ಪ್ರಥಮ ಪೂರ್ವಸಿದ್ದತಾ ಪರೀಕ್ಷೆ ಸೆಪ್ಟೆಂಬರ್-೨೦೨೬
ಬಿ.ಸಿ.ಎ ಪ್ರಥಮ ಸೆಮಿಸ್ಟರ್, ವಿಷಯ: ಗಣಕ ಕನ್ನಡ-೧,
ಅವಧಿ : ೩. ಗಂಟೆಗಳು, ಅಂಕಗಳು-೮೦
I.ಈ ಕೆಳಗಿನ ಆರು
ಪ್ರಶ್ನೆಗಳಿಗೆ 40 ಪದಗಳಿಗೆ ಮೀರದಂತೆ ಉತ್ತರ ಬರೆಯಿರಿ 6 X 2 = 12
೧. ಬಟ್ಟೆ ಅಂಗಡಿಯ ಮುಂದೆ ನಿಂತು ಯಲ್ಲನು
ಏನನ್ನು ನೋಡುತ್ತಿದ್ದನು?
೨.ತಾಯಿಯ ಬಡಕಲು ಹೊಟ್ಟೆ ಉಬ್ಬಿದನ್ನು ನೋಡಿ
ಯಲ್ಲಾ ಏನೆಂದು ಕೇಳಿದನು?
೩.ಸೋಸಲು ಮೀನಿನ ಪ್ರಸಂಗವನ್ನು ಕುರಿತು
ಬರೆಯಿರಿ.
೪. ಒಮ್ಮೆ ಲೇಖಕರು ತಾಯಿಯ ತವರೂರಿಗೆ ಹೋದಾಗ
ಮಾವ ಏನೆಂದು ಹೇಳಿದರು ?
೫. ಸೈಕಲ್ ತಳ್ಳಿಕೊಂಡು ಹೋದ ಪ್ರಸಂಗವನ್ನು
ಕುರಿತು ಬರೆಯಿರಿ.
೬. ಸೈಕಲ್ ನಲ್ಲಿ ಹೈಸ್ಕೂಲಿಗೆ ಹೋಗುತ್ತಿದ್ದ
ಸಂದರ್ಭವನ್ನು ತಿಳಿಸಿ.
II.ಈ
ಕೆಳಗಿನ ನಾಲ್ಕು ಪ್ರಶ್ನೆಗಳಿಗೆ 80 ಪದಗಳಿಗೆ ಮೀರದಂತೆ ಉತ್ತರ ಬರೆಯಿರಿ 4 X
5 = 20
೧.ಹಣವನ್ನು ತೆಗೆದುಕೊಂಡು ಹೋದ ಅಪ್ಪನು
ಮನೆಗೆ ಹೇಗೆ ಹಿಂತಿರುಗಿದ? ಚರ್ಚಿಸಿ.
೨.ಯಲ್ಲನ ಹೊಸ ಅಂಗಿಯ ಕನಸು ಕನಸಾಗಿಯೇ ಉಳಿಯಲು
ಕಾರಣವೇನು? ವಿವರಿಸಿ.
೩.ಲೇಖಕರ ಮನೆ ನಾಯಿಯ ಪ್ರಸಂಗವನ್ನು ಕುರಿತು
ವಿವರಿಸಿ.
೪.ಸೈಕಲ್ ಬಳಸುವಿಕೆಯ ಅನುಕೂಲಗಳೇನು ?ತಿಳಿಸಿ
III.ಈ ಕೆಳಗಿನ ಮೂರು ಪ್ರಶ್ನೆಗಳಿಗೆ 160 ಪದಗಳಿಗೆ ಮೀರದಂತೆ ಉತ್ತರಿಸಿ. 3 X 10 = 30
೧.ಹೊಸ ಅಂಗಿಯ ಕನಸು ಕಂಡ ಬಾಲಕ ಯಲ್ಲನು ಮನೆಯ ಜವಬ್ದಾರಿಯನ್ನು ಹೇಗೆ
ಹೊತ್ತುಕೊಲ್ಲಬೇಕಾಗುತ್ತದೆ? ಕಥೆ ಹಿನ್ನೆಲೆಯಲ್ಲಿ
ವಿವೇಚಿಸಿ.
೨.ಕಾರಿಲ್ಲದ ಜೀವನ ಕುರಿತು ಅಮೇರಿಕಾದ ಪ್ರಸಂಗದ ಹಿನ್ನೆಲೆಯಲ್ಲಿ ವಿವರಿಸಿ.
೩.ಕಬ್ಬಿನ ಗದ್ದೆಯಲ್ಲಿ ಗುಂಡು ಹಾರಿಸಿದ ಪ್ರಸಂಗವನ್ನು ಕುರಿತು ಬರೆಯಿರಿ.
೪.ಲೇಖಕರು ಚಿಕ್ಕವರಾಗಿದ್ದಾಗ ಕಾಡು ಬೆಕ್ಕು ಹಾಗೂ ಮೊಲದ ಬೇಟೆಯನ್ನು ಕುರಿತು ತಿಳಿಸಿ.
IV.
ವ್ಯಾಸಾಂಗ ಪ್ರಮಾಣ
ಪತ್ರ ಕೋರಿ ನಿಮ್ಮ ಪ್ರಾಂಶುಪಾಲರಿಗೆ ಒಂದು ಅರ್ಜಿ ಬರೆಯಿರಿ. 1 X 5 = 5
V.ನಿಮ್ಮ ಕಾಲೇಜಿನಲ್ಲಿ ಆಚರಿಸಲಾದ ಕನ್ನಡ ರಾಜ್ಯೋತ್ಸವ ಸಮಾರಂಭದ ವರದಿಯನ್ನು ರಚಿಸಿ. 1 X 5 = 5
VI.ಕೆಳಗೆ ಕೊಟ್ಟಿರುವ ಪಠ್ಯವನ್ನು ಮೂರನೇ ಒಂದು ಭಾಗಕ್ಕೆ ಸಂಕ್ಷೇಪಿಸಿ, ಸೂಕ್ತ ಶೀರ್ಷಿಕೆ
ನೀಡಿ. 1 X 4 = 4
ಹೊಸೂರು
ಗೌರೀಬಿದನೂರು ತಾಲ್ಲೂಕಿನ ಒಂದು ಹೋಬಳಿ ಕೇಂದ್ರ, ಗೌರೀಬಿದನೂರು-ಮಧುಗಿರಿ ರಸ್ತೆಯಲ್ಲಿ ಗೌರೀಬಿದನೂರಿಗೆ
10 ಕಿಲೋಮೀಟರ್ ದೂರ ದಲ್ಲಿದೆ. ಅದು ಹುಟ್ಟಿದಾಗ ಹೊಸೂರಾಗಿತ್ತು. ಈಗ ಸಾಕಷ್ಟು ಹಳೆಯ ಊರಾಗಿದೆ.
ಊರಿನಲ್ಲಿ ಸುಮಾರು 1500 ಮನೆಗಳು. 7500ಕ್ಕೂ ಹೆಚ್ಚು ಜನಸಂಖ್ಯೆ. ಊರಿನ ರಸ್ತೆ, ಚರಂಡಿಗಳೆಲ್ಲಾ
ನಮ್ಮ ದೇಶದ ಸಂಪ್ರದಾಯದಂತೆ ಎಲ್ಲಾ ಅಸ್ತವ್ಯಸ್ತ. ಮನೆಗಳನ್ನು ಕಟ್ಟಿರುವುದೂ ಅಷ್ಟೇ. ಜಾಗ ಇದ್ದ
ಕಡೆ ಮನೆಗಳು, ಯಾವುದರಲ್ಲಿಯೂ ಅಂತಹ ವ್ಯವಸ್ಥೆ ಇಲ್ಲ. ಎಲ್ಲಾ ದಿಕ್ಕಾಪಾಲು.
ಎಲ್ಲಾ
ಕಡೆ ಇದ್ದ ಹಾಗೆ ಇಲ್ಲಿಯೂ ಹರಿಜನಕೇರಿ,ಪರಿಶಿಷ್ಟ ವರ್ಗದ ಕೇರಿ. ಊರಿನ ಅಂಚಿನಲ್ಲಿ
'ಎಡಗೈ'ನವರಿಗೆ ಒಂದು ಕೇರಿ, 'ಬಲಗೈ'ನವರಿಗೆ ಮತ್ತೊಂದು ಕೇರಿ. ಒಂದೊಂದರಲ್ಲೂ ಸುಮಾರು 100
ಮನೆಗಳು. ಇವೆಲ್ಲಾ ಜನರಿಂದ ತುಂಬಿ ತುಳುಕಾಡುವ ಸಂಸಾರಗಳು. ಎಡಗೈ, ಬಲಗೈ ಅವರಿಗೆ ಪ್ರತ್ಯೇಕವಾದ
ಬಾವಿಗಳು, ದೇವಸ್ಥಾನಗಳು, ಬಾವಿ ಗಳು ಪರಸ್ಪರ ಅಸ್ಪಶ್ಯ. ದೇವಸ್ಥಾನಗಳೂ ಅಷ್ಟೇ. ಬಲಗೈ, ಎಡಗೈಗಳ
ಮಧ್ಯೆ ಮದುವೆ ಗಳಾಗಲೀ, ಊಟಗಳಾಗಲೀ ನಿಷಿದ್ದ. ಬಲಗೈ ಎಡಗೈಗಿಂತ ಶ್ರೇಷ್ಠವೆಂಬ ಪ್ರತೀತಿ ಮೊದಲಿ
ನಿಂದ ಬಂದಿದೆ. ಊರಿನಲ್ಲಿ ಬಲಿಜರ ಮನೆಗಳು 200ಕ್ಕಿಂತ ಹೆಚ್ಚಾಗಿವೆ. ನಾಯಕರ ಮನೆ 150; 25-30
ಬ್ರಾಹ್ಮಣರ ಮನೆಗಳಿವೆ. 30-40 ವೈಶ್ಯರ ಮನೆಗಳು, ಒಕ್ಕಲಿಗ, ಕುರುಬ, ಮರಾಠ ಮುಖ್ಯವಾದ ಇತರ
ಜಾತಿಗಳು. 20-30 ಮುಸಲ್ಮಾನರ ಮನೆಗಳೂ ಇವೆ. ಊರಿ ನಲ್ಲಿ ಬಡವರೇ ತುಂಬಾ ಹೆಚ್ಚು ಮಂದಿ. ಎಲ್ಲೋ
ಕೆಲವರು ಮಧ್ಯಮ ವರ್ಗದವರು. ಅಲ್ಲೊಬ್ಬರು ಇಲ್ಲೊಬ್ಬರು ಶ್ರೀಮಂತರು. ಬಹುಜನರ ಮಾತೃಭಾಷೆ ತೆಲುಗು.
ಉಳಿದವರಿಗೆಲ್ಲರಿಗೂ ಕನ್ನಡ ಭಾಷೆ ಚೆನ್ನಾಗಿ ಗೊತ್ತು.
ವೆಂಕಟರಮಣ
ಸ್ವಾಮಿ, ಆಂಜನೇಯಸ್ವಾಮಿ, ವೀರಭದ್ರಸ್ವಾಮಿ, ಈಶ್ವರ, ಗ್ರಾಮ ದೇವತೆಗಳಾದ ಮಾರಮ್ಮ, ಮರಿಗಮ್ಮ,
ಬಂಡಮ್ಮ-ಇವರುಗಳಿಗೆಲ್ಲಾ ದೇವಸ್ಥಾನಗಳಿವೆ. ಈಚೀಚಿಗೆ ಶನಿದೇವರಿಗೂ ಒಂದು ಒಳ್ಳೆಯ ದೇವಸ್ಥಾನ
ಕಟ್ಟಿದ್ದಾರೆ. ಜನರಲ್ಲಿದ್ದ ಹಾಗೇ ದೇವರುಗಳಲ್ಲೂ ಆರ್ಥಿಕ ಅಸಮಾನತೆ ಇದೆ. ಸ್ವಲ್ಪ ಹೆಚ್ಚು
ಕಡಿಮೆ ಎಲ್ಲಾ ದೇವರುಗಳೂ ಬಡತನದಲ್ಲಿಯೇ ಕಾಲ ತಳ್ಳುತ್ತಿವೆ. ಶನಿದೇವರು ಸ್ವಲ್ಪ ಉತ್ತಮ. ಹೊಸ
ಆಂಜನೇಯ ಸ್ವಾಮಿ ಬಂದು ಹಿಂದಿನ ಆಂಜನೇಯಸ್ವಾಮಿಗೆ ಅನಾದರದ ಮನೋಭಾವ, ಯಾವ ದೇವರೂ ಶ್ರೀಮಂತ
ದೇವರಲ್ಲ. ಹಳ್ಳಿಗಳಲ್ಲಿ ಹಾಗೆ ಆಗಲು ಸಾಧ್ಯವೂ ಇಲ್ಲ. ಹೊಸೂರು ಮತ್ತು ಸುತ್ತಮುತ್ತ ಯಾವಾಗಲೂ
ಅನಾವೃಷ್ಟಿಯೇ. ಕೋಲಾರ ಜಿಲ್ಲೆಯೇ ಹಾಗೆ. ಖುಷಿ ಜಮೀನೇ ಹೆಚ್ಚು. ರಾಗಿ, ಕಡಲೆಕಾಯಿ ಮುಖ್ಯವಾದ
ಬೆಳೆ,
VII.ನಿಮಗೆ ಗೊತ್ತಿರುವ ನಾಲ್ಕು ಗಾದೆಗಳನ್ನು
ಬರೆಯಿರಿ 1 X 4 =
4
