ಕವಿ ಪರಿಚಯ: ರನ್ನ
ರನ್ನ ಕನ್ನಡದ ರತ್ನತೆಯ ಕವಿಗಳಲ್ಲೊಬ್ಬನು. ಅವನ ಜನ್ಮಸ್ಥಳ ಬಾಗಲಕೋಟೆ ಜಿಲ್ಲೆಯ ಮುದುವೊಳಲು. ತಂದೆ ಜಿನವಲ್ಲಭ ತಾಯಿ ಅಬ್ಬಲಬ್ಬೆ ಇವನದು ಬಳೆಗಾರ ವೃತ್ತಿಯ ಮನೆತನ ವಿದ್ಯಾಕಾಂಕ್ಷೆಯಿಂದ ಶ್ರವಣಬೆಳಗೊಳದಲ್ಲಿ ನೆಲೆ ನಿಲ್ಲುತ್ತಾನೆ. ದಾನಚಿಂತಾಮಣಿ ಅತ್ತಿಮಬ್ಬೆಯ ಪ್ರೋತ್ಸಾಹದಿಂದ ಆಜಿತಸೇನಾಚಾರ್ಯರಲ್ಲಿ ವಿದ್ಯೆ ಕಲಿಯುತ್ತಾನೆ. ಮೊದಲು ಗಂಗರ ಮಂತ್ರಿ ಚಾವುಂಡರಾಯನ ಆಶ್ರಯ ಪಡೆದು ಗಂಗರ ಪತನವಾದ ನಂತರ ಚಾಲುಕ್ಯದೊರೆ ತೈಲಪ ಹಾಗೂ ಸತ್ಯಾಶ್ರಯ ಇಂವ ಬೆಡಂಗನ ಆಸ್ಥಾನ ಕವಿಯಾಗಿದ್ದನು.
ಕಾವ್ಯ ಪರಿಚಯ :
"ಅಜಿತ ತೀರ್ಥಂಕರ ಪುರಾಣ "ಹಾಗೂ 'ಸಾಹಸ ವಿಜಯಂ' ಇವನ ಉಪಲಬ್ಧ ಕಾವ್ಯಗಳು: ಪಂಪನು ತನ್ನ ದೊರೆ ಅರಿಕೇಸರಿಯನ್ನು ಮಹಾಭಾರತದ ಅರ್ಜುನನೊಂದಿಗೆ ಸಮೀಕರಿಸಿ 'ವಿಕ್ರಮಾರ್ಜುನ ವಿಜಯಂ' ರಚಿಸಿದಂತೆ ರನ್ನನು ತನ್ನ ಆಶ್ರಯದಾತ ಇರಿವಬೆಡಂಗ ಸತ್ಯಾಶ್ರಯನನ್ನು ! ಭೀಮನೊಂದಿಗೆ ಸಮೀಕರಿಸಿ ಸಾಹಸಭೀಮ ವಿಜಯಂ ರಚಿಸಿದ್ದಾನೆ. ಇದು ಚಂಪೂ ಶೈಲಿಯಲ್ಲಿದೆ. ಕುರುಕ್ಷೇತ್ರ ಯುದ್ಧದ ದೃಶ್ಯವೇ ಮುಖ್ಯ ಕಥಾವಸ್ತುವಾದರೂ, ಇಡಿ ಮಹಾಭಾರತವನ್ನು ಸಿಂಹಾವಲೋಕನ ಕ್ರಮದಿಂದ ನಿರೂಪಿಸಿದ್ದಾನೆ. ಈ ಕಾವ್ಯದಲ್ಲಿ ರನ್ನನ ನಾಟಕೀಯ ಶೈಲಿಯನ್ನು ಕಾಣಬಹುದು.
ಹಿನ್ನೆಲೆ :
ಮಹಾಭಾರತ ಯುದ್ಧದಲ್ಲಿ ತನ್ನವರೆಲ್ಲರನ್ನೂ ಕಳೆದುಕೊಂಡ ಮರ್ಯೋಧನ ಯುದ್ಧರಂಗದಲ್ಲಿ ಶರಶಯ್ಕೆಯ ಮೇಲೆ ಮಲಗಿದ್ದ ಭೀಷ್ಮನನ್ನು ಕಾಣಲು ಸಂಜಯನೊಡನೆ ಬರುತ್ತಾನೆ. ರಣರಂಗದಲ್ಲಿ ಮಡಿದು ಬಿದ್ದಿದ್ದ ವೈರಿಪಕ್ಷದ ವೀರ ಅಭಿಮನ್ಯು, ಗುರು ದ್ರೋಣ, ತಮ್ಮ ದುಶ್ಯಾಸನ, ಮಗನಾದ ಲಕ್ಷಣಕುಮಾರ, ಪ್ರಾಣ ಸ್ನೇಹಿತ ಕರ್ಣ ಇವರೆಲ್ಲರ ಕಳೇಬರಗಳನ್ನು ಕಂಡು ದುಃಖಪಡುವ ಅವನ ಪ್ರಲಾಪ ಪ್ರಸ್ತುತ ಕಾವ್ಯಭಾಗದಲ್ಲಿ ಕರುಳು ಮಿಡಿಯುವಂತೆ ಚಿತ್ರಿತವಾಗಿದೆ.
ಯುದ್ಧವೇ ಭೀಕರ ದುರಂತ. ಅಧಿಕಾರಶಾಹಿ ಎಲ್ಲ ಕಾಲಕ್ಕೂ ಯುದ್ಧವನ್ನು ಘೋಷಿಸುತ್ತ ನಡೆದಿದೆ. ಆಧುನಿಕ ಸಮಾಜದಲ್ಲಿಯೂ ಹಿರೋಶಿಮೆ, ನಾಗಾಸಾಕಿಗಳ ದುರಂತ ನಡೆದಿದೆ. ಮಹಾತ್ಮರೆಲ್ಲರೂ ಯುದ್ಧವನ್ನು ವಿರೋಧಿಸುತ್ತಾರೆ. ಬುದ್ಧಿಯಿರುವ ಯಾರೂ ಸಂಘರ್ಷ ಬಯಸುವುದಿಲ್ಲ. ಯುದ್ಧದ ಘೋರ ಪರಿಣಾಮಗಳನ್ನು ಆಳಾದವರು ಅರಿಯಬೇಕು.
ಭಾವಾರ್ಥ 1:
(ದುರ್ಯೋಧನನು ಸಂಜಯನೊಡನೆ ಕುರುಕ್ಷೇತ್ರ ರಣಾಂಗಣದಲ್ಲಿ ನಡೆದು ಬರುತ್ತಿದ್ದಾನೆ.) ಮುರಿದು . ತುಂಡುತುಂಡಾಗಿ ಬಿದ್ಹೆದಿರುವ ಆಯುಧಗಳು, ರಕ್ತದ ಕಡಲಲ್ಲಿ ಹೆಜ್ಜೆ ಹೆಜ್ಜೆಗೂ ಪಾದವನ್ನು ಚುಚ್ಚುತ್ತಿರಲಾಗಿ, ಕಾಲಿಡಲೂ ಸಹ ಅವಕಾಶ ಪಡೆಯದೆ (ಜಾಗವಿಲ್ಲದೆ) ಕುರುಪತಿಯಾದ ದುರ್ಯೋಧನ ಭಾರೀ ಹೆಣಗಳನ್ನು ಮೆಟ್ಟುತ್ತ ಮೆಲ್ಲಮೆಲ್ಲನೆ ನಡೆಯುತ್ತಿದ್ದಾನೆ.
| ಶಬ್ದಗಳು | ಅರ್ಥಗಳ |
|---|---|
| ಉಡಿದಿರ್ದ | ಮುರಿದ |
| ಕೈದು | ಆಯುಧ |
| ತಳ | ಪಾದ |
| ಉರ್ಚು | ಚುಚ್ಚು |
| ದಡಿಗವೆಣ (ದಡಿಗ+ ಪೆಣ) | ಭಾರಿ ಹೆಣ |
| ಎಡೆ ವಡೆಯದೆ | ಅವಕಾಶ ಪಡೆಯದೆ |
ಭಾವಾರ್ಥ 2:
ಆನೆಗಳ ದೇಹಗಳೆಂಬ ಬೆಟ್ಟಗಳನ್ನು ಏರಿ, ಇಳಿಯುತ್ತ, ರಕ್ತದ ನದಿಗಳನ್ನು ದಾಟುತ್ತ, ಆನೆಗಳ ಸೊಂಡಿಲುಗಳೆಂಬ ಕಪ್ಪು ಬಳ್ಳಿಗಳ ಮಳೆಗಳನ್ನುಳ್ಳ ಅರಣ್ಯ ಸಮೂಹಗಳಲ್ಲಿ ಸಿಲುಕಿಕೊಳ್ಳುತ್ತಿದ್ದರೂ ಅವನ್ನೆಲ್ಲ ಲೆಕ್ಕಿಸದೆ, ಕಾತರದಿಂದ, ಸಂಜಯನ ಹೆಗಲನ್ನು ಅವಲಂಬಿಸಿಕೊಂಡು ಬರುತ್ತಿದ್ದ ಕುರುಭೂಪತಿಯು, ಶರಜಾಲ (ಬಾಣಗಳಿಂದ)ದಿಂದ ಭಿನ್ನಭಿನ್ನವಾಗಿ ಜರ್ಜರಿತನಾದ ಕವಚದೊಂದಿಗೆ ಬಿದ್ದಿದ್ದ ದ್ರೋಣರ ದೇಹವನ್ನು ಕಂಡನು.
| ಶಬ್ದಗಳು | ಅರ್ಥಗಳು |
|---|---|
| ಇಭಶೈಲ | ಆನೆಗಳ ಬೆಟ್ಟ |
| ರುಧಿರ | ರಕ್ತ |
| ಪ್ರೋತ | ನದಿ |
| ಇಭದೋ | ಆನೆಗಳ ಸೊಂಡಿಲು |
| ನೀಲಲತಾ | ಕಪ್ಪು ಬಳ್ಳಿ |
| ಮತಾನ | ಗುಂಪು |
| ವ್ರಾತ | ಸಮೂಹ |
| ಉರದೆ | ಲಕ್ಷಿಸದೆ |
| ಸ್ಕಂಧ | ಹೆಗಲು |
| ಗಾತ್ರ | ದೇಹ |
| ತಾಣ | ರಕ್ಷಾಕವಚ |
| ಜರ್ಜರಿತ | ಭಿನ್ನಭಿನ್ನವಾದ |
ಹಾಗೆ ಸ್ವಭಾವತಃ ಕೆಟ್ಟವನಾದ ಧೃಷ್ಟದ್ಯುಮ್ಮನಿಂದ ತಲೆಕೂದಲನ್ನು ಹಿಡಿದೆಳೆದು ತಲೆಕತ್ತರಿಸಿ, ತಿರುಚಲ್ಪಟ್ಟು ಕ್ರೂರವಾಗಿ ದಂಡಿಸಲ್ಪಟ್ಟು ಬಿದ್ದಿದ್ದ ದ್ರೋಣರನ್ನು ರಾಜರಾಜ ನೆನಿಸಿದ ಕೌರವರಾಯ ನೋಡಿ ಹೀಗೆ ದುಃಖಿಸಿದನು
| ಶಬ್ದಗಳು | ಅರ್ಥಗಳು |
|---|---|
| ನಿಸರ್ಗದುಷ್ಟ | ಸ್ವಭಾವತಃ ಕೆಟ್ಟವನಾದ |
| ಕಚ | ತಲೆಕೂದಲು |
| ನಿಗ್ರಹ | ಶಿಕ್ಷೆ |
| ವಿಲುಳಿತ | ತಿರುಚಲ್ಪಟ್ಟ |
| ಮೌಳಿ | ತಲೆ |
| ಭಾರದ್ವಾಜ | ದ್ರೋಣ |
ಭಾವಾರ್ಥ 2:
ನಿಮ್ಮ ಧನುರ್ವಿದ್ಯಾ ಚಾತುರ್ಯದ ಎದುರು ಗಾಂಡೀವಧಾರಿ ಅರ್ಜುನನಲ್ಲ, ಪಿನಾಕವೆಂಬ ಧನುವನ್ನು ಹಿಡಿದ ರುದ್ರನೂ ಸಹ ನಿಮ್ಮೊಡನೆ ಯುದ್ಧ ಮಾಡಿ ಗೆಲ್ಲಲು ಅಸಮರ್ಥನೆಂದು ನಾವು ಅರಿಯೆವೆ? ಆದರೆ ಇದು (ನಿಮ್ಮ ಸೋಲು) ನಿಮ್ಮ ಉಪೇಕ್ಷೆಯ ಫಲವೆಂದು ತಿಳಿಯಲಾರೆ. ಇದು ನನ್ನ ಕರ್ಮದ ಫಲವೋ ನಾನರಿಯೆ. ದ್ರೋಣರೇ ನಿಮಗೆ ಇಂತಹ ಸಾವು, ಈ ರೀತಿಯಲ್ಲಿ ಒದಗಿ ಏಕೆ ಬಂದಿತೋ ಎಂದು ದುರ್ಯೋಧನ ದುಃಖಿಸಿದನು.
| ಶಬ್ದಗಳು | ಅರ್ಥಗಳು |
|---|---|
| ಬಿನ್ನಣ | ನೈಪುಣ್ಯ |
| ಪಿನಾಕ | ತ್ರಿಶೂಲ |
| ಪಾಣಿ | ಧರಿಸಿದವ |
| ನೆರೆಯನ್ | ಅಸಮರ್ಥ |
| ಕುಂಭಸಂಭವ | ದ್ರೋಣ |
ಭಾವಾರ್ಥ ೪:
ಹೀಗೆ ದಃಖಿಸುತ್ತ ದ್ರೋಣರಿಗೆ ಮೂರು ಪ್ರದಕ್ಷಿಣೆ ಗೈದು ಬರುತ್ತಿರುವಾಗ ಆ ಬದಿಯಲ್ಲಿ (ಇನ್ನೊಂದು ಕಡೆ) ಅರೆಮುಚ್ಚಿದ ಕಣ್ಣೆಂಬ ಹೂ (ಯುದ್ಧೋತ್ಸಾಹದಿಂದ) ಅರಳಿದ ಮುಖ, ಕತ್ತರಿಸಿಹೋದ ಕೈಗಳಿಂದ ಕೂಡಿ ಅತಿ ಭಯಂಕರವಾಗಿ ಕಾಣುವ (ವೈರಿಗಳನ್ನು ಬಡಿಯಲು) ಅವುಡುಗಚ್ಚಿದ ಕೆಳದವಡೆಯಿಂದ ಕೂಡಿದ್ದ, ವೈರಿಗಳ ಬಾಣಗಳ ಹೊಡೆತದಿಂದ ಜರ್ಜರಿತವಾದ ಶರೀರಿಯಾಗಿ, ರಕ್ತದ ಕಡಲಿನಲ್ಲಿ ಮುಳುಗಿ ಬಿದ್ದಿರುವ ಯುದ್ಧವೀರನಾದ ಅಭಿಮನ್ಯುಕುಮಾರನನ್ನು ಕುರುಪತಿ ದುರ್ಯೋಧನ ಕಂಡನು.
| ಶಬ್ದಗಳು | ಅರ್ಥಗಳು |
|---|---|
| ಕಣ್ಮಲರ್ | ಕಣ್ಣೆಂಬಹೂ |
| ಅಲರ್ದ | ಅರಳಿದ |
| ಅಸುರತರ | ಅತಿ ಭಯಂಕರ |
| ಲೋಹಿತವಾರ್ಧಿ | ರಕ್ತದ ಕಡಲು |
| ಅಳ್ದು | ಮುಳುಗಿ |
| ಕಡಿವೋದ | ಕತ್ತರಿಸಿದ |
ಭಾವಾರ್ಥ ೫:
ಗುರುಪಣ್ಣಿದ ಚಕ್ರವ್ಯೂ
ಹರಚನೆ ಪೆಜರ್ಗರಿದು ಪುಗಲದಂ ಪೊಕ್ಕು ರಣಾ
ಜಿರದೊಳರಿನೃಪರನಿಕ್ಕಿದ
ನರಸುತ ನಿನ್ನೊರೆಗೆ ದೊರೆಗೆ ಗಂಡರುಮೊಳರೇ
ಹಾಗೆ ಬಿದ್ದಿರುವ ಅಭಿಮನ್ಯುವನ್ನು ಸರ್ಪಧ್ವಜನಾದ ದುರ್ಯೋಧನನು ನೋಡಿ ಹೀಗೆ ಪ್ರಲಾಪಿಸಿದನು.
ಗುರುಗಳಾದ ದ್ರೋಣರು ರಚಿಸಿದ ಚಕ್ರವ್ಯೂಹ ರಚನೆಯನ್ನು ಪ್ರವೇಶಿಸುವುದು ಬೇರೆಯವರಿಗೆ ಅಸಾಧ್ಯ (ತಿಳಿಯದು). ಅದನ್ನು ಪ್ರವೇಶಿಸಿ ರಣಾಂಗಣದಲ್ಲಿ ಅರಿನೃಪರನ್ನು (ವೈರಿ ರಾಜರು) ಸದೆಬಡಿದ ಅರ್ಜುನ ಪುತ್ರನಾದ ನಿನ್ನ ಸರಿಸಮಾನ ಪುರುಷರಿರುವರೇ?
| ಶಬ್ದಗಳು | ಅರ್ಥಗಳು |
|---|---|
| ಪಣ್ಣು | ರಚಿಸು |
| ಪುಗಲ್ | ಪ್ರವೇಶಿಸಲು |
| ರಣಾಜಿರ | ಯುದ್ಧಭೂಮಿ |
| ಅರಿ | ಶತ್ರು |
| ನರ | ಅರ್ಜುನ |
| ಒರೆದೊರೆ | ಸರಿಸಮ |
ಭಾವಾರ್ಥ ೬:
ಅಸಮಬಲ ಭವದ್ದಿಕ್ರಮ
ಮಸಂಭವಂ ಪೆಜರ್ಗೆ ನಿನ್ನನಾನಿನಿತಂ ಪ್ರಾ
ರ್ಥಿಸುವೆನಭಿಮನ್ಯು ನಿಜಸಾ
ಹಸೈಕದೇಶಾನುಮರಣಮೆಮಗಕ್ಕೆ ಗಡಾ
ಅಸಾಮಾನ್ಯ ಬಲದಿಂದ ಕೂಡಿದ ನಿನ್ನ ಪರಾಕ್ರಮ, ಶೌರ್ಯ ಬೇರೆ ಯಾರಲ್ಲೂ ಇರಲು ಸಾಧ್ಯವಿಲ್ಲ. ನಾನು ನಿನ್ನಲ್ಲಿ ಇಷ್ಟು ಮಾತ್ರ ಪ್ರಾರ್ಥಿಸುತ್ತೇನೆ. ನೀನು ತೋರಿಸಿದ ಸಾಹಸದಲ್ಲಿ ಒಂದು ಭಾಗವನ್ನಾದರೂ ನಾನು ತೋರಿಸಲು ಸಾಧ್ಯವಾಗಿ, ಅದಕ್ಕೆ ತಕ್ಕ ವೀರ ಮರಣ ನನಗೆ ದೊರೆತರೆ ಸಾಕು ಎಂದು ದುರ್ಯೋಧನ ಕೇಳಿಕೊಳ್ಳುತ್ತಾನೆ.
| ಶಬ್ದಗಳು | ಅರ್ಥಗಳು |
|---|---|
| ಭವದ್ವಿಕ್ರಮ | ನಿನ್ನ ಶೌರ್ಯ |
| ನಿಜ ಸಾಹಸ | ನಿನ್ನ ಪರಾಕ್ರಮ |
| ಏಕದೇಶ | ಒಂದಂಶ |
| ಅನುಮರಣ | ಅನುಗುಣವಾದ ಮರಣ |
| ನರ | ಅರ್ಜುನ |
| ಒರೆದೊರೆ | ಸರಿಸಮ |
ಭಾವಾರ್ಥ ೭:
ಜನಕಂಗೆಜಲಾಂಜಲಿಯಂ
ತನೂಭವಂ ಕುಡುವುದುಚಿತಮದುಗೆಟ್ಟಿಗಳ್
ನಿನಗಾಂ ಕುಡುವಂತಾದುದೆ
ತನೂಜ ನೀಂ ಕ್ರಮವಿಪರ್ಯಯಂ ಮಾಡುವುದೇ
ತಂದೆ ಮರಣಿಸಿದಾಗ ಅವನಿಗೆ ತರ್ಪಣೋದಕವನ್ನು ಮಗ ನೀಡುವುದು ನ್ಯಾಯ ಮತ್ತು ಕ್ರಮ. ಆದರೆ ಅದನ್ನು ಬಿಟ್ಟು ಮಗನಾದ ನಿನಗೆ ತಂದೆಯಾದ ನಾನು ಜಲಾಂಜಲಿಯನ್ನು ನೀಡುವಂತಾಯಿತೇ? ಮಗನೇ ನೀನು ಹೀಗೆ ಕ್ರಮ ವ್ಯತ್ಯಾಸವಾಗಿ, ಪದ್ಧತಿ ತಪ್ಪುವಂತೆ ಮಾಡಬಹುದೆ? ಎಂದು ದುರ್ಯೋಧನ ಕೇಳುತ್ತಾನೆ. ನ್ಯಾಯವಾಗಿ ತಂದೆಗೆ ಮಗ ಮಾಡಬೇಕಾದದ್ದನ್ನು ಈಗ ಮಗನಿಗೆ ತಂದೆ ಮಾಡಬೇಕಾಯಿತಲ್ಲಾ ಎಂದು ದುಃಖಿಸುತ್ತಾನೆ.
| ಶಬ್ದಗಳು | ಅರ್ಥಗಳು |
|---|---|
| ಭವದ್ವಿಕ್ರಮ | ನಿನ್ನ ಶೌರ್ಯ |
| ನಿಜ ಸಾಹಸ | ನಿನ್ನ ಪರಾಕ್ರಮ |
| ಏಕದೇಶ | ಒಂದಂಶ |
| ಅನುಮರಣ | ಅನುಗುಣವಾದ ಮರಣ |
| ನರ | ಅರ್ಜುನ |
| ಒರೆದೊರೆ | ಸರಿಸಮ |
ವಚನ :ಎಂದು ಪಶ್ಚಾತ್ತಾಪಂಗೆಯ್ಯ ಸಂಜಯಂ ಸಂತೈಸಿ ಮುಂದೊಯ್ಯ ಭೀಮಸೇನನ ಗದಾಪರಿಘ ಪ್ರಹರಣದಿಂದ ರುಧಿರ ಪ್ರವಾಹವಶಗತನಾಗಿರ್ದ ಯುವರಾಜನಿರ್ದೆಡೆಯಂ ಕುರುರಾಜನೆಯೇನಂದಾಗಳ್.
ಹೀಗೆ ಪಶ್ಚಾತ್ತಾಪಪಡುತ್ತಿರಲು ಸಂಜಯನು ಅವನನ್ನು ಸಮಾಧಾನಪಡಿಸಿ ಮುಂದೆ ಕರೆದೊಯ್ಯುತ್ತಿರುವಾಗ ಭೀಮನ ಗದಾಯುಧದ ಹೊಡೆತದಿಂದ ರಕ್ತ ಪ್ರವಾಹದಲ್ಲಿ ಸಿಲುಕಿ ಬಿದ್ದಿರುವ ಯುವರಾಜ ದುಶ್ಯಾಸನನಿರುವ ಕಡೆ ಕುರುನೃಪತಿ ದುರ್ಯೋಧನ ಬಂದು ಅವನನ್ನು ಕಂಡು ಹೀಗೆ ಹೇಳಿದನು:
೮ ನಿನ್ನಂ ಕೊಂದಂ ಗಡಮೊಳ
ನಿನ್ನುಂ ಕೊಂದವನನಿಕ್ಕಿ ಕೊಲ್ಲದೆ ಮಾಣ್ಣಾ
ನಿನ್ನುಂ ಮೊಳೆಂ ಗಡಸಾಲದೆ
ನಿನ್ನಯ ಕೂರ್ಮೆಗಮದನ್ನ ಸೌಧರ್ಮಿಕೆಗಂ
ನಿನ್ನನ್ನು ಕೊಂದವನು ಇನ್ನೂ ಬದುಕಿದ್ದಾನಲ್ಲ? ನಿನ್ನನ್ನು ಕೊಂದವನನ್ನು ಬಡಿದುಕೊಲ್ಲದೆ ಇನ್ನೂ ಬಿಟ್ಟಿರುವುದು ನೀನು
ನನ್ನಲ್ಲಿಟ್ಟಿರುವ ಪ್ರೀತಿಗೂ, ನಾನು ನಿನಗೆ ತೋರಿಸಬೇಕಾಗಿದ್ದ ಸೋದರ ಪ್ರೀತಿಗೆ, ಸಜ್ಜನಿಕೆಗೆ, ಸೌಜನ್ಯಕ್ಕೆ ಸಾಲದೇ? ಎಂದು ದುರ್ಯೋಧನ ಹಳಹಳಿಸುತ್ತಾನೆ. ಅಂದರೆ ಅವನು ಇನ್ನೂ ಬದುಕಿಯೇ ಇದ್ದಾನೆ. ನಾನೂ ಸಹ ಬದಕಿದ್ದೇನೆ! ನನ್ನ ಕರ್ತವ್ಯವನ್ನು ನಾನು ಮಾಡಿದ್ದರೆ ಅವನು ಸಾಯಲೇಬೇಕಿತ್ತು. ನೀನು ನನ್ನಲ್ಲಿಟ್ಟಿರುವ ಪ್ರೀತಿಗೆ ನಾನು ನಿನಗೆ ತೋರಿಸಬೇಕಾದ ಸೋದರ ಪ್ರೀತಿಗೆ ಇದು ಎಷ್ಟು ಹೊಂದಿಕೊಳ್ಳುತ್ತದೆ! ನಾನು ಹೀಗೆ ಸುಮ್ಮನಿರುವುದು ಅತ್ಯಂತ ಅನುಚಿತ ಎಂಬುದು. ಇಲ್ಲಿಯ ಭಾವ.
| ಶಬ್ದಗಳು | ಅರ್ಥಗಳು |
|---|---|
| ಗಡಮೊಳನಿನ್ನು | ಇನ್ನೂ ಬದುಕಿದ್ದಾನಲ್ಲ |
| ಇಕ್ಕಿ | ಬಡಿದು |
| ಮಾಣ್ | ಬಿಡು |
| ಕೂರ್ಮೆ | ಪ್ರೀತಿ, |
| ಸೌಧರ್ಮ | ಸಜ್ಜನಿಕೆ, |
| ಕೊಂದಂ | ಕೊಂದವನು. |
ಸಜ್ಜನಿಕೆ, ಕೊಂದಂ = ಕೊಂದವನು.
9. ಜನನೀಸ್ತನ್ಯಮನುಂಡೆನಾಂ ಬಳಿಕೆ ನೀಂ ಸೋಮಾಮೃತಂ ದಿವ್ಯಭೋ
ಜನಮೆಂಬಂತಿವನುಂಡೆನಾಂ ಬಳಿಕೆ ನೀಂ ಬಾಲತ್ವದಿ-
ಂದೆಲ್ಲಿಯುಂ ವಿನಯೋಲ್ಲಂಘನವಾದುದಿಲ್ಲ ಮರಣಕ್ಕೆನ್ನಿಂದೆ ನೀಂ ಮುಂಚಿದಯ್
ಮೊನೆಯೊಳ್ ಸೂಳ್ ತಡಮಾಯ್ತಿದೊಂದೆಡೆಯೊಳಂ ಹಾ ವತ್ಸ ದುಶ್ಯಾಸನಾ
ತಾಯಿಯ ಎದೆಹಾಲನ್ನು ಮೊದಲು ನಾನು ಉಂಡೆ. ಆ ಮೇಲೆ ನೀನು. ಯಜ್ಞ ಯಾಗಗಳಲ್ಲಿ ಪ್ರಾಶನ ಮಾಡುವ ಸೋಮರಸವನ್ನೂ, ಷಡ್‌ರಸೋಪೇತ ಭೋಜನ ಇವುಗಳನ್ನು ಮೊದಲು ನಾನು ಸ್ವೀಕರಿಸಿದೆ.
ಬಳಕ ನೀನು (ಯಜ್ಞ-ಯಾಗಾದಿಗಳು, ಮಂಗಲಕಾರ್ಯಗಳು, ಕರ್ಮಗಳು, ಭೋಜನಗಳು ಇತ್ಯಾದಿಗಳಲ್ಲಿ ಹಿರಿಯನಾದವನು ಮುಂದಿರಬೇಕೆಂಬುದು ಶಾಸ್ತ್ರ) ಬಾಲ್ಯದಿಂದ ಇದುವರೆಗೂ ಎಲ್ಲಿಯೂ ಅವಿನಯ ನಡೆದಿದ್ದಿಲ್ಲ,
ಈ ಕ್ರಮ, ಸರದಿಗಳು ತಪ್ಪಿದ್ದಿಲ್ಲ. ನಿಯಮ ಉಲ್ಲಂಘನೆಯಾದುದಿಲ್ಲ. ಮರಣದಲ್ಲಿ ಮಾತ್ರ ನೀನು ನನಗಿಂತ ಮೊದಲೇ ಹೋದೆ. ಯುದ್ಧ ಸಮಯದಲ್ಲೊಂದರಲ್ಲಿ ಮಾತ್ರ ನನ್ನ ಸರದಿ ತಡವಾಯ್ತು.
ಯುದ್ಧ ಹಾಗೂ ಮರಣದಲ್ಲಿ ನನಗಿಂತ ಮೊದಲೇ ನೀನು ಮುಂದೆ ನುಗ್ಗಿ ನನ್ನ ಸರದಿಯನ್ನು ಆಕ್ರಮಿಸಿ ಹಿಂದೆಂದೂ ಮಾಡದ ವಿನಯ ಭಂಗವನ್ನು ಮಾಡಿಬಿಟ್ಟೆ ದುಶ್ಯಾಸನಾ! ಎಂದು ದುರ್ಯೋಧನ ದುಃಖಿಸುತ್ತಾನೆ.
ಸೋಮಾಮೃತ = ಸೋಮರಸ, ಮೊನೆ = ಯುದ್ಧ, ಸೂಳ್ = ಸರದಿ, ಎಡೆ = ಸಮಯ, ಉಲ್ಲಂಘನೆ = ತಪ್ಪುವುದು
ಎಂದು ವಿಪ್ರಳಾಪಂಗೆಯು ತನ್ನ ತಮ್ಮನ ಕಳೇಬರಮಂ ನೋಡಲಾಗಿದೆ
ಅಲ್ಲಿಂ ತಳರ್ದುದಿನಕರ ತನೂಜನಂ ರಾಜರಾಜಂ ನೋಡಿ ಬಾಷ್ಟವಾರಿ ಧಾರಾಪೂರಿತ ಲೋಚನನುಮಾಗಿ
ಹೀಗೆ ದುಃಖಾಲಾಪ ಮಾಡುತ್ತ ತನ್ನ ತಮ್ಮನ ಕಳೇಬರವನ್ನು ನೋಡಲಾರದೇ ಅಲ್ಲಿಂದ ಹೊರಟು ಸೂರ್ಯಪುತ್ರ ಕರ್ಣನನ್ನು ನೋಡಿ, ಕಣ್ಣೀರಧಾರೆಗಳಿಂದ ಕೂಡಿದ ಕಣ್ಣುಗಳಿಂದ ದುರ್ಯೋಧನನು ಹೀಗೆ ಹೇಳುತ್ತಾನೆ.
ಕಳೇಬರ = ಶವ,
ತಳರ್ದು = ಹೊರಟು,
ದಿನಕರತನೂಜ = ಕರ್ಣ,
ಲೋಚನ = ಕಣ್ಣು
೧೦. ಆನುಂ ದುಶ್ಯಾಸನನುಂ
ನೀನುಂ ಮೂವರೆ ದಲಾತನುಂ ಕಳಿದ ಬಳಿ
ಕ್ಯಾನುಂ ನೀನೇ ದಲೀಗಲ್
ನೀನುಮಗಲ್ಲೆತ್ತವೋದೆಯಂಗಾಧಿಪತೀ
ನಾನು ದುಶ್ಯಾಸನ ಹಾಗೂ ನೀನು, ದಿಟವಾಗಿ ಇದ್ದವರು ನಾವು ಮೂವರೇ ಅಲ್ಲವೇ.
ದುಶ್ಯಾಸನನು ತೀರಿಹೋದ ಬಳಿಕ ನಾನು ನೀನು ಇಬ್ಬರೇ ಅಲ್ಲವೇ. (ನನಗೆ ನೀನು, ನಿನಗೆ ನಾನು ಮಾತ್ರವಲ್ಲವೇ? ಎಂಬ ಭಾವ)
ಈಗ ನೀನೂ ಸಹ ನನ್ನನ್ನು ಅಗಲಿ ಎಲ್ಲಿಗೆ ಹೋದೆ ಕರ್ಣಾ! ಎಂದು ದುರ್ಯೋಧನ ಕರ್ಣನನ್ನು ಕೇಳುತ್ತಾನೆ.
ದಲ್ = ದಿಟ ಅಲ್ಲವೇ,
ಕಳಿದ = ತೀರಿದ,
ಬಳಿಕ್ಕೆ = ನಂತರ,
ಅಗಲ್ಲು = ದೂರವಾಗಿ
ನಂತರ, ಅಗಲ್ಲು = ದೂರವಾಗಿ
11. ನಿನ್ನ ಕೆಳೆಯಂ ಸುಯೋಧನ
ನಂ ನೋಡದೆ ನುಡಿಯದಪ್ಪಿಕೊಳ್ಳದೆ ಬೆಸನೇ
ನೆನ್ನದೆ ಜೀಯೆನ್ನದೆ ದೇ
ವೆನ್ನದೆ ಯೇಕುಸಿರದಿರ್ಪೆಯಂಗಾಧಿಪತೀ
ನಿನ್ನ ಪ್ರಾಣಪ್ರಿಯನಾದ ಗೆಳೆಯ ದುರ್ಯೋಧನನನ್ನು ನೋಡದೆ, ಮಾತನಾಡಿಸದೆ, ಬಿಗಿದಪ್ಪಿಕೊಳ್ಳದೆ, ಜೀಯಾ, ಯಜಮಾನ, ಒಡೆಯ, ದೇವ,
ಏನಪ್ಪಣೆ ಏನು ಕೆಲಸ ಎಂದು ಕೇಳದೇ ಮಾತಾಡದೆ ಸುಮ್ಮನಿರುವೆ ಕರ್ಣಾ ಮಾತನಾಡು ಎಂದು ಸುಯೋಧನ ಕಣ್ಣೀರ್ಗರೆಯುತ್ತಾನೆ.
ಕೆಳೆಯ = ಗೆಳೆಯ,
ಬೆಸನ್ = ಆಜ್ಞೆ,
ಜೀಯಾ = ಒಡೆಯ,
ಎಸುರದಿರ್ಪೆ = ಮಾತನಾಡದೇ
12. ಅನೃತಂ ಲೋಭಂ ಭಯಮೆಂ
ಬಿನಿತುಂ ನೀನಿರ್ದ ನಾಡೊಳಿರ್ಕುಮೆ ರವಿನಂ
ದನ ನನ್ನಿ ಚಾಗಮಂ
ಬಿನಿತರ್ಕಂ ನೀನೆ ಮೊತ್ತಮೊದಲಿಗನಾದಯ್
ಸುಳ್ಳು, ದುರಾಸೆ, ಭಯ ಇವುಗಳು ನೀನಿರುವ ನಾಡಿನಲ್ಲೇ ಇರುವುದಿಲ್ಲ. ಸತ್ಯ, ತ್ಯಾಗ, ಪ್ರರಾಕ್ರಮಗಳಿಗೆ ರವಿನಂದನನಾದ 'ಕರ್ಣನೇ ನೀನೇ ಮೊತ್ತ ಮೊದಲಿಗನು.
ಅಸತ್ಯ, ಅತಿಆಸೆ, ಭಯಗಳು ನಿನ್ನ ವಿಷಯದಲ್ಲಿ ಹಾಗಿರಲಿ, ನೀನಿರುವ ಕಡೆ ಅವು ಇರುವುದಿಲ್ಲ. ಸತ್ಯ, ತ್ಯಾಗ, ಪೌರುಷಗಳಿಗೆ ನೀನೇ
12. ಅನೃತಂ ಲೋಭಂ ಭಯಮೆಂ
ಬಿನಿತುಂ ನೀನಿರ್ದ ನಾಡೊಳಿರ್ಕುಮೆ ರವಿನಂ
ದನ ನನ್ನಿ ಚಾಗಣ್ಮೆ
ಬಿನಿತರ್ಕ೦ ನೀನೆ ಮೊತ್ತಮೊದಲಿಗನಾದಯ್
ಸುಳ್ಳು, ದುರಾಸೆ, ಭಯ ಇವುಗಳು ನೀನಿರುವ ನಾಡಿನಲ್ಲೇ ಇರುವುದಿಲ್ಲ. ಸತ್ಯ, ತ್ಯಾಗ, ಪರಾಕ್ರಮಗಳಿಗೆ ರವಿನಂದನನಾದ ಕರ್ಣನೇ ನೀನೇ ಮೊತ್ತ ಮೊದಲಿಗನು. ಅಸತ್ಯ, ಅತಿಆಸೆ,
ಭಯಗಳು ನಿನ್ನ ವಿಷಯದಲ್ಲಿ ಹಾಗಿರಲಿ, ನೀನಿರುವ ಕಡೆ ಅವು ಇರುವುದಿಲ್ಲ. ಸತ್ಯ, ತ್ಯಾಗ, ಪೌರುಷಗಳಿಗೆ ನೀನೇ
'ಮೂಲ ಪುರುಷ ಹಾಗೂ ಅನ್ವರ್ಥಕನು ಎಂಬುದು ದುರ್ಯೋಧನನ ಮೆಚ್ಚುಗೆ.
ಅನೃತ = ಸುಳ್ಳು,
ನನ್ನಿ = ಸತ್ಯ,
ಚಾಗ = ತ್ಯಾಗ,
ಅಣ್ಣು = ಪರಾಕ್ರಮ
13. ಆನಚವೆಂ ಪೃಥೆಯವಳ್
ದಾನವರಿಪುವಳವನರ್ಕನಳವಂ ದಿವ್ಯ
ಜ್ಞಾನಿಸಹದೇವನಳವಂ
ನೀನಾರ್ಗೆಂದಾರುಮಳೆಯರಂಗಾಧಿಪತೀ
ನೀನು ಯಾರು? ಯಾರ ಮಗನೆಂದು ನಾನು ತಿಳಿದಿರುವೆ. ಕುಂತಿ ಅರಿತಿರುವಳು. ರಾಕ್ಷಸ ವೈರಿಯಾದ ಲೋಕಾಂತ- ರ್ಯಾಮಿ ಕೃಷ್ಣ ತಿಳಿದಿರುವನು, ಭಗವಾನ್ ಭಾಸ್ಕರ ಅರಿತಿರುವನು
, ಭೂತ-ಭವಿಷ್ಯ-ವರ್ತಮಾನಗಳನ್ನು ಹೇಳಬಲ್ಲ ದಿವ್ಯಜ್ಞಾನಿಯಾದ ಸಹದೇವ ತಿಳಿದಿರುವನು ಕರ್ಣಾ! ಬೇರೆ ಯಾರೂ ಇದನ್ನರಿಯರು.
(ಟಿಪ್ಪಣಿ : ಕರ್ಣ ಯಾರೆಂಬುದು ದುರ್ಯೋಧನನಿಗೆ ಮೊದಲೇ ತಿಳಿದಿತ್ತು ಎಂಬಲ್ಲಿ ರನ್ನನು ಪಂಪನನ್ನೇ ಅನುಸರಿಸಿದ್ದಾನೆ. ಒಮ್ಮೆ ಗಂಗಾತೀರದಲ್ಲಿ ಬೇಟೆಗೆ ಬಂದ ಕರ್ಣ,
ದುರ್ಯೋಧನರು ಸತ್ಯಂತಪರೆಂಬ ಋಷಿ ಆಶ್ರಮಕ್ಕೆ ಬಂದಾಗ, ಅವರು ಮೊದಲು ಕರ್ಣನಿಗೆ ಆಸನವನ್ನು ತೋರಿಸಿದರು.
ಇದರ ಕಾರಣವರಿಯಲು ಕರ್ಣನನ್ನು ಮುಂದೆ ಕಳುಹಿಸಿ ದರ್ಯೋಧನನು ಅವರಲ್ಲಿ ಪ್ರಶ್ನಿಸಿದಾಗ ಸತ್ಯಂತಪರು ಕರ್ಣನ ವೃತ್ತಾಂತವನ್ನು ಕುರುಪತಿಗೆ ಹೇಳುತ್ತಾರೆ.)
ಪೃಥೆ = ಕುಂತಿ,
ದಾನವರಿಪು = ಕೃಷ್ಣ,
ಅರ್ಕ = ಸೂರ್ಯ
14. ನೀನುಳ್ಳೋಡುಂಟು ರಾಜ್ಯಂ
ನೀನುಳ್ಕೊಡೆ ಪಟ್ಟಮುಂಟು ಬೆಳ್ಕೊಡೆಯುಂಟಯ್
ನೀನುಳ್ಕೊಡುಂಟು ಪೀಳಿಗೆ
ನೀನಿಲ್ಲದಿವೆಲ್ಲಮೊಳವೆ ಅಂಗಾಧಿಪತೀ.
ನೀನಿದ್ದರೆ ನನಗೆ ರಾಜ್ಯವುಂಟು. ನೀನಿದ್ದರೆ ಸಿಂಹಾ ಸನವುಂಟು, ನೀನಿದ್ದರೆ ಮಾತ್ರ ರಾಜಲಾಂಛನವಾದ ಶ್ವೇತಃಛತ್ರವುಂಟು. ನೀನಿದ್ದರೆ ಮಾತ್ರ ವಂಶ, ಸಂತತಿ, ಬಂಧು-ಬಾಂಧವರುಗಳುಂಟು. ನೀನಿಲ್ಲದಿದ್ದರೆ, ನೀನೇ ಹೋದಮೇಲೆ ಇವು ಇದ್ದರೂ, ಇಲ್ಲದಂತೆಯೇ ಸರಿ. ಈ ವೈಭವ ಸಂಪತ್ತುಗಳಿಂದ ನನಗೀಗ ಯಾವ ಸುಖ, ಪ್ರಯೋಜನಗಳಿಲ್ಲ. ನೀನಿಲ್ಲದೇ ನನಗೆ ಇವು ಯಾವವೂ ಬೇಕಿಲ್ಲವೆಂದು ದುರ್ಯೋಧನ ಹೇಳುತ್ತಾನೆ.
ಬೆಳ್ಕೊಡೆ (ಬೆಳ್ + ಕೊಡೆ) = ಬೆಳ್ಳಿಕೊಡೆ,
ಪೀಳಿಗೆ = ವಂಶ, ಸಂತತಿ,
ಪಟ್ಟ = ಸಿಂಹಾಸನ
15. ಹರಿ ಬೇಡೆ ಕವಚಮಂ ನೀ
ನರಿದಿತ್ತಯ್ ಕೊಂತಿ ಬೇಡೆ ಬೆಗಡದೆ ಕೊಟ್ಟಯ್
ಪುರಿಗಣೆಯಂ ನಿನಗೇಣೆ ಕಸ
ವರಗಲಿ ಮೆಯ್ಯಲಿಯುಮಾವನಂಗಾಧಿಪತೀ
ಇಂದ್ರನು ಬಂದು ಕವಚವನ್ನು ಬೇಡಿದಾಗ ನೀನು ಅದನ್ನು ಕತ್ತರಿಸಿಕೊಟ್ಟೆ. ತಾಯಿಯಾದ ಕುಂತಿ ಬಂದು ಬೇಡಿದಾಗ ಬೆದರದೆ,
ಆಳುಕದೆ, ಹಿಂದೆ ಮುಂದೆ ನೋಡದೆ ದಿವ್ಯಾಸ್ತ್ರವನ್ನು ನೀಡಿದೆ. ಕರ್ಣಾ ನಿನಗೆ ಸರಿಸಮನಾದ ದಾನಶೂರ (ಸುವರ್ಣ ದಾನಿ/ದಾನಶೂರ) ಪರಾಕ್ರಮಿ ಯಾರಿದ್ದಾರೆ?
ಎಂದು ದುರ್ಯೋಧನನು ಕರ್ಣನ ಶ್ರೇಷ್ಠತೆಗಳನ್ನು ಹೊಗಳುತ್ತಾನೆ.
ಹರಿ = ಇಂದ್ರ,
ಪುರಿಗಣೆ = ದಿವ್ಯಾಸ್ತ,
ಕಸವರಗಲಿ (ಕಸವರ + ಕಲಿ) = ದಾನಶೂರ,
ಅರಿದು = ಕತ್ತರಿಸಿ.
ಬೆಗಡದೆ = ಅಳುಕದೆ
(ಟಿಪ್ಪಣಿ : ತನ್ನ ಮಗ ಅರ್ಜುನನನ್ನು ಯುದ್ಧದಲ್ಲಿ ಕರ್ಣನು ಗೆಲ್ಲದಂತೆ ಮಾಡಬೇಕೆಂದು ಇಂದ್ರನು ವಿಪ್ರವೇಷದಲ್ಲಿ ಬಂದು ಕರ್ಣನ ಹುಟ್ಟಿನಿಂದಲೇ ಬಂದ ಸಹಜ ಕವಚವನ್ನು
ಬೇಡಿದಾಗ ಕರ್ಣನು ಅದನ್ನು ಕತ್ತರಿಸಿಕೊಟ್ಟನು. ಪುರಿಗಣೆಯನ್ನು ಯುದ್ಧದಲ್ಲಿ ಪ್ರಯೋಗಿಸುವುದಿಲ್ಲವೆಂದು ಕರ್ಣನಿಂದ ಕುಂತಿ ಮಾತನ್ನು ಪಡೆದಳೆಂದು ಪಂಪ ಭಾರತದಲ್ಲಿದೆ. ಒಮ್ಮೆ
ಪ್ರಯೋಗಿಸಿದ ಬಾಣವನ್ನು ಮತ್ತೆ ಬಿಡುವುದಿಲ್ಲವೆಂದು. ಒಮ್ಮೆ ಇಟ್ಟ ಗುರಿಯನ್ನು ಬದಲಾಯಿಸುವುದಿಲ್ಲವೆಂದು ಇತರ ಭಾರತ ಕತೆಗಳಲ್ಲಿ ಉಲ್ಲೇಖಿತವಾಗಿದೆ)
ಎಂದು ಶೋಕಾಂಧಂ ಕರ್ಣವಿರಹಿತನ ಪ್ಪುದಂ ಸಂಕ್ರಂದನನಂದನಂಗೆ ಮುಳಿದು ಶರಶಯನಗತ-ನಾಗಿರ್ಪ
ನದೀನಂದನನ ಚರಣಾರವಿಂದ ವಂದನಂಗೆಯ್ಯ-ಲೆಂದು ಗಾಂಧಾರೀನಂದನನೆಯೇನಂದಂ
ಹೀಗೆ ದುಃಖಪಡುತ್ತ, ಶೋಕದಿಂದ ಮುಂಗಾಣದೇ ಕರ್ಣನನ್ನು ಕಳೆದುಕೊಂಡ ಆತನು ತನ್ನ ಮಿತ್ರನ ಸಾವಿಗೆ ಕಾರಣನಾದ ಇಂದ್ರಪುತ್ರ ಅರ್ಜುನನ ಮೇಲೆ ಕೋಪಗೊಂಡು, ಬಾಣಗಳ ಮಂಚದ ಮೇಲೆ ಒರಗಿದ್ದ ಗಂಗಾಸುತ ಭೀಷ್ಮರ ಚರಣಕಮಲಗಳಿಗೆ ಎರಗಲೆಂದು ಗಾಂಧಾರೀ-ಪುತ್ರನಾದ ದುರ್ಯೋಧನನು ಬಂದನು.
ಸಂಕ್ರಂದನ = ಇಂದ್ರ,
ಸಂಕ್ರಂದನ ನಂದನ = ಅರ್ಜುನ,
ಶರಶಯನ = ಬಾಣದ ಮಂಚದ ಮೇಲೆ ಮಲಗಿರುವ, ನದೀನಂದನ = ಭೀಷ್ಮ,
ಚರಣ = ಪಾದ,
ಮುಳಿ = ಕೋಪ
ನೆನಪಿನಲ್ಲಿಡಬೇಕಾದ ಅಂಶಗಳು
* ರಣಾಂಗಣದಲ್ಲಿ ಸಂಜಯನೊಡನೆ ದುರ್ಯೋಧನ ಬರುತ್ತಿರುವ ರೀತಿ
* ದ್ರೋಣರನ್ನು ಕಂಡು ತನ್ನ ಕರ್ಮದ ಫಲವೆಂದು ದುಃಖಿಸಿದ ಪರಿ
* ಅಭಿಮನ್ಯುವನ್ನು ನೋಡಿ ದುರ್ಯೋಧನನ ಕೋರಿಕೆ
* ತನ್ನ ಮಗ ಲಕ್ಷಣಕುಮಾರನನ್ನು ಕಂಡಾಗ ದುರ್ಯೋಧನನ ದುಃಖ
* ತಮ್ಮ ದುಶ್ಯಾಸನನ ಕಳೇಬರವನ್ನು ನೋಡಲಾರದ ಸಂತಾಪ
* ಮಿತ್ರನಾದ ಕರ್ಣನ ಕಳೇಬರದ ಮುಂದೆ ದುರ್ಯೋಧನನ ಪ್ರಲಾಪ ಮತ್ತು ಮಿತ್ರನ ಹೊಗಳಿಕೆ.
Tags
I PU Kannada
