ಮತ್ತದೇ ಆಕಾಶ ತನ್ನೆಲ್ಲ ನಕ್ಷತ್ರಗಳ ಸಾಕ್ಷಿಯಲ್ಲಿ ರಾತ್ರಿಯ ಕತ್ತಲನ್ನು ಜಗಿಯುತ್ತಿತ್ತು. ಎಂದಿನಂತೆಯೇ ನೀರವತೆಯ ಆರಳಿಕೆಯಲ್ಲಿ ಕೇರಿ ತೂಕಡಿಸುತ್ತಿತ್ತು.
ಯಾವತ್ತೂ ಮುಗಿಯದ ಆತಂತ್ರಗಳ ಅಲೆಗಳ ಮೇಲೆ ಕಲ್ಪನೆಯ ದೋಣಿ ಕಟ್ಟಿ, ಅದರಲ್ಲಿ ಕುಳಿತು ನಾವೆಲ್ಲ ತೇಲಿ ತೇಲಿ ದೂರ ದೂರಕ್ಕೆ ಹಾರಿಹೋಗುತ್ತಿದ್ದೆವು. ಅದೇ ಹಳೆಯ ಕಾಲದ ನಮ್ಮ ಪೂರ್ವಿಕರ ಕತೆಯನ್ನು ನಮ್ಮ ತಾತ ದಣಿದ ತನ್ನ ಕಾಲಾಂತರದ ಸ್ವರದಲ್ಲಿ ನಿಧಾನಕ್ಕೆ ಹೇಳುತ್ತಿದ್ದ. ಭೂಮಿತಾಯಿ ನಮ್ಮನ್ನೆಲ್ಲ ತನ್ನ ಹೊಟ್ಟೆಯ ಮೇಲೆ ಮಲಗಿಸಿಕೊಂಡು, ಗಾಳಿ ಬೀಸಿನ ಜೋಗುಳ ಹಾಡಿಸಿದಂತೆ ಏನನ್ನೋ ಆಲೋಚಿಸುತ್ತಿದ್ದಳು. ನಾವೆಲ್ಲ ಹಿಂಡು ಬಳಗದ ಹೈಕಳು ನಮ್ಮ ಪೂರ್ವಿಕರ ಕನಸನ್ನು ಮನಸ್ಸಿಗೆ ಬಿತ್ತಿಕೊಂಡು ಆಲಿಸತೊಡಗಿದೆವು.
ಆಗ ಒಂದು ಕಾಲದಲ್ಲಿ ಅವನೊಬ್ಬನಿದ್ದ. ಊರೂರು ಅಲೆವ ಅಲೆಮಾರಿ ದೊಂಬನಾಗಿದ್ದ. ತನ್ನ ಪುಟ್ಟ ಸಂಸಾರ ಕಟ್ಟಿಕೊಂಡು ಸುತ್ತೇಳು ಹಳ್ಳಿಗಳಲ್ಲೂ ದೊಂಬರಾಟ ಆಡಿ, ಕುಣಿಸಿ, ನಲಿಸಿ ಸವಾಲು ಎಸೆದು. ಅವುಗಳ ಬಿಡಿಸಿ ತಂತ್ರ-ಮಂತ್ರ ವಿದ್ಯೆಗಳಿಂದ ಎಲ್ಲರಿಗೂ ಬೆರಗು ಹುಟ್ಟಿಸಿ ಮೋಡಿ ಮಾಡಿಬಿಟ್ಟಿದ್ದ. ಅವನ ಪೂರ್ವಿಕರೋ, ಅವನಂತೆಯೇ ಊರೂರು ಅಲೆದು ನೆಲೆಯಿಲ್ಲದೆ ದಣಿದು. ಕನಸುಗಳ ಬೆಟ್ಟ, ಕಟ್ಟಿ ಏನೊಂದೂ ಪಡೆಯದೆ ಏನೊಂದೂ ಸಾಧಿಸದೆ ಅಲೆವ ಮೋಡಗಳಂತ ಲೋಕದ ಗದ್ದಲದ ಮಿಂಚು, ಗುಡುಗುಗಳ ಆರ್ಭಟಕ್ಕೆ ಸಿಲುಕಿ ನೀರಾಗಿ ಹರಿದು ಹೋಗಿದ್ದರು. ಹೀಗಾಗಿಯೇ ಆ ದೊಂಬನಿಗೆ ಎಂಥದೋ ವಿಚಿತ್ರ ಹಾರಾಟದ ಕನಸು ಯಾವಾಗಲೂ ಕಾಡುತ್ತಿತ್ತು.
ಹೀಗೆಯೇ ಒಂದು ದಿನ ಆಕಾಶವನ್ನು ದಿಟ್ಟಿಸಿ ಕತ್ತಲನ್ನು ಸೀಳುವಂತೆ ನಕ್ಷತ್ರಗಳ ಕಣ್ಣಿಗೆ ತುಂಬಿಕೊಳ್ಳುವಾಗ ಯಾರೋ ಬಂದಂತಾಯಿತು. ಕಪ್ಪು ಛಾಯೆಗಳು ಅವನ ಸುತ್ತವೇ ಮುತ್ತಿಕೊಂಡಂತಾಯಿತು. ಆ ನೆರಳುಗಳು ಒಂದೊಂದಾಗಿ ಅವನ ದೇಹ ತುಂಬಿಕೊಂಡವು. ಅನಾದಿ ಕಾಲದ ಪೂರ್ವಿಕರ ಆತ್ಮಗಳು ರೆಕ್ಕೆಯಾಗಿ ಬಂದು ಆ ಬಡ ದೊಂಬನ ರಟ್ಟೆಯಲ್ಲಿ ಮಾಂತ್ರಿಕವಾಗಿ ಲೀನವಾಗಿದ್ದವು. ಅವನೊಳಗೆ ಹಾರುವ ಚಮತ್ಕಾರ ಮಾಯಾಮಯವಾಗಿ ಬಂದುಬಿಟ್ಟಿತ್ತು. ಊರೂರು ದಿಬ್ಬಗಳ ಮೇಲೆ ಹತ್ತಿ ಎತ್ತರದ ಮರವೇರಿ. ಮೇಲಿಂದ ಕೆಳಕ್ಕೆ ಧುಮುಕಿ ಹಾಯಾಗಿ ಹಕ್ಕಿಯಂತೆ ಇಳಿದು, ಮತ್ತೆ ಮತ್ತೆ ದಿಬ್ಬದ ಅಷ್ಟೂ ಎತ್ತರಕ್ಕೆ ಒಂದೇ ವೇಗದಲ್ಲಿ ಓಡಿ ಓಡಿ ಹೋಗಿ ದಿಬ್ಬದ ಆಚೆ ತುದಿಯ ತಳಕ್ಕೆ ಧುಮುಕಿ ಚೆಂದದಿ ಕೆಳಕ್ಕೆ ಬಂದು ಏನೂ ಆಗದವನಂತೆ ರೆಕ್ಕೆ ಬೀಸಿ ಹಿತವಾಗಿ ನಕ್ಕವನಂತೆ ಇಡೀ ಸುತ್ತೇಳು ಹಳ್ಳಿಗಳಲ್ಲೂ ಸೋಜಿಗದ ಮಾತಾಗಿ ಹೋದೆ. ಹಾರುವ ಮಾಯಾವಿ ದೊಂಬ
ಎಂದು ಜನ ಅವನಿಗೆ ಬಿರುದು ಕೊಟ್ಟರು. ಅವನ ಹೊಟ್ಟೆ-ಬಟ್ಟೆಗೆ ತಮ್ಮ ಘನತೆ. ಗೌರವ, ಗತ್ತು, ಗರ್ವ, ಸ್ಥಾನಮಾನಗಳಿಗೆ ಶಕ್ರತೆ ಮಡಿಗಾಸನ್ನೋ ಹೊಗಳಿಕೆಯ ಮಾತನ್ನೋ ಅವನ ಮೇಲೆ ಎಸೆದರು.
ದಿನೇ ದಿನೇ ದೊಂದಿನ ಖ್ಯಾತಿ ಮನೆಮಾತಾಯಿತು. ಅವನು ಬಂದಲ್ಲಿ, ಹೋದ ಜನ ಜಮಾಯಸತೊಡಗಿದರು. ಇವನೊಬ್ಬ, ಅತಿಮಾನುಷ ವ್ಯಕ್ತಿಯೇ ಇರಬೇಕೆಂದು ಅನೇಕರು ಅನುಮಾನಪಟ್ಟರು. ಒಬ್ಬ ಯಃಕಶ್ಚಿತ್ ದೊಂಬನಿಗೆ ಹಾರುವ ವಿದ್ಯೆ ಬಂದದ್ದಾದರೂ ಹೇಗೆಂದು ಹಲವರು ಅಸೂಯೆಪಟ್ಟರು. ಒಟ್ಟಿನಲ್ಲಿ ದೊಂಬನ ಆಟಗಳಿಗಾಗಿ ಆನೇಕ ಕಾರುಗಳಿಂದ ಜನ ಬಂದು ಕಿಕ್ಕಿರಿಯತೊಡಗಿದರು. ಆ ದೊಂಬ ಸರಿಸುಮಾರು ಎಲ್ಲಹಳ್ಳಿ ಹಾರುತ್ತಾ ಹಾರಾಡುತ್ತಾ ತಾನು ಎಲ್ಲಿಗೆ ಹೋಗಬೇಕೋ ಎಂದು ತನ್ನನ್ನೇ ಪ್ರಶ್ನಿಸಿಕೊಂಡ. ಆಟ ಗಳಲ್ಲೂ ಆಟ ತೋರಿಸುತ್ತಾ ನಡೆದ. ಅವನೊಳಗೆ ಪೂರ್ವಿಕರು ಸೇರಿಕೊಂಡಿದ್ದರು. ಹೀಗೆ ಮುಗಿಸಿ ದಣಿದು ಬಂದು ಹೆಂಡತಿ, ಮಕ್ಕಳನ್ನು ಮರದ ಕೆಳಗೆ ಕೂರಿಸಿ ಅಲ್ಲೊಂದು ದಿಬ್ಬದ ತುದಿಗೆ ಹೋಗಿ ಕುಳಿತ. ವಿಸ್ತಾರವಾದ ಬಯಲು ಕಣ್ಣ ಉದ್ದಕ್ಕೂ ಹಸಿರು ತುಂಬಿಕೊಂಡು ಮಲಗಿತ್ತು. ಅದೇ ಬಯಲನ್ನು ತದೇಕಚಿತ್ತ ಧ್ಯಾನದಿಂದೆಂಬಂತೆ ಎಷ್ಟೋ ಹೊತ್ತಿನ ತನಕ ನೋಡಿದ. ನೋಡೇ ನೋಡಿದ. ಜಗದ ಎಲ್ಲ ಇರುವಿಕೆಯನ್ನೂ ಮರೆತಿದ್ದ, ಭೂತಾಯಿ ಎದ್ದು ಕುಳಿತಂತಾಯಿತು. ಅವನ ಕಡೆ ನೋಡಿ ನಗಾಡಿದಳು. ಇಳಿವ ಸೂರ್ಯನ ಹೊತ್ತು, ಅವಳ ಬಾಯೆಲ್ಲ ತಾಂಬೂಲ ಜಗಿದಂತಿತ್ತು. ಏನೋ ಹೇಳಿದಂತಿತ್ತು. ದಿಟ್ಟಿಸಿ ಆಲಿಸಿದ. ಆ ಕೋಡುಗಲ್ಲ ಬೆಟ್ಟದ ಕಣಿವೆ ಕಿಬ್ಬರಿಯ ಮರೆಯಿಂದ ಯಾರೋ ತನ್ನನ್ನೇ ಕರೆದಂತಾಯಿತು.
"ಯಾಕೋ ದೊಂಬಾ, ಗೊತ್ತಾಗಲಿಲ್ಲವೇನೋ, ನನ್ನನ್ನು ಮರೆತುಬಿಟ್ಟೆಯಾ. ಹೀಗೇ ಎಷ್ಟು ದಿನ ಅಂತ ಊರೂರು ಅಲೆಯುತ್ತೀಯೆ? ನನ್ನ ಮೊಲೆಹಾಲು ನಿನಗೆ ಬೇಡವೇನೂ. ನನ್ನ ಮಣ್ಣ ಹಸಿರು ಸಿರಿ ನಿನಗೆ ಬೇಡವೇ. ಬಾ ಮಗನೇ ಬಾರೋ ನನ್ನ ದೊಂಬನೇ ಎಂದು ಕರೆದಂತಾಗಿ ಬೆಚ್ಚಿದ. ಆಹಾ ತಾಯಿ ಎಂದು ಉದ್ಗರಿಸಿದ.
ನಿನ್ನ ಮಣ್ಣಿನ ಭಾಗ್ಯ ನನಗೆ ಬೇಕು ತಾಯಿ ಎಂದು ಎದ್ದು ಬಂದ.
ಅವನೊಳಗೆ ಈ ಮಣ್ಣ ಕನಸು ಹೂವು ಬಿಟ್ಟಿತ್ತು. ಅದನ್ನು ಕಂಡ ಹೆಂಡತಿ, ಮಕ್ಕಳು ಅನಾದಿ ಕಾಲದ ಯಾವುದೋ ಒಂದು ಬಯಕೆ ಬಾಯಿಗೆ ಬಂದಂತೆ ವಿಸ್ಮಿತರಾದರು. ಹಗಲು, ರಾತ್ರಿಗಳು ಮತ್ತೆ ಮತ್ತೆ ಹುಟ್ಟಿ ಬೆಳೆದು ಹೋದವು. ದೊಂಬನ ಹಾರುವ ಖ್ಯಾತಿ ಮುಗಿಲುಮುಟ್ಟಿತು. ದಿನ ಕಳೆದಂತೆ ಹಾರುವ ವಿಷಯದಲ್ಲಿ ಅವನೊಂದು ಸವಾಲಿನಂತೆಯೇ ಆದ. ಈ ಹಾರುವ ದೊಂಬ ಮುಂದೊಂದು ದಿನ ಯಾವೊಂದು ಆಪತ್ತನ್ನು ತರುವನೋ ಏನೋ ಎಂದು ಕೆಲವರು ಮಾತನಾಡಿಕೊಂಡರು. ಏನೇ ಆಗಲಿ ಯಃಕಶ್ಚಿತ್ ದೊಂಬ ನಮ್ಮ ತಲೆಯ
ಮೇಲೆಲ್ಲಾ ಹಾರಾಡುವುದು ಕೇಡಿನ ಸೂಚನೆ ಎಂದು ಕೆಲವರು ಬಗೆದರು. ಆದರೂ ಜನ ಅವನ ಮೋಡಿಯಿಂದ ಬಿಡಿಸಿಕೊಂಡಿರಲಿಲ್ಲ.
ಸೀಮೆಯ ಎದುರು ಹೀಗೇ ಊರೂರು ದಾಟಿ ಬಂದ. ಆ ಸೀಮೆಯ ಹಳ್ಳಿಗಳಿಗಲ್ಲ ಹಿರಿದಾದ ದೊಡ್ಡ ಊರೊಂದು ಅವನ ಪಾಲಿಗೆ ಬಾಕಿ ಉಳಿದಿತ್ತು. ಆ ಊರಲ್ಲಿ ಹೋಗಿ ದೊಂಬರಾಟವನ್ನು ಹೂಡಿದ. ಸೀಮೆಯ ಜನವೆಲ್ಲ ಆ ದಿನ ಅವನ ಅದ್ಭುತ ಮಾಂತ್ರಿಕ ಆಟಗಳನ್ನು ನೋಡಿ ಸವಿಯಲು ನೆರೆದಿದ್ದರು. ದೊಂಬ ಒಂದೊಂದಾಗಿ ತನ್ನ ಚಮತ್ಕಾರಗಳನ್ನು ತೋರುತ್ತಾ ಎಲ್ಲರನ್ನೂ ನಿಬ್ಬೆರಗಾಗಿಸುತ್ತಿದ್ದ. ಜನ ಮೈಮರೆತು ಅವನಲ್ಲೇ ಮುಳುಗಿ ಹೋಗುತ್ತಿದ್ದ ಎಂದೂ ಇಲ್ಲದಷ್ಟು ಉತ್ಸಾಹ, ಹುಮ್ಮಸ್ಸು, ಆವೇಶ ಅವತ್ತು ದೊಂಬನಿಗೆ ಬಂದಂತಿತ್ತು. ಪರಾಕ್ರಮವನ್ನೂ, ಮಂತ್ರವಿದ್ಯೆಯನ್ನೂ ಪ್ರದರ್ಶಿಸಬೇಕೆಂದು ಆತ ನಿರ್ಧರಿಸಿದಂತಿತ್ತು. ತನ್ನ ಕಂಡು ಕೇಳರಿಯದ ಅತಿಮಾನುಷ ಘಟನೆಗಳಿಗೆ ತಾನು ಸಾಕ್ಷಿದಾರರಾಗುತ್ತಿದ್ದೇವೆಂದು ಜನ ಹರ್ಷಚಿತ್ತರಾಗಿ, ಮೂಕರಾಗಿ ಹೋಗಿದ್ದರು. ಇಡೀ ಊರಿಗೆ ಊರೇ ಅವನ ವಿದ್ಯೆಯ ಮುಂದೆ ದಾಸನಂತೆ ಬಿದ್ದು ಕೊಂಡಿತ್ತು. ಅಂಥ ಒಂದು ದೊಡ್ಡ ಊರಿಗೆ ತಕ್ಕಂತೆಯೇ ಅಲ್ಲಿ ಅನೇಕ ರೀತಿಯ ದೊಡ್ಡ ದೊಡ್ಡ ಜನರಿದ್ದರು. ಜತೆಗೆ ಆ ಊರಿಗೇ ಏಳು ಸುತ್ತೇಳು ಹಳ್ಳಿಗಳಿಗೂ ದೊರೆಯಂತಿದ್ದ ಒಬ್ಬ ಅಸಾಮಾನ್ಯ ಪಾಳೆಯಗಾರನೂ ಅಲ್ಲಿದ್ದ.
ಅವ ಆ ಪಾಳೆಯಗಾರನ ಅಪ್ಪಣೆಯಿಲ್ಲದೆ ಏನೂ ನಡೆಯಲು ಸಾಧ್ಯವಿರಲಿಲ್ಲ. ಅಪೇಕ್ಷೆಯಂತೆಯೇ ಸುತ್ತೇಳು ಹಳ್ಳಿಗಳೂ ಹೊಂದಿಕೊಂಡಿದ್ದವು. ಕಾಲಾಂತರದಿಂದಲೂ ಪಾಳೆಯಗಾರರು ಮರದ ಆ ಹಳ್ಳಿಗಳಲ್ಲಿ ಈಗ ಈ ಯಃಕಶ್ಚಿತ್ ದೊಂಬ ಸವಾಲಿನಂತೆ ಆಟಗಳನ್ನು ಕಟ್ಟಿ ಎಲ್ಲರನ್ನೂ ತನ್ನ ಮೋಡಿಯ ತೆಕ್ಕೆಯಲ್ಲಿ ಹದ್ದು ಬಸ್ತಿನಲ್ಲಿಟ್ಟುಕೊಂಡಂತೆ ಸಂದರ್ಭವನ್ನು ಸೃಷ್ಟಿಸಿದ್ದ. ಹಳೆಯ ಕಾಲದ ಆ ಪಾಳೆಯಗಾರನನ್ನು ಕಂಡರೆ ಜನರು ನಡುಗುತ್ತಿದ್ದರು.
ಪಾಳೆಯಗಾರನಿಗೆ ದೊಂಬ ಬಂದಿರುವ ಸುದ್ದಿ ತಿಳಿಯಿತು. ಬಹಳ ದಿನಗಳಿಂದಲೂ ಆ ದೊಂಬನನ್ನು ಅವರು ನಿರೀಕ್ಷಿಸಿದ್ದರು. ಆತ ಬಂದು ತನ್ನ ಕಾಲಬುಡದಲ್ಲಿ కుళకు ತನ್ನ ಭಿನ್ನವಿಸಿಕೊಳ್ಳುತ್ತಾನೆಂದು ಭಾವಿಸಿದ್ದರು. ಆ ದೊಂಬ ಪಾಳೆಯಗಾರನ ಬಳಿ ಎಂದೂ ವಿದ್ಯೆಯನ್ನು ಮನ್ನಿಸಬೇಕೆಂದು ಬಂದಿರಲಿಲ್ಲ. ಈ ದೊಂಬ ತನ್ನನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಆಟ ಹಾಕಿರುವನೇನು ಎಂದು ಸಿಟ್ಟಾಗಿ ಸ್ವತಃ ಅವರೇ ದೊಂಬನ ಕಡೆಗೆ ಬಂದರು. ಇಡೀ ಅವನ ಸೀಮೆಯೇ ಆ ಸಾಮಾನ್ಯ ದೊಂಬನ ಮುಂದೆ ದೈನೇಸಿಯಂತೆ ಬಿದ್ದು ಕೊಂಡಿತ್ತು. ಆ ಜನಗಳೆಲ್ಲ ನೀನೇ ತಮಗೆ ದಾರಿತೋರಬೇಕೆಂಬಂತೆ ಆಲಾಪಿಸುತ್ತಾ ಕಾಪಾಡು ಎಂದು ಬೇಡುತ್ತಿರುವಂತೆ ಪಾಳೆಯಗಾರನ ಜನದಟ್ಟಣೆಯಲ್ಲಿ ಪಾಳೆಯಗಾರ ತಬ್ಬಲಿಯಂತೆ, ಬೇವಾರ್ಸಿಯಂತೆ. ಯಾರಿಗೂ ಮನಸ್ಸಿಗೆ ಕಂಡರು. ಕಿಕ್ಕಿರಿದ
ಬೇಡವಾದ ತೂತು ಕಾಸಿನಂತಾದಂತೆ, ತನ್ನನ್ನೇ ತಾನು ಭ್ರಮಿಸಿ ಬೆಚ್ಚಿ ಹಾಗೇ ಕ್ರೋಧನಾಗಿ ಜನರನ್ನೇ ನುಂಗುವಂತೆ ನೋಡಿದ. ಪಾಪ; ಯಾರೊಬ್ಬರೂ ಆತನ ಕಡೆಗೆ ತಿರುಗಿ ನೋಡಲಿಲ್ಲ. ದೊರೆಯ ಆಗಮನವನ್ನೇ ಯಾರೂ ಗುರುತಿಸಲಿಲ್ಲ. ಥರಥರ ನಡುಗುತ್ತಿದ್ದ ಜನ ಇವತ್ತು ಇಷ್ಟೊಂದು ಕ್ರೂರವಾಗಿ ನನ್ನನ್ನು ತಿರಸ್ಕರಿಸುತ್ತಿರುವರೇ ಎಂದು ಕೆಂಡವಾದ.
ದೊಂಬನ ಮೈಮರೆಸುವ ಆಟಗಳಲ್ಲಿ ಮುಳುಗಿದ್ದವರಿಗೆ ಪಾಳೆಯಗಾರ ಬಂದದ್ದೇ ತಿಳಿದಿರಲಿಲ್ಲ. ಸ್ವತಃ ಆ ಜನ ತಮ್ಮನ್ನೇ ಮರೆತುಕೊಂಡಿದ್ದರು. ದೊಂಬನ ಮುಂದೆ ಪಾಳೆಯಗಾರ ಕಣ್ಣಿಗೆ ಕಂಡರೂ ಕಾಣದಂತಾದರು. ಮೋಡಿಯ ಸಿರಿಯಲ್ಲಿ ಊರ ದಣಿಗೆ ನಮಸ್ಕರಿಸುವ ಯಾಂತ್ರಿಕ ಕ್ರಿಯೆಯೂ ಮರೆತು ಹೋಗಿತ್ತು. ಆ ಊರ ದೊರೆಗೆ ಅವಮಾನವಾಯಿತು. ದೊಂಬನಿಗೂ ದಣಿ ಬಂದದ್ದು ತಿಳಿಯಲಿಲ್ಲ.
ಪಾಳೆಯಗಾರ ಒಮ್ಮೆಗೇ ಇಡೀ ಸಂದರ್ಭದ ಕತ್ತನ್ನೇ ಕತ್ತರಿಸಿ ಹಾಕುವಂತೆ ಒಮ್ಮೆ ಹೂಂಕರಿಸಿ, ಗರ್ಜಿಸಿ 'ಹೇ ದೊಂಬಾ' ಎಂದು ಕೂಗು ಹಾಕಿ ರಂಗದ ಮಧ್ಯೆ ಬಂದು ನಿಂತು, ಸೊಂಟದ ಕಠಾರಿಯನ್ನು ರಭಸವಾಗಿ ಹೊರತೆಗೆದು ಅದನ್ನೊಮ್ಮೆ ಎಲ್ಲ ಕಡೆ ಝಳಪಿಸಿ ಮತ್ತೆ ಒಳಗಿಟ್ಟುಕೊಂಡು ಎಲ್ಲರನ್ನೂ ಬೆಚ್ಚಿಸಿದ. ಪಾಳೆಯಗಾರನ ಆಗಮನದಿಂದ ದೊಂಬ ಕೊಂಚವೂ ವಿಚಲಿತನಾಗಲಿಲ್ಲ. ಜನ ಅಯ್ಯೋ ಇದೇನಾಯ್ತು ಎಂದು ಕಣ್ಣು ಬಿಡುತ್ತಿದ್ದರು. ಮತ್ತಾರೋ ಗದ್ದಲದ ಮರೆಯಲ್ಲೇ ದೊಂಬನ ಮುಂದೆ ಪ್ರಾರ್ಥಿಸುತ್ತಿರುವಂತಿತ್ತು. ಹೇ ದೊಂಬಾ. ಬವಣೆಗಳೆಲ್ಲದರಿಂದ ನಮ್ಮನ್ನು ಪಾರು ಮಾಡಿ. ನಿನ್ನ ಹೆಗಲ ಮೇಲೆ ನಮ್ಮೆಲ್ಲರನ್ನೂ ಇನ್ನೆಲ್ಲಿಯಾದರೂ ಚೆಂದದ ಇನ್ನೊಂದು ಊರಿಗೆ, ಲೋಕಕ್ಕೆ ಕೊಂಡೊಯ್ದು ಬಿಸಾಡೋ, ಅಲ್ಲಿಯಾದರೂ ಬದುಕಿಕೊಳ್ಳುತ್ತೇವೆ ಎಂದು ವಿನಂತಿಸುವಂತಿತ್ತು, ಪಾಳೆಯಗಾರ ದೊಂಬನನ್ನು ತೀಕ್ಷ್ಯವಾಗಿ ನೋಡಿದ. ದೊಂಬನ ಮುಖದಲ್ಲಿ ನಗು, ನೋವು, ಬೇಸರ, ಸಿಟ್ಟು, ಎಲ್ಲವೂ ಮಿಳಿತಗೊಂಡಿದ್ದವು.
ಪಾಳೆಯಗಾರ ಕ್ರೋಧದಿಂದ ಕೂಗಿದ:
"ಹೇ ದೊಂಬಾ, ನಾನು ಯಾರೆಂದು ಬಲ್ಲೆಯೇನೋ?"
"ಅರ್ಥವಾಗುತ್ತದೆ ಸ್ವಾಮಿ, ನೀವು ಈ ಊರಿನ ದಣಿಗಳಿರಬೇಕು."
"ನಿನಗೆ ಇಲ್ಲಿ ಆಟ ಕಟ್ಟಿ ಮೋಡಿ ಮಾಡಲು ಯಾರು ಹೇಳಿದವರು? ನನ್ನ ಸೀಮೆಯಲ್ಲಿ ನನ್ನನ್ನೇ ಕಡೆಗಣಿಸಲು ನಿನಗೆಷ್ಟು ಧೈರ್ಯ?"
"ದಣಿಗಳೇ, ಊರೂರು ಅಲೆವ ದೊಂಬ ನಾನು, ನನ್ನ ಹೆಂಡತಿ, ಮಕ್ಕಳ ಹೊಟ್ಟೆ ಬಟ್ಟೆಗೆ, ನನ್ನ ನೆಮ್ಮದಿಗೆ ಈ ದೊಂಬರಾಟವನ್ನು ಈ ಜನಗಳೆದುರು ಆಡಿ ತೋರಿ ಬದುಕುವವನು ನಾನು. ನಾನು ಕಲಿತ ವಿದ್ಯೆ ಮತ್ತು ಈ ಜನ ಇವಷ್ಟೇ ನನ್ನ
ಲೋಕ. ನಾನು ಕಡೆಗಣಿಸಲು ಎಷ್ಟರವನು; ನೀವೆಷ್ಟರವರು. ನಿಮಗೆ ಇಷ್ಟವಿದ್ದರೆ ಹೇಳಿ. ನಿಮಗೂ ನನ್ನ ಆಟಗಳನ್ನು ತೋರಿಸುತ್ತೇನೆ."
ಪಾಳೆಯಗಾರನಿಗೆ ಏನೋ ದೊಂಬನ ಕೆಚ್ಚನ್ನು ৮০ ಹೊಳೆದಂತಾಯಿತು. ಈ ಜನರ ಇದಿರು ಇವನೊಡನೆ ಮಾತಿಗಿಳಿದು ಉಪಯೋಗ ಇಲ್ಲ ಎನಿಸಿತು.. ಈ ದೊಂಬ ಬಹಳ ಹುಷಾರಿದ್ದಾನೆಂದು ಇನ್ನೇನನ್ನೋ ಆಲೋಚಿಸಿದ.
"ಹೇ ದೊಂಬಾ, ನಿನ್ನ ತಂತ್ರ-ಮಂತ್ರಗಳನ್ನು ನಾನು ಬಲ್ಲೆ. ಸೀಮೆಗೇ ಇಲ್ಲದ ಮಹಾ ಹಾರಾಟಗಾರನೆಂದು ಗರ್ವಪಡುವ ನಿನ್ನ ವಿದ್ಯೆಯನ್ನು ನಾನೂ ಒಂದು ಕೈ ನೋಡೇ ಬಿಡುತ್ತೇನೆ. ನಾನು ಹೇಳಿದಂತೆ ಆಟ ಹೂಡಬಲ್ಲೆಯೋ? ನಾನು ನಿರೀಕ್ಷಿಸಿದಷ್ಟು ಎತ್ತರದಿಂದ ಹಾರಬಲ್ಲೆಯೋ....?"
ಸವಾಲನ್ನು ದೊಂಬನಿಗೆ ಏನೋ ಮೈತುಂಬ ಹೊಕ್ಕಂತಾಯಿತು. ಅವನ ಪೂರ್ವಿಕರಲ್ಲಿ ಒಮ್ಮೆಗೇ ಮಿದುಳಿಗೆ ಬಂದು ಕುಳಿತರು. ನರನಾಡಿಗಳಲ್ಲಿ ಬೆರೆತರು. ಕಿವಿಯಲ್ಲಿ ಉಸುರಿದರು; "ಒಪ್ಪಿಕೋ, ಇದು ಸೂಕ್ತಕಾಲ, ಸುಸಂದರ್ಭ. ಒಲ್ಲೆ ಎನ್ನಬೇಡ. ಆ ಪಾಳೆಯಗಾರನ ಸವಾಲನ್ನು ಸ್ವೀಕರಿಸು. ನಾವೆಲ್ಲ ಒಟ್ಟಾಗಿ ಆರಿಯುವ, ತಿಳಿಯುವ, ದಾಟುವ, ಮೀರುವ ಒಪ್ಪಿಕೋ. ಅವನ ಸಾವಿರ ಸವಾಲನ್ನಾದರೂ ಕೇಳು, ಬೇಗ ಕೇಳು. ಅವನ ಸವಾಲನ್ನು ಮನ್ನಿಸು" ಎಂದಂತಾಗಿ ಉದ್ವೇಗದಿಂದ ಒಪ್ಪಿಕೊಂಡು ಬಿಟ್ಟ. "ಹೇಳಿ ದಣಿಗಳೇ ಹೇಗೆ ಆಟ ಕಟ್ಟಿ ಎಷ್ಟು ದೂರ ಹಾರಬೇಕೆಂದು ಹೇಳಿ" ಎಂದ. ಆ ತನಕ ಆ ದೊಂಬ ಯಾರ ಮುಂದೆಯೂ ತಲೆಬಾಗಿರಲಿಲ್ಲ. ಸವಾಲು ಎಸೆದವರ ಮುಂದೆ ಶರಣಾಗಿರಲಿಲ್ಲ. ಎಂಥ ಕಠೋರ ಕ್ಷಣದಲ್ಲೂ ತನ್ನ ಆತ್ಮಗೌರವವನ್ನು ಕಳೆದುಕೊಂಡಿರಲಿಲ್ಲ.
ಜನ ಥಟ್ಟನೆ ಬದಲಾದ ಸ್ಥಿತಿಯಿಂದ ಮಂಕಾದರು. ದೊಂಬನ ಖ್ಯಾತಿಯನ್ನು ಕಂಡು ಅಸೂಯೆ ಪಟ್ಟಿದ್ದವರು ಪಾಳೆಯಗಾರನ ಹಿಂದೆ ನಿಂತು ಏನೇನೊ ಪುಸಲಾಯಿಸಿ ಸವಾಲು ಬಿಗಿಸುತ್ತಿದ್ದರು. ಇಡೀ ವಾತಾವರಣವೇ ಕಲಸುಮೇಲೋಗರವಾಗಿ ಏನೋ ಕೇಡೋ ಏನೋ ಆಗಾಧವಾದದ್ದು ಈಗ ನಮ್ಮ ಮುಂದೆ ಘಟಿಸುತ್ತದೆಂಬಂತೆ ಜನ ನಿಂತರು. ಪಾಳೆಯಗಾರನನ್ನೂ ದೊಂಬನನ್ನೂ ಅದೇ ಕಣ್ಣುಗಳಿಂದ ದಿಟ್ಟಿಸಿದರು.
ದೊಂಬ ನಗುತ್ತ ಕೇಳಿದ:
"ಹೇಳಿ ಒಡೆಯರೇ, ನಾನು ಹೇಗೆ, ಎಲ್ಲಿಂದ, ಎಷ್ಟೆತ್ತರದಿಂದ ಎಷ್ಟು ದೂರ ಹಾರಬೇಕೆಂದು ತಿಳಿಸಿ."
"ದೊಂಬಾ, ನನ್ನ ಮಾತನ್ನು ಲಘುವಾಗಿ ತೆಗೆದುಕೊಳ್ಳಬೇಡ: ನನ್ನ ಅದಕೆ ಸವಾಲನ್ನು ಸ್ವೀಕರಿಸಿದ್ದೀಯ. ಅದರ ಅದರಂತೆಯೇ ನಡೆದುಕೊಳ್ಳಬೇಕು. ತಪ್ಪಿದೆಯೋ, ಆಮೇಲೆ ನಿನಗೆ ಉಳಿಗಾಲವಿಲ್ಲ. ನೀನು ಹೇಗೆ ಹಾರಬೇಕೆಂದರೆ... ನಿನಗೆ ಗೊತ್ತಲ್ಲಾ, ಈ ಊರ ಕೋಡುಗಲ್ಲ ಬೆಟ್ಟದ ತುದಿ ತುದಿಯ ಶಿಖರ.... ಆ ಶಿಖರದ ನೆತ್ತಿಯ ಮೇಲಕ್ಕೆ ಅದರೆತ್ತರದಿಂದ ಒಂದೇ ಏಟಿಗೆ ಕೆಳಕ್ಕೆ ಧುಮುಕಿ ಹಾರಿ ಹೋಗಬೇಕು. ನಿನಗೆ ಎಷ್ಟು ಶಕ್ತಿಯಿದೆಯೋ ಅಷ್ಟೂ, ದೂರ ಹಾರಿ ಹೋಗಿ ಬೀಳಬಹುದು. ಹಾಗೆ ಹಾರಲು ನಿನ್ನಿಂದ ಸಾಧ್ಯವೋ? ಹೇಳು. ಸಾಧ್ಯವಿದ್ದರೆ ಈಗಲೇ ಸಿದ್ಧನಾಗು."
ಜನ ಹಾ ಹೋ ಎಂದು ಉದ್ಗಾರ ತೆಗೆದರು. ದೊಂಬನ ಹೆಂಡತಿ, ಮಕ್ಕಳು ಮೂರ್ಛ ಹೋದವರಂತೆ ಬಿದ್ದುಕೊಂಡರು. ದೊಂಬ ವಿಚಲಿತನಾಗಲಿಲ್ಲ. ಜನರೆಲ್ಲರ ಸಾಕ್ಷಿಯಾಗಿ ಅವನೂ ಒಂದು ವಿನಂತಿಯನ್ನು ಪಾಳೆಯಗಾರನಿಗೆ ಒಡ್ಡಿದ-
"ಆಯಿತು ಪಾಳೆಯಗಾರರೇ ನಿಮ್ಮ ಪಂಥವನ್ನು ನಾನು ಒಪ್ಪಿ ಅದರಂತೆಯೇ ನಡೆದುಕೊಳ್ಳುವೆ. ಆದರೆ ನನ್ನದೂ ಒಂದು ವಿನಂತಿ ಇದೆ. ಒಂದೇ ಸಣ್ಣ ಬೇಡಿಕೆ ಇದೆ ಅಥವಾ ಒಂದು ಯಃಕಶ್ಚಿತ್ ಆಸೆಯಿದೆ. ಅದನ್ನು ಒಪ್ಪಿ ಅದರಂತೆಯೇ ನೀವೂ ನಡೆದುಕೊಳ್ಳುವಿರೋ"?
"ಖಂಡಿತವಾಗಿಯೂ ನಿನ್ನ ಆಸೆಯಂತೆಯೇ ಅದೇನೆಂದು ಮೊದಲು ತಿಳಿಸು." ನಡೆದುಕೊಳ್ಳುತ್ತೇನೆ.
ಜಿಗಿದು "ಏನೂ ಇಲ್ಲ ಒಡೆಯರೇ, ನಿಮ್ಮ ಪ್ರಕಾರ ಆ ಶಿಖರದ ನೆತ್ತಿಯಿಂದ ನಾನು
ಹಾರಿ ಹಾರಿ ನನ್ನ ಶಕ್ತಾನುಸಾರ ಎಷ್ಟು ದೂರ ಹಾರಿ ಹೋಗಬಲ್ಲೆನೋ ಅದಷ್ಟು ಭೂಮಿಯೂ, ಅದಷ್ಟು ಜಾಗವೂ, ಅದಷ್ಟು ನೆಲವೂ ನನ್ನದಾಗಬೇಕು. ನಮ್ಮವರದಾಗಬೇಕು." "ಹುಚ್ಚು ದೊಂಬಾ, ನಿನಗೆ ಎಷ್ಟು ಮೊಳ ಭೂಮಿ ಬೇಕೋ. ಆರು ಮೊಳ ಉದ್ದ ಮೂರು ಮೊಳ ಅಗಲ ಸಾಕಲ್ವೇನೋ. ಮೊದಲು ನನ್ನ ಪಂಥದಂತೆ ಹಾರು. ಆಮೇಲೆ ಮುಂದಿನ ಮಾತು."
"ಸಾಧ್ಯವಿಲ್ಲ ಒಡೆಯರೇ, ನನ್ನ ವಿನಂತಿಗೆ ನೀವೂ ಒಪ್ಪಿದರೆ ಮಾತ್ರ ಪಂಥ."
"ಆಯಿತು, ಈಗಿಂದೀಗಲೇ ನೀನು ಹಾರುವೇ ತಾನೆ?"
ದೊಂಬ ಒಂದೇ ಉಸಿರಿಗೆ ಏನೆಲ್ಲವನ್ನೂ ತುಂಬಿಕೊಂಡವನಂತೆ ಹೆಂಡತಿ, ಮಕ್ಕಳನ್ನು ಒಪ್ಪಿಸಿ ಗುಡ್ಡದ ಆ ತುದಿ ಶಿಖರದ ನೆತ್ತಿಯ ಕಡೆ ಓಡೋಡಿ ಹೋಗಿ ಹಾರಾರಿ ನಡೆದಂತೆ ಅತ್ತ ಕಡೆಗೆ ಹೊರಟೇ ಹೋದ. ಅಷ್ಟೆತ್ತರದಿಂದ ಕೆಳಕ್ಕೆ ಹೇಗೆ ಹಾರಿ ಬಂದು ಬೀಳುವೆಯೇ ನೋಡುತ್ತೇನೆ ಎಂಬಂತೆ ದಣಿಗಳು ಕಣಿವೆಯಾಳದ ಆ
ಬಯಲು ಪ್ರದೇಶಕ್ಕೆ ಹೋಗಿ ನಿಂತರು, ಒಂದಷ್ಟು ಜನ ಅಲ್ಲೆಲ್ಲ ಚದುರಿ ದೊಂಬನ ಸಾಹಸವನ್ನು ಕಣ್ಣುತುಂಬಿಕೊಳ್ಳಲು ಸಜ್ಜಾದರು. ಕಾಲ ಹಾರಿ ಹೋಗುತ್ತಿತ್ತು. ಭೂಮಿತಾಯಿ ಸುಮ್ಮನೆ ಮಲಗಿದ್ದಳು. ಗಿಡ. ಮರ, ಹೂಬಳ್ಳಿ, ಲತೆಗಳೆಲ್ಲ ಗಾಳಿಯ ಜತೆ ಸರಸವಾಡುತ್ತಿದ್ದವು. ಅನೇಕರು ಇದೊಂದು ಪಾಳೆಯಗಾರನ ಅಸ್ತಿತ್ವದ ಪ್ರಶ್ನೆ ಎಂದು ಹೇಳುತ್ತಿದ್ದರು. ನಿಜಕ್ಕೂ ಯಾಕೋ ಪಾಳೆಯಗಾರನೇ ಬೆವತು ಅಧೀರನಾಗಿ ಉದ್ವಿಗ್ನತೆಯಿಂದ ಬೆಂದಂತೆ ಇಡೀ ಸೀಮೆ, ತನ್ನ ಪ್ರಾಣ, ಮಾನ, ಅಂತಸ್ತುಗಳನ್ನು ಯಾವನೋ ಒಬ್ಬ, ಬೀದಿ ದೊಂಬನ ಕೈಯಲ್ಲಿಟ್ಟು ಅಥವಾ ಅಂಥವನೊಬ್ಬನ ಮೂಲಕ ಅವನ್ನೆಲ್ಲ ಸವಾಲಿಗಿಟ್ಟಂತೆ ಅನಿಸಿ, ಈ ಪಂಥದಲ್ಲಿ ನಾನೊಂದು ವೇಳೆ ಸೋತೇ ಹೋದರೆ ಆಮೇಲೆ ನಾನು ಇವನ ಕಾಲ ಬಳಿ ದಾಸಾನುದಾಸನಂತೆ ತಲೆ ತಗ್ಗಿಸಿ ದೀನನಾಗಿ ಬಿದ್ದುಕೊಳ್ಳಬೇಕಾಗುತ್ತದೆ ಎಂದು ಆತಂಕಗೊಂಡ. ಆತನ ಜಮೀನ್ದಾರಿ ದೇಹದಿಂದ ಮೊದಲ ಬಾರಿಗೆ ಬೆವರು ಸೋರುತ್ತಿತ್ತು. ದೊಂಬನ ನೋಟ ಸೀಳುತ್ತಿತ್ತು. ಅವನ ನಿಲುವಿನಲ್ಲಿ ಗತ್ತಿನಲ್ಲಿ ಅಸಂಖ್ಯಾತರು ಕೊರಳೆತ್ತಿ ಏನನ್ನೋ ಗಟ್ಟಿಯಾಗಿ ಕೇಳಿದಂತಿತ್ತು. ದಣಿಗಳೇ ಇದು ಜೀವನ್ಮರಣದ ಪ್ರಶ್ನೆ ಎಂದಂತೆ ಆಲಿತವಾಗಿತ್ತು. ದೊರೆಯ ಪೇಟ ಸಡಿಲವಾಗಿತ್ತು. ಜಾರಿ ಕೆಳಗೆ ಬಿದ್ದು ಮತ್ತಷ್ಟು ಭಯ ತಂದಿತು. ಜನ ಪವಾಡ ತಮ್ಮ ಸಾಕ್ಷಿಯಲ್ಲಿ ಘಟಿಸಿ ಅದರಿಂದ ಪಾವನಗೊಳ್ಳುತ್ತೇವೆ ಎಂಬಂತೆ ಓಡಾಡುತ್ತಿದ್ದರು. ಒಡೆಯ ಪೇಟವನ್ನು ಬಿಗಿಯಾಗಿ ಕಟ್ಟಿಕೊಂಡು ಬೇಗ ಜಿಗಿಯೋ ದೊಂಬಾ ಎಂಬಂತೆ ಸನ್ನೆ ಮಾಡುತ್ತಿದ್ದ.
ಒಂದಷ್ಟು, ಜನ ದೊಂಬನ ಹಿಂದೆಯೂ ಹಿಂಬಾಲಿಸಿದರು. ಅವನಾಗಲೇ ಕೋಡುಗಲ್ಲ ಬೆಟ್ಟದ ನೆತ್ತಿಯ ತುದಿ, ಶಿಖರದ ಶಲಾಕೆಯಂಥ ಮೊನೆಗೆ ಬಂದಿದ್ದ. ಸುತ್ತೇಳು ಹಳ್ಳಿಗಳು ಅವನ ಕಣ್ಣೆಳಗೆ ಒಮ್ಮೆ ತೇಲಿದವು. ಅಗಾಧವಾಗಿ ಭೂಮಿ ಚಾಚಿಕೊಂಡಿತ್ತು. ಅಲ್ಲೆಲ್ಲೋ ಪಾಳೆಯಗಾರ ನಿಂತಿರುವುದನ್ನೂ ತನ್ನ ಹೆಂಡತಿ, ಮಕ್ಕಳು ಮುನ್ನೆಚ್ಚರಿಕೆಯಂತೆ ಕೆಳಗೆ ನಿಂತು ತಮ್ಮ ಪುಟ್ಟ ಅಸಹಾಯಕ ಕೈಗಳನ್ನು ಚಾಚಿ, ಬೀಸಿ ನೋಡುತ್ತಿರುವುದೂ ಕಂಡಿತು.
ಸಮಯ ಬಂತು. ದೊಂಬ ಮಾಡಿಕೊಂಡಂತೆ ಸಿದ್ಧನಾದ. ಸೊಂಟಕ್ಕೆ ಸುತ್ತಿಕೊಂಡಿದ್ದ ದೊಡ್ಡ ಕರಿ ಕಂಬಳಿಯನ್ನು ತನ್ನ ಪೂರ್ವಿಕರನ್ನೆಲ್ಲ ರೆಕ್ಕೆ ಬಿಚ್ಚಿದ. ಆ ಕಂಬಳಿಯ ಒಳಗೆ ಅವನೆಲ್ಲ ಜನರ ಕನಸು, ಆಸೆ, ನಿರೀಕ್ಷೆಗಳ ಬುತ್ತಿಗಳೇ ತುಂಬಿದಂತಿತ್ತು. ಆ ಕಂಬಳಿಗೊಮ್ಮೆ ಭಕ್ತಿಯಿಂದ ಮುಟ್ಟಿ ನಮಸ್ಕರಿಸಿದ. ಆ ಭೂಮಿತಾಯಿಯನ್ನೂ ಧ್ಯಾನಿಸಿ ನೋಡಿ ಪ್ರಾರ್ಥಿಸಿದ. ತನ್ನ ಎರಡೂ ಕಾಲುಗಳಿಗೂ ಕೈಗಳಿಗೂ ಆ ಕಂಬಳಿಯ ನಾಲ್ಕೂ ತುದಿಗಳನ್ನು ಬಿಡಿಸಿ ಸೆಣಬಿನ ಹಗ್ಗ ಬಿಗಿದು ಬಲವಾಗಿ ಕಟ್ಟಿ ಬೆನ್ನ ಹಿಂದೆ ಬಿಟ್ಟುಕೊಂಡ. ಗಾಳಿ ರಭಸವಾಗಿ ಬೀಸುತ್ತಿತ್ತು. ಸೂರ್ಯ ಕೆಂಬಣ್ಣದಿಂದ ದೊಂಬನನ್ನೇ ದಿಟ್ಟಿಸುತ್ತಿದ್ದ. ಒಂದೇ ಮನಸ್ಸಿನಿಂದ ಆಳ ಪ್ರಪಾತದಂಥ ತಳಕ್ಕೆ ಆ ತುದಿ ಶಿಖರದ ನೆತ್ತಿಯಿಂದ ಒಂದೇ ಏಟಿಗೆ ಜಿಗಿದುಬಿಟ್ಟ,
ದೂರ ಜನ ನೆಗೆನೆಗೆದು, ಹಾರಾರಿ, ತೂರಿ ತೂರಿ, ತೇಲಿ ತೇಲಿ, ಹೊರಳಿ ಉರುಳಿ, ಜಿಗಿದು, ಚಿಮ್ಮಿ ರಕ್ಕೆ ಬೀಸಿ ಬೀಸಿ ತನ್ನ ಕೈಕಾಲುಗಳಿಗೆ ಕಟ್ಟಿದ್ದ ಕಂಬಳಿಯನ್ನೇ ಎಳೆದಳೆದು ದೂರ ಹಾರತೊಡಗಿದೆ. ಬಿದ್ದೇ ಹೋದ ಎಂದು ಹಾಹಾಕಾರವೆಬ್ಬಿಸಿದರು. ಅವನ ಹೆಂಡತಿ ಮಕ್ಕಳು ದಿಕ್ಕೆಟ್ಟವರಂತೆ ಅವನನ್ನೇ ನೋಡ ನೋಡುತ್ತಾ ದುಗುಡ, ಆನಂದ, ಸಾವು ಬದುಕು, ಆಸೆ ಹತಾಶ ಅನಿಮಿತೆಗಳನ್ನು ತುಂಬಿಕೊಂಡು ದೊಂಬ ಹಾರಾರಿದಂತೆ ಅವನ ನೆರಳು ಹಿಡಿದು ಓಡತೊಡಗಿದರು. ಅವನನ್ನು ಹಾರುತ್ತಿದ್ದಾನೆ ಎಂದು ನೋಡಿದ ಕೂಡಲೇ ಪಾಳೆಯಗಾರ ಏನನ್ನೋ ಆಗಾಧವಾಗಿ ಕಳೆದುಕೊಂಡವನಂತೆ, ಮುಖ ಕಪ್ಪಿಟ್ಟಂತಾಗಿ ಏನೂ ತೋಚದೆ ಉದ್ವೇಗದಲ್ಲಿ ನೋಡುತ್ತಲೇ ಇದ್ದ.
ದೊಂಬ ಹಾರಾರಿ ತೇಲಿ ತೇಲಿ ಜಿಗಿಯುತ್ತಲೇ ಇದ್ದ. ಮಾನವರೂಪಿ ಪಕ್ಷಿಯಂತೆ ಕಂಬಳಿ ರೆಕ್ಕೆಯ ಬೀಸುತ್ತಲೇ ಇದ್ದ. ನೆಲಕ್ಕೆ ಬಿದ್ದು ಅಪ್ಪಳಿಸುವ ಮುನ್ನ ಅವನನ್ನು ಆತುಕೊಳ್ಳಬಹುದೇ ಎಂದು ದೊಂಬನ ಹೆಂಡತಿ, ಗಂಡನ ನೆರಳನ್ನೇ ಹಿಂಬಾಲಿಸಿ ಓಡುತ್ತಾ ಹುಚ್ಚಿಯಂತೆ ಕೂಗಿಕೊಳ್ಳುತ್ತಿದ್ದಳು. ಹಾಗೇ ಎಷ್ಟೋ ದೂರ ದೊಂಬ ತೇಲಿಹೋದ. ಅವನ ಹಿಂದೆಯೇ ಪಾಳೆಯಗಾರನಾದಿಯಾಗಿ ಎಲ್ಲರೂ ಓಡಿಹೋದರು. ಗಾಳಿಯ ರಭಸ ಇಳೆಯತೊಡಗಿತು. ದೊಂಬ ದಣಿದಿದ್ದ. ಆಕಾಶದಲ್ಲಿ ಹಾರಿದ್ದ. ನೆಲದ ಹಂಬಲದಿ ನಿತ್ರಾಣನಾಗಿ ಬಿಟ್ಟಿದ್ದ. ಈ ಭೂಮಿತಾಯ ತೊಟ್ಟಿಲಲ್ಲಿ ನಾನೀಗ ಮನುಷ್ಯ ಎಂದು ಆನಂದದ ಅಮಲಲ್ಲಿ ಮುಳುಗಿದ. ಕೆಳಕ್ಕೆ ಇಳಿಯುತ್ತಾ ಅಲ್ಲ ಅಲ್ಲ ಬೀಳುತ್ತಾ ಅಥವಾ ಜಾರುತ್ತಾ ನೆಲದ ಸೆಳೆತದಲ್ಲಿ ಸಿಲುಕಿ ಬಿದ್ದೇ ಹೋದ. ಅವನ ರೆಕ್ಕೆಗಳು ದಣಿದು ಹಣ್ಣಾಗಿದ್ದವು. ಈ ಭೂಮಿ ನಮ್ಮದು ಇನ್ನಿದು ನಮ್ಮದು ಎಂದು ನೆಲಕ್ಕೆ ಮೈಚಾಚಿ ಒರಗಿ ಕೂಗಿಕೊಂಡ. ಅವನ ಹೆಂಡತಿಮಕ್ಕಳು ಹತ್ತಿರ ಬಂದು ಅಪ್ಪಿಕೊಂಡರು.
ದೊಂಬನ ಶಕ್ತಿಯೆಲ್ಲ ಎಲ್ಲೋ ಆವಿಯಾಗಿ ಹೋಗುತ್ತಿತ್ತು. ಸವಿಗನಸಿನ ಕೊನೆಯ ಕ್ಷಣದಂತೆ ಜಾರಿ ಹೋಗುತ್ತಿದ್ದ. ಹೆಂಡತಿ, ಮಕ್ಕಳನ್ನು ಎದೆಯ ಮೇಲೆ ಕರೆದುಕೊಂಡು ಕೈಸನ್ನೆಯಲ್ಲೇ ಅಲ್ಲಿ ಭೂಮಿತಾಯಿ ಕುಳಿತು ನೋಡುತ್ತಿದ್ದಾಳೆ. ನೀವೂ ನೋಡಿ ಎಂದು ತೋರುತ್ತಿದ್ದ. ಜನ ಓಡೋಡಿ ಬಂದು ನೆರೆದರು. ಪಾಳೆಯಗಾರ ಏದುಸಿರು ಬಿಡುತ್ತಾ ಈಗಲ್ಲಿಗೆ ಬಂದ. ಅರೇ, ಈ ಪಾಪಿ ಮುಂಡೆ ಮಗ, ಈ ದೊಂಬ ಇನ್ನೂ ಸತ್ತಿಲ್ಲವೆ ಎಂದು ಬೆರಗಾಗಿ ವಿಚಿತ್ರ ಹತಾಸೆ, ಕ್ರೋಧ ಎಲ್ಲದರಿಂದಲೂ ತಿರಸ್ಕಾರದಿಂದ ನೋಡಿದ. ದೊಂಬ ಮಣ್ಣನ್ನು ಮುತ್ತಿಡುತ್ತಿದ್ದ. ನೆಲವನ್ನು ಬಾಚಿ ತಬ್ಬುತ್ತಿದ್ದ. ಭೂತಾಯಿ ಮೊಲೆ ತೊಟ್ಟಿಗೆ ಬಾಯಾನಿಸಿದಂತೆ ದಣಿದು ಒಣಗಿದ ಗಂಟಲಾಳದಿಂದ ಏನನ್ನೋ ಹೊರಡಿಸುತ್ತಾ ಭಾಷೆಗೊಗ್ಗದ ಭಾವವನ್ನು ಅಲ್ಲೆಲ್ಲ ಚೆಲ್ಲುತ್ತಾ ಒಮ್ಮೆ ಪಾಳೆಯಗಾರನ ಕಡೆ ನೋಡಿದ. ಕಣ್ಣು
ಮಂಜಾಗಿದ್ದವು. ಒಳಗಿದ್ದ ಒಂದಿಷ್ಟು, ಜೀವನ ತುಂಬಿಕೊಂಡಂತೆ ಮೇಲೇಳುವ ಪ್ರಯತ್ನ ಮಾಡುತ್ತಾ ಕೇಳಿದ.
ಒಡೆಯರೆ, ನಿಮ್ಮ ಮಾತಿನಂತೆ ನಾನು ನಡೆದುಕೊಂಡೆ. ಈಗ ನೀವು ನಿಮ್ಮ ಮಾತನ್ನು ಉಳಿಸಿಕೊಳ್ಳಬೇಕು. ಇನ್ನು ಮುಂದೆ ಈ ತಾಯಿ, ಈ ಮಣ್ಣು, ಈ ಭೂಮಿ ನನ್ನದು. ನಮ್ಮವರದು. ನಮಗೆ ಕೊಡುಗೆಯಾಗಿ ಬಿಟ್ಟುಕೊಡಬೇಕು.'
ದಣಿಗಳು ಭೂಮಿಯೂ ಆಕಾಶವೂ ಒಮ್ಮೆ ಬಿರಿಯುವಂತೆ ಹೂಂಕರಿಸಿ ನಗಾಡಿ ಅಲಲಾ ದೊಂಬಾ, ಗೆದ್ದು ಬಿಟ್ಟೆನೆಂದು ಹುಂಬನಂತೆ ಜಂಭಪಡಬೇಡ. ಇದು ಶತ್ರುವಿನ ಶಕ್ತಿ ಪರೀಕ್ಷೆ ಯಷ್ಟೆ ಹೆಚ್ಚೆಂದರೆ ನಾನು ನನ್ನ ಸೀಮೆಯ ಒಬ್ಬ ಯಃಕಶ್ಚಿತ್ ದೊಂಬನ ತಂತ್ರ, ಮಂತ್ರ ಕೈಚಳಕವನ್ನು ಪರೀಕ್ಷಿಸಿದ್ದೇನೆ. ಅದರಾಚೆಗೆ ನನ್ನ ಸೀಮೆಗೂ ನಿನಗೂ ಯಾವ ಸಂಬಂಧವೂ ಇಲ್ಲ. ಈ ಭೂಮಿಗೂ ತನಗೂ ಸಂಬಂಧವಿದೆ ಎಂದು ಭಾವಿಸಿದರೆ ನಿನ್ನಂಥ ಮೂರ್ಖ ಇನ್ನೊಬ್ಬನಿಲ್ಲ.
ಹೋಗು ಹೋಗು. ಅಲ್ಲೆಲ್ಲಾದರೂ ಮುಂದಿನ ಊರಿನಲ್ಲಿ ನಿನ್ನ ದೊಂಬರಾಟ ಹೂಡಿ ಹೊಟ್ಟೆಬಟ್ಟೆಗೆ ನೋಡಿಕೋ ಹೋಗು' ಎಂದು ಮುಖ ತಿರುವಿ ಅತ್ತ ಕಡೆ ಹೆಜ್ಜೆ ಹಾಕತೊಡಗಿದ. ಹೌಹೌದು, ದಣಿಗಳು ಹೇಳಿದ್ದು ಸರಿ ಎಂದು ಒಂದಷ್ಟು ಮಂದಿ ಶಬ್ದ ಮಾಡಿದರು. ಅವನು ನನ್ನ ಮಾತಿನಂತೆ ನಡೆದುಕೊಳ್ಳಲು ಅವಕಾಶ ಇದೆಯೇ ಹೊರತು. ಸ್ವತಃ ನಾನೇ ಈ ದೊಂಬನ ಮಾತಿನಂತೆ ನಡೆದುಕೊಳ್ಳಲು ಎಲ್ಲೂ ನಿಯಮ ಇಲ್ಲ ಎಂದು ಜನರತ್ತ ಹೇಳುತ್ತಿದ್ದ,
ದೊಂಬನ ಹೆಂಡತಿಗೆ ಹುಚ್ಚೇ ಹಿಡಿದಂತೆ ಆಗುತ್ತಿತ್ತು. ಆ ಬಡ ದೊಂಬನಿಗೆ ತಿವಿದವು. ಎಲ್ಲ ಶಕ್ತಿಯನ್ನೂ ತುಂಬಿಕೊಂಡು ಎದ್ದು ಬಂದ ದೊಂಬ ಭೂಮ್ಯಾಕಾಶವನ್ನು ಒಮ್ಮೆ ಅಗಾಧವಾಗಿ ನೋಡಿ ಪಾಳೆಯಗಾರನನ್ನು ಮಾರ್ಮಿಕವಾಗಿ ದಿಟ್ಟಿಸಿ ಮಾತಿಗೆ ತಪ್ಪುತ್ತಿರುವೆಯಲ್ಲಾ, ಈಗ ನೋಡು ಏನು ಮಾಡುತ್ತೇನೆಂದು ಎನ್ನುತ್ತಾ; ತನ್ನ ದೇಹವನ್ನೆಲ್ಲ ಬಿಗಿದು ನರನರಗಳನ್ನೇ ಉರಿ ಮಾಡಿದಂತೆ ಎಳೆದು ತನ್ನೆರಡೂ ಕೈಕಾಲುಗಳನ್ನು ನಿಡಿದಾಗಿ ಬೀಸಿ ದೊಪ್ಪನೆ ನೆಲಕ್ಕೆ ಬಿದ್ದುಕೊಂಡ. ನೋಡು ನೋಡುತ್ತಿರುವಂತೆಯೇ ಅವನ ಕೈಕಾಲುಗಳು ಸಾವಿರಾರು ಕವಲುಗಳಾದಂತೆ ವಿಸ್ತರಿಸಿಕೊಂಡು ಬೆಳೆದು ಭೂಮಿಯ ಆಳ ಆಳಕ್ಕೆ ಇಳಿದು ಅವನ ದೇಹವೆಲ್ಲ ಮೆಲ್ಲಮೆಲ್ಲಗೆ ಬಿರಿಯುತ್ತಾ ಅರಳುತ್ತಾ ಆಗಾಧವಾಗಿ ಅಲ್ಲೆಲ್ಲ ವ್ಯಾಪಿಸಿಕೊಳ್ಳತೊಡಗಿತು. ಪಾಳೆಯಗಾರನ ಮಾತು ಸಲಾಕೆಯಂತೆ
ಜನ ಆಶ್ಚರ್ಯದಿಂದ ನೋಡತೊಡಗಿದರು. ದೊಂಬನ ದೇಹ ಮಡ್ಕೊಳಕ್ಕೆ ವಿಸ್ತರಿಸಿಕೊಳ್ಳುತ್ತಿತ್ತು. ಅವನ ಶರೀರವೆಲ್ಲ ಲಟಲಟಿಸಿ ಮುರಿದುಕೊಂಡಂತೆ ಭೂಮಿ ಕಂಪಿಸಿ, ಆದರೊಳಗೆ ಯಾರು ಯಾರೋ ಮಲಗಿದ್ದವರೆಲ್ಲ ಎಚ್ಚರಗೊಂಡು ಹಾಡಿದಂತಾಗಿ ಅದು ಗುಡುಗಾಗಿ ಮೊಳಗಿ ಭೂಮಿಯೇ ನಡುಗಿದಂತೆ ಕೇಳಿಸಿ
ಪಾಳೆಯಗಾರ ವಿಕ್ಕೆಟ್ಟಂತಾದ. ನೆರೆದಿದ್ದವರನ್ನು ಉದ್ದೇಶಿಸಿ, ಇವನು ನಿಜವಾಗಿಯೂ ನಮ್ಮ ಸೀಮೆಗೆ ಒದಗಿಬಂದ ಕೇಡು. ಇವನನ್ನು ಕಿತ್ತು ಅತ್ತ ಹೊಸಕಿ ಹಾಕಿ, ಮಣ್ಣಾಳಕ್ಕೆ ಇವನು ಇಳಿಯದಂತೆ ತಡೆಯಿರಿ ಎಂದು ಆದೇಶಿಸಿದ. ಅನೇಕರು ಅವನನ್ನು ನೆಲದ ಬೇರಿನಿಂದ ಕಿತ್ತುಹಾಕಲು ನುಗ್ಗಿದರು. ಅವರು ಇವರು ಜನವೆಲ್ಲ ಬಂದರು. ಒಬ್ಬೊಬ್ಬರು ಗುಂಪುಗುಂಪಾಗಿ ಅವನನ್ನು ನೆಲದಿಂದ ಕಿತ್ತು ಬೇರ್ಪಡಿಸಲು ಸಾಹಸಪಟ್ಟರು. ದೊಂಬನ ಬೆರಳುಗಳು ಅಸಂಖ್ಯಾತ ಬೇರುಗಳಾಗಿ ಟಿಸಿಲೊಡೆದು ಅವನ ರೋಮ ರೋಮವೂ ಒಂದೊಂದು ಕವಲುಗಳಾಗಿ ಭೂಮಿ ತಾಯಿಯಲ್ಲಿ ಐಕ್ಯವಾಗುತ್ತಿದ್ದವು. ನರನರಗಳೂ ಭೂತಾಯಿಯ ಗರ್ಭದಲ್ಲಿ ಇಳಿಯುತ್ತಿದ್ದವು. ಅವನನ್ನು ಕಿತ್ತುಹಾಕಲು ಪ್ರಯತ್ನಿಸಿದಂತೆಲ್ಲ ಅವನ ದೇಹ ಮಕ್ಕೊಳಕ್ಕೆ ಲೀನವಾಗತ್ತಾ ಬಲಿಯುತ್ತಿತ್ತು.
ಈ ಸೋಜಿಗವ ನೋಡುತ್ತಿದ್ದಂತೆಯೇ ಅನೇಕರು ಹೆದರಿ ಇದಾವುದೋ ಭೂತ ಪ್ರೇತದ ಕಾಟವಿರಬೇಕೆಂದು, ಈ ಕೇಡಿನ ಸಹವಾಸವೇ ಬೇಡ ಎಂಬಂತೆ ಓಡಿಹೋದರು. ಮತ್ತಷ್ಟು ಜನ ಇವನಾರೋ ಅತಿಮಾನುಷ ದೈವೀಪುರುಷನೆ ಇರಬಹುದೇ ಎಂದು ಲೆಕ್ಕಹಾಕುತ್ತಿದ್ದರು. ಇವರಾರಿಂದಲೂ ಕಿತ್ತುಹಾಕಲು ಸಾಧ್ಯವಿಲ್ಲದಿದ್ದರೆ ನಾನೇ ಕಿತ್ತುಹಾಕುವೆನೆಂಬಂತೆ ಪಾಳೆಯ ಗಾರನೇ ದೊಂಬನ ಮುಂದೆ ಬಂದು ತಿರಸ್ಕಾರದಿಂದ ಕಾಲಿನಿಂದ ಒದ್ದು ತುಳಿದು. ಏಳು, ಮೇಲೇಳೋ ದೊಂಬ ಎಂದು ಗರ್ಜಿಸಿದರು. ಅದನ್ನೆಲ್ಲ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ದೊಂಬನಿರಲಿಲ್ಲ. ತಾಯಗರ್ಭಕ್ಕೆ ಹಿಂತಿರುಗಿದವನಂತೆ ಭೂಮಿಯಾಳದವರೆಗೂ ಹಾರಿ ಹಾರಿ ಅಲ್ಲಲ್ಲ, ಜಾರಿ ಜಾರಿ ಇಳಿದಂತೆ. ಒಳ ಒಳಕ್ಕೆ ಹೊರಟಂತೆ ಬೆಳೆಯುತ್ತಲೇ ಸಾಗುತ್ತಿದ್ದ. ಪಾಳೆಯಗಾರ ತನ್ನೆಲ್ಲ ಶಕ್ತಿಯನ್ನು ಬಿಟ್ಟು ಎಳೆದಾಡಿದ. ಏನೂ ಪ್ರಯೋಜನವಾಗಲಿಲ್ಲ. ದೊಂಬ
విస్సూ ಸಿಟ್ಟಿನಿಂದ ತಲೆ ಒಗೆದ ದಣಿಗೆ ಇವನನ್ನು なん ಪ್ರಯೋಜನವಿಲ್ಲೆಂದು ತಿಳಿದು. ಈ ಹುಚ್ಚು ದೊಂಬ ನನ್ನ ಭೂಮಿಗೆ ಒಂದಿಷ್ಟು ಗೊಬ್ಬರವಾದನಷ್ಟೇ. ಹಾಳಾಗಿ ಇಲ್ಲೇ ಇವನು ಹೆಂಡತಿ- ಮಕ್ಕಳ ಸಹಿತ ಮುಳುಗಿ ಮಣ್ಣಾಗಿ ಹೋಗಲಿ, ನಡೆಯಿರಿ ಎಂದು ಎಲ್ಲರನ್ನೂ ಕರೆದುಕೊಂಡು ಹೊರಟ. ದೊಂಬನ ಹೆಂಡತಿ ಅವರನ್ನೆಲ್ಲ ಕೂಗಿಕೊಂಡಳು. ಅವರಾರೂ ಹಿಂತಿರುಗಿ ನೋಡಲಿಲ್ಲ. ಉರಿದು ಕೆಂಡವಾದಂತೆ ಕ್ರೋಧಗೊಂಡಳು. ಸಿಡಿದಳು. ಜನ ಹೊರಟೇ ಹೋದರು. ಪಾಳೆಯಗಾರ ತನ್ನ ಅಂತಃಪುರ ಸೇರಿಕೊಂಡ. ಸೂರ್ಯ ಮುಳುಗುತ್ತಿದ್ದ. ಆಕೆ ತನ್ನ ಗಂಡನನ್ನು ಹಿಂತಿರುಗಿ ಪಡೆಯಬಹುದೇ ಎಂದು ಅವನ ಮೇಲೆ ಬಿದ್ದು ಹೊರಳಾಡಿ ಹಿಂತಿರುಗಿ ಬಾ, ಮೇಲೇಳು, ಎದ್ದೇಳು ಎಂದು ಅಂಗಲಾಚಿ ಬೇಡಿದಳು. ಅವನು ಮಣ್ಣೂಳಗಿದ್ದ ಅವನ ಜೀವ ಭೂತಾಯ ಮೊಲೆ ಕೊಟ್ಟಲ್ಲಿತ್ತು. ಆಕಾಶ ಬಿರಿಯುವಂತೆ ದೊಂಬನ ಹೆಂಡತಿ ಗೋಳಾಡತೊಡಗಿದಳು.ಬಟಾಬಯಲನ್ನು ದಿಟ್ಟಿಸಿದಳು. ತನ್ನ ತನ್ನ ಗಂಡ ಎಲ್ಲಿಂದ, ಎಷ್ಟು ದೂರದಿಂದ ಹಾರಿ ಹಾರಿ ಬಂದು ಬಿದ್ದನೋ ಅಷ್ಟೆಲ್ಲ ಅಗಲವನ್ನೂ ಕಣ್ಣು ಕುರುಡಾಗುವಂತೆ ನೆಟ್ಟ ನೋಟದಿಂದಲೇ ಧಾರಾಕಾರವಾಗಿ ಹರಿವ ಕಣ್ಣೀರಿನಿಂದ, ರೋಧನದಿಂದ ನೋಡೆ ನೋಡಿದಳು. ಅವಳು ತನ್ನ ಮಕ್ಕಳನ್ನು ಹೊಟ್ಟೆಗೆ ಕಟ್ಟಿಕೊಂಡು, ಗಂಡನ ಮುಂದೆ ಬಿದ್ದು ಕೊಂಡು ಹಿಡಿಶಾಪ ಹಾಕತೊಡಗಿದಳು. ಬಯಲು ಅವಳ ಶಾಪವನ್ನು やんもລ໐໖め。
ನನ್ನ ಗಂಡನ ಕಸಿದುಕೊಂಡು ನಮ್ಮ ಆಸೆಯನ್ನು ಸುಟ್ಟು ಹಾಕಿದ ಮೇಲೆ, ಇಲ್ಲಿ ಈ ನೆಲದಲ್ಲಿ ಯಾರು ಏನೇ ಬಿತ್ತಿದರೂ ಅದು ಕೈಗೂಡದೆ, ಫಲಿಸದೆ ಇಲ್ಲಿ ಕೇವಲ ಪಶುಪಕ್ಷಿಗಳು ಮಾತ್ರವೇ ತಿನ್ನುವಂತಹ ಹಣ್ಣು ಹಂಪಲು ಹಸಿರು ತೋಪು ಮಾತ್ರವೇ ಬೆಳೆದು ಆ ಜೀವರಾಶಿಗಳ ಬನ ಇದಾಗಲಿ ಎಂದು ಶಾಪ ಹಾಕಿದಳು. ತನ್ನ ನಲ್ಲನನ್ನೂ ಅವನು ಹಾರಿ ಪಡೆದ ನೆಲವನ್ನೂ ಹದ್ದಿನ ಕಣ್ಣಿಟ್ಟು ಕಾಯುವಂತೆ ಮಕ್ಕಳನ್ನು ಎರಡೂ ಕೈಗಳಿಗೆ ಎರಡು ರೆಕ್ಕೆಗಳಂತೆ ಕಟ್ಟಿಕೊಂಡು ಅಲ್ಲೆಲ್ಲ ಹಾರಾಡಿ ಕಾಯತೊಡಗಿದಳು. ತನ್ನ ಗಂಡ ಹಿಂತಿರುಗಿ ಬಂದೇ ಬರುತ್ತಾನೆಂದು ಕುರುಡು ಕಾಲಗಟ್ಟಲೇ ಕಾದೇ ಕಾದಳು. ಅದೇ ದೊಂಬ ಕರಗಿ ಕರಗಿ ಹರಿದು ಮಣ್ಣಾಳಕ್ಕೆ ಮುಳುಗಿ ಯಾವತ್ತೂ ಮುಗಿಯದ ಬೇರುಗಳಂತೆ ಬೆಳೆಯುತ್ತಲೇ ಇದ್ದ.
ಆಮೇಲೆ ಎಷ್ಟೋ ವರ್ಷಗಳು ಜಾರಿ ತೂರಿ ಹೋದವು. ಕಾಲ ಹಾರಿ ಹೋಗುತ್ತಿತ್ತು. ದೊಂಬನ ದೇಹ ಬೆಳೆದು ಸಾವಿರಾರು ಹೂವಾಗಿ, ಮೊಗ್ಗಾಗಿ, ಗಿಡಮರ ಬಳ್ಳಿ-ಲತೆ ಬೀಜವಾಗಿ, ಮರವಾಗಿ ಪಚ್ಚೆಪೈರು ಹಸಿರು ಸಿರಿಯಾಗಿ, ಹೂ ಮಣ್ಣು ಗಂಧವಾಗಿ, బిజ ಜೀವವಾಗಿ ಬಯಲೆಲ್ಲವನ್ನೂ ರಂಗುಗೊಳಿಸುವಂತೆ ಕಂಗೊಳಿಸಿ ಬೆಳೆದು ಹೋಗಿತ್ತು. ಇಡೀ ಬಯಲು ಜೀವರಸದಿಂದ ಘಮಘಮಿಸುತ್ತಿತ್ತು. ಅವನ ಹೆಂಡತಿ ಮಕ್ಕಳು ಆ ಹಸಿರ ಸಿರಿಯಲ್ಲಿ ಕೇವಲ ಗತಿಸಿದ ದೇಹಾತ್ಮಗಳಂತೆ ನೋಡುತ್ತ ಆದರೊಳಗೆ ಇಳಿಯುತ್ತಿದ್ದವು. ಭೂಮಿ ಪಲ್ಲವಿಸಿದ ಪೂರ್ವಿಕರ ನಗೆಯಂತೆ ಹೊಳೆಯುತ್ತಿತ್ತು.
ಲೇಖಕರ ಪರಿಚಯ:
ಮೊಗಳ್ಳಿ ಗಣೇಶ್: ಇವರು ಕಥೆಗಾರ, ಕಾದಂಬರಿಕಾರ, ಪ್ರಬಂಧಕಾರ, ವೈಚಾರಿಕ ಲೇಖಕ ಮತ್ತು ವಿಮರ್ಶಕ ಆಗಿದ್ದಾರೆ. ವಿಕಿಪೀಡಿಯಾ ಸಾಲುಗಳನ್ನು ಇರುವ ಹಾಗೆಯೇ ಎತ್ತಿ ಕೊಂಡಿದ್ದೀರಲ್ಲ. ಆ ವಾಕ್ಯರಚನೆಯನ್ನಾದರೂ ಗಮನಿಸಬಾರದೆ? ಸಯ್ಯನನ್ನು ಬಚ್ಚಿಡಬಹುದೆ? ಇವರ ಕವನ ಸಂಕಲನ, ಬುಗುರಿ, ಭೂಮಿ, ದೇವರ ದಾರಿ, ಮಣ್ಣು, ಅತ್ತೆ, ಕನ್ನೆಮಳೆ ಇವು ಇವರ ಕಥಾ ಸಂಕಲನಗಳು. ತೆಗೆದಿಟ್ಟ ಇವರ ಕಾದಂಬರಿ, ತಕರಾರು, ಕಂಬಾಭಾಷಿಕ ಸಂಶೋಧನೆ, ಅಂಬೇಡ್ಕರ್ ಎಂಬ ಮಹಾನದಿ ಮತ್ತು ದಲಿತೀಕರಣಗೊಂಡ ಗಾಂಧೀಜಿ, ಜಾತಿ ಮೀಮಾಂಸೆ, ದೇಸಿ ಕಥನ ಮೊದಲಾದವು ಇವರ ವಿಮರ್ಶಾ-ಸಂಶೋಧನಾ ಬರಹಗಳು. ದಲಿತರು
ಮತ್ತು ಜಾಗತೀಕರಣ, ಕಥನ, ದೇಶಿ, ಸೊಲ್ಲು, ಶತಮಾನ ಮುಂತಾದ ಕೃತಿಗಳನ್ನು ರಚಿಸಿರುವ ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವರ್ಧಮಾನ ಸಾಹಿತ್ಯ ಪ್ರಶಸ್ತಿ, ದೆಹಲಿಯ ಕಥಾ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ನಾಲ್ಕು ಬಾರಿ ಇವರು ಪ್ರಜಾವಾಣಿ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದಿರುತ್ತಾರೆ.
ಪದಕೋಶ:
ನೀರವ-ಮೌನ,
ಲೀನ-ಯಾವುದಾದರೊಂದು ವಿಷಯದಲ್ಲಿ ಮಗ್ನನಾದವನು; ಅತಿ ಮಾನುಷ-ಮನುಷನ ಶಕ್ತಿಗೆ ಮೀರಿದ, ಮನುಷ್ಯರಿಗೆ ದೊರೆಯದ;
ಕಠಾರಿ-ಕಿರುಗತ್ತಿ, ಬಾಕು, ಚೂರಿ;
ಪಂಥ-ಪ್ರತಿಜ್ಞೆ, ಶಪಥ;
ದೀನ-ಬಡವ, ದರಿದ್ರ;
ಪ್ರಪಾತ-ಕಡಿದಾದ ಕೊರಕಲು, ಕಣಿವೆ; ಪಲ್ಲವಿಸು-ಕುಡಿಯಿಡು, ಚಿಗುರು;
1. ಬಡದೊಂಬನ ರಟ್ಟಿಯಲ್ಲಿ ಮಾಂತ್ರಿಕವಾಗಿ ಲೀನವಾಗಿದ್ದು ಯಾರು?
ಉತ್ತರ: ಬಡ ದೊಂಬನ ರಟ್ಟೆಯಲ್ಲಿ ಮಾಂತ್ರಿಕವಾಗಿ ಲೀನವಾಗಿದ್ದು **ಅನಾದಿಕಾಲದ ಅವನ ಪೂರ್ವಿಕರ ಆತ್ಮಗಳು**.
2. ದಿನೇ ದಿನೇ ದೊಂಬನ ಖ್ಯಾತಿ ಮನೆಮಾತಾದದ್ದು ಹೇಗೆ?
**ಉತ್ತರ:** ದೊಂಬನು ತನ್ನ ಅದ್ಭುತವಾದ **ಹಾರುವ ವಿದ್ಯೆಯಿಂದ** ಊರೂರುಗಳಲ್ಲಿ ಜನರನ್ನು ಬೆರಗುಗೊಳಿಸಿದನು. ದಿಬ್ಬಗಳ ಮೇಲೆ ಹತ್ತಿ, ಎತ್ತರದ ಮರಗಳಿಂದ ಕೆಳಕ್ಕೆ ಧುಮುಕಿ, ಹಕ್ಕಿಯಂತೆ ಹಾರಾಡಿ ಮತ್ತೆ ಸುರಕ್ಷಿತವಾಗಿ ಇಳಿಯುತ್ತಿದ್ದನು. ಅವನ ಈ ಚಮತ್ಕಾರವನ್ನು ನೋಡಲು ಜನರು ದೊಡ್ಡ ಸಂಖ್ಯೆಯಲ್ಲಿ ಸೇರತೊಡಗಿದರು. ಹೀಗಾಗಿ ಅವನ ಹಾರುವ ವಿದ್ಯೆಯ ಖ್ಯಾತಿ ದಿನೇ ದಿನೇ ಹೆಚ್ಚಾಗಿ **ಮನೆಮಾತಾಯಿತು**.
3. ದೊಂಬನನ್ನು ಭೂಮಿತಾಯಿ ಕರೆದಿದ್ದು ಹೇಗೆ?
**ಉತ್ತರ:** ದೊಂಬನು ಒಂದು ದಿನ ವಿಸ್ತಾರವಾದ ಹಸಿರು ಬಯಲನ್ನು ತದೇಕಚಿತ್ತದಿಂದ ನೋಡುತ್ತಿದ್ದಾಗ, ಅವನಿಗೆ **ಭೂಮಿತಾಯಿ ಎದ್ದು ಕುಳಿತು ತನ್ನನ್ನು ಕರೆಯುತ್ತಿರುವಂತೆ** ಭಾಸವಾಯಿತು. “ಎಷ್ಟು ದಿನ ಊರೂರು ಅಲೆಯುತ್ತೀಯ? ನನ್ನ ಮಣ್ಣಿನ ಹಸಿರು ಸಿರಿ ನಿನಗೆ ಬೇಡವೇ? ಬಾ ಮಗನೇ” ಎಂದು ತಾಯಿ ತನ್ನನ್ನು ಕರೆಯುತ್ತಿರುವಂತೆ ಅವನಿಗೆ ಅನಿಸಿತು. ಇದರಿಂದ ದೊಂಬನು **“ನಿನ್ನ ಮಣ್ಣಿನ ಭಾಗ್ಯ ನನಗೆ ಬೇಕು ತಾಯಿ”** ಎಂದು ಉದ್ಗರಿಸಿದನು.
4. ಪಾಳೆಗಾರನ ವಿರುದ್ಧ ದೊಂಬನ ಪತ್ನಿ ಪ್ರತಿಭಟಿಸಿದು ಹೇಗೆ?
**ಉತ್ತರ:** ಪಾಳೆಯಗಾರನು ದೊಂಬನು ಗೆದ್ದ ಭೂಮಿಯನ್ನು ಕೊಡದೆ ಮೋಸ ಮಾಡಿದಾಗ, ದೊಂಬನ ಪತ್ನಿ ತೀವ್ರವಾಗಿ ಪ್ರತಿಭಟಿಸಿದಳು. ಅವಳು ತನ್ನ ಗಂಡನನ್ನು ಕಳೆದುಕೊಂಡ ದುಃಖ ಮತ್ತು ಕೋಪದಿಂದ **ಪಾಳೆಯಗಾರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ತನ್ನ ಗಂಡನನ್ನು ಕಸಿದುಕೊಂಡು ಅವರ ಆಸೆಯನ್ನು ನಾಶಪಡಿಸಿದ ನೆಲದಲ್ಲಿ ಯಾರೇ ಬಿತ್ತಿದರೂ ಅದು ಫಲಿಸದಿರಲಿ** ಎಂದು ಶಾಪ ಹಾಕಿದಳು. ಆ ನೆಲದಲ್ಲಿ ಮನುಷ್ಯರಿಗೆ ಬೆಳೆ ಸಿಗದೆ, **ಪಶುಪಕ್ಷಿಗಳು ಮಾತ್ರ ತಿನ್ನುವ ಹಣ್ಣು-ಹಂಪಲು ಮತ್ತು ಹಸಿರು ತೋಪು ಬೆಳೆಯಲಿ** ಎಂದು ಶಪಿಸಿದಳು. ತನ್ನ ಮಕ್ಕಳನ್ನು ರೆಕ್ಕೆಗಳಂತೆ ಎರಡೂ ಕೈಗಳಿಗೆ ಕಟ್ಟಿಕೊಂಡು, ಗಂಡನು ಹಿಂತಿರುಗಿ ಬರುತ್ತಾನೆಂಬ ನಂಬಿಕೆಯಿಂದ ಆ ನೆಲವನ್ನು ಕಾಯುತ್ತಾ ಬದುಕಿದಳು.
5. ದೊಂಬನ ಹಾರಾಟದ ಬಗೆಯನ್ನು ವರ್ಣಿಸಿ.
ಉತ್ತರ: ದೊಂಬನು ಕೋಡುಗಲ್ಲ ಬೆಟ್ಟದ ಶಿಖರದ ತುದಿಯಿಂದ ಹಾರಲು ಸಿದ್ಧನಾದನು. ತನ್ನ ಸೊಂಟಕ್ಕೆ ಸುತ್ತಿಕೊಂಡಿದ್ದ **ಕಪ್ಪು ಕಂಬಳಿಯನ್ನು ಪೂರ್ವಿಕರ ರೆಕ್ಕೆಗಳಂತೆ** ಬಿಚ್ಚಿಕೊಂಡು, ಅದರ ನಾಲ್ಕೂ ತುದಿಗಳನ್ನು ಕೈಕಾಲುಗಳಿಗೆ ಸೆಣಬಿನ ಹಗ್ಗದಿಂದ ಬಿಗಿಯಾಗಿ ಕಟ್ಟಿಕೊಂಡನು. ಭೂಮಿತಾಯಿಯನ್ನು ಧ್ಯಾನಿಸಿ ಪ್ರಾರ್ಥಿಸಿ, ಒಂದೇ ಏಟಿಗೆ ಆಳವಾದ ಪ್ರಪಾತದ ಕಡೆಗೆ ಜಿಗಿದನು.
ಅವನು **ಹಾರುತ್ತಾ, ತೇಲುತ್ತಾ, ಜಿಗಿಯುತ್ತಾ, ಚಿಮ್ಮುತ್ತಾ, ಹೊರಳಿ, ಉರುಳಿ, ರೆಕ್ಕೆ ಬೀಸುತ್ತಾ** ಬಹಳ ದೂರ ಸಾಗಿದನು. ಮಾನವರೂಪಿ ಪಕ್ಷಿಯಂತೆ ಕಂಬಳಿಯನ್ನು ರೆಕ್ಕೆಗಳಂತೆ ಬೀಸುತ್ತಾ ಆಕಾಶದಲ್ಲಿ ಹಾರಿದನು. ಅವನ ಹಾರಾಟವನ್ನು ಕಂಡ ಜನರು ಬೆರಗಾಗಿ ಹಾಹಾಕಾರ ಮಾಡಿದರು. ಹೆಂಡತಿ ಮತ್ತು ಮಕ್ಕಳು ಅವನ ನೆರಳನ್ನೇ ಹಿಂಬಾಲಿಸುತ್ತಾ ಓಡಿದರು. ಕೊನೆಗೆ ಗಾಳಿಯ ರಭಸ ಕಡಿಮೆಯಾದಾಗ ದೊಂಬನು ದಣಿದು ನೆಲದ ಕಡೆ ಇಳಿದು ಬಿದ್ದನು. **ಅವನ ಹಾರಾಟವು ಅವನ ಭೂಮಿಯ ಹಕ್ಕನ್ನು ಪಡೆಯುವ ಸಾಹಸ ಮತ್ತು ಸ್ವಾಭಿಮಾನದ ಸಂಕೇತವಾಗಿದೆ.**
6. ದೊಂಬನಲ್ಲಿ ಮಣ್ಣಿನ ಕನಸು ಹೂ ಬಿಟ್ಟಿದ್ದು ಹೇಗೆ?
ಉತ್ತರ: ದೊಂಬನು ಒಂದು ದಿನ ವಿಸ್ತಾರವಾದ ಹಸಿರು ಬಯಲನ್ನು ತದೇಕಚಿತ್ತದಿಂದ ನೋಡುತ್ತಿದ್ದಾಗ, ಅವನಿಗೆ **ಭೂಮಿತಾಯಿ ತನ್ನನ್ನು ಕರೆಯುತ್ತಿರುವಂತೆ** ಅನುಭವವಾಯಿತು. “ಎಷ್ಟು ದಿನ ಊರೂರು ಅಲೆಯುತ್ತೀಯ? ನನ್ನ ಮೊಲೆಹಾಲು ನಿನಗೆ ಬೇಡವೇ? ನನ್ನ ಮಣ್ಣಿನ ಹಸಿರು ಸಿರಿ ನಿನಗೆ ಬೇಡವೇ?” ಎಂದು ಭೂಮಿತಾಯಿ ಕರೆಯುತ್ತಿರುವಂತೆ ಅವನಿಗೆ ಭಾಸವಾಯಿತು. ಆಗ ದೊಂಬನು **“ನಿನ್ನ ಮಣ್ಣಿನ ಭಾಗ್ಯ ನನಗೆ ಬೇಕು ತಾಯಿ”** ಎಂದು ಹೇಳಿದನು.
ಇದರಿಂದ ಅವನ ಮನಸ್ಸಿನಲ್ಲಿ ಊರೂರು ಅಲೆದು ಬದುಕುವುದನ್ನು ಬಿಟ್ಟು **ತನ್ನದೇ ಆದ ಭೂಮಿಯನ್ನು ಪಡೆದು ನೆಮ್ಮದಿಯಿಂದ ಬದುಕಬೇಕೆಂಬ ಆಸೆ** ಮೂಡಿತು. ಅವನೊಳಗೆ ಈ ಬಯಕೆ ಗಟ್ಟಿಯಾಗಿ ಬೆಳೆದು **‘ಮಣ್ಣಿನ ಕನಸು’ ಹೂ ಬಿಟ್ಟಿತು**. ಈ ಕನಸನ್ನು ಕಂಡ ಅವನ ಹೆಂಡತಿ ಮತ್ತು ಮಕ್ಕಳು ಸಹ ಆಶ್ಚರ್ಯಗೊಂಡರು.
7. ಪಾಳೆಗಾರ ದೊಂಬನ ಮೇಲೆ ಕೋಪಗೊಳ್ಳಲು ಕಾರಣವೇನು?
ಉತ್ತರ: ದೊಂಬನು ಪಾಳೆಯಗಾರನ ಅಪ್ಪಣೆಯನ್ನು ಪಡೆಯದೆ ತನ್ನ ಸೀಮೆಯಲ್ಲಿ ದೊಂಬರಾಟ ಪ್ರದರ್ಶಿಸಿ ಜನರನ್ನು ತನ್ನ ಅದ್ಭುತ ಹಾರುವ ವಿದ್ಯೆಯಿಂದ ಆಕರ್ಷಿಸಿದ್ದನು. ಇದರಿಂದ **ಪಾಳೆಯಗಾರನಿಗೆ ತನ್ನ ಅಧಿಕಾರ ಮತ್ತು ಗೌರವಕ್ಕೆ ಧಕ್ಕೆ ಉಂಟಾಗಿದೆ** ಎಂದು ಅನಿಸಿತು. ಜನರೆಲ್ಲರೂ ದೊಂಬನ ಆಟದಲ್ಲಿ ಮೈಮರೆತು ಪಾಳೆಯಗಾರನು ಬಂದಿರುವುದನ್ನೇ ಗಮನಿಸಲಿಲ್ಲ. ಯಾರೂ ಅವನನ್ನು ಗೌರವಿಸಲಿಲ್ಲ.
ಇದರಿಂದ ಅವಮಾನಗೊಂಡ ಪಾಳೆಯಗಾರನು **ದೊಂಬನ ಮೇಲೆ ಕೋಪಗೊಂಡು**, ಅವನಿಗೆ ಸವಾಲು ಹಾಕಲು ನಿರ್ಧರಿಸಿದನು. ತನ್ನ ಅಧಿಕಾರವನ್ನು ತೋರಿಸಲು ದೊಂಬನ ಹಾರುವ ವಿದ್ಯೆಯನ್ನು ಪರೀಕ್ಷಿಸುವುದಾಗಿ ಹೇಳಿ, ಬೆಟ್ಟದ ಶಿಖರದಿಂದ ಹಾರಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸುವಂತೆ ಸವಾಲು ಹಾಕಿದನು.
8. ಪಾಳೇಗಾರನ ಸವಾಲಿಗೆ ದೊಂಬನ ಬೇಡಿಕೆಯನ್ನು ತಿಳಿಸಿ
*ಉತ್ತರ: ಪಾಳೆಯಗಾರನು ದೊಂಬನಿಗೆ ಕೋಡುಗಲ್ಲ ಬೆಟ್ಟದ ಶಿಖರದಿಂದ ಕೆಳಗೆ ಹಾರಿ, ತನ್ನ ಶಕ್ತಿಗನುಸಾರ ಎಷ್ಟು ದೂರ ಹೋಗಬಲ್ಲನೋ ಅಷ್ಟು ದೂರ ಹಾರುವಂತೆ ಸವಾಲು ಹಾಕಿದನು. ದೊಂಬನು ಆ ಸವಾಲನ್ನು ಸ್ವೀಕರಿಸುವ ಮೊದಲು **ತನ್ನದೊಂದು ಸಣ್ಣ ಬೇಡಿಕೆಯನ್ನು** ಪಾಳೆಯಗಾರನ ಮುಂದಿಟ್ಟನು.
ತಾನು ಶಿಖರದಿಂದ ಹಾರಿ ಎಷ್ಟು ದೂರ ಹೋಗಿ ಬೀಳುತ್ತಾನೋ, **ಅಷ್ಟೂ ಭೂಮಿ, ಅಷ್ಟೂ ಜಾಗ, ಅಷ್ಟೂ ನೆಲವನ್ನು ತನಗೂ ತನ್ನವರಿಗೂ ನೀಡಬೇಕು** ಎಂಬುದು ದೊಂಬನ ಬೇಡಿಕೆಯಾಗಿತ್ತು. ಪಾಳೆಯಗಾರನು ಮೊದಲು ಇದನ್ನು ಒಪ್ಪಲು ಹಿಂಜರಿದರೂ, ಕೊನೆಗೆ ದೊಂಬನ ಷರತ್ತಿಗೆ ಒಪ್ಪಿಕೊಂಡನು.
.
9. ಪಾಳೆಗಾರನ ಸವಾಲಿನಂತೆ ದೊಂಬನು ಹಾರಿದ ಬಗೆಯನ್ನು ವಿವರಿಸಿ.
ಉತ್ತರ:
ಪಾಳೆಯಗಾರನ ಸವಾಲನ್ನು ಸ್ವೀಕರಿಸಿದ ದೊಂಬನು ಕೋಡುಗಲ್ಲ ಬೆಟ್ಟದ ಶಿಖರದ ತುದಿಗೆ ಹೋದನು. ತನ್ನ ಸೊಂಟಕ್ಕೆ ಸುತ್ತಿಕೊಂಡಿದ್ದ ದೊಡ್ಡ ಕಪ್ಪು ಕಂಬಳಿಯನ್ನು ಪೂರ್ವಿಕರ ರೆಕ್ಕೆಗಳಂತೆ ಬಿಚ್ಚಿಕೊಂಡನು. ಅದರ ನಾಲ್ಕೂ ತುದಿಗಳನ್ನು ಕೈಕಾಲುಗಳಿಗೆ ಸೆಣಬಿನ ಹಗ್ಗದಿಂದ ಬಿಗಿಯಾಗಿ ಕಟ್ಟಿಕೊಂಡನು. ಭೂಮಿತಾಯಿಯನ್ನು ಭಕ್ತಿಯಿಂದ ಧ್ಯಾನಿಸಿ ಪ್ರಾರ್ಥಿಸಿದನು. ನಂತರ ಶಿಖರದ ತುದಿಯಿಂದ ಆಳವಾದ ಪ್ರಪಾತಕ್ಕೆ ಒಂದೇ ಏಟಿಗೆ ಜಿಗಿದನು.
ದೊಂಬನು ಹಾರುತ್ತಾ, ತೇಲುತ್ತಾ, ಜಿಗಿಯುತ್ತಾ, ಚಿಮ್ಮುತ್ತಾ, ಹೊರಳಿ ಉರುಳಿ ಬಹಳ ದೂರ ಸಾಗಿದನು. ಕಂಬಳಿಯನ್ನು ರೆಕ್ಕೆಗಳಂತೆ ಬೀಸುತ್ತಾ ಮಾನವರೂಪಿ ಪಕ್ಷಿಯಂತೆ ಆಕಾಶದಲ್ಲಿ ಹಾರಿದನು. ಅವನ ಹೆಂಡತಿ, ಮಕ್ಕಳು ಮತ್ತು ಜನರು ಅವನ ಹಾರಾಟವನ್ನು ಆತಂಕದಿಂದ ನೋಡುತ್ತಾ ಹಿಂಬಾಲಿಸಿದರು. ಕೊನೆಗೆ ಗಾಳಿಯ ರಭಸ ಕಡಿಮೆಯಾದಾಗ ದೊಂಬನು ದಣಿದು ನೆಲಕ್ಕೆ ಬಿದ್ದನು. ತಾನು ಹಾರಿದ ಭೂಮಿ ತಮ್ಮದಾಗಬೇಕೆಂದು ಸಂತೋಷದಿಂದ ಮಣ್ಣನ್ನು ಅಪ್ಪಿಕೊಂಡನು.
10. ದೊಂಬನ ಹಾರಾಟದಲ್ಲಿ ದೊಂಬನ ಹೆಂಡತಿ ಮಕ್ಕಳ ಆತಂಕವನ್ನು ತಿಳಿಸಿ.
ಉತ್ತರ: ದೊಂಬನು ಪಾಳೆಯಗಾರನ ಸವಾಲನ್ನು ಸ್ವೀಕರಿಸಿ ಕೋಡುಗಲ್ಲ ಬೆಟ್ಟದ ಶಿಖರದಿಂದ ಹಾರಲು ಸಿದ್ಧನಾದಾಗ ಅವನ ಹೆಂಡತಿ ಮತ್ತು ಮಕ್ಕಳು ತೀವ್ರ ಆತಂಕಕ್ಕೊಳಗಾದರು. ಅಷ್ಟು ಎತ್ತರದಿಂದ ಹಾರುವುದು ಜೀವಕ್ಕೆ ಅಪಾಯವಾಗಬಹುದೆಂಬ ಭಯ ಅವರಿಗೆ ಕಾಡಿತು. ದೊಂಬನು ಶಿಖರದಿಂದ ಜಿಗಿದಾಗ ಅವರು **ಮೂರ್ಛೆ ಹೋದವರಂತೆ ಬಿದ್ದುಕೊಂಡರು**. ದೊಂಬನು ಕೆಳಗೆ ಬೀಳುತ್ತಾನೆಂದು ಭಯಗೊಂಡು ದಿಕ್ಕೆಟ್ಟರು. ಅವನು ಹಾರುತ್ತಾ ದೂರ ಸಾಗಿದಾಗ ಅವನ ಹೆಂಡತಿ ಮಕ್ಕಳೊಂದಿಗೆ ಅವನ ನೆರಳನ್ನು ಹಿಂಬಾಲಿಸುತ್ತಾ ಓಡಿದಳು. ಅವನಿಗೆ ಏನಾದರೂ ಅಪಾಯವಾಗಬಹುದೆಂಬ ದುಗುಡ, ಸಾವು-ಬದುಕಿನ ಆತಂಕ ಅವರ ಮನಸ್ಸನ್ನು ಆವರಿಸಿತ್ತು. ಕೊನೆಗೆ ದೊಂಬನು ನೆಲಕ್ಕೆ ಬಿದ್ದಾಗ ಅವನ ಬಳಿಗೆ ಓಡಿಬಂದು ಅವನನ್ನು ಅಪ್ಪಿಕೊಂಡರು.
11. ಪಾಳೆಗಾರ ಮತ್ತು ದೊಂಬರ ನಡುವೆ ನಡೆದ ಪಂಥದ ಸವಲನ್ನು ವಿವರಿಸಿ.
*ಉತ್ತರ: ಪಾಳೆಯಗಾರ ಮತ್ತು ದೊಂಬನ ನಡುವೆ ನಡೆದ ಪಂಥವು **ಅಧಿಕಾರ ಮತ್ತು ಆತ್ಮಗೌರವದ ನಡುವಿನ ಸಂಘರ್ಷವನ್ನು** ತೋರಿಸುತ್ತದೆ. ದೊಂಬನು ತನ್ನ ಅದ್ಭುತ ಹಾರುವ ವಿದ್ಯೆಯಿಂದ ಜನರನ್ನು ಆಕರ್ಷಿಸುತ್ತಿದ್ದನು. ಇದರಿಂದ ತನ್ನ ಅಧಿಕಾರಕ್ಕೆ ಧಕ್ಕೆ ಬಂದಿದೆ ಎಂದು ಭಾವಿಸಿದ ಪಾಳೆಯಗಾರನು ದೊಂಬನಿಗೆ ಸವಾಲು ಹಾಕಿದನು. ಕೋಡುಗಲ್ಲ ಬೆಟ್ಟದ ಶಿಖರದ ನೆತ್ತಿಯಿಂದ ಒಂದೇ ಏಟಿಗೆ ಕೆಳಗೆ ಹಾರಿ, ತನ್ನ ಶಕ್ತಿಗನುಸಾರ ಎಷ್ಟು ದೂರ ಹೋಗಬಲ್ಲನೋ ಅಷ್ಟು ದೂರ ಹಾರಬೇಕೆಂದು ಪಾಳೆಯಗಾರನು ಹೇಳಿದನು. ಹಾಗೆ ಮಾಡಲು ಸಾಧ್ಯವಾಗದಿದ್ದರೆ ದೊಂಬನಿಗೆ ಉಳಿಗಾಲವಿಲ್ಲವೆಂದು ಎಚ್ಚರಿಸಿದನು.
ದೊಂಬನು ಪಾಳೆಯಗಾರನ ಸವಾಲನ್ನು ಧೈರ್ಯದಿಂದ ಸ್ವೀಕರಿಸಿದನು. ಆದರೆ ತನ್ನದೊಂದು ಷರತ್ತನ್ನು ಮುಂದಿಟ್ಟನು. ತಾನು ಶಿಖರದಿಂದ ಹಾರಿ ಎಷ್ಟು ದೂರ ಹೋಗಿ ಬೀಳುತ್ತಾನೋ, **ಅಷ್ಟೂ ಭೂಮಿ, ಜಾಗ ಮತ್ತು ನೆಲವನ್ನು ತನಗೂ ತನ್ನವರಿಗೂ ನೀಡಬೇಕು** ಎಂದು ಕೇಳಿದನು. ಪಾಳೆಯಗಾರನು ಮೊದಲು ಈ ಬೇಡಿಕೆಯನ್ನು ತಿರಸ್ಕರಿಸಿದರೂ, ದೊಂಬನು ತನ್ನ ಷರತ್ತಿಗೆ ಒಪ್ಪಿದರೆ ಮಾತ್ರ ಪಂಥಕ್ಕೆ ಸಿದ್ಧನೆಂದು ದೃಢವಾಗಿ ಹೇಳಿದನು. ಕೊನೆಗೆ ಪಾಳೆಯಗಾರನು ಅವನ ಬೇಡಿಕೆಗೆ ಒಪ್ಪಿಕೊಂಡನು.
ನಂತರ ದೊಂಬನು ಕಪ್ಪು ಕಂಬಳಿಯನ್ನು ರೆಕ್ಕೆಗಳಂತೆ ಕಟ್ಟಿಕೊಂಡು ಬೆಟ್ಟದ ಶಿಖರದಿಂದ ಜಿಗಿದು ಬಹಳ ದೂರ ಹಾರಿದನು. ಹೀಗೆ ಪಂಥದಲ್ಲಿ ದೊಂಬನು ತನ್ನ **ಧೈರ್ಯ, ಸಾಹಸ ಮತ್ತು ಆತ್ಮಗೌರವವನ್ನು** ಪ್ರದರ್ಶಿಸಿದನು.
12. ದೊಂಬನ ಬೇಡಿಕೆಯನ್ನು ಈಡೇರಿಸದ ಪಾಳೆಗಾರನ ಮನಸ್ಥಿತಿಯನ್ನು ತಿಳಿಸಿ.
ಉತ್ತರ: ದೊಂಬನು ಪಾಳೆಯಗಾರನ ಸವಾಲನ್ನು ಸ್ವೀಕರಿಸುವ ಮೊದಲು ಒಂದು ಷರತ್ತನ್ನು ಮುಂದಿಟ್ಟಿದ್ದನು. ತಾನು ಕೋಡುಗಲ್ಲ ಬೆಟ್ಟದ ಶಿಖರದಿಂದ ಹಾರಿ ಎಷ್ಟು ದೂರ ಹೋಗಿ ಬೀಳುತ್ತಾನೋ, ಅಷ್ಟೂ ಭೂಮಿಯನ್ನು ತನಗೂ ತನ್ನವರಿಗೂ ನೀಡಬೇಕೆಂದು ಕೇಳಿದ್ದನು. ಪಾಳೆಯಗಾರನು ಆ ಬೇಡಿಕೆಗೆ ಒಪ್ಪಿಕೊಂಡು ದೊಂಬನನ್ನು ಹಾರಲು ಕಳುಹಿಸಿದ್ದನು. ದೊಂಬನು ತನ್ನ ಜೀವವನ್ನೇ ಪಣಕ್ಕಿಟ್ಟು ಸಾಹಸದಿಂದ ಬಹಳ ದೂರ ಹಾರಿದನು. ಆದರೆ ದೊಂಬನು ಯಶಸ್ವಿಯಾಗಿ ನೆಲಕ್ಕಿಳಿದ ನಂತರ ಪಾಳೆಯಗಾರನು ತನ್ನ ಮಾತನ್ನು ಉಳಿಸಿಕೊಳ್ಳದೆ ಅವನ ಬೇಡಿಕೆಯನ್ನು ನಿರಾಕರಿಸಿದನು.
ದೊಂಬನು ತನ್ನ ಮಾತಿನಂತೆ ನಡೆದುಕೊಂಡಿದ್ದರೂ ಪಾಳೆಯಗಾರನು ತನ್ನ ಮಾತಿಗೆ ತಪ್ಪಲು ಕಾರಣ ಅವನ **ಅಹಂಕಾರ, ಅಧಿಕಾರದ ಮದ ಮತ್ತು ಸ್ವಾರ್ಥ**. ಒಬ್ಬ ಸಾಮಾನ್ಯ ದೊಂಬನು ತನ್ನ ಸೀಮೆಯಲ್ಲಿ ತನ್ನ ಎದುರಿಗೇ ಸವಾಲು ಹಾಕಿ ಜನರ ಗೌರವ ಗಳಿಸಿರುವುದನ್ನು ಪಾಳೆಯಗಾರ ಸಹಿಸಿಕೊಳ್ಳಲಾಗಲಿಲ್ಲ. ದೊಂಬನಿಗೆ ಭೂಮಿಯನ್ನು ನೀಡಿದರೆ ತನ್ನ ಅಧಿಕಾರ ಮತ್ತು ಪ್ರತಿಷ್ಠೆಗೆ ಧಕ್ಕೆ ಉಂಟಾಗುತ್ತದೆ ಎಂದು ಅವನು ಭಾವಿಸಿದನು.
ದೊಂಬನು ಭೂಮಿಯನ್ನು ಕೇಳಿದಾಗ ಪಾಳೆಯಗಾರನು ಅವನನ್ನು ಹಾಸ್ಯಮಾಡಿ, ‘ಇದು ಕೇವಲ ನಿನ್ನ ತಂತ್ರ-ಮಂತ್ರದ ಪರೀಕ್ಷೆ; ನನ್ನ ಸೀಮೆಗೂ ನಿನಗೂ ಯಾವುದೇ ಸಂಬಂಧವಿಲ್ಲ’ ಎಂದು ಹೇಳಿದನು. ತನ್ನ ಮಾತನ್ನು ಉಳಿಸಿಕೊಳ್ಳುವ ಬದಲು ದೊಂಬನನ್ನು ಮತ್ತೊಂದು ಊರಿಗೆ ಹೋಗಿ ದೊಂಬರಾಟ ಮಾಡಿ ಹೊಟ್ಟೆಬಟ್ಟೆ ನೋಡಿಕೊಳ್ಳುವಂತೆ ಅವಮಾನಿಸಿದನು. ಇದರಿಂದ ಪಾಳೆಯಗಾರನ **ಕ್ರೌರ್ಯ, ಅನ್ಯಾಯ ಮತ್ತು ಶೋಷಕ ಮನೋಭಾವ** ವ್ಯಕ್ತವಾಗುತ್ತದೆ.
ದೊಂಬನು ಭೂಮಿಯೊಂದಿಗೆ ಒಂದಾಗಿ ಹೋಗುವುದನ್ನು ಕಂಡಾಗಲೂ ಪಾಳೆಯಗಾರನಿಗೆ ಪಶ್ಚಾತ್ತಾಪವಾಗಲಿಲ್ಲ. ಬದಲಾಗಿ ಅವನನ್ನು ‘ನನ್ನ ಭೂಮಿಗೆ ಗೊಬ್ಬರವಾದ’ ಎಂದು ತಿರಸ್ಕಾರದಿಂದ ಹೇಳಿದನು. ಇದರಿಂದ ಪಾಳೆಯಗಾರನ ಮನಸ್ಸಿನಲ್ಲಿ ಮಾನವೀಯತೆಗಿಂತ ಅಧಿಕಾರ ಮತ್ತು ಸ್ವಾರ್ಥವೇ ಮೇಲುಗೈ ಸಾಧಿಸಿತ್ತು ಎಂಬುದು ಸ್ಪಷ್ಟವಾಗುತ್ತದೆ. ಹೀಗಾಗಿ ದೊಂಬನ ಬೇಡಿಕೆಯನ್ನು ಈಡೇರಿಸದ ಪಾಳೆಯಗಾರನು **ಅಧಿಕಾರದ ದರ್ಪದಿಂದ ಕೂಡಿದ, ಮಾತಿಗೆ ತಪ್ಪುವ, ಸ್ವಾರ್ಥಿ ಮತ್ತು ಶೋಷಕ ವ್ಯಕ್ತಿಯ ಪ್ರತೀಕ**ವಾಗಿ ಕಥೆಯಲ್ಲಿ ಮೂಡಿಬರುತ್ತಾನೆ.
13. ದೊಂಬನು ಬೇರಾಗಿ ಕವಲೊಡೆದು ಭೂಮಿ ಒಳಗಡೆ ಹುದುಗಿರುವ ಬಗೆಯನ್ನು ವಿಶ್ಲೇಷಿಸಿ
**ಉತ್ತರ:**
ಪಾಳೆಯಗಾರನು ದೊಂಬನಿಗೆ ನೀಡಿದ ಮಾತನ್ನು ಉಳಿಸಿಕೊಳ್ಳದೆ, ಅವನಿಗೆ ಭೂಮಿಯನ್ನು ನೀಡಲು ನಿರಾಕರಿಸಿದಾಗ ದೊಂಬನಿಗೆ ತೀವ್ರವಾದ ನೋವು ಮತ್ತು ಆಕ್ರೋಶ ಉಂಟಾಗುತ್ತದೆ. ತಾನು ಜೀವವನ್ನು ಪಣಕ್ಕಿಟ್ಟು ಪಂಥವನ್ನು ಗೆದ್ದರೂ ತನ್ನ ಹಕ್ಕಿನ ಭೂಮಿಯನ್ನು ಪಡೆಯಲು ಸಾಧ್ಯವಾಗಲಿಲ್ಲ. ಇದರಿಂದ ಅವನು ತನ್ನ ದೇಹವನ್ನೇ ಭೂಮಿಗೆ ಅರ್ಪಿಸಿಕೊಳ್ಳುವ ನಿರ್ಧಾರಕ್ಕೆ ಬರುತ್ತಾನೆ.
ದೊಂಬನು ಭೂಮ್ಯಾಕಾಶವನ್ನು ದಿಟ್ಟಿಸಿ, ಪಾಳೆಯಗಾರನನ್ನು ಮಾರ್ಮಿಕವಾಗಿ ನೋಡುತ್ತಾ ತನ್ನ ದೇಹವನ್ನು ಬಿಗಿಗೊಳಿಸಿ ನೆಲಕ್ಕೆ ದೊಪ್ಪನೆ ಬಿದ್ದುಕೊಳ್ಳುತ್ತಾನೆ. ನಂತರ ಅವನ ಕೈಕಾಲುಗಳು **ಸಾವಿರಾರು ಕವಲುಗಳಾಗಿ ವಿಸ್ತರಿಸಿ, ಬೇರುಗಳಂತೆ ಭೂಮಿಯ ಆಳಕ್ಕೆ ಇಳಿಯತೊಡಗುತ್ತವೆ**. ಅವನ ದೇಹ ನಿಧಾನವಾಗಿ ಬಿರಿಯುತ್ತಾ, ಅರಳುತ್ತಾ, ಭೂಮಿಯೆಲ್ಲೆಡೆ ವ್ಯಾಪಿಸುತ್ತದೆ. ಅವನ ಬೆರಳುಗಳು ಅಸಂಖ್ಯಾತ ಬೇರುಗಳಾಗಿ, ರೋಮರೋಮವೂ ಸಣ್ಣ ಸಣ್ಣ ಕವಲುಗಳಾಗಿ ಪರಿವರ್ತನೆಗೊಂಡು ಭೂಮಿತಾಯಿಯಲ್ಲಿ ಐಕ್ಯವಾಗುತ್ತವೆ. ಅವನ ನರನಾಡಿಗಳೂ ಭೂಮಿಯ ಗರ್ಭವನ್ನು ಪ್ರವೇಶಿಸುತ್ತವೆ.
ಪಾಳೆಯಗಾರನು ಮತ್ತು ಅವನ ಜನರು ದೊಂಬನನ್ನು ಭೂಮಿಯಿಂದ ಕಿತ್ತುಹಾಕಲು ಪ್ರಯತ್ನಿಸಿದರೂ ಅದು ಸಾಧ್ಯವಾಗುವುದಿಲ್ಲ. ಅವನನ್ನು ಕಿತ್ತುಹಾಕಲು ಪ್ರಯತ್ನಿಸಿದಷ್ಟೂ ಅವನ ದೇಹ ಇನ್ನಷ್ಟು ಭೂಮಿಯೊಳಗೆ ಬಲವಾಗಿ ಬೇರೂರುತ್ತದೆ. ಕೊನೆಗೆ ಪಾಳೆಯಗಾರನು ಇದು ತನ್ನಿಂದ ತಡೆಯಲಾಗದ ಸಂಗತಿ ಎಂದು ತಿಳಿದು ಅವನನ್ನು ಅಲ್ಲಿಯೇ ಬಿಟ್ಟು ಹೋಗುತ್ತಾನೆ.
ದೊಂಬನ ಈ **ಬೇರಾಗಿ ಭೂಮಿಯೊಳಗೆ ಹುದುಗುವಿಕೆ** ಕೇವಲ ಅದ್ಭುತ ಘಟನೆ ಅಲ್ಲ; ಅದು ಶೋಷಿತ ಜನರ **ಭೂಮಿಯ ಮೇಲಿನ ಹಕ್ಕು, ಅಸ್ತಿತ್ವ ಮತ್ತು ಆತ್ಮಗೌರವದ ಪ್ರತೀಕ**ವಾಗಿದೆ. ಒಬ್ಬ ವ್ಯಕ್ತಿಯನ್ನು ಭೂಮಿಯಿಂದ ಕಿತ್ತುಹಾಕಬಹುದು, ಆದರೆ ಭೂಮಿಯೊಂದಿಗೆ ಬೆಸೆದುಕೊಂಡ ಜನರ ಹಕ್ಕು ಮತ್ತು ಅಸ್ತಿತ್ವವನ್ನು ನಾಶಮಾಡಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಲೇಖಕರು ಇಲ್ಲಿ ನೀಡಿದ್ದಾರೆ. ಕೊನೆಗೆ ದೊಂಬನ ದೇಹವೇ ಗಿಡಮರ, ಬಳ್ಳಿ, ಹೂವು, ಹಣ್ಣು ಮತ್ತು ಹಸಿರು ಸಿರಿಯಾಗಿ ರೂಪುಗೊಳ್ಳುವುದು ಅವನು ಭೂಮಿಯೊಂದಿಗೆ ಶಾಶ್ವತವಾಗಿ ಒಂದಾದುದನ್ನು ಸೂಚಿಸುತ್ತದೆ.
14. ಭೂಮಿ ಕತೆಯಲ್ಲಿ ಭೂಮಿಯ ಒಡೆಯನು ಪಾಳೆಗಾರನೋ ಅಥವಾ ದೊಂಬನೋ ನಿಮ್ಮ ಮಾತುಗಳಲ್ಲಿ ಚರ್ಚಿಸಿ.
ಉತ್ತರ: ಡಾ. ಮೊಗಳ್ಳಿ ಗಣೇಶ್ ಅವರ **‘ಭೂಮಿ’** ಕಥೆಯಲ್ಲಿ ಭೂಮಿಯ ನಿಜವಾದ ಒಡೆಯ **ಪಾಳೆಯಗಾರನಲ್ಲ, ದೊಂಬನೇ** ಎಂಬುದು ನನ್ನ ಅಭಿಪ್ರಾಯ. ಪಾಳೆಯಗಾರನು ತನ್ನ ಅಧಿಕಾರದ ಬಲದಿಂದ ಭೂಮಿಯ ಮೇಲೆ ತನ್ನ ಒಡೆತನವಿದೆ ಎಂದು ಭಾವಿಸುತ್ತಾನೆ. ಆದರೆ ಅವನ ಒಡೆತನವು ಕೇವಲ ಅಧಿಕಾರ ಮತ್ತು ಬಲದ ಮೇಲೆ ನಿಂತಿದೆ. ಅವನು ದೊಂಬನಿಗೆ ಕೊಟ್ಟ ಮಾತನ್ನೂ ಉಳಿಸಿಕೊಳ್ಳುವುದಿಲ್ಲ. ಇದರಿಂದ ಅವನ ಸ್ವಾರ್ಥ, ದರ್ಪ ಮತ್ತು ಶೋಷಕ ಮನೋಭಾವ ವ್ಯಕ್ತವಾಗುತ್ತದೆ.
ಇದಕ್ಕೆ ವಿರುದ್ಧವಾಗಿ ದೊಂಬನು ಭೂಮಿಯನ್ನು **ತಾಯಿಯಂತೆ ಪ್ರೀತಿಸುತ್ತಾನೆ**. ಊರೂರು ಅಲೆದಾಡುತ್ತಿದ್ದ ಅವನಿಗೆ ಭೂಮಿತಾಯಿ ತನ್ನ ಮಣ್ಣಿನ ಹಸಿರು ಸಿರಿಯನ್ನು ನೀಡಲು ಕರೆದಂತೆ ಅನುಭವವಾಗುತ್ತದೆ. ಆಗ ಅವನ ಮನಸ್ಸಿನಲ್ಲಿ ‘ಮಣ್ಣಿನ ಕನಸು’ ಮೂಡುತ್ತದೆ. ಪಾಳೆಯಗಾರನ ಸವಾಲನ್ನು ಸ್ವೀಕರಿಸಿ, ತನ್ನ ಜೀವವನ್ನೇ ಪಣಕ್ಕಿಟ್ಟು ಎಷ್ಟು ದೂರ ಹಾರುತ್ತಾನೋ ಅಷ್ಟು ಭೂಮಿ ತನಗೂ ತನ್ನವರಿಗೂ ಸೇರಬೇಕು ಎಂದು ಕೇಳುತ್ತಾನೆ.
ಪಾಳೆಯಗಾರನು ಮಾತಿಗೆ ತಪ್ಪಿದಾಗ ದೊಂಬನು ತನ್ನ ದೇಹವನ್ನೇ ಭೂಮಿಗೆ ಅರ್ಪಿಸಿಕೊಳ್ಳುತ್ತಾನೆ. ಅವನ ಕೈಕಾಲುಗಳು ಬೇರುಗಳಾಗಿ, ದೇಹವು ಭೂಮಿಯೊಳಗೆ ಹುದುಗಿ, ನಂತರ ಗಿಡಮರ, ಬಳ್ಳಿ, ಹೂವು, ಹಣ್ಣು ಮತ್ತು ಹಸಿರು ಸಿರಿಯಾಗಿ ಪರಿವರ್ತನೆಯಾಗುತ್ತದೆ. ಹೀಗೆ ದೊಂಬನು **ಭೂಮಿಯೊಂದಿಗೆ ಶಾಶ್ವತವಾಗಿ ಒಂದಾಗುತ್ತಾನೆ**.
ಆದ್ದರಿಂದ ಭೂಮಿಯ ಒಡೆತನವು ಕೇವಲ ದಾಖಲೆ, ಅಧಿಕಾರ ಅಥವಾ ಬಲದಿಂದ ನಿರ್ಧಾರವಾಗುವುದಿಲ್ಲ. **ಭೂಮಿಯನ್ನು ಪ್ರೀತಿಸಿ, ಅದಕ್ಕಾಗಿ ಬದುಕಿ, ತನ್ನ ಅಸ್ತಿತ್ವವನ್ನೇ ಅದಕ್ಕೆ ಅರ್ಪಿಸಿಕೊಂಡ ದೊಂಬನೇ ಭೂಮಿಯ ನಿಜವಾದ ಒಡೆಯ.** ಪಾಳೆಯಗಾರನು ಭೂಮಿಯನ್ನು ಆಸ್ತಿಯಾಗಿ ನೋಡಿದರೆ, ದೊಂಬನು ಅದನ್ನು ತಾಯಿಯಾಗಿ ಕಾಣುತ್ತಾನೆ. ಇದೇ ಕಥೆಯ ಪ್ರಮುಖ ಆಶಯವಾಗಿದೆ.
