ಭೈರಸಂದ್ರ, ತಿಪ್ಪಳ್ಳಿ, ಒಡ್ಡರಬೈಲು, ಸುಂಕೇನಹಳ್ಳಿ ಎಲ್ಲಾ ಅರ್ಧ ಪರ್ಲಾಂಗ್ ಅಂತರದಲ್ಲಿದ್ದ ಹಳ್ಳಿಗಳು, ಭೈರಸಂದ್ರದ ಕೆರೆಯೇ ದೊಡ್ಡ ಕೆರೆ. ಅಲ್ಲೇ ಸ್ವಲ್ಪ ತರೀ ಫಸಲು ಆಗುತ್ತಿತ್ತು. ಉಳಿದ ಕಡೆ ರಾಗಿ. ತರೀಫಸಲು ಬೆಳೆಯುತ್ತಿದ್ದ ಭೈರಸಂದ್ರದ ರೈತರನ್ನು ಕಂಡರೆ ಖುಷಿ ಬೆಳೆಯುತ್ತಿದ್ದ ಇತರ ಹಳ್ಳಿಯವರಿಗೆ ಒಂದು ಬಗೆಯ ಗೌರವ. ಭೈರಸಂದ್ರದ ಗೌಡ ರಾಮಯ್ಯ ಆ ಪ್ರದೇಶಕ್ಕೆಲ್ಲಾ ಬಲಿಷ್ಠ. ಎರಡು ಜತೆ ದನಯಿಟ್ಟುಕೊಂಡು ತಾನೇ ಸ್ವಂತ ಆರಂಬ ಮಾಡಿಸುತ್ತಿದ್ದ. ಅವನ ಅಪ್ಪಣೆಯಿಲ್ಲದೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಯಾವ ಶುಭಾಶುಭ ಕೆಲಸವೂ ಆಗುವಂತಿರಲಿಲ್ಲ.
ರಾಮಯ್ಯನ ಮಗ ಸಿದ್ದಯ್ಯನಿಗೂ ತಿಪ್ಪಳ್ಳಿ ಗಂಗನಿಗೂ ಪರಮ ಸ್ನೇಹ ಇಬ್ಬರೂ ಕೋಳಿ ಸಾಕುವುದರಲ್ಲಿ ನಿಪುಣರು. ಆ ತಾಲ್ಲೂಕಿನಲ್ಲಿ ಯಾವ ಹುಂಜದ ಕಾಳಗವಾದರೂ ಬಹುಮಾನ ಸಿದ್ದ, ಗಂಗ ಇವರ ಪಾಲಾಗುತ್ತಿತ್ತು.
ಗಂಗ ಕೇವಲ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಆಳು. ಮೈಮುರಿದು ದುಡಿಯುವುದು, ಹೊಟ್ಟೆ ತುಂಬ ಎರಡೋ ಮೂರೋ ಗೋಳ (ರಾಗಿ ಮುದ್ದೆ) ಕತ್ತರಿಸುವುದು. ವಿರಾಮ ವೇಳೆಯಲ್ಲಿ ಹುಂಜಕ್ಕೆ ಜಗಳ ಕಾಯುವುದನ್ನು ಕಲಿಸುವುದರಲ್ಲಿ ಅವನ ಜೀವನ ಸಾಗಿತ್ತು. ಸಿದ್ದ ಆಗಾಗ್ಗೆ ತಂದೆ ಜತೆ ಬೆಂಗಳೂರು, ಮೈಸೂರಿಗೆ ಹೋಗಿ ಬಂದಿದ್ದ. ಬೆಂಗಳೂರಿನ ಕರಗ, ಮೈಸೂರಿನ 'ಪೋಜು' ಕಂಡು ಬಂದಿದ್ದ. ಅವನ ಬಾಯಲ್ಲಿ ಅವುಗಳ ವರ್ಣನೆ ಕೇಳುವುದೆಂದರೆ ಗಂಗನಿಗೆ ಇರುಳು ಹಗಲಾಗುತ್ತಿತ್ತು; ಹಗಲು ಇರುಳಾಗುತ್ತಿತ್ತು.
ಗಂಗನಿಗೆ ಸ್ವಂತ ಹೊಲ ಭೂಮಿ ಇರಲಿಲ್ಲ. ಅವನು ಮಾಡುತ್ತಿದ್ದುದು ಅಯ್ಯನವರ ಹೊಲ. ವರ್ಷಾಕಾಲಕ್ಕಾಗುವಷ್ಟು ದವಸ ಬೆಳೆಯುತ್ತಿತ್ತು. ಅವನು ಬೆಳೆದ ಒಂದಂಶ ಧಣಿಗೆ ಹೋಗುತ್ತಿತ್ತು. ಆಗಾಗ್ಗೆ ಸೌದೆ, ಸಾಲುಮರದ ಮಾವಿನಕಾಯಿ, ಸೀಗೆಮೆಳೆಯ ಸೀಗೆಕಾಯಿ ಧಣಿಯವರ ಮನೆಗೆ ಕಳುಹಿಸುತ್ತಿದ್ದ. ಗಂಗನ ಧಣಿ ಬೆಂಗಳೂರಿನಲ್ಲಿ ಸರ್ಕಾರಿ ನೌಕರಿಯಲ್ಲಿದ್ದರು. ಈ ಜಮೀನಿನ ಆದಾಯ ಅವರು ಗಣನೆಗೆ ತಂದುಕೊಂಡಿರಲಿಲ್ಲ. ಕಂದಾಯ ಕಳೆದು ಒಂದೋ ಎರಡೋ ಮೂಟೆ ದವಸ ಮನೆಗೆ ಬಂದುಬಿದ್ದರೆ ಅವರಿಗೆ ಅತ್ಯಾನಂದವಾಗುತ್ತಿತ್ತು. ಪಿತ್ರಾರ್ಜಿತ ಆಸ್ತಿ, ಎಂದು ಸುಮ್ಮನಿದ್ದರು. ಗಂಗ ಭೂಮಿ ಮಾಲಿಕನಾಗಿರದಿದ್ದರೂ, ಮಾಲಿಕತನದ ಎಲ್ಲ ಸೌಕರ್ಯಗಳೂ ಅವನಿಗಿದ್ದವು. ಇರಲಿ
ಗಂಗನಿಗೆ ತಾಯಿ ಬಿಟ್ಟು ಯಾರೂ ದಿಕ್ಕಿಲ್ಲ. ಮುದುಕಿ ಮಗನನ್ನು ಕಾಡಿ ಕಾಡಿ ಕೊನೆಗೆ ಅವನಿಗೆ ಕೊಡ್ಲಿ ಮಗಳು ತಿಮ್ಮಿಯನ್ನು ಲಗ್ನಮಾಡಿಸಿದ್ದಳು. ತಿಮ್ಮಿ ಗಂಗನ ಜತೆಗೂ ದುಡಿದು ತನ್ನ ಅನ್ನ ತಾನು ಹುಟ್ಟಿಸಿಕೊಳ್ಳುತ್ತಿದ್ದಳು.
ಗಂಗ ಕಂಡಿದ್ದ ಪುಟ್ಟ ಜಗತ್ತಿನಲ್ಲಿ ಅವನು ಸುಖಿ ಎಂದೇ ಹೇಳಬೇಕು. ವರ್ಷಕ್ಕೊಮ್ಮೆ ಶಿವಗಂಗೆ ಪರಸೆಗೆ ಹೋಗಿಬಂದರೆ, ಒಡ್ಡರ ಬೈಲಿನ ಬಯಲು ನಾಟಕ ನೋಡಿಬಂದರೆ ಅವನ ವಿಹಾರ ಮುಗಿಯುತ್ತಿತ್ತು. ಒಂದು ವರ್ಷ ಅವನ ಹುಂಜ ಶಿವಗಂಗೆ ಪರಸೆಯಲ್ಲಿ ಸೀಬೆತೋಪಿನವರ ಹುಂಜ ಹೊಡೆದ ಮೇಲೆ ಗಂಗ ಹೆಂಡತಿಗೆ ಒಂದು ಜತೆ ಬೆಳ್ಳಿ ಕಡಗ ತಂದಿದ್ದ. ಅದರಿಂದ ಅವನಿಗೆ ಸ್ವಲ್ಪ ಜಂಭವು ಬಂದಿತ್ತು. ನಾಲ್ಕು ದಿವಸ ಹೆಂಡತಿ ಮುಂದೆ ಎದೆಯುಬ್ಬಿಸಿಕೊಂಡು ಮಾತನಾಡುತ್ತಿದ್ದ. ತಾಯಿ ಅವನ ತಲೆಯ ಮೇಲೆ ಮಟ್ಟಿ "ಮುಕ್ಕ ಒಂದು ಜತೆ ಕಡಗ ತಂದು ಮೆರೀತಾನೆ" ಅಂದು ಅವನನ್ನು ಹತೋಟಿಗೆ ತಂದಳು.
ಒಂದು ದಿನ ಸಂಜೆ ಹೊಲದಿಂದ ಬಂದು ಗಂಗ ಎಮ್ಮೆ ಮೈ ತೊಳೆಯುತ್ತ ನಿಂತಿದ್ದ. ರಾಮಯ್ಯ ಅವಸರದಲ್ಲಿ ಬರುತ್ತಿರುವುದು ಕಂಡಿತು.
"ಏನು ಗೌಡರೇ-ಈಸು ದೂರ?"
"ಏನಿಲ್ಲ ಗಂಗಣ್ಣ-ಸಿದ್ದನ್ನ ಕಂಡಿದ್ಯಾ?"
"ಇಲ್ವೇ... ಅಸ್ಟೀಲಿಲ್ವಾ?"
"ಒಲದ ಕಡೆ ಓಗವೋ ಏನೋ?"
"ಎಲ್ಲಿ ಉಡುಕ್ಸಿದ್ರೂ ಸಿಕ್ಕಿಲ್ಲವಯ್ಯ."
"ಅಂಗಾದ್ರೆ ಎಲ್ಲಿಗೋದ?"
"ನೋಡು ಗಂಗಣ್ಣ ನಿಂಗೇನಾದ್ರೂ ಸಿಕ್ಕಿದ್ರೆ ಕಳು."
"ಆದೇನಂತಾ" ಎಂದ.
ಮೂರು ನಾಲ್ಕು ದಿವಸ ಸಿದ್ದಯ್ಯನ ಪತ್ತೆ ಸಿಗಲೇ ಇಲ್ಲ. ಒಂದು ದಿನ ಗೌಡರೇ ಮತ್ತೆ ಗಂಗನನ್ನು ಹುಡುಕಿಕೊಂಡು ಬಂದರು. ಅವರ ಮುಖದಲ್ಲಿ ತೇಜಸ್ಸಿರಲಿಲ್ಲ. ಕಣ್ಣುಗಳು ಕಾಂತಿಹೀನವಾಗಿದ್ದವು. ನೋವಿನ ಘಾತದಿಂದ ದೇಹ ಕಳೆಗುಂದಿತ್ತು. ಗಂಗನನ್ನು ಕಂಡ ಕೂಡಲೇ ಗೌಡರು 'ಗೊಳೋ' ಎಂದು ಮಕ್ಕಳ ಹಾಗೆ ಅಳುವುದಕ್ಕೆ ಮೊದಲಿಟ್ಟರು. ಗೌಡರ ಕಣ್ಣಲ್ಲಿ ನೀರನ್ನು ಗಂಗನೇ ಆಗಲಿ. ಇತರರೇ ಆಗಲಿ ಕಂಡದ್ದು ಅದೇ ಮೊದಲು. ಗಂಗನ ತಾಯಿ ಸಮಾಧಾನ ಹೇಳಿದಳು.
"ಏನಾಯ್ತು-ರಾಮಪ್ಪಾ? ಏಳು, ಅಳೋದ್ಯಾಕೆ? ಸಿದ್ದಣ್ಣ ಚಿಕ್ಕಿದ್ದಾ?"
ಏನೇಲ್ಲಿ ಅಮ್ಮಿ... ಒಟ್ಟೆ ಮಗಾಂತ ಬಾಳೇಹಣ್ಣಿನ ಗುಡಾಣದಲ್ಲಿ ಬೆಳಗ್ಗೆ . ಈಗ ಕೈ ಕೊಟ್ಟ."
"ಏನಾಡ್ನಪ್ಪಾ..."
"ಫೋಜು ಸೇರ್ಬಿಟ್ನಂತವ್ವಾ-ಸೋಜರ್ ಆಗವೆ."
"ಅಯ್ಯೋ ಮುನೀಶ್ವರಾ..."
"ಸೋಜರ್ ಆದ್ರೆ ಏನಾಯ್ತು ಗೌಡ್ರೆ?"
ಎಂದು ಗಂಗ ತನ್ನ ಮುಗ್ಧ ರೀತಿಯಲ್ಲಿ ಕೇಳಿದ.
"ಏನಾಯ್ತಿ...ಮನೆ ಆಳಾಯ್ತು.... ಅವನ್ನ ಇಲಾಯ್ತಾಗೆ ಕಳಿಸ್ತಾರೆ...ಅಂದಿ ಎಗ್ಗಣ ತಿನಿಸ್ತಾರೆ... ಜಾತಿ ಕೆಡಸ್ತಾರೆ... ಇನ್ನು ಕುಲಸ್ತರು ಸೇರಿ ಅವನ್ನ ಒರಗೆ ಕಳಿಸ್ತಾರೆ..."
"ಅದ್ಯಾಕೆ ಅಂಗ ಮಾಡೋಕೋದ ಐದ?"
"ದುಡ್ಡಿನಾಸೆ ಗಂಗಣ್ಣ...ಕೈತುಂಬ ಸಂಬಳ ಕೊಡ್ತಾರಂತೆ..."
"ದುಡ್ಡಿಗೆ ಕಿಚ್ಚಿಟ್ರು...ನಿಮ್ಮೆ ದ್ಯಾವು ಯಾವುದು ಕಡ್ಡೆ. ಮಾಡವೆ?"
"ಕಾಲ ಕೆಟ್ಟೋಯ್ತು ರಾಮಪ್ಪ. ಐದಗೋಳು ನಮ್ಮ ಮಾತು ಕೇಳಾಕಿಲ್ಲ" ಎಂದು ತಾಯಿ ಹೇಳಿದಳು.
"ಯಾಕಮ್ಮಿ...ನಿನ್ನ ಮಾತು ನಾನು ಕೇಳಾಕಿಲ್ವಾ"
ಅವನ ಮಾತಿಗೆ ಉತ್ತರ ಹೇಳದೆ ಗಂಗನ ತಾಯಿ ರಾಮಯ್ಯನಿಗೆ "ಮಜ್ಜಿಗೆ ನೀರು ಕುಡ್ಕೊಂಡೋಗು ರಾಮಪ್ಪ" ಎಂದಳು.
"ಏನೂ ಬ್ಯಾಡಮ್ಮಿ... ಐದ ಒಟ್ಟೆಗೆ ಆಲು ಆಕ" ಎಂದು ರಾಮಯ್ಯ ಕಾಲೆಳೆದುಕೊಂಡು ಮನೆಯ ಕಡೆ ಹೊರಟ.
ಮಗನ ಮೇಲೆ ರಾಮಯ್ಯನ ಕೋಪ ಬಹಳ ದಿನ ಉಳಿಯಲಿಲ್ಲ. ಸಿದ್ದಣ್ಣ ಪ್ರತಿ ತಿಂಗಳೂ ತಪ್ಪದೆ ತಂದೆಗೆ ಹಣ ಕಳುಹಿಸುತ್ತಿದ್ದ. ಆ ಸುದ್ದಿಯನ್ನು ರಾಮಯ್ಯ ಊರು ಊರಿನಲ್ಲಿ ಪ್ರಚಾರ ಮಾಡಿ ತನ್ನ ಮಗನ ಕಲ್ಯಾಣಗುಣವನ್ನು ಚಿತ್ರವತ್ತಾಗಿ ವರ್ಣಿಸಿದ.
ಆರು ತಿಂಗಳುರುಳಿದವು. ಸಿದ್ದಣ್ಣ ಊರಿಗೆ ಬಂದ ಸುದ್ದಿ ಗಂಗಣ್ಣನ ಕಿವಿಮೇಲೆ ಬಿತ್ತು. 'ಆಳೇ ನ್ಯಾಸ್ತ'ನನ್ನು ನೋಡಿಬರಲು ಹೊರಟ.
4
ಸಿದ್ದಣ್ಣನಲ್ಲಾಗಿದ್ದ ಮಾರ್ಪಾಟನ್ನು ಕಂಡು ಗಂಗ ಬೆರಗಾದ. "ಇವ ನಮ್ಮ ಸಿದ್ಧನೇ" ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡ. ಸಿದ್ದ ಎದ್ದು ಬಂದು 'ಬಾರ್ಲೇ' ಎಂದು ಅಪ್ಪಿ ಒಳಕ್ಕೆಳೆದೊಯ್ದಾಗಲೇ ಎಚ್ಚರ.
ಗಂಗ ಸಿದ್ದನನ್ನು ದಿಟ್ಟಿಸಿ ನೋಡಿದ. ರಮಡೋಲ್ ಕ್ಷೌರದ ಹಿಂದಿದ್ದ ಗಂಟುಜುಟ್ಟು ಮಾಯವಾಗಿತ್ತು. ಅದರ ಬದಲು ಕ್ರಾಪು, ಮುಖಕ್ಷೌರ, ಚಲುವೆಯಾದ ಅರಿವೆ, ಚಲ್ಲಣ, ಕೋಟು, ಮೋಜು. ಸಿದ್ದಯ್ಯ ಅರಸುಮಗನ ಹಾಗಿದ್ದ. ಅವನಲ್ಲಾಗಿದ್ದ ಮಾರ್ಪಾಟು ಗಂಗನಲ್ಲಿ ಏನೇನೋ ಭಾವನೆಗಳನ್ನು ಕೆರಳಿಸಿದುವು.
ಸಿದ್ದಯ್ಯ ತಾನು ಫೌಜು ಸೇರಿದ್ದು, ಇಲ್ಲಿ ಕವಾಯತು ಮಾಡುವುದು, ಹೋಟೆಲಿನಲ್ಲಿರುವ ರುಚಿ ರುಚಿಯಾದ ತಿಂಡಿ ತಿನಿಸುಗಳನ್ನು ತಿನ್ನುವುದು ಎಲ್ಲವನ್ನು ವರ್ಣಿಸಿ,
"ನನ್ನ ರಜಾ ಕಳೆಯತ್ತೂ ಇಲಾಯತಿಗೆ ಕಳಿಸ್ತಾರಂತೆ ಗಂಗಾ. ಪರಂಗೋರ ಊರೆಲ್ಲಾ ಕಾಸು ಖರ್ಚಿಲ್ಲದೆ ನೋಡಿಕೊಂಡು ಬತ್ತೇನೆ."
"ಅಂಗಲ್ಲದೆ! ಇಲ್ಲೇನೈತ್ತೆ-ಸುಡುಗಾಡು ಹೊಲ, ಗೊಬ್ಬರ ಗೋಡು- ಕತ್ತೆ ಅಂಗೆ ದುಡಿಯೋದು..."
"ಅಂಗನ್ನಬಾರದು ಸಿದ್ದಣ್ಣ- ఒల ಗೊಬ್ಬರಾನೇ ನಮಗೆ ಶಾನ್ವಿತ-ಬೂಮ್ರಾಯಿ... ಈಟು ದಿವೃ ಅನ್ನ ಕೊಟ್ಟು ಕಾಪಾಡವೈ...*
“ಓಗ್ಗೆ...ಗಮ್ಮಾರಾ... ತಿಂಗಳಿಗೆ ಈಗ ನಲವತ್ತೈದು ರೂಪಾಯಿ ಸಂಪಾದಿಸ್ತೀನಿ... ಇನ್ನೆರಡೇ ತಿಂಗಳಿಗೆ ಅರವತ್ತು... ನೋಡು ವರ್ಸಾ ಎರಡು ವರ್ಷದಲ್ಲಿ ಸಾವಿರಾರು ತರದೇಯಿದ್ದರೆ."
"ಅಲ್ಲಿ ಇಂಗ್ರೇಜಿ ಕಲಿಸ್ತಾರೆ...ಸೋಜರೆಲ್ಲಾ ಮುಸಲ್ಮಾನಿ ಮಾತಾಡ್ತಾರೆ."
"ನಿಂಗೂ ಬತ್ತದಾ ಸಿದ್ದಣ್ಣ."
"ಎಲ್ಲಿ ಒಸಿ ಮಾತಾಡು."
"ನೀನು ಇಲ್ಲಿ ಕುಂದ್ರು...ನೀನೆ ಸುಬೇದಾರ್-ಸಿಪಾಯ್ ಎಂತ ಕೂಗು."
"ಸಿಪಾಯ್"
"ಮುಂದೇನು ಏಳೋಕು ಸಿದ್ದಣ್ಣ."
"ಚಾಯ್ ಲಾವ್."
"ಅರ್ರೈಟ್ ಸಾಬಾ."
"ಒಳ್ಳೆ ಪರಂಗಿಯೋರಂಗೆ ಮಾತಾಡ್ತಿ ಸಿದ್ದಣ್ಣ."
'ಡಿದ್ದೇ.... ನಾನೇನು ಉಡಾಫೆ ಒಡಿತೀನಿಂತ ಅಂದೊಡೇನಾ?"
"ಬಟ್ಟೆಯಲ್ಲಾ ಅವರೇ ಕೊಡ್ತಾರೇನೇ?"
"ಊ! ಬಟ್ಟೆ-ಊಟ...ಮಲಗೋಕೆ ಮಂಚ ಎಲ್ಲಾ ಪುಗಸಟ್ಟೆ ಚಿಕ್ಕೋತೆ."
"ಮಂಚಾನೂ!"
"ಇದ್ಯೋಡು".
ಎಂದು ಕಿಸೆಯಿಂದ ಒಂದು ಸಿಗರೇಟ್ ಪ್ಯಾಕೆಟ್ ತೆಗೆದು ಒಂದು ಸಿಗರೇಟ್ ಎಳೆದು ಗಂಗನ ಬಾಯಿಗಿಟ್ಟು ತಾನೊಂದು ಹಚ್ಚಿದ.
"ಪಸಂದಾಗೈತಲ್ಲಣ್ಣ."
"ಅದೂ ಪುಗಸಟ್ಟೆ."
"ಪೋಜೂಂದ್ರೆ ಏನೋಂತಿದ್ದೆ-ಅದೇ ವೈಕುಂಟ."
"ಇನ್ನೇನೂಂತ ತಿಳಿದೆ ಗಂಗಾ, ನೀನೂ ಬಂದ್ದಿದ್ದೇ-ಇಬ್ರೂ ಜತೇಲಿ ಚಂದಾಕಿರತೈತೆ."
"ಮುದುಕಿ ಬಡ್ಕೊಂತೈತೆ."
"ನಾಕು ದಿವ್ವ. ನೀನು ಚಂದಾಕಿ ಹಣ ಕಳ್ಳಿದ್ರೆ ಸಂತೋಸವಾಗುತ್ತೆ. ಅಯ್ಯ ಮೊದ್ಲು ಕಾಗಜ ಬರ್ದಾಗ 'ಮನೆಗೆ ಬಾ ಯವ್ವಾರ ಆಡ್ತೀನಿ' ಅಂತ ಎದರಿಸ್ಟ. ಈಗ ದಿನ ಇಂಗೆ ಜೀತ ಮಾಡೋದ್ದೆ. ನಾವು ಕುಷಿಯಾಗಿ ಓಗದ್ದೆ. ಸುಖವಾಗಿರಬೇಡ್ವಾ."
"ಯೋದ್ರೆ ಮಾಡ್ತೀನಪ್ಪಾ-ನೀನು ಎಂದು ಒಲ್ಲಿ.?"
"ಇನ್ನೂ ಒಂದು ವಾರ ಟೇಮ್ ಇದೆ ಬುಡು."
"ಅಂಗಾರೆ ಸರಿ."
"ನಾಳೆ ಅತ್ತಲೇ ಬಂದ್ಬುಡು-ಕೋಳಿ ಮಾಡಿಸ್ತೀನಿ."
"ಆರ್ ರೈಟ್ " ಎಂದ.
ಗಂಗನಿಗೆ ರಾತ್ರಿ ನಿದ್ದೆ ಹತ್ತಲಿಲ್ಲ. ಸಿದ್ದಯ್ಯನ ಮಂತ್ರ ಚೆನ್ನಾಗಿ ನಾಟಿತ್ತು. ಹಾಸಿಗೆ ಮೇಲೆ ಹೊರಳಾಡುತ್ತಿದ್ದ. ತಿಮ್ಮಿ ಹತ್ತಿರ ಬಂದು ನೇವರಿಸಿ 'ಯಾಕೆ ನಿದ್ದೆ ಬರಾಕಿಲ್ವ' ಎಂದಳು. 'ನಿಂಗೆ ಯಾಸಾಟಿಕೆ ಓಗಿ ಬಿದ್ಯೋಳಮ್ಮಿ' ಎಂದು ಗದರಿಸಿದ.
ಹೇಳಿದ್ದು ಅಕ್ಷರಶಃ ಅವನ ಮನಸ್ಸು ಅಲ್ಲೋಲಕಲ್ಲೋಲವಾಗಿತ್ತು. ನಿಜವಾಗಿತ್ತು. ಸುಖವಾಗಿ ಗೌಡರ ಮನೆಯಲ್ಲಿ ರಾಜಕುಮಾರನಂತೆ ಸಿದ್ದಣ್ಣನಿಗೇ ಇದು ಜೀತದ ಬಾಳು ಎನ್ನಿಸಿದಾಗ ಗಂಗನಿಗೆ ಹೇಗಿರಬಹುದು ?
ತನ್ನ ಬಾಳಿನಲ್ಲಿ ಅವನಿಗೆ ಇದ್ದಕ್ಕಿದ್ದಹಾಗೆ ಅಸಹ್ಯ ಹುಟ್ಟಿತು. ವರ್ಷಾಕಾಲ-ಬೆಳಿಗ್ಗೆಯಿಂದ ಸಂಜೆವರೆಗೆ ದುಡಿದರೂ ಸಿಕ್ಕುವುದು ನಾಲ್ಕು ಕಾಳು ರಾಗಿ, ಮಳೆ ತಪ್ಪಿಹೋದರಂತೂ ದೇವರೇ ಗತಿ. ಅಂತಹ ದುರ್ದಿನಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಕೈಯಲ್ಲಿ ನಾಲ್ಕು ಕಾಸು ಮಾಡಿಕೊಳ್ಳಬೇಕು.
ಮುದುಕಿ ಬಡಿದುಕೊಳ್ಳುತ್ತಾಳೆ. ತಿಮ್ಮಿ ಸೆಟೆದುಕೊಳ್ಳುತ್ತಾಳೆ. ಅವರನ್ನು ಒಪ್ಪಿಸುವುದು ಹೇಗೆ? ಒಪ್ಪಿಸುವ ಮಾತು ಸುಳ್ಳು-ಸಿದ್ದಣ್ಣನ ದಾರಿಯೇ ದಾರಿ. ಹೇಳದೇ ಕೇಳದೆ ಹೊರಟು ಹೋಗಿಬಿಡಬೇಕು.
ಮುದುಕಿ ಆ ಕೊರಗಿನಲ್ಲಿ ಸತ್ತು ಹೋದರೋ? ಗಂಗನ ಕಣ್ಣು ಹನಿಗೂಡಿ ಒಂದೆರಡು ಕಂಬನಿಗಳು ಜಾರಿದವು. ತಿಮ್ಮಿಗೂ ನಿದ್ರೆ ಬಂದಿರಲಿಲ್ಲ. ಬುಡ್ಡಿಯ ನಸುಬೆಳಕಿನಲ್ಲಿ ಗಂಡನ ಕಣ್ಣಿನಿಂದಿಳಿಯುತ್ತಿದ್ದ ಕಿರುಗಾಲುವೆಯನ್ನು ಕಂಡಳು. ಮೆಲ್ಲನೆ ಪಕ್ಕಕ್ಕೆ ಹೊರಳಿ ಗಂಗನ ಮೇಲೆ ಕೈ ಬೀಸಿದಳು. ಗಂಗ ಅವಳನ್ನು ಬರಸೆಳೆದು ಅಪ್ಪಿಕೊಂಡ.
ಮಾರನೆಯ ದಿವಸ ಚೆನ್ನಾಗಿ ಮೈತುಂಬಿ ನಿಂತಿದ್ದ ಕೋಳಿಯೊಂದನ್ನು ಕೊಚ್ಚಿ ಮುದುಕಿ ಸಾರುಮಾಡಿ ಗಂಗನಿಗೂ ಸಿದ್ದಣ್ಣನಿಗೂ ಉಣಬಡಿಸಿದಳು. ಊಟ ಮಾಡುತ್ತಿದ್ದಾಗ ಗಂಗ,
"ಅವ್ವಾ..." ಎಂದ.
"ಏನಪ್ಪಯ್ಯ?"
"ಸಿದ್ದಣ್ಣ ಏನೋ ಏಳ್ತಾನೆ."
"ಏನು ಮರಿಗೌಡ?"
"ಏನೂ ಇಲ್ಲ ಅಮ್ಮಿ. ನಾಕು ದಿವ್ಹಾ ಗಂಗಣ್ಣನ ಕಳಿಸ್ತೀಯಾ? ಪೋಜು ನೋಡ್ಕೊಂಡು ಬತ್ತಾನೆ."
"ಎಲ್ಲಿ-ನೀ ಕೆಟ್ಟದ್ದಲ್ಲದೆ ಗಂಗನ್ನೂ ಕೆಡಸ್ತೀಯಾ-ನಮಗ್ಯಾಕ ಪೋಜು? ಭೂಮಿ ತಾಯಿ ಅನ್ನ ಕೊಡ್ತಾಳೆ-ಉಂಡ್ಕೊಂಡು ಗೆಸ್ಕೊಂಡು ಸುಕವಾಗಿರೋದು ಬುಟ್ಟುಬುಟ್ಟು."
"ಫೋಜು ಸೇರಲ್ಲ ಅಮ್ಮಿ. ಬೆಂಗ್ಯೂರಲ್ಲಿ ನಾಕು ದಿವಸ ಜತೇಲಿನ್ನ ಬಂದುಬಿಡ್ತಾನೆ. ನಾನು ಆಮೇಲೆ ದೂರಾ ಇಲಾಯ್ತಿಗೆ ಓಗ್ಲೀನಿ ಬರಾಕಿಲ್ಲ. ನ್ಯಾಸ್ತ ನಾಕ್ಷೀಸ ಜತೇಲಿಲಿರ್ಂತ ಆಸೆ ಆಗೈತೆ." - ಒಂದೆಲ್ಲಾ ವಷ
'ಇದೆಲ್ಲ ಚೆಂದಾಕಿಲ್ಲಪ್ಪ ಸಿದ್ದಣ್ಣ' ಎಂದಳು ಮುದುಕಿ.
"ಸುಮೆ ಓಬ್ರರ್ತೀನಿ ಅವ್ವಾ-ನಂಗೂ ಬ್ಯಾಸರ ಬಂದೈತೆ. ಸಿದ್ದಣ್ಣ ಇಲ್ಲ ಜೀವಕ್ಕೆ ಒಂದು ತರಾ ಆಗೈತೆ".
"ಏಸು ದೀಸಕ್ಕೆ ಬತ್ತೀ?"
"ನಾಕೈದು ದೀಸ ಆಷ್ಟೆ..."
"ಏನಾರ ಮಾಡ್ಕೊ...ಮಳೆ ಬಂದ್ರೆ ಉಳೋರ್ಯಾರು?"
"ಮಳೆಮಕ ಕಂಡ ಕೂಡ್ಲೆ ಬತ್ತೀನಿ... ಅಲ್ಲಿ ಯಾಸಾಟೀಗೂ ನಿಲ್ಲಾಕಿಲ್ಲ?”
ಎಂದು ತಾಯಿಗೆ ಭರವಸೆಯಿತ್ತ. ಗಂಗ, ಸಿದ್ದರೆ ಮಸಲತ್ತು ಮುದುಕಿಗೆ ಅರ್ಥವಾಗಲಿಲ್ಲ.
ಅವರು ಹೊರಡುವ ದಿನ ರಾಗಿರೊಟ್ಟಿ ಮಾಡಿ ಮುದುಕಿ ಬುತ್ತಿ ಕಟ್ಟಿಕೊಟ್ಟಳು. ಇಬ್ಬರೂ 'ಬಸ್' ನಿಲ್ಲಿಸಿ ಅದರಲ್ಲಿ ಬೆಂಗಳೂರಿಗೆ ಹೊರಟರು. ಸಿದ್ದಯ್ಯನೇ ಬಸ್ನವರಿಗೆ ದುಡ್ಡನ್ನು ಫೇಕಿದ.
ನಾಲೈದು ದಿವಸ ಕಳೆದುಹೋದವು. ಎರಡು ನಾಲೈದು ದಿವಸವೂ ಸಾಗಿಹೋಯಿತು. ಗಂಗನ ಸುದ್ದಿಯಿಲ್ಲ. ಮುದುಕಿ ರಾಮೇಗೌಡರ ಮನೆಯ ಮುಂದೆ ಹೋಗಿ ಸಿದ್ದನಿಗೆ ಶಾಪಾ ಹಾಕಿ ಬಾಯಿ ಬಡಿದುಕೊಂಡಳು. ಮಗ ಮನೆಗೆ ಬರುವ ಲಕ್ಷಣ ಕಾಣಲಿಲ್ಲ.
ಮುದುಕಿ ಕೊರಗಿನಲ್ಲಿ ಹಾಸಿಗೆ ಹತ್ತಿ ಮಲಗಿಕೊಂಡಳು. ಅವಳ ಆರೈಕೆಯಲ್ಲಿ ತಿಮ್ಮಿ ದನಕರುಗಳನ್ನು ದುರ್ಲಕ್ಷಿಸಿದಳು. ಜತೆ ಎತ್ತಿನಲ್ಲಿ ಒಂದು ಫವತಿ ಆಯ್ತು. ಅದನ್ನು ಕಂಡ ಮೇಲಂತೂ ಮುದುಕಿ ಭೂಮಿಹಿಡಿದಳು. ಯಾರೆಷ್ಟು ಸಮಾಧಾನ ಹೇಳಿದರೂ ಅವಳ ದುಃಖ ಕಡಿಮೆಯಾಗಲಿಲ್ಲ.
ಎರಡು ತಿಂಗಳು ಕಳೆದವು. ಒಂದು ದಿನ ಟಪಾಲಿನವನು ಮುದುಕಿಗೆ ಒಂದು ಕಾಗದ, ಇಪ್ಪತ್ತು ರೂಪಾಯಿ ಮನಿಯಾರ್ಡರ್ ತಂದುಕೊಟ್ಟ. ಅವನ ಕೈಯಲ್ಲೇ ಅದನ್ನು ಓದಿಸಿ ಕೇಳಿದಳು: ಅವಳ ಅನುಮಾನ ಸತ್ಯವಾಯಿತು. ಗಂಗನೂ 'ಫೋಜು' ಸೇರಿದ್ದ. ಪುಣೆಯಿಂದ ತಾಯಿಗೆ ಕಾಗದ ಬರೆಸಿ ಕಳಿಸಿದ್ದ.
ಪೋಜು ಸೇರಿದಾಗ ಸಿದ್ದಣ್ಣ ಕೊಟ್ಟಿದ್ದ ಭರವಸೆ ಸಾರ್ಥಕವಾಗಲಿಲ್ಲ. ಸಿದ್ದಣ್ಣನನ್ನು ಎಲ್ಲಿಗೋ ಹೊತ್ತುಹಾಕಿದ್ದರು. ಗಂಗಣ್ಣ ಪುಣೆಗೆ ಹೋಗಬೇಕಾಯಿತು.
మూరు నాలు కింగళు గంగ తన్ని వాడను నేనేదుండు వెలుబడి. ఆదర ృష్ణద బాళు, మా శమెుంట జగి వణ, మ్మేకుంట మా అం ದಿನಾ ಸಿನೇಮಾ ಅವನ ದುಃಖವನ್ನು ದೂರಮಾಡಿದುವು. ಊರಿಗೆ ತಪದೆ ಹಣ ಕಳುಹಿಸಿ ಕಾಗದ ಬರೆಸುತ್ತಿದ್ದ. ಆದರೆ ರಜ ಬಂದಾಗಲೂ ಊರಿಗೆ ಹೋಗಿ ಬರುವ ಧೈರ್ಯಮಾಡಲಿಲ್ಲ. ಹೋದರೆ ಹಿಂದಿರುಗುವುದಕ್ಕೆ ಮುದುಕಿ ಬಿಡುವುದಿಲ್ಲವೆಂದು ಅವನಿಗೆ ಚೆನ್ನಾಗಿ ಗೊತ್ತಿತ್ತು.
ಗಂಗ ಬರುತ್ತಾನೆ-ಬರುತ್ತಾನೆ ಎಂದು 'ಆಯೋರು" ಒಂದು ವರ್ಷ ಕಾದರು. ಅವನ ಸುಳಿವು ಕಾಣದಿರಲು ಹೊಲ ಮಾಡುವುದಕ್ಕೆ ಬೇರೆಯವರಿಗೆ ಒಪ್ಪಿಸಿದರು. ಮುದುಕಿ. ತಿಮ್ಮಿ ಅಲ್ಲೇ ಇರುವುದಕ್ಕೊಪ್ಪಿದರು.
ಗಂಗನಲ್ಲಿ ವಿಶೇಷ ಮಾರ್ಪಾಟು ತಲೆದೋರಿತು. ಸಿದ್ದಣ್ಣನಿಗಾಗಿದ್ದ ಕ್ರಾಪು.. ಮೋಜಿನ ಮಾರ್ಪಾಟಿನ ಜತೆಗೆ ಸಿಲ್ಕ್ ವಸ್ತ್ರ, ಸೆಂಟು, ಇತರ ಷೋಕಿ ಸಾಮಾನು ಅವನನ್ನಪ್ಪಿಕೊಂಡವು. ಹೋಟಲಿಗೆ ಹೋದರೆ ನಿಸ್ಸಂಕೋಚದಿಂದ ಐದು ರೂಪಾಯಿ ನೋಟನ್ನು ಒಗೆಯುತ್ತಿದ್ದ. ಇತರ 'ಸೋಜರಾ'ಗಳ ಮುಂದೆ ತಾನೊಬ್ಬ ದೊಡ್ಡ ಸರದಾರ ಎಂದು ತೋರಿಸಿಕೊಳ್ಳುವ ಆಸೆ. ಉರ್ದು-ಇಂಗ್ಲಿಷ್ ಬಿಟ್ಟು ಬೇರೆ ಮಾತಾಡುವುದು ಅವನಿಗೆ ಹೀನಾಯವಾಗಿತ್ತು. ತನ್ನ ಹಿಂದಿನ ಬಾಳುವೆಯ ಸ್ಮತಿ ಸಹ ಗಂಗನಲ್ಲಿ ಉಳಿಯಲಿಲ್ಲ. ಆದರೆ ನೆನಪು ಬಂದಾಗ 'ಕೆಟ್ಟಕನಸು'ಎಂದು ಭಾವಿಸುತ್ತಿದ್ದ. ಈಗಿನ ಬಾಳುವೆ ಚಿರಕಾಲ-ಶಾಶ್ವತವಾಗಿ ನಡೆಯುವುದೆಂದು ಅವನ ದೃಢ ವಿಶ್ವಾಸ.
ಅವನ ಕನಸಿನ ಕನ್ನಡಿ ಒಂದು ದಿನ ಒಡೆದುಹೋಯಿತು. ಯುದ್ಧ ನಿಂತು ಹೋದ ಸುದ್ದಿ ಬಂತು. ಗಂಗನಿಗೂ, ಅವನ ಜತೆ ಸೈನ್ಯ ಸೇರಿದ್ದವರಿಗೂ 'ಡಿಸ್ಚಾರ್ಜ್' ನೋಟಿಸ್ ಬಂತು. ಗಂಗನ ತಲೆಯ ಮೇಲೆ ಆಕಾಶವೇ ಕಳಚಿ ಬಿದ್ದಂತಾಯಿತು.
ಸಪ್ಪೆಮೋರೆ ಹಾಕಿಕೊಂಡು ಊರಿನ ಕಡೆ ಹೊರಟ. ಮನೆಯ ಬಾಗಿಲಿಗೆ ಬರುತ್ತಾನೆ -ಎಲ್ಲಾ ಹಾಳು ಹಾಳು ಸುರಿಯುತ್ತಿದೆ. ಅವನನ್ನು ಬೆಳಸಿ, ಕಾಪಿಟ್ಟ ಪ್ರಕೃತಿ ಕನಲಿ ನಿಂತಿದೆ. ತಿಮ್ಮಿ ದನ ಅಟ್ಟಿಕೊಂಡು ಹೋಗಿದ್ದಳು. ಒಳಗೆ ಮೃತ್ಯುಶಯ್ಯಯಲ್ಲಿ ಮಲಗಿದ್ದ ತಾಯಿಯ ದಾರುಣ ಅವಸ್ಥೆಯನ್ನು ಕಂಡ. ಕರುಳು ಕುತ್ತಿಗೆಗೆ ಬಂತು.
"ಅವ್ವಾ, ಅವ್ವಾ..." ಎಂದ.
ಮುದುಕಿ ಮೆಲ್ಲನೆ ಕಣ್ಣು ಬಿಡಿಸಿಕೊಂಡು ನೋಡಿತು. ಸ್ವರ ತೀರ ಕ್ಷೀಣವಾಗಿತ್ತು.
"ಯಾರಪ್ಪಾ ಅದು?"
ಗಂಗ ಹತ್ತಿರ ಹೋಗಿ ಕುಳಿತು "ನಾನವ್ವಾ-ಗಂಗಾ" ಎಂದ.
ಮುದುಕಿ ಕೋಪದಿಂದ ಮುಖವನ್ನತ್ತ ತಿರುಗಿಸಿದಳು. ಅವಳ ಶುಷ್ಕ ಕಣ್ಣುಗಳಿಂದ ನಾಲ್ಕು ಹನಿ ಜಾರಿತು.
"ಬಂದ್ಬುಟ್ಟೆ ಕಣವ್ವಾ - ಇನ್ನು ಎಲ್ಲಿಗೂ ಓಗಾಕಿಲ್ಲ."
ಮುದುಕಿ ಮಗನನ್ನೊಮ್ಮೆ ನೋಡಿ. ಕಡು ಶೋಕದಿಂದ,
"ಅಡದವ್ವಂಗೆ ಎಲ್ಲು ಬಗೆಲ್ಲೋ?" ಎಂದಳು.
"ಯಾರಿಗವ್ವಾ ."
"ಭೂಮಿತಾಯಿಗೆ, ಒಲ ಓಯ್ತು-ದನ ಓಯ್ತು-ನಿನ್ನ ಉಂಜ ಗೊಟಕ್ಕಂತು ಇನ್ನೇನೈತೆ-ನಿಮ್ಮವ್ವನ ಮಣ್ಣು ಮಾಡುಡು-ಎಲ್ಲಾ ಮುಗಿತೈತೆ."
ತಿಮ್ಮಿ ಅದೇ ಬಂದಿದ್ದವಳು ಮಾತು ಕೇಳಿಸಿಕೊಂಡಳು.
"ಓಗ್ಗಿ ಬುಡು ಮುದುಕಿ. ದಣ್ಣು ಬಂದ ಯಾಸಾಟೀಗೆ ಗದರಕೊಂತಿ.”
"ಈ ಮೂಳ ನಿನ್ನ ಗಂಡಾ ಆಗೋಕ್ಕುಂಚೆ ನನ್ನ ಮಗ ಆಗಿದ್ದ ಕಣೇ ಮೂಳಿ."ಎಂದು ಮುದುಕಿ ಗದರಿಸಿ "ಇಲ್ಲಿ ಬಾರ್ಲೆ ಸಿಪಾಯಪ್ಪ."
ಎಂದು ಮಗನನ್ನು ಹತ್ತಿರ ಕರೆದು ತಲೆ ನೇವರಿಸಿದಳು. ಗಂಗಣ್ಣನಿಗೆ ದುಃಖ ತಡೆಯಲಾಗಲಿಲ್ಲ.
ಮಾರನೆಯ ದಿವಸದಿಂದ ಗಂಗಣ್ಣನಿಗೆ ಹೊತ್ತು ಕಳೆಯುವುದಾಗಲಿಲ್ಲ. ರಾಗಿ ತೆನೆಗೊಂಡು ಬಳಕುತ್ತ ನಿಂತಿತ್ತು. ತನ್ನ ಹೊಲ-ತಾನು ದುಡಿದು ರಕ್ತ ಬಸಿದ ಹೊಲ. ಇಂದೂ ಸಮೃದ್ಧಿಯಾಗಿ ಫಸಲನ್ನು ಹೊತ್ತು ನಿಂತಿದೆ. ಆದರೆ ಆ ಫಲ ತನ್ನದಲ್ಲ. ಇಂದು ಅದರ ಮೇಲೆ ತನಗೆ ಯಾವ ಅಧಿಕಾರವೂ ಇಲ್ಲ. ಗಂಗಣ್ಣನ ರಕ್ತ ಕುದಿಯಿತು. ಗಂಟಲಿಗೆ ಬಂದ ಬಿಸಿರಕ್ತ ನುಂಗಿಕೊಂಡು ಶಾಂತನಾದ.
ಗಂಗನ ಹೊಲದ ಬದಿಯಲ್ಲಿ ಹೋಗುತ್ತಿದ್ದ ರಸ್ತೆಯ ರಿಪೇರಿ ಕೆಲಸ ನಡೆಯುತ್ತಿತ್ತು. ಗಂಗನಿಗೆ ಕೆಲಸ ಸಿಕ್ಕಿತು. ದಿನಕ್ಕೆ ಹನ್ನೆರಡಾಣೆ ಕೂಲಿ ಗಿಟ್ಟುತ್ತಿತ್ತು. ಹೊಟ್ಟೆಪಾಡು ಹಾಗೂ ಹೀಗೂ ಸಾಗುತ್ತಿತ್ತು. ಮುದುಕಿ ಚೇತರಿಸಿಕೊಳ್ಳಲಾರಂಭಿಸಿದ್ದಳು. ಹಾಸಿಗೆಯ ಮೇಲೆ ಎದ್ದು ಕೂಡುತ್ತಿದ್ದಳು-ತೆವಳಿಕೊಂಡು ಅಂಗಳಕ್ಕೆ ಬಂದು ನಸು ಚುರುಕಾದ ಬಿಸಿಲು ಕಾಯುತ್ತಿದ್ದಳು.
ಗಂಗ ಒಂದು ದಿನ ನೆತ್ತಿಯ ಮೇಲೆ ಸ್ವಾಮಿ ಮೂಡುವತನಕ ರಸ್ತೆ ಕೆಲಸ ಮಾಡಿ ಮನೆಗೆ ಬರುತ್ತಿದ್ದ. ಬಿಸಿಲಿನ ತಾಪದಿಂದ ಮುಖ ಕಂಗೆಟ್ಟಿತ್ತು. ಹೊಲದ ಮಧ್ಯೆ ಹಾಯ್ದು ಬರುವಾಗ ಈರಪ್ಪ ರಾಗಿಮೆದೆ ಒಟ್ಟುತ್ತಿದ್ದುದನ್ನು ಕಂಡ. ಈರಪ್ಪ ಗಂಗನನ್ನು ಕರೆದು ಮೆದೆ ತೋರಿಸಿ,
"ಚಿನ್ನದಂಥ ಭೂಮಿ ಗಂಗಪ್ಪ... ಸೊಂಪು ಬೆಳೆಯಾಗೈತೆ" ಅಂದ.
ಗಂಗ ಅದನ್ನು ದಿಟ್ಟಿಸಿ ನೋಡಿದ. ಒಳಗೆ ಸಂತೃಪ್ತನಾಗಿ ನಿಂತಿದ್ದ ಈರಪ್ಪನನ್ನು ದಿಟ್ಟಿಸಿ ನೋಡಿದ. ಒಳಗೆ ಕುದಿಯುತ್ತಿದ್ದ ಲಾವಾರಸ ಕಟ್ಟೆಯೊಡೆದುಕ್ಕಿತು. ಕೈಯಲ್ಲಿದ್ದ ಪಿಕಾಸಿಯನ್ನು ಈರಪ್ಪನ ತಲೆಗೆ ಬೀಸಿದ. ಈರಪ್ಪ ನೆತ್ತರ ಹೊಳೆಯಲ್ಲಿ ಮುಳುಗಿದವನಂತೆ ಅಲ್ಲಿಯೇ ಒರಗಿದ.
ಸುದ್ದಿ ಅರೆಕ್ಷಣದಲ್ಲಿ ಸುತ್ತಮುತ್ತ ಹಬ್ಬಿತು. ಪಟೇಲರು, ಗೌಡರು, ಪೊಲೀಸಿನವರು ಬಂದರು. ಗಂಗನನ್ನು ಹಿಡಿದು ಕೈಗೆ ಬಳೆ ತೊಡಿಸಿದರು. ಮುದುಕಿ ಎದೆ ಎದೆ ಬಡಿದು ಕೊಂಡಳು. ತಿಮ್ಮಿ ಬೀದಿಯ ಮಣ್ಣನ್ನು ತಲೆಗೆ ಹೊಯ್ದುಕೊಂಡಳು.
ಗಂಗ ನೀರವ.
ಬಲೆಗೆ ಬಿದ್ದ ಹುಲಿಯನ್ನು ಹಿಡಿದೊಯ್ಯುವಂತೆ ಅವನನ್ನು ಎಳೆದೊಯ್ದರು.
ಮುದುಕಿ ಸ್ತಂಭೀಭೂತಳಾಗಿ ನೋಡುತ್ತ ನಿಂತಿದ್ದವಳು 'ಭೂಮಿತಾಯಿ ಶಾಪ-ಶಾಪ' ಎಂದು ವಿಕಟವಾಗಿ ಚೀರಿ ಬಿದ್ದುಬಿಟ್ಟಳು. ಅವಳ ದೇಹದ ಒಂದು ಹಿಡಿ ಮಣ್ಣು ತಾಯಿಮಣ್ಣಿನಲ್ಲಿ ಬೆರೆತುಹೋಯಿತು.
ಆಕರ: ವಿಶ್ವಕಥಾಕೋಶ -1
ಕವಿ ಪರಿಚಯ:
ಅ.ನ.ಕೃಷ್ಣರಾಯ: ಇವರ ಪೂರ್ಣ ಹೆಸರು, ಅರಕಲಗೂಡು ನರಸಿಂಗರಾವ್
ಕೃಷ್ಣರಾವ್. ತಂದೆ ನರಸಿಂಗರಾಯರು, ತಾಯಿ ಅನ್ನಪೂರ್ಣಮ್ಮ. ಇವರ ಜನನ ಮೇ 9, 1908. 'ಪ್ರಗತಿಶೀಲ' ಸಾಹಿತ್ಯ ಸಂದರ್ಭದ ಪ್ರಮುಖ ಕವಿ. ಇವರನ್ನು ಕಾದಂಬರಿ ಪಿತಾಮಹ ಎಂದು ಕರೆಯುತ್ತೇವೆ. ಇವರು ಕನ್ನಡದ ಕಟ್ಟಾಳು. ಕನ್ನಡಪರ ಹೋರಾಟಗಳಲ್ಲಿ ಸಕ್ರಿಯರಾದವರು. ಸುಮಾರು 112 ಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿದ್ದಾರೆ. ಇವರು ಬರೆದ ಒಟ್ಟು ಕೃತಿಗಳ ಸಂಖ್ಯೆ ಸುಮಾರು 250ಕ್ಕೂ ಹೆಚ್ಚು. ಇವರು ಮಣಿಪಾಲದಲ್ಲಿ ನಡೆದ 43ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಇವರ ಪ್ರಸಿದ್ಧ ಕೃತಿಗಳು: ಸಂಧ್ಯಾರಾಗ, ಉದಯರಾಗ, ನಟಸಾರ್ವಭೌಮ,
ಬಣ್ಣದ ಬದುಕು, ಕಂಕಣ ಬಲ, ಪಂಜರದ ಗಿಳಿ, ಜೀವನದಿ, ತಾಯಿಯ ಕರಳು, ಮದುವೆಯೋ ನಗ್ನ ಸತ್ಯ. ನರಬಲಿ, ಶನಿ ಸಂತಾನ, ಮಾರ್ಜಾಲ ಸನ್ಯಾಸ. ಮನೆಹಾಳೋ, ರಾಜನರ್ತಕಿ, ಕನ್ನಡ ಕುಲರಸಿಕರು ಮೊದಲಾದವು. ಇವರು ಪತ್ರಿಕಾ ರಂಗದಲ್ಲೂ ತಮ್ಮನ್ನು ಗುರುತಿಸಿಕೊಂಡವರು. ವಿಶ್ವವಾಣಿ, ಕಥಾಂಜಲಿ ಪತ್ರಿಕೆಗಳಲ್ಲಿ ದುಡಿದವರು. 'ರಸಚೇತನ' ಶ್ರೀಯುತರಿಗೆ ಅರ್ಪಿಸಿದ ಅಭಿನಂದನಾ ಗ್ರಂಥ. ಇವರಿಗೆ ಸಂದ ಗೌರವ ಪ್ರಶಸ್ತಿಗಳು: ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
ಕಠಿಣ ಪದಗಳ ಅರ್ಥ:
ಅರಿವೆ ಆರಂಬ ವ್ಯವಸಾಯ, ಬೇಸಾಯ, గుడుగాడు ಸ್ಮಶಾನ. ಪರಿಸೆ - ಜಾತ್ರೆ, ಚಲ್ಲಣ ಬಟ್ಟೆ, -ಹಾಲು, ಗುಡಾಣ ನ್ಯಾಸ್ತ - ಸ್ನೇಹ. వారాయి. ఇజాం, ఆలు ದವಸ ಧಾನ್ಯಗಳನ್ನು ತುಂಬುವ ದೊಡ್ಡ ಮಡಿಕೆ. ಕವಾಯತು ಸೈನಿಕರು ಮಾಡುವ ವ್ಯಾಯಾಮ ಅಥವಾ ಕಸರತ್ತು. ಪೌಜು ಸೋಜರ್ ಸೈನಿಕ, ಸೋಲ್ಡರ್. ಇಲಾಯ್ತು ಹುಡುಗ. ಕಿಚ್ಚು ០. ಐದಗೊಳು ಬ್ರಿಟಿಷರು. ಇಂಗ್ರೇಜಿ - ಇಂಗ್ಲೀಷ್, ಓಟು ವಿಲಾಯಿತಿ, ಅನ್ಯ ದೇಶ. ಪ್ರಾಂತ್ಯದ ಅಧಿಕಾರಿ. ಉಡಾಫೆ -ಸುಳ್ಳು. ಪುಗಸಟ್ಟೆ ಕಾಗದ. ಮಸಲತ್ತು ಐದ ಮಕ್ಕಳು, ಪರಂಗೋರು ಸ್ವಲ್ಪ. ಸುಬೇದಾರ್ ಒಂದು ಉಚಿತ ಬಿಟ್ಟಿ. ಕಾಗಜ ನೆನಪು. ಕನಲು ಪಿತೂರಿ, ಒಳಸಂಚು. ಸ್ಮತಿ ಕೋಪಗೊಳ್ಳು. ಶುಷ್ಕ - ಒಣಗಿದ. ನೀರಸವಾದ. ಬುಡ್ಡಿ - ಸೀಮೆಎಣ್ಣೆಯ ದೀಪ, ಫವತಿ - ಸಾವು. ಸೆಟೆದು - ಎದೆ ಏರಿಸಿ, ಕೋಪ.
2.3 ಮಣ್ಣಿನ ಮಗ – ಪಾಠದ ಸಾರಾಂಶ
ಅ.ನ. ಕೃಷ್ಣರಾಯರ **‘ಮಣ್ಣಿನ ಮಗ’** ಕಥೆಯು ರೈತನಿಗೂ ಭೂಮಿಗೂ ಇರುವ ಅವಿನಾಭಾವ ಸಂಬಂಧ, ಬಡತನ, ಆರ್ಥಿಕ ಅಸಮಾನತೆ ಮತ್ತು ಆಧುನಿಕತೆಯ ಆಕರ್ಷಣೆಯಿಂದ ಗ್ರಾಮೀಣ ಬದುಕಿನಲ್ಲಿ ಉಂಟಾಗುವ ಬದಲಾವಣೆಗಳನ್ನು ಚಿತ್ರಿಸುತ್ತದೆ.
ಭೈರಸಂದ್ರದ ಗೌಡ ರಾಮಯ್ಯ ಆ ಪ್ರದೇಶದ ಪ್ರಭಾವಿ ಜಮೀನುದಾರ. ಅವನ ಮಗ **ಸಿದ್ದಯ್ಯ** ಮತ್ತು ತಿಪ್ಪಳ್ಳಿಯ **ಗಂಗ** ಪರಮ ಸ್ನೇಹಿತರು. ಗಂಗನಿಗೆ ಸ್ವಂತ ಭೂಮಿ ಇಲ್ಲದಿದ್ದರೂ, ಧಣಿಯ ಹೊಲವನ್ನು ಪ್ರಾಮಾಣಿಕವಾಗಿ ದುಡಿಯುತ್ತಾ ತನ್ನ ಜೀವನ ಸಾಗಿಸುತ್ತಿರುತ್ತಾನೆ. ಅವನಿಗೆ ತನ್ನ ಹೆಂಡತಿ ತಿಮ್ಮಿ ಮತ್ತು ತಾಯಿ ಹೊರತು ಬೇರೆ ಲೋಕವೇ ಗೊತ್ತಿಲ್ಲ. ಕೃಷಿ, ಕೋಳಿ ಸಾಕಣೆ, ಜಾತ್ರೆ ಹಾಗೂ ಬಯಲು ನಾಟಕಗಳೇ ಅವನ ಸಂತೋಷದ ಮೂಲಗಳಾಗಿರುತ್ತವೆ.
ಸಿದ್ದಯ್ಯ ಸೈನ್ಯಕ್ಕೆ ಸೇರಿದ ನಂತರ ನಗರ ಜೀವನದ ಸೌಕರ್ಯಗಳನ್ನು ಅನುಭವಿಸುತ್ತಾನೆ. ಉತ್ತಮ ಬಟ್ಟೆ, ರುಚಿಕರವಾದ ಊಟ, ಸಂಬಳ, ವಿದೇಶ ಪ್ರವಾಸದ ಅವಕಾಶ ಮುಂತಾದವುಗಳ ಬಗ್ಗೆ ಗಂಗನಿಗೆ ಹೇಳಿ ಅವನ ಮನಸ್ಸಿನಲ್ಲಿ ಆಸೆ ಹುಟ್ಟಿಸುತ್ತಾನೆ. ಸಿದ್ದಯ್ಯನ ಮಾತುಗಳಿಂದ ಪ್ರಭಾವಿತನಾದ ಗಂಗ ತನ್ನ ಕಷ್ಟದ ಕೃಷಿ ಜೀವನವನ್ನು ತಿರಸ್ಕರಿಸಿ ಸೈನ್ಯಕ್ಕೆ ಸೇರಲು ನಿರ್ಧರಿಸುತ್ತಾನೆ. ತಾಯಿಯ ವಿರೋಧವಿದ್ದರೂ ಸಿದ್ದಯ್ಯನೊಂದಿಗೆ ಬೆಂಗಳೂರಿಗೆ ಹೋಗಿ, ನಂತರ ಸೈನ್ಯಕ್ಕೆ ಸೇರುತ್ತಾನೆ.
ಸೈನ್ಯ ಜೀವನದಲ್ಲಿ ಗಂಗನಲ್ಲಿ ಸಾಕಷ್ಟು ಬದಲಾವಣೆ ಉಂಟಾಗುತ್ತದೆ. ಐಷಾರಾಮಿ ಜೀವನ, ಹೊಸ ಬಟ್ಟೆ, ಹಣ ಮತ್ತು ನಗರ ಸಂಸ್ಕೃತಿಯಿಂದ ಅವನು ತನ್ನ ಹಿಂದಿನ ಗ್ರಾಮೀಣ ಬದುಕನ್ನೇ ಮರೆತುಬಿಡುತ್ತಾನೆ. ಆದರೆ ಯುದ್ಧ ಮುಗಿದ ನಂತರ ಅವನಿಗೆ **ಡಿಸ್ಚಾರ್ಜ್** ಆಗುತ್ತದೆ. ಊರಿಗೆ ಮರಳಿದಾಗ ಅವನ ಕುಟುಂಬದ ಪರಿಸ್ಥಿತಿ ಹದಗೆಟ್ಟಿರುವುದನ್ನು ಕಾಣುತ್ತಾನೆ. ತಾಯಿ ಮರಣಶಯ್ಯೆಯಲ್ಲಿರುತ್ತಾಳೆ ಮತ್ತು ತಮ್ಮ ಭೂಮಿಯನ್ನು ಇತರರಿಗೆ ಮಾಡಿಕೊಡಲಾಗಿದೆ.
ಗಂಗ ಮತ್ತೆ ಹೊಲದ ಕೆಲಸಕ್ಕೆ ಮರಳಲು ಸಾಧ್ಯವಾಗದೆ ರಸ್ತೆ ನಿರ್ಮಾಣದ ಕೂಲಿ ಕೆಲಸ ಮಾಡುತ್ತಾನೆ. ಒಂದು ದಿನ ತನ್ನ ರಕ್ತ ಬಸಿದು ದುಡಿದಿದ್ದ ಹೊಲದಲ್ಲಿ ಸಮೃದ್ಧವಾದ ರಾಗಿಯ ಬೆಳೆಯನ್ನು ಕಂಡು, ಆ ಭೂಮಿಯ ಮೇಲೆ ತನಗೆ ಯಾವುದೇ ಹಕ್ಕಿಲ್ಲ ಎಂಬ ನೋವು ಅವನನ್ನು ಕಾಡುತ್ತದೆ. **“ಚಿನ್ನದಂಥ ಭೂಮಿ”** ಎಂದು ಈರಪ್ಪ ಹೊಲವನ್ನು ಹೊಗಳಿದಾಗ, ಗಂಗನೊಳಗಿನ ಕೋಪ ಸ್ಫೋಟಗೊಂಡು ಪಿಕಾಸಿಯಿಂದ ಈರಪ್ಪನ ಮೇಲೆ ಹಲ್ಲೆ ಮಾಡುತ್ತಾನೆ. ಪರಿಣಾಮವಾಗಿ ಪೊಲೀಸರು ಅವನನ್ನು ಬಂಧಿಸಿ ಕರೆದೊಯ್ಯುತ್ತಾರೆ.
ಕೊನೆಯಲ್ಲಿ ಗಂಗನ ತಾಯಿ **“ಭೂಮಿತಾಯಿ ಶಾಪ”** ಎಂದು ದುಃಖದಿಂದ ಕೂಗಿ ಕುಸಿದು ಬೀಳುತ್ತಾಳೆ. ಈ ಘಟನೆ ಗಂಗನ ಬದುಕಿನ ದುರಂತವನ್ನು ಸೂಚಿಸುತ್ತದೆ.
**‘ಮಣ್ಣಿನ ಮಗ’** ಕಥೆಯ ಮೂಲಕ ಲೇಖಕರು ರೈತನಿಗೆ ಭೂಮಿಯೇ ತಾಯಿ, ಬದುಕಿನ ಆಧಾರ ಮತ್ತು ಅಸ್ತಿತ್ವ ಎಂಬುದನ್ನು ಸಾರುತ್ತಾರೆ. ಭೂಮಿಯಿಂದ ದೂರವಾದಾಗ ಮನುಷ್ಯ ತನ್ನ ಮೂಲವನ್ನೇ ಕಳೆದುಕೊಳ್ಳುತ್ತಾನೆ. ಬಡತನ, ಭೂಮಿಯ ಮೇಲಿನ ಹಕ್ಕಿನ ಕೊರತೆ ಮತ್ತು ಕೃತಕ ಆಧುನಿಕತೆಯ ಆಕರ್ಷಣೆ ಮನುಷ್ಯನ ಬದುಕನ್ನು ಹೇಗೆ ದುರಂತಕ್ಕೆ ತಳ್ಳಬಹುದು ಎಂಬುದನ್ನು ಕಥೆ ಮನಮುಟ್ಟುವಂತೆ ನಿರೂಪಿಸುತ್ತದೆ.
1. ಸಿದ್ದನ ಸಹವಾಸದಿಂದ ಗಂಗ ಭೂಮಿಯ ನಂಟನ್ನು ಕಳೆದುಕೊಂಡದ್ದು ಹೇಗೆ?
ಉತ್ತರ : ಸಿದ್ದಯ್ಯ ಮತ್ತು ಗಂಗ ಪರಮ ಸ್ನೇಹಿತರಾಗಿದ್ದರು. ಸಿದ್ದಯ್ಯ ಸೈನ್ಯಕ್ಕೆ ಸೇರಿದ ನಂತರ ರಜೆಯಲ್ಲಿ ಊರಿಗೆ ಬಂದಾಗ ತನ್ನ ಸೈನಿಕ ಜೀವನದ ಸೌಕರ್ಯಗಳನ್ನು ಗಂಗನಿಗೆ ವಿವರಿಸಿದನು. ಸೈನ್ಯದಲ್ಲಿ ಉತ್ತಮ ಬಟ್ಟೆ, ರುಚಿಕರವಾದ ಊಟ, ಮಂಚ, ಸಂಬಳ ಹಾಗೂ ವಿದೇಶ ಪ್ರವಾಸದ ಅವಕಾಶಗಳಿವೆ ಎಂದು ಹೇಳಿ ಗಂಗನ ಮನಸ್ಸಿನಲ್ಲಿ ನಗರ ಜೀವನದ ಬಗ್ಗೆ ಆಸೆ ಮೂಡಿಸಿದನು.
ಇದರಿಂದ ಗಂಗನಿಗೆ ತಾನು ಮಾಡುತ್ತಿದ್ದ ಕೃಷಿ ಕೆಲಸದ ಬಗ್ಗೆ ಅಸಹ್ಯ ಉಂಟಾಯಿತು. ಬೆಳಗ್ಗೆಯಿಂದ ಸಂಜೆವರೆಗೆ ಕಷ್ಟಪಟ್ಟು ದುಡಿದರೂ ಕೆಲವೇ ಕಾಳು ರಾಗಿ ಸಿಗುತ್ತದೆ; ಮಳೆ ಕೈಕೊಟ್ಟರೆ ಬದುಕು ಕಷ್ಟವಾಗುತ್ತದೆ ಎಂದು ಯೋಚಿಸಿದನು. ಸಿದ್ದಯ್ಯನಂತೆ ತಾನೂ ಸೈನ್ಯ ಸೇರಿ ಹಣ ಸಂಪಾದಿಸಿ ಸುಖವಾಗಿ ಬದುಕಬೇಕೆಂದು ನಿರ್ಧರಿಸಿದನು. ತಾಯಿ ಮತ್ತು ಹೆಂಡತಿಯ ವಿರೋಧವನ್ನೂ ಲೆಕ್ಕಿಸದೆ ಸಿದ್ದಯ್ಯನೊಂದಿಗೆ ಊರು ಬಿಟ್ಟು ಸೈನ್ಯಕ್ಕೆ ಸೇರಿದನು.
ಸೈನ್ಯ ಸೇರಿದ ನಂತರ ಗಂಗನಲ್ಲಿ ಇನ್ನಷ್ಟು ಬದಲಾವಣೆ ಉಂಟಾಯಿತು. ಕ್ರಾಪು, ಮೋಜು, ಸಿಲ್ಕ್ ಬಟ್ಟೆ, ಸೆಂಟು ಮುಂತಾದ ಆಧುನಿಕ ವಸ್ತುಗಳನ್ನು ಬಳಸುತ್ತಾ ತನ್ನ ಹಳೆಯ ಗ್ರಾಮೀಣ ಬದುಕನ್ನೇ ಮರೆತನು. ತನ್ನ ಹಿಂದಿನ ಬದುಕನ್ನು **‘ಕೆಟ್ಟ ಕನಸು’** ಎಂದು ಭಾವಿಸಿದನು. ಹೀಗೆ ಸಿದ್ದಯ್ಯನ ಸಹವಾಸದಿಂದ ಗಂಗನಿಗೆ ಭೂಮಿಯ ಮೇಲಿದ್ದ ಪ್ರೀತಿ ಮತ್ತು ಕೃಷಿಯ ಮೇಲಿದ್ದ ಗೌರವ ಕಡಿಮೆಯಾಗಿ, ಹಣ ಮತ್ತು ಸುಖಸೌಲಭ್ಯಗಳ ಮೇಲಿನ ಆಸೆ ಹೆಚ್ಚಾಯಿತು.
ಆದರೆ ಯುದ್ಧ ಮುಗಿದು ಸೈನ್ಯದಿಂದ ವಜಾಗೊಂಡು ಊರಿಗೆ ಮರಳಿದಾಗ, ತಾನು ದುಡಿದಿದ್ದ ಭೂಮಿಯ ಮೇಲೆ ತನಗೆ ಯಾವುದೇ ಅಧಿಕಾರವಿಲ್ಲ ಎಂಬ ಅರಿವು ಅವನಿಗೆ ತೀವ್ರ ನೋವನ್ನುಂಟುಮಾಡಿತು. ಕೊನೆಗೆ ಆ ನೋವು ಮತ್ತು ಕೋಪವೇ ಅವನನ್ನು ಈರಪ್ಪನ ಮೇಲೆ ಹಲ್ಲೆ ಮಾಡುವ ದುರಂತಕ್ಕೆ ಕೊಂಡೊಯ್ಯಿತು.
**ಹೀಗಾಗಿ, ಸಿದ್ದನ ಸಹವಾಸವು ಗಂಗನನ್ನು ತನ್ನ ಮಣ್ಣಿನ ಬದುಕಿನಿಂದ ದೂರ ಮಾಡಿ, ಹಣ ಮತ್ತು ಕೃತಕ ಸುಖದ ಹಿಂದೆ ಓಡುವಂತೆ ಮಾಡಿತು.
2. ಸಿದ್ದ ಕಣ್ಮರೆಯಾದಾಗ ತಂದೆ ರಾಮಯ್ಯನ ದುಃಖ, ಚಟಪಡಿಕೆ ಎಂಥದ್ದು?
ಸಿದ್ದಯ್ಯ ಕಣ್ಮರೆಯಾದಾಗ ಅವನ ತಂದೆ ರಾಮಯ್ಯ ತೀವ್ರ ದುಃಖ ಮತ್ತು ಆತಂಕಕ್ಕೆ ಒಳಗಾದನು. ಮಗನನ್ನು ಹುಡುಕಿಕೊಂಡು ಊರಿನಲ್ಲೆಲ್ಲಾ ಅಲೆದಾಡಿದರೂ ಸಿದ್ದಯ್ಯನ ಸುಳಿವು ಸಿಗಲಿಲ್ಲ. ಅವನು ಎಲ್ಲಿ ಹೋಗಿದ್ದಾನೆ ಎಂಬುದು ತಿಳಿಯದೆ ರಾಮಯ್ಯನ ಮನಸ್ಸು ಚಡಪಡಿಸಿತು.
ಮೂರು-ನಾಲ್ಕು ದಿನಗಳಾದರೂ ಸಿದ್ದಯ್ಯನ ಪತ್ತೆ ಸಿಗದಿದ್ದಾಗ ರಾಮಯ್ಯನ ಮುಖದಲ್ಲಿ ತೇಜಸ್ಸೇ ಇರಲಿಲ್ಲ. ಕಣ್ಣುಗಳು ಕಾಂತಿಹೀನವಾಗಿದ್ದವು; ನೋವಿನಿಂದ ದೇಹ ಕಳೆಗುಂದಿತ್ತು. ಕೊನೆಗೆ ಗಂಗನ ಮನೆಗೆ ಬಂದು ತನ್ನ ದುಃಖವನ್ನು ತಡೆಯಲಾಗದೆ ಮಕ್ಕಳಂತೆ **‘ಗೊಳೋ’ ಎಂದು ಅಳತೊಡಗಿದನು**. ತನ್ನ ಒಬ್ಬನೇ ಮಗನನ್ನು ಕಳೆದುಕೊಂಡ ನೋವು ಅವನನ್ನು ಸಂಪೂರ್ಣವಾಗಿ ಕುಗ್ಗಿಸಿತ್ತು.
ಸಿದ್ದಯ್ಯ ಸೈನ್ಯಕ್ಕೆ ಸೇರಿದ್ದಾನೆ ಎಂಬ ವಿಷಯ ತಿಳಿದಾಗಲೂ ರಾಮಯ್ಯನ ದುಃಖ ಕಡಿಮೆಯಾಗಲಿಲ್ಲ. ಸೈನ್ಯಕ್ಕೆ ಸೇರಿದರೆ ಮಗನಿಗೆ ಜಾತಿ ಕೆಡುತ್ತದೆ, ಅಪಾಯಗಳು ಎದುರಾಗುತ್ತವೆ, ಕುಟುಂಬದಿಂದ ದೂರವಾಗುತ್ತಾನೆ ಎಂದು ಆತಂಕಪಟ್ಟನು. **ಮಗನ ಮೇಲಿನ ಅಪಾರ ಪ್ರೀತಿ, ಅವನ ಭವಿಷ್ಯದ ಕುರಿತ ಭಯ ಮತ್ತು ಮಗ ತನ್ನ ಮಾತನ್ನು ಕೇಳಲಿಲ್ಲ ಎಂಬ ನೋವು** ರಾಮಯ್ಯನ ಚಟಪಡಿಕೆಗೆ ಕಾರಣವಾಗಿತ್ತು.
3. ಭೂಮಿಯ ಸಂಬಂಧವನ್ನು ಕಳೆದುಕೊಂಡ ಮೇಲೆ ಗಂಗನ ಬದುಕು ಮೂರಾಬಟ್ಟೆಯಾದದ್ದು ಹೇಗೆ?
ಉತ್ತರ : ಗಂಗನ ಬದುಕು ಆರಂಭದಲ್ಲಿ ಭೂಮಿಯೊಂದಿಗೆ ನಿಕಟ ಸಂಬಂಧ ಹೊಂದಿತ್ತು. ಸ್ವಂತ ಭೂಮಿ ಇಲ್ಲದಿದ್ದರೂ ಧಣಿಯ ಹೊಲವನ್ನು ತನ್ನದೇ ಹೊಲವೆಂಬಂತೆ ಪ್ರಾಮಾಣಿಕವಾಗಿ ದುಡಿಯುತ್ತಿದ್ದನು. ಕೃಷಿಯಿಂದ ದೊರೆಯುತ್ತಿದ್ದ ಅಲ್ಪ ಆದಾಯದಲ್ಲಿಯೇ ತಾಯಿ ಮತ್ತು ಹೆಂಡತಿ ತಿಮ್ಮಿಯೊಂದಿಗೆ ಸಂತೋಷದಿಂದ ಜೀವನ ನಡೆಸುತ್ತಿದ್ದನು. ಆದರೆ ಸಿದ್ದಯ್ಯನ ಸಹವಾಸದಿಂದ ಗಂಗನ ಮನಸ್ಸಿನಲ್ಲಿ ಸೈನಿಕ ಜೀವನದ ಹಣ, ಸೌಕರ್ಯ ಮತ್ತು ನಗರ ಜೀವನದ ಬಗ್ಗೆ ಆಸೆ ಮೂಡಿತು. ಕೃಷಿ ಕೆಲಸವು ಅವನಿಗೆ ಕಷ್ಟಕರ ಮತ್ತು ಕೀಳಾಗಿ ಕಾಣಿಸತೊಡಗಿತು.
ಸಿದ್ದಯ್ಯನ ಮಾತನ್ನು ನಂಬಿ ಗಂಗ ಸೈನ್ಯಕ್ಕೆ ಸೇರಿದನು. ಸೈನ್ಯದಲ್ಲಿದ್ದಾಗ ಹಣ, ಉತ್ತಮ ಬಟ್ಟೆ, ರುಚಿಕರವಾದ ಊಟ ಹಾಗೂ ನಗರ ಜೀವನದ ಸುಖವನ್ನು ಅನುಭವಿಸಿ ತನ್ನ ಹಳೆಯ ಮಣ್ಣಿನ ಬದುಕನ್ನೇ ಮರೆತನು. ತನ್ನ ಹಿಂದಿನ ಜೀವನವನ್ನು ಕೆಟ್ಟ ಕನಸಿನಂತೆ ಭಾವಿಸಿದನು. ಹೀಗೆ ಭೂಮಿಯೊಂದಿಗಿನ ಅವನ ನಂಟು ಸಂಪೂರ್ಣವಾಗಿ ಕಡಿದುಹೋಯಿತು.
ಯುದ್ಧ ಮುಗಿದ ನಂತರ ಸೈನ್ಯದಿಂದ ವಜಾಗೊಂಡು ಊರಿಗೆ ಹಿಂದಿರುಗಿದಾಗ ಅವನಿಗೆ ಹಿಂದಿನ ಜೀವನದ ಯಾವುದೇ ಆಧಾರ ಉಳಿದಿರಲಿಲ್ಲ. ತಾಯಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಳು; ಹೊಲವನ್ನು ಬೇರೆಯವರಿಗೆ ಮಾಡಿಕೊಡಲಾಗಿತ್ತು. ತಾನು ರಕ್ತ ಬಸಿದು ದುಡಿದಿದ್ದ ಹೊಲ ಸಮೃದ್ಧವಾಗಿ ಬೆಳೆದಿದ್ದರೂ, ಅದರ ಮೇಲೆ ತನಗೆ ಯಾವುದೇ ಹಕ್ಕು ಇರಲಿಲ್ಲ. ಇದರಿಂದ ಗಂಗನ ಮನಸ್ಸಿನಲ್ಲಿ ತೀವ್ರ ನೋವು, ಅಸಹಾಯಕತೆ ಮತ್ತು ಕೋಪ ಉಂಟಾಯಿತು.
ಹೊಟ್ಟೆಪಾಡಿಗಾಗಿ ರಸ್ತೆ ನಿರ್ಮಾಣದ ಕೂಲಿ ಕೆಲಸ ಮಾಡಬೇಕಾಯಿತು. ಒಂದು ದಿನ ತನ್ನ ಹೊಲದ ರಾಗಿಯ ಸಮೃದ್ಧ ಬೆಳೆಯನ್ನು ನೋಡಿ ಈರಪ್ಪನ ಮಾತಿನಿಂದ ಅವನೊಳಗಿನ ಕೋಪ ಸ್ಫೋಟಗೊಂಡಿತು. ಪಿಕಾಸಿಯಿಂದ ಈರಪ್ಪನ ಮೇಲೆ ಹಲ್ಲೆ ಮಾಡಿದನು. ಪರಿಣಾಮವಾಗಿ ಪೊಲೀಸರು ಗಂಗನನ್ನು ಬಂಧಿಸಿ ಕರೆದುಕೊಂಡು ಹೋದರು.
ಹೀಗೆ **ಭೂಮಿಯ ನಂಟನ್ನು ಕಳೆದುಕೊಂಡ ಗಂಗನು ತನ್ನ ನೆಮ್ಮದಿ, ಕುಟುಂಬದ ಸುಖ, ಆರ್ಥಿಕ ಸ್ಥಿರತೆ ಮತ್ತು ಮಾನಸಿಕ ಸಮತೋಲನವನ್ನು ಕಳೆದುಕೊಂಡು ಕೊನೆಗೆ ಅಪರಾಧಿಯ ಸ್ಥಿತಿಗೆ ತಲುಪಿದನು.** ಅದರಿಂದಲೇ ಅವನ ಬದುಕು ಮೂರಾಬಟ್ಟೆಯಾಯಿತು.
4. ಗಂಗನು ಮಣ್ಣಿನ ಮಗನಾಗಿ ಕಟ್ಟಿಕೊಂಡ ಸುಖೀ ಕುಟುಂಬ ಹೇಗಿತ್ತು?
ಉತ್ತರ : ಗಂಗನು ಹಳ್ಳಿಯಲ್ಲಿ ಹುಟ್ಟಿ ಬೆಳೆದ ಸರಳ, ಪರಿಶ್ರಮಿ ರೈತ. ಸ್ವಂತ ಭೂಮಿ ಇಲ್ಲದಿದ್ದರೂ ಧಣಿಯ ಹೊಲವನ್ನು ಪ್ರಾಮಾಣಿಕವಾಗಿ ದುಡಿಯುತ್ತಾ, ಕೃಷಿಯನ್ನೇ ತನ್ನ ಬದುಕಿನ ಆಧಾರವನ್ನಾಗಿ ಮಾಡಿಕೊಂಡಿದ್ದನು. ಅವನಿಗೆ ತಾಯಿ ಮತ್ತು ಹೆಂಡತಿ ತಿಮ್ಮಿ ಮಾತ್ರ ಕುಟುಂಬದ ಆಧಾರವಾಗಿದ್ದರು. ತಿಮ್ಮಿಯೂ ಗಂಗನೊಂದಿಗೆ ಹೊಲದಲ್ಲಿ ದುಡಿದು ತನ್ನ ಅನ್ನವನ್ನು ತಾನೇ ಸಂಪಾದಿಸುತ್ತಿದ್ದಳು.
ಗಂಗನ ಜೀವನದಲ್ಲಿ ಹೆಚ್ಚಿನ ಐಶ್ವರ್ಯವಿರಲಿಲ್ಲ. ಆದರೂ ಇದ್ದುದರಲ್ಲಿಯೇ ಸಂತೋಷದಿಂದ ಬದುಕುತ್ತಿದ್ದನು. ವರ್ಷಕ್ಕೊಮ್ಮೆ **ಶಿವಗಂಗೆ ಜಾತ್ರೆಗೆ ಹೋಗುವುದು, ಒಡ್ಡರಬೈಲಿನ ಬಯಲು ನಾಟಕ ನೋಡುವುದು, ಹುಂಜದ ಕಾಳಗದಲ್ಲಿ ಭಾಗವಹಿಸುವುದು** ಮುಂತಾದವುಗಳೇ ಅವನ ಮನರಂಜನೆಯಾಗಿದ್ದವು. ಹುಂಜದ ಕಾಳಗದಲ್ಲಿ ಗೆದ್ದು ತಿಮ್ಮಿಗೆ ಬೆಳ್ಳಿ ಕಡಗ ತಂದಾಗ ಅವನಿಗೆ ಅಪಾರ ಸಂತೋಷವಾಗಿತ್ತು.
ಗಂಗನ ತಾಯಿಯೂ ಮಗನ ಮೇಲೆ ಅಪಾರ ಪ್ರೀತಿ ಹೊಂದಿದ್ದಳು. ಅವನನ್ನು ಗದರಿಸುತ್ತಿದ್ದರೂ ಅವನ ಒಳಿತನ್ನೇ ಬಯಸುತ್ತಿದ್ದಳು. ತಿಮ್ಮಿ ಕೂಡ ಗಂಡನ ಕಷ್ಟಸುಖಗಳಲ್ಲಿ ಭಾಗಿಯಾಗುತ್ತಿದ್ದಳು. ಹೀಗಾಗಿ **ಹಣ-ಐಶ್ವರ್ಯ ಕಡಿಮೆಯಿದ್ದರೂ ಪರಸ್ಪರ ಪ್ರೀತಿ, ದುಡಿಮೆ, ತೃಪ್ತಿ ಮತ್ತು ಮಣ್ಣಿನೊಂದಿಗಿನ ನಂಟಿನಿಂದ ಗಂಗನ ಕುಟುಂಬ ಸುಖೀ ಕುಟುಂಬವಾಗಿತ್ತು.**
ಒಟ್ಟಿನಲ್ಲಿ, ಗಂಗನ ಕುಟುಂಬದ ಸುಖವು **ಹಣದಿಂದ ಬಂದದ್ದಲ್ಲ; ಭೂಮಿಯ ಮೇಲೆ ನಂಬಿಕೆ, ಕಾಯಕ, ಕುಟುಂಬದ ಪ್ರೀತಿ ಮತ್ತು ಇದ್ದುದರಲ್ಲಿಯೇ ತೃಪ್ತಿಯಿಂದ ಬದುಕುವುದರಿಂದ ಬಂದದ್ದು.**
5. ಗಂಗನ ಹೊಲ ಅನ್ಯರ ಪಾಲಾದದ್ದು ಹೇಗೆ?
ಗಂಗನಿಗೆ ಸ್ವಂತ ಭೂಮಿ ಇರಲಿಲ್ಲ. ಅವನು ತನ್ನ ಧಣಿಯ ಹೊಲವನ್ನು ವರ್ಷವಿಡೀ ಕಷ್ಟಪಟ್ಟು ದುಡಿಯುತ್ತಿದ್ದನು. ಆ ಹೊಲದಿಂದ ಬಂದ ಬೆಳೆಯಲ್ಲಿ ಒಂದು ಪಾಲು ಧಣಿಗೆ ಹೋಗುತ್ತಿತ್ತು. ಉಳಿದುದರಿಂದ ಗಂಗ ತನ್ನ ತಾಯಿ ಮತ್ತು ಹೆಂಡತಿ ತಿಮ್ಮಿಯೊಂದಿಗೆ ಜೀವನ ನಡೆಸುತ್ತಿದ್ದನು.
ಸಿದ್ದಯ್ಯನ ಸಹವಾಸದಿಂದ ಗಂಗನಿಗೆ ಕೃಷಿ ಜೀವನದ ಬಗ್ಗೆ ಅಸಹ್ಯ ಮೂಡಿ, ಸೈನ್ಯಕ್ಕೆ ಸೇರುವ ಆಸೆ ಉಂಟಾಯಿತು. ಸಿದ್ದಯ್ಯನೊಂದಿಗೆ ಊರು ಬಿಟ್ಟು ಸೈನ್ಯಕ್ಕೆ ಸೇರಿದ ನಂತರ ಗಂಗ ಊರಿಗೆ ಮರಳಲಿಲ್ಲ. ತಾಯಿ ಮತ್ತು ತಿಮ್ಮಿ ಗಂಗ ಬರುತ್ತಾನೆಂದು ಒಂದು ವರ್ಷ ಕಾದರು. ಅವನ ಸುಳಿವು ಸಿಗದಿದ್ದಾಗ **ಹೊಲವನ್ನು ಬೇರೆಯವರಿಗೆ ಮಾಡುವಂತೆ ಒಪ್ಪಿಸಿದರು.**
ನಂತರ ಗಂಗ ಸೈನ್ಯದಿಂದ ವಜಾಗೊಂಡು ಊರಿಗೆ ಮರಳಿದಾಗ, ತಾನು ರಕ್ತ ಬಸಿದು ದುಡಿದಿದ್ದ ಹೊಲದಲ್ಲಿ ರಾಗಿ ಸಮೃದ್ಧವಾಗಿ ಬೆಳೆದಿರುವುದನ್ನು ಕಂಡನು. ಆದರೆ ಆ ಹೊಲವನ್ನು ಈಗ ಬೇರೆಯವರು ಮಾಡುತ್ತಿದ್ದರು. ಹೀಗಾಗಿ ಗಂಗನು ಮಣ್ಣಿನೊಂದಿಗೆ ತನ್ನ ನಂಟನ್ನು ಕಳೆದುಕೊಂಡ ಪರಿಣಾಮ, ತಾನು ದುಡಿದಿದ್ದ ಭೂಮಿಯ ಮೇಲಿನ ಹಕ್ಕನ್ನೂ ಕಳೆದುಕೊಂಡು, ಆ ಹೊಲ ಅನ್ಯರ ಪಾಲಾಯಿತು.
6. ಗಂಗನ ತಾಯಿಯ ಶಾಪದ ಹಿಂದಿನ ಭೂಮಿ ತತ್ವವನ್ನು ಪರಿಚಯಿಸಿ.
ಗಂಗನ ತಾಯಿಯ **“ಭೂಮಿತಾಯಿ ಶಾಪ”** ಎಂಬ ಮಾತಿನ ಹಿಂದೆ ಆಳವಾದ ಭೂಮಿ ತತ್ವ ಅಡಗಿದೆ. ಅವಳ ದೃಷ್ಟಿಯಲ್ಲಿ ಭೂಮಿ ಕೇವಲ ಬೆಳೆ ಬೆಳೆಯುವ ಸ್ಥಳವಲ್ಲ; ಅದು **ತಾಯಿಯಂತೆ ಮನುಷ್ಯನನ್ನು ಸಾಕಿ, ಅನ್ನ ನೀಡಿ, ಬದುಕನ್ನು ಕಾಪಾಡುವ ಜೀವದಾತೆ**. ಗಂಗನು ಮಣ್ಣಿನ ಮಗನಾಗಿ ಭೂಮಿಯನ್ನು ನಂಬಿಕೊಂಡು ಬದುಕುತ್ತಿದ್ದಾಗ ಅವನ ಜೀವನದಲ್ಲಿ ನೆಮ್ಮದಿ ಮತ್ತು ಸಂತೋಷವಿತ್ತು.
ಆದರೆ ಸಿದ್ದಯ್ಯನ ಸಹವಾಸದಿಂದ ಗಂಗನು ಭೂಮಿಯ ನಂಟನ್ನು ಕಳೆದುಕೊಂಡು ಸೈನ್ಯಕ್ಕೆ ಸೇರಿದನು. ಹಣ ಮತ್ತು ಸುಖಸೌಲಭ್ಯಗಳ ಹಿಂದೆ ಓಡಿ ತನ್ನ ಮೂಲ ಬದುಕನ್ನು ಮರೆತನು. ಪರಿಣಾಮವಾಗಿ ತಾಯಿಯನ್ನು ಬಿಟ್ಟು ದೂರವಾದನು, ಹೊಲವೂ ಅನ್ಯರ ಪಾಲಾಯಿತು ಮತ್ತು ಕೊನೆಗೆ ಅವನ ಬದುಕು ದುರಂತವಾಯಿತು.
ಗಂಗ ಊರಿಗೆ ಮರಳಿದಾಗ ತಾಯಿ ಮರಣಶಯ್ಯೆಯಲ್ಲಿದ್ದಳು. ತಾನು ಬೆಳೆದ, ದುಡಿದ ಭೂಮಿಯ ಮೇಲೆಯೇ ತನ್ನ ಹಕ್ಕಿಲ್ಲದಿರುವುದನ್ನು ಕಂಡು ಗಂಗನ ಮನಸ್ಸು ಕುದಿಯಿತು. ಈ ನೋವು ಕೊನೆಗೆ ಈರಪ್ಪನ ಮೇಲೆ ಹಲ್ಲೆ ಮಾಡುವ ಮಟ್ಟಿಗೆ ಅವನನ್ನು ಕೊಂಡೊಯ್ದಿತು. ಗಂಗನನ್ನು ಪೊಲೀಸರು ಬಂಧಿಸಿ ಕರೆದುಕೊಂಡು ಹೋಗುವಾಗ ತಾಯಿ **“ಭೂಮಿತಾಯಿ ಶಾಪ”** ಎಂದು ಚೀರಿ ಕುಸಿದುಬಿದ್ದಳು.
ಇದರ ಮೂಲಕ ಲೇಖಕರು **ಭೂಮಿಯನ್ನು ತಾಯಿಯಂತೆ ಗೌರವಿಸಿ, ಅದರೊಂದಿಗೆ ನಂಟು ಉಳಿಸಿಕೊಂಡು ಬದುಕಬೇಕು; ಭೂಮಿಯಿಂದ ದೂರವಾದರೆ ಮನುಷ್ಯ ತನ್ನ ಬದುಕಿನ ಮೂಲವನ್ನೇ ಕಳೆದುಕೊಳ್ಳುತ್ತಾನೆ** ಎಂಬ ತತ್ವವನ್ನು ಸಾರುತ್ತಾರೆ. ಭೂಮಿಯೇ ಅನ್ನದಾತೆ, ಜೀವದಾತೆ ಮತ್ತು ಮನುಷ್ಯನ ಅಸ್ತಿತ್ವದ ಮೂಲ ಎಂಬುದೇ ಈ ಶಾಪದ ಹಿಂದಿರುವ ಮುಖ್ಯ ಭೂಮಿ ತತ್ವ.
7. ಗಂಗನನ್ನು ಸಿದ್ದ ತನ್ನ ಜೊತೆ ಕರೆದೊಯ್ಯಲು ಪುಸಲಾಯಿಸಿದ್ದು ಹೇಗೆ? ಪರಿಣಾಮವೇನು?
ಸಿದ್ದಯ್ಯ ಸೈನ್ಯಕ್ಕೆ ಸೇರಿ ರಜೆಯಲ್ಲಿ ಊರಿಗೆ ಬಂದಾಗ, ತಾನು ಅನುಭವಿಸುತ್ತಿರುವ ಸೈನಿಕ ಜೀವನದ ಸುಖಸೌಲಭ್ಯಗಳನ್ನು ಗಂಗನಿಗೆ ವಿವರಿಸಿದನು. ಸೈನ್ಯದಲ್ಲಿ **ತಿಂಗಳಿಗೆ ಸಂಬಳ, ಉಚಿತ ಬಟ್ಟೆ, ಊಟ, ಮಲಗಲು ಮಂಚ** ಎಲ್ಲವೂ ಸಿಗುತ್ತವೆ ಎಂದು ಹೇಳಿದನು. ಅಲ್ಲದೆ ಇಂಗ್ಲಿಷ್ ಕಲಿಸುತ್ತಾರೆ, ವಿದೇಶಗಳಿಗೆ ಹೋಗುವ ಅವಕಾಶವಿದೆ, ಪರಂಗಿಯವರ ಊರುಗಳನ್ನು ಹಣ ಖರ್ಚಿಲ್ಲದೆ ನೋಡಬಹುದು ಎಂದು ಗಂಗನ ಮನಸ್ಸಿನಲ್ಲಿ ಆಸೆ ಹುಟ್ಟಿಸಿದನು.
ಸಿದ್ದಯ್ಯನ ಮಾತುಗಳಿಂದ ಪ್ರಭಾವಿತನಾದ ಗಂಗ ತನ್ನ ಕೃಷಿ ಜೀವನವನ್ನು ಕಷ್ಟಕರವೆಂದು ಭಾವಿಸತೊಡಗಿದನು. ಬೆಳಗ್ಗೆಯಿಂದ ಸಂಜೆವರೆಗೆ ಹೊಲದಲ್ಲಿ ದುಡಿದರೂ ಸಿಗುವುದು ಸ್ವಲ್ಪ ರಾಗಿ ಮಾತ್ರ; ಮಳೆ ಕೈಕೊಟ್ಟರೆ ಬದುಕು ಕಷ್ಟ ಎಂಬ ಯೋಚನೆ ಅವನಲ್ಲಿ ಮೂಡಿತು. ಆದ್ದರಿಂದ ಸಿದ್ದಯ್ಯನೊಂದಿಗೆ ಹೋಗಿ ಹಣ ಸಂಪಾದಿಸಿ ಸುಖವಾಗಿ ಬದುಕಬೇಕೆಂದು ನಿರ್ಧರಿಸಿದನು.
ಸಿದ್ದಯ್ಯ ಗಂಗನ ತಾಯಿಗೆ **“ನಾಲ್ಕೈದು ದಿವಸ ಬೆಂಗಳೂರಿಗೆ ಹೋಗಿ ಬರುತ್ತಾನೆ”** ಎಂದು ಹೇಳಿ ಒಪ್ಪಿಸಿದನು. ಆದರೆ ಗಂಗನನ್ನು ಬೆಂಗಳೂರಿಗೆ ಕರೆದುಕೊಂಡು ಹೋದ ನಂತರ ಅವನನ್ನೂ ಸೈನ್ಯಕ್ಕೆ ಸೇರಿಸಿದನು.
**ಪರಿಣಾಮವಾಗಿ**, ಗಂಗನು ತನ್ನ ತಾಯಿ, ಹೆಂಡತಿ ಮತ್ತು ಭೂಮಿಯನ್ನು ಬಿಟ್ಟು ಸೈನ್ಯಕ್ಕೆ ಸೇರಿದನು. ಸೈನ್ಯ ಜೀವನದ ಸೌಕರ್ಯಗಳಿಂದ ಅವನು ತನ್ನ ಮಣ್ಣಿನ ನಂಟನ್ನು ಮರೆತನು. ಯುದ್ಧ ಮುಗಿದ ನಂತರ ಸೈನ್ಯದಿಂದ ವಜಾಗೊಂಡು ಊರಿಗೆ ಮರಳಿದಾಗ ಹೊಲ ಅನ್ಯರ ಪಾಲಾಗಿತ್ತು. ತಾಯಿ ಮರಣಶಯ್ಯೆಯಲ್ಲಿದ್ದಳು. ಕೊನೆಗೆ ಭೂಮಿಯ ಮೇಲಿನ ಹಕ್ಕನ್ನು ಕಳೆದುಕೊಂಡ ನೋವು ಮತ್ತು ಕೋಪದಿಂದ ಈರಪ್ಪನ ಮೇಲೆ ಹಲ್ಲೆ ಮಾಡಿ ಜೈಲು ಪಾಲಾದನು.
**ಹೀಗಾಗಿ, ಸಿದ್ದಯ್ಯನ ಪುಸಲಾವಣೆಯು ಗಂಗನನ್ನು ಮಣ್ಣಿನ ಬದುಕಿನಿಂದ ದೂರ ಮಾಡಿ, ಅವನ ಜೀವನವನ್ನೇ ದುರಂತದತ್ತ ಕೊಂಡೊಯ್ದಿತು.**
8. ಗಂಗನು ಜೈಲು ಸೇರಲು ಕಾರಣವೇನು?
ಗಂಗನು ಸಿದ್ದಯ್ಯನ ಸಹವಾಸದಿಂದ ಕೃಷಿ ಜೀವನವನ್ನು ತೊರೆದು ಸೈನ್ಯಕ್ಕೆ ಸೇರಿದ್ದನು. ಸೈನ್ಯದಲ್ಲಿ ಕೆಲವು ವರ್ಷಗಳ ಕಾಲ ಸುಖಸೌಲಭ್ಯಗಳನ್ನು ಅನುಭವಿಸಿದ ನಂತರ ಯುದ್ಧ ಮುಗಿದ ಕಾರಣ ಅವನನ್ನು **ಡಿಸ್ಚಾರ್ಜ್** ಮಾಡಲಾಯಿತು. ಊರಿಗೆ ಹಿಂದಿರುಗಿದಾಗ ಅವನ ಬದುಕು ಸಂಪೂರ್ಣವಾಗಿ ಬದಲಾಗಿತ್ತು. ತಾಯಿ ಅನಾರೋಗ್ಯದಿಂದ ಮಲಗಿದ್ದಳು ಮತ್ತು ತಾನು ದುಡಿದಿದ್ದ ಹೊಲವನ್ನು ಬೇರೆಯವರಿಗೆ ಮಾಡಿಕೊಡಲಾಗಿತ್ತು.
ಗಂಗನು ತನ್ನ ಹೊಲದ ಬಳಿ ಹೋಗುವಾಗ, ತಾನು ಹಿಂದೆ ರಕ್ತ ಬಸಿದು ದುಡಿದಿದ್ದ ಭೂಮಿಯಲ್ಲಿ ಸಮೃದ್ಧವಾದ ರಾಗಿಯ ಬೆಳೆಯನ್ನು ಕಂಡನು. ಆದರೆ ಆ ಬೆಳೆಯ ಮೇಲೆ ತನಗೆ ಯಾವುದೇ ಅಧಿಕಾರವಿಲ್ಲ ಎಂಬುದು ಅವನಿಗೆ ತೀವ್ರ ನೋವನ್ನುಂಟುಮಾಡಿತು. ಹೊಟ್ಟೆಪಾಡಿಗಾಗಿ ಅವನು ರಸ್ತೆ ನಿರ್ಮಾಣದ ಕೂಲಿ ಕೆಲಸಕ್ಕೆ ಸೇರಿದ್ದನು.
ಒಂದು ದಿನ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದಾಗ, ಹೊಲದ ಮಧ್ಯೆ **ಈರಪ್ಪನು ಗಂಗನ ಹೊಲದ ರಾಗಿಯನ್ನು ಮೆದೆ ಮಾಡುತ್ತಿದ್ದನು.** ಈರಪ್ಪನು ಆ ಹೊಲವನ್ನು ನೋಡಿ, “ಚಿನ್ನದಂಥ ಭೂಮಿ ಗಂಗಪ್ಪ, ಸೊಂಪು ಬೆಳೆಯಾಗೈತೆ” ಎಂದು ಹೇಳಿದನು. ಈ ಮಾತು ಗಂಗನ ಮನಸ್ಸಿನಲ್ಲಿದ್ದ ನೋವು ಮತ್ತು ಕೋಪವನ್ನು ಮತ್ತಷ್ಟು ಕೆರಳಿಸಿತು.
ಆಕ್ರೋಶಗೊಂಡ ಗಂಗನು ಕೈಯಲ್ಲಿದ್ದ **ಪಿಕಾಸಿಯಿಂದ ಈರಪ್ಪನ ತಲೆಗೆ ಹೊಡೆದನು.** ಈರಪ್ಪ ಗಂಭೀರವಾಗಿ ಗಾಯಗೊಂಡನು. ವಿಷಯ ತಿಳಿದು ಪೊಲೀಸರು ಬಂದು ಗಂಗನನ್ನು ಬಂಧಿಸಿದರು. ಹೀಗೆ **ಭೂಮಿಯ ಮೇಲಿನ ಹಕ್ಕನ್ನು ಕಳೆದುಕೊಂಡ ನೋವು, ಬಡತನ, ಅಸಹಾಯಕತೆ ಮತ್ತು ಉಕ್ಕಿಬಂದ ಕೋಪದಿಂದ ಈರಪ್ಪನ ಮೇಲೆ ಹಲ್ಲೆ ಮಾಡಿದ ಕಾರಣ ಗಂಗನು ಜೈಲು ಸೇರಬೇಕಾಯಿತು.**
9. ಗಂಗನ ಪುಟ್ಟ ಜಗತ್ತಿನಲ್ಲಿ ಕಂಡ ಸಂತಸ, ತೃಪ್ತಿಯ ಬದುಕು ಹೇಗಿತ್ತು?
ಗಂಗನ ಜಗತ್ತು ತುಂಬಾ ಚಿಕ್ಕದಾಗಿತ್ತು. ಅವನಿಗೆ ನಗರ ಜೀವನದ ವೈಭವ, ಹಣ, ಐಶ್ವರ್ಯಗಳ ಪರಿಚಯವಿರಲಿಲ್ಲ. **ತಾಯಿ, ಹೆಂಡತಿ ತಿಮ್ಮಿ, ಕೃಷಿ ಕೆಲಸ, ಕೋಳಿ ಸಾಕಣೆ ಮತ್ತು ಹಳ್ಳಿಯ ಪರಿಸರ**ವೇ ಅವನ ಬದುಕಿನ ಮುಖ್ಯ ಭಾಗಗಳಾಗಿದ್ದವು. ಸ್ವಂತ ಭೂಮಿ ಇಲ್ಲದಿದ್ದರೂ ಧಣಿಯ ಹೊಲವನ್ನು ಪ್ರಾಮಾಣಿಕವಾಗಿ ದುಡಿಯುತ್ತಾ ದೊರೆಯುತ್ತಿದ್ದ ಅಲ್ಪ ಆದಾಯದಲ್ಲಿಯೇ ತೃಪ್ತಿಯಿಂದ ಜೀವನ ನಡೆಸುತ್ತಿದ್ದನು.
ಗಂಗನಿಗೆ ಮೈಮುರಿದು ದುಡಿಯುವುದೇ ಜೀವನದ ಸಹಜ ಕ್ರಮವಾಗಿತ್ತು. ವರ್ಷಾಕಾಲದಲ್ಲಿ ಹೊಲದಲ್ಲಿ ದುಡಿದು ದವಸಧಾನ್ಯ ಪಡೆಯುತ್ತಿದ್ದನು. ವಿರಾಮದ ವೇಳೆಯಲ್ಲಿ ತನ್ನ ಪ್ರೀತಿಯ ಹುಂಜಗಳಿಗೆ ಕಾಳಗದ ತರಬೇತಿ ನೀಡುತ್ತಿದ್ದನು. ಹುಂಜದ ಕಾಳಗದಲ್ಲಿ ಗೆಲ್ಲುವುದರಿಂದ ಅವನಿಗೆ ವಿಶೇಷ ಸಂತೋಷ ಸಿಗುತ್ತಿತ್ತು. ಒಮ್ಮೆ ಶಿವಗಂಗೆ ಜಾತ್ರೆಯಲ್ಲಿ ಅವನ ಹುಂಜ ಗೆದ್ದಾಗ, ಸಂತೋಷದಿಂದ ತನ್ನ ಹೆಂಡತಿ ತಿಮ್ಮಿಗೆ **ಒಂದು ಜತೆ ಬೆಳ್ಳಿ ಕಡಗ**ವನ್ನು ತಂದುಕೊಟ್ಟನು. ಆ ಗೆಲುವಿನಿಂದ ಅವನಿಗೆ ಹೆಮ್ಮೆಯೂ ಸಂತೋಷವೂ ಉಂಟಾಗಿತ್ತು.
ವರ್ಷಕ್ಕೊಮ್ಮೆ **ಶಿವಗಂಗೆ ಪರಸೆಗೆ ಹೋಗುವುದು, ಒಡ್ಡರಬೈಲಿನ ಬಯಲು ನಾಟಕ ನೋಡುವುದು** ಅವನ ಪ್ರಮುಖ ಮನರಂಜನೆಯಾಗಿತ್ತು. ಇಂತಹ ಸಣ್ಣಪುಟ್ಟ ಸಂತೋಷಗಳಲ್ಲಿಯೇ ಅವನು ಜೀವನದ ಸುಖವನ್ನು ಕಂಡುಕೊಳ್ಳುತ್ತಿದ್ದನು.
ತಾಯಿ ಮತ್ತು ಹೆಂಡತಿಯ ಮೇಲೂ ಗಂಗನಿಗೆ ಅಪಾರ ಪ್ರೀತಿ ಇತ್ತು. ತಿಮ್ಮಿಯೂ ಅವನೊಂದಿಗೆ ದುಡಿದು ಕುಟುಂಬದ ಬದುಕಿಗೆ ನೆರವಾಗುತ್ತಿದ್ದಳು. ಹಣದ ಕೊರತೆಯಿದ್ದರೂ ಪರಸ್ಪರ ಪ್ರೀತಿ, ಕಾಯಕ, ನೆಮ್ಮದಿ ಮತ್ತು ತೃಪ್ತಿ ಅವರ ಬದುಕಿನಲ್ಲಿತ್ತು.
ಹೀಗಾಗಿ, ಗಂಗನ ಪುಟ್ಟ ಜಗತ್ತಿನ ಸಂತಸವು ಹಣ-ಐಶ್ವರ್ಯದಿಂದ ಬಂದದ್ದಲ್ಲ; ಮಣ್ಣು, ಕಾಯಕ, ಕುಟುಂಬದ ಪ್ರೀತಿ, ಸರಳ ಜೀವನ ಮತ್ತು ಇದ್ದುದರಲ್ಲಿಯೇ ತೃಪ್ತಿ ಹೊಂದುವುದರಿಂದ ಬಂದದ್ದಾಗಿತ್ತು..
