B.Com 4th ಸೆಮ್ ಕನ್ನಡ ಮಾದರಿ ಪ್ರಶ್ನೆ ಪತ್ರಿಕೆ
I. ಎರಡು ಪ್ರಶ್ನೆಗಳಿಗೆ ಉತ್ತರ ಬರೆಯಿರಿ (200 ಪದಗಳಿಗೆ ಮೀರದಂತೆ) ೨×೧೦ = ೨೦
- ಬುಡೇನ್ ಸಾಬಿಯ ಛಲದ ಬದುಕಿನ ಕುರಿತು ಬರೆಯಿರಿ.
- ಕ್ಯಾನ್ಸರ್ ರೋಗಿಯ ಬಗೆಗೆ ಜನ ತೋರುವ ಕೂತುಹಲದ ರೀತಿ ಎಂತದ್ದು? ವಿವರಿಸಿ.
II. ನಾಲ್ಕು ಪ್ರಶ್ನೆಗಳಿಗೆ ಉತ್ತರ ಬರೆಯಿರಿ (೧೦೦ ಪದಗಳಿಗೆ ಮೀರದಂತೆ) ೪×೫ = ೨೦
- ರುರು-ಪ್ರಮದವತಿಯರ ಕತೆಯ ವೈಶಿಷ್ಟ್ಯವನ್ನು ಬರೆಯಿರಿ.
- ಪ್ರಸನ್ನರು ಹೇಳುವ ಗ್ರಾಮೀಣ ಬಡತನವನ್ನು ಕುರಿತು ಬರೆಯಿರಿ.
- ಬಂಡವಾಳಶಾಹಿ ವ್ಯವಸ್ಥೆ ಹೇಗೆ ಎಲ್ಲವನ್ನೂ 'ಸರಕ್ಕಾಗಿ' ಮಾಡುತ್ತದೆ? ತಿಳಿಸಿ.
- ಶ್ರೀಮತಿ-ವಜ್ರಜಂಘರ ಕತೆಯನ್ನು ಕುರಿತು ಬರೆಯಿರಿ.
III. ಕೆಳಗಿನ ಕಂಡಿಕೆಯನ್ನು ಇಂಗ್ಲಿಷಿಗೆ ಭಾಷಾಂತರಿಸಿ ೧×೪ = ೪
ಚಿಕ್ಕಮಗಳೂರು ಸುರೇಶ ಅನ್ನುವ ಹುಡುಗನ ತಾಯಿಗೆ ಕ್ಯಾನ್ಸರ್ ಆಗಿತ್ತು. ಆ ಸಂದರ್ಭದಲ್ಲಿ ನನಗೆ ಪರಿಚಯವಾದ ಹುಡುಗ ನಂತರದ ದಿನಗಳಲ್ಲಿ ನನಗೆ ತುಂಬ ಹತ್ತಿರವಾದ. ನನ್ನ ಹುಟ್ಟುಹಬ್ಬದ ಮರುದಿನ ನನ್ನನ್ನು ಭೇಟಿಯಾಗಲೇಬೇಕೆಂದು ಆಗ್ರಹಿಸಿ, ರಾಂಡಿ ಪಾಶ್ ನ "ದಿ ಲಾಸ್ಟ್ ಲೆಕ್ಚರ್" ಪುಸ್ತಕವನ್ನು ಉಡುಗೊರೆಯಾಗಿ ಕೊಟ್ಟ. ಅದನ್ನು ಕೊಟ್ಟದ್ದರಿಂದ ಅವನಿಗೆಷ್ಟು ಖುಷಿಯಾಯಿತೋ ಪಡೆದುದ್ದರಿಂದ ನನಗೂ ಅಷ್ಟೇ ಖುಷಿಯಾಯಿತು. ಅದಾದ ನಂತರವೂ ಬೆಂಗಳೂರಿಗೆ ಬಂದಾಗೆಲ್ಲ ಅವನು ನನ್ನನ್ನು ಭೇಟಿಯಾಗುತ್ತಾನೆ. ನಾನು ಬರೆದುದ್ದನ್ನು ಅತ್ಯಂತ ಪ್ರೀತಿಯಿಂದ ಓದುತ್ತಾನೆ. ಖುಷಿಯಾಗುತ್ತದೆ ಅವನನ್ನು ಕಂಡಾಗೆಲ್ಲ.
IV. ಒಂದು ಕಾಲ್ಪನಿಕ ಹೆಸರಿನಲ್ಲಿ ಕಾಲೇಜಿನ ಪ್ರಾಂಶುಪಾಲರ ಹುದ್ದೆಗೆ ಅರ್ಜಿ ಮತ್ತು ಅಭ್ಯರ್ಥನ ಪತ್ರ ತಯಾರಿಸಿ ೧×೪ = ೪
V. ಕೆಳಕಂಡ ಸನ್ನಿವೇಶ ಗಮನಿಸಿ ಒಂದು ಕತೆ ಅಥವಾ ಕವಿತೆ ಬರೆಯಿರಿ (೮೦ ಪದಗಳಿಗೆ ಮೀರದಂತೆ) ೧×೪ = ೪
ಹೊಲ ಊಳುತ್ತಿರುವ ರೈತ
VI. ಕೆಳಗಿನ ಗದ್ಯ ಕಂಡಿಕೆಯನ್ನು ಸಂಭಾಷಣೆಯಾಗಿ ಪರಿವರ್ತಿಸಿ ೧×೪ = ೪
ನಡುರಾತ್ರಿಯಲ್ಲೆದ್ದ ಈ ದೈತ್ಯನ ಭೀಕರ ಅರಚಾಟ ಕೇಳಿ ಆ ದ್ವೀಪದ ಬೇರೆ ಬೇರೆ ಗುಹೆಗಳಲ್ಲಿ ವಾಸವಾಗಿದ್ದ ಇತರ ಒಕ್ಕಣ್ಣಿನ ದೈತ್ಯರು ನಿದ್ದೆಗಟ್ಟು ಎದ್ದು ಬಂದು ಗುಹೆಯ ಹೊರಗೆ ನಿಂತು "ನಿನಗೇನಾಗಿದೆ ಪಾಲಿಫೀಮಸ್? ನಡುರಾತ್ರಿ ವೇಳೆ ಹೀಗೇಕೆ ಅಬ್ಬರ ಮಾಡುತ್ತ ನಮ್ಮ ನಿದ್ದೆ ಕೆಡಿಸುತ್ತೀಯೆ? ಯಾರಾದರೂ ಕಳ್ಳರು ಬಂದು ನಿನ್ನ ಕುರಿ ಕದ್ದರೆ? ಅಥವಾ ನಿನ್ನನ್ನು ಕೊಲ್ಲಬೇಕೆಂದು ಯಾರಾದರೂ ಮೇಲೆ ಬಿದ್ದರೆ?" ಎಂದು ಕೂಗಿ ಕೇಳಿದರು. "ಇಲ್ಲಪ್ಪ! ಇಲ್ಲಪ್ಪ!" ಎಂದು ನೋವಿನ ನಡುವೆಯೇ ನರಳುತ್ತ ಫಾಲಿಫೀಮಸ್ ಕೂಗಿಕೊಂಡ. "ಓ! ಹೀಗೋ, ಯಾರೂ ಇಲ್ಲಪ್ಪ ಎಂದ ಮೇಲೆ ಸುಮ್ಮಸುಮ್ಮನೆ ಹೀಗೆ ಕೂಗಿಕೊಳ್ಳಲು ನಿನಗೇನೋ ರೋಗ ಬಡಿದಿರಬೇಕು!
VII. ಸರಿಯಾದ ಉತ್ತರವನ್ನು ಗುರ್ತಿಸಿ ಬರೆಯಿರಿ ೧×೪ = ೪
- ದಂಪತಿಗಳು ಯಾವ ಬೆಟ್ಟಕ್ಕೆ ಹೋಗಿದ್ದರು?
ಅ) ನಂದಿಬೆಟ್ಟಕ್ಕೆ ಆ) ಚಾಮುಂಡಿಬೆಟ್ಟಕ್ಕೆ ಇ) ಮಹದೇಶ್ವರ ಬೆಟ್ಟಕ್ಕೆ - ಲೇಖಕಿಗೆ ಚಿಕಿತ್ಸೆ ನೀಡುತ್ತಿದ್ದ ಡಾಕ್ಟರ್ ಹೆಸರೇನು?
ಅ) ಡಾಕ್ಟರ್ ಶ್ರೀನಾಥ್ ಆ) ಡಾಕ್ಟರ್ ಮಂಜುನಾಥ್ ಇ) ಡಾಕ್ಟರ್ ನಂಜುಡಪ್ಪ - 'ದಾಸ್ ಕ್ಯಾಪಿಟಲ್' ಪುಸ್ತಕದ ಕರ್ತೃ ಯಾರು?
ಅ) ಕಾರ್ಲ್ ಮಾರ್ಕ್ಸ್ ಆ) ಬರ್ಟೊಲ್ಟ್ ಬ್ರೆಕ್ಟ್ ಇ) ಅಡಂಸ್ಮಿತ್ - ಪಾಶುಪತಾಸ್ತ್ರ ನಾಟಕದಲ್ಲಿ ಬುಡೇನ್ ಸಾಬಿ ಯಾವ ಪಾತ್ರ ಮಾಡುತ್ತಿದ್ದನು?
ಅ) ಅರ್ಜುನನ ಪಾತ್ರ ಆ) ಕೌರವನ ಪಾತ್ರ ಇ) ಭೀಷ್ಮನ ಪಾತ್ರ
*** ಕೊನೆಯವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು ***
