ಮಾದರಿ ವರದಿ
ಪರಿಚಯ:
ಆಧುನಿಕ ಪ್ರಸಾರ ಮಾಧ್ಯಮದ ಯುಗದಲ್ಲಿ 'ವರದಿ'
ರಚನೆ ಮಹತ್ವಪೂರ್ಣವಾಗಿದೆ. ವರದಿ ಸೃಜನಾತ್ಮಕ ಕಲೆ. ವರದಿ ವ್ಯಾವಹಾರಿಕ ಸಾಧನವೂ ಹೌದು; ಸಾಹಿತ್ಯಕ
ಮಾದರಿಯೂ ಹೌದು. ವರದಿ ಯಾವುದೇ ಒಂದು ಕಲಾಪದ ವಿವರಣೆಯಾಗಿದೆ. ವರದಿಗೆ ಸಂಬಂಧಿಯಾಗಿ ಸುದ್ದಿ, ವಾರ್ತೆ,
ಸಮಾಚಾರ, ಸಂಗತಿ, ಇಂಗ್ಲಿಷ್ನಲ್ಲಿ "Report" ಎನ್ನಬಹುದು. ವರದಿಯು 'ಒಬ್ಬ ವ್ಯಕ್ತಿ'
ಅಥವಾ 'ಸಮಿತಿ'ಯನ್ನು ನಿಯೋಜಿಸಿ ಯಾವುದೇ ಸಂಸ್ಥೆಗೆ ನಿರ್ದಿಷ್ಟ ಉದ್ದೇಶಾನುಸಾರ. ಯಾವುದೇ ವ್ಯವಹಾರದ
ಸ್ಥಿತಿಗತಿ/ಕಾರ್ಯಕ್ರಮದ ಕುರಿತ ಪರಿಶೀಲನೆ ಮಾಡುವ ಮೂಲಕ ವಿವರಣಾತ್ಮಕ ವರದಿ ಸಲ್ಲಿಸುತ್ತಾರೆ. ಉನ್ನತಾಧಿಕಾರಿ
ಆದೇಶಾನುಸಾರ ನಿರ್ದಿಷ್ಟ ಅವಧಿಯಲ್ಲಿ ವರದಿ ಸಲ್ಲಿಸಬೇಕು. ಸಂಬಂಧಪಟ್ಟ ಕ್ಷೇತ್ರದಲ್ಲಿ ಪರಿಣತನಾದ
ಒಬ್ಬ ವ್ಯಕ್ತಿ ಸಮಗ್ರ ಅಧ್ಯಯನ ಮಾಡುವ ಮೂಲಕ ಬರಹ ರೂಪದಲ್ಲಿ ಸಲ್ಲಿಸುವುದು ವರದಿಂ. ವರದಿ ಸಲ್ಲಿಸುವವರು
ಸಾರ್ವಜನಿಕರಾಗಿರಬಹುದು, ಕ್ಷೇತ್ರ ತಜ್ಞ ಅಗಿರಬಹುದು. ವಿಭಾಗಾಧಿಕಾರಿ/ಶಾಖಾಧಿಕಾರಿ ಆಗಿರಬಹುದು,
ಸಂಶೋಧಕ ರಾಗಿರಬಹುದು. ಒಟ್ಟಾರೆ ಸಂಬಂಧಿತ ಸಮಸ್ಯೆಗೆ ಪರಿಹಾರ ನೀಡುವಲ್ಲಿ ಅರ್ಹತೆ ಪಡೆದವರಾಗಬೇಕಾಗುತ್ತದೆ.
ವರದಿಯ ಸ್ವರೂಪ:
ವರದಿ ನಿಖರವಾಗಿರಬೇಕು: ಇರುವ ವಿಷಯವನ್ನು ಯಥಾವತ್ತಾಗಿ
ನೀಡಬೇಕು; ಸಷ್ಟವಾಗಿರಬೇಕು: ಹೇಳುವ ವಿಷಯ ಗೊಂದಲಪೂರ್ಣ ಆಗಿರಬಾರದು, ಓದಿದ ತಕ್ಷಣ ಅರ್ಥವಾಗುವಂತೆ
ಇರಬೇಕು: ಸಂಕ್ಷಿಪ್ತವಾಗಿರಬೇಕು: ವರದಿ ಸಂಕ್ಷಿಪ್ತವಾಗಿದ್ದರೆ ಹೆಚ್ಚಿನ ವರದಿಗಳನ್ನು ಪತ್ರಿಕಗಳಲ್ಲಿ
ಪ್ರಕಟಿಸಲು ಸಾಧ್ಯ. ಜೊತೆಗೆ ಇಂದಿನ ಆಧುನಿಕ ಬದುಕಿನಲ್ಲಿ ಸಮಯಕ್ಕೆ ಹೆಚ್ಚಿನ ಪ್ರಾಶಸ್ಯ ಇದೆ. ವರದಿ
ಸಂಕ್ಷಿಪ್ತವಾಗಿದ್ದರೆ ಓದುಗರಿಗೆ ಸಮಯ ಉಳಿಯುತ್ತದೆ; ಆಕರ್ಷಣೀಯವಾಗಿರಬೇಕು: ಓದುಗರ ಗಮನ ಸೆಳೆಯುವಂತಹ
ಭಾಷೆ, ರಚನೆ, ವರದಿಗೆ ಪೂರಕ ಚಿತ್ರ ಸೂಕ್ತ ಶೀರ್ಷಿಕೆ ಹೊಂದಿರಬೇಕು: ಶೀರ್ಷಿಕೆ ವರದಿಯ ಮುಖ್ಯ ಭಾಗ.
ಸೂಕ್ತವಾದ, ಆಕರ್ಷಣೀಯವಾದ, ಸಾಧ್ಯವಾದಲ್ಲಿ ಪ್ರಾಸಬದ್ಧ ಪದಗಳಿಂದ ರಚಿತವಾದ ಶೀರ್ಷಿಕೆ ಬಳಸಬಹುದು.
ಶೀರ್ಷಿಕೆ ಚಿಕ್ಕದಾಗಿ ಹಾಗೂ ಚೊಕ್ಕವಾಗಿದ್ದರೆ ಚೆನ್ನ. ಓದುಗರ ಗಮನ ಮೊದಲಿಗೆ ಹೋಗುವುದು ಶೀರ್ಷಿಕೆಯ
ಕಡೆಗೆ. ಹೀಗಾಗಿ ಶೀರ್ಷಿಕೆ ಆಕರ್ಷಣೀಯವಾಗಿದ್ದರೆ ಓದುಗರು ವರದಿಯನ್ನು ಓದುವ ಸಾಧ್ಯತೆ ಹೆಚ್ಚು.
ಓದುಗರಿಗೆ ಕುತೂಹಲ ಮೂಡಿಸುವಂತಿರಬೇಕು: ಮೊದಲು
ಘಟನೆಯನ್ನು ಸಂಕ್ಷಿಪ್ತವಾಗಿ ಹೇಳಿ, ನಂತರ ಕಾರಣ, ಹಿನ್ನಲೆ ಒಳಗೊಂಡಿದ್ದರೆ ಓದುಗರ ಕುತೂಹಲ ಉಳಿಯಲು
ಸಾಧ್ಯ ವರದಿಗಳಲ್ಲಿ ಹಲವು ಬಗೆ: ವೃತ್ತಿಪರ ವರದಿಗಾರನೊಬ್ಬ ಕಾರ್ಯಕ್ರಮದ ವರದಿ ಬರೆಯುವುದು; ಸಾರ್ವಜನಿಕರು/ಸಂಸ್ಥೆಗಳು
ತಮ್ಮ ಸಮಾರಂಭದ ವರದಿ ಬರೆದು ಪತ್ರಿಕೆಗಳಲ್ಲಿ ಪ್ರಕಟಣೆಗಾಗಿ ಕೋರುವುದು; ಸಾರ್ವಜನಿಕರು ತಮ್ಮ ಕುಂದುಕೊರತೆ
ವಿವರಿಸಿ ವಾಚಕರವಾಣಿಗೆ ಬರೆಯುವಂತಹುದು ಇತ್ಯಾದಿ. ಇವೆಲ್ಲವೂ ಪತ್ರಿಕಾ ವರದಿಗಳೇ ಆಗಿದ್ದರೂ ಭಾಷೆಯ
ಬಳಕೆ ಮತ್ತು ನಿರೂಪಣೆ ವಿಧಾನಗಳಲ್ಲಿ ಭಿನ್ನತೆ ಗಮನಿಸಬಹುದು.
ಮಾದರಿ ವರದಿಗಳು-1
ಕನ್ನಡ ಅಭಿವೃದ್ಧಿ, ಪ್ರಾಧಿಕಾರ ಕನ್ನಡ ಅನುಷ್ಠಾನ
ಪ್ರಗತಿಯ
ಅನುಪಾಲನಾ ವರದಿ ಕರ್ನಾಟಕ ಸರ್ಕಾರ
ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ
(ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ
ಇಲಾಖೆ)

ಪ್ರಗತಿ ಪರಿಶೀಲನಾ ಸಭೆಯ ನಡಾವಳಿ ಸಂಬಂಧ ಅನುಪಾಲನಾ ವರದಿ
ಇವರಿಗೆ,
ಅಧ್ಯಕ್ಷರು
ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಬೆಂಗಳೂರು
ಮಾನ್ಯರೆ,
ಲೋಕೋಪಯೋಗಿ ಇಲಾಖೆಯ ಅಂತರ್ಜಾಲ ತಾಣವು ಸಂಪೂರ್ಣವಾಗಿ
ಆಂಗ್ಲಭಾಷೆಯಲ್ಲಿದ್ದು ಕೂಡಲೇ ಅದನ್ನು ಮರುವಿನ್ಯಾಸಗೊಳಿಸಿ ಹದಿನೈದು ದಿನಗಳ ಒಳಗಾಗಿ ಪ್ರಧಾನ ಪುಟ
ಕನ್ನಡದಲ್ಲಿರುವಂತೆಯೂ ಹಾಗೂ ಅಂತರ್ಜಾಲ ತಾಣದ ಸಂಪೂರ್ಣ ಮಾಹಿತಿಯು ಕನ್ನಡದಲ್ಲಿರುವಂತೆ ಅಭಿವೃದ್ಧಿ
ಪ್ರಾಧಿಕಾರವು ಆದೇಶಿಸಿತ್ತು ಅದರಂತೆ ನಡವಳಿಯಲ್ಲಿರುವ ವಿಷಯಕ್ಕೆ ಸಂಬಂಧಿಸಿದಂತೆ ಅನುಪಾಲನಾ ವರದಿಯನ್ನು
ಸಲ್ಲಿಸುತ್ತಿದ್ದೇವೆ.
1. ಲೋಕೋಪಯೋಗಿ ಇಲಾಖೆಯ ಅಂತರ್ಜಾಲ ತಾಣವು ಸಂಪೂರ್ಣವಾಗಿ
ಆಂಗ್ಲಭಾಷೆಯಲ್ಲಿ ಇದ್ದುದ್ದನ್ನು ಮರುವಿನ್ಯಾಸಗೊಳಿಸಿ ಅಂತರ್ಜಾಲ ತಾಣ ಪ್ರಧಾನ ಪುಟ ಸಂಪೂರ್ಣವಾಗಿ
ಕನ್ನಡದಲ್ಲಿ ವಿನ್ಯಾಸಗೊಳಿಸಲಾಗಿರುತ್ತದೆ. ಮತ್ತು ಇತರ ಅಂತರ್ಜಾಲ ಮಾಹಿತಿಯನ್ನು ಬಹುತೇಕ ಕನ್ನಡದಲ್ಲಿ
ಮಾಹಿತಿಯನ್ನು ನೀಡಲಾಗಿದೆ.
2. ಪ್ರಾಧಿಕಾರಕ್ಕೆ ಸಲ್ಲಿಸಬೇಕಿರುವ ಪೂರಕ ಮಾಹಿತಿಯನ್ನು
ಇನ್ನುಮುಂದೆ ಪ್ರತಿ ತಿಂಗಳು ಸಲ್ಲಿಸಲು ಕ್ರಮ ಕೈಗೊಳ್ಳಲಾಗಿರುತ್ತದೆ.
3. ಟೆಂಡರ್ ಜಾಹಿರಾತುಗಳು, ದರಪಟ್ಟಿಗಳು ಸಂಪೂರ್ಣವಾಗಿ
ಆಂಗ್ಲಮಯ ವಾಗಿದ್ದು ಕನ್ನಡ ದಿನಪತ್ರಿಕೆಗಳಲ್ಲಿ ಆಂಗ್ಲಭಾಷೆಯಲ್ಲೇ ಜಾಹಿರಾತು ನೀಡುತ್ತಿದ್ದುದರಿಂದ
ಕೂಡಲೇ ಕ್ರಮ ಕೈಗೊಂಡು ಟೆಂಡರ್ ಜಾಹಿರಾತುಗಳು, ದರಪಟ್ಟಿಗಳು ಎಲ್ಲವನ್ನೂ ಕನ್ನಡದಲ್ಲಿಯೇ ಬದಲಾಯಿಸಲಾಗಿದೆ.
ಕೆಶಿಪ್ ವತಿಯಿಂದ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಟೆಂಡರ್ಗಳನ್ನು ಕರೆಯುತ್ತಿದ್ದು, ಕಾರಣ ಆಂಗ್ಲ
ಭಾಷೆಯಲ್ಲಿ ಜಾಹಿರಾತುಗಳನ್ನು ನೀಡಲಾಗುತ್ತಿದೆ. ಸದರಿ ಸೂಚನೆಯಂತೆ ಇನ್ನು ಮುಂದೆ ಕನ್ನಡದಲ್ಲೂ ಸಹ
ಪ್ರಕಟಿಸಲು ಕ್ರಮ ಕೈಗೊಳ್ಳಲಾಗುವುದು. ಕೆಶಿಪ್ ವತಿಯಿಂದ ಯಾವುದೇ ದರಪಟ್ಟಿ ತಯಾರಿಸಿರುವುದಿಲ್ಲ ಮತ್ತು
ಪ್ರಕಟಿಸಿರುವುದಿಲ್ಲ.
4. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಧಾನವಾಗಿ
ಕನ್ನಡ ನಾಮಫಲಕಗಳು, ಮಾರ್ಗಸೂಚಿಗಳು ಮತ್ತು ಕಾರ್ಯಸೂಚಿಗಳ ಫಲಕಗಳನ್ನ ಹಾಕುವಂತೆ ಇಲಾಖೆಯ ಅಪರಮುಖ್ಯ
ಕಾರ್ಯದರ್ಶಿಗಳು ನಿರ್ದೇಶನ ನೀಡಲಾಗಿದ್ದು ಹಾಗೆಯೇ ಟೋಲ್ಗಳಲ್ಲಿ ಕನ್ನಡ ಬಲ್ಲ ನೌಕರರನ್ನು ನೇಮಿಸಿಕೊಳ್ಳಲಾಗಿದೆ.
ಮತ್ತು ಟೋಲ್ಗಳಲ್ಲಿ ಕನ್ನಡ ನಾಮಫಲಕಗಳನ್ನು ಹಾಕುವಂತೆ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಲಾಗಿದೆ.
ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನಾ ವತಿಯಿಂದ ಕೈಗೊಳ್ಳಲಾದ ರಸ್ತೆಗಳಲ್ಲಿ ಕನ್ನಡ ನಾಮಫಲಕ
ಮತ್ತು ಕಾರ್ಯಸೂಚಿಗಳ ಫಲಕ ಅಳವಡಿಸಲಾಗಿದೆ. ಕೆಶಿಪ್ ವತಿಯಿಂದ ಯಾವುದೇ ಟೋಲ್ಗಳನ್ನು ನಿರ್ವಹಿಸಲಾಗುತ್ತಿರುವುದಿಲ್ಲ.
5. ರಾಜ್ಯದಾದ್ಯಂತ ಲೋಕೋಪಯೋಗಿ ಇಲಾಖೆಯಲ್ಲಿ
ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ/ಗುತ್ತಿಗೆ ಆಧಾರದ ಸಿಬ್ಬಂದಿ ವರ್ಗದವರಲ್ಲಿ ಗ್ರೂಪ್ ಸಿ
ಮತ್ತು ಗ್ರೂಪ್ ಡಿ ನೌಕರರು ಡಾ. ಸರೋಜಿನಿ ಮಹಿಷಿ ವರದಿಯನ್ವಯ ಶೇ.100ರಷ್ಟು ಕನ್ನಡಿಗರೇ ಇರಬೇಕಿದ್ದು
ಈ ಬಗ್ಗೆ ರಾಜ್ಯ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿ ವರದಿಯನ್ನು ಪ್ರಾಧಿಕಾರಕ್ಕೆ ಸಲ್ಲಿಸತಕ್ಕದ್ದು.
ಹೊರಗುತ್ತಿಗೆ ಆಧಾರದ ಮೇಲೆ ಕೆಶಿಪ್ ವತಿಯಿಂದ ಗ್ರೂಪ್ 'ಸಿ' ಮತ್ತು 'ಡಿ' ನೌಕರನನ್ನು ಆದ್ಯತೆ ಮೇರೆಗೆ
ಕನ್ನಡಿಗರ ಸೇವೆಯನ್ನು ಪಡೆಯಲಾಗಿರುತ್ತದೆ.
6. ಲೋಕೋಪಯೋಗಿ ಇಲಾಖೆಯ ಇಂಟರ್ನಲ್ ಪ್ರಾಜೆಕ್ಟ್
ಮಾನಿಟರಿಂಗ್ ಸಿಸ್ಟಂ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದ್ದು ಅದು ಆಂಗ್ಲಭಾಷೆಯಲ್ಲಿದ್ದು, ಈಗಾಗಲೇ
ಅದನ್ನು ಬದಲಾಯಿಸಿ ಕನ್ನಡದಲ್ಲಿರುವಂತೆ ಕನ್ನಡದಲ್ಲಿಯೇ ವಿನ್ಯಾಸಗೊಳಿಸಲಾಗಿರುತ್ತದೆ. ಬಾಕಿ ವಿವರಗಳನ್ನು
ಆಂಗ್ಲ ಭಾಷೆಯಿಂದ ಕನ್ನಡ ಭಾಷೆಗೆ ತಂತ್ರಾಂಶದಲ್ಲಿ ವಿನ್ಯಾಸಗೊಳಿಸಲಾಗಿದೆ.
7. ಸಾರ್ವಜನಿಕರಿಂದ ಸ್ವೀಕರಿಸಿದ ದೂರಗಳನ್ವಯ
ದೂರಿಗೆ ಸಂಬಂಧಿಸಿದಂತೆ ಕನ್ನಡದಲ್ಲಿಯೇ ಉತ್ತರಿಸಲಾಗುತ್ತಿದೆ.
ಸಹಿ/-
ಯೋಜನಾ ನಿರ್ದೇಶಕರು
ಮಾದರಿ ವರದಿಗಳು-2ಕಾರ್ಯಕ್ರಮ ವರದಿ ಕರ್ನಾಟಕ ಸರ್ಕಾರ
ಕಾಲೇಜು ಶಿಕ್ಷಣ ಇಲಾಖೆ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಸಾಧನಕೇರಿ ,ಧಾರವಾಡ
ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮದ ವರದಿ
ದಿನಾಂಕ :೦೫/೦೪/೨೦೨೫
ಸ್ಥಳ : ಧಾರವಾಡ
ನಮ್ಮ ಕಾಲೇಜಿನಲ್ಲಿ ಪ್ರತಿವರ್ಷದಂತೆ ಈ ವರ್ಷವೂ
ದಿನಾಂಕ 5-6-2022 ರಂದು ಕಾಲೇಜು ವಾರ್ಷಿಕೋತ್ಸವ ಸಮಾರಂಭವನ್ನು ಆಚರಿಸಲಾಯಿತು. ಪ್ರಾರ್ಥನೆಯೊಂದಿಗೆ
ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಪ್ರಥಮ ಬಿ.ಎ. ವಿದ್ಯಾರ್ಥಿನಿ ಕುಮಾರಿ ಮಾಲಿನಿ ಮತ್ತು ತಂಡದವರು
ಪ್ರಾರ್ಥನೆ ಮಾಡಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಶಾಂತರವರು ಅತಿಥಿಗಳನ್ನು ಸ್ವಾಗತಿಸಿದರು.
ಆಂಗ್ಲಭಾಷಾ ಅಧ್ಯಾಪಕರಾದ ಪ್ರೊಫೆಸರ್ ಸುರೇಂದ್ರನ್ರವರು ಅತಿಥಿಗಳನ್ನು ಪರಿಚಯಿಸಿದರು. ದೀಪ ಬೆಳಗಿಸುವುದರ
ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಪ್ರಾಂಶುಪಾಲರಾದ ಪ್ರೊ. ರಾಮಕೃಷ್ಣಪ್ಪ ಅವರು ಪ್ರಾಸ್ತಾವಿಕ
ನುಡಿಗಳನ್ನಾಡಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾನ್ಯ ಶಾಸಕರಾದ ಅಂಕೇಗೌಡರು
ಸರ್ಕಾರದ ವತಿಯಿಂದ ವಿದ್ಯಾರ್ಥಿಗಳಿಗೆ ದೊರೆಯುವ ವಿದ್ಯಾರ್ಥಿ ವೇತನ ಹಾಗೂ ಇತರೇ ಸೌಲಭ್ಯಗಳನ್ನು ಕುರಿತಂತೆ
ತಿಳುವಳಿಕೆ ನೀಡಿದರು ಮತ್ತು ವಿದ್ಯಾರ್ಥಿಗಳಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗ
ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು. ಕಾರ್ಯಕ್ರಮಕ್ಕೆ
ಆಗಮಿಸಿದ್ದ ಮತ್ತೊಬ್ಬ ಅತಿಥಿಗಳಾದ ಶ್ರೀಯುತ ಮಧುಸೂದನ್ರವರು ವಿದ್ಯಾರ್ಥಿ ಜೀವನವನ್ನು ಮೆಲುಕು ಹಾಕುತ್ತಾ
ವಿದ್ಯಾರ್ಥಿಗಳಿಗೆ ಹಿತವಚನವನ್ನು ನೀಡಿದರು.
ಕಾಲೇಜಿನ ವಿದ್ಯಾರ್ಥಿಗಳು ವೈವಿಧ್ಯಮಯವಾದ ಸಾಂಸ್ಕೃತಿಕ
ಕಾರ್ಯಕ್ರಮಗಳನ್ನು ನೀಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನಗಳನ್ನು
ವಿತರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಮಕೃಷ್ಣಪ್ಪನವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ವಾಣಿಜ್ಯ ವಿಭಾಗದ ಪ್ರೊ. ಶ್ರೀನಿವಾಸ ಪ್ರಸಾದ್ರವರು ಕಾರ್ಯಕ್ರಮದ ಕೊನೆಯಲ್ಲಿ ವಂದನೆಗಳನ್ನು ಸಲ್ಲಿಸಿದರು.
ಅದನ್ನು ಕಾಲೇಜಿನ ವೆಬ್ಸೈಟ್ನಲ್ಲಿ ಪ್ರಕಡಿಸಲು ನಿರ್ಣಯಿಸಲಾಯಿತು. ವಂದನಾರ್ಪಣೆಯ ನಂತರ ನಾಡಗೀತೆಯನ್ನು
ಹಾಡಿ ವಿದ್ಯುಕ್ತವಾಗಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ಆನಂತರದಲ್ಲಿ ಎಲ್ಲರಿಗೂ ಲಘು ಉಪಹಾರವನ್ನು ಏರ್ಪಾಟು
ಮಾಡಲಾಗಿತ್ತು. ಉಪಹಾರದ ವೇಳೆ ಆಥಿತಿಗಳು ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು
ಕಾರ್ಯಕ್ರಮವನ್ನು ಚೆನ್ನಾಗಿ ಸಂಘಟಿಸಿದ್ದೀರಿ ಎಂದು ಶ್ಲಾಘಿಸಿದರು. ನಂತರ ಅತಿಥಿಗಳಿಂದ ವಿಸಿಟರ್ಸ್
ಪುಸ್ತಕದಲ್ಲಿ ಅವರ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು. ಕೊನೆಯಲ್ಲಿ ಎಲ್ಲರ ಸಾಮೂಹಿಕ ಛಾಯಾಚಿತ್ರ
ತೆಗೆಸಲಾಯಿತು.
ಪ್ರೊ ಭಾಗ್ಯಶ್ರೀ ಬಿ.ವಿ.ಸಂಚಾಲಕರು, ಸಾಂಸ್ಕೃತಿಕ ಸಮಿತಿ.
ಮಾದರಿ ವರದಿಗಳು-3
ಪತ್ರಿಕಾ ವರದಿ
ಕ್ರೈಸ್ಟ್ ಇನ್ಸಿಟ್ಯೂಟ್ ಫಾರ್ ಅಡ್ವಾನ್ಸ್ ಸ್ಟಡೀಸ್
'
ಚಂದಾಪುರ, ಹೊಸೂರು ರಸ್ತೆ, ಬೆಂಗಳೂರು
ಉದ್ಯೋಗ ಮೇಳದ ವರದಿ
ದಿನಾಂಕ :೧೨/೧೨/೨೦೨೫
ಸ್ಥಳ : ಬೆಂಗಳೂರು
ನಮ್ಮ ಕಾಲೇಜಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ
ದಿನಾಂಕ 11-6-2022 ರಂದು ಕಾಲೇಜಿನ ಬಿ.ಕಾಂ ಹಾಗೂ ಎಂ.ಬಿ.ಎ ವಿದ್ಯಾರ್ಥಿಗಳಿಗೆ ಉದ್ಯೋಗಾವ ಕಾಶಗಳನ್ನು
ಕಲ್ಪಿಸುವ ಜಾಬ್ ಫೇರ್ ಅನ್ನು ಆಯೋಜಿಸಲಾಗಿತ್ತು. ಎಚ್. ಡಿ.ಎಫ್. ಸಿ., ಕೊಟಕ್ ಮಹೀಂದ್ರ ಬ್ಯಾಂಕ್,
ಲ್ಯಾಂಡ್ ಮಾರ್ಕ್ಗ್ರೂಪ್, ಇನ್ಫೋಸಿಸ್, ಸಿನೈಡರ್ ಎಲೆಕ್ಟಿಕ್, ರಾನ್ಸ್ಟಡ್, ಆಕ್ಸಿಸ್ ಬ್ಯಾಂಕ್,
ಟೀಮ್ ಲೀಸ್, ಪಿನ್ ಕ್ಲಿಕ್, ಇನ್ಟೆಲಿ ಪಾಥ್, ಕಾರ್-24, ಅಪೋಲೋ ಫಾರಸಿ, ಮುಥಟ್ ಫೈನಾನ್ಸ್, ಜಿ-ಗ್ರೂಪ್.
ಕಿರೋಸ್ಕರ್ ಹಾಗೂ ಸ್ವಿಗಿ ಕಂಪನಿಗಳು ಸದರಿ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದವು. ಚೈಲ್ಡ್ ಹುಡ್ ಟು
ಲೈವಿಹುಡ್ನ ಸಹಕಾರದೊಂದಿಗೆ ಇಂಡಿಗೋ ಮ್ಯೂಸಿಕ್ ಪಾಲು ದಾರಿಕೆಯಲ್ಲಿ 'ರೈಸ್ -2022' ಎಂಬ ಹೆಸರಿನಲ್ಲಿ
ನಡೆದ ಜಾಬ್ ಮೇಳ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.
ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.
ಪ್ರಥಮ ಬಿ.ಕಾಂ. ವಿದ್ಯಾರ್ಥಿನಿಯರಾದ ವಿನುತ ಫರ್ನಾಂಡಿಸ್ ಮತ್ತು ಉಮ್ಮೆ ಸಲ್ಮಾ ಪ್ರಾರ್ಥನೆ ಮಾಡಿದರು.
ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಸವಿತ ರವಿಶಂಕರ್ ಅವರು ಪಾಲುದಾರಿಕೆಯ ಕಂಪನಿಯ ಪ್ರತಿನಿಧಿಗಳನ್ನು
ಸ್ವಾಗತಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಕವಿಶೇಖರ್ ಅವರು ಅತಿಥಿಗಳನ್ನು ಪರಿಚಯಿಸಿದರು.
ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಪ್ರಾಂಶುಪಾಲರಾದ ರೆವರಂಡ್ ಫಾದರ್
ದಾವಿದಪ್ಪ ಎಸ್. ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಂಪನಿಗಳ ವತಿಯಿಂದ ವಿದ್ಯಾರ್ಥಿಗಳಿಗೆ ದೊರೆಯುವ
ಉದ್ಯೋಗಾವಕಾಶಗಳನ್ನು ಕುರಿತಂತೆ ಸಂಸ್ಥೆಯ ನಿರ್ದೇಶಕರಾದ ರೆವರೆಂಡ ಫಾದರ್ ಜೆ. ತಂಗೈ ಅವರು ತಿಳುವಳಿಕೆ
ನೀಡಿದರು. ಮತ್ತು ವಿದ್ಯಾರ್ಥಿಗಳಿಗೆ ಇಂತಹ ಸುಸಂದರ್ಭದಲ್ಲಿ ಸೌಲಭ್ಯಗಳ ಸದುಪಯೋಗ ಮಾಡಿಕೊಳ್ಳುವಂತೆ
ಸಲಹೆ ನೀಡಿದರು.
ಹೆಸರಾಂತ ವಿವಿಧ ಕಂಪನಿಯ ಪ್ರತಿನಿಧಿಗಳು ಆಸಕ್ತ
ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು. ವಾಣಿಜ್ಯ ಮತ್ತು ಎಂ.ಬಿ.ಎ ವಿಷಯವನ್ನು ಅಭ್ಯಾಸ ಮಾಡುತ್ತಿರುವ
ವಿದ್ಯಾರ್ಥಿಗಳಿಗೆ ಇರುವ ಉದ್ಯೋಗವಕಾಶಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ವಾಣಿಜ್ಯ
ಅಧ್ಯಯನ ವಿಭಾಗದ ಅಧ್ಯಾಪಕರು ವಂದನೆಗಳನ್ನು ಸಲ್ಲಿಸಿದರು. ವಂದನಾರ್ಪಣೆಯ ನಂತರ ನಾಡಗೀತೆಯನ್ನು ಹಾಡಿ
ವಿದ್ಯುಕ್ತವಾಗಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. ಅಂತಿಮವಾಗಿ ಈ ಮೇಳದಲ್ಲಿ ನಮ್ಮ ಕಾಲೇಜಿನ
123 ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ವಿವಿಧ ಕಂಪನಿಗಳಲ್ಲಿ ಉದ್ಯೋಗಾವಕಾಶ ದೊರೆಯಿತು.
ಪ್ರೋ. ಸುಮಲತಾ ಅರ್ ಕೆವಿದ್ಯಾರ್ಥಿ ಸಂಚಾಲಕಿಕ್ರೈಸ್ತ ಇನ್ಸಿಟ್ಯೂಟ್ ಫಾರ್ ಅಡ್ವಾನ್ಸ್ ಸ್ಟಡೀಸ್,ಬೆಂಗಳೂರು
ಮಾದರಿ ವರದಿಗಳು-4
ತ್ರಿವೇಣಿ ಇನ್ಸ್ಟಿಟ್ಯೂಷನ್ಸ್,ಬೆಂಗಳೂರುಕನ್ನಡ ರಾಜ್ಯೋತ್ಸವ ಸಮಾರಂಭ – ವರದಿ
ದಿನಾಂಕ: 1 ನವೆಂಬರ್ 2025
ಸ್ಥಳ : ಬೆಂಗಳೂರು
ತ್ರಿವೇಣಿ ಇನ್ಸ್ಟಿಟ್ಯೂಷನ್ಸ್ನಲ್ಲಿ 1 ನವೆಂಬರ್
2025 ರಂದು 70ನೇ ಕನ್ನಡ ರಾಜ್ಯೋತ್ಸವವನ್ನು ಭಾವಪೂರ್ಣವಾಗಿ ಮತ್ತು ಸಾಂಸ್ಕೃತಿಕ ವೈಭವದಿಂದ ಆಚರಿಸಲಾಯಿತು.
ಕಾರ್ಯಕ್ರಮವು ಬೆಳಿಗ್ಗೆ 9:30ಕ್ಕೆ ಪ್ರಾರ್ಥನೆಗೀತೆಯಿಂದ ಪ್ರಾರಂಭಗೊಂಡಿತು. ವಿದ್ಯಾರ್ಥಿಗಳು ಹಾಗೂ
ಅಧ್ಯಾಪಕರ ಸಕ್ರಿಯ ಭಾಗವಹಿಸುವಿಕೆಯಿಂದ ಕಾರ್ಯಕ್ರಮಕ್ಕೆ ವಿಶೇಷ ವೈಭವ ಉಂಟಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ
ಡಾ.ಹರಿತಾ ಎಂ ಅವರು. ವಹಿಸಿದ್ದರು. ಮಾತನಾಡಿದ ಅವರು ಕನ್ನಡ ಭಾಷೆಯ ಪರಂಪರೆ, ಮಹತ್ವ ಮತ್ತು ಯುಗಯುಗಾಂತರಗಳ
ಸಂಸ್ಕೃತಿಚೇತನವನ್ನು ವಿವರಿಸಿದರು. ಕನ್ನಡವನ್ನು ಕೇವಲ ಭಾಷೆಯಾಗಿ ಮಾತ್ರವಲ್ಲದೇ ಜೀವನದ ಮೌಲ್ಯವನ್ನು
ಹೆಚ್ಚಿಸುವ ಸಂಸ್ಕೃತಿಯಂತೆ ಅಳವಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕನ್ನಡ ವಿಭಾಗದ ಆಶ್ರಯದಲ್ಲಿ ವಿವಿಧ ಸಾಂಸ್ಕೃತಿಕ
ಕಾರ್ಯಕ್ರಮಗಳು ಜರುಗಿದವು. ವಿದ್ಯಾರ್ಥಿಗಳಿಂದ ಕನ್ನಡ ನಾಡಗೀತೆ, ಜನಪದ ನೃತ್ಯ, ತಾಲಮದ್ದಳೆ, ಕಾವ್ಯದ
ಪಠಣ, ನಾಟಕ ಮತ್ತು ಭಾಷಣ ಸ್ಪರ್ಧೆಗಳು ಕಾರ್ಯಕ್ರಮಕ್ಕೆ ಕಂಗೊಳ ನೀಡಿದವು. ಕನ್ನಡ ಸಾಹಿತ್ಯ, ಕಾವ್ಯ
ಪರಂಪರೆ ಹಾಗೂ ಕರ್ನಾಟಕದ ವೀರತೆ, ಸಂಸ್ಕೃತಿ, ಕಲೆ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಹಲವು ಅಂಶಗಳನ್ನು
ವಿದ್ಯಾರ್ಥಿಗಳು ಮನಮುಟ್ಟುವಂತೆ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಕನ್ನಡ ವಿಭಾಗದ ಉಪನ್ಯಾಸಕರು
ಕನ್ನಡದ ಸಂವೃದ್ಧ ಪರಂಪರೆ, ವಿಜ್ಞಾನ–ಸಾಹಿತ್ಯ–ಕಲೆ ಕ್ಷೇತ್ರಗಳಲ್ಲಿ ಕನ್ನಡನಾಡಿನ ಕೊಡುಗೆಗಳು ಹಾಗು
ರಾಜ್ಯೋತ್ಸವದ ಐತಿಹಾಸಿಕ ಹಿನ್ನೆಲೆಯ ಕುರಿತು ಮಾಹಿತಿಯನ್ನು ಹಂಚಿಕೊಂಡರು.
ಸರ್ವೋತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ
ಪ್ರಶಸ್ತಿಪತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಂತ್ಯದಲ್ಲಿ ಧನ್ಯವಾದಗಳನ್ನು ಸಲ್ಲಿಸಿ, ಎಲ್ಲರೂ
ಸಮೂಹವಾಗಿ 'ನಾದಗೀತೆ' ಹಾಡಿದರು.
ಕನ್ನಡ ರಾಜ್ಯೋತ್ಸವವನ್ನು ಕಾಲೇಜಿನಲ್ಲಿ ಅರ್ಥಪೂರ್ಣವಾಗಿ
ಮತ್ತು ಹರ್ಷಭರವಸದಿಂದ ಆಚರಿಸಲಾಗಿದ್ದು, ಇದು ವಿದ್ಯಾರ್ಥಿಗಳಲ್ಲಿ ಭಾಷಾ ಪ್ರೀತಿ, ನಾಡು-ನಾಡಿನ ಸಂಸ್ಕೃತಿ
ಹಾಗೂ ಪರಂಪರೆಯ ಅರಿವು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.
ಕೃಷ್ಣಮೂರ್ತಿ ಜಿ,ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ
ಮಾದರಿ ವರದಿಗಳು-5
ತ್ರಿವೇಣಿ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್
ಮ್ಯಾನೇಜ್ಮೆಂಟ್, ಬೆಂಗಳೂರುಸಾಂಸ್ಕೃತಿಕ ಚಟುವಟಿಕೆಗಳ ವಾರ್ಷಿಕ ವರದಿಶೈಕ್ಷಣಿಕ ವರ್ಷ : 2023–24
ದಿನಾಂಕ: 1 ನವೆಂಬರ್ 2025
ಈ ಶೈಕ್ಷಣಿಕ ವರ್ಷದಲ್ಲಿ ನಮ್ಮ ತ್ರಿವೇಣಿ ಇನ್ಸ್ಟಿಟ್ಯೂಟ್
ಆಫ್ ಕಾಮರ್ಸ್ ಆಂಡ್ ಮ್ಯಾನೇಜ್ಮೆಂಟ್, ಬೆಂಗಳೂರಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಅತ್ಯಂತ ಯಶಸ್ವಿಯಾಗಿ
ಮತ್ತು ಉತ್ಸಾಹಭರಿತವಾಗಿ ನಡೆಯಿತು. ಸಾಂಸ್ಕೃತಿಕ ಸಮಿತಿ, ಕನ್ನಡ ವಿಭಾಗ ಮತ್ತು ಇತರ ವಿಭಾಗಗಳ ಅಧ್ಯಾಪಕರು
ಹಾಗೂ ವಿದ್ಯಾರ್ಥಿ ಸಂಯೋಜಕರು ಕೈಜೋಡಿಸಿ ವರ್ಷಪೂರ್ತಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯೋಜಿಸಿ
ಜಾರಿಗೆ ತಂದರು. ವಿದ್ಯಾರ್ಥಿಗಳಲ್ಲಿರುವ ಕಲೆ, ಸಾಹಿತ್ಯ, ಸಂಗೀತ, ನೃತ್ಯ ಮತ್ತು ನಾಟಕ ಕೌಶಲ್ಯಗಳನ್ನು
ಹೊರಹೊಮ್ಮಿಸಲು ಈ ಚಟುವಟಿಕೆಗಳು ಪರಿಣಾಮಕರ್ತವಾಗಿವೆ.
ವಾರ್ಷಿಕ ಚಟುವಟಿಕೆಗಳ ಆರಂಭ ಫ್ರೆಶರ್ಸ್
ಡೇ ಕಾರ್ಯಕ್ರಮದಿಂದ ಜರುಗಿತು. ಹೊಸ ವಿದ್ಯಾರ್ಥಿಗಳು ಗಾಯನ, ನೃತ್ಯ ಮತ್ತು ಹಾಸ್ಯನಾಟಕಗಳ ಮೂಲಕ
ತಮ್ಮ ಕಲಾ ಕೌಶಲ್ಯವನ್ನು ಪ್ರದರ್ಶಿಸಿದರು. ಅದರ ನಂತರ ಸ್ವಾತಂತ್ರ್ಯ ದಿನಾಚರಣೆ, ಶಿಕ್ಷಕರ ದಿನ,
ಗಾಂಧಿ ಜಯಂತಿ ಮತ್ತು ಕನ್ನಡ ರಾಜ್ಯೋತ್ಸವವನ್ನು ಭಾವಪೂರ್ಣವಾಗಿ ಆಚರಿಸಲಾಯಿತು. ಭಾಷಣ, ಕವನ ಪಠಣ,
ನಾಡಗೀತೆ, ಜಾನಪದ ನೃತ್ಯ ಹಾಗೂ ರಾಜ್ಯೋತ್ಸವ ಕ್ವಿಜ್ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಭಾಷಾ ಮತ್ತು
ಸಾಂಸ್ಕೃತಿಕ ಜಾಗೃತಿಯನ್ನು ಉಂಟುಮಾಡಿದವು.
ಈ ವರ್ಷ ಕಾಲೇಜಿನಲ್ಲಿ ತಾಲೆಂಟ್ ಹಂಟ್–2024
ಮತ್ತು ಯುವೋತ್ಸವ–2025 ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ವಿದ್ಯಾರ್ಥಿಗಳು
ಫೋಕ್ ಡ್ಯಾನ್ಸ್, ಪಾಶ್ಚಾತ್ಯ ನೃತ್ಯ, ನಾಟಕ, ಏಕಪಾತ್ರಾಭಿನಯ, ಸಂಗೀತ ವಾದ್ಯವಿನೋದ, ರಂಗಭೂಮಿ ಪ್ರದರ್ಶನ,
ಚಿತ್ರಕಲೆ, ಪೋಸ್ಟರ್ ತಯಾರಿ, ಫ್ಯಾಷನ್ ಶೋ ಮೊದಲಾದ ಹಲವು ವಿಭಾಗಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು
ತೋರಿದರು. ಸಾಹಿತ್ಯ ವಿಭಾಗದಲ್ಲಿ ಪ್ರಬಂಧ ಸ್ಪರ್ಧೆ, ವಾಗ್ವಾದ, ಕಥೆ ಹೇಳುವಿಕೆ, ಕವನ ಬರವಣಿಗೆ ಮತ್ತು
ಭಾಷಣ ಸ್ಪರ್ಧೆಗಳು ನಡೆದವು.
ವಿದ್ಯಾರ್ಥಿಗಳ ಕಲಾ ಕೌಶಲ್ಯವನ್ನು ಉತ್ತೇಜಿಸಲು
ನೃತ್ಯ–ಸಂಗೀತ ಕಾರ್ಯಾಗಾರಗಳು, ನಾಟಕ ತರಬೇತಿಗಳು ಹಾಗೂ ಕಲಾ ಪ್ರದರ್ಶನಗಳನ್ನು ಕೂಡ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ ಅವರ ಸೃಜನಶೀಲತೆಯನ್ನು
ವೃದ್ಧಿಸಿದವು. ವರ್ಷಾಂತ್ಯದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಪ್ರಮಾಣಪತ್ರ, ಪದಕ ಮತ್ತು ಟ್ರೋಫಿಗಳನ್ನು
ಪ್ರಧಾನ ಮಾಡಲಾಯಿತು. ಪ್ರಾಂಶುಪಾಲರು ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿ ಇನ್ನಷ್ಟು ಸಾಂಸ್ಕೃತಿಕ
ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಪ್ರೋತ್ಸಾಹಿಸಿದರು.
ಒಟ್ಟಾರೆಯಾಗಿ, 2024–25ರ ಸಾಂಸ್ಕೃತಿಕ ಚಟುವಟಿಕೆಗಳು
ಕಾಲೇಜಿನ ಸಾಂಸ್ಕೃತಿಕ ವಾತಾವರಣವನ್ನು ಶ್ರೀಮಂತಗೊಳಿಸಿವೆ. ವಿದ್ಯಾರ್ಥಿಗಳ ಉತ್ಸಾಹಭರಿತ ಪಾಲ್ಗೊಳ್ಳುವಿಕೆ,
ಸಾಂಸ್ಕೃತಿಕ ಸಮಿತಿಯ ಸಮರ್ಪಿತ ಯೋಜನೆ ಹಾಗೂ ಅಧ್ಯಾಪಕರ ಮಾರ್ಗದರ್ಶನದಿಂದ ಈ ಚಟುವಟಿಕೆಗಳು ಅತ್ಯಂತ
ಯಶಸ್ವಿಯಾಗಿ ನೆರವೇರಿವೆ.
ಪ್ರೊ ರಾಜೇಶ್ವರಿ ಎಸ್.ಎನ್.ಸಂಚಾಲಕರು, ಸಾಂಸ್ಕೃತಿಕ ಸಮಿತಿ.
ಮಾದರಿ ವರದಿಗಳು-6
ತ್ರಿವೇಣಿ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್
ಮ್ಯಾನೇಜ್ಮೆಂಟ್, ಬೆಂಗಳೂರು
ಕ್ರೀಡಾ ಚಟುವಟಿಕೆಗಳ ವಾರ್ಷಿಕ ವರದಿ – 2024–25
ದಿನಾಂಕ : 12/03/2025
ಸ್ಥಳ : ಬೆಂಗಳೂರು
ಈ ಶೈಕ್ಷಣಿಕ ವರ್ಷ 2024–25ರಲ್ಲಿ ನಮ್ಮ ತ್ರಿವೇಣಿ
ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಆಂಡ್ ಮ್ಯಾನೇಜ್ಮೆಂಟಿನಲ್ಲಿ ಕ್ರೀಡಾ ಚಟುವಟಿಕೆಗಳು ಅತ್ಯಂತ ಯಶಸ್ವಿಯಾಗಿ
ಮತ್ತು ಚೈತನ್ಯಭರಿತವಾಗಿಯೂ ನಡೆಯಿತು. ಕಾಲೇಜಿನ ಕ್ರೀಡಾ ಸಮಿತಿಯು ದೈಹಿಕ ಶಿಕ್ಷಣ ನಿರ್ದೇಶಕರು,
ಅಧ್ಯಾಪಕರು ಮತ್ತು ವಿದ್ಯಾರ್ಥಿ ಸಂಯೋಜಕರ ಸಹಕಾರದೊಂದಿಗೆ ಎಲ್ಲಾ ಕ್ರೀಡಾ ಕಾರ್ಯಕ್ರಮಗಳನ್ನು ಯೋಜಿಸಿ
ಪರಿಣಾಮಕಾರಿಯಾಗಿ ಜಾರಿಗೆ ತಂದಿತು. ವಿದ್ಯಾರ್ಥಿಗಳ ದೈಹಿಕ ಆರೋಗ್ಯ, ತಂಡಭಾವನೆ, ಶಿಸ್ತು, ಸ್ಪರ್ಧಾತ್ಮಕ
ಮನೋಭಾವ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಅನೇಕ ಸ್ಪರ್ಧೆಗಳು ಮತ್ತು ಕ್ರೀಡಾ ತರಬೇತಿಗಳನ್ನು
ಆಯೋಜಿಸಲಾಯಿತು.
ಈ ವರ್ಷಿನ ವಾರ್ಷಿಕ ಕ್ರೀಡಾಕೂಟ–2025 ಅತ್ಯಂತ
ವಿಜೃಂಭಣೆಯಿಂದ ಜರುಗಿತು. 100 ಮೀ., 200 ಮೀ., 400 ಮೀ. ಓಟ, ರಿಲೇ ಓಟ, ಲಾಂಗ್ ಜಂಪ್, ಶಾಟ್ಪುಟ್,
ಡಿಸ್ಕಸ್ ತ್ರೋ, ಜಾವೆಲಿನ್ ತ್ರೋ ಮೊದಲಾದ ಅಥ್ಲೆಟಿಕ್ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ
ಭಾಗವಹಿಸಿ ತಮ್ಮ ಕ್ರೀಡಾ ಕೌಶಲ್ಯ ಪ್ರದರ್ಶಿಸಿದರು. ವಿವಿಧ ವರ್ಗಗಳಲ್ಲಿನ ಸ್ಪರ್ಧೆಗಳು ವಿದ್ಯಾರ್ಥಿಗಳಿಗೆ
ಆರೋಗ್ಯ ಮತ್ತು ಚೈತನ್ಯವನ್ನು ನೀಡಿದವು.
ಶೈಕ್ಷಣಿಕ ವರ್ಷದ ಅವಧಿಯಲ್ಲಿ ಕಾಲೇಜಿನಲ್ಲಿ
ಕ್ರಿಕೆಟ್, ವಾಲಿಬಾಲ್, ಫುಟ್ಬಾಲ್, ಕಬಡ್ಡಿ, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಚೆಸ್ ಹಾಗೂ ತೇರು–ಏಟು
(Tug of War) ಸ್ಪರ್ಧೆಗಳು ಆಯೋಜಿಸಲ್ಪಟ್ಟವು. ಈ ಆಟಗಳು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಹಕಾರ ಮತ್ತು
ಸಮೂಹದಲ್ಲಿ ಕೆಲಸ ಮಾಡುವ ಗುಣಗಳನ್ನು ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸಿವೆ. ವಿಶೇಷವಾಗಿ, ತಂಡದ
ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಉತ್ತಮ ಸಂಬಂಧ ಮತ್ತು ಕ್ರೀಡಾ ಮನೋಭಾವ ವೃದ್ಧಿಸುವಲ್ಲಿ ನೆರವಾದವು.
ಇದರ ಜೊತೆಗೆ ನಮ್ಮ ಕಾಲೇಜಿನ ತಂಡಗಳು ಇಂಟರ್-ಕಾಲೇಜು
ಮತ್ತು ವಿಶ್ವವಿದ್ಯಾಲಯ ಮಟ್ಟದ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಿವೆ. ಕ್ರಿಕೆಟ್ ಮತ್ತು ವಾಲಿಬಾಲ್
ತಂಡಗಳು ವಲಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಗಳಿಸಿ ಕಾಲೇಜಿಗೆ ಹೆಗ್ಗಳಿಕೆ ತಂದುಕೊಟ್ಟಿವೆ. ಕೆಲವರು
ಅಥ್ಲೆಟಿಕ್ ವಿಭಾಗದಲ್ಲಿ ವಿಶ್ವವಿದ್ಯಾಲಯ ಮಟ್ಟಕ್ಕೆ ಆಯ್ಕೆಯಾಗಿರುವುದು ನಮ್ಮ ಕಾಲೇಜಿನ ಹೆಮ್ಮೆ.
ವಿದ್ಯಾರ್ಥಿಗಳ ದೈಹಿಕ–ಮಾನಸಿಕ ಆರೋಗ್ಯವನ್ನು
ಗುರಿಯಾಗಿಸಿಕೊಂಡು ಈ ವರ್ಷ ಯೋಗ, ಪ್ರಾಣಾಯಾಮ, ಫಿಟ್ನೆಸ್ ತರಬೇತಿ ಮತ್ತು ಆರೋಗ್ಯ ಜಾಗೃತಿ ಕಾರ್ಯಾಗಾರಗಳು
ಆಯೋಜಿಸಲ್ಪಟ್ಟವು. ಈ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ದೈಹಿಕ ಸಾಮರ್ಥ್ಯ ಮತ್ತು ಏಕಾಗ್ರತೆ ಹೆಚ್ಚಿಸಲು
ತುಂಬಾ ಸಹಾಯಕವಾಗಿವೆ.
ವರ್ಷಾಂತ್ಯದಲ್ಲಿ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ
ಎಲ್ಲಾ ವಿಭಾಗಗಳ ವಿಜೇತರಿಗೆ ಪ್ರಮಾಣಪತ್ರಗಳು, ಪದಕಗಳು ಮತ್ತು ಟ್ರೋಫಿಗಳನ್ನು ವಿತರಿಸಲಾಯಿತು. ಪ್ರಾಂಶುಪಾಲರು
ಮತ್ತು ದೈಹಿಕ ಶಿಕ್ಷಣ ನಿರ್ದೇಶಕರು ವಿದ್ಯಾರ್ಥಿಗಳ ಸಾಧನೆಗೆ ಶ್ಲಾಘನೆ ಸಲ್ಲಿಸಿ ಮುಂದಿನ ವರ್ಷಗಳಲ್ಲಿ
ಹೆಚ್ಚಿನ ಸಾಧನೆಗಾಗಿ ಪ್ರೇರಣಾದಾಯಕ ನುಡಿಗಳನ್ನು ನೀಡಿದರು.
ಒಟ್ಟಾರೆಯಾಗಿ, 2024–25ರ ಕ್ರೀಡಾ ಚಟುವಟಿಕೆಗಳು
ನಮ್ಮ ಕಾಲೇಜಿನನ ಶೈಕ್ಷಣಿಕ ಹಾಗೂ ಸಹಪಠ್ಯ ಚಟುವಟಿಕೆಗಳಿಗೆ ಹೊಸ ಚೈತನ್ಯವನ್ನು ನೀಡಿವೆ. ವಿದ್ಯಾರ್ಥಿಗಳ
ಸಕ್ರಿಯ ಭಾಗವಹಿಸುವಿಕೆ, ಕ್ರೀಡಾ ಸಮಿತಿಯ ಶ್ರಮ ಮತ್ತು ಕಾಲೇಜಿನ ಆಡಳಿತದ ಬೆಂಬಲದಿಂದ ಈ ವರ್ಷದ ಕ್ರೀಡಾ
ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ಜರುಗಿವೆ.
ವಿಜಯ್ ರಾಮ್ ತೀರ್ಥದೈಹಿಕ ನಿರ್ದೇಶಕರು (Physical Director)
ತ್ರಿವೇಣಿ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಆಂಡ್
ಮ್ಯಾನೇಜ್ಮೆಂಟ್, ಬೆಂಗಳೂರು
ಮಾದರಿ ವರದಿ
ಪರಿಚಯ:
ಆಧುನಿಕ ಪ್ರಸಾರ ಮಾಧ್ಯಮದ ಯುಗದಲ್ಲಿ 'ವರದಿ'
ರಚನೆ ಮಹತ್ವಪೂರ್ಣವಾಗಿದೆ. ವರದಿ ಸೃಜನಾತ್ಮಕ ಕಲೆ. ವರದಿ ವ್ಯಾವಹಾರಿಕ ಸಾಧನವೂ ಹೌದು; ಸಾಹಿತ್ಯಕ
ಮಾದರಿಯೂ ಹೌದು. ವರದಿ ಯಾವುದೇ ಒಂದು ಕಲಾಪದ ವಿವರಣೆಯಾಗಿದೆ. ವರದಿಗೆ ಸಂಬಂಧಿಯಾಗಿ ಸುದ್ದಿ, ವಾರ್ತೆ,
ಸಮಾಚಾರ, ಸಂಗತಿ, ಇಂಗ್ಲಿಷ್ನಲ್ಲಿ "Report" ಎನ್ನಬಹುದು. ವರದಿಯು 'ಒಬ್ಬ ವ್ಯಕ್ತಿ'
ಅಥವಾ 'ಸಮಿತಿ'ಯನ್ನು ನಿಯೋಜಿಸಿ ಯಾವುದೇ ಸಂಸ್ಥೆಗೆ ನಿರ್ದಿಷ್ಟ ಉದ್ದೇಶಾನುಸಾರ. ಯಾವುದೇ ವ್ಯವಹಾರದ
ಸ್ಥಿತಿಗತಿ/ಕಾರ್ಯಕ್ರಮದ ಕುರಿತ ಪರಿಶೀಲನೆ ಮಾಡುವ ಮೂಲಕ ವಿವರಣಾತ್ಮಕ ವರದಿ ಸಲ್ಲಿಸುತ್ತಾರೆ. ಉನ್ನತಾಧಿಕಾರಿ
ಆದೇಶಾನುಸಾರ ನಿರ್ದಿಷ್ಟ ಅವಧಿಯಲ್ಲಿ ವರದಿ ಸಲ್ಲಿಸಬೇಕು. ಸಂಬಂಧಪಟ್ಟ ಕ್ಷೇತ್ರದಲ್ಲಿ ಪರಿಣತನಾದ
ಒಬ್ಬ ವ್ಯಕ್ತಿ ಸಮಗ್ರ ಅಧ್ಯಯನ ಮಾಡುವ ಮೂಲಕ ಬರಹ ರೂಪದಲ್ಲಿ ಸಲ್ಲಿಸುವುದು ವರದಿಂ. ವರದಿ ಸಲ್ಲಿಸುವವರು
ಸಾರ್ವಜನಿಕರಾಗಿರಬಹುದು, ಕ್ಷೇತ್ರ ತಜ್ಞ ಅಗಿರಬಹುದು. ವಿಭಾಗಾಧಿಕಾರಿ/ಶಾಖಾಧಿಕಾರಿ ಆಗಿರಬಹುದು,
ಸಂಶೋಧಕ ರಾಗಿರಬಹುದು. ಒಟ್ಟಾರೆ ಸಂಬಂಧಿತ ಸಮಸ್ಯೆಗೆ ಪರಿಹಾರ ನೀಡುವಲ್ಲಿ ಅರ್ಹತೆ ಪಡೆದವರಾಗಬೇಕಾಗುತ್ತದೆ.
ವರದಿಯ ಸ್ವರೂಪ:
ವರದಿ ನಿಖರವಾಗಿರಬೇಕು: ಇರುವ ವಿಷಯವನ್ನು ಯಥಾವತ್ತಾಗಿ
ನೀಡಬೇಕು; ಸಷ್ಟವಾಗಿರಬೇಕು: ಹೇಳುವ ವಿಷಯ ಗೊಂದಲಪೂರ್ಣ ಆಗಿರಬಾರದು, ಓದಿದ ತಕ್ಷಣ ಅರ್ಥವಾಗುವಂತೆ
ಇರಬೇಕು: ಸಂಕ್ಷಿಪ್ತವಾಗಿರಬೇಕು: ವರದಿ ಸಂಕ್ಷಿಪ್ತವಾಗಿದ್ದರೆ ಹೆಚ್ಚಿನ ವರದಿಗಳನ್ನು ಪತ್ರಿಕಗಳಲ್ಲಿ
ಪ್ರಕಟಿಸಲು ಸಾಧ್ಯ. ಜೊತೆಗೆ ಇಂದಿನ ಆಧುನಿಕ ಬದುಕಿನಲ್ಲಿ ಸಮಯಕ್ಕೆ ಹೆಚ್ಚಿನ ಪ್ರಾಶಸ್ಯ ಇದೆ. ವರದಿ
ಸಂಕ್ಷಿಪ್ತವಾಗಿದ್ದರೆ ಓದುಗರಿಗೆ ಸಮಯ ಉಳಿಯುತ್ತದೆ; ಆಕರ್ಷಣೀಯವಾಗಿರಬೇಕು: ಓದುಗರ ಗಮನ ಸೆಳೆಯುವಂತಹ
ಭಾಷೆ, ರಚನೆ, ವರದಿಗೆ ಪೂರಕ ಚಿತ್ರ ಸೂಕ್ತ ಶೀರ್ಷಿಕೆ ಹೊಂದಿರಬೇಕು: ಶೀರ್ಷಿಕೆ ವರದಿಯ ಮುಖ್ಯ ಭಾಗ.
ಸೂಕ್ತವಾದ, ಆಕರ್ಷಣೀಯವಾದ, ಸಾಧ್ಯವಾದಲ್ಲಿ ಪ್ರಾಸಬದ್ಧ ಪದಗಳಿಂದ ರಚಿತವಾದ ಶೀರ್ಷಿಕೆ ಬಳಸಬಹುದು.
ಶೀರ್ಷಿಕೆ ಚಿಕ್ಕದಾಗಿ ಹಾಗೂ ಚೊಕ್ಕವಾಗಿದ್ದರೆ ಚೆನ್ನ. ಓದುಗರ ಗಮನ ಮೊದಲಿಗೆ ಹೋಗುವುದು ಶೀರ್ಷಿಕೆಯ
ಕಡೆಗೆ. ಹೀಗಾಗಿ ಶೀರ್ಷಿಕೆ ಆಕರ್ಷಣೀಯವಾಗಿದ್ದರೆ ಓದುಗರು ವರದಿಯನ್ನು ಓದುವ ಸಾಧ್ಯತೆ ಹೆಚ್ಚು.
ಓದುಗರಿಗೆ ಕುತೂಹಲ ಮೂಡಿಸುವಂತಿರಬೇಕು: ಮೊದಲು
ಘಟನೆಯನ್ನು ಸಂಕ್ಷಿಪ್ತವಾಗಿ ಹೇಳಿ, ನಂತರ ಕಾರಣ, ಹಿನ್ನಲೆ ಒಳಗೊಂಡಿದ್ದರೆ ಓದುಗರ ಕುತೂಹಲ ಉಳಿಯಲು
ಸಾಧ್ಯ ವರದಿಗಳಲ್ಲಿ ಹಲವು ಬಗೆ: ವೃತ್ತಿಪರ ವರದಿಗಾರನೊಬ್ಬ ಕಾರ್ಯಕ್ರಮದ ವರದಿ ಬರೆಯುವುದು; ಸಾರ್ವಜನಿಕರು/ಸಂಸ್ಥೆಗಳು
ತಮ್ಮ ಸಮಾರಂಭದ ವರದಿ ಬರೆದು ಪತ್ರಿಕೆಗಳಲ್ಲಿ ಪ್ರಕಟಣೆಗಾಗಿ ಕೋರುವುದು; ಸಾರ್ವಜನಿಕರು ತಮ್ಮ ಕುಂದುಕೊರತೆ
ವಿವರಿಸಿ ವಾಚಕರವಾಣಿಗೆ ಬರೆಯುವಂತಹುದು ಇತ್ಯಾದಿ. ಇವೆಲ್ಲವೂ ಪತ್ರಿಕಾ ವರದಿಗಳೇ ಆಗಿದ್ದರೂ ಭಾಷೆಯ
ಬಳಕೆ ಮತ್ತು ನಿರೂಪಣೆ ವಿಧಾನಗಳಲ್ಲಿ ಭಿನ್ನತೆ ಗಮನಿಸಬಹುದು.
ಮಾದರಿ ವರದಿಗಳು-1
ಕನ್ನಡ ಅಭಿವೃದ್ಧಿ, ಪ್ರಾಧಿಕಾರ ಕನ್ನಡ ಅನುಷ್ಠಾನ
ಪ್ರಗತಿಯ
ಅನುಪಾಲನಾ ವರದಿ ಕರ್ನಾಟಕ ಸರ್ಕಾರ
ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ
(ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ
ಇಲಾಖೆ)
ಕನ್ನಡ ಅಭಿವೃದ್ಧಿ, ಪ್ರಾಧಿಕಾರ ಕನ್ನಡ ಅನುಷ್ಠಾನ
ಪ್ರಗತಿ ಪರಿಶೀಲನಾ ಸಭೆಯ ನಡಾವಳಿ ಸಂಬಂಧ ಅನುಪಾಲನಾ ವರದಿ
ಇವರಿಗೆ,
ಅಧ್ಯಕ್ಷರು
ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಬೆಂಗಳೂರು
ಮಾನ್ಯರೆ,
ಲೋಕೋಪಯೋಗಿ ಇಲಾಖೆಯ ಅಂತರ್ಜಾಲ ತಾಣವು ಸಂಪೂರ್ಣವಾಗಿ
ಆಂಗ್ಲಭಾಷೆಯಲ್ಲಿದ್ದು ಕೂಡಲೇ ಅದನ್ನು ಮರುವಿನ್ಯಾಸಗೊಳಿಸಿ ಹದಿನೈದು ದಿನಗಳ ಒಳಗಾಗಿ ಪ್ರಧಾನ ಪುಟ
ಕನ್ನಡದಲ್ಲಿರುವಂತೆಯೂ ಹಾಗೂ ಅಂತರ್ಜಾಲ ತಾಣದ ಸಂಪೂರ್ಣ ಮಾಹಿತಿಯು ಕನ್ನಡದಲ್ಲಿರುವಂತೆ ಅಭಿವೃದ್ಧಿ
ಪ್ರಾಧಿಕಾರವು ಆದೇಶಿಸಿತ್ತು ಅದರಂತೆ ನಡವಳಿಯಲ್ಲಿರುವ ವಿಷಯಕ್ಕೆ ಸಂಬಂಧಿಸಿದಂತೆ ಅನುಪಾಲನಾ ವರದಿಯನ್ನು
ಸಲ್ಲಿಸುತ್ತಿದ್ದೇವೆ.
1. ಲೋಕೋಪಯೋಗಿ ಇಲಾಖೆಯ ಅಂತರ್ಜಾಲ ತಾಣವು ಸಂಪೂರ್ಣವಾಗಿ
ಆಂಗ್ಲಭಾಷೆಯಲ್ಲಿ ಇದ್ದುದ್ದನ್ನು ಮರುವಿನ್ಯಾಸಗೊಳಿಸಿ ಅಂತರ್ಜಾಲ ತಾಣ ಪ್ರಧಾನ ಪುಟ ಸಂಪೂರ್ಣವಾಗಿ
ಕನ್ನಡದಲ್ಲಿ ವಿನ್ಯಾಸಗೊಳಿಸಲಾಗಿರುತ್ತದೆ. ಮತ್ತು ಇತರ ಅಂತರ್ಜಾಲ ಮಾಹಿತಿಯನ್ನು ಬಹುತೇಕ ಕನ್ನಡದಲ್ಲಿ
ಮಾಹಿತಿಯನ್ನು ನೀಡಲಾಗಿದೆ.
2. ಪ್ರಾಧಿಕಾರಕ್ಕೆ ಸಲ್ಲಿಸಬೇಕಿರುವ ಪೂರಕ ಮಾಹಿತಿಯನ್ನು
ಇನ್ನುಮುಂದೆ ಪ್ರತಿ ತಿಂಗಳು ಸಲ್ಲಿಸಲು ಕ್ರಮ ಕೈಗೊಳ್ಳಲಾಗಿರುತ್ತದೆ.
3. ಟೆಂಡರ್ ಜಾಹಿರಾತುಗಳು, ದರಪಟ್ಟಿಗಳು ಸಂಪೂರ್ಣವಾಗಿ
ಆಂಗ್ಲಮಯ ವಾಗಿದ್ದು ಕನ್ನಡ ದಿನಪತ್ರಿಕೆಗಳಲ್ಲಿ ಆಂಗ್ಲಭಾಷೆಯಲ್ಲೇ ಜಾಹಿರಾತು ನೀಡುತ್ತಿದ್ದುದರಿಂದ
ಕೂಡಲೇ ಕ್ರಮ ಕೈಗೊಂಡು ಟೆಂಡರ್ ಜಾಹಿರಾತುಗಳು, ದರಪಟ್ಟಿಗಳು ಎಲ್ಲವನ್ನೂ ಕನ್ನಡದಲ್ಲಿಯೇ ಬದಲಾಯಿಸಲಾಗಿದೆ.
ಕೆಶಿಪ್ ವತಿಯಿಂದ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಟೆಂಡರ್ಗಳನ್ನು ಕರೆಯುತ್ತಿದ್ದು, ಕಾರಣ ಆಂಗ್ಲ
ಭಾಷೆಯಲ್ಲಿ ಜಾಹಿರಾತುಗಳನ್ನು ನೀಡಲಾಗುತ್ತಿದೆ. ಸದರಿ ಸೂಚನೆಯಂತೆ ಇನ್ನು ಮುಂದೆ ಕನ್ನಡದಲ್ಲೂ ಸಹ
ಪ್ರಕಟಿಸಲು ಕ್ರಮ ಕೈಗೊಳ್ಳಲಾಗುವುದು. ಕೆಶಿಪ್ ವತಿಯಿಂದ ಯಾವುದೇ ದರಪಟ್ಟಿ ತಯಾರಿಸಿರುವುದಿಲ್ಲ ಮತ್ತು
ಪ್ರಕಟಿಸಿರುವುದಿಲ್ಲ.
4. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಧಾನವಾಗಿ
ಕನ್ನಡ ನಾಮಫಲಕಗಳು, ಮಾರ್ಗಸೂಚಿಗಳು ಮತ್ತು ಕಾರ್ಯಸೂಚಿಗಳ ಫಲಕಗಳನ್ನ ಹಾಕುವಂತೆ ಇಲಾಖೆಯ ಅಪರಮುಖ್ಯ
ಕಾರ್ಯದರ್ಶಿಗಳು ನಿರ್ದೇಶನ ನೀಡಲಾಗಿದ್ದು ಹಾಗೆಯೇ ಟೋಲ್ಗಳಲ್ಲಿ ಕನ್ನಡ ಬಲ್ಲ ನೌಕರರನ್ನು ನೇಮಿಸಿಕೊಳ್ಳಲಾಗಿದೆ.
ಮತ್ತು ಟೋಲ್ಗಳಲ್ಲಿ ಕನ್ನಡ ನಾಮಫಲಕಗಳನ್ನು ಹಾಕುವಂತೆ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಲಾಗಿದೆ.
ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನಾ ವತಿಯಿಂದ ಕೈಗೊಳ್ಳಲಾದ ರಸ್ತೆಗಳಲ್ಲಿ ಕನ್ನಡ ನಾಮಫಲಕ
ಮತ್ತು ಕಾರ್ಯಸೂಚಿಗಳ ಫಲಕ ಅಳವಡಿಸಲಾಗಿದೆ. ಕೆಶಿಪ್ ವತಿಯಿಂದ ಯಾವುದೇ ಟೋಲ್ಗಳನ್ನು ನಿರ್ವಹಿಸಲಾಗುತ್ತಿರುವುದಿಲ್ಲ.
5. ರಾಜ್ಯದಾದ್ಯಂತ ಲೋಕೋಪಯೋಗಿ ಇಲಾಖೆಯಲ್ಲಿ
ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ/ಗುತ್ತಿಗೆ ಆಧಾರದ ಸಿಬ್ಬಂದಿ ವರ್ಗದವರಲ್ಲಿ ಗ್ರೂಪ್ ಸಿ
ಮತ್ತು ಗ್ರೂಪ್ ಡಿ ನೌಕರರು ಡಾ. ಸರೋಜಿನಿ ಮಹಿಷಿ ವರದಿಯನ್ವಯ ಶೇ.100ರಷ್ಟು ಕನ್ನಡಿಗರೇ ಇರಬೇಕಿದ್ದು
ಈ ಬಗ್ಗೆ ರಾಜ್ಯ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿ ವರದಿಯನ್ನು ಪ್ರಾಧಿಕಾರಕ್ಕೆ ಸಲ್ಲಿಸತಕ್ಕದ್ದು.
ಹೊರಗುತ್ತಿಗೆ ಆಧಾರದ ಮೇಲೆ ಕೆಶಿಪ್ ವತಿಯಿಂದ ಗ್ರೂಪ್ 'ಸಿ' ಮತ್ತು 'ಡಿ' ನೌಕರನನ್ನು ಆದ್ಯತೆ ಮೇರೆಗೆ
ಕನ್ನಡಿಗರ ಸೇವೆಯನ್ನು ಪಡೆಯಲಾಗಿರುತ್ತದೆ.
6. ಲೋಕೋಪಯೋಗಿ ಇಲಾಖೆಯ ಇಂಟರ್ನಲ್ ಪ್ರಾಜೆಕ್ಟ್
ಮಾನಿಟರಿಂಗ್ ಸಿಸ್ಟಂ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದ್ದು ಅದು ಆಂಗ್ಲಭಾಷೆಯಲ್ಲಿದ್ದು, ಈಗಾಗಲೇ
ಅದನ್ನು ಬದಲಾಯಿಸಿ ಕನ್ನಡದಲ್ಲಿರುವಂತೆ ಕನ್ನಡದಲ್ಲಿಯೇ ವಿನ್ಯಾಸಗೊಳಿಸಲಾಗಿರುತ್ತದೆ. ಬಾಕಿ ವಿವರಗಳನ್ನು
ಆಂಗ್ಲ ಭಾಷೆಯಿಂದ ಕನ್ನಡ ಭಾಷೆಗೆ ತಂತ್ರಾಂಶದಲ್ಲಿ ವಿನ್ಯಾಸಗೊಳಿಸಲಾಗಿದೆ.
7. ಸಾರ್ವಜನಿಕರಿಂದ ಸ್ವೀಕರಿಸಿದ ದೂರಗಳನ್ವಯ
ದೂರಿಗೆ ಸಂಬಂಧಿಸಿದಂತೆ ಕನ್ನಡದಲ್ಲಿಯೇ ಉತ್ತರಿಸಲಾಗುತ್ತಿದೆ.
ಯೋಜನಾ ನಿರ್ದೇಶಕರು
ಮಾದರಿ ವರದಿಗಳು-2ಕಾರ್ಯಕ್ರಮ ವರದಿ ಕರ್ನಾಟಕ ಸರ್ಕಾರ
ಕಾಲೇಜು ಶಿಕ್ಷಣ ಇಲಾಖೆ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಸಾಧನಕೇರಿ ,ಧಾರವಾಡ
ದಿನಾಂಕ :೦೫/೦೪/೨೦೨೫
ಸ್ಥಳ : ಧಾರವಾಡ
ನಮ್ಮ ಕಾಲೇಜಿನಲ್ಲಿ ಪ್ರತಿವರ್ಷದಂತೆ ಈ ವರ್ಷವೂ ದಿನಾಂಕ 5-6-2022 ರಂದು ಕಾಲೇಜು ವಾರ್ಷಿಕೋತ್ಸವ ಸಮಾರಂಭವನ್ನು ಆಚರಿಸಲಾಯಿತು. ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಪ್ರಥಮ ಬಿ.ಎ. ವಿದ್ಯಾರ್ಥಿನಿ ಕುಮಾರಿ ಮಾಲಿನಿ ಮತ್ತು ತಂಡದವರು ಪ್ರಾರ್ಥನೆ ಮಾಡಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಶಾಂತರವರು ಅತಿಥಿಗಳನ್ನು ಸ್ವಾಗತಿಸಿದರು. ಆಂಗ್ಲಭಾಷಾ ಅಧ್ಯಾಪಕರಾದ ಪ್ರೊಫೆಸರ್ ಸುರೇಂದ್ರನ್ರವರು ಅತಿಥಿಗಳನ್ನು ಪರಿಚಯಿಸಿದರು. ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಪ್ರಾಂಶುಪಾಲರಾದ ಪ್ರೊ. ರಾಮಕೃಷ್ಣಪ್ಪ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾನ್ಯ ಶಾಸಕರಾದ ಅಂಕೇಗೌಡರು ಸರ್ಕಾರದ ವತಿಯಿಂದ ವಿದ್ಯಾರ್ಥಿಗಳಿಗೆ ದೊರೆಯುವ ವಿದ್ಯಾರ್ಥಿ ವೇತನ ಹಾಗೂ ಇತರೇ ಸೌಲಭ್ಯಗಳನ್ನು ಕುರಿತಂತೆ ತಿಳುವಳಿಕೆ ನೀಡಿದರು ಮತ್ತು ವಿದ್ಯಾರ್ಥಿಗಳಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗ
ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು. ಕಾರ್ಯಕ್ರಮಕ್ಕೆ
ಆಗಮಿಸಿದ್ದ ಮತ್ತೊಬ್ಬ ಅತಿಥಿಗಳಾದ ಶ್ರೀಯುತ ಮಧುಸೂದನ್ರವರು ವಿದ್ಯಾರ್ಥಿ ಜೀವನವನ್ನು ಮೆಲುಕು ಹಾಕುತ್ತಾ
ವಿದ್ಯಾರ್ಥಿಗಳಿಗೆ ಹಿತವಚನವನ್ನು ನೀಡಿದರು.
ಕಾಲೇಜಿನ ವಿದ್ಯಾರ್ಥಿಗಳು ವೈವಿಧ್ಯಮಯವಾದ ಸಾಂಸ್ಕೃತಿಕ
ಕಾರ್ಯಕ್ರಮಗಳನ್ನು ನೀಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನಗಳನ್ನು
ವಿತರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಮಕೃಷ್ಣಪ್ಪನವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ವಾಣಿಜ್ಯ ವಿಭಾಗದ ಪ್ರೊ. ಶ್ರೀನಿವಾಸ ಪ್ರಸಾದ್ರವರು ಕಾರ್ಯಕ್ರಮದ ಕೊನೆಯಲ್ಲಿ ವಂದನೆಗಳನ್ನು ಸಲ್ಲಿಸಿದರು.
ಅದನ್ನು ಕಾಲೇಜಿನ ವೆಬ್ಸೈಟ್ನಲ್ಲಿ ಪ್ರಕಡಿಸಲು ನಿರ್ಣಯಿಸಲಾಯಿತು. ವಂದನಾರ್ಪಣೆಯ ನಂತರ ನಾಡಗೀತೆಯನ್ನು
ಹಾಡಿ ವಿದ್ಯುಕ್ತವಾಗಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ಆನಂತರದಲ್ಲಿ ಎಲ್ಲರಿಗೂ ಲಘು ಉಪಹಾರವನ್ನು ಏರ್ಪಾಟು
ಮಾಡಲಾಗಿತ್ತು. ಉಪಹಾರದ ವೇಳೆ ಆಥಿತಿಗಳು ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು
ಕಾರ್ಯಕ್ರಮವನ್ನು ಚೆನ್ನಾಗಿ ಸಂಘಟಿಸಿದ್ದೀರಿ ಎಂದು ಶ್ಲಾಘಿಸಿದರು. ನಂತರ ಅತಿಥಿಗಳಿಂದ ವಿಸಿಟರ್ಸ್
ಪುಸ್ತಕದಲ್ಲಿ ಅವರ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು. ಕೊನೆಯಲ್ಲಿ ಎಲ್ಲರ ಸಾಮೂಹಿಕ ಛಾಯಾಚಿತ್ರ
ತೆಗೆಸಲಾಯಿತು.
ಮಾದರಿ ವರದಿಗಳು-3
ಪತ್ರಿಕಾ ವರದಿ
ಕ್ರೈಸ್ಟ್ ಇನ್ಸಿಟ್ಯೂಟ್ ಫಾರ್ ಅಡ್ವಾನ್ಸ್ ಸ್ಟಡೀಸ್
'
ಚಂದಾಪುರ, ಹೊಸೂರು ರಸ್ತೆ, ಬೆಂಗಳೂರು
ಉದ್ಯೋಗ ಮೇಳದ ವರದಿ
ದಿನಾಂಕ :೧೨/೧೨/೨೦೨೫
ಸ್ಥಳ : ಬೆಂಗಳೂರು
ನಮ್ಮ ಕಾಲೇಜಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ
ದಿನಾಂಕ 11-6-2022 ರಂದು ಕಾಲೇಜಿನ ಬಿ.ಕಾಂ ಹಾಗೂ ಎಂ.ಬಿ.ಎ ವಿದ್ಯಾರ್ಥಿಗಳಿಗೆ ಉದ್ಯೋಗಾವ ಕಾಶಗಳನ್ನು
ಕಲ್ಪಿಸುವ ಜಾಬ್ ಫೇರ್ ಅನ್ನು ಆಯೋಜಿಸಲಾಗಿತ್ತು. ಎಚ್. ಡಿ.ಎಫ್. ಸಿ., ಕೊಟಕ್ ಮಹೀಂದ್ರ ಬ್ಯಾಂಕ್,
ಲ್ಯಾಂಡ್ ಮಾರ್ಕ್ಗ್ರೂಪ್, ಇನ್ಫೋಸಿಸ್, ಸಿನೈಡರ್ ಎಲೆಕ್ಟಿಕ್, ರಾನ್ಸ್ಟಡ್, ಆಕ್ಸಿಸ್ ಬ್ಯಾಂಕ್,
ಟೀಮ್ ಲೀಸ್, ಪಿನ್ ಕ್ಲಿಕ್, ಇನ್ಟೆಲಿ ಪಾಥ್, ಕಾರ್-24, ಅಪೋಲೋ ಫಾರಸಿ, ಮುಥಟ್ ಫೈನಾನ್ಸ್, ಜಿ-ಗ್ರೂಪ್.
ಕಿರೋಸ್ಕರ್ ಹಾಗೂ ಸ್ವಿಗಿ ಕಂಪನಿಗಳು ಸದರಿ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದವು. ಚೈಲ್ಡ್ ಹುಡ್ ಟು
ಲೈವಿಹುಡ್ನ ಸಹಕಾರದೊಂದಿಗೆ ಇಂಡಿಗೋ ಮ್ಯೂಸಿಕ್ ಪಾಲು ದಾರಿಕೆಯಲ್ಲಿ 'ರೈಸ್ -2022' ಎಂಬ ಹೆಸರಿನಲ್ಲಿ
ನಡೆದ ಜಾಬ್ ಮೇಳ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.
ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.
ಪ್ರಥಮ ಬಿ.ಕಾಂ. ವಿದ್ಯಾರ್ಥಿನಿಯರಾದ ವಿನುತ ಫರ್ನಾಂಡಿಸ್ ಮತ್ತು ಉಮ್ಮೆ ಸಲ್ಮಾ ಪ್ರಾರ್ಥನೆ ಮಾಡಿದರು.
ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಸವಿತ ರವಿಶಂಕರ್ ಅವರು ಪಾಲುದಾರಿಕೆಯ ಕಂಪನಿಯ ಪ್ರತಿನಿಧಿಗಳನ್ನು
ಸ್ವಾಗತಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಕವಿಶೇಖರ್ ಅವರು ಅತಿಥಿಗಳನ್ನು ಪರಿಚಯಿಸಿದರು.
ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಪ್ರಾಂಶುಪಾಲರಾದ ರೆವರಂಡ್ ಫಾದರ್
ದಾವಿದಪ್ಪ ಎಸ್. ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಂಪನಿಗಳ ವತಿಯಿಂದ ವಿದ್ಯಾರ್ಥಿಗಳಿಗೆ ದೊರೆಯುವ
ಉದ್ಯೋಗಾವಕಾಶಗಳನ್ನು ಕುರಿತಂತೆ ಸಂಸ್ಥೆಯ ನಿರ್ದೇಶಕರಾದ ರೆವರೆಂಡ ಫಾದರ್ ಜೆ. ತಂಗೈ ಅವರು ತಿಳುವಳಿಕೆ
ನೀಡಿದರು. ಮತ್ತು ವಿದ್ಯಾರ್ಥಿಗಳಿಗೆ ಇಂತಹ ಸುಸಂದರ್ಭದಲ್ಲಿ ಸೌಲಭ್ಯಗಳ ಸದುಪಯೋಗ ಮಾಡಿಕೊಳ್ಳುವಂತೆ
ಸಲಹೆ ನೀಡಿದರು.
ಹೆಸರಾಂತ ವಿವಿಧ ಕಂಪನಿಯ ಪ್ರತಿನಿಧಿಗಳು ಆಸಕ್ತ
ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು. ವಾಣಿಜ್ಯ ಮತ್ತು ಎಂ.ಬಿ.ಎ ವಿಷಯವನ್ನು ಅಭ್ಯಾಸ ಮಾಡುತ್ತಿರುವ
ವಿದ್ಯಾರ್ಥಿಗಳಿಗೆ ಇರುವ ಉದ್ಯೋಗವಕಾಶಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ವಾಣಿಜ್ಯ
ಅಧ್ಯಯನ ವಿಭಾಗದ ಅಧ್ಯಾಪಕರು ವಂದನೆಗಳನ್ನು ಸಲ್ಲಿಸಿದರು. ವಂದನಾರ್ಪಣೆಯ ನಂತರ ನಾಡಗೀತೆಯನ್ನು ಹಾಡಿ
ವಿದ್ಯುಕ್ತವಾಗಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. ಅಂತಿಮವಾಗಿ ಈ ಮೇಳದಲ್ಲಿ ನಮ್ಮ ಕಾಲೇಜಿನ
123 ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ವಿವಿಧ ಕಂಪನಿಗಳಲ್ಲಿ ಉದ್ಯೋಗಾವಕಾಶ ದೊರೆಯಿತು.
ಮಾದರಿ ವರದಿಗಳು-4
ದಿನಾಂಕ: 1 ನವೆಂಬರ್ 2025
ಸ್ಥಳ : ಬೆಂಗಳೂರು
ತ್ರಿವೇಣಿ ಇನ್ಸ್ಟಿಟ್ಯೂಷನ್ಸ್ನಲ್ಲಿ 1 ನವೆಂಬರ್
2025 ರಂದು 70ನೇ ಕನ್ನಡ ರಾಜ್ಯೋತ್ಸವವನ್ನು ಭಾವಪೂರ್ಣವಾಗಿ ಮತ್ತು ಸಾಂಸ್ಕೃತಿಕ ವೈಭವದಿಂದ ಆಚರಿಸಲಾಯಿತು.
ಕಾರ್ಯಕ್ರಮವು ಬೆಳಿಗ್ಗೆ 9:30ಕ್ಕೆ ಪ್ರಾರ್ಥನೆಗೀತೆಯಿಂದ ಪ್ರಾರಂಭಗೊಂಡಿತು. ವಿದ್ಯಾರ್ಥಿಗಳು ಹಾಗೂ
ಅಧ್ಯಾಪಕರ ಸಕ್ರಿಯ ಭಾಗವಹಿಸುವಿಕೆಯಿಂದ ಕಾರ್ಯಕ್ರಮಕ್ಕೆ ವಿಶೇಷ ವೈಭವ ಉಂಟಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ
ಡಾ.ಹರಿತಾ ಎಂ ಅವರು. ವಹಿಸಿದ್ದರು. ಮಾತನಾಡಿದ ಅವರು ಕನ್ನಡ ಭಾಷೆಯ ಪರಂಪರೆ, ಮಹತ್ವ ಮತ್ತು ಯುಗಯುಗಾಂತರಗಳ
ಸಂಸ್ಕೃತಿಚೇತನವನ್ನು ವಿವರಿಸಿದರು. ಕನ್ನಡವನ್ನು ಕೇವಲ ಭಾಷೆಯಾಗಿ ಮಾತ್ರವಲ್ಲದೇ ಜೀವನದ ಮೌಲ್ಯವನ್ನು
ಹೆಚ್ಚಿಸುವ ಸಂಸ್ಕೃತಿಯಂತೆ ಅಳವಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕನ್ನಡ ವಿಭಾಗದ ಆಶ್ರಯದಲ್ಲಿ ವಿವಿಧ ಸಾಂಸ್ಕೃತಿಕ
ಕಾರ್ಯಕ್ರಮಗಳು ಜರುಗಿದವು. ವಿದ್ಯಾರ್ಥಿಗಳಿಂದ ಕನ್ನಡ ನಾಡಗೀತೆ, ಜನಪದ ನೃತ್ಯ, ತಾಲಮದ್ದಳೆ, ಕಾವ್ಯದ
ಪಠಣ, ನಾಟಕ ಮತ್ತು ಭಾಷಣ ಸ್ಪರ್ಧೆಗಳು ಕಾರ್ಯಕ್ರಮಕ್ಕೆ ಕಂಗೊಳ ನೀಡಿದವು. ಕನ್ನಡ ಸಾಹಿತ್ಯ, ಕಾವ್ಯ
ಪರಂಪರೆ ಹಾಗೂ ಕರ್ನಾಟಕದ ವೀರತೆ, ಸಂಸ್ಕೃತಿ, ಕಲೆ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಹಲವು ಅಂಶಗಳನ್ನು
ವಿದ್ಯಾರ್ಥಿಗಳು ಮನಮುಟ್ಟುವಂತೆ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಕನ್ನಡ ವಿಭಾಗದ ಉಪನ್ಯಾಸಕರು
ಕನ್ನಡದ ಸಂವೃದ್ಧ ಪರಂಪರೆ, ವಿಜ್ಞಾನ–ಸಾಹಿತ್ಯ–ಕಲೆ ಕ್ಷೇತ್ರಗಳಲ್ಲಿ ಕನ್ನಡನಾಡಿನ ಕೊಡುಗೆಗಳು ಹಾಗು
ರಾಜ್ಯೋತ್ಸವದ ಐತಿಹಾಸಿಕ ಹಿನ್ನೆಲೆಯ ಕುರಿತು ಮಾಹಿತಿಯನ್ನು ಹಂಚಿಕೊಂಡರು.
ಸರ್ವೋತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ
ಪ್ರಶಸ್ತಿಪತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಂತ್ಯದಲ್ಲಿ ಧನ್ಯವಾದಗಳನ್ನು ಸಲ್ಲಿಸಿ, ಎಲ್ಲರೂ
ಸಮೂಹವಾಗಿ 'ನಾದಗೀತೆ' ಹಾಡಿದರು.
ಕನ್ನಡ ರಾಜ್ಯೋತ್ಸವವನ್ನು ಕಾಲೇಜಿನಲ್ಲಿ ಅರ್ಥಪೂರ್ಣವಾಗಿ
ಮತ್ತು ಹರ್ಷಭರವಸದಿಂದ ಆಚರಿಸಲಾಗಿದ್ದು, ಇದು ವಿದ್ಯಾರ್ಥಿಗಳಲ್ಲಿ ಭಾಷಾ ಪ್ರೀತಿ, ನಾಡು-ನಾಡಿನ ಸಂಸ್ಕೃತಿ
ಹಾಗೂ ಪರಂಪರೆಯ ಅರಿವು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.
ಮಾದರಿ ವರದಿಗಳು-5
ದಿನಾಂಕ: 1 ನವೆಂಬರ್ 2025
ಈ ಶೈಕ್ಷಣಿಕ ವರ್ಷದಲ್ಲಿ ನಮ್ಮ ತ್ರಿವೇಣಿ ಇನ್ಸ್ಟಿಟ್ಯೂಟ್
ಆಫ್ ಕಾಮರ್ಸ್ ಆಂಡ್ ಮ್ಯಾನೇಜ್ಮೆಂಟ್, ಬೆಂಗಳೂರಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಅತ್ಯಂತ ಯಶಸ್ವಿಯಾಗಿ
ಮತ್ತು ಉತ್ಸಾಹಭರಿತವಾಗಿ ನಡೆಯಿತು. ಸಾಂಸ್ಕೃತಿಕ ಸಮಿತಿ, ಕನ್ನಡ ವಿಭಾಗ ಮತ್ತು ಇತರ ವಿಭಾಗಗಳ ಅಧ್ಯಾಪಕರು
ಹಾಗೂ ವಿದ್ಯಾರ್ಥಿ ಸಂಯೋಜಕರು ಕೈಜೋಡಿಸಿ ವರ್ಷಪೂರ್ತಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯೋಜಿಸಿ
ಜಾರಿಗೆ ತಂದರು. ವಿದ್ಯಾರ್ಥಿಗಳಲ್ಲಿರುವ ಕಲೆ, ಸಾಹಿತ್ಯ, ಸಂಗೀತ, ನೃತ್ಯ ಮತ್ತು ನಾಟಕ ಕೌಶಲ್ಯಗಳನ್ನು
ಹೊರಹೊಮ್ಮಿಸಲು ಈ ಚಟುವಟಿಕೆಗಳು ಪರಿಣಾಮಕರ್ತವಾಗಿವೆ.
ವಾರ್ಷಿಕ ಚಟುವಟಿಕೆಗಳ ಆರಂಭ ಫ್ರೆಶರ್ಸ್
ಡೇ ಕಾರ್ಯಕ್ರಮದಿಂದ ಜರುಗಿತು. ಹೊಸ ವಿದ್ಯಾರ್ಥಿಗಳು ಗಾಯನ, ನೃತ್ಯ ಮತ್ತು ಹಾಸ್ಯನಾಟಕಗಳ ಮೂಲಕ
ತಮ್ಮ ಕಲಾ ಕೌಶಲ್ಯವನ್ನು ಪ್ರದರ್ಶಿಸಿದರು. ಅದರ ನಂತರ ಸ್ವಾತಂತ್ರ್ಯ ದಿನಾಚರಣೆ, ಶಿಕ್ಷಕರ ದಿನ,
ಗಾಂಧಿ ಜಯಂತಿ ಮತ್ತು ಕನ್ನಡ ರಾಜ್ಯೋತ್ಸವವನ್ನು ಭಾವಪೂರ್ಣವಾಗಿ ಆಚರಿಸಲಾಯಿತು. ಭಾಷಣ, ಕವನ ಪಠಣ,
ನಾಡಗೀತೆ, ಜಾನಪದ ನೃತ್ಯ ಹಾಗೂ ರಾಜ್ಯೋತ್ಸವ ಕ್ವಿಜ್ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಭಾಷಾ ಮತ್ತು
ಸಾಂಸ್ಕೃತಿಕ ಜಾಗೃತಿಯನ್ನು ಉಂಟುಮಾಡಿದವು.
ಈ ವರ್ಷ ಕಾಲೇಜಿನಲ್ಲಿ ತಾಲೆಂಟ್ ಹಂಟ್–2024
ಮತ್ತು ಯುವೋತ್ಸವ–2025 ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ವಿದ್ಯಾರ್ಥಿಗಳು
ಫೋಕ್ ಡ್ಯಾನ್ಸ್, ಪಾಶ್ಚಾತ್ಯ ನೃತ್ಯ, ನಾಟಕ, ಏಕಪಾತ್ರಾಭಿನಯ, ಸಂಗೀತ ವಾದ್ಯವಿನೋದ, ರಂಗಭೂಮಿ ಪ್ರದರ್ಶನ,
ಚಿತ್ರಕಲೆ, ಪೋಸ್ಟರ್ ತಯಾರಿ, ಫ್ಯಾಷನ್ ಶೋ ಮೊದಲಾದ ಹಲವು ವಿಭಾಗಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು
ತೋರಿದರು. ಸಾಹಿತ್ಯ ವಿಭಾಗದಲ್ಲಿ ಪ್ರಬಂಧ ಸ್ಪರ್ಧೆ, ವಾಗ್ವಾದ, ಕಥೆ ಹೇಳುವಿಕೆ, ಕವನ ಬರವಣಿಗೆ ಮತ್ತು
ಭಾಷಣ ಸ್ಪರ್ಧೆಗಳು ನಡೆದವು.
ವಿದ್ಯಾರ್ಥಿಗಳ ಕಲಾ ಕೌಶಲ್ಯವನ್ನು ಉತ್ತೇಜಿಸಲು
ನೃತ್ಯ–ಸಂಗೀತ ಕಾರ್ಯಾಗಾರಗಳು, ನಾಟಕ ತರಬೇತಿಗಳು ಹಾಗೂ ಕಲಾ ಪ್ರದರ್ಶನಗಳನ್ನು ಕೂಡ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ ಅವರ ಸೃಜನಶೀಲತೆಯನ್ನು
ವೃದ್ಧಿಸಿದವು. ವರ್ಷಾಂತ್ಯದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಪ್ರಮಾಣಪತ್ರ, ಪದಕ ಮತ್ತು ಟ್ರೋಫಿಗಳನ್ನು
ಪ್ರಧಾನ ಮಾಡಲಾಯಿತು. ಪ್ರಾಂಶುಪಾಲರು ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿ ಇನ್ನಷ್ಟು ಸಾಂಸ್ಕೃತಿಕ
ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಪ್ರೋತ್ಸಾಹಿಸಿದರು.
ಒಟ್ಟಾರೆಯಾಗಿ, 2024–25ರ ಸಾಂಸ್ಕೃತಿಕ ಚಟುವಟಿಕೆಗಳು
ಕಾಲೇಜಿನ ಸಾಂಸ್ಕೃತಿಕ ವಾತಾವರಣವನ್ನು ಶ್ರೀಮಂತಗೊಳಿಸಿವೆ. ವಿದ್ಯಾರ್ಥಿಗಳ ಉತ್ಸಾಹಭರಿತ ಪಾಲ್ಗೊಳ್ಳುವಿಕೆ,
ಸಾಂಸ್ಕೃತಿಕ ಸಮಿತಿಯ ಸಮರ್ಪಿತ ಯೋಜನೆ ಹಾಗೂ ಅಧ್ಯಾಪಕರ ಮಾರ್ಗದರ್ಶನದಿಂದ ಈ ಚಟುವಟಿಕೆಗಳು ಅತ್ಯಂತ
ಯಶಸ್ವಿಯಾಗಿ ನೆರವೇರಿವೆ.
ಮಾದರಿ ವರದಿಗಳು-6
ತ್ರಿವೇಣಿ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್
ಮ್ಯಾನೇಜ್ಮೆಂಟ್, ಬೆಂಗಳೂರು
ಕ್ರೀಡಾ ಚಟುವಟಿಕೆಗಳ ವಾರ್ಷಿಕ ವರದಿ – 2024–25
ದಿನಾಂಕ : 12/03/2025
ಸ್ಥಳ : ಬೆಂಗಳೂರು
ಈ ಶೈಕ್ಷಣಿಕ ವರ್ಷ 2024–25ರಲ್ಲಿ ನಮ್ಮ ತ್ರಿವೇಣಿ
ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಆಂಡ್ ಮ್ಯಾನೇಜ್ಮೆಂಟಿನಲ್ಲಿ ಕ್ರೀಡಾ ಚಟುವಟಿಕೆಗಳು ಅತ್ಯಂತ ಯಶಸ್ವಿಯಾಗಿ
ಮತ್ತು ಚೈತನ್ಯಭರಿತವಾಗಿಯೂ ನಡೆಯಿತು. ಕಾಲೇಜಿನ ಕ್ರೀಡಾ ಸಮಿತಿಯು ದೈಹಿಕ ಶಿಕ್ಷಣ ನಿರ್ದೇಶಕರು,
ಅಧ್ಯಾಪಕರು ಮತ್ತು ವಿದ್ಯಾರ್ಥಿ ಸಂಯೋಜಕರ ಸಹಕಾರದೊಂದಿಗೆ ಎಲ್ಲಾ ಕ್ರೀಡಾ ಕಾರ್ಯಕ್ರಮಗಳನ್ನು ಯೋಜಿಸಿ
ಪರಿಣಾಮಕಾರಿಯಾಗಿ ಜಾರಿಗೆ ತಂದಿತು. ವಿದ್ಯಾರ್ಥಿಗಳ ದೈಹಿಕ ಆರೋಗ್ಯ, ತಂಡಭಾವನೆ, ಶಿಸ್ತು, ಸ್ಪರ್ಧಾತ್ಮಕ
ಮನೋಭಾವ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಅನೇಕ ಸ್ಪರ್ಧೆಗಳು ಮತ್ತು ಕ್ರೀಡಾ ತರಬೇತಿಗಳನ್ನು
ಆಯೋಜಿಸಲಾಯಿತು.
ಈ ವರ್ಷಿನ ವಾರ್ಷಿಕ ಕ್ರೀಡಾಕೂಟ–2025 ಅತ್ಯಂತ
ವಿಜೃಂಭಣೆಯಿಂದ ಜರುಗಿತು. 100 ಮೀ., 200 ಮೀ., 400 ಮೀ. ಓಟ, ರಿಲೇ ಓಟ, ಲಾಂಗ್ ಜಂಪ್, ಶಾಟ್ಪುಟ್,
ಡಿಸ್ಕಸ್ ತ್ರೋ, ಜಾವೆಲಿನ್ ತ್ರೋ ಮೊದಲಾದ ಅಥ್ಲೆಟಿಕ್ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ
ಭಾಗವಹಿಸಿ ತಮ್ಮ ಕ್ರೀಡಾ ಕೌಶಲ್ಯ ಪ್ರದರ್ಶಿಸಿದರು. ವಿವಿಧ ವರ್ಗಗಳಲ್ಲಿನ ಸ್ಪರ್ಧೆಗಳು ವಿದ್ಯಾರ್ಥಿಗಳಿಗೆ
ಆರೋಗ್ಯ ಮತ್ತು ಚೈತನ್ಯವನ್ನು ನೀಡಿದವು.
ಶೈಕ್ಷಣಿಕ ವರ್ಷದ ಅವಧಿಯಲ್ಲಿ ಕಾಲೇಜಿನಲ್ಲಿ
ಕ್ರಿಕೆಟ್, ವಾಲಿಬಾಲ್, ಫುಟ್ಬಾಲ್, ಕಬಡ್ಡಿ, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಚೆಸ್ ಹಾಗೂ ತೇರು–ಏಟು
(Tug of War) ಸ್ಪರ್ಧೆಗಳು ಆಯೋಜಿಸಲ್ಪಟ್ಟವು. ಈ ಆಟಗಳು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಹಕಾರ ಮತ್ತು
ಸಮೂಹದಲ್ಲಿ ಕೆಲಸ ಮಾಡುವ ಗುಣಗಳನ್ನು ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸಿವೆ. ವಿಶೇಷವಾಗಿ, ತಂಡದ
ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಉತ್ತಮ ಸಂಬಂಧ ಮತ್ತು ಕ್ರೀಡಾ ಮನೋಭಾವ ವೃದ್ಧಿಸುವಲ್ಲಿ ನೆರವಾದವು.
ಇದರ ಜೊತೆಗೆ ನಮ್ಮ ಕಾಲೇಜಿನ ತಂಡಗಳು ಇಂಟರ್-ಕಾಲೇಜು
ಮತ್ತು ವಿಶ್ವವಿದ್ಯಾಲಯ ಮಟ್ಟದ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಿವೆ. ಕ್ರಿಕೆಟ್ ಮತ್ತು ವಾಲಿಬಾಲ್
ತಂಡಗಳು ವಲಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಗಳಿಸಿ ಕಾಲೇಜಿಗೆ ಹೆಗ್ಗಳಿಕೆ ತಂದುಕೊಟ್ಟಿವೆ. ಕೆಲವರು
ಅಥ್ಲೆಟಿಕ್ ವಿಭಾಗದಲ್ಲಿ ವಿಶ್ವವಿದ್ಯಾಲಯ ಮಟ್ಟಕ್ಕೆ ಆಯ್ಕೆಯಾಗಿರುವುದು ನಮ್ಮ ಕಾಲೇಜಿನ ಹೆಮ್ಮೆ.
ವಿದ್ಯಾರ್ಥಿಗಳ ದೈಹಿಕ–ಮಾನಸಿಕ ಆರೋಗ್ಯವನ್ನು
ಗುರಿಯಾಗಿಸಿಕೊಂಡು ಈ ವರ್ಷ ಯೋಗ, ಪ್ರಾಣಾಯಾಮ, ಫಿಟ್ನೆಸ್ ತರಬೇತಿ ಮತ್ತು ಆರೋಗ್ಯ ಜಾಗೃತಿ ಕಾರ್ಯಾಗಾರಗಳು
ಆಯೋಜಿಸಲ್ಪಟ್ಟವು. ಈ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ದೈಹಿಕ ಸಾಮರ್ಥ್ಯ ಮತ್ತು ಏಕಾಗ್ರತೆ ಹೆಚ್ಚಿಸಲು
ತುಂಬಾ ಸಹಾಯಕವಾಗಿವೆ.
ವರ್ಷಾಂತ್ಯದಲ್ಲಿ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ
ಎಲ್ಲಾ ವಿಭಾಗಗಳ ವಿಜೇತರಿಗೆ ಪ್ರಮಾಣಪತ್ರಗಳು, ಪದಕಗಳು ಮತ್ತು ಟ್ರೋಫಿಗಳನ್ನು ವಿತರಿಸಲಾಯಿತು. ಪ್ರಾಂಶುಪಾಲರು
ಮತ್ತು ದೈಹಿಕ ಶಿಕ್ಷಣ ನಿರ್ದೇಶಕರು ವಿದ್ಯಾರ್ಥಿಗಳ ಸಾಧನೆಗೆ ಶ್ಲಾಘನೆ ಸಲ್ಲಿಸಿ ಮುಂದಿನ ವರ್ಷಗಳಲ್ಲಿ
ಹೆಚ್ಚಿನ ಸಾಧನೆಗಾಗಿ ಪ್ರೇರಣಾದಾಯಕ ನುಡಿಗಳನ್ನು ನೀಡಿದರು.
ಒಟ್ಟಾರೆಯಾಗಿ, 2024–25ರ ಕ್ರೀಡಾ ಚಟುವಟಿಕೆಗಳು
ನಮ್ಮ ಕಾಲೇಜಿನನ ಶೈಕ್ಷಣಿಕ ಹಾಗೂ ಸಹಪಠ್ಯ ಚಟುವಟಿಕೆಗಳಿಗೆ ಹೊಸ ಚೈತನ್ಯವನ್ನು ನೀಡಿವೆ. ವಿದ್ಯಾರ್ಥಿಗಳ
ಸಕ್ರಿಯ ಭಾಗವಹಿಸುವಿಕೆ, ಕ್ರೀಡಾ ಸಮಿತಿಯ ಶ್ರಮ ಮತ್ತು ಕಾಲೇಜಿನ ಆಡಳಿತದ ಬೆಂಬಲದಿಂದ ಈ ವರ್ಷದ ಕ್ರೀಡಾ
ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ಜರುಗಿವೆ.
ತ್ರಿವೇಣಿ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಆಂಡ್
ಮ್ಯಾನೇಜ್ಮೆಂಟ್, ಬೆಂಗಳೂರು
ಶಿಕ್ಷಕರ
ದಿನಾಚರಣೆ – ಕಾರ್ಯಕ್ರಮ ವರದಿ
ದಿನಾಂಕ: 05/09/2025
ಸ್ಥಳ : ಬೆಂಗಳೂರು
ನಮ್ಮ ತ್ರಿವೇಣಿ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್
ಆಂಡ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ದಿನಾಂಕ 05-09-2025 ರಂದು ಶಿಕ್ಷಕರ ದಿನಾಚರಣೆಯನ್ನು ಅತ್ಯಂತ
ಸಂಭ್ರಮ ಮತ್ತು ಗೌರವದಿಂದ ಆಚರಿಸಲಾಯಿತು. ಭಾರತದ ಮಾಜಿ ರಾಷ್ಟ್ರಪತಿ ಹಾಗೂ ಶ್ರೇಷ್ಠ ಶಿಕ್ಷಣತಜ್ಞರಾದ
ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು.
ವಿದ್ಯಾರ್ಥಿಗಳು ಶಿಕ್ಷಕರಿಗೆ ಪುಷ್ಪಗುಚ್ಛ ನೀಡಿ ಗೌರವ ಸಲ್ಲಿಸಿದರು. ಪ್ರಾಂಶುಪಾಲರು ತಮ್ಮ ಉದ್ಘಾಟನಾ
ಭಾಷಣದಲ್ಲಿ ಶಿಕ್ಷಕರ ಪಾತ್ರ, ಶಿಕ್ಷಣದ ಮಹತ್ವ ಹಾಗೂ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಶಿಕ್ಷಕರ
ಕೊಡುಗೆಯನ್ನು ವಿವರಿಸಿದರು. ಅವರು ಶಿಕ್ಷಕರು ಸಮಾಜದ ಮಾರ್ಗದರ್ಶಕರು ಹಾಗೂ ರಾಷ್ಟ್ರ ನಿರ್ಮಾಣದ ಶಿಲ್ಪಿಗಳು
ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಿಕ್ಷಕರಿಗೆ
ಸಮರ್ಪಿತವಾದ ಭಾಷಣ, ಕವನ ವಾಚನ, ಗಾಯನ ಮತ್ತು ನೃತ್ಯ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ಕೆಲವು
ವಿದ್ಯಾರ್ಥಿಗಳು ಶಿಕ್ಷಕರ ಜೀವನ ಮತ್ತು ಸಾಧನೆಗಳ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮದ
ವಿಶೇಷ ಆಕರ್ಷಣೆಯಾಗಿ ಶಿಕ್ಷಕರಿಗಾಗಿ ವಿವಿಧ ಮನರಂಜನಾ ಆಟಗಳು ಮತ್ತು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಇದರಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಆತ್ಮೀಯ ಬಾಂಧವ್ಯ ಮತ್ತಷ್ಟು ಗಟ್ಟಿಯಾಯಿತು.
ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಾಧನೆ ಮಾಡಿದ
ಶಿಕ್ಷಕರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿ ಪ್ರತಿನಿಧಿಗಳು ಶಿಕ್ಷಕರ ಮಾರ್ಗದರ್ಶನ ಮತ್ತು ಪ್ರೋತ್ಸಾಹಕ್ಕಾಗಿ
ಕೃತಜ್ಞತೆ ಸಲ್ಲಿಸಿದರು. ಶಿಕ್ಷಕರು ಸಹ ವಿದ್ಯಾರ್ಥಿಗಳಿಗೆ ಶಿಸ್ತು, ಪರಿಶ್ರಮ ಮತ್ತು ಮೌಲ್ಯಯುತ
ಶಿಕ್ಷಣದ ಕುರಿತು ಹಿತವಚನಗಳನ್ನು ನೀಡಿದರು.
ಕಾರ್ಯಕ್ರಮದ ಕೊನೆಯಲ್ಲಿ ವಂದನಾರ್ಪಣೆ ಸಲ್ಲಿಸಲಾಯಿತು.
ನಂತರ ಎಲ್ಲರೂ ಸೇರಿ ನಾಡಗೀತೆಯನ್ನು ಹಾಡಿದರು. ಶಿಕ್ಷಕರ ದಿನಾಚರಣೆ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ
ತಮ್ಮ ಗುರುಗಳ ಬಗ್ಗೆ ಗೌರವ, ಕೃತಜ್ಞತೆ ಮತ್ತು ಪ್ರೀತಿಯನ್ನು ಬೆಳೆಸುವಲ್ಲಿ ಯಶಸ್ವಿಯಾಯಿತು.
ಸಂಚಾಲಕರು ಸಾಂಸ್ಕೃತಿಕ ಸಮಿತಿ ತ್ರಿವೇಣಿ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಆಂಡ್ ಮ್ಯಾನೇಜ್ಮೆಂಟ್,
ಬೆಂಗಳೂರು
ಮಾದರಿ ವರದಿ - ೬ನಿಮ್ಮ ಊರಿನಲ್ಲಿ ನಡೆದ ಜಾತ್ರೆಯ ಕುರಿತು ಒಂದು ವರದಿಯನ್ನು ಸಿದ್ಧಪಡಿಸಿ
ದಿನಾಂಕ: 05/09/2025
ಸ್ಥಳ : ಬೆಂಗಳೂರು
ನಮ್ಮ ತ್ರಿವೇಣಿ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್
ಆಂಡ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ದಿನಾಂಕ 05-09-2025 ರಂದು ಶಿಕ್ಷಕರ ದಿನಾಚರಣೆಯನ್ನು ಅತ್ಯಂತ
ಸಂಭ್ರಮ ಮತ್ತು ಗೌರವದಿಂದ ಆಚರಿಸಲಾಯಿತು. ಭಾರತದ ಮಾಜಿ ರಾಷ್ಟ್ರಪತಿ ಹಾಗೂ ಶ್ರೇಷ್ಠ ಶಿಕ್ಷಣತಜ್ಞರಾದ
ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು.
ವಿದ್ಯಾರ್ಥಿಗಳು ಶಿಕ್ಷಕರಿಗೆ ಪುಷ್ಪಗುಚ್ಛ ನೀಡಿ ಗೌರವ ಸಲ್ಲಿಸಿದರು. ಪ್ರಾಂಶುಪಾಲರು ತಮ್ಮ ಉದ್ಘಾಟನಾ
ಭಾಷಣದಲ್ಲಿ ಶಿಕ್ಷಕರ ಪಾತ್ರ, ಶಿಕ್ಷಣದ ಮಹತ್ವ ಹಾಗೂ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಶಿಕ್ಷಕರ
ಕೊಡುಗೆಯನ್ನು ವಿವರಿಸಿದರು. ಅವರು ಶಿಕ್ಷಕರು ಸಮಾಜದ ಮಾರ್ಗದರ್ಶಕರು ಹಾಗೂ ರಾಷ್ಟ್ರ ನಿರ್ಮಾಣದ ಶಿಲ್ಪಿಗಳು
ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಿಕ್ಷಕರಿಗೆ
ಸಮರ್ಪಿತವಾದ ಭಾಷಣ, ಕವನ ವಾಚನ, ಗಾಯನ ಮತ್ತು ನೃತ್ಯ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ಕೆಲವು
ವಿದ್ಯಾರ್ಥಿಗಳು ಶಿಕ್ಷಕರ ಜೀವನ ಮತ್ತು ಸಾಧನೆಗಳ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮದ
ವಿಶೇಷ ಆಕರ್ಷಣೆಯಾಗಿ ಶಿಕ್ಷಕರಿಗಾಗಿ ವಿವಿಧ ಮನರಂಜನಾ ಆಟಗಳು ಮತ್ತು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಇದರಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಆತ್ಮೀಯ ಬಾಂಧವ್ಯ ಮತ್ತಷ್ಟು ಗಟ್ಟಿಯಾಯಿತು.
ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಾಧನೆ ಮಾಡಿದ
ಶಿಕ್ಷಕರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿ ಪ್ರತಿನಿಧಿಗಳು ಶಿಕ್ಷಕರ ಮಾರ್ಗದರ್ಶನ ಮತ್ತು ಪ್ರೋತ್ಸಾಹಕ್ಕಾಗಿ
ಕೃತಜ್ಞತೆ ಸಲ್ಲಿಸಿದರು. ಶಿಕ್ಷಕರು ಸಹ ವಿದ್ಯಾರ್ಥಿಗಳಿಗೆ ಶಿಸ್ತು, ಪರಿಶ್ರಮ ಮತ್ತು ಮೌಲ್ಯಯುತ
ಶಿಕ್ಷಣದ ಕುರಿತು ಹಿತವಚನಗಳನ್ನು ನೀಡಿದರು.
ಕಾರ್ಯಕ್ರಮದ ಕೊನೆಯಲ್ಲಿ ವಂದನಾರ್ಪಣೆ ಸಲ್ಲಿಸಲಾಯಿತು.
ನಂತರ ಎಲ್ಲರೂ ಸೇರಿ ನಾಡಗೀತೆಯನ್ನು ಹಾಡಿದರು. ಶಿಕ್ಷಕರ ದಿನಾಚರಣೆ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ
ತಮ್ಮ ಗುರುಗಳ ಬಗ್ಗೆ ಗೌರವ, ಕೃತಜ್ಞತೆ ಮತ್ತು ಪ್ರೀತಿಯನ್ನು ಬೆಳೆಸುವಲ್ಲಿ ಯಶಸ್ವಿಯಾಯಿತು.
ಗ್ರಾಮದೇವತೆಯ ವಾರ್ಷಿಕ ಜಾತ್ರೋತ್ಸವ
ಮಾದರಿ ವರದಿ -೨
ನಿಮ್ಮ ಕಾಲೇಜಿನಲ್ಲಿ ಆಯೋಜಿಸಲಾದ ಉದ್ಯೋಗ ಮೇಳದ ಕುರಿತು ಒಂದು ವರದಿ ತಯಾರಿಸಿ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ಲೇಸ್ಮೆಂಟ್
ಸೆಲ್ ವತಿಯಿಂದ ಅಂತಿಮ ವರ್ಷದ ವಿದ್ಯಾರ್ಥಿಗಳ ಸುಂದರ ಭವಿಷ್ಯಕ್ಕಾಗಿ ದಿನಾಂಕ 28 ಆಗಸ್ಟ್ 2026 ರಂದು ಕಾಲೇಜು ಆವರಣದಲ್ಲಿ
ಒಂದು ಬೃಹತ್ "ಮೆಗಾ ಉದ್ಯೋಗ ಮೇಳ -
2026" ಅನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಗ್ರಾಮೀಣ ಮತ್ತು ನಗರ
ಭಾಗದ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗಾವಕಾಶ ಕಲ್ಪಿಸುವುದು ಈ ಮೇಳದ
ಪ್ರಮುಖ ಧ್ಯೇಯವಾಗಿತ್ತು.
ಭವ್ಯ ಉದ್ಘಾಟನೆ
ಬೆಳಗ್ಗೆ 9:30ಕ್ಕೆ ಪ್ರಖ್ಯಾತ ಮಾಹಿತಿ ತಂತ್ರಜ್ಞಾನ
ಸಂಸ್ಥೆಯಾದ ಇನ್ಫೋಸಿಸ್ (Infosys) ಕಂಪನಿಯ ಹಿರಿಯ ಮಾನವ ಸಂಪನ್ಮೂಲ ಅಧಿಕಾರಿಗಳಾದ ಶ್ರೀಮತಿ ಸುಧಾ ಮೂರ್ತಿ (ಗೌರವಾನ್ವಿತ ಅತಿಥಿ)
ಮತ್ತು ಕಾಲೇಜಿನ ಪ್ರಾಂಶುಪಾಲರು ಜಂಟಿಯಾಗಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ
ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಅತಿಥಿಗಳು, "ಇಂದಿನ ಸ್ಪರ್ಧಾತ್ಮಕ
ಜಗತ್ತಿನಲ್ಲಿ ಕೇವಲ ಪದವಿ ಸಾಲದು, ಪ್ರಾಯೋಗಿಕ ಜ್ಞಾನ ಮತ್ತು ಸಂವಹನ ಕಲೆ ಅತ್ಯಗತ್ಯ"
ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಭಾಗವಹಿಸಿದ ಕಂಪನಿಗಳು
ಈ ಮೇಳದಲ್ಲಿ ದೇಶದ ಪ್ರಮುಖ ಐಟಿ, ಬ್ಯಾಂಕಿಂಗ್, ವಿಮೆ, ಮತ್ತು
ಉತ್ಪಾದನಾ ವಲಯದ 30ಕ್ಕೂ ಹೆಚ್ಚು ಕಂಪನಿಗಳು
ಪಾಲ್ಗೊಂಡಿದ್ದವು. ಅವುಗಳಲ್ಲಿ ಪ್ರಮುಖವಾದವು:
- ಮಾಹಿತಿ ತಂತ್ರಜ್ಞಾನ (IT): ಇನ್ಫೋಸಿಸ್, ವಿಪ್ರೋ, ಮತ್ತು
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS).
- ಬ್ಯಾಂಕಿಂಗ್ ಮತ್ತು ಹಣಕಾಸು: ಎಚ್ಡಿಎಫ್ಸಿ ಬ್ಯಾಂಕ್ ಮತ್ತು
ಐಸಿಐಸಿಐ ಪ್ರುಡೆನ್ಶಿಯಲ್.
- ಇತರ ಪ್ರಮುಖ ಸಂಸ್ಥೆಗಳು: ರಿಲಯನ್ಸ್ ಡಿಜಿಟಲ್ ಮತ್ತು
ಅಮೆಜಾನ್ ಇಂಡಿಯಾ.
ವಿದ್ಯಾರ್ಥಿಗಳ ಅಭೂತಪೂರ್ವ ಸ್ಪಂದನೆ
ನಮ್ಮ ಕಾಲೇಜು ಮಾತ್ರವಲ್ಲದೆ ಸುತ್ತಮುತ್ತಲಿನ ವಿವಿಧ
ಕಾಲೇಜುಗಳ ಸುಮಾರು 600ಕ್ಕೂ ಹೆಚ್ಚು
ನಿರುದ್ಯೋಗಿ ಪದವೀಧರರು ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ ಸ್ವವಿವರದ
(Resume) ಪ್ರತಿಗಳೊಂದಿಗೆ ಮುಂಜಾನೆಯಿಂದಲೇ ನೋಂದಣಿ ಕೌಂಟರ್ಗಳಲ್ಲಿ ಸಾಲಾಗಿ ನಿಂತಿದ್ದರು.
ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಕಾಲೇಜಿನ ಸ್ವಯಂಸೇವಕರು ಸಹಾಯ ಹಸ್ತ ಚಾಚಿದರು.
ಆಯ್ಕೆ ಪ್ರಕ್ರಿಯೆಯ ಹಂತಗಳು
ಕಂಪನಿಗಳು ಅತ್ಯಂತ ಪಾರದರ್ಶಕವಾಗಿ ಅಭ್ಯರ್ಥಿಗಳನ್ನು
ಮೌಲ್ಯಮಾಪನ ಮಾಡಲು ಮೂರು ಪ್ರಮುಖ ಹಂತಗಳನ್ನು ರೂಪಿಸಿದ್ದವು:
1. ಮೊದಲ ಹಂತ: ವಿದ್ಯಾರ್ಥಿಗಳ ಸ್ವವಿವರಗಳ ಪರಿಶೀಲನೆ (Aptitude &
Resume Screening).
2. ಎರಡನೇ ಹಂತ: ಸಾಮೂಹಿಕ ಚರ್ಚೆ (Group Discussion).
3. ಅಂತಿಮ ಹಂತ: ಮುಖಾಮುಖಿ ಮತ್ತು ತಾಂತ್ರಿಕ ಸಂದರ್ಶನ (Technical &
HR Interview).
ಮೇಳದ ಸಾಧನೆ ಮತ್ತು ಫಲಿತಾಂಶ
ಈ ಉದ್ಯೋಗ ಮೇಳವು ನಿರೀಕ್ಷೆಗೂ ಮೀರಿದ ಯಶಸ್ಸನ್ನು ಸಾಧಿಸಿತು.
ದಿನದ ಅಂತ್ಯದ ವೇಳೆಗೆ ವಿವಿಧ ವಲಯಗಳಲ್ಲಿ ಒಟ್ಟು 125ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉದ್ಯೋಗಕ್ಕೆ ತಾತ್ಕಾಲಿಕವಾಗಿ ಆಯ್ಕೆಯಾಗಿ,
ಕಂಪನಿಗಳಿಂದ ನೇರ ನೇಮಕಾತಿ ಪತ್ರಗಳನ್ನು (Offer Letters) ಪಡೆದುಕೊಂಡರು. ಉದ್ಯೋಗ ಪತ್ರ ಪಡೆದ
ವಿದ್ಯಾರ್ಥಿಗಳ ಮೊಗದಲ್ಲಿ ಸಂತಸದ ಕಣ್ಣೀರು ಎದ್ದು ಕಾಣುತ್ತಿತ್ತು.
ಸಮಾರೋಪ ಮತ್ತು ಧನ್ಯವಾದ
ಸಂಜೆ 5:00 ಗಂಟೆಗೆ ನಡೆದ ಸಮಾರೋಪ ಸಮಾರಂಭದಲ್ಲಿ ಕಾಲೇಜಿನ
ಪ್ಲೇಸ್ಮೆಂಟ್ ಅಧಿಕಾರಿಗಳು ಭಾಗವಹಿಸಿದ ಎಲ್ಲಾ ಕಂಪನಿಗಳ ಪ್ರತಿನಿಧಿಗಳಿಗೆ ನೆನಪಿನ ಕಾಣಿಕೆ
ನೀಡಿ ಗೌರವಿಸಿದರು. ಕಾಲೇಜಿನ ಪ್ರಾಂಶುಪಾಲರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಉಪನ್ಯಾಸಕ
ವೃಂದ, ಸ್ವಯಂಸೇವಕರು ಮತ್ತು ಪತ್ರಿಕಾ ಮಾಧ್ಯಮದವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು
ಅರ್ಪಿಸುವುದರೊಂದಿಗೆ ಮೇಳವು ಮುಕ್ತಾಯವಾಯಿತು.
ವರದಿಗಾರರ ಹೆಸರು ಮತ್ತು ಸಹಿಮೋಹನ್ ರಾಜ್ ಸಂಚಾಲಕರುಸರ್ಕಾರಿ ಪ್ರಥಮ ದರ್ಜೆ ಕಾಲೇಜು