), ಕನ್ನಡ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆಗಳು (ವೈಚಾರಿಕ) ಅಪ್ಪ (ಸಂಪಾದನೆ), ಮದಿರೆಯ ನಾಡಿನಲ್ಲಿ (ಪ್ರವಾಸ ಕಥನ), ಅವನು ಮತ್ತು ಸಾವು (ಬಿಡಿ ದ್ವಿಪದಿಗಳ ಸಂಗ್ರಹ), ಅಪ್ಪ ನಾನು ಕಂಡಂತೆ (ಶಾಂತರಸರ ನೆನಪುಗಳು) ಮುಂತಾದವು ಅವರ ಬರಹ ವೈವಿಧ್ಯಗಳಲ್ಲಿವೆ.
ಪದಗಳ ಅರ್ಥ:
ರಂಪ- ಗದ್ದಲ, ರಗಳೆ,
ಕೌದಿ- ಹೊದಿಕೆ,
ಪಾಟಿಚೀಲ- ಸ್ಕೂಲ್ ಬ್ಯಾಗ್, ಸ್ಟೇಟಿನ ಚೀಲ
,ಪ್ರವಾತ- ಶಬ್ದ,
ಕೇಕೆ ನಗು,
ನೆತ್ತರು- ರಕ್ತ.
ಅಭ್ಯಾಸ ಪ್ರಶ್ನೆಗಳು
1. ಅಕ್ಕ ತಮ್ಮನಿಗಾಗಿ ಯಾವ ಕೆಲಸಗಳನ್ನು ಮಾಡುತ್ತಿದ್ದಳು?
2. ಅಕ್ಕ ತಮ್ಮರ ಮುನಿಸು ಎಂತಹದ್ದು.
3. ಬಾಲ್ಯದ ಆಟಗಳು ಯಾವುವು?
4. ಅಕ್ಕ ತಮ್ಮರ ಬಾಂಧವ್ಯವನ್ನು ಚಿತ್ರಿಸಿ.
5. ಅಕ್ಕ-ತಮ್ಮನಿಗಾಗಿ ಸಹಿಸಿಕೊಂಡ ನೋವು- ಭಾಧೆಯನ್ನು ತಿಳಿಸಿ.
6. ಬಾಲ್ಯದ ಮಮತೆಯ ತಮ್ಮ ದೂರವಾಗಿರುವುದನ್ನು ಕವಯತ್ರಿ ಪ್ರೀತಿ, ಆಟ, ನಗುವನ್ನು ಮರಳಿ ಪಡೆಯುವ ಹಂಬಲ ಕವಿತೆಯಲ್ಲಿ ಹೇಗೆ ವ್ಯಕ್ತವಾಗಿದೆ? ವಿವರಿಸಿ.
ಸಂಭಾವ್ಯ ಪ್ರಶ್ನೆಗಳಿಗೆ ಸೂಕ್ತ ಉತ್ತರ:
1. ಅಕ್ಕ ತಮ್ಮನಿಗಾಗಿ ಯಾವ ಕೆಲಸಗಳನ್ನು ಮಾಡುತ್ತಿದ್ದಳು?
ಅಕ್ಕ ತಮ್ಮನ ಪಾಟಿಚೀಲವನ್ನು ಹೊತ್ತುಕೊಂಡು ಹೋಗುತ್ತಿದ್ದಳು. ಅವನ ಕಣ್ಣೀರು ಒರೆಸುತ್ತಿದ್ದಳು. ಬುತ್ತಿ ತಿನ್ನಿಸುತ್ತಿದ್ದಳು. ಅಪ್ಪನಿಗೆ ಸುಳ್ಳು ಹೇಳಿ ತಮ್ಮನನ್ನು ಬೈಯಿಸದಂತೆ ಕಾಪಾಡಿ, ಅವನಿಗಾಗಿ ತಾನೇ ಬೈಯಿಸಿಕೊಳ್ಳುತ್ತಿದ್ದಳು.
2. ಅಕ್ಕ ತಮ್ಮರ ಮುನಿಸು ಎಂತಹದ್ದು?**
ಅಕ್ಕ-ತಮ್ಮರ ಮುನಿಸು ಕ್ಷಣಿಕವಾಗಿತ್ತು. ಸ್ವಲ್ಪ ಹೊತ್ತು ಮಾತ್ರ ಮುಖ ತಿರುಗಿಸಿಕೊಂಡು, ನಂತರ ಎಲ್ಲವನ್ನೂ ಮರೆತು ಮತ್ತೆ ಒಂದಾಗಿ ಸಂತೋಷದಿಂದ ಆಟವಾಡುತ್ತಿದ್ದರು.
**3. ಬಾಲ್ಯದ ಆಟಗಳು ಯಾವುವು?**
ಬಾಲ್ಯದಲ್ಲಿ ಮಣ್ಣಿನಲ್ಲಿ ಮನೆ ಕಟ್ಟುವುದು, ಗೋಲಿ ಆಡುವುದು, ಚಾಕೊಲೇಟ್ ಮತ್ತು ಬೊಂಬೆಗಳಿಗಾಗಿ ಜಗಳವಾಡುವುದು, ಕಣ್ಣುಮುಚ್ಚಾಲೆ ಆಟ ಆಡುವುದು ಮುಂತಾದ ಆಟಗಳನ್ನು ಆಡುತ್ತಿದ್ದರು.
4. ಅಕ್ಕ ತಮ್ಮರ ಬಾಂಧವ್ಯವನ್ನು ಚಿತ್ರಿಸಿ.**
ಅಕ್ಕ-ತಮ್ಮರ ಬಾಂಧವ್ಯ ಅತ್ಯಂತ ಪ್ರೀತಿ, ಮಮತೆ ಮತ್ತು ಆತ್ಮೀಯತೆಯಿಂದ ಕೂಡಿತ್ತು. ಇಬ್ಬರೂ ಒಂದೇ ಸೂರಿನಡಿ ಬೆಳೆದು, ಜೊತೆಯಾಗಿ ಆಟವಾಡಿ, ಜಗಳವಾಡಿ, ಮತ್ತೆ ಒಂದಾಗುತ್ತಿದ್ದರು. ಅಕ್ಕ ತಮ್ಮನನ್ನು ತುಂಬಾ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಳು. ಆದರೆ ದೊಡ್ಡವರಾದ ನಂತರ ಆ ಬಾಂಧವ್ಯ ದೂರವಾದದ್ದು ಕವಯತ್ರಿಗೆ ತುಂಬಾ ನೋವುಂಟು ಮಾಡುತ್ತದೆ.
5. ಅಕ್ಕ ತಮ್ಮನಿಗಾಗಿ ಸಹಿಸಿಕೊಂಡ ನೋವು-ಭಾಧೆಯನ್ನು ತಿಳಿಸಿ.**
ಅಕ್ಕ ತಮ್ಮನಿಗಾಗಿ ತನ್ನ ಸೌಕರ್ಯಗಳನ್ನು ತ್ಯಾಗ ಮಾಡುತ್ತಿದ್ದಳು. ಅವನ ಪಾಟಿಚೀಲ ಹೊರುತ್ತಿದ್ದಳು, ಕಣ್ಣೀರು ಒರೆಸುತ್ತಿದ್ದಳು, ಬುತ್ತಿ ತಿನ್ನಿಸುತ್ತಿದ್ದಳು. ಅಪ್ಪನಿಗೆ ಸುಳ್ಳು ಹೇಳಿ ತಮ್ಮನನ್ನು ರಕ್ಷಿಸಿ, ಅವನ ಬದಲು ತಾನೇ ಬೈಯಿಸಿಕೊಳ್ಳುತ್ತಿದ್ದಳು. ತಮ್ಮನ ಸಂತೋಷಕ್ಕಾಗಿ ಎಲ್ಲ ಕಷ್ಟಗಳನ್ನೂ ಸಹಿಸುತ್ತಿದ್ದಳು.
**6. ಬಾಲ್ಯದ ಮಮತೆಯ ತಮ್ಮ ದೂರವಾಗಿರುವುದನ್ನು ಕವಯತ್ರಿ ಪ್ರೀತಿ, ಆಟ, ನಗುವನ್ನು ಮರಳಿ ಪಡೆಯುವ ಹಂಬಲ ಕವಿತೆಯಲ್ಲಿ ಹೇಗೆ ವ್ಯಕ್ತವಾಗಿದೆ? ವಿವರಿಸಿ.
ಕವಯತ್ರಿ ಬಾಲ್ಯದ ದಿನಗಳನ್ನು ನೆನೆದು ತಮ್ಮನೊಂದಿಗೆ ಕಳೆದ ಪ್ರೀತಿ, ಆಟ, ನಗು, ಜಗಳ ಎಲ್ಲವನ್ನೂ ಸ್ಮರಿಸುತ್ತಾಳೆ. ದೊಡ್ಡವರಾದ ನಂತರ ತಮ್ಮ ದೂರವಾಗಿರುವುದು ಅವಳಿಗೆ ತುಂಬಾ ನೋವುಂಟು ಮಾಡುತ್ತದೆ. ಬಾಲ್ಯದ ಆತ್ಮೀಯತೆ, ಮುಗ್ಧತೆ, ಕಣ್ಣುಮುಚ್ಚಾಲೆಯ ಆಟ ಮತ್ತು ಸಂತಸದ ಕ್ಷಣಗಳು ಮತ್ತೆ ಮರಳಿ ಬರಲಿ ಎಂದು ಹಂಬಲಿಸುತ್ತಾಳೆ. ತಮ್ಮ ಮತ್ತೆ ತನ್ನನ್ನು ಪ್ರೀತಿಯಿಂದ ಕರೆಯಲಿ, ಹಿಂದಿನಂತೆ ಒಂದಾಗಿ ನಗೋಣ ಎಂಬ ಆಶಯವನ್ನು ಭಾವಪೂರ್ಣವಾಗಿ ವ್ಯಕ್ತಪಡಿಸಿದ್ದಾಳೆ. ಈ ಕವಿತೆಯ ಮೂಲಕ ಅಕ್ಕ-ತಮ್ಮರ ಬಾಂಧವ್ಯದ ಮಹತ್ವ ಹಾಗೂ ಸಂಬಂಧಗಳನ್ನು ಉಳಿಸಿಕೊಳ್ಳುವ ಸಂದೇಶವನ್ನು ಕವಯತ್ರಿ ನೀಡಿದ್ದಾಳೆ.
*******
