'ಪ್ರಬಂಧ' ಎನ್ನುವುದು ಆಂಗ್ಲ ಸಾಹಿತ್ಯದ ಪ್ರಭಾವದಿಂದ ಆಧುನಿಕ ಕನ್ನಡ ಸಾಹಿತ್ಯದಲ್ಲಿ ರೂಪು ಪಡೆದ ಗದ್ಯ ಪ್ರಕಾರ. ಆಂಗ್ಲ ಭಾಷೆಯಲ್ಲಿರುವ "Essay' ಎನ್ನುವುದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ 'ಪ್ರಬಂಧ' ಅಥವಾ ನಿಬಂಧ ಎಂದು
ಕರೆಯಲಾಗುತ್ತದೆ. “ಒಂದು ನಿರ್ಧಿಷ್ಟ ವಿಷಯವನ್ನು ಕುರಿತು ಮಾಹಿತಿ ಸಂಗ್ರಹಿಸಿ, ವಿವರವಾಗಿ, ಅರ್ಥವತ್ತಾಗಿ, ಆಕರ್ಷಕವಾಗಿ ಬರೆದರೆ 'ಪ್ರಬಂಧ' ಎನ್ನಲಾಗುತ್ತದೆ.”
'ಪ್ರಬಂಧ' ಎಂದರೆ 'ಚೆನ್ನಾಗಿ ಕಟ್ಟು' ಎಂದು ಅರ್ಥ. ಪ್ರಬಂಧಗಳಲ್ಲಿ ಅನೇಕ ಬಗೆಗಳಿವೆ.
ಅವುಗಳನ್ನು ಪ್ರಮುಖವಾಗಿ
1.ವಸ್ತುನಿಷ್ಠ ಪ್ರಬಂಧಗಳು :ಗಡಿಯಾರ, ವಿಮಾನ, ಪೆನ್ನು ಇತ್ಯಾದಿ.
'2.ಈ ಭಾವನಿಷ್ಠ ಪ್ರಬಂಧಗಳು:ಮಳೆ ಬಂದ ಮಾರನೆಯ ದಿನ', 'ಅವನ ಕರವಸ್ತ್ರ, 'ಆ ಪಾರ್ಕಿನಲ್ಲಿ' ಇತ್ಯಾದಿ.
3. ವಿಚಾರಪರ ಪ್ರಬಂಧಗಳು :- 'ಸಾರಿಗೆ ರಾಷ್ಟ್ರೀಕರಣ, 'ವ್ಯವಸಾಯ ಯೋಜನೆಗಳು', 'ಶಿಕ್ಷಣ ಮಾಧ್ಯಮ' ಇತ್ಯಾದಿ..
ಪ್ರಬಂಧವನ್ನು ಬರೆಯುವ ಮೊದಲು ಆಯ್ಕೆಮಾಡಿಕೊಂಡಿರುವ ವಿಷಯಕ್ಕೆ ಸಂಬಂಧಿಸಿದ ಅಂಶಗಳನ್ನು ಉಪಲಬ್ಧ ಮಾಹಿತಿಗಳನ್ನು ಬೇರೆಯವರ ಅಭಿಪ್ರಾಯಗಳನ್ನು ಸಂಗ್ರಹಿಸಿ ಟಿಪ್ಪಣಿ ಮಾಡಿಕೊಳ್ಳಬೇಕು. ವೃತ್ತ ಪತ್ರಿಕೆಗಳು, ನಿಯತಕಾಲಿಕೆಗಳು ಸಂಬಂಧಿಸಿದ ಗ್ರಂಥಗಳು ಇವು ಪ್ರಬಂಧ ಲೇಖನಕ್ಕೆ ಸಹಾಯ ಮಾಡುತ್ತವೆ. ಅಂತರ್ಜಾಲ (Internet)ದಲ್ಲೂ ಸಾಕಷ್ಟು ಮಾಹಿತಿ ಲಭಿಸುತ್ತದೆ. ಯಾವುದೇ ಬಗೆಯ ಪ್ರಬಂಧ ಲೇಖನವಾದರೂ ಅಲ್ಲಿ ಬಳಸಿರುವ ಭಾಷೆ ಸರಳವಾಗಿರಬೇಕು. ಸಂಕ್ಷಿಪ್ತವಾಗಿ ನಿಖರವಾಗಿರಬೇಕು. ವಿಷಯಕ್ಕೆ ಅನುಗುಣವಾಗಿ ಗಂಭೀರವಾದ ಹಾಸ್ಯಪೂರ್ಣವಾದ ಶೈಲಿಯಿರಬೇಕು. ನುಡಿಗಟ್ಟು, ಲೋಕೋಕ್ತಿಗಳು, ವಿಷಯಕ್ಕೆ ಸಂಬಂಧಿಸಿದ ಪ್ರಸಿದ್ಧರ ಹೇಳಿಕೆಗಳನ್ನು ಸಮಂಜಸವಾಗಿ ಬಳಸಿ ಬರೆಯುವುದರಿಂದ ಪ್ರಬಂಧದ ಮೌಲ್ಯ ಹೆಚ್ಚುತ್ತದೆ. ಲೇಖನ ಚಿಹ್ನೆಗಳನ್ನು ಸರಿಯಾದ ರೀತಿಯಲ್ಲಿ ಬಳಸಬೇಕು. ಬರವಣಿಗೆಯಲ್ಲಿ ತಪ್ಪಿಲ್ಲದಂತೆ ಎಚ್ಚರವಹಿಸಬೇಕು.
ಪ್ರಬಂಧ ರಚನೆಯ ಹಂತಗಳು :
1.ಪೀಠಿಕೆ :- ಇದು ಪ್ರಬಂಧದ ವಿಷಯಕ್ಕೆ ಪ್ರವೇಶದ ದ್ವಾರದಂತಿರಬೇಕು. ಇಲ್ಲಿ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಗಳನ್ನು ಚಿಕ್ಕದಾಗಿ, ಚೊಕ್ಕವಾಗಿ ಪ್ರಸ್ತಾಪಿಸಬೇಕು.
2.ವಿಷಯ ವಿವರಣೆ :- ಇದು ಪ್ರಬಂಧದ ಬಹುಮುಖ್ಯವಾದ ಭಾಗ, ಇಲ್ಲಿ ವಿಷಯದ ಪೂರ್ಣ ವಿವರವನ್ನು ಅಂಕಿ ಅಂಶ, ಉದಾಹರಣೆಗಳೊಡನೆ ಬೇರೆ ಬೇರೆ ವಾಕ್ಯವೃಂದಗಳಲ್ಲಿ ವಿವರಿಸಬೇಕು. ಆಯಾ ವಾಕ್ಯವೃಂದದಲ್ಲಿರುವ ವಿಷಯಗಳಲ್ಲಿ ಏಕಸೂತ್ರತೆ ಇರುವಂತೆ ಎಚ್ಚರ ವಹಿಸಬೇಕು. ವಿಷಯಗಳ ಕಲಸುಮೇಲೋಗರವಿರಬಾರದು. ಪರಸ್ಪರ ವಿರೋಧಿ ವಿಚಾರಗಳಿಗೆ ಅವಕಾಶವಿರಬಾರದು. ಒಂದು ವಾಕ್ಯವೃಂದದ ವಿಚಾರ ಮತ್ತೊಂದು ವಾಕ್ಯವೃಂದದ ವಿಚಾರಗಳಿಗೆ ಪೂರಕವಾಗಿರಬೇಕು. ಸುಂದರವಾದ ಬರೆವಣಿಗೆ, ಆಕರ್ಷಕ ಶೈಲಿ, ಒಳ್ಳೆಯ ರೀತಿಯ ವಿಷಯ ಪ್ರತಿಪಾದನೆ ಈ ಭಾಗದಲ್ಲಿರಬೇಕು.
3.ಮುಕ್ತಾಯ ಅಥವಾ ಉಪಸಂಹಾರ :- ಪ್ರಬಂಧ ಪೂರ್ಣವಾಗಬೇಕಾದರೆ ಈ ಭಾಗ ಅಗತ್ಯ. ಪ್ರಬಂಧದಲ್ಲಿ ಚರ್ಚಿಸಿರುವ ಪ್ರಮುಖ ಅಂಶಗಳನ್ನು ಇಲ್ಲಿ ಸಾರಾಂಶ ರೂಪದಲ್ಲಿ ನೀಡಬಹುದು. ಇಲ್ಲವೇ ತೀರ್ಮಾನ, ಚಿಂತನೆಗೆ ಪ್ರೇರಣೆ, ಸಮಸ್ಯೆಗಳ ಪರಿಹಾರ ಸೂತ್ರಗಳು ಇತ್ಯಾದಿ ಅಂಶಗಳನ್ನೂ ಸೂಚಿಸಬಹುದು. ಪೀಠಿಕೆಯಂತೆಯೇ ಮುಕ್ತಾಯವೂ ಹಿತಮಿತವಾಗಿ ಆಕರ್ಷಕವಾಗಿರಬೇಕು
1. ರಾಷ್ಟ್ರೀಯ ಹಬ್ಬಗಳ ಮಹತ್ವ
ಪೀಠಿಕೆ :
ಒಂದು ದೇಶದ ಐಕ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ರಾಷ್ಟ್ರೀಯ ಹಬ್ಬಗಳು ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತವೆ. ಭಾರತದಂತಹ ವೈವಿಧ್ಯತೆಯುಳ್ಳ ರಾಷ್ಟ್ರಗಳಲ್ಲಿ ಏಕತೆಯನ್ನು ತರುವುದು ಇಂತಹ ರಾಷ್ಟ್ರೀಯ ಹಬ್ಬಗಳ ಮೂಲಕ ಸಾಧ್ಯವಿದೆ. “ಇಡಿ ರಾಷ್ಟ್ರದ ಜನರೆಲ್ಲರೂ ಯಾವುದೇ ಭೇಧಭಾವವಿಲ್ಲದೆ, ಜಾತಿ, ಧರ್ಮ, ಪ್ರಾದೇಶಿಕ ಭಿನ್ನತೆಯನ್ನು ತೊರೆದು ಒಟ್ಟಾಗಿ ಆಚರಿಸುವ ಹಬ್ಬಗಳೇ ರಾಷ್ಟ್ರೀಯ ಹಬ್ಬಗಳು ಎಂದು ಕರೆಯಬಹುದು.” ನಮ್ಮದೇಶದಲ್ಲಿ ಮೂರು ರಾಷ್ಟ್ರೀಯ ಹಬ್ಬಗಳೆಂದು ಘೋಷಿಸಲಾಗಿದೆ.ಅವುಗಳೆಂದರೆ 1) ಸ್ವಾತಂತ್ರ್ಯ ದಿನಾಚರಣೆ 2) ಗಣರಾಜ್ಯೋತ್ಸವ 3) ಗಾಂಧಿ ಜಯಂತಿ. ವಿಷಯ ನಿರೂಪಣೆ :
1) ಸ್ವಾತಂತ್ರ್ಯ ದಿನಾಚರಣೆ: ಭಾರತ ಸುಮಾರು ಎರಡು ನೂರು ವರ್ಷಗಳ ಕಾಲ ಬ್ರಿಟೀಷರ ಆಳ್ವಿಕೆಗೆ ಒಳಪಟ್ಟಿತ್ತು.ವ್ಯಾಪಾರದ ಉದ್ದೇಶದಿಂದ ಬಂದ ಬ್ರಿಟೀಷರು ಭಾರತೀಯ ಅರಸರುಗಳು ದೌರ್ಬಲ್ಯಗಳನ್ನು ಉಪಯೋಗಿಸಿಕೊಂಡು ಭಾರತ ದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದರು. ಭಾರತಿಯರಿಗೆ ಸ್ವಾತಂತ್ರ ಎನ್ನವುದೇ ಇರಲಿಲ್ಲ. ಹಾಗಾಗಿ ಭಾರತೀಯರೆಲ್ಲರೂ ಒಟ್ಟಾಗಿ ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಹೋರಾಟದ ರಣಕಹಳೆಯನ್ನು ಊದಿ ಕೊನೆಗೆ 1947 ನೇ ಆಗಸ್ಟ್ 15 ರಂದು ಸ್ವಾತಂತ್ರವನ್ನು ಪಡೆದರು.ಆ ದಿನವನ್ನು ಪ್ರತಿವರ್ಷ ಭಾರತೀಯರೆಲ್ಲರೂ ಒಟ್ಟಾಗಿ ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಿ ರಾಷ್ಟ್ರೀಯ ಐಕ್ಯತೆಯನ್ನು ಮೆರೆಯುತ್ತಾರೆ.ಅಂದು ಶಾಲಾ-ಕಾಲೇಜು-ಕಛೇರಿಗಳಲ್ಲಿ ರಾಷ್ಟ್ರೀಯ ಧ್ವಜವನ್ನು ಹಾರಿಸಿ ದೇಶಭಕ್ತಿ ಸಾರುವ ಕಾರಕ್ರಮಗಳನ್ನು ಆಚರಿಸಿ ಒಗ್ಗಟ್ಟನ್ನು ಪ್ರದರ್ಶಿಸುತ್ತಾರೆ. ಶಿ 2) ಗಣರಾಜ್ಯೋತ್ಸವ : ಭಾರತದೇಶವು ಸ್ವಾತಂತ್ರ್ಯವನ್ನು ಪಡೆದ ನಂತರ ಆಡಳಿತದ ರೂಪುರೇಷಗಳನ್ನು ಸಿದ್ಧಪಡಿಸಲಾಗುತ್ತದೆ. ಆ ರೂಪುರೇಷಗಳನ್ನು ಒಳಗೊಂಡಿರುವುದೇ ನಮ್ಮ ಸಂವಿಧಾನ. ಎಲ್ಲ ರಾಜ್ಯಗಳನ್ನು ಗಣಗಳನ್ನಾಗಿ ಮಾಡಿ (ಒಟ್ಟುಗೂಡಿಸಿ) ಉತ್ತಮವಾದ ಆಡಳಿತ ನಡೆಸಲು ಕಾನೂನುರೂಪ ಪಡೆದ ಸಂವಿಧಾನವನ್ನು ಜನೇವರಿ 26,1950 ರಲ್ಲಿ ಜಾರಿಗೆ ತರಲಾಯಿತು. ಆ ದಿನವೇ ಗಣರಾಜ್ಯ ದಿನ. ಇದನ್ನು ಕೂಡ ನಮ್ಮ ದೇಶದ ಪ್ರಜೆಗಳೆಲ್ಲರೂ ಒಟ್ಟಾಗಿ ಸೇರಿ ಆಚರಿಸುತ್ತಾರೆ.ಈ ದಿನದಲ್ಲಿ ರಾಷ್ಟ್ರಧ್ವಜವನ್ನು ಆರಿಸಿ ಸಂವಿಧಾನದ ನಿರ್ಮಾತೃಗಳು ಹಾಗೂ ತತ್ವಗಳನ್ನು ಸ್ಮರಿಸಿಕೊಳ್ಳತ್ತಾರೆ. ಪ್ರತಿಯೊಬ್ಬರು ಸಂವಿಧಾನ ಪಾಲಿಸುವ ಮನೋಧರ್ಮವನ್ನು ಬೆಳೆಸಿಕೊಳ್ಳುವ ಆಶಯನ್ನು ಪಡೆಯುತ್ತಾರೆ. ಹಾಗೆಯೇ ದೇಶಭಕ್ತಿ ಸಾರುವ ಕಾರಕ್ರಮಗಳನ್ನು ಆಚರಿಸಿ ಒಗ್ಗಟ್ಟನ್ನು ಪ್ರದರ್ಶಿಸುತ್ತಾರೆ. 3) ಗಾಂಧಿ ಜಯಂತಿ : ಯಾವುದೇ ಒಂದು ದೇಶದ ಜನರೆಲ್ಲರೂ ಒಟ್ಟಾಗಿ ಸೇರಲು ನಾಯಕತ್ವ ಬೇಕು. “ನಾಯಕರಿಲ್ಲದ ನಾವೆ ದಡಸೇರಲಾರದು” ಅಂತೆಯೇ ನಮ್ಮ ದೇಶದ ಸ್ವಾತಂತ್ರ್ಯ ಪಡೆಯಲು ಬಹುಮುಖ್ಯ ನಾಯಕತ್ವವಹಿಕೊಂಡವರು ನಮ್ಮ ದೇಶದ ರಾಷ್ಟ್ರಪಿತ ಎನಿಸಿಕೊಂಡ ಮಹಾತ್ಮ ಗಾಂಧೀಜಿಯವರು. ಅವರ ಹುಟ್ಟಿದ ದಿನವೇ ಅಕ್ಟೋಬರ್ 2, ಆ ದಿನವನ್ನು ಗಾಂಧಿಜಯಂತಿಯೆಂದು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಏಕೆಂದರೆ ಗಾಂಧೀಜಿವರು ಸ್ವಾತಂತ್ರ್ಯ ಚಳುವಳಿಯ ಮುಂದಾಳತ್ವವನ್ನು ವಹಿಸಿಕೊಂಡು ಸ್ವಾತಂತ್ರ್ಯವನ್ನು ತಂದುಕೊಡುವಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡರು. ಆದ್ದರಿಂದ ಅವರ ಆದರ್ಶಗಳನ್ನು ನೆನೆಯುತ್ತ, ಅವರನ್ನು ಸ್ಮರಿಸುತ್ತಾ ಸ್ವಾತಂತ್ರ್ಯದ ಮಹತ್ವದ ಬಗ್ಗೆ ಕೊಂಡಾಡುವ ದಿನವಾಗಿದೆ. HAPPY REPUBLIC DAY U HAPPY INDEPENDENCE DAY
ಉಪಸಂಹಾರ :ಭಾರತದಲ್ಲಿ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವುದರಿಂದ ಪ್ರತಿಯೊಬ್ಬ ನಾಗರಿಕರಲ್ಲಿ ಏಕತೆ, ದೇಶಭಕ್ತಿ, ಸಂವಿಧಾನದ ಮಹತ್ವ, ನಾಯಕತ್ವದ ಮಹತ್ವ ಮುಂತಾದ ವಿಚಾರಗಳನ್ನು ತಿಳಿಯಲು ಮತ್ತು ನಾವು ಅದೇ ರೀತಿ ನಡೆದುಕೊಳ್ಳಲು ನೆರವಾಗುತ್ತದೆ ಎಂಬ ಆಶಯವನ್ನು ಇಟ್ಟುಕೊಳ್ಳೋಣ.
2.ಗ್ರಂಥಾಲಯಗಳ ಮಹತ್ತ್ವ
ಪೀಠಿಕೆ: ಪುಸ್ತಕಗಳು ಜ್ಞಾನ ಭಂಡಾರಗಳು, ಭಾಷೆ ವಾಕ್ಷುಷ ರೂಪ ಸಿಕ್ಕಾಗಿನಿಂದ ಮಾನವನ ಅನುಭವಾಮೃತಗಳು ದಾಖಲಿಸಲ್ಪಟ್ಟು ಈಗ ಗ್ರಂಥ ರೂಪದಲ್ಲಿ ಸಂರಕ್ಷಿಸಲ್ಪಟ್ಟಿವೆ. ಪುಸ್ತಕ ಓದುವುದರಿಂದ ತಲತಲಾಂತರ ದಿಂದ ಗಳಿಸಿದ ಜ್ಞಾನವನ್ನು ನಮ್ಮದಾಗಿಸಿಕೊಳ್ಳಬಹುದು. ಪುಸ್ತಕಗಳು ಒಳ್ಳೆಯ ಗೆಳೆಯನಿದ್ದಂತೆ ಹಾಗೂ ಗುರುವಿದ್ದಂತೆ. ಓದುವ ಹವ್ಯಾಸವುಳ್ಳವರಿಗೆ ಪುಸ್ತಕಗಳೇ ಜೀವನ ಸಂಗಾತಿ.
ವಿಷಯ ನಿರೂಪಣೆ :ಮಾನವನ ಜೀವನದಲ್ಲಿ ಪುಸ್ತಕಗಳು ಪ್ರಮುಖ ಪಾತ್ರ ವಹಿಸುತ್ತವೆ. ಜ್ಞಾನಾಭಿವೃದ್ಧಿಗೆ ಮತ್ತು ಅಮೂಲ್ಯವಾದ ಸಮಯ ಸದುಪಯೋಗಕ್ಕೆ ಗ್ರಂಥಾಲಯಗಳು ಬಹಳ ಮುಖ್ಯ ಎನಿಸುತ್ತವೆ. ಗ್ರಂಥಾಲಯವು ಪೀಳಿಗೆಯಿಂದ ಪೀಳಿಗೆಗೆ ಜ್ಞಾನವನ್ನು ಹಂಚುವ ಉನ್ನತ ಕಾವ್ಯವನ್ನು ಮಾಡುತ್ತಿದೆ. ಪುಸ್ತಕ ಓದುವುದು ಗ್ರಂಥ ಸಂಗ್ರಹ ಮಾಡುವುದು ಅತ್ಯುತ್ತಮ ಒಂದು ಸ್ವಂತವಾಗಿ ಗ್ರಂಥಗಳನ್ನು ಸಂಗ್ರಹಿಸುವುದು ಮುಂದಿನ * ನಿರೀದಿ .. ಜನಾಂಗಕ್ಕೆ ನಾವು ನೀಡುವ ಸಣ್ಣ ಕಾಣಿಕೆ. ಗ್ರಂಥ ಗಳನ್ನು ಸಂಗ್ರಹಿಸಿ ಬಳಸುವುದು *ದು ಕಲೆ, ಸಾರ್ವಜನಿಕ ಗ್ರಂಥಾಲಯಗಳು ಹಿರಿ- ಕಿರಿಯರು, ಗುರು-ಶಿಷ್ಯರು, ಹವ್ಯಾಸವುಳ್ಳವರು ಅಧ್ಯಯನ ಶೀಲರು ಎಲ್ಲರಿಗೂ ಬಳಕೆಯಾಗುವ ಗ್ರಂಥಗಳನ್ನು ಹೊಂದಿರಬೇಕು. ಓದುವ ಕೊಠಡಿ, ಎರವಲು ಪಡೆಯುವ ಅವಕಾಶಗಳಲ್ಲದೆ, ಕಾಲಕಾಲಕ್ಕೆ ತನ್ನ ಸೇವೆಯನ್ನು ಗ್ರಂಥಾಲಯಗಳು ವಿಸ್ತರಿಸುತ್ತಲೂ ಇರಬೇಕು ಗ್ರಂಥಗಳ ಸದುಪಯೋಗಗಳನ್ನು ಮನಗಂಡ ಸರ್ಕಾರ ಪ್ರಾಥಮಿಕ ಶಾಲಾ ಹಂತದಿಂದ ಹಿಡಿದು ಹೊಸ ಅಕ್ಷರಸ್ತ ಹಿರಿಯರಿಗೂ ಗ್ರಂಥಾಲಯಗಳನ್ನು ತೆರೆದಿದೆ. ಪ್ರತಿ ಗ್ರಾಮ ಪಂಚಾಯತಿಗೂ ಗ್ರಂಥಾಲಯಗಳು ತೆರೆಯಲ್ಪಟ್ಟಿವೆ. ನಗರ ಪ್ರದೇಶಗಳಲ್ಲಿ ಗ್ರಂಥಾಲಯಗಳ ಉಪಯೋಗ ವಿಸ್ತಾರವಾಗಿ ಜಾರಿಯಾಗಿದೆ ಜ್ಞಾನ ಪ್ರಸಾರ ಎಡೆಬಿಡದೆ ಸಾಗಿದೆ. FA
ಉಪ ಸಂಹಾರ: ಓದುವ ಹವ್ಯಾಸ ರೂಡಿಸಿಕೊಳ್ಳುವುದು ಒಂದು ಸಾಧನೆ ಒಮ್ಮೆ ರೂಡಿಸಿಕೊಂಡ ಹವ್ಯಾಸವನ್ನು ಗ್ರಂಥಾಲಯದ ಬಳಕೆಯಿಂದ ಮುಂದುವರೆಸಿ ಜ್ಞಾನಾಭಿವೃದ್ಧಿಗೆ ಅಲ್ಲದೇ ಗ್ರಂಥಾಲಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಶಿಕ್ಷಕರು ವಿದ್ಯಾಥಿಗಳಿಗೆ ತೊಡಗೊಗಿಸಿಕೊಳ್ಳಬಹುದು. ಪ್ರೋತ್ಸಾಹಿಸಬೇಕು. ಅಲ್ಲದೇ ಗ್ರಂಥಾಲಯವನ್ನು ಸಂರಕ್ಷಿಸಬೇಕಾದುದು ನಮ್ಮ ಕತ್ರವ್ಯವೂ ಆಗಿದೆ. ಬನ್ನಿ ನಾವೆಲ್ಲರೂ ಗ್ರಂಥಾಲಯದ ಸದ್ಬಳಕೆ ಮಾಡಿಕೊಳ್ಳೋಣ.
3. ಸಾಮಾಜಿಕ ಪಿಡುಗುಗಳು
ಇಂದು ಮಾನವನಿಗೆ ಅತಿ ಅವಶ್ಯಕವಿರುವ ಪರಿಸರ ಹಾಳಾಗುತ್ತಿರುವುದಕ್ಕೆ ವಿವಿಧ ಕಾರಣಗಳಿದ್ದು ಅದರಲ್ಲಿ ಮುಖ್ಯವಾದ ಕಾರಣ ಮಿತಿಮೀರಿದ ಜನಸಂಖ್ಯೆ. ಇದನ್ನಾಧರಿಸಿ ಹುಟ್ಟುವ ಸಮಸ್ಯೆಗಳಲ್ಲಿ ಸಾಮಾಜಿಕ ಪಿಡುಗುಗಳು ಮುಖ್ಯವಾಗಿವೆ. ಸಮಾಜದ ಪ್ರಗತಿಗೆ ಅಥವಾ ವ್ಯಕ್ತಿಯ ವ್ಯಕ್ತಿತ್ವದ ವಿಕಸನಕ್ಕೆ ಅಡ್ಡಿಯನ್ನು ಉಂಟುಮಾಡುವ ಶಕ್ತಿಗಳನ್ನು 'ಸಾಮಾಜಿಕ ಪಿಡುಗುಗಳು' ಎನ್ನುವರು. ಸಮಾಜ ಕಲುಷಿತವಾಗಲು ದಾರಿಮಾಡಿಕೊಡುವ ಇವುಗಳಿಂದ ಸಾಮಾಜಿಕ ಸ್ವಾಸ್ಥ್ಯ ಹಾಳಾಗುವುದಲ್ಲದೆ ದೆಶದ ಅಭಿವೃದ್ಧಿ ಕುಂಠಿತವಾಗಲು ಕಾರಣವಾಗುತ್ತವೆ. ಅಂತಹ ಸಾಮಾಜಿಕ ಪಿಡುಗುಗಳ ಕುರಿತು ಇಂದು ನಾವು ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.
ವಿಷಯ ನಿರೂಪಣೆ: ಸಾಮಾಜಿಕ ಪಿಡುಗುಗಳು :
ಸಾಮಾಜಿಕ ಪಿಡುಗುಗಳಲ್ಲಿ ಮುಖ್ಯವಾದವುಗಳೆಂದರೆ ಬಡತನ, ನಿರುದ್ಯೋಗ, ಅಜ್ಞಾನ, ಅನಕ್ಷರತೆ, ಜಾತೀಯತೆ, ಸ್ತ್ರೀಶೋಷಣೆ, ಮಾದಕವಸ್ತುಗಳ ಸೇವನೆ' ಮೊದಲಾದವುಗಳು. ಅಜ್ಞಾನಕ್ಕೆ ಅನಕ್ಷರತೆಯೇ ಮುಖ್ಯ ಕಾರಣ. ಅಜ್ಞಾನ ಮತ್ತು ಅನಕ್ಷರತೆಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ' ಅಜ್ಞಾನವು ಸಮಾಜವನ್ನು ಅಧ:ಪತನದತ್ತ ಕೊಂಡೊಯ್ಯುತ್ತದೆ. ಇವೆರಡು ಇದ್ದ ಕಡೆಗೆ -ಬಡತನ ಮತ್ತು ನಿರುದ್ಯೋಗ ಸಮಸ್ಯೆಗಳು ತಲೆದೋರುತ್ತವೆ. ನಮ್ಮದೇಶವು ಪುರುಷ ಪ್ರಧಾನ ರಾಷ್ಟ್ರವಾಗಿರುವುದರಿಂದ ಸ್ತ್ರೀ ಭ್ರೂಣಹತ್ಯೆ, ದೇವದಾಸಿ ಪದ್ಧತಿ, ವೇಶ್ಯಾವಾಟಿಕೆ ಮುಂತಾದ ರೂಪದಲ್ಲಿ ಸ್ತ್ರೀಶೋಷಣೆ ಮಾಡುತ್ತಿದ್ದಾರೆ. A
ಇಂದು ಜಾತೀಯತೆಯು ಅಖಂಡವಾದ ಭಾರತಕ್ಕೆ ಧಕ್ಕೆಯನ್ನುಂಟುಮಾಡುತ್ತಿದೆ. ಇದರಿಂದ ಜನತೆಯಲ್ಲಿ ಅಶಾಂತಿ, ದ್ವೇಷ, ಅರಾಜಕತೆ ಉಂಟಾಗಿ ಐಕ್ಯತೆಗೆ ಧಕ್ಕೆ ಉಂಟಾಗುತ್ತಿದೆ.ಅಸ್ಪೃಶ್ಯತೆಯು ನಮ್ಮ ಸಮಜಕ್ಕೆ ಅಂಟಿಕೊಂಡಿರುವ ಘೋರಶಾಪವಾಗಿದೆ. ಜಾತಿಪದ್ಧತಿಯ ಅವಿಭಾಜ್ಯ ಅಂಗವಾಗಿ ಬೆಳೆದುಬಂದುರುವ ಇದು ಸುಲಭವಾಗಿ ನಿರೂಲನೆ ಮಾಡಲಾಗದ ಅಂಟುರೋಗವಾಗಿದೆ.
ನಿವಾರಣೋಪಾಯಗಳು
ಯುವಕ-ಯುವತಿಯರು ಮಾದಕ ಪೇಯಗಳ ಹಾನಿಯನ್ನು ಜನರಿಗೆ ತಿಳಿಸುವುದು. ಅವುಗಳ ಉತ್ಪಾದನೆ ಮತ್ತು ಮಾರಾಟವನ್ನು ನಿಷೇಧಿಸುವುದು.
ಜನಸಂಖ್ಯಾ ಸ್ಫೋಟವನ್ನು ತಡೆಗಟ್ಟುವುದರಿಂದ ಬಡತನ ದಾರಿದ್ರವನ್ನು ಕಡಿಮೆಮಾಡಬಹುದು. ಸ್ತ್ರೀಶೋಷಣೆಯನ್ನು ನಿಲ್ಲಿಸಬೇಕಾದರೆ ಸ್ತ್ರೀಯರಿಗೆ ಯೋಗ್ಯ ಶಿಕ್ಷಣ ನೀಡಬೇಕು ಸ್ತ್ರೀಯರಿಗೆ ಪುರುಷರಷ್ಟೆ ಸಮಾನ ಸ್ಥಾನ ಸಿಗುವಂತಾಗಬೇಕು.
ಜಾತೀಯತೆಯನ್ನು ಹೋಗಲಾಡಿಸಲು ಶಿಕ್ಷಣ ಸಂಸ್ಥೆಗಳು ಧಾರಿಕ ಸಂಘಗಳು ಮಾನವೀಯತೆಯನ್ನು ಬೆಳೆಸುವ ಕಾಠ್ಯಕ್ರಮಗಳನ್ನು ಏಪ್ಪಡಿಸಬೇಕು.
ಮಾಜದ ಹಿತವೇ ತನ್ನ ಹಿತವೆಂದು ಬದುಕಬೇಕಾದ ಮಾನವನು ಇಂದು ಸಾಮಾಜಿಕ ಪಿಡುಗುಗಳ ಸಮಸ್ಯೆಯ ಸುಳಿಯಲ್ಲಿ ಸಿಕ್ಕು ನಲುಗಿ ಹೋಗುತ್ತಿದ್ದಾನೆ. ಇದರಿಂದ ದೇಶದ ಅಭಿವೃದ್ಧಿಗೆ ಮಾರಕಗಳಾಗುತ್ತಿವೆ.ಆದ್ದರಿಂದ ಸಮಾಜ,ಸರಾರ ಮುಖ್ಯವಾಗಿ ಯುವಜನಾಂಗವು ಎಚ್ಚೆತ್ತುಕೊಳ್ಳಬೇಕು.ಈ ಪಿಡುಗುಗಳಿಂದ ಆಗುತ್ತಿರುವ ಕೆಡುಕುಗಳನ್ನು ಗ್ರಹಿಸಿ ನಿಗ್ರಹಿಸಲು ಉದ್ಯುಕ್ತರಾಗಬೇಕು.ಹಾಗಾದಾಗ ಮಾತ್ರ ಸ್ವಸ್ಥ ಸಮಾಜವು ನಿರಾಣವಾಗುತ್ತದೆ.
4.ರಾಷ್ಟ್ರೀಯ ಭಾವೈಕ್ಯತೆ
ಪೀಠಿಕೆ:ಭಾರತವು ಅನೇಕ ಜನಾಂಗಗಳು, ಪಂಗಡಗಳು ಇರುವಂತಹ ಒಂದು ವಿಶಾಲ ರಾಷ್ಟ್ರ. ಇಲ್ಲಿ “ವಿವಿಧ ಭಾಷೆ, ಸಂಸ್ಕೃತಿ, ಧರ, ಜಾತಿಗಳ ಜನರು ತಮ್ಮ ವಿವಿಧತೆಯನ್ನು ಮರೆತು ನಾವೆಲ್ಲರೂ ಭಾರತೀಯರು ಎಂಬ ರಾಷ್ಟ್ರೀಯ ಮನೋಭಾವನೆಯನ್ನು ಹೋದಿರುವುದೇ 'ರಾಷ್ಟ್ರೀಯ ಭಾವೈಕ್ಯತೆ”, ಭಾರತವು ಪ್ರಜಾಪ್ರಭುತ್ವ ತಳಹದಿಯ ಮೇಲೆ ರೂಪಿತವಾಗಿರುವ ಒಂದು ಜಾತ್ಯತೀತ ರಾಷ್ಟ್ರವಾಗಿದ್ದು ಪ್ರತಿಯೊಂದು ಧರೀಯರು ತಮ್ಮ ಸಂಪ್ರದಾಯ,ಪದ್ಧತಿಗಳನ್ನು
ವಿಷಯ ನಿರೂಪಣೆ:ಭಾರತವು ವಿವಿಧ ಧರ, ಭಾಷೆ, ಬುಡಕಟ್ಟು, ಜನಾಂಗಗಳನ್ನು ಹೊದಿಂದ್ದು, ದೇಶದ ಯಾವುದೇ ಮೂಲೆಗೆ ಹೋದರು ಅಲ್ಲಿ ವೈವಿದ್ಯತೆಯನ್ನು ಕಾಣುತ್ತೇವೆ. ಏಕೆಂದರೆ ಭಾರತೀಯ ನಾಗರಿಕತೆಯು ಯಾವಾಗಲೂ ಧಾರಿಕ ಹಾಗೂ ನೈತಿಕ ತಳಹದಿಯ ಮೇಲೆ ಚಲಿಸುತ್ತಿದೆ. ದೇಶದ ಎಲ್ಲ ಭಾಗಗಳಲ್ಲಿಯೂ, ಸಾಂಸ್ಕೃತಿಕ ಮತ್ತು ಜೀವನ ಮಾರದ ಒಗ್ಗಟ್ಟು ಹಾಗೂ ದೃಷ್ಟಿಕೋನವು ಧರ, ನಂಬಿಕೆ ಮತ್ತು ಆಚರಣೆಗಳಲ್ಲಿ ವಿಶಾಲ ವೈವಿಧ್ಯತೆಯನ್ನು ಹೊಂದಿದೆ. ಆದರೂ ನಮ್ಮಲ್ಲಿ ನಾವು ಭಾರತೀಯರು ಎಂಬ ಬಲವಾದ ಬೇರಿದೆ. ನಮ್ಮ ದೇಶದ ರಾಷ್ಟ್ರಗೀತೆ, ರಾಷ್ಟ್ರಲಾಂಛನ, ರಾಷ್ಟ್ರಭಾಷೆ, ರಾಷ್ಟ್ರಮುದ್ರೆ ಇವು ನಮ್ಮ ಏಕತೆಯ ಸಂಕೇತಗಳಾಗಿವೆ. ಅಲ್ಲದೇ 'ವಂದೇಮಾತರಂ, ಸಾರೇ ಜಹಾಸೇ ಅಚ್ಚಾ,
ಉಪಸಂಹಾರ :ಇತ್ತೀಚೆಗೆ ಭಾರತೀಯ ಸಂಸ್ಕೃತಿಯು ಪ್ರಗತಿ ಹಾಗೂ ಬದಲವಣೆಯ ಹಂತದಲ್ಲಿದೆ . ವಿಜ್ಞಾನ ತಂತ್ರಜ್ಞಾನದ ಅಭಿವೃದ್ಧಿಯ ಗಾಳಿಯು ಇಡೀ ವಿಶ್ವವನ್ನೇ ನಡುಗಿಸುತ್ತಿದೆ. ಆದರೆ ಭಾರತೀಯರಾದ ನಾವು ಮಾತ್ರ ನಮ್ಮ ನೆರೆಹೊರೆಯ ರಾಷ್ಟ್ರಗಳೊಂದಿಗೆ ಪ್ರೀತಿ ಹಾಗೂ ಸೌಹಾಗ್ಧತೆಯಿಂದ ನಡೆದುಕೊಳ್ಳುತ್ತಾ, ನಮ್ಮ ದೇಶದ ಏಕತೆಯನ್ನು ಎತ್ತಿ ಹಿಡಿದಿದ್ದೇವೆ.
ನಾಡಿನೆಲ್ಲ ಗಡಿಗಳಲ್ಲಿ ಬಾನಿನಲ್ಲಿ ಕಡಲಿನಲ್ಲಿ ನಮ್ಮ ಯೋಧರೆತ್ತಿ ಹಿಡಿದ ನಮ್ಮ ಧ್ವಜದ ನೆರಳಿನಲ್ಲಿ ಒಂದೆ ನೆಲದ ತೊಟ್ಟಿಲಲ್ಲಿ ಬೆಳೆದ ನಮ್ಮ ಕೊರಲಿನಲ್ಲಿ ನಮ್ಮ ಯುಗದ ದನಿಗಳಾಗಿ ಮೂಡಿದೆಲ್ಲ ಹಾಡಿನಲ್ಲಿ ಭಾಷೆ ಬೇರೆ ಭಾವವೊಂದು ನಾವು ಭಾರತೀಯರು .ಜನಗಣಮನ ಅಧಿನಾಯಕ' ದಂತಹ ದೇಶ ಭಕ್ತಿಗೀತೆಗಳು ನಮ್ಮಲ್ಲಿ ದೇಶಪ್ರೇಮ, ದೇಶಾಭಿಮಾನವನ್ನು ಹುಟ್ಟಿಸುತ್ತವೆ. ಇಡೀ ದೇಶವೇ ವೈವಿಧ್ಯಮಯವದ ಸಂಸ್ಕೃತಿಕ ಆಚರಣೆಯಲ್ಲಿರುವಾಗ ನಾವು ಒಂದೇ ಮನೆಯವರಂತೆ ಕೂಡಿ ಬಾಳುತ್ತಿರುವುದು ಮಾದರಿಯಾಗಿದೆ ಎಂದು ಹೇಳಬಹುದು.
ಇಡೀ ಜಗತ್ತಿಗೆ 'ವಸುಧೈವ ಕುಟುಂಬಕಂ' 'ಸರ್ವೇ ಜನಾಃ ಸುಖಿನೋ ಭವಂತು' ಎಂಬುದು ಭಾರತೀಯ ಸಂಸ್ಕೃತಿ. ಪ್ರಾಚೀನ ಭಾರತವು ಬೋಧಿಸುತ್ತಾ ಪಾಲಿಸುತ್ತಾ ಬಂದಿದೆ. ಭಾರತ ಸರ್ವಜನಾಂಗದ ಸಹಿಷ್ಣ ತ್ರಿಯೇ ದೇಶದ ಶಕ್ತಿ. ಹಲವು ಧರ್ಮ, ಜಾತಿ, ಭಾಷೆ, ಪ್ರಾಂತ್ಯ, ಸಂಸ್ಕೃತಿಗಳನ್ನು ಕಾಲದಿಂದಲೂ ಸಹ ಯಲ್ಲಿ ಶಾಂತಿಯ ಬೀಡು. ಹೊಂದಿದೆ. ಕೆಲವೊಮ್ಮೆ ಈ ವೈವಿಧ್ಯತೆಯ ಕಾರಣದಿಂದ ದೇಶದ ಶಾಂತಿ ಹಾಳಾಗುವುದುಂಟು. ಆದರೆ ನಮ್ಮ ಭಾವೈಕ್ಯತೆ ಬಲಿಷ್ಠವಾಗಿದ್ದರಿಂದ ಈ ಅಸಹಿಷ್ಣುತೆ, ಹಿಂಸೆ, ದ್ವೇಷಗಳ ಮೇಲೆ ವಿಜಯ ಸಾಧಿಸುತ್ತ ಬಂದಿದ್ದೇವೆ. ಸಂವಿಧಾನ ಮತ್ತು ಕಾನೂನನ್ನು ಪಾಲಿಸುವುದು. ಪ್ರಜೆಗಳು ಹಕ್ಕು ಕರ್ತವ್ಯಗಳಿಗೆ ಬದ್ಧರಾಗಿರುವುದು. ದೇಶಸೇವೆಗೆ ಸದಾ ಸಿದ್ಧವಾಗಿರುವುದು. ಯುದ್ಧ, ಭೂಕಂಪ, ಪ್ರವಾಹಗಳಂತಹ ಆಪತ್ಕಾಲದಲ್ಲಿ ನೆರವಾಗುವುದು. ರಾಷ್ಟ್ರೀಯ ಸ್ಮಾರಕ ರಕ್ಷಣೆ ಮಾಡುವುದು. ಸಾರ್ವಜನಿಕ ಸ್ಥಳ ಮತ್ತು ಆಸ್ತಿಗಳ ಕಾಪಾಡುವುದು. ಅರಣ್ಯ ರಕ್ಷಣೆ, ಪರಿಸರ ಸ್ವಚ್ಛತೆ, ಪ್ರಜಾಕಲ್ಯಾಣ ಭಾವನೆ ಬೆಳಸಿಕೊಳ್ಳುವುದು.
5.ಪ್ರಾಚ್ಯ ಸ್ಮಾರಕಗಳ ಸಂರಕ್ಷಣೆ
ಪೀಠಿಕೆ :
ಸ್ಮಾರಕವು ಬಹಿರಂಗವಾಗಿ ವ್ಯಕ್ತಿಯನ್ನು ಪ್ರಶಂಸಿಸಲು ಅಥವಾ ಮುಖ್ಯವಾದ ಘಟನೆಯನ್ನು ನೆನೆಪಿಸಿಕೊಳ್ಳಲು ಅಥವಾ ಒಂದು ಸಾಮಾಜಿಕ ಸಮೂಹದ ಹಿಂದಿನ ಘಟನೆಗಳ ನೆನಪಿನ ಸಂದರದಲ್ಲಿ ಆ ಗುಂಪಿಗೆ ಪ್ರಮುಖವಾಗಿದ್ದ ಘಟನೆಯನ್ನು ಪ್ರಖ್ಯಾತಗೊಳಿಸಲು ಕಟ್ಟುವಂತಹ ಒಂದು ಬಗೆಯ ರಚನಾ ವಿನ್ಯಾಸ, ಇವುಗಳನ್ನು ಪಟ್ಟಣಗಳ, ನಗರಗಳ ಸೊಬಗನ್ನು ಹೆಚ್ಚಿಸಲು ಯೋಜಿತ ರೀತಿಯಲ್ಲಿ ನಿಮ್ಮಿಸಲಾಗಿರುತ್ತದೆ.
ವಿಷಯ ನಿರೂಪಣೆ:
ಪ್ರಭಾವ ಉಂಟುಮಾಡುವುದು ಐತಿಹಾಸಿಕ ಹಾಗೂ ಬೀರುವುದು ಹಾಗೂ ವಿಸ್ಮಯವನ್ನು ಸ್ಮಾರಕಗಳ ಉದ್ದೇಶವಾಗಿದೆ. ಸ್ಮಾರಕಗಳು ರಾಜಕೀಯ ಮಾಹಿತಿಗಳನ್ನು ತಿಳಿಸುವ ಉದ್ದೇಶದಿಂದಲೂ ಸಹ ನಿರಿಸಲ್ಪಡುತ್ತವೆ. ಸ್ಮಾರಕಗಳನ್ನು ಸಾವಿರಾರು ವರಗಳಿಂದ ನಿಮ್ಮಿಸಲಾಗುತ್ತಿದೆ. ಅಲ್ಲದೇ ಇವು ಹೆಚ್ಚಿನ ಇರುವಂತಹವು ಹಾಗೂ ನಾಗರಿಕತೆಯ ಪ್ರಖ್ಯಾತ ಚಿಹ್ನೆಯಾಗಿವೆ. ಪ್ರತಿಮೆಗಳ ರೂಪದಲ್ಲಿ ನಿರಿಸಲಾದ ರಚನೆಗಳು (ಕಟ್ಟಡಗಳು), ಅರಮನೆಗಳು, ಸಾವಿನ ಜ್ಞಾಪಕಾರವಾಗಿ ನಿಮ್ಮಿಸಿದ ಸತ್ತವರ ಸಮಾಧಿಗಳು, ಸ್ತಂಭಾಕಾರದ ಸ್ಮಾರಕಗಳು, ವಾಸ್ತುಶಿಲ್ಪ ವೈಭವದ ದೇವಾಲಯಗಳು, ವಿಜಯ ಮಂಟಪಗಳು, ಯುದ್ಧ ಕಾಲ ಸ್ಮಾರಕಗಳು ಮೊದಲಾದ ಪ್ರಕಾರದ ಸ್ಮಾರಕಗಳನ್ನು ಕಾಣಬಹುದು. ಪ್ರಾಚ್ಯವಸ್ತು ಸ್ಮಾರಕಗಳೊಡನೆ ನಮಗೆ ಭಾವನಾತ್ಮಕವಾದ ಸಂಬಂಧವಿದೆ. ಪ್ರಾಚೀನ ಕಾಲದ ಸ್ಮಾರಕಗಳು, ದೇವಾಲಯಗಳು, ಶಿಲಾಶಾಸನಗಳು, ವಾಸ್ತುಶಿಲ್ಪಕಲೆ, ಚಿತ್ರಕಲೆಗಳು ನಮ್ಮ ಭವ್ಯ ಪರಂಪರೆಯ ಕಥೆಯನ್ನು ಹಳುತ್ತವೆ. ನಮ್ಮ ಸಂಸ್ಕೃತಿ ಮತ್ತು ಪರಂಪರೆಯು ಬೆಳೆದು ಬಂದ ರೀತಿಯ ಬಗ್ಗೆ ಬೆಳಕನ್ನು ಚೆಲ್ಲುತ್ತವೆ. ಇದು ನಮ್ಮೆಲ್ಲರ ಆಸ್ತಿಯಾಗಿದೆ. ಐತಿಹಾಸಿಕ ಸ್ಮಾರಕಗಳನ್ನು ವಿರೂಪಗೊಳಿಸದಂತೆ ಹಾಗೂ ನೈಸರಿಕ ಪರಂಪರೆಯ ತಾಣಗಳು ಅತಿಕ್ರಮಣವಾಗದಂತೆ ತಡೆಯುವ ಮಹತ್ತರವಾದ ಜವಾಬ್ದಾರಿಯು ನಮ್ಮ ಮೇಲಿದೆ. ಉಪಸಂಹಾರ :
ಇವುಗಳ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡಲು ಅವುಗಳ ಸಂರಕ್ಷಣೆಯನ್ನು ಮಾಡಬೇಕು. ಪ್ರಾಚೀನ ಸ್ಮಾರಕಗಳು ನಾಡಿನ ಸಾಂಸ್ಕೃತಿಕ ಸಂಪತ್ತು. ನಮ್ಮ ಭವ್ಯ ಪರಂಪರೆಯ ಪ್ರತೀಕ. ಆಧುನೀಕತೆಯ ಭರಾಟೆಯಲ್ಲಿ ಪ್ರಾಚೀನ ಸ್ಮಾರಕಗಳು ನಶಿಸಿಹೋಗುತ್ತಿವೆ. ಗತಕಾಲದ ವೈಭವವನ್ನು ತಿಳಿಸುವ ಐತಿಹಾಸಿಕ ಸ್ಮಾರಕಗಳು, ದೇವಾಲಯಗಳು, ವಾಸ್ತುಶಿಲ್ಪಗಳು, ಚಿತ್ರಕಲೆಗಳು ಸಂರಕ್ಷಣೆ ಇಲ್ಲದೆ ಸೊರಗುತ್ತಿವೆ. ಅವುಗಳ ಸಂರಕ್ಷಣೆ ನಮ್ಮೆಲ್ಲರ ಆದ್ಯಕರವ್ಯ ಎಂಬುದು ನನ್ನ ಅಭಿಪ್ರಾಯವಾಗಿದೆ.
6.ಸ್ವಚ್ಛಭಾರತ ಅಭಿಯಾನ
ಪೀಠಿಕೆ :
ನಮ್ಮ ಆರೋಗ್ಯದ ದೃಷ್ಟಿಯಿಂದ ನಾವು ವಾಸಿಸುವ ಪರಿಸರವನ್ನು ಆದ್ಯ ಕರ್ತವ್ಯವಾಗಿದೆ. ಸ್ವಚ್ಛ ಪರಿಸರ ಸ್ವಾಸ್ಥ್ಯ ಭಾರತ' ಎಂಬ ಭಾವನೆಯ ದಿಸೆಯಲ್ಲಿ ಸ್ವಚ್ಛತೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಇದು ನಮ್ಮ ಮನೆ ಪರಿಸರದಿಂದಲೇ ವಿಷಯ ನಿರೂಪಣೆ :
'ಆರೋಗ್ಯವೇ ಭಾಗ್ಯ' ಎಂಬ ನಾಣ್ಣುಡಿ ನಮ್ಮಲ್ಲಿದೆ ಉತ್ತಮ ಆರೋಗ್ಯಕ್ಕೆ ಉತ್ತಮ ಹಾಗೂ ಸ್ವಚ್ಛವಾದ ಪರಿಸರ ಅಗತ್ಯ. ಇದಕ್ಕಾಗಿಯೇ ನಮ್ಮ ಇಂದಿನ ಪ್ರಧಾನ ಮಂತ್ರಿಗಳು ಗಾಂಧೀಜಿಯವರ ಜನ್ಮದಿನವಾದ 2.10.2014ರಂದು ಸ್ವಚ್ಛ ಭಾರತ ಅಭಿಯಾನವನ್ನು ಪ್ರಾರಂಭಿಸಿದರು. ಗಾಂಧೀಜಿಯವರು ಹುಟ್ಟಿ 150 ವರ್ಷಪೂರ್ಣಗೊಳ್ಳುವ 2.10.2019ಕ್ಕೆ ಈ ಯೋಜನೆಯ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಅವಧಿಯಲ್ಲಿ ಸ್ವಚ್ಛಭಾರತ ನಿರ್ಮಾಣವಾಗಬೇಕು ಈ ದಿಸೆಯಲ್ಲಿ ಈಗಾಗಲೇ ಹಳ್ಳಿಗಳಲ್ಲಿ ನಗರಗಳಲ್ಲಿ ತಾವು ವಾಸಿಸುವ ಪ್ರದೇಶಗಳಲ್ಲಿ ಕೆಲಸ ಮಾಡುವ ಸ್ಥಳಗಳಲ್ಲಿ ಸ್ವಚ್ಛತಾ ಆಂದೋಲನವನ್ನು ಸಂಪೂರ್ಣವಾಗಿ
ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮ ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಪ್ರಾರಂಭಿಸಬೇಕು.ಸ್ವಚ್ಛ ಭಾರತ ಅಭಿಯಾನ
ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ಉತ್ತಮ ಪರಿಸರ ನಿರ್ಮಾಣವಾಗುತ್ತಿದೆ. ತ್ಯಾಜ್ಯ ವಸ್ತುಗಳ ಸಮರ್ಪಕ ವಿಲೇವಾರಿಯಾಗುತ್ತಿದ್ದು ಇನ್ನೂ ಉತ್ತಮಗೊಳ್ಳಬೇಕಿದೆ ಜನರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿದೆ. ಸಮೂಹ ಮಾಧ್ಯಮಗಳು ಇದನ್ನು ಯಶಸ್ವಿಗೊಳಿಸುವಲ್ಲಿ ಪೂರ್ಣ ಸಹಕಾರ ನೀಡುತ್ತಿವೆ. ದೇಶದಾದ್ಯಂತ ಅಭಿಯಾನವು ಉತ್ತಮವಾಗಿ ಅನುಷ್ಠಾನಗೊಳ್ಳುತ್ತಿರುವುದು ಸಂತೋಷದ ವಿಷಯ.
ಉಪಸಂಹಾರ :
ಸ್ವಚ್ಛ ಭಾರತ ನಿರ್ಮಾಣದ ಕನಸನ್ನು ನನಸು ಮಾಡೋಣ ಈ ಯೋಜನೆಯನ್ನು ಸಾಕಾರಗೊಳಿಸುವಲ್ಲಿ ಪ್ರತಿವಾರ ಕೇವಲ ಎರಡು ಗಂಟೆಗಳ ಅವಧಿಯನ್ನು ಮೀಸಲಿಡೋಣ ಈ ಮೂಲಕ ಪ್ರಧಾನ ಮಂತ್ರಿಗಳ ಕನಸನ್ನು ನನಸಾಗಿಸುವುದರ ಮೂಲಕ ಸ್ವಚ್ಛಭಾರತ ಅಭಿಯಾನವನ್ನು ಯಶಸ್ವಿಗೊಳಿಸೋಣ.
7. ಗ್ರಾಮ ಸ್ವರಾಜ್ಯ
ಪೀಠಿಕೆ :
`ಗ್ರಾಮ ಸ್ವರಾಜ್ಯ' ಎಂದರೆ ಗ್ರಾಮಗಳೇ ಸ್ವಯಂ ಆಡಳಿತ ಕೇಂದ್ರಗಳಾಗಿ ಕಾರನಿರಹಿಸಿ, ತಮ್ಮ ಗ್ರಾಮದ ಅಭಿವೃದ್ಧಿಗೆ ಬೇಕಾದ ಕಾವ್ಯವನ್ನು ಸ್ವತಃ ಗ್ರಾಮಸ್ಥರೇ ನಿಲ್ದಾರ ಕೈಗೊಳ್ಳುವ ಒಂದು ಸ್ಥಳೀಯ ಆಡಳಿತ ಸಂಸ್ಥೆ, ಗ್ರಾಮಗಳ ಅಭಿವೃದ್ಧಿಯೇ
ಭಾರತದ ಅಭಿವೃದ್ಧಿ' ಎಂಬುದು ಗಾಂಧೀಜಿ ಅವರ ನಂಬಿಕೆಯಾಗಿತ್ತು. ಗ್ರಾಮ ಸ್ವರಾಜ್ಯ ಪರಿಕಲ್ಪನೆಗೆ ಹೆಚ್ಚು ಮಹತ್ವವನ್ನು ಗಾಂಧೀಜಿ ಅವರು ನೀಡಿದರು.ಅವರು ಲಾರ ವಿಕೇಂದ್ರೀಕರಣದ ಕಡೆಗೆ ಹೆಚ್ಚು ಗಮನಹರಿಸಿದರು. ವಿಷಯ ನಿರೂಪಣೆ : ಗ್ರಾಮಸ್ವರಾಜ್ಯದ ಕಲ್ಪನೆ ಋಗೈದದಲ್ಲಿಯೇ ಋಗೈದದಲ್ಲಿಯೇ ಕಂಡುಬರುತ್ತದೆ. ರಾಮಾಯಣ ಮತ್ತು ಮಹಾಭಾರತಗಳ ಕಾಲದಲ್ಲಿಯೂ ಈ ಪರಿಕಲ್ಪನೆಯನ್ನು ಕಾಣಬಹುದಾಗಿದೆ. ಭಾರತವನ್ನು ಆಳಿದ ಎಲ್ಲ ರಾಜಮಹಾರಾಜರ ಕಾಲದಿಂದಲೂ ಗ್ರಾಮಗಳ ಸ್ವಯಂ ಆಡಳಿತಕ್ಕೆ ಗ್ರಾಮಸಭಾಗಳನ್ನು ರಚಿಸಿ ಸ್ಥಳೀಯವಾದ ಆಡಳಿತಕ್ಕೆ ಹೆಚ್ಚು ಅವಕಾಶಗಳನ್ನು ನೀಡಲಾಗುತ್ತಿತ್ತು. ಆದರೆ ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಪ್ರಾರಂಭವಾದ ನಂತರ ಕೇಂದ್ರೀಕೃತ ಆಡಳಿತ ವ್ಯವಸ್ಥೆಗೆ ಹೆಚ್ಚು ಮಹತ್ವ ದೊರೆಯಿತು. ಕೇಂದ್ರೀಕೃತ ಅಧಿಕಾರಕ್ಕಿಂತ ವಿಕೇಂದ್ರೀಕೃತ ಅಧಿಕಾರ' ಇರುವುದು ಅಭಿವೃದ್ಧಿಕಾರಗಳಿಗೆ ವೇಗ ದೊರೆಯಲು ಸಹಾಯಕವಾಗುತ್ತದೆ. ಭಾರತವು ಹಲವಾರು ಗ್ರಾಮಗಳಿಂದ ಕೂಡಿದ ದೇಶ . ಬಹುಪಾಲು ಜನರು ಗ್ರಾಮವಾಸಿಗಳೇ ಆಗಿದ್ದಾರೆ. ಪ್ರತಿಯೊಂದು ಗ್ರಾಮವು ಸ್ವಾವಲಂಬನೆ ಹೊಂದುವುದು, ಗ್ರಾಮಸ್ಥರು ತಮ್ಮನ್ನು ತಾವೇ ಆಳಿಕೊಳ್ಳುವುದು, ನಮ್ಮ ಗ್ರಾಮ. ನಮ್ಮ ಮುಖಂಡರು, ನಮ್ಮ ಕೆಲಸ, ನಮ್ಮ ಸೇವೆ ಹೀಗೆ ರೂಪುಗೊಳ್ಳುವುದೇ ಗ್ರಾಮ ಸ್ವರಾಜ್ಯ. ಸ್ವರಾಜ್ಯದ ಅಗತ್ಯತೆ ಹಾಗೂ ಅನಿವಾರತೆ ಹಿಂದೆಂದಿಗಂತಲೂ ಹೆಚ್ಚಾಗಿದೆ. ಪ್ರತಿಯೊಂದು ಗ್ರಾಮವು ಇಂದು ಪಂಚಾಯಿತಿ ಎಂಬ ಸ್ವಯಂ ಆಡಳಿತ ಸಂಸ್ಥೆಯನ್ನು ಹೊಂದಿದೆ. ಗ್ರಾಮದ ನೈರಲ್ಯ, ಆರೋಗ್ಯ, ಶಿಕ್ಷಣ, ನೀರು ಸರಬರಾಜು, ವಿದ್ಯುತ್, ರಸತೆಗಳು ಇವೇ ಮೊದಲಾದ ಮೂಲಭೂತ ಸೌಕಯ್ಯಗಳನ್ನು ಪ್ರತಿಯೊಂದು ಸಮರಕವಾಗಿ ಪಡೆದುಕೊಳ್ಳುವಂತೆ ಮಾಡಿದಾಗ ಮಾತ್ರ ಗಾಂಧೀಜಿ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಕನಸು ನನಸಾಗುತ್ತದೆ. ಉಪಸಂಪಾದಕರ : - ग्राम स्वराज फाउंडेशन -
ಈ ಹಿನ್ನಲೆಯಲ್ಲಿ ನಮ್ಮ ಗ್ರಾಮಗಳ ಅಭಿವೃದ್ಧಿ ನಮ್ಮ ಕೈಯಲ್ಲಿಯೇ ಇದೆ.' ಎಂಬುದನ್ನು ನಾವು ಮನಗಾಣಬೇಕಾಗಿದೆ. ನಾವು ಪ್ರತಿಯೊಂದಕ್ಕೂ ಸತ್ಕಾರದ ಮುಂದೆ ಕೈಚಾಚದೆ ನಮ್ಮ ಸೀಮಿತ ವ್ಯಾಪ್ತಿಯಲ್ಲೇ ಅಭಿವೃದ್ಧಿ ಕಾರವನ್ನು ಕೈಗೆತ್ತಿಕೊಳ್ಳಬಹುದಾಗಿದೆ. ಇಡೀ ಗ್ರಾಮವನ್ನೇ ಒಂದು ಕುಟುಂಬವೆಂದು ಭಾವಿಸಿ ಪರಸ್ಪರ ಸಹಕಾರದಿಂದ ಸ್ವರಾಜ್ಯವನ್ನು ಸಾಕಾರಗೊಳಿಸಬಹುದಾಗಿದೆ ಎಂಬುದು ನನ್ನ ಅಭಿಪ್ರಾಯವಾಗಿದೆ.
8.ತ್ಯಾಜ್ಯ ವಸ್ತು ನಿರ್ವಹಣೆ
ಪೀಠಿಕೆ :
ಕಸದ ಸಂಗ್ರಹಣೆ, ಸಂಸ್ಕರಣೆ, ಪುನರ್ಬಳಕೆ ಇಂದು ಮಾನವನ ಭೌತಿಕ ಪರಿಸರ ಕಾಪಾಡುವಲ್ಲಿ ಪ್ರಮುಖಪಾತ್ರವಹಿಸುತ್ತಿವೆ. ಕೈಗಾರಿಕೀಕರಣ, ನಗರೀಕರಣ, ಸಂಸ್ಕೃತೀಕರಣ, ಜಾಗತೀಕರಣದ ಅಬ್ಬರದಲ್ಲಿ ದಿನದಿಂದ ದಿನಕ್ಕೆ ಕ್ಷಣದಿಂದ ಕ್ಷಣಕ್ಕೆ ತ್ಯಾಜ್ಯವಸ್ತುಗಳ ನಿರ್ವಹಣೆ ಒಂದು ಸಮಸ್ಯೆಯಾಗುತ್ತಿದೆ. ತ್ಯಾಜ್ಯ ನಿರ್ವಹಣೆಯು ಮೂಲತಃ ತ್ಯಾಜ್ಯವನ್ನು ಸಂಗ್ರಹಿಸುವ ಮತ್ತು ಸಾಗಿಸುವ ಮೂಲಕ ಸಂಸ್ಕರಣೆ ಮತ್ತು ವಿಲೇವಾರಿ ನಿರ್ವಹಣೆ, ಮೇಲ್ವಿಚಾರಣೆ ಅಥವಾ ನಿಯಂತ್ರಿಸುವುದಾಗಿದೆ. ವಿಷಯ ನಿರೂಪಣೆ :
ಮಾನವನು ತನ್ನ ದೈನಂದಿನ ಚಟುವಟಿಕೆಗಳಲ್ಲಿ ನಿರುಪಯುಕ್ತ ಬಿಸಾಡುವ ವಸ್ತುಗಳೇ ವಿಧ. ತ್ಯಾಜ್ಯವಸ್ತುಗಳು. ಇವುಗಳಲ್ಲಿ ಮೂರು ಘನತ್ಯಾಜ್ಯವಸ್ತುಗಳು, ದ್ರವ ತ್ಯಾಜ್ಯವಸ್ತುಗಳು ಮತ ಅನಿಲ ತ್ಯಾಜ್ಯ ವಸ್ತುಗಳು. ಇವುಗಳನ್ನು ರ್ಪಕವಾಗಿ ನಿರ್ವಹಣೆ ಮಾಡದಿದ್ದರೆ ಪರಿಸರ ನಾಶವಾಗುತ್ತದೆ. ಮೊದಲ ಹಂತದಲ್ಲಿ ಮನೆ, ಕಚೇರಿ ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿರುವ ತ್ಯಾಜ್ಯವಸ್ತುಗಳನ್ನು ಸಂಗ್ರಹಿಸಲು, ವೈಜ್ಞಾನಿಕ ರೀತಿಯಲ್ಲಿ ವಿಂಗಡಿಸಲು ಸೂಕ್ತವಾದ ವ್ಯವಸ್ಥೆ ಮಾಡಿಕೊಳ್ಳಬೇಕು. ಮರುಬಳಕೆಗೆ ಯೋಗ್ಯವಾದ ತ್ಯಾಜ್ಯವಸ್ತುಗಳನ್ನು ಮರುಬಳಕೆಗೂ ಮರುಬಳಕೆ ಮಾಡಲಾಗದ ತ್ಯಾಜ್ಯವಸ್ತುಗಳನ್ನು ವೈಜ್ಞಾನಿಕ ರೀತಿಯಲ್ಲಿ ದಹಿಸಿಬೇಕು ಅಥವಾ ಭೂಮಿಯಲ್ಲಿ ಹೂಳಬೇಕು. ನಾವು ತ್ಯಾಜ್ಯವನ್ನು ಸಮರಕವಾಗಿ ನಿರೂಹಿಸುವುದರಿಂದ, ಪರಿಸರವನ್ನು ಸ್ವಚ್ಛವಾಗಿಡಲು ಸಹಾಯಕವಾಗುತ್ತದೆ. ಅಂದರೆ ಕಸದಿಂದ, ವಾಸನೆ ಮತ್ತು ಅನಿಲಗಳನ್ನು ವಿಲೇವಾರಿ ಮಾಡುವ ಮೊದಲು ಹೊರಹಾಕಲಾಗುತ್ತದೆ ಹೀಗಾಗಿ ಇಡೀ ಪ್ರಕ್ರಿಯೆಯು ಪರಿಸರವನ್ನು ಸ್ವಚ್ಛವಾಗಿಡುವಲ್ಲಿ ಕಾರಣವಾಗುತ್ತದೆ. ತ್ಯಾಜ್ಯ ನಿರ್ವಹಣೆಯ ಪ್ರಕ್ರಿಯೆಯು ಮರುಬಳಕೆಯನ್ನು ಒಳಗೊಂಡಿರುತ್ತದೆ. ಉತ್ಪನ್ನಗಳ ಮರುಬಳಕೆಯು ಹೊಸ ಉತ್ಪನ್ನಗಳು ಮತ್ತು ಕಚ್ಚಾ ವಸ್ತುಗಳ ಉತ್ಪಾದನೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ ಮೂಲಕ ಶಕ್ತಿಯನ್ನು ಸಂರಕ್ಷಿಸುತ್ತದೆ. ತ್ಯಾಜ್ಯ ನಿರ್ವಹಣೆ ಮಾಲಿನ್ಯ ಮತ್ತು ಜಾಗತಿಕ ತಾಪಮಾನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ತ್ಯಾಜ್ಯದಿಂದ ಹೊರಸೂಸುವ ಕಾರ್ಬನ್ ಡೈಆಕ್ಸೆಡ್ ಮತ್ತು ಮೀಥೇನ್ ನಂತಹ ಅನಿಲಗಳ ತೀವ್ರತೆಯನ್ನು ಕಡಿಮೆ ಮಾಡುತ್ತದೆ. ತ್ಯಾಜ್ಯ ನಿರ್ವಹಣೆಯ ಪ್ರಕ್ರಿಯೆಯಲ್ಲಿ ಶಕ್ತಿ ಮತ್ತು ಸಂಪನ್ಮೂಲಗಳ ಕನಿಷ್ಠ ಬಳಕೆಯನ್ನು ಸಮರ್ಥ ಬಳಕೆಯನ್ನು ಗುರಿಯಾಗಿರಿಸಿಕೊಂಡಿದೆ. ತ್ಯಾಜ್ಯ ನಿರ್ವಹಣಾ ಚಟುವಟಿಕೆಗಳಲ್ಲಿ ನಮ್ಮ ಸುತ್ತಲಿನ ಭೂಕುಸಿತದಿಂದ ತ್ಯಾಜ್ಯವನ್ನು ಸಂಗ್ರಹಿಸುವುದು ಮತ್ತು ತ್ಯಾಜ್ಯವನ್ನು ಸುರಕ್ಷಿತ ರೀತಿಯಲ್ಲಿ ವಿಲೇವಾರಿ ಮಾಡಬಹುದಾದ ಪ್ರದೇಶಗಳಿಗೆ ಸಾಗಿಸುವುದು ಹಲವಾರು ಆರೋಗ್ಯ ಅಪಾಯಗಳಿಂದ ನಮ್ಮನ್ನು ಉಳಿಸುತ್ತದೆ. ಯೋಜಿಸಲಾಗಿದೆ. ಉತ್ಪನ್ನದ ತ್ಯಾಜ್ಯ ನಿರ್ವಹಣೆ ಪರಿಕಲ್ಪನೆಯ ಜೀವನ-ಚಕ್ರವು ಸಂಪನ್ಮೂಗಳು
ಉಪಸಂಹಾರ :ಬಳಸಿ ತ್ಯಾಜ್ಯವಸ್ತುಗಳ ನಿರ್ವಹಣೆ ಮಾಡುವ ಕಾರ್ಯದಲ್ಲಿ ವಿದ್ಯಾರ್ಥಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಕಾಂಪೋಸ್ಟ ತಯಾರಿಕೆ, ರಿಸೈಕಲಿಂಗ್ ಮಾಡುವುದನ್ನು ಹವ್ಯಾಸ ಮಾಡಿಕೊಂಡರೆ ಸ್ವಚ್ಚ ಭಾರತ ಅಭಿಯಾನಕ್ಕೆ ಚೊಚ್ಚಲು ಕಾಣಿಕೆ ನೀಡಿದಂತಾಗುತ್ತದೆ. ಈ ಬಗ್ಗೆ ಜನರಿಗೆ ಅರಿವನ್ನು ಉಂಟುಮಾಡುವ ಕಾರ್ಯಕ್ರಮವನ್ನು ಏರ್ಪಡಿಸಬೇಕು. ಇದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ
9 ಲಲಿತ ಕಲೆ
ಪೀಠಿಕೆ :ಮನುಷ್ಯನನ್ನು ಮಾನವನನ್ನಾಗಿಸುವ ಬಹುಮುಖ್ಯ ಪರಿಕರಗಳಲ್ಲಿ ಲಲಿತಕಲೆಗಳ ಪಾತ್ರ ಮಹತ್ವದ್ದಾಗಿದೆ. ಲಲಿತ ಕಲೆಗಳು ಜೀವನ ಕ್ರಮವನ್ನು ಭವ್ಯತೆಗೆ ಒಯ್ಯುವ ಶಕ್ತಿಯನ್ನು ಪಡೆದಿದ್ದು, ಅವು ಮಾನವತಾವಾದದ ಅಭಿವ್ಯಕ್ತಿ ಎಂದರೂ ತಪ್ಪಿಲ್ಲ. ಲಲಿತಕಲೆಗಳು ವ್ಯಷ್ಟಿ-ಸಮಷ್ಟಿಯ ಬೆಳವಣಿಗೆಗೆ ಪರಿಣಾಮಕಾರಿ ಸಾಧನಗಳಾಗಿವೆ.
ವಿಷಯ ನಿರೂಪಣೆ :ಲಲಿತಕಲೆಗಳು ಜನತೆಯ ಗೆಳೆಯ ಮತ್ತು ಶಿಕ್ಷಕ. ಬದುಕಿಗಿಂತ ಲಲಿತ ಕಲೆಗಳು ದೊಡ್ಡವು. ಚಿತ್ರಕಲೆಯು ಕಲಾತ್ಮಕವಾದುದು. ಪ್ರಕೃತಿಯೊಳಗೆ ಅಡಗಿರುವ ಸಾಧ್ಯತೆಗಳನ್ನು ಸಾಕ್ಷಾತ್ಕರಿಸಿಕೊಳ್ಳಲು ಮನುಷ್ಯನು ನಡೆಸುವ ಉದ್ದೇಶಪೂರಕ ಕ್ರಿಯೆಗಳೇ ಲಲಿತಕಲೆಗಳ ಅಭಿವ್ಯಕ್ತಿಗೆ ಕಾರಣ. ಬೌದ್ಧಿಕ ಕಸರತ್ತಿನ ಮೂಲಕ ಜನರನ್ನು ಆಕರಿಸಲು, ಮನೋರಂಜನೆಯನ್ನು ನೀಡಲು ಹುಟ್ಟಿದವುಗಳೇ ಲಲಿತಕಲೆಗಳು. ಇವುಗಳ ಮೂಲ ಆನಂದವನ್ನು ಪಡೆಯುವುದಾಗಿದೆ. ಲಲಿತಕಲೆಗಳನ್ನು ಪಂಚಕಲೆಗಳೆಂದು ವರೀಕರಿಸಲಾಗಿದೆ. ಅವುಗಳೆಂದರೆ- ಸಂಗೀತ, ನೃತ್ಯ, ಶಿಲ್ಪ, ಚಿತ್ರ ಹಾಗೂ ಸಾಹಿತ್ಯ ಇವುಗಳು ಅನುಕ್ರಮವಾಗಿ ಸ್ವರ, ಅಭಿನಯ, ಶಿಲೆ, ಬಣ್ಣ ಹಾಗೂ ಶಬ್ದ ಆಯಾಯ ಕಲೆಗಳ ಅಭಿವ್ಯಕ್ತಿ ಮಾಧ್ಯಮಗಳಾಗಿವೆ. ಗಾನಕೋಗಿಲೆ, ಗಂಗೂಬಾಯಿ ಹಾನಗಲ್ ಅವರ ಸಂಗೀತ, ಡಾ.ರಾಜಕುಮಾರ ಅವರ ಅಭಿನಯ, ಚಾವುಂಡರಾಯ ನಿರಿಸಿದ ಗೊಮ್ಮಟೇಶ್ವರ, ರವಿವರನ ಚಿತ್ರಕಲೆ, ಕುವೆಂಪು ಸೃಜಿಸಿದ ರಾಮಾಯಣ ದರ್ಶನಂ ಇವುಗಳನ್ನು ಸಾಂದಕವಾಗಿ ಉದಾಹರಿಸಬಹುದಾಗಿದೆ. ಇವುಗಳ ಆಕರ ಪರಿಕರಗಳೆಂದರೆ ಪ್ರತಿಬೆ, ಸ್ವಯಂ ಕಲ್ಪನೆ, ಸತತ ಅಭ್ಯಾಸ. ಈ ಲಲಿತಕಲೆಗಳು ನಮ್ಮ ಪರಂಪರೆಯಲ್ಲಿ ಬೆರೆತುಹೋಗಿವೆ. ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆಗೆ ಈ ಲಲಿತಕಲೆಗಳು ವೈವಿದ್ಯಮಯವಾಗಿರುತ್ತವೆ. ಆದರೆ ಇಂದು ಇಡೀ ಒಂದೇ ರೀತಿಯ ಲಲಿತಕಲೆಗಳು ರೂಪಗೊಳ್ಳುತ್ತಿರುವುದು ಬಹು ಸಂಸ್ಕೃತಿಯ ನಾಶಕ್ಕೆ ಕಾರ ಣವಾಗುತ್ತಿದೆ. ಉಪಸಂಹಾರ :
ಆಧುನಕತೆ ಹಾಗೂ ಜಾಗತೀಕರಣದ ಸಂದರದಲ್ಲಿ ಲಲಿತಕಲೆಗಳು ನಶಿಸಿಹೋಗುವ ಹಂತವನ್ನು ತಲುಪುತ್ತಿರುವುದು ದುರಂತವೇ ಸರಿ. ಲಲಿತಕಲೆಗಳಲ್ಲಿ ವೈವಿಧ್ಯತೆಯು ಕಡಿಮೆಯಾಗುತ್ತಿದೆ. ಅವುಗಳಿಗೆ ಸರಿಯಾದ ಪ್ರೋತ್ಸಾಹವು ದೊರೆಯದೆ ಸೊರಗಿ ಹೋಗುತ್ತಿವೆ. ನಮ್ಮ ನೆಲದ ಸಾಂಸ್ಕೃತಿಕ ಸತ್ವವು ಉಳಿಯಬೇಕಾದರೆದ ಲಲಿತಕಲೆಗಳಿಗೆ ಸರಿಯಾದ ಪ್ರೋತ್ಸಾಹವನ್ನು ನೀಡುವುದು ಸತ್ಕಾರದ ಮತ್ತು ಜನರ ಆದ್ಯ ಕತ್ರವ್ಯವಾಗಿದೆ ಎಂಬುದು ನನ್ನ ಅಭಿಪ್ರಾಯವಾಗಿದೆ.
10. ಮಹಿಳಾ ಸಬಲೀಕರಣ
ಪೀಠಿಕೆ :“ಹೆಣ್ಣೆಂದು ಕಲಿತರೆ ಶಾಲೆಯೊಂದು ತೆರೆದಂತೆ, ಹೆಣ್ಣಿಂದ ಜಗತ್ತಿನ ಅಸ್ತಿತ್ವ ಉಳಿಯಲು ಸಾಧ್ಯ” ಹೆಣ್ಣು ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ, ವಿವಿಧ ರೀತಿಯಾಗಿ ಹೆಣ್ಣು ಪ್ರತಿಯೊಬ್ಬರ ಪಾಲಿನಲ್ಲಿ ಸಹಕಾರಿಣಿಯಾಗಿ ತನ್ನ ಜೀವವನ್ನು ಗಂಧ ತೇಯುವಂತೆ ಜೀವನವಿಡಿ ಇನ್ನೊಬ್ಬರ ಬದುಕಿಗೆ ಬೆಳಕಾಗುವ, ಮಹಾಮಹಿಳೆ ಮಹಾತಾಯಿಯಾದ ಹೆಣ್ಣು ಜಗತ್ತಿನ ಕಣ್ಣು ಎಂಬಂತೆ ಇರುವ ಮಹಿಳೆಯ ಸಂಪೂರ್ಣ ಸರ್ವತೋಮುಖ ಬದಲಾಗವುದರಿಂದ ಸಬಲೀಕರಣವಾದಿತು. ವಿಷಯ ನಿರೂಪಣೆ :ಸತ್ಕಾರವು ಮಹಿಳೆಯರನ್ನು ವಿಶೇಷವಾಗಿ ಗ್ರಾಮೀಣ ಮಹಿಳೆಯರ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಕೈಗೊಂಡಿದೆ. ಸಬಲೀಕರಣ ಮತ್ತು ಸ್ವಾಲಂಬನೆಯನನ್ನು ಗುರಿಯಾಗಿಟ್ಟುಕೊಂಡು ಸ್ತ್ರೀಶಕ್ತಿ ಇದಕ್ಕಾಗಿ ಸ್ವಸಹಾಯ ಗುಂಪುಗಳನ್ನು ಅಂಗನವಾಡಿ ಕಾರಕರೆಯರ ಸಹಯೋಗದೊಂದಿಗೆ ರಚಿಸಲಾಗಿದೆ. ದೌರನ್ಯಕ್ಕೊಳಗಾದ ಮಹಿಳೆಯರಿಗೆ ಆರ್ಥಿಕ ಸಹಾಯ ಮತ್ತು ಕಾನೂನುಗಳನ್ನು ಸಹಾಯ ನೀಡಲು ಸಾಂತ್ವಾನ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯಡಿಯಲ್ಲಿ ದೌರ್ಜನ್ಯ ಕ್ಕೊಳಗಾದ ಮಹಿಳೆಯರಿಗೆ ಸ್ವ ಉದ್ಯೋಗ
ಕೈಗೊಳ್ಳಲು ಅನುಕೂಲವಾಗುವಂತೆ ತರಬೇತಿ ನೀಡಿ
ಅವಕಾಶ ಸ್ವಾವಲಂಬಿಯಾಗಿ ಬದುಕಲು ಮಾಡಿಕೊಡಲಾಗುತ್ತಿದೆ. ಸಮಗ್ರ ಸೇವೆಯನ್ನು ಅಂಗನವಾಡಿಗಳ ಶಿಶು ಅಭಿವೃದ್ಧಿ ಮುಖಾಂತರ
ಅನುಷ್ಠಾನಗೊಳಿಸಿ ಗರಿಣಿ ಹಾಗೂ ಬಾಣಂತಿಯರಿಗೆ ಪೌಷ್ಠಿಕ ಆಹಾರವನ್ನು ನಾಗರಿಕ ಮಹಿಳೆಯರಿಗೆ ಅಗತ್ಯ ಸಾಧನ ಸಲಕರಣೆಗಳನ್ನು ಸರಬರಾಜು ಅಗತ್ಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಉದ್ಯೋಗ ಮತ್ತು ರಾಜಕೀಯ ನೀಡಿ ಮಹಿಳೆಯರ ಸಬಲೀಕರಣಕ್ಕೆ ಒತ್ತುನೀಡಲಾಗಿದೆ.
ವಿತರಿಸಲಾಗುತ್ತಿದೆ. ವಿಕಲಚೇತನ ಮತ್ತು ಹಿರಿಯ ಮಾಡಲಾಗುತ್ತಿದೆ. ವೃದ್ಧಾಶ್ರಮಗಳನ್ನು ಸ್ಥಾಪಿಸಿ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ವಿಶೇಷ ಮೀಸಲಾತಿ
ಅಲ್ಲದೇ ಸ್ತ್ರೀಯರ ಕುರಿತಾದ ಕಾನೂನುಗಳು ಕಟ್ಟುನಿಟ್ಟಾಗಿ ಜಾರಿಯಾಗಬೇಕು. ಸ್ತ್ರೀಪರ ಹೋರಾಟಕ್ಕೆ ಜನಬೆಂಬಲ ದೊರೆಯಬೇಕು. ಮಹಿಳೆಯನ್ನು ಶೋಷಿಸಿದವರಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು.ಯುವ ಸಮುದಾಯದವರು ಮಹಿಳೆ ರಕ್ಷಣೆಗೆ ಮುಂದಾಗಬೇಕು. ಕುಟುಂಬದಲ್ಲಿ ಮಹಿಳೆ ಹಿಂಸೆ ನಿಲ್ಲಿಸಲು ಅವರಲ್ಲಿ ಅರಿವು ಮೂಡಿಸಬೇಕು. ಮಹಿಳೆ ಬಗ್ಗೆ ಗೌರವ ಭಾವ ಮೂಡಿಸಲು ಜನಜಾಗೃತಿ ಮೂಡಿಸಬೇಕು. “ಬೇಟಿ ಬಚಾವೋ ಬೇಟಿ ಪಡಾವೋ ದಂತಹ ಕಾರಕ್ರಮಗಳು ನಿರಾತಂಕವಾಗಿ ಅನುಷ್ಠಾನಗೊಳ್ಳಬೇಕು.
ಉಪಸಂಹಾರ :ಮಹಿಳಾ ಸಬಲೀಕರಣ ನಮ್ಮೆಲ್ಲರ ಆದ್ಯ ಕರವ್ಯ ಸತ್ಕಾರದ ಕಾಠ್ಯಕ್ರಮಗಳೊಂದಿಗೆ ಪ್ರತಿಯೊಬ್ಬ ನಾಗರಿಕನೂ ಮಹಿಳೆಯರ ಸಬಲೀಕರಣಕ್ಕೆ ಕೈಜೋಡಿಸಬೇಕಾಗಿದೆ. “ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ಆಳಬಲ್ಲದು” ಎಂಬ ಮಾತಿನಂತೆ ಮಹಿಳಾ ಸಬಲೀಕರಣವಾದರೆ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ.
