ಎಂದು ರಾಗವಾಗಿ ಗಿರಿಜಾ 'ರೀ' ಎಂದರೆ ಸಾಕು ಏನೋ ಬಂತು ಪೀಕಲಾಟ ಗೊತ್ತು ಸಿದ್ದರಾಮನಿಗೆ. ಮನಸ್ಸಿಲ್ಲದಿದ್ದರೂ ಅವಳ ಅವಳ ಕಡೆ ಕಣ್ಣು ಹೊರಳಿಸುತ್ತಾನೆ.
ರೀ
ಏನೇ?
ರೀ
'ಏನು ಹೇಳೇ?'
'ಏನು ಅಂತ ನನ್ನೇ ಕೇಳೀರಲ್ಲ! ಬಹಳ ಘಾಟಿ ಕಣೋ ನೀವು!' ಎಂದು ಅವಳೊಂದು ಕಣ್ಣ ಬಾಣ ಬಿಡುತ್ತಾಳೆ,
ಆ ಬಾಣದಿಂದ ಏಟು ತಿಂದು ತಿಂದೂ ಅಭ್ಯಾಸವಾಗಿಹೋಗಿದೆ ಅವನಿಗೆ. ಅದರಿಂದ ಪರಿಣಾಮವಾಗುವಂಥ ಮನಃಸ್ಥಿತಿಯೂ ಅವನಿಗಿರುವದಿಲ್ಲ. ಬೆಳಗಿನಿಂದ ಸಾಯಂಕಾಲದವರೆಗೂ ಡಿಪೋವಿನಲ್ಲಿ ಕತ್ತೆಯಂತೆ ದುಡಿದು ದುಡಿದು ದಣಿದಿರುವ ದೇಹ. ಜೀವರಹಿತ ಯಾಂತ್ರಿಕ ಕೆಲಸದಿಂದ ಬೇಸರಗೊಂಡಿರುತ್ತದೆ ಮನಸ್ಸು. ಹಾಸಿಗೆಯ ಸ್ಪರ್ಶವಾಗುವುದೇ ತಡ, ಕಣ್ಣುಗಳು ತಾವಾಗಿಯೇ ಮುಚ್ಚಿಕೊಳ್ಳುತ್ತವೆ. ಕಠೋರ ಪ್ರಪಂಚದ ಹೋರಾಟದಲ್ಲಿ ದಣಿದ ಮನಸ್ಸು ರಹಸ್ಯಮಯ ನಿದ್ರಾ-ಪ್ರಪಂಚದಲ್ಲಿ ಶಾಂತವಾಗಲಾಶಿಸುತ್ತದೆ. ಇಂಥ ಸಮಯದಲ್ಲಿ ಪ್ರಣಯಾಲಾಪಕ್ಕೆಲ್ಲಿಯ ಉತ್ಸಾಹ ಬಂದೀತು? ಮದುವೆಯಾದ ಹೊಸದರಲ್ಲಿ ಮುದ್ದು ಮುದ್ದಾಗಿ ತೋರುತಿದ್ದ ಗಿರಿಜೆಯ ಮಾತು ಈಗ ಮೊದ್ದು ಮೊದ್ದಾಗಿ ಕಾಣುತ್ತಿವೆ. 'ಈಕೆ ಮಾತನಾಡದೆ ಸುಮ್ಮನಿದ್ದರೆ ಬದುಕಿಕೊಂಡೀತು ನನ್ನ ಬಡಜೀವ, ತೆಪ್ಪಗೆ ಬಿದ್ದು ಕೊಂಡಿರಬಾರದೇ ಇವಳು!' ಎಂದು ಅನ್ನಿಸುತ್ತದೆ ಅವನಿಗೆ. ಆದರಾಕೆ ಬಿಡಬೇಕಲ್ಲ! ತನ್ನ ಕಡೆ ಬೆನ್ನು ಮಾಡಿ ಗೋಡೆಯ ಕಡೆ ಮುಖ ಹೊರಳಿಸಿ ನಿದ್ರೆ ಹೋಗಲೆತ್ನಿಸುವ ಪತಿಯ ತಲೆಗೂದಲನ್ನು ಹಿಡಿದು ಎಳೆಯುತ್ತಾಳೆ. ಅವನ ಮೂಗಿನ ಬಳಿ ತನ್ನ ಮೂಗನ್ನೊಯ್ದು ತುಂಟತನದಿಂದ ಉಜ್ಜುತ್ತ 'ರೀ' ಎನ್ನುತ್ತಾಳೆ, ಕೊಂಚ ಗಟ್ಟಿಯಾಗಿಯೆ.
ಜಡವಾಗುತ್ತಿದ್ದ ಕಣ್ಣುಗಳನ್ನು ಅವಳ ಕಡೆ ತಿರುಗಿಸಿ ಆತ ಕೇಳುತ್ತಾನೆ ?'
'ನಾನು ಕರಡಿಯಾದರೆ ನೀನೇನು ಕೋತಿ ಮರಿಯೇನು ಹೀಗೆ ಕಚ್ಚಿ ಬಿಡೋಕೆ?
'ಹೌದು ಕಣೋ! ನಾನು ಕೋತಿ! ನಿಮ್ಮ ಮುಖ ಮಾತ್ರ ಬಹಳ ಚಂದಾಗಿದೆ. ನರಿಯ ಹಾಗೆ.
'ಇಲ್ಲ ಕಣೇ! ಅಷ್ಟು ಚೆನ್ನಾಗಿಲ್ಲ ನನ್ನ ಮುಖ! ನಿನ್ನ ಮೂಗು ಮಾತ್ರ ಬಹಳ ಚೆಂದಾಗಿದೆ ಬೆಕ್ಕಿನ ಹಾಗೆ' ಎಂದ ಬಿಟ್ಟು ಆತ ಅವಳ ನಸು ಚಪ್ಪಟೆ ಮೂಗನ್ನು ಕುರಿತು ಹಾಸ್ಯ ಮಾಡುತ್ತಾನೆ.
'ನನ್ನ ಮೂಗಿಗೇನೂ ನೀವು ನಗಬೇಕಾಗಿಲ್ಲ. ನಿಮ್ಮದೇನು ಮಹಾ ಸೌತೇ ಕಾಯಿಯಂಥಾದ್ದು!' ಎಂದು ಹೇಳಿ ಆಕೆ ಮುಖ್ಯಿಗೆ ಮುಯ್ಯ ತೀರಿಸಿಬಿಡುತ್ತಾಳೆ.
'ಇಂಥಾ ಮೂಗಿನವನ್ನ ನೀ ಯಾಕೆ ಮಾಡಿಕೊಂಡೆ?'
'ಇಂಥಾ ಮೂಗಿನವಳನ್ನ ನೀವು ಯಾಕ್ರೀ ಕಟ್ಟಿಕೊಂಡ್ರಿ?'
"ನನ್ನೇ ಆಗಬೇಕು ಅಂತ, ಅತ್ತುಕೊಂಡು ಕಣ್ಣೀರಿಟ್ಟೆಯಲ್ಲ ನೀನು, ಮನಸ್ಸು ಕರಗಿ ಆಗಿಬಿಟ್ಟೆ!"
“ಹೌದು ಪಾಪ! ನಮ್ಮಪ್ಪ ನಿಮಗೆ ನನ್ನ ಕೊಡೋಲ್ಲಾಂತ ಅಂದಾಗ ಊಟ ನೀರು ಬಿಟ್ಟು ಮೂರು ನಾಲ್ಕು ದಿನ ಬೆಂಗಳೂರೆಲ್ಲ ಹುಚ್ಚರಂತೆ ಅಲೆದೋರು ಯಾರೊ!"
"ಹೂಂ! ನಾನೊಬ್ಬ ಹುಚ್ಚ! ನಿನ್ನಂಥ ಹುಚ್ಚಿಯನ್ನ ಕಟ್ಟಿಕೊಂಡಿರೋನು!"
"ನೀವು ಹುಚ್ಚರಾದ್ರೆ ಹುಚ್ಚರಾಸ್ಪತ್ರೆಗೆ ಹೋಗಿ ಬನ್ನಿ. ನನಗೇನೂ ಹುಚ್ಚು?"
"ಹಿಡಿದಿದೆಯಲ್ಲ ಒಂದು ಭಾರಿ ಹುಚ್ಚು-ಸಿನಿಮಾ ಹುಚ್ಚು!"
"ಬಲೆ! ಬಲೆ! ಬಹಾಳ ತೋರಿಸೋವು ನೀವು! ನೋಡೀ ನೋಡೀ ನೋಡೀ ಹುಚ್ಚು ಹಿಡಿದಿದೆ ನನಗೆ ಅಲ್ವೆ?"
"ತೋರಿಸೋಕೆ ಪುರಸೊತ್ತು ಎಲ್ಲಿರುತ್ತೇ ಗಿರಿಜಾ?"
ಇರೋಲ್ಲ!" "ಅವರಿವರ ಮನೆ ತಿರುಗೋಕೆ ಪುರಸತ್ತಿರುತ್ತೆ. ಸಿನಿಮಾಗೆ ಮಾತ್ರ
"ಅವರಿವರ ಮನೆ ಅಂದ್ರೇನೇ? ಪಾಪ, ಏನೂ ತಿಳಿಯದ ಬಡ ಕೂಲಿಕಾರರು ಅವರು, ಅವರ ಸುಖದುಃಖ ತಿಳಿದುಕೊಂಡು ಸಂಘಟನೆ ಮಾಡಬೇಡವೇ?"
"ಏನು ಸುಖವೊ! ಏನು ದುಃಖವೊ! ಮೊದಲು ಯುದ್ಧ ಯುದ್ಧ ಅಂತಿದ್ದೀರಿ ಈಗ ಯುದ್ಧ ಮುಗಿದು ವರ್ಷವಾಗ್ತಾ ಬಂತು. ಇನ್ನೂ ಮೊದಲಿನ ಹಾಡೇ ಹಾಡ್ತೀರಲ್ಲ!"
"ಯುದ್ಧ ಮುಗೀತು ಅಂತ ಯಾರು ಹೇಳಿದರು ಗಿರಿಜಾ?"
"ನೀವೇ ಹೇಳಿದಿರಲ್ಲ ಒಮ್ಮೆ! ಅವತ್ತು ಎರಡು ದಿನ ರಜಾ ಬಂದಿರಲಿಲ್ಲೇನು ವಿಜಯೋತ್ಸವಕ್ಕೆಂತ?"
"ವಿಜಯೋತ್ಸವ ಅಲ್ಲ ಅದು ಗಿರಿಜಾ! ಮತ್ತೊಂದು ಯುದ್ಧದ ಪ್ರಾರಂಭೋತ್ಸವ. ಮುಗಿದ ಯುದ್ಧಕ್ಕಿಂತ ಭಾರಿ ಯುದ್ಧ ಇದು. ಬಡವರ ಯುದ್ಧ! ಕೂಲಿ ಕಾರರ ಯುದ್ಧ! ರೈತರ ಯುದ್ಧ! ಈ ಯುದ್ಧ ನಡೆದಿರೋದು ಹೊಟ್ಟೆಗಾಗಿ! ಅನ್ನಕ್ಕಾಗಿ! ಒಂದು ಮುಷ್ಟಿ ಮುದ್ದೆಗಾಗಿ! ಒಂದು ತಟ್ಟೆ ಎಸರಿಗಾಗಿ ಸಾವಿರಾರು ಜನ ಬಡಪಾಯಿಗಳು ಇಲ್ಲಿ ಈ ಕಾಡುಗೋಡಿಯಲ್ಲಿ ಹೊಟ್ಟೆಯ ಹೋರಾಟ ನಡೆಸಿದಾರಲ್ಲ ಗಿರಿಜಾ! ಅವರ ಗೋಳಿನ ಕೂಗು ನನ್ನನ್ನು ಹುಚ್ಚನನ್ನಾಗಿ ಮಾಡಿದೆ! ಅಂತೇ ಭಾನುವಾರ ಬರುತ್ತಲೂ ಅವರ ಮನೆಗಳಿಗೆ ಹೋಗುತ್ತೇನೆ. ಅವರ ಹೋರಾಟದ ಕತೆ ಕೇಳುತ್ತೇನೆ. ನನ್ನ ಕೈಲಾದ ಸೇವೆ ಮಾಡುತ್ತೇನೆ"
"ಸಾಕು ಸಾಕು ನಿಮ್ಮ ಪುರಾಣ! ನಾನು ಸಿನಿಮಾ ಅನ್ನುತ್ತಲೂ ಸುರುವಾಗುತ್ತೆ ನಿಮ್ಮ ಲೆಕ್ಚರು!"
"ಲೆಕ್ಚರಲ್ಲ ಗಿರಿಜಾ ಇದು! ಹೃದಯದಿಂದ ನೇರವಾಗಿ ಹೊರಡುವ ಉದ್ಗಾರ ಇದು! ನನ್ನ ಹೃದಯ ನನ್ನ ಮಾತು ನಿನಗೆ ಹೇಗೆ ಅರ್ಥವಾದೀತು? ನೀನು ಇನ್ನೂ ಕೊಂಚ ಓದಿದ್ದರೆ? ಓದಿದ್ದರೆ.......?"
"ನೀವು ಓದಿ ಅಮುಲ್ದಾರಿ ಮಾಡ್ತಾ ಇರೋದನ್ನ ನೋಡಲಿಲ್ಲವೇ ನಾನು? ಎಸೆಸೆಲ್ಸಿ ಆದರೂ ಈ ಕೂಲಿ ಕೆಲಸಕ್ಕೆ ಬಂದು ಸೇರಿದ್ದೀರಲ್ಲ!"
"ಅಮುಲ್ದಾರ ಆಗೋದಕ್ಕಿಂತ ಕೂಲಿ ಆಗೋದು ಸಾವಿರ ಪಾಲಿಗೆ ವಾಸಿ ಗಿರಿಜಾ! ನಿನಗದು ತಿಳಿಯೋದಿಲ್ಲ!"
“ಹೌದು ಕಣೋ! ನನಗೆ ತಿಳಿಯೋಲ್ಲ! ನನಗೆ ತಲೇನೇ ಇಲ್ಲ! ಒಳಗಡೆ ಇರೋದು ಬರೀ ಆಲೂಗಡ್ಡೆ ಹೀಗೇ ಅಲ್ವೇ ನೀವು ಹೇಳೋದು!"
"ಏನಂದಿ? ಆಲೂಗಡೇನೇ? ಬಹಳ ಒಳ್ಳೇದಾಯ್ತು. ಇಷ್ಟು ದಿನ ಯಾಕೆ ಹೇಳಲಿಲ್ಲ ನನಗೆ? ಸರಿ. ತೆಗೆದುಬಿಟ್ಟು ಬೆಳಿಗ್ಗೆ ಪಲ್ಯ, ಮಾಡಿಬಿಡು. ಆಲೂಗಡ್ಡೆ ಪಲ್ಯ ತುಂಬ 223. ನಿನ್ನ ತಲೇಲಿ ಬೆಳದಿರೋದು ಅಂದಮೇಲೆ ಇನ್ನೂ ರುಚಿಕಟ್ಟಾಗಿದ್ದೀತು!"
"ಶುರು ಮಾಡಿದ್ರು ತಮಾಷೆಗೆ! ಬಹಳ ಜಾಣರು ಕಣ್ಣೀ, ಮಾತು ಹೊರಳಿಸೋದ್ರಲ್ಲಿ!" ಎನ್ನುತ್ತಾ ಆಕೆ ಅವನ ಕೆನ್ನೆ ಚಿವುಟುತ್ತಾಳೆ. ತನಗರಿಯದಂತೆಯೇ ಅವಳ ನಗೆ ಹೂ ಅರಳುತ್ತದೆ. ಕಂಗಳಲ್ಲಿ ಪ್ರಣಯಭಾವ ಚಿಮ್ಮುತ್ತದೆ. ಕೆನ್ನೆಗೆ ರಕ್ತವೇರುತ್ತದೆ. ಆಗ ಆಕೆಯೇ ಸೋತು ಹೋಗುತ್ತಾಳೆ. ಆ ಕ್ಷಣಕ್ಕಂತೂ ಅವರ ಯುದ್ಧ ಮುಗಿದು ಒಪ್ಪಂದವಾಗುತ್ತದೆ. ನಲ್ಲನಲ್ಲೆಯರ ದೃಢಾಲಿಂಗನದಲ್ಲಿ ಶಾಂತಿ ಮೊಗದೋರುತ್ತದೆ.
ಆ ಶನಿವಾರ ಸಾಯಂಕಾಲ ಸಿದ್ದರಾಮ ಮನೆಗೆ ಬಂದಾಗ ಗಿರಿಜಾ ಹೇಳಲು ಹಾಕಿ ಹೂ ಮುಡಿದುಕೊಂಡು ನಗುನಗುತ್ತ ನಿಂತಿದ್ದಳು ಅವನ ಬರವನ್ನೇ ಎದುರು ನೋಡುತ್ತ.
ಬಟ್ಟೆ ತೆಗೆದುಹಾಕಿ, ಮುಖ ತೊಳೆದುಕೊಂಡು ಆತ ಹಾಸುಗೆಗೊರಗಿ ಕುಳಿತುಕೊಂಡ. ಯಾವದೋ ಒಂದು ಪತ್ರಿಕೆಯನ್ನೆತ್ತಿಕೊಂಡು ಓದಲಾರಂಭಿಸಿದ.
ಎಂದೂ ಇಲ್ಲದೆ ಗಿರಿಜಾ ಅಂದು ಕಾಫಿ ಮಾಡಿರಿಸಿದ್ದಳೇನೋ! ಒಂದು ಲೋಟದಲ್ಲಿ ಅದನ್ನು ತುಂಬಿಕೊಂಡು ಅವನ ಬಳಿ ಬಂದಳು.
ಪತ್ರಿಕೆಯ ಮೇಲಿನ ದೃಷ್ಟಿಯನ್ನು ಕದಲಿಸದೆ ಆತ "ಏನೇ?" ಎಂದ
ಒಡನೆಯೇ ಆ ಪತ್ರಿಕೆಯನ್ನು ಕಿತ್ತುಕೊಂಡು ಮೂಲೆಯಲ್ಲಿಟ್ಟು ಗಿರಿಜಾ 'ಬಲೆ ಓದೋದು ನೀವು ಬಿಡಿ! ಈ ಕಾಫೀನಾದ್ರೂ ಕುಡೀರಿ!' ಎಂದಳು.
"ಕಾಫಿ? ಅದೇನೇ ಇಂದು ಇಷ್ಟು ಸಡಗರ?"
"ಸಡಗರಾನೂ ಇಲ್ಲ. ಗಿಡಗರಾನೂ ಇಲ್ಲ. ಆಚೆಮನೇ ದೇವಮ್ಮನ ಗಂಡ ಮೈಸೂರಿಗೆ ಹೋಗಿದ್ದರಂತೆ. ಒಳ್ಳೆ ಕಾಫಿಪುಡಿ ತಂದಿದ್ದರಂತೆ. ಸ್ವಲ್ಪ ಕೊಟ್ಟಳು. ವಾಸನೆ ಚೆನ್ನಾಗಿದೆ. ಇಂದೇ ಕುಡೀಲಿ ಅಂತ ಮಾಡಿದ್ದೆ."
"ದೇವಮ್ಮ?"
"ಆ ಸೂಪರ್ವೈಜರ್ ಇಲ್ವೆ? ಅವರ ಹೆಂಡತಿ"
"ಸೂಪರ್ವೈಜರ್?"
"ನಿಮಗೆ ಕೂಲಿಕಾರರೆಲ್ಲಾ ಗೊತ್ತು. ಸೂಪರ್ವೈಜರ್ ಮಾತ್ರ ಗೊತ್ತಿಲ್ಲ!"
“ಹೇಗೆ ಗೊತ್ತಾಗಬೇಕು ಹೇಳು ಗಿರಿಜಾ! ಅವರು ಹೆಚ್ಚು ಸಂಬಳ ಪಡೆಯೋರು. ಡಿಪೋನಲ್ಲಿ ಅವರು ಹೇಳಿದ ಹಾಗೆ ಕೆಲಸ ಮಾಡಬೇಕಾಗುತ್ತೆ ನಾವು. ಅವರ ಜತೆ ಸ್ನೇಹ ಮಾಡೋಕಾಗುತ್ತೇನೇ ನಮಗೆ?"
"ಎಲ್ಲಾ ಆಗುತ್ತೆ. ನಿಮಗೆ ಮೊದಲು ಮನಸ್ಸಿರಬೇಕಲ್ಲ! ಅವರು ಗಂಡಹೆಂಡಿರು ಎಷ್ಟು ನೆಮ್ಮದಿಯಿಂದಿದ್ದಾರೆ! ವಾರಾವಾರಾ ಬೆಂಗಳೂರಿಗೆ ಹೋಗೋದು ತಪ್ಪೋದಿಲ್ಲ. ಅಂದ ಹಾಗೆ ಮನ್ನೆ ದೇವಮ್ಮ ಹೊಸ ಸೀರೆ ಒಂದನ್ನ ಕೊಂಡು ತಂದಿದ್ದಾಳೆ. ನೂರಿಪ್ಪತ್ತು ರೂಪಾಯಿಯಂತೆ. ಬಹಳ ಚಂದಾಗಿದೆ ರೀ! ನಯವಾದ ರೇಷ್ಮೆ ಕಲಾಪತ್ತಿಂದು,"
ಪತ್ನಿಯ ವಿಚಾರಧಾರೆ ಯಾವ ಕಡೆ ಹೊರಳುತ್ತಿದೆಯೆಂಬುದರ ಅರಿವಾಯಿತೇನೊ ಅವನಿಗೆ! ನೊಂದ ದನಿಯಲ್ಲಿ ನುಡಿದ.
"ಅವರ ಸೀರೆಯ ವಿಚಾರ ನನಗೆ ಹೇಳಬೇಡ ಗಿರಿಜಾ! ನನ್ನ ತಲೆ ಕೆಟ್ಟು ಹೋಗುತ್ತೆ!"
ಆ ನೊಂದ ದನಿ, ಅದರಲ್ಲಿ ಅವಿತಿದ್ದ ಆ ಆಳವಾದ ವೇದನೆ ಅವಳಿಗೆ ಅರ್ಥವಾಗಲಿಲ್ಲ ಹೇಳಿದಳು.
“ಅಂಥಾದನ್ನು ನನಗೆ ತಂದುಕೊಡೋ ಯೋಗ್ಯತೆ ಅಂತೂ ನಿಮಗಿಲ್ಲ! ಇನ್ನು ಅವರು ಉಡುತ್ತಾರೆ ಅಂತ ಹೊಟ್ಟೆ ಉರಿಯೇಕೋ?”
"ಹೊಟ್ಟೆ ಉರಿ ಅಲ್ಲ ಅದು ಗಿರಿಜಾ! ನಿನಗರ್ಥವಾಗುವದಿಲ್ಲ. ನಾವು ಬಡವರು ಅವರು ಶ್ರೀಮಂತರು. ನನಗೆ ಬರೋದು ನಲವತ್ತು ರೂಪಾಯಿ, ಅವರಿಗೆ ಬರೋದು ಎರಡು ನೂರು ರೂಪಾಯಿ. ಒಂದೇಕೆ ಹತ್ತು ಸೀರೆಗಳನ್ನೂ ಕೊಂಡಾರು ಅವರು. ನನಗೆ ಬರೋ ನಲವತ್ತು ರೂಪಾಯಿನಲ್ಲಿ ಹೊಟ್ಟೆ ತುಂಬಿಕೊಳ್ಳೋದೇ ಕಷ್ಟ. ನಿನಗೂ ಗೊತ್ತೇ ಇದೆಯಲ್ಲ! ಇನ್ನು ಅಂಥ ಸೀರೆಯ ವಿಚಾರ ಮಾತನಾಡೋದು ತಪ್ಪಲ್ವೆ? ಅಂಥ ರೇಷ್ಮೆ ಸೀರೆಯನ್ನು ಕಣ್ಣಿಂದ ನೋಡೋದಕ್ಕೂ ಅಧಿಕಾರವಿಲ್ಲ ನಮಗೆ. ಹತ್ತು ರೂಪಾಯಿನ ಸೀರೆಗಳಲ್ಲೇ ನಾವು ತೃಪ್ತಿಪಟ್ಟುಕೊಳ್ಳಬೇಕು...."
"ಏನು ತೃಪ್ತಿಯೋ! ಏನು ಕತೆಯೋ! ಮದುವೆಯಲ್ಲಿ ತಂದದ್ದೆಷ್ಟೋ ಅಷ್ಟೆ. ಅಂದಿನಿಂದ ಹತ್ತು ರೂಪಾಯಿನ ಸೀರೇನಾದ್ರೂ ಒಂದಾದ್ರೂ ತಂದಿದೀರಾ?' ಎಂದಳಾಕೆ.
"ಎಲ್ಲಿಂದ ತರಲಿ? ದುಡ್ಡು ಉಳಿದರೆ ತಾನೇ ತರೋದು? ಅಕ್ಕಿ, ಬೇಳೆ, ಕಾಳು, ಸೌದೆ ಎಲ್ಲಾ ಒಂದಕ್ಕೆರಡು ಬೆಲೆ. ಹೊಟ್ಟೆ ತುಂಬೋದೆ ಕಷ್ಟ, ನನಗಾದರೂ ಬಟ್ಟೆಗಳಿವೆಯೇನೆ? ಇರೋದು ಎರಡು ಶರಟು. ಅವೂ ಹರಿದು ಚಿಂದಿಯಾಗಿವೆ. ಇಲ್ಲಿ ನೋಡಿಲ್ಲಿ...." ಎಂದು ವಿಷಾದದಿಂದ ಹೇಳುತ್ತ ಸಿದ್ದರಾಮ ಎದೆಯಮೇಲೆ ಹರಿದಿದ್ದ ಭಾಗವನ್ನು ತೋರಿಸಿದ.
"ನೀವೇನು ಮಾಡ್ತೀರಿ? ನನ್ನ ಅದೃಷ್ಟ ಒಂದು ಒಳ್ಳೆ ಸೀರೆ ಉಡೋ ಭಾಗ್ಯವೂ ನನಗಿಲ್ಲ. ಒಂದು ಸಿನಿಮಾ ನೋಡೋ ಭಾಗ್ಯವೂ ಇಲ್ಲ. ಪಕ್ಕದ ಮನೆ
ಯವರೆಲ್ಲ ವಾರಕ್ಕೊಂದು ಬಾರಿ ನೋಡಿಕೊಂಡು ಬಝಾರೆ. ನನಗೆ ವರ್ಷಕ್ಕೊಂದು. ಬಾರಿಯಾದರೂ....." ಎಂದು ಹೇಳುತ್ತಿದ್ದ ಹಾಗೇ ಅವಳಿಗೆ ಅಳುವುಕ್ಕಿ ಬಂತು. ಸೆರಗಿನಲ್ಲಿ ಮುಖ ಮುಚ್ಚಿಕೊಂಡು ಅಡಿಗೆ ಮನೆಗೆ ಹೊರಟುಬಿಟ್ಟಳು.
ವೇದನಾಪೂರ್ಣ ದೃಷ್ಟಿಯನ್ನು ಸಿದ್ದರಾಮ ಕಾಫಿಯ ಕಡೆಗೆ ತಿರುಗಿಸಿದ. ಅದು ಆರಿಹೋಗಿತ್ತು. ಲೋಟ ಎತ್ತಿ ಕಿಟಕಿಯಲ್ಲಿ ಬಾಗಿಸಿದ.
ಚರಂಡಿಯ ಕೊಳಚೆಯೊಂದಿಗೆ ಹರಿದುಹೋಯಿತು ಕಾಫಿ,
ತಿಗಣೆಯೊಂದು ಬಲವಾಗಿ ಕಚ್ಚಿ ಸಿದ್ದರಾಮನನ್ನು ಎಚ್ಚರಗೊಳಿಸಿತು. ಕಣ್ಣೆರೆದು ನೋಡಿದ. ಭಾನುವಾರದ ಬೆಳಗು ಅವನನ್ನು ಸ್ವಾಗತಿಸುತ್ತಿತ್ತು.
ಪಕ್ಕದಲ್ಲಿ ಗಿರಿಜಾ ಇನ್ನೂ ಗಾಢ ನಿದ್ರೆಯಲ್ಲಿ ತಲ್ಲೀನಳಾಗಿದ್ದಳು. ಎಂಥ ವಿಲಕ್ಷಣ ನಿದ್ರೆ ಅದು ಬೆಳಗಿನ ಜಾವದ್ದು! ಬಲಗಡೆ ಮಗ್ಗುಲಾಗಿ ಮಲಗಿದ್ದಳಾಕೆ. ತುಟಿಗಳೆರಡೂ ತೆರೆದಿದ್ದವು. ಅವುಗಳೊಳಗಿನ ನಸು ಹಳದಿ ಬಣ್ಣದ ದಂತಪಂಕ್ತಿ ಆಸ್ಪುಟವಾಗಿ ಕಾಣುತ್ತಿತ್ತು. ತುಟಿಗಳ ಮೂಲೆಯಿಂದ ಮುಖರಸ ಸೋರುತ್ತಿತ್ತು. ಬಲಗೈ ಗೋಡೆಯ ಮೇಲೊರಗಿಕೊಂಡಿತ್ತು. ಉದ್ದವಾದ ಜಡೆ ತಲೆದಿಂಬಿನಿಂದಿಳಿದು ಈಚೆ ಬಂದು ಬಿದ್ದಿತ್ತು. ಅದರ ಕೊನೆಗೆ ಕಟ್ಟಿದ್ದ ಬಣ್ಣ ಬಣ್ಣದ ಆ ಟೇಪು! ಅವನಿಗೆ ನಗೆ ಬಾರದಿರಲಿಲ್ಲ. ಎಂಥ ಮಾಟಗಾತಿ ಈ ನಿದ್ರೆ! ಎಂದುಕೊಂಡು ಮೆಲ್ಲನೆ ಬಾಗಿ ಅವಳ ಸೀರೆಯ ಸೆರಗಿನಿಂದ ಮುಖರಸವನ್ನೊರಸಿದ. ಹಣೆಯ ಮೇಲೆ ಬಂದಿದ್ದ ಮುಂಗುರುಳುಗಳನ್ನೆತ್ತಿ ಹಿಂದೆ ಹಾಕಿದ. ಕೆನ್ನೆಗಳನ್ನೊರಸಿ ಒಂದು ಬಾರಿ ಅವುಗಳ ಮೇಲೆ ತುಟಿ ಒತ್ತಿದ. ಎಷ್ಟು ಮುದ್ದಾಗಿ ಕಾಣಿಸುತ್ತಿದ್ದಳು ಗಿರಿಜಾ ಆಗ! ಪುಟ್ಟ ದೊಂದು ಮಗುವಿನ ಹಾಗೆ! ಹೌದು. ಮಗುವಿನ ಹಾಗೆ! ನಿನ್ನೆ ತಾನು ಆ ರೀತಿ ಮಾತನಾಡಿದುದರಿಂದ ಎಷ್ಟು ನೊಂದುಕೊಂಡಿದಾಳೊ! ಎಂಥ ನಿಷ್ಟುರಿ ತಾನು. ತನ್ನ ಕೈಹಿಡಿದು ಏನು ಸುಖಪಡಬೇಕು ಈ ಮುಗೈ!? ಜೀವನದ ಕಠೋರ ಹೋರಾಟ ಅವಳಿಗರ್ಥವಾಗದು. ಅದಕ್ಕೆ ಅವಶ್ಯವಾದ ಶಿಕ್ಷಣವೂ ದೊರೆತಿಲ್ಲ ಅವಳಿಗೆ. ಪ್ರಪಂಚದ ಅನುಭವವೂ ಇಲ್ಲ. ತನ್ನ ಸಮರಸವಾಗದಿರುವಲ್ಲಿ ಅವಳ ತಪ್ಪೇನೂ ಇಲ್ಲ..... ವಿಚಾರಗಳೊಂದಿಗೆ ಅವಳು
ಅವನ ಮನಸ್ಸು ಏನೋ ನಿರ್ಧಾರಕ್ಕೆ ಬಂದಂತಾಯಿತು. ಇಂದು ತನ್ನ ಹತ್ತಿರ ಮೂರು ರೂಪಾಯಿ ಇದೆ ಸಂಬಳ ಬರುವದಕ್ಕೆ ಇನ್ನೂ ಎಂಟು ದಿನ. ಪರವಾಯಿಲ್ಲ, ಇಂದು ಈ ಮೂರು ರೂಪಾಯಿಯೂ ಖರ್ಚಾಗಿ ಹೋಗಲಿ. ಒಲವಿನ ಈ ಜೀವಕ್ಕೆ ಇಷ್ಟು ಸಂತೋಷವಾದರೂ ಆಗಲಿ. ಇವತ್ತು ಅವಳ
ಆಸೆಯನ್ನು ಪೂರೈಸಿಯ ಬಿಡೋಣ ಎಂದುಕೊಂಡು ಅವಳ ಗದ್ದವನ್ನು ಹಿಡಿದು ಮೆಲ್ಲನೆ ಅಲುಗಾಡಿಸಿದ.
ಎಂದ. "ಏಳು ಗಿರಿಜಾ! ಏಳು! ಏಳು ನನ್ನ ರಾಣೀ! ಏಳು] ಏಳು! ಬೆಳಗಾಯಿತು!"
ಕಣ್ಣುಜ್ಜಿಕೊಳ್ಳುತ್ತ ಅವಳು ಎದ್ದು ಕುಳಿತಳು.
"ಬೇಗ ಬೇಗ ಅನ್ನ ಸಾರು ಮಾಡಿಬಿಡು. ಊಟಮಾಡಿಬಿಟ್ಟು ಬೆಂಗಳೂರಿಗೆ ಹೋಗೋಣ. ಇಂದು ಖಂಡಿತವಾಗಿಯೂ ಸಿನಿಮಾ ನೋಡಿಸ್ತೇನೆ ನಿನಗೆ!" ಎಂದ ಸಿದ್ದರಾಮ.
ಅವನ ಮೈಯ ಸುತ್ತ ತನ್ನತೋಳು ಹೆಣೆಯುತ್ತ ಆನಂದದಿಂದ ಕೇಳಿದಳಾಕೆ. 'ಹೌದೇ? ನಿಜವಾಗಲೂ?'
"ಇನ್ನೂ ಸಂಶಯವೇನೇ ನಿನಗೆ ನನ್ನ ಬೆಪ್ಪ ಹುಡುಗೀ?"
"ನಂಬೋದೇ ಕಷ್ಟ ಅಮ್ಮಾ ನಿಮ್ಮ ಮಾತನ್ನ! ಇಂದೇನೋ ಸೂರ್ಯ ಉತ್ತರದಲ್ಲಿ ಹುಟ್ಟಿರಬೇಕು." ಎಂದು ನಗುತ್ತ ಆಕೆ ಎದ್ದು ಬಿಟ್ಟಳು.
ಅಡಿಗೆ ಮಾಡುವಾಗ ಅವಳ ಸಡಗರವೋ ಸಡಗರ! ಒಲೆಯ ಮೇಲೆ ಅನ್ನ ಕುದಿಯುತ್ತಿದ್ದ ಹಾಗೆ ಸಬಕಾರ ಹಚ್ಚಿ ಮುಖ ತೊಳೆದುಕೊಂಡಳು. ಜಡೆ ಹಾಕಿ ಟೇಪು ಕಟ್ಟಿಕೊಂಡಳು. ರಾತ್ರೆ ನೀರಿನಲ್ಲಿ ತೋಯಿಸಿ ಬಟ್ಟೆಯಲ್ಲಿ ಕಟ್ಟಿ, ಇಟ್ಟಿದ್ದ ಕೆಂಪು ಹೂ ಮುಡಿದುಕೊಂಡಳು. ಕುಂಕುಮ ಇಟ್ಟುಕೊಂಡಳು. ಟ್ರಂಕಿನಲ್ಲಿದ್ದ ನಾಲ್ಕು ಸೀರೆಗಳನ್ನು ಹೊರದೆಗೆದು ಯಾವುದನ್ನುಡುವುದು ಎಂದು ಹದಿನೈದು ನಿಮಿಷ ಯೋಚಿಸಿದಳು. "ರೀ, ಯಾವುದನ್ನುಟ್ಟುಕೊಳ್ಳಲಿ ಹೇಳೋ" ಎಂದು ಪತಿಯ ಸಲಹೆಯನ್ನೂ ಕೇಳಿದಳು. "ಯಾವುದನ್ನಾದರೂ ಉಟ್ಟುಕೊಂಡುಬಿಡು ಎಂಥದು. ಉಟ್ಟರೂ ನೀನು ಚೆಂದಾಗಿಯೇ ಕಾಣುತ್ತೀಯ!" ಎಂದು ಆತ ಉತ್ತರವಿತ್ತ. ಕೊನೆಗೆ ಬಿಳಿಯ ವಾಯಲ್ ಸೀರೆಯೆ ಸರಿಯೆಂದು ನಿಶ್ಚಯಿಸಿ ಉಟ್ಟು ಕೊಂಡು ಬಿಳಿಯ ರವಕೆ ತೊಟ್ಟುದೂ ಆಯಿತು. ಮೂರುನಾಲ್ಕು ಸಲ ಕನ್ನಡಿಯಲ್ಲಿ. ಹೌದು- ಅರ್ಧ ಒಡೆದ ಕನ್ನಡಿಯಲ್ಲಿ-ಮುಖ ನೋಡಿಕೊಂಡು, ಕೆನ್ನೆ ಉಜ್ಜಿಕೊಂಡು ಕುರುಳು ತಿದ್ದಿಕೊಂಡು, ಹುಬ್ಬು ತೀಡಿಕೊಂಡು. ಮೂಗು ಒರೆಸಿಕೊಂಡು ತನ್ನಷ್ಟಕ್ಕೆ ತಾನೇ ನಕ್ಕು ಅನ್ನ ಹೊತ್ತಿಕೊಂಡ ವಾಸನೆ ಬರುತ್ತಲೂ ಅವಸರದಿಂದ ಓಡಿಹೋಗಿ ಅದನ್ನಿಳಿಸಿದ್ದಾಯಿತು. ಅವಳ ಚಲನವಲನಗಳನ್ನೆಲ್ಲ ಕೌತುಕದಿಂದ ನಿರೀಕ್ಷಿಸುತ್ತ ಕೊಟಡಿಯಲ್ಲಿ ಕುಳಿತಿದ್ದ ಸಿದ್ಧರಾಮ. ಅವನ ಸಿದ್ಧತೆಯೇನೂ ಇರಲಿಲ್ಲ. ಸೂಟು ಹಾಕಿ, ಬೂಟು ಧರಿಸಿ ಹೊರಡಬೇಕಾದರೆ ಸಿದ್ಧತೆ ಬೇಕು. ಅಂಗಿ ತೊಟ್ಟು, ಪಂಚೆ ಉಟ್ಟು ಹೊರಡಲು ಎಂಥ ಸಿದ್ಧತೆ?
ಊಟ ತೀರಿಸಿಕೊಂಡು ಪ್ಲಾಟ್ ಫಾರ್ಮಿಗೆ ಬಂದುದೂ ಆಯಿತು. ಅವಸರ ದಿಂದ ಟಿಕೆಟ್ ಕೊಂಡುಕೊಂಡು, ಪ್ಲಾಟ್ ಫಾರ್ಮಿಗೆ ಬಂದರು.
'ಆದೋ! ದೇವಮ್ಮನೂ ಬಂದಿದ್ದಾಳೆ ನೋಡಿ. ಅವರೂ ಹೊರಟಂತೆ ಕಾಣುತ್ತೆ ಸಿನಿಮಾಕ್ಕೆ?'
ಸಿದ್ಧರಾಮ ಅತ್ತ ಹೊರಳಿದ. ದೇವಮ್ಮ! ಅವಳನ್ನಾತ ನೋಡಿದ್ದು ಇದೇ ಮೊದಲನೆಯ ಸಲ, ಭಾರಿ ಬೆಲೆಯ ರೇಷ್ಮೆ ಸೀರೆ ಉಟ್ಟಿದ್ದಾಳೆ. ರೇಷ್ಮೆ ರವಕೆ ತೊಟ್ಟಿದ್ದಾಳೆ. ಕಿವಿಗಳಲ್ಲಿ ಕೆಂಪಿನ ಲೋಲಾಕು ಇಟ್ಟಿದ್ದಾಳೆ. ಕತ್ತಿನಲ್ಲಿ ಚಿನ್ನದ ಹಾರ ಹಾಕಿ ಕೈಗಳಲ್ಲಿ ಚಿನ್ನದ ಬಳೆ ತೊಟ್ಟಿದ್ದಾಳೆ. ಬೆರಳುಗಳಲ್ಲಿ ರತ್ನದುಂಗುರಗಳಿವೆ. ಕಾಲಿಗೆ ಹೊಳಪಿನ ಹೂಸ್! ಮುಖದ ಮೇಲೆಲ್ಲ ಪೌಡರಿನ ತೆರೆ! ತುಟಿಗಳಲ್ಲಿ ಬಿಂಕದ ನಗೆ! ತಿಂಗಳಿಗೆ ಇನ್ನೂರು ರೂಪಾಯಿ ಸಂಪಾದಿಸುವ ಸೂಪರ್ ವೈಜರ್ ಪತ್ನಿ ತಾನು ಎಂಬುದನ್ನು ಸೂಚಿಸಲೆತ್ನಿಸುವಂಥ ದೃಷ್ಟಿ!
ಪಕ್ಕದಲ್ಲೇ ನಿಂತಿದ್ದ. ಅವಳ ಕೈಹಿಡಿದ ಮಹಾನುಭಾವ-ಆಗತಾನೆ ಯೂರೋಪಿನಿಂದ ಮರಳಿದವರಂಥ ವೇಷದಲ್ಲಿ ಮಾಂಚೆಸ್ಟರ್ ಸರ್ಜಿನ ಸೂಟು, ಟೈ, ಕಾಲರ್, ಹ್ಯಾಟು; ಬೆಳಕು ಬೀರುವ ಬೂಟು. ಬಿಂಕದಿಂದ ಸೆಟೆದು ನಿಂತ ಕತ್ತು!
ಸಿದ್ಧರಾಮನ ದೃಷ್ಟಿ ಆ ದಂಪತಿಗಳಿಂದ ಹೊರಳಿ ತಮ್ಮಿಬ್ಬರನ್ನು ನೋಡಿ ಕೊಂಡಿತು. ಆ ಸೂಪರ್ ವೈಜರ್ ಮಹಾಶಯನ ಸೂಟು-ಬೂಟು; ತನ್ನ ಶರ್ಟು. ಪಂಚೆ, ಅವನ ಪತ್ನಿಯ ರೇಷ್ಮೆ ಸೀರೆ, ತನ್ನ ಪತ್ನಿಯ ಸಾದಾ ಸೀರೆ, ಅವಳ ಕತ್ತಿ ನಲ್ಲಿನ ಚಿನ್ನದ ಹಾರಗಳು, ಇವಳ ಕತ್ತಿನಲ್ಲಿದ್ದ ಕರಿಮಣಿಗಳು, ಅವಳ ಚಿನ್ನದ ಬಳೆ, ಇವಳ ಗಾಜಿನ ಬಳೆ, ಅವಳ ರತ್ನದುಂಗುರದ ಬೆರಳು, ಶೂ ಮೆಟ್ಟಿದ ಕಾಲು ಇವಳ ಬೆರಳೂ ಬರಿಯವು ಕಾಲೂ ಬರಿಯವು.....
ಈ ಬಗೆಯ ತುಲನೆ ಸರಿಯಲ್ಲ-ಸರಿಯಲ್ಲ ಎಂದು ಎಷ್ಟು ಹೇಳಿದರೂ ಕೇಳಲಿಲ್ಲ ಮನಸ್ಸು, ಮತ್ತೆ ಮತ್ತೆ ಆ ವೈಷಮ್ಯದ ಭಾವನೆಯೆ ಎದೆಯನ್ನು ಕಲಕುತ್ತಿತ್ತು. ಅವರೂ ಸಿನಿಮಾಗೆ ಹೋಗುತ್ತಿದ್ದಾರೆ-ನಾವೂ ಸಿನಿಮಾಗೆ ಹೋಗುತ್ತಿದ್ದೇವೆ. ಆದರೆ ಅವರ ಸ್ಥಿತಿಗೂ ನಮ್ಮ ಸ್ಥಿತಿಗೂ ಎಷ್ಟು ವ್ಯತ್ಯಾಸ! ಆ ಸೂಪರ್ವೈಜರ್ ಅಮ್ಮನೆದುರಿಗೆ ಎಷ್ಟು ದೀನೆಯಾಗಿ ಕಾಣುತ್ತಾಳೆ ನನ್ನ ಗಿರಿಜಾ! ಆಕೆಗಿಂತಲೂ
ಧಾವಿಸುತ್ತ ಬಂತು ಉಗಿಬಂಡಿ. ಒಂದು ಡಬ್ಬಿಯಲ್ಲಿ ಸ್ಥಳವಿರಲಿಲ್ಲ. ಗಂಡಸರು, ಹೆಂಗಸರು, ಹುಡುಗಿಯರು, ಕೂಸುಗಳು! ಕಾಲಿಟ್ಟುಕೊಂಡು ನಿಂತಿರಲೂ ಸಹ ಸಾಧ್ಯವಿರಲಿಲ್ಲ. ಬಾಗಿಲು ತೆರೆದು ಒಳಸೇರುವುದೇ ಅಸಾಧ್ಯವಾಗಿತ್ತು. ಅವುಗಳ ಮೇಲೂ ಸವಾರಿ ಮಾಡಿದ್ದರು ಜನ. ಬಾಗಿಲು ತೆಗೆಯುವುದು ಹಾಗಿರಲಿ. ಹತ್ತಿರ
ಹೋದರೆ ಸಾಕು ಆ ದ್ವಾರರಕ್ಷಕರು ಉರಿದು ಬೀಳುತ್ತಿದ್ದರು. ಕನ್ನಡ, ತೆಲುಗು ತಮಿಳು, ಹಿಂದೀ ಎಲ್ಲ ಭಾಷೆಗಳಲ್ಲೂ ಗಲಾಟೆಗಾರಂಭವಾಗುತ್ತಿತ್ತು.
ಎಲ್ಲ ಡಬ್ಬಿಗಳನ್ನೂ ಹುಡುಕಿದ್ದಾಯಿತು. ಒಂದರಲ್ಲೂ ಪ್ರವೇಶ ದೊರೆಯುವಂತಿರಲಿಲ್ಲ. ದೇವಮ್ಮನೂ ಅವಳ ಪತಿಯೂ ಇಂಟರ್ ವರ್ಗದಲ್ಲಿ ಕುಳಿತುಕೊಂಡು ಬಿಟ್ಟರು. ಅಲ್ಲಿ ಹಾಯ್ದು ಹೋಗುತ್ತಿದ್ದ ಹಾಗೆ ದೇವಮ್ಮ ಗಿರಿಜೆಯನ್ನು ನೋಡಿದಳು.
"ನಾವೂ ಬರೋಣವೇನಮ್ಮಾ ಒಳಕ್ಕೆ?" ಎಂದಳು ಗಿರಿಜಾ.
"ಟಿಕೆಟ್ ತಕ್ಕೊಂಡಿದ್ದೀರೇನು ಇಂಟರಿನದು?" ಎಂದು ಉಪಹಾಸದಿಂದ ಹೇಳಿ ದೇವಮ್ಮ ಮುಸಿ ಮುಸಿ ನಕ್ಕಳು.
ಮುಖಭಂಗವಾಯಿತು ಸಿದ್ದರಾಮನಿಗೆ. "ಇಲ್ಲಿ ಬೇಡ ಬಾ ಗಿರಿಜಾ! ಸಿದ್ದ ರಾಮನಿಗೆ. ನಮ್ಮ ಸ್ಥಳವಲ್ಲ ಇದು! ಅಲ್ಲಿ ಹೆಂಗಸರ ಡಬ್ಬಿಯಲ್ಲಿ ನೀ ಕೂತಿರು, ನಾನು ಎಲ್ಲಾದರೂ ನಿಂತುಕೊಂಡಿದ್ದೇನೆ" ಎಂದು ಹೇಳಿ ಆ ಕಡೆ ನಡೆದ.
ಅಲ್ಲೂ ಅದೇ ಗತಿ, ಅಷ್ಟೇ ಗಲಾಟೆ. ದಪ್ಪಗಿನ ಶರೀರದ ಮದ್ರಾಸೀ ಸ್ತ್ರೀಯೊಬ್ಬಳು ಬಾಗಿಲಿಗೆ ಅಡ್ಡವಾಗಿ ಕೂತುಕೊಂಡುಬಿಟ್ಟಿದ್ದಳು. ಅವಳ ಆ ದೀರ್ಘ ಕಾಯವನ್ನು ಬದಿಗೆ ಸರಿಸಿ ಬಾಗಿಲು ತೆಗೆಯುವುದೂ ಅಸಾಧ್ಯವಾಗಿತ್ತು. ಹೇಗೋ ಪ್ರಯಾಸಪಟ್ಟು ಬಾಗಿಲ ಮೇಲಿಂದ ಗಿರಿಜಳನ್ನೇರಿಸಿ ಒಳಕ್ಕೆ ತೂರಿಸಿಬಿಟ್ಟು ಸಿದ್ದರಾಮ ಪಕ್ಕದ ಡಬ್ಬಿಗೆ ಹೋದ. ಹತ್ತಾರು ಜನರ ಬೈಗಳ ಮಳೆಯಲ್ಲಿ ತೋಯಿಸಿ ಕೊಳ್ಳುತ್ತ ಹೇಗೋ ಒಳಕ್ಕೆ ನೆಗೆದ, 'ಉಸ್ಸಪ್ಪಾ' ಎಂದು ಒಂದು ಸಲ ದೀರ್ಘ ಉಸಿರು ಹಾಕಿ ನಿಂತುಕೊಂಡ.
ಗಾಡಿಯೂ ಉಸಿರೆಳೆಯುತ್ತ ಧಾವಿಸತೊಡಗಿತು.
ಅಷ್ಟರಲ್ಲಿ ತಿಂದ ಅನ್ನ, ಕಟ್ಟಿ ತಂದ ಉತ್ಸಾಹ ಅರ್ಧಕ್ಕರ್ಧ ಕರಗಿಹೋಗಿತ್ತು ಸಿದ್ಧರಾಮನಿಗೆ.
ಬೆಂಗಳೂರು ನಗರದ ನಿಲ್ದಾಣ ಬಂತು, ಬಾಗಿಲಿನಿಂದ ಪ್ಲಾಟ್ ಫಾರ್ಮಿಗೆ ಜಿಗಿದುಬಿಟ್ಟು ಈಚೆಗೆ ಬಂದು ಪತ್ನಿಯನ್ನು ಕರೆದುಕೊಂಡು ಹೊರಕ್ಕೆ ಬಂದ. ಓಡಾಡುತ್ತಿದ್ದವರಲ್ಲಿ ಆನೇಕರು ಬೇಕೆಂತಲೇ ಅವಳ ಮೈಗೆ ಮೈ ತಗಲಿಸಿಕೊಂಡು ಹೋಗುತ್ತಿದ್ದರು. ಅವಳೆಷ್ಟು ಎಚ್ಚರದಿಂದ ನಡೆದರೂ ಪ್ರಯೋಜನವಾಗಲಿಲ್ಲ.
“ಆದ್ಯಾಕೆ ಹೀಗೆಲ್ಲಾ ತಟ್ಟಿಕೊಂಡು ಹೋಗುತ್ತಾರೆ ಇವರು?" ಎಂದು ಬೇಸರದಿಂದ ಕೇಳಿದಳಾಕೆ.
"ಇದು ಬೆಂಗಳೂರಿನ ಫ್ಯಾಶನ್ ಗಿರಿಜಾ! ಬಡವರನ್ನು ಕಂಡರೆ ಎಲ್ಲಾ ಹೀಗೇ. ನಾವು ನೋಡಹೊರಟಿರುವ ಸಿನಿಮಾದಲ್ಲಿ ಮೊದಲನೇ ದೃಶ್ಯ ಇದು!" ಎಂದ ಸಿದ್ದರಾಮ. ಅವನ ಮಾತಿನಲ್ಲಿ ಎಷ್ಟು ಅರ್ಥವಾಯಿತೋ ಅವಳಿಗೆ!
ನಿಲ್ದಾಣದ ಹೊರಗಡೆ ಬಂದಾಗ ದೇವಮ್ಮನೂ ಅವಳ ಪತಿಯೂ ಕುದುರೆ ಗಾಡಿಯಲ್ಲಿ ಹತ್ತಿ ಹೊರಡಲಣಿಯಾಗಿದ್ದುದು ಕಾಣಿಸಿತು. ಗಿರಿಜಳ ಕಡೆ ದೃಷ್ಟಿ ಹೊರಳಿಸುತ್ತಲೂ ಮತ್ತೆ ದೇವಮ್ಮ ಮುಸಿ ಮುಸಿ ನಕ್ಕಳು. ಆ ನಗೆಯ ಅರ್ಥವೇನೆಂಬುದನ್ನರಿತುಕೊಳ್ಳುವಷ್ಟು ಸೂಕ್ಷ್ಮ ಬುದ್ದಿಯಲ್ಲಿ ಬಂದೀತು ಗಿರಿಜಾಗೆ?
"ನೋಡಿದ್ರಾ! ಗಾಡಿ ಮಾಡ್ಕೊಂಡು ಹೊರಟಿದ್ದಾರೆ. ಎಲ್ಲಿಗೆ ಹೋಗ್ತಾ ಇದಾರೋ!" ಎಂದಳು.
"ಎಲ್ಲಿಯಾದರೂ ಹೋಗಲೇಳು. ಗಾಡಿ ಆದ್ರೂ ಮಾಡಿಕೊಳ್ಳಲಿ. ವಿಮಾನನಾದ್ರೂ ಏರಿಕೊಳ್ಳಲಿ, ನಮಗೇನಂತೆ, ನಾವು ನಡೆದು ಹೋಗೋದೇ ಮೇಲು, ಬಾ" ಎಂದ ಸಿದ್ದರಾಮ.
"ಎಲ್ಲಿಗೆ ಹೋಗೋದು ಈಗ?"
"ಚಿಕ್ಕ ಲಾಲ್ಬಾಗಿಗೆ"
"ಲಾಲ್ ಬಾಗ್? ದೇವಮ್ಮ ಅಲ್ಲಿಗೇ ಹೊರಟಿದ್ದಾಳೋ ಏನೋ! ಅಲ್ಲಿ ಪಾರಿವಾಳಗಳಿವೆಯಂತಲ್ಲ? ಹೌದೇನು?"
"ಇವೆಯಂತೆ. ನಾನೇನೂ ನೋಡಿಲ್ಲ. ಅದು ದೊಡ್ಡ ಲಾಲ್ಬಾಗ್. ನಾವೀಗ ಹೋಗೋದು ಅಲ್ಲಿಗಲ್ಲ. ಚಿಕ್ಕ ಲಾಲ್ ಬಾಗಿಗೆ!"
" ಅಲ್ಲಿಗ್ಯಾತಕ್ಕೆ? ದೊಡ್ಡ ಪಾರಿವಾಳಗಳನ್ನಾದ್ರೂ ನೋಡಬಹುದು." ಬಾಗಿಗೇ ಹೋಗೋಣ.
'ದೊಡ್ಡ ಲಾಲ್ ಬಾಗ್ ದೊಡ್ಡ ಮನುಷ್ಯರದು ಗಿರಿಜಾ! ಪಾರಿವಾಳ, ಗಿಳಿ, ಗೊರವಂಕ, ಗ್ಲಾಸ್ ಹೌಸ್- ಎಲ್ಲಾ ಅವರದೇ! ನಾವು ಚಿಕ್ಕ ಜನ, ನಮಗೆಲ್ಲಾ ಚಿಕ್ಕ ಲಾಲ್ ಬಾಗೇ ಸರಿಯಾದ ಸ್ಥಳ. ಈ ವೇಷದಲ್ಲಿ ನಾವು ದೊಡ್ಡ ಲಾಲ್ ಬಾಗಿಗೆ ಹೋದರೆ ರೇಷ್ಮೆ ಸೀರೆಯುಟ್ಟುಕೊಂಡು ಶೂ ಹಾಕಿಕೊಂಡು ಅಲ್ಲಿ ತಿರುಗುವ ಥಳುಕಿನ ಹುಡುಗಿಯರು ಬಿದ್ದು ಬಿದ್ದು ನಕ್ಕಾರು. ಚಿಕ್ಕಲಾಲ್ಬಾಗಿನಲ್ಲಾದರೂ ಹಾಗೆ ನಗುವರಾರೂ ಇರೋದಿಲ್ಲ. ಇಲ್ಲಿಗೆ ಬರೋದು ಅಂದರೆ ಅವರ ಮರ್ಯಾದೆಗೆ ಕಡಿಮೆ. ನಮ್ಮಂಥ ಬಡವರೇ ಬರೋದು ಇಲ್ಲಿಗೆ, ಬಾ ಹೋಗೋಣ. ಮೂರೂ ವರೆಗೆ ಸಿನಿಮಾ ಸುರುವಾಗುತ್ತೆ. ಅಲ್ಲಿಯವರೆಗೆ ಮಾಡೋದೇನು? ಕೂತಿರೋಣ"
ತೋಟಕ್ಕೆ ಬಂದು ತಲುಪಿದರು. ಆಗಲೆ ಸೂರ್ಯ ನೆತ್ತಿಯಮೇಲೆ ಏರಿ ಬಂದಿದ್ದ. ಗಿಡಮರಗಳ ನೆರಳಿನಲ್ಲಿ ಅಲ್ಲಿ ಇಲ್ಲಿ ಅಸ್ತವ್ಯಸ್ತವಾಗಿ ಬಿದ್ದುಕೊಂಡಿತ್ತು ಬಡಜನ. ಶಿಲಾಸನವೊಂದರಮೇಲೆ ಇಬ್ಬರೂ ಕುಳಿತುಕೊಂಡರು.
ಸೆರಗಿನಿಂದ ಬೆವರನ್ನೊರೆಯಿಸಿಕೊಳ್ಳುತ್ತ ಕೇಳಿದಳು ಗಿರಿಜಾ,
"ಇನ್ನೇನು ಮಾಡೋದು?"
"ಸಿನಿಮಾ ನೋಡೋದು" ಎಂದ ಸಿದ್ದರಾಮ, ಅರ್ಥಗರ್ಭಿತ ಸ್ವರದಲ್ಲಿ,
ಹೇಳಿದ್ದು?" "ಸಿನಿಮಾ? ಈಗೆಲ್ಲಿಯ ಸಿನಿಮಾ? ಮೂರೂವರೆಗೆಲ್ಲವೇನು ನೀವು
"ಮೂರೂವರೆಗೆ ನಡೆಯೋದು ನಿಜವಾದ ಸಿನಿಮಾ ಅಲ್ಲ. ಸುಳ್ಳು ಸಿನಿಮಾ! ನಿಜವಾದ ಸಿನಿಮಾ ಇಲ್ಲೇ ನಡೆದಿದೆ ನೋಡು. ನಮ್ಮ ಅಕ್ಕ ಪಕ್ಕದಲ್ಲೇ, ನಮ್ಮ ಕಣ್ಣೆದುರಿನಲ್ಲೆ!"
"ಸುರು ಮಾಡಿದ್ರೇನು ಹಾಸ್ಯಕ್ಕೆ? ಇಲ್ಲೆಲ್ಲಿದೆ ಸಿನಿಮಾ? ಈ ತೋಟದಲ್ಲಿ?"
"ಹೂಂ! ಈ ತೋಟದಲ್ಲಿ!"
"ಎಲ್ಲಿ? ಕಾಣೋದಿಲ್ಲವಲ್ಲಾ?"
"ಕಣ್ಣಿದ್ದವರಿಗೆ ಮಾತ್ರ ಕಾಣಿಸುತ್ತೆ ಅದು!"
"ಕಣ್ಣಿದ್ದವರಿಗೆ ಅಂದ್ರೆ? ಅಂದ್ರೆ ನನ್ನೇನು ಕುರುಡಿ ಅಂತ ತಿಳಕೊಂಡಿರೊ?"
"ಹೂಂ! ಕುರುಡಿಯೇ ಸರಿ ಇನ್ನೇನು?"
"ಕಣ್ಣಿದ್ದೂ?"
"ಹೌದು, ಕಣ್ಣಿದ್ದೂ ಕುರುಡಿ ನೀನು ಗಿರಿಜಾ! ಈ ಹೊರಗಿನ ಕಣ್ಣುಗಳಿಂದ ಕಾಣಲಾರದು ಈ ಸಿನಿಮಾ! ಅದಕ್ಕೆ ಒಳಗಿನ ಕಣ್ಣು ಬೇಕು! ಜ್ಞಾನದ ಕಣ್ಣು ಬೇಕು. ಬುದ್ದಿಯ ಕಣ್ಣು ಬೇಕು. ಸಹಾನುಭೂತಿಯ ಕಣ್ಣು ಬೇಕು."
“?”
"ನಮ್ಮ ಸುತ್ತಮುತ್ತ ಏನು ನಡೆದಿದೆ. ನಮ್ಮ ದೇಶದ ಗತಿ ಏನಾಗಿದೆ, ಜನ ಯಾವ ಸ್ಥಿತಿಯಲ್ಲಿದ್ದಾರೆ, ಅವರ ಕಷ್ಟ ಸುಖ ಹೇಗಿದೆ ಅನ್ನೋದನ್ನ ತಿಳಿದು ಕೊಳ್ಳೋ ವಿಚಾರ ಬೇಕು ನಮಗೆ ಗಿರಿಜಾ! ಅದೋ ಆ ಗಿಡದ ಕೆಳಗೆ ಒಬ್ಬ ಹೆಂಗಸು ಬಿದ್ದುಕೊಂಡಿದ್ದಾಳೆ, ಕಾಣಿಸುತ್ತೆ ತಾನೇ ನಿನಗೆ?"
"ಹೌದಲ್ಲಿ! ಪಾಪ! ಯಾಕೆ ಹಾಗೆ ಬಿದ್ದು ಕೊಂಡಿದಾಳೋ? ಹತ್ತಿರ ಇರೋವು ಆ ನಾಲ್ಕು ಪಿಳ್ಳೆಗಳು ಮಕ್ಕಳು ಅಂತ ಕಾಣುತ್ತೆ"
"ಮಕ್ಕಳೇ! ಇನ್ನಾರಿದ್ದಾರು! ನೋಡು, ಆಕೆಯೂ ನಮ್ಮ ಹಾಗೆ ಮನುಷ್ಯಳೇ ನಿನ್ನ ಹಾಗೆ ಹೆಂಗಸೇ. ಮಾನ ಮರ್ಯಾದೆ ಎಲ್ಲಾ ಮರತುಬಿಟ್ಟು ಒಬ್ಬಳೇ. ಈ ಮಕ್ಕಳನ್ನು ಕಟ್ಟಿಕೊಂಡು ಈ ತೋಟಕ್ಕೆ ಬಂದು ಈ ರೀತಿ ಬಿದ್ದು ಕೋಬೇಕಾದರೆ ಅವಳಿಗೆ ಯಾವ ಗತಿ ಬಂದಿದ್ದೀತು? ಅವಳಿಗೆ ಇಂಥಾ ಸ್ಥಿತಿ ಬರಲು ಕಾರಣ ಏನು? ಅನ್ನೋ ವಿಚಾರ ನಮಗೆ ಬರಬೇಡವೇ?"
ಗಿರಿಜಾ ಮಾತನಾಡಲಿಲ್ಲ. ಅವಳ ಮನಸ್ಸಿಗೆ ಮುತ್ತಿಕೊಂಡಿದ್ದ ಮೌಡ್ಯದ ಪರದೆ ಮೆಲ್ಲಮೆಲ್ಲನೆ ಕಳಚಿಬೀಳತೊಡಗಿತ್ತು.
'ಆ ಹೆಂಗಸಿನ ಮಾತು ಹಾಗಿರಲಿ. ಈ ಕಡೆ ಎಡಗಡೆ ಆ ಬೇಲಿಯ ಹತ್ತಿರ ನೋಡು: ಹರಕು, ಹೊಲಸು ಬಟ್ಟೆ ಹಾಕಿಕೊಂಡು ಆ ನಾಲ್ಕು ಹುಡುಗರು ಹೇಗೆ ಬಿದ್ದಿವೆ ನೋಡು ಬಿಸಿಲಿನಲ್ಲೇ! ಪಾಪ! ಅವುಗಳ ವಯಸ್ಸಾದರೂ ಎಷ್ಟಿದ್ದೀತು! ಆರರಿಂದ ಏಳರ ವರೆಗೆ! ಹೆಚ್ಚಾಗಿರಲಿಕ್ಕಿಲ್ಲ. ಶಾಲೆ ಕಲಿಯೋ ವಯಸ್ಸಿದು. ಇವು ಇಲ್ಲಿ ಬಿದ್ದು ಕೊಂಡಿವೆ. ಎಲ್ಲಿಯಾದರೂ ಕೂಲಿನಾಲಿ ಮಾಡೋದು-ಆರು ಕಾಸಿನ ಕಡಲೆ ಪುರಿ ತಿನ್ನೋದು, ಮುಸುರೆ ಎಲೆ ಹುಡುಕಿ ಎಂಜಲು ತಿನ್ನೋದು ಇಲ್ಲಿ ಬಂದು ಬಿದ್ದು ಕೊಳ್ಳೋದು ಇದೂ ಜೀವನವೇ ಗಿರಿಜಾ! ಈ ಮಕ್ಕಳೂ ಮಕ್ಕಳೇ! ನೋಡಿದರೆ ನಾಯಿಯ ಕುನ್ನಿಗಳು ಬಿದ್ದು ಕೊಂಡ ಹಾಗೆ ಕಾಣಿಸೋಲ್ಲವೆ ಅವು? ನಮ್ಮ ದೇಶದಲ್ಲಿ ನೂರಕ್ಕೆ ತೊಂಬತ್ತರಷ್ಟು ಮಕ್ಕಳ ಗತಿಯೂ ಹೀಗೇ ಆಗಿದೆ. ಗಿರಿಜಾ! ನಾಯಿಯ ಕುನ್ನಿಗಳ ಹಾಗೆ ನಾವು ನೋಡುತ್ತಿರುವ ಸಿನಿಮಾದಲ್ಲಿ ಎರಡನೇ ದೃಶ್ಯ ಇದು........." ಎಂದ.
ಕೆಲಕಾಲ ದಂಪತಿಗಳಿಬ್ಬರೂ ಮೌನವಾಗಿದ್ದರು. ಯಾರ ಬಾಯಿಂದಲೂ ಮಾತು ಹೊರಡುವ ಹಾಗಿರಲಿಲ್ಲ.
'ಕಳ್ಳೇಕಾಯಿ! ಕಳ್ಳೇಕಾಯಿ!' ತಲೆಯೆತ್ತಿ ನೋಡಿದಳು ಗಿರಿಜಾ,
ಮುದುಕನೊಬ್ಬ ಬುಟ್ಟಿಯೊಂದನ್ನು ಹೊತ್ತುಕೊಂಡು ಕೂಗುತ್ತ ಬರುತ್ತಿದ್ದ. ವಯಸ್ಸಾದ ಮುದುಕ, ಅರವತ್ತು ಎಪ್ಪತ್ತು ಅದರೂ ಆಗಿದ್ದೀತು. ಕೈಯಲ್ಲೊಂದು ಕೋಲು ಹಿಡಿದುಕೊಂಡು ಅದರ ಆಧಾರದಿಂದ ತನ್ನ ಕೋಲಿನಂಥ ಶರೀರವನ್ನು ಮುಂದುವರೆಯಿಸುತ್ತ ಬಾಗುತ್ತ, ಬರುತ್ತಿದ್ದಾನೆ. ಹರಿದುಹೋದ ಪಂಚೆಯೊಂದನ್ನು ಮೊಳಕಾಲಿನವರೆಗೆ ಸುತ್ತಿಕೊಂಡು ಹೊಲಸು ಅಂಗಿಯೊಂದನ್ನು ತೊಟ್ಟಿದ್ದಾನೆ. ತಲೆ ಗೊಂದು ಚಿಂದಿಬಟ್ಟೆ, ಮುಖದ ಮೇಲೆ ಬೆಳೆದುನಿಂತ ಬಿಳಿಯ ಗಡ್ಡ ಮೀಸೆ.
ಮೊದಲೇ ಕಳಾಹೀನವಾದ ಆ ಮುಖ ಬಿಸಿಲಿನಲ್ಲಿ ಸುತ್ತಿ ಸುತ್ತಿ ಇನ್ನೂ ಕಂದಿ ಹೋಗಿದೆ. 'ಕಳ್ಳೇಕಾಯಿ! ಕಳ್ಳೇಕಾಯಿ!' ಎಂದ ಕುಗ್ಗಿದ ದನಿ ಅದು.
"ಹಸಿವಾಗಿದೆಯೇನೇ?" ಎಂದ ಸಿದ್ದರಾಮ.
ತಿಂದ ಅನ್ನ ಹೌದು. ಹಸಿವಾಗಿತ್ತು ಅವಳಿಗೆ. ಬೆಳಗಿನಲ್ಲಿ ಯಾವಾಗಲೋ ಕರಗಿ ಹೋಗಿತ್ತು. ಆ ರೈಲು ಪ್ರಯಾಣ-ಆ ಗಲಾಟೆ ಆ ಬಿಸಿಲು-ಆ ದಾಹ.
"ಕೊಡಯ್ಯಾ ಒಂದಾಣೆಯದು!"
ಒಂದು ನಡುಗುವ ಕೈಗಳಿಂದ ಬುಟ್ಟಿಯನ್ನಿಳಿಸಿ ಆ ಮುದುಕ ಕುಳಿತುಕೊಂಡ. ಪಾವು ಕಡಲೇಕಾಯಿಗಳನ್ನಳೆದುಕೊಟ್ಟು ದುಡ್ಡು ತೆಗೆದುಕೊಂಡು ಹೊರಟುಹೋದ. ಭಾರತದ ದಾರಿದ್ರ, ದೈನ್ಯತೆ, ಅಸಹಾಯಕತೆಗಳೇ ಮೂರ್ತಿವೆತ್ತು ಬಂದಂತಿದ್ದ ಆ ಮುದುಕನನ್ನು ಶೂನ್ಯ ದೃಷ್ಟಿಯಿಂದ ನಿಟ್ಟಿಸುತ್ತ ಸಿದ್ದರಾಮನೆಂದ.
"ನಾವು ನೋಡುತ್ತಿರುವ ಸಿನಿಮಾದಲ್ಲಿ ಮೂರನೇ ದೃಶ್ಯ ಇದು ಗಿರಿಜಾ! ಇನ್ನೂ ಕೊಂಚ ಕಣ್ಣೆರೆದು ನೋಡು. ಮುಪ್ಪಿನ ಮುದುಕ ಈತ, ಅರವತ್ತಕ್ಕೂ ಹೆಚ್ಚಾಗಿದ್ದೀತು ವಯಸ್ಸು ಮೈಯಲ್ಲಿ ಶಕ್ತಿಯಾದರೂ ಇದೆಯೇ ಅವನಿಗೆ? ಅವನ ಕತ್ತಿನಲ್ಲಿ ನರಗಳಾದರೂ ಇವೆಯೇ? ಕೈಯಲ್ಲಿ ರಕ್ತವಾದರೂ ಇದೆಯೇ? ಆದರೂ ಆತ ಆ ಬುಟ್ಟಿ ಹೊತ್ತು ಕೊಂಡು ಈ ಭೀಕರ ಬಿಸಿಲಿನಲ್ಲಿ ತಿರುಗುತ್ತಾನೆ. ಊಟ ಮಾಡಿ ತಂಪಾದ ಸ್ಥಳದಲ್ಲಿ ಮಲಗಿಕೊಂಡು ವಿರಮಿಸುವ ಹೊತ್ತು ಇದು. ಇವನ ವಯಸ್ಸಿನ ಶ್ರೀಮಂತರೆಷ್ಟು ಜನ ಸೋಫಾಗಳ ಮೇಲೆ ಒರಗಿ ನಿದ್ರಿಸುತ್ತಿದಾರೋ ಇವನು ಮಾತ್ರ ಹೊಟ್ಟೆ ಪಾಡಿಗಾಗಿ ಈ ಕಳ್ಳೇಕಾಯಿಯ ಕ್ಷುಲ್ಲಕವ್ಯಾಪಾರ ಮಾಡುತ್ತ ತಿರುಗಬೇಕಾಗಿದೆ. ದಿನವೆಲ್ಲಾ ಈ ರೀತಿ ತಿರುಗಿದರೆ ಅವನಿಗೆ ದೊರೆಯುವ ಲಾಭನಾದರೂ ಎಷ್ಟಿದ್ದೀತು ಅಂತೀಯಾ? ನಾಲ್ಕಾಣೆ ಐದಾಣೆ ಆದರೆ ಬಹಳ ಆಯಿತು. ಈ ಅಲ್ಪ ಲಾಭಕ್ಕಾಗಿ ಈ ಮುದುಕ ಪಡುತ್ತಿರುವ ಕಷ್ಟ ನೋಡಿದೆಯಾ? ಇಂಥ ಕಷ್ಟವೇ ಇವನಂಥ ಕೋಟ್ಯಾವಧಿ ಜನ ಮುದುಕರಿಗೂ ಇದೆ. ಇಂದಿನ ಹಿಂದುಸ್ಥಾನದಲ್ಲಿ! ಇದು ನಿಜವಾದ ಸಿನಿಮಾ ಗಿರಿಜಾ! ಅಲ್ಲಿ ಆ ಥೇಟರನಲ್ಲಿ ಈ ನಿಜ ದೃಶ್ಯ ಗಳನ್ನು ನೋಡಿಸೋಲ್ಲ. ಅದೆಲ್ಲಾ ಸುಳ್ಳು ಸೃಷ್ಟಿ, ಬರೀ ಶ್ರೀಮಂತರ ಅಟ್ಟಹಾಸ, ಅವರ ಸೂಟು, ಅವರ ಬೂಟು, ಅವರ ಭಾರಿ ಭಾರಿ ಬಂಗಲೆಗಳು, ಮೋಟಾರು ಕಾರುಗಳು, ಅವರ ಪ್ರೇಯಸಿಯರು, ಅವರ ಚಿತ್ರ ವಿಚಿತ್ರ ಸೀರೆ-ರವಕೆಗಳು.... ಅವರ ವಿಲಕ್ಷಣ ಪ್ರೇಮ! ಈ ಜಗತ್ತಿನಲ್ಲಿ ನಿಜವಾಗಿ ನಡೆದಿರೋದು ಆ ಸಿನಿಮಾ ಗಳಲ್ಲಿ ಕಾಣಿಸೋದಿಲ್ಲ ಗಿರಿಜಾ! ಅದ್ಯಾವುದೋ ಬೇರೆ ಜಗತ್ತಿನ ಸಿನಿಮಾ! ಅದಕ್ಕಾಗಿ ಹಣ ಹಾಳು ಮಾಡೇವೆ ಹುಚ್ಚರು ನಾವು...."
ಬೇರಾವುದಾದರೂ ಸಮಯವಾಗಿದ್ದರೆ ಗಿರಿಜಾ ಸುಮ್ಮನಿರುತ್ತಿರಲಿಲ್ಲ. ದುಡ್ಡು ಖರ್ಚಾಗುತ್ತೆ ಅಂತ ಸುರುವಾಯ್ತನೋ ನಿಮ್ಮ ಲೆಕ್ಟರು!' ಎಂದು ಹೇಳಿ ಮೂಗು ಮುರಿಯದಿರುತ್ತಿರಲಿಲ್ಲ. ಆದರೆ ಈಗ ಹಾಗೇನೂ ಮಾಡಲಿಲ್ಲ ಆಕೆ. ಅದು ಸಾಧ್ಯವೂ ಇರಲಿಲ್ಲ. ಈ ವಾತಾವರಣವೇ ವಿಲಕ್ಷಣವಾಗಿತ್ತು. ಮನೆಯಲ್ಲಿ ಕೂತು ಕೂತು ಸಂಕುಚಿತವಾಗಿದ್ದ ಅವಳ ದೃಷ್ಟಿ ಹೊರ ಜಗತ್ತಿನ ಸಂಪರ್ಕದೊಂದಿಗೆ ವಿಶಾಲವಾಗಿತ್ತು ಅವಳ ಕಣ್ಣು ಮೆಲ್ಲನೆ ಬಿಚ್ಚಿಕೊಳ್ಳುತ್ತಿತ್ತು-ಸಿದ್ಧರಾಮನೆಂದ ಆ ಒಳಗಣ್ಣು....
"ಇಂಥ ಬಡತನ, ಇಂಥ ದೈನ್ಯತೆ, ಇಂಥ ಅಸಹಾಯ ಸ್ಥಿತಿ ನಮ್ಮದು! ಇದನ್ನೆಲ್ಲ ಹೋಗಲಾಡಿಸಲು ನಾವು ದುಡಿಯಬೇಕಲ್ಲವೇ ಗಿರಿಜಾ! ಈ ಬಡವರೂ ನಮ್ಮವರೆ! ನಮ್ಮ ದೇಶದವರೆ! ನಮ್ಮ ಅಣ್ಣ ತಮ್ಮ ಅಕ್ಕ ತಂಗಿಯರೇ! ಅವರ ದುಃಖ ಹೇಗೆ ಹೋದೀತು ಅದಕ್ಕಾಗಿ ಎಂಥ ಕೆಲಸ ಮಾಡಬೇಕು. ಎನ್ನುವುದನ್ನು ನಾವು ಯೋಚಿಸಬೇಕಲ್ಲವೇ? ಭಾನುವಾರ ಬರುತ್ತಲೂ ಅದೇ ಕೆಲಸದಲ್ಲಿ ತೊಡಗಿರುತ್ತೇನೆ ನಾನು. ಕಾಡುಗೋಡಿಯಲ್ಲಿರುವ ಇಂಥ ಬಡ ಕೂಲಿಕಾರರ ಸಂಘಟನೆ ಮಾಡುತ್ತಿರುತ್ತೇನೆ. ಈ ಅಸಹ್ಯ ಬಡತನ ಹೋಗಬೇಕು. ಅವರೂ ಮನುಷ್ಯರಾಗಿ ಬದುಕುವಂತಾಗಬೇಕು. ಅವರ ಮಕ್ಕಳೂ ಶಾಲೆಗೆ ಹೋಗಿ ಕಲಿಯಬೇಕು. ನಾಯಿ ಕುನ್ನಿಗಳಂತೆ ಎಂಜಲು ತಿಂದು ಈ ರೀತಿ ಬಿಸಿಲಲ್ಲಿ ಬೀಳಬಾರದು. ಅವರ ಹೆಂಗಸರೂ ಶ್ರೀ ಮರ್ಯಾದೆಯಿಂದ ಸುಖದಿಂದ ಇರುವಂತಾಗಬೇಕು. ಈ ರೀತಿ ಅನಾಥೆಯರಾಗಿ ಅತ್ಯುತ್ತಮ ಸಣ್ಣಕತೆಗಳು ತೋಟದಲ್ಲಿ ಬಿದ್ದುಕೊಳ್ಳಬಾರದು. ಅವರ ಮುದುಕ ತಂದೆಗಳೂ ಸುಖವಾಗಿ ಊಟ ಮಾಡಿ ವಿರಮಿಸುವಂತಾಗಬೇಕು. ಇಂಥ ಉರಿ ಬಿಸಿಲಿನಲ್ಲಿ ಕಳ್ಳೇಕಾಯಿ ಮಾರುತ್ತ ತಿರುಗಿ ಕೊನೆಗೆ ಕೆಮ್ಮುತ್ತ ಕೆಮ್ಮುತ್ತ ಪ್ರಾಣ ಬಿಡಬಾರದು...."
"ಅದೆಲ್ಲಾ ಸರಿ, ಆದರೆ ನೀವೊಬ್ಬರೇ ಏನು ಮಾಡೀರಿ ಇವರಿಗೆಲ್ಲ? ನಿಮ್ಮೊಬ್ಬರಿಂದ ಏನಾದೀತು?"
"ನಾನೊಬ್ಬನು ಮಾತ್ರವಲ್ಲ ಗಿರಿಜಾ! ಎಷ್ಟೋ ಜನ ಇಂಥ ಕಾರ್ಯ ಮಾಡು ತಿದ್ದೇವೆ. ಒಂದೊಂದು ಊರಿನಲ್ಲಿ ನಮ್ಮಂತಹವರು ಇಬ್ಬರಿದ್ದರೆ ಸಾಕು. ಎಷ್ಟೋ ಕೆಲಸವಾದೀತು. ಇಂದಿಲ್ಲ ನಾಳೆ ಈ ಬಡ ಜನರಿಗೆಲ್ಲ ಒಳ್ಳೆಯ ದಿನ ಬಂದೀತು. ಅವರೂ ಸುಖವಾಗಿ ಬಾಳಿಯಾರು! ಇದೊಂದು ದೊಡ್ಡ ಸಿನಿಮಾ! ಅದರಲ್ಲಿ ಪಾತ್ರ ವಹಿಸಿರುವವರು ಹತ್ತಿಪ್ಪತ್ತು ಮಂದಿ ಮಾತ್ರವಲ್ಲ ದೇಶದ ಬಡಜನರೆಲ್ಲಾ ಅದರಲ್ಲಿ ಅಭಿನಯಿಸುತ್ತಿದ್ದಾರೆ. ನಾವೇ ಅದರ ನಿರ್ಮಾತೃಗಳು ನಿರ್ದೇಶಕರು, ಕಳ್ಳೇಕಾಯಿ ತಿನ್ನು ಗಿರಿಜಾ! ಹಸಿದಿದ್ದೀಯ!"
ತಿನ್ನಲಾಗಲಿಲ್ಲ ಅವಳಿಗೆ. ಭಾವನಾವೇಗದಿಂದ ಅವಳ ಬಾಯಿ ಕಟ್ಟಿ ಹೋಗಿತ್ತು. ಕತ್ತಿನ ಶಿರವುಬ್ಬಿಕೊಂಡಿತ್ತು.
4
ಸೂರ್ಯ ಪಶ್ಚಿಮದ ಕಡೆ ಮೆಲ್ಲಮೆಲ್ಲನೆ ಇಳಿಯಲಾರಂಭಿಸಿದ್ದ, ಗಿಡಗಳ ನೆರಳು ಪೂರ್ವಕ್ಕೆ ಹೊರಳುತ್ತಿದ್ದುವು. ಸಿದ್ಧರಾಮನ ಹತ್ತಿರ ಗಡಿಯಾರವೆಲ್ಲಿಂದ ಬಂದೀತು? ಸೂರ್ಯನನ್ನು ನೋಡಿಯೇ ಹೊತ್ತು ಗುರುತಿಸಬೇಕು ಆತ,
"ಮೂರು ಗಂಟೆ ಆಯ್ಕೆನೊ-ಏಳು ಹೋಗೋಣ" ಎಂದ.
ಮೂರು ಗಂಟೆಯಲ್ಲ ಮೂರೂವರೆ ಗಂಟೆಯಾಗಿ ಹೋಗಿತ್ತು. ಅವರು ಸಿನಿಮಾ ಮಂದಿರಕ್ಕೆ ಬಂದು ತಲುಪಿದಾಗ, ಗಿರಿಜಳಿಗೆ ಮೂರೂಮುಕ್ಕಾಲಾಣೆಯ ದೊಂದು ಟಿಕೆಟ್ ತೆಗೆಯಿಸಿ ತನಗಾಗಿ ಎಂಟ
**1. "ಗಿರಿಜಾ ಕಂಡ ಸಿನಿಮಾ" ಕಥೆಯ ಸಾರಾಂಶ**
**"ಗಿರಿಜಾ ಕಂಡ ಸಿನಿಮಾ"** ಬಸವರಾಜ ಕಟ್ಟಿಮಣಿ ಅವರ ಸಾಮಾಜಿಕ ಕಾಳಜಿಯುಳ್ಳ ಅತ್ಯುತ್ತಮ ಕಥೆಯಾಗಿದೆ. ಈ ಕಥೆಯಲ್ಲಿ ಬಡತನ, ಶ್ರಮಿಕರ ಜೀವನ, ಸಾಮಾಜಿಕ ಅಸಮಾನತೆ ಹಾಗೂ ಮಾನವೀಯತೆಯನ್ನು ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ.
ಕಥೆಯ ನಾಯಕ ಸಿದ್ದರಾಮ ಒಬ್ಬ ಕೂಲಿಕಾರ. ಅವನು ಶ್ರಮಿಕರ ಸಂಘಟನೆಯಲ್ಲಿ ತೊಡಗಿಕೊಂಡು ಬಡವರ ಹಕ್ಕುಗಳಿಗಾಗಿ ಕೆಲಸ ಮಾಡುತ್ತಿರುತ್ತಾನೆ. ಅವನ ಪತ್ನಿ ಗಿರಿಜಾ ಮಾತ್ರ ಸರಳ ಮನಸ್ಸಿನವಳು. ಅವಳಿಗೆ ಸಿನಿಮಾ ನೋಡುವ ಆಸೆ ತುಂಬಾ ಇರುತ್ತದೆ. ಸಿದ್ದರಾಮನಿಗೆ ಆರ್ಥಿಕ ಸಂಕಷ್ಟದಿಂದ ಅವಳ ಆಸೆಯನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಒಂದು ದಿನ ತನ್ನಲ್ಲಿದ್ದ ಮೂರು ರೂಪಾಯಿಯನ್ನು ಖರ್ಚು ಮಾಡಿ ಗಿರಿಜಾಳನ್ನು ಬೆಂಗಳೂರಿಗೆ ಸಿನಿಮಾ ತೋರಿಸಲು ಕರೆದುಕೊಂಡು ಹೋಗುತ್ತಾನೆ.
ಬೆಂಗಳೂರು ತಲುಪಿದ ನಂತರ ಸಿದ್ದರಾಮ ಗಿರಿಜಾಳಿಗೆ ನಿಜವಾದ ಸಿನಿಮಾ ಚಿತ್ರಮಂದಿರದಲ್ಲಿಲ್ಲ, ಸಮಾಜದಲ್ಲಿದೆ ಎಂದು ತಿಳಿಸುತ್ತಾನೆ. ತೋಟದಲ್ಲಿ ಹಸಿವಿನಿಂದ ನರಳುವ ತಾಯಿ-ಮಕ್ಕಳು, ಬಿಸಿಲಿನಲ್ಲಿ ಬಿದ್ದಿರುವ ಬಡ ಮಕ್ಕಳು, ವೃದ್ಧಾಪ್ಯದಲ್ಲೂ ಕಡಲೆಕಾಯಿ ಮಾರುವ ಮುದುಕ, ಬಡವರ ದುರವಸ್ಥೆ ಹಾಗೂ ಸಾಮಾಜಿಕ ಅಸಮಾನತೆಯನ್ನು ತೋರಿಸಿ ಇದೇ ನಿಜ ಜೀವನದ ಸಿನಿಮಾ ಎಂದು ವಿವರಿಸುತ್ತಾನೆ. ಗಿರಿಜಾಳ ಮನಸ್ಸು ನಿಧಾನವಾಗಿ ಬದಲಾಗುತ್ತದೆ. ಬಡವರ ನೋವು ಮತ್ತು ಕಷ್ಟಗಳನ್ನು ಅವಳು ಅರ್ಥಮಾಡಿಕೊಳ್ಳಲು ಆರಂಭಿಸುತ್ತಾಳೆ.
ನಂತರ ಚಿತ್ರಮಂದಿರಕ್ಕೆ ಹೋದಾಗ ಟಿಕೆಟ್ ಸಿಗುವುದಿಲ್ಲ. ಕಾಳಸಂತೆಯ ಟಿಕೆಟ್ ಮಾರಾಟಗಾರರಿಂದ ಮೋಸಹೋದ ಕೂಲಿಕಾರನಿಗೆ ನ್ಯಾಯ ದೊರಕಿಸಲು ಸಿದ್ದರಾಮ ಮುಂದಾದಾಗ ಅವನನ್ನು ಹೊಡೆಯಲಾಗುತ್ತದೆ. ಅವನ ಹಣವೂ ಕಳವಾಗುತ್ತದೆ. ಹೀಗಾಗಿ ಇಬ್ಬರೂ ಸಿನಿಮಾ ನೋಡದೆ ಹಿಂದಿರುಗಬೇಕಾಗುತ್ತದೆ. ರಾತ್ರಿ ಚಿಕ್ಕ ಲಾಲ್ಬಾಗಿನಲ್ಲಿ ಉಳಿದುಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ.
ಈ ಕಥೆಯ ಮೂಲಕ ಲೇಖಕರು ಸಮಾಜದಲ್ಲಿರುವ ಬಡತನ, ವರ್ಗಭೇದ, ಶೋಷಣೆ ಹಾಗೂ ಅನ್ಯಾಯವನ್ನು ಬಿಂಬಿಸಿದ್ದಾರೆ. ಜೊತೆಗೆ ಮಾನವೀಯತೆ, ಸಾಮಾಜಿಕ ಹೊಣೆಗಾರಿಕೆ ಮತ್ತು ಬಡವರ ಬದುಕಿನ ನೈಜ ಚಿತ್ರಣವೇ ನಿಜವಾದ "ಸಿನಿಮಾ" ಎಂಬ ಸಂದೇಶವನ್ನು ನೀಡಿದ್ದಾರೆ.
******
ಸಂಭಾವ್ಯ ಪ್ರಶ್ನೆಗಳು:
1. ಗಿರಿಜಾ ಗಂಡನನ್ನು ಎಲ್ಲಿಗೆ ಕರೆದುಕೊಂಡು ಹೋಗು ಎಂದು ಕೇಳುತ್ತಿದ್ದಳು? ಅದಕ್ಕೆ ಪತಿಯ ಪ್ರತಿಕ್ರಿಯೆ ಹೇಗಿತ್ತು?
ಗಿರಿಜಾಳಿಗೆ ಸಿನಿಮಾ ನೋಡುವ ಆಸೆ ತುಂಬಾ ಇತ್ತು. ಆದ್ದರಿಂದ ಅವಳು ಆಗಾಗ ತನ್ನ ಗಂಡ ಸಿದ್ದರಾಮನನ್ನು **"ಒಮ್ಮೆ ಬೆಂಗಳೂರಿಗೆ ಕರೆದುಕೊಂಡು ಹೋಗಿ ಸಿನಿಮಾ ತೋರಿಸಿ"** ಎಂದು ಕೇಳುತ್ತಿದ್ದಳು.
ಆದರೆ ಸಿದ್ದರಾಮ ಬಡ ಕೂಲಿಕಾರನಾಗಿದ್ದರಿಂದ ಅವನಿಗೆ ಆರ್ಥಿಕ ಸಂಕಷ್ಟವಿತ್ತು. ಸಿನಿಮಾಕ್ಕೆ ಹೋಗುವ ಬದಲು ಭಾನುವಾರದ ದಿನಗಳಲ್ಲಿ ಬಡ ಕೂಲಿಕಾರರ ಮನೆಗಳಿಗೆ ಹೋಗಿ ಅವರ ಕಷ್ಟಸುಖಗಳನ್ನು ತಿಳಿದುಕೊಂಡು, ಅವರನ್ನು ಸಂಘಟಿಸುವ ಕೆಲಸದಲ್ಲಿ ತೊಡಗಿಕೊಂಡಿರುತ್ತಿದ್ದನು. ಗಿರಿಜಾ ಸಿನಿಮಾ ವಿಷಯ ಪ್ರಸ್ತಾಪಿಸಿದಾಗ, ಅವನು ಬಡವರ ಹೋರಾಟ, ಅವರ ಹಸಿವು, ಶೋಷಣೆ ಮತ್ತು ಸಾಮಾಜಿಕ ಅನ್ಯಾಯದ ಬಗ್ಗೆ ಮಾತನಾಡುತ್ತಾ, **"ನಿಜವಾದ ಸಿನಿಮಾ ಚಿತ್ರಮಂದಿರದಲ್ಲಿಲ್ಲ; ಸಮಾಜದಲ್ಲೇ ನಡೆಯುತ್ತಿದೆ"** ಎಂದು ತಿಳಿಸುತ್ತಿದ್ದನು.
ಕೊನೆಗೆ ಪತ್ನಿಯ ಆಸೆಯನ್ನು ಗೌರವಿಸಿ, ತನ್ನಲ್ಲಿದ್ದ ಸ್ವಲ್ಪ ಹಣವನ್ನೇ ಖರ್ಚು ಮಾಡಲು ನಿರ್ಧರಿಸಿ, ಅವಳನ್ನು ಬೆಂಗಳೂರಿಗೆ ಸಿನಿಮಾ ತೋರಿಸಲು ಕರೆದುಕೊಂಡು ಹೋಗುತ್ತಾನೆ. ಆದರೆ ಅಲ್ಲಿ ನಡೆದ ಘಟನೆಗಳಿಂದ ಅವರಿಗೆ ಸಿನಿಮಾ ನೋಡುವ ಅವಕಾಶ ಸಿಗುವುದಿಲ್ಲ. ಬದಲಾಗಿ ಗಿರಿಜಾ ನಿಜ ಜೀವನದ ಕಷ್ಟ, ಬಡತನ ಮತ್ತು ಸಾಮಾಜಿಕ ಅಸಮಾನತೆಯನ್ನೇ "ನಿಜವಾದ ಸಿನಿಮಾ" ಎಂದು ಅರಿತುಕೊಳ್ಳುತ್ತಾಳೆ.
2. ಗಿರಿಜಾ ಮತ್ತು ಅವಳ ಗಂಡ ಸಿನಿಮಾ ನೋಡಲು ಯಾವ ಯಾವ ಜಾಗಗಳನ್ನು ಸುತ್ತಿದರು?
ಸಿದ್ದರಾಮ ತನ್ನ ಪತ್ನಿ ಗಿರಿಜಾಳನ್ನು ಸಿನಿಮಾ ತೋರಿಸಲು ಬೆಂಗಳೂರಿಗೆ ಕರೆದುಕೊಂಡು ಹೋದನು. ಆದರೆ ಭಾನುವಾರವಾಗಿದ್ದರಿಂದ ಎಲ್ಲ ಚಿತ್ರಮಂದಿರಗಳಲ್ಲಿಯೂ ಜನಸಂದಣಿ ಹೆಚ್ಚಾಗಿತ್ತು.
ಮೊದಲು ಅವರು ತಾವು ಹೋಗಬೇಕೆಂದಿದ್ದ ಚಿತ್ರಮಂದಿರಕ್ಕೆ ಹೋದರು. ಅಲ್ಲಿ ಕಡಿಮೆ ದರದ ಟಿಕೆಟ್ಗಳು ಮುಗಿದಿದ್ದವು. ನಂತರ ಸೆಲೆಕ್ಟ್ ಚಿತ್ರಮಂದಿರಕ್ಕೆ ಹೋದರು. ಅಲ್ಲಿಯೂ ಟಿಕೆಟ್ ಸಿಗಲಿಲ್ಲ. ಬಳಿಕ ಮೆಜೆಸ್ಟಿಕ್, ಸಾಗರ್, ಪ್ರಭಾತ್ ಮತ್ತು ಸ್ಟೇಟ್ಸ್ ಚಿತ್ರಮಂದಿರಗಳಿಗೂ ಸುತ್ತಿದರು. ಆದರೆ ಎಲ್ಲೆಡೆಯೂ "ಹೌಸ್ಫುಲ್" ಎಂಬ ಫಲಕವಿದ್ದು, ಯಾವುದೇ ಚಿತ್ರಮಂದಿರದಲ್ಲಿ ಟಿಕೆಟ್ ದೊರೆಯಲಿಲ್ಲ.
ಕೊನೆಗೆ ಸಿನಿಮಾ ನೋಡಲು ಸಾಧ್ಯವಾಗದೆ ನಿರಾಶರಾಗಿ ಹಿಂದಿರುಗಿದರು. ಈ ಪ್ರಯಾಣದ ಮೂಲಕ ಗಿರಿಜಾ ಚಿತ್ರಮಂದಿರದ ಸಿನಿಮಾವನ್ನು ನೋಡದಿದ್ದರೂ, ಸಮಾಜದಲ್ಲಿರುವ ಬಡತನ, ಶೋಷಣೆ ಮತ್ತು ಅನ್ಯಾಯದ ನಿಜ ಜೀವನದ ಸಿನಿಮಾವನ್ನು ಕಂಡು ಅರಿತುಕೊಂಡಳು.
3. ಕಾಳಸಂತೆಯ ಕಳ್ಳರನ್ನು ಸಿದ್ದರಾಮ ಹೇಗೆ ಎದುರಿಸಿದನು?
ಉತ್ತರ:ಸಿನಿಮಾ ನೋಡಲು ಹೋದಾಗ ಕಾಳಸಂತೆಯ ಕಳ್ಳರು ಒಬ್ಬ ಬಡ ಕೂಲಿಕಾರನಿಗೆ ಐದಾಣೆಯ ಟಿಕೆಟ್ನ್ನು ಎಂಟಾಣೆಗೆ ಕೊಡುತ್ತೇವೆ ಎಂದು ಹಣ ಪಡೆದು, ನಂತರ ಟಿಕೆಟ್ನ್ನೂ ಕೊಡದೆ, ಹಣವನ್ನೂ ಹಿಂದಿರುಗಿಸದೆ ಮೋಸ ಮಾಡುತ್ತಿದ್ದರು. ಇದನ್ನು ಕಂಡ ಸಿದ್ದರಾಮ ಸುಮ್ಮನೆ ನಿಲ್ಲಲಿಲ್ಲ.
ಅವನು ಧೈರ್ಯದಿಂದ ಅವರ ಬಳಿಗೆ ಹೋಗಿ, ಕೂಲಿಕಾರನ ಹಣವನ್ನು ಹಿಂದಿರುಗಿಸುವಂತೆ ಒತ್ತಾಯಿಸಿದನು. ಅವರು ಅವನನ್ನು ಅವಮಾನಿಸಿ, ಪೋಲೀಸರ ಹೆಸರನ್ನು ಹೇಳಿ ಬೆದರಿಸಿದರು. ಆದರೂ ಸಿದ್ದರಾಮ ಹೆದರದೆ, "ಒಳ್ಳೆಯ ಮಾತಿನಿಂದ ಇವನ ಹಣವನ್ನು ವಾಪಸ್ ಕೊಡಿ; ಇಲ್ಲದಿದ್ದರೆ ಪೋಲೀಸರಿಗೆ ತಿಳಿಸುತ್ತೇನೆ" ಎಂದು ಎಚ್ಚರಿಕೆ ನೀಡಿದನು.
ಇದರಿಂದ ಕೋಪಗೊಂಡ ಕಾಳಸಂತೆಯ ಕಳ್ಳರು ನಾಲ್ವರೂ ಸೇರಿ ಸಿದ್ದರಾಮನ ಮೇಲೆ ಹಲ್ಲೆ ನಡೆಸಿದರು. ಅವನ ಮುಖ, ತಲೆ ಮತ್ತು ದೇಹಕ್ಕೆ ಹೊಡೆದು ಗಾಯಗೊಳಿಸಿದರು. ಹಣೆಯು ಒಡೆದು ರಕ್ತ ಹರಿಯಿತು. ನಂತರ ಪೋಲೀಸರು ಬಂದು ಜಗಳವನ್ನು ನಿಲ್ಲಿಸಿದರೂ, ಕೂಲಿಕಾರನ ಹಣವನ್ನು ಮರಳಿ ಕೊಡಿಸಲಿಲ್ಲ. ಹೊಡೆದಾಟದ ವೇಳೆ ಸಿದ್ದರಾಮನ ಸ್ವಂತ ಹಣವೂ ಕಳುವಾಯಿತು.
ಈ ಘಟನೆಯ ಮೂಲಕ ಸಿದ್ದರಾಮನ ನ್ಯಾಯಪ್ರಜ್ಞೆ, ಧೈರ್ಯ, ಬಡವರ ಪರವಾದ ನಿಲುವು ಹಾಗೂ ಅನ್ಯಾಯದ ವಿರುದ್ಧ ಹೋರಾಡುವ ಮನೋಭಾವ ವ್ಯಕ್ತವಾಗುತ್ತದೆ.
4. ಚಿಕ್ಕ ಲಾಲ್ಬಾಗಿನಲ್ಲಿ ಗಿರಿಜಾ ಏನೇನು ಕಂಡಳು?
ಉತ್ತರ : ಚಿಕ್ಕ ಲಾಲ್ಬಾಗಿನಲ್ಲಿ ಗಿರಿಜಾ ತನ್ನ ಜೀವನದ ದೃಷ್ಟಿಕೋನವನ್ನೇ ಬದಲಿಸುವಂತಹ ನಿಜ ಜೀವನದ ದೃಶ್ಯಗಳನ್ನು ಕಂಡಳು. ಸಿನಿಮಾ ನೋಡಲು ಬಂದಿದ್ದ ಅವಳಿಗೆ ಸಿದ್ದರಾಮ ಸಮಾಜದಲ್ಲೇ ನಡೆಯುತ್ತಿರುವ ನಿಜವಾದ ಸಿನಿಮಾವನ್ನು ತೋರಿಸಿದನು.
ಮೊದಲು ಗಿರಿಜಾ ಗಿಡದ ಕೆಳಗೆ ತನ್ನ ನಾಲ್ಕು ಮಕ್ಕಳೊಂದಿಗೆ ಹಸಿವಿನಿಂದ ಬಳಲುತ್ತಿದ್ದ ಬಡ ಹೆಂಗಸನ್ನು ಕಂಡಳು. ನಂತರ ಹರಕು ಬಟ್ಟೆ ಧರಿಸಿ, ಶಾಲೆಗೆ ಹೋಗುವ ವಯಸ್ಸಿನಲ್ಲೇ ಬಿಸಿಲಿನಲ್ಲಿ ಬಿದ್ದಿದ್ದ ಬಡ ಮಕ್ಕಳನ್ನು ನೋಡಿದಳು. ಮುಂದೆ ವೃದ್ಧಾಪ್ಯದಲ್ಲಿಯೂ ಹೊಟ್ಟೆಪಾಡಿಗಾಗಿ ಉರಿ ಬಿಸಿಲಿನಲ್ಲಿ ಕಡಲೆಕಾಯಿ ಮಾರುತ್ತ ತಿರುಗುತ್ತಿದ್ದ ಮುದುಕನನ್ನು ಕಂಡಳು. ಅವನ ಬಡತನ ಮತ್ತು ಅಸಹಾಯಕತೆ ಗಿರಿಜಾಳ ಮನಸ್ಸನ್ನು ತಟ್ಟಿತು.
ನಂತರ ಸಿನಿಮಾ ಮಂದಿರದ ಬಳಿ ಕಾಳಸಂತೆಯ ಕಳ್ಳರು ಒಬ್ಬ ಬಡ ಕೂಲಿಕಾರನಿಗೆ ಮೋಸ ಮಾಡುತ್ತಿದ್ದುದನ್ನು ಹಾಗೂ ನ್ಯಾಯಕ್ಕಾಗಿ ಹೋರಾಡಿದ ಸಿದ್ದರಾಮನನ್ನು ಹೊಡೆದು ಗಾಯಗೊಳಿಸಿದ ಘಟನೆಗೂ ಅವಳು ಸಾಕ್ಷಿಯಾದಳು. ಸಿದ್ದರಾಮನ ಹಣವೂ ಕಳುವಾಯಿತು. ಕೊನೆಗೆ ಇಬ್ಬರೂ ಸಿನಿಮಾ ನೋಡಲಾಗದೆ ರಾತ್ರಿ ಚಿಕ್ಕ ಲಾಲ್ಬಾಗಿನಲ್ಲೇ ಉಳಿಯುವ ಪರಿಸ್ಥಿತಿ ಎದುರಾಯಿತು.
ಈ ಎಲ್ಲ ಘಟನೆಗಳನ್ನು ಕಂಡ ಗಿರಿಜಾಳಿಗೆ ಸಮಾಜದಲ್ಲಿರುವ ಬಡತನ, ಶೋಷಣೆ, ಅನ್ಯಾಯ ಮತ್ತು ಅಸಮಾನತೆಯ ಅರಿವು ಮೂಡಿತು. ಚಿತ್ರಮಂದಿರದ ಸಿನಿಮಾ ನೋಡದಿದ್ದರೂ, **ನಿಜ ಜೀವನದ ಸಿನಿಮಾವನ್ನೇ** ಅವಳು ಚಿಕ್ಕ ಲಾಲ್ಬಾಗಿನಲ್ಲಿ ಕಂಡಳು
5. ಗಿರಿಜಾ ಮತ್ತು ಅವಳ ಗಂಡನ ಸಂಭಾಷಣೆ ಕುರಿತು ಬರೆಯಿರಿ.
ಉತ್ತರ : ಬಸವರಾಜ ಕಟ್ಟಿಮಣಿ ಅವರ **"ಗಿರಿಜಾ ಕಂಡ ಸಿನಿಮಾ"** ಕಥೆಯಲ್ಲಿ ಗಿರಿಜಾ ಮತ್ತು ಅವಳ ಗಂಡ ಸಿದ್ದರಾಮನ ನಡುವಿನ ಸಂಭಾಷಣೆ ಕಥೆಯ ಜೀವಾಳವಾಗಿದೆ. ಈ ಸಂಭಾಷಣೆಯ ಮೂಲಕ ಲೇಖಕರು ದಾಂಪತ್ಯ ಜೀವನದ ಸೌಹಾರ್ದ, ಬಡತನದ ನೋವು, ಸಾಮಾಜಿಕ ಅಸಮಾನತೆ ಹಾಗೂ ಮಾನವೀಯ ಮೌಲ್ಯಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ.
ಕಥೆಯ ಆರಂಭದಲ್ಲಿ ಗಿರಿಜಾ ತನ್ನ ಗಂಡನೊಂದಿಗೆ ತುಂಟತನದಿಂದ ಮಾತನಾಡುತ್ತಾಳೆ. ಅವನನ್ನು ಚುಡಾಯಿಸುತ್ತಾ ಸಿನಿಮಾ ತೋರಿಸಬೇಕೆಂದು ಕೇಳುತ್ತಾಳೆ. ಸಿದ್ದರಾಮ ಕೂಡ ಹಾಸ್ಯಮಯವಾಗಿ ಉತ್ತರಿಸುತ್ತಾನೆ. ಅವರ ಮಾತುಕತೆಯಲ್ಲಿ ಪ್ರೀತಿ, ಮುನಿಸು, ಹಾಸ್ಯ ಮತ್ತು ಆತ್ಮೀಯತೆ ತುಂಬಿರುತ್ತದೆ. ಆದರೆ ಸಿನಿಮಾ ವಿಷಯ ಬಂದಾಗ ಇಬ್ಬರ ಅಭಿಪ್ರಾಯಗಳಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಗಿರಿಜಾಳಿಗೆ ಸಿನಿಮಾ ನೋಡುವುದು, ಒಳ್ಳೆಯ ಸೀರೆ ಉಡುವುದು ಮತ್ತು ಸಾಮಾನ್ಯ ಸಂತೋಷಗಳನ್ನು ಅನುಭವಿಸುವ ಆಸೆ. ಸಿದ್ದರಾಮನಿಗೆ ಬಡವರ ಬದುಕು, ಕೂಲಿಕಾರರ ಹಕ್ಕು ಮತ್ತು ಸಮಾಜಸೇವೆ ಮುಖ್ಯವಾಗಿರುತ್ತದೆ.
ಸಿದ್ದರಾಮ ತನ್ನ ಕಡಿಮೆ ಸಂಬಳ, ಕುಟುಂಬದ ಆರ್ಥಿಕ ಸಂಕಷ್ಟ ಹಾಗೂ ಬಡವರ ದುಃಖದ ಬಗ್ಗೆ ವಿವರಿಸುತ್ತಾನೆ. ಗಿರಿಜಾ ತನ್ನ ಆಸೆಗಳು ಈಡೇರದ ನೋವನ್ನು ಹೇಳಿಕೊಳ್ಳುತ್ತಾಳೆ. ಈ ಸಂಭಾಷಣೆಯಲ್ಲಿ ಅವರ ಬಡತನದ ವಾಸ್ತವ ಚಿತ್ರಣ ಮೂಡಿಬರುತ್ತದೆ.
ನಂತರ ಸಿದ್ದರಾಮ ಗಿರಿಜಾಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಾನೆ. ಚಿಕ್ಕ ಲಾಲ್ಬಾಗಿನಲ್ಲಿ ಹಸಿವಿನಿಂದ ಬಳಲುವ ತಾಯಿ-ಮಕ್ಕಳು, ಹರಕು ಬಟ್ಟೆ ಧರಿಸಿದ ಮಕ್ಕಳು, ಉರಿ ಬಿಸಿಲಿನಲ್ಲಿ ಕಡಲೆಕಾಯಿ ಮಾರುವ ವೃದ್ಧ ಹಾಗೂ ಬಡವರ ದುಃಸ್ಥಿತಿಯನ್ನು ತೋರಿಸಿ, **"ಇದೇ ನಿಜವಾದ ಸಿನಿಮಾ"** ಎಂದು ವಿವರಿಸುತ್ತಾನೆ. ಈ ಮಾತುಗಳು ಗಿರಿಜಾಳ ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರುತ್ತವೆ. ಅವಳ ಅಜ್ಞಾನ ದೂರವಾಗಿ ಸಮಾಜದ ನೈಜ ಸಮಸ್ಯೆಗಳ ಅರಿವು ಮೂಡುತ್ತದೆ.
ಸಿನಿಮಾ ಮಂದಿರದಲ್ಲಿ ಟಿಕೆಟ್ ಸಿಗದೆ, ಕಾಳಸಂತೆಯ ಕಳ್ಳರ ವಿರುದ್ಧ ಸಿದ್ದರಾಮ ಹೋರಾಡಿದಾಗ ಅವನ ಧೈರ್ಯ, ನ್ಯಾಯಪ್ರಜ್ಞೆ ಮತ್ತು ಮಾನವೀಯತೆ ಗಿರಿಜಾಳಿಗೆ ಸ್ಪಷ್ಟವಾಗುತ್ತದೆ. ಕೊನೆಯಲ್ಲಿ ಚಿತ್ರಮಂದಿರದ ಸಿನಿಮಾ ನೋಡದಿದ್ದರೂ, ನಿಜ ಜೀವನದ ಸಿನಿಮಾವನ್ನು ಕಂಡ ಗಿರಿಜಾ ತನ್ನ ಗಂಡನ ವಿಚಾರಧಾರೆಯನ್ನು ಅರ್ಥಮಾಡಿಕೊಳ್ಳುತ್ತಾಳೆ.
ಹೀಗಾಗಿ ಗಿರಿಜಾ ಮತ್ತು ಸಿದ್ದರಾಮನ ಸಂಭಾಷಣೆ ಕೇವಲ ಗಂಡ–ಹೆಂಡತಿಯ ಮಾತುಕತೆಯಲ್ಲ; ಅದು ಬಡತನ, ಸಾಮಾಜಿಕ ಅಸಮಾನತೆ, ಶ್ರಮಿಕರ ಜೀವನ, ನ್ಯಾಯ, ಮಾನವೀಯತೆ ಮತ್ತು ಸಾಮಾಜಿಕ ಜಾಗೃತಿಯನ್ನು ಪ್ರತಿಬಿಂಬಿಸುವ ಅರ್ಥಪೂರ್ಣ ಸಂಭಾಷಣೆಯಾಗಿದೆ. ಈ ಸಂಭಾಷಣೆಯ ಮೂಲಕ ಲೇಖಕರು **ನಿಜವಾದ ಜೀವನವೇ ದೊಡ್ಡ ಸಿನಿಮಾ** ಎಂಬ ಸಂದೇಶವನ್ನು ಮನಮುಟ್ಟುವಂತೆ ನೀಡಿದ್ದಾರೆ..
6. ಗಿರಿಜಾಳ ಗಂಡ ಯಾವುದರ ವಿರುದ್ಧ ಹೋರಾಡುತ್ತಿದ್ದನು?
ಉತ್ತರ:ಗಿರಿಜಾ ಕಂಡ ಸಿನಿಮಾ"** ಕಥೆಯಲ್ಲಿ ಗಿರಿಜಾಳ ಗಂಡ ಸಿದ್ದರಾಮ ಒಬ್ಬ ಪ್ರಾಮಾಣಿಕ, ಸಮಾಜಮುಖಿ ಹಾಗೂ ಮಾನವೀಯ ಗುಣಗಳಿರುವ ಕೂಲಿಕಾರನಾಗಿದ್ದಾನೆ. ಅವನು ತನ್ನ ವೈಯಕ್ತಿಕ ಸುಖಕ್ಕಿಂತ ಸಮಾಜದ ಬಡವರ ಹಿತವನ್ನೇ ಹೆಚ್ಚು ಮುಖ್ಯವೆಂದು ಭಾವಿಸುತ್ತಾನೆ.
ಸಿದ್ದರಾಮನು ಸಮಾಜದಲ್ಲಿರುವ **ಬಡತನ, ಶೋಷಣೆ, ಅನ್ಯಾಯ, ವರ್ಗಭೇದ, ಅಸಮಾನತೆ ಮತ್ತು ಕೂಲಿಕಾರರ ಮೇಲಿನ ದಬ್ಬಾಳಿಕೆಯ ವಿರುದ್ಧ** ಹೋರಾಡುತ್ತಿದ್ದನು. ಭಾನುವಾರದ ರಜಾದಿನಗಳಲ್ಲಿಯೂ ವಿಶ್ರಾಂತಿ ಪಡೆಯದೆ ಬಡ ಕೂಲಿಕಾರರ ಮನೆಗಳಿಗೆ ಹೋಗಿ ಅವರ ಕಷ್ಟಸುಖಗಳನ್ನು ತಿಳಿದುಕೊಳ್ಳುತ್ತಿದ್ದನು. ಅವರನ್ನು ಸಂಘಟಿಸಿ ತಮ್ಮ ಹಕ್ಕುಗಳಿಗಾಗಿ ಹೋರಾಡುವಂತೆ ಜಾಗೃತಿ ಮೂಡಿಸುತ್ತಿದ್ದನು. ಬಡವರಿಗೂ ಗೌರವಯುತ ಜೀವನ ಸಿಗಬೇಕು, ಅವರ ಮಕ್ಕಳೂ ಶಿಕ್ಷಣ ಪಡೆಯಬೇಕು ಹಾಗೂ ಯಾರೂ ಹಸಿವಿನಿಂದ ನರಳಬಾರದು ಎಂಬುದು ಅವನ ಆಶಯವಾಗಿತ್ತು.
ಬೆಂಗಳೂರುಗೆ ಹೋದಾಗ ಚಿಕ್ಕ ಲಾಲ್ಬಾಗಿನಲ್ಲಿ ಗಿರಿಜಾಳಿಗೆ ಹಸಿವಿನಿಂದ ಬಳಲುತ್ತಿದ್ದ ತಾಯಿ-ಮಕ್ಕಳು, ಬಡ ಮಕ್ಕಳು ಹಾಗೂ ವೃದ್ಧ ಕಡಲೆಕಾಯಿ ಮಾರುವವನನ್ನು ತೋರಿಸಿ, ಇದೇ ನಿಜವಾದ ಸಮಾಜದ ಸ್ಥಿತಿ ಎಂದು ವಿವರಿಸುತ್ತಾನೆ. ನಂತರ ಸಿನಿಮಾ ಮಂದಿರದ ಬಳಿ ಕಾಳಸಂತೆಯ ಕಳ್ಳರು ಬಡ ಕೂಲಿಕಾರನಿಗೆ ಮೋಸ ಮಾಡುತ್ತಿದ್ದಾಗ, ಸಿದ್ದರಾಮ ಧೈರ್ಯದಿಂದ ಅವರ ವಿರುದ್ಧ ನಿಂತು ನ್ಯಾಯಕ್ಕಾಗಿ ಹೋರಾಡುತ್ತಾನೆ. ಇದರಿಂದ ಅವನು ಹಲ್ಲೆಗೊಳಗಾದರೂ ಅನ್ಯಾಯದ ವಿರುದ್ಧದ ತನ್ನ ನಿಲುವನ್ನು ಬಿಡುವುದಿಲ್ಲ.
ಹೀಗಾಗಿ ಸಿದ್ದರಾಮನ ಹೋರಾಟವು ಕೇವಲ ತನ್ನ ಕುಟುಂಬಕ್ಕಾಗಿ ಅಲ್ಲ; **ಬಡತನ, ಶೋಷಣೆ, ಅನ್ಯಾಯ, ಅಸಮಾನತೆ ಹಾಗೂ ಬಡವರ ಬದುಕನ್ನು ಕಾಡುವ ಎಲ್ಲಾ ಸಾಮಾಜಿಕ ಸಮಸ್ಯೆಗಳ ವಿರುದ್ಧದ ಹೋರಾಟ**ವಾಗಿತ್ತು. ಈ ಪಾತ್ರದ ಮೂಲಕ ಲೇಖಕರು ಸಮಾಜಸೇವೆ, ನ್ಯಾಯಪ್ರಜ್ಞೆ ಮತ್ತು ಮಾನವೀಯತೆಯ ಮಹತ್ವವನ್ನು ಸಾ
ರಿದ್ದಾರೆ.
7. ಗಿರಿಜಾಳ ಗಂಡ ಯಾರ ಜೊತೆ ಸಿನಿಮಾಕ್ಕೆ ಹೋಗಬೇಕಾಯಿತು? ಅದರ ಪರಿಣಾಮವೇನು?
ಉತ್ತರ : ಗಿರಿಜಾಳ ಗಂಡ ಸಿದ್ದರಾಮ ತನ್ನ ಪತ್ನಿ ಗಿರಿಜಾಳ ಜೊತೆಯೇ ಸಿನಿಮಾಕ್ಕೆ ಹೋಗಬೇಕಾಯಿತು. ಗಿರಿಜಾಳಿಗೆ ಬಹಳ ದಿನಗಳಿಂದ ಸಿನಿಮಾ ನೋಡುವ ಆಸೆಯಿತ್ತು. ಅವಳ ಆಸೆಯನ್ನು ಪೂರೈಸಲು ಸಿದ್ದರಾಮ ತನ್ನಲ್ಲಿದ್ದ ಅಲ್ಪ ಹಣವನ್ನೇ ಖರ್ಚು ಮಾಡಲು ನಿರ್ಧರಿಸಿ ಅವಳನ್ನು ಬೆಂಗಳೂರಿಗೆ ಕರೆದುಕೊಂಡು ಹೋದನು.
ಬೆಂಗಳೂರುಗೆ ಹೋದ ನಂತರ ಅವರಿಗೆ ಸಾಕಷ್ಟು ಕಷ್ಟಗಳು ಎದುರಾದವು. ರೈಲಿನಲ್ಲಿ ತುಂಬಾ ಜನಸಂದಣಿ ಇದ್ದುದರಿಂದ ಪ್ರಯಾಣವೇ ಸಂಕಷ್ಟಕರವಾಯಿತು. ಚಿಕ್ಕ ಲಾಲ್ಬಾಗಿನಲ್ಲಿ ಸಿದ್ದರಾಮ ಗಿರಿಜಾಳಿಗೆ ಬಡತನ, ಹಸಿವು, ಅನಾಥ ಮಕ್ಕಳ ದುಃಸ್ಥಿತಿ, ವೃದ್ಧನ ಕಷ್ಟದ ಜೀವನ ಮುಂತಾದ ಸಮಾಜದ ನೈಜ ಚಿತ್ರಣಗಳನ್ನು ತೋರಿಸಿ, ಇದೇ ನಿಜವಾದ ಸಿನಿಮಾ ಎಂದು ತಿಳಿಸಿದನು. ನಂತರ ಸಿನಿಮಾ ಮಂದಿರಕ್ಕೆ ಹೋದಾಗ ಕಡಿಮೆ ದರದ ಟಿಕೆಟ್ಗಳು ಸಿಗಲಿಲ್ಲ. ಬೇರೆ ಬೇರೆ ಚಿತ್ರಮಂದಿರಗಳಿಗೂ ಹೋದರೂ ಎಲ್ಲೆಡೆ "ಹೌಸ್ಫುಲ್" ಆಗಿತ್ತು.
ಈ ವೇಳೆ ಕಾಳಸಂತೆಯಲ್ಲಿ ಟಿಕೆಟ್ ಮಾರುತ್ತಿದ್ದ ಕಳ್ಳರು ಒಬ್ಬ ಬಡ ಕೂಲಿಕಾರನಿಗೆ ಮೋಸ ಮಾಡುತ್ತಿದ್ದುದನ್ನು ಕಂಡ ಸಿದ್ದರಾಮ ಅವನ ಪರವಾಗಿ ನಿಂತನು. ಇದರಿಂದ ಕಳ್ಳರು ಅವನ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದರು. ಹೊಡೆದಾಟದ ಗೊಂದಲದಲ್ಲಿ ಸಿದ್ದರಾಮನ ಹಣವೂ ಕಳುವಾಯಿತು. ಹೀಗಾಗಿ ಅವರು ಸಿನಿಮಾ ನೋಡಲು ಸಾಧ್ಯವಾಗಲಿಲ್ಲ. ರಾತ್ರಿ ಚಿಕ್ಕ ಲಾಲ್ಬಾಗಿನಲ್ಲಿ ಉಳಿದುಕೊಂಡು ಮರುದಿನ ಊರಿಗೆ ಹಿಂದಿರುಗಬೇಕಾಯಿತು.
ಈ ಘಟನೆಯ ಪರಿಣಾಮವಾಗಿ ಗಿರಿಜಾಳಿಗೆ ಚಿತ್ರಮಂದಿರದ ಸಿನಿಮಾ ನೋಡಲು ಸಾಧ್ಯವಾಗದಿದ್ದರೂ, ಸಮಾಜದಲ್ಲಿರುವ ಬಡತನ, ಶೋಷಣೆ, ಅನ್ಯಾಯ ಮತ್ತು ಮಾನವೀಯ ನೋವುಗಳೇ ನಿಜವಾದ ಸಿನಿಮಾ ಎಂಬ ಅರಿವು ಮೂಡಿತು. ಸಿದ್ದರಾಮನ ಸಮಾಜಸೇವೆಯ ಉದ್ದೇಶ ಮತ್ತು ಅವನ ವಿಚಾರಧಾರೆಯನ್ನು ಅವಳು ಸಂಪೂರ್ಣವಾಗಿ ಅರ್ಥಮಾಡಿಕೊಂಡಳು.
8. "ಬಡವರ ಕನಸುಗಳು ಕನಸಾಗಿಯೇ ಉಳಿಯುತ್ತವೆ" ಎಂಬ ಮಾತನ್ನು "ಗಿರಿಜಾ ಕಂಡ ಸಿನಿಮಾ" ಪಾಠದ ಹಿನ್ನೆಲೆಯಲ್ಲಿ ವಿಶ್ಲೇಷಿಸಿ.
ಉತ್ತರ :ಬಸವರಾಜ ಕಟ್ಟಿಮಣಿ ಅವರ **"ಗಿರಿಜಾ ಕಂಡ ಸಿನಿಮಾ"** ಕಥೆ ಬಡವರ ಬದುಕಿನ ಕಠೋರ ವಾಸ್ತವವನ್ನು ಚಿತ್ರಿಸುವ ಸಾಮಾಜಿಕ ಕಥೆಯಾಗಿದೆ. ಈ ಕಥೆಯು **"ಬಡವರ ಕನಸುಗಳು ಕನಸಾಗಿಯೇ ಉಳಿಯುತ್ತವೆ"** ಎಂಬ ಮಾತನ್ನು ಅತ್ಯಂತ ಪರಿಣಾಮಕಾರಿಯಾಗಿ ಸಮರ್ಥಿಸುತ್ತದೆ.
ಗಿರಿಜಾ ಒಬ್ಬ ಬಡ ಕೂಲಿಕಾರನ ಹೆಂಡತಿ. ಅವಳ ಆಸೆಗಳು ಬಹಳ ಚಿಕ್ಕವು. ಒಳ್ಳೆಯ ಸೀರೆ ಉಡಬೇಕು, ಒಮ್ಮೆಯಾದರೂ ಸಿನಿಮಾ ನೋಡಬೇಕು ಎಂಬ ಸರಳ ಕನಸುಗಳನ್ನು ಮಾತ್ರ ಅವಳು ಕಾಣುತ್ತಾಳೆ. ಆದರೆ ಅವಳ ಗಂಡ ಸಿದ್ದರಾಮನ ಕಡಿಮೆ ಸಂಬಳ, ಕುಟುಂಬದ ಆರ್ಥಿಕ ಸಂಕಷ್ಟ ಹಾಗೂ ದಿನನಿತ್ಯದ ಬದುಕಿನ ಹೋರಾಟದಿಂದ ಆ ಕನಸುಗಳನ್ನೂ ಈಡೇರಿಸಲು ಸಾಧ್ಯವಾಗುವುದಿಲ್ಲ. ಹೊಟ್ಟೆ ತುಂಬಿಸುವುದೇ ಕಷ್ಟವಾಗಿರುವಾಗ ಸಿನಿಮಾ, ಹೊಸ ಸೀರೆ ಮುಂತಾದ ಆಸೆಗಳು ಕೈಗೂಡದೆ ಉಳಿಯುತ್ತವೆ.
ಕೊನೆಗೆ ಸಿದ್ದರಾಮ ತನ್ನಲ್ಲಿದ್ದ ಅಲ್ಪ ಹಣವನ್ನು ಖರ್ಚು ಮಾಡಿ ಗಿರಿಜಾಳನ್ನು ಬೆಂಗಳೂರಿಗೆ ಸಿನಿಮಾ ತೋರಿಸಲು ಕರೆದುಕೊಂಡು ಹೋಗುತ್ತಾನೆ. ಆದರೆ ರೈಲಿನ ಜನಸಂದಣಿ, ಟಿಕೆಟ್ ಕೊರತೆ, ಕಾಳಸಂತೆಯ ಟಿಕೆಟ್ ಮಾರಾಟ, ಕಳ್ಳರ ದೌರ್ಜನ್ಯ, ಸಿದ್ದರಾಮನ ಮೇಲೆ ಹಲ್ಲೆ ಹಾಗೂ ಹಣ ಕಳುವಾಗುವುದು ಮುಂತಾದ ಘಟನೆಗಳಿಂದ ಅವರು ಸಿನಿಮಾ ನೋಡಲು ಸಾಧ್ಯವಾಗುವುದಿಲ್ಲ. ಗಿರಿಜಾಳ ಬಹುದಿನಗಳ ಕನಸು ಮತ್ತೊಮ್ಮೆ ಕನಸಾಗಿಯೇ ಉಳಿಯುತ್ತದೆ.
ಈ ಕಥೆಯಲ್ಲಿ ಗಿರಿಜಾಳ ಕನಸು ಮಾತ್ರವಲ್ಲ, ಸಮಾಜದಲ್ಲಿರುವ ಅನೇಕ ಬಡವರ ಕನಸುಗಳೂ ಅಪೂರ್ಣವಾಗಿರುವುದನ್ನು ಲೇಖಕರು ತೋರಿಸಿದ್ದಾರೆ. ಹಸಿವಿನಿಂದ ಬಳಲುವ ತಾಯಿ-ಮಕ್ಕಳು, ಶಾಲೆಗೆ ಹೋಗಲಾಗದ ಬಡ ಮಕ್ಕಳು, ವೃದ್ಧಾಪ್ಯದಲ್ಲಿಯೂ ದುಡಿಯುವ ಮುದುಕ, ಶೋಷಣೆಗೆ ಒಳಗಾಗುವ ಕೂಲಿಕಾರರು—ಇವರೆಲ್ಲರ ಬದುಕು ಕೂಡ ಕನಸುಗಳು ನನಸಾಗದ ಜೀವನದ ಸಂಕೇತವಾಗಿದೆ.
ಆದರೆ ಲೇಖಕರು ಕೇವಲ ಬಡತನವನ್ನಷ್ಟೇ ಚಿತ್ರಿಸುವುದಿಲ್ಲ. ಬಡತನ, ಶೋಷಣೆ ಮತ್ತು ಅನ್ಯಾಯದ ವಿರುದ್ಧ ಹೋರಾಡಿದರೆ ಮಾತ್ರ ಬಡವರ ಕನಸುಗಳು ನನಸಾಗಬಹುದು ಎಂಬ ಆಶಯವನ್ನೂ ಸಿದ್ದರಾಮನ ಪಾತ್ರದ ಮೂಲಕ ವ್ಯಕ್ತಪಡಿಸುತ್ತಾರೆ. ಬಡವರ ಸಂಘಟನೆ, ಜಾಗೃತಿ ಮತ್ತು ಸಾಮಾಜಿಕ ನ್ಯಾಯದಿಂದ ಉತ್ತಮ ಸಮಾಜವನ್ನು ನಿರ್ಮಿಸಬಹುದು ಎಂಬ ವಿಶ್ವಾಸವನ್ನು ಕಥೆ ಮೂಡಿಸುತ್ತದೆ.
ಹೀಗಾಗಿ **"ಗಿರಿಜಾ ಕಂಡ ಸಿನಿಮಾ"** ಕಥೆಯು ಬಡವರ ಕನಸುಗಳು ಅನೇಕ ಬಾರಿ ಕನಸಾಗಿಯೇ ಉಳಿಯುವ ಕಠೋರ ಸತ್ಯವನ್ನು ಬಿಂಬಿಸುವುದರ ಜೊತೆಗೆ, ಆ ಸ್ಥಿತಿಯನ್ನು ಬದಲಾಯಿಸಲು ಸಾಮಾಜಿಕ ಜಾಗೃತಿ ಮತ್ತು ಹೋರಾಟ ಅಗತ್ಯವೆಂಬ ಸಂದೇಶವನ್ನು ಸಾರುತ್ತದೆ.
9. ಗಿರಿಜಾ ಕಂಡ ಸಿನಿಮಾ ಯಾವುದು? ಇದರಿಂದ ಅವಳ ಮನಸ್ಥಿತಿ ಬದಲಾಯಿತೇ? ವಿಶ್ಲೇಷಿಸಿ.
ಉತ್ತರ : ಬಸವರಾಜ ಕಟ್ಟಿಮಣಿ ಅವರ **"ಗಿರಿಜಾ ಕಂಡ ಸಿನಿಮಾ"** ಕಥೆಯಲ್ಲಿ ಗಿರಿಜಾ ಚಿತ್ರಮಂದಿರದ ಸಿನಿಮಾಕ್ಕಿಂತ ಸಮಾಜದಲ್ಲಿರುವ **ನಿಜ ಜೀವನದ ಸಿನಿಮಾವನ್ನೇ** ಕಾಣುತ್ತಾಳೆ. ಇದೇ ಈ ಕಥೆಯ ಪ್ರಮುಖ ಆಶಯವಾಗಿದೆ.
ಗಿರಿಜಾಳಿಗೆ ಮೊದಲಿನಿಂದಲೂ ಸಿನಿಮಾ ನೋಡುವ ಆಸೆ ಇತ್ತು. ಅವಳ ಆಸೆಯನ್ನು ಪೂರೈಸಲು ಗಂಡ ಸಿದ್ದರಾಮ ಅವಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಾನೆ. ಆದರೆ ಸಿನಿಮಾ ಪ್ರಾರಂಭವಾಗುವ ಮೊದಲು ಚಿಕ್ಕ ಲಾಲ್ಬಾಗಿಗೆ ಕರೆದುಕೊಂಡು ಹೋಗಿ, ಅಲ್ಲಿನ ನೈಜ ಜೀವನದ ವಿವಿಧ ದೃಶ್ಯಗಳನ್ನು ತೋರಿಸುತ್ತಾನೆ. ಗಿಡದ ಕೆಳಗೆ ಹಸಿವಿನಿಂದ ನರಳುತ್ತಿದ್ದ ತಾಯಿ ಮತ್ತು ಅವಳ ಮಕ್ಕಳನ್ನು, ಶಾಲೆಗೆ ಹೋಗಬೇಕಾದ ವಯಸ್ಸಿನಲ್ಲಿ ಹರಕು ಬಟ್ಟೆ ಧರಿಸಿ ಬಿಸಿಲಿನಲ್ಲಿ ಬಿದ್ದಿದ್ದ ಬಡ ಮಕ್ಕಳನ್ನು, ಉರಿ ಬಿಸಿಲಿನಲ್ಲಿ ಕಡಲೆಕಾಯಿ ಮಾರುತ್ತಿದ್ದ ವೃದ್ಧನನ್ನು ಹಾಗೂ ಬಡವರ ದುಃಖ, ಹಸಿವು ಮತ್ತು ಅಸಹಾಯಕ ಬದುಕನ್ನು ಅವಳಿಗೆ ತೋರಿಸುತ್ತಾನೆ. ನಂತರ ಸಿನಿಮಾ ಮಂದಿರದ ಬಳಿ ಕಾಳಸಂತೆಯ ಕಳ್ಳರು ಬಡ ಕೂಲಿಕಾರನಿಗೆ ಮೋಸ ಮಾಡುತ್ತಿದ್ದುದನ್ನು ಮತ್ತು ನ್ಯಾಯಕ್ಕಾಗಿ ಹೋರಾಡಿದ ಸಿದ್ದರಾಮನನ್ನು ಹೊಡೆದ ಘಟನೆಯನ್ನೂ ಅವಳು ಕಣ್ಣಾರೆ ನೋಡುತ್ತಾಳೆ. ಕೊನೆಗೆ ಹಣ ಕಳೆದು ಇಬ್ಬರೂ ಸಿನಿಮಾ ನೋಡಲಾಗದೆ ಚಿಕ್ಕ ಲಾಲ್ಬಾಗಿನಲ್ಲೇ ರಾತ್ರಿ ಕಳೆಯುವ ಪರಿಸ್ಥಿತಿ ಎದುರಾಗುತ್ತದೆ.
ಈ ಎಲ್ಲ ಘಟನೆಗಳೇ ಗಿರಿಜಾ ಕಂಡ **ನಿಜವಾದ ಸಿನಿಮಾ**. ಈ ಸಿನಿಮಾ ಅವಳ ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಆರಂಭದಲ್ಲಿ ಸಿನಿಮಾ, ಹೊಸ ಸೀರೆ ಮತ್ತು ಸಣ್ಣ ಸಣ್ಣ ಆಸೆಗಳಲ್ಲೇ ಮುಳುಗಿದ್ದ ಗಿರಿಜಾ, ಸಮಾಜದಲ್ಲಿರುವ ಬಡತನ, ಶೋಷಣೆ, ಅನ್ಯಾಯ ಮತ್ತು ಅಸಮಾನತೆಯ ನೈಜ ಚಿತ್ರಣವನ್ನು ಅರಿತುಕೊಳ್ಳುತ್ತಾಳೆ. ತನ್ನ ಗಂಡನ ಸಮಾಜಸೇವೆಯ ಉದ್ದೇಶ ಮತ್ತು ಬಡವರಿಗಾಗಿ ಅವನು ನಡೆಸುತ್ತಿದ್ದ ಹೋರಾಟದ ಮಹತ್ವವನ್ನು ಅರ್ಥಮಾಡಿಕೊಳ್ಳುತ್ತಾಳೆ.
ಹೀಗಾಗಿ ಗಿರಿಜಾಳ ಮನಸ್ಥಿತಿಯಲ್ಲಿ ಮಹತ್ತರ ಬದಲಾವಣೆ ಉಂಟಾಗುತ್ತದೆ. ಅವಳ ಅಜ್ಞಾನ ಮತ್ತು ಸಂಕುಚಿತ ದೃಷ್ಟಿಕೋನ ದೂರವಾಗಿ, ಸಮಾಜದ ಬಗ್ಗೆ ಕಾಳಜಿ, ಮಾನವೀಯತೆ ಮತ್ತು ಸಹಾನುಭೂತಿ ಬೆಳೆಯುತ್ತದೆ. ಈ ಕಥೆಯ ಮೂಲಕ ಲೇಖಕರು **ಚಿತ್ರಮಂದಿರದ ಸಿನಿಮಾ ಕ್ಷಣಿಕ ಮನರಂಜನೆ ನೀಡುತ್ತದೆ; ಆದರೆ ಸಮಾಜದ ನಿಜ ಜೀವನವೇ ಮನುಷ್ಯನಿಗೆ ಅರಿವು ಮತ್ತು ಜಾಗೃತಿ ನೀಡುವ ನಿಜವಾದ ಸಿನಿಮಾ** ಎಂಬ ಸಂದೇಶವನ್ನು ಪರಿಣಾಮಕಾರಿಯಾಗಿ ಸಾರಿದ್ದಾರೆ.
10. ಲೇಖಕರು ಕಥೆಗೆ "ಗಿರಿಜಾ ಕಂಡ ಸಿನಿಮಾ" ಎಂದು ಶೀರ್ಷಿಕೆ ಇಟ್ಟ ಹಿನ್ನೆಲೆಯಲ್ಲಿ ಕಥಾವಸ್ತುವನ್ನು ವಿವರಿಸಿ.
ಉತ್ತರ: ಬಸವರಾಜ ಕಟ್ಟಿಮಣಿ ಅವರ "ಗಿರಿಜಾ ಕಂಡ ಸಿನಿಮಾ" ಕಥೆಯ ಶೀರ್ಷಿಕೆ ಅತ್ಯಂತ ಅರ್ಥಪೂರ್ಣ ಹಾಗೂ ಕಥೆಯ ಆಶಯಕ್ಕೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ. ಕಥೆಯ ಕೇಂದ್ರಬಿಂದುವೇ ಗಿರಿಜಾ ಕಂಡ ನಿಜ ಜೀವನದ ಸಿನಿಮಾ ಆಗಿರುವುದರಿಂದ ಲೇಖಕರು ಈ ಶೀರ್ಷಿಕೆಯನ್ನು ನೀಡಿದ್ದಾರೆ.
ಗಿರಿಜಾ ಒಬ್ಬ ಬಡ ಕೂಲಿಕಾರನ ಹೆಂಡತಿ. ಅವಳಿಗೆ ಸಿನಿಮಾ ನೋಡುವ ಆಸೆ ಬಹಳವಾಗಿರುತ್ತದೆ. ಆದರೆ ಆರ್ಥಿಕ ಸಂಕಷ್ಟದಿಂದ ಅವಳ ಆಸೆ ಈಡೇರುವುದಿಲ್ಲ. ಕೊನೆಗೆ ಅವಳ ಗಂಡ ಸಿದ್ದರಾಮ ತನ್ನಲ್ಲಿದ್ದ ಸ್ವಲ್ಪ ಹಣವನ್ನೇ ಖರ್ಚು ಮಾಡಿ ಅವಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಾನೆ. ಸಿನಿಮಾ ನೋಡುವ ಮೊದಲು ಅವಳನ್ನು ಚಿಕ್ಕ ಲಾಲ್ಬಾಗಿಗೆ ಕರೆದುಕೊಂಡು ಹೋಗಿ, ಸಮಾಜದಲ್ಲಿರುವ ಬಡತನ, ಹಸಿವು, ಶೋಷಣೆ ಮತ್ತು ಅಸಮಾನತೆಯ ನೈಜ ಚಿತ್ರಣಗಳನ್ನು ತೋರಿಸುತ್ತಾನೆ.
ಅಲ್ಲಿ ಗಿರಿಜಾ ಹಸಿವಿನಿಂದ ಬಳಲುತ್ತಿದ್ದ ತಾಯಿ ಮತ್ತು ಮಕ್ಕಳನ್ನು, ಹರಕು ಬಟ್ಟೆ ಧರಿಸಿ ಬಿಸಿಲಿನಲ್ಲಿ ಬಿದ್ದಿದ್ದ ಬಡ ಮಕ್ಕಳನ್ನು, ಉರಿ ಬಿಸಿಲಿನಲ್ಲಿ ಕಡಲೆಕಾಯಿ ಮಾರುತ್ತಿದ್ದ ವೃದ್ಧನನ್ನು ಹಾಗೂ ಅನೇಕ ಬಡವರ ದುಃಸ್ಥಿತಿಯನ್ನು ನೋಡುತ್ತಾಳೆ. ನಂತರ ಸಿನಿಮಾ ಮಂದಿರದ ಬಳಿ ಕಾಳಸಂತೆಯ ಕಳ್ಳರು ಒಬ್ಬ ಬಡ ಕೂಲಿಕಾರನಿಗೆ ಮೋಸ ಮಾಡುವುದು, ನ್ಯಾಯಕ್ಕಾಗಿ ಹೋರಾಡಿದ ಸಿದ್ದರಾಮನನ್ನು ಹೊಡೆದು ಗಾಯಗೊಳಿಸುವುದು ಹಾಗೂ ಅವನ ಹಣ ಕಳುವಾಗುವುದು ಮುಂತಾದ ಘಟನೆಗಳಿಗೂ ಅವಳು ಸಾಕ್ಷಿಯಾಗುತ್ತಾಳೆ. ಕೊನೆಗೆ ಇಬ್ಬರಿಗೂ ಸಿನಿಮಾ ನೋಡಲು ಸಾಧ್ಯವಾಗದೆ, ಚಿಕ್ಕ ಲಾಲ್ಬಾಗಿನಲ್ಲೇ ರಾತ್ರಿ ಕಳೆಯುವ ಪರಿಸ್ಥಿತಿ ಉಂಟಾಗುತ್ತದೆ.
ಈ ಎಲ್ಲ ಘಟನೆಗಳನ್ನು ಕಂಡ ಗಿರಿಜಾಳಿಗೆ ಚಿತ್ರಮಂದಿರದ ಸಿನಿಮಾ ನೋಡುವುದಕ್ಕಿಂತ ಸಮಾಜದಲ್ಲೇ ನಡೆಯುತ್ತಿರುವ ಬಡತನ, ಹಸಿವು, ಶೋಷಣೆ, ಅನ್ಯಾಯ ಮತ್ತು ಮಾನವೀಯ ನೋವುಗಳೇ ನಿಜವಾದ ಸಿನಿಮಾ ಎಂಬ ಅರಿವು ಉಂಟಾಗುತ್ತದೆ. ಅವಳ ಮನಸ್ಥಿತಿ ಬದಲಾಗುತ್ತದೆ. ತನ್ನ ಗಂಡನ ಸಮಾಜಸೇವೆಯ ಉದ್ದೇಶ ಮತ್ತು ಬಡವರ ಪರವಾದ ಹೋರಾಟದ ಮಹತ್ವವನ್ನು ಅರ್ಥಮಾಡಿಕೊಳ್ಳುತ್ತಾಳೆ.
ಆದ್ದರಿಂದ ಈ ಕಥೆಗೆ "ಗಿರಿಜಾ ಕಂಡ ಸಿನಿಮಾ" ಎಂಬ ಶೀರ್ಷಿಕೆ ಅತ್ಯಂತ ಸಮಂಜಸವಾಗಿದೆ. ಇದು ಕೇವಲ ಸಿನಿಮಾ ನೋಡುವ ಕಥೆಯಲ್ಲ; ಒಬ್ಬ ಸಾಮಾನ್ಯ ಮಹಿಳೆ ಸಮಾಜದ ನೈಜ ಬದುಕನ್ನು ಕಂಡು ಜಾಗೃತಳಾಗುವ ಕಥೆಯಾಗಿದೆ. ಈ ಶೀರ್ಷಿಕೆಯ ಮೂಲಕ ಲೇಖಕರು ನಿಜ ಜೀವನವೇ ದೊಡ್ಡ ಸಿನಿಮಾ ಎಂಬ ಸಂದೇಶವನ್ನು ಪರಿಣಾಮಕಾರಿಯಾಗಿ ನೀಡಿದ್ದಾರೆ.
******