ಆಫೀಸಿನಿಂದ ಎರಡು ಮೂರು ಮನೆಯಾಚೆ ಎಲೆಕ್ಟಿಕ್ ತಂತಿಯ ಮೇಲೆ ಬಾಗಿದಂತಿದ್ದ ಆ ಎರಡು ದೊಡ್ಡ ಕೊಂಬೆಗಳು ಎಷ್ಟೋ ದಿನಗಳಿಂದ ಹಾಗೇ ಇತ್ತು. ಮೊದಲಿಂದ ಅದನ್ನು ಗಮನಿಸಿದ್ದ ರೆಸೆಪ್ಪನಿಸ್ಟ್ ಏನೋ ಮಾತಿನ ನಡುವೆ ಒಂದು ಬಾರಿ ಹೇಳಿದಾಗ ಮೋಹನರಾವ್ ಕೂಡ ಗಮನವಿಟ್ಟು ನೋಡಿದರು. ಮೊದಲು 'ನಮ್ಮ ಚಿಂತೆಯೆ: ನಮಗೆ ಹಾಸಲುಂಟು ಹೊದೆಯಲುಂಟು... ಪರರ ಚಿಂತೆ ನಮಗೇಕೆ' ಎಂದುಕೊಂಡು ಸುಮ್ಮನಾದರು. ನಗರದಲ್ಲಿ ನಾಲ್ಕಾರು ಬಾರಿ ಜೋರು ಮಳೆಗೆ ಎಲ್ಲೆಲ್ಲಿಯೋ ಮರಗಳು ಉರುಳಿ ಸಾವು ನೋವು, ವಿದ್ಯುತ್ ಸಂಪರ್ಕ ಕಡಿದು ಬಿದ್ದಿದ್ದು ಇದನ್ನೆಲ್ಲ ಪತ್ರಿಕೆಗಳಲ್ಲಿ ಓದಿ, ಟಿವಿಯಲ್ಲಿ ನೋಡಿ ಅಲ್ಲಿ ಇಲ್ಲಿ ನಡೆದ ಮಾತುಕತೆಯಲ್ಲಿ ಪಾಲುದಾರರಾಗುತ್ತಿರುವಂತೆ ಅವರಿಗೆ ಈ ಬಗ್ಗೆ ಏನಾದರೂ ಮಾಡುವ ಉಮೇದು ಬಂದಿತು. ಮೊದಲು ಬೆಸ್ಕಾಂನವರಿಗೆ ದೂರವಾಣಿಯಲ್ಲಿ ಸಂಪರ್ಕಿಸಿದರು. ಅವನು ಇವರ ಏರಿಯಾ ಯಾವುದು ಎಂದೆಲ್ಲ ಕೇಳಿದವ ಅದು ತಮ್ಮ ಏರಿಯಾ ಅಲ್ಲವೆಂದು, ಬೇರೆ ಒಂದು ನಂಬರನ್ನು ಕೊಟ್ಟವನೇ "ನಿಮ್ಮ ಆಫೀಸಿನ ಮುಂದಲ್ಲ ಅಂದ್ರೆ ನಿಮಗ್ಯಾಕ್ರೀ ಅದರ ಚಿಂತೆ" ಎಂದು ಜೋರಾಗಿ ಗೊಣಗಿ ಫೋನಿಟ್ಟ.
ಮೋಹನರಾವ್ ಆ ನಂಬರಿಗೆ ಕರೆ ಮಾಡಿ, ನಿಧಾನಕ್ಕೆ ವಿಷಯ ಹೀಗೆ ಅಂತ ಶುರು ಮಾಡಿದರು. "ದಿನಕ್ಕೆ ಹೀಗೆ ನೂರು ಜನ ಮಾಡ್ತಾರೀ, ನೀವು ರಾಮಾಯಣ ಪುರಾಣ ಊಪ್ತಾ ಕೂತ್ಕಬೇಡಿ, ಏನು ವಿಷಯ, ಯಾವ ಏರಿಯಾ ಅಂತ ಹೇಳಿ ಸಾಕು" ಎಂದಾತ ಗದರಿದ ಮೇಲೆ ಸಂಕ್ಷಿಪ್ತವಾಗಿ ಹೇಳಿ ಫೋನಿಟ್ಟು ಬೆವರೊರೆಸಿಕೊಂಡರು. ಮರುದಿನ ಬಂದ ಬೆಸ್ಕಾಂನ ನೌಕರ ಅದನ್ನು ನೋಡಿ ತುಸುವೇ ಬಾಗಿದ ಅದನ್ನು ತಾವು ಕಡಿಯಲು ಬರೋದಿಲ್ಲ. ಬಿದ್ದರೆ ಮಾತ್ರ ಕಡಿಯಬಹುದು. ಅರಣ್ಯ ಇಲಾಖೆಗೆ ಹೇಳಿ ಅಂದೇನೋ ಕುಂಟು ನೆವ ಹೇಳಿ ಹೋದ ಮೋಹನರಾವ್ ಬಿಡದೆ ಆತನಿಂದಲೇ ಇಸಿದುಕೊಂಡಿದ್ದ ಫೋನ್ ನಂಬರಿಗೆ ಕರೆ ಮಾಡಿದರು. ಅಷ್ಟಕ್ಕೂ ಸುಮ್ಮನಾಗದೆ ಒಂದು ಅರ್ಜಿಯನ್ನೂ ಬರೆದರೆ ಹೇಗೆ ಅನ್ನಿಸಿದ್ದೇ ಕೂತು ಕಂಪ್ಯೂಟರ್ನಲ್ಲಿ ಟಕಾಯಿಸಿದರು. ಆಫೀಸಿನ ಲೆಟರ್ಹೆಡ್ನಲ್ಲಿ ಕೊಟ್ಟರೆ ಸ್ವಲ್ಪ ಹೆಚ್ಚು ಪರಿಣಾಮಕಾರಿಯಾಗಿರುತ್ತೆ ಎಂದುಕೊಂಡು ಲೆಟರ್ ಹೆಡ್ನಲ್ಲಿ ಪ್ರಿಂಟ್ ಔಟ್ ತೆಗೆದುಕೊಂಡು ಕಳಿಸಿದರು. ನಾಲ್ಕಾರು ದಿನದ ನಂತರ ಅರಣ್ಯ ಇಲಾಖೆಯಿಂದ ಆಫೀಸಿಗೆ ಕರೆ ಬಂತು. ಅರ್ಜಿ ಕೊಟ್ಟವರು ಯಾರು ಎಂದು ರೆಸೆಪ್ಪನಿಸ್ಟ್ ನಾಲ್ಕಾರು ಜನಕ್ಕೆ ಕೇಳಿ ಅವರೆಲ್ಲ ನಾನಲ್ಲ ನೀನಲ್ಲ ಎಂದಾಗಿ ಕಡೆಗೆ ಅದು ಮೋಹನರಾವ್ ಎಂದು ಗೊತ್ತಾಯಿತು. ಫೋನ್ ಮಾಡಿದವರೊಂದಿಗೆ
41
ಮೋಹನರಾವ್ ಮಾತನಾಡಿ, ಮತ್ತೆ ನಾಲ್ಕಾರು ದಿನದ ನಂತರ ಅಂತೂ ಒಂದು ಬೆಳಿಗ್ಗೆ ಆ ಮರದ ಎರಡು ದೊಡ್ಡ ಕೊಂಬೆಯನ್ನು ಕಡಿಯಲಾಗಿತ್ತು. ರೆಸೆಪ್ಪನಿಸ್ಟ್ ಜತೆ ಮೋಹನರಾವ್ನ ಅಕೌಂಟ್ಸ್ನ ಸಹೋದ್ಯೋಗಿ ಮಧುರಾ ಕೂಡ 'ಆಫೀಸಿನ ಲೆಟರ್ಹೆಡ್ನಲ್ಲಿ ಅರ್ಜಿ ಕೊಟ್ಟಿದ್ರಾ' ಎಂದು ಮುಗುಮ್ಮಾಗಿ ಕೇಳಿದ್ದರ ಬಗ್ಗೆ ಮೋಹನರಾವ್ ಹೆಚ್ಚೇನೂ ತಲೆ ಕೆಡಿಸಿಕೊಳ್ಳಲೂ ಇಲ್ಲ.
ಮೋಹನರಾವ್ಗೆ ಇಲ್ಲಿ ಕೆಲಸ ಮಾಡಲೇಬೇಕೆಂಬ ಜರೂರೇನೂ ಇರಲಿಲ್ಲ.
ನಿವೃತ್ತಿಯಾಗುವಷ್ಟರಲ್ಲಿ ಮಗ, ಮಗಳು ಇಬ್ರೂ ಸೆಟಲ್ ಆಗಿದ್ದಾರೆ. ಸ್ವಂತ ಮನೆಯನ್ನೂ ಕಟ್ಟಿಸಿಯಾಗಿದೆ. ಡೆಲ್ಲಿಯಲ್ಲಿ ಬ್ಯಾಂಕ್ ಕೆಲಸದಲ್ಲಿರುವ ಮಗ. ಇಲ್ಲಿಯೇ ಖಾಸಗಿ ಕಂಪನಿಯೊಂದರಲ್ಲಿ ಒಳ್ಳೆಯ ಕೆಲಸದಲ್ಲಿರುವ ಮಗಳು ಇಬ್ಬರಿಗೂ ಮದುವೆ ಅಂತ ಮಾಡಿಬಿಟ್ಟರೆ ಆಯಿತು... ಇಷ್ಟಾಗಿ ಅವರೇ ನೋಡಿಕೊಂಡಿದ್ದರೂ ಅದನ್ನೇ ಹೂಂ ಅಂದುಬಿಡುವ, ವರದಕ್ಷಿಣೆ ಕೊಡುವುದೂ ಇಲ್ಲ, ತೆಕ್ಕೊಳ್ಳುವುದೂ ಬೇಡ. ಮಕ್ಕಳು ಚೆನ್ನಾಗಿದ್ದರೆ ಸಾಕು ಜಾತಿ ಗೀತಿಯನ್ನೂ ನೋಡುವುದು ಬೇಡ, ಈಗ ನಮ್ಮ ಕಾಲದಂತಲ್ಲ ಅಂತೆಲ್ಲ ಹೆಂಡತಿಗೂ ಹೇಳಿದ್ದಾರೆ. ಹಾಗೆ ನೋಡಿದರೆ ಮಕ್ಕಳೊಂದಿಗೆ ಇವರಿಗಿಂತ ಹೆಚ್ಚು ಆಪ್ತತೆಯಿಂದಿರುವ ಹೆಂಡತಿ ಕೂಡ ಇವರಿಗಿಂತ ಮೊದಲೇ ಇಂತಹ ವಿಚಾರಕ್ಕೆ ತೆರೆದುಕೊಂಡಿದ್ದರು.
ನಿವೃತ್ತಿಯಾದೊಡನೆ ಖಾಲಿ ಕುಳಿತುಕೊಳ್ಳುವುದು ಯಾಕೆ ಎಂದುಕೊಂಡು ಅಲ್ಲಿ ಇಲ್ಲಿ ಖಾಸಗಿ ಸಂಸ್ಥೆಗಳಿಗೆ ಅರ್ಜಿ ಗುಜರಾಯಿಸಿ, ಸಂದರ್ಶನಕ್ಕೆ ಹಾಜರಾಗಿ ಕಡೆಗೆ ಇದು ಮನೆಗೆ ತುಸು ಹತ್ತಿರ ಎಂದುಕೊಂಡು ಸೇರಿದರು. ಪಾಲಿಥೀನ್ ಕ್ಯಾರಿಬ್ಯಾಗ್ಗಳ ವಿರುದ್ಧ, ಪರಿಸರ ಸಂರಕ್ಷಣೆಗಾಗಿ ಆಂದೋಲನ, ಶಾಲಾ ಕಾಲೇಜುಗಳಲ್ಲಿ ಕಾರ್ಪೋರೇಟ್ ಫರ್ಮ್ ಗಳಿಗೆ ತರಬೇತಿ. ಏನೇನೋ ಸುಡುಗಾಡು ಸುಂಟಿಕೊಂಬು ವಿಚಾರದಲ್ಲಿ ಪ್ರಗತಿಪರವಾಗಿ ದುಡಿಯುತ್ತಿದ್ದ ಈ ಸಂಸ್ಥೆಯಲ್ಲಿ ಅಕೌಂಟ್ಸ್ ಕೆಲಸ ನೋಡಿಕೊಳ್ಳಲು ಸೇರಿದರು. ಸಾಕಷ್ಟು ವರ್ಷ ಸರ್ಕಾರಿ ಕಛೇರಿಯೊಂದರಲ್ಲಿ ದುಡಿದ ಅವರಿಗೆ ಮೊದಮೊದಲಿಗೆ ಭಾರೀ ಜನ ಇರಿಸುಮುರಿಸಾಗಿತ್ತು. ಹೆಚ್ಚಿನವರು ಹದಿಹರೆಯದವರು, ಮಧ್ಯವಯಸ್ಸಿನ ಸಹೋದ್ಯೋಗಿಗಳ ಮಧ್ಯ ಮೋಹನರಾವ್ ಒಬ್ಬರೇ ಹೀಗೆ ನಿವೃತ್ತಿ ಹೊಂದಿ, ಡೈ ಮಾಡಿದ ಕೂದಲಿನ ವ್ಯಕ್ತಿ ಕೆಲವು ಬಾರಿ ತಾವು ಇಂತಹ ಪರಿಸರಕ್ಕೆ ತೀರಾ ಔಟ್ಡೇಟೆಡ್ ಆಗಿಬಿಟ್ಟಿದ್ದೀನಾ ಅನ್ನಿಸಿ ತುಸು ಕೀಳರಿಮೆಯೂ ಹುಟ್ಟಿತ್ತು. ಎಲ್ಲ ಕೆಲವೇ ದಿನ.. ಕ್ರಮೇಣ ಅವರೊಂದಿಗೆ ಬೆರೆತು ಕೆಲಸ ಮಾಡುತ್ತಾ ತಮ್ಮದೇ ಛಾಪು ಒತ್ತಿದ್ದರು. ಅಕೌಂಟ್ನ ಪರಿಣತಿ, ಸಾಕಷ್ಟು ಚೆನ್ನಾಗಿದ್ದ ಅವರ ಇಂಗ್ಲಿಷ್, ಮಧುರನ ತಪ್ಪುಗಳನ್ನು ಗೊಣಗದೆ ಅವಳಿಗೆ ಸರಿಪಡಿಸಿ ಹೇಳುತ್ತಿದ್ದ ರೀತಿ, ಆಗೀಗ ಅವರು ಹೇಳುತ್ತಿದ್ದ ತಮ್ಮ ಸರ್ಕಾರಿ ವೃತ್ತಿಯ ತಮಾಷೆಯ ಘಟನೆಗಳು ಮೋಹನರಾವ್,
42
ಮತ್ತವರ ಸಹೋದ್ಯೋಗಿಗಳಿಗೆ ಅವರ ವಯಸ್ಸಿನ ಅಂತರವನ್ನು ಮರೆಯುವಲ್ಲಿ ನೆರವಾಗಿತ್ತು.
ಮೋಹನರಾವ್ ಕೊಂಚ ಬದಲಾಗಿದ್ದನ್ನು ಮನೆಯಲ್ಲಿ ಹೆಂಡತಿ, ಮಗಳೂ ಗಮನಿಸಿದ್ದರು. ಹೆಂಡತಿಗೆ ಸೀರೆ ಬಟ್ಟೆಗೆ ತಗೋ ಎಂದು ದುಡ್ಡು ಕೊಟ್ಟರೆ ಅಥವ ಹೆಚ್ಚೆಂದರೆ ಅವರೊಂದಿಗೆ ಆಗೀಗ ತರುವಾಗ ತಾವೂ ಜತೆಗೆ ಹೋಗುವುದನ್ನು ಬಿಟ್ಟರೆ ಎಂದೂ ತಾವಾಗಿಯೇ ಸೀರೆ ತರದ ಮೋಹನರಾವ್ ಒಂದು ದಿನ ಎರಡು ಕಾಟನ್ ಸೀರೆ ತಂದಿದ್ದರು. ತುಂಬ ಸುಂದರ ಕಸೂತಿ ಮಾಡಿದ ತಿಳಿ ಬಣ್ಣದ ಆ ಸೀರೆಗಳನ್ನು ನೋಡಿದಾಗ ಹೆಂಡತಿಗೆ ಖುಷಿಯಾಗಿದ್ದರೂ ಕೊಂಚ ವಿಚಿತ್ರವೂ ಅನ್ನಿಸಿಬಿಟ್ಟಿತ್ತು. "ಆಫೀಸಿನಲ್ಲಿ ದಿನೇಶ ಊರಿಗೆ ಹೋಗ್ತಾ ತಮ್ಮಮ್ಮಂಗೆ ಅಂತ ಶಾಂತಾನ ಹತ್ತಿರ ಸೀರೆ ತಂದುಕೊಡಲಿಕ್ಕೆ ಹೇಳಿದ್ದ, ಅವಳು ಒಂದು ಐದಾರು ತಂದು ಆರಿಸಿಕೊಳ್ಳಕ್ಕೆ ಹೇಳಿದ್ದು. ಶಾಂತಾ ನೀವೂ ತಗೊಂಡುಬಿಡಿ ಸಾರ್ ಅಂತ ತಮಾಶಿ ಮಾಡಿದ್ದು.. ಇವೆರೆಡು ಚೆನ್ನಾಗಿ ಕಾಣಿಸ್ತು, ಸರಿ ಅಂತ ತಗಂಡೆ" ಮೋಹನರಾವ್ ಪೆದ್ದುಪೆದ್ದಾಗಿ ವಿವರಿಸಿದ್ದರು. ಮಗನಿಗೂ ಆಗೀಗ ಇ-ಮೇಲ್ ಮಾಡಿ ತಮ್ಮ ಆಫೀಸಿನ ವಿಷಯ. ಮನೆಯ ವಿಷಯ ವಿಸ್ತಾರವಾಗಿಯೇ ಬರೆಯಲಾರಂಭಿಸಿದ್ದರು. ಮೊದಲಿಂದ ಮಗನೊಂದಿಗಾಗಲೀ, ಮಗಳೊಂದಿಗಾಗಲೀ ಪ್ರೀತಿ ವಾತ್ಸಲ್ಯವಿದ್ದರೂ ಅಷ್ಟಾಗಿ ತೋರುಗೊಡದ ಮೋಹನ್ರಾವ್ ಈ ಆಫೀಸಿಗೆ ಸೇರಿದ ಮೇಲೆ ಎಳೆ ವಯಸ್ಸಿನ ಸಹೋದ್ಯೋಗಿಗಳ ಪ್ರಭಾವದಿಂದಲೋ ಬದಲಾಗಿದ್ದಂತೂ ನಿಜವೇ. ಏನೋ ಕೊಂಚ
ಆಗೀಗ ಸಹೋದ್ಯೋಗಿಗಳು ತಮ್ಮ ಅಪ್ಪ, ಅಮ್ಮನಿಗೆ ಹುಷಾರಿಲ್ಲದ್ದನ್ನೋ, ಅದರಿಂದ ತಮಗೆ ಎಷ್ಟು ಕಳವಳವಾಗುತ್ತಿದೆ ಎಂದೋ, ಅವರು ಊರಿಗೆ ಗೀರಿಗೆ ಹೋದಾಗ "ಐ ಆಮ್ ಮಿಸ್ಸಿಂಗ್ ದೆಮ್ ಯು ನೋ" ಎಂದು ತುಟಿಕೊಂಕಿಸಿ ಹೇಳುವಾಗ ಅರೆ ತಮ್ಮ ಮಕ್ಕಳಿಗೂ ಹೀಗೇ ಅನ್ನಿಸಬಹುದಲ್ಲವೇ ಎಂಬೊಂದು ಭಾವನೆಗೆ ಮೋಹನರಾವ್ ಫಕ್ಕಾಗುತ್ತಿದ್ದರು. ಆ ಸಹೋದ್ಯೋಗಿಗಳಿಗೆ ಸಾಂತ್ವನದ ನಾಲ್ಕು ಮಾತಾಡಿ ಮಗನಿಗೆ, ಮಗಳಿಗೆ ಉದ್ದದ ಇ-ಮೇಲ್ ರವಾನಿಸ್ತಾ ಇದ್ರು. ಬಾರಿ ಇರುವ ಮಗಳೊಂದಿಗೂ ಸರಿಯಾಗಿ ಎಷ್ಟೋ ಮನೆಯಲ್ಲಿಯೇ ಮಾತಾಡಲಿಕ್ಕಾಗದೇ ತಾವು ಓದಿದ ಪುಸ್ತಕಗಳು, ಅಕೌಂಟ್ಸ್ ಕುರಿತಾದ ತಮಾಷೆಯ ಸಂಗತಿಗಳು, ದಾರಿಯಲ್ಲಿ ಕಂಡ ಘಟನೆಗಳು ಇತ್ಯಾದಿ ಹಂಚಿಕೊಂಡು ಇ-ಮೇಲ್ ರವಾನಿಸ್ತಾ ಇದ್ದರು.
ಸಹೋದ್ಯೋಗಿಗಳು ತಮ್ಮ ಬಾಲ್ಯದ ಘಟನೆಗಳನ್ನು ನೆನಪಿಸಿಕೊಂಡು ಅಪ್ಪ ಅಮ್ಮನ ಬಗ್ಗೆ ಹೇಳಿದಾಗ ತಟ್ಟನೆ ತಮ್ಮ ಮಕ್ಕಳ ಬಗ್ಗೆ. ತೀರಿಕೊಂಡ ತಮ್ಮ ಅಪ್ಪನ ಬಗ್ಗೆ ನೆನಪಿಸಿಕೊಳ್ಳುವ ಮೋಹನರಾವ್ ತಮ್ಮ ಬಾಲ್ಯವನ್ನು ಮತ್ತು ತಮ್ಮ ಮಕ್ಕಳ
43
ಬಾಲ್ಯವನ್ನು ಒಟ್ಟಿಗೇ ನೆನಪಿಸಿಕೊಂಡು ವಿಚಿತ್ರ ಬೆಚ್ಚನೆಯ ಭಾವಕ್ಕೆ ಪಕ್ಕಾಗುತ್ತಿದ್ದರು. ಅಂತಹ ದಿನಗಳಲ್ಲಿ ಎರಡೂ ಬಾಲ್ಯವನ್ನು ಮತ್ತೆ ಅನುಭವಿಸುತ್ತಿರುವಂತೆ ಒಂದೇ ಮೇಲ್ನ್ನು ಬರೆದು ಇಬ್ಬರಿಗೂ ಕಳಿಸುತ್ತಿದ್ದರು. ಈ ದಿನಗಳಲ್ಲಿ ಮಗ, ಮಗಳನ್ನು ಹೆಚ್ಚು ಅರ್ಥೈಸಿಕೊಂಡಿರುವ ಭಾವನೆಯೊಂದು ಆವರಿಸಿಕೊಂಡಿರುತ್ತಿತ್ತು. ಮಗ, ಮಗಳಲ್ಲಿ ತಮ್ಮ, ಹೆಂಡತಿಯ ಇಬ್ಬರ ಜೀವಕೋಶಗಳು ಉಸಿರಾಡುತ್ತಿದೆ. ಅದಾವುದೋ ಅಮೃತಘಳಿಗೆಯಲ್ಲಿ ತಮ್ಮಿಬ್ಬರ ಕೋಶಗಳು ಒಂದರೊಳಗೊಂದು ಸೇರಿ. ಅದೀಗ ಹೀಗೆ ದೂರದಲ್ಲಿ ಮೂರ್ತ ಸ್ವರೂಪದಲ್ಲಿ ಉಸಿರಾಡುವ, ಮಿಡಿಯುವ ಜೀವವಾಗಿದೆಯಲ್ಲ ಎಂಬ ಭಾವ ಉತ್ಕಟವಾಗಿ ಆವರಿಸಿದಾಗೆಲ್ಲ ಲವ್ ಯು ಎಂದೋ ಮಿಸ್ಸಿಂಗ್ ಯು ಎಂದೋ ಹನಿಗಣ್ಣಾಗಿ ಮೇಲ್ ಅಥವಾ ಮೆಸೇಜ್ ಕಳಿಸುತ್ತಿದ್ದರು. ಆಗೀಗ ಯಾಕೆ ಇತ್ತೀಚಿಗೆ ಹೀಗೆಲ್ಲ ಅನ್ನಿಸುತ್ತಿದೆ ಎಂದು ತಮ್ಮೊಳಗೇ ಚಿಂತಿಸಿ ವಯಸ್ಸಾಗುತ್ತಿದೆ ಎಂದು ಮಕ್ಕಳ ಮೇಲೆ ಅವಲಂಬನೆಯಾ, ಅವರು ತಮ್ಮನ್ನು ಚೆನ್ನಾಗಿ ನೋಡಿಕೊಳ್ಳಲಿ ಎಂಬ ಸ್ವಾರ್ಥವಾ ಎಂದೂ ಅರ್ಥವಾಗದೇ ಕಡೆಗೆ ಯಾಕೆ ಸುಮ್ಮನೆ ಗೊಂದಲ ಎಂದುಕೊಂಡು ಹೀಗನ್ನಿಸಿದ್ದನ್ನೂ ಉದ್ದಕ್ಕೆ ಬರೆಯುತ್ತಿದ್ದರು. ಆಗೆಲ್ಲ ಅವರಿಗೆ ಅಮ್ಮ ಬೆರಳು ಹಿಡಿದು ಸ್ಟೇಟ್ನಲ್ಲಿ ಅ, ಆ ತಿದ್ದಿಸಿದ್ದು, ಐದನೇ ಕ್ಲಾಸ್ನಲ್ಲಿ ಎಬಿಸಿಡಿ ಕಲಿಯುವಾಗ ಉಂಟಾದ ಕೀಳರಿಮೆ ಎರಡೂ ಒಟ್ಟಿಗೇ ನೆನಪಾಗಿ ಈ ಅಕ್ಷರಗಳು ನಮ್ಮನ್ನು ಎಷ್ಟೆಲ್ಲ ಹತ್ತಿರಕ್ಕೆ ತರುತ್ತಲ್ಲ ಎಂಬ ವಿಸ್ಮಯದಿಂದ ಮತ್ತೆ ಮತ್ತೆ ಇ-ಮೇಲ್ನಲ್ಲಿಯ, ಮೊಬೈಲ್ನ ಮೆಸೇಜ್ ಕಿಂಡಿಯಲ್ಲಿಯ ಅಕ್ಷರಗಳನ್ನು ದಿಟ್ಟಿಸುತ್ತಿದ್ದರು. ಪ್ರತಿ ಬಾರಿ ಇ-ಮೇಲ್ ಬಾಕ್ಸ್ ಅನ್ನು ಅಥವಾ ಮೊಬೈಲ್ನ ಮೆಸೇಜ್ ಅನ್ನು ತೆರೆಯುವಾಗ ಹೊಸದೇ ಬೆಳಕಿಂಡಿಯೊಂದು ತನ್ನೆಲ್ಲ ಮಾಂತ್ರಿಕತೆಯೊಡನೆ ಇದೀಗ ಬೆರಳಂಚಿನಲ್ಲಿ ತೆರೆಯಲಿದೆ ಎಂಬ ಭಾವಕ್ಕೆ ಪಕ್ಕಾಗುತ್ತಿದ್ದರು. ಆ ಬೆಳಕಿಂಡಿಯಲ್ಲಿ ಕಾಣುವ ಎಲ್ಲ ಜೀವಭಾವಗಳು ಸ್ಪಟಿಕ ಶುದ್ಧ... ಯಾವುದೂ ಭಾರವೆನ್ನಿಸದ ಹಾಗೆ ಸಪೂರ ಅಕ್ಷರಗಳು ತುಂಬಿಕೊಡುವ ಪರಸರ ಅರಿತ ಭಾವ... ಮಕ್ಕಳು ಹೇಳದ ಕೆಲವು ವಿಷಯಗಳನ್ನು ಕೂಡ ಹಾಗೆ ಕುಳಿತು ಅಕ್ಷರ ನೋಡುತ್ತಿದ್ದರೆ ತಾನೇ ತಾನಾಗಿ ಗ್ರಹಿಸಿದ ಭಾವ... ಹೈಸ್ಕೂಲು, ಕಾಲೇಜು ದಿನಗಳಲ್ಲಿ ಕಾರ್ಡಿನಲ್ಲಿ, ಇನ್ಲ್ಯಾಂಡ್ ಪತ್ರಗಳಲ್ಲಿ ಬರೆಯುತ್ತಿದ್ದಾಗ ಆವರಿಸಿಕೊಳ್ಳುತ್ತಿದ್ದ ಉತ್ಕಟತೆಯೇ ಈಗಲೂ ಆವರಿಸಿಕೊಳ್ಳುವುದು ಅವರಿಗೆ ವಿಸ್ಮಯವೆನ್ನಿಸುತ್ತಿತ್ತು. ಎಷ್ಟೋ ಬಾರಿ ಮಕ್ಕಳ ಮೇಲ್ ತೆರೆದು ನೋಡುವಾಗ ಫಕ್ಕನೆ ಮಗ ಚಿಕ್ಕವನಿದ್ದಾಗ ಜಾಸ್ತಿ ಎಣ್ಣೆ ಹಾಕಿದ್ದಾಗ ಅವನ ಕೂದಲಿನಿಂದ ಬರುತ್ತಿದ್ದ ಬೆವರು ಮಿಶ್ರಿತ ಕೊಬ್ಬರಿ ಎಣ್ಣೆಯ ವಾಸನೆ, ಸದಾ ಒಂದಲ್ಲ ಒಂದು ಗಾಯ ಮಾಡಿಕೊಂಡಿರುತ್ತಿದ್ದ ಅವನಿಂದ ರಾತ್ರಿ ಬರುತ್ತಿದ್ದ ಮುಲಾಮಿನ ವಾಸನೆ, ಮಗಳು ಹಬ್ಬದ ದಿನಗಳಲ್ಲಿ ಹಾಕಿಕೊಳ್ಳುತ್ತಿದ್ದ ಕಪಾಟಿನಿಂದ ಅದೇ ತೆಗೆದ ಜರಿ ಲಂಗದ ವಾಸನೆ, ಅವಳ ಎರಡು ಜಡೆಯಲ್ಲಿ ಇರುತ್ತಿದ್ದ ಮಲ್ಲಿಗೆಯ ವಾಸನೆ ಬೆವರಿನೊಂದಿಗೆ
44
ಬೆರೆತು ವಿಚಿತ್ರ ಕಂಪು ಬರುತ್ತಿದ್ದದ್ದು ಹೀಗೆ ಮಕ್ಕಳ ಏನೆಲ್ಲ ಮೈ ವಾಸನೆಯೂ ಮೇಲ್ ನಲ್ಲಿ ಕಾಣುವ ಇಂಗ್ಲಿಷ್ ಅಕ್ಷರಗಳಿಗಂಟದಂತೆ ಭಾಸವಾಗುತ್ತಿತ್ತು. ಊಟ ಮುಗಿಸಿ ಹೆಂಡತಿಯೊಂದಿಗೆ ವಾಕಿಂಗ್ ಹೋದಾಗ ತಪ್ಪದೇ ಈ ಮೇಲ್ಗಳ ಒಂದೂ ವಾಕ್ಯವನ್ನು ಬಿಡದೆ ಹೇಳುತ್ತಿದ್ದರು. ಮಗಳು. ಮಗ ದೇವರೇ... ಇ-ಮೇಲ್ಗೆ ಸಾವಿರ ಎಂದುಕೊಂಡು ಥ್ಯಾಂಕ್ಸ್ ಗೊತ್ತಾಗಿರಲಿಲ್ಲ. ಪರಸ್ಪರ ನಕ್ಕಿದ್ದು ಮಾತ್ರ ಮೋಹನರಾವ್ಗೆ
ಆಫೀಸಿನ ಹಿಂದುಗಡೆ ಇರುವ ಮನೆಯೊಂದರಿಂದ ಆಗೀಗ ಮಧ್ಯಾಹ್ನದ ವೇಳೆಯಲ್ಲಿ ನೀರು ಬೀಳುವ ಸದ್ದು ತುಂಬ ಹೊತ್ತು ಕೇಳ್ತಾ ಇತ್ತು. ಜತೆಗೆ ಕಾಂಪೌಂಡಿನಿಂದ ಹೊರಗೆ ಹಳ್ಳದಂತೆ ಹರಿಯುವ ನೀರು... ನಾಲ್ಕಾರು ಸಲ ಭಾರೀ ಗಮನವಿಟ್ಟು ಗಮನಿಸಿದ ಮೋಹನರಾವ್ ಕಡೆಗೆ ಅದು ಹಿಂದಿನ ಮನೆ ಟ್ಯಾಂಕ್ ತುಂಬಿ ಹೆಚ್ಚಾದ ನೀರು ಕೆಳಗೆ ಬೀಳೋದು ಎಂದು ಗುರುತಿಸಿದರು. ಆಫೀಸಿನಲ್ಲಿ ಸಹೋದ್ಯೋಗಿಗಳೊಂದಿಗೂ ಹೇಳಿದರು. ಅಯ್ಯೋ ಅವರು ಯಾವಾಗಲೂ ಹಾಗೇ... ಕಾವೇರಿ ನೀರು ಬರುತ್ತಲ್ಲ ಅದನ್ನು ಮೇಲಿನ ಟ್ಯಾಂಕಿಗೆ ತುಂಬಿಸಲು ಆನ್ ಮಾಡಿಟ್ಟು ಎಲ್ಲಾದೂ ಕೆಲವು ಸಲ ಆಚೆ ಹೋಗಿ ಬಿಟ್ಟಿರುತ್ತಾರೆ. ಅದು ತುಂಬಿ ಬೀಳ್ತಾ ಇರುತ್ತೆ ಎಂದು ಅದೇನೂ ದೊಡ್ಡ ವಿಷಯವಲ್ಲ ಎಂದು ತೇಲಿಸಿಬಿಟ್ಟರು.
ಆದರೆ ಮೋಹನರಾವ್ಗೆ ಮಾತ್ರ ಅದು ಗೀಳಿನಂತೆ ಆವರಿಸಿಕೊಂಡು ಬಿಟ್ಟಿತು. ಹಾಗೆ ವಾರದಲ್ಲಿ ಸರಾಸರಿ ಎಷ್ಟು ದಿನ ನೀರು ಕೆಳಗೆ ಹೆಚ್ಚಾಗಿ ಬೀಳುತ್ತೆ. ಎಷ್ಟು ನೀರು ವ್ಯರ್ಥವಾಗಬಹುದು ಎಂದು ತಮ್ಮ ಎಕ್ಸೆಲ್ ಶೀಟಿನಲ್ಲಿ ಲೆಕ್ಕ ಹಾಕಿಯೇ ಹಾಕಿದರು. ಮಧುರ ಇವರ ಗೀಳನ್ನು ಗಮನಿಸಿ ಇನ್ನೊಂದಿಬ್ಬರಿಗೆ ಹೇಳಿ ಮರೆಯಲ್ಲಿ ನಕ್ಕಳು. ಆ ಮನೆಯ ಫೋನ್ ನಂಬರನ್ನು ಸಂಗ್ರಹಿಸಿದ ಮೋಹನರಾವ್ ಮೊದಲಿಗೆ ಫೋನ್ ಮಾಡಿದರು. "ಅರೆ ನಿಮಗ್ಯಾಕ್ರೀ.. ನೀವ್ಯಾರೀ" ಎಂದೆಲ್ಲ ಆ ಹೆಂಗಸು ತಾಳ್ಮೆಯಿಲ್ಲದೆ ಮಾತನಾಡಿ ಫೋನ್ ಕುಕ್ಕಿದಾಗ ಮೋಹನರಾವ್ಗೆ ಮುಖಕ್ಕೆ ಹೊಡೆದ ಅನುಭವ. ಮೂರು ನಾಲ್ಕು ದಿನದ ನಂತರ ಮತ್ತದೇ ಹಾಡು.... ಮೋಹನರಾವ್ ಮತ್ತೆ ರಿಂಗಾಯಿಸಿದರು. 'ನಾನ್ಯಾರು ಕೇಳಲಿಕ್ಕೆ ಅಂದ್ರೆ... ನಾನೂ ಒಬ್ಬ ನಾಗರಿಕ... ಹೀಗೆಲ್ಲ ನೀರು ವ್ಯರ್ಥ ಮಾಡಲಿಕ್ಕೆ ಯಾರಿಗೂ ಹಕ್ಕಿಲ್ಲಾರೀ... ನೀವು ಜಲಮಂಡಳಿಗೆ ಹಣ ಕಟ್ಟಿರಾ ಅಂದ್ರೆ ಅದರರ್ಥ ನೀವು ನೀರನ್ನು ವ್ಯರ್ಥ ಮಾಡಬಹುದು ಎಂದಲ್ಲ..' ಹಾಗೆ ಹೀಗೆ ಎಂದು ತಾವೂ ತರ್ಕಬದ್ದವಾಗಿ ಮಾತನಾಡಬೇಕು ಎಂದು ಹತ್ತಾರು ಬಾರಿ ರಿಹರ್ಸಲ್ ಮಾಡಿಕೊಂಡಿದ್ದ ಮೋಹನರಾವ್ ಆ ಹೆಂಗಸು 'ಯಾವಾಗ್ಲೋ ಒಂದು ಸಲ ಎಲ್ಲರ ಮನೆಯಲ್ಲೂ ಆಗುತ್ತೇರಿ, ಅದೇನು ಮಹಾ ದೊಡ್ಡ ವಿಷಯ ಅಂತ ಮಾತಾಡ್ತೀರಾ... ನಿಮಗೆ ಮಾಡಕ್ಕೆ ಬೇರೇನೂ ಕೆಲಸವಿಲ್ವಾ.. ನಮ್ಮನೇಲಿ ನೀರು ಹೋದ್ರೆ ನಿಮಗೇನ್ರಿ...' ಎಂತೆಲ್ಲ ಇವರಿಗಿಂತ ಮೊದಲೇ ರೇಗಿ, ಉಸಿರೆತ್ತಲೂ
45
ಅಚಾನಕ್ ಇಡೀ ಆಫೀಸಿನಲ್ಲಿ ಎಲ್ಲರಿಗೂ ಅವಕಾಶ ಕೊಡದೇ ಫೋನಿಟ್ಟಾಗ ಮಾತ್ರ ಯಾಕೋ ತೀವ್ರ ಅವಮಾನವೆನ್ನಿಸಿತು. ಇವರು ಫೋನಿನಲ್ಲಿ ಮಾತನಾಡುವಾಗ ಸಹೋದ್ಯೋಗಿಯೊಬ್ಬ ವಿಷಯವನ್ನು ಗೊತ್ತಾಗುವಂತೆ ಮಾಡಿಬಿಟ್ಟಿದ್ದ ಈ ಮೋಹನರಾವ್ಗೆ ಯಾಕೆ ಈ ಗೀಳು ಎಂಬಂತೆ ಎಲ್ಲರೂ ತಮ್ಮ ತಮ್ಮೊಳಗೆ ಮಾತನಾಡಿಕೊಂಡು ಕೆಲವರಿಗೆ ವಯಸ್ಸಾದ ಮೇಲೆ ಹಿಂಗೇ, ಏನೋ ಮಹಾ ಸುಧಾರಣೆ ಮಾಡುವ ಹುಚ್ಚು ಆವರಿಸಿಕೊಳ್ಳುತ್ತೆ ಎಂಬ ನಿರ್ಧಾರಕ್ಕೆ ಒಂದು ಸುಮ್ಮಗಾದರು. ಅವರು ಯಾರೂ ವಯಸ್ಸಾದ ನಂತರ ತಾವೂ ಆ ಕೆಲವರ ಪಟ್ಟಿಯಲ್ಲಿ ಸೇರಬಹುದೇನೋ ಎಂಬ ಯೋಚನೆಗೆ ಕಿಂಚಿತ್ತೂ ಪಕ್ಕಾಗುತ್ತಿರಲಿಲ್ಲ.
ನಾಲ್ಕಾರು ದಿನ ತಳಮಳವೆನ್ನಿಸಿಕೊಂಡು ಮಗ ಮಗಳೊಂದಿಗೆ ಇ-ಮೇಲ್ನಲ್ಲಿ ಈ ವಿಚಾರ ಹಂಚಿಕೊಂಡರು. ಹೆಂಡತಿಗೂ ಹೇಳಿದರು. ಮೊದಲಿಗೆ ಇವರಿಗ್ಯಾಕೆ ಈ ಉಸಾಬರಿ ಎಂದುಕೊಂಡರೂ ಹೆಂಡತಿಗೂ ಇವರ ಗೀಳು ತಟ್ಟತೊಡಗಿ, ಬೆಂಗಳೂರಿನ ಯಾವ್ಯಾವ ಬಡಾವಣೆಯಲ್ಲಿ ಎಷ್ಟೆಷ್ಟು ನೀರಿನ ಬರ ಇದೆ. ಅಂತಾದ್ರಲ್ಲಿ ಹೀಗೆಲ್ಲ ವ್ಯರ್ಥಪೋಲು ಮಾಡುವುದೇ ಎಂಬ ಲೆಕ್ಕಾಚಾರವನ್ನು, ಈಗಿನ ಜನಕ್ಕೆ ನೀರಿನ ಬೆಲೆಯೇ ಗೊತ್ತಿಲ್ಲ, ಛೇ ಎಂಬ ವಾದವನ್ನು ಮುಂದಿಟ್ಟಳು. ಕಡೆಗೆ ಮೋಹನ್ ರಾವ್ ಜಲಮಂಡಳಿಗೊಂದು ಪತ್ರ ಬರೆದು ಹಾಕಿದರು. ಇಂಗ್ಲಿಷ್ ಹಾಗೂ ಕನ್ನಡ ದಿನಪತ್ರಿಕೆಗಳ ಓದುಗರ ವಿಭಾಗಕ್ಕೂ ಪತ್ರಗಳನ್ನು ಬರೆದು ನಾಲ್ಕಾರು ಪತ್ರಿಕೆಗಳಲ್ಲಿ ಅದು ಪ್ರಕಟ ವಾಗಿಯೂ ಬಿಟ್ಟಿತು. ಮೋಹನರಾವ್ ಆ ಮನೆಯ ಸರಿಯಾದ ವಿಳಾಸಗಿಳಾಸವನ್ನೂ ಬರೆದೇ ಬಿಟ್ಟಿದ್ದರು. ನಾಲ್ಕಾರು ಆಫೀಸಿನಲ್ಲಿಯೂ ಈ ಕುರಿತು ಚರ್ಚೆಯಾಯಿತು. ಮಗ, ಮಗಳು ಇಂಟರ್ನೆಟ್ನಲ್ಲಿ ದಿನಪತ್ರಿಕೆಯ ಪತ್ರ ಓದಿ, ಅಪ್ಪನ ಕಾಳಜಿ, ಜತೆಗೆ ಪತ್ರದ ನಿರೂಪಣೆಯ ಭಾಷೆಯ ಕುರಿತು ಮೆಚ್ಚಿಗೆ ವ್ಯಕ್ತಪಡಿಸಿ ಮೇಲ್ ಕೂಡ ಮಾಡಿದರು. ಆ ಮನೆಯವರೂ ದಿನಪತ್ರಿಕೆಯಲ್ಲಿ ಇದನ್ನು ನೋಡಿದರೋ ಅಥವಾ ಏನಾದರೂ ನೋಟೀಸ್ ಕೊಟ್ಟರೋ ಗೊತ್ತಿಲ್ಲ ಅಂತೂ ನಂತರ ಟ್ಯಾಂಕ್ ನಿಂದ ನೀರು ಬೀಳುವುದು ನಿಂತಿತ್ತು. ಮೋಹನರಾವ್ಗೆ ಎಲ್ಲೋ ತಮ್ಮ ನಾಗರಿಕ ಪ್ರಜ್ಞೆ ಇಷ್ಟಾದರೂ ಫಲ ಕೊಟ್ಟಿತಲ್ಲ ಎಂಬ ನೆಮ್ಮದಿಯಾವರಿಸಿತು. ದಿನ ಜಲಮಂಡಳಿಯವರು
ಇದೆಲ್ಲ ಆಗಿ ಒಂದು ವಾರದ ನಂತರ ಸಂಸ್ಥೆಯ ಬೋರ್ಡ್ ಡೈರೆಕ್ಟರ್ಗಳ ಮೀಟಿಂಗ್ ಇತ್ತು. ಮೀಟಿಂಗ್ ಮುಗಿದ ನಂತರ ಸಂಜೆಗೆ ಮೋಹನ್ರಾವ್ ಅವರಿಗೆ ಸಂಸ್ಥೆಯ ಅಡ್ಮಿನಿಸ್ಟ್ರೇಟರ್ ಎಂಬ ವ್ಯಕ್ತಿಯಿಂದ ಕರೆ ಬಂದಿತು. ಮೊದಲ ಬಾರಿ ಇಂಟವ್ಯೂಗೆ ಬಂದಾಗ, ನಂತರ ಆಗೀಗ ಅಕೌಂಟ್ಸ್ ಕ್ಲಾರಿಫಿಕೇಶನ್ಗೆ ಆ ವ್ಯಕ್ತಿಯನ್ನು ಮಾತಾಡಿಸಿದ್ದು ಬಿಟ್ಟರೆ ಮೋಹನರಾವ್ಗೆ ಮತ್ತೆ ಉಳಿದಂತೆ ಮಾತಾಡುವ ಸಂದರ್ಭವೇ ಬಂದಿರಲಿಲ್ಲ. ಅವರೆದ್ದು ಹೋಗುವಾಗ ಮಧುರ
46
ಟ್ಯಾಲಿಯೊಳಗೆ ಮುಳುಗಿರುವಂತೆ ತೋರಿಸಿಕೊಂಡರೂ ಅವರು ಬಾಗಿಲಿನ ಬಳಿ ಹೋದವರೊಮ್ಮೆ ತಿರುಗಿ ನೋಡಿದಾಗ ತಮ್ಮನ್ನ ಕಡೆಗಣ್ಣಿನಲ್ಲಿ ನೋಡುತ್ತಿದ್ದುದು ಲಕ್ಷ್ಯಕ್ಕೆ ಬಂದಿತು.
ಆಫೀಸಿನ ಲೆಟರ್ಹೆಡ್ ಜಲಮಂಡಳಿಗೆ ಅರ್ಜಿ ಕೊಟ್ಟಿದ್ದೇಕೆ. ಅದಕ್ಕಿಂತ ಹೆಚ್ಚು ಹಾಗೆ ಕೊಟ್ಟಿದ್ದರೂ ತನ್ನ ಗಮನಕ್ಕೆ ಬಾರದಂತೆ ಕೊಟ್ಟಿದ್ದೇಕೆ ಎನ್ನುವುದನ್ನು ಅಡ್ಡಿನಿಸ್ಟ್ರೇಟರ್ ಸುತ್ತಿಬಳಸಿ ಕೇಳತೊಡಗಿದ. ನೀವೆಲ್ಲರೂ ಯಾವಾಗೂ ಆಫೀಸಿನ ಸಮಯದಲ್ಲಿ ಇ-ಮೇಲ್ಗಳನ್ನು ಮಾಡ್ತೀರಾ. ಫೋನ್ ಮಾಡ್ತೀರಾ... ನನಗೆ ಗೊತ್ತಿಲ್ಲ ಅಂತಲ್ಲ, ಟು ಸಮ್ ಎಕ್ಸ್ಟೆಂಟ್ ದಟ್ ಇಸ್ ಒಕೆ.. ಆದ್ರೆ ಆಫೀಸಿನ ಲೆಟರ್ ಹೆಡ್ನಲ್ಲಿ ಹೀಗೆ ಯಾರದೋ ಮನೆ ನೀರು ಪೋಲಾಗುತ್ತೆ ಅಂತೆಲ್ಲ ಕೊಡೋದು, ಪತ್ರಿಕೆಗಳಿಗೆ ಕೊಡೋದು ಅದು ಸರಿಯಲ್ಲ... ಅದೂ ತನ್ನ ಗಮನಕ್ಕೆ ಬಾರದಂತೆ ಲೆಟರ್ಹೆಡ್ನಲ್ಲಿ ಅಧಿಕೃತವಾಗಿ ಕೊಡೋದು ಅಂದ್ರೆ..' ಎಂಬುದು ಅವರ ವಾದವಾಗಿತ್ತು. ಮೋಹನರಾವ್ಗೆ ಅದು ಏನಂತಹ ಅಪರಾಧ ಎಂದೇ ಅರ್ಥವಾಗಲಿಲ್ಲ. ಈ ಮನುಷ್ಯ ತನ್ನ ಖಾಸಗಿ ಕೆಲಸಕ್ಕೆ ಆಫೀಸಿನ ವಾಹನ ಬಳಸಿಕೊಳ್ಳಲ್ಲವಾ... ಯಾರು ಎಷ್ಟು, ಹೇಗೆ ಹಣ ನುಂಗ್ತಾರೆ ಅಕೌಂಟ್ಸ್ನವನಾದ ನಂಗೆ ಗೊತ್ತಿದೆ... ಅಂತಾದ್ರಲ್ಲಿ ಆಫೀಸಿನ ಲೆಟರ್ಹೆಡ್ನಲ್ಲಿ ಒಂದು ಒಳ್ಳೆ ಕೆಲಸಕ್ಕೆ ನಾಗರಿಕ ಪ್ರಜ್ಞೆಯಿಂದ ಅರ್ಜಿ ಕೊಟ್ಟರೆ ಏನು ತಪ್ಪು ಅಂತೆಲ್ಲ ತಾನೂ ತರ್ಕಬದ್ಧವಾಗಿ ರೇಗಿಬಿಡಬೇಕು ಎಂದು ಮೋಹನರಾವ್ಗೆ ಮನಸ್ಸಿನಾಳದಲ್ಲಿ ಅನ್ನಿಸುತ್ತಿದ್ದರೂ ಹಾಗೆಲ್ಲ ಏನೂ ಅನ್ನಲಾಗದೇ ಯಾವಾಗಿನ ಹಾಗೆ ಸುಮ್ಮನಾದರು. ಎಷ್ಟೆಲ್ಲ ಸಲ ಹೀಗೇ ಆಗ್ತಿದೆ... ತಮ್ಮದೇನೂ ತಪ್ಪಿಲ್ಲ ಅಂತ ಸರಿಯಾಗಿ ತಮ್ಮನ್ನು ಸಮರ್ಥಿಸಿಕೊಳ್ಳಲಾಗದ ತಮ್ಮ ದೌರ್ಬಲ್ಯದಿಂದಾಗಿ ತಪ್ಪಿಲ್ಲದಿದ್ದರೂ ಬಲಿಪಶುವಾಗುವುದು ಛೇ ಎಂದುಕೊಂಡರು. ಜತೆಗೆ ತನ್ನ ಗಮನಕ್ಕೆ ಬಾರದಂತೆ ಎಂಬುದನ್ನು ಆತ ಒತ್ತಿ ಹೇಳುವುದನ್ನು ಗಮನಿಸಿದಾಗ ಹಾಗಾದ್ರೆ ಈಗ ಇವನಿಗೆ ಈ ವಿಷಯ ಕಿವಿ ಊದಿದವರಾರು ಎಂಬ ಪ್ರಶ್ನೆ ಕೂಡ.
'ಸಾರಿ...' ಎಂದು ಹೇಳಿ ಹೊರಗೆದ್ದು ಬಂದುಬಿಟ್ಟರು. ಎಂದಿಲ್ಲದ ಅವಮಾನವೆನ್ನಿಸಿತು. ಬಹುಶಃ ತನಗಿಂತ ಹೆಚ್ಚುಕಡಿಮೆ ಹದಿನೈದು ವರ್ಷಗಳಿಗೆ ಚಿಕ್ಕವನಾದ ವ್ಯಕ್ತಿಯೊಬ್ಬನಿಂದ ಹೀಗೆ ಅನ್ನಿಸಿಕೊಂಡಿದ್ದರಿಂದ ಅವಮಾನವೆನ್ನಿಸ್ತಾ ಇದೆಯೇ... ವಯಸ್ಸಿನಲ್ಲಿ ದೊಡ್ಡವರೊಬ್ಬರು ಹೀಗೆ ಹೇಳಿದ್ದರೆ ಸ್ವೀಕರಿಸುತ್ತಿದ್ದೆನಾ ಎಂದು ಪ್ರಶ್ನಿಸಿಕೊಂಡರೂ ಸರಿಯಾದ ಉತ್ತರ ಸಿಗಲಿಲ್ಲ.
ಸಹೋದ್ಯೋಗಿಗಳಲ್ಲಿ ಗುಸು ಗುಸು ಹಬ್ಬಿತ್ತು ಕಾಣುತ್ತೆ... ಎಲ್ಲರೂ ಮೋಹನರಾವ್ ಅವರನ್ನು ಒಂದು ಬಗೆಯಲ್ಲಿ ದಿಟ್ಟಿಸಿದರು. ಮೋಹನರಾವ್ ಯಾರೊಂದಿಗೂ ಮಾತಾಡದೇ ಟ್ಯಾಲಿ ತೆರೆದು ಕುಳಿತರು. ಮನಸ್ಸಾಗಲಿಲ್ಲ. ಇನ್ನು
47
ಇಲ್ಲಿರಲಾರೆ ಎನ್ನಿಸಿತು. ಮಗನಿಗೆ, ಮಗಳಿಗೆ ಇ-ಮೇಲ್ ಮಾಡುವ ಅನ್ನಿಸಿ ಹೀಗೆ ಹೀಗಾಯಿತು ತಮಗೆ ರಾಜೀನಾಮೆ ಕೊಡುವ ಅನ್ನಿಸಿದೆ ಎಂದು ಇಬ್ಬರಿಗೂ ಮೇಲ್ ಮಾಡಿದರು. ತಾನು ಇಪ್ಪತ್ತೈದು ಮೂವತ್ತು ವರ್ಷದವನಾಗಿದ್ರೆ ಅಥವಾ ಮಕ್ಕಳಿಬ್ಬರು ತಮ್ಮ ಉದ್ಯೋಗದಲ್ಲಿ ಸೆಟಲ್ ಆಗಿರದಿದ್ರೆ, ಒಂದು ಸ್ವಂತ ಸೂರು ಅಂತ ಇರದಿದ್ರೆ ಹೀಗೆ ಸಟಕ್ಕನೆ ರಾಜೀನಾಮೆ ಕೊಡುವ ವಿಚಾರ ಮಾಡುತ್ತಿದ್ದೆನೆ... ಬಹುಶಃ ಆಗಲೂ ಮಾಡುತ್ತಿದ್ದೆ. ಸರ್ಕಾರಿ ನೌಕರಿಗೆ ಆಗಿತ್ತಲ್ಲ. ಸರ್ಕಾರಿ ನೌಕರಿಯಲ್ಲಿ ಈಗೀಗ ಕಿರಿಕಿರಿಗಳಿದ್ದರೂ ಅವಮಾನವಾಗುವಂತಹ ಘಟನೆ ನಡೆದಿರಲಿಲ್ಲ. ಇಷ್ಟು ಚಿಕ್ಕ ಘಟನೆಗೆ ರಾಜೀನಾಮೆ ಕೊಡುವುದೇ ಎಂದು ಮಕ್ಕಳು ಹೇಳಬಹುದೇ... ಯೋಚಿಸುತ್ತಲೇ ಇಬ್ಬರ ಮೊಬೈಲಿಗೂ ಇ-ಮೇಲ್ ಅನ್ನು ಚೆಕ್ ಮಾಡುವಂತೆ ಮೆಸೇಜ್ ಕೂಡ ಕಳಿಸಿದರು. ಟಾಯ್ಲೆಟ್ಗೆ ಹೋಗಿ ಬರುವಷ್ಟರಲ್ಲಿ ಮಧುರ ಎನೋ ಕೇಳಲು ಬಂದ ಇನ್ನೊಬ್ಬ ಸಹೋದ್ಯೋಗಿಯೊಂದಿಗೆ 'ಮೊದ್ಲು ಇಲ್ಲಿ ಸೇರಿದಾಗ ಹೆಂಗಿದ್ರು ಮೋಹನ್ ಸಾರ್... ಈಗ ಹೆಂಗೆ ಬತ್ತಾರೆ. ನೋಡಿ. ಜೀನ್ಸ್, ಟೀ ಶರ್ಟ್... ಆಹ್... ಫುಲ್ ಹೆಪ್ ಯಾ' ಅಂತ ನಗುತ್ತಿದ್ದದ್ದು ಕೇಳಿಸಿತು. ಸದ್ದಿಲ್ಲದೆ ತಮ್ಮ ಸೀಟಿನಲ್ಲಿ ಬಂದು ಕುಳಿತ ಮೋಹನರಾವ್ ಅವರನ್ನು ಅವಳಿನ್ನೂ ಗಮನಿಸಿರಲಿಲ್ಲ. ಅರೆ... ಮಗ ಒಂದೆರಡು ಜೀನ್ನ ಅನ್ನು ತಂದುಕೊಟ್ಟವ 'ಏನಾಗುತ್ತೆ ಹಾಕ್ಕೊಳಪ್ಪ ಡೀಸೆಂಟಾಗೇ ಕಾಣೀಯ' ಎಂದು ಒತ್ತಾಯ ಪಡಿಸಿದ್ದ ಎಂದು ಹಾಕಿಕೊಂಡರೆ ಇವಳಿಗೇನಂತೆ ಎಂದುಕೊಂಡರು.
ರಾಜೀನಾಮೆ ಪತ್ರ ಬರೆದು ತಿಂಗಳ ಮುಂಚೆ ಹೇಳಬೇಕೆಂದು ಇರುವುದರಿಂದ ಇವತ್ತಿಗೆ ಸರಿಯಾಗಿ ಒಂದು ತಿಂಗಳ ನಂತರ ಕೆಲಸಕ್ಕೆ ಬರುವುದಿಲ್ಲವೆಂದು ಸೂಚಿಸಿ ಅಡ್ಡಿನಿಸ್ಟ್ರೇಟರ್ಗೆ ರೆಸೆಪ್ಪನಿಸ್ಟ್ ಹತ್ತಿರ ಕಳಿಸಿದರು. ಕಳಿಸುವ ಮುಂಚೆ ಮಗನ, ಮಗಳ ಮೇಲ್ ಬಂದಿದೆಯಾ ಎಂದು ಚೆಕ್ ಮಾಡಿದರು. ಮಗ ತನಗೆ ಅಪ್ಪನ ನಿಲುವು ಸರಿಯೆನ್ನಿಸಿದೆಯೆಂದೂ, ಬೇರೆ ಕಡೆಗೆ ಕೆಲಸ ಹುಡುಕಬಹುದೆಂದೂ, ತನಗೆ ಅವರ ಭಾವನೆಗಳು ಅರ್ಥವಾಗ್ತಿದೆಯೆಂದೂ ಬರೆದಿದ್ದ. ಮಗಳೂ ಅದೇ ರೀತಿಯಾಗಿ ಬರೆದವಳು ಬೇರೆ ಒಂದೆರಡು ಖಾಸಗಿ ಕಂಪನಿಗಳ ಹೆಸರನ್ನೂ ಸೂಚಿಸಿದ್ದಳು. ಅವರಿಗೇಕೋ ತುಂಬ ನಿರಾಳವೆನ್ನಿಸಿತು. ತಾವು ರಾಜೀನಾಮೆ ನೀಡುವ ವಿಚಾರ ಹೇಳಿದಾಗ ನಾನು ನೋಡಿಕೊಳ್ತನೆ. ನೀವು ಇನ್ನು ದುಡಿಯುವುದು ಬೇಡ ಎಂದೆಲ್ಲ ಮಗ ಎಲ್ಲಾದ್ರೂ ಹೇಳಿದರೆ ಅಥವಾ ಅವನಿಂದ ಹಾಗೆ ತಾವು ನಿರೀಕ್ಷಿಸುತ್ತೇವೆ ಎಂದು ತಿಳಿದುಬಿಟ್ಟರೆ ಎಂದು ಕೊಂಚ ಗಲಿಬಿಲಿಯಾಗಿತ್ತು. ಆದರೆ ಮಗ ಹಾಗೇನೂ ಹೇಳದೇ ಅಪ್ಪನ ಸ್ವಾಭಿಮಾನವನ್ನು ಅರಿತವನಂತೆ ಬೇರೆ ಕಡೆಗೆ ಕೆಲಸ ಹುಡುಕಬಹುದು. ಅವರು ತಮ್ಮ ನಿಲುವಿನೊಂದಿಗೆ ಈ ವಯಸ್ಸಿನಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯವಿಲ್ಲವೆಂದೂ, ಅವರಿಗಿರುವ ಅಕೌಂಟ್ಸ್ ಅನುಭವ ಮತ್ತು ಪರಿಣತಿಗೆ ಒಳ್ಳೆ
48
ಕೆಲಸ ಸಿಕ್ಕೇ ಸಿಗುತ್ತದೆ ಎಂದೂ ಬರೆದವನು ಕಡೆಯಲ್ಲಿ ಅಷ್ಟೇ ಸೂಚ್ಯವಾಗಿ ನಾನು ಯಾವಾಗೂ ನಿಮ್ಮೊಂದಿಗಿದ್ದೀನಿ ಅನ್ನೋದನ್ನು ಮರೀಬೇಡಿ 3 ಅಪ್ಪ ಎಂದು ಬರೆದಿದ್ದ. ಇದು ಮಾತ್ರ ಅವರಿಗೆ ತುಂಬ ಸಮಾಧಾನವನಿಸಿತು. ಮಗಳೂ ಕೂಡ ಅಪ್ಪನ ಸ್ವಾಭಿಮಾನಕ್ಕೆ ಭಂಗ ತಾರದೇ ಇನ್ನೊಂದು ಕೆಲಸಕ್ಕೆ ಸೇರುವ ಮುಂಚೆ ಕೊಂಚ ಬ್ರೇಕ್ ತೆಗೆದುಕೊಂಡು ನಾಲ್ಕಾರು ದಿನ ಅಣ್ಣನಿದ್ದಲ್ಲಿಗೆ ಅಮ್ಮನನ್ನು ಕರೆದುಕೊಂಡು ಹೋಗಿಬರಬಹುದೆಂದು ಹಗುರುಭಾವದಲ್ಲಿ ಬರೆದಿದ್ದಳು.
ಕೆಲಸ ಮುಗಿಸಿ ಎದ್ದು ಹೊರಟವರು ಮಧುರನ ಬಳಿ ನಿಂತು 'ಮದುರ... ಯು ಆರ್ ನೌ 26 ಇಮ್ಯಾಜಿನ್ ಯುವರ್ ಸೆಲ್ಫ್ ಆಪ್ಟರ್ ಥರ್ಟಿ ಈಯರ್ಸ್.. ಇನ್ನು ಇಪ್ಪತ್ತು ವರ್ಷದ ನಂತರ ಅಂದ್ರೆ ವಿಜ್ಞಾನದಲ್ಲಿ ಸಾಕಷ್ಟು ರಿಸರ್ಚ್ ಗಿಸರ್ಚ್ ಆಗಿರುತ್ತೆ ಮಧುರನಿಗೆ ಇವರು ಏನು ಹೇಳಹೊರಟಿದ್ದಾರೆ ಎಂಬುದು ತಿಳಿಯದೇ 'ವಾಟ್ ಸರ್' ಎಂದು ವೈಯಾರದಿಂದ ನಕ್ಕಳು.
"ನಥಿಂಗ್... ಆಗ ಒಳ್ಳೆ ಹೇರ್ಡೈ, ನೋ ಮಾರ್ಕ್ ಥೆರೆಪಿ ಅದೂ ಇದೂ ಥೆರಪಿ ಬಂದಿರುತ್ತೆ ಎನ್ನೋದು ನಿಜವೇ... ಆದ್ರೂ ಆಗ ನಿಮಗೂ ಐವತ್ತಾರು ಅನ್ನೋದನ್ನು ಮರೀಬೇಡಿ... ಇಲ್ಲಿ ಯಾರೂ ಚಿರಯೌವ್ವನಿಗರಲ್ಲ ಮಧುರಾ'' ಎಂದು ಅವಳ ಪ್ರತಿಕ್ರಿಯೆಗೂ ಕಾಯದೇ ಹೊರಬಂದರು.
ಎಂದಿನ ಹಾಗೆ ಬಸ್ನಿಲ್ದಾಣಕ್ಕೆ ಬಂದಾಗ ಸರ್ಕಲ್ನಲ್ಲಿ ದುಂಡುಮಲ್ಲಿಗೆ ಮಾರುವವಳನ್ನು ನೋಡಿದರು. ಹೂ ತುಂಬ ತಾಜಾ ಇದೆ. ಮನೆಗೆ ನೇರವಾಗಿ ಹೋಗ್ತಿದ್ದೇನೆ ಎಂದೂ ಯಾವಾಗಲಾದ್ರೂ ಮಗಳಿಗೆ, ಹೆಂಡತಿಗೆ ಎಂದು ದುಂಡು ಮಲ್ಲಿಗೆ ತೆಗೆದುಕೊಳ್ಳದ ಇವತ್ತೂ ಹಾಗೆ ತೆಗೆದುಕೊಳ್ಳಲೆ... ಬೇಡವೆ... ಅರೆ ರಾಜೀನಾಮೆ ಕೊಟ್ಟು ಹೋಗುವಾಗ ಕೊಂಚ ಜೋಲು ಮುಖದಲ್ಲಿ ಮನೆಗೆ ಹೋಗುವುದು ಬಿಟ್ಟು ಮಲ್ಲಿಗೆ ತೆಗೆದು ಹೋಗುವುದೇ ಎಂದುಕೊಂಡವರಿಗೆ ತುಸು ನಗೆ ಬಂತು. ಆದರೂ ತಾಜಾ ಮಲ್ಲಿಗೆ ನೋಡಿ ಆಸೆ ತಡೆಯದೇ ಬುಟ್ಟಿಯವಳ ಹತ್ತಿರ ನಿಂತರು.
ಆಕರ ಕೃತಿ: ಕಾಲಿಟ್ಟಲ್ಲಿ ಕಾಲುದಾರಿ
ಲೇಖಕಿಯ ಪರಿಚಯ:
ಸುಮಂಗಲಾ: ಸುಮಂಗಲಾ ಕನ್ನಡದ ಲೇಖಕಿ ಮತ್ತು ಅನುವಾದಕಿ. ಇವರು ಕಥೆಗಾರ್ತಿಯಾಗಿಯೂ ಹೆಸರುವಾಸಿಯಾಗಿದ್ದಾರೆ. ಇವರು ಶಿವಮೊಗ್ಗದ ಸಾಗರದವರು. ಸುಮಂಗಲಾ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಕಥೆಗಳು ಮತ್ತು ಅನುವಾದಿತ ಕೃತಿಗಳನ್ನು ರಚಿಸಿದ್ದಾರೆ. ಇವರ ಕಥಾ ಸಂಕಲನಗಳಲ್ಲಿ
49
"ಹನ್ನೊಂದನೇ ಅಡ್ಡರಸ್ತೆ" ಎಂಬುದು ಪ್ರಸಿದ್ದ ಕಥಾ ಸಂಕಲನವಾಗಿದೆ. 'ಸೀತಾಳೆ ಹೂ ಮತ್ತು ಇತರ ಕಥೆಗಳು", ಮತ್ತು "ಕಾಲಿಟ್ಟಲ್ಲಿ ಕಾಲುದಾರಿ" ಮುಖ್ಯವಾದವು. ಇವರು "ಚರ್ನೋಬಿಲ್ ಪ್ರಾರ್ಥನೆ" ಎಂಬ ಕೃತಿಯನ್ನು ಅನುವಾದಿಸಿದ್ದಾರೆ. ಅಲ್ಲದೆ, ಇವರು ಲೇಖಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಅವರಿಗೆ ವಿಜ್ಞಾನ ಮತ್ತು ಪರಿಸರ ಪತ್ರಿಕೋದ್ಯಮದಲ್ಲಿ ಹಲವಾರು ಪ್ರಶಸ್ತಿಗಳು ಲಭಿಸಿವೆ. ಇವರು ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾದ ವಿಜ್ಞಾನ ಸರಳ ಪರಿಚಯ ಮಾಲಿಕೆಯ ಸಂಪಾದಕರಲ್ಲಿ ಒಬ್ಬರು.
ಬೆರಳಂಚಿನ ಬೆಳಕಿಂಡಿ’ – ಪಾಠದ ಸಾರಾಂಶ
ಸುಮಂಗಲಾ ಅವರ **‘ಬೆರಳಂಚಿನ ಬೆಳಕಿಂಡಿ’** ಕಥೆಯು ವಯಸ್ಸಾದ ವ್ಯಕ್ತಿಯಲ್ಲಿಯೂ ಜೀವಂತವಾಗಿರುವ **ನಾಗರಿಕ ಪ್ರಜ್ಞೆ, ಪರಿಸರ ಕಾಳಜಿ, ಸ್ವಾಭಿಮಾನ, ಕುಟುಂಬ ಪ್ರೀತಿ ಮತ್ತು ತಲೆಮಾರುಗಳ ನಡುವಿನ ಭಾವನಾತ್ಮಕ ಸಂಬಂಧ**ವನ್ನು ಚಿತ್ರಿಸುತ್ತದೆ.
ಕಥೆಯ ನಾಯಕ **ಮೋಹನರಾವ್** ನಿವೃತ್ತ ಸರ್ಕಾರಿ ನೌಕರ. ಮಕ್ಕಳು ಇಬ್ಬರೂ ಉತ್ತಮ ಉದ್ಯೋಗದಲ್ಲಿದ್ದು, ತಮ್ಮ ಜೀವನದಲ್ಲಿ ನೆಲೆಸಿದ್ದಾರೆ. ನಿವೃತ್ತಿಯ ನಂತರ ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಳಲು ಇಷ್ಟಪಡದೆ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಸಂಸ್ಥೆಯೊಂದರಲ್ಲಿ ಅಕೌಂಟ್ಸ್ ಕೆಲಸಕ್ಕೆ ಸೇರುತ್ತಾರೆ. ಆರಂಭದಲ್ಲಿ ವಯಸ್ಸಿನ ಅಂತರದಿಂದಾಗಿ ಸಹೋದ್ಯೋಗಿಗಳೊಂದಿಗೆ ಹೊಂದಿಕೊಳ್ಳಲು ಕಷ್ಟಪಟ್ಟರೂ, ತಮ್ಮ ಅನುಭವ ಮತ್ತು ಸರಳ ಸ್ವಭಾವದಿಂದ ಎಲ್ಲರಿಗೂ ಹತ್ತಿರವಾಗುತ್ತಾರೆ.
ಆಫೀಸಿನ ಸಮೀಪ ವಿದ್ಯುತ್ ತಂತಿಯ ಮೇಲೆ ಅಪಾಯಕಾರಿಯಾಗಿ ಬಾಗಿದ್ದ ಮರದ ಕೊಂಬೆಗಳನ್ನು ಗಮನಿಸಿದ ಮೋಹನರಾವ್, ವಿದ್ಯುತ್ ಇಲಾಖೆಗೆ ಹಾಗೂ ಅರಣ್ಯ ಇಲಾಖೆಗೆ ದೂರು ನೀಡಿ ಅವುಗಳನ್ನು ಕಡಿಯಿಸುವಲ್ಲಿ ಯಶಸ್ವಿಯಾಗುತ್ತಾರೆ. ಇದರಿಂದ ಅವರಲ್ಲಿರುವ **ಸಾಮಾಜಿಕ ಹೊಣೆಗಾರಿಕೆ ಮತ್ತು ನಾಗರಿಕ ಪ್ರಜ್ಞೆ** ವ್ಯಕ್ತವಾಗುತ್ತದೆ.
ಅದೇ ರೀತಿ, ಆಫೀಸಿನ ಹಿಂಭಾಗದ ಮನೆಯ ಟ್ಯಾಂಕಿನಿಂದ ನೀರು ನಿರಂತರವಾಗಿ ವ್ಯರ್ಥವಾಗಿ ಹರಿಯುತ್ತಿರುವುದನ್ನು ಗಮನಿಸುತ್ತಾರೆ. ನೀರಿನ ಕೊರತೆಯಿರುವ ನಗರದಲ್ಲಿ ಹೀಗೆ ನೀರನ್ನು ಪೋಲು ಮಾಡುವುದು ತಪ್ಪು ಎಂದು ಭಾವಿಸಿ ಮನೆಯವರಿಗೆ ತಿಳಿಸಲು ಪ್ರಯತ್ನಿಸುತ್ತಾರೆ. ಸ್ಪಂದನೆ ಸಿಗದಾಗ ಜಲಮಂಡಳಿಗೆ ಹಾಗೂ ಪತ್ರಿಕೆಗಳಿಗೆ ಪತ್ರ ಬರೆಯುತ್ತಾರೆ. ಕೊನೆಗೆ ನೀರು ವ್ಯರ್ಥವಾಗಿ ಹರಿಯುವುದು ನಿಲ್ಲುತ್ತದೆ. ಇದರಿಂದ ತಮ್ಮ ಕಾಳಜಿಗೆ ಫಲ ಸಿಕ್ಕಿದ್ದಕ್ಕೆ ಮೋಹನರಾವ್ ಸಂತೋಷಪಡುತ್ತಾರೆ.
ಈ ನಡುವೆ ಯುವ ಸಹೋದ್ಯೋಗಿಗಳ ಪ್ರಭಾವದಿಂದ ಮೋಹನರಾವ್ ಅವರ ವ್ಯಕ್ತಿತ್ವದಲ್ಲಿಯೂ ಬದಲಾವಣೆ ಕಾಣಿಸುತ್ತದೆ. ಅವರು ತಮ್ಮ ಮಕ್ಕಳು ಮತ್ತು ಹೆಂಡತಿಯೊಂದಿಗೆ ಹೆಚ್ಚು ಆತ್ಮೀಯವಾಗಿ ಮಾತನಾಡಲು ಆರಂಭಿಸುತ್ತಾರೆ. ಮಕ್ಕಳಿಗೆ ಇ-ಮೇಲ್ ಮತ್ತು ಸಂದೇಶಗಳನ್ನು ಕಳುಹಿಸುತ್ತಾ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ. **ಇ-ಮೇಲ್ ಮತ್ತು ಮೊಬೈಲ್ ಸಂದೇಶಗಳು ಅವರಿಗೆ ಮಕ್ಕಳೊಂದಿಗೆ ಭಾವನಾತ್ಮಕವಾಗಿ ಸಂಪರ್ಕ ಸಾಧಿಸುವ ‘ಬೆಳಕಿಂಡಿ’ಯಾಗುತ್ತವೆ.** ಮಕ್ಕಳ ಬಾಲ್ಯದ ನೆನಪುಗಳು, ಅವರ ವಾಸನೆ, ಮಾತು, ಪ್ರೀತಿ ಎಲ್ಲವೂ ಅಕ್ಷರಗಳ ಮೂಲಕ ಮತ್ತೆ ಜೀವಂತವಾಗುತ್ತವೆ.
ಆದರೆ, ಮೋಹನರಾವ್ ಆಫೀಸಿನ ಲೆಟರ್ಹೆಡ್ ಬಳಸಿಕೊಂಡು ಜಲಮಂಡಳಿಗೆ ದೂರು ನೀಡಿದ್ದನ್ನು ಸಂಸ್ಥೆಯ ಆಡಳಿತಾಧಿಕಾರಿ ತಪ್ಪಾಗಿ ಪರಿಗಣಿಸುತ್ತಾನೆ. ಇದರಿಂದ ಮೋಹನರಾವ್ ಅವಮಾನಿತರಾಗುತ್ತಾರೆ. ತಮ್ಮ ತಪ್ಪಿಲ್ಲದಿದ್ದರೂ ಸಮರ್ಥವಾಗಿ ಉತ್ತರಿಸಲಾಗದ ತಮ್ಮ ದೌರ್ಬಲ್ಯದಿಂದ ಬೇಸರಗೊಂಡು ಕೆಲಸಕ್ಕೆ ರಾಜೀನಾಮೆ ನೀಡಲು ನಿರ್ಧರಿಸುತ್ತಾರೆ.
ಮಗ ಮತ್ತು ಮಗಳು ತಂದೆಯ ನಿರ್ಧಾರವನ್ನು ಗೌರವಿಸಿ, ಅವರ **ಸ್ವಾಭಿಮಾನವನ್ನು ಅರ್ಥಮಾಡಿಕೊಂಡು ಬೆಂಬಲಿಸುತ್ತಾರೆ**. ಇದರಿಂದ ಮೋಹನರಾವ್ ಅವರಿಗೆ ನೆಮ್ಮದಿ ದೊರೆಯುತ್ತದೆ. ಕೊನೆಯಲ್ಲಿ, ಕೆಲಸಕ್ಕೆ ರಾಜೀನಾಮೆ ನೀಡಿದ ನಂತರ ಮನೆಗೆ ತೆರಳುವಾಗ ತಾಜಾ ದುಂಡುಮಲ್ಲಿಗೆಯನ್ನು ಕಂಡು ಅದನ್ನು ಹೆಂಡತಿ ಮತ್ತು ಮಗಳಿಗೆ ತೆಗೆದುಕೊಂಡು ಹೋಗಬೇಕೆಂಬ ಆಸೆ ಮೂಡುತ್ತದೆ. ಇದು ಅವರಲ್ಲಿ ಮೂಡಿರುವ **ಮೃದುತ್ವ, ಪ್ರೀತಿ ಮತ್ತು ಬದುಕಿನ ಸಣ್ಣ ಸಂತೋಷಗಳನ್ನು ಆಸ್ವಾದಿಸುವ ಮನೋಭಾವವನ್ನು** ಸೂಚಿಸುತ್ತದೆ.
ಪಾಠದ ಮುಖ್ಯ ಆಶಯ:
‘ಬೆರಳಂಚಿನ ಬೆಳಕಿಂಡಿ’ ಕಥೆಯು **ವಯಸ್ಸಾದರೂ ಮನುಷ್ಯನ ಮನಸ್ಸು ವೃದ್ಧವಾಗುವುದಿಲ್ಲ** ಎಂಬುದನ್ನು ಸಾರುತ್ತದೆ. ಪರಿಸರದ ಬಗ್ಗೆ ಕಾಳಜಿ, ಸಮಾಜದ ಬಗ್ಗೆ ಹೊಣೆಗಾರಿಕೆ, ಮಕ್ಕಳ ಮೇಲಿನ ಪ್ರೀತಿ, ಸ್ವಾಭಿಮಾನ ಮತ್ತು ಹೊಸ ತಲೆಮಾರಿನೊಂದಿಗೆ ಬೆರೆಯುವ ಮನೋಭಾವ ಮೋಹನರಾವ್ ಅವರ ಪಾತ್ರದಲ್ಲಿ ಸುಂದರವಾಗಿ ಮೂಡಿಬಂದಿವೆ. ಇ-ಮೇಲ್ ಮತ್ತು ಮೊಬೈಲ್ ಸಂದೇಶಗಳಂತಹ ಆಧುನಿಕ ತಂತ್ರಜ್ಞಾನಗಳು ದೂರದಲ್ಲಿರುವ ಮಕ್ಕಳನ್ನು ತಂದೆಯ ಭಾವನೆಗಳೊಂದಿಗೆ ಬೆಸೆಯುವ **‘ಬೆರಳಂಚಿನ ಬೆಳಕಿಂಡಿ’**ಯಾಗಿ ಕಥೆಯಲ್ಲಿ ರೂಪಕವಾಗಿ ಕಾಣಿಸಿಕೊಂಡಿವೆ.
ಸಂಭಾವ್ಯ ಪ್ರಶ್ನೆಗಳು ಮತ್ತು ಉತ್ತರ
1. ಮೋಹನ್ ರಾವ್ ಬೆಸ್ಕಾಂನವರಿಗೆ ಕರೆ ಮಾಡಲು ಕಾರಣವೇನು?
ಮೋಹನ್ರಾವ್ ಅವರ ಆಫೀಸಿನ ಸಮೀಪವಿದ್ದ ಮರದ ಎರಡು ದೊಡ್ಡ ಕೊಂಬೆಗಳು ವಿದ್ಯುತ್ ತಂತಿಯ ಮೇಲೆ ಬಾಗಿಕೊಂಡಿದ್ದವು. ಅವು ಗಾಳಿ ಅಥವಾ ಮಳೆಯಿಂದ ಮುರಿದು ಬಿದ್ದರೆ ವಿದ್ಯುತ್ ಸಂಪರ್ಕ ಕಡಿತವಾಗುವುದರ ಜೊತೆಗೆ ಸಾವು-ನೋವು ಸಂಭವಿಸುವ ಅಪಾಯವಿತ್ತು. ನಗರದಲ್ಲಿ ಮರಗಳು ಬಿದ್ದು ಅನಾಹುತಗಳು ಸಂಭವಿಸಿದ್ದನ್ನು ಪತ್ರಿಕೆಗಳಲ್ಲಿ ಓದಿ, ದೂರದರ್ಶನದಲ್ಲಿ ನೋಡಿದ್ದ ಮೋಹನ್ರಾವ್ಗೆ ಇದರ ಬಗ್ಗೆ ಕಾಳಜಿ ಉಂಟಾಯಿತು. ಪರರ ವಿಷಯ ನಮಗೇಕೆ ಎಂದು ಸುಮ್ಮನಿರದೆ, ಅಪಾಯ ಸಂಭವಿಸುವ ಮುನ್ನವೇ ಕೊಂಬೆಗಳನ್ನು ತೆರವುಗೊಳಿಸಬೇಕೆಂದು ಬೆಸ್ಕಾಂನವರಿಗೆ ಕರೆ ಮಾಡಿ ದೂರು ನೀಡಿದರು.
2. ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡಿದ್ದ ಮೋಹನ್
ರಾವ್ ಗೆ ಖಾಸಗಿ ಕೆಲಸದಿಂದ ಇರಿಸು ಮುರುಸಾಗಿದ್ದೇಕೆ?
ಸರ್ಕಾರಿ ಕಚೇರಿಯಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದ ಮೋಹನ್ರಾವ್ ಅವರಿಗೆ ಖಾಸಗಿ ಸಂಸ್ಥೆಯ ವಾತಾವರಣ ಆರಂಭದಲ್ಲಿ ಅಪರಿಚಿತವಾಗಿತ್ತು. ಅಲ್ಲಿ ಹೆಚ್ಚಿನವರು ಹದಿಹರೆಯದವರು ಮತ್ತು ಯುವಕರಾಗಿದ್ದು, ಮಧ್ಯವಯಸ್ಸಿನ ಸಹೋದ್ಯೋಗಿಗಳ ನಡುವೆ ತಾವೊಬ್ಬರೇ ನಿವೃತ್ತಿ ಹೊಂದಿದ, ವಯಸ್ಸಾದ ವ್ಯಕ್ತಿಯಾಗಿದ್ದರು. ಜೊತೆಗೆ ಡೈ ಮಾಡಿದ ಕೂದಲು ಮುಂತಾದ ಕಾರಣಗಳಿಂದ ತಾವು ಈ ಪರಿಸರಕ್ಕೆ **ಔಟ್ಡೇಟೆಡ್** ಆಗಿಬಿಟ್ಟಿದ್ದೇನೆ ಎಂಬ ಕೀಳರಿಮೆಯೂ ಅವರಲ್ಲಿ ಮೂಡಿತ್ತು. ಆದ್ದರಿಂದ ಅವರಿಗೆ ಖಾಸಗಿ ಕೆಲಸದಿಂದ ಆರಂಭದಲ್ಲಿ ಇರಿಸುಮುರಿಸಾಗಿತ್ತು.
3. ಸಹೋದ್ಯೋಗಿಗಳೊಂದಿಗೆ ಮೋಹನ್ ರಾವ್ ಹೇಗೆ ಹೊಂದಿಕೊಂಡರು
ಮೋಹನ್ರಾವ್ ಆರಂಭದಲ್ಲಿ ಯುವ ಸಹೋದ್ಯೋಗಿಗಳ ನಡುವೆ ಹೊಂದಿಕೊಳ್ಳಲು ಕಷ್ಟಪಟ್ಟರೂ, ಕ್ರಮೇಣ ಅವರೊಂದಿಗೆ ಬೆರೆತು ಉತ್ತಮ ಸಂಬಂಧ ಬೆಳೆಸಿಕೊಂಡರು. ಅಕೌಂಟ್ಸ್ ಕೆಲಸದಲ್ಲಿನ ತಮ್ಮ ಪರಿಣತಿ, ಚೆನ್ನಾಗಿದ್ದ ಇಂಗ್ಲಿಷ್ ಜ್ಞಾನ ಮತ್ತು ಸಹೋದ್ಯೋಗಿಗಳ ತಪ್ಪುಗಳನ್ನು ಗೊಣಗದೆ ತಿದ್ದಿ ಹೇಳುವ ಗುಣದಿಂದ ಎಲ್ಲರ ಮೆಚ್ಚುಗೆ ಗಳಿಸಿದರು. ತಮ್ಮ ಸರ್ಕಾರಿ ಉದ್ಯೋಗದ ಅವಧಿಯ ತಮಾಷೆಯ ಘಟನೆಗಳನ್ನು ಹಂಚಿಕೊಳ್ಳುತ್ತಿದ್ದರು. ಯುವ ಸಹೋದ್ಯೋಗಿಗಳ ಸುಖ-ದುಃಖಗಳಲ್ಲಿ ಭಾಗಿಯಾಗುತ್ತಿದ್ದರು. ಹೀಗೆ ವಯಸ್ಸಿನ ಅಂತರವನ್ನು ಮರೆಸಿಕೊಂಡು ಅವರೊಂದಿಗೆ ಆತ್ಮೀಯವಾಗಿ ಹೊಂದಿಕೊಂಡರು.
4. ಅಡ್ಮಿನಿಸ್ಟ್ರೇಟರ್ ಮೋಹನ್ರಾವ್ಗೆ ಏನೆಂದು ಎಚ್ಚರಿಸಿದರು?
ಆಫೀಸಿನ ಹಿಂಭಾಗದ ಮನೆಯೊಂದರಲ್ಲಿ ನೀರು ವ್ಯರ್ಥವಾಗಿ ಹರಿಯುತ್ತಿರುವುದನ್ನು ಗಮನಿಸಿದ ಮೋಹನ್ರಾವ್, ಜಲಮಂಡಳಿಗೆ ದೂರು ನೀಡಿದ್ದರು. ಅಲ್ಲದೆ, ಆಫೀಸಿನ **ಲೆಟರ್ಹೆಡ್ ಬಳಸಿ ಅರ್ಜಿ ಸಲ್ಲಿಸಿ**, ಪತ್ರಿಕೆಗಳ ಓದುಗರ ವಿಭಾಗಕ್ಕೂ ಪತ್ರ ಬರೆದಿದ್ದರು. ಇದನ್ನು ಗಮನಿಸಿದ ಸಂಸ್ಥೆಯ ಅಡ್ಮಿನಿಸ್ಟ್ರೇಟರ್ ಮೋಹನ್ರಾವ್ ಅವರನ್ನು ಕರೆದು ಎಚ್ಚರಿಸಿದರು.
ಆಫೀಸಿನ ಸಮಯದಲ್ಲಿ ಇ-ಮೇಲ್ ಮಾಡುವುದು, ಫೋನ್ ಮಾಡುವುದು ಇತ್ಯಾದಿಗಳನ್ನು ಒಂದು ಮಟ್ಟಿಗೆ ಸಹಿಸಬಹುದು. ಆದರೆ **ಆಫೀಸಿನ ಲೆಟರ್ಹೆಡ್ನ್ನು ವೈಯಕ್ತಿಕ ಅಥವಾ ನಾಗರಿಕ ಸಮಸ್ಯೆಗಳಿಗೆ ಬಳಸುವುದು ಸರಿಯಲ್ಲ** ಎಂದು ತಿಳಿಸಿದರು. ವಿಶೇಷವಾಗಿ ತನ್ನ ಗಮನಕ್ಕೆ ಬಾರದಂತೆ ಲೆಟರ್ಹೆಡ್ನಲ್ಲಿ ಅರ್ಜಿ ನೀಡಿರುವುದು ತಪ್ಪು ಎಂದು ಹೇಳಿದರು. ಸಂಸ್ಥೆಯ ಹೆಸರನ್ನು ಬಳಸಿಕೊಂಡು ಯಾರದೋ ಮನೆಯ ನೀರು ವ್ಯರ್ಥವಾಗುತ್ತಿರುವ ಕುರಿತು ದೂರು ನೀಡುವುದು ಮತ್ತು ಅದನ್ನು ಪತ್ರಿಕೆಗಳಲ್ಲಿ ಪ್ರಕಟಿಸುವುದು ಸಂಸ್ಥೆಯ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಎಚ್ಚರಿಸಿದರು.
ಮೋಹನ್ರಾವ್ಗೆ ತಾವು ಒಳ್ಳೆಯ ನಾಗರಿಕ ಪ್ರಜ್ಞೆಯಿಂದಲೇ ಕೆಲಸ ಮಾಡಿದ್ದೇನೆ ಎಂಬ ಭಾವನೆಯಿದ್ದರೂ, ಅಡ್ಮಿನಿಸ್ಟ್ರೇಟರ್ ಅವರ ಕಾರ್ಯವನ್ನು ತಪ್ಪಾಗಿ ಅರ್ಥೈಸಿದರು. ಇದರಿಂದ ಮೋಹನ್ರಾವ್ ಅವರಿಗೆ ತುಂಬಾ ಅವಮಾನವಾಯಿತು. ತಮ್ಮ ತಪ್ಪಿಲ್ಲದಿದ್ದರೂ ತಮಗೆ ಸಮರ್ಥವಾಗಿ ಉತ್ತರಿಸಲಾಗದೆ **ಬಲಿಪಶುವಾದೆನಲ್ಲಾ** ಎಂದು ಅವರು ಬೇಸರಪಟ್ಟರು.
5. ನೀರು ವ್ಯರ್ಥವಾಗುತ್ತಿದ್ದ ಕುರಿತು ಮೋಹನ್ರಾವ್ರ ಪ್ರತಿಕ್ರಿಯೆ
ಆಫೀಸಿನ ಹಿಂಭಾಗದ ಮನೆಯ ಟ್ಯಾಂಕ್ ತುಂಬಿ ನೀರು ನಿರಂತರವಾಗಿ ಕೆಳಗೆ ಹರಿಯುತ್ತಿರುವುದನ್ನು ಮೋಹನ್ರಾವ್ ಗಮನಿಸಿದರು. ಇತರ ಸಹೋದ್ಯೋಗಿಗಳು ಇದನ್ನು ಸಾಮಾನ್ಯ ವಿಷಯವೆಂದು ನಿರ್ಲಕ್ಷಿಸಿದರೂ, ಮೋಹನ್ರಾವ್ರಿಗೆ ಮಾತ್ರ ಇದು ಗಂಭೀರ ಸಮಸ್ಯೆಯಾಗಿ ಕಂಡಿತು. ವಾರದಲ್ಲಿ ಎಷ್ಟು ದಿನ ನೀರು ವ್ಯರ್ಥವಾಗುತ್ತದೆ, ಎಷ್ಟು ಪ್ರಮಾಣದ ನೀರು ಪೋಲಾಗಬಹುದು ಎಂಬುದನ್ನು ಎಕ್ಸೆಲ್ನಲ್ಲಿ ಲೆಕ್ಕ ಹಾಕಿದರು. ಮನೆಯವರಿಗೆ ದೂರವಾಣಿ ಮೂಲಕ ತಿಳಿಸಿ ನೀರು ಉಳಿಸುವಂತೆ ಮನವಿ ಮಾಡಿದರು. ಅವರು ಸ್ಪಂದಿಸದಾಗ ಜಲಮಂಡಳಿಗೆ ಪತ್ರ ಬರೆದರು. ಅಲ್ಲದೆ, ಕನ್ನಡ ಮತ್ತು ಇಂಗ್ಲಿಷ್ ದಿನಪತ್ರಿಕೆಗಳ ಓದುಗರ ವಿಭಾಗಕ್ಕೂ ಪತ್ರ ಕಳುಹಿಸಿದರು. ಪತ್ರಿಕೆಗಳಲ್ಲಿ ಅವರ ಪತ್ರ ಪ್ರಕಟವಾದ ನಂತರ ನೀರು ವ್ಯರ್ಥವಾಗಿ ಹರಿಯುವುದು ನಿಂತಿತು. ಇದರಿಂದ ತಮ್ಮ ನಾಗರಿಕ ಪ್ರಜ್ಞೆ ಫಲ ನೀಡಿದುದಕ್ಕೆ ಮೋಹನ್ರಾವ್ರಿಗೆ ಸಂತೋಷ ಮತ್ತು ನೆಮ್ಮದಿ ದೊರೆಯಿತು.
6. ವಯಸ್ಸಾದ ಮೇಲೆ ಮಹಾ ಸುಧಾರಣೆ ಮಾಡುವ ಹುಚ್ಚು ಆವರಿಸುತ್ತದೆ ಎಂದು ಸಹೋದ್ಯೋಗಿಗಳು ಭಾವಿಸಲು ಕಾರಣವೇನು?
ಮೋಹನ್ರಾವ್ ನಿವೃತ್ತಿಯ ನಂತರ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ಅವರು ವಯಸ್ಸಿನಲ್ಲಿ ಇತರ ಸಹೋದ್ಯೋಗಿಗಳಿಗಿಂತ ಹಿರಿಯರಾಗಿದ್ದರೂ, ಕ್ರಮೇಣ ಅವರೊಂದಿಗೆ ಆತ್ಮೀಯವಾಗಿ ಬೆರೆತುಹೋಗಿದ್ದರು. ಆದರೆ ಮೋಹನ್ರಾವ್ರ ಸ್ವಭಾವದಲ್ಲಿ ಒಂದು ವಿಶೇಷ ಗುಣವಿತ್ತು. ಅವರು ತಮ್ಮ ಸುತ್ತಮುತ್ತಲಿನ ಸಣ್ಣಪುಟ್ಟ ಸಮಸ್ಯೆಗಳನ್ನೂ ನಿರ್ಲಕ್ಷಿಸದೆ, ಅವುಗಳನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದರು. ಇದು ಸಹೋದ್ಯೋಗಿಗಳಿಗೆ ಕೆಲವೊಮ್ಮೆ ವಿಚಿತ್ರವಾಗಿ ಕಾಣುತ್ತಿತ್ತು.
ಆಫೀಸಿನ ಸಮೀಪದ ಮರದ ಎರಡು ದೊಡ್ಡ ಕೊಂಬೆಗಳು ವಿದ್ಯುತ್ ತಂತಿಯ ಮೇಲೆ ಬಾಗಿಕೊಂಡಿರುವುದನ್ನು ಗಮನಿಸಿದ ಮೋಹನ್ರಾವ್, ಅವುಗಳಿಂದ ಅಪಾಯ ಸಂಭವಿಸಬಹುದು ಎಂದು ಭಾವಿಸಿ ಬೆಸ್ಕಾಂ ಹಾಗೂ ಅರಣ್ಯ ಇಲಾಖೆಗೆ ದೂರು ನೀಡಿದರು. ಕೊಂಬೆಗಳನ್ನು ಕಡಿಯುವವರೆಗೆ ಅವರು ಪ್ರಯತ್ನವನ್ನು ಬಿಡಲಿಲ್ಲ. ನಂತರ ಆಫೀಸಿನ ಹಿಂಭಾಗದ ಮನೆಯ ಟ್ಯಾಂಕಿನಿಂದ ನೀರು ನಿರಂತರವಾಗಿ ವ್ಯರ್ಥವಾಗಿ ಹರಿಯುತ್ತಿರುವುದನ್ನು ಗಮನಿಸಿದರು. ಇತರರು ಅದನ್ನು ಸಾಮಾನ್ಯ ಸಂಗತಿ ಎಂದು ನಿರ್ಲಕ್ಷಿಸಿದರೂ, ಮೋಹನ್ರಾವ್ರಿಗೆ ಅದು ದೊಡ್ಡ ಸಮಸ್ಯೆಯಾಗಿ ಕಂಡಿತು. ಎಷ್ಟು ನೀರು ವ್ಯರ್ಥವಾಗುತ್ತಿದೆ ಎಂಬುದನ್ನೂ ಲೆಕ್ಕ ಹಾಕಿ, ಮನೆಯವರಿಗೆ ದೂರವಾಣಿ ಮಾಡಿದರು. ಮನೆಯವರು ಸ್ಪಂದಿಸದಾಗ ಜಲಮಂಡಳಿಗೆ ಹಾಗೂ ದಿನಪತ್ರಿಕೆಗಳಿಗೂ ಪತ್ರ ಬರೆದರು.
ಮೋಹನ್ರಾವ್ರ ಇಂತಹ ವರ್ತನೆಯನ್ನು ಕಂಡ ಸಹೋದ್ಯೋಗಿಗಳು, **“ವಯಸ್ಸಾದ ಮೇಲೆ ಕೆಲವರಿಗೆ ಮಹಾ ಸುಧಾರಣೆ ಮಾಡುವ ಹುಚ್ಚು ಆವರಿಸುತ್ತದೆ”** ಎಂದು ತಮ್ಮೊಳಗೆ ಮಾತನಾಡಿಕೊಂಡರು. ಅವರ ನಾಗರಿಕ ಪ್ರಜ್ಞೆ, ಪರಿಸರ ಕಾಳಜಿ ಮತ್ತು ನೀರು ಉಳಿಸುವ ಪ್ರಯತ್ನವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ, ವಯಸ್ಸಿನ ಕಾರಣದಿಂದಲೇ ಇಂತಹ ವಿಚಿತ್ರ ಆಸಕ್ತಿ ಮೂಡಿದೆ ಎಂದು ಭಾವಿಸಿದರು. ಆದರೆ ವಾಸ್ತವವಾಗಿ ಮೋಹನ್ರಾವ್ರ ಕಾರ್ಯಗಳು ಸಮಾಜದ ಬಗ್ಗೆ ಅವರಿಗಿದ್ದ **ಹೊಣೆಗಾರಿಕೆ, ಪರಿಸರ ಪ್ರೀತಿ ಮತ್ತು ನಾಗರಿಕ ಪ್ರಜ್ಞೆಯ ಪ್ರತೀಕವಾಗಿದ್ದವು.**
7. ಮೋಹನ್ರಾವ್ರ ನಾಗರಿಕ ಪ್ರಜ್ಞೆಯನ್ನು ವಿವರಿಸಿ
ಮೋಹನ್ರಾವ್ರ ವ್ಯಕ್ತಿತ್ವದಲ್ಲಿ **ನಾಗರಿಕ ಪ್ರಜ್ಞೆ, ಸಾಮಾಜಿಕ ಹೊಣೆಗಾರಿಕೆ ಮತ್ತು ಪರಿಸರ ಕಾಳಜಿ** ಪ್ರಮುಖವಾಗಿ ಕಾಣಿಸುತ್ತವೆ. ಅವರು ತಮ್ಮ ವೈಯಕ್ತಿಕ ಜೀವನಕ್ಕೆ ಮಾತ್ರ ಸೀಮಿತವಾಗಿರದೆ, ಸುತ್ತಮುತ್ತಲಿನ ಸಮಾಜದ ಸಮಸ್ಯೆಗಳ ಬಗ್ಗೆಯೂ ಕಾಳಜಿ ವಹಿಸುತ್ತಿದ್ದರು.
ಆಫೀಸಿನ ಸಮೀಪದ ಮರದ ಎರಡು ದೊಡ್ಡ ಕೊಂಬೆಗಳು ವಿದ್ಯುತ್ ತಂತಿಯ ಮೇಲೆ ಬಾಗಿಕೊಂಡಿದ್ದವು. ಮಳೆ ಅಥವಾ ಗಾಳಿಗೆ ಅವು ಮುರಿದು ಬಿದ್ದರೆ ಅಪಾಯ ಸಂಭವಿಸಬಹುದೆಂದು ಅರಿತ ಅವರು ಮೊದಲು ಬೆಸ್ಕಾಂನವರಿಗೆ ದೂರು ನೀಡಿದರು. ಅಲ್ಲಿಂದ ಸರಿಯಾದ ಸ್ಪಂದನೆ ದೊರೆಯದಿದ್ದರೂ ಪ್ರಯತ್ನ ಕೈಬಿಡದೆ ಅರಣ್ಯ ಇಲಾಖೆಯನ್ನು ಸಂಪರ್ಕಿಸಿ, ಕೊನೆಗೆ ಕೊಂಬೆಗಳನ್ನು ಕಡಿಯಿಸುವಲ್ಲಿ ಯಶಸ್ವಿಯಾದರು.
ಅದೇ ರೀತಿ, ಆಫೀಸಿನ ಹಿಂಭಾಗದ ಮನೆಯ ಟ್ಯಾಂಕಿನಿಂದ ನೀರು ನಿರಂತರವಾಗಿ ವ್ಯರ್ಥವಾಗುತ್ತಿರುವುದನ್ನು ಗಮನಿಸಿದರು. ಇತರರು ಅದನ್ನು ಸಾಮಾನ್ಯ ಸಂಗತಿ ಎಂದು ನಿರ್ಲಕ್ಷಿಸಿದರೂ, ಮೋಹನ್ರಾವ್ರಿಗೆ ನೀರಿನ ಪ್ರತಿಯೊಂದು ಹನಿಯೂ ಅಮೂಲ್ಯವೆನಿಸಿತು. ಎಷ್ಟು ನೀರು ವ್ಯರ್ಥವಾಗುತ್ತಿದೆ ಎಂಬುದನ್ನು ಲೆಕ್ಕ ಹಾಕಿ ಮನೆಯವರಿಗೆ ದೂರವಾಣಿ ಮೂಲಕ ತಿಳಿಸಿದರು. ಅವರಿಂದ ಸೂಕ್ತ ಪ್ರತಿಕ್ರಿಯೆ ಬರದಿದ್ದಾಗ ಜಲಮಂಡಳಿಗೆ ಪತ್ರ ಬರೆದರು. ಕನ್ನಡ ಮತ್ತು ಇಂಗ್ಲಿಷ್ ದಿನಪತ್ರಿಕೆಗಳಿಗೂ ಪತ್ರ ಕಳುಹಿಸಿದರು. ಕೊನೆಗೆ ನೀರು ವ್ಯರ್ಥವಾಗುವುದು ನಿಂತಾಗ ತಮ್ಮ ಪ್ರಯತ್ನ ಫಲ ನೀಡಿದ್ದಕ್ಕೆ ಸಂತೋಷಪಟ್ಟರು.
ಹೀಗಾಗಿ ಮೋಹನ್ರಾವ್ರ ನಾಗರಿಕ ಪ್ರಜ್ಞೆಯು **“ನನಗೇನು?” ಎಂದು ಸುಮ್ಮನಿರದೆ, ಸಮಾಜಕ್ಕೆ ತೊಂದರೆಯಾಗುವ ವಿಷಯಗಳನ್ನು ಗುರುತಿಸಿ ಅವುಗಳನ್ನು ಸರಿಪಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವ ಗುಣ**ವಾಗಿದೆ. ಅವರ ನಡೆ ಪ್ರತಿಯೊಬ್ಬ ನಾಗರಿಕನಿಗೂ ಸಮಾಜ ಮತ್ತು ಪರಿಸರದ ಬಗ್ಗೆ ಹೊಣೆಗಾರಿಕೆ ಇರಬೇಕು ಎಂಬ ಸಂದೇಶವನ್ನು ನೀಡುತ್ತದೆ.
8. ಅಪ್ಪನ ಸ್ವಾಭಿಮಾನವನ್ನು ಮೋಹನ್ರಾವ್ನ ಮಕ್ಕಳು ಹೇಗೆ ಬೆಂಬಲಿಸಿದರು?
ಮೋಹನ್ರಾವ್ ಅವರು ಅಡ್ಮಿನಿಸ್ಟ್ರೇಟರ್ನಿಂದ ಅವಮಾನಕ್ಕೊಳಗಾದ ನಂತರ, ಆ ಸಂಸ್ಥೆಯಲ್ಲಿ ಮುಂದುವರಿದು ಕೆಲಸ ಮಾಡಲು ಮನಸ್ಸಿಲ್ಲದೆ ರಾಜೀನಾಮೆ ನೀಡಲು ನಿರ್ಧರಿಸಿದರು. ತಮ್ಮ ನಿರ್ಧಾರವನ್ನು ಮಗ ಮತ್ತು ಮಗಳಿಗೆ ಇ-ಮೇಲ್ ಮೂಲಕ ತಿಳಿಸಿದರು. ಮಕ್ಕಳು ತಂದೆಯ ನಿರ್ಧಾರವನ್ನು ವಿರೋಧಿಸದೆ, ಅವರ **ಸ್ವಾಭಿಮಾನವನ್ನು ಗೌರವಿಸಿ ಬೆಂಬಲಿಸಿದರು**.
ಮಗನು ಅಪ್ಪನ ನಿಲುವು ಸರಿಯಾಗಿದೆ ಎಂದು ತಿಳಿಸಿ, ಬೇರೆ ಕಡೆ ಕೆಲಸ ಹುಡುಕಬಹುದು ಎಂದು ಧೈರ್ಯ ತುಂಬಿದನು. ತಂದೆಯ ಭಾವನೆಗಳನ್ನು ತಾನು ಅರ್ಥಮಾಡಿಕೊಂಡಿರುವುದಾಗಿ ಹೇಳಿದನು. ಮುಖ್ಯವಾಗಿ, “ನೀವು ಇನ್ನು ದುಡಿಯುವುದು ಬೇಡ, ನಾನು ನೋಡಿಕೊಳ್ಳುತ್ತೇನೆ” ಎಂದು ಹೇಳದೆ, ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ನಡೆದುಕೊಂಡನು. ಅವರ ಅಕೌಂಟ್ಸ್ ಅನುಭವ ಮತ್ತು ಪರಿಣತಿಗೆ ತಕ್ಕ ಒಳ್ಳೆಯ ಕೆಲಸ ಖಂಡಿತ ಸಿಗುತ್ತದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದನು. ಕೊನೆಯಲ್ಲಿ, **“ನಾನು ಯಾವಾಗಲೂ ನಿಮ್ಮೊಂದಿಗಿದ್ದೇನೆ”** ಎಂಬ ಭರವಸೆಯನ್ನು ನೀಡಿದನು.
ಮಗಳೂ ಸಹ ತಂದೆಯ ನಿರ್ಧಾರವನ್ನು ಗೌರವಿಸಿ, ಬೇರೆ ಕೆಲವು ಖಾಸಗಿ ಸಂಸ್ಥೆಗಳ ಹೆಸರುಗಳನ್ನು ಸೂಚಿಸಿದಳು. ಹೊಸ ಕೆಲಸಕ್ಕೆ ಸೇರುವ ಮೊದಲು ಸ್ವಲ್ಪ ವಿರಾಮ ತೆಗೆದುಕೊಂಡು ಅಣ್ಣನಿದ್ದಲ್ಲಿಗೆ ತಾಯಿಯನ್ನು ಕರೆದುಕೊಂಡು ಹೋಗಿ ಬರಬಹುದು ಎಂದು ಸಲಹೆ ನೀಡಿದಳು.
ಹೀಗೆ ಮಗ ಮತ್ತು ಮಗಳು ತಂದೆಯ ಮೇಲೆ ಅವಲಂಬಿತರಾಗದೆ, ಅವರ **ಸ್ವಾಭಿಮಾನ, ಆತ್ಮಗೌರವ ಮತ್ತು ಸ್ವತಂತ್ರ ನಿರ್ಧಾರವನ್ನು ಗೌರವಿಸಿ ಮಾನಸಿಕ ಬೆಂಬಲ ನೀಡಿದರು.** ಅವರ ಈ ನಡೆ ಮೋಹನ್ರಾವ್ಗೆ ನೆಮ್ಮದಿ ಮತ್ತು ಧೈರ್ಯವನ್ನು ನೀಡಿತು.
### 10. ಇ-ಮೇಲ್ಗೆ ಸಾವಿರ ಥ್ಯಾಂಕ್ಸ್ ಹೇಳುವಷ್ಟು ಅದು ಆಪ್ತ ಎನಿಸಿದ್ದು ಹೇಗೆ? – ದೀರ್ಘ ಉತ್ತರ
ಮೋಹನ್ರಾವ್ ಅವರಿಗೆ ಇ-ಮೇಲ್ ಕೇವಲ ಸಂದೇಶ ಕಳುಹಿಸುವ ಒಂದು ಆಧುನಿಕ ತಂತ್ರಜ್ಞಾನವಾಗಿರಲಿಲ್ಲ. ಅದು ದೂರದಲ್ಲಿರುವ ತಮ್ಮ ಮಗ ಮತ್ತು ಮಗಳೊಂದಿಗೆ **ಭಾವನಾತ್ಮಕವಾಗಿ ಬೆಸೆದುಕೊಳ್ಳುವ ಆಪ್ತ ಮಾಧ್ಯಮವಾಗಿತ್ತು**. ಮಕ್ಕಳು ತಮ್ಮ ಉದ್ಯೋಗ ಮತ್ತು ಜೀವನದಲ್ಲಿ ದೂರದಲ್ಲಿದ್ದರೂ, ಇ-ಮೇಲ್ ಮೂಲಕ ಅವರೊಂದಿಗೆ ತಮ್ಮ ವಿಚಾರಗಳನ್ನು ಹಂಚಿಕೊಳ್ಳಲು ಮೋಹನ್ರಾವ್ಗೆ ಸಾಧ್ಯವಾಗುತ್ತಿತ್ತು. ಆದ್ದರಿಂದ ಇ-ಮೇಲ್ ಅವರ ಪಾಲಿಗೆ ಬಹಳ ಆತ್ಮೀಯವಾಗಿತ್ತು.
ಹಿಂದೆ ಮೋಹನ್ರಾವ್ ಅವರು ಮಕ್ಕಳೊಂದಿಗೆ ಪ್ರೀತಿ-ವಾತ್ಸಲ್ಯ ಹೊಂದಿದ್ದರೂ, ಅದನ್ನು ನೇರವಾಗಿ ವ್ಯಕ್ತಪಡಿಸುತ್ತಿರಲಿಲ್ಲ. ಆದರೆ ಯುವ ಸಹೋದ್ಯೋಗಿಗಳ ಪ್ರಭಾವದಿಂದ ಅವರ ಮನಸ್ಸಿನಲ್ಲಿ ಬದಲಾವಣೆ ಉಂಟಾಯಿತು. ಸಹೋದ್ಯೋಗಿಗಳು ತಮ್ಮ ತಂದೆ-ತಾಯಿಯ ಬಗ್ಗೆ ಮಾತನಾಡುವುದನ್ನು ಕೇಳಿದಾಗ, ಮೋಹನ್ರಾವ್ ಅವರಿಗೆ ತಮ್ಮ ಮಕ್ಕಳು ನೆನಪಾಗುತ್ತಿದ್ದರು. ಆಗ ತಮ್ಮ ಭಾವನೆಗಳನ್ನು ಮಗ ಮತ್ತು ಮಗಳೊಂದಿಗೆ ಹಂಚಿಕೊಳ್ಳಬೇಕೆಂಬ ಆಸೆ ಮೂಡುತ್ತಿತ್ತು. ಇ-ಮೇಲ್ ಈ ಭಾವನೆಗಳನ್ನು ವ್ಯಕ್ತಪಡಿಸಲು ಅವರಿಗೆ ಸುಲಭವಾದ ದಾರಿಯಾಯಿತು.
ಮಕ್ಕಳಿಗೆ ಇ-ಮೇಲ್ ಬರೆಯುವಾಗ ಅವರು ತಮ್ಮ ಕಚೇರಿಯ ವಿಷಯಗಳು, ಓದಿದ ಪುಸ್ತಕಗಳು, ಅಕೌಂಟ್ಸ್ಗೆ ಸಂಬಂಧಿಸಿದ ತಮಾಷೆಯ ಸಂಗತಿಗಳು ಮತ್ತು ದಾರಿಯಲ್ಲಿ ಕಂಡ ಘಟನೆಗಳನ್ನೂ ವಿವರವಾಗಿ ಬರೆಯುತ್ತಿದ್ದರು. ಕೆಲವೊಮ್ಮೆ ಮಕ್ಕಳ ಮೇಲಿನ ಪ್ರೀತಿ ಹೆಚ್ಚಾದಾಗ **“ಲವ್ ಯು”, “ಮಿಸ್ಸಿಂಗ್ ಯು”** ಎಂಬ ಭಾವನೆಗಳನ್ನೂ ವ್ಯಕ್ತಪಡಿಸುತ್ತಿದ್ದರು. ಮಕ್ಕಳು ಸಹ ತಂದೆಯ ಮೇಲ್ಗಳನ್ನು ಓದಿ, ಅವರ ಕಾಳಜಿಯನ್ನು ಅರ್ಥಮಾಡಿಕೊಂಡು ಪ್ರತಿಕ್ರಿಯಿಸುತ್ತಿದ್ದರು.
ಇ-ಮೇಲ್ ಓದುವಾಗ ಮೋಹನ್ರಾವ್ಗೆ ಮಕ್ಕಳ ಬಾಲ್ಯದ ನೆನಪುಗಳೂ ಮತ್ತೆ ಜೀವಂತವಾಗುತ್ತಿದ್ದವು. ಮಗನ ಕೂದಲಿಗೆ ಹಾಕುತ್ತಿದ್ದ ಕೊಬ್ಬರಿ ಎಣ್ಣೆಯ ವಾಸನೆ, ಅವನ ಗಾಯಗಳಿಗೆ ಹಚ್ಚುತ್ತಿದ್ದ ಮುಲಾಮಿನ ವಾಸನೆ, ಮಗಳ ಜರಿ ಲಂಗದ ವಾಸನೆ ಹಾಗೂ ಜಡೆಯಲ್ಲಿದ್ದ ಮಲ್ಲಿಗೆಯ ಕಂಪು ಮುಂತಾದ ಸೂಕ್ಷ್ಮ ನೆನಪುಗಳೆಲ್ಲ ಅಕ್ಷರಗಳೊಂದಿಗೆ ಬೆಸೆದುಕೊಂಡಂತೆ ಅವರಿಗೆ ಅನಿಸುತ್ತಿತ್ತು. ಮಕ್ಕಳು ಹೇಳದ ಕೆಲವು ವಿಷಯಗಳನ್ನೂ ಅಕ್ಷರಗಳನ್ನು ನೋಡುತ್ತಾ ತಾನೇ ಗ್ರಹಿಸಿದ ಅನುಭವ ಅವರಿಗೆ ಆಗುತ್ತಿತ್ತು.
ಹಿಂದೆ ಹೈಸ್ಕೂಲು ಮತ್ತು ಕಾಲೇಜು ದಿನಗಳಲ್ಲಿ ಕಾರ್ಡ್ ಹಾಗೂ ಇನ್ಲ್ಯಾಂಡ್ ಪತ್ರಗಳನ್ನು ಬರೆಯುವಾಗ ಉಂಟಾಗುತ್ತಿದ್ದ ಅದೇ ಭಾವನಾತ್ಮಕ ಉತ್ಕಟತೆ ಇ-ಮೇಲ್ನಲ್ಲಿಯೂ ಅವರಿಗೆ ದೊರೆಯುತ್ತಿತ್ತು. ಆದ್ದರಿಂದ ಇ-ಮೇಲ್ ಅವರ ಪಾಲಿಗೆ **ಬೆರಳಂಚಿನಲ್ಲೇ ತೆರೆದುಕೊಳ್ಳುವ ಬೆಳಕಿನ ಕಿಟಕಿಯಾಗಿತ್ತು**. ಅದು ದೂರದಲ್ಲಿರುವ ಮಕ್ಕಳನ್ನು ಹತ್ತಿರಕ್ಕೆ ತಂದು, ಅವರ ಪ್ರೀತಿ, ನೆನಪು ಮತ್ತು ಭಾವನೆಗಳನ್ನು ಹಂಚಿಕೊಳ್ಳಲು ಅವಕಾಶ ನೀಡುತ್ತಿತ್ತು.
ಆದ್ದರಿಂದಲೇ ಮೋಹನ್ರಾವ್ ಅವರ ಮನಸ್ಸಿನಲ್ಲಿ **“ಇ-ಮೇಲ್ಗೆ ಸಾವಿರ ಥ್ಯಾಂಕ್ಸ್”** ಎಂಬ ಕೃತಜ್ಞತೆಯ ಭಾವನೆ ಮೂಡುತ್ತದೆ. ಇ-ಮೇಲ್ ತಂತ್ರಜ್ಞಾನಕ್ಕಿಂತ ಹೆಚ್ಚಾಗಿ ಅವರ ಪಾಲಿಗೆ **ತಂದೆ-ಮಕ್ಕಳ ನಡುವಿನ ಪ್ರೀತಿಯ ಸೇತುವೆ ಮತ್ತು ಭಾವನೆಗಳನ್ನು ಬೆಳಗಿಸುವ ಬೆರಳಂಚಿನ ಬೆಳಕಿಂಡಿಯಾಗಿತ್ತು.**
11. ಮೋಹನ್ರಾವ್ ಕೆಲಸಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇಕೆ?
ಮೋಹನ್ರಾವ್ ಅವರು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದ ನಿವೃತ್ತ ಸರ್ಕಾರಿ ನೌಕರರಾಗಿದ್ದರು. ನಿವೃತ್ತಿಯ ನಂತರ ಖಾಲಿ ಕುಳಿತುಕೊಳ್ಳಬಾರದೆಂದು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಖಾಸಗಿ ಸಂಸ್ಥೆಯೊಂದರಲ್ಲಿ ಅಕೌಂಟ್ಸ್ ಕೆಲಸಕ್ಕೆ ಸೇರಿದ್ದರು. ತಮ್ಮ ವಯಸ್ಸಿನ ವ್ಯತ್ಯಾಸವಿದ್ದರೂ ಸಹೋದ್ಯೋಗಿಗಳೊಂದಿಗೆ ಹೊಂದಿಕೊಂಡು ಉತ್ತಮವಾಗಿ ಕೆಲಸ ಮಾಡುತ್ತಿದ್ದರು. ಆದರೆ ಒಂದು ಘಟನೆಯಿಂದ ಅವರಿಗೆ ತೀವ್ರ ಅವಮಾನವಾಗಿ, ಕೆಲಸಕ್ಕೆ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡರು.
ಆಫೀಸಿನ ಹಿಂಭಾಗದ ಮನೆಯ ಟ್ಯಾಂಕಿನಿಂದ ನೀರು ನಿರಂತರವಾಗಿ ವ್ಯರ್ಥವಾಗಿ ಹರಿಯುತ್ತಿರುವುದನ್ನು ಮೋಹನ್ರಾವ್ ಗಮನಿಸಿದ್ದರು. ಬೆಂಗಳೂರಿನಲ್ಲಿ ಅನೇಕ ಕಡೆ ನೀರಿನ ಕೊರತೆ ಇರುವುದನ್ನು ತಿಳಿದಿದ್ದ ಅವರು ನೀರು ವ್ಯರ್ಥವಾಗುತ್ತಿರುವುದನ್ನು ಸಹಿಸಿಕೊಳ್ಳಲಿಲ್ಲ. ಮೊದಲು ಆ ಮನೆಯವರಿಗೆ ದೂರವಾಣಿ ಮಾಡಿ ತಿಳಿಸಿದರು. ಅವರು ಸ್ಪಂದಿಸದಾಗ ಜಲಮಂಡಳಿಗೆ ಪತ್ರ ಬರೆದರು. ಅಲ್ಲದೆ ಕನ್ನಡ ಮತ್ತು ಇಂಗ್ಲಿಷ್ ದಿನಪತ್ರಿಕೆಗಳ ಓದುಗರ ವಿಭಾಗಕ್ಕೂ ಪತ್ರ ಬರೆದರು. ತಮ್ಮ ಪತ್ರದಲ್ಲಿ ಆ ಮನೆಯ ವಿಳಾಸವನ್ನೂ ನೀಡಿದ್ದರು. ಕೊನೆಗೆ ನೀರು ವ್ಯರ್ಥವಾಗಿ ಹರಿಯುವುದು ನಿಂತಿದ್ದರಿಂದ ತಮ್ಮ ನಾಗರಿಕ ಪ್ರಜ್ಞೆ ಫಲ ನೀಡಿದೆ ಎಂದು ಸಂತೋಷಪಟ್ಟರು.
ಆದರೆ ಈ ಸಂದರ್ಭದಲ್ಲಿ ಅವರು **ಆಫೀಸಿನ ಲೆಟರ್ಹೆಡ್ ಬಳಸಿಕೊಂಡು ಜಲಮಂಡಳಿಗೆ ಅರ್ಜಿ ಸಲ್ಲಿಸಿದ್ದರು**. ಇದನ್ನು ಸಂಸ್ಥೆಯ ಅಡ್ಮಿನಿಸ್ಟ್ರೇಟರ್ ತಪ್ಪಾಗಿ ಪರಿಗಣಿಸಿದರು. ಮೋಹನ್ರಾವ್ ಅವರನ್ನು ಕರೆದು, ಆಫೀಸಿನ ಸಮಯದಲ್ಲಿ ಇ-ಮೇಲ್ ಅಥವಾ ಫೋನ್ ಮಾಡುವುದನ್ನು ಒಂದು ಮಟ್ಟಿಗೆ ಒಪ್ಪಿಕೊಳ್ಳಬಹುದು; ಆದರೆ ಆಫೀಸಿನ ಲೆಟರ್ಹೆಡ್ನಲ್ಲಿ ಇಂತಹ ವೈಯಕ್ತಿಕ ದೂರುಗಳನ್ನು ನೀಡುವುದು ಮತ್ತು ಪತ್ರಿಕೆಗಳಿಗೆ ಬರೆಯುವುದು ಸರಿಯಲ್ಲ ಎಂದು ಎಚ್ಚರಿಸಿದರು. ವಿಶೇಷವಾಗಿ ತನ್ನ ಗಮನಕ್ಕೆ ಬಾರದಂತೆ ಲೆಟರ್ಹೆಡ್ ಬಳಸಿದ್ದನ್ನು ಅವರು ತಪ್ಪಾಗಿ ಕಂಡರು.
ಮೋಹನ್ರಾವ್ರಿಗೆ ತಾವು ಯಾವುದೇ ಸ್ವಾರ್ಥಕ್ಕಾಗಿ ಈ ಕೆಲಸ ಮಾಡಿಲ್ಲ; ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ನೀರು ಉಳಿಸುವ ಉದ್ದೇಶದಿಂದಲೇ ದೂರು ನೀಡಿದ್ದೇನೆ ಎಂಬ ಭಾವನೆಯಿತ್ತು. ಅಡ್ಮಿನಿಸ್ಟ್ರೇಟರ್ಗೆ ತಕ್ಕ ಉತ್ತರ ನೀಡಬೇಕು ಎಂದು ಮನಸ್ಸಿನಲ್ಲಿದ್ದರೂ, ತಮ್ಮನ್ನು ಸಮರ್ಥಿಸಿಕೊಳ್ಳಲು ಸಾಧ್ಯವಾಗದೆ ಸುಮ್ಮನಾದರು. **ತಪ್ಪಿಲ್ಲದಿದ್ದರೂ ಬಲಿಪಶುವಾದೆ** ಎಂಬ ನೋವು ಅವರಿಗೆ ಉಂಟಾಯಿತು. ಅಲ್ಲದೆ, ತಮ್ಮಿಗಿಂತ ಸುಮಾರು ಹದಿನೈದು ವರ್ಷ ಚಿಕ್ಕವನಾದ ವ್ಯಕ್ತಿಯಿಂದ ಈ ರೀತಿಯಾಗಿ ಅವಮಾನಕ್ಕೊಳಗಾದದ್ದು ಅವರ ಸ್ವಾಭಿಮಾನಕ್ಕೆ ನೋವುಂಟುಮಾಡಿತು.
ಸಹೋದ್ಯೋಗಿಗಳಲ್ಲಿಯೂ ಈ ವಿಷಯದ ಬಗ್ಗೆ ಗುಸು-ಗುಸು ಮಾತುಗಳು ನಡೆಯುತ್ತಿದ್ದವು. ಅವರ ಬಗ್ಗೆ ಒಂದು ರೀತಿಯ ವಿಚಿತ್ರ ದೃಷ್ಟಿಕೋನ ಮೂಡಿರುವುದನ್ನು ಗಮನಿಸಿದ ಮೋಹನ್ರಾವ್ ಇನ್ನಷ್ಟು ಬೇಸರಗೊಂಡರು. ತಮ್ಮ ವಯಸ್ಸು, ಅನುಭವ ಮತ್ತು ಸ್ವಾಭಿಮಾನಕ್ಕೆ ತಕ್ಕ ಗೌರವ ಈ ಸಂಸ್ಥೆಯಲ್ಲಿ ಸಿಗುತ್ತಿಲ್ಲ ಎಂದು ಭಾವಿಸಿದರು. ಆದ್ದರಿಂದ **ಇಂತಹ ಪರಿಸರದಲ್ಲಿ ಮುಂದುವರಿದು ಕೆಲಸ ಮಾಡುವುದಕ್ಕಿಂತ ರಾಜೀನಾಮೆ ನೀಡಿ ಹೊರಬರುವುದು ಉತ್ತಮ** ಎಂದು ನಿರ್ಧರಿಸಿದರು.
ತಮ್ಮ ಮಕ್ಕಳಿಗೆ ಈ ವಿಚಾರವನ್ನು ಇ-ಮೇಲ್ ಮೂಲಕ ತಿಳಿಸಿದರು. ಮಗ ಮತ್ತು ಮಗಳು ತಂದೆಯ ನಿಲುವನ್ನು ಗೌರವಿಸಿ, ಬೇರೆ ಕೆಲಸ ಹುಡುಕಬಹುದು ಎಂದು ಧೈರ್ಯ ತುಂಬಿದರು. ತಮ್ಮ ತಂದೆಯ ಸ್ವಾಭಿಮಾನಕ್ಕೆ ಧಕ್ಕೆ ತರದೆ ಬೆಂಬಲ ನೀಡಿದರು. ಇದರಿಂದ ಮೋಹನ್ರಾವ್ಗೆ ತಮ್ಮ ನಿರ್ಧಾರ ಸರಿಯೆಂಬ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಯಿತು. ಹೀಗಾಗಿ **ಅವಮಾನ, ಸ್ವಾಭಿಮಾನಕ್ಕೆ ಧಕ್ಕೆಯಾಗಿರುವುದು ಮತ್ತು ತಮ್ಮ ನೈತಿಕ ನಿಲುವಿಗೆ ವಿರುದ್ಧವಾದ ವಾತಾವರಣ** ಇವೇ ಮೋಹನ್ರಾವ್ರು ಕೆಲಸಕ್ಕೆ ರಾಜೀನಾಮೆ ನೀಡಲು ಪ್ರಮುಖ ಕಾರಣಗಳಾಗಿವೆ.
