ನಾಗರೀಕತೆಯ ಮಧ್ಯೆ ಇರುವ ಕತ್ರಿಗುಪ್ಪೆ ಒಂದು ಕಾಲದಲ್ಲಿ ಪುಟ್ಟ ಗ್ರಾಮವಾಗಿತ್ತು. ಬೆಂಗಳೂರು ಎಂಬ ಮಹಾನಗರ ನೂರಾರು ಹಳ್ಳಿಗಳನ್ನು ನುಂಗಿ ನೀರು ಕುಡಿದು ಹೊಸ ಹೆಸರಿನಲ್ಲಿ ನಿಂತರೂ ಕತ್ರಿಗುಪ್ಪೆ ಮಾತ್ರ ತನ್ನ ಮೂಲ ಹೆಸರಲ್ಲಿಯೇ ರಾರಾಜಿಸುತ್ತಿದೆ. ಕತ್ರಿಗುಪ್ಪೆ ಹೆಬ್ಬಾಗಿಲು, ಕತ್ರಿಗುಪ್ಪೆ ಬಿಗ್ ಬಜಾರು, ಕತ್ತಿಗುಪ್ಪೆ ಮಾರಮ್ಮನ ಗುಡಿ ಹೀಗೆ. ಒಂದು ಕಾಲಕ್ಕೆ ಕತ್ರಿಗುಪ್ಪೆ ರೌಡಿಗಳ ಹೆಸರಲ್ಲೂ ಫೇಮಸ್ ಆಗಿತ್ತು, ಕತ್ರಿಗುಪ್ಪೆ ಮಂಜ, ಸೀನ, ಗಾಳ. ಇವರಿಗೆಲ್ಲಾ ಆಗಾಗ ಪೋಲಿಸ್ ಜೀಪುಗಳು ಸಣ್ಣ ರಸ್ತೆಗಳಲ್ಲಿ ಬಂದು ನಿಲ್ಲುತ್ತಿದ್ದವು. ಈಗಲೂ ಆಗೊಮ್ಮೆ ಹೀಗೊಮ್ಮೆ ಇದ್ದೇ ಇದೆ.
ಕತ್ರಿಗುಪ್ಪೆ ಹೆಬ್ಬಾಗಿಲು ದಾಟಿ ಎಡಕ್ಕೆ ಸರಿದರೆ ಸಣ್ಣ ಹಾದಿ ಕೇವಲ ಬೈಕು ಚಲಿಸಬಹುದು ಅಷ್ಟೇ. ಆ ಕಾಲು ದಾರಿಯಲ್ಲಿಯೇ ದಿನದಿಂದ ದಿನಕ್ಕೆ ಕಲ್ಲಿನ ದಿಬ್ಬವೊಂದು ಮೇಲೆ ಬರುತ್ತಿದ್ದು ಅದನ್ನು ಕಲ್ಲಿನ ಬಸವ ಎಂದು ಪೂಜಿಸುವ ಜನ ಅದರ ಮೇಲೇ ಗಾಡಿಗಳು ಓಡಾಡುವುದು ನೋಡಿ ಸಂಕಟಪಟ್ಟು ಪೋಲಿಸರಿಗೆ ಹೇಳಿ ಬ್ಯಾರಿಕೇಡ್ ಇಡಿಸಿದರು. ಆಗೊಮ್ಮೆ ಈಗೊಮ್ಮೆ ಆಟೋಗಳು ನುಗ್ಗುವುದನ್ನು ಕಂಡು ಊರವರೇ ಕಾರ್ಪೋರೇಟರಿಗೆ ಹೇಳಿ ಎರಡು ಕಲ್ಲು ನಡೆಸಿ ದೊಡ್ಡ ವಾಹನಗಳು ಅಡ್ಡಾಡದಂತೆ ನಿಭರ್ಂದ ಮಾಡಿದರು. ಆ ರಸ್ತೆಯಲ್ಲಿ ಮುಂದುವರೆದರೆ ಅಲ್ಲೊಂದು ದೊಡ್ಡ ಅರಳಿಮರ, ಅದಕ್ಕೆ ಸುತ್ತ ಕಟ್ಟೆ, ಎದುರಿಗೆ ಮಾರಮ್ಮನ ಗುಡಿ. ಹಳೆ ಗುಡಿ ಇತ್ತೀಚೆಗೆ ನವೀಕರಣಗೊಳ್ಳುತ್ತಿದೆ. ಅದರ ಪಕ್ಕದಲ್ಲೆಲ್ಲಾ ನಕ್ಷತ್ರದ ರಾಶಿಗಳೆಲ್ಲಾ ಆಕಾಶದಲ್ಲಿ ಚೆಲ್ಲಾಡಿದ ಹಾಗೇ ಮನೆಗಳು. ಒಂದು ಮನೆ ಮತ್ತೊಂದು ಮನೆಗೆ ಅಂಟಿಕೊಂಡಂತಿರುವ ಒಂದು, ಎರಡು ರೂಮುಗಳ ನೂರಾರು ಮನೆಗಳು. ಕೆಲವು ಶೀಟಿನವಾದರೆ. ಇನ್ನು ಕೆಲವು ಹಳೆ ಹೆಂಚಿನ, ಮೊಲ್ಲಿನ ಮನೆಗಳು. ಸಣ್ಣ ರಸ್ತೆಗಳ ಮುಂದೆಯೇ ನಿಲ್ಲಿಸಿದ ಬೈಕುಗಳು. ಮಾರಮ್ಮನ ಗುಡಿಯ ಎದುರಿಗಿನ ಪುಟ್ಟ ಹಾದಿ ದಾಟಿದರೆ ಕಂಬದ ಹೆಂಚಿನ ಪ್ರಾಚೀನ ಕತ್ರಿಗುಪ್ಪೆಯನ್ನು ನೆನಪಿಸುವ ನಾಲ್ಕಾರು ಮನೆಗಳು, ಅದೇ ರಸ್ತೆಯಲ್ಲಿ ಗಿರಿಣಿ, ಚೌರದ ಶಾಪು, ತರಕಾರಿ ಅಂಗಡಿ, ಐರನ್ ಮಾಡುವ ಅಂಗಡಿಗಳು. ಮುಂದುವರೆದು ಹೋದರೆ ವಿವೇಕಾನಂದ ನಗರದ ಹೊರಕ್ಕೇ ಸೇರಿಕೊಳ್ಳುವ ಗಿಜಿಗಿಜಿ ರಸ್ತೆಗೆ ಹೊಂದಿಕೊಂಡಂತಿರುವ ಕತ್ರಿಗುಪ್ಪೆಯು ನಗರದ ನಡುಗಡ್ಡೆಯಂತೆ ಕಾಣುತ್ತದೆ.
ಇಲ್ಲಿನ ಮೂಲ ನಿವಾಸಿಗಳು ಅರ್ಧಕರ್ಧ ಖಾಲಿಯಾಗಿ ಮನೆ ಮಾರಿಕೊಂಡು ಎಲ್ಲೆಲ್ಲೋ ಹಂಚಿಹೋಗಿದ್ದಾರೆ. ಯಾವಾಗಲೂ ಬಾಯಲ್ಲಿ ಒತ್ತರಿಸಿರುವ ಎಲೆ ಅಡಿಕೆ ಜಗಿಯುವ ಸುಬ್ಬಮ್ಮ ತನ್ನ ಮನೆಯ ಜಗಲಿ ಮೇಲೆ ಕುಳಿತು ಗತಕಾಲವನ್ನು ಮೆಲುಕು ಹಾಕುತ್ತಾಳೆ. ಯಾರಾದರೂ 'ಹೋ ಈ ಮನೆ
ಮಾರಿದ್ರ?' ಎಂದು ಪ್ರಶ್ನಿಸಿದರೆ ಸುಬ್ಬಮ್ಮ ತನ್ನ ಜಗಿಯುವ ಎಲೆ-ಅಡಿಕೆಯನ್ನು ಈ ಕಡೆಯಿಂದ ಆ ಕಡೆಗೆ ಒತ್ತರಿಸಿ 'ಹೂ ಕಣಾ, ಆದೇನೋ ಮೂರು ಕೋಟಿಗೆ ಮಾತಾಯ್ತಂತೆ, ನೆಲಮಂಗಲದ ಆಚೆಗೆ ಸೈಟು ತಗತಿವಿ ಅಂತ ಮಾರುದ್ರು' ಎಂದು ತನಗೂ ಕೋಟಿ ಗೊತ್ತು ಎನ್ನುವಂತೆ ನೋಡುತ್ತಾಳೆ. 'ನಂಜಪ್ಪಂದಲ್ಲವಾ ಇದು ಮನೆ' ಅಂದ್ರೆ, 'ಹೂಂ..ಅವನು ನಾ ಇರತನಕ ಮನೆ ಮಾರಾಂಗಿಲ್ಲ ಅಂತ ನಾಕು ಮಕ್ಕಳಿಗೂ ಕೊಡದೆ ಸತಾಯಿಸಿದ್ದ. ಅವನು ಸಾಯದೆ ಕಾಯ್ಕಂಡು ಮಕ್ಕಳು ತಿಂಗಳು ಶಿಥಿ ಆಗ್ತಿದಂತೆ ಮಾರಾವರ್ರೆ, ಬಿಗ್ ಬಜಾರ ತವ ಇರೋ ಯಾರೋ ಬಾಂಬೆಯವರು ತಗಂಡವರಂತೆ' ಎಂದು ಅಜ್ಜಿ ತನ್ನದೆ ಆಸ್ತಿ ಕಳಕೊಂಡಂತೆ ದುಃಖಿಸಿ ಸೆರಗು ಒರೆಸಿಕೊಳ್ಳುತ್ತಿತ್ತು.
ಬಂದು ಸೇರಿದವರಲ್ಲಿ ಚಿತ್ತೂರಿನ ಕಡೆಯ ಮುಸ್ಲಿಮರೂ, ಪಾನೀಪುರಿ ಮಾರುವ ಅಸ್ಸಾಂನ ಕಡೆಯವರು, ತಮಿಳರು ಎಲ್ಲಾ ಸೇರಿ ಕತ್ರಿಗುಪ್ಪೆಯ ಮೂಲ ఆశారవు మనసరర్షి తేర్వే కుళ్ళబారంభం యావుదూ శాలవాగిత్తు, అల్లిన ಹಿಂದೂ-ಮುಸ್ಲಿಮರೂ ಯಾವುದೇ ರೀತಿಯ ಘರ್ಷಣೆಗಳಿಲ್ಲದೆ ಬದುಕುತ್ತಿದ್ದರು. ಜೈ ಮಾರಮ್ಮನ ಗುಡಿಗೆ ಮುಸ್ಲಿಮರು ಹೋಗದಿದ್ದರೂ ಕಾಯಿಲೆ-ಕಸಾಲೆಯಾದಾಗ ಮಾರಿಗೆ ಹರಕೆಕಟ್ಟಿ ಕೋಳಿ ಬಲಿ ಕೊಡುವುದು ಇತ್ತು. ಅಲ್ಲಿ ಈಗಾಗಲೇ ಪಿಜಿಗಳು: బందిదవు. ఒందు ఫలాం౯గనల్లి నాగరితనాయ దరమైన మాడినువ ಪ್ರಪಂಚದ ಪ್ರಸಿದ್ಧ ಬ್ರಾಂಡ್ ಅಂಗಡಿಗಳು, ಹೋಟೆಲ್ಗಳು. ಮಾಲ್ಗಳು ಇವೆಲ್ಲ ಇದ್ದರೂ ಕತ್ರಿಗುಪ್ಪೆಯ ಊರೊಳಕ್ಕೆ ಹೊಕ್ಕರೆ ಅದೇ ಗ್ರಾಮೀಣತೆಯ ಸಣ್ಣ ಸಣ್ಣ ಕುರುಹುಗಳಾದ ಮನೆಮುಂದೆ ಸಗಣಿ ಸಾರಿಸುತ್ತಿರುವ, ಹುಣಸೆಹಣ್ಣು ಕುಟ್ಟುವ, ರಾಗಿ ಕೆರುತ್ತ ಕುಳಿತ ಹೆಂಗಸರು, ಅವರೆಕಾಯಿ ಬಿಡಿಸುತ್ತ ಕುಳಿತ ವಠಾರದ ಹೆಂಗಸರ ಮಾತುಗಳೆಲ್ಲವು ಗ್ರಾಮೀಣ ನಾಗರೀಕತೆಯು ಅಂತಿಮ ಸಂಸ್ಕಾರ ಮುಗಿಸಲು ಕಾಯುತ್ತಿರುವಂತೆ ಕಾಣಿಸುತ್ತಿತ್ತು
ನನ್ನ ಇಲ್ಲಿನ ಚಿತ್ತೂರಿನ ಮುಸ್ಲಿಮರದೊಂದು ವಿಶೇಷತೆಯಿದೆ. ಅವರುಗಳು ಯಾರೂ ಉರ್ದು ಮಾತನಾಡುವುದಿಲ್ಲ. ಅವರ ಮಾತೃಭಾಷೆ ತೆಲುಗು, ಹೆಂಗಸರು ಬುರ್ಕಾ ಕೂಡ ಹಾಕುವುದಿಲ್ಲ. ಬೆಂಗಳೂರಿನ ಈ ಬಡಾವಣೆಗಳಲ್ಲಿ ನಿಂತು ತಮ್ಮವರನ್ನೂ ಮನೆ ಖಾಲಿಯಿದೆ ಬನ್ನಿ ಎಂದು ಕರೆಸಿಕೊಂಡು ಸಾವಿರಾರು ಸಂಖ್ಯೆಯಲ್ಲಿರುವ ಕನ್ನಡ ಮತ್ತು ತೆಲುಗನ್ನು ಮಾತನಾಡುತ್ತಾ ಕತ್ರಿಗುಪ್ಪೆಯವರೇ ಆಗಿರುವ ಇವರ ಮದುವೆಗಳಲ್ಲಿ ಮೊದಲು ಹನುಮಂತನ ಗುಡಿಗೆ ಅವರು ಡು ಹೋಗುವ ಸಂಪ್ರದಾಯವಿದೆ. ಹಿಂದೂಗಳಂತೆಯೇ ಅನೇಕ ಸಂಪ್ರದಾಯಗಳನ್ನು ಸತ್ತಾಗ, ಹುಟ್ಟಿದಾಗ ಆಚರಿಸುವಾಗ ಒಮ್ಮೆ ಆನಿತ ಕಾಶಂಬಿಗೆ ನೀವೆಂತ ಮುಸ್ಲಿಂದು కలికంటి? ఎలా ఉందగళంటే అభరణిగళను మాడరి ఎందరు. 'ಗೊತ್ತಿಲ್ಲಕ್ಕ ನಮ್ಮ ಆನಂತಪುರದ ಹತ್ತಿರ ಇರೋ ಪೆಡ್ಡಾದರ್ಗಾಗೆ ನಾವೆಲ್ಲಾ ನಡೆದುಕೊಳ್ಳೋದು. ಅಲ್ಲಿ ಉರುಸ್ ಭಾಳ ಫೇಮಸ್ ಕಣಕ್ಕೆ' ಎಂದು ತನ್ನ ಧರ್ಮದ
ಮೂಲದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಇಲ್ಲಿನ ಹೆಚ್ಚಿನ ಮುಸ್ಲಿಮರು ಬಡವರು, ಕೆಳ ಮಧ್ಯಮ ವರ್ಗದವರು. ಅವರಲ್ಲಿ ಗಂಡಸರು ಹಾಸಿಗೆಗಳನ್ನು ಹೊಲೆಯುವ, ತರಕಾರಿ, ಮಾಂಸ ಮಾರಾಟ ಮಾಡುವ, ಕ್ಯಾಬ್ ಡ್ರೈವರ್ಗಳಾಗಿ ದುಡಿಯುತ್ತಿದ್ದರೆ, ಮನೆ ಕೆಲಸ, ಮಾಲ್ಗಳಲ್ಲಿ ದುಡಿಯುವ, ಬೀದಿಗಳಲ್ಲಿ ಹೂಕಟ್ಟಿ ಮಾರುವ ಹೆಣ್ಣುಗಳಿಂದಾಗಿ ಅವರುಗಳ ಸಂಸಾರ ನಡೆಯುತ್ತಿತ್ತು. ಕತ್ರಿಗುಪ್ಪೆಯಲ್ಲೇ ಸರ್ಕಾರಿ ಶಾಲೆಯಿದ್ದರೂ ತಮ್ಮ ಮಕ್ಕಳು ತಮ್ಮಂತೆ ಆಗದೆ ನಾಲ್ಕಕ್ಷರ ಕಲಿತು ಮಾಲ್ಗಳ ಮುಂದೆ ಯೂನಿಫಾರಂ ಹಾಕಿಕೊಂಡು ನಿಂತಿರುವ ಸೆಕ್ಯೂರಿಟಿಗಳಾದರೂ ಆಗಲಿ ಎಂದು ಕಷ್ಟಪಟ್ಟು ಖಾಸಗಿ ಶಾಲೆಯ ಇಂಗ್ಲೀಷ್ ಮೀಡಿಯಂಗೆ ಹಾಕಿದ್ದರು.
ಬನಶಂಕರಿ ಬಡಾವಣೆಯ ಶ್ರೀಮಂತ ಮಧ್ಯಮ ಮನೆಗಳಿಗೆ ಇಲ್ಲಿಂದಲೇ ಮನೆ ಕೆಲಸಕ್ಕೆ ಹೆಣ್ಣುಮಕ್ಕಳು ಬರುತ್ತಿದ್ದದ್ದು. ಅತ್ಯಂತ ಶ್ರಮಜೀವಿಗಳಾದ ಇವರು ಬೆಳಿಗ್ಗೆ ಆರು ಗಂಟೆಗೆ ಮನೆ ಕೆಲಸಕ್ಕೆ ಬಂದರೆ ಮಧ್ಯಾಹ್ನ ಹನ್ನೆರಡವರೆಗೂ ದುಡಿಯುತ್ತಿದ್ದರು. ಸಂಜೆ ಮಾರ್ಕೆಟ್ನಿಂದ ಹೂ ತರಿಸಿಕೊಂಡು ಕಟ್ಟಿಕೊಟ್ಟು ಪುಡಿಗಾಸು ನೋಡುತ್ತಿದ್ದರು. ಅಂತಹದ್ದೇ ಸಂದರ್ಭದಲ್ಲಿ ಅನಿತ ಬನಶಂಕರಿ ಬಡಾವಣೆಗೆ ಮನೆಕಟ್ಟಿಕೊಂಡು ಬಂದದ್ದು. ಮೊದಲಿದ್ದ ಬಡಾವಣೆಯಲ್ಲಿ ಕೆಲಸದವರು ಸಿಗದೆ. ಸಿಕ್ಕರೂ ಬಹಳ ದುಡ್ಡು ಕೇಳುತ್ತಿದ್ದ ಕೆಲಸದವರಿಂದ ರೊಸತ್ತಿದ್ದವಳಿಗೆ ಮನೆ ಗೃಹಪ್ರವೇಶವಾಗುತ್ತಿದ್ದಂತೆ ಐದಾರು ಜನ 'ಅಕ್ಕಾ ಮನೆ ಕೆಲಸಕ್ಕೆ ಬೇಕಾ' ಎಂದು ಬಂದದ್ದು ಸ್ವರ್ಗಕ್ಕೆ ಮೂರೇ ಗೇಣು ಎಂಬಂತಾಗಿತ್ತು. ಒಂದಿಬ್ಬರು ಬಂದರೂ ಹೊಂದಿಕೊಳ್ಳದೆ ಕಡೆಗೆ ಅನಿತಾಳ ಮನೆಗೆ ಎಂಟು ವರ್ಷಗಳ ಹಿಂದೆ ಬಂದವಳೆ ಕಾಶಂಬಿ. ಬಂದವಳೆ, 'ಅಕ್ಕಾ ನಾವು ಮುಸ್ಲಿಮರು. ನಿಮಗೆ ಓಕೆನಾ?' ಕೇಳಿದ್ದಳು.
'ನನಗೇನು ಪರವಿಲ್ಲ. ನಾವು ಜಾತಿಗಿತಿ ನೋಡಲ್ಲ' ಅನಿತಾಳ ಉತ್ತರ.
'ಮೊದಲೇ ಹೇಳ್ತಿದಿನಿ ಏಕಂದ್ರೆ, ಕಾಮಾಕ್ಯ ಆತ್ರ ಒಂದು ಮನೆಲಿ ಹಂಗೆ ಆಗಿತ್ತು ಅದಕ್ಕೆ'
'ಬೇರೆ ಎಲ್ಲಾ ಕೆಲಸ ಮಾಡ್ತಿನಿ. ಆದ್ರೆ, ನಾನು ರಂಗೋಲಿ ಹಾಕಲ್ಲ'
'ಯಾಕೆ?'
'ನಾವು ಮುಸ್ಲಿಮರು ಹಾಕಲ್ಲ'
'ಮತ್ತೆ... ಅದಕ್ಕೆ ನಾನು ಯಾರನ್ನ ಕರೆಯಲಿ? ಬ್ಯಾಂಕ್ಗೆ ಹೋಗುವ ಭರದಲ್ಲಿ ನನಗೆ ಅಷ್ಟು ಟೈಮ್ ಎಲ್ಲಿರುತ್ತೆ?'
'ಪಕ್ಕದಲ್ಲೇ ರಾಧ ಇದ್ದಾಳೆ. ಹೇಳ್ತಿನಿ ಅವಳು ಹಾಕ್ತಾಳೆ'
'ಅವಳಿಗೆ ಎಷ್ಟು ಕೊಡಬೇಕು?'
'ಅವಳನ್ನೇ ಕರಿತಿನಿ ನೀವೆ ಮಾತಾಡಿ' ಎಂದು ರವಿಕೆಯೊಳಗಿನಿಂದ ಸಣ್ಣ ಫೋನ್ ತೆಗೆದು ರಾಧಾಗೆ ಫೋನ್ ಮಾಡಿದಳು. ಅವಳು ಫೋನ್ಗೆ ಸಿಗಲಿಲ್ಲ.
'ನೀ ಬುರ್ಕಾ ಹಾಕಲ್ವ'
'ಇಲ್ಲಕ್ಕ, ನಾವ್ಯಾರು ಹಾಕಲ್ಲ. ನಮ್ಮ ತಮ್ಮನಿಗೆ ಇತ್ತೀಚೆಗೆ ಯಾರಬ್ ನಗರದಿಂದ ಮದ್ಯೆ ಮಾಡಿಕೊಂಡು ಬಂದಿದ್ದೀವಿ. ಅವಳು ಹಾಕ್ತಾಳೆ ಅಷ್ಟೆ. ನಮಗೆ ಕುರಾನ್ನನ್ನು ಓದಕ್ಕೂ
ಬರಲ್ಲ, ನಾವು ರಂಜಾನನ್ನೂ ಅಂತ ನಿಷ್ಠೆಯಿಂದ ಮಾಡಲ್ಲಕ್ಕ. ದುಡಿದು ತಿನ್ನುವುದರಲ್ಲೇ ಆಗುತ್ತೆ. ಆದ್ರೆ ಈಗೀಗ ಕುರಾನ್ ಓದಲು ಬರದಿದ್ರೆ ಮದುವೆ ಮಾಡಿಕೊಳ್ಳಲ್ಲ ಅಂತ ಅಂತಿರೋದ್ರಿಂದ ಕತ್ರಿಗುಪ್ಪೆಗೆ ಮಸೀದಿಯವರೊಬ್ಬರು ಬಂದು ಕುರಾನ್ ಕಲಿಸ್ತಿದ್ದಾರೆ. ನನನ್ನ ಮಕ್ಕಳನ್ನು ತಿಂಗಳಿಗೆ ಐನೂರು ರೂಪಾಯಿ ಕೊಟ್ಟು ಕಲಿಸ್ತಿದ್ದೀನಿ. ಕುರಾನ್ ಓದುವಾಗ ಹುಡುಗಿಯರು ತಲೆ ಮೇಲೆ ಬಟ್ಟೆ ಹಾಕುವುದನ್ನು, ಹುಡುಗರು ಟೋಪಿ ಹಾಕುವುದನ್ನು ಕಲಿಸ್ತಿದ್ದಾರಕ್ಕ. ರಂಜಾನಿಗೆ ಝಕಾತ್ ಕೊಡಬೇಕು ಅಂತ, ಸಿಯಾಮ್ ಇರಬೇಕು ಅಂತ ಹೇಳಿ ಕೊಡುತ್ತಿದ್ದಾರೆ.' ಎಂದಳು. 'ಸಿಯಾಮ್ ಎಂದ್ರೆ ಏನು?' ಅನಿತ ಪ್ರಶ್ನಿಸಿದಳು. *ಉಪವಾಸ ಅಂತಕ್ಕ. ನನಗೂ ಇದು ತಿಳಿದಿರಲಿಲ್ಲ. ರಂಜಾನಿನಲ್ಲಿ ಬೆಳಗ್ಗೆಯೆಲ್ಲಾ ಉಪವಾಸ ಇರಬೇಕು. ಸೂರ್ಯ ಹುಟ್ಟುವ ಮುಂಚೆ ಸೊಹೋರ್, ಮುಳುಗುವ ಮುಂಚೆ ಇಫ್ತಾರ್ ಮಾಡಬೇಕಂತೆ, ರಾತ್ರಿ ಮಾಡುವ ತಾರವೀಹ ನಮಾಜ್ ಬಹಳ ಒಳ್ಳೆಯದಂತಕ್ಕ. ಈಗ ಇದೆಲ್ಲ ಪಾಠವನ್ನು ನಮ್ಮ ಮಕ್ಕಳು ಕಲಿತ್ತಿದ್ದಾರೆ' ಎಂದ ಅವಳಿಗೆ ಅನಿತ 'ಮಸೀದಿ ಕಟ್ಟಲು ಜಾಗವಿಲ್ಲವಾ ಅಲ್ಲಿ' ಅಂದಳು. 'ಕಾಲಿಡಲೇ ಜಾಗ ಇಲ್ಲಕ್ಕ ಅಲ್ಲಿ. ಇದ್ದಿದ್ರೆ ಅದು ಕಟ್ಟವರೇನೋ' ಎಂದು ನಕ್ಕಳು ಕಾಶಂಬಿ.
ಹೀಗೆ ಅನಿತ ಮನೆ ಕೆಲಸಕ್ಕೆ ಬಂದ ಕಾಶಂಬಿ ಆ ಮನೆಯ ಕಷ್ಟ ಸುಖಕ್ಕೆ ಜೊತೆಯಾಗಿ ನಿಂತಳು. ರಾಧ ಹೇಳುವ ತನಕ ಕಾಶಂಬಿಗೆ ಗಂಡ ಇಲ್ಲ ಅನ್ನೋದೇ ತಿಳಿದಿರಲಿಲ್ಲ ಅನಿತಾಗೆ, ಕಾಶಂಬಿ ಮನೆಯ ಅಂಗಳ ತೊಳೆಯುತ್ತಿದ್ದಂತೆ ರಾಧ ಬಂದು ಚಂದದ ರಂಗೋಲಿ ಹಾಕುತ್ತಿದ್ದಳು. ತಿಂಗಳ ಕೊನೆಗೆ ಅನಿತ ರಾಧಳನ್ನು ಸ್ವಲ್ಪ ಬಾ ಇಲ್ಲಿ ಎಂದು ಮನೆಯೊಳಕ್ಕೆ ಕರೆದಳು. 'ನೀ ತಿಂಗಳು ಪೂರ್ತಿ ರಂಗೋಲಿ ಚಂದ ಬಿಡಿಸ್ತಿ. ಎಷ್ಟು ಸಂಬಳ ಕೊಡಬೇಕು?' ವ್ಯವಹಾರಸ್ಥೆಯಂತೆ ಅನಿತ ಕೇಳಿದಳು. 'ಮನೆ ಮಂದೆ ರಂಗೋಲಿ ಹಾಕೋಕೆಲ್ಲಾ ಯಾರಾದ್ರೂ ಕಾಸು ತಗೋತಾರೇನಾ?' ಮರು ಪ್ರಶ್ನಿಸಿದಳು ರಾಧ. 'ಮತ್ತೆ?' ಅನಿತ ತನ್ನ ದೊಡ್ಡ ಕಣ್ಣುಗಳನ್ನೂ ಇನ್ನಷ್ಟು ದೊಡ್ಡದು ಮಾಡಿ ಕೇಳಿದಳು. 'ಅದೇನು ದೊಡ್ಡ ಕೆಲಸವಾ? ನಾ ಇಲ್ಲದಿದ್ದರೂ ನಮ್ಮಮ್ಮನೋ, ನಮ್ಮಕ್ಕನೋ ಬಂದು ರಂಗೋಲಿ ಹಾಕ್ತಿದ್ರು' ಎಂದು ನಿರಮ್ಮಳವಾಗಿ ಹೇಳಿ ಹೊರಟು ಹೋದಳು. ದುಡ್ಡಿಲ್ಲದ್ದಿದ್ದರೆ ವರ್ಷಕ್ಕೊಮ್ಮೆ ಒಳ್ಳೆ ಸೀರೆ ಕೊಡಿಸುವ ಲೆಕ್ಕಾಚಾರ ಹಾಕಿದಳು ಅನಿತಾ.
ಹೀಗೆ ಅನಿತ ಮನೆಯ ಒಬ್ಬ ಸದಸ್ಯಳೇ ಆದ ಕಾಶಂಬಿಯನ್ನು ನಿನ್ನ ಗಂಡನಿಗೆ ಏನಾಗಿತ್ತು ಎಂದು ಕೇಳುವುದೋ ಬೇಡವೋ ಎಂದು ಅನುಮಾನಿಸುತ್ತಲ್ಲೇ ಒಮ್ಮೆಕೇಳಿದ್ದಳು.
'ಅವರು ಆಕ್ಸಿಡೆಂಟ್ ಆಗಿ ಸತ್ತಿದ್ದಕ್ಕಾ'
"ಅಂದ್ರೆ?'
'ಬೈಕ್ನಲ್ಲಿ ನಮ್ಮೂರಿನಿಂದ ಬರುವಾಗ ಲಾರಿ ಗುದ್ದಿದ್ದಕ್ಕಾ
'ಹೌದಾ...ನೀ ಇರಲಿಲ್ಲವಾ ಆಗ?'
'ಇಲ್ಲಕ್ಕ. ನನ್ನ ತಮ್ಮನ ಜೊತೆ ಬರ್ತಿದ್ರು, ಯಲಹಂಕ ಅತ್ರ ಆಗಿದ್ದು'
ಮತ್ತೆ, ನಿನಗೆ ಹೇಗೆ ತಿಳಿತು?'
'ಅಯ್ಯೋ ಅದೊಂದು ದೊಡ್ಡ ಕತೆ. ಇನ್ನೊಂದು ದಿನ ಹೇಳ್ತಿನಿ' ಎಂದು ಕಾಫಿ ಕುಡಿದ ಗ್ಲಾಸನ್ನು ತೊಳೆಯಲು ಹೋದಳು.
ಅನಿತಾಳ ಬನಶಂಕರಿಯ ಬಡಾವಣೆಗೂ ಕತ್ರಿಗುಪ್ಪೆಗೂ ಕಾಶಂಬಿಯೇ ಸೇತುವೆಯಂತಿದ್ದದ್ದು, ಟಿವಿ, ಪೇಪರಗಳಲ್ಲಿ ಬಾರದ ಸುದ್ದಿಗಳನ್ನೆಲ್ಲಾ ಅನಿತಾಗೆ ಒಪ್ಪಿಸುತ್ತಿದ್ದಳು. ಹೂ ಕಟ್ಟುತ್ತಿದ್ದ ಶಾಂತಿ ಯಾವುದೋ ಹುಡುಗನ ಜೊತೆ ಓಡಿ ಹೋದದ್ದು, ಮಾರಿಯಮ್ಮನ ಗುಡಿ ಪೂಜಾರಿ ಸತ್ತದ್ದು, ಕರೋನ ಟೈಮಲ್ಲಿ ಪೋಲಿಸರು ಬಂದು ಅರಳಿಕಟ್ಟೆ ಬಳಿ ಕೇರಂ ಆಟ ಆಡುತ್ತಿದ್ದ ಯುವಕರನ್ನು ಹೊಡೆದದ್ದು. ಸೊಸೈಟಿಯವ ಸರಿಯಾಗಿ ಅಕ್ಕಿ ಕೊಡದೆ ಇದ್ದದ್ದು, ಹೀಗೆ ಅನೇಕ ವಿಷಯಗಳು ಅನಿತಾಳ ಕಿವಿಗೆ ಕಾಫಿ ಕುಡಿಯುತ್ತಾ ಸುರಿಯುತ್ತಿದ್ದವಳು ಕಾಶಂಬಿಯೇ.
ವರ್ಷಗಳು ಉರುಳಿದಂತೆ ಅನಿತಳ ಮನೆಯಲ್ಲಿ ಮಕ್ಕಳ ಮದುವೆಗಳಾದವು. ಕಾಶಂಬಿ ಅನಿತಾನ ಮನೆಗೆ ಬರುತ್ತಿದ್ದ ಹತ್ತಾರು ನೆಂಟರಿಗೂ ಪರಿಚಿತಳಾಗಿ ಹೆಚ್ಚಿನ ಕೆಲಸಗಳನ್ನು ಬೇಸರಿಸದೆ ಮಾಡಿದಳು. ಮಕ್ಕಳು ಎಲ್ಲಿ ಅಂದರೆ ಅಲ್ಲಿ ಬಿಸಾಡುತ್ತಿದ್ದ ಚಿನ್ನದ ಉಂಗುರ, ಸರ, ದುಡ್ಡನ್ನು ತೋರಿಸಿ 'ಅಕ್ಕ ನಮಗೆ ಬಡತನ, ಇಂತಹ ಆಸೆ ತೋರಿಸಬೇಡಿ ಕಣಕ್ಕ' ಎಂದು ಮುಖಕ್ಕೆ ಹೊಡೆದಂತೆ ತಂದು ಕೈಗಿಡುತ್ತಿದ್ದಳು. ಮದುವೆ ಸಂದರ್ಭದಲ್ಲಿ ದೂರದ ನೆಂಟರೊಬ್ಬರು 'ಮನೆ ಕೆಲಸಕ್ಕೆ ತುರುಕರನ್ನು ಇಟ್ಟುಕೊಂಡಿದ್ದೀಯಾ, ದೇವರ ಮನೆ ಬೇರೆ ತೆರದಂತೆ ಮಾಡ್ತಿದಿಯಾ ಇದೆಲ್ಲಾ ಮಡಿ-ಮೈಲಿಗೆಗೆ ಸರಿ ಹೋಗಲ್ಲ' ಎಂದು ಬಂದ ದಿನವೇ ಗೊಣಗಿದರು. ಅದೇ ದಿನ ಮನೆಯಲ್ಲಿಯೇ ಮೆಟ್ಟಿಲು ಇಳಿಯುವಾಗ ಬಿದ್ದಾಗ, ಅವರನ್ನು ಎತ್ತುವುದು ಅಲ್ಲಿದ್ದವರಿಗೆ ಸಾಧ್ಯವಾಗದೆ ಆ ದಡೂತಿ ದೇಹವನ್ನು ಕಾಶಂಬಿಯೇ ಮೇಲೆ ಸಾಗಿಸಿ ಹಾಸಿಗೆ ಮೇಲೆ ಮಲಗಿಸಿದಾಗ ಅವರ ಕಣ್ಣುಗಳು ಕೊಡಗಳಾಗಿದ್ದವು. ನೇರ, ದಿಟ್ಟ ನಿರಂತರ ಎನ್ನುವಂತೆ ಕಾಶಂಬಿ ಮಾತು ಬಾಣದಂತೆ
ಬಿರುಸು, ಸುಳ್ಳು ಕಂಡರೆ ಕೆಂಡವಾಗುತ್ತಿದ್ದಳು. ಕಷ್ಟಕ್ಕೆ ತಾನಿದ್ದೇನೆ ಅಂತ ನಿಲ್ಲುತ್ತಿದ್ದಳು. ಅದೊಂದು ದಿನ ಕಾಶಂಬಿ ಬಂದವಳೆ 'ಅಕ್ಕ, ಅಲ್ಲಿ ಪಾರ್ಕ ಅತ್ರ ಕೆಲಸ ತಾಳಿಸರ ಮಾಡ್ತಿದನಲ್ಲಕ್ಕ, ಅವರ ಮನೆಯಲ್ಲಿ ಮೊನ್ನೆ ಭಾನುವಾರ ಕಳುವಾಗಿದೆಯಂತೆ. ಆಯಮ್ಮ ನೆನ್ನೆ ನನಗೆ ಕೇಳಿದ್ರು. ಎಲ್ಲೋ ಇಟ್ಟಿರಬೇಕೆನೋ
ನೋಡಿ
ಎಂದಳು.
'ಹೌದಾ...ಭಾನುವಾರ
ಆಗಿದ್ದಾ?.
ಈಗಾಗಲೇ
ಮಂಗಳವಾರ...ಸಿಕ್ಕಲ್ಲವಂತ ಎಲ್ಲಿಟ್ಟಿದ್ದರಂತೆ?' ಎಂದಳು
'ಅದೇ ಅಕ್ಕ, ಆಯಮ್ಮ ಹೇಳ್ತಾರೆ ಮಲಗುವಾಗ ಹಾಸಿಗೆಯ ದಿಂಬಿನ ಕೆಳಗೆ ಇತ್ತು ಅಂತ'
'ಅಲ್ಲೆ ಹುಡುಕಿದರಂತಾ?'
'ಹುಡುಕಿದರಂತೆ. ಮೈಗಳ್ಳಿ ಆಯಮ್ಮ. ಮನೆ ಕೆಲಸ ಒಂದು ಚೂರು ಸರಿಯಾಗಿ ಮಾಡಲ್ಲ. ನಾನು ಮೇಲಿಂದ ಒಣಗಿದ ಬಟ್ಟೆ ತಂದು ಹಾಸಿಗೆ ಮೇಲೆ ಹಾಕಿದ್ದೆ. ಬಟ್ಟೆಯೊಳಗೆಲ್ಲೋ ಸೇರಿರಬೇಕು ನೋಡಿ ಅಂದೆ. ಸಿಗಲಿಲ್ಲ ಅಂದ್ರು'
'ಬೇರೆ ಕಡೆ ಬಿಚ್ಚಿಟ್ಟು ಮರೆತಿರಬಹುದಲ್ಲವಾ?'
'ಗೊತ್ತಿಲ್ಲಕ್ಕ, ಅವರ ಮನೆಲಿ ಸಿಸಿ ಟಿವಿನೂ ಐತೆ ನೋಡಕಳಿ ಅಂದು
ಬಂದೆ'
'ಮತ್ತೆ ಮುಂದೆ?'
'ಪೋಲಿಸ ಕಂಪ್ಲೆಂಟ್ ಕೊಡ್ತಿನಿ ಆಂದ್ರಕ್ಕ, ನಾನು ಕೊಡಿ ಅಂದೆ'
'ಹೌದಾ, ಸಿಗಬಹುದು ಬಿಡು' ಎಂದು ಹೇಳಿ ಸುಮ್ಮನಾಗಿಸಿದಳು ಅನಿತಾ.
'ಇವತ್ತಿಂದ ರೋಜ ಶುರು ಮಾಡಬೇಕೆಂದಿದ್ದೆ. ಇದು ಬೇರೆ ಶುರು ಆಯ್ತು' ಅಂತ ಬೇಸರಿಸಿಕೊಂಡು ಮನೆಕಡೆ ಹೊರಟಳು.ಬಾಗಿಲ ಬಳಿ ಬಂದ ಅನಿತಾ'ನೀನು ತಗೊಂಡಿಲ್ಲ ತಾನೇ?' ತನ್ನ ಮಾತಿಗೆ ತಾನೇ ಅನುಮಾನಿಸುತ್ತಾ ಕೇಳಿದಳು.
'ಅಕ್ಕ. ಇಷ್ಟು ವರ್ಷದಿಂದ ನಿಮ್ಮ ಮನೆಲಿ ಕೆಲಸ ಮಾಡ್ತಿದಿನಿ ಏನಾದ್ರೂ ಹೋಗಿದೆಯಾ? ಮನೆ ಸಾಮಾನು ಯಾರ ಮನೆಯಲ್ಲಿ ಹೋದ್ರು ಮೊದಲು ಅನುಮಾನ ಪಡೋದು ನಮ್ಮಂತ ಬಡವರ ಮೇಲೆ ಅಲ್ಲವೇನಕ್ಕಾ' ಎಂದು ಕಣ್ಣು ತುಂಬಿಕೊಂಡ ಕಾಶಂಬಿಯನ್ನು ಹೇಗೆ ಸಮಾಧಾನಿಸುವುದು ತಿಳಿಯದೆ 'ಕೇಳಿದೆ ಅಷ್ಟೇ ಕಾಶಂಬಿ, ನೀನು ಏನು ಅಂತ ಇಷ್ಟು ವರ್ಷದಿಂದ ನಾನು ನೋಡಿಲ್ವಾ' ಎಂದು ಬಿಸಿಗೆ ತಣ್ಣೀರು ಹಾಕುವ ಮಾತಾಡಿದಳು.
'ಅಕ್ಕ, ನಮ್ಮೂರಲ್ಲಿ ನಮ್ಮಪ್ಪಂಗೆ ಹತ್ತು ಎಕರೆ ಭೂಮಿ ಐತೆ. ಮೂರು ಗಂಡು ಮಕ್ಕಳಲ್ಲಿ ನಾನೊಬ್ಬಳೆ ಮಗಳು. ನೂರಾರು ಕುರಿ ಮೇಯಿಸಿ ಮಾರಿ ಸಂಪಾದಿಸಿದ್ದಾನೆ ನಮ್ಮಪ್ಪ.
ನಿಮ್ಮಂತದ್ದೇ ಮನೆಯಿದೆ ನಮಗೆ. ನನ್ನ ನಸೀಬು ಕೋಟಿ ನಾನು ಹೀಗೆ ಮನೆ ಮನೆ ಕೆಲಸ ಮಾಡಿ ಬದುಕಬೇಕಿರಲಿಲ್ಲ. ನನ್ನ ಗಂಡ ಇದ್ದಿದ್ದರೆ ನಾನು ಹೀಗೆ ಬದುಕಬೇಕಿತ್ತೇನಕ್ಕ?' ಎಂದು ಗತಕಾಲವನ್ನು ನೆನಸಿ ಕಣ್ಣೀರಾದಳು.
'ನೀವು ಅನಿತಾನಾ? ನಾವು ಚೆನ್ನಮ್ಮನಕೆರೆ ಪೋಲಿಸ್ ಸ್ಟೇಶನ್ನಿಂದ ಫೋನ್ ಮಾಡ್ತಿರೋದು. ನಿಮಗೆ ಕಾಶಂಬಿ ಗೊತ್ತಾ?' ಅತ್ತಲಿಂದ ದನಿ.
'ಗೊತ್ತು, ನೀವ್ಯಾರು ಮಾತಾಡೋದು?" ಮರು ಪ್ರಶ್ನಿಸಿದಳು ಅನಿತಾ.
'ಕಾಶಂಬಿ ಮೇಲೆ ಕಂಪ್ಲೇಂಟ್ ಬಂದಿದೆ. ತಾಳಿಸರ ಕದ್ದ ಬಗ್ಗೆ'
'ಕಾಶಂಬಿಗೆ ಕೊಡಿ'
'ಅಕ್ಕಾ...ನಮ್ಮ ಮನೆ ಅತ್ರ ಬಂದು ಪೋಲಿಸ್ ಕರಕೊಂಡು ಬಂದವರೆ ಅಕ್ಕಾ.... ಬೆಳಿಗ್ಗೆಯಿಂದ ಇಲ್ಲೆ ಇದ್ದೀನಿ...' ಗೋಳಾಡುತ್ತಲೆ ಮಾತನಾಡಿದಳು.
'ಸರಿ ಎಫ್ಐಆರ್ ಹಾಕಿದಾರಾ?'
'ಹಂಗಂದ್ರೇ ?...ಅಕ್ಕಾ ನೀನು ಬರ್ತಿಯಾ?'
'ಅಳು ನಿಲ್ಲಿಸು ಕಾಶಂಬಿ, ಯಾರಿದ್ದಾರೆ ನಿನ್ನ ಜೊತೆ?'
'ನನ್ನ ತಮ್ಮ ಇದ್ದಾನಕ್ಕ'
'ಇನ್ಸೆಪಕ್ಟರ್ ಇದ್ದಾರಾ?'
'ಗೊತ್ತಿಲ್ಲಕ್ಕ, ಬೆಳಗ್ಗೆಯಿಂದ ಇಲ್ಲೆ ಕೂತಿದಿನಿ. ನೀ ಬರ್ತಿಯಾಕ್ಕ?' ಮುಸಿಮುಸಿ ಅಳು.
ಅನಿತಾ ಪೋಲಿಸ್ ಸ್ಟೇಷನ್ನಿಗೆ ಹೋದಳು. ಹೊರಗೆ ಹತ್ತಾರು ಜನ ತಮ್ಮ ತಮ್ಮೊಳಗೆ ಮಾತನಾಡುತ್ತಿದ್ದರು. ಲಾಯರ್ ಒಬ್ಬ ತನ್ನ ಕ್ರೈಂಟ್ಗಳ ಬಳಿ ಮಾತನಾಡುತ್ತಿದ್ದ. ಒಮ್ಮೆಯೂ ಪೋಲಿಸ್ ಸ್ಟೇಷನ್ನಿಗೆ ಕಾಲಿಕ್ಕದ ಅನಿತಾಳಿಗೆ ಹೆದರಿಕೆಯೇನೂ ಇರಲಿಲ್ಲ. ಒಳಗೆ ಹೋಗುತ್ತಿದ್ದಂತೆ ರೈಟರ್ ಒಬ್ಬ ಏನೋ ಬರೆಯುತ್ತಾ ಕುಳಿತಿದ್ದ. ಲಾಕಪ್ಪಿನೊಳಗೆ ಕಂಬಿ ಹಿಡಿದು ನಿಂತಿದ್ದ ನಾಲೈದು ಕೈದಿಗಳು. ಬಲಕ್ಕೆ ಗೋಡೆಗೆ ನೇತುಹಾಕಿದ್ದ ಕೈದಿಗಳ ಫೋಟೋಗಳು, ಬೆಂಚಿನ ಮೇಲೆ ಕುಳಿತಿದ್ದ.ರಸಹೀನ ಸಿಪ್ಪೆಯಂತಹ ಮುಖದ ಜನರು, ಅತ್ತಿಂದಿತ್ತ ಓಡಾಡುತ್ತಿದ್ದ ಪೇದೆಗಳು, ಅನಿತ ಎಡಕ್ಕೆ ಇದ್ದ ಕೋಣೆಯಲ್ಲಿ ಇಣುಕುತ್ತಿದ್ದಂತೆ ಮಹಿಳಾ ಪೋಲಿಸರ ಪಕ್ಕದಲ್ಲಿ ನೆಲದ ಮೇಲೆ ಕುಳಿತಿದ್ದ ಕಾಶಂಬಿ ಓಡಿಬಂದು ಅಕ್ಕಾ ಎಂದು ತೆಕೈಸಿಕೊಂಡಳು ಅನಿತಾಳನ್ನು, ಅಜಾನುಬಾಹು ಕಾಶಂಬಿ ಒಂದೇ ದಿನಕ್ಕೆ ಹಿಂಡಿ ಹಿಪ್ಪೆಯಾಗಿದ್ದಳು.
ಕೇಸ್ ಏನು? ಯಾಕೆ? ಯಾರು ಕಂಪ್ಲೇಂಟ್ ಕೊಟ್ಟಿರುವುದು ಹೀಗೆ ಇನ್ಸಪೆಕ್ಟರ್ ಬಳಿ ತನ್ನ ಪರಿಚಯ ಹೇಳಿಕೊಂಡು ವಿಚಾರಿಸಿದಳು. ಬರುವ ಮುಂಚೆ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎಂದು ತನ್ನ ಲಾಯರ ಮಗಳ ಬಳಿ, ಮಹಿಳಾ ಸಂಘಟನೆಗಳ ಬಳಿ ಸಲಹೆ ಕೇಳಿ ಬಂದಿದ್ದಳು. ಕಂಪ್ಲೇಂಟ್ ಕೊಡಲು ಬಂದಿದ್ದ ಆ ಮನೆಯ ಹೆಂಗಸನ್ನು ಒಳಕ್ಕೆ ಕರೆದರು.
'ಇವರೇ ನೋಡಿ ಸರ ಕಳೆದುಕೊಂಡವರು' ಎಂದ ಇನ್ಸಪೆಕ್ಟರ್.
"ನೀವು ಮನೆಯನ್ನೆಲ್ಲಾ ಮತ್ತೊಮ್ಮೆ ಸರಿಯಾಗಿ ನೋಡಬೇಕಿತ್ತು' ಎಂದಳು
'ಅದೆಲ್ಲಾ ಮಾಡಿ ನೋಡಿಯೇ ನಾಲ್ಕು ದಿನ ಆದ ಮೇಲೆ ಕಂಪ್ಲೇಂಟ್ 'ಕೊಟ್ಟಿರುವುದು' ಬೋಳು ಕೊರಳಿನವಳು ಅಸಡ್ಡೆಯಿಂದ ಉತ್ತರಿಸಿದಳು.
"ನಿಜ. ಇನ್ನೆಲ್ಲಿಯಾದರು ಬಿಚ್ಚಿಟ್ಟು ಮರೆತಿರುವಿರೇನೋ ಜ್ಞಾಪಿಸಿಕೊಳ್ಳಿ. ನೀವು ಯೋಗ, ಜಿಮ್ ಅಂತನೂ ಹೋಗ್ತಿರಂತೆ'
'ನನಗೆ ಚೆನ್ನಾಗಿ ಗೊತ್ತಿದೆ ಎಲ್ಲಿಟ್ಟಿದ್ದೆ ಅಂತ. ನೀವು ಕಳೆದುಕೊಂಡಿದ್ದರೆ ಅದರ ಬೆಲೆ ತಿಳಿತಿತ್ತು. ಒಣ ವೇದಾಂತ ಮಾತಾಡ್ತಾರೆ' ರೇಗಿದ ದನಿ.
'ನಿಜ ನಿಮ್ಮಲ್ಲಿ ಏನು ಮಾತು? ಬಡವರು ಸುಲಭಕ್ಕೆ ಸಿಕ್ತಾರೆ ಅಂತ ಕಂಪ್ಲೆಂಟ್ ಕೊಟ್ರಿ ಅಲ್ವಾ?' ಅನಿತಾಗೂ ರೇಗಿತು.
ಇವರು ಮಧ್ಯ ಪ್ರವೇಶಿಸಿದ ಇನ್ನಪೆಕ್ಟರ್ 'ನೋಡಿ. ಅದನ್ನು ನಾವು ನೋಡಿಕೊಳ್ತಿವಿ. ಯಾರು?' ಎಂದು ಕಂಪ್ಲೆಂಟ್ ಕೊಡಲು ಬಂದಿದ್ದ ಹೆಂಗಸಿನ ಜೊತೆಯವನನ್ನು ತೋರಿಸಿ ಪ್ರಶ್ನಿಸಿದ.
"ಅವರು ನಮ್ಮ ಪರಿಚಯದವರು' ಎಂದಳು ಆಕೆ.
'ನಿಮ್ಮ ಗಂಡ ಎಲ್ಲಿ?' ಎಸ್ಐ ಪ್ರಶ್ನೆ.
'ಅವರಿಗೆ ಕೆಲಸ ಬರಲಿಲ್ಲ'
'ಅಲ್ಲಾರಿ ಇಷ್ಟು ತೂಕದ ತಾಳಿಸರ ಕಳುವಾಗಿದೆ ಅವರು ಬರಲಿಲ್ಲ ಏಕೆ?'
'ದೊಡ್ಡ ಕಂಪನಿಯಲ್ಲಿ ಕೆಲಸ. ಇದಕ್ಕೆಲ್ಲಾ ಟೈಮಿಲ್ಲ ಅವರಿಗೆ' ಎಂದ ಆಕೆ 'ನೋಡಿ, ಅದೇನು ಎನ್ಕ್ವಯರಿ ಮಾಡ್ತಿರಿ ಗೊತ್ತಿಲ್ಲ. ನಾನು ಕಂಪ್ಲೇಂಟ್ ಕೊಟ್ಟಿದ್ದೀನಿ ಹುಡುಕಿ ಕೊಡಿ ಅಷ್ಟೇ. ನಾನು ಕಾಶಂಬಿನೇ ಕದ್ದಿದ್ದಾಳೆ ಅಂತಾನೂ ಹೇಳ್ತಿಲ್ಲ. ನಮ್ಮ ಮನೆಗೆ ಭಾನುವಾರ ಯಾರೂ ಬಂದಿಲ್ಲ ಕಾಶಂಬಿ ಬಿಟ್ಟು, ಅದಕ್ಕೆ ಅನುಮಾನ' ಎಂದು ಹೊರಟಳು. ಅವರನ್ನು ನಿಲ್ಲಿಸಿದ ಎಸ್ಐ.
'ಕಾಶಂಬಿನ ಕರಕೊಂಡು ಬನ್ನಿ' ಎಂದು ಕರೆಸಿಕೊಂಡರು.
'ನೋಡಮ್ಮ ನೋಡಿದ್ದೀಯಾ?' ಕೆಲಸ ಮಾಡುವ ಮನೆಯಲ್ಲಿ ಇವರನ್ನು
'ಇಲ್ಲ ಸಾರ್, ಇವರು ಯಾರು ಅಂತ ನನಗೆ ಗೊತ್ತಿಲ್ಲ, ಇವತ್ತೇ ನಾ ನೋಡಿದ್ದು' ಎಂದಳು ಕಾಶಂಬಿ.
'ಸರಿ. ನೀವು ಹೋಗಿ' ಎಂದು ಎಸ್ಐ ಕಳಿಸಿ ಪೇದೆಗೆ ಏನೋ ಸಂಜ್ಞೆ ಮಾಡಿದರು.
'ನೋಡಿ ಇಂತಹ ಕೇಸ್ಗಳಲ್ಲಿ ಮನೆಕೆಲಸದವರ ಪರವಾಗಿ ಮತ್ತೊಂದು ಮನೆಯ ಓನರ್ ಬರೋದು ತುಂಬಾ ಕಡಿಮೆ. ನೀವು ಇವರ ಪರವಾಗಿ ಬಂದಿದ್ದೀರಿ. ನಾವು ಏನೆಲ್ಲಾ ಎನ್ಕ್ವಯರಿ ಮಾಡಬೇಕೋ ಮಾಡಿ ಕಳಿಸ್ತಿವಿ. ಎಫ್ಐಆರ್ ಹಾಕಲೇಬೇಕು ಜೊತೆಗೆ ನಾವು ಕರೆದಾಗಲೆಲ್ಲಾ ಬರಬೇಕು ತಿಳಿತಾ' ಎಂದು ಕಾಶಂಬಿಗೆ ಗದರಿಸಿ ಹೊರಗೆ ಕಳಿಸಿದರು.
'ನೋಡಿ ಅನಿತಾರವರೇ, ಕಾಶಂಬಿ ಹೇಳಿದ್ದು ನಿಮ್ಮ ಮನೆಯಲ್ಲಿ ಅವಳು ಬಹಳ ವರ್ಷದಿಂದ ಕೆಲಸ ಮಾಡ್ತಾ ಇದ್ದಾಳಂತೆ. ನೀವು ಬ್ಯಾಂಕ್ ಉದ್ಯೋಗಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಅಂದ್ಲು, ನಿಜ ಹೇಳಿ, ನೀವು ಆದರ್ಶಗಳನ್ನು
ಇಟ್ಟುಕೊಂಡು ಅವಳನ್ನು ಸಪೋರ್ಟ್ ಮಾಡಲು ಬಂದಿದ್ದೀರೋ? ಅಥವಾ ನಿಮ್ಮ ನಿಜವಾಗಲು ಅವಳು ನಿರಪರಾಧಿ ಅನ್ನಿಸಿತೋ?' ಅನಿತಾಳನ್ನು ಗಾಣಕ್ಕೆ ಹಾಕಿ ತಿರುಗಿಸಿದಂತೆ ಪ್ರಶ್ನಿಸಿದ. 'ಅವಳು ಕಳ್ಳತನ ಮಾಡಲು ಸಾಧ್ಯವಿಲ್ಲ, ಮಾಡಿಲ್ಲ ಎಂಬ ನಂಬಿಕೆಯಿಂದ ಬಂದಿದ್ದೇನೆ. ಅವಳು ತುಂಬಾ ನೇರ ನುಡಿಯ ಹೆಣ್ಣು, ಗಂಡನನ್ನು ಕಳೆದುಕೊಂಡು ಬೆಂಗಳೂರಿನಂತಹ ನಗರದಲ್ಲಿ ಮಕ್ಕಳೊಂದಿಗೆ ಸಭ್ಯತೆಯಿಂದ ಬದುಕುತ್ತಿದ್ದಾಳೆ. ನೀವು ಯೋಚನೆ ಮಾಡಿ, ಆ ಮನೆಯ ಹೆಂಗಸು ಒಂದು ಲಕ್ಷದ ಸರ ಕಳೆದುಕೊಂಡಿದ್ದಾಳೆ. ಆಕೆಯ ಗಂಡ ಬರದೆ ಯಾರನ್ನೋ ಕರಕೊಂಡು ಬಂದಿರೋದು ನಿಮಗೆ ಏನು ಅನ್ನಿಸ್ತು?' ಅನುಮಾನದ ಹುಳವನ್ನು ಅವನಿಗೆ ತಲೆಗೆ ವರ್ಗಾಯಿಸಿದಳು ಅನಿತಾ, 'ನೋಡಿ, ನಾವು ಎಲ್ಲಾ ಆಯಾಮದಿಂದಲೂ ನೋಡಬೇಕಾಗುತ್ತೆ. ನಮ್ಮ ಸಾಹೇಬರು ಇವತ್ತು ರಜ ಅವರು ಬಂದ ಮೇಲೆ ಎನ್ಕ್ವಯರಿ ಶುರು ಮಾಡ್ತಿವಿ. ನೀವು ಮತ್ತೆ ಮತ್ತೆ ಕರೆದಾಗ ಕಾಶಂಬಿ ಜೊತೆ ಬರಬೇಕಾಗುತ್ತೆ' ಎಂದ. ಹೊರಬಂದು 'ನೋಡಮ್ಮ. ಇವತ್ತು ಇವರು ಬಂದಿದ್ದಾರೆ ಅಂತ ಕಳಿಸ್ತಿದ್ದೀನಿ. ಇಲ್ಲದಿದ್ದರೆ ಲಾಕಪ್ಗೆ ಹಾಕ್ತಿದ್ದೆ, ನಾವು ಕರೆದಾಗಲೆಲ್ಲಾ ಬಂದು ಹೋಗಬೇಕು, ಪೋನ್ ನಮ್ಮಲ್ಲಿಯೇ ಇರಲಿ' ಎಂದು ಬೈಕ್ ಹತ್ತಿ ಹೋದ. ಕಾಶಂಬಿ 'ಅಕ್ಕ, ನೀ ದೇವರಂತೆ ಬಂದು ಕಾಪಾಡಿದೆ. ನಾನು ನಿಜಕ್ಕೂ ಅಲ್ಲಾಹ ಮೇಲೆ ಆಣೆ ಮಾಡಿ ಹೇಳ್ತಿನಿ ಅಕ್ಕ ತಗೊಂಡಿಲ್ಲ. ಹಾಗೇನಾದ್ರೂ ಆದ್ರೆ ನನ್ನ ಮಕ್ಕಳು ನಾಶವಾಗಲಿ. ಅವರ ಮೇಲೆ ಆಣೆ" ಎಂದು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು.
ಕಾಶಂಬಿ ಸರ ಕದ್ದದ್ದು ಹಾಗೂ ಅನಿತ ಅವಳನ್ನು ಬಿಡಿಸಿಕೊಂಡು ಬಂದದ್ದು ಕತ್ರಿಗುಪ್ಪೆಯ ಮರುದಿನದ ಬ್ರೇಕಿಂಗ್ ನ್ಯೂಸ್ ಆಯಿತು. ಎದುರಿಗೆ ಸಿಕ್ಕವರಿಗೆ ಉತ್ತರಿಸಿ నారాగి కాళర ಕಳಕೊಂಡವಳನ್ನು ಹಿಗ್ಗಾಮುಗ್ಗ ಬೈಯಲಾರಂಭಿಸಿದಳು ಕಾಶಂಬಿ. ಪಕ್ಕದ ಮನೆಯ ಸಲೀಮ 'ನಾಳೆಯಿಂದ ರೋಜ.. ಈ ದಿನಗಳಲ್ಲೇ ಇಂತಹದ್ದು ನಡೀಬೇಕಾ? ಆ ಅಕ್ಕ ಇಲ್ಲದಿದ್ರೆ ನಿನ್ನ ಗತಿ ಏನು?' ಎಂದು ಪ್ರಶ್ನಿಸಿದಳು.
'ಅಯ್ಯೋ, ಅಲ್ಲಾಹ ದೊಡ್ಡವನು. ಮನೆ ಕೆಲಸ ಮಾಡುವವರಿಗೆಲ್ಲಾ ಫೋನ್ ಮಾಡಿದೆ ಯಾರೂ ಬರಲಿಲ್ಲ ಅನಿತಕ್ಕನ್ನ ಬಿಟ್ಟು' ಕಾಶಂಬಿ ನೆನ್ನೆಯದನ್ನು ನೆನದು ಕಣ್ಣೀರಾದಳು.
'ಇಂತಹದ್ದಕ್ಕೆಲ್ಲಾ ಯಾರು ಬರಲ್ಲ. ಇನ್ನು ನೀ ಮನೆ ಕೆಲಸಕ್ಕೆ ಹೋಗಿಲ್ಲ ಆಂದ್ರೆ ಹೇಳು ಎಲ್ಲಾ ಫೋನ್ ಮಾಡೋರೆ'
'ನನ್ನ ನಸೀಬಿಗೆ ರಂಜಾನ್ ರೋಜ ಬರದಿಲ್ಲ ಬಿಡು. ಇಷ್ಟು ವರ್ಷ ಅಂತೂ ಮಾಡಲಿಲ್ಲ. ಈಗ ಮಾಡುವ ಅಂತಿದ್ದೆ'
'ಹೌದು, ನಿನ್ನ ಗಂಡ ಸತ್ತಿದ್ದು ಇದೇ ರೋಜಾದಲ್ಲೇ ಅಲ್ವಾ?'
'ಹೂಂ...ನನ್ನ ತಮ್ಮ ಬದುಕಿದ. ಗಂಡ ಸತ್ತ. ಮಗನಿಗೆ ಆಗ ನಾಕು ವರ್ಷ. ಮಗಳಿಗೆ ಒಂದು ವರ್ಷನೂ ತುಂಬಿರಲಿಲ್ಲ'
ಗಂಡ 'ಅಂತಹ ಕಷ್ಟನೆಲ್ಲಾ ಹೆದರಿಸಿದ್ದೇ ಇದೆಂತಹದ್ದೂ ಚೋರಿ ಇಲ್ಟಾಮ್ ಬಂತಲ್ಲ ನಿನಗೆ' ಅವಳು ಹೊರಗೆ ಹೀಗೆ ಹೇಳುತ್ತಿದ್ದರೂ ಅವಳ ಒಳಗೆ ಏನು ನಡಿತಿದೆ ಅಂತ ಗೊತ್ತಿತ್ತು ಕಾಶಂಬಿಗೆ, 'ನಾನು ಹೀಗೆ ಜೋರಿನೇ ಮಾಡಬೇಕು ಅಂದಿದ್ರೆ ಬೇಕಾದಷ್ಟು ಸಲ ಮನೆ ಬೀಗ ಕೊಟ್ಟು ಹೋಗುವ ಮನೆಗಳಿದ್ದು, ಆಗಲೇ ಮಾಡಬಹುದಿತ್ತು. ನನ್ನ ಸತ್ತಾಗ ನನಗೆ ಇಪ್ಪತ್ತೊಂದು ವರ್ಷ. ಮೈಮಾರಿಯೂ ಬದುಕಬಹುದಿತ್ತು. ನಮ್ಮಪ್ಪ ಕರೆದ್ರೂ, ತವರು ಸಾಸ್ವತ ಅಲ್ಲ ಅಂತ ಇಲ್ಲೇ ಉಳಿದೆ. ಅವರಿವರ ಮನೇಲಿ ಕಸಗುಡಿಸೋ ನಂಗೆ ರೋಜಾಕ್ಕಿಂತ ಮಕ್ಕಳನ್ನು ಸಾಕೋದು ಮುಖ್ಯ ನಿಂಗೇನು ಗಂಡ ಮಕ್ಕಳು ದುಡಿತಾರೆ. ನೀ ರೋಜಾ ಮಾಡ್ತಿ' ಎಂದು ಗಂಡನನ್ನ ಮತ್ತೆ ನೆನಪಿಸಿ ಅತ್ತಳು. 'ರಂಜಾನಿನ ಸಿಯಾಮ್ ನಮ್ಮ ಪಾಪ ಕಳಿತಾದಂತೆ. ಮೊನ್ನೆ ಮಸೀದಿಯಿಂದ ಬಂದಿದ್ದವ ರಂಜಾನ್ ತಿಂಗಳು ಶುರುವಾದಾಗ ಸ್ವರ್ಗದ ಬಾಗಿಲು ತೆರಿತಾವಂತೆ ಮತ್ತು ನರಕದ ಬಾಗಿಲು ಮುಚ್ಚಿರವಂತೆ. ಆಗ ದೆವ್ವಗಳನ್ನೂ ಕೂಡಾಕಿದ್ದಾರಂತೆ ಅಂತ ಹೇಳಿದ್ದ' ಕತೆ ಹೇಳುವಂತೆ ಸಲೀಮ ಶುರು ಮಾಡಿದಳು. 'ಅದೇನೋ ಗೊತ್ತಿಲ್ಲ. ನನ್ನ ಪಾಲಿಗೆ ನೆನ್ನೆ ನರಕ ನೋಡಿ ಬಂದೆ. ಅಕ್ಕ ಸ್ವರ್ಗದ ಬಾಗಿಲು ತೆರೆಯದೆ ಇದ್ರೆ ನಾನು ಲಾಕಪ್ನಲ್ಲಿ ಇರಬೇಕಿತ್ತು ಅಷ್ಟೇ' ಎಂದು ಹೂಕಟ್ಟಲು ಕಾಶಂಬಿ ಎದ್ದಳು.
ಒಂದಷ್ಟು ದಿನ ಎನ್ಕ್ವಯರಿ ನಡೆಯಿತು. ಯಾರು ತಗೊಂಡಿದ್ದಾರೆ ಎಂದು ಪತ್ತೆ ಹಚ್ಚಲು ಸಾಧ್ಯವಾಗದೆ ಕೇಸ್ ಮುಚ್ಚಿಟ್ಟರು. ಅದಕ್ಕಿಂತ ಹೆಚ್ಚಾಗಿ ಮನೆ ಓನರ್ ಕೂಡ ಒತ್ತಾಯಿಸಲಿಲ್ಲ ಎನ್ನುವುದೂ ಮತ್ತೊಂದು ಕಾರಣವಾಗಿತ್ತು. ಅಂತು ಇದರಿಂದ ಬಿಡುಗಡೆಯಾಯಿತು ಎಂದು ಕಾಶಂಬಿ-ಅನಿತ ನಿಟ್ಟುಸಿರುಬಿಟ್ಟರು. ಪ್ರತಿ ಸಲ ಪೋಲಿಸ್ ಸ್ಟೇಷನ್ನಿಗೆ ಹೊಸ ಪಿಐ ಬಂದಾಗಲೂ ಕಾಶಂಬಿಯನ್ನು ಕರೆಸುವುದು. ಅನಿತ ಮಾತಾಡಲು ಹೋಗುವುದು ನಡೆದಿತ್ತು. ಇತ್ತೀಚೆಗೆ ಅನಿತ ಕುಟುಂಬದ ಪರಿಚಯಸ್ಥ ಎಸ್ಪಿಯೊಬ್ಬರು ಅಲ್ಲಿನ ಪಿಐಗೆ ಮಾತಾಡಿದ ಮೇಲೆ ಅನಿತಗೆ ಮೊದಲಿಗಿಂತ ಹೆಚ್ಚಿನ ಮರ್ಯಾದೆ ದೊರಕಿ ಕಾಶಂಬಿ ಕೇಸನ್ನು ಕ್ಲೋಸ್ ಮಾಡುವುದಾಗಿ ಭರವಸೆ ಸಿಕ್ಕಿತ್ತು.
ಈ ಪ್ರಕರಣದ ನಂತರ ಕಾಶಂಬಿ ಮನೆಕೆಲಸ ಮಾಡೋದನ್ನು ನಿಲ್ಲಿಸಿದಳು. ಅನಿತ ಮನೆಗೆ ಮಾತ್ರ ಋಣಸಂದಾಯ ಮಾಡುವಂತೆ ಕೆಲಸಕ್ಕೆ ಬರುತ್ತಿದ್ದಳು. ಶೋರೂಂವೊಂದರಲ್ಲಿ ಕೆಲಸ ಸಿಕ್ಕ ಮೇಲೆ ಅವಳ ಮಾತುಗಳಲ್ಲಿ ಹೌಸ್ ಕೀಪಿಂಗ್, ಬ್ರೇಕ್, ಕಸ್ಟಮರ್ಸ್, ವೀಕ್ಲಿಹಾಫ್ ಇಂತಹ ಇಂಗ್ಲೀಷ್ ಪದಗಳು ಸರಾಗವಾಗಿ ಬರತೊಡಗಿದವು. ಕತ್ರಿಗುಪ್ಪೆಯ ತುಂಬಾ ರೋಜಾ, ರಂಜಾನ್ ಹಬ್ಬದ ಭರಾಟೆ ಜೋರಾಗಿತ್ತು. ಕಾಶಂಬಿ ಮನೆಯಲ್ಲಿನ ರಂಜಾನಿನ ಖೀರು ಅನಿತಾ ಮನೆಗೂ 'ಕಾಶಂಬಿ, ನೀನು ರೋಜಾನೇ ಬರುತ್ತಿತ್ತು. ಆಗ అని ತಾ
ಮಾಡಿಲ್ಲವೇನೋ?' ಎಂದರೆ 'ಅಕ್ಕಾ, ನಾನು ಹಿಂದೆ ಅದೇನು ಪಾಪಗಳನ್ನು ಮಾಡಿದ್ದೇನೋ ಗೊತ್ತಿಲ್ಲ. ಅದರ ಲೆಕ್ಕನೂ ನಂಗೆ ಬೇಕಾಗಿಲ್ಲ. ಈ ಜನ್ಮದಲ್ಲಿ ಪಾಪವನ್ನೇ ಮಾಡಿಲ್ಲದ ನಾನು ರೋಜಾ ಮಾಡಿ ಏನು ಪ್ರಯೋಜನ? ಮುಂದಿನದ್ದು ಯಾರು ನೋಡಿದ್ದಾರಾ? ನರಕ ನೋಡಿ ಬಂದಾಗಿದೆ. ಸ್ವರ್ಗ ಎಲ್ಲಿದೆಯೋ ಗೊತ್ತಿಲ್ಲ. ನನ್ನ ಕೆಲಸದಲ್ಲಿ ನಿಯತ್ತಿನಿಂದ ಅಲ್ಲಾಹನನ್ನ ಕಾಣತ್ತಿದ್ದೀನಿ. ದೇವರು ದುಡಿಯಲು ಶಕ್ತಿಕೊಟ್ರೆ ಸಾಕು. ಹೀಗೆ ಮಕ್ಕಳನ್ನು ಒಂದು ದಡ ಸೇರಿಸಿ ಕಣ್ಣುಮುಚ್ಚುವೆ' ಎಂದ ಅವಳ ಆತ್ಮವಿಶ್ವಾಸದ ನುಡಿಗೆ ಮಾತು ಕಳೆದುಕೊಂಡು ಬೆರಗಿನಿಂದ ನೋಡಿದಳು ಅನಿತಾ.
ಲೇಖಕರ ಪರಿಚಯ:
ಡಾ. ಪದ್ಮನಿ ನಾಗರಾಜು: ಮೈಸೂರು ಜಿಲ್ಲೆಯ ಸಾಲಿ ಗ್ರಾಮದವರು. ಅಧ್ಯಾಪಕಿ ಮತ್ತು ಲೇಖಕಿಯಾಗಿರುವ ಇವರು ಪ್ರಸ್ತುತ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗೆಯೇ ಇತರ ಹಲವು ಸಂಘಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಸಮುದ್ರದ ತೆರೆಯ ಸರಿಸಿ. ಉರಿವ ಬೆಂಕಿಗೆ ಮೈಯೆಲ್ಲ ಬಾಯಿ-ಎಂಬ ಎರಡು ಕಥಾಸಂಕಲನಗಳು, ಪುರಾವೆ ನೀಡಬೇಕಿಲ್ಲ. ಭೂಮಾತೆಗೆ ಡ್ರಿಫ್ಟ್ ಹಾಕಿಸಿ. ಗೆಳತಿಯಾಗುವುದೆಂದರೆ ಎಂಬ ಮೂರು ಕವನ ಸಂಕಲನಗಳು ಹಾಗೂ ಅನಾವರಣ.
ಕೋಣೆಯಾಚೆಗಿನ ಆಕಾಶ, ಎದೆ ಬೆಂಕಿ ಬಿದ್ದಾಗಿನ ಬೆಳಕು, ಸಮತ್ವ, ಅರಿವಿನ ಮಾರ್ಗದ ಸೋಪಾನಗಳು-ಅನುಪ್ರೇಕ್ಷೆಗಳು ಮುಂತಾದ ವಿವಿಧ ಪ್ರಕಾರದ ಕೃತಿಗಳನ್ನು ರಚಿಸಿದ್ದಾರೆ. ಪಥ, ಧವಳ, ಅವನಿ, ಶ್ರೇಯೋಭದ್ರ- ಮುಂತಾದ ಕೃತಿಗಳನ್ನು ಸಂಪಾದಿಸಿದ್ದಾರೆ. ಖ್ಯಾತ ರಂಗಕರ್ಮಿ ಕೃಷ್ಣಮೂತಿ ಕವತ್ತಾರ್ ಕುರಿತ ಪುಸ್ತಕವನ್ನೂ ರಚಿಸಿದ್ದಾರೆ. ಜಯದವಲ ಎಂಬ ಕೃತಿಯನ್ನು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿಗಾಗಿ ಮಹಿಳೆಯರ ಸಂಕಲನವನ್ನು ಸಂಪಾದಿಸಿದ್ದಾರೆ.
ಪದ್ಮನಿಯವರ "ಪುರಾವೆ ನೀಡಬೇಕಿಲ್ಲ" ಕವನ ಸಂಕಲನಕ್ಕೆ "ರಾಂ. ಕೆ. ಹನುಮಂತಯ್ಯ-ಹೆಬ್ಬಗೋಡಿ ಗೋಪಾಲಪ್ಪ ದತ್ತಿ ಪುಸ್ತಕ ಬಹುಮಾನ", "ಉರಿವ ಬೆಂಕಿಗೆ ಮೈಯೆಲ್ಲ ಬಾಯಿ' ಕಥಾಸಂಕಲನಕ್ಕೆ "ಅವ್ವ" ಪ್ರಶಸ್ತಿ, 'ಸಮಾಧಿ ಮೇಲಿನ ಹೂ" ಕಥಾಸಂಕಲನಕ್ಕೆ "ಇನ್ಫೋಸಿಸ್ ಸುಧಾಮೂರ್ತಿ ದತ್ತಿನಿಧಿ ಪ್ರಶಸ್ತಿ" ಸೇರಿದಂತೆ ಹತ್ತಾರು ಪ್ರತಿಷ್ಠಿತ ಪ್ರಶಸ್ತಿಗಳು ಇವರ ಸಾಹಿತ್ಯ ಸೇವೆಗೆ ಸಂದಿವೆ.
ಕನ್ನಡ ಸಾಹಿತ್ಯ ಮತ್ತು ಸಾಹಿತ್ಯ ಪಠ್ಯಗಳಿಗೆ ಸಂಬಂಧಿಸಿದಂತೆ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ನೂರಾರು ಉಪನ್ಯಾಸಗಳ ವಿಡಿಯೋಗಳನ್ನು ಹಂಚಿಕೊಂಡಿದ್ದು ಸಾವಿರಾರು ಸದುಪಯೋಗ ಪಡೆಯುತ್ತಿದ್ದಾರೆ. ವೀಕ್ಷಕರು, ವಿದ್ಯಾರ್ಥಿಗಳು ಇದರ
ಪದಕೋಶ:
ರೋಜಾ: ಪ್ರತಿದಿನ ಉಪವಾಸ
ಎಫ್ ಐ ಆರ್:- ಪ್ರಥಮ ತನಿಖಾ ವರದಿ.
4.1 ರಂಜಾನ್ ಮತ್ತು ಕಾಶಂಬಿ — ಪಾಠದ ಸಾರಾಂಶಗಳು
**1. ಕತ್ರಿಗುಪ್ಪೆಯ ಚಿತ್ರಣ:**
ಕತ್ರಿಗುಪ್ಪೆ ಹಿಂದೆ ಒಂದು ಪುಟ್ಟ ಗ್ರಾಮವಾಗಿದ್ದು, ಬೆಂಗಳೂರು ಮಹಾನಗರ ಬೆಳೆದಂತೆ ಅದರೊಳಗೆ ಸೇರಿಕೊಂಡಿದೆ. ಆಧುನಿಕ ಕಟ್ಟಡಗಳು, ಮಾಲ್ಗಳು, ಅಂಗಡಿಗಳು ಬಂದರೂ ಅದರೊಳಗೆ ಹಳೆಯ ಗ್ರಾಮೀಣ ಬದುಕಿನ ಕುರುಹುಗಳು ಇನ್ನೂ ಉಳಿದಿವೆ. ವಿವಿಧ ಪ್ರದೇಶಗಳಿಂದ ಬಂದ ಹಿಂದೂ, ಮುಸ್ಲಿಂ, ತಮಿಳು ಹಾಗೂ ಇತರ ಜನರು ಪರಸ್ಪರ ಸೌಹಾರ್ದದಿಂದ ಬದುಕುತ್ತಿರುವುದು ಇಲ್ಲಿನ ವಿಶೇಷತೆ.
**2. ಕಾಶಂಬಿಯ ಪರಿಚಯ:**
ಕಾಶಂಬಿ ಕತ್ರಿಗುಪ್ಪೆಯ ಬಡ ಮುಸ್ಲಿಂ ಮಹಿಳೆ. ಗಂಡನನ್ನು ಕಳೆದುಕೊಂಡ ನಂತರ ತನ್ನ ಮಕ್ಕಳನ್ನು ಸಾಕಲು ಮನೆ ಕೆಲಸ ಮಾಡುತ್ತಾಳೆ. ಅವಳು ಕಷ್ಟಪಟ್ಟು ದುಡಿಯುವ, ಪ್ರಾಮಾಣಿಕ, ನೇರನುಡಿಯ ಮತ್ತು ಆತ್ಮಗೌರವವುಳ್ಳ ಮಹಿಳೆ. ತನ್ನ ಬಡತನದ ನಡುವೆಯೂ ಪ್ರಾಮಾಣಿಕತೆಯನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ.
**3. ಅನಿತಾ ಮತ್ತು ಕಾಶಂಬಿಯ ಸಂಬಂಧ:**
ಅನಿತಾಳ ಮನೆಗೆ ಕಾಶಂಬಿ ಎಂಟು ವರ್ಷಗಳಿಂದ ಕೆಲಸ ಮಾಡುತ್ತಾಳೆ. ಕ್ರಮೇಣ ಅವಳು ಕೇವಲ ಮನೆ ಕೆಲಸದವಳಾಗಿರದೆ ಅನಿತಾಳ ಮನೆಯ ಸದಸ್ಯೆಯಂತಾಗುತ್ತಾಳೆ. ಕಾಶಂಬಿ ಕಷ್ಟ-ಸುಖಗಳಲ್ಲಿ ಅನಿತಾಳಿಗೆ ಜೊತೆಯಾಗಿರುತ್ತಾಳೆ. ಅನಿತಾಳೂ ಕಾಶಂಬಿಯನ್ನು ಜಾತಿ-ಧರ್ಮದ ಭೇದವಿಲ್ಲದೆ ಗೌರವಿಸುತ್ತಾಳೆ.
**4. ಧರ್ಮದ ಕುರಿತ ಕಾಶಂಬಿಯ ನಿಲುವು:**
ಕಾಶಂಬಿ ಮುಸ್ಲಿಂ ಆಗಿದ್ದರೂ ತನ್ನ ಧರ್ಮದ ಆಚರಣೆಗಳ ಬಗ್ಗೆ ಹೆಚ್ಚಿನ ಜ್ಞಾನ ಹೊಂದಿಲ್ಲ. ನಂತರ ಮಸೀದಿಯವರು ಮಕ್ಕಳಿಗೆ ಕುರಾನ್ ಕಲಿಸಲು ಪ್ರಾರಂಭಿಸಿದಾಗ ರಂಜಾನ್, ಸಿಯಾಮ್, ಝಕಾತ್ ಮತ್ತು ತಾರವೀಹ್ ನಮಾಜ್ಗಳ ಬಗ್ಗೆ ತಿಳಿದುಕೊಳ್ಳುತ್ತಾಳೆ. ಆದರೆ ಆಕೆಗೆ ಧರ್ಮಕ್ಕಿಂತ ದುಡಿಮೆ ಮತ್ತು ಮಕ್ಕಳ ಬದುಕು ಮುಖ್ಯವಾಗಿರುತ್ತದೆ.
**5. ಕಾಶಂಬಿಯ ಪ್ರಾಮಾಣಿಕತೆ:**
ಅನಿತಾಳ ಮನೆಯಲ್ಲಿ ಮಕ್ಕಳ ಚಿನ್ನಾಭರಣ ಮತ್ತು ಹಣ ಕಣ್ಣಿಗೆ ಬಿದ್ದರೂ ಕಾಶಂಬಿ ಎಂದಿಗೂ ಅದಕ್ಕೆ ಆಸೆಪಡುವುದಿಲ್ಲ. “ನಮಗೆ ಬಡತನ, ಇಂತಹ ಆಸೆ ತೋರಿಸಬೇಡಿ” ಎಂದು ಎಚ್ಚರಿಸುತ್ತಾಳೆ. ಅವಳ ಪ್ರಾಮಾಣಿಕತೆ ಮತ್ತು ನೈತಿಕತೆಯನ್ನು ಇದರಿಂದ ತಿಳಿಯಬಹುದು.
**6. ಕಳ್ಳತನದ ಆರೋಪ:**
ಒಂದು ಮನೆಯ ತಾಳಿಸರ ಕಳೆದುಹೋದಾಗ ಆ ಮನೆಯವರು ಅನುಮಾನದಿಂದ ಕಾಶಂಬಿಯ ಮೇಲೆ ದೂರು ನೀಡುತ್ತಾರೆ. ಬಡ ಮನೆಕೆಲಸದವಳಾಗಿರುವ ಕಾರಣ ಆಕೆಯನ್ನೇ ಸುಲಭವಾಗಿ ಅನುಮಾನಿಸುತ್ತಾರೆ. ಕಾಶಂಬಿ ತಾನು ಕದ್ದಿಲ್ಲವೆಂದು ಹೇಳಿದರೂ ಪೊಲೀಸರು ಅವಳನ್ನು ವಿಚಾರಣೆಗಾಗಿ ಠಾಣೆಗೆ ಕರೆದುಕೊಂಡು ಹೋಗುತ್ತಾರೆ.
**7. ಅನಿತಾಳ ಮಾನವೀಯತೆ:**
ಕಾಶಂಬಿಯ ಮೇಲೆ ಆರೋಪ ಬಂದ ಕೂಡಲೇ ಅನಿತಾ ಅವಳನ್ನು ಬೆಂಬಲಿಸಿ ಪೊಲೀಸ್ ಠಾಣೆಗೆ ಹೋಗುತ್ತಾಳೆ. ಕಾಶಂಬಿ ಕಳ್ಳತನ ಮಾಡಿಲ್ಲ ಎಂಬ ವಿಶ್ವಾಸದಿಂದ ಆಕೆಯ ಪರವಾಗಿ ಮಾತನಾಡುತ್ತಾಳೆ. ಅನಿತಾಳ ಈ ನಡೆ ಜಾತಿ, ಧರ್ಮ, ಆರ್ಥಿಕ ಸ್ಥಿತಿ ಮುಂತಾದ ಭೇದಗಳನ್ನು ಮೀರಿ ಮಾನವೀಯ ಸಂಬಂಧವನ್ನು ಗೌರವಿಸುವುದನ್ನು ತೋರಿಸುತ್ತದೆ.
**8. ಕಾಶಂಬಿಯ ಜೀವನದ ನೋವು:**
ಕಾಶಂಬಿ ಕೇವಲ ಇಪ್ಪತ್ತೊಂದು ವರ್ಷ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡಿದ್ದಳು. ಮಗನಿಗೆ ನಾಲ್ಕು ವರ್ಷ, ಮಗಳಿಗೆ ಒಂದು ವರ್ಷವೂ ತುಂಬಿರಲಿಲ್ಲ. ತವರು ಮನೆಗೆ ಹೋಗದೆ ತನ್ನ ಮಕ್ಕಳನ್ನು ತಾನೇ ಸಾಕಲು ಮನೆ ಮನೆ ಕೆಲಸ ಮಾಡುತ್ತಾಳೆ. ತನ್ನ ಬದುಕಿನ ಕಷ್ಟಗಳನ್ನು ಧೈರ್ಯದಿಂದ ಎದುರಿಸುತ್ತಾಳೆ.
**9. ರಂಜಾನ್ ಮತ್ತು ಕಾಶಂಬಿಯ ಸಂಬಂಧ:**
ಕಾಶಂಬಿ ಈ ಹಿಂದೆ ರಂಜಾನ್ ಉಪವಾಸವನ್ನು ಸರಿಯಾಗಿ ಆಚರಿಸಿರಲಿಲ್ಲ. ಆದರೆ ಕಳ್ಳತನದ ಆರೋಪದ ಸಂದರ್ಭದಲ್ಲಿ ಪೊಲೀಸ್ ಠಾಣೆಯಲ್ಲಿ ಅನುಭವಿಸಿದ ಅವಮಾನವನ್ನು “ನರಕ ನೋಡಿ ಬಂದಂತೆ” ಭಾವಿಸುತ್ತಾಳೆ. ರಂಜಾನ್ನಲ್ಲಿ ಉಪವಾಸ ಮಾಡುವುದಕ್ಕಿಂತ ತನ್ನ ಕೆಲಸದಲ್ಲಿ ಪ್ರಾಮಾಣಿಕವಾಗಿರುವುದನ್ನೇ ದೇವರ ಆರಾಧನೆಯಾಗಿ ಪರಿಗಣಿಸುತ್ತಾಳೆ.
**10. ಕಥೆಯ ಮುಖ್ಯ ಸಂದೇಶ:**
ಈ ಕಥೆ ಬಡವರನ್ನು ಅವರ ಬಡತನದ ಕಾರಣಕ್ಕೆ ಅನುಮಾನಿಸುವ ಸಮಾಜದ ಮನೋಭಾವವನ್ನು ಪ್ರಶ್ನಿಸುತ್ತದೆ. ಧರ್ಮದ ಆಚರಣೆಗಳಿಗಿಂತ **ಪ್ರಾಮಾಣಿಕತೆ, ದುಡಿಮೆ, ಮಾನವೀಯತೆ ಮತ್ತು ಆತ್ಮಗೌರವವೇ ಶ್ರೇಷ್ಠ** ಎಂಬ ಸಂದೇಶವನ್ನು ಕಾಶಂಬಿಯ ಪಾತ್ರದ ಮೂಲಕ ಲೇಖಕಿ ನೀಡುತ್ತಾರೆ. ಅನಿತಾ–ಕಾಶಂಬಿಯ ಸಂಬಂಧವು ಜಾತಿ, ಧರ್ಮ ಮತ್ತು ವರ್ಗಭೇದಗಳನ್ನು ಮೀರುವ ಮಾನವೀಯತೆಯ ಸಂಕೇತವಾಗಿದೆ.
1. ಕಾಶಂಬಿ ಯಾವ ಧರ್ಮದ ಅನುಯಾಯಿ?
ಉತ್ತರ : ಕಾಶಂಬಿ **ಇಸ್ಲಾಂ ಧರ್ಮದ ಅನುಯಾಯಿ**. ಅವಳು ಮುಸ್ಲಿಂ ಮಹಿಳೆಯಾಗಿದ್ದು, ರಂಜಾನ್, ರೋಜಾ, ಕುರಾನ್, ಝಕಾತ್ ಮತ್ತು ಸಿಯಾಮ್ ಮುಂತಾದ ಇಸ್ಲಾಂ ಧರ್ಮದ ಆಚರಣೆಗಳ ಬಗ್ಗೆ ಕಥೆಯಲ್ಲಿ ಉಲ್ಲೇಖಿಸಲಾಗಿದೆ.
2. ರೋಜಾ ಆಚರಣೆ ಕಂಡು ಬರುವುದು ಯಾವ ಜನಾಂಗದಲ್ಲಿ?
ಉತ್ತರ: ರೋಜಾ ಆಚರಣೆ **ಮುಸ್ಲಿಂ ಜನಾಂಗದಲ್ಲಿ** ಕಂಡುಬರುತ್ತದೆ. ಇದು ಇಸ್ಲಾಂ ಧರ್ಮದ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ರಂಜಾನ್ ತಿಂಗಳಲ್ಲಿ ಮುಸ್ಲಿಮರು ಬೆಳಗ್ಗಿನಿಂದ ಸೂರ್ಯಾಸ್ತದವರೆಗೆ ಉಪವಾಸ ಮಾಡುವುದನ್ನು **ರೋಜಾ** ಎಂದು ಕರೆಯುತ್ತಾರೆ.
3. ಕಾಶಂಬಿ ಯಾರ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡಳು?
ಉತ್ತರ : ಕಾಶಂಬಿ **ಅನಿತಾಳ ಮನೆಯಲ್ಲಿ** ಮನೆ ಕೆಲಸಕ್ಕೆ ಸೇರಿಕೊಂಡಳು.
4. ನೇರ ದಿಟ್ಟ ಸ್ಪಷ್ಟ ಯಾರ ಸ್ವಭಾವ ವಾಗಿತ್ತು?
**ನೇರ, ದಿಟ್ಟ, ಸ್ಪಷ್ಟ ಸ್ವಭಾವವು ಕಾಶಂಬಿಯದಾಗಿತ್ತು.**
5. ಯಾರು ಬನಶಂಕರಿಯಿಂದ ಕತ್ರಿಗುಪ್ಪೆವರೆಗಿನ ಸುದ್ದಿ ಸಮಾಚಾರಗಳನ್ನು ನೀಡುತ್ತಿದ್ದರು ಅದರ ಬಗೆ ಹಾಗು ವಿವರಗಳೇನು?
5. ಬನಶಂಕರಿಯಿಂದ ಕತ್ರಿಗುಪ್ಪೆಯವರೆಗಿನ ಸುದ್ದಿ ಸಮಾಚಾರಗಳನ್ನು ಯಾರು ನೀಡುತ್ತಿದ್ದರು? ವಿವರಿಸಿ.
ಬನಶಂಕರಿ ಮತ್ತು ಕತ್ರಿಗುಪ್ಪೆಯ ನಡುವಿನ **ಸುದ್ದಿ ಸಮಾಚಾರಗಳ ಸೇತುವೆಯಾಗಿ ಕಾಶಂಬಿ** ಕಾರ್ಯನಿರ್ವಹಿಸುತ್ತಿದ್ದಳು. ಕಾಶಂಬಿ ಅನಿತಾಳ ಮನೆಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದುದರಿಂದ, ಕತ್ರಿಗುಪ್ಪೆಯಲ್ಲಿ ನಡೆಯುತ್ತಿದ್ದ ಬಹುತೇಕ ಎಲ್ಲ ಘಟನೆಗಳ ಮಾಹಿತಿಯೂ ಅವಳಿಗೆ ತಿಳಿದಿರುತ್ತಿತ್ತು. ಅವಳು ಅನಿತಾಳಿಗೆ ದಿನನಿತ್ಯದ ಮಾತುಕತೆಯ ಸಂದರ್ಭದಲ್ಲಿ ಆ ಸುದ್ದಿಗಳನ್ನು ತಿಳಿಸುತ್ತಿದ್ದಳು.
ಕತ್ರಿಗುಪ್ಪೆಯಲ್ಲಿ ಹೂ ಕಟ್ಟುತ್ತಿದ್ದ **ಶಾಂತಿ ಯಾರೋ ಹುಡುಗನೊಂದಿಗೆ ಓಡಿಹೋದದ್ದು**, **ಮಾರಮ್ಮನ ಗುಡಿಯ ಪೂಜಾರಿ ಸತ್ತದ್ದು**, **ಕರೋನ ಕಾಲದಲ್ಲಿ ಪೊಲೀಸರು ಅರಳಿಕಟ್ಟೆಯ ಬಳಿ ಕೇರಂ ಆಡುತ್ತಿದ್ದ ಯುವಕರನ್ನು ಹೊಡೆದದ್ದು**, **ಸೊಸೈಟಿಯವರು ಸರಿಯಾಗಿ ಅಕ್ಕಿ ನೀಡದಿರುವುದು** ಮುಂತಾದ ಅನೇಕ ಸುದ್ದಿಗಳನ್ನು ಕಾಶಂಬಿ ಅನಿತಾಳಿಗೆ ತಿಳಿಸುತ್ತಿದ್ದಳು.
ಇವು ಟಿವಿ ಅಥವಾ ಪತ್ರಿಕೆಗಳಲ್ಲಿ ಪ್ರಕಟವಾಗದ ಸ್ಥಳೀಯ ಸುದ್ದಿಗಳಾಗಿದ್ದವು. ಕಾಶಂಬಿ ಕತ್ರಿಗುಪ್ಪೆಯ ಜನರ ಬದುಕು, ಅವರ ಕಷ್ಟ-ಸುಖ ಮತ್ತು ಅಲ್ಲಿನ ಘಟನೆಗಳನ್ನು ಹತ್ತಿರದಿಂದ ತಿಳಿದಿದ್ದಳು. ಆದ್ದರಿಂದ **ಅನಿತಾಳಿಗೆ ಕತ್ರಿಗುಪ್ಪೆಯ ಸುದ್ದಿಗಳನ್ನು ತಲುಪಿಸುವ ಕೊಂಡಿಯಾಗಿ ಕಾಶಂಬಿ** ಪರಿಣಮಿಸಿದ್ದಳು. ಇದರಿಂದ ಅನಿತಾ ಮತ್ತು ಕಾಶಂಬಿಯ ನಡುವಿನ ಆತ್ಮೀಯ ಸಂಬಂಧವೂ ಮತ್ತಷ್ಟು ಗಟ್ಟಿಯಾಗಿತ್ತು.
6. ರಾಧ ಹಾಗೂ ರಂಗೋಲಿ ಸನ್ನಿವೇಶ ಕುರಿತು ಬರೆಯಿರಿ
ಕಾಶಂಬಿ ಅನಿತಾಳ ಮನೆಗೆ ಕೆಲಸಕ್ಕೆ ಸೇರಿದಾಗ, ಮನೆಯ ಇತರ ಕೆಲಸಗಳನ್ನು ಮಾಡುವುದಾಗಿ ಒಪ್ಪಿಕೊಂಡರೂ **ರಂಗೋಲಿ ಹಾಕುವುದಿಲ್ಲ** ಎಂದು ಸ್ಪಷ್ಟವಾಗಿ ಹೇಳುತ್ತಾಳೆ. ತಾವು ಮುಸ್ಲಿಮರು, ಆದ್ದರಿಂದ ರಂಗೋಲಿ ಹಾಕುವ ಪದ್ಧತಿ ತಮ್ಮಲ್ಲಿ ಇಲ್ಲ ಎಂದು ಕಾಶಂಬಿ ಅನಿತಾಳಿಗೆ ತಿಳಿಸುತ್ತಾಳೆ. ಅನಿತಾಳಿಗೆ ಪ್ರತಿದಿನ ರಂಗೋಲಿ ಹಾಕಲು ಸಮಯವಿಲ್ಲದ ಕಾರಣ, ಕಾಶಂಬಿ ತನ್ನ ಪರಿಚಯದ **ರಾಧಾಳನ್ನು** ರಂಗೋಲಿ ಹಾಕಲು ಕರೆಸುತ್ತಾಳೆ.
ರಾಧಾ ಪ್ರತಿದಿನ ಅನಿತಾಳ ಮನೆಯ ಮುಂದೆ ಸುಂದರವಾಗಿ ರಂಗೋಲಿ ಹಾಕುತ್ತಿದ್ದಳು. ತಿಂಗಳ ಕೊನೆಯಲ್ಲಿ ಅನಿತಾ ರಾಧಾಳನ್ನು ಕರೆದು, “ತಿಂಗಳು ಪೂರ್ತಿ ರಂಗೋಲಿ ಹಾಕಿದ್ದೀಯಲ್ಲ, ಎಷ್ಟು ಸಂಬಳ ಕೊಡಬೇಕು?” ಎಂದು ಕೇಳುತ್ತಾಳೆ. ಅದಕ್ಕೆ ರಾಧಾ, **“ಮನೆ ಮುಂದೆ ರಂಗೋಲಿ ಹಾಕೋಕೆ ಯಾರಾದರೂ ಹಣ ತೆಗೆದುಕೊಳ್ಳುತ್ತಾರೆಯೇ?”** ಎಂದು ಆಶ್ಚರ್ಯದಿಂದ ಪ್ರಶ್ನಿಸುತ್ತಾಳೆ. ಇದು ತನ್ನ ಮನೆಯ ಸಂಪ್ರದಾಯ ಮತ್ತು ಸಹಜವಾದ ಕೆಲಸ ಎಂದು ಭಾವಿಸಿದ್ದ ರಾಧಾ ಹಣ ಪಡೆಯಲು ನಿರಾಕರಿಸುತ್ತಾಳೆ.
ಅನಿತಾ ರಾಧಾಳಿಗೆ ಹಣ ಕೊಡಲು ಸಾಧ್ಯವಾಗದಿದ್ದರೆ ವರ್ಷಕ್ಕೊಮ್ಮೆ ಒಳ್ಳೆಯ ಸೀರೆ ಕೊಡಿಸಬೇಕೆಂದು ನಿರ್ಧರಿಸುತ್ತಾಳೆ. ಈ ಸನ್ನಿವೇಶದ ಮೂಲಕ **ರಂಗೋಲಿ ಎಂಬುದು ಕೆಲವರಿಗೆ ಸಂಪ್ರದಾಯ ಮತ್ತು ಸಂತೋಷದ ಅಭಿವ್ಯಕ್ತಿಯಾದರೆ, ಇನ್ನೊಬ್ಬರಿಗೆ ಅದು ಸಹಜವಾದ ಸೇವೆಯಾಗಿದೆ** ಎಂಬುದು ತಿಳಿಯುತ್ತದೆ. ಜೊತೆಗೆ ಕಾಶಂಬಿ ತನ್ನ ಧಾರ್ಮಿಕ ನಂಬಿಕೆಯನ್ನು ಗೌರವಿಸಿಕೊಂಡು, ಅನಿತಾಳ ಅಗತ್ಯವನ್ನು ಪೂರೈಸಲು ರಾಧಾಳನ್ನು ಪರಿಚಯಿಸಿದ ಮಾನವೀಯ ಗುಣವೂ ಇಲ್ಲಿ ವ್ಯಕ್ತವಾಗುತ್ತದೆ.
7. ಕಾಶಂಬಿ ಪರವಾಗಿ నింతు ಮಾನವೀಯ ಮೌಲ್ಯಗಳ ಮಾದರಿಯಾದಳೆ ಎಂದಎನಿಸಿದರೆ ಹೇಗೆ ವಿಶ್ಲೇಷಿಸಿ.
ಕಾಶಂಬಿ **ಮಾನವೀಯ ಮೌಲ್ಯಗಳ ಮಾದರಿಯಾಗಿರುವ ಪ್ರಮುಖ ಪಾತ್ರ**. ಬಡತನ, ಗಂಡನನ್ನು ಕಳೆದುಕೊಂಡ ನೋವು ಮತ್ತು ಮಕ್ಕಳನ್ನು ಸಾಕುವ ಜವಾಬ್ದಾರಿ ಇದ್ದರೂ ಅವಳು ಪ್ರಾಮಾಣಿಕತೆ, ಆತ್ಮಗೌರವ, ಕರುಣೆ ಮತ್ತು ಸಹಾಯ ಮಾಡುವ ಗುಣಗಳನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ.
ಅನಿತಾಳ ಮನೆಯಲ್ಲಿ ಕೆಲಸ ಮಾಡುವಾಗ ಚಿನ್ನಾಭರಣ, ಹಣ ಮುಂತಾದವು ಕಣ್ಣಿಗೆ ಬಿದ್ದರೂ ಅವಳು ಎಂದಿಗೂ ಕಳ್ಳತನ ಮಾಡುವುದಿಲ್ಲ. ಬದಲಾಗಿ, “ನಮಗೆ ಬಡತನ, ಇಂತಹ ಆಸೆ ತೋರಿಸಬೇಡಿ” ಎಂದು ಹೇಳುವ ಮೂಲಕ ತನ್ನ **ಪ್ರಾಮಾಣಿಕತೆ**ಯನ್ನು ತೋರಿಸುತ್ತಾಳೆ. ಕಷ್ಟದಲ್ಲಿದ್ದರೂ ದುಡಿದು ಬದುಕುವುದನ್ನೇ ಗೌರವದಿಂದ ಸ್ವೀಕರಿಸುತ್ತಾಳೆ.
ಕಾಶಂಬಿ ಜಾತಿ-ಧರ್ಮದ ಭೇದವನ್ನು ಮೀರಿ ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುತ್ತಾಳೆ. ಅನಿತಾಳ ಮನೆಯ ಕಷ್ಟ-ಸುಖಗಳಲ್ಲಿ ಭಾಗಿಯಾಗುತ್ತಾಳೆ. ಅನಿತಾಳಿಗೂ ಕತ್ರಿಗುಪ್ಪೆಯ ಜನರ ಬದುಕು ಮತ್ತು ಅಲ್ಲಿನ ಸುದ್ದಿಗಳನ್ನು ತಿಳಿಸುವ ಮೂಲಕ ಅವರಿಬ್ಬರ ನಡುವಿನ **ಮಾನವೀಯ ಸಂಬಂಧದ ಸೇತುವೆ**ಯಾಗುತ್ತಾಳೆ.
ತಾಳಿಸರ ಕಳ್ಳತನದ ಆರೋಪ ಕಾಶಂಬಿಯ ಮೇಲೆ ಬಂದಾಗಲೂ ಅವಳು ಸತ್ಯದಿಂದ ಹಿಂದೆ ಸರಿಯುವುದಿಲ್ಲ. ತಾನು ಕದ್ದಿಲ್ಲವೆಂದು ಧೈರ್ಯದಿಂದ ಹೇಳುತ್ತಾಳೆ. ಬಡವರನ್ನು ಸುಲಭವಾಗಿ ಅನುಮಾನಿಸುವ ಸಮಾಜದ ಮನೋಭಾವದ ವಿರುದ್ಧ ತನ್ನ ನೋವನ್ನು ವ್ಯಕ್ತಪಡಿಸುತ್ತಾಳೆ. ಅನಿತಾ ತನ್ನನ್ನು ಬೆಂಬಲಿಸಿದಾಗ ಕೃತಜ್ಞತೆಯಿಂದ ಅವಳನ್ನು ದೇವರಂತೆ ಕಾಣುತ್ತಾಳೆ.
ಕೊನೆಯಲ್ಲಿ ಕಾಶಂಬಿ **ಧಾರ್ಮಿಕ ಆಚರಣೆಗಿಂತ ಪ್ರಾಮಾಣಿಕ ದುಡಿಮೆಯನ್ನೇ ದೇವರ ಸೇವೆಯೆಂದು** ಪರಿಗಣಿಸುತ್ತಾಳೆ. “ನನ್ನ ಕೆಲಸದಲ್ಲಿ ನಿಯತ್ತಿನಿಂದ ಅಲ್ಲಾಹನನ್ನ ಕಾಣುತ್ತಿದ್ದೀನಿ” ಎಂಬ ಅವಳ ಮಾತು ಅವಳ ಜೀವನದ ತತ್ವವನ್ನು ತಿಳಿಸುತ್ತದೆ.
ಹೀಗಾಗಿ **ಪ್ರಾಮಾಣಿಕತೆ, ದುಡಿಮೆ, ಆತ್ಮಗೌರವ, ಕೃತಜ್ಞತೆ, ಧೈರ್ಯ, ಮಾನವೀಯತೆ ಮತ್ತು ಸತ್ಯನಿಷ್ಠೆ**ಗಳನ್ನು ತನ್ನ ಬದುಕಿನಲ್ಲಿ ಅಳವಡಿಸಿಕೊಂಡ ಕಾಶಂಬಿ ನಿಜಕ್ಕೂ ಮಾನವೀಯ ಮೌಲ್ಯಗಳ ಮಾದರಿಯಾಗಿದ್ದಾಳೆ.
8. ಧರ್ಮ, ಜಾತಿ, ಅಂತಸ್ತು ಮೀರಿದ ಆತ್ಮೀಯತೆ ಈ ಕಥೆಯಲ್ಲಿ ವ್ಯಕ್ತವಾಗಿದೆಯೇ? ಹೇಗೆ?
ಹೌದು. **‘ರಂಜಾನ್ ಮತ್ತು ಕಾಶಂಬಿ’ ಕಥೆಯಲ್ಲಿ ಧರ್ಮ, ಜಾತಿ ಮತ್ತು ಆರ್ಥಿಕ ಅಂತಸ್ತುಗಳನ್ನು ಮೀರಿದ ಮಾನವೀಯ ಆತ್ಮೀಯತೆ ಅತ್ಯಂತ ಪರಿಣಾಮಕಾರಿಯಾಗಿ ವ್ಯಕ್ತವಾಗಿದೆ.** ಲೇಖಕಿ ಅನಿತಾ ಮತ್ತು ಕಾಶಂಬಿಯ ಸಂಬಂಧದ ಮೂಲಕ ಮನುಷ್ಯತ್ವವೇ ಎಲ್ಲ ಭೇದಗಳಿಗಿಂತ ದೊಡ್ಡದು ಎಂಬುದನ್ನು ತೋರಿಸಿದ್ದಾರೆ.
ಕಾಶಂಬಿ ಮುಸ್ಲಿಂ ಮಹಿಳೆಯಾಗಿದ್ದು, ಅನಿತಾ ಬೇರೆ ಧರ್ಮದವಳು. ಆದರೂ ಅನಿತಾ ಕಾಶಂಬಿಯನ್ನು ಅವಳ ಧರ್ಮದ ಆಧಾರದ ಮೇಲೆ ಎಂದಿಗೂ ತಾರತಮ್ಯದಿಂದ ನೋಡಲಿಲ್ಲ. ಕಾಶಂಬಿ ಅನಿತಾಳ ಮನೆಗೆ ಕೆಲಸಕ್ಕೆ ಬಂದಾಗ, “ನಾವು ಮುಸ್ಲಿಮರು, ನಿಮಗೆ ಓಕೆನಾ?” ಎಂದು ಕೇಳಿದಾಗ ಅನಿತಾ **“ನನಗೇನು ಪರವಿಲ್ಲ. ನಾವು ಜಾತಿಗಿತಿ ನೋಡಲ್ಲ”** ಎಂದು ಉತ್ತರಿಸುತ್ತಾಳೆ. ಇದು ಧರ್ಮ ಮತ್ತು ಜಾತಿಗಿಂತ ಮಾನವೀಯತೆಗೆ ಹೆಚ್ಚಿನ ಮಹತ್ವ ನೀಡುವ ಅನಿತಾಳ ಮನೋಭಾವವನ್ನು ತೋರಿಸುತ್ತದೆ.
ಕಾಶಂಬಿ ಮತ್ತು ಅನಿತಾಳ ಸಂಬಂಧ ಕ್ರಮೇಣ ಯಜಮಾನಿ–ಕೆಲಸದವಳ ಸಂಬಂಧವನ್ನು ಮೀರಿ **ಅಕ್ಕ–ತಂಗಿಯಂತಹ ಆತ್ಮೀಯ ಸಂಬಂಧವಾಗಿ** ಬೆಳೆಯುತ್ತದೆ. ಕಾಶಂಬಿ ಅನಿತಾಳ ಮನೆಯ ಕಷ್ಟ-ಸುಖಗಳಲ್ಲಿ ಭಾಗಿಯಾಗುತ್ತಾಳೆ. ಮದುವೆ ಸಂದರ್ಭಗಳಲ್ಲಿ ಹೆಚ್ಚುವರಿ ಕೆಲಸವನ್ನೂ ಬೇಸರಿಸದೆ ಮಾಡುತ್ತಾಳೆ. ಮನೆಯ ಚಿನ್ನಾಭರಣ ಮತ್ತು ಹಣದ ವಿಷಯದಲ್ಲಿ ಪ್ರಾಮಾಣಿಕವಾಗಿ ನಡೆದುಕೊಳ್ಳುತ್ತಾಳೆ.
ಕಾಶಂಬಿಯ ಮೇಲೆ ತಾಳಿಸರ ಕಳ್ಳತನದ ಆರೋಪ ಬಂದಾಗ ಈ ಆತ್ಮೀಯತೆ ಇನ್ನಷ್ಟು ಸ್ಪಷ್ಟವಾಗುತ್ತದೆ. ಸಮಾಜದಲ್ಲಿ ಬಡ ಕೆಲಸದವರನ್ನು ಸುಲಭವಾಗಿ ಅನುಮಾನಿಸುವ ಮನೋಭಾವವಿದ್ದರೂ ಅನಿತಾ ಕಾಶಂಬಿಯನ್ನು ಅನುಮಾನಿಸುವುದಿಲ್ಲ. ಅವಳು ಪೊಲೀಸ್ ಠಾಣೆಗೆ ಹೋಗಿ ಕಾಶಂಬಿಯ ಪರವಾಗಿ ನಿಂತು, **“ಅವಳು ಕಳ್ಳತನ ಮಾಡಲು ಸಾಧ್ಯವಿಲ್ಲ”** ಎಂಬ ವಿಶ್ವಾಸವನ್ನು ವ್ಯಕ್ತಪಡಿಸುತ್ತಾಳೆ. ತನ್ನ ಸಾಮಾಜಿಕ ಸ್ಥಾನ ಮತ್ತು ಉದ್ಯೋಗವನ್ನು ಬಳಸಿಕೊಂಡು ಕಾಶಂಬಿಗೆ ನ್ಯಾಯ ದೊರಕಿಸಲು ಪ್ರಯತ್ನಿಸುತ್ತಾಳೆ.
ಅದೇ ರೀತಿ ಕತ್ರಿಗುಪ್ಪೆಯಲ್ಲಿಯೂ ಹಿಂದೂ, ಮುಸ್ಲಿಂ, ತಮಿಳು ಮತ್ತು ಇತರ ಸಮುದಾಯದವರು ಪರಸ್ಪರ ಸೌಹಾರ್ದದಿಂದ ಬದುಕುತ್ತಿರುವ ಚಿತ್ರಣವಿದೆ. ಧರ್ಮ ಬೇರೆ ಇದ್ದರೂ ಜನರ ನಡುವೆ ದೈನಂದಿನ ಬದುಕಿನ ಸಂಬಂಧಗಳು ಗಟ್ಟಿಯಾಗಿವೆ.
ಹೀಗಾಗಿ ಈ ಕಥೆಯು **ಧರ್ಮಕ್ಕಿಂತ ಮಾನವೀಯತೆ, ಜಾತಿಗಿಂತ ಸಮಾನತೆ ಮತ್ತು ಅಂತಸ್ತಿಗಿಂತ ಆತ್ಮೀಯತೆ ಮುಖ್ಯ** ಎಂಬ ಸಂದೇಶವನ್ನು ನೀಡುತ್ತದೆ. ಅನಿತಾ–ಕಾಶಂಬಿಯ ಸಂಬಂಧವು ಈ ಮೌಲ್ಯಗಳಿಗೆ ಅತ್ಯುತ್ತಮ ಉದಾಹರಣೆಯಾಗಿದೆ.
9. ಕಾಶಂಬಿ ಹಾಗೂ ಅನಿತಾಳ ಗೆಳೆತನ ಕುರಿತು ಬರೆಯಿರಿ
‘ರಂಜಾನ್ ಮತ್ತು ಕಾಶಂಬಿ’ ಕಥೆಯಲ್ಲಿ **ಕಾಶಂಬಿ ಮತ್ತು ಅನಿತಾಳ ಗೆಳೆತನವು ಧರ್ಮ, ಜಾತಿ, ಆರ್ಥಿಕ ಅಂತಸ್ತುಗಳನ್ನು ಮೀರಿದ ಮಾನವೀಯ ಸಂಬಂಧದ ಪ್ರತೀಕವಾಗಿದೆ.** ಅನಿತಾಳ ಮನೆಗೆ ಕೆಲಸಕ್ಕೆ ಬಂದ ಕಾಶಂಬಿ ಕ್ರಮೇಣ ಕೇವಲ ಮನೆ ಕೆಲಸದವಳಾಗಿ ಉಳಿಯದೆ, ಅನಿತಾಳ ಮನೆಯ ಸದಸ್ಯೆಯಂತಾಗುತ್ತಾಳೆ.
ಕಾಶಂಬಿ ಅನಿತಾಳ ಮನೆಯಲ್ಲಿ ಹಲವು ವರ್ಷಗಳ ಕಾಲ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾಳೆ. ಮನೆಯ ಕಷ್ಟ-ಸುಖಗಳಲ್ಲಿ ಅನಿತಾಳಿಗೆ ಜೊತೆಯಾಗುತ್ತಾಳೆ. ಕತ್ರಿಗುಪ್ಪೆಯಲ್ಲಿ ನಡೆಯುವ ಅನೇಕ ಸ್ಥಳೀಯ ಘಟನೆಗಳನ್ನು ಅನಿತಾಳಿಗೆ ತಿಳಿಸುತ್ತಾ ಅವಳೊಂದಿಗೆ ಆತ್ಮೀಯವಾಗಿ ಮಾತನಾಡುತ್ತಿರುತ್ತಾಳೆ. ಅನಿತಾಳ ಮಕ್ಕಳ ಮದುವೆಗಳ ಸಂದರ್ಭದಲ್ಲಿಯೂ ಹೆಚ್ಚಿನ ಕೆಲಸವನ್ನು ಬೇಸರಿಸದೆ ಮಾಡುತ್ತಾಳೆ. ಮನೆಯ ಚಿನ್ನಾಭರಣ, ಹಣ ಮುಂತಾದವುಗಳನ್ನು ಕಂಡರೂ ಅವುಗಳ ಬಗ್ಗೆ ಆಸೆಪಡದೆ ತನ್ನ ಪ್ರಾಮಾಣಿಕತೆಯನ್ನು ತೋರಿಸುತ್ತಾಳೆ.
ಕಾಶಂಬಿಯ ಮೇಲಿನ ಅನಿತಾಳ ವಿಶ್ವಾಸವು **ತಾಳಿಸರ ಕಳ್ಳತನದ ಘಟನೆ**ಯಲ್ಲಿ ಅತ್ಯಂತ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಕಾಶಂಬಿಯ ಮೇಲೆ ಕಳ್ಳತನದ ಆರೋಪ ಬಂದಾಗ ಅನಿತಾ ಅವಳನ್ನು ಅನುಮಾನಿಸುವ ಬದಲು, ಅವಳು ನಿರಪರಾಧಿ ಎಂಬ ನಂಬಿಕೆಯಿಂದ ಪೊಲೀಸ್ ಠಾಣೆಗೆ ಹೋಗುತ್ತಾಳೆ. ಕಾಶಂಬಿಯ ಪರವಾಗಿ ಧೈರ್ಯದಿಂದ ಮಾತನಾಡಿ, ಆಕೆಗೆ ಬೆಂಬಲ ನೀಡುತ್ತಾಳೆ. ಇದರಿಂದ ಅನಿತಾಳ ಮಾನವೀಯತೆ ಮತ್ತು ಕಾಶಂಬಿಯ ಮೇಲಿನ ನಂಬಿಕೆ ವ್ಯಕ್ತವಾಗುತ್ತದೆ.
ಕಾಶಂಬಿಯೂ ಅನಿತಾಳನ್ನು ಬಹಳ ಗೌರವಿಸುತ್ತಾಳೆ. ಪೊಲೀಸ್ ಠಾಣೆಯಿಂದ ತನ್ನನ್ನು ಬಿಡಿಸಿಕೊಂಡು ಬರಲು ಅನಿತಾ ಸಹಾಯ ಮಾಡಿದಾಗ, **“ನೀ ದೇವರಂತೆ ಬಂದು ಕಾಪಾಡಿದೆ”** ಎಂದು ಕೃತಜ್ಞತೆಯಿಂದ ಹೇಳುತ್ತಾಳೆ. ಅನಿತಾಳ ಸಹಾಯವನ್ನು ಜೀವನಪೂರ್ತಿ ಮರೆಯುವುದಿಲ್ಲ.
ಹೀಗೆ ಅವರಿಬ್ಬರ ಸಂಬಂಧವು **ಯಜಮಾನಿ ಮತ್ತು ಕೆಲಸದವಳ ಸಂಬಂಧವನ್ನು ಮೀರಿ ನಂಬಿಕೆ, ಪ್ರೀತಿ, ಕಾಳಜಿ, ಸಹಾನುಭೂತಿ ಮತ್ತು ಕೃತಜ್ಞತೆಯಿಂದ ಕೂಡಿದ ಗೆಳೆತನವಾಗಿ** ರೂಪುಗೊಂಡಿದೆ. ಈ ಗೆಳೆತನದ ಮೂಲಕ ಲೇಖಕಿ ಮನುಷ್ಯರ ನಡುವಿನ ನಿಜವಾದ ಸಂಬಂಧಕ್ಕೆ ಧರ್ಮ, ಜಾತಿ ಮತ್ತು ಅಂತಸ್ತುಗಳು ಅಡ್ಡಿಯಾಗಬಾರದು ಎಂಬ ಸಂದೇಶವನ್ನು ನೀಡಿದ್ದಾರೆ.
10. ಸಮಾಜದ ಬಡತನ–ಶ್ರೀಮಂತಿಕೆಯ ಅಂತಸ್ತು ಮನುಷ್ಯನ ವ್ಯಕ್ತಿತ್ವಕ್ಕಿಂತ ದೊಡ್ಡದಾಗಿ ಬದುಕನ್ನು ದುರಂತಗೊಳಿಸುತ್ತದೆ ಎಂಬುದು ಕಥೆಯ ಯಾವ ಘಟನೆಯಿಂದ ತಿಳಿದು ಬರುತ್ತದೆ? ವಿವರಿಸಿ.
‘ರಂಜಾನ್ ಮತ್ತು ಕಾಶಂಬಿ’ ಕಥೆಯಲ್ಲಿ **ಕಾಶಂಬಿಯ ಮೇಲೆ ತಾಳಿಸರ ಕಳ್ಳತನದ ಆರೋಪ ಬಂದ ಘಟನೆ**ಯಿಂದ ಸಮಾಜದಲ್ಲಿರುವ ಬಡತನ–ಶ್ರೀಮಂತಿಕೆಯ ಅಂತರವು ಮನುಷ್ಯನ ವ್ಯಕ್ತಿತ್ವಕ್ಕಿಂತ ದೊಡ್ಡದಾಗಿ ಪರಿಣಮಿಸಿರುವುದು ಸ್ಪಷ್ಟವಾಗುತ್ತದೆ.
ಕಾಶಂಬಿ ಬಡ ಮಹಿಳೆ. ಗಂಡನನ್ನು ಕಳೆದುಕೊಂಡು ತನ್ನ ಮಕ್ಕಳನ್ನು ಸಾಕಲು ಮನೆ ಮನೆ ಕೆಲಸ ಮಾಡುತ್ತಾಳೆ. ಆದರೆ ಅವಳು ಅತ್ಯಂತ **ಪ್ರಾಮಾಣಿಕ, ನಿಷ್ಠಾವಂತ, ಕಷ್ಟಪಟ್ಟು ದುಡಿಯುವ ಮತ್ತು ಆತ್ಮಗೌರವ ಹೊಂದಿರುವ ಮಹಿಳೆ**. ಅನಿತಾಳ ಮನೆಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ ಎಂದಿಗೂ ಯಾವುದೇ ವಸ್ತುವಿನ ಮೇಲೆ ಆಸೆಪಟ್ಟಿರಲಿಲ್ಲ. ಮನೆಯ ಚಿನ್ನಾಭರಣ ಮತ್ತು ಹಣವನ್ನು ನೋಡಿದರೂ ಅವಳು ಪ್ರಾಮಾಣಿಕವಾಗಿಯೇ ನಡೆದುಕೊಂಡಿದ್ದಳು.
ಆದರೆ ಶ್ರೀಮಂತ ಮನೆಯ ತಾಳಿಸರ ಕಳೆದುಹೋದಾಗ, ಆ ಮನೆಯವರು ಸಾಕ್ಷ್ಯಾಧಾರವಿಲ್ಲದಿದ್ದರೂ ಕಾಶಂಬಿಯನ್ನೇ ಅನುಮಾನಿಸುತ್ತಾರೆ. ಅವರ ಮನೆಯಲ್ಲಿ ಆ ದಿನ ಕಾಶಂಬಿ ಮಾತ್ರ ಕೆಲಸಕ್ಕೆ ಬಂದಿದ್ದಳು ಎಂಬ ಕಾರಣಕ್ಕೆ ಅವಳ ಮೇಲೆ ಕಳ್ಳತನದ ಆರೋಪ ಮಾಡುತ್ತಾರೆ. ಬಡವಳಾಗಿರುವುದರಿಂದ ಅವಳನ್ನು ಸುಲಭವಾಗಿ ಅನುಮಾನಿಸಬಹುದು ಎಂಬ ಸಾಮಾಜಿಕ ಮನೋಭಾವ ಇಲ್ಲಿ ವ್ಯಕ್ತವಾಗುತ್ತದೆ.
ಕಾಶಂಬಿಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಾಗುತ್ತದೆ. ತನ್ನ ನಿರಪರಾಧಿತ್ವವನ್ನು ಸಾಬೀತುಪಡಿಸಲು ಅವಳು ಕಣ್ಣೀರಿಡಬೇಕಾಗುತ್ತದೆ. **ಬಡತನವು ಅವಳ ವ್ಯಕ್ತಿತ್ವದ ಮೇಲೆ ಅನುಮಾನದ ನೆರಳನ್ನು ಬೀರುತ್ತದೆ.** ಅವಳ ಹಲವು ವರ್ಷಗಳ ಪ್ರಾಮಾಣಿಕತೆ ಮತ್ತು ಒಳ್ಳೆಯ ನಡತೆಗಿಂತ ಅವಳ ಸಾಮಾಜಿಕ–ಆರ್ಥಿಕ ಸ್ಥಿತಿಯೇ ದೊಡ್ಡದಾಗಿ ಕಾಣುತ್ತದೆ.
ಇದಕ್ಕೆ ವಿರುದ್ಧವಾಗಿ ಅನಿತಾ ಕಾಶಂಬಿಯ ನಿಜವಾದ ವ್ಯಕ್ತಿತ್ವವನ್ನು ಅರಿತಿದ್ದಾಳೆ. ಅವಳು ಕಾಶಂಬಿಯ ಪರವಾಗಿ ಪೊಲೀಸ್ ಠಾಣೆಗೆ ಹೋಗಿ, **“ಅವಳು ಕಳ್ಳತನ ಮಾಡಲು ಸಾಧ್ಯವಿಲ್ಲ”** ಎಂದು ಧೈರ್ಯವಾಗಿ ಹೇಳುತ್ತಾಳೆ. ಕಾಶಂಬಿಯ ವ್ಯಕ್ತಿತ್ವವನ್ನು ಅರಿತಿರುವ ಅನಿತಾಳಿಗೆ ಅವಳ ಬಡತನ ಮುಖ್ಯವಾಗುವುದಿಲ್ಲ.
ಈ ಘಟನೆಯ ನಂತರ ಕಾಶಂಬಿಗೆ ಮನೆ ಕೆಲಸ ಮಾಡುವುದರ ಮೇಲೆಯೇ ಅಸಹ್ಯ ಉಂಟಾಗುತ್ತದೆ. ತನ್ನ ಪ್ರಾಮಾಣಿಕತೆಯ ಹೊರತಾಗಿಯೂ ಬಡವಳಾದ ಕಾರಣಕ್ಕೆ ಅನುಮಾನಿಸಲ್ಪಟ್ಟ ನೋವು ಅವಳನ್ನು ಕಾಡುತ್ತದೆ. ಕೊನೆಗೆ ಅವಳು ಮನೆ ಕೆಲಸವನ್ನು ಬಿಟ್ಟು ಶೋರೂಂನಲ್ಲಿ ಕೆಲಸಕ್ಕೆ ಸೇರುತ್ತಾಳೆ.
ಹೀಗಾಗಿ ಈ ಘಟನೆಯ ಮೂಲಕ **ಮನುಷ್ಯನ ಗುಣ, ಪ್ರಾಮಾಣಿಕತೆ ಮತ್ತು ವ್ಯಕ್ತಿತ್ವಕ್ಕಿಂತ ಅವನ ಬಡತನ ಅಥವಾ ಶ್ರೀಮಂತಿಕೆಯನ್ನು ಆಧರಿಸಿ ಸಮಾಜ ನಿರ್ಣಯಿಸುವುದು ಎಷ್ಟು ಅನ್ಯಾಯ ಮತ್ತು ದುರಂತಕಾರಿ** ಎಂಬುದನ್ನು ಲೇಖಕಿ ಪರಿಣಾಮಕಾರಿಯಾಗಿ ತೋರಿಸಿದ್ದಾರೆ.
