-ಡಾ| ರಹಮತ್ ತರೀಕೆರೆ
ನನಗೆ ಈ ನಾಗಮಂಗಲ ಭಾಗದ ಸಂಸ್ಕೃತಿ ಪರಿಚಯವಾದದ್ದು ಗೆಳೆಯ ಬಿ. ಚಂದ್ರೇಗೌಡರ ಬರಹಗಳಿಂದ. ಅವರು ತಮ್ಮ ಕಟ್ಟೆಪುರಾಣ ಹಾಗೂ ಇನ್ನಿತರ ಬರಹಗಳಲ್ಲಿ ಈ ಭಾಗದ ಚಿತ್ರಗಳನ್ನು ಕಟ್ಟಿ ಕೊಟ್ಟಿದ್ದಾರೆ. ನಮ್ಮ ಹಳ್ಳಿಗಳ ಬಗ್ಗೆ ಭಾವುಕವಾದ ಮತ್ತು ಸುಳ್ಳಿನ ಹಾಗೂ ತಿರಸ್ಕಾರದ ಚಿತ್ರಣಗಳನ್ನು ನೀಡುವ ಕೃತಿಗಳ ನಡುವೆ ಅವರ ಬರಹಗಳಲ್ಲಿನ ಪಾತ್ರಗಳು ತಮಾಷೆಯ ಪಾತ್ರಗಳಾಗಿದ್ದರೂ ಹಳ್ಳಿಗಳು ಯಾವ ತರಹ ಬದಲಾಗುತ್ತಿವೆ ಎನ್ನುವ ಅತ್ಯಂತ ಕಟುವಾದ ಸತ್ಯವನ್ನು ನಮ್ಮ ಮುಂದಿಡುತ್ತವೆ.
ಹಳ್ಳಿಗಳಿಗೆ ರಾಜಕಾರಣ ಯಾವ ರೀತಿ ಪ್ರವೇಶ ಮಾಡುತ್ತಿದೆ. ನಾವು ತಿಳಿದುಕೊಂಡಿರುವಷ್ಟು ಮುಗ್ಧವಾಗಿ ಈ ಹಳ್ಳಿಗಳು ಇಲ್ಲ. ಅವುಗಳಲ್ಲಿ ಪಟ್ಟಣದ ಆನೇಕ ಕಾಯಿಲೆಗಳು ಬಂದಿವೆ ಎಂಬ ಕಟುವಾದ ಸತ್ಯವನ್ನು ಚಂದ್ರೇಗೌಡರು ಬಹಳ ತಮಾಷೆಯಾಗಿ ಹೇಳಿದ್ದಾರೆ. ಅವರ ಬರಹಗಳಲ್ಲಿ ಮುಖ್ಯವಾದ ಸಂಗತಿಯೆಂದರೆ. ಭಾಗದ ಹಳ್ಳಿಗಳೊಡನೆ ಬೆಂಗಳೂರಿನ ಸಂಬಂಧ ಹೇಗಿದೆ ಮತ್ತು ಬೆಂಗಳೂರಿನಿಂದ ಅಥವಾ ಮುಂಬೈನಿಂದ ಒಬ್ಬ ವ್ಯಕ್ತಿ ಹಳ್ಳಿಗೆ ವಾಪಸ್ಸು ಬಂದಾಗ ಆತನಿಗೆ ಅವನ ಊರಿನಲ್ಲಿ ಯಾವ ತರಹದ ಪ್ರತಿಕ್ರಿಯೆ ಸಿಗುತ್ತದೆ ಎಂಬ ಬಗ್ಗೆ" ತಮಾಷೆಯಾಗಿ ನಿರೂಪಿಸಿದ್ದಾರೆ. ಮಂಡ್ಯ ಜಿಲ್ಲೆ ನೀರಾವರಿಗೆ ಪ್ರಸಿದ್ದಿಯಾಗಿದೆ. ಆದರೆ ಇದೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕು ಬರಗಾಲಕ್ಕೆ, ಬಿಸಿಲಿಗೆ ಪ್ರಸಿದ್ಧ. ಈ ನೀರಾವರಿ ಇಲ್ಲದಿರುವ ಕಾರಣಕ್ಕಾಗಿ ನಾಗಮಂಗಲ ಭಾಗದ ಜನ ನಾಡಿನ ಅಥವಾ ಭಾರತದ ಬೇರೆ ಬೇರೆ ನಗರಗಳಿಗೆ ಹೋಗಿ ವಾಸ ಮಾಡುತ್ತಿರುವುದು ತಿಳಿದಿರುವ ಸಂಗತಿ. ಮುಖ್ಯವಾಗಿ ಬಾಂಬೆಯಲ್ಲಿ ಸಾಕಷ್ಟು ಜನರಿದ್ದಾರೆ.
ನಾಗತಿಹಳ್ಳಿ ಸಂಸ್ಕೃತಿ ಹಬ್ಬದ ಆಶಯದ ನುಡಿಯಲ್ಲಿರುವ ಗ್ರಾಮ ಬದುಕಿಗೆ ಚಿಂತನೆ, ಚಿಕಿತ್ಸೆ, ಚೈತನ್ಯ ಎನ್ನುವುದನ್ನು ಗಮನಿಸಿದರೆ ಈ ಹಳ್ಳಿಗಳು ಖಾಯಿಲೆಗಳಿಂದ ಕೂಡಿವೆ. ಅವುಗಳ ಆರೋಗ್ಯ ವಾಪಸ್ಸು ಬರಬೇಕು ಆ ಆರೋಗ್ಯ ವಾಪಸ್ಸು ಬಂದು ಚೈತನ್ಯ ಬರಬೇಕು. ಚಿಕಿತ್ಸೆ ದೊರೆಯಬೇಕು. ಈ ಚಿಕಿತ್ಸೆಗೆ ಔಷಧಿ ಕೊಡೋದಕ್ಕೆ ನಾವು ಯಾರು? ಮತ್ತು ಎಲ್ಲಿಂದ ಆ ಔಷಧವನ್ನು ತರುತಿದ್ದೇವೆ. ಒಂದು ವೇಳೆ ನಗರದಿಂದ ಔಷದಗಳನ್ನು ತರುತ್ತಿದ್ದೇವೆಯೆ? ಅಥವಾ ನಮ್ಮ ಹಳ್ಳಿಗಳನ್ನು ಬರಿದು ಮಾಡೋಕೆ ನಗರಗಳು ಕಾರಣವಾಗುತ್ತಿವೆಯೇ? ನಗರಗಳ ಪ್ರಭಾವ ಹಳ್ಳಿಗಳ ಮೇಲೆ ಆಗುತ್ತಿದೆಯಾ? ನಗರದಿಂದ ಬಂದ ನಾವು ಹಳ್ಳಿಗಳು ಹೀಗೆಯೇ ರೂಪುಗೊಳ್ಳಬೇಕು ಎಂದು ಯೋಚಿಸುತ್ತಿದ್ದೇವಾ? ಈ ಬಗೆಯ ಪ್ರಶ್ನೆಗಳು ಮೂಡುತ್ತವೆ.
ಕಳೆದ 20-25 ವರ್ಷಗಳಲ್ಲಿ ಕರ್ನಾಟಕದ ಈ ತರಹದ ಸಾವಿರಾರು ಹಳ್ಳಿಗಳಲ್ಲಿ ತಿರುಗಾಟ ಮಾಡಿ ಕೆಲಸ ಮಾಡಿರುವ ನನಗೆ ಚೈನತ್ಯದ ಶಕ್ತಿ ಹಳ್ಳಿಗಳಲ್ಲಿದೆ ಎನಿಸಿದೆ. ಆದ್ದರಿಂದ ನಾವು ಅದನ್ನು ಪಡೆದುಕೊಳ್ಳಬೇಕೆಂದು ಯೋಚನೆ ಮಾಡುತ್ತಿದ್ದೇವೆ. ನಾನು ಈ ಭಾಗದ ಕಂಚನಹಳ್ಳಿ ಮತ್ತು ಚುಂಚನಗಿರಿ ಕೆಳಗಿರುವ ಹಳ್ಳಿಗಳಲ್ಲಿ ಕೆಲಸ ಮಾಡಿದ್ದೇನೆ. ಅನೇಕ ಸಲ ನಮ್ಮ ತಿಳುವಳಿಕೆ, ನಮ್ಮ ಚೈತನ್ಯಗಳು ನಮ್ಮ ಹಳ್ಳಿಗಳಲ್ಲಿ ಇನ್ನೂ ಇವೆ ಆನಿಸುತ್ತದೆ. ಆದರಲ್ಲೂ ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ನಮ್ಮ ನಗರಗಳ ಖಾಯಿಲೆಗೆ ಬೇಕಾದ, ನಮ್ಮ ನಗರಗಳ ಚೈನತ್ಯಕ್ಕೆ ಬೇಕಾದ ಅನೇಕ ಔಷಧಿಯ ಗುಣಗಳನ್ನು ಹೊಂದಿವೆ.
ಸಂಶೋಧಕನಾಗಿ ನನಗೆ ಇಲ್ಲಿಗೆ ಬಂದು ಹಳ್ಳಿಗಳಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಇದು ಎಂದು ಹೇಳೊದಕ್ಕೆ ಧೈರ್ಯ ಇಲ್ಲ. ಆದರೆ ಹಳ್ಳಿಗಳು ನಾವೆಲ್ಲ ಬಹಳ ಪ್ರೀತಿಯಿಂದ ಅಪ್ಪಿಕೊಳ್ಳುವ ಸ್ಥಿತಿಯಲ್ಲಿಯೂ ಇಲ್ಲ. ಪ್ರತಿಭಾವಂತನಾದ ನನ್ನ ಒಬ್ಬ ಪಿಹೆಚ್.ಡಿ ವಿದ್ಯಾರ್ಥಿ ಬೆಳಗಾವಿಯ ಅಥಣಿ ತಾಲ್ಲೂಕಿನವನು. ಈಗ ಅಧ್ಯಾಪಕನಾಗಿದ್ದಾನೆ. ಅವನಿಗೆ ಜೂನಿಯರ್ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ಸಿಗುವಾಗ ನನಗೆ ಫೋನ್ ಮಾಡಿದ. 'ಸರ್ ನೀವು ಹಳ್ಳಿಗಳನೆಲ್ಲ ತಿರುಗಾಡಿದ್ದೀರಿ. ಯಾವ ಹಳ್ಳಿಯನ್ನು ಆರಿಸಿಕೊಂಡರೆ ಒಳ್ಳೆಯದು ನೀವೇ ಹೇಳಿ' ಎಂದು ಕೇಳಿದ. ಮತ್ತೆ ಅವನು ಒಂದು ಮಾತು ಹೇಳಿದ. 'ನನ್ನ ಜಿಲ್ಲೆ ಬಿಟ್ಟು ಬೇರೆ ಯಾವ ಜಿಲ್ಲೆಯಾದರೂ ನಾನು ಹೋಗೋದಕ್ಕೆ ರೆಡಿ ಸಾರ್. ಸಾಧ್ಯವಾದರೆ ಉತ್ತರ ಕರ್ನಾಟಕ ಅಥವಾ ನನಗೆ ಗೊತ್ತಿಲ್ಲದೆ ಇರುವ ದಕ್ಷಿಣ ಕರ್ನಾಟಕಕ್ಕೆ ಹೋಗುತ್ತೇನೆ ಆದರೆ ನನ್ನ ಜಿಲ್ಲೆ ಬೇಡ' ಅಂದ. ಆಗ ನಾನು ಉಡುಪಿ ಬೆಲ್ಲೆಗೆ ಸೇರಿದ ಹಳ್ಳಿಯನ್ನು ಹೇಳಿದೆ. ಅಲ್ಲಿ ಹೋಗಿ ಆತ ಸೇರಿಕೊಂಡ. ನನಗೆ ಬಹಳ ಆಘಾತವಾಯಿತು ಯಾಕೆಂದರೆ, ಒಬ್ಬ ಕಲಿತ ತರುಣ ಯಾವ ಹಳ್ಳಿಯಲ್ಲಿ ಬೆಳೆಯುತ್ತಾನೆಯೊ ಅವನ ಸೇವೆ ವಾಪಸ್ಸು ಆತನ ಹಳ್ಳಿಗಲ್ಲ. ಆತ ತನ್ನ ಜಿಲ್ಲೆಗೆ ಹೋಗಲು ತಯಾರಿಲ್ಲ ಯಾಕೆ? ಇದಕ್ಕೆ ಕಾರಣ ಅಂದರೆ ಒಬ್ಬ ದಲಿತ ಹುಡುಗನಿಗೆ ಆ ಹಳ್ಳಿಯಲ್ಲಿ ಬಹಳ ಮಧುರವಾದ ನೆನಪುಗಳೇನು ಇರುವುದಿಲ್ಲ. ಬಹಳ ಅಪಮಾನಗಳಾಗಿರುತ್ತದೆ. ಆ ಹಳ್ಳಿಯನ್ನು ಬಿಟ್ಟು ಹೋಗುವುದು. ಆ ಹಳ್ಳಿಯನ್ನು ಮರೆಯುವುದು ಅವನ ಬದುಕಿಗೆ ಹೊಸ ಚಲನೆಯನ್ನು, ಹೊಸ ಹಾದಿಯನ್ನು ಕೊಡುತ್ತದೆ. ಅದರಿಂದ ಹಳ್ಳಿಗಳಿಂದ ನಾವು ಚೈತನ್ಯ ಪಡೆಯಬೇಕು ಎಂದು ಹೇಳುವಾಗೆ ಹಳ್ಳಿಗಳಲ್ಲಿ ಹಿಂಸೆ ಇದೆ ಎಂಬುದನ್ನು ನಾವು ಮರೆಯುವ ಹಾಗಿಲ್ಲ.
ಹಳ್ಳಿಗಳಲ್ಲಿ ಸಾವಿರಾರು ಜಾತ್ರೆಗಳನ್ನು ಹಬ್ಬಗಳನ್ನು ನೋಡುತ್ತಿರುತ್ತೇವೆ. ನನಗೆ ಯಾವಾಗಲೂ ಒಂದು ಪ್ರಶ್ನೆ ಕಾಡುತ್ತಿರುತ್ತದೆ. ಹಳ್ಳಿಗಳಲ್ಲಿ ದಲಿತರನ್ನು ಕರೆದು ಟೀ ಕೊಡುತ್ತಾರಾ? ಜೊತೆಯಲ್ಲಿ ಕೂರಿಸಿಕೊಂಡು ಊಟ ಮಾಡುತ್ತಾರೆಯೇ? ಈಗಲೂ ಪ್ರತ್ಯೇಕ ಕಪ್ನಲ್ಲಿ ಕೊಡುತಿದ್ದಾರಾ? ಇಲ್ಲವಾ? ಅಂತ ಕರ್ನಾಟಕದ
36
ಅನೇಕ ಹಳ್ಳಿಗಳನ್ನು ಬರಿ ಹಬ್ಬಗಳಲ್ಲಿ ಮಾತ್ರವಲ್ಲ, ಸಂಕಟದಲ್ಲೂ ಸಹ ನಾನು ಹೋಗಿ ನೋಡಿದ್ದೇನೆ. ನೆರ ಬಂದಾಗ, ಪ್ರವಾಹ ಬಂದಾಗ ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಹಲವು ದಿನಗಳ ಶಾಲ ಕೆಲಸ ಮಾಡಿದ್ದೇನೆ. ಗಂಜೀ ಕೇಂದ್ರಗಳಲ್ಲಿ ಊಟ ಮಾಡಿದ್ದೇನೆ. ಆಗ ಯಾವಾಗಲೂ ನನಗೆ ಹಳ್ಳಿಗಳಲ್ಲಿ ಚೈತನ್ಯವಿದೆ ಎನ್ನುವುದು ಕಾಡುತ್ತದೆ. ಅದರಲ್ಲೂ ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಧಾರ್ಮಿಕ ಸಾಮರಸ್ಯ ಎಂಬುದು ಅದ್ಭುತವಾಗಿದೆ. ಆದರೆ ನನಗೆ ಈಗಲೂ ಕಾಡುತ್ತಿರುವಂತದ್ದು ಹಳ್ಳಿಗಳಲ್ಲಿ ದಲಿತರನ್ನು ಎಲ್ಲಿಟ್ಟಿದ್ದಾರೆ. ಇಂದು ನಮ್ಮ ಹಳ್ಳಿಗಳನ್ನು ನಾವು ರೊಮ್ಯಾಂಟಿಕ್ಕಾಗಿ ಹೊಗಳುವುದಕ್ಕಾಗದ ಸ್ಥಿತಿಯಲ್ಲಿ ಹಳ್ಳಿಗಳು ಇವೆ. ಇಂತಹ ಹಳ್ಳಿಗಳ ಜೊತೆಗೆ ಅನುಸಂಧಾನ ಮಾಡಿಕೊಳ್ಳಬೇಕಾಗಿದೆ. ನಮಗೆ ಗೊತ್ತಿದೆ ಈ ಹತ್ತು ವರ್ಷಗಳಲ್ಲಿ ನಾಗತಿಹಳ್ಳಿಯವರು ನಡೆಸಿಕೊಂಡು ಬರುತ್ತಿರುವ ಈ ಹಬ್ಬದ ಪಯಣದಲ್ಲಿ ಗಾಂಧೀಜಿಯ ಆಶಯಗಳಿವೆ.
ಗಾಂಧೀಜಿಯವರು ಹಳ್ಳಿಗಳನ್ನು కురిశు ಬಹಳ ಭಾವುಕವಾಗಿ ಮಾತನಾಡಿದ್ದಾರೆ. 'ಹಿಂದ್ ಸ್ವರಾಜ್'ದಲ್ಲಿ ಬ್ರಿಟಿಷರ ಪಶ್ಚಿಮದ ರೋಗಗ್ರಸ್ಥ ನಾಗರಿಕತೆಯನ್ನು ಮುಖಾಮುಖಿಯಾಗಿಸಿದ್ದಾರೆ. ಹಳ್ಳಿಗಳಿಗೆ ತರುಣರು ವಾಪಸ್ಸು ಹೋಗಬೇಕು ಎಂದು ಗಾಂಧೀಜಿ ಕರೆಕೊಟ್ಟರು. ಅದರೆ ಕನ್ನಡ ಸಾಹಿತ್ಯ ಗಾಂಧೀಜಿಯವರ ಮಾತಿಗೆ ವಿರುದ್ಧವಾಗಿ ಚಲನೆ ಪಡೆಯಿತು. ಗ್ರಾಮಾಯಣ ಆಗಿರಬಹುದು, ಕಾನೂರು ಹೆಗ್ಗಡಿತಿ ಆಗಿರಬಹುದು. ಕೃಷ್ಣ ಆಲನಹಳ್ಳಿಯವರ ಕಾಡು ಆಗಿರಬಹುದು ಭುಜಂಗಯ್ಯನ ದಶಾವತಾರ ಆಗಿರಬಹುದು ಕನ್ನಡ ಸಾಹಿತ್ಯದ ಕಥೆ ಮತ್ತು ಕಾದಂಬರಿಗಳು ನಮ್ಮ ಹಳ್ಳಿಗಳು ಎಷ್ಟು ಭೀಕರವಾಗಿದೆ ಎಂಬ ಚಿತ್ರಣ ನೀಡಿವೆ. ಅದರಿಂದ ಹಳ್ಳಿಗಳನ್ನು ನಾವು ಇವತ್ತು ರೋಗಗ್ರಸ್ಥ ದೇಹಗಳೆಂದು ಕಾಣುತ್ತಿದ್ದೇವೆ. ಹಳ್ಳಿಗಳಿಂದ ಹೇಗೆ ಚೈತನ್ಯ ಪಡೆಯಬೇಕೆಂಬ ಬಗ್ಗೆಯು ಸಹ ಯೋಚನೆ ಮಾಡಬೇಕಾಗಿದೆ. ಅಕ್ಕಮಹಾದೇವಿ ಹೇಳುತ್ತಾಳೆ 'ತಾಯಿ ರಕ್ಕಸಿಯಾದಂತೆ ತಾಯ ವಿಕಾರವು' ಎಂದು ಈ ದೇಹಕ್ಕೆ ರಕ್ಕಸಿಯ ಗುಣ, ಕೊಲ್ಲುವ ಗುಣ ಇದೆ. ಕೊಲ್ಲುವ ಅಥವಾ ಬದುಕಿಸುವ ಈ ಎರಡು ಆಯಾಮಗಳು ಹಳ್ಳಿಗಳಿಗಿವೆ. ಬಹಳ ಮಾಡಬೇಕೆಂದು ಎಚ್ಚರಿಕೆಯಿಂದ ನನಗನಿಸುತ್ತಿದೆ. ವ್ಯವಹಾರ ಗಾಂಧೀಜಿಯವರ ಮಾತಿನ ಪ್ರಕಾರ ನಮ್ಮ ಕಾದಂಬರಿಯ ಅನೇಕ ನಾಯಕರುಗಳು ವಾಪಸ್ಸು ಹಳ್ಳಿಗಳಿಗೆ ಬಂದರು. ಕಾನೂರು ಹೆಗ್ಗಡಿತಿ ಕಾದಂಬರಿಯಲ್ಲಿ ಕಥೆ ಆರಂಭವಾಗುವುದೇ ನಗರದಿಂದ ಹೂವಯ್ಯ ವಾಪಸ್ಸಾಗುವುದರಿಂದ. ಬಹಳ ಪ್ರಸಿದ್ಧ ಸಿನಿಮಾ ಬಂಗಾರದ ಮನುಷ್ಯ ನೋಡಿದರೆ ಅಲ್ಲಿ ಕಲಿತ ಒಬ್ಬ ತರುಣ ಹಳ್ಳಿಗೆ ವಾಪಸ್ಸಾಗುತ್ತಾನೆ. ಆದರೆ ಆನಂತರ ಏನಾಗುತ್ತದೆ ಎಂಬುದನ್ನ ವಿವರಿಸುವುದಕ್ಕೆ ಹೋಗುವುದಿಲ್ಲ. ಇಷ್ಟನ್ನು ಮಾತ್ರ ಹೇಳಬಲ್ಲೆ. ಕನ್ನಡದ ಕಲಿತ ನಾಯಕ ಹಳ್ಳಿಯಿಂದ ಹೋದವನು ಮರಳಿ ಹಳ್ಳಿಗೆ ಬಂದು ಆ ಹಳ್ಳಿ ಜೊತೆಗೆ ಮಾತನಾಡುತ್ತಾ ಅದರ ಕಷ್ಟ ಸುಖವನ್ನು ಅರಿತು ಹೋರಾಡುವ ಕಥೆ ಹೇಳುವ ಸಿನಿಮಾಗಳಾಗಿವೆ. ಇನ್ನು ಕೆಲವು ಸಿನಿಮಾ, ಕಾದಂಬರಿಗಳಲ್ಲಿ ಹಳ್ಳಿಯಿಂದ ಕಲಿತು ಹೋಗಿ ನಗರದ ಕಾಯಿಲೆ ವಾಸಿ ಮಾಡುವಂತಾದ್ದು (ಮೇಯರ್ ಮುತ್ತಣ್ಣ) ಇಂತಹ ಸಿನಿಮಾಗಳು ಬೇರೆ ತರಹದ ಆಯಾಮವನ್ನು ಹೊಂದಿವೆ. ಆದ್ದರಿಂದ ನಮ್ಮ ಸಿನಿಮಾಗಳು, ಸಣ್ಣ ಕಥೆಗಳು, ನಮ್ಮ ಕಾದಂಬರಿಗಳು, ಹಳ್ಳಿ ಜೊತೆಗೆ ಕಲಿತ ವಿದ್ಯಾವಂತರು ಅಥವಾ ಹಳ್ಳಿಯಿಂದ ಹೊರಗಡೆ ಹೋಗಿ ಬಿಡುಗಡೆ ಪಡೆದ ಮೂರು ಚಿತ್ರಣವನ್ನು ಕೊಡುತ್ತಿದೆ ಎಂಬುದನ್ನು ನೆನಪಿಸಿಕೊಳ್ಳಬೇಕು. ನಾನು ಕರ್ನಾಟಕದ ಸಾವಿರಾರು ಹಳ್ಳಿಗಳಲ್ಲಿ ಕೆಲಸ ಮಾಡಿದ್ದೇನೆ. ಆದರೆ ಕರ್ನಾಟಕದ ಕೆಲವೇ ಹಳ್ಳಿಗಳಿಗೆ ಮಾತ್ರ ಒಂದು ಸಾಂಸ್ಕೃತಿಕ ವ್ಯಕ್ತಿತ್ವವಿದೆ. ಅಲ್ಲಿ ಕಲಿತವರು ಕೊಟ್ಟಿರುವಂತಾದ್ದಾಗಿದೆ. ಹಳ್ಳಿಗಳಿಗೆ ಸಂಸ್ಕೃತಿಯನ್ನು ಹೊರಗಡೆಯಿಂದ ತಂದು ಕೊಡಬೇಕಾಗಿಲ್ಲ. ಹಳ್ಳಿಗಳಲ್ಲಿಯೇ ಒಂದು ಅದ್ಭುತವಾದ ಸಂಸ್ಕೃತಿ ಇದೆ. ಹಾಡಿನ ಪರಂಪರೆ, ಕಥೆ ಹೇಳುವ ಪರಂಪರೆ ನಾಟಕಗಳಿವೆ. ಆದರೆ ಹೊರಗಡೆಯಿಂದ ಕಲಿತವರು ಬಂದು ವಿಶಿಷ್ಟ ವ್ಯಕ್ತಿತ್ವ ಕೊಟ್ಟಿರುವಂತಹ ಅನೇಕ ಹಳ್ಳಿಗಳಿವೆ. ಚಿಕ್ಕೋಡಿ ತಾಲ್ಲೂಕಿನ ಕೊನೆಯ ಹಳ್ಳಿಯಲ್ಲಿ 'ಅನಿಲ್ ಕಮಗಿ' ಅಂತ ಅಲ್ಲೊಬ್ಬ ಡಾಕ್ಟರ್ ಇದ್ದರು. ಅವರು 25 ವರ್ಷಗಳ ಕಾಲ ಕರ್ನಾಟಕದ ಬಹಳ ದೊಡ್ಡ ಲೇಖಕರನ್ನು ಆ ಊರಿಗೆ ಕರೆಸಿ ರಾಜ್ಯೋತ್ಸವ ಕಾರ್ಯಕ್ರಮ ಮಾಡುತ್ತಿದ್ದರು. ಅವರು ಕನ್ನಡ ಶಾಲೆಯನ್ನು ಕಟ್ಟಿಸಿದ್ದಾರೆ. ಸಂಸ್ಕೃತಿ ಹಬ್ಬವನ್ನು ಸರ್ಕಾರಿ ಶಾಲೆಯ ಆವರಣದಲ್ಲಿ ನಡೆಯುತ್ತಿರುವುದರಿಂದ ನಾನು ನಾಗತಿಹಳ್ಳಿಯವರಿಗೂ ಅವರ ಸಂಗಾತಿಗಳಿಗೂ, ಈ ಊರಿನವರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಇಡೀ ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳು ಅನಾಥಾಲಯಗಳಾಗಿ ಮುಚ್ಚಿ ಹೋಗುತ್ತಿರುವ ಸಂದರ್ಭದಲ್ಲಿ, ಕನ್ನಡ ಶಾಲೆಗಳು ಹಿಂದೆ ಬಿದ್ದು ಇಂಗ್ಲಿಷ್ ಶಾಲೆಗಳು ಮೇಲೆ ಬರುತ್ತಿರುವ ಸಂದರ್ಭದಲ್ಲಿ ಕನ್ನಡ ಶಾಲೆಯ ಆವರಣದಲ್ಲಿ ಈ ಬಗೆಯ ಸಾಂಸ್ಕೃತಿಕ ಸಂಭ್ರಮ ಆಚರಿಸುತ್ತಿರುವುದು ಬಹಳ ಸಾಂಕೇತಿಕವಾಗಿದೆ.
ತಮ್ಮ ಶಿಕ್ಷಣ ಸಂಸ್ಥೆಗಳ ಪ್ರಚಾರಕ್ಕಾಗಿ ಈ ತರಹದ ಮುಖವಾಡಗಳನ್ನು ಬಳಸಿ, ಅದನ್ನು ಸ್ವ ಪ್ರಚಾರಕ್ಕಾಗಿ ಬಳಸುತ್ತಿರುವ ವಿದ್ಯಮಾನಗಳು ಕರ್ನಾಟಕದಲ್ಲಿ ನಡೆಯುತ್ತಿವೆ. ಈ ಹಬ್ಬ ಸರ್ಕಾರಿ ಶಾಲೆಯ ಆವರಣದಲ್ಲಿ ನಡೆಯುತ್ತಿದೆ. ಈ ಮೂಲಕ ಸಂದೇಶವನ್ನು ನೀಡುತ್ತಿರುವ ಈ ಊರಿನ ನೆರಳು ಬೇರೆ ಊರಿನ ಮೇಲೆ ಬೀಳಲಿ ಈ ಊರಿನ ಮೇಲೆ ಕೆಟ್ಟ ನೆರಳು ಬೀಳದಿರಲಿ ಎಂದು ಹಾರೈಸುತ್ತೇನೆ. ಕರೆಕೋಣದಲ್ಲೂ ಆರ್.ವಿ.ಬಂಡಾರಿ ಅವರು ಕೂಡ ತಮ್ಮ ತಂದೆಯ ಹೆಸರಿನಲ್ಲಿ ಸಾಂಸ್ಕೃತಿಕ ಹಬ್ಬವನ್ನು ಮಾಡುತ್ತಿದ್ದಾರೆ.
ಇನ್ನೊಂದು ವಿಚಿತ್ರ ಹೆಸರು ಬಿದಿರುಪುಟ್ಟಿ ಅಂತ. ಬಿಜಾಪುರದ ಹಳ್ಳಿ ಅಲ್ಲೊಬ್ಬ ಬಸ್ ಮೆಕ್ಯಾನಿಕ್ ತನ್ನ ತಂದೆ ಹೆಸರಿನಲ್ಲಿ ಬಹಳ ಅದ್ಭುತವಾದ
ಕಾರ್ಯಕ್ರಮ ಮಾಡಿ 25 ವರ್ಷಗಳಿಂದ ಇಡೀ ಹಳ್ಳಿಯಲ್ಲಿ ಒಂದು ಸಾಂಸ್ಕೃತಿಕ ಗ್ರಾಮವನ್ನಾಗಿ ಮಾಡಿದ್ದಾರೆ. ಹಾಗೆ ಕರ್ನಾಟಕದಲ್ಲಿ ಕೆಲವು ಸಾಂಸ್ಕೃತಿಕ ಗ್ರಾಮಗಳಿವೆ. ಅಂದರೆ ಹೊರಗಡೆಯಿಂದ ಸಾಹಿತಿಗಳನ್ನು ಕರೆಸಿ ಅಲ್ಲೊಂದು ಹೊಸ ಪ್ರಜ್ಞೆಯನ್ನು ಉಂಟು ಮಾಡಿದ ಹಳ್ಳಿಗಳಿವೆ. ಅಂತಹ ಹಳ್ಳಿಗಳಲ್ಲಿ ನಾಗತಿಹಳ್ಳಿ ಕೂಡ ಒಂದು.
ನಮ್ಮ ಹಳ್ಳಿಗಳ ಖಾಯಿಲೆಗಳನ್ನು ಗುಣಪಡಿಸಿ ಹೊಸ ಚೈತನ್ಯ ನೀಡುವುದು ಬಹಳ ಸುಲಭದ ಮಾತಲ್ಲ. ಆ ದಿಕ್ಕಿನಲ್ಲಿ ಹೋರಾಟ ಮಾಡಬೇಕು ಆ ಹೋರಾಟದ ಭಾಗವಾಗಿ ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ನಾನು ತಿಳಿದುಕೊಂಡಿದ್ದೇನೆ. ನಾಗತಿಹಳ್ಳಿಯ ಗ್ರಂಥಾಲಯದ ಬಗ್ಗೆ ಒಂದು ಮಾತನ್ನು ಹೇಳಬೇಕು. ಇಲ್ಲಿನ ಗ್ರಂಥಾಲಯ ಬಹಳ ಸುಂದರವಾಗಿದೆ ನನ್ನ ಹೆಚ್ಚು ಸಮಯವನ್ನು ಗ್ರಂಥಾಲಯದಲ್ಲಿ ಕಳೆದೆ. ನಮ್ಮಲ್ಲಿ ಗ್ರಂಥಾಲಯಗಳಿರಬೇಕು. ಓದಿನ ಅಭಿರುಚಿ ಬೆಳೆಯಬೇಕು. ಎಂಬುದು ನಮ್ಮೆಲ್ಲರ ಆಸೆ. ಯಾವ ಬಗೆಯ ಗ್ರಂಥಗಳಿರಬೇಕು ಎಂಬುದರ ಬಗ್ಗೆ ನಾವು ಎಚ್ಚರವನ್ನು ವಹಿಸಬೇಕಾಗಿದೆ. ಅಂತಹ ಒಂದು ಗ್ರಂಥಾಲಯ ಈ ಊರಿನಲ್ಲಿದೆ. ಈ ಊರಿನ ಕಣ್ಣಾಗಿ ಅದು ಬೆಳೆಯುತ್ತಿದೆ. ಓದುವ ಹವ್ಯಾಸ ತೀರಾ ಕಡಿಮೆ ಆಗುತ್ತಿರುವ ಈ ಹೊತ್ತಿನಲ್ಲಿ ಊರಿನ ಗ್ರಂಥಾಲಯ ದೊಡ್ಡದಾಗಿ ಬೆಳೆಯಲಿ ಎಂದು ನಾನು ಹಾರೈಸುತ್ತೇನೆ. ನಮ್ಮ ಹಳ್ಳಿಗಳನ್ನು ಅಧಿಕಾರಿಗಳು, ರಾಜಕಾರಣಿಗಳು ಯಾವ ರೀತಿ ಬಳಸಿಕೊಳ್ಳುತ್ತಿದ್ದಾರೆ ಎಂದು ನಾವೆಲ್ಲಾ ನೋಡಿದ್ದೇವೆ. ಚುನಾವಣೆ ಬರುತ್ತದೆ. ರಾಜಕಾರಣಿಗಳು ಅಧಿಕಾರಿಗಳೆಲ್ಲರೂ ನಮ್ಮ ಹಳ್ಳಿಯ ವಾತಾವರಣವನ್ನು ಎಷ್ಟು ಬೇಕೋ ಅಷ್ಟು ತಮ್ಮ ಪಕ್ಷಗಳಿಗೆ ಅನುಸಾರವಾಗಿ ವಿಭಜಿಸಿ ತುಂಡು ಮಾಡಿ ರೊಕ್ಕ ಚೆಲ್ಲಿ ಬಗೆಬಗೆಯಲ್ಲಿ ಹಳ್ಳಿಗಳ ಮನಸ್ಸನ್ನು ಕೆಡಿಸುವಂತಹ ರೀತಿಯಲ್ಲಿ ಪ್ರವೇಶಿಸುತ್ತಿರುವಾಗ ಪ್ರಜ್ಞಾವಂತರಾದ ಲೇಖಕರು, ಚಿಂತಕರು, ನಾಗತಿಹಳ್ಳಿ ಚಂದ್ರಶೇಖರರಂತಹ ಗೆಳೆಯರು ಒಂದು ಹೊಸ ಬಗೆಯ ಪ್ರಯೋಗವನ್ನು ಮಾಡುತಿದ್ದಾರೆ. ಇದರಲ್ಲಿ ಅನೇಕ ಸೋಲುಗಳು, ಕಷ್ಟಗಳನ್ನು ಅವರು ಕಂಡಿರಬಹುದು ಆದರೆ ಈ ಹಾದಿ ಮಾತ್ರ ಬಹಳ ಒಳ್ಳೆಯದು. ಈ ಹೊತ್ತು ಬಂದಂತಹ ಕುವೆಂಪು ಸಾಹಿತ್ಯ ಈ ದೃಷ್ಟಿಯಿಂದ ಬಹಳ ಸಾಂಕೇತಿಕ ಎಂದು ನಾನು ತಿಳಿದುಕೊಂಡಿದ್ದೇನೆ. ಪ್ರಯೋಗಗಳಲ್ಲಿ ಯಾವಾಗಲೂ ಸೋಲುಗಳಿರಬಹುದು. ಆದರೆ ಆ ಪ್ರಯೋಗದ ಹಿಂದಿನ ಆಶಯ ಬಹಳ ಉದಾತ್ತವಾದದ್ದು ಈ ಊರಿಗೆ ನಾನು ಬಂದ ಮೇಲೆ ಈ ಕಾರ್ಯಕ್ರಮ ನೋಡಿದ ಮೇಲೆ ನಾನು ನನ್ನೂರಿಗೆ ಏನನ್ನು ವಾಪಸ್ಸು ಮಾಡಿದ್ದೀನಿ ಎಂಬ ಪ್ರಶ್ನೆ ಕಾಡುತ್ತಿದೆ. ನನ್ನೂರು ಸಣ್ಣ ಹಳ್ಳಿ, ಸಮತಳ ಎಂಬ ಊರು ಈ ಪ್ರಶ್ನೆಯನ್ನು ನಾನೇ ನನ್ನಲ್ಲಿ ಹಾಕಿಕೊಂಡಿದ್ದೇನೆ. ಅದೇ ಈಗಲೂ ನನ್ನನ್ನು ಕಾಡುತ್ತಿದೆ. ಈ ಕಾಡುವ ಪ್ರಶ್ನೆಯನ್ನು ಈ ಊರು ಹುಟ್ಟಿಸಿದ್ದಕ್ಕಾಗಿ ಧನ್ಯವಾದಗಳನ್ನು ಹೇಳಿ ನನ್ನ ಮಾತನ್ನು ಮುಗಿಸುತ್ತಿದ್ದೇನೆ
ಆಕರ ಕೃತಿ; ಗ್ರಾಮ ಮುಖಿ (ಹಳ್ಳಿಗಾಡಿನ ಬದುಕಿಗೆ ಚಿಕಿತ್ಸಾತ್ಮಕ ಚಿಂತನಾ ಬರಹಗಳು, ಸಂ. ಶಿವಕುಮಾರ ಕಾರೇಪುರ.)
ಲೇಖಕರ ಪರಿಚಯ:
ರಹಮತ್ ತರೀಕೆರೆ: (ಜನನ 26 ಆಗಸ್ಟ್ 1959) ಒಬ್ಬ ಕನ್ನಡ ಬರಹಗಾರ,
ವಿಮರ್ಶಕ ಮತ್ತು ಶಿಕ್ಷಕ. ಅವರು ತಮ್ಮ ತೀಕ್ಷ್ಯವಾದ ಒಳನೋಟಗಳು ಮತ್ತು ಸಂಸ್ಕೃತಿಯ ಕುರಿತಾದ ವಿಮರ್ಶಾತ್ಮಕ ದೃಷ್ಟಿಕೋನಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ಕನ್ನಡದ ಹೊಸ ಪೀಳಿಗೆಯ ಬರಹಗಾರರಲ್ಲಿ ಒಬ್ಬರು. ಅವರು ಹಂಪಿಯಲ್ಲಿರುವ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾಗಿದ್ದಾರೆ. ಪ್ರತಿ ಸಂಸ್ಕೃತಿ, ಮರದೊಳಗಿನ ಕಿಚ್ಚು, ಸಂಸ್ಕೃತ ಅಧ್ಯಯನ ಲೋಕ ವಿರೋಧಿಗಳ ಜೊತೆಯಲ್ಲಿ ಪ್ರತಿ ಸಂಸ್ಕೃತಿ ಇವರ ಕೃತಿಗಳು, ಕರ್ನಾಟಕದ ಸೂಫಿಗಳ ಕುರಿತಾದ ಸಂಶೋಧನೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ..
ಸಂಭಾವ್ಯ ಪ್ರಶ್ನೆಗಳು ಮತ್ತು ಉತ್ತರ
೧ ಕಟ್ಟೆ ಪುರಾಣ ಕಟ್ಟಿಕೊಡುವ ಹಳ್ಳಿ ಚಿತ್ರ ಯಾವುದು?
ಉತ್ತರ: ಬಿ. ಚಂದ್ರೇಗೌಡರ **‘ಕಟ್ಟೆಪುರಾಣ’** ಕೃತಿಯು ನಾಗಮಂಗಲ ಭಾಗದ ಹಳ್ಳಿಗಳ ಚಿತ್ರವನ್ನು ಕಟ್ಟಿಕೊಡುತ್ತದೆ. ಈ ಕೃತಿಯಲ್ಲಿ ಹಳ್ಳಿಗಳ ಜನಜೀವನ, ಅಲ್ಲಿನ ಪಾತ್ರಗಳು, ರಾಜಕೀಯದ ಪ್ರವೇಶ ಹಾಗೂ ಪಟ್ಟಣದ ಪ್ರಭಾವದಿಂದ ಹಳ್ಳಿಗಳು ಬದಲಾಗುತ್ತಿರುವ ರೀತಿಯನ್ನು **ತಮಾಷೆಯ ಜೊತೆಗೆ ಕಟುವಾದ ವಾಸ್ತವಿಕತೆಯೊಂದಿಗೆ** ಚಿತ್ರಿಸಲಾಗಿದೆ.
೨ ನಾಗಮಂಗಲದ ಬಗ್ಗೆ ಲೇಖಕರು ಹೇಳಿರುವುದೇನು?
ಉತ್ತರ::ಲೇಖಕರು ನಾಗಮಂಗಲ ತಾಲ್ಲೂಕು **ಬರಗಾಲ ಮತ್ತು ಬಿಸಿಲಿಗೆ ಪ್ರಸಿದ್ಧವಾಗಿದೆ** ಎಂದು ಹೇಳುತ್ತಾರೆ. ಮಂಡ್ಯ ಜಿಲ್ಲೆ ನೀರಾವರಿಗೆ ಪ್ರಸಿದ್ಧವಾದರೂ, ನಾಗಮಂಗಲದಲ್ಲಿ ನೀರಾವರಿ ಸೌಲಭ್ಯ ಕಡಿಮೆ. ಈ ಕಾರಣದಿಂದ ಅಲ್ಲಿನ ಅನೇಕ ಜನರು ಉದ್ಯೋಗಕ್ಕಾಗಿ ಬೆಂಗಳೂರು, ಮುಂಬೈ ಸೇರಿದಂತೆ ಬೇರೆ ನಗರಗಳಿಗೆ ವಲಸೆ ಹೋಗಿ ನೆಲೆಸಿದ್ದಾರೆ.
೩. ಹುಡುಗನಿಗೆ ತನ್ನ ಹಳ್ಳಿ ಏಕೆ ಸ್ಪೂರ್ತಿದಾಯಕವಾಗಿರಲಿಲ್ಲ?
ಲೇಖಕ ರಹಮತ್ ತರೀಕೆರೆ ಅವರು ತಮ್ಮ ಪಿಹೆಚ್.ಡಿ ವಿದ್ಯಾರ್ಥಿಯೊಬ್ಬನ ಉದಾಹರಣೆಯ ಮೂಲಕ ಹಳ್ಳಿಗಳಲ್ಲಿರುವ ಸಾಮಾಜಿಕ ಅಸಮಾನತೆಯನ್ನು ವಿವರಿಸಿದ್ದಾರೆ. ಆ ವಿದ್ಯಾರ್ಥಿ ಬೆಳಗಾವಿಯ ಅಥಣಿ ತಾಲ್ಲೂಕಿನವನಾಗಿದ್ದನು. ಅವನಿಗೆ ಜೂನಿಯರ್ ಕಾಲೇಜಿನಲ್ಲಿ ಅಧ್ಯಾಪಕನಾಗಿ ಕೆಲಸ ದೊರೆತಾಗ, ಯಾವ ಹಳ್ಳಿಗೆ ಹೋದರೆ ಒಳ್ಳೆಯದು ಎಂದು ಲೇಖಕರನ್ನು ಕೇಳಿದನು. ತನ್ನ ಜಿಲ್ಲೆಯನ್ನು ಬಿಟ್ಟು ಬೇರೆ ಯಾವುದೇ ಜಿಲ್ಲೆಗೆ ಹೋಗಲು ಸಿದ್ಧನಿದ್ದೇನೆ, ಆದರೆ ತನ್ನ ಜಿಲ್ಲೆಗೆ ಮಾತ್ರ ಹೋಗುವುದಿಲ್ಲ ಎಂದು ಹೇಳಿದನು.
ಇದಕ್ಕೆ ಮುಖ್ಯ ಕಾರಣ ಅವನು **ದಲಿತ ಹುಡುಗನಾಗಿದ್ದು, ತನ್ನ ಹಳ್ಳಿಯಲ್ಲಿ ಬಾಲ್ಯದಿಂದಲೇ ಅನೇಕ ಅವಮಾನ ಮತ್ತು ನೋವುಗಳನ್ನು ಅನುಭವಿಸಿದ್ದನು.** ಜಾತಿಯ ಕಾರಣದಿಂದ ಅವನಿಗೆ ಆ ಹಳ್ಳಿಯ ಬಗ್ಗೆ ಮಧುರವಾದ ನೆನಪುಗಳು ಇರಲಿಲ್ಲ. ಹಳ್ಳಿಯು ಅವನಿಗೆ ಪ್ರೀತಿ, ಗೌರವ ಮತ್ತು ಆತ್ಮವಿಶ್ವಾಸವನ್ನು ನೀಡುವ ಬದಲು ನೋವು ಮತ್ತು ಅವಮಾನವನ್ನು ನೀಡಿತ್ತು. ಆದ್ದರಿಂದ ತನ್ನ ಹಳ್ಳಿಗೆ ಹಿಂದಿರುಗುವುದಕ್ಕಿಂತ ಬೇರೆ ಸ್ಥಳದಲ್ಲಿ ಹೊಸ ಜೀವನವನ್ನು ಆರಂಭಿಸಲು ಅವನು ಬಯಸಿದನು.
ಈ ಘಟನೆಯ ಮೂಲಕ ಲೇಖಕರು **ಹಳ್ಳಿಗಳಲ್ಲಿ ಚೈತನ್ಯ ಮತ್ತು ಸಂಸ್ಕೃತಿ ಇರುವುದರ ಜೊತೆಗೆ ಜಾತಿ ತಾರತಮ್ಯ, ಅಸಮಾನತೆ ಮತ್ತು ಹಿಂಸೆಯೂ ಇದೆ** ಎಂಬ ಕಟುವಾದ ಸತ್ಯವನ್ನು ತಿಳಿಸುತ್ತಾರೆ. ಆದ್ದರಿಂದ ಹಳ್ಳಿಗಳನ್ನು ಕೇವಲ ಭಾವುಕವಾಗಿ ಹೊಗಳದೆ, ಅಲ್ಲಿರುವ ಸಮಸ್ಯೆಗಳನ್ನು ಗುರುತಿಸಿ ಅವುಗಳನ್ನು ನಿವಾರಿಸುವ ಪ್ರಯತ್ನ ಮಾಡಬೇಕು ಎಂಬುದು ಲೇಖಕರ ಆಶಯವಾಗಿದೆ.
೪. ಹಳ್ಳಿಗಳ ಬಗ್ಗೆ ಗಾಂಧೀಜಿಯವರ ಆಶಯಗಳೇನು?
ಮಹಾತ್ಮ ಗಾಂಧೀಜಿಯವರು **ಹಳ್ಳಿಗಳ ಅಭಿವೃದ್ಧಿ ಮತ್ತು ಪುನರುತ್ಥಾನಕ್ಕೆ ಹೆಚ್ಚಿನ ಮಹತ್ವ** ನೀಡಿದ್ದರು. ಭಾರತದ ನಿಜವಾದ ಶಕ್ತಿ ಹಳ್ಳಿಗಳಲ್ಲಿದೆ ಎಂಬುದು ಅವರ ನಂಬಿಕೆಯಾಗಿತ್ತು. ಅವರು ಪಾಶ್ಚಾತ್ಯ ನಾಗರಿಕತೆಯ ಅತಿಯಾದ ಪ್ರಭಾವವನ್ನು ಟೀಕಿಸಿ, ಸ್ವಾವಲಂಬಿ ಮತ್ತು ಸ್ವತಂತ್ರವಾದ ಗ್ರಾಮಜೀವನವನ್ನು ಬೆಳೆಸಬೇಕೆಂದು ಆಶಿಸಿದ್ದರು.
ಗಾಂಧೀಜಿಯವರು ತಮ್ಮ **‘ಹಿಂದ್ ಸ್ವರಾಜ್’** ಕೃತಿಯಲ್ಲಿ ಪಶ್ಚಿಮದ ರೋಗಗ್ರಸ್ತ ನಾಗರಿಕತೆಯನ್ನು ವಿಮರ್ಶಿಸಿದ್ದಾರೆ. ನಗರಗಳ ಜೀವನಶೈಲಿ ಮತ್ತು ಅದರ ದುಷ್ಪರಿಣಾಮಗಳಿಂದ ದೂರವಿದ್ದು, ಯುವಕರು ಹಳ್ಳಿಗಳಿಗೆ ಮರಳಬೇಕು ಎಂದು ಕರೆ ನೀಡಿದ್ದರು. ಯುವಕರು ತಮ್ಮ ವಿದ್ಯೆ, ಜ್ಞಾನ ಮತ್ತು ಶ್ರಮವನ್ನು ಹಳ್ಳಿಗಳ ಅಭಿವೃದ್ಧಿಗೆ ಬಳಸಬೇಕು ಎಂಬುದು ಅವರ ಆಶಯವಾಗಿತ್ತು.
ಹಳ್ಳಿಗಳಲ್ಲಿ **ಸ್ವಾವಲಂಬನೆ, ಸ್ವಚ್ಛತೆ, ಶಿಕ್ಷಣ, ಸಹಕಾರ, ಸಮಾನತೆ ಮತ್ತು ಮಾನವೀಯತೆ** ಬೆಳೆಸಬೇಕು ಎಂದು ಗಾಂಧೀಜಿ ಬಯಸಿದ್ದರು. ಜಾತಿ-ಭೇದ, ಅಸ್ಪೃಶ್ಯತೆ ಮತ್ತು ಸಾಮಾಜಿಕ ಅನ್ಯಾಯಗಳನ್ನು ನಿವಾರಿಸಿ ಎಲ್ಲರೂ ಗೌರವದಿಂದ ಬದುಕುವಂತಹ ಗ್ರಾಮಸಮಾಜ ನಿರ್ಮಾಣವಾಗಬೇಕು ಎಂಬುದು ಅವರ ಕನಸಾಗಿತ್ತು.
ಹೀಗಾಗಿ ಗಾಂಧೀಜಿಯವರ ಆಶಯದಂತೆ **ಹಳ್ಳಿಗಳು ಸ್ವಾವಲಂಬಿ, ಸಮಾನತೆಯ, ಆರೋಗ್ಯಕರ ಮತ್ತು ಚೈತನ್ಯಭರಿತ ಸಮಾಜಗಳಾಗಿ ರೂಪುಗೊಳ್ಳಬೇಕು**. ಯುವಕರು ಹಳ್ಳಿಗಳ ಸಮಸ್ಯೆಗಳನ್ನು ಅರಿತು, ಅವುಗಳ ಅಭಿವೃದ್ಧಿಗಾಗಿ ಕೆಲಸ ಮಾಡಬೇಕು ಎಂಬುದು ಅವರ ಮುಖ್ಯ ಸಂದೇಶವಾಗಿದೆ.
೫. ಹಳ್ಳಿಗಳಲ್ಲಿರುವ ಚೈತನ್ಯ ಎಂತಹದು? ವಿವರಿಸಿ
ರಹಮತ್ ತರೀಕೆರೆ ಅವರ ಪ್ರಕಾರ ಹಳ್ಳಿಗಳಲ್ಲಿ **ಅದ್ಭುತವಾದ ಚೈತನ್ಯದ ಶಕ್ತಿ** ಇದೆ. ಕಳೆದ 20–25 ವರ್ಷಗಳಲ್ಲಿ ಕರ್ನಾಟಕದ ಸಾವಿರಾರು ಹಳ್ಳಿಗಳಲ್ಲಿ ಸಂಚರಿಸಿ ಕೆಲಸ ಮಾಡಿದ ಲೇಖಕರಿಗೆ ಹಳ್ಳಿಗಳಲ್ಲಿಯೇ ನಮ್ಮ ತಿಳುವಳಿಕೆ, ಅನುಭವ ಮತ್ತು ಸಾಂಸ್ಕೃತಿಕ ಶಕ್ತಿಯ ಮೂಲಗಳು ಇನ್ನೂ ಉಳಿದಿವೆ ಎಂಬುದು ತಿಳಿದಿದೆ.
ಹಳ್ಳಿಗಳಲ್ಲಿ **ಜನಪದ ಸಂಸ್ಕೃತಿ, ಹಾಡುಗಳ ಪರಂಪರೆ, ಕಥೆ ಹೇಳುವ ಪರಂಪರೆ, ನಾಟಕಗಳು, ಹಬ್ಬಗಳು ಮತ್ತು ಜಾತ್ರೆಗಳು** ಜೀವಂತವಾಗಿವೆ. ವಿಶೇಷವಾಗಿ ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಧಾರ್ಮಿಕ ಸಾಮರಸ್ಯ ಮತ್ತು ಪರಸ್ಪರ ಸಹಬಾಳ್ವೆಯ ಉತ್ತಮ ಗುಣಗಳು ಕಂಡುಬರುತ್ತವೆ. ಇಂತಹ ಗುಣಗಳು ನಗರಗಳಲ್ಲಿನ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲ ಚೈತನ್ಯವನ್ನು ಹೊಂದಿವೆ.
ಆದರೆ ಹಳ್ಳಿಗಳಲ್ಲಿ ಜಾತಿ ತಾರತಮ್ಯ, ಅಸ್ಪೃಶ್ಯತೆ, ಹಿಂಸೆ ಮತ್ತು ರಾಜಕೀಯದ ದುಷ್ಪರಿಣಾಮಗಳೂ ಇವೆ. ಆದ್ದರಿಂದ ಹಳ್ಳಿಗಳನ್ನು ಕೇವಲ ರಮಣೀಯವಾಗಿ ಹೊಗಳುವುದು ಸರಿಯಲ್ಲ. ಅಲ್ಲಿರುವ ಒಳ್ಳೆಯ ಅಂಶಗಳನ್ನು ಉಳಿಸಿಕೊಂಡು, ಕೆಟ್ಟ ಅಂಶಗಳನ್ನು ನಿವಾರಿಸಬೇಕು.
ಹಳ್ಳಿಗಳಲ್ಲಿರುವ **ಸಂಸ್ಕೃತಿ, ಜನಪದ ಪರಂಪರೆ, ಧಾರ್ಮಿಕ ಸಾಮರಸ್ಯ, ಮಾನವೀಯತೆ ಮತ್ತು ಸಮುದಾಯದ ಒಗ್ಗಟ್ಟು** ನಗರಗಳಿಗೂ ಚೈತನ್ಯ ನೀಡಬಲ್ಲವು. ಹೀಗಾಗಿ ಹಳ್ಳಿಗಳಲ್ಲಿರುವ ಉತ್ತಮ ಗುಣಗಳನ್ನು ಪಡೆದುಕೊಂಡು, ಅವುಗಳ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಹೊಸ ಚೈತನ್ಯವನ್ನು ಸೃಷ್ಟಿಸಬೇಕು ಎಂಬುದು ಲೇಖಕರ ಆಶಯವಾಗಿದೆ.
೬. ರಹಮತ್ ತರೀಕೆರೆಯವರು ಬರೆದಿರುವ ಈ ಲೇಖನದ ಆಶಯವೇನು? ಉದಾಹರಣೆಗಳೊಂದಿಗೆ ವಿವರಿಸಿ.
ರಹಮತ್ ತರೀಕೆರೆಯವರ **‘ಹಳ್ಳಿಗಳಿಂದ ನಾವು ಚೈತನ್ಯ ಪಡೆಯಬೇಕು’** ಎಂಬ ಲೇಖನದ ಮುಖ್ಯ ಆಶಯವೆಂದರೆ **ಹಳ್ಳಿಗಳಲ್ಲಿರುವ ಉತ್ತಮ ಸಂಸ್ಕೃತಿ, ಮಾನವೀಯತೆ, ಜನಪದ ಪರಂಪರೆ ಮತ್ತು ಸಹಬಾಳ್ವೆಯ ಗುಣಗಳನ್ನು ಗುರುತಿಸಿ, ಅವುಗಳಿಂದ ನಗರಗಳಿಗೂ ಸಮಾಜಕ್ಕೂ ಚೈತನ್ಯ ಪಡೆಯಬೇಕು** ಎಂಬುದಾಗಿದೆ. ಆದರೆ ಹಳ್ಳಿಗಳನ್ನು ಕೇವಲ ಭಾವುಕವಾಗಿ ಹೊಗಳದೆ, ಅವುಗಳಲ್ಲಿರುವ ಜಾತಿ ತಾರತಮ್ಯ, ಅಸ್ಪೃಶ್ಯತೆ, ಹಿಂಸೆ ಮತ್ತು ರಾಜಕೀಯದ ದುಷ್ಪರಿಣಾಮಗಳನ್ನು ನಿವಾರಿಸಬೇಕು ಎಂದು ಲೇಖಕರು ಎಚ್ಚರಿಸುತ್ತಾರೆ.
ಲೇಖಕರು ಕರ್ನಾಟಕದ ಸಾವಿರಾರು ಹಳ್ಳಿಗಳಲ್ಲಿ ಕೆಲಸ ಮಾಡಿದ ಅನುಭವದಿಂದ **ಹಳ್ಳಿಗಳಲ್ಲಿ ಇನ್ನೂ ಅಪಾರವಾದ ಸಾಂಸ್ಕೃತಿಕ ಶಕ್ತಿ ಇದೆ** ಎಂದು ಹೇಳುತ್ತಾರೆ. ಹಳ್ಳಿಗಳಲ್ಲಿ ಹಾಡು, ಕಥೆ ಹೇಳುವ ಪರಂಪರೆ, ನಾಟಕ, ಜಾತ್ರೆ, ಹಬ್ಬಗಳು ಮತ್ತು ಧಾರ್ಮಿಕ ಸಾಮರಸ್ಯದಂತಹ ಉತ್ತಮ ಅಂಶಗಳಿವೆ. ವಿಶೇಷವಾಗಿ ಉತ್ತರ ಕರ್ನಾಟಕದ ಹಳ್ಳಿಗಳಲ್ಲಿನ ಧಾರ್ಮಿಕ ಸಾಮರಸ್ಯವನ್ನು ಅವರು ಉದಾಹರಣೆಯಾಗಿ ನೀಡುತ್ತಾರೆ.
ಆದರೆ ಹಳ್ಳಿಗಳ ಇನ್ನೊಂದು ಮುಖವೂ ಇದೆ. ಲೇಖಕರ ಪಿಹೆಚ್.ಡಿ. ವಿದ್ಯಾರ್ಥಿ ದಲಿತನಾಗಿದ್ದನು. ತನ್ನ ಹಳ್ಳಿಯಲ್ಲಿ ಅವಮಾನ ಮತ್ತು ನೋವನ್ನು ಅನುಭವಿಸಿದ್ದರಿಂದ ತನ್ನ ಜಿಲ್ಲೆಗೆ ಹಿಂದಿರುಗಲು ಅವನು ಇಷ್ಟಪಡಲಿಲ್ಲ. ಈ ಉದಾಹರಣೆಯ ಮೂಲಕ **ಹಳ್ಳಿಗಳಲ್ಲಿ ಜಾತಿ ತಾರತಮ್ಯ ಮತ್ತು ಸಾಮಾಜಿಕ ಅನ್ಯಾಯ ಇನ್ನೂ ಇರುವುದನ್ನು** ಲೇಖಕರು ತೋರಿಸುತ್ತಾರೆ.
ಅದೇ ರೀತಿ, **ನಾಗತಿಹಳ್ಳಿ, ಚಿಕ್ಕೋಡಿ ಮತ್ತು ಬಿದಿರುಪುಟ್ಟಿಯಂತಹ ಹಳ್ಳಿಗಳಲ್ಲಿ** ಸ್ಥಳೀಯರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಹೊಸ ಪ್ರಜ್ಞೆಯನ್ನು ಮೂಡಿಸಿರುವುದನ್ನು ಲೇಖಕರು ಮೆಚ್ಚುತ್ತಾರೆ. ನಾಗತಿಹಳ್ಳಿಯ ಸರ್ಕಾರಿ ಶಾಲೆಯ ಆವರಣದಲ್ಲಿ ಸಾಂಸ್ಕೃತಿಕ ಹಬ್ಬ ನಡೆಯುತ್ತಿರುವುದು ಮತ್ತು ಅಲ್ಲಿನ ಗ್ರಂಥಾಲಯ ಓದುವ ಸಂಸ್ಕೃತಿಯನ್ನು ಬೆಳೆಸುತ್ತಿರುವುದು ಉತ್ತಮ ಉದಾಹರಣೆಗಳಾಗಿವೆ.
ಗಾಂಧೀಜಿಯವರ **‘ಹಿಂದ್ ಸ್ವರಾಜ್’** ಆಶಯವನ್ನು ನೆನಪಿಸುವ ಲೇಖಕರು, ಯುವಕರು ಹಳ್ಳಿಗಳಿಗೆ ಮರಳಿ ಅವುಗಳ ಅಭಿವೃದ್ಧಿಯಲ್ಲಿ ತೊಡಗಬೇಕು ಎಂದು ಹೇಳುತ್ತಾರೆ. ಆದರೆ ಹಳ್ಳಿಗಳ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳದೆ ನಗರದಿಂದ ಪರಿಹಾರಗಳನ್ನು ಹೇರಬಾರದು ಎಂಬ ಎಚ್ಚರವನ್ನೂ ನೀಡುತ್ತಾರೆ.
ಹೀಗಾಗಿ ಲೇಖನದ ಒಟ್ಟಾರೆ ಆಶಯವೆಂದರೆ **ಹಳ್ಳಿಗಳಲ್ಲಿರುವ ಚೈತನ್ಯವನ್ನು ಗುರುತಿಸಿ, ಅವುಗಳ ಉತ್ತಮ ಸಂಸ್ಕೃತಿಯನ್ನು ಉಳಿಸಿಕೊಂಡು, ಜಾತಿ-ತಾರತಮ್ಯ, ಹಿಂಸೆ, ರಾಜಕೀಯ ದುರುಪಯೋಗ ಮುಂತಾದ ಸಮಸ್ಯೆಗಳನ್ನು ನಿವಾರಿಸಿ ಆರೋಗ್ಯಕರ ಮತ್ತು ಸಮಾನತೆಯ ಗ್ರಾಮಸಮಾಜವನ್ನು ನಿರ್ಮಿಸಬೇಕು** ಎಂಬುದಾಗಿದೆ.
೧. ಗ್ರಾಮೀಣ ಜನರ ಬದುಕು
ಗ್ರಾಮೀಣ ಜನರ ಬದುಕು ಮುಖ್ಯವಾಗಿ **ಕೃಷಿ ಮತ್ತು ಪ್ರಕೃತಿಯನ್ನು ಅವಲಂಬಿಸಿದೆ**. ಹಳ್ಳಿಗಳಲ್ಲಿ ಸರಳತೆ, ಸಹಕಾರ, ಪರಸ್ಪರ ಸಂಬಂಧ ಮತ್ತು ಮಾನವೀಯತೆ ಕಂಡುಬರುತ್ತವೆ. ಹಬ್ಬ, ಜಾತ್ರೆ, ಜನಪದ ಹಾಡು, ಕಥೆ, ನಾಟಕ ಮುಂತಾದವುಗಳು ಗ್ರಾಮೀಣ ಸಂಸ್ಕೃತಿಯ ಪ್ರಮುಖ ಭಾಗಗಳಾಗಿವೆ. ಉತ್ತರ ಕರ್ನಾಟಕದ ಅನೇಕ ಹಳ್ಳಿಗಳಲ್ಲಿ **ಧಾರ್ಮಿಕ ಸಾಮರಸ್ಯ**ವೂ ಕಂಡುಬರುತ್ತದೆ.
ಆದರೆ ಗ್ರಾಮೀಣ ಬದುಕಿನಲ್ಲಿ ಕೆಲವು ಸಮಸ್ಯೆಗಳೂ ಇವೆ. ನೀರಿನ ಕೊರತೆ, ಬರಗಾಲ, ಉದ್ಯೋಗದ ಅಭಾವ, ಜಾತಿ ತಾರತಮ್ಯ, ಅಸ್ಪೃಶ್ಯತೆ ಮತ್ತು ರಾಜಕೀಯದ ಪ್ರಭಾವದಿಂದ ಹಳ್ಳಿಗಳ ಬದುಕು ಹಲವು ರೀತಿಯಲ್ಲಿ ಬದಲಾಗುತ್ತಿದೆ. ಈ ಕಾರಣಗಳಿಂದ ಅನೇಕ ಗ್ರಾಮೀಣ ಜನರು ಉದ್ಯೋಗಕ್ಕಾಗಿ ಬೆಂಗಳೂರು, ಮುಂಬೈ ಮುಂತಾದ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ.
ಆದರೂ ಹಳ್ಳಿಗಳಲ್ಲಿ ಉಳಿದಿರುವ **ಜನಪದ ಸಂಸ್ಕೃತಿ, ಸಹಬಾಳ್ವೆ, ಸರಳತೆ ಮತ್ತು ಮಾನವೀಯ ಮೌಲ್ಯಗಳು ಸಮಾಜಕ್ಕೆ ಚೈತನ್ಯ ನೀಡುವ ಶಕ್ತಿಯನ್ನು ಹೊಂದಿವೆ**.
೨. ಗ್ರಾಮದ ನ್ಯಾಯ ಪಂಚಾಯಿತಿ
ಗ್ರಾಮದ ಜನರ **ಸಣ್ಣಪುಟ್ಟ ಸಮಸ್ಯೆ ಮತ್ತು ವಿವಾದಗಳನ್ನು ಸ್ಥಳೀಯವಾಗಿ ಬಗೆಹರಿಸುವ ವ್ಯವಸ್ಥೆಯೇ ಗ್ರಾಮ ನ್ಯಾಯ ಪಂಚಾಯಿತಿ**. ಹಳ್ಳಿಗಳಲ್ಲಿ ಜಮೀನು, ನೀರು, ಕುಟುಂಬ, ಗಡಿ, ಹಣಕಾಸು ಮುಂತಾದ ವಿಷಯಗಳಿಗೆ ಸಂಬಂಧಿಸಿದ ವಿವಾದಗಳು ಉಂಟಾದಾಗ ಅವುಗಳನ್ನು ಪರಸ್ಪರ ಚರ್ಚೆಯ ಮೂಲಕ ಪರಿಹರಿಸುವುದು ಇದರ ಉದ್ದೇಶ.
ನ್ಯಾಯ ಪಂಚಾಯಿತಿಯಲ್ಲಿ ಗ್ರಾಮದ ಹಿರಿಯರು, ಅನುಭವಸ್ಥರು ಹಾಗೂ ಸಂಬಂಧಪಟ್ಟ ವ್ಯಕ್ತಿಗಳು ಸೇರಿ ಎರಡೂ ಪಕ್ಷಗಳ ಮಾತುಗಳನ್ನು ಕೇಳುತ್ತಾರೆ. ನಂತರ **ನ್ಯಾಯ, ಸಮನ್ವಯ ಮತ್ತು ಸೌಹಾರ್ದತೆಯನ್ನು ಕಾಪಾಡುವ ರೀತಿಯಲ್ಲಿ** ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಇದರಿಂದ ಜನರು ನ್ಯಾಯಕ್ಕಾಗಿ ದೂರದ ಸ್ಥಳಗಳಿಗೆ ಹೋಗಬೇಕಾದ ಅಗತ್ಯ ಕಡಿಮೆಯಾಗುತ್ತದೆ.
ಗ್ರಾಮದ ನ್ಯಾಯ ಪಂಚಾಯಿತಿಯ ಪ್ರಮುಖ ಉದ್ದೇಶ **ಗ್ರಾಮದಲ್ಲಿ ಶಾಂತಿ, ಸಹಕಾರ ಮತ್ತು ಒಗ್ಗಟ್ಟನ್ನು ಕಾಪಾಡುವುದು**. ಆದರೆ ಜಾತಿ, ಹಣ, ರಾಜಕೀಯ ಪ್ರಭಾವ ಮುಂತಾದವುಗಳು ನ್ಯಾಯದ ಮೇಲೆ ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸುವುದು ಅಗತ್ಯ.
೩. ಗ್ರಾಮ ರಸ್ತೆಗಳು
ಗ್ರಾಮೀಣ ಜನರ **ಸಾಮಾಜಿಕ ಮತ್ತು ಆರ್ಥಿಕ ಬದುಕಿನ ಪ್ರಮುಖ ಆಧಾರವೇ ಗ್ರಾಮ ರಸ್ತೆಗಳು**. ಹಳ್ಳಿಗಳನ್ನು ಪಟ್ಟಣ, ನಗರ ಮತ್ತು ಮಾರುಕಟ್ಟೆಗಳಿಗೆ ಸಂಪರ್ಕಿಸುವಲ್ಲಿ ರಸ್ತೆಗಳು ಪ್ರಮುಖ ಪಾತ್ರ ವಹಿಸುತ್ತವೆ. ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಹಾಗೂ ಅಗತ್ಯ ವಸ್ತುಗಳನ್ನು ಹಳ್ಳಿಗೆ ತರಲು ಉತ್ತಮ ರಸ್ತೆಗಳು ಅಗತ್ಯ.
ಉತ್ತಮ ಗ್ರಾಮ ರಸ್ತೆಗಳಿದ್ದರೆ **ಶಿಕ್ಷಣ, ಆರೋಗ್ಯ, ವ್ಯಾಪಾರ ಮತ್ತು ಉದ್ಯೋಗದ ಅವಕಾಶಗಳು** ಸುಲಭವಾಗಿ ದೊರೆಯುತ್ತವೆ. ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ, ರೋಗಿಗಳು ಆಸ್ಪತ್ರೆಗಳಿಗೆ ಹಾಗೂ ಗ್ರಾಮಸ್ಥರು ತಮ್ಮ ಕೆಲಸಗಳಿಗಾಗಿ ಪಟ್ಟಣಗಳಿಗೆ ಸುಲಭವಾಗಿ ಹೋಗಬಹುದು.
ಆದರೆ ಅನೇಕ ಹಳ್ಳಿಗಳಲ್ಲಿ ರಸ್ತೆ ಸೌಲಭ್ಯಗಳು ಇನ್ನೂ ಸಮರ್ಪಕವಾಗಿಲ್ಲ. ಮಳೆಗಾಲದಲ್ಲಿ ರಸ್ತೆಗಳು ಹಾಳಾಗುವುದು, ಗುಂಡಿಗಳು ಉಂಟಾಗುವುದು ಮತ್ತು ಸಾರಿಗೆ ಸೌಲಭ್ಯಗಳ ಕೊರತೆ ಗ್ರಾಮೀಣ ಜನರಿಗೆ ತೊಂದರೆ ಉಂಟುಮಾಡುತ್ತದೆ. ಆದ್ದರಿಂದ **ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಉತ್ತಮ ಮತ್ತು ಸುಸ್ಥಿರ ರಸ್ತೆ ವ್ಯವಸ್ಥೆ ಅತ್ಯವಶ್ಯಕ**.
೪. ಹಳ್ಳಿಯ ಸಂತೆಗಳು
**ಹಳ್ಳಿಯ ಸಂತೆಗಳು ಗ್ರಾಮೀಣ ಜನರ ಆರ್ಥಿಕ ಮತ್ತು ಸಾಮಾಜಿಕ ಬದುಕಿನ ಪ್ರಮುಖ ಭಾಗವಾಗಿವೆ.** ವಾರಕ್ಕೊಮ್ಮೆ ಅಥವಾ ನಿಗದಿತ ದಿನಗಳಲ್ಲಿ ನಡೆಯುವ ಸಂತೆಗಳಲ್ಲಿ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ಗ್ರಾಮಸ್ಥರು ತಮ್ಮ ಅಗತ್ಯ ವಸ್ತುಗಳನ್ನು ಖರೀದಿಸುತ್ತಾರೆ.
ಸಂತೆಗಳಲ್ಲಿ ತರಕಾರಿ, ಹಣ್ಣು, ಧಾನ್ಯ, ಬೇಳೆ, ಹಾಲಿನ ಉತ್ಪನ್ನಗಳು, ಬಟ್ಟೆ, ಗೃಹೋಪಯೋಗಿ ವಸ್ತುಗಳು ಹಾಗೂ ವಿವಿಧ ಗ್ರಾಮೀಣ ಉತ್ಪನ್ನಗಳು ದೊರೆಯುತ್ತವೆ. ಇದರಿಂದ **ರೈತರಿಗೆ ನೇರವಾಗಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಅವಕಾಶ** ಸಿಗುತ್ತದೆ.
ಸಂತೆಗಳು ಕೇವಲ ವ್ಯಾಪಾರದ ಸ್ಥಳಗಳಲ್ಲ. ಅವು ಗ್ರಾಮಸ್ಥರು ಪರಸ್ಪರ ಭೇಟಿಯಾಗಿ **ಸುದ್ದಿ, ವಿಚಾರ ಮತ್ತು ಅನುಭವಗಳನ್ನು ಹಂಚಿಕೊಳ್ಳುವ ಸಾಮಾಜಿಕ ವೇದಿಕೆಗಳೂ ಆಗಿವೆ**. ಹೀಗಾಗಿ ಹಳ್ಳಿಯ ಸಂತೆಗಳು ಗ್ರಾಮೀಣ ಆರ್ಥಿಕತೆ, ಸಂಸ್ಕೃತಿ ಮತ್ತು ಸಾಮಾಜಿಕ ಸಂಬಂಧಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
